Tag: women

  • ಮಹಿಳೆಯರ ಫೇಮಸ್ 5 ಅಂಡರ್‌ಕಟ್ ಹೇರ್ ಸ್ಟೈಲ್

    ಮಹಿಳೆಯರ ಫೇಮಸ್ 5 ಅಂಡರ್‌ಕಟ್ ಹೇರ್ ಸ್ಟೈಲ್

    ಫ್ಯಾಂಟಸಿ ಲೋಕದಲ್ಲಿ ಹಲವಾರು ಅಂಡರ್‌ಕಟ್ ಹೇರ್ ಸ್ಟೈಲ್ ಎಲ್ಲರ ಕಣ್ಮನ ಸೆಳೆಯುತ್ತಿದೆ. ಕೆತ್ತಿದ ಡಿಸೈನ್ ಮತ್ತು ದಪ್ಪವಾದ ಕಲರ್ ಕಲರ್ ಬನ್ ಮೂಲಕ ಕೂದಲನ್ನು ಕಟ್ಟುವುದು, ಬೋಲ್ಡ್ ಲುಕ್ ನೀಡುತ್ತದೆ. ಈ ಶೈಲಿಯ ಹೇರ್ ಸ್ಟೈಲ್ ನೋಡಲು ಕಾಮಿಕ್ ಆಗಿದ್ದು, ಕ್ಯೂಟ್ ಲುಕ್ ನೀಡುತ್ತದೆ. ಜೊತೆಗೆ ಇದನ್ನು ಬಹಳ ಸುಲಭವಾಗಿ ನಿರ್ವಹಣೆ ಮಾಡಬಹುದು. ಸದ್ಯ ಕೆಲವೊಂದು ಸ್ಟೈಲಿಶ್ ಹೇರ್ ಕಟ್ ಈ ಕೆಳಗಿನಂತಿವೆ.

    ಸ್ಮೋಕಿ ಲ್ಯಾವೆಂಡರ್ ಅಂಡರ್‌ಕಟ್
    ಅಂಡರ್ ಕಟ್ ಯಾವಾಗಲು ನಿಮ್ಮ ತಲೆಯ ಹಿಂಭಾಗದಲ್ಲಿಯೇ ಇರಬೇಕೆಂದಿಲ್ಲ. ಬದಲಾಗಿ ನಿಮ್ಮ ಮುಖದ ಸೈಡ್‍ಗಳಲ್ಲಿ ಕೂಡ ಮಾಡಬಹುದಾಗಿದೆ. ನೀವು ಉದ್ದನೆಯ ಕೂದಲಿನಿಂದ ಬೇಸತ್ತಿದ್ದರೆ ಈ ಹೇರ್ ಕಟ್‍ನನ್ನು ಮಾಡಿಸಿಕೊಳ್ಳಬಹುದು. ಈ ಹೇರ್ ಸ್ಟೈಲ್ ನಿಮ್ಮ ಗಲ್ಲದಷ್ಟು ಉದ್ದಬರುತ್ತದೆ.

    ಲಾಂಗ್ ಹೇರ್ ರೆಬೆಲ್ಲಿಯನ್
    ಶಾಟ್ ಹೇರ್ ಕಟ್ ಮಾಡಿಸಿಕೊಳ್ಳಲು ಇಷ್ಟಪಡದವರು, ನ್ಯಾಚುರಲ್ ಆಗಿ ಲಾಂಗ್ ಹೇರ್‍ನಂತೆ ಕಾಣಿಸುವ ಅಂಡರ್ ಕಟ್ ಹೇರ್ ಸ್ಟೈಲ್‍ನನ್ನು ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಕೂದಲಿನ ತುದಿ ಕೆತ್ತಿರುವ ಡಿಸೈನ್ ನೋಡಬೇಕಾದಲ್ಲಿ ಕೂದಲನ್ನು ರಿಬ್ಬನ್ ಮೂಲಕ ಮೇಲಕ್ಕೆ ಎತ್ತಿ ಕಟ್ಟಬೇಕಾಗುತ್ತದೆ.

    ಪ್ಲ್ಯಾಟಿನಮ್ ಅಂಡರ್ ಶೇವ್ಡ್ ಪಿಕ್ಸಿ
    ಕೂದಲ ಹಿಂಭಾಗ ಮತ್ತು ಕೂದಲ ಬದಿಯ ಸುತ್ತಲೂ ಹಲವಾರು ಶೈಲಿಯಲ್ಲಿ ಅಂಡರ್ ಕಟ್ ಹೇರ್ ಸ್ಟೈಲ್ ಮಾಡುವ ಮೂಲಕ ನಿಮ್ಮ ಕೂದಲು ಸಖತ್ ರಾಕ್ ಆಗಿ ಕಾಣಿಸಿಸುತ್ತದೆ. ಎಲ್ಲ ಹೇರ್ ಸ್ಟೈಲ್‍ಗಿಂತ ನೀವು ವಿಭಿನ್ನವಾಗಿ ಕಾಣಸಿಕೊಳ್ಳಲು ಬಯಸಿದರೆ ಮೊಹ್ವಾಕ್ ಹೇರ್ ಸ್ಟೈಲ್‍ನನ್ನು ಆರಿಸಿಕೊಳ್ಳಿ.

    ಹೇರ್ ಸ್ಟೈಲ್ ವಿತ್ ಟೂ ಡೈರೆಕ್ಷನ್
    ಜೀವನಲ್ಲಿ ಒಂದು ಮಾರ್ಗವನ್ನು ಆರಿಸಿಕೊಳ್ಳವುದು ಕಷ್ಟವಾಗಿರಬಹುದು. ಆದ್ರೆ ಹೇರ್ ಸ್ಟೈಲ್‍ನನ್ನು ಎರಡು ರೀತಿಗಳಲ್ಲಿ ವಿನ್ಯಾಸಗೊಳಿಸಬಹುದು. ನೀವು ಕೂಡ ಎರಡು ವಿಭಿನ್ನ ವ್ಯಕ್ತಿತ್ವಗಳನ್ನು ಹೊಂದಿರಬಹುದು. ಹಾಗೆಯೇ ಕೂದಲನ್ನು ಒಂದು ಕಡೆ ಉದ್ದ ಹಾಗೂ ಮತ್ತೊಂದು ಕಡೆ ಕತ್ತರಿಸಬಹುದಾಗಿದೆ.

    ಸ್ಪಿಕಿ ಶೇವ್ಡ್ ಮೊಹ್ವಾಕ್ ಹೇರ್ ಸ್ಟೈಲ್
    ಮೊಹ್ವಾಕ್ ಹೇರ್ ಸ್ಟೈಲ್ ಮಹಿಳೆಯರ ಹೇರ್ ಸ್ಟೈಲ್‍ಗಳಲ್ಲಿ ಬಹಳ ಫೇಮಸ್. ಇದು ಬಹಳ ಕಾಮನ್ ಹಾಗೂ ಹೆಚ್ಚಾಗಿ ಮಹಿಳೆಯರು ಇಷ್ಟಪಡುವಂತಹ ಹೇರ್ ಸ್ಟೈಲ್ ಆಗಿದೆ. ಇದನ್ನು ಹೊಂಬಣ್ಣ ಮತ್ತು ಕಪ್ಪು ಬಣ್ಣದಿಂದ ವಿನ್ಯಾಸಗೊಳಿಸಲಾಗಿದ್ದು. ಇದೊಂದು ಮಾಡ್ರೆನ್ ಹಾಗೂ ಕೂಲ್ ಹೇರ್ ಕಟ್ ಆಗಿದೆ.

  • ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆದ ಕೊಳ್ಳೇಗಾಲದ ಯುವತಿ

    ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆದ ಕೊಳ್ಳೇಗಾಲದ ಯುವತಿ

    ಚಾಮರಾಜನಗರ: ಕೊಳ್ಳೇಗಾಲ ಮೂಲದ ಆಶ್ರಿತಾ ವಿ ಒಲೆಟಿ ಭಾರತದ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆಗಿ ಆಯ್ಕೆಯಾಗಿದ್ದಾರೆ. ವಾಯುಸೇನೆಯ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಎಂಜಿನಿಯರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಆಶ್ರಿತಾ ವಿ ಒಲೆಟಿ ಅವರು ಇಡೀ ಪ್ರಪಂಚದಲ್ಲಿರುವ ಏಳು ವಿಶ್ವವಿದ್ಯಾಲಯಗಳ ಪೈಕಿ ಒಂದಾಗಿರುವ ಭಾರತದ ಪ್ರತಿಷ್ಠಿತ ಏರ್ ಫೋರ್ಸ್ ಟೆಸ್ಟ್ ಪೈಲಟ್ ಸ್ಕೂಲ್‍ನಿಂದ ಪದವಿಯನ್ನು ಪಡೆದುಕೊಂಡಿದ್ದಾರೆ. 1976ರಲ್ಲಿ ಸ್ಥಾಪನೆಯಾದಾಗಿನಿಂದ ಈವರೆಗೆ ಕೇವಲ 275 ಪದವೀದರರು ಮಾತ್ರ ಈ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದು, ಆಶ್ರಿತಾ ಒಲೆಟಿ ಅತ್ಯಂತ ಕಠಿಣ ತರಬೇತಿಗಳನ್ನು ಒಳಗೊಂಡಿರುವ ಈ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಭಾರತೀಯ ವಾಯುದಳದ ಮೊಟ್ಟ ಮೊದಲ ಮಹಿಳಾ ಅಧಿಕಾರಿಯಾಗಿ ಆಯ್ಕೆಯಾಗಿದ್ದು ಕ್ವಾಡ್ರಲ್ ಲೀಡರ್ ಆಗಿದ್ದಾರೆ.

    ಫ್ಲೈಟ್ ಟೆಸ್ಟ್ ಇಂಜಿನಿಯರ್‌ಗಳು ಹೊಸ ವಿಮಾನಗಳ ವ್ಯವಸ್ಥೆಯನ್ನು ಮೌಲ್ಯಮಾಪನ ಮಾಡಲಿದ್ದು, ವಿಮಾನಗಳ ಸೇವೆಗೆ ಮುಕ್ತ ಮಾಡಲು ಇವರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಪದವಿ ಪ್ರಧಾನ ಸಮಾರಂಭ ಮುಗಿದಿದ್ದು, ವಾಯುಸೇನೆ ಅಧಿಕೃತವಾಗಿ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್‌ ಆಗಿದ್ದು,ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಮದುವೆಯ ಸಮಾರಂಭದಲ್ಲಿ ವಧು ಧರಿಸಬಹುದಾದ ಲೇಟೆಸ್ಟ್ ಕಾಲ್ಗೆಜ್ಜೆಗಳು

    ಮದುವೆಯ ಸಮಾರಂಭದಲ್ಲಿ ವಧು ಧರಿಸಬಹುದಾದ ಲೇಟೆಸ್ಟ್ ಕಾಲ್ಗೆಜ್ಜೆಗಳು

    ಕಾಲ್ಗೆಜ್ಜೆ ಮಹಿಳೆಯರಿಗೆ ಪ್ರಿಯವಾದ ಆಭರಣಗಳಲ್ಲಿ ಒಂದಾಗಿದೆ. ವಧು ಮದುವೆಯ ವೇಳೆ ವಿವಿಧ ಆಭರಣಗಳ ಜೊತೆಗೆ ಕಾಲ್ಗೆಜ್ಜೆಯ ಮೇಲೂ ಹೆಚ್ಚು ಗಮನ ಹರಿಸುತ್ತಾರೆ. ಭಾರತೀಯ ಸಂಪ್ರಾದಾಯಿಕ ವಿವಾಹಗಳಲ್ಲಿ ಕಾಲ್ಗೆಜ್ಜೆಗೆ ಆದರದೇ ಆದ ಮಹತ್ವವಿದ್ದು, ಮದುಮಗಳು ವಿವಾಹದ ನಂತರ ಹೊಸ ಕುಟುಂಬದೊಂದಿಗೆ ಹೆಜ್ಜೆ ಹಾಕುವುದನ್ನು ಕಾಲ್ಗೆಜ್ಜೆಗಳು ಪ್ರತಿನಿಧಿಸುತ್ತದೆ.

    ನೀವು ಚಿನ್ನದ ಕಾಲ್ಗೆಜ್ಜೆಯನ್ನು ಧರಿಸಲು ಇಷ್ಟಪಟ್ಟರೆ ಮತ್ತು ಮದುವೆ ಸಮಾರಂಭಗಳಿಗೆ ಯಾವ ರೀತಿಯ ಕಾಲ್ಗಜ್ಜೆಗಳನ್ನು ಧರಿಸಬೇಕು ಎಂದು ತಿಳಿಯದಿದ್ದಲ್ಲಿ ಕೆಲವೊಂದು ಲೇಟೆಸ್ಟ್ ಡಿಸೈನ್ ಕಾಲ್ಗೆಜ್ಜೆಗಳು ಈ ಕೆಳಗಿನಂತಿದೆ.

    ಚಿನ್ನ ಹಾಗೂ ಪಚ್ಚೆಗಳ ವಿನ್ಯಾಸದ ಕಾಲ್ಗೆಜ್ಜೆ: ಚಿನ್ನ ಮತ್ತು ಪಚ್ಚೆಗಳ ಜೋಡನೆಯೊಂದಿಗಿರುವ ಕಾಲ್ಗೆಜ್ಜೆಯ ಡಿಸೈನ್‍ನನ್ನು ನೀವು ಹುಡುಕುತ್ತಿದ್ದರೆ, ಈ ಕಾಲ್ಗೆಜ್ಜೆ ವಧುವಿಗೆ ಬಹಳ ಚೆನ್ನಾಗಿ ಸೂಟ್ ಆಗುತ್ತದೆ. ಗೋಲ್ಡನ್ ಸ್ಟಡ್ಸ್ ಮತ್ತು ಪಚ್ಚೆ ಕಲ್ಲುಗಳ ಮಧ್ಯೆ ಫಲಕ(ಪ್ಲೇಟ್ಸ್)ಗಳಿರುವ ಈ ಕಾಲ್ಗೆಜ್ಜೆ ಸುಂದರವಾಗಿ ಕಾಣಿಸುತ್ತದೆ ಮತ್ತು ವಧುವಿಗೆ ರಾಯಲ್ ಲುಕ್ ನೀಡುತ್ತದೆ. ರಜಪೂತ್ ವಿವಾಹ ಸಮಾರಂಭಗಳಲ್ಲಿ ಈ ಕಾಲ್ಗೆಜ್ಜೆಗಳನ್ನು ಹೆಚ್ಚಾಗಿ ಕಾಣಬಹುದಾಗಿದೆ.

    ಹೂವಿನ ಡಿಸೈನ್ ಇರುವ ಬೆಳ್ಳಿ ಕಾಲ್ಗೆಜ್ಜೆ: ಇತ್ತೀಚಿಗಿನ ಬೆಳ್ಳಿನ ಕಾಲ್ಗೆಜ್ಜೆಗಳನ್ನು ಧರಿಸಲು ನೀವು ಬಯಸುತ್ತಿದ್ದರೆ ದಪ್ಪ ಬ್ಯಾಂಡ್ ರೀತಿಯ ಅಗಲವಾದ ಮತ್ತು ಐದು ಬೆರಳುಗಳಿಗೆ ಬೆಳ್ಳಿ ಫಲಕಗಳಿರುವ ಹೂವಿನ ಡಿಸೈನ್ ಕಾಲ್ಗಜ್ಜೆಯನ್ನು ಧರಿಸಿ. ಇದು ಸೂಪರ್ ಲುಕ್ ನೀಡುತ್ತದೆ ಮತ್ತು ರಾಜಸ್ಥಾನಿ ಸಂಪ್ರಾದಾಯಿಕ ಆಭರಣಗಳಲ್ಲಿ ಈ ಕಾಲ್ಗೆಜ್ಜೆ ಕೂಡ ಒಂದಾಗಿದೆ.

    ಮಣಿಗಳ ಡಿಸೈನ್ ಹೊಂದಿರುವ ಕಾಲ್ಗೆಜ್ಜೆ: ಸಾಮಾನ್ಯವಾಗಿ ಚಿನ್ನದ ಕಾಲ್ಗಜ್ಜೆಗಳು ನೋಡುಗರಿಗೆ ಬೋಲ್ಡ್ ಲುಕ್ ನೀಡುತ್ತದೆ. ಚಿನ್ನದ ಬ್ಯಾಂಡ್‍ನಂತಿರುವ ಈ ಕಾಲ್ಗೆಜ್ಜೆಗೆ ಸಣ್ಣ ಮುತ್ತಿನ ಮಣಿಗಳನ್ನು ಜೋಡಣೆ ಮಾಡಿದ್ದು, ಕೆಂಪು ಹಾಗೂ ಬನಾರಸಿ ರೇಷ್ಮೆ ಸೀರೆ ಉಟ್ಟವರಿಗೆ ಈ ಕಾಲ್ಗೆಜ್ಜೆ ಬಹಳ ಸುಂದರವಾಗಿರುತ್ತದೆ ಮತ್ತು ಎದ್ದು ಕಾಣಿಸುತ್ತದೆ.

    ಚಿನ್ನ ಹಾಗೂ ಮುತ್ತುಗಳ ಡಿಸೈನ್ ಕಾಲ್ಗೆಜ್ಜೆ: ಈ ಕಾಲ್ಗೆಜ್ಜೆಯಲ್ಲಿ ಮುತ್ತುಗಳು ಚಿನ್ನದ ಬಣ್ಣವನ್ನು ಹೊಂದಿದ್ದು, ದೇವತೆಗಳೇ ಧರಿಸಿದಂತೆ ಈ ಪಾದದ ಕಾಲ್ಗೆಜ್ಜೆಗಳು ನೋಡಲು ಕಾಣಿಸುತ್ತದೆ. ದೊಡ್ಡ ಪೆಂಡೆಂಟ್ ಹಾಗೂ ಮುತ್ತುಗಳನ್ನು ಹೊಂದಿರುವ ಈ ಕಾಲ್ಗೆಜ್ಜೆ ಮದುವೆಯ ಉಡುಪುಗಳೊಂದಿಗೆ ಸುಂದರವಾಗಿರಲಿದ್ದು, ಅದರಲ್ಲಿಯೂ ಕುಂದನ್ ಆಭರಣದ ಸೆಟ್ ಮತ್ತು ಗೋಲ್ಡನ್ ಕಲರ್ ಲೆಹೆಂಗಾ ಜೊತೆಗೆ ಬಹಳ ಚೆನ್ನಾಗಿ ಮ್ಯಾಚ್ ಆಗುತ್ತದೆ.

    ವಜ್ರ ಮತ್ತು ತೆಳುವಾದ ಚಿನ್ನದ ಕಾಲ್ಗೆಜ್ಜೆ: ಲೆಟೆಸ್ಟ್ ಚಿನ್ನದ ಕಾಲ್ಗೆಜ್ಜೆಗಳಲ್ಲಿ ಎಲ್ಲವೂ ದಪ್ಪವಾಗಿರುವ ಡಿಸೈನ್‍ಗಳೆ ಇರುವುದಿಲ್ಲ. ಕೆಲವು ವಧುಗಳು ಸಣ್ಣ ವಜ್ರಗಳಿಂದ ವಿನ್ಯಾಸಗೊಳಿಸಿರುವ ತೆಳುವಾದ ಎಳೆ ಹೊಂದಿರುವಂತಹ ಚಿನ್ನದ ಕಾಲ್ಗೆಜ್ಜೆಗಳನ್ನು ಸಹ ಇಷ್ಟಪಡುತ್ತಾರೆ. ಇದು ನೋಡಲು ಸಿಂಪಲ್ ಹಾಗೂ ಸೂಪರ್ ಲುಕ್ ನೀಡುತ್ತದೆ. ಈ ಕಾಲ್ಗೆಜ್ಜೆಯ ತೂಕ ಹಗುರವಾಗಿರುತ್ತದೆ. ಸೀರೆ ಹಾಗೂ ಸಲ್ವಾರ್‍ಗಳ ಜೊತೆಗೆ ಸೂಟ್ ಆಗುತ್ತದೆ.

  • 1 ವಾರದಲ್ಲಿ 5 ಕೊರೊನಾ ಸೋಂಕಿತರು ಸೇರಿ 9 ಜನರ ಅಂತ್ಯಕ್ರಿಯೆ ಮಾಡಿದ ಮಹಿಳೆಯರು

    1 ವಾರದಲ್ಲಿ 5 ಕೊರೊನಾ ಸೋಂಕಿತರು ಸೇರಿ 9 ಜನರ ಅಂತ್ಯಕ್ರಿಯೆ ಮಾಡಿದ ಮಹಿಳೆಯರು

    ಮಂಗಳೂರು: ಕೋವಿಡ್ ನ ಈ ಸಂಧಿಗ್ದ ಪರಿಸ್ಥಿತಿಯಲ್ಲಿ ವಾರಿಯರ್ ಗಳಾಗಿ ಸೇವೆ ನೀಡುವುದು ಸುಲಭದ ಮಾತಲ್ಲ. ಕೋವಿಡ್‍ನಿಂದ ಮೃತಪಟ್ಟವರ ಮೃತದೇಹಗಳನ್ನು ಮುಟ್ಟಲು ಹೆದರುವ ಹಾಗೂ ಅಂತ್ಯ ಸಂಸ್ಕಾರ ನಡೆಸಲು ಹಿಂಜರಿಯುತ್ತಿರುವ ಬಗ್ಗೆ ಸುದ್ದಿಗಳು ನಮ್ಮ ನಡುವೆ ಹರಿದಾಡುತ್ತಿದೆ. ಈ ಎಲ್ಲದರ ಮಧ್ಯೆ ಹ್ಯುಮಾನಿಟೇರಿಯಂ ರಿಲೀಫ್ ಸೊಸೈಟಿ(ಎಚ್‍ಆರ್‍ಎಸ್) ಯ ದಕ್ಷಿಣ ಕನ್ನಡದ ಜಿಲ್ಲೆಯ ಮಹಿಳಾ ವಿಭಾಗದ ಕಾರ್ಯಕರ್ತೆಯರು ಕೋವಿಡ್ ನಿಂದ ಮೃತಪಟ್ಟ ಮಹಿಳೆಯರ ಅಂತ್ಯಕ್ರಿಯೆಯನ್ನು ಸದ್ದಿಲ್ಲದೇ ನಡೆಸುತ್ತಿದ್ದಾರೆ.

    ಕಳೆದ ಒಂದು ವಾರಗಳಲ್ಲಿ ಮಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಕೋವಿಡ್ ಹಾಗೂ ಇತರೆ ಸಮಸ್ಯೆಯಿಂದ ಮೃತಪಟ್ಟ 9 ಮಹಿಳೆಯರ ಅಂತ್ಯಕ್ರಿಯೆಯ ಕರ್ಮಗಳನ್ನು ನಡೆಸುವ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ಹ್ಯುಮಾನಿಟೇರಿಯಂ ರಿಲೀಫ್ ಸೊಸೈಟಿ(ಎಚ್‍ಆರ್‍ಎಸ್) ಯ ಮಹಿಳಾ ವಿಭಾಗದ ಕಾರ್ಯಕರ್ತೆಯರು ಕಳೆದ ಒಂದು ವಾರದಲ್ಲಿ 9 ಮೃತ ದೇಹಗಳ ಅಂತ್ಯಕ್ರಿಯೆಯನ್ನು ನಡೆಸಿದ್ದು, ಅದರಲ್ಲಿ 5 ಕೊರೊನಾ ರೋಗದಿಂದ ಮೃತಪಟ್ಟ ಮಹಿಳೆಯರಾಗಿದ್ದಾರೆ.

    ಪಿಪಿಇ ಕಿಟ್ ಧರಿಸಿ ನಡೆಸುತ್ತಿರುವ ಈ ಸೇವೆಗೆ ಎಚ್‍ಆರ್‍ಎಸ್ ನ ದಕ್ಷಿಣ ಕನ್ನಡ ಜಿಲ್ಲಾ ಸಂಯೋಜಕಿ ಸುಮಯ್ಯ ಹಮೀದುಲ್ಲಾಹ್ ನೇತೃತ್ವ ವಹಿಸಿದ್ದಾರೆ. ಕಾರ್ಯಕರ್ತೆಯರಾದ ರಹ್ಮತ್ ಮನ್ಸೂರ್, ಶಂಶಾದ್ ಕುದ್ರೋಳಿ, ಶಹನಾಜ್ ಬೆಂಗರೆ, ಅಬಿದಾ ಕುದ್ರೋಳಿ, ಸಲೀಮಾ ಪಾಣೆಮಂಗಳೂರು, ಆಮಿನಾ ಕಾರಾಜೆ, ಫರ್ಝಾನ ಪಾಣೆಮಂಗಳೂರು, ಆರಿಫ ಬೋಳಂಗಡಿ, ಝೊಹರಾ ಬೋಳಂಗಡಿ, ನೂರುನ್ನೀಸಾ, ಮರ್ಯಮ್ ಶಹೀರ, ಹಫ್ಸಾ ಕೃಷ್ಣಾಪುರ, ಯಾಸ್ಮಿನ್ ಕೃಷ್ಣಾಪುರ ಸಹಕಾರ ನೀಡುತ್ತಿದ್ದಾರೆ.

  • ಅಂದವನ್ನ ಹೆಚ್ಚಿಸುವ ಮೂಗುತಿಯ ಟ್ರೆಂಡಿ ಡಿಸೈನ್ ಮಾಹಿತಿ ಇಲ್ಲಿದೆ

    ಅಂದವನ್ನ ಹೆಚ್ಚಿಸುವ ಮೂಗುತಿಯ ಟ್ರೆಂಡಿ ಡಿಸೈನ್ ಮಾಹಿತಿ ಇಲ್ಲಿದೆ

    ಇಂದಿನ ಕಾಲದಲ್ಲಿ ಮೂಗು ಬೊಟ್ಟು ಎಂಬುವುದು ತುಂಬಾ ಸಾಮಾನ್ಯವಾಗಿ ಎಂದೇ ಹೇಳಬಹುದು. ವಿಶೇಷವಾಗಿ ಭಾರತದಲ್ಲಿ ಮಹಿಳೆಯರು ಹೆಚ್ಚಾಗಿ ಮೂಗುಬೊಟ್ಟು ಧರಿಸುತ್ತಾರೆ. ಮೂಗುತಿ ಮಹಿಳೆಯರ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಸ್ಟೈಲಿಶ್ ಲುಕ್ ನೀಡುತ್ತದೆ.

    ಮೂಗುಬೊಟ್ಟಿನಲ್ಲಿ ನೋಡಲು ಹೋದರೆ ಅನೇಕ ರೀತಿಯ ವಿಧವಿಧವಾದ ಡಿಸೈನ್‍ಗಳ ಮೂಗು ಬೊಟ್ಟುಗಳಿರುವುದನ್ನು ನಾವು ಕಾಣಬಹುದು. ಅದರಲ್ಲಿಯೂ ಚಿನ್ನ, ವಜ್ರ ಹಾಗೂ ಇತರ ರತ್ನ ಕಲ್ಲುಗಳಿಂದ ತಯಾರಿಸಿದ ನತ್ತುಗಳಿಗೆ ಯಾವಾಗಲೂ ಬೇಡಿಕೆ ಹೆಚ್ಚಾಗಿರುತ್ತದೆ. ಮಹಿಳೆಯರ ಅಂದವನ್ನು ಮತ್ತುಷ್ಟು ಹೆಚ್ಚುಗೊಳಿಸುವ ಟ್ರೆಂಡಿ ಡಿಸೈನ್‍ನ ಕೆಲವು ಮೂಗುತಿ ಈ ಕೆಳಗಿನಂತಿದೆ.

     

    ಡಿಸೈನರ್ ಗೋಲ್ಡ್ ಸ್ಟಡ್ ನೋಸ್ ಪಿನ್: ಕೆಲವು ಸಾಮಾನ್ಯ ಮೂಗುತಿಗಳಲ್ಲಿ ಡಿಸೈನರ್ ಸ್ಟಡ್ ಮೂಗುಬೊಟ್ಟು ಕೂಡ ಒಂದು. ಸ್ಟಡ್ ಮೂಗುಬೊಟ್ಟು ಸಾಮಾನ್ಯವಾಗಿ ಎಲ್ಲರ ಮುಖಕ್ಕೂ ಸೂಟ್ ಆಗುತ್ತದೆ. ಇದು ನೋಡಲು ದುಂಡಾಗಿದ್ದು, ಹಾರ್ಟ್ ಶೇಪ್‍ನಲ್ಲಿರುತ್ತದೆ.

    ವಜ್ರದ ಡಿಸೈನ್ ಹೊಂದಿರುವ ಚಿನ್ನದ ಮೂಗುತಿ: ಈ ಮೂಗುತಿ ಸ್ವಲ್ಪ ದುಬಾರಿಯಾಗಿರುತ್ತದೆ. ಇದು ನೋಡಲು ಟ್ರೆಂಡಿಯಾಗಿದ್ದು, ನಿಮಗೆ ಮತ್ತಷ್ಟು ಬ್ಯೂಟಿಫುಲ್ ಲುಕ್ ನೀಡುತ್ತದೆ. ಈ ಮೂಗುಬೊಟ್ಟಿನಲ್ಲಿ ಚಿನ್ನದ ಜೊತೆಗೆ ವಜ್ರವನ್ನು ಹೊಂದಿಸಲಾಗಿದೆ.

    ಡಿಸೈನರ್ ಸ್ಟಡ್ ಡೈಮಂಡ್ ನೋಸ್ ಪಿನ್: ಇದು ಡೈಮೆಂಡ್‍ನಿಂದ ವಿನ್ಯಾಸಗೊಳಿಸಿದ ಮೂಗುಬೊಟ್ಟಾಗಿದೆ. ಪಲ್ಸ್ ಮೂಗುಬೊಟ್ಟು ಸಾಮಾನ್ಯವಾಗಿ ಎಲ್ಲರ ಮುಖಕ್ಕೆ ಸೂಟ್ ಆಗುತ್ತದೆ. ನಿಮಗೆ ಯಾವ ರೀತಿಯ ಮೂಗುಬೊಟ್ಟು ಧರಿಸಬೇಕು ಎಂಬ ಅನುಮಾನ ಇದ್ದರೆ, ಈ ಮೂಗುಬೊಟ್ಟನ್ನು ಖರೀದಿಸಬಹುದು.

    ವೈಡೂರ್ಯದ ಸ್ಟಡ್ ನೋಸ್ ಪಿನ್: ಇದೊಂದು ಕ್ಲಾಸಿ ಲುಕ್ ನೀಡುವ ಮೂಗುಬೊಟ್ಟಾಗಿದ್ದು, ಅನೇಕ ರತ್ನದ ಕಲ್ಲುಗಳನ್ನು ಬಳಸಿ ಈ ಮೂಗುಬೊಟ್ಟನ್ನು ತಯಾರಿಸಲಾಗಿದೆ. ಈ ಮೂಗುತಿ ಹದಿಹರೆಯದ ಹುಡುಗಿರ ಮೆಚ್ಚಿನ ಡಿಸೈನ್ ಆಗಿದ್ದು, ಬೋಲ್ಡ್ ಲುಕ್ ನೀಡುತ್ತದೆ.

    ಮುತ್ತಿನ ಮೂಗುಬೊಟ್ಟು: ಮಹಿಳೆಯರಿಗೆ ಮುತ್ತಿನ ಮೂಗುಬೊಟ್ಟು ಎಂದರೆ ಬಹಳ ಇಷ್ಟ. ನೀವು ವಿಭಿನ್ನವಾಗಿ ಕಾಣಿಸಿಕೊಳ್ಳಲು ಬಯಸುತ್ತಿದ್ದರೆ, ಚಿನ್ನ ಹಾಗೂ ಬೆಳ್ಳಿಯ ಮೂಗುತಿ ಬೇಡವಾದರೆ ಈ ಮುತ್ತಿನ ಮೂಗುತಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

  • ಎಣ್ಣೆ ಅಂಗಡಿ ಬೇಕು, ಬೇಡ- ಪುರುಷರು, ಮಹಿಳೆಯರಿಂದ ಹೋರಾಟ

    ಎಣ್ಣೆ ಅಂಗಡಿ ಬೇಕು, ಬೇಡ- ಪುರುಷರು, ಮಹಿಳೆಯರಿಂದ ಹೋರಾಟ

    ಹಾಸನ: ಕೊರೊನಾ ಎರಡನೇ ಅಲೆಯಿಂದ ಜನ ಆಘಾತಕ್ಕೊಳಗಾಗಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ. ಜಿಲ್ಲೆಯಲ್ಲಿ ಸಹ ಪ್ರತಿ ದಿನ ಮುನ್ನೂರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ಇದರ ಮಧ್ಯೆ ಎಣ್ಣೆ ಅಂಗಡಿಗಾಗಿ ಪುರುಷರು ಹೊರಾಟಕ್ಕಿಳಿದಿದ್ದು, ಇದನ್ನು ವಿರೋಧಿಸಿ ಮಹಿಳೆಯರು ಬೀದಿಗಿಳಿದಿದ್ದಾರೆ.

    ಎಣ್ಣೆ ಬೇಕು ಎಂಬ ಬ್ಯಾನರ್ ಹಿಡಿದು ಗಾಡೇನಹಳ್ಳಿ, ಹಲಸಿನಹಳ್ಳಿ ಸುತ್ತಮುತ್ತಲ ಪುರುಷರು ಡಿಸಿ ಕಚೇರಿ ಎದುರು ಹೋರಾಟಕ್ಕೆ ಕುಳಿತಿದ್ದಾರೆ. ಒಂದು ದಿನದ ಹಿಂದಷ್ಟೇ ಈ ಭಾಗದ ಒಂದಷ್ಟು ಜನ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಬಳಿ ಬಂದು ನಮ್ಮ ಗ್ರಾಮದ ಸಮೀಪ ಎಣ್ಣೆ ಅಂಗಡಿ ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ. ಇದರಿಂದ ನಮ್ಮ ಮನೆಗಳಲ್ಲಿ ನೆಮ್ಮದಿ ಇಲ್ಲದಂತಾಗುತ್ತದೆ. ರಸ್ತೆಯಲ್ಲಿ ಹೆಣ್ಣುಮಕ್ಕಳು ನೆಮ್ಮದಿಯಾಗಿ ಓಡಾಡಲು ಆಗಲ್ಲ, ಹೀಗಾಗಿ ಎಣ್ಣೆ ಅಂಗಡಿ ಬೇಡವೇ ಬೇಡ ಎಂದು ಹೋರಾಟಕ್ಕಿಳಿದಿದ್ದರು. ಅಷ್ಟೇ ಅಲ್ಲದೆ ಈ ಬಗ್ಗೆ ಡಿಸಿಗೆ ಮನವಿ ಕೂಡ ಸಲ್ಲಿಸಿದ್ದರು. ಇತ್ತ ಮಹಿಳಾಮಣಿಯರ ಹೋರಾಟಕ್ಕೆ ಪುರುಷರು ತಿರುಗೇಟು ನೀಡಲು ಪ್ರತಿ ಹೋರಾಟ ರೂಪಿಸಿದ್ದಾರೆ.

    ಮಹಿಳೆಯರ ಹೋರಾಟಕ್ಕೆ ಪ್ರತಿಯಾಗಿ ಗಾಡೇನಹಳ್ಳಿ ಸಮೀಪದ ಗ್ರಾಮಗಳ ಪುರುಷರು ಎಣ್ಣೆಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಎಣ್ಣೆ ಬೇಕು ಅಂದ್ರೆ 12 ಕಿಲೋಮೀಟರ್ ದೂರವಿರುವ ದುದ್ದ ಅಥವಾ ಏಳು ಕಿಲೋಮೀಟರ್ ದೂರವಿರುವ ಶಾಂತಿಗ್ರಾಮಕ್ಕೆ ಹೋಗಬೇಕು. ಎಣ್ಣೆ ಕುಡಿಯಲು ದೂರ ಹೋಗಲು ಹೆಚ್ಚು ಹಣ ಖರ್ಚಾಗುತ್ತೆ. ಅಷ್ಟೇ ಅಲ್ಲದೆ ಹಲವು ದಿನಗಳಿಂದ ಈ ಭಾಗದಲ್ಲಿ ಅಕ್ರಮವಾಗಿ ಹೆಚ್ಚು ಬೆಲೆಗೆ ಮದ್ಯ ಮಾರುತ್ತಿದೆ. ಇಲ್ಲಿ ಒಂದು ಮದ್ಯದಂಗಡಿ ಆದರೆ ಇದಕ್ಕೆಲ್ಲ ಕಡಿವಾಣ ಬೀಳಲಿದೆ ಎಂದು ಪುರುಷರು ಹೋರಾಟಕ್ಕಿಳಿದಿದ್ದಾರೆ.

    ಎಲ್ಲ ಕಡೆ ಕೊರೊನಾ ಸದ್ದು ಮಾಡುತ್ತಿದ್ದರೆ, ಇಲ್ಲಿ ಮಾತ್ರ ಒಂದು ಎಣ್ಣೆ ಅಂಗಡಿ ತೆರೆಯುವ ವಿಚಾರಕ್ಕೆ ಒಂದೇ ಗ್ರಾಮದ ಮಹಿಳೆಯರು ಮತ್ತು ಪುರುಷರ ನಡುವೆ ಹೋರಾಟ ನಡೆಯುತ್ತಿದೆ.

  • ಮಹಿಳೆಯರಿಗೆ ಬೇಸಿಗೆಯಲ್ಲಿ ಯಾವ ರೀತಿಯ ಸನ್ ಗ್ಲಾಸ್ ಬೆಸ್ಟ್ ಗೊತ್ತಾ?

    ಮಹಿಳೆಯರಿಗೆ ಬೇಸಿಗೆಯಲ್ಲಿ ಯಾವ ರೀತಿಯ ಸನ್ ಗ್ಲಾಸ್ ಬೆಸ್ಟ್ ಗೊತ್ತಾ?

    ಹಿಳೆಯರಿಗೆ ಸನ್ ಗ್ಲಾಸ್‍ಗಳಲ್ಲಿ ಯಾವುದು ಸೂಕ್ತ ಎಂದು ನೋಡಲು ಹೋದರೆ, ಹಲವಾರು ರೀತಿಯ ಸ್ಟೈಲಿಷ್ ಸನ್ ಗ್ಲಾಸ್‍ಗಳಿರುವುದನ್ನು ಕಾಣಬಹುದು. ಅದರಲ್ಲಿಯೂ ಈಗಿನ ಟ್ರೆಂಡ್ಸ್‍ನಲ್ಲಿ ವಿವಿಧ ಆಕಾರದ ಬಹಳಷ್ಟು ಸೈಲಿಷ್ ಹಾಗೂ ಕ್ಲಾಸಿಕ್ ಸನ್ ಗ್ಲಾಸ್‍ಗಳಿದೆ.

    ನೀವೆನಾದರೂ ಪ್ರತಿನಿತ್ಯ ಧರಿಸುವ ಉಡುಪುಗಳಿಗೆ ಕ್ಲಾಸಿಕ್ ಸ್ಟೈಲಿಷ್ ಸನ್ ಗ್ಲಾಸ್ ಹಾಕಿಕೊಳ್ಳಲು ಬಯಸಿದರೆ, ಇದು ಬೇಸಿಗೆಯ ಸಮಯದಲ್ಲಿ ಧರಿಸಲು ಪರ್ಫೆಕ್ಟ್ ಸನ್ ಗ್ಲಾಸ್‍ಗಳೆಂದೇ ಹೇಳಬಹುದು. ರೌಂಡ್ ಫ್ರೆಮ್‍ಗಳಲ್ಲಿಯೇ 70 ಸ್ಟೈಲಿಷ್ ಕಲರ್ ಲೆನ್ಸ್ ಇರುವ ಸನ್ ಗ್ಲಾಸ್‍ಗಳಿದ್ದು, ಅವುಗಳನ್ನು ನೀವು ಬೇಸಿಗೆಯಲ್ಲಿ ಬಳಸಬಹುದು. ಸದ್ಯ ಈ ಕೆಳಗೆ ಬೇಸಿಗೆಯಲ್ಲಿ ಉಪಯೋಗಿಸಬಹುದಾದ ಕೆಲವೊಂದು ಸನ್ ಗ್ಲಾಸ್ ಕುರಿತ ಡೀಟೆಲ್ಸ್ ಇದೆ.

    ಹಳದಿ ಲೆನ್ಸ್‌ನ ಸನ್ ಗ್ಲಾಸ್: ಈ ದೊಡ್ಡ ಗಾತ್ರದ ಸನ್ ಗ್ಲಾಸ್ ಜ್ಯೊಮೆಟ್ರಿಕ್ ಫ್ರೇಮ್‍ನಂತಿದ್ದು, ಇದು ನಿಮ್ಮ ಬಟ್ಟೆಗಳ ಬಣ್ಣಕ್ಕೆ ಬೇಗ ಮ್ಯಾಚ್ ಆಗುತ್ತದೆ. ಈ ಸನ್ ಗ್ಲಾಸ್ ಹಳದಿ ಬಣ್ಣದ ಲೆನ್ಸ್ ಹಾಗೂ ಗೋಲ್ಡನ್ ಕಲರ್ ಫ್ರೇಮ್‍ನನ್ನು ಹೊಂದಿರುತ್ತದೆ. ಇದು ಬೇಸಿಗೆಯಲ್ಲಿ ಎಲ್ಲರ ಗಮನವನ್ನು ಸೆಳೆಯುತ್ತದೆ.

    ಕ್ಯಾಟ್ ಹೈ ಗ್ರೀನ್ ಸನ್ ಗ್ಲಾಸ್: ಕ್ಯಾಟ್ ಹೈ ಸನ್ ಗ್ಲಾಸ್ ಬೇಸಿಗೆ ವೇಳೆ ನಿಮಗೆ ಬೋಲ್ಡ್ ಲುಕ್ ನೀಡುತ್ತದೆ. ಇದು ನೀಲಿ ಬಣ್ಣದ ಫ್ರೇಮ್ ಹಾಗೂ ಹಸಿರು ಬಣ್ಣದ ಲೆನ್ಸ್‍ನನ್ನು ಒಳಗೊಂಡಿದೆ. ಈ ಸನ್ ಗ್ಲಾಸ್ ಶೇ 100ರಷ್ಟು ಸುರಕ್ಷಿತವಾಗಿದ್ದು, ಬೇಸಿಗೆಯಲ್ಲಿ ಹೆಚ್ಚಾಗಿ ಬೀಳುವ ಸೂರ್ಯನ ಕಿರಣಗಳನ್ನು ತಡೆಯುತ್ತದೆ.

    ಮೀರರ್ ಫ್ರೇಮ್‍ನ ರೌಂಡ್ ಗ್ಲಾಸ್: ರೌಂಡ್ ಗ್ಲಾಸ್ ಟ್ರೆಂಡಿಯಾಗಿದ್ದು, ಹಲವಾರು ಸೆಲೆಬ್ರೆಟಿಗಳು ಈ ಗ್ಲಾಸ್‍ನನ್ನು ಧರಿಸುತ್ತಾರೆ. ಈ ಕಂದು ಬಣ್ಣದ ಸುಂದರವಾದ ಸನ್ ಗ್ಲಾಸ್ ಎಲ್ಲ ರೀತಿಯ ಡ್ರಸ್‍ಗಳಿಗೂ ಸೂಟ್ ಆಗುತ್ತದೆ.

    ಪಿಂಕ್ ಸನ್ ಗ್ಲಾಸ್: ಇದರಲ್ಲಿ ಹಲವು ವಿಧವಾದ ಶೇಡ್‍ಗಳಿದ್ದು, ಪಿಂಕ್ ಕಲರ್ ಸನ್ ಗ್ಲಾಸ್ ನಿಮ್ಮ ವ್ಯಕ್ತಿತ್ವವನ್ನು ಭಾಗವನ್ನು ತೋರಿಸುತ್ತದೆ ಹಾಗೂ ಡಲ್ ಆಗಿರುವ ನಿಮ್ಮ ಮುಖ ಬ್ರೈಟ್ ಆಗಿ ಕಾಣುವಂತೆ ಮಾಡುತ್ತದೆ.

    ಕ್ಯಾಟ್ ಹೈ ಸನ್ ಗ್ಲಾಸ್: ಕ್ಯಾಟ್ ಹೈ ಸನ್ ಗ್ಲಾಸ್ ರೆಟ್ರೋ ಶೈಲಿಯಂತಿರುವ ಸನ್ ಗ್ಲಾಸ್ ಆಗಿದ್ದು, ಎಲ್ಲರ ಮಧ್ಯೆ ಈ ಗ್ಲಾಸ್ ಎದ್ದು ಕಾಣಿಸುತ್ತದೆ.

  • ಪರಿಹಾರ ಸಿಗದೆ ಬೇಸತ್ತು ಕೇಂದ್ರ ಸಚಿವ ಜೋಶಿ ಮನೆಯಲ್ಲಿ ಮಹಿಳೆ ಆತ್ಮಹತ್ಯೆಗೆ ಯತ್ನ

    ಪರಿಹಾರ ಸಿಗದೆ ಬೇಸತ್ತು ಕೇಂದ್ರ ಸಚಿವ ಜೋಶಿ ಮನೆಯಲ್ಲಿ ಮಹಿಳೆ ಆತ್ಮಹತ್ಯೆಗೆ ಯತ್ನ

    ಹುಬ್ಬಳ್ಳಿ: ಮಳೆಯಿಂದ ಬಿದ್ದ ಮನೆಗೆ ಪರಿಹಾರ ಕಲ್ಪಿಸುವಂತೆ ಅಲೆದು ಅಲೆದು ಸುಸ್ತಾದ ಮಹಿಳೆಯೊಬ್ಬರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆಯ ಆವರಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿಯ ಬದಾಮಿ ನಗರದಲ್ಲಿರುವ ಜೋಶಿ ಮನೆಗೆ ಪರಿಹಾರ ಕೋರಿ ಬಂದ ಮಹಿಳೆಯೊಬ್ಬರು ಕೇಂದ್ರ ಸಚಿವರು ಸಿಗದ ಪರಿಣಾಮ ಮನನೊಂದು ಮನೆಯ ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

    ಧಾರವಾಡ ತಾಲೂಕಿನ ಗರಗ ಗ್ರಾಮದ ಶ್ರೀದೇವಿ ವೀರಪ್ಪ ಕಮ್ಮಾರ ಎಂಬ ಮಹಿಳೆಯೇ ಆತ್ಮಹತ್ಯೆಗೆ ಯತ್ನಿಸಿದರು. ಈ ಶ್ರೀದೇವಿ ವೀರಪ್ಪ ಕಮ್ಮಾರ ಅವರ ಬಿದ್ದ ಮನೆಗೆ ಪರಿಹಾರ ಕೊಡಿಸುವಂತೆ ಶಾಸಕ ಅಮೃತ ದೇಸಾಯಿಯವರ ಬಳಿ ಹಲವು ಬಾರಿ ಮನವಿ ಮಾಡಿದ್ದರು. ಆದರೆ ಶಾಸಕರು ಮಾತ್ರ ಸಂಸದರ ಬಳಿ ಪರಿಹಾರ ಕೇಳುವಂತೆ ಹೇಳಿ ಕಳುಹಿಸಿದ್ದರು. ಅದರಂತೆ ಹಲವು ಬಾರಿ ಸಂಸದರ ಭೇಟಿಗಾಗಿ ಬಂದಿದ್ದರು. ಆದರೆ ಪ್ರಹ್ಲಾದ್ ಜೋಶಿಯವರ ಭೇಟಿಗೆ ಸಿಗದ ಪರಿಣಾಮ ಮಹಿಳೆ ಮನನೊಂದು ಜೋಶಿಯವರ ಮನೆಯ ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಕೂಡಲೇ ಜೋಶಿಯವರ ಮನೆಯಲ್ಲಿದ್ದ ಭದ್ರತಾ ಸಿಬ್ಬಂದಿ ಹಾಗೂ ಮನೆಯಲ್ಲಿದ್ದ ಜನರು ಮಹಿಳೆಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಮಹಿಳೆಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆಯ ಸ್ಥಿತಿ ಗಂಭೀರವಾಗಿದ್ದು ಘಟನೆಯ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮನೆ ಮುಂದೆ ಮಹಿಳೆಯಿಂದ ಆತ್ಮಹತ್ಯೆಗೆ ಯತ್ನ – ಸ್ಪಷ್ಟನೆ ನೀಡಿದ ಜೋಶಿ

    ಈ ಪ್ರಕರಣದ ಕುರಿತು ಜಿಲ್ಲಾಡಳಿತದ ಪರವಾಗಿ ಧಾರವಾಡ ತಹಶಿಲ್ದಾರ್  ಸ್ಪಷ್ಟನೆ ನೀಡಿದ್ದಾರೆ. ಮಹಿಳೆಗೆ ಪರಿಹಾರ ನೀಡುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೂಚಿಸಿದ ನಂತರ ಸ್ಥಳ ಪರಿಶೀಲನೆ ನಡೆಸಿ ಸಿ ಕೆಟಗೆರಿಯಲ್ಲಿ ಹಾನಿಯಾದ ಮನೆಗೆ 50 ಸಾವಿರ ರೂಪಾಯಿ ಪರಿಹಾರ ಒದಗಿಸಲಾಗಿದೆ. ಸರ್ಕಾರದ ನಿಯಮದ ಪ್ರಕಾರ ಪರಿಹಾರದ ಹಣವನ್ನು 2020ರ ಜನವರಿ 28ರಂದು ಸಂತ್ರಸ್ತ ಕುಟುಂಬದ ಅಕೌಂಟ್‍ಗೆ ಜಮೆಯಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ಪತಿ ವೀರಣ್ಣ ಪ್ರತಿ ತಿಂಗಳು 1,400 ರೂಪಾಯಿ ಅಂಗವಿಕಲರ ಮಾಸಾಶನ ಪಡೆಯುತ್ತಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ಪಡಿತರ ಚೀಟಿ ವ್ಯವಸ್ಥೆ ಸಹ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

  • ಬಸ್‍ಗೆ ಡಿಕ್ಕಿ ಹೊಡೆದ ಆಟೋ- 14 ಮಂದಿ ಸಾವು

    ಬಸ್‍ಗೆ ಡಿಕ್ಕಿ ಹೊಡೆದ ಆಟೋ- 14 ಮಂದಿ ಸಾವು

    ಭೋಪಾಲ್: ಆಟೋವೊಂದು ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ 14 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಗ್ಗೆ ಗ್ವಾಲಿಯರ್‍ನ ಪುರಾನಿ ಚೌವಾನಿ ಪ್ರದೇಶಲ್ಲಿ ನಡೆದಿದೆ.

    ಘಟನೆಯಲ್ಲಿ 12 ಮಂದಿ ಮಹಿಳೆಯರು ಅಂಗನವಾಡಿ ಕಾರ್ಮಿಕರಾಗಿದ್ದು, ಒಬ್ಬ ಆಟೋ ಚಾಲಕನಾಗಿದ್ದಾನೆ. ಒಂಬತ್ತು ಮಂದಿ ಮಹಿಳೆಯರು ಹಾಗೂ ಆಟೋ ಚಾಲಕ ಅಪಘಾತದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ನಾಲ್ವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

    ಈ ಬಗ್ಗೆ ಮಾತನಾಡಿದ ಗ್ವಾಲಿಯರ್ ಎಸ್‍ಪಿ ಅಮಿತ್ ಸಿಂಗ್, ಅಪಘಾತ ಬೆಳಗ್ಗೆ ಸುಮಾರು 7 ಗಂಟೆಗೆ ಜರುಗಿದ್ದು, ಮಹಿಳೆಯರು ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಮಾಡಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.

    ಈ ಕುರಿತಂತೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

  • ಮದ್ಯಪ್ರಿಯನ ಮೇಲೆ ಕ್ಯಾಶಿಯರ್ ಹಲ್ಲೆ-ಬಾರ್ ಮುಂದೆ ಮಹಿಳೆಯರ ಹೈಡ್ರಾಮಾ

    ಮದ್ಯಪ್ರಿಯನ ಮೇಲೆ ಕ್ಯಾಶಿಯರ್ ಹಲ್ಲೆ-ಬಾರ್ ಮುಂದೆ ಮಹಿಳೆಯರ ಹೈಡ್ರಾಮಾ

    ಚಿಕ್ಕಬಳ್ಳಾಪುರ: ಕಂಠಪೂರ್ತಿ ಮದ್ಯ ಸೇವಿಸಿ ದುಡ್ಡು ಕೊಡಲಿಲ್ಲ ಅಂತ ಕ್ಯಾಶಿಯರ್ ಓರ್ವನ ಮೇಲೆ ಹಲ್ಲೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಗಣೇಶ್ ಬಾರ್ ನಲ್ಲಿ ನಡೆದಿದೆ. ಹಲ್ಲೆ ಖಂಡಿಸಿ ಮಹಿಳೆಯರು ಬಾರ್ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

    ಮೆಹಬೂಬ್ ನಗರದ ಅಮಜದ್ ಎಂಬಾತನ ಮೇಲೆ ಬಾರ್ ಕ್ಯಾಶಿಯರ್ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಗಾಯಾಳು ಅಮಜದ್ ನನ್ನು ಚಿಂತಾಮಣಿ ತಾಲೂಕು ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ವಿಷಯ ತಿಳಿದ ಅಮ್ಜಜದ್ ಸಂಬಂಧಿಕರು ಏಕಾಏಕಿ ಬಾರ್ ಮೇಲೆ ದಾಳಿ ಮಾಡಿದ್ದಾರೆ. ಮಹಿಳೆಯರು ಬಾರ್ ಕ್ಲೋಸ್ ಮಾಡಿಸಿ ನಡು ರಸ್ತೆಯಲ್ಲಿ ಅಡ್ಡಲಾಗಿ ಕುಳಿತು ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ.

    ಅಮಜದ್ ಕುಡಿದು ಹಣ ಇರದ್ದಕ್ಕೆ ಮೊಬೈಲ್ ಒತ್ತೆ ಇಟ್ಟಿದ್ದ ಎನ್ನಲಾಗಿದ್ದು, ಇಂದು ಹಣ ನೀಡಿದಾಗ ಮೊಬೈಲ್ ನೀಡಿಲ್ಲ ಎನ್ನಲಾಗಿದೆ. ಈ ವಿಚಾರದಲ್ಲಿ ಬಾರ್ ಕ್ಯಾಶಿಯರ್ ಹಾಗೂ ಅಮಜದ್ ನಡುವೆ ಗಲಾಟೆ ನಡೆದಿದೆ ಅಂತ ತಿಳಿದು ಬಂದಿದೆ. ಘಟನೆ ನಂತರ ಅಮಜದ್ ಕುಟುಂಬಸ್ಥರು ಬಾರ್ ಮೇಲೆ ದಾಳಿ ಮಾಡಿ ಧ್ವಂಸ ಮಾಡಲು ಯತ್ನಿಸಿದ್ದು ಸ್ಥಳಕ್ಕೆ ಬಂದ ಚಿಂತಾಮಣಿ ನಗರ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.