Tag: women

  • ಟೆಂಪೋದಲ್ಲೇ ಮಹಿಳೆಯ ಅತ್ಯಾಚಾರವೆಸಗಿದ ಕಾಮುಕ!

    ಟೆಂಪೋದಲ್ಲೇ ಮಹಿಳೆಯ ಅತ್ಯಾಚಾರವೆಸಗಿದ ಕಾಮುಕ!

    ಮುಂಬೈ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟೆಂಪೋದಲ್ಲಿ ಮಹಿಳೆಯ ಮೇಲೆ ಕಾಮಾಂಧನೊಬ್ಬ ಅಟ್ಟಹಾಸ ಮೆರೆದು, ಅತ್ಯಾಚಾರ ಎಸಗಿರುವುದನ್ನು ಕಂಡು ಇಡೀ ದೇಶವೇ ಬೆಚ್ಚಿಬಿದ್ದಿದೆ.

    ಮುಂಬೈನ ಕೈರಾನಿ ರಸ್ತೆಯಲ್ಲಿ ವ್ಯಕ್ತಿಯೊಬ್ಬ 34 ವರ್ಷದ ಮಹಿಳೆಗೆ ಚಿತ್ರ ಹಿಂಸೆ ನೀಡಿ, ಬಳಿಕ ಆಕೆಯನ್ನು ಅತ್ಯಾಚಾರ ಎಸಗಿದ್ದಾನೆ. ಸದ್ಯ ಸಂತ್ರಸ್ತೆಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಮೋಹನ್ ಚೌಹಾಟ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮಂತ್ರಾಲಯದಿಂದ ವಾಪಸ್ಸಾಗ್ತಿದ್ದಾಗ ಕಾರು ಅಪಘಾತ- ಮದ್ವೆಯಾಗ್ಬೇಕಿದ್ದ ಜೋಡಿ ಸಾವು

    ಕೈರಾನಿ ರಸ್ತೆಯಲ್ಲಿ ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸುತ್ತಿದ್ದಾನೆ ಎಂದು ಸ್ಥಳೀಯರು ಪೊಲೀಸರಿಗೆ ಫೋನ್ ಮಾಡಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸುವಷ್ಟರಲ್ಲಿ ಕೃತ್ಯ ನಡೆದಿದೆ. ಆರೋಪಿಯು ಮಹಿಳೆಗೆ ಥಳಿಸಿ, ಹಲ್ಲೆ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ಪೊಲೀಸರು ರಾಜವಾಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಬೈಕ್ ಆಕ್ಸಿಡೆಂಟ್ – ಟಾಲಿವುಡ್ ನಟ ಸಾಯಿಧರ್ಮ ತೇಜ್ ಸ್ಥಿತಿ ಗಂಭೀರ

  • ಆಡಿದ್ರೆ ದೇಹ ಪ್ರದರ್ಶನವಾಗುತ್ತೆ – ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಕ್ರೀಡೆ ನಿಷೇಧ

    ಆಡಿದ್ರೆ ದೇಹ ಪ್ರದರ್ಶನವಾಗುತ್ತೆ – ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಕ್ರೀಡೆ ನಿಷೇಧ

    ಕಾಬೂಲ್: ಅಫ್ಘಾನಿಸ್ತಾನದ ಹೆಸರನ್ನು ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಘಾನಿಸ್ತಾನ ಎಂದು ಬದಲಾಯಿಸಿ ಮಧ್ಯಂತರ ಸರ್ಕಾರ ರಚಿಸಿರುವ ತಾಲಿಬಾನ್ ಉಗ್ರರು ಈಗ ಪೂರ್ಣ ಪ್ರಮಾಣದಲ್ಲಿ ಷರಿಯಾ ಕಾನೂನು ಜಾರಿಗೊಳಿಸಿ ಮಹಿಳೆಯರಿಗೆ ಕ್ರೀಡೆಯನ್ನು ನಿಷೇಧಿಸಿದ್ದಾರೆ.

    ಈ ಸಂಬಂಧ ತಾಲಿಬಾನ್ ಸುಪ್ರೀಂ ಲೀಡರ್ ಮೌಲ್ವಿ ಹೈಬತುಲ್ಲಾ ಅಖುಂಡ್‍ಜಾದಾ ಹೆಸರಿನಲ್ಲಿ ಆಡಳಿತ ವಿಧಾನವನ್ನು ಪ್ರಕಟಿಸಿದೆ. ಯಾರು ಭವಿಷ್ಯದ ಬಗ್ಗೆ ಆತಂಕ ಪಡಬೇಕಿಲ್ಲ. ಎಲ್ಲಾ ಸಮಸ್ಯೆಗಳಿಗೂ ಸರಿಯಾದ ಪರಿಹಾರ ಹುಡುಕುತ್ತೇವೆ ಎಂದಿದೆ.

    ಷರಿಯತ್ ಕಾನೂನು ಅನುಸಾರವಾಗಿ ಅಫ್ಘಾನಿಗಳ ಜೀವನವನ್ನು ರೂಪಿಸುತ್ತೇವೆ. ಇದಕ್ಕೆ ಅಫ್ಘಾನ್ ಪ್ರಜೆಗಳು ತಾಲಿಬಾನ್ ಸರ್ಕಾರವನ್ನು ಬೆಂಬಲಿಸಬೇಕು. ತಜ್ಞರು ದೇಶ ಬಿಟ್ಟು ಹೋಗಬಾರದು ಎಂದು ಕೋರಿದೆ. ಇದನ್ನೂ ಓದಿ: ಕಾರವಾರದ ಕಡಲತೀರದಲ್ಲಿ ಅಪ್ರಾಪ್ತ ಪ್ರೇಮಿಗಳ ಕಾಮಕೇಳಿ ಆಟ- ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ 

    ತಾಲಿಬಾನ್ ಆಡಳಿತದಲ್ಲಿ ಪಿಹೆಚ್‍ಡಿಗಳಿಗೆ, ಪದವಿಗಳಿಗೆ ಬೆಲೆ ಇಲ್ಲ. ಇದನ್ನು ಅಲ್ಲಿನ ಶಿಕ್ಷಣ ಮಂತ್ರಿಯೇ ಅಧಿಕೃತವಾಗಿ ಘೋಷಿಸಿದ್ದಾರೆ. ನೀವೇ ನೋಡಿ ಅಧಿಕಾರ ನಡೆಸ್ತಿರುವ ಮುಲ್ಲಾಗಳು, ತಾಲಿಬಾನಿಗಳಿಗೆ ಪಿಹೆಚ್‍ಡಿಯ ಕೋಡು ಇವೆಯಾ? ಅವರಿಗೆ ಕನಿಷ್ಠ ಹೈಸ್ಕೂಲ್ ಶಿಕ್ಷಣ ಕೂಡ ಇಲ್ಲ. ಆದ್ರೂ ಎಲ್ಲರಿಗಿಂತ ಉತ್ತಮ ಆಡಳಿತ ನೀಡ್ತಿದ್ದು, ಅವರೇ ಎಲ್ಲರಿಗಿಂತ ಶ್ರೇಷ್ಠ ಎಂದು ತಾಲಿಬಾನ್ ಸರ್ಕಾರದ ಶಿಕ್ಷಣ ಮಂತ್ರಿ ಶೇಖ್ ಮೌಲ್ವಿ ನೂರಲ್ಲಾ ಹೇಳಿದ್ದಾರೆ. ಇದನ್ನೂ ಓದಿ: ಕುಕ್ಕೆ, ಧರ್ಮಸ್ಥಳದಲ್ಲಿ ತೀರ್ಥ, ಪ್ರಸಾದ, ಅನ್ನ ಸಂತರ್ಪಣೆ ಆರಂಭ

    ಮಹಿಳೆಯರಿಗೆ ಟಫ್ ರೂಲ್ಸ್
    ಕ್ರಿಕೆಟ್‍ನಂತಹ ಕ್ರೀಡೆ ಸೇರಿದಂತೆ ಯಾವುದೇ ಕ್ರೀಡೆಗಳಲ್ಲಿ ಮಹಿಳೆಯರು ಭಾಗಿಯಾಗಲು ಅನುಮತಿಯಿಲ್ಲ. ಕ್ರೀಡೆಗಳಲ್ಲಿ ಇಸ್ಲಾಮಿಕ್ ಡ್ರೆಸ್ ಕೋಡ್ ಪಾಲನೆ ಆಗುವುದಿಲ್ಲ. ಕ್ರೀಡೆಗಳಲ್ಲಿ ಪಾಲ್ಗೊಂಡರೆ ದೇಹ ಪ್ರದರ್ಶನವಾಗುತ್ತದೆ. ಇದರಿಂದಾಗಿ ಮಹಿಳಾ ಕ್ರೀಡಾಪಟುಗಳಿಗೆ ಮುಖ, ಶರೀರ ಮುಚ್ಚಿಕೊಳ್ಳಲು ಸಾಧ್ಯವಿಲ್ಲ.

  • ಶೂಟಿಂಗ್‍ನಲ್ಲಿ ಕಂಚು – ಭಾರತದ ಪರ ದಾಖಲೆ ಬರೆದ ಅವನಿ

    ಶೂಟಿಂಗ್‍ನಲ್ಲಿ ಕಂಚು – ಭಾರತದ ಪರ ದಾಖಲೆ ಬರೆದ ಅವನಿ

    ಟೋಕಿಯೋ: ಪ್ಯಾರಾಲಂಪಿಕ್ಸ್ ಮಹಿಳಾ ವಿಭಾಗದ 50 ಮೀಟರ್ ಏರ್ ರೈಫಲ್ ಶೂಟಿಂಗ್ ವಿಭಾಗದಲ್ಲಿ ಭಾರತದ ಶೂಟರ್ ಅವನಿ ಲೇಖರಾ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಒಂದೇ ಪ್ಯಾರಾಲಂಪಿಕ್ಸ್ ಕ್ರೀಡಾಕೂಟದಲ್ಲಿ ಅವಳಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

    ಈ ಮೊದಲು ಅವನಿ ಮಹಿಳಾ ವಿಭಾಗದ 100 ಮೀಟರ್ ಏರ್ ರೈಫಲ್ ಶೂಟಿಂಗ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇದೀಗ 50 ಮೀಟರ್ ಏರ್ ರೈಫಲ್ ಶೂಟಿಂಗ್ ಫೈನಲ್‍ನಲ್ಲಿ ಒಟ್ಟು 445.9 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡು, ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದನ್ನೂ ಓದಿ: ಪ್ಯಾರಾಲಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ- ಜಾವೆಲಿನ್ ಎಸೆದು ಚಿನ್ನ ಪಡೆದ ಸುಮಿತ್

    ಇಂದು ಬೆಳಗ್ಗೆ ಹೈಜಂಪ್ ವಿಭಾಗದಲ್ಲಿ ಭಾರತದ ಪ್ರವೀಣ್ ಕುಮಾರ್ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಈ ಮೂಲಕ ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಬೆಳ್ಳಿ ಪದಕ ಗೆದ್ದ ಪ್ರವೀಣ್ ಕುಮಾರ್‌ಗೆ ಮೋದಿ ವಿಶ್

    ಪ್ರಧಾನಿ ಅಭಿನಂದನೆ
    ಟೋಕಿಯೋದಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಹೈಜಂಪ್ ಮತ್ತು ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದ ಪ್ರವೀಣ್ ಕುಮಾರ್ ಮತ್ತು ಅವನಿ ಲೇಖರಾ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, “ಪ್ಯಾರಾಲಿಂಪಿಕ್ಸ್ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದ ಪ್ರವೀಣ್ ಕುಮಾರ್ ಮತ್ತು ಅವನಿ ಲೇಖರಾ ಬಗ್ಗೆ ಹೆಮ್ಮೆ ಪಡುತ್ತೇನೆ. ಈ ಪದಕವು ಅವರ ಕಠಿಣ ಪರಿಶ್ರಮ ಮತ್ತು ಸಾಟಿಯಿಲ್ಲದ ಸಮರ್ಪಣೆಯ ಫಲವಾಗಿದೆ. ಅವರಿಗೆ ಅಭಿನಂದನೆಗಳು. ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಕೆಗಳು ಎಂದಿದ್ದಾರೆ. ಇದನ್ನೂ ಓದಿ: ಜಾವೆಲಿನ್ ಎಸೆತ ಭಾರತಕ್ಕೆ ಅವಳಿ ಪದಕ

  • ರಸ್ತೆ ಬದಿ ಹಸು ಮೇಯಿಸುತ್ತಿದ್ದ ವೃದ್ಧೆಯ ಚಿನ್ನದ ಸರ ಕಸಿದು ಸರಗಳ್ಳ ಪರಾರಿ

    ರಸ್ತೆ ಬದಿ ಹಸು ಮೇಯಿಸುತ್ತಿದ್ದ ವೃದ್ಧೆಯ ಚಿನ್ನದ ಸರ ಕಸಿದು ಸರಗಳ್ಳ ಪರಾರಿ

    ಚಿಕ್ಕಬಳ್ಳಾಪುರ: ರಸ್ತೆ ಬದಿ ದನ ಮೇಯಿಸುತ್ತಿದ್ದ ವೃದ್ಧೆಯ ಬಳಿ ಮಾತಿಗಿಳಿದ ಬೈಕ್ ಸವಾರ ಚಿನ್ನದ ಸರ ಕಳವು ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ನಡೆದಿದೆ.

    ಅರೆಹಳ್ಳಿ ಗುಡ್ಡದಹಳ್ಳಿಯ ವೃದ್ದೆ ಗೌರಮ್ಮ ಸರ ಕಳೆದುಕೊಂಡ ವೃದ್ಧೆ. ನಗರದ ಸ್ಕೌಟ್ ಕ್ಯಾಂಪ್ ರಸ್ತೆಯಲ್ಲಿ ಎಂದಿನಂತೆ ಹಸು ಮೇಯಿಸುತ್ತಿದ್ದ ಗೌರಮ್ಮ ಬಳಿ ಬೈಕ್ ನಿಲ್ಲಿಸಿ, ಅಜ್ಜಿ ನಮ್ಮ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಆಗಿದೆ. ಇಲ್ಲಿಂದ ಬೈಕ್‍ನಲ್ಲಿ ಯಾರಾದ್ರೂ ಹೋದ್ರಾ ಅಂತ ಮಾತಿಗಿಳಿದಿರೋ ಕಳ್ಳ ಅಜ್ಜಿಯ ಕುತ್ತಿಗೆಗೆ ಕೈ ಹಾಕಿ ಸರ ಕಸಿದುಕೊಂಡು ಪರಾರಿಯಾಗಿದ್ದಾನೆ. ಇದನ್ನೂ ಓದಿ: ಅನೈತಿಕ ಸಂಬಂಧ- ಕುಟುಂಬಸ್ಥರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕಾನ್‍ಸ್ಟೇಬಲ್

    ಘಟನೆ ನಂತರ ಅಘಾತಗೊಂಡ ಅಜ್ಜಿ ಮನೆಗೆ ಹೋಗಿ ವಿಷಯ ತಿಳಿಸಿದ್ದಾರೆ. ತದನಂತರ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿ ಸರಗಳ್ಳನಿಗಾಗಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಹುಟುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಪಿಎಚ್‍ಡಿ ವ್ಯಾಸಂಗ ಬೇಡ ಎಂದ ಪಾಲಕರು- ಯುವತಿ ಆತ್ಮಹತ್ಯೆ

  • ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಸ್ವಸಹಾಯ ಗುಂಪುಗಳಿಗೆ 600 ಕೋಟಿ ರೂ. ಸಮುದಾಯ ನಿಧಿ

    ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಸ್ವಸಹಾಯ ಗುಂಪುಗಳಿಗೆ 600 ಕೋಟಿ ರೂ. ಸಮುದಾಯ ನಿಧಿ

    -ಬಂಜರು ಭೂಮಿಯಲ್ಲಿ ಭತ್ತ ಬೆಳೆದಿದ್ದ ಮಹಿಳೆಯರನ್ನು ಶ್ಲಾಘಿಸಿದ ಅಶ್ವತ್ಥನಾರಾಯಣ

    ಮಂಗಳೂರು: ಗ್ರಾಮೀಣ ಮಹಿಳೆಯರು ಆರ್ಥಿಕ ಸ್ವಾವಲಬಿಗಳಾಗಲು ಹಾಗೂ ಉದ್ಯಮಶೀಲರಾಗಲು ಸರ್ಕಾರ ಎನ್‍ಆರ್‍ಎಲ್‍ಎಂ ಯೋಜನೆ ಮೂಲಕ ರಾಜ್ಯದ ಎಲ್ಲ ಮಹಿಳಾ ಸ್ವಸಹಾಯ ಗುಂಪುಗಳಿಗೆ 600 ಕೋಟಿ ರೂ.ಗಳಿಗೂ ಹೆಚ್ಚಿನ ಸಮುದಾಯ ಬಂಡವಾಳ ನಿಧಿ ನೀಡಲಾಗಿದೆ ಎಂದು ಕೌಶಲ್ಯಾಭಿವೃದ್ಧಿ, ಜೀವನೋಪಾಯ ಖಾತೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

    ashwathnarayan

    ದಕ್ಷಿಣ ಕನ್ನಡ ಜಿಲ್ಲೆಯ ಕುರ್ನಾಡು ಗ್ರಾಮ ಪಂಚಾಯತಿಯ ಮುಡಿಪು ಗ್ರಾಮದಲ್ಲಿ ಬಂಜರು ಬಿದ್ದಿದ್ದ ಭೂಮಿಯನ್ನು ಸಾಗುವಳಿ ಮಾಡಿ ಭತ್ತ ಬೆಳೆಯುತ್ತಿರುವ ಸ್ವಸಹಾಯ ಗುಂಪುಗಳ ಮಹಿಳೆಯರ ಸಾಧನೆಯನ್ನು ಖುದ್ದು ವೀಕ್ಷಿಸಿದ ನಂತರ ಮಾತನಾಡಿದ ಅವರು, ರಾಜ್ಯದ ಉದ್ದಗಲಕ್ಕೂ ಗ್ರಾಮೀಣ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಕೇಂದ್ರ ಸರ್ಕಾರದ ನೆರವಿನಿಂದ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದಿದ್ದಾರೆ. ಇದನ್ನೂ ಓದಿ:ಮಾತು ಕೇಳದ ಪಾಲಿಕೆ ಅಧಿಕಾರಿಗಳು- ಸಲಾಕೆ ಹಿಡಿದು ಚರಂಡಿ ಸ್ವಚ್ಛತೆಗೆ ನಿಂತ ಶಾಸಕ ದೇವಾನಂದ

    ashwathnarayan

    ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಮಹಿಳೆಯರು ಸ್ವಸಹಾಯ ಗುಂಪುಗಳ ಮೂಲಕ ಸಂಘಟನೆಗೊಂಡು ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ವತಿಯಿಂದ ಹಲವಾರು ಜೀವನೋಪಾಯ ಚಟುವಟಿಕೆಗಳನ್ನು ಕೈಗೊಂಡು ತಮ್ಮ ಕುಟುಂಬಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಉನ್ನತೀಕರಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವುದು ಬಹಳ ಸಂತೋಷದ ವಿಷಯವಾಗಿದೆ. ಹಳ್ಳಿ ಮಹಿಳೆಯರಲ್ಲಿ ಕುಶಲತೆಯನ್ನು ಬೆಳೆಸಿ ಅವರಲ್ಲಿ ಉದ್ಯಮಶೀಲತೆ ವೃದ್ಧಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಕರಾವಳಿ ಭಾಗದ ಮಹಿಳೆಯರು ಸರಕಾರದ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡು ಮುನ್ನಡೆ ಸಾಧಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಮನೆ ಮೇಲ್ಛಾವಣಿ, ಗೋಡೆ ಕುಸಿತ- ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರು

    ashwathnarayan

    ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟಗಳಲ್ಲಿ ಪ್ರಧಾನ ಪುಸ್ತಕ ಬರಹಗಾರರು ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು ನಿರ್ವಹಿಸುತ್ತಿರುವ ಕರ್ತವ್ಯ ಅತ್ಯಂತ ಶ್ಲಾಘನೀಯವಾದದ್ದು. ಮಹಿಳಾ ಸ್ವಸಹಾಯ ಗುಂಪುಗಳ ಮೂಲಕ ಈ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದು ರಾಷ್ಟ್ರದಲ್ಲಿ ಮಾದರಿ ರಾಜ್ಯವನ್ನಾಗಿ ರೂಪಿಸಲು ತಾವೆಲ್ಲರೂ ಸಹಕರಿಸುವಂತೆ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

    ಸಚಿವರಿಗೆ ರಾಖಿ ಕಟ್ಟಿದ ಮಹಿಳೆಯರು:
    ಈ ಸಂದರ್ಭದಲ್ಲಿ ಮುಡಿಪು ಗ್ರಾಮದ ಮಹಿಳೆಯರು ಅಶ್ವತ್ಥನಾರಾಯಣ ಅವರಿಗೆ ರಕ್ಷಾ ಬಂಧನ ಕಟ್ಟಿ ಆರತಿ ಬೆಳಗಿದರು. ಇದರಿಂದ ಭಾವುಕರಾದ ಸಚಿವರು, ಈ  ದಿನ ತಾವುಗಳು ನನಗೆ ರಾಖಿ ಕಟ್ಟಿ ಸೋದರನ ಸ್ಥಾನವನ್ನು ನಿಮ್ಮ ಮನದಲ್ಲಿ ನೀಡಿದ್ದೀರಿ. ಇದಕ್ಕೆ ನಾನು ನಿಮಗೆಲ್ಲರಿಗೂ ಚಿರಋಣಿ. ನಾನು ಮತ್ತೊಮ್ಮೆ ಇಲ್ಲಿಗೆ ಬರಲು ಪ್ರಯತ್ನಿಸುತ್ತೇನೆ. ನಿಮ್ಮ ಅಭಿಮಾನಕ್ಕೆ ನನ್ನ ಮನಸ್ಸು ಭಾರವಾಗಿದೆ ಎಂದು ನುಡಿದಿದ್ದಾರೆ.

  • ಟಿವಿ, ರೇಡಿಯೋಗಳಲ್ಲಿ ಮಹಿಳೆಯ ಧ್ವನಿ ಬ್ಯಾನ್- ತಾಲಿಬಾನ್ ಆದೇಶ

    ಟಿವಿ, ರೇಡಿಯೋಗಳಲ್ಲಿ ಮಹಿಳೆಯ ಧ್ವನಿ ಬ್ಯಾನ್- ತಾಲಿಬಾನ್ ಆದೇಶ

    – ಸಂಗೀತ, ಹೆಣ್ಣುಮಕ್ಕಳ ಧ್ವನಿ ನಿಷೇಧ

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಇನ್ನೂ ತಣ್ಣಗಾಗುತ್ತಿಲ್ಲ. ಖ್ಯಾತ ಸಂಗೀತಗಾರನನ್ನು ಹತ್ಯೆಗೈದ ಬಳಿಕ ಇದೀಗ ಅಫ್ಘಾನಿಸ್ತಾನದ ಕಂದಹಾರ್‍ನಲ್ಲಿ ಮಹಿಳೆಯರ ಧ್ವನಿಯನ್ನು ಬ್ಯಾನ್ ಮಾಡಲಾಗಿದೆ. ಟಿವಿ, ರೇಡಿಯೋಗಳಲ್ಲಿ ಎಲ್ಲೂ ಸಂಗೀತ ಹಾಗೂ ಮಹಿಳೆಯರ ಧ್ವನಿ ಕೇಳುವಂತಿಲ್ಲ ಎಂದು ತಾಲಿಬಾನಿಗಳು ಹೇಳಿದ್ದಾರೆ.

    ಆಗಸ್ಟ್ 15ರಂದು ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡ ಬಳಿಕ ಕೆಲ ಟಿವಿ ವಾಹಿನಿಗಳು ಮಹಿಳಾ ನಿರೂಪಕಿಯರನ್ನು ಕೆಲಸದಿಂದ ತೆಗೆದುಹಾಕಿವೆ. ಅಲ್ಲದೆ ಕಾಬೂಲ್‍ನಲ್ಲಿನ ಸ್ಥಳೀಯ ಮೀಡಿಯಾಗಳಲ್ಲಿ ಹಲವು ಮಹಿಳೆಯರನ್ನು ಮನೆಗೆ ಕಳುಹಿಸಿವೆ. ಇದನ್ನೂ ಓದಿ: ಜನಪ್ರಿಯ ಹಾಡುಗಾರನನ್ನ ಹತ್ಯೆಗೈದ ತಾಲಿಬಾನಿಗಳು

    ಇಷ್ಟಾದರೂ ತಾಲಿಬಾನಿಗಳು ಮಹಿಳೆಯರ ಸ್ವಾತಂತ್ರ್ಯದ ಬಗ್ಗೆ ಸಮರ್ಥಿಸಿಕೊಳ್ಳುತ್ತಿದ್ದು, ಮಹಿಳೆಯರನ್ನು ಕೆಲಸಕ್ಕೆ ಕಳುಹಿಸುತ್ತೇವೆ. ಅಲ್ಲದೆ ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ಓದಲು ಅವಕಾಶ ನೀಡುತ್ತೇವೆ ಎಂದಿತ್ತು. ಆದರೆ ತಾಲಿಬಾನ್ ತನ್ನ ಭರವಸೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ.

    ಹಿಂದಿನ ಅಧಿಕಾರಾವಧಿಯಲ್ಲಿ ತಾಲಿಬಾನ್ ಮಹಿಳೆಯರನ್ನು ಕಠಿಣವಾಗಿ ನಡೆಸಿಕೊಳ್ಳಲು ಹೆಸರುವಾಸಿಯಾಗಿತ್ತು. ಮಹಿಳೆಯರು ತಮ್ಮ ಮನೆಗಳಿಂದ ಹೊರ ಬರಬೇಕಾದಲ್ಲಿ ತಲೆ ಸಂಪೂರ್ಣವಾಗಿ ಮುಚ್ಚಿಕೊಂಡು ಹಾಗೂ ಕುಟುಂಬದ ಪುರುಷರೊಬ್ಬರು ಜೊತೆಯಾಗಿರಬೇಕು ಎಂದು ಹೇಳಿತ್ತು.

    ಅಫ್ಘಾನಿಸ್ತಾನದಲ್ಲಿ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಹೀಗಿರುವಾಗ ಜನಪ್ರಿಯ ಹಾಡುಗಾರ ಫವಾದ್ ಕಿಶನಾಬಾದ್ ಅವರನ್ನು ಉಗ್ರರು ಹತ್ಯೆ ಗೈದಿದ್ದಾರೆ. ಅಫ್ಘಾನಿಸ್ತಾನದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಹಾಡುವುದನ್ನು ತಾಲಿಬಾನಿಗಳು ನಿಷೇಧಿಸಿದ್ದಾರೆ. ಹಾಡುಗಾರ ಫವಾದ್ ಕಿಶನಾಬಾದ್ ತಾಲಿಬಾನ್‍ಗೆ ವಿರುದ್ಧವಾಗಿ ಹಾಡುಗಳನ್ನು ಕಟ್ಟಿ ಹಾಡುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಯಲ್ಲಿ ತಾಲಿಬಾನಿಗಳು ಫವಾದ್‍ರನ್ನು ಹುಡುಕಿ ಹತ್ಯೆ ಮಾಡಿದ್ದಾರೆ.

    ಅಂದ್ರಾಬ್ ಪ್ರದೇಶದ ಗಾಯಕನನ್ನು ತಾಲಿಬಾನಿಗಳು ಕೊಂದಿದ್ದನ್ನು ಸ್ಥಳೀಯ ಮಾಧ್ಯಮ ದೃಢಪಡಿಸಿದೆ. ಮಾಜಿ ಆಂತರಿಕ ವ್ಯವಹಾರಗಳ ಸಚಿವ ಮಸೂದ್ ಅಂದರಾಬಿ ಹೇಳಿದ್ದಾಗಿ ಉಲ್ಲೇಖಿಸಿದೆ.

  • ಹೆಚ್.ರವೀಂದ್ರ ಹುಟ್ಟುಹಬ್ಬ- 3ಸಾವಿರ ಮಹಿಳೆಯರಿಗೆ ಸೀರೆ ವಿತರಣೆ

    ಹೆಚ್.ರವೀಂದ್ರ ಹುಟ್ಟುಹಬ್ಬ- 3ಸಾವಿರ ಮಹಿಳೆಯರಿಗೆ ಸೀರೆ ವಿತರಣೆ

    ಬೆಂಗಳೂರು: ವಿಜಯನಗರ ವಿಧಾನಸಭಾ ಕ್ಷೇತ್ರದ ನಾಯಕರು,ಮಾಜಿ ಆಡಳಿತ ಪಕ್ಷದ ನಾಯಕರಾದ ಹೆಚ್.ರವೀಂದ್ರರವರ ಹುಟ್ಟುಹಬ್ಬ ಆಚರಣೆಯ ಪ್ರಯುಕ್ತವಾಗಿ 3ಸಾವಿರ ಮಹಿಳೆಯರಿಗೆ ಸೀರೆ ವಿತರಣೆ ಮಾಡಿ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ.

    ಹೆಚ್.ರವೀಂದ್ರ ಅಭಿಮಾನಿಗಳ ಬಳಗ ವತಿಯಿಂದ ಕಾರ್ಯಕ್ರಮವನ್ನು ವಿಜಯನಗರದಲ್ಲಿ ಆಯೋಜಿಸಲಾಗಿತ್ತು. 3ಸಾವಿರ ಮಹಿಳೆಯರಿಗೆ ಸೀರೆ ವಿತರಣೆ ಮತ್ತು ಉಚಿತ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಹೆಚ್.ರವೀಂದ್ರರವರು ಕೇಕ್ ಕತ್ತರಿಸಿ ಸಿಹಿ ತಿಂಡಿ ವಿತರಿಸಿದರು. ಕಂದಾಯ ಸಚಿವರಾದ ಆರ್.ಅಶೋಕ್ ರವರು ಮತ್ತು ಉನ್ನತ ಶಿಕ್ಷಣ ಸಚಿವ ಸಿ.ಎನ್.ಆಶ್ವಥ್ ನಾರಾಯಣ್ ರವರು ಮತ್ತು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಹಾಗೂ ಕ್ಷೇತ್ರದ ಕಾರ್ಯಕರ್ತರು, ಸ್ಥಳೀಯ ನಾಗರಿಕರು ಹೆಚ್.ರವೀಂದ್ರರವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಇದನ್ನೂ ಓದಿ:  ಜಗಳವಾಡಿ ಕ್ಷಮೆ ಕೇಳುವುದರೊಳಗೆ ತಂದೆ ಹೆಣವಾಗಿದ್ದರು: ಅಭಿನವ್

    ಹೆಚ್.ರವೀಂದ್ರರವರು, ಮಾತನಾಡಿ ವಿಜಯನಗರ ವಿಧಾನಸಭಾ ಕ್ಷೇತ್ರದ ಜನರು ಮತ್ತು ಬಿ.ಜೆ.ಪಿ.ಪಕ್ಷವು ನನ್ನ ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಸದಾ ಸಹಕಾರ ನೀಡುತ್ತಾ ಬಂದಿದೆ. ಮೂರು ಬಾರಿ ಪಾಲಿಕೆ ಸದಸ್ಯನಾಗಿ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿಮ್ಮ ಸಹಕಾರ ಬೆಂಬಲದಿಂದ ಸಾಧ್ಯವಾಯಿತು.ಜನರ ಸಮಸ್ಯೆ ನಿವಾರಣೆಯಾಗಬೇಕು. ಎಲ್ಲರು ನೆಮ್ಮದ್ದಿ ಇಂದ ಜೀವನ ಸಾಗಿಸಬೇಕು ಎಂಬ ಆಶಯ ನನ್ನದು ಎಂದು ಹೇಳಿದರು.

  • ಮಹಿಳೆಯರ ವಿರುದ್ಧದ ಅಪರಾಧಗಳತ್ತ ಕಣ್ಣು ಮುಚ್ಚಬೇಡಿ, ಮಾತನಾಡಿ: ರಮ್ಯಾ

    ಮಹಿಳೆಯರ ವಿರುದ್ಧದ ಅಪರಾಧಗಳತ್ತ ಕಣ್ಣು ಮುಚ್ಚಬೇಡಿ, ಮಾತನಾಡಿ: ರಮ್ಯಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಮ್ಯಾ ಸಾಮಾಜಿಕ ಕಳಕಳಿಯುತವಾದ ಅವರ ಕೆಲವು ವಿಚಾರಧಾರೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಇವರು ಇಂದು ಹೇಳಿರುವ ವಿಚಾರ ತುಂಬಾ ಗಂಭೀರ ಮತ್ತು ಜಾಗೃತಿಯನ್ನು ಮೂಡಿಸುತ್ತಿದೆ.

    ಮಹಿಳೆಯ ಮೇಲೆ ಪುರುಷನು ಮಾಡುವ ಪ್ರತಿಯೊಂದು ಅಪರಾಧಕ್ಕೂ ನಾವು ಯಾವಾಗಲೂ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತೇವೆ. ಅದು ಅತ್ಯಾಚಾರವಾಗಲಿ ಅಥವಾ ಆತ ನಿಮ್ಮನ್ನು ದೈಹಿಕವಾಗಿ ಅಥವಾ ಮೌಖಿಕವಾಗಿ ನಿಂದಿಸುತ್ತಿರಲಿ. ನಾವು ಇದನ್ನು ಆಗಾಗ್ಗೆ ಕೇಳುತ್ತೇವೆ. ಇದು ನಿಮ್ಮ ತಪ್ಪು, ನೀವು ಹಾಗೆ ಹೇಳಬಾರದಿತ್ತು, ನೀವು ಅದನ್ನು ಮಾಡಬಾರದಿತ್ತು ಅಂತ ಹೇಳುತ್ತಾರೆ.

     

    View this post on Instagram

     

    A post shared by Ramya/Divya Spandana (@divyaspandana)

    ನೀವು ಅದನ್ನು ಧರಿಸಬಾರದು, ತುಂಬಾ ಬಿಗಿಯಾಗಿ, ತುಂಬಾ ಚಿಕ್ಕದಾಗಿ, ತುಂಬಾ ಆಕರ್ಷಕವಾಗಿ, ತುಂಬಾ ಉದ್ದವಾಗಿ ಧರಿಸಬಾರದು ಅಂತಾರೆ. ತಡವಾಗಿ ಹೊರಗೆ ಹೋದ್ರೆ, ಹೊರಗೆ ಹೋಗಬಾರದಿತ್ತು, ನೀನು ಮೇಕಪ್ ಧರಿಸಬಾರದಿತ್ತು, ಏಕೆ ಕೆಂಪು ಲಿಪ್‌ ಸ್ಟಿಕ್, ಏಕೆ ಕಲರ್ ಫುಲ್, ನೀವು ಕಣ್ಣು ಮಿಟುಕಿಸಬಾರದಿತ್ತು ಅಂತಾರೆ. ನಿಮಗೆ ಇದು ಇರಬಾರದು, ಅದು ಇರಬಾರದು ಎಂದು ಏಕೆ ಹೇಳುತ್ತಾರೆ. ಏಕೆಂದರೆ ಪುರುಷರು ಪುರುಷರಾಗುತ್ತಾರೆ, ನಾವು ರಾಜಿ ಮಾಡಿಕೊಳ್ಳಬೇಕು, ನಾವು ಬದಲಾಗಬೇಕು, ನಾವು ಹೊಂದಿಕೊಳ್ಳಬೇಕು, ನಾವು ಸಹಿಸಿಕೊಳ್ಳಬೇಕಾ? ಇಲ್ಲ ಇಲ್ಲ ಈ ಅಸಂಬದ್ಧತೆಗೆ ಪೂರ್ಣವಿರಾಮ ಹಾಕಬೇಕು ಮಹಿಳೆಯರ ವಿರುದ್ಧದ ಅಪರಾಧಗಳತ್ತ ಕಣ್ಣು ಮುಚ್ಚಬೇಡಿ ಮಾತನಾಡಿ ಎಂದು ಬರೆದು ಕೊಂಡು ಇನ್‍ಸ್ಟಾಗ್ರಾಮ್‍ನಲ್ಲಿ ಒಂದು ಫೋಟೋವನ್ನು ಹಾಕಿಕೊಂಡಿದ್ದಾರೆ. ಇದನ್ನೂ ಓದಿ:  ಸೋನು ಸೂದ್ ‘ದೇಶ್ ಕೆ ಮೆಂಟರ್ಸ್’ ಕಾರ್ಯಕ್ರಮದ ಬ್ರ್ಯಾಂಡ್ ಅಂಬಾಸಿಡರ್: ಅರವಿಂದ್ ಕೇಜ್ರಿವಾಲ್

    ಸಿನಿಮಾ, ರಾಜಕೀಯದಿಂದ ದೂರ ಇರುವ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುತ್ತಾರೆ. ರಮ್ಯಾ ಅವರು ತಮ್ಮ ಕೆಲವು ವಿಚಾರ, ಅನಿಸಿಕೆ, ಜಾಗೃತಿ, ಸಾಮಾಜಿಕ ಕಳಕಳಿಯ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಬರೆದುಕೊಳ್ಳುತ್ತಿರುತ್ತಾರೆ. ಇದೀಗ ಮಹಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತಾಗಿ ಧ್ವನಿಯನ್ನು ಎತ್ತಿದ್ದಾರೆ.

  • 1 ತಿಂಗಳಲ್ಲಿ ಬಿಎಂಟಿಸಿ 2.68 ಲಕ್ಷ ರೂ. ದಂಡ ವಸೂಲಿ

    1 ತಿಂಗಳಲ್ಲಿ ಬಿಎಂಟಿಸಿ 2.68 ಲಕ್ಷ ರೂ. ದಂಡ ವಸೂಲಿ

    ಬೆಂಗಳೂರು: ಜುಲೈ ತಿಂಗಳಿನಲ್ಲಿ 17,799 ಟ್ರಿಪ್ ಗಳಲ್ಲಿ ತಪಾಸಣೆ ನಡೆಸಿರುವ ಬಿಎಂಟಿಸಿ(ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ತನಿಖಾ ತಂಡ 1,704 ಪ್ರಯಾಣಿಕರು ಟಿಕೆಟ್ ಇಲ್ಲದೆ ಪ್ರಯಾಣ ಮಾಡಿರುವುದನ್ನು ಪತ್ತೆ ಹಚ್ಚಿ, ಪ್ರಯಾಣಿಕರಿಂದ 2,67,950 ರೂ. ದಂಡ ವಸೂಲಿ ಮಾಡಿದೆ.

    ಟಿಕೆಟ್ ನೀಡದ ಕಂಡಕ್ಟರ್ ಗಳ ಮೇಲೆ 1,188 ಕೇಸ್ ಗಳು ದಾಖಲಿಸಲಾಗಿದೆ. ಮಹಿಳೆಯರಿಗೆ ಮೀಸಲಿಟ್ಟ ಸೀಟ್ ನಲ್ಲಿ ಪ್ರಯಾಣ ಮಾಡಿದ ನಾಲ್ಕು ಪುರುಷ ಪ್ರಯಾಣಿಕರಿಂದ 400 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಬಿಎಂಟಿಸಿ ಇಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ತಾಯ್ನಾಡಿಗೆ ಕರೆತಂದ ಮೋದಿಗೆ ಹಾಡಿನ ಧನ್ಯವಾದ ತಿಳಿಸಿದ ಸಿಖ್ಖರು

    ಒಟ್ಟಾರೆಯಾಗಿ 2021 ಜುಲೈ ತಿಂಗಳಲ್ಲಿ 1,708 ಪ್ರಯಾಣಿಕರಿಂದ ಒಟ್ಟು 2,68,350 ರೂ. ದಂಡವನ್ನು ವಸೂಲಿ ಮಾಡಲಾಗಿದ್ದು, ಪ್ರಯಾಣಿಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೆಟ್, ದಿನದ ಪಾಸು, ಮಾಸಿಕ ಪಾಸುಗಳನ್ನು ಪಡೆದು ಪ್ರಯಾಣಿಸಬೇಕು. ಇದರಿಂದ ಅನಗತ್ಯ ದಂಡ ಕಟ್ಟುವುದನ್ನು ತಡೆಯಬಹುದಾಗಿದೆ. ಟಿಕೆಟ್ ಪಡೆದು ಪ್ರಯಾಣಿಸುವ ಪ್ರವೃತ್ತಿಯಿಂದ ಸಂಸ್ಥೆಯ ಉತ್ತಮ ಸೇವೆಯನ್ನು ಪ್ರಯಾಣಿಕರಿಗೆ ನೀಡಲು ಸಹಾಯವಾಗುತ್ತದೆ. ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಆಸನಗಳನ್ನು ತೆರವು ಮಾಡಿಕೊಡುವ ಮೂಲಕ ಕುಳಿತುಕೊಳ್ಳಲು ಅವಕಾಶ ನೀಡಬೇಕೆಂದು ಸಾರಿಗೆ ಸಂಸ್ಥೆ ಕೋರಿದೆ. ಇದನ್ನೂ ಓದಿ: ಮೈಸೂರಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್

  • ಬೆಟ್ಟದಲ್ಲಿ ವಿವಸ್ತ್ರಗೊಳಿಸಿ ಮಹಿಳೆಯ ಶವ ಪತ್ತೆ – ಅತ್ಯಾಚಾರ ಎಸಗಿ ಕೊಲೆ ಶಂಕೆ

    ಬೆಟ್ಟದಲ್ಲಿ ವಿವಸ್ತ್ರಗೊಳಿಸಿ ಮಹಿಳೆಯ ಶವ ಪತ್ತೆ – ಅತ್ಯಾಚಾರ ಎಸಗಿ ಕೊಲೆ ಶಂಕೆ

    ತುಮಕೂರು:  ಬೆತ್ತಲೆಯಾಗಿ  ಮಹಿಳೆಯೋರ್ವಳ ಶವ ಪತ್ತೆಯಾಗಿರುವ ಘಟನೆ ತುಮಕೂರು ತಾಲೂಕಿನ ಹೀರೇಹಳ್ಳಿ ಸಮೀಪದ ಚೋಟಾಸಾಬರ ಪಾಳ್ಯದ ಬಳಿ ನಡೆದಿದೆ.

    35 ವರ್ಷದ ಜಯಲಕ್ಷ್ಮಿ ಕೊಲೆಯಾಗಿರುವ ಮಹಿಳೆ. ನಿನ್ನೆ ಬೆಟ್ಟದ ಮೇಲೆ ಹಸು ಮೇಯಿಸಲು ಜಯಲಕ್ಷ್ಮೀ ಒಬ್ಬರೇ ಹೋಗಿದ್ದಾರೆ. ಸಂಜೆಯಾದರೂ ಮನೆಗೆ ವಾಪಸ್ ಬರದೇ ಇದ್ದದನ್ನು ನೋಡಿ ಪತಿ ಶಿವಕುಮಾರ್ ಹುಡುಕಾಟ ಶುರುಮಾಡಿದ್ದಾರೆ. ಆಗ ಬೆಟ್ಟದ ಮೇಲಿನ ಪೊದೆಯಲ್ಲಿ ಜಯಲಕ್ಷ್ಮೀಯ ಬೆತ್ತಲೆಯಾಗಿ ಬಿದ್ದಿದ್ದ ಮೃತದೇಹ ಕಂಡು ಬೆಚ್ಚಿಬಿದ್ದಿದಾರೆ. ಜೊತೆಗೆ ಮೃತ ದೇಹದ ಮೇಲೆ ಕಚ್ಚಿದ ಗಾಯದ ಕಲೆಗಳು ಕಂಡುಬಂದಿದೆ. ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತೊಯ್ದಿದ್ದು, ಅಪರಿಚಿತ ಯುವಕರ ಗುಂಪು ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಅಘ್ಘಾನ್ ಪ್ರಜೆಗಳಲ್ಲಿ ಇ-ವೀಸಾವಿದ್ದರೆ ಮಾತ್ರ ಭಾರತ ಪ್ರವೇಶ

    ಚೋಟಾಸಾಬ್‍ರ ಗ್ರಾಮಕ್ಕೆ ಹೊಂದಿಕೊಂಡಿರುವ ಈ ನಿರ್ಜನ ಬೆಟ್ಟದ ಮೇಲೆ ಮೇಲಿಂದ ಮೇಲೆ ಅಪರಿಚಿತ ಯುವಕರ ಗುಂಪು ಸೇರಿಕೊಂಡು ಮದ್ಯಪಾನ, ಗಾಂಜಾ ಸೇವನೆಯಂತಹ ಅನೈತಿಕ ಚಟುವಟಿಕೆ ಮಾಡುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಇದನ್ನೂ ಓದಿ: ಹುಬ್ಬಳ್ಳಿ ಏರ್‌ಪೋರ್ಟ್ ಖಾಸಗಿ ತೆಕ್ಕೆಗೆ – 130 ಕೋಟಿ ರೂ. ನಿರೀಕ್ಷೆ

    ಗಾಂಜಾ ಸೇವನೆ ನಶೆಯಲ್ಲಿ ಗ್ಯಾಂಗ್ ರೇಪ್ ನಡೆದಿರಬಹುದು ಎಂದು ಮೃತಳ ಸಂಬಂಧಿಕರು ಹಾಗೂ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಕ್ಯಾತಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.