Tag: women

  • ಅಕ್ರಮ ಮಾರಾಟ – ಮನೆಗೆ ನುಗ್ಗಿ ಮದ್ಯಗಳನ್ನು ನಾಶಗೊಳಿಸಿದ ಮಹಿಳೆಯರು

    ಅಕ್ರಮ ಮಾರಾಟ – ಮನೆಗೆ ನುಗ್ಗಿ ಮದ್ಯಗಳನ್ನು ನಾಶಗೊಳಿಸಿದ ಮಹಿಳೆಯರು

    ಕಾರವಾರ: ಅಕ್ರಮವಾಗಿ ದಂಧೆ ಮಾಡುತ್ತಿದ್ದವರ ಮನೆಗಳಿಗೆ ನೂರಾರು ಮಹಿಳೆಯರು ನುಗ್ಗಿ, ಮಾರಾಟಕ್ಕೆ ತರಲಾಗಿದ್ದ ಮದ್ಯದ ಪೊಟ್ಟಣಗಳನ್ನು ಪತ್ತೆ ಹಚ್ಚಿ ನಾಶಪಡಿಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ನಡೆದಿದೆ.

    ತಾಲೂಕಿನ ಕಣ್ಣಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಳಿಕೇರಿ ಸಮೀಪದ ದೇಶಪಾಂಡೆ ನಗರದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಹಾಗೂ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೂ ಅಧಿಕಾರಿಗಳು ಕ್ರಮ ಜರುಗಿಸದೇ ನಿರ್ಲಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆಯರೇ ಅಕ್ರಮ ಮದ್ಯವನ್ನು ನಾಶ ಪಡಿಸಿದ್ದಾರೆ.

    ಗ್ರಾಮದ ಕೆಲವು ಮನೆಗಳು ಹಾಗೂ ಬಾರ್ ಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಹಲವು ಯುವಕರು ಮದ್ಯದ ವ್ಯಸನದಿಂದ ಅನಾರೋಗ್ಯ ಪೀಡಿತರಾಗಿದ್ದರು. ಅಕ್ರಮ ಮದ್ಯ ಮಾರಾಟ ಸಂಬಂಧಿಸಿದಂತೆ ಇಲಾಖೆಗಳಿಗೆ ದೂರು ನೀಡಿದರೂ, ಕ್ರಮ ಕೈಗೊಳ್ಳದಿದ್ದರಿಂದ ಅಕ್ರಮ ಮದ್ಯ ಮಾರಾಟ ಅಧಿಕವಾಗಿ ನಡೆಯುತ್ತಿತ್ತು.

    ಇದರಿಂದ ಆಕ್ರೋಶಗೊಂಡ ಸ್ಥಳೀಯ ಮಹಿಳೆಯರು ಹಾಗೂ ಮಂಜುನಾಥ ಪ್ರಗತಿ ಬಂಧು ಸಂಘದ ಸದಸ್ಯರು ಇಂದು ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗಳು ಹಾಗೂ ಮನೆಗೆ ತೆರಳಿ ಅಕ್ರಮ ಮದ್ಯವನ್ನು ಪತ್ತೆ ಮಾಡಿ ನಾಶ ಪಡಿಸಿದ್ದಾರೆ.

    ತಾಲೂಕಿನಲ್ಲಿ ನಡೆಯುತ್ತಿರುವ ಇಂತಹ ಅನೇಕ ಕಾನೂನು ಬಾಹಿರ ಚಟುವಟಿಕೆಗಳಿಗೆ ಸ್ಥಳೀಯ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇದು ಜಿಲ್ಲೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಶಿರಸಿ ಡಿವೈಎಸ್ಪಿ ಹಾಗೂ ಶಿರಸಿ ಉಪ ವಿಭಾಗಾಧಿಕಾರಿಗಳು ಯಲ್ಲಾಪುರದಲ್ಲಿಯೇ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಸಬೇಕು ಎಂದು ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಟ್ರ್ಯಾಕ್ಟರ್‌ಗೆ ಗುದ್ದಿದ ಕಾರ್- ಐದು ಮಂದಿ ಸ್ಥಳದಲ್ಲೇ ಸಾವು

    ಶ್ರೀ ಮಂಜುನಾಥ ಪ್ರಗತಿ ಬಂಧು ಸಂಘದ ಸದಸ್ಯರಾದ ನಕಲಿ ದೂಳು ಕೊಕರೆ, ನಾಗಿ ಲಕ್ಕು ಕೊಕರೆ, ಶೋಭಾ ದೋಂಡು ಕೊಕರೆ, ಸಾವಿತ್ರಿ ಮಾಕು ಕೊಕರೆ, ನಕಲಿ ನಾವು ಪಟಕಾರೆ, ಸವಿತಾ ಜಾನು ಖರಾತ್, ಕಣ್ಣಿಗೇರಿ ಗ್ರಾಮ ಪಂಚಾಯ್ತಿ ಸದಸ್ಯೆ ಲಕ್ಷ್ಮೀ ವಸಂತ ಪಾಟೀಲ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು. ಇದನ್ನೂ ಓದಿ: ಕೆಟ್ಟದಾಗಿ ಮುಟ್ಟಿದ್ದಕ್ಕಾಗಿ ಛೀಮಾರಿ ಹಾಕಿದ ಮಹಿಳೆಯನ್ನೇ ಕೊಲ್ಲಲು ಮುಂದಾದ ವ್ಯಕ್ತಿ ಅರೆಸ್ಟ್

  • ಅಕ್ರಮ ಬಡ್ಡಿ ವ್ಯವಹಾರ ಶಂಕೆ – ಮಹಿಳೆಯ ಮೇಲೆ ಶೂಟೌಟ್

    ಅಕ್ರಮ ಬಡ್ಡಿ ವ್ಯವಹಾರ ಶಂಕೆ – ಮಹಿಳೆಯ ಮೇಲೆ ಶೂಟೌಟ್

    ಚಿಕ್ಕೋಡಿ: ಅಕ್ರಮವಾಗಿ ಬಡ್ಡಿ ವ್ಯವಹಾರದ ಕೋಪಕ್ಕೆ ಮಹಿಳೆಯ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ನಿವಾಸಿ ಶೈಲಾ ನಿರಂಜನ ಸುಭೇದಾರ್ (56) ಎಂಬುವವರ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಲಾಗಿದೆ. ಆರೋಪಿಗಳು ನಿರಂಜನ ಸುಭೇದಾರ್ ತಲೆಗೆ ಪಿಸ್ತೂಲಿನಿಂದ ಶೂಟ್ ಮಾಡಿ ಪರಾರಿ ಆಗಿದ್ದಾರೆ. ಇತ್ತ ಕೊಲೆಯಾದ ಮಹಿಳೆ ಅಕ್ರಮವಾಗಿ ಬಡ್ಡಿ ವ್ಯವಹಾರ ನಡೆಸುತ್ತಿದ್ದರೆಂಬ ಮಾತು ಕೇಳಿ ಬರುತ್ತಿದ್ದು, ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇದನ್ನೂ ಓದಿ: ಸಾಲ ವಸೂಲಿಗಾಗಿ ವೃದ್ಧೆಗೆ ಬಂದೂಕು ತೋರಿಸಿ ಹೆದರಿಸಿದ ಆಸಾಮಿ

    ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಕೊಲೆಗೆ ಬಡ್ಡಿ ವ್ಯವಹಾರ ಕಾರಣ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಿಸೆಸ್ ವರ್ಲ್ಡ್ 2022 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಹಳ್ಳಿ ಸುಂದರಿ ನವ್ದೀಪ್ ಕೌರ್

  • ಮಹಿಳೆಯರಿಗೆ ಸೂಟ್ ಆಗುವಂತಹ 5 ಬೆಸ್ಟ್ ಆರ್ಟಿಫಿಶಿಯಲ್ ಫ್ಲವರ್ ಹೇರ್ ಸ್ಟೈಲ್‍ಗಳು

    ಮಹಿಳೆಯರಿಗೆ ಸೂಟ್ ಆಗುವಂತಹ 5 ಬೆಸ್ಟ್ ಆರ್ಟಿಫಿಶಿಯಲ್ ಫ್ಲವರ್ ಹೇರ್ ಸ್ಟೈಲ್‍ಗಳು

    ದುವೆ ಸಮಾರಂಭಗಳಲ್ಲಿ ಮಹಿಳೆಯರ ಅಂದವನ್ನು ಮತ್ತಷ್ಟು ಹೆಚ್ಚಿಸುವುದೇ ಹೇರ್ ಸ್ಟೈಲ್. ಮದುವೆ ವೇಳೆ ನಿಮ್ಮ ಉಡುಪು, ಆಭರಣಗಳು, ಪಾದರಕ್ಷೆಗಳ ಮೇಲೆ ಎಷ್ಟು ಗಮನ ಹರಿಸುತ್ತಿರೋ ಅಷ್ಟೇ ಗಮನ ನಿಮ್ಮ ಕೇಶ ವಿನ್ಯಾಸದ ಮೇಲೂ ನೀಡಬೇಕು. ಆದರೆ ಎಷ್ಟೋ ಮಂದಿಗೆ ಫ್ಲವರ್ ಹೇರ್ ಸ್ಟೈಲ್ ಬಗ್ಗೆ ತಿಳಿದೇ ಇರುವುದಿಲ್ಲ. ಆದರೆ ನೀವು ನಿಜವಾಗಿಯೂ ಮದುವೆ ಸಮಾರಂಭಗಳಲ್ಲಿ ಎಲ್ಲರ ಮಧ್ಯೆ ಮಿಂಚಬೇಕಿದ್ದರೆ ಕೆಲವೊಂದು ಫ್ಲವರ್ ಹೇರ್ ಸ್ಟೈಲ್ ಮಾಡಿಕೊಳ್ಳಬೇಕಾಗುತ್ತದೆ. ಈ ಕುರಿತ ಕೆಲವು ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

    ಕ್ರೌನ್ ಪರ್ಲ್ ಫ್ಲವರ್ ಹೇರ್ ಸ್ಟೈಲ್
    ಮದುವೆಯ ಸಮಾರಂಭದಲ್ಲಿ ಮಹಿಳೆಯರು ಧರಿಸಲು ಕ್ರೌನ್ ಪರ್ಲ್ ಫ್ಲವರ್ ಹೇರ್ ಸ್ಟೈಲ್ ಬೆಸ್ಟ್ ಎಂದೇ ಹೇಳಬಹುದು. ಇದು ನಿಮ್ಮ ಕೂದಲಿಗೆ ಗ್ಲಾಮರ್ ಲುಕ್ ನೀಡುವುದರ ಜೊತೆಗೆ ಮತ್ತು ಸುಂದರವಾಗಿ ಕಾಣಿಸುತ್ತದೆ. ಇದರಲ್ಲಿ ಸೊಗಸಾದ ಸಣ್ಣ, ಸಣ್ಣ ಮುತ್ತಿನಿಂದ ಹೂವಿನ ಮಾದರಿ ನಿಮ್ಮ ಕೂದಲನ್ನು ಸಿಂಗರಿಸಲಾಗಿರುತ್ತದೆ.

    ಆರ್ಟಿಫಿಶಿಯಲ್ ಫ್ಲವರ್ ಹೇರ್ ಸ್ಟೈಲ್
    ನಿಮ್ಮ ಕೂದಲು ಸಿಂಪಲ್ ಆಗಿದ್ದರೂ ಈ ಆರ್ಟಿಫಿಶಿಯಲ್ ಫ್ಲವರ್ ಹೇರ್ ಪಿನ್ ನಿಮ್ಮ ಕೂದಲಿಗೆ ರಿಚ್ ಲುಕ್ ನೀಡುತ್ತದೆ. ಇದು ಲೈಟ್‌ವೇಟ್ ಆಗಿರುವುದರ ಜೊತೆಗೆ ಧರಿಸಲು ಆರಾಮದಾಯಕವಾಗಿರುತ್ತದೆ ಮತ್ತು ಬಹಳ ದಿನ ಬಾಳಿಕೆ ಬರುತ್ತದೆ. ಮದುವೆಯ ಸಮಯದಲ್ಲಿ ನೀವು ಇದನ್ನು ಧರಿಸಿದರೇ ನಿಮಗೆ ಯಾವುದೇ ಕೇಶ ವಿನ್ಯಾಸಕರ ಅಗತ್ಯವಿಲ್ಲರುವುದಿಲ್ಲ.

    ವೈಟ್ ಆ್ಯಂಡ್ ರೆಡ್ ಜುಡಾ ಪಿನ್ ಹೇರ್ ಸ್ಟೈಲ್
    ನಿಮ್ಮ ಕೂದಲಿಗೆ ಬನ್ ಸೂಟ್ ಆಗುತ್ತದೆ ಅಂದ್ರೆ, ನೀವು ಕೂದಲಿಗೆ ಬನ್ ಧರಿಸಲು ಇಷ್ಟಪಡುತ್ತಿದ್ದರೆ, ರೋಸ್‍ನಿಂದ ತಯಾರಿಸಲಾಗಿರುವ ಆರ್ಟಿಫಿಶಿಯಲ್ ಫ್ಲವರ್ ಹೇರ್ ಬನ್ ಖರೀದಿಸಿ. ಇದು ನೋಡಲು ನಿಜವಾಗಿಯೂ ಹೂವು ಮೂಡಿದಿರುವಂತೆ ಕಾಣಿಸುತ್ತದೆ. ನಿಜಕ್ಕೂ ನೀವು ಇದನ್ನು ಬಹಳ ಇಷ್ಟಪಡುತ್ತೀರಾ ಎಂದೇ ಹೇಳಬಹುದು.

    ಗಜ್ರಾ(ಮಲ್ಲಿಗೆ) ಹೇರ್ ಬನ್
    ಭಾರತದಲ್ಲಿ ಕಂಡು ಬರುವ ಸಾಮಾನ್ಯವಾದ ಹೇರ್ ಸ್ಟೈಲ್ ಗಜ್ರಾ ಹೇರ್ ಸ್ಟೈಲ್. ಈ ಹೇರ್ ಸ್ಟೈಲ್ ಬಹಳಷ್ಟು ಹೊತ್ತು ಇರುವುದರ ಜೊತೆಗೆ ಸುರಕ್ಷಿತವಾಗಿರುತ್ತದೆ. ಕಡಿಮೆ ಹಾಗೂ ಉದ್ದನೆಯ ಕೂದಲನ್ನು ಹೊಂದಿರುವವರಿಗೆ ಈ ಹೇರ್ ಸ್ಟೈಲ್ ಬೆಸ್ಟ್ ಆಗಿರುತ್ತದೆ. ಈ ಹೇರ್ ಬನ್‍ಅನ್ನು ಮಲ್ಲಿಗೆ ಹೂವಿನ ಮಾದರಿ ವಿನ್ಯಾಸಗೊಳಿಸಲಾಗಿರುತ್ತದೆ. ಇದು ನಿಮಗೆ ದೇಸಿ ಲುಕ್ ನೀಡುತ್ತದೆ.

    ಆರ್ಟಿಫಿಶಿಯಲ್ ಫ್ಲವರ್ ಹೇರ್ ಪಿನ್
    ಈ ಹೇರ್ ಸ್ಟೈಲ್ ವಧುವಿಗೆ ಕಂಪ್ಲೀಟ್ ಲುಕ್ ನೀಡುತ್ತದೆ. ಈ ಹೇರ್ ಪಿನ್ ಕ್ರಿಶ್ಚಿಯನ್ ಸಂಪ್ರದಾಯಿಕ ಅಥವಾ ಹಿಂದೂ ಸಾಂಪ್ರದಾಯಕ ವಿವಾಹವಾಗಲಿ ಎಲ್ಲದಕ್ಕೂ ಅಚ್ಚುಕಟ್ಟಾಗಿ ಕಾಣಿಸುತ್ತದೆ ಮತ್ತು ಎಲ್ಲ ರೀತಿಯ ಡ್ರೆಸ್‍ಗಳಿಗೂ ಸೂಟ್ ಆಗುತ್ತದೆ. ಇದು ನೋಡಲು ಸುಂದರವಾದ ಸರಳ ಮತ್ತು ಧರಿಸಲು ಸುಂದರವಾದ ಹೇರ್ ಪಿನ್ ಆಗಿದ್ದು, ನಿಮ್ಮ ಕೂದಲು ಎಲ್ಲರ ಹೇರ್ ಸ್ಟೈಲ್ ಮಧ್ಯೆ ಹೈಲೈಟ್ ಆಗಿ ಕಾಣಿಸುತ್ತದೆ.

  • ನಾವು ಅಧಿಕಾರಕ್ಕೆ ಬಂದ್ರೆ ಮಹಿಳೆಯರಿಗೆ ತಿಂಗಳಿಗೆ 1 ಸಾವಿರ: ಕೇಜ್ರಿವಾಲ್

    ನಾವು ಅಧಿಕಾರಕ್ಕೆ ಬಂದ್ರೆ ಮಹಿಳೆಯರಿಗೆ ತಿಂಗಳಿಗೆ 1 ಸಾವಿರ: ಕೇಜ್ರಿವಾಲ್

    ನವದೆಹಲಿ: ಆ್ಯಪ್ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್, ಮಹಿಳೆಯರಿಗೆ ತಿಂಗಳಿಗೆ 1 ಸಾವಿರ ರೂಪಾಯಿ ನೀಡಲಾಗುತ್ತದೆ. ಮತದಾರರಿಗೆ ಪಂಜಾಬ್ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.

    ಮೊಹಾಲಿಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ ಐದು ವರ್ಷಗಳಲ್ಲಿ ಪಂಜಾಬ್ ರಾಜ್ಯವನ್ನು ಸಮೃದ್ಧಗೊಳಿಸಲಾಗುವುದು. ಎಲ್ಲರಿಗೂ ಉದ್ಯೋಗ ಅವಕಾಶವನ್ನು ನೀಡಿತ್ತೇವೆ. ಪಂಜಾಬ್‍ನಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿ ಮಹಿಳೆಗೆ ತಿಂಗಳಿಗೆ 1 ಸಾವಿರ ರೂಪಾಯಿ ನೀಡುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಕುಡಿದು ಬಂದ ಪತಿಯ ಕತ್ತು ಹಿಸುಕಿ ಕೊಂದ ಪತ್ನಿ!

    ಭ್ರಷ್ಟಾಚಾರವನ್ನು ಕೊನೆಗೊಳಿಸುತ್ತೇವೆ ಹಾಗೂ ನಾವು 16,000 ಮೊಹಲ್ಲಾ ಕ್ಲಿನಿಕ್‍ಗಳನ್ನು ಸ್ಥಾಪಿಸುತ್ತೇವೆ ಮತ್ತು ಪ್ರತಿ ಪಂಜಾಬಿಗೆ ಉಚಿತ ಚಿಕಿತ್ಸೆ ನೀಡುತ್ತೇವೆ. ಆಮ್ ಆದ್ಮಿ ಪಾರ್ಟಿ ಸರ್ಕಾರವು ರೈತರ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಹಿಟ್ಟಿನ ಮೇಲೆ ಉಗುಳಿ ರೊಟ್ಟಿ ಮಾಡಿದವನು ಸೇರಿ 5 ಜನ ಅರೆಸ್ಟ್ 

  • BBMP ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ

    BBMP ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ

    ಬೆಂಗಳೂರು: ಬಿಬಿಎಂಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತವನ್ನು ಮಾಡಲಾಗಿದೆ.

    ಬಸವನಗುಡಿಯ ಎನ್‍ಆರ್ ಕಾಲೋನಿಯ ಪಾಲಿಕೆ ಹೆರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 60 ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದನ್ನೂ ಓದಿ: ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ – ಶನಿವಾರ, ಭಾನುವಾರ ಕಂಪ್ಲೀಟ್‌ ಬಂದ್

    ಕಟ್ಟೆ ಸತ್ಯ ಫೌಂಡೇಷನ್ ಮತ್ತು ರಾಧಕೃಷ್ಣ ಆಸ್ಪತ್ರೆ ಸಹಯೋಗದೊಂದಿಗೆ ಡಾ.ಸಿ ಅಶ್ವಥ್ ಕಲಾ ಭವನನಲ್ಲಿನಡೆದ ಕಾರ್ಯಕ್ರಮವನ್ನ ನಟಿ ಸುಧಾರಣಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ನಟಿ ಸುಧಾರಾಣಿ, ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತೋಷವಾಗುತ್ತಿದೆ. ಎಷ್ಟೋ ಹೆಣ್ಣು ಮಕ್ಕಳಿಗೆ ಸೀಮಂತದ ಕ್ಷಣಗಳನ್ನ ಆನಂದಿಸೋಕೆ ಸಾಧ್ಯವಾಗುವುದಿಲ್ಲ. ಇಂತಹ ಕಾರ್ಯಕ್ರಮಗಳ ಮೂಲಕ ಸಾಧ್ಯವಾಗದ ಗರ್ಭಿಣಿಯರಿಗೆ ಸೀಮಂತ ಮಾಡುತ್ತಿರುವುದು ಬಹಳ ಸಂತೋಷ ಎಂದಿದ್ದಾರೆ. ಇದನ್ನೂ ಓದಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍ಗೆ ಕೊರೊನಾ

    ಹೆಣ್ಣು ಮಕ್ಕಳಿಗೆ ತಾಯ್ತನದ ಹಂತ ಬಹಳ ಶ್ರೇಷ್ಠವಾದದ್ದು. ಇಂತಹ ಸಂಧರ್ಭದಲ್ಲಿ ಸಂತೋಷದಿಂದ ಮತ್ತು ಎಚ್ಚರದಿಂದಿರಬೇಕು. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ, ನಿಮ್ಮ ತಾಯಿ ತನದ ದಿನಗಳನ್ನ ಆರೋಗ್ಯದಿಂದ ಆನಂದಿಸಿ ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಮೇಯರ್ ಸತ್ಯನಾರಾಯಣ, ಶಾಸಕ ರವಿ ಸುಬ್ರಹ್ಮಣ್ಯ, ಫೌಂಡೇಶನ್ ಅಧ್ಯಕ್ಷ ಸುಧೀಂದ್ರ ಭಾಗಿಯಾಗಿದ್ದರು.

  • ಲೈಂಗಿಕತೆ ವಿಚಾರದಲ್ಲಿ ಮಗಳಿಗೆ ಬುದ್ಧಿ ಹೇಳಿಕೊಡ್ಬೇಡಿ, ಮಗನಿಗೆ ಕಲಿಸಿಕೊಡಿ: ಸಮಂತಾ

    ಲೈಂಗಿಕತೆ ವಿಚಾರದಲ್ಲಿ ಮಗಳಿಗೆ ಬುದ್ಧಿ ಹೇಳಿಕೊಡ್ಬೇಡಿ, ಮಗನಿಗೆ ಕಲಿಸಿಕೊಡಿ: ಸಮಂತಾ

    ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ಮಹಿಳೆಯ ಲೈಂಗಿಕತೆಯ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕುವ ಮೂಲಕವಾಗಿ ಸುದ್ದಿಯಲ್ಲಿದ್ದಾರೆ.

    ಲೈಂಗಿಕತೆಯ ವಿಚಾರದಲ್ಲಿ ಮಗಳಿಗೆ ಬುದ್ಧಿ ಹೇಳುವ ಬದಲು ಮಹಿಳೆಯರನ್ನು ನಿಯಂತ್ರಿಸದಂತೆ ಮಗನಿಗೆ ಕಲಿಸಿಕೊಡಿ. ಏಕೆಂದರೆ ನಿಮ್ಮ ಮಗಳಿಗೆ ಲೈಂಗಿಕತೆಯ ಹಕ್ಕನ್ನು ನಿರಾಕರಿಸುವುದು, ಅವಳನ್ನು ವಸ್ತುವನ್ನಾಗಿಸುವ ಇನ್ನೊಂದು ಮಾರ್ಗವಾಗಿದೆ ಎಂದು ಇನ್‍ಸ್ಟಾಗ್ರಾಮ್ ಸ್ಟೋರಿಸ್‍ನಲ್ಲಿ ಸಮಂತಾ ತಿಳಿಸಿದ್ದಾರೆ.

    ಸಮಂತಾ  ಪುಷ್ಪ ಸಿನಿಮಾದಲ್ಲಿ ಊ..ಅಂಟಾವಾ..  ಐಟಂ  ಮಾದಕವಾಗಿ ಹೆಜ್ಜೆ ಹಾಕಿ ಸುದ್ದಿಯಾಗಿದ್ದರು. ಅವರ ಮಾದಕ ನೃತ್ಯವನ್ನು ಹಲವರು ಮೆಚ್ಚುಗೆ, ಆಕ್ಷೇಪ ವ್ಯಕ್ತಪಡಿಸಿದ್ದರು.  ಮೊದಲ ಬಾರಿಗೆ ಐಟಂ ಸಾಂಗ್‍ನಲ್ಲಿ ಕಾಣಿಸಿಕೊಂಡಿದ್ದ ಸಮಂತಾ  ಟ್ರೋಲ್‍ಗೆ ಒಳಗಾಗಿದ್ದರು.

    ಸಮಂತಾ ಅವರು ಇತ್ತೀಚೆಗೆ ನಟ ನಾಗಚೈತನ್ಯರಿಂದ ವಿಚ್ಛೇದನ ಪಡೆದಿದ್ದು, ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ವಿಭಿನ್ನ ಪಾತ್ರಗಳಲ್ಲಿ ಕಾಣಿಕೊಳ್ಳುವ ಮೂಲಕವಾಗಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ಕೆಲವು ವಿಚಾರಗಳ ಕುರಿತಾಗಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ವ್ಯಕ್ತಪಡಿಸುತ್ತಿರುತ್ತಾರೆ.

  • 4 ಬಾರಿ ಕೋವಿಡ್‌ ಲಸಿಕೆ ಪಡೆದಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್‌

    4 ಬಾರಿ ಕೋವಿಡ್‌ ಲಸಿಕೆ ಪಡೆದಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್‌

    ಭೋಪಾಲ್: ನಾಲ್ಕು ಬಾರಿ ಕೋವಿಡ್-‌19 ಲಸಿಕೆಯನ್ನು ಪಡೆದಿದ್ದ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟಿದೆ. ದುಬೈನಿಂದ ಇಂದೋರ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

    ವಿಮಾನ ನಿಲ್ದಾಣದಲ್ಲಿ ಮಹಿಳೆಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಕೋವಿಡ್‌ ಇರುವುದು ದೃಢಪಟ್ಟಿದೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಯಾವುದೇ ರೋಗ ಲಕ್ಷಣಗಳಿಲ್ಲ ಎಂದು ವೈದ್ಯ ಭುರೆ ಸಿಂಗ್‌ ಸೇಟಿಯಾ ಹೇಳಿದ್ದಾರೆ. ಇದನ್ನೂ ಓದಿ: ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ರತನ್ ಟಾಟಾ

    12 ದಿನಗಳ ಹಿಂದೆ ಮಹಿಳೆ ದುಬೈನಿಂದ ಇಂದೋರ್‌ಗೆ ಆಗಮಿಸಿದ್ದರು. ನಿಯಮದಂತೆ ಅವರನ್ನು ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಪತ್ತೆಯಾಗಿದೆ.

    30 ವರ್ಷ ವಯಸ್ಸಿನ ಮಹಿಳೆ ಬೇರೆ ಬೇರೆ ದೇಶಗಳಲ್ಲಿ ಜನವರಿ ಮತ್ತು ಆಗಸ್ಟ್‌ ಅವಧಿಯಲ್ಲಿ ನಾಲ್ಕು ಡೋಸ್ ಕೋವಿಡ್‌ ವ್ಯಾಕ್ಸಿನ್‌ ಹಾಕಿಸಿಕೊಂಡಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಐವರಿಗೆ ಓಮಿಕ್ರಾನ್ ದೃಢ – 43ಕ್ಕೇರಿದ ಸೋಂಕಿತರ ಸಂಖ್ಯೆ

  • ಮದುವೆಯಾಗಲು ನಿರಾಕರಿಸಿದ್ದಕ್ಕೆ ವ್ಯಕ್ತಿಯ ಮನೆ, ಆಟೋಗೆ ಬೆಂಕಿ ಹಚ್ಚಿದ ಮಹಿಳೆ!

    ಮದುವೆಯಾಗಲು ನಿರಾಕರಿಸಿದ್ದಕ್ಕೆ ವ್ಯಕ್ತಿಯ ಮನೆ, ಆಟೋಗೆ ಬೆಂಕಿ ಹಚ್ಚಿದ ಮಹಿಳೆ!

    ಬೀದರ್: ಮದುವೆಯಾಗಲು ನಿರಾಕರಿಸಿದ ವ್ಯಕ್ತಿಯ ಮನೆ ಹಾಗೂ ಆಟೋಗೆ ಮಹಿಳೆ ಬೆಂಕಿ ಹಚ್ಚಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಾಗ್ ಹಿಪ್ಪರಗಾ ಗ್ರಾಮದಲ್ಲಿ ನಡೆದಿದೆ.

    ಭೀಮರಾವ್ ಎಂಬಾತ ಸುಮಾ ಎಂಬ ಮಹಿಳೆಯನ್ನು ಮದುವೆಯಾಗಲು ನಿರಾಕರಿಸಿದ್ದರು. ಈ ಸಿಟ್ಟಿನಿಂದ ಊರು ಬಿಟ್ಟರೂ ವ್ಯಕ್ತಿ ನೆಲೆಸಿದ್ದ ಸ್ಥಳಕ್ಕೆ ಹೋಗಿ ಮಹಿಳೆ ಮನೆ ಹಾಗೂ ಆಟೋಗೆ ಬೆಂಕಿ ಹಾಕಿದ್ದಾಳೆ. ಇದನ್ನೂ ಓದಿ: ಹೆಂಡತಿ, ಮಗುವನ್ನು ಹುಡುಕಿಕೊಟ್ಟವರಿಗೆ 50 ಸಾವಿರ ರೂ. ಬಹುಮಾನ

    ಮೂಲತಃ ಚಿಕನಾಗಾಂವ್ ಗ್ರಾಮದ ನಿವಾಸಿಯಾಗಿದ್ದ ಭೀಮರಾವ್ ಕೆಲವು ದಿನಗಳಿಂದ ಸಸ್ತಾಪೂರ್ ಗ್ರಾಮದ ಸಮೀಪದ ಅಡವಿಯಲ್ಲಿ ಕುಟುಂಬ ಸಮೇತ ವಾಸವಾಗಿದ್ದ. ಈ ವೇಳೆ ಸುಮಾ ಎಂಬ ಮಹಿಳೆ ಪರಿಚಯವಾಗಿದ್ದಾಳೆ. ತನ್ನನ್ನು ಮದುವೆಯಾಗುವಂತೆ ಭೀಮರಾವ್‌ನನ್ನು ಸುಮಾ ಒತ್ತಾಯಿಸಿದ್ದಾಳೆ. ಆಕೆಯ ಕಾಟ ತಾಳಲಾರದೇ ಭೀಮರಾವ್ ತನ್ನ ತಾಯಿ ತವರು ಬಾಗ್ ಹಿಪ್ಪರಗಾ ಗ್ರಾಮದಲ್ಲಿ ವಾಸವಾಗಿದ್ದ.

    ಈ ವಿಷಯ ತಿಳಿದು ಮಹಿಳೆ ಬಾಗ್ ಹಿಪ್ಪರಗಾ ಗ್ರಾಮಕ್ಕೆ ತೆರಳಿ ಮದುವೆ ಮಾಡಿಕೊಳ್ಳಬೇಕು ಎಂದು ಸತಾಯಿಸಿದ್ದಾಳೆ. ಇಲ್ಲದಿದ್ದರೆ ನಾನು ನೀಡಿರುವ 4 ಲಕ್ಷ ರೂ. ವಾಪಸ್‌ ಕೊಡುವಂತೆ ಒತ್ತಾಯಿಸಿದ್ದಾಳೆ. ಇದಕ್ಕೆ ಭೀಮರಾವ್‌ ಒಪ್ಪದೇ ಇದ್ದಾಗ ಇಬ್ಬರ ಸಹಾಯದಿಂದ ಮನೆ ಹಾಗೂ ಆಟೋಗೆ ಮಹಿಳೆ ಬೆಂಕಿ ಹಾಕಿದ್ದಾಳೆ. ಈ ಸಂಬಂಧ ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮೃತ ತಾಯಿಯ ತೋಳುಗಳಲ್ಲಿ 2 ರಾತ್ರಿಗಳನ್ನು ಕಳೆದ 3 ರ ಬಾಲಕಿ!

  • ಪುರುಷ ಸಂಬಂಧಿಗಳು ಜೊತೆಯಲ್ಲಿ ಇಲ್ಲದಿದ್ರೆ ಮಹಿಳೆಯರು ದೂರ ಪ್ರಯಾಣಿಸುವಂತಿಲ್ಲ: ತಾಲಿಬಾನ್‌

    ಪುರುಷ ಸಂಬಂಧಿಗಳು ಜೊತೆಯಲ್ಲಿ ಇಲ್ಲದಿದ್ರೆ ಮಹಿಳೆಯರು ದೂರ ಪ್ರಯಾಣಿಸುವಂತಿಲ್ಲ: ತಾಲಿಬಾನ್‌

    ಕಾಬೂಲ್: ಪುರುಷ ಸಂಬಂಧಿಗಳು ಜೊತೆಯಲ್ಲಿಲ್ಲದಿದ್ದರೆ ಮಹಿಳೆಯರು ಪ್ರವಾಸ ಕೈಗೊಳ್ಳುವಂತಿಲ್ಲ ಎಂದು ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಆದೇಶ ಹೊರಡಿಸಿದೆ.

    ಬುರ್ಕಾ ಧರಿಸಿರುವ ಮಹಿಳೆಯರು ವಾಹನಗಳಲ್ಲಿ ಪ್ರಯಾಣಿಸಬಹುದು. ಬುರ್ಕಾ ಧರಿಸದವರನ್ನು ವಾಹನಗಳಲ್ಲಿ ಕೂರಿಸಿಕೊಳ್ಳುವಂತಿಲ್ಲ ಎಂದು ಆದೇಶದಲ್ಲಿ ತಾಲಿಬಾನ್‌ ತಿಳಿಸಿದೆ. ಇದನ್ನೂ ಓದಿ: ತನ್ನ ಬರ್ತ್‌ಡೇ ಪಾರ್ಟಿ ಸಿದ್ಧತೆಗೆ ಫಾರ್ಮ್‌ಹೌಸ್‌ಗೆ ಹೋಗಿದ್ದ ಸಲ್ಲುಗೆ ಹಾವು ಕಡಿತ!

    ಪುರುಷ ಸಂಬಂಧಿಗಳು 72 ಕಿ.ಮೀ.ಗೂ ಹೆಚ್ಚು ದೂರ ಪ್ರಯಾಣಿಸುವ ಮಹಿಳೆಯರ ಜೊತೆಯಲ್ಲಿ ಕುಟುಂಬದ ಸದಸ್ಯರಿರಬೇಕು. ಇಲ್ಲದಿದ್ದರೆ ಅಂತಹವರಿಗೆ ಪ್ರವಾಸ ನಿಷಿದ್ಧ ಎಂದು ತಾಲಿಬಾನ್‌ ಸಚಿವಾಲಯದ ವಕ್ತಾರ ಸಾದಿಕ್‌ ಅಕಿಫ್‌ ಮುಹಜಿರ್‌ ತಿಳಿಸಿದ್ದಾರೆ.

    ಈ ಮಾರ್ಗಸೂಚಿಯು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ನಟಿಯರನ್ನು ಒಳಗೊಂಡ ನಾಟಕಗಳು ಮತ್ತು ಸೋಪ್‌ ಜಾಹೀರಾತುಗಳನ್ನು ನಿಲ್ಲಿಸುವಂತೆ ಸಚಿವಾಲಯವು ದೂದರ್ಶನ ಚಾನೆಲ್‌ಗಳಿಗೆ ಸೂಚನೆ ನೀಡಿದ ಕೆಲ ದಿನಗಳಲ್ಲೇ ಈ ಮಾರ್ಗಸೂಚಿ ಹೊರಡಿಸಿದೆ. ಇದನ್ನೂ ಓದಿ: ಅಂಕಲ್ ಅಂದಿದ್ದೇ ತಪ್ಪಾಯ್ತು – ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ಅಂಗಡಿ ಮಾಲೀಕ

    ಮಹಿಳಾ ಪತ್ರಕರ್ತರು ದೂರದರ್ಶನದಲ್ಲಿ ಸುದ್ದಿಗಳನ್ನು ವಾಚಿಸುವಾಗ ಕಡ್ಡಾಯವಾಗಿ ಬುರ್ಕಾ ಧರಿಸಬೇಕು ಎಂದು ಖಡಕ್‌ ಸೂಚನೆ ನೀಡಿದೆ. ವಾಹನಗಳಲ್ಲಿ ಯಾರೂ ಸಹ ಹಾಡುಗಳನ್ನು ಹಾಕಬಾರದು. ಸಾರಿಗೆ ವ್ಯವಸ್ಥೆ ಬಯಸುವ ಮಹಿಳೆಯರು ಬುರ್ಕಾ ಧರಿಸಬೇಕು ಎಂದು ತಿಳಿಸಿದೆ.

  • ದರ್ಗಾಗೆ ಹೊರಟವರು ಭೀಕರ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ್ರು

    ದರ್ಗಾಗೆ ಹೊರಟವರು ಭೀಕರ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ್ರು

    ಹೈದರಾಬಾದ್: ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ದುರ್ಮರಣವಾಗಿರುವ ಘಟನೆ ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

    ಈ ಅಪಘಾತದಲ್ಲಿ ಉಳಿದಂತೆ ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಇವರೆಲ್ಲರೂ ಹೈದರಾಬಾದ್‍ನ ಮಲಕ್‍ಪೇಟ್ ಮತ್ತು ಚಾದರ್‍ಘಾಟ್‍ನ ನಿವಾಸಿಗಳು ಎಂದು ಗುರುತಿಸಲಾಗಿದೆ. ಇವರೆಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: BJP ಅವಧಿಯಲ್ಲಿ ಅಭಿವೃದ್ಧಿಯಾಗಿದ್ದು ಮೋದಿ ಸ್ನೇಹಿತರಷ್ಟೇ: ಪ್ರಿಯಾಂಕಾ ಗಾಂಧಿ

    ಟೊಯೊಟಾ ಕ್ವಾಲಿಸ್‍ನಲ್ಲಿ ಎರಡು ಕುಟುಂಬದ 12 ಸದಸ್ಯರು ಮಹಾರಾಷ್ಟ್ರದ ನಾಂದೇಡ್‍ನಲ್ಲಿರುವ ಹಜರತ್ ಶಾ ಕಾಮಿಲ್ ದಾದ್ ದರ್ಗಾಗೆ ಪ್ರಯಾಣಿಸುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 161ರಲ್ಲಿ ವೇಗವಾಗಿ ಬಂದ ಟೊಯೊಟಾ ಕ್ವಾಲಿಸ್ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಕಾರಿನ ರಭಸಕ್ಕೆ ಅದರ ಅರ್ಧ ಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಇದನ್ನೂ ಓದಿ: 7 ವರ್ಷದಲ್ಲಿ ಅವರೇನು ಮಾಡಿದ್ದಾರೆ? – ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ

    ಅಪಘಾತದಲ್ಲಿ ಗಾಯಗೊಂಡವರನ್ನ ಬಾನ್ಸವಾಡ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮೃತದೇಹಗಳನ್ನ ಈಗಾಗಲೇ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಅಪಘಾತಕ್ಕೀಡಾಗಿರುವ ಸಂಬಂಧಿಕರಿಗಾಗಿ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಬಾನ್ಸವಾಡ ಡಿಎಸ್‍ಪಿ ಜೈಪಾಲ್ ರೆಡ್ಡಿ ಭೇಟಿ ನೀಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಅಮೃತಸಾರದ ಸ್ವರ್ಣ ಮಂದಿರ ಅಪವಿತ್ರಗೊಳಿಸಲು ಯತ್ನ – ಕೋಪ್ರೋದ್ರಿಕ್ತ ಗುಂಪಿನಿಂದ ಹತ್ಯೆ