ಬಳ್ಳಾರಿ: ಒಂದೇ ಕುಟುಂಬದ ಮೂವರು ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶಾಲಿಗನೂರು ಗ್ರಾಮದ ನಾಗರತ್ನ (40), ಪುತ್ರಿಯರಾದ ಶೃತಿ (12), ಗಿರಿಜಾ (7) ಎಂದು ಗುರುತಿಸಲಾಗಿದೆ. ನಾಗರತ್ನ ತಮ್ಮ ಹೊಲದಲ್ಲಿದ್ದ ಕೃಷಿ ಹೊಂಡಕ್ಕೆ ತಮ್ಮಿಬ್ಬರು ಹೆಣ್ಣು ಮಕ್ಕಳೊಂದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಜಮೀನಿನಲ್ಲಿ ಕೃಷಿ ಮಾಡಿಕೊಂಡು ರೈತ ಮಹಿಳೆಯಾಗಿ ಗುರುತಿಸಿಕೊಂಡಿದ್ದ ನಾಗರತ್ನ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಆಂಧ್ರ ಬ್ಯಾಂಕ್‍ನಲ್ಲಿ ಅಂದಾಜು 5.60 ಲಕ್ಷ ರೂ ಹಾಗೂ ಖಾಸಗಿ ಲೇವಾದೇವಿಗಾರರಿಂದ 15 ಲಕ್ಷ ರೂ. ಸಾಲಮಾಡಿದ್ದರೆಂದು ಮಾಹಿತಿ ಸಿಕ್ಕಿದ್ದು, ಸಾಲ ಮರುಪಾವತಿ ಮಾಡಲು ಸಾಲಗಾರರು ಕಾಟ ಕೊಡುತ್ತಿದ್ದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಸಿರುಗುಪ್ಪ ಪೋಲಿಸ್ ಠಾಣೆಯ ಸಿಪಿಐ ಟಿ ಆರ್ ಪವಾರ್, ಪಿಎಸ್‍ಐ ಕೆ.ರಂಗಯ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಿರುಗುಪ್ಪ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.











ಈಕೆಯ ಹೆಸರು ಪ್ರಗತಿ ಉತ್ತರ ಪ್ರದೇಶದ ಮೊರಾದಾಬಾದ್ ನ ಹಳ್ಳಿ ಹುಡುಕಿ 2010ರಲ್ಲಿ ತನಗೆ ಅರಿವಿಲ್ಲದೆ ವಿದ್ಯುತ್ ತಂತಿಯನ್ನು ಮುಟ್ಟಿ ತನ್ನ ಎರಡು ಕೈಯನ್ನು ಕಳೆದುಕೊಳ್ಳುತ್ತಾಳೆ. ಆದರೆ ಕೈ ಇಲ್ಲ ಎಂದು ಸುಮ್ಮನೆ ಕುಳಿತಿದ್ದರೆ ಇಂದು ಪ್ರಗತಿ ಯಾರಿಗೂ ತಿಳಿಯುತ್ತಿರಲಿಲ್ಲ. ಇದೀಗ ಈಕೆ ತನ್ನ ಎರಡು ಕೈಗಳನ್ನು ಕಳೆದುಕೊಂಡಿದ್ದರು ಕೂಡ ತನ್ನ ಸಾಧನೆಯ ಛಲ ಬಿಡದೆ ಅರ್ಧ ತುಂಡಾಗಿರುವ ಎರಡು ಕೈಗಳನ್ನು ಬಳಸಿಕೊಂಡು ಎಲ್ಲರಂತೆ ಮೊಬೈಲ್ ಮತ್ತು ಲ್ಯಾಪ್‍ಟಾಪ್‍ಗಳನ್ನು ಬಳಸುವ ಮೂಲಕ ಜ್ಞಾನರ್ಜನೆ ಮಾಡಿ ಮುನ್ನುಗ್ಗುತ್ತಿದ್ದಾಳೆ.


















