Tag: women

  • ತುಂಬಿ ಹರಿಯುವ ನದಿಯಲ್ಲಿ ಗಾಯಾಳು ಮಹಿಳೆಯನ್ನು ಸ್ಟ್ರೆಚ್ಚರ್ ನಲ್ಲಿ ಹೊತ್ತೊಯ್ದರು

    ತುಂಬಿ ಹರಿಯುವ ನದಿಯಲ್ಲಿ ಗಾಯಾಳು ಮಹಿಳೆಯನ್ನು ಸ್ಟ್ರೆಚ್ಚರ್ ನಲ್ಲಿ ಹೊತ್ತೊಯ್ದರು

    -ಸಚಿವ ಅಂಗಾರ ಕ್ಷೇತ್ರದ ದುರವಸ್ಥೆ

    ಮಂಗಳೂರು: ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರ ಕ್ಷೇತ್ರದಲ್ಲಿ ತುಂಬಿ ಹರಿಯುವ ನದಿಯಲ್ಲಿ ಗಾಯಾಳು ಮಹಿಳೆಯನ್ನು ಸ್ಟ್ರೆಚರ್ ನಲ್ಲಿ ಎತ್ತಿಕೊಂಡು ಹೋದ ಘಟನೆ ಇಂದು ನಡೆದಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರಿನ ಮರಸಂಕ ಎಂಬಲ್ಲಿನ ನಿವಾಸಿ ದೇವಕಿಯವರು ಮನೆಯಲ್ಲಿ ಕಾಲು ಜಾರಿ ಬಿದ್ದು, ಕಾಲು ಮುರಿತಕ್ಕೊಳಗಾಗಿದ್ದರು. ಆದರೆ ಚಿಕಿತ್ಸೆಗಾಗಿ ನಗರಕ್ಕೆ ಹೋಗಬೇಕಾದರೆ ಮರಸಂಕದಲ್ಲಿರುವ ಕಿರುನದಿಯನ್ನು ದಾಟಿ ಹೋಗಬೇಕು. ಈ ನದಿಗೆ ಸೇತುವೆಯೇ ಇಲ್ಲ. ಆದ್ದರಿಂದ ತುಂಬಿ ಹರಿಯುವ ಹೊಳೆಯನ್ನೇ ದಾಟಿ ಹೋಗಬೇಕು. ಹೀಗಾಗಿ ತುಂಬಿ ಹರಿಯುವ ಹೊಳೆಯಲ್ಲಿ ದೇವಕಿಯವರನ್ನು ಸ್ಥಳೀಯರು ಸ್ಟ್ರೆಚರ್ ನಲ್ಲಿ ಹೊತ್ತುಕೊಂಡು ಹೋದರು. ಬಳಿಕ ಹೊಳೆ ದಾಟಿ ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಿದರು. ಇದು ಅಂಗಾರ ಅವರ ಕ್ಷೇತ್ರದ ದುರವಸ್ಥೆಯಾಗಿದೆ.  ಇದನ್ನೂ ಓದಿ: ಅಂಗಾರ ವಿರುದ್ಧ ಭೋಜೇಗೌಡ ಕಿಡಿ – ಡಿಸಿ ಕಚೇರಿ ಬಳಿ ಏಕಾಂಗಿ ಪ್ರತಿಭಟನೆ

    ಜಾಲ್ಸೂರಿನ ಮರಸಂಕದಲ್ಲಿ 9 ಮನೆಗಳಿದ್ದು ಸುಮಾರು 50 ಜನ ವಾಸಿಸುತ್ತಿದ್ದಾರೆ. ಸುಮಾರು ಅರ್ಧ ಕಿಲೋಮೀಟರ್ ಹೊಳೆ ದಾಟಿ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಇಲ್ಲಿದೆ. ಪಯಸ್ವಿನಿ ನದಿಗೆ ಸೇರುವ ಈ ಹೊಳೆಯಲ್ಲಿ ಬಾರಿ ಮಳೆ ಬರುತ್ತಿರುವಾಗ ನೀರು ಅಪಾಯದ ಮಟ್ಟ ತಲುಪುತ್ತದೆ. ಕಳೆದ ವರ್ಷ ಗರ್ಭಿಣಿಯನ್ನು ಹೊತ್ತುಕೊಂಡು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಈ ಊರಿನ ಜನ 15 ವರ್ಷದಿಂದ ಸೇತುವೆಗಾಗಿ ಮನವಿ ಮಾಡಿದ್ರೂ ಇಂದಿಗೂ ಸೇತುವೆ ಕನಸಿನ ಭರವಸೆ ಹಾಗೇ ಉಳಿದಿದೆ.

  • ಟಯರ್ ಬ್ಲಾಸ್ಟ್ ಆಗಿ ಕಾರು ಅಪಘಾತ-ತರಕಾರಿ ಮಾರುವ ಮಹಿಳೆ ಸಾವು

    ಟಯರ್ ಬ್ಲಾಸ್ಟ್ ಆಗಿ ಕಾರು ಅಪಘಾತ-ತರಕಾರಿ ಮಾರುವ ಮಹಿಳೆ ಸಾವು

    ಬಳ್ಳಾರಿ: ಚಲಿಸುತ್ತಿದ್ದ ಕಾರಿನ ಮುಂದಿನ ಟಯರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಮರದ ಕೆಳಗಡೆ ತರಕಾರಿ ಮಾರಾಟ ಮಾರುತ್ತಿದ್ದ ಮಹಿಳೆ ಧಾರುಣವಾಗಿ ಮೃತಪಟ್ಟ ಘಟನೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮದಲ್ಲಿ ವರದಿಯಾಗಿದೆ.

    ಹಳೇಕೋಟೆ ಗ್ರಾಮದ ನಿವಾಸಿ ಕುರುಬರ ಶಾಂತಮ್ಮ(42) ಮೃತ ದುರ್ದೈವಿ. ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮದ ಬಳಿ ಗಾದಿಲಿಂಗ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಕಾರಿನ ಮುಂದಿನ ಟಯರ್ ಸ್ಫೋಟಗೊಂಡಿದೆ. ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ಈ ವೇಳೆ ಮರದ ಕೆಳಗಡೆ ತರಕಾರಿ ಮರುತ್ತಿದ್ದ ಶಾಂತಮ್ಮ ಸ್ಥಳದಲ್ಲೇ ಅಸುನಿಗಿದ್ದಾರೆ. ಇದನ್ನೂ ಓದಿ: ಮೈಲಾರಲಿಂಗೇಶ್ವರ ದರ್ಶನ ಪಡೆದ ರವಿ ಚನ್ನಣ್ಣನವರ್

    ಘಟನೆಯಲ್ಲಿ ಕಾರಿನ ಚಾಲಕ ಗಾದಿಲಿಂಗ ಸೇರಿದಂತೆ ತರಕಾರಿ ಖರೀದಿಗೆ ಆಗಮಿಸಿದವರಿಗೂ ಗಾಯಗಳಾಗಿದ್ದು, ಗಾಯಾಳುಗಳನ್ನು ಸಿರುಗುಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಗಾಯಗಳಾದ ಒಬ್ಬರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತೆಕ್ಕಲಕೋಟೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ನನ್ನ, ದರ್ಶನ್ ಹೆಸರು ಬಳಸಿ ಲೋನ್ ವಿಚಾರವಾಗಿ ವಂಚನೆ: ಉಮಾಪತಿ

    ನನ್ನ, ದರ್ಶನ್ ಹೆಸರು ಬಳಸಿ ಲೋನ್ ವಿಚಾರವಾಗಿ ವಂಚನೆ: ಉಮಾಪತಿ

    ಮೈಸೂರು: ನನ್ನ ಮತ್ತು ದರ್ಶನ್ ಅವರ ಹೆಸರನ್ನು ಬಳಸಿಕೊಂಡು ಲೋನ್ ಕೊಡುವುದಾಗಿ ಒರ್ವ ಮಹಿಳೆ ವಂಚನೆ ಮಾಡುತ್ತಿರುವ ಬಗ್ಗೆ ದೂರು ನೀಡಲು ಎಸಿಪಿ ಕಚೇರಿಗೆ ಬಂದಿದ್ದೇವೆ ಎಂದು ನಿರ್ಮಾಪಕರಾದ ಉಮಾಪತಿ ಅವರು ಸ್ಪಷ್ಟಪಡಿಸಿದ್ದಾರೆ.

    ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಉಮಾಪತಿ ಅವರು, ಲೋನ್ ವಿಚಾರದಲ್ಲಿ ನಟ ದರ್ಶನ್ ಹಾಗೂ ನೀವು ಶ್ಯೂರಿಟಿ ಹಾಕುತ್ತಿದ್ದೀರಂತೆ ಎಂದು ಒಂದು ಕರೆ ಬರುತ್ತದೆ. ಆಗ ನಾನು ದರ್ಶನ್ ಅವರನ್ನು ಕೇಳಿದೆ ನೀವು ಯಾರಿಗಾದರು ಶ್ಯೂರಿಟಿ ಹಾಕಿದ್ದೀರ ಎಂದು ಅವರು ಇಲ್ಲ ಎನ್ನುತ್ತಾರೆ. ಆ ಬಳಿಕ ವಂಚನೆಯ ಬಗ್ಗೆ ತಿಳಿದುಬಂದು ನಾನು ದರ್ಶನ್ ಅವರೊಂದಿಗೆ ಮಾತುಕತೆ ನಡೆಸಿ ನಮ್ಮ ಸ್ನೇಹಿತರ ಹೆಸರು ಸೇರಿದಂತೆ ನಮ್ಮ ಹೆಸರನ್ನು ಬಳಸಿಕೊಂಡು ವಂಚನೆ ಮಾಡುತ್ತಿದ್ದಾರೆ ಎಂದು ಜೂನ್ 16 ರಂದೇ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ.

    ವಂಚನೆಯ ಬಗ್ಗೆ ನಾನು ಮತ್ತು ದರ್ಶನವರು ಕೂತು ಮಾತನಾಡಿ ಈ ಬಗ್ಗೆ ಮೈಸೂರಿನಲ್ಲಿ ದೂರು ದಾಖಲಿಸಿದರೆ ಒಳ್ಳೆಯದು ಎಂದು ಇಲ್ಲಿ ದೂರು ನೀಡಿದ್ದೇವೆ. ವಂಚನೆ ಮಾಡುತ್ತಿರುವ ಮಹಿಳೆ ಬಗ್ಗೆ 2 ತಿಂಗಳ ಹಿಂದೆ ನಮಗೆ ಗೊತ್ತಾಗಿದೆ. ಆಕೆಯನ್ನು ದರ್ಶನ್ ಅವರಿಗೆ ನಾನು ಪರಿಚಯ ಮಾಡಿರುವ ಸುದ್ದಿ ಸುಳ್ಳು. ನಾವು ಈ ಬಗ್ಗೆ ದೂರು ನೀಡಿದ್ದೇವೆ ಇದೀಗ ಮಹಿಳೆಯನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಬಳಿಕ ಮುಂದಿನ ವಿಚಾರ ತಿಳಿದುಬರಲಿದೆ ಎಂದರು. ಇದನ್ನೂ ಓದಿ: ನನಗೆ ಸ್ವಲ್ಪ ಸಮಯ ಕೊಡಿ, ಸತ್ಯ ಹೊರಗೆ ಬರಲಿದೆ: ದರ್ಶನ್

    ನಟ ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ದರ್ಶನ್ ಬಳಿ ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ಬಂದಿದ್ದ ಮಹಿಳೆ ಸೇರಿದಂತೆ ಇನ್ನಿಬ್ಬರ ಹೆಸರು ಎಫ್‍ಐಆರ್ ನಲ್ಲಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅರುಣಾ ಕುಮಾರಿ, ಮಧುಕೇಶವ ಮತ್ತು ನಂದೀಶ್ ಎಂಬವರ ವಿರುದ್ಧವೇ ಎಫ್‍ಐಆರ್ ದಾಖಲಾಗಿದೆ. ನಿರ್ಮಾಪಕ ಉಮಾಪತಿ ಗೆಳೆಯ ಹರ್ಷ ಮೆಲಂತಾ ನೀಡಿದ ದೂರಿನಡಿ ಈ ಮೂವರ ವಿರುದ್ಧ ದೂರು ದಾಖಲಾಗಿದೆ.

  • ಹರ್ಲೀನ್ ಡಿಯೋಲ್ ದಿ ಬೆಸ್ಟ್ ಕ್ಯಾಚ್ – ದಿಗ್ಗಜರು ಬೆರಗು

    ಹರ್ಲೀನ್ ಡಿಯೋಲ್ ದಿ ಬೆಸ್ಟ್ ಕ್ಯಾಚ್ – ದಿಗ್ಗಜರು ಬೆರಗು

    ಲಂಡನ್: ಭಾರತ ಮಹಿಳಾ ತಂಡದ ಆಟಗಾರ್ತಿ ಹರ್ಲೀನ್ ಡಿಯೋಲ್ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಹಿಡಿದ ಅದ್ಭುತ ಕ್ಯಾಚ್‍ಗೆ ದಿಗ್ಗಜ ಕ್ರಿಕೆಟಿಗರು ಸಹಿತ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಭಾರತ ಹಾಗೂ ಇಂಗ್ಲೆಂಡ್ ವನಿತೆಯರ ನಡುವಿನ ಮೊದಲ ಟ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತ್ತು. ಇಂಗ್ಲೆಂಡ್ ಬ್ಯಾಟಿಂಗ್ ವೇಳೆ 18.5ನೇ ಓವರ್‍ ನಲ್ಲಿ ಎಮಿ ಜೋನ್ಸ್ ಬಾರಿಸಿದ ಬಿಗ್ ಶಾಟ್ ಒಂದನ್ನು ಲಾಂಗ್ ಆಫ್‍ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಹರ್ಲೀನ್ ಕ್ಷಣ ಮಾತ್ರದಲ್ಲಿ ಜಿಂಕೆಯಂತೆ ನೆಗೆದು ಸ್ಟನ್ನಿಂಗ್ ಕ್ಯಾಚ್ ಹಿಡಿದು ವೀಕ್ಷರನ್ನು ನಿಬ್ಬೆರಗಾಗುವಂತೆ ಮಾಡಿದರು.

    ಜೋನ್ಸ್ ಹೊಡೆದ ಬಿಗಿಯಾದ ಹೊಡೆತ ಇನ್ನೆನೂ ಸಿಕ್ಸರ್ ಹೊಗಬೇಕೆನ್ನುವಷ್ಟರಲ್ಲಿ ಚಂಗನೆ ಜಿಗಿದ ಹರ್ಲೀನ್ ಬಾಲ್ ಹಿಡಿದರು. ಈ ವೇಳೆ ಸಮತೋಲನ ಕಳೆದುಕೊಂಡು ಚೆಂಡನ್ನು ಮತ್ತೆ ಮೇಲಕ್ಕೆಸೆದರು. ಬಳಿಕ ಬೌಂಡರಿ ಗೆರೆ ದಾಟಿ ಮತ್ತೆ ಮೈದಾನದೊಳಗೆ ಹಾರಿ ಕ್ಯಾಚ್ ಹಿಡಿಯುವ ಮೂಲಕ ಸ್ವತಃ ಭಾರತ ತಂಡದ ನಾಯಕಿ ಸೃತಿ ಮಂಧಾನ ಅವರನ್ನೂ ಕೂಡ ದಂಗುಬಡಿಸಿದರು. ಇದನ್ನೂ ಓದಿ: ಸ್ಮೃತಿ ಮಂಧಾನ ರೋಚಕ ಕ್ಯಾಚ್ – Fly Smriti Fly ಅಭಿಮಾನಿಗಳ ಹರ್ಷೋದ್ಘಾರ

    ಹರ್ಲೀನ್ ಕ್ಯಾಚ್ ಕಂಡ ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಸಹಿತ ಹಲವು ಆಟಗಾರರು ಮೆಚ್ಚುಗೆ ಸೂಚಿಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರ್ಲೀನ್ ಕ್ಯಾಚ್ ವೈರಲ್ ಆಗುತ್ತಿದೆ.

    ಈ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 18 ರನ್ ಗಳ ಸೋಲು ಅನುಭವಿಸಿದೆ. ಈ ಮೂಲಕ 3 ಪಂದ್ಯಗಳ ಟಿ20 ಸರಣಿಯಲ್ಲಿ ಇಂಗ್ಲೆಂಡ್ ತಂಡ 1-0 ಪಂದ್ಯಗಳ ಮುನ್ನಡೆಗಳಿಸಿಕೊಂಡಿದೆ.

  • ನಿತ್ಯ ಹಿಂಬಾಲಿಸಿ ಚೂಡಾಯಿಸುತ್ತಿದ್ದ ಕಾಮುಕನಿಗೆ ಚಪ್ಪಲಿ ಏಟು ನೀಡಿದ ಮಹಿಳೆ

    ನಿತ್ಯ ಹಿಂಬಾಲಿಸಿ ಚೂಡಾಯಿಸುತ್ತಿದ್ದ ಕಾಮುಕನಿಗೆ ಚಪ್ಪಲಿ ಏಟು ನೀಡಿದ ಮಹಿಳೆ

    ಬೆಳಗಾವಿ: ಪ್ರತಿನಿತ್ಯ ಮಹಿಳೆಯನ್ನು ಹಿಂಬಾಲಿಸಿಕೊಂಡು ಬಂದು ಚೂಡಾಯಿಸುತ್ತಿದ್ದ ಕಾಮುಕನೋರ್ವನಿಗೆ ಮಹಿಳೆ ಚಪ್ಪಲಿಯಿಂದ ಹೊಡೆದು ಬುದ್ಧಿ ಕಲಿಸಿರುವ ಘಟನೆ ಬೆಳಗಾವಿಯ ನಗರದಲ್ಲಿ ವರದಿಯಾಗಿದೆ.

    ಬೆಳಗಾವಿಯ ಎಸ್‍ಪಿ ಕಚೇರಿ ಮುಂದಿನ ರಸ್ತೆಯಲ್ಲಿ ನಿನ್ನೆ ಸಂಜೆ ಮಹಿಳೆಯೊರ್ವರು ತನ್ನ ಗಂಡನೊಂದಿಗೆ ಸೇರಿ ತನಗೆ ಪ್ರತಿನಿತ್ಯ ಕಾಟಕೊಡುತ್ತಿದ್ದ ಕಾಮುಕನಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಹಲವು ತಿಂಗಳಿಂದ ಗೋಪಾಲ್ ಗುರನ್ನವರ್ ಎಂಬಾತ ಹಿಂಬಾಲಿಸಿ ಚೂಡಾಯಿಸುತ್ತಿದ್ದ. ಈತನಿಗೆ ಮಹಿಳೆ ಹಲವು ಬಾರಿ ಎಚ್ಚರಿಕೆ ನೀಡಿದರು ಕೂಡ ಮತ್ತೆ ಹಳೆ ಚಾಳಿ ಮುಂದುವರಿಸಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಗೋಪಾಲ್‍ಗೆ ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ಮುಳುಗಿ ಮೃತಪಟ್ಟ ಸಹೋದರರ ಮನೆಗೆ ಡಿಸಿಎಂ ಭೇಟಿ

    ಗೋಪಾಲ್ ಗುರನ್ನವರ್‍ಗೆ ಮಹಿಳೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು ಕೂಡ ಆತ ಮತ್ತೆ ಚೂಡಾಯಿಸಲು ಮುಂದಾಗಿದ್ದಾನೆ. ಇದರಿಂದ ನೊಂದ ಮಹಿಳೆ, ಆಕೆಯ ಪತಿಯೊಂದಿಗೆ ಸೇರಿ ಗೋಪಾಲ್‍ಗೆ ಚಪ್ಪಲಿ ಏಟು ನೀಡಿದ್ದಾರೆ. ಬಳಿಕ ಸಾರ್ವಜನಿಕರು ಸೇರುತ್ತಿದ್ದಂತೆ ಸ್ಥಳದಿಂದ ಗೋಪಾಲ್ ಕಾಲ್ಕಿತ್ತಿದ್ದಾನೆ. ಘಟನೆಯ ದೃಶ್ಯವನ್ನು ಸಾರ್ವಜನಿರೊಬ್ಬರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋ ವೈರಲ್ ಆಗುತ್ತಿದೆ.

  • ಹುಡುಗಿಯರ ಮೇಕಪ್ ಕಿಟ್‍ನಲ್ಲಿ ಇರಲೇಬೇಕಾದ 5 ಬ್ಯೂಟಿ ಪ್ರೊಡಕ್ಟ್‌ಗಳು

    ಹುಡುಗಿಯರ ಮೇಕಪ್ ಕಿಟ್‍ನಲ್ಲಿ ಇರಲೇಬೇಕಾದ 5 ಬ್ಯೂಟಿ ಪ್ರೊಡಕ್ಟ್‌ಗಳು

    ಮೇಕಪ್ ಮಾಡುವುದು ಬಹಳ ಸುಲಭ. ಮೇಕಪ್ ಮಾಡಿಕೊಳ್ಳಲು 15 ರಿಂದ 20 ನಿಮಿಷ ಬೇಕಾಗುತ್ತದೆ. ಆದರೆ ಕೆಲವೊಮ್ಮೆ ಝೂಮ್ ಮೀಟಿಂಗ್, ಕ್ಲೈಂಟ್ ಕರೆಗಳನ್ನು ಸ್ವೀಕರಿಸುವ ವೇಳೆ ತಕ್ಷಣಕ್ಕೆ ರೆಡಿಯಾಗಬೇಕಾಗುತ್ತದೆ. ಆಗ ತಯಾರಾಗಲು ನಮಗೆ ಅನೇಕ ಕೈಗಳ ಸಹಾಯ ಬೇಕಾಗುತ್ತದೆ. ಆದರೆ ಲಿಪ್‍ಸ್ಟಿಕ್, ಐ ಮೇಕಪ್ ನಿಮಗೆ ಬಹಳಷ್ಟು ಹೊಳಪು ನೀಡುತ್ತದೆ. ನೀವು ತಕ್ಷಣಕ್ಕೆ ರೆಡಿಯಾಗಬೇಕೆಂದರೆ ಈ 5 ಬ್ಯೂಟಿ ಪ್ರೊಡಕ್ಟ್‌ಗಳನ್ನು ನಿಮ್ಮ ಮೇಕಪ್ ಕಿಟ್‍ನಲ್ಲಿ ಎಲ್ಲೆ ಹೋದರೂ ತೆಗೆದುಕೊಂಡು ಹೋಗುವುದು ಉತ್ತಮ. ಏಕೆಂದರೆ ಈ ಬ್ಯೂಟಿ ಪ್ರೊಡಕ್ಟ್‌ಗಳು ನಿಮ್ಮ ಮುಖಕ್ಕೆ ತಕ್ಷಣ ಬದಲಾವಣೆ ನೀಡುತ್ತದೆ.

    ಸನ್ ಸ್ಕ್ರೀನ್ ಸ್ಪೇ
    ಸನ್ ಸ್ಕ್ರೀನ್ ಸ್ಪ್ರೇ ತ್ವಚೆಗೆ ಬಹಳ ಮುಖ್ಯ. ಇದು ನಮ್ಮ ಮುಖದಲ್ಲಿನ ವೈಟ್ ಪ್ಯಾಚೇಸ್‍ಗಳನ್ನು ತಡೆಗಟ್ಟುತ್ತದೆ.

    ಕಣ್ಣಿನ ಪೆನ್ಸಿಲ್
    ಸೌಂದರ್ಯ ಎಂಬುದು ಕಣ್ಣಿನಲ್ಲಿ ಅಡಗಿರುತ್ತದೆ. ಅದರಲ್ಲಿಯೂ ಪೆನ್ಸಿಲ್ ಮೂಲಕ ಕಣ್ಣಿಗೆ ಬಣ್ಣ ಹಚ್ಚುವುದರಿಂದ ಅದು ನಿಮ್ಮ ಕಣ್ಣಿನ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ.

    ಲಿಪ್‍ಸ್ಟಿಕ್
    ತುಟಿಗಳಿಗೆ ಲಿಪ್‍ಸ್ಟಿಕ್ ಹಚ್ಚುವುದರಿಂದ ನಿಮಗೆ ಅದು ಬೋಲ್ಡ್ ಲುಕ್ ನೀಡುತ್ತದೆ. ಆದರೆ ಲಿಪ್‍ಸ್ಟಿಕ್ ಬಳಸುವ ಮುನ್ನ ನಿಮ್ಮ ತುಟಿಗೆ ಸೂಟ್ ಆಗುವಂತಹ ಬಣ್ಣ ಯಾವುದು ಎಂದು ಅರಿತು ಹಾಕಿಕೊಳ್ಳುವುದು ಉತ್ತಮ. ಲಿಪ್‍ಸ್ಟಿಕ್ ನಿಮ್ಮ ತುಟಿಗೆ ಬಣ್ಣ ನೀಡುವುದರ ಮೂಲಕ ಸುಂದರವಾಗಿಸುತ್ತದೆ.

    ಮಿಲ್ಕಿ- ಲೋಷನ್
    ಹಾಲಿನ ಮೂಲಕ ತಯಾರಿಸಿರುವ ಈ ಲೋಷನ್ ತ್ವಚೆಗೆ ಕಾಂತಿಯನ್ನು ನೀಡುತ್ತದೆ. ಇದು ಬಿಸಿಲಿನಿಂದ ನಿಮ್ಮನ್ನು ರಕ್ಷಿಸಿ ಮುಖ ಹಾಗೂ ದೇಹ ಎರಡಕ್ಕೂ ಒಂದೇ ಬಣ್ಣ ನೀಡುತ್ತದೆ.

    ಹೇರ್ ಬ್ರಶ್
    ಹೇರ್ ಬ್ರಶ್‍ನನ್ನು ನಿಮ್ಮೊಂದಿಗೆ ಯಾವಾಗಲೂ ಕೊಂಡೊಯ್ಯಿರಿ ಇದು ನಿಮಗೆ ಎಂದಿಗದರೂ ಉಪಯೋಗಕ್ಕೆ ಬರಬಹುದು. ನೀವು ತುಂಬಾ ಒತ್ತಡದಲ್ಲಿರುವಾಗ ನಿಮ್ಮ ಕೂದಲನ್ನು ಬಾಚಿಕೊಳ್ಳುವುದರಿಂದ ನಿಮ್ಮ ನೆತ್ತಿಯ ಮೇಲಿನ ರಕ್ತ ಪರಿಚಲನೆಯನ್ನು ಇದು ಸುಧಾರಿಸುತ್ತದೆ ಹಾಗೂ ಒತ್ತಡ ಕಡಿಮೆ ಗೊಳಿಸುತ್ತದೆ.

  • ಪಾನಮತ್ತ ವ್ಯಕ್ತಿಯ ಕಿತಾಪತಿ – ಮಹಿಳೆಯರ ಮುಂದೆ ಬೆತ್ತಲೆ ಪ್ರದರ್ಶನ

    ಪಾನಮತ್ತ ವ್ಯಕ್ತಿಯ ಕಿತಾಪತಿ – ಮಹಿಳೆಯರ ಮುಂದೆ ಬೆತ್ತಲೆ ಪ್ರದರ್ಶನ

    ಚಾಮರಾಜನಗರ: ನರೇಗಾ ಕಾಮಗಾರಿಯಲ್ಲಿ ನಿರತರಾಗಿದ್ದ ಮಹಿಳೆಯರ ಮುಂದೆ ಅಶ್ಲೀಲ ವರ್ತನೆ ಮಾಡಿ, ಬೆತ್ತಲೆಯಾಗಿ ಪಾನಮತ್ತ ವ್ಯಕ್ತಿಯೊಬ್ಬ ಕಿತಾಪತಿ ಮಾಡಿದ ಘಟನೆ ಚಾಮರಾಜನಗರ ತಾಲೂಕು ಪುಣಜನೂರು ಗ್ರಾಮದಲ್ಲಿ ವರದಿಯಾಗಿದೆ.

    ಅಶ್ಲೀಲವಾಗಿ ವರ್ತನೆ ಮಾಡಿದ ವ್ಯಕ್ತಿಯನ್ನು ಚಾಮರಾಜನಗರ ತಾಲೂಕು ಪುಣಜನೂರು ಗ್ರಾಮದ ತಾಂಡವಮೂರ್ತಿ ಎಂದು ಗುರುತಿಸಲಾಗಿದೆ. ತಾಂಡವಮೂರ್ತಿ ಗ್ರಾಮದಲ್ಲಿ ನರೇಗಾ ಯೋಜನೆಯಡಿಯಲ್ಲಿ ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ತಗಾದೆ ತೆಗೆದು ಜಗಳವಾಡಿದ್ದಾನೆ. ಕುಡಿದ ಮತ್ತಿನಲ್ಲಿದ್ದ ತಾಂಡವಮೂರ್ತಿ ಜಗಳವಾಡಿ ಬಳಿಕ ಬೆತ್ತಲೆಯಾಗಿ ಮಹಿಳೆಯರಿಗೆ ಮುಜುಗರವಾಗುವಂತೆ ನಡೆದುಕೊಂಡಿದ್ದಾನೆ. ಇದನ್ನೂ ಓದಿ: ದಯಾಮರಣ ಕೋರಿ ಧರಣಿ ಕುಳಿತ ರೈತ ಕುಟುಂಬ

    ತಾಂಡವಮೂರ್ತಿ ಬೆತ್ತಲೆಯಾಗಿ ಓಡಾಡುತ್ತಿದ್ದನ್ನು ನೋಡಿದ ಸ್ಥಳೀಯರು ವೀಡಿಯೋ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದರಿಂದ ಕುಪಿತಗೊಂಡ ತಾಂಡವಮೂರ್ತಿಯ ಮಕ್ಕಳಾದ ಮಹೇಂದ್ರ ಮತ್ತು ಸಂತೋಷ್ ಪೊಲೀಸರಿಗೆ ಒಪ್ಪಿಸಿದ ಗ್ರಾಮದ ಮೂವರ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ. ಬಳಿಕ ಗ್ರಾಮಸ್ಥರು ಹಲ್ಲೆಗೊಳದ ಮೂವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಶ್ಲೀಲವಾಗಿ ವರ್ತಿಸಿದ ತಾಂಡವಮೂರ್ತಿ ಮತ್ತು ಆತನ ಮಕ್ಕಳಾದ ಮಹೇಂದ್ರ, ಸಂತೋಷ್‍ನ್ನು ಪೊಲೀಸರು ಬಂಧಿಸಿದ್ದು, ಚಾಮರಾಜನಗರ ಪೂರ್ವ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಯಾವ ಡ್ರೆಸ್‍ಗಳ ಜೊತೆಗೆ ಲೆದರ್ ಜಾಕೆಟ್ ಸೂಟ್ ಆಗುತ್ತದೆ ಗೊತ್ತಾ?

    ಯಾವ ಡ್ರೆಸ್‍ಗಳ ಜೊತೆಗೆ ಲೆದರ್ ಜಾಕೆಟ್ ಸೂಟ್ ಆಗುತ್ತದೆ ಗೊತ್ತಾ?

    ಲೆದರ್ ಜಾಕೆಟ್ ಎಲ್ಲಾ ಡ್ರೆಸ್‍ಗಳಿಗೂ ಡಿಫರೆಂಟ್ ಲುಕ್ ನೀಡುತ್ತದೆ ಎಂಬುವುದು ಎಲ್ಲರಿಗೂ ತಿಳಿದಿದೆ. ನೀವು ಚೆನ್ನಾಗಿ ನೋಡಿಕೊಂಡರೆ ಲೆದರ್ ಜಾಕೆಟ್‍ಗಳು ಹಲವಾರು ವರ್ಷಗಳ ಕಾಲ ಬಳಕೆಗೆ ಬರುತ್ತದೆ. ಕ್ಲಾಸಿಕ್ ಲುಕ್ ನೀಡುವ ಕಪ್ಪು ಬಣ್ಣದ ಲೆದರ್ ಜಾಕೆಟ್‍ಗಳನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ಆದರೀಗ ಹಲವಾರು ಬಣ್ಣಗಳ ಲೆದರ್‍ಗಳು ಮಾರುಕಟ್ಟೆಗೆ ಬಂದಿದೆ. ಲೆದರ್ ಜಾಕೆಟ್ ಖರೀದಿಸುವಾಗ ಯಾವ ರೀತಿಯ ಲೆದರ್ ಜಾಕೆಟ್ ಖರೀದಿಸಬೇಕು. ಯಾವ ಉಡುಪಿನ ಜೊತೆಗೆ ಲೆದರ್ ಜಾಕೆಟ್ ಸೂಟ್ ಆಗುತ್ತದೆ. ಈ ಎಲ್ಲದರ ಕುರಿತಂತೆ ಕೆಲವು ಮಾಹಿತಿ ಈ ಕೆಳಗೆ ನೀಡಲಾಗಿದೆ.

    ಕ್ಲಾಸಿಕ್ ಮೋಟೋ
    ಕ್ಲಾಸಿಕ್ ಮೋಟೋ ಲೆದರ್ ಜಾಕೆಟ್ ಸಾಮಾನ್ಯವಾಗಿ ಎಲ್ಲರಿಗೂ ಸೂಟ್ ಆಗುತ್ತದೆ. ಸ್ತ್ರೀಯರು ಇದನ್ನು ಸ್ಕರ್ಟ್ ಜೊತೆಗೆ ಧರಿಸಿದರೆ ಬಹಳ ಸುಂದರವಾಗಿ ಕಾಣಿಸುತ್ತಾರೆ.

    ಓವರ್‍ ಸೈಸಿಡ್ ಲೆದರ್ ಜಾಕೆಟ್
    ಚಳಿಗಾಲದಲ್ಲಿ ಧರಿಸಿಲು ಓವರ್ ಸೈಸಿಡ್ ಲೆದರ್ ಜಾಕೆಟ್ ಉತ್ತಮವಾಗಿರುತ್ತದೆ. ಜೊತೆಗೆ ಬ್ಲಾಕ್ ಕಲರ್ ಜೀನ್ಸ್ ಪ್ಯಾಂಟ್‍ಗೆ ಈ ಜಾಕೆಟ್ ಸಖತ್ ಸ್ಟೈಲಿಶ್ ಲುಕ್ ನೀಡುತ್ತದೆ.

    ಫ್ಯಾಕ್ಸ್ ಫುಲ್ ಲೆದರ್ ಜಾಕೆಟ್
    ನೀಲಿ ಬಣ್ಣದ ಈ ಜಾಕೆಟ್ ಎಲ್ಲರ ಗಮನವನ್ನು ಬೇಗ ಸೆಳೆಯುತ್ತದೆ. ಸ್ಕರ್ಟ್ ಹಾಗೂ ಶೂ ಜೊತೆಗೆ ಈ ಜಾಕೆಟ್ ಧರಿಸಿದರೆ ರಿಚ್ ಲುಕ್ ನೀಡುತ್ತದೆ.

    ಪೆಪ್ಲಮ್ ಟಾಪ್
    ಲೆದರ್ ಅನ್ನು ಕೇವಲ ಜಾಕೆಟ್‍ಗೆ ಮಾತ್ರವಲ್ಲದೇ ಟಾಪ್‍ಗಳನ್ನು ತಯಾರಿಸಬಹುದು. ಈ ಟಾಪ್ ಸ್ಮಾರ್ಟ್ ಹಾಗೂ ಸ್ಟೈಲಿಶ್ ಲುಕ್ ನೀಡುವುದರ ಜೊತೆಗೆ ಸೊಂಟದ ಮಧ್ಯೆ ಬೆಲ್ಟ್ ಅಳವಡಿಸಲಾಗಿದೆ.

    ಬ್ರೈಟ್ ಲೆದರ್ ಜಾಕೆಟ್
    ಸಾಕಷ್ಟು ಮಂದಿ ಬ್ರೈಟ್ ಲೆದರ್ ಜಾಕೆಟ್ ಅನ್ನು ಅಷ್ಟಾಗಿ ಖರೀದಿಸುವುದಿಲ್ಲ. ಆದರೆ ಈ ಜಾಕೆಟ್ ನೋಡಲು ನ್ಯಾಚುರಲ್ ಲುಕ್ ನೀಡುತ್ತದೆ. ದಪ್ಪವಾದ ಉಡುಪಿನ ಜೊತೆಗೆ ಈ ಜಾಕೆಟ್‍ನನ್ನು ಧರಿಸಬಹುದಾಗಿದೆ.

  • ನಿಮ್ಮ ಮನೆಯಲ್ಲಿ ಅಕ್ಕ,ತಂಗಿಯರು ಇಲ್ವಾ?- ಶಾಂತನಗೌಡರ ವಿರುದ್ಧ ಮಹಿಳೆಯರು ಕಿಡಿ

    ನಿಮ್ಮ ಮನೆಯಲ್ಲಿ ಅಕ್ಕ,ತಂಗಿಯರು ಇಲ್ವಾ?- ಶಾಂತನಗೌಡರ ವಿರುದ್ಧ ಮಹಿಳೆಯರು ಕಿಡಿ

    ದಾವಣಗೆರೆ: ನಿಮ್ಮ ಮನೆಯಲ್ಲಿ ಅಕ್ಕ, ತಂಗಿಯರು ಇಲ್ವಾ ಎಂದು ಮಾಜಿ ಶಾಸಕ ಶಾಂತನಗೌಡರ ವಿರುದ್ಧ ದಾವಣಗೆರೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದ ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಮಹಿಳೆಯರು ಕಿಡಿಕಾರಿದ್ದಾರೆ.

    ಕೋವಿಡ್ ಕೇರ್ ಸೆಂಟರ್‍ನಲ್ಲಿರುವ ಶಾಸಕ ರೇಣುಕಾಚಾರ್ಯ ಅವರ ವಾಸ್ತವ್ಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ, ಮಾಜಿ ಶಾಸಕ ಶಾಂತನಗೌಡರನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಹೊನ್ನಾಳಿಯ ಕಾಂಗ್ರೆಸ್ ಮಾಜಿ ಶಾಸಕ ಶಾಂತನಗೌಡ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಸೋಂಕಿತರಿಗೆ ಹಣ್ಣುಗಳನ್ನು ನೀಡಲು ಕಾರ್ಯಕರ್ತರ ಜೊತೆ ಬರುತ್ತಿದ್ದಂತೆ ಮಹಿಳೆಯರು ಕ್ಷಮೆ ಯಾಚಿಸುವಂತೆ ಪಟ್ಟುಹಿಡಿದಿದ್ದಾರೆ. ಕೆಲ ದಿನಗಳ ಹಿಂದೆ ಕಾಂಗ್ರೆಸ್ ನಿಂದ ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಿದ್ದು, ಆ ಸಂದರ್ಭದಲ್ಲಿ ಮಾಜಿ ಶಾಸಕ ಶಾಂತನಗೌಡ ಶಾಸಕ ರೇಣುಕಾಚಾರ್ಯ ವಿರುದ್ಧ ಅವಹೇಳನವಾಗಿ ಮಾತನಾಡಿದ್ದಾರೆ.

    “ರೇಣುಕಾಚಾರ್ಯ ಎಲ್ಲಿ ಮಲಗಿರ್ತಾನೆ ಯಾರ್ ಜೊತೆ ಮಲಗಿರ್ತಾನೆ ಎನ್ನುವುದು ಎಲ್ಲರಿಗೂ ಗೊತ್ತಿರುತ್ತದೆ. ತೆರೆದ ಬಾಗಿಲು ಎಂದು” ಎಂದು ವ್ಯಂಗ್ಯವಾಡಿದ್ದರು. ಅದಕ್ಕೆ ಇಂದು ಕೋವಿಡ್ ಕೇರ್ ಸೆಂಟರ್ ಗೆ ಬರುತ್ತಿದ್ದಂತೆ ಮಹಿಳೆಯರು ಶಾಂತನಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮಗೆ ಅಕ್ಕ ತಂಗಿಯರು ಇಲ್ವಾ ಈ ರೀತಿಯಾಗಿ ಹೇಳಿಕೆ ಕೊಟ್ಟಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಇದಕ್ಕೆ ಮಾಜಿ ಶಾಸಕ ಶಾಂತನಗೌಡ ನಾನು ಇಲ್ಲಿ ರಾಜಕೀಯ ಮಾಡಲು ಬಂದಿಲ್ಲ, ನಾನು ಹೇಳಿದ್ದು ಬೇರೆ, ಆದರೆ ಅದನ್ನು ನಿಮಗೆ ಅರ್ಥ ಮಾಡಿಸಿರುವುದೇ ಬೇರೆ ಏನಾದರೂ ಬೇಸರವಾಗಿದ್ದರೆ ಕ್ಷಮೆ ಇರಲಿ ಎಂದು ಮಹಿಳೆಯರ ಮುಂದೆ ಕ್ಷಮೆ ಕೇಳಿದರು. ಅಲ್ಲದೇ ಸೋಂಕಿತರಿಗೆ ಹಣ್ಣು ನೀಡಲು ಮುಂದಾದ ಮಾಜಿ ಶಾಸಕರಿಂದ ಸೋಂಕಿತರು ಹಣ್ಣು ಸ್ವೀಕರಿಸಲು ನಿರಾಕರಿಸಿದ್ದಾರೆ. ಜೊತೆಗೆ ಬಲವಂತವಾಗಿ ಮಾಜಿ ಶಾಸಕ ಶಾಂತನ ಗೌಡರವರು ಸೋಂಕಿತರಿಗೆ ಹಣ್ಣು ನೀಡಲು ಹೋದಾಗ ಹಣ್ಣುಗಳನ್ನು ಸ್ವೀಕರಿಸಲು ಮಹಿಳೆಯರು ಹಿಂದೇಟು ಹಾಕಿದರು. ಇದನ್ನೂ ಓದಿ:ಪಕ್ಷದಲ್ಲಿ ಯಾವುದೇ ಗೊಂದಲಗಳು ಬೇಡ: ಸಿ.ಟಿ ರವಿ