ವಿಜಯನಗರ: ಜಿಲ್ಲೆಯ ಹೊಸಪೇಟೆ ನಗರವನ್ನು ಬೆಚ್ಚಿ ಬೀಳಿಸಿದ್ದ ವೃದ್ಧೆಯ ಕೊಲೆ ಹಾಗೂ ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ಹೊಸಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಕ್ಟೋಬರ್ 22 ರಂದು ವಿಜಯನಗರ ಜಿಲ್ಲೆ ಹೊಸಪೇಟೆಯ ರಾಣಿಪೇಟೆಯಲ್ಲಿ ಬಟ್ಟೆ ಖರೀದಿ ಮಾಡುವ ನೆಪದಲ್ಲಿ ಭುವನೇಶ್ವರಿ (68) ವರ್ಷದ ವೃದ್ಧೆಯನ್ನು ಕೊಲೆ ಮಾಡಿ, ಅವರ ತಂಗಿ ಶಿವಭೂಷಣ ಎನ್ನುವವರನ್ನು ಗಾಯಗೊಳಿಸಿ ಮನೆಯಲ್ಲಿದ್ದ ಮೂರು ಲಕ್ಷ ಹಣ ಹಾಗೂ ಮೂರು ಲಕ್ಷ ಮೂವತ್ತು ಸಾವಿರ ಮೌಲ್ಯದ ಬಂಗಾರವನ್ನು ದರೋಡೆ ಮಾಡಲಾಗಿತ್ತು. ಇದನ್ನೂ ಓದಿ: ಭಾನುವಾರ ಬೆಳಗ್ಗೆ 5:30ರಿಂದ ಪುನೀತ್ ರಾಜ್‍ಕುಮಾರ್ ಅಂತಿಮಯಾತ್ರೆ
ಈ ಪ್ರಕರಣ ಬೇಧಿಸಲು ವಿಜಯನಗರ ಜಿಲ್ಲಾ ಎಸ್‍ಪಿ ಕೆ ಅರುಣ್, ಹೊಸಪೇಟೆ ಡಿವೈಎಸ್‍ಪಿ ವಿಶ್ವನಾಥ್ ಕುಲಕರ್ಣಿ, ನಗರ ಠಾಣೆ ಸಿಪಿಐ ಶ್ರೀನಿವಾಸ್ ರಾವ್, ಚಿತ್ತವಾಡ್ಗಿ ಸಿಪಿಐ ಜಯಪ್ರಕಾಶ್ ನೇತೃತ್ವದಲ್ಲಿ ಮೂರು ತಂಡ ರಚಿಸಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ಎಂಟು ದಿನ ಕಳೆಯುವುದರೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ತಂದೆ ಅಂತಿಮ ದರ್ಶನ ಪಡೆದ ಪುತ್ರಿ ಧೃತಿ
ಬಂಧಿತ ಆರೋಪಿಗಳನ್ನು ತರಕಾರಿ ವ್ಯಾಪಾರಿ ತೈಬುಜುಲ್ಲಾ(52), ನಾಗರಾಜ್(26), ಬೀರಪ್ಪ(25), ಗೀತಾ(35), ಪ್ರಮೀಳಾ (38) ಎಂದು ಗುರುತಿಸಲಾಗಿದೆ. ಬಂಧಿತರು ಅಂತರ್ ಜಿಲ್ಲಾ ನಿವಾಸಿಗಳಾಗಿದ್ದು, ಬಂಧಿತರಿಂದ ಕಳ್ಳತನ ಮಾಡಿರುವ ಸ್ವತ್ತನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಕೆಲವರು ಪರಾರಿಯಾಗಿದ್ದಾರೆ ಎಂಬ ಮಾಹಿತಿ ಇದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ವಿಜಯನಗರ ಎಸ್‍ಪಿ ಕೆ. ಅರುಣ್ ತಿಳಿಸಿದ್ದಾರೆ.
ಚಂಡೀಗಢ: ಹರಿಯಾಣದ ಜಜ್ಜರ್ ರಸ್ತೆಯ ಟಿಕ್ರಿಯಲ್ಲಿ ರೈತರ ಪ್ರತಿಭಟನಾ ಸ್ಥಳದ ಬಳಿ ವೇಗವಾಗಿ ಬಂದ ಟ್ರಕ್ಕೊಂದು ಡಿವೈಡರ್ ಮೇಲೆ ಹರಿದ ಪರಿಣಾಮ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಇಬ್ಬರು ಮಹಿಳೆಯರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮತ್ತೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜಜ್ಜರ್ ರಸ್ತೆಯ ಮೇಲ್ಸೇತುವೆಯ ಕೆಳಗೆ ಕುಳಿತು ಆಟೋ ರಿಕ್ಷಾಕ್ಕಾಗಿ ಮಹಿಳೆಯರು ಕಾಯುತ್ತಿದ್ದ ವೇಳೆ ಬೆಳಗ್ಗೆ 6:30 ಕ್ಕೆ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಮದ್ಯಕ್ಕೆ ಹತ್ತು ರೂ. ನೀಡದ್ದಕ್ಕೆ ಸ್ನೇಹಿತನನ್ನೇ ಕೊಂದ್ರು
Haryana | Three people have died after being hit by a dumper truck at Bahadurgarh, further investigation underway: SP Jhajjar, Wasim Akram pic.twitter.com/cvNWtdUpln
ಪ್ರಾಥಮಿಕ ವರದಿ ವರದಿಗಳ ಪ್ರಕಾರ ಮಹಿಳೆಯರು ಪಂಜಾಬ್‍ನ ಮನ್ಸಾ ಜಿಲ್ಲೆಯ ನಿವಾಸಿಗಳಾಗಿದ್ದು, ಪ್ರತಿಭಟನಾ ಸ್ಥಳದಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವುದಕ್ಕೆ ಕಾಯುತ್ತಿದ್ದರು ಎಂದು ಹೇಳಲಾಗುತ್ತಿದೆ. ಘಟನೆ ಬಳಿಕ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಇದೀಗ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೆಲಸ ಕೊಡಿಸುತ್ತೇವೆಂದು 400 ಮಂದಿಗೆ ಕೋಟಿ ಕೋಟಿ ವಂಚನೆ: ಇಬ್ಬರು ಅರೆಸ್ಟ್
ರಾಯಚೂರು: ಜಿಲ್ಲೆಯ ಲಿಂಗಸುಗೂರಿನ ದೇವರಭೂಪುರ ಬಳಿ ನಾರಾಯಣಪುರ ಬಲದಂಡೆ ಕಾಲುವೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಗ್ರಾಮದ ಜನ ಕಾಲುವೆ ನೀರನ್ನು ಹೆಚ್ಚು ಅವಲಂಬಿಸಿರುವುದರಿಂದ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.
ನಿತ್ಯ ಕಾಲುವೆಯಲ್ಲಿ ಮಹಿಳೆಯರು ಬಟ್ಟೆ ತೊಳೆಯುತ್ತಾರೆ. ಇದೇ ಕಾಲುವೆಯಲ್ಲಿ ಮಕ್ಕಳು, ಯುವಕರು ಈಜಾಡುವುದರಿಂದ ಎಲ್ಲರಲ್ಲಿ ಆತಂಕ ಹೆಚ್ಚಾಗಿದೆ. ಮಹಿಳೆಯರು ಬಟ್ಟೆ ತೊಳೆಯುವ ಕೂಗಳೆತೆ ದೂರದಲ್ಲಿ ಮೊಸಳೆ ಕಾಣಿಸಿಕೊಂಡಿದೆ. ಕಾಲುವೆಯಲ್ಲಿ ಮೊಸಳೆ ಕಂಡು ಮಹಿಳೆಯರು ಹೆದರಿದ್ದಾರೆ. ಇದನ್ನೂ ಓದಿ: ಕುರುಬ ಸಮಾಜ ಹರಾಜು ಹಾಕೋ ಕೆಲಸ ಮಾಡ್ತಿದ್ದಾರೆ ಸಿದ್ದರಾಮಯ್ಯ: ಎಚ್.ವಿಶ್ವನಾಥ್ ಕಿಡಿ
ಚೆನ್ನೈ: ಚೆನ್ನೈನ ಮಹಿಳೆಯರನ್ನು ಉಚಿತವಾಗಿ ಕರೆದೊಯ್ಯುವ ಮಹಾನಗರ ಪಾಲಿಕೆ ಬಸ್ಸಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಹತ್ತಿ ಅಲ್ಲಿನ ಪ್ರಯಾಣಿಕರೊಂದಿಗೆ ಉಚಿತ ಪ್ರಯಾಣದ ಯೋಜನೆ ಕುರಿತಂತೆ ಸಂಭಾಷಣೆ ನಡೆಸಿದರು.
ಸ್ಟಾಲಿನ್ ಅವರು ಆರನೇ ಮೆಗಾ ಕೋವಿಡ್-19 ಇನಾಕ್ಯುಲೇಷನ್ ಅಭಿಯಾನದ ಅಂಗವಾಗಿ ಆಯೋಜಿಸಲಾದ ಕೆಲವು ಲಸಿಕೆ ಶಿಬಿರಗಳಿಗೆ ಪರಿಶೀಲನೆಗೆಂದು ತೆರಳಿದ್ದ ವೇಳೆ ಕನ್ನಗಿ ನಗರದಲ್ಲಿ ಬಸ್ ಹತ್ತಿದರು. ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಆನಂದ್ ಬರ್ಬರ ಕೊಲೆ
ಸಿಎಂ ಸ್ಟಾಲಿನ್ ಅವರು ಎಂ-19ಬಿ ಕನ್ನಗಿ ನಗರದಿಂದ ಟಿ-ನಗರಕ್ಕೆ ಹೋಗುತ್ತಿದ್ದ ಬಸ್ ಹತ್ತಿದರು. ಈ ವೇಳೆ ಮುಖ್ಯಮಂತ್ರಿಗಳನ್ನು ನೋಡಿ ಪ್ರಯಾಣಿಕರು ಸಂತೋಷಪಟ್ಟರು ಮತ್ತು ಮಹಿಳೆಯರಿಗಾಗಿ ಸರ್ಕಾರದ ಉಚಿತ ಬಸ್ ಪ್ರಯಾಣ ಯೋಜನೆ ಕುರಿತಂತೆ ಮಹಿಳೆಯರನ್ನು ವಿಚಾರಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
தி. நகர் – கண்ணகி நகர் வழித்தட பேருந்தில் மாண்புமிகு முதலமைச்சர் @mkstalin அவர்கள் திடீரென ஆய்வு மேற்கொண்டு, பெண்களிடம் மகளிருக்கான இலவச பேருந்து பயண திட்டம் குறித்து கேட்டறிந்தார். pic.twitter.com/QbKwZKpB3i
ವೀಡಿಯೋದಲ್ಲಿ ಸ್ಟಾಲಿನ್ ಹಿಂದೆ ಬಾಡಿಗಾಡ್ರ್ಸ್ ನಿಂತಿರುವುದನ್ನು ಮತ್ತು ಸ್ಟಾಲಿನ್ ರಸ್ತೆ ದಾಟಿ ಇನ್ನೊಂದು ಬದಿಯ ಬಸ್ಸನ್ನು ಹತ್ತುವುದನ್ನು ಕಾಣಬಹುದಾಗಿದೆ. ವಿಶೇಷವೆಂದರೆ ಬಸ್ ಹತ್ತಿದ ಸ್ಟಾಲಿನ್ ಅವರನ್ನು ಪ್ರಯಾಣಿಕರು ನಮಸ್ಕಾರಿಸಿ ಸ್ವಾಗತಿಸಿದರು. ಮತ್ತೆ ಕೆಲವು ಮಹಿಳೆಯರು ಸಿಎಂ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಭಾರತೀಯ ಫ್ಯಾಷನ್ ಪಾಶ್ಚಾತ್ಯ ಸಂಸ್ಕೃತಿಯಿಂದ ಪ್ರೇರಿತಗೊಂಡಿದೆ. ಪ್ರತಿಯೊಬ್ಬ ಹುಡುಗಿಯರು ಜೀವನದಲ್ಲಿ ಒಂದು ಬಾರಿಯಾದರೂ ಫ್ರಾಕ್ ಧರಿಸಬೇಕೆಂಬ ಕನಸ್ಸನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಫ್ರಾಕ್ ಅನ್ನು ಎಲ್ಲಾ ವಯಸ್ಸಿನ ಮಹಿಳೆಯರು ಧರಿಸಬಹುದಾಗಿದ್ದು, ಫ್ರಾಕ್‍ಗಳಲ್ಲಿ ಸಾಕಷ್ಟು ಕಲರ್ ಹಾಗೂ ಡಿಸೈನ್‍ಗಳಿದೆ. ಸಾಮಾನ್ಯವಾಗಿ ಫ್ರಾಕ್ ಅನ್ನು ಗೌವ್ನ್ ಎಂದು ಕೂಡ ಕರೆಯಲಾಗುತ್ತದೆ. ಹಿಂದಿನ ಕಾಲದಲ್ಲಿ ರಿಸೆಪ್ಷನ್ ವೇಳೆ ವಧು ಸಂಪ್ರದಾಯಿಕ ಲೆಹೆಂಗ ಧರಿಸುತ್ತಿದ್ದರು. ಆದರೆ ಈಗ ಹೆಚ್ಚಾಗಿ ಗೌವ್ನ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಪಾರ್ಟಿಯಲ್ಲಿ ಗೌವ್ನ್ ಧರಿಸಲು ಸಿಂಪಲ್ ಆಗಿದ್ದು, ಗ್ರ್ಯಾಂಡ್ ವರ್ಕಿಂಗ್‍ನಿಂದ ಕೂಡಿರುತ್ತದೆ. ಈ ಫ್ರಾಕ್‍ಗಳ ಬಗ್ಗೆ ನಿಮಗೆ ತಿಳಿದಿರದ ಒಂದಷ್ಟು ಡಿಸೈನ್‍ಗಳ ಕುರಿತಂತೆ ಮಾಹಿತಿ ಈ ಕೆಳಗಿನಂತೆ ನೀಡಲಾಗಿದೆ.
ಟ್ಯೂನಿಕ್ ಫ್ರಾಕ್:
ಟ್ಯೂನಿಕ್ ಫ್ರಾಕ್ ಹದಿಹರೆಯದ ಯುವತಿಯರಿಗೆ ಹೆಚ್ಚು ಸುಂದರವಾಗಿ ಕಾಣಿಸುತ್ತದೆ ಮತ್ತು ಇದನ್ನು ಹೆಚ್ಚಾಗಿ ಪಾರ್ಟಿಗಳಲ್ಲಿ ಧರಿಸುತ್ತಾರೆ. ವಿಶೇಷವೆಂದರೆ ಈ ಫ್ರಾಕ್ ಅನ್ನು ಸ್ಪಾರ್ಕಿಂಗ್ ಮೆಟಿರಿಯಲ್‍ನಿಂದ ವಿನ್ಯಾಸಗೊಳಿಸಲಾಗಿದ್ದು, ಇದು ಬಹಳ ಬೇಗ ಎಲ್ಲರ ಗಮನ ಸೆಳೆಯುತ್ತದೆ. ಈ ಫ್ರಾಕ್ ಮೊಣಕಾಲುದ್ದ ಇದ್ದು, ಚಿಕ್ಕ ಸ್ಲೀವ್ಸ್ ಹಾಗೂ ರೌಂಡ್ ನೆಕ್ ಡಿಸೈನ್ ಹೊಂದಿದೆ. ಇದು ನಿಮಗೆ ಬೋಲ್ಡ್ ಲುಕ್ ನೀಡುತ್ತದೆ.
ಟ್ಯೂಬ್ ಫ್ರಾಕ್:
ಟ್ಯೂಬ್ ಫ್ರಾಕ್‍ವೊಂದು ಶೋಲ್ಡರ್ ಲೆಸ್, ಲಾಂಗ್ ಫ್ರಾಕ್ ಆಗಿದೆ. ಇದನ್ನು ಕಾಟನ್ ಬಟ್ಟೆ ತಯಾರಿಸಲಾಗಿದ್ದು, ಇದರ ಮೇಲೆ ಹೂವಿನ ಡಿಸೈನ್‍ಗಳನ್ನು ಮುದ್ರಿಸಲಾಗಿದೆ. ಇದು ಮಹಿಳೆಯರಿಗೆ ಧರಿಸಲು ಬಹಳ ಆರಾಮದಾಯಕವಾಗಿದೆ. ಇದನ್ನು ಎದೆಯ ಭಾಗದತ್ತ ಸರಿಹೊಂದುವಂತೆ ಸ್ಟೀಚ್ ಮಾಡಲಾಗಿರುತ್ತದೆ.
ಶ್ಯೆತ್ ಫ್ರಾಕ್:
ಇದೊಂದು ಮೊಣಕಾಲುದ್ದ ಬರುವ ಸಿಂಪಲ್ ಫ್ರಾಕ್ ಆಗಿದ್ದು, ವಿ ನೆಕ್ ಡಿಸೈನ್ ಹೊಂದಿದೆ. ಸೊಂಟದ ಮೇಲೆ ಬೆಲ್ಟ್ ಮಾದರಿ ವಿನ್ಯಾಸಗೊಳಿಸಲಾಗಿದ್ದು, ತುದಿಯಲ್ಲಿ ರಿಬ್ಬನ್ ಅಥವಾ ಬಿಲ್ಲಿನಿಂದ ಕಟ್ಟಲಾಗಿರುತ್ತದೆ. ಈ ಫ್ರಾಕ್ ಸ್ಲಿಮ್ ಆಗಿರುವಂತಹ ಹುಡುಗಿಯರಿಗೆ ಬಹಳ ಸುಂದರವಾಗಿ ಕಾಣಿಸುತ್ತದೆ. ಅಲ್ಲದೇ ಪೆನ್ಸಿಲ್ ಕಟ್ ಸ್ಯಾಂಡಲ್ ಜೊತೆ ಈ ಫ್ರಾಕ್ ಬಹಳ ಚೆನ್ನಾಗಿ ಮ್ಯಾಚ್ ಆಗುತ್ತದೆ. ಇದನ್ನೂ ಓದಿ: EXCLUSIVE: ಸಿನಿಮಾಗೂ ಸಿಗದೇ ಇರುವ ಪಬ್ಲಿಸಿಟಿ ರಿಲೀಸ್ ಆಗದ ದಿನ ಸಿಕ್ತು: ಕಿಚ್ಚ
ಪೆನ್ಸಿಲ್ ಫ್ರಾಕ್:
ಪೆನ್ಸಿಲ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿರುವ ಈ ನೀಲಿ ಬಣ್ಣದ ಫ್ರಾಕ್ ಹದಿಹರೆಯದವರಿಗೆ ಸೂಟ್ ಆಗುತ್ತದೆ. ಸ್ಕೊಯರ್ ನೆಕ್ ಜೊತೆಗೆ ದೇಹಕ್ಕೆ ಫಿಟ್ ಆಗಿ ಕಾಣಿಸುವಂತೆ ಮತ್ತು ಮೊಣಕಾಲುದ್ದ ಬರುವಂತೆ ಈ ಫ್ರಾಕ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಫ್ರಾಕ್ ಸ್ಲಿಮ್ ಆಗಿರುವವರಿಗೆ ಅಂದವಾಗಿ ಕಾಣಿಸುತ್ತದೆ.
ಟ್ರೆಂಚ್ ಫ್ರಾಂಕ್:
ದಪ್ಪವಾದ ಕಾಲರ್ ಮತ್ತು ಅರ್ಧ ತೋಳನ್ನು ಹೊಂದಿರುವ ರೆಟ್ರೋ ಶೈಲಿಯ ಫ್ರಾಕ್ ಇದಾಗಿದೆ. ಫ್ರಾಕ್ ಮೊದಲ ಅರ್ಧವನ್ನು ಬಟನ್‍ನಿಂದ ಜೋಡಿಸಲಾಗಿದ್ದು, ಎರಡು ಬದಿಯಲ್ಲಿ ಪಾಕೆಟ್‍ಗಳನ್ನು ಇರಿಸಲಾಗಿದೆ ಮತ್ತು ಸೊಂಟದ ಮಧ್ಯೆ ಬೆಲ್ಟ್ ಮೂಲಕ ಕಟ್ಟಲಾಗಿದೆ. ಇದು ನೋಡಲು ಸ್ಕೂಲ್ ಡ್ರೆಸ್‍ನಂತೆ ಕಾಣಿಸುತ್ತದೆ. ಇದನ್ನೂ ಓದಿ: ಮಂಕಿ ಕ್ಯಾಪ್ ಧರಿಸಿ ವೃದ್ಧೆಯ ಚಿನ್ನದ ಸರ ಎಗರಿಸಿ ಖದೀಮ ಪರಾರಿ
ಬೆಂಗಳೂರು: ನಗರದ ನಿಮ್ಹಾನ್ಸ್ ನ ವಿಶ್ವ ಮಾನಸಿಕ ಆರೋಗ್ಯ ದಿನ ಕಾರ್ಯಕ್ರಮದಲ್ಲಿ, ಕರ್ನಾಟಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ಸಂದೇಶ ವಿವಾದಕ್ಕೀಡಾಗಿತ್ತು. ಇದೀಗ ಸ್ವತಃ ಅವರೆ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.
ಸ್ಪಷ್ಟನೆಯಲ್ಲಿ ಏನಿದೆ?
ಶತಮಾನದ ಅತ್ಯಂತ ದೊಡ್ಡ ಸಾಂಕ್ರಾಮಿಕವನ್ನು ಜಗತ್ತು ಎದುರಿಸುತ್ತಿರುವ ಸಮಯದಲ್ಲಿ, ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್ ಸಂಸ್ಥೆಯಲ್ಲಿ ಅಕ್ಟೋಬರ್ 11 ಭಾನುವಾರದಂದು ವಿಶ್ವ ಮಾನಸಿಕ ಆರೋಗ್ಯ ದಿನ ಆಚರಣೆಯಾಯಿತು. ಸಾಂಕ್ರಾಮಿಕದಿಂದ ತಮ್ಮವರನ್ನು ಕಳೆದುಕೊಂಡಿರುವುದು, ಒಂಟಿತನ, ಆರ್ಥಿಕ ನಷ್ಟ, ಆತಂಕ ಮೊದಲಾದ ಕಾರಣಗಳಿಂದ ಜನರಲ್ಲಿ ಮಾನಸಿಕ ಒತ್ತಡ, ಉದ್ವೇಗ, ಖಿನ್ನತೆ ಹೆಚ್ಚಾಗಿದೆ. ಅದರಲ್ಲೂ ಯುವಜನಾಂಗದಲ್ಲಿ ಈ ಸಮಸ್ಯೆ ಅಧಿಕವಾಗಿದೆ. ನಿಮ್ಹಾನ್ಸ್ ಕಾರ್ಯಕ್ರಮದ ನನ್ನ ಭಾಷಣದಲ್ಲಿ ಈ ಮಾನಸಿಕ ಸಮಸ್ಯೆ, ಸವಾಲುಗಳನ್ನು ಭಾರತದ ಕೌಟುಂಬಿಕ ಮೌಲ್ಯಗಳ ಮೂಲಕ ಹೇಗೆ ನಿವಾರಿಸಬಹುದು ಎಂಬ ಸಂದೇಶವನ್ನು ನೀಡಬೇಕೆಂಬ ಉದ್ದೇಶ ಹೊಂದಿದ್ದೆ. ಇದನ್ನೂ ಓದಿ: ಆಧುನಿಕ ಮಹಿಳೆಯರು ಮದುವೆ ಆದ್ರೆ ಮಕ್ಕಳನ್ನು ಹೆರಲು ಬಯಸಲ್ಲ: ಸುಧಾಕರ್
ಭಾನುವಾರ ನಿಮ್ಹಾನ್ಸ್ ನಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನ ಕಾರ್ಯಕ್ರಮದಲ್ಲಿ ಮಾಡಿದ 19.30 ನಿಮಿಷದ ನನ್ನ ಈ ದೀರ್ಘ ಭಾಷಣದಲ್ಲಿ, ಒಂದು ಭಾಗವನ್ನು ನೈಜವಾದ ಉದ್ದೇಶದಿಂದ ಹೊರಗೆಳೆದು ಅಪಾರ್ಥ ಕಲ್ಪಿಸಲಾಗಿದೆ ಎಂಬುದು ಬಹಳ ದುರದೃಷ್ಟಕರ ಸಂಗತಿ. ಈ ಮೂಲಕ ಭಾಷಣದ ವ್ಯಾಪಕವಾದ ಅರ್ಥವನ್ನು ಸಂಕೀರ್ಣಗೊಳಿಸಲಾಗಿದೆ.
ನಾನು ಒಬ್ಬ ಹೆಮ್ಮೆಯ ಹೆಣ್ಣುಮಗಳ ತಂದೆ ಹಾಗೂ ಸಂಪೂರ್ಣ ವೃತ್ತಿಪರ ತರಬೇತಿ ಪಡೆದ ವೈದ್ಯ ಎಂದು ಮೊದಲಿಗೆ ಹೇಳುತ್ತೇನೆ. ಆದ್ದರಿಂದ ಮಹಿಳೆಯರ ಸುತ್ತಲಿನ ಸೂಕ್ಷ್ಮತೆಗಳನ್ನು, ಸಂವೇದನೆಗಳನ್ನು ಸಂಪೂರ್ಣವಾಗಿ ಅರಿತಿದ್ದೇನೆ ಹಾಗೂ ನಾವು ಎದುರಿಸುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿತಿದ್ದೇನೆ. ಮಾನಸಿಕ ಆರೋಗ್ಯದ ಸವಾಲುಗಳನ್ನು ಪರಿಹರಿಸುವ ಸೌಲಭ್ಯಗಳ ಕೊರತೆ ಇರುವ ಕಡೆಗಳಲ್ಲಿ, ಕುಟುಂಬಗಳು ವ್ಯಕ್ತಿಗೆ ಮೌಲ್ಯಯುತವಾದ ವ್ಯವಸ್ಥೆಯನ್ನು ಸೃಷ್ಟಿಸಿಕೊಡುತ್ತದೆ ಎಂಬುದು ಸಂಶೋಧನೆ ಹಾಗೂ ಅಧ್ಯಯನಗಳಿಂದ ಸಾಬೀತಾಗಿದೆ. ಇದು ವ್ಯಕ್ತಿಯ ವಿವಿಧ ಮಾನಸಿಕ ಒತ್ತಡಗಳನ್ನು ನಿರ್ವಹಣೆ ಮಾಡಲು ಸಹಾಯಕವಾಗುತ್ತದೆ. ಭಾರತೀಯ ಸಮಾಜವು ಪರಸ್ಪರ ಅವಲಂಬನೆ, ಸಾಮಾಜಿಕ ಒಗ್ಗಟ್ಟು, ಸಾಮೂಹಿಕತೆಯಿಂದ ಕೂಡಿದೆ. ಭಾರತದ ಸಾಂಪ್ರದಾಯಿಕ ಅವಿಭಕ್ತ ಕುಟುಂಬವು ಸಾಮೂಹಿಕತೆಯ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ ಹಾಗೂ ಇದು ಮಾನಸಿಕ ಆರೋಗ್ಯ ಸಮಸ್ಯೆಗೊಳಗಾದವರ ಆರೈಕೆಗೆ ಸೂಕ್ತ ಸೌಲಭ್ಯ ಒದಗಿಸುತ್ತದೆ.
ಪಶ್ಚಿಮದ ದೇಶಗಳ ಸಮಾಜವು ವಿಭಕ್ತ ವ್ಯವಸ್ಥೆಯನ್ನು ಉತ್ತೇಜಿಸಿದರೆ, ಭಾರತೀಯ ಸಮಾಜವು ಸಾಮೂಹಿಕತೆ, ಪರಸ್ಪರ ಅವಲಂಬನೆಯನ್ನು ಪ್ರೋತ್ಸಾಹಿಸುತ್ತದೆ. ಆದ್ದರಿಂದ ಭಾರತೀಯ ಹಾಗೂ ಏಷ್ಯಾದ ಕುಟುಂಬಗಳು, ಸದಸ್ಯರ ಬಗ್ಗೆ ಕಾಳಜಿ ವಹಿಸುವುದಕ್ಕೆ ಹೆಚ್ಚು ಒತ್ತು ನೀಡುತ್ತದೆ ಮತ್ತು ಇದರಿಂದಲೇ ಪಾಶ್ಚಿಮಾತ್ಯ ದೇಶಗಳಿಗಿಂತ ಹೆಚ್ಚು ಆರೋಗ್ಯದ ಹೊರೆಯನ್ನು ಹೊತ್ತುಕೊಳ್ಳುತ್ತದೆ. ಭಾರತೀಯ ಕುಟುಂಬಗಳು ತಮ್ಮ ರೋಗಿಗಳ ವಿಚಾರದಲ್ಲಿ ಹೆಚ್ಚು ಕಾಳಜಿ ವಹಿಸುತ್ತದೆ ಹಾಗೂ ಆರೈಕೆಯಲ್ಲೂ ಹೆಚ್ಚು ಜವಾಬ್ದಾರಿ ವಹಿಸಿಕೊಳ್ಳುತ್ತದೆ. ಇದನ್ನೂ ಓದಿ: ಮದ್ವೆಯಾದ ಬಳಿಕ ಒಂಟಿಯಾಗಿ ಜೀವಿಸ್ತಿರೋದು ಅವರ ನಾಯಕ- ಸುಧಾಕರ್‌ಗೆ ನಿಂಬಾಳ್ಕರ್ ಟಾಂಗ್
ಈ ಅಂಶವು ಇಂಡಿಯನ್ ಜರ್ನಲ್ ಆಫ್ ಸೈಕಿಯಾಟ್ರಿಯಲ್ಲಿ ಪ್ರಕಟಗೊಂಡ ಸಂಶೋಧನೆಯಲ್ಲಿ ಸಾಬೀತಾಗಿದೆ. ಯುವಜನರಲ್ಲಿ ಮದುವೆಗೆ ನಿರಾಕರಣೆ ಹಾಗೂ ಮಕ್ಕಳನ್ನು ಪಡೆಯುವುದಕ್ಕೆ ಹಿಂಜರಿಕೆಗೆ ಸಂಬಂಧಿಸಿದ ನನ್ನ ಹೇಳಿಕೆ ಕೂಡ ಸರ್ವೆಯೊಂದನ್ನು ಆಧರಿಸಿದ ಹೇಳಿಕೆಯಾಗಿದೆ. YouGov-Mint-CPR Millennial Survey ಪ್ರಕಾರ, ಹೊಸ ಪೀಳಿಗೆಯಲ್ಲಿ (ಮಿಲೆನಿಯಲ್ಸ್) ಶೇ.19 ರಷ್ಟು ಮಂದಿ ಮದುವೆ ಹಾಗೂ ಮಕ್ಕಳನ್ನು ಪಡೆಯುವುದಕ್ಕೆ ಆಸಕ್ತಿ ಹೊಂದಿಲ್ಲ. ಇನ್ನೂ ಶೇ.8 ರಷ್ಟು ಮಂದಿ ಮಕ್ಕಳ ಬಗ್ಗೆ ಆಸಕ್ತಿ ಹೊಂದಿದ್ದಾರೆ, ಆದರೆ ವಿವಾಹಕ್ಕೆ ಸಿದ್ಧರಾಗಿಲ್ಲ. ನಂತರದ ಪೀಳಿಗೆಯಲ್ಲಿ (ಪೋಸ್ಟ್ ಮಿಲೆನಿಯಲ್ಸ್-ಜನರೇಶನ್ ಝೆಡ್) ಶೇ.23 ರಷ್ಟು ಮಂದಿ ವಿವಾಹ ಹಾಗೂ ಮಕ್ಕಳ ಬಗ್ಗೆ ಆಸಕ್ತಿ ಹೊಂದಿಲ್ಲ. ಈ ಟ್ರೆಂಡ್ ನಲ್ಲಿ ಲಿಂಗ ಆಧಾರಿತವಾಗಿ ಕೆಲ ವ್ಯತ್ಯಾಸಗಳಿವೆ. ಇದು ಪುರುಷರು ಹಾಗೂ ಮಹಿಳೆಯರಿಬ್ಬರಿಗೂ ಸಂಬಂಧಿಸಿದೆ. ಅದ್ಭುತವಾದ ಬೆಂಬಲ ನೀಡುವಂತಹ ವಾತಾವರಣ ಹೊಂದಿರುವ ನಮ್ಮ ಸಾಂಪ್ರದಾಯಿಕ ಕೌಟುಂಬಿಕ ವ್ಯವಸ್ಥೆಯಿಂದ, ಮಾನಸಿಕ ಆರೋಗ್ಯ ಸಮಸ್ಯೆಗಳಾದ ಒತ್ತಡ, ಉದ್ವೇಗ, ಖಿನ್ನತೆಗೆ ನಮ್ಮ ಯುವಜನತೆ ಪರಿಹಾರ ಪಡೆಯಬಹುದು ಎಂಬುದು ಮಾತ್ರ ನನ್ನ ಮಾತಿನ ಮುಖ್ಯ ಉದ್ದೇಶವಾಗಿತ್ತು.
ಏಕಾಂಗಿಯಾಗಿ ಜೀವನ ನಡೆಸುತ್ತಿರುವ ಮಹಿಳೆಯರನ್ನು ಉದ್ದೇಶಿಸಿ ನಾನು ಅಂತಹ ಹೇಳಿಕೆಯನ್ನು ನೀಡಿಲ್ಲ ಹಾಗೂ ನನ್ನ ಮಾತು ಅಂತಹ ಉದ್ದೇಶವನ್ನು ಹೊಂದಿರಲೇ ಇಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ. ಜೊತೆಗೆ ಪ್ರತಿಯೊಬ್ಬರೂ ನನ್ನ ಫೇಸ್‍ಬುಕ್ ಪೇಜ್ ನಲ್ಲಿ ಲಭ್ಯವಿರುವ ನನ್ನ ಭಾಷಣವನ್ನು ಸಂಪೂರ್ಣವಾಗಿ ಆಲಿಸಬೇಕೆಂದು ಕೋರುತ್ತೇನೆ.
ಬೆಳಗಾವಿ: ಮದುವೆಯಾದ ಬಳಿಕ ಒಂಟಿಯಾಗಿ ಜೀವಿಸುತ್ತಿರುವುದು ಅವರ ನಾಯಕ. ಒಂಟಿಯಾಗಿ ಜೀವಿಸುವ ಅವರ ನಾಯಕ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಏನಾದರೂ ಪ್ರತಿಕ್ರಿಯೆಗಳಿವೆಯಾ ಎಂದು ಸಚಿವ ಡಾ. ಕೆ ಸುಧಾಕರ್ ಅವರಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಪ್ರಶ್ನಿಸಿದ್ದಾರೆ.
ಆಧುನಿಕ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವರ ವಿರುದ್ಧ ಅಂಜಲಿ ನಿಂಬಾಳ್ಕರ್ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಇಂತಹ ಪುರುಷರಿಗೆ ಆಪ್ತ ಸಮಾಲೋಚನೆಯ ಅವಶ್ಯವಿದೆ. ವಿಶ್ವ ಮಾನಸಿಕ ಆರೋಗ್ಯ ದಿನದಂದು ಆಪ್ತ ಸಮಾಲೋಚನೆಯ ಅವಶ್ಯವಿದೆ. ಆಧುನಿಕ ಮಹಿಳೆ ತನಗೆ ಇಷ್ಟ ಬಂದಂತೆ ಜೀವಿಸಲಿ. ಇದನ್ನ ಬೇರೆಯವರು ನಿರ್ಧರಿಸೋದಲ್ಲ ಆಕೆಯೇ ನಿರ್ಧರಿಸಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಆಧುನಿಕ ಮಹಿಳೆಯರು ಮದುವೆ ಆದ್ರೆ ಮಕ್ಕಳನ್ನು ಹೆರಲು ಬಯಸಲ್ಲ: ಸುಧಾಕರ್
ಸುಧಾಕರ್ ಹೇಳಿದ್ದೇನು..?
ಭಾನುವಾರ ನಿಮ್ಹಾನ್ಸ್ ನಲ್ಲಿ ನಡೆದ ಅಂತರರಾಷ್ಟ್ರೀಯ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಚಿವರು, ಕೂಡು ಕುಟುಂಬಗಳ ನಶಿಸುವಿಕೆ ವಿಚಾರ ಪ್ರಸ್ತಾಪ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.
Seriously!!! These men need counselling on World Mental Health Day.
Let her live with her choices no one can decide for her but herself…
ಮುತ್ತಾತ-ಮುತ್ತಜ್ಜಿ ಇರುವುದು ಬಿಡಿ, ನಾವು ನಮ್ಮ ಹೆತ್ತವರು ನಮ್ಮ ಜೊತೆಗೆ ಇರಲು ಬಯಸಲ್ಲ. ಇವತ್ತು ಇದನ್ನು ಹೇಳಲು ಬೇಸರ ಆಗುತ್ತೆ. ಭಾರತದಲ್ಲಿ ಬಹಳಷ್ಟು ಅಧುನಿಕ ಮಹಿಳೆಯರು ಒಂಟಿಯಾಗಿರಲು ಬಯಸ್ತಾರೆ. ಒಂದು ವೇಳೆ ಅವರು ಮದುವೆ ಆದರೂ ಅವರು ಜನ್ಮ ನೀಡಲು ಬಯಸಲ್ಲ. ಅವರು ಬೇರೆಯವರಿಂದ ಮಗು ಹೆರಲು ಇಷ್ಟಪಡುತ್ತಾಳೆ. ಹೀಗಾಗಿ ನಮ್ಮ ಆಲೋಚನೆಯಲ್ಲಿ ವಿಚಿತ್ರ ಬದಲಾವಣೆ ಆಗಿದೆ, ಅದು ಒಳ್ಳೆಯದಲ್ಲ ಎಂದಿದ್ದರು. ಇದನ್ನೂ ಓದಿ: ಕೊಟ್ಟ ಮಾತಿನಂತೆ ನಡೆದುಕೊಂಡ ರೇಣುಕಾಚಾರ್ಯ – ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಸಹಾಯ
ಬಹಳ ಮಹಿಳೆಯರು ಮದುವೆಯಾದರೂ ಮಕ್ಕಳಿಗೆ ಜನ್ಮ ಕೊಡಲು ಹಿಂಜರಿಯುತ್ತಾರೆ. ಅದರ ಬದಲು ಬಾಡಿಗೆ ತಾಯಂದಿರಿಂದ ಮಕ್ಕಳನ್ನು ಪಡೆಯುತ್ತಾರೆ. ಅವರ ಆಲೋಚನೆಯ ದೃಷ್ಟಿಕೋನವೇ ಸಂಪೂರ್ಣ ಬದಲಾಗಿದೆ. ಇಂತಹ ದೃಷ್ಟಿಕೋನ ಸೂಕ್ತವಲ್ಲ ಎಂದು ಸಚಿವರು ಹೇಳಿದ್ದರು.
ವಿವಿಧ ಆಭರಣಗಳಲ್ಲಿ ಬಳೆಗಳು ಕೂಡ ಒಂದಾಗಿದ್ದು, ಸಾಮಾನ್ಯವಾಗಿ ಮಹಿಳೆಯರು ಬಳೆಯನ್ನು ಧರಿಸುತ್ತಾರೆ ಮತ್ತು ಬಳೆಗಳು ಹೆಣ್ಣಿನ ಅಂದವನ್ನು ಹೆಚ್ಚಿಸುತ್ತದೆ. ಬಳೆಗಳು ಮೊಣ ಕೈವರೆಗೂ ಧರಿಸುವ ಆಭರಣವಾಗಿದ್ದು, ಹಲವು ರೀತಿಯ ಸ್ಟೈಲಿಶ್ ಬಳೆಗಳಿದೆ. ಅಲ್ಲದೇ ವಿವಾಹಿತ ಮಹಿಳೆಯರ ಅಮೂಲ್ಯವಾದ ಆಭರಣಗಳಲ್ಲಿ ಬಳೆ ಕೂಡ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬಳೆಯಲ್ಲಿ ಹಲವು ವೆರೈಟಿ ಡಿಸೈನ್ ಬಳೆಗಳಿದ್ದು, ಈ ಕುರಿತ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ.
ವಜ್ರದ ಡಿಸೈನ್ ಚಿನ್ನದ ಬಳೆಗಳು:
ಕಿಟ್ಟಿ ಪಾರ್ಟಿಗಳಲ್ಲಿ ಮಹಿಳೆಯರು ಧರಿಸಲು ಈ ಬಳೆ ಸುಂದರವಾಗಿರುತ್ತದೆ. ಅಧಿಕೃತ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಈ ಬಳೆ ಧರಿಸಲು ಸೂಕ್ತವಾಗಿದ್ದು, ಇದು ನಿಮಗೆ ಖಂಡಿತವಾಗಿಯೂ ಗ್ರ್ಯಾಂಡ್ ಲುಕ್ ನೀಡುತ್ತದೆ. ಈ ಚಿನ್ನದ ಬಳೆಯನ್ನು ವಜ್ರ ಹಾಗೂ ಪಚ್ಚೆಗಳಿಂದ ವಿನ್ಯಾಸಗೊಳಿಸಲಾಗಿದ್ದು, ಸೀರೆಗೆ ಬಹಳ ಸೂಟ್ ಆಗುತ್ತದೆ.
ಅಗಲವಾದ ವಜ್ರದ ಬಳೆಗಳು:
ಅಗಲವಾಗಿ ವಜ್ರದಿಂದ ವಿನ್ಯಾಸಗೊಳಿಸಿರುವ ಬಳೆಗಳು ಇತ್ತೀಚೆಗೆ ಹೊಸ ಟ್ರೆಂಡ್ ಸೃಷ್ಟಿಸಿದೆ. ಕೇವಲ ಒಂದು ಬಳೆಯನ್ನು ಧರಿಸಿದರೆ ಸಾಕು ಇದು ನಿಮ್ಮ ಕೈಗೆ ಗ್ರ್ಯಾಂಡ್ ಲುಕ್ ನೀಡುತ್ತದೆ ಮತ್ತು ಇದಕ್ಕೆ ಹೆಚ್ಚು ವೆಚ್ಚವಾಗುವುದಿಲ್ಲ. ಈ ಬಳೆಗಳನ್ನು ವಜ್ರ ಹಾಗೂ ಪಚ್ಚೆಗಳಿಂದ ವಿನ್ಯಾಸಗೊಳಿಸಲಾಗಿದೆ.
ಚಿನ್ನದ ಚಕ್ಕೆಗಳ ವಿನ್ಯಾಸದ ರೆಸಿನ್ ಬಳೆಗಳು:
ಈ ಬಳೆ ಹದಿಹರೆಯದವರಿಗೆ ಹೆಚ್ಚು ಪ್ರಿಯವಾಗಿದ್ದು, ಇತ್ತೀಚಿನ ಡಿಸೈನರ್ ಬಳೆಗಳಲ್ಲಿ ಒಂದಾಗಿದೆ. ಈ ಬಳೆ ಮಹಿಳೆಯರಿಗೆ ಅದ್ಭುತವಾದ ಲುಕ್ ನೀಡುವುದರ ಜೊತೆಗೆ ಎಲ್ಲರ ಮಧ್ಯೆ ಎದ್ದು ಕಾಣಿಸುತ್ತದೆ. ಇದನ್ನೂ ಓದಿ: ಗಾಂಧಿ ಜಯಂತಿ ವಿಶೇಷ – ವಿಜಯಪುರದ ಗ್ರಾಮ ಸಭೆ ವೀಕ್ಷಣೆ ಮಾಡಲಿದ್ದಾರೆ ಮೋದಿ
ಗೋಲ್ಡ್ ಆರ್ಮ್ ಕಫ್ಸ್:
ಈ ಡಿಸೈನರ್ ಬಳೆಗಳು ಹಿರಿಯ ಮಹಿಳೆಯರಿಗೆ ಹಾಗೂ ಯುವತಿಯರಿಗೆ ಸೂಟ್ ಆಗುತ್ತದೆ. ಎರಡು ತುದಿಗಳಿಂದಲೂ ಸಂಕೀರ್ಣವಾದ ಎಳೆಗಳನ್ನು ಹೊಂದಿರುವ ತೆಳುವಾದ ಅಂಚು ಹೊಂದಿರುತ್ತದೆ. ಈ ಬಳೆಯನ್ನು ನೀವು ಯಾವುದೇ ಡ್ರೆಸ್ ಜೊತೆಗೆ ಧರಿಸಬಹುದಾಗಿದೆ.
ಸ್ಯಾಟಿನ್ ಡ್ರೆಸ್‍ಗಳು ಧರಿಸಲು ಬಹಳ ಕಂಫರ್ಟ್ ಆಗಿರುತ್ತದೆ. ಸ್ಯಾಟಿನ್ ಉಡುಪುಗಳನ್ನು ನೀವು ಕ್ಯಾಶುವಲ್ ವೇರ್ ಆಗಿ ಬಳಸಬಹುದು. ಅದರಲ್ಲಿಯೂ ಪಾರ್ಟಿ ಮತ್ತು ಸಮಾರಂಭಗಳಿಗೆ ಸ್ಯಾಟಿನ್ ಉಡುಪುಗಳು ಬೆಸ್ಟ್ ಎಂದೇ ಹೇಳಬಹುದು. ಈ ಉಡುಪುಗಳು ನಿಮ್ಮ ದೇಹಕ್ಕೆ ಫಿಟ್ ಆಗಿರುವುದರ ಜೊತೆಗೆ ಬ್ಯೂಟಿಫುಲ್ ಶೇಪನ್ನು ನೀಡುತ್ತದೆ. ಸ್ಯಾಟಿನ್ ಉಡುಪುಗಳಲ್ಲಿ ವೆರೈಟಿ ಡಿಸೈನ್‍ಗಳಿದ್ದು, ಹೊಸ, ಹೊಸ ಪ್ಯಾಟರ್ನ್ ಗಳನ್ನು ವಿನ್ಯಾಸಕರು ತಯಾರಿಸುತ್ತಿದ್ದಾರೆ. ಬ್ರೈಟ್ ಕಲರ್ ಡ್ರೆಸ್‍ಗಳು ಸ್ಯಾಟಿನ್ ಉಡುಪುಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಅವುಗಳಲ್ಲಿ ಕೆಲವಷ್ಟು ಲೇಟೆಸ್ಟ್ ಹಾಗೂ ಸ್ಟೈಲಿಶ್ ಸ್ಯಾಟಿನ್ ಉಡುಪುಗಳ ಮಾಹಿತಿ ಈ ಕೆಳಗಿನಂತಿದೆ.
ವೈಟ್ ಸ್ಯಾಟಿನ್ ಗೌವ್ನ್
ಸಂಜೆ ವೇಳೆ ನಡೆಯುವ ಪಾರ್ಟಿಗಳಿಗೆ ಈ ಸ್ಟೈಲಿಶ್ ಸ್ಯಾಟಿನ್ ಡ್ರೆಸ್ ಸುಂದರವಾಗಿ ಕಾಣಿಸುತ್ತದೆ. ಇದು ನಿಮ್ಮ ಅಂದವನ್ನು ಹೆಚ್ಚಿಸುವುದರ ಜೊತೆಗೆ ಎಲ್ಲರನ್ನು ಆಕರ್ಷಿಸುತ್ತದೆ. ಈ ಉಡುಪಿಗೆ ವಜ್ರದ ಆಭರಣಗಳು ಸಖತ್ ಮ್ಯಾಚ್ ಆಗುತ್ತದೆ ಮತ್ತು ಇದು ನಿಮಗೆ ಕ್ಲಾಸಿ ಲುಕ್ ನೀಡುತ್ತದೆ.
ಬರ್ಗಂಡಿ ಕಲರ್‌ನ ಲಾಗ್
ಬರ್ಗಂಡಿ ಬಣ್ಣದ ಲಾಂಗ್ ಸ್ಯಾಟಿನ್ ಡ್ರೆಸ್ ಇದಾಗಿದ್ದು, ಮದುವೆ ಮತ್ತು ಪಾರ್ಟಿಗಳಿಗೆ ಈ ಡ್ರೆಸ್ ಧರಿಸಬಹುದಾಗಿದೆ. ಈ ಸ್ಟೈಲಿಶ್ ಡ್ರೆಸ್ ನಿಮಗೆ ರಾಜಾಕುಮಾರಿಯಂತಹ ಲುಕ್ ನೀಡುತ್ತದೆ. ಆಫ್ ಫ್ ಶೋಲ್ಡರ್ ಗೊಳಿಸಿ, ಎಂಬ್ರೋಡರಿ ವರ್ಕ್ ಮೂಲಕ ಈ ಗೌವ್ನ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಬ್ಲೂ ಕಲರ್ ಶಾರ್ಟ್
ಬ್ಲೂ ಕಲರ್‍ನ ಈ ಸ್ಯಾಟಿನ್ ಡ್ರೆಸ್ ಮಾಡರ್ನ್ ಲುಕ್ ನೀಡುತ್ತದೆ. ಇದು ಸಂಜೆಯ ವೇಳೆ ನಡೆಯುವ ಪಾರ್ಟಿಗಳಿಗೆ ಸೂಟ್ ಆಗುತ್ತದೆ. ಡೀಪ್ ನೆಕ್ ಹಾಗೂ ಮೊಣಕಾಲುದ್ದ ಈ ಡ್ರೆಸ್ ವಿನ್ಯಾಸಗೊಳಿಸಲಾಗಿದ್ದು, ಇದು ನಿಮಗೆ ಫ್ರಾಕ್ ಧರಿಸಿದ ಫೀಲ್ ನೀಡುತ್ತದೆ. ಅಲ್ಲದೇ ಇತರರ ಮಧ್ಯೆ ನೀವು ಸಖತ್ ವಿಭಿನ್ನವಾಗಿ ಕಾಣಿಸುತ್ತೀರಿ. ಇದನ್ನೂ ಓದಿ: ಗದ್ದೆಗೆ ಹೋಗೋ ನೆಪದಲ್ಲಿ ಬಾವಿಗೆ ತಳ್ಳಿ ಹೆಂಡ್ತಿ ಕೊಲೆ – ಅಪರಾಧಿಗೆ ಜೀವಾವಧಿ ಶಿಕ್ಷೆ
ಶಾರ್ಟ್ ಸ್ಯಾಟಿನ್ ಸ್ಲಿಪ್ ಡ್ರೆಸ್
ಸಿಲ್ವರ್ ಕಲರ್ ಸ್ಯಾಟಿನ್ ಸ್ಲಿಪ್ ಡ್ರೆಸನ್ನು ನೀವು ಯಾವಾಗ ಬೇಕಾದರೂ ಧರಿಸಬಹುದು. ಇದರಲ್ಲಿ ಹಲವು ಬಣ್ಣಗಳ ಡ್ರೆಸ್‍ಗಳಿದ್ದು, ಅವುಗಳಲ್ಲಿ ಸಿಲ್ವರ್ ಬಣ್ಣ ಕೂಡ ಒಂದಾಗಿದೆ. ನೀವು ಔಟಿಂಗ್ ಹೋಗುವ ವೇಳೆ ಈ ಡ್ರೆಸ್‍ನನ್ನು ಧರಿಸಬಹುದಾಗಿದೆ ಮತ್ತು ಇದು ನಿಮಗೆ ಸಖತ್ ಹೊಳಪು ನೀಡುತ್ತದೆ. ಜೊತೆ ಈ ಡ್ರೆಸ್ ಧರಿಸಲು ಬಹಳ ಆರಾಮದಾಯಕವಾಗಿದೆ.
ರೆಡ್ ಸ್ಯಾಟಿನ್ ಡ್ರೆಸ್
ಕೆಂಪು ಬಣ್ಣದ ಸ್ಯಾಟಿನ್ ಡ್ರೆಸ್ ಇದಾಗಿದ್ದು, ಭುಜದ ಭಾಗದಲ್ಲಿ ಬಹಳ ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ. ನಿಮಗೆ ಹಳೆಯ ಡಿಸೈನ್‍ಗಳ ಉಡುಪು ಧರಿಸಿ ಬೇಸರವಾಗಿದ್ದರೆ, ಈ ಡ್ರೆಸ್‍ನನ್ನು ಟ್ರೈ ಮಾಡಬಹುದು. ಇದು ನಿಮಗೆ ಚೇಂಜ್ ಲುಕ್ ನೀಡುತ್ತದೆ. ಈ ಬಣ್ಣ ನಿಮಗೆ ಅದ್ಭುತ ಲುಕ್ ನೀಡುತ್ತದೆ. ಇದನ್ನೂ ಓದಿ: ಸರ್ಕಾರ ಕೊಟ್ಟ ಮಾತಿನಂತೆ ನಡೆಯದಿದ್ದರೇ ರಾಜ್ಯದಲ್ಲಿ ದೊಡ್ಡ ಕ್ರಾಂತಿಯಾಗಲಿದೆ: ಕಾಶಪ್ಪನವರ್
ಹುಬ್ಬಳ್ಳಿ: ನಗರದ ಹಳೇ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯೊಬ್ಬಳು ಕೈ ಸನ್ನೆ ಮಾಡಿ ಯುವಕನೊಬ್ಬನನ್ನು ಆಟೋದಲ್ಲಿ ಬಂಜಾರ ಕಾಲನಿ ಬಳಿ ಕರೆದುಕೊಂಡು ಹೋಗಿ ಸಹಚರರಿಂದ ಹಲ್ಲೆ ಮಾಡಿ ಮೊಬೈಲ್ ಹಾಗೂ ನಗದು ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ.
ಹುಬ್ಬಳ್ಳಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ರಾಯಚೂರು ಮೂಲದ ಶಿರಡಿ ನಗರ ಹಾಸ್ಟೆಲ್‍ನಲ್ಲಿ ವಾಸವಿರುವ ಕುಮಾರ ಚವ್ಹಾಣ್ ಹಲ್ಲೆಗೀಡಾದ ಯುವಕ, ಬಟ್ಟೆ ಖರೀದಿಸಲು ಮಾರುಕಟ್ಟೆಗೆ ಬಂದಿದ್ದ ಕುಮಾರ ಚವ್ಹಾಣ್, ಬಟ್ಟೆ ಖರೀದಿಸಿ ಹಾಸ್ಟೆಲ್‍ಗೆ ತೆರಳಲು ಹಳೇ ಬಸ್ ನಿಲ್ದಾಣಕ್ಕೆ ಬಂದಿದ್ದ. ಈ ವೇಳೆ ಈತನನ್ನು ನೋಡಿ ಮಹಿಳೆಯೊಬ್ಬಳು ಕೈಸನ್ನೆ ಮಾಡಿ ಕರೆದಿದ್ದಾಳೆ. ಬಳಿಕ ಆ ಮಹಿಳೆ ಈತನನ್ನು ಆಟೋದಲ್ಲಿ ಸುತ್ತಾಡಿಸಿ ಕೊನೆಗೆ ಬಂಜಾರ ಕಾಲನಿ ಕಡೆಗೆ ಕರೆದೊಯ್ದು. ಜೊತೆಗಿದ್ದ ಮೂವರು ಸಹಚರರು ಕುಮಾರನಿಗೆ ಹಲ್ಲೆ ಮಾಡಿ, 17 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಹಾಗೂ 5,000 ರೂಪಾಯಿ ನಗದು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದವಳು ನೆರೆ ಮನೆಯವನೊಂದಿಗೆ ಎಸ್ಕೇಪ್- ವೀಡಿಯೋ ಮಾಡಿ ಪತಿ ಆತ್ಮಹತ್ಯೆ
ತನ್ನ ಮೇಲೆ ಹಲ್ಲೆಗೆ ಮುಂದಾಗುತ್ತಿದ್ದಂತೆ ಕುಮಾರ ಆಟೋದಿಂದ ಜಿಗಿದು ತಪ್ಪಿಸಿಕೊಂಡು ಬಂದು, ಮುಜಮಿ, ವೆಂಕಟೇಶ್, ಗೀತಾ ಮತ್ತು ಶಬ್ಬಿರ್ ಹಲ್ಲೆ ನಡೆಸಿರುವ ಬಗ್ಗೆ ಗೋಕುಲ ರೋಡ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಸಿನಿಮಾ ಸ್ಟೈಲ್‍ನಲ್ಲಿ ಪತ್ನಿ ಕೊಲೆಗೆ ಸ್ಕೆಚ್- ವಿಫಲವಾದ ನಂತ್ರ ಚಾಕುವಿಂದ ಇರಿದು ಕೊಂದ!