Tag: women

  • ಮದುವೆಯಾಗುವಂತೆ ಒತ್ತಾಯಿಸಿ ಯುವತಿ ಮನೆಗೆ ನುಗ್ಗಿ ಲಾಂಗ್ ಬೀಸಿದ ಯುವಕ

    ಮದುವೆಯಾಗುವಂತೆ ಒತ್ತಾಯಿಸಿ ಯುವತಿ ಮನೆಗೆ ನುಗ್ಗಿ ಲಾಂಗ್ ಬೀಸಿದ ಯುವಕ

    ಬೆಂಗಳೂರು: ಯುವಕನೊಬ್ಬ ಮದುವೆಯಾಗುವಂತೆ ಒತ್ತಾಯಿಸಿ ಯುವತಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ನಗರದ ಕೆ ಆರ್ ಪುರಂ ಮಸೀದಿ ರಸ್ತೆಯಲ್ಲಿ ನಡೆದಿದೆ.

    ಕಳೆದ ನಾಲ್ಕು ದಿನಗಳ ಹಿಂದೆ ನಡೆದಿರುವ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಗ್ಮಾ ಎಂಬಾಕೆಯ ಮೇಲೆ ಆರೋಪಿ ಶಾರುಖ್ ಹಲ್ಲೆಗೆ ಮುಂದಾಗಿದ್ದಾನೆ. ಇದನ್ನೂ ಓದಿ: ಕೇಸರಿ ಶಾಲು, ಹಿಜಬ್ ಧರಿಸುವಂತಿಲ್ಲ : ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಏನಿದೆ?

    ಯುವಕ, ಯುವತಿ ಮೇಲೆ ಲಾಂಗ್ ಬೀಸಲು ಯತ್ನಿಸಿದ್ದಾನೆ. ಈ ವೇಳೆ ಯುವತಿಯು ಮನೆ ಗೇಟ್ ಲಾಕ್ ಮಾಡಿಕೊಂಡಿದ್ದರು. ಏರಿಯಾದಲ್ಲಿ ಲಾಂಗ್ ಹಿಡಿದು ರಾಜಾರೋಷವಾಗಿ ಓಡಾಡಿದ್ದಾನೆ.

    ಶಾರುಖ್ ಮನಬಂದಂತೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್‍ಗಳ ಮೇಲೆಯೂ ಲಾಂಗ್ ಬೀಸಿದ್ದಾನೆ. ಆರೋಪಿ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ನಗ್ಮಾರವರು ಕೆ ಆರ್ ಪುರಂ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಶೌಚಾಲಯಕ್ಕೆ ಹೋಗಿ ಬರುತ್ತೇನೆಂದ ವಧು ಪ್ರೀಯಕರನ ಜೊತೆಗೆ ಎಸ್ಕೇಪ್

    ಪ್ರಕರಣ ದಾಖಲಾದ ಬೆನ್ನಲ್ಲೇ ಕೆ ಆರ್ ಪುರಂ ಪೊಲೀಸರು ಆರೋಪಿ ಶಾರುಕ್‍ನನ್ನು ಬಂಧಿಸಿದ್ದಾರೆ.

  • ಒಂಟಿ ಮಹಿಳೆ ಮೇಲೆ ಹಲ್ಲೆ ಮಾಡಿದ ರೌಡಿಶೀಟರ್

    ಒಂಟಿ ಮಹಿಳೆ ಮೇಲೆ ಹಲ್ಲೆ ಮಾಡಿದ ರೌಡಿಶೀಟರ್

    ಧಾರವಾಡ: ರೌಡಿಶೀಟರ್‌ನೊಬ್ಬ ಒಂಟಿ ಮಹಿಳೆ ಮೇಲೆ ಹಲ್ಲೆ ನಡೆಸಿದ ಘಟನೆ ಹುಬ್ಬಳ್ಳಿಯ ಲಿಂಗರಾಜ ನಗರದಲ್ಲಿರುವ ಅಪಾರ್ಟ್ಮೆಂಟ್‌ನಲ್ಲಿ ನಡೆದಿದೆ.

    ಲಕ್ಷ್ಮೀ ಎಂಬವರ ಮೇಲೆ 4 ಜನರ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಮನೆ ಖಾಲಿ ಮಾಡುವ ವಿಚಾರಕ್ಕೆ ಅಪಾರ್ಟ್ಮೆಂಟ್‌ಗೆ ನುಗ್ಗಿ ಮಹಿಳೆ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಬಾಲಕೃಷ್ಣ ನಾಯಕ, ಶಕ್ತಿರಾಜ ದಾಂಡೇಲಿ, ರಾಹುಲ್, ಹಾಗೂ ಇನ್ನೋರ್ವನಿಂದ ಈ ಹಲ್ಲೆ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆಗೈದ ಮಹಿಳೆ ಅರೆಸ್ಟ್

    ಲಕ್ಷ್ಮೀಯವರು ಅಪಾರ್ಟ್ಮೆಂಟ್‌ ಖರೀದಿ ಮಾಡಿ ಮಾಲೀಕನಿಗೆ ಹಣ ನೀಡಿರಲಿಲ್ಲ. ಹಣ ನೀಡದ ಹಿನ್ನೆಲೆ ಮಾಲೀಕನಿಂದ ಕೋರ್ಟ್‍ಗೆ ದೂರು ದಾಖಲಾಗಿತ್ತು. ಕೋರ್ಟ್‍ನಲ್ಲಿ ಕೇಸ್ ಇರುವಾಗಲೇ ನಾಲ್ವರಿಂದ ಅಪಾರ್ಟ್ಮೆಂಟ್‌ನಲ್ಲಿದ್ದ ಮಹಿಳೆ ಮೇಲೆ ದಾಳಿ ನಡೆದಿದೆ. ಇದನ್ನೂ ಓದಿ: ನೆಟ್ಟಿಗರಿಂದ ಟ್ರೋಲ್ ಆಯ್ತು ಎಸ್‍ಆರ್‌ಹೆಚ್ ಹೊಸ ಜೆರ್ಸಿ

    ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಲ್ಲೆ ನಡೆಸಿ ದೈಹಿಕ ಹಿಂಸೆ ನೀಡಿದ್ದಾರೆಂದು ಕೇಸ್ ದಾಖಲಾಗಿದೆ. ಮನೆ ಖಾಲಿ ಮಾಡು ಅಂತ ಹೇಳಿದ್ದಲ್ಲದೆ, ಮೈಮೇಲಿದ್ದ ಬಂಗಾರವನ್ನ ತೆಗೆದುಕೊಂಡು ಹೋಗಿದ್ದಾರೆಂದು ಆರೋಪಿಸಿದ್ದಾರೆ.

    ಈ ಹಿನ್ನೆಲೆ ನೊಂದ ಮಹಿಳೆಯು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

  • ಸೇಡು ತೀರಿಸಿಕೊಳ್ಳಲು ಇಬ್ಬರು ಮಹಿಳೆಯರ ಮೇಲೆ ಆ್ಯಸಿಡ್ ದಾಳಿ – ತಂದೆ, ಮಗ ಅರೆಸ್ಟ್

    ಗಾಂಧಿನಗರ: ಗುಜರಾತ್‍ನ ಅಮ್ರೇಲಿ ಜಿಲ್ಲೆಯಲ್ಲಿ ಸೇಡು ತೀರಿಸಿಕೊಳ್ಳುವ ಸಲುವಾಗಿ ಇಬ್ಬರು ಮಹಿಳೆಯರ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ತಂದೆ, ಮಗನ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಭಾನುವಾರ ರಾತ್ರಿ 27 ಮತ್ತು 37 ವರ್ಷದ ಇಬ್ಬರು ಮಹಿಳೆಯರು ಆಸ್ಪತ್ರೆಯಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಮ್ರೇಲಿಯ ಸಾವರಕುಂಡ್ಲಾ ಪಟ್ಟಣದಲ್ಲಿ ಇಬ್ಬರು ವ್ಯಕ್ತಿಗಳು ಆ್ಯಸಿಡ್ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: 99 ವರ್ಷದ ವೃದ್ಧೆಯನ್ನೂ ಬಿಡದ ಪಾಪಿ – ಹಿಡನ್ ಕ್ಯಾಮೆರಾದಲ್ಲಿ ಕ್ರೌರ್ಯ ಸೆರೆ!

    ಆ್ಯಸಿಡ್ ದಾಳಿ ನಂತರ ಸಂತ್ರಸ್ತರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಪೊಲೀಸರು ಅವರ ಹೇಳಿಕೆಗಳನ್ನು ಪಡೆದಿದ್ದಾರೆ. ಬಳಿಕ ಆರೋಪಿಗಳು ತಮ್ಮ ನೆರೆಹೊರೆಯಲ್ಲಿ ವಾಸಿಸುವವರು ಎಂದು ಸಂತ್ರಸ್ತೆಯರು ತಿಳಿಸಿದ ಬಳಿಕ ತಂದೆ-ಮಗ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ಈ ಘಟನೆ ಕುರಿತಂತೆ ಮಾತನಾಡಿದ ಪೊಲೀಸರು, ಈ ಕೃತ್ಯವನ್ನು ಸೇಡು ತೀರಿಸಿಕೊಳ್ಳುವ ಸಲುವಾಗಿ ಎಸಲಾಗಿದೆ. 2021ರಲ್ಲಿ ಸಾವರಕುಂಡ್ಲಾ ಪಟ್ಟಣದಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ವ್ಯಕ್ತಿ ವಿರುದ್ಧ ಮಹಿಳೆ ಎಫ್‍ಐಆರ್ ದಾಖಲಿಸಿದ್ದರು. ಹೀಗಾಗಿ ಅತ್ತೆ ಹಾಗೂ ಸೊಸೆಯ ಮೇಲೆ ಆ್ಯಸಿಡ್ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ತಂದೆ ಎನ್ನುವುದನ್ನು ನೋಡದೆ ಕೇವಲ 900 ರೂ. ಆಸೆಗೆ ಕೊಂದೇ ಬಿಟ್ಟ!

    ಇದೀಗ ಸಂತ್ರಸ್ತೆಯರ ದೂರಿನ ಆಧಾರದ ಮೇಲೆ ತಂದೆ-ಮಗನ ವಿರುದ್ಧ ಐಪಿಸಿ ಸೆಕ್ಷನ್ 328ಎ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದ್ದು, ಇಬ್ಬರನ್ನು ಬಂಧಿಸಿದ್ದೇವೆ. ಸದ್ಯ ಇಬ್ಬರು ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಮತ್ತು ಈ ಪ್ರಕರಣ ಕುರಿತಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

  • ಎಲ್ಲಾ ಪುರುಷರು ಅತ್ಯಾಚಾರಿಗಳು ಎನ್ನುವುದು ಸರಿಯಲ್ಲ: ಸ್ಮೃತಿ ಇರಾನಿ

    ಎಲ್ಲಾ ಪುರುಷರು ಅತ್ಯಾಚಾರಿಗಳು ಎನ್ನುವುದು ಸರಿಯಲ್ಲ: ಸ್ಮೃತಿ ಇರಾನಿ

    ನವದೆಹಲಿ: ದೇಶದ ಮಹಿಳೆ ಮತ್ತು ಮಕ್ಕಳ ರಕ್ಷಣೆ ಮುಖ್ಯ ಆದ್ಯತೆಯಾಗಬೇಕು. ಆದರೆ ಎಲ್ಲಾ ಮದುವೆಯೂ ಹಿಂಸಾತ್ಮಕ, ಎಲ್ಲಾ ಪುರುಷರು ಅತ್ಯಾಚಾರಿಗಳು ಎನ್ನುವುದು ಸರಿಯಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಭಿಪ್ರಾಯಪಟ್ಟಿದ್ದಾರೆ.

    ಸಿಪಿಐ ನಾಯಕ ಬಿನೋಯ್‌ ವಿಶ್ವಂ ಅವರ ವೈವಾಹಿಕ ಅತ್ಯಾಚಾರ ಹೇಳಿಕೆಗೆ ರಾಜ್ಯಸಭೆಯಲ್ಲಿ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ ಅವರು, ಎಲ್ಲಾ ಮದುವೆಯೂ ಹಿಂಸಾತ್ಮಕ, ಎಲ್ಲಾ ಪುರುಷರೂ ಅತ್ಯಾಚಾರಿಗಳು ಎಂದು ಖಂಡಿಸುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಸೇರಿದರೆ ನನ್ನನ್ನು ಹೇಮಾ ಮಾಲಿನಿಯಾಗಿ ಮಾಡುತ್ತಿದ್ದರು: ಜಯಂತ್ ಚೌಧರಿ

    ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ದೇಶದಲ್ಲಿ ಮಹಿಳೆಯರನ್ನು ರಕ್ಷಿಸುವುದು ಸರ್ಕಾರದ ಪ್ರಯತ್ನವಾಗಿದೆ. ಪ್ರಸ್ತುತ ದೇಶಾದ್ಯಂತ 30 ಕ್ಕೂ ಹೆಚ್ಚು ಸಹಾಯವಾಣಿಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದ ಈವರೆಗೆ 66 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಸಹಾಯವಾಗಿದೆ. ಅಲ್ಲದೇ 703 ʼಒನ್‌ ಸ್ಟಾಪ್‌ ಕೇಂದ್ರʼಗಳು ಕಾರ್ಯನಿರ್ವಹಿಸುತ್ತಿದ್ದು, ಇದರಿಂದ 5 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಸಹಾಯವಾಗಿದೆ ಎಂದು ಹೇಳಿದ್ದಾರೆ.

    ಸಂಸತ್‌ನ ಪ್ರತಿ ಸದಸ್ಯರು ತಮ್ಮ ಜಿಲ್ಲೆಗಳಲ್ಲಿ ತಮ್ಮದೇ ನಾಯಕತ್ವದಲ್ಲಿ ದಿಶಾ ಸಭೆಯನ್ನು ಏರ್ಪಡಿಸಬೇಕು ಎಂದು ಮನವಿ ಮಾಡಿದ್ದಾರೆ. ನಿಮ್ಮ ನಾಯಕತ್ವದಲ್ಲಿ ಮಹಿಳಾ ಹಕ್ಕುಗಳ ಹೋರಾಟದಲ್ಲಿ ಬದ್ಧತೆಯಿಂದ ತೊಡಗಿಸಿಕೊಂಡರೆ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬಹುದು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಜಯಲಲಿಲಾ ಆಪ್ತೆ ಶಶಿಕಲಾಗೆ ಜೈಲಿನಲ್ಲಿ ರಾಜಾತಿಥ್ಯ – ಪೊಲೀಸರಿಗೆ ಸಂಕಷ್ಟ

    ಮಹಿಳೆಯರ ವಿರುದ್ಧ ಹೆಚ್ಚು ಅಪರಾಧಗಳು ನಡೆಯುವ ಸ್ಥಳಗಳಲ್ಲಿ ನಾವು ರಾಜ್ಯ ಸರ್ಕಾರಗಳ ಜೊತೆಗೆ ಹೆಚ್ಚುವರಿ ಒನ್‌ ಸ್ಟಾಪ್‌ ಕೇಂದ್ರಗಳನ್ನು ಸ್ಥಾಪಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

  • ಅತ್ಯಾಚಾರ, ಹಲ್ಲೆ ಆರೋಪ – ಫುಟ್‍ಬಾಲ್ ಆಟಗಾರ ಅರೆಸ್ಟ್

    ಅತ್ಯಾಚಾರ, ಹಲ್ಲೆ ಆರೋಪ – ಫುಟ್‍ಬಾಲ್ ಆಟಗಾರ ಅರೆಸ್ಟ್

    ಲಂಡನ್: ಮಹಿಳೆಯೊಬ್ಬರ ಮೇಲೆ ಅತ್ಯಾಚಾರ, ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಭಾನುವಾರ ಫುಟ್‍ಬಾಲ್ ಆಟಗಾರ ಮೇಸನ್ ಗ್ರೀನ್‍ವುಡ್‍ನನ್ನು ಅಮಾನತುಗೊಳಿಸಿದೆ.

    ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್, ಸಾಮಾಜಿಕ ಜಾಲತಾಣದಲ್ಲಿ ಗ್ರೀನ್‍ವುಡ್, ಮಹಿಳೆಯ ಮೇಲೆ ಹಲ್ಲೆ ಎಸೆಗಿದ್ದಾರೆಂಬ ಆರೋಪದ ಫೋಟೋಗಳು ವೈರಲ್ ಆಗಿವೆ. ಆಟಗಾರನ ಮೇಲೆ ಅತ್ಯಾಚಾರ ಆರೋಪವೂ ಕೇಳಿಬಂದಿದೆ. ಆರೋಪ ಸಾಬೀತಾಗುವವರೆಗೆ ಕ್ಲಬ್ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಮ್ಯಾಂಚೆಸ್ಟರ್ ಯುನೈಟೆಡ್ ಯಾವುದೇ ರೀತಿಯ ಹಿಂಸೆಯನ್ನು ಕ್ಷಮಿಸುವುದಿಲ್ಲ. ಆರೋಪವು ಸಾಬೀತಾಗುವವರೆಗೆ ಮೇಸನ್ ಗ್ರೀನ್‍ವುಡ್ ತರಬೇತಿಗೆ ಹಿಂತಿರುಗುವಂತಿಲ್ಲ. ಪೊಲೀಸ್ ತನಿಖೆಯ ಮುಂದಿನ ಸೂಚನೆ ಬರುವವರೆಗೆ ಪಂದ್ಯಗಳನ್ನು ಆಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಕೊನೆಗೂ ಕತ್ರಿನಾ ಮದುವೆಗೆ ವಿಶ್ ಮಾಡಿದ ಸಲ್ಮಾನ್ ಖಾನ್

    ಹಲ್ಲೆ ಆರೋಪದ ಕುರಿತು ಗ್ರೀನ್‍ವುಡ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವೀಡಿಯೋ, ಛಾಯಾಚಿತ್ರಗಳು ಮತ್ತು ಆಡಿಯೋ ರಿಕಾರ್ಡಿಂಗ್ ಸೇರಿದಂತೆ ಗ್ರೀನ್‍ವುಡ್ ವಿರುದ್ಧದ ಆರೋಪಗಳನ್ನು ಭಾನುವಾರ ಬೆಳಿಗ್ಗೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿ, ನಂತರದಲ್ಲಿ ಅಳಿಸಲಾಗಿದೆ.

    ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯು ಘಟನೆಯ ಕೆಲ ತುಣುಕುಗಳನ್ನು ಪೋಸ್ಟ್ ಮಾಡಿದ್ದಾರೆ. ನಂತರ ಅತ್ಯಾಚಾರ ಮತ್ತು ಹಲ್ಲೆ ಆರೋಪದ ಶಂಕೆಯ ಮೇಲೆ ಗ್ರೀನ್‍ವುಡ್‍ನನ್ನು ಬಂಧಿಸಲಾಗಿದೆ. ವಿಚಾರಣೆಗಾಗಿ ಆಟಗಾರನನ್ನು ಕಸ್ಟಡಿಯಲ್ಲಿ ಇರಿಸಲಾಗಿದೆ ಎಂದು ಗ್ರೇಟರ್ ಮ್ಯಾಂಚೆಸ್ಟರ್ ಪೋಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೀದಿ ನಾಯಿ ಮೇಲೆ ಕಾರು ಹತ್ತಿಸಿದ FIR ಏನಾಯ್ತು: ಸಿಎಂ, ತೇಜಸ್ವಿ ಸೂರ್ಯಗೆ ರಮ್ಯಾ ಪ್ರಶ್ನೆ

    ಗ್ರೀನ್‍ವುಡ್ 24 ಪಂದ್ಯಗಳನ್ನಾಡಿದ್ದು, 6 ಗೋಲು ಮಾಡಿದ್ದಾರೆ. ಯುನೈಟೆಡ್‍ನ ಅಕಾಡೆಮಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ. ಒಮ್ಮೆ ಇಂಗ್ಲೆಂಡ್ ರಾಷ್ಟ್ರೀಯ ತಂಡಕ್ಕಾಗಿ ಆಡಿದ್ದರು.

  • ಗುಡಿಸಲಿಗೆ ಡಿಕ್ಕಿ ಹೊಡೆದ ಕಾರು- ನಾಲ್ವರು ಮಹಿಳೆಯರು ಸಾವು

    ಗುಡಿಸಲಿಗೆ ಡಿಕ್ಕಿ ಹೊಡೆದ ಕಾರು- ನಾಲ್ವರು ಮಹಿಳೆಯರು ಸಾವು

    ಹೈದರಾಬಾದ್: ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಗುಡಿಸಲಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ನಾಲ್ವರು ಮಹಿಳೆಯರು ಮೃತಪಟ್ಟಿದ್ದು, ಮೂವರು ಮಹಿಳೆಯರು ಗಾಯಗೊಂಡಿರುವ ಘಟನೆ ತೆಲಂಗಾಣದ ಕರೀಂನಗರದಲ್ಲಿ ನಡೆದಿದೆ.

    ಕರೀಂನಗರ ನಗರದ ಕಮಾನ್ ಪ್ರದೇಶದಲ್ಲಿ ರಸ್ತೆ ಬಳಿ ಇದ್ದ ಗುಡಿಸಲಿಗೆ ಕಾರು ಡಿಕ್ಕಿ ಹೊಡೆದಿದೆ. ಗುಡಿಸಲೊಳಗೆ ಒಟ್ಟು ಆರು ಮಹಿಳೆಯರು ಕೆಲಸ ಮಾಡುತ್ತಿದ್ದರು. ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಮೂವರು ಮಹಿಳೆಯರು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ತಾಯಿಗೆ ಇಟ್ಟಿಗೆಯಿಂದ ಹೊಡೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ

    POLICE JEEP

    ಕಾರು ಚಾಲಕ ಕಾರನ್ನು ಸ್ಥಳದಲ್ಲೇ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ರಾಜೇಂದ್ರ ಪ್ರಸಾದ್ ಎಂಬ ವ್ಯಕ್ತಿಯ ಹೆಸರಿನಲ್ಲಿ ಈ ವಾಹನ ನೋಂದಣಿಯಾಗಿರುವುದು ತಿಳಿದು ಬಂದಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಶೇ.75 ವಯಸ್ಕರಿಗೆ ಎರಡೂ ಡೋಸ್‌ ಲಸಿಕೆ – ಪ್ರಧಾನಿ ಅಭಿನಂದನೆ

  • ಮಹಿಳೆಯರಿಗಾಗಿ ಚೀಪ್ ಆ್ಯಂಡ್ ಬೆಸ್ಟ್ ರೇಟ್‍ನಲ್ಲಿ ಸ್ಪ್ಲೆಂಡಿಡ್ ನೆಕ್ಲೆಸ್

    ಮಹಿಳೆಯರಿಗಾಗಿ ಚೀಪ್ ಆ್ಯಂಡ್ ಬೆಸ್ಟ್ ರೇಟ್‍ನಲ್ಲಿ ಸ್ಪ್ಲೆಂಡಿಡ್ ನೆಕ್ಲೆಸ್

    ಫ್ಯಾಷನ್ ಪ್ರಿಯರಿಗೆ ಚೀಪ್ ಆ್ಯಂಡ್ ಬೆಸ್ಟ್ ಬೆಲೆಯಲ್ಲಿ ಆನ್‍ಲೈನ್‍ನಲ್ಲಿ ಸ್ಪ್ಲೆಂಡಿಡ್ ನೆಕ್ಲೆಸ್ ಸಿಗುತ್ತಿದೆ. 2022ರಲ್ಲಿ ನ್ಯೂ ಟ್ರೆಂಡ್ ಸೃಷ್ಟಿಸಿರುವ ಈ ಸ್ಪ್ಲೆಂಡಿಡ್ ನೆಕ್ಲೆಸ್ ಯುವತಿಯರಿಗೆ ಹೆಚ್ಚು ಇಷ್ಟವಾಗುತ್ತದೆ. ಸ್ಪ್ಲೆಂಡಿಡ್ ನೆಕ್ಲೆಸ್‍ನಲ್ಲಿ ವೆರೈಟಿ ಡಿಸೈನ್‍ಗಳಿದ್ದು, ಮಾರುಕಟ್ಟೆಯಲ್ಲಿ ಹಲವಾರು ಬಣ್ಣಗಳಲ್ಲಿ ದೊರೆಯುತ್ತದೆ.

    ಮಲ್ಟಿ ಲೇಯರ್ಡ್ ಪೆಂಡೆಂಟ್ ನೆಕ್ಲೆಸ್
    ಈ ಮಲ್ಟಿ ಲೇಯರ್ಡ್ ಪೆಂಡೆಂಟ್ ನೆಕ್ಲೆಸ್ ನೋಡಲು ಚಿಕ್ಕದಾಗಿರುತ್ತದೆ. ಇದರಲ್ಲಿ ಮೂರು ಲೇಯರ್ ಮತ್ತು ಉತ್ತಮ ಗುಣಮಟ್ಟದ ಪ್ಲೇಟೆಡ್ ಇರುತ್ತದೆ. ಈ ನೆಕ್ಲೆಸ್ ಧರಿಸುವುದರಿಂದ ಯಾವುದೇ ಅಲರ್ಜಿ ಹಾಗೂ ಚರ್ಮ ರೋಗಗಳು ಬರುವುದಿಲ್ಲ. ದೈನಂದಿನ ಉಡುಪಿನೊಂದಿಗೂ ಸಹ ಈ ನೆಕ್ಲೆಸ್ ಬಹಳ ಸುಂದರವಾಗಿ ಕಾಣಿಸುತ್ತದೆ.

    ಗೋಲ್ಡನ್ ನೆಕ್ಲೆಸ್ ಅಮೇರಿಕನ್ ಡೈಮಂಡ್ ಬ್ಲ್ಯಾಕ್ ಡಕ್ ನೆಕ್ಲೆಸ್
    ಈ ಡಿಸೈನರ್ ನೆಕ್ಲೆಸ್‍ಗೆ ಬ್ಲಾಕ್ ಕಲರ್ ಬಾತುಕೋಳಿಯ ಪೆಂಡೆಂಟ್ ನೀಡಲಾಗಿದೆ. ಇದು ಸಾಲಿಟೇರ್ ನೆಕ್ಲೆಸ್ ಆಗಿದ್ದು, ನೋಡಲು ಸಖತ್ ಶೈನಿಂಗ್ ಆಗಿದೆ. ಈ ನೆಕ್ಲೆಸ್ ಶೈನಿಂಗ್ ಬಹುಕಾಲದವರೆಗೂ ಹಾಗೆಯೇ ಉಳಿಯುತ್ತದೆ.

    ಮಲ್ಟಿ ಲೇಯರ್ಡ್ ಚೈನ್ ನೆಕ್ಲೆಸ್
    ಮಲ್ಟಿ ಲೇಯರ್ಡ್ ಚೈನ್ ನೆಕ್ಲೆಸ್ ಇತ್ತೀಚೆಗಷ್ಟೇ ಫ್ಯಾಷನ್ ಲೋಕಕ್ಕೆ ಎಂಟ್ರಿ ಕೊಟ್ಟಿದೆ. ಇದರಲ್ಲಿ ಒಂದರ ಕೆಳಗೆ ಒಂದರಂತೆ ಹಲವಾರು ಚೈನ್‍ಗಳಿದ್ದು, ಹಲವಾರು ದಿನಗಳ ಕಾಲ ಬಾಳಿಕೆ ಬರುತ್ತದೆ. ಇದು ನಿಮಗೆ ಧರಿಸಿದಾಗ ಸಾಫ್ಟ್ ಫೀಲ್ ನೀಡುತ್ತದೆ. ಇದನ್ನೂ ಓದಿ: ಮದುವೆ ಸಮಯದಲ್ಲಿ ವಧುವಿನಂತೆ ಕಂಗೊಳಿಸಲು ಧರಿಸಬೇಕಾದ ಮುಖ್ಯ ಆಭರಣಗಳು

    ಲಾಂಗ್ ಚೈನ್ ಏಂಜೆಲ್ ವಿಂಗ್ಸ್ ಪೆಂಡೆಂಟ್
    ಶಾಟ್ರ್ಸ್, ಸ್ಕರ್ಟ್‍ಗಳು, ಪ್ಯಾಂಟ್‍ಗಳು ಅಥವಾ ಡೆನಿಮ್‍ಗಳಂತಹ ಯಾವುದೇ ಉಡುಪುಗಳನ್ನು ನೀವು ಧರಿಸಿದರೂ, ಇದು ನಿಮಗೆ ಸುಂದರವಾಗಿ ಕಾಣಿಸುತ್ತದೆ. ಎರಡು ಲೇಯರ್ಡ್ ಲಾಂಗ್ ಚೈನ್ ನೆಕ್ಲೆಸ್ ನಿಮಗೆ ಬಹಳ ಸುಲಭವಾಗಿ ಸೂಟ್ ಆಗುತ್ತದೆ. ಇದನ್ನೂ ಓದಿ: ಮಹಿಳೆಯರ ಲೇಟೆಸ್ಟ್ ಚೋಕರ್ ನೆಕ್ಲೆಸ್ ಡಿಸೈನ್‍ಗಳು

    ರೆಟ್ರೋ ಫ್ಯಾಶನ್ ಗೋಲ್ಡ್ ಟೋನ್ ಸರ್ಕಲ್ ಪೆಂಡೆಂಟ್ ನೆಕ್ಲೆಸ್
    ರೆಟ್ರೋ ಶೈಲಿಯ ಈ ನೆಕ್ಲೆಸ್ ನಿಮಗೆ ಓಲ್ಡ್ ಲುಕ್ ನೀಡುತ್ತದೆ. ಈ ಚೈನ್‍ಗೆ ಸರ್ಕಲ್ ಪೆಂಡೆಂಟ್ ಜೋಡಿಸಲಾಗಿದೆ. ಇದು ನಿಮಗೆ ಚಾರ್ಮ್ ಹಾಗೂ ಆ್ಯಟ್ರಾಕ್ಟಿವ್ ಲುಕ್ ನೀಡುತ್ತದೆ.

  • ಗದ್ದೆ ಕೆಲಸಕ್ಕೆ ಜನರನ್ನು ತುಂಬಿದ್ದ ವಾಹನಕ್ಕೆ ಲಾರಿ ಡಿಕ್ಕಿ- ನಾಲ್ವರು ಸಾವು

    ಗದ್ದೆ ಕೆಲಸಕ್ಕೆ ಜನರನ್ನು ತುಂಬಿದ್ದ ವಾಹನಕ್ಕೆ ಲಾರಿ ಡಿಕ್ಕಿ- ನಾಲ್ವರು ಸಾವು

    ಹೈದರಾಬಾದ್: ಗದ್ದೆ ಕೆಲಸಕ್ಕೆ ಜನರನ್ನು ಹೊತ್ತು ಹೋಗುತ್ತಿದ್ದ ಟೆಂಪೊಕ್ಕೆ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ನಾಲ್ವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ಭದ್ರಾದ್ರಿಯಲ್ಲಿ ನಡೆದಿದೆ.

    ಮೃತ ಮಹಿಳೆಯರನ್ನ ಕತಿ ಸ್ವಾತಿ, ಸಾಯಮ್ಮ, ಲಕ್ಷ್ಮಿ ಎಂದು ಗುರುತಿಸಲಾಗಿದ್ದು, ಮತ್ತೋರ್ವ ಮಹಿಳೆ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇವರೆಲ್ಲರೂ ಕೊತಗುಡೆಂ ಸಮೀಪದ ಸುಜಾತನಗರದ ನಿವಾಸಿಗಳು ಎಂದು ತಿಳಿದು ಬಂದಿದೆ. ಕೂಲಿ ಕಾರ್ಮಿಕರು ಸಾತುಪಲ್ಲಿ ಗ್ರಾಮಕ್ಕೆ ಭತ್ತದ ಗದ್ದೆ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಹಾರವನ್ನು ಕುತ್ತಿಗೆಗೆ ಎಸೆದ ವರ- ಮದುವೆ ಕ್ಯಾನ್ಸಲ್‌ ಮಾಡಿದ ವಧು

    ಭದ್ರಾದ್ರಿಯ ಕೊತಗುಡೆಂ ಜಿಲ್ಲೆಯ ತಿಪ್ಪನಪಲ್ಲಿಯಲ್ಲಿ ಈ ದುರ್ಘಟನೆ ನಡೆದಿದ್ದು, ಕಲ್ಲಿದ್ದಲು ತುಂಬಿಕೊಂಡು ಹೋಗುತ್ತಿದ್ದ ಲಾರಿ, ಟೆಂಪೊವಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವಾಹನದಲ್ಲಿದ್ದ 12 ಜನರ ಪೈಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಪ್ರಾಣ ಬಿಟ್ಟಿದ್ದಾರೆ. ಉಳಿದಂತೆ 8 ಸದಸ್ಯರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ:  ನಿರುದ್ಯೋಗ ಸಮಸ್ಯೆ ವಿಕೋಪಕ್ಕೆ ಹೋಗುತ್ತಿದೆ: ವರುಣ್ ಗಾಂಧಿ

  • ವಿಷ ಕೊಟ್ಬಿಡ್ರಿ ಆದ್ರೆ ಲಸಿಕೆ ಮಾತ್ರ ಬೇಡ: ಆರೋಗ್ಯ ಸಿಬ್ಬಂದಿಗೆ ಮಹಿಳೆ ಖಡಕ್‌ ಮಾತು

    ವಿಷ ಕೊಟ್ಬಿಡ್ರಿ ಆದ್ರೆ ಲಸಿಕೆ ಮಾತ್ರ ಬೇಡ: ಆರೋಗ್ಯ ಸಿಬ್ಬಂದಿಗೆ ಮಹಿಳೆ ಖಡಕ್‌ ಮಾತು

    ಬೆಂಗಳೂರು: ಕೋವಿಡ್‌-19 ಲಸಿಕೆ ಅಭಿಯಾನದಲ್ಲಿ ದೇಶದಲ್ಲೇ ಕರ್ನಾಟಕ ಒಳ್ಳೆಯ ಹೆಸರು ಮಾಡಿದೆ. ಲಸಿಕಾ ಅಭಿಯಾನದಲ್ಲಿ ರಾಜ್ಯ ಉತ್ತಮ ಪ್ರಗತಿ ಸಾಧಿಸಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೂ ಹಲವೆಡೆ ಜನರು ಕೋವಿಡ್‌ ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ಪಡೆದುಕೊಳ್ಳಿ ಎನ್ನುತ್ತಾ ಮನೆ ಮುಂದೆ ಹೋಗುವ ಅಧಿಕಾರಿಗಳಿಗೆ ಜನರಿಂದ ಕಹಿ ಅನುಭವಗಳಾಗಿವೆ.

    ನೆಲಮಂಗಲ ತಾಲ್ಲೂಕಿನ ಗೋವಿಂದಪುರದಲ್ಲಿ ಲಸಿಕೆ ಹಾಕಿಸಿಕೊಳ್ಳಿ ಎಂದು ಜಾಗೃತಿ ಮೂಡಿಸಿದ ಆರೋಗ್ಯ ಸಿಬ್ಬಂದಿ ಜೊತೆಗೆ ಮಹಿಳೆ ಕಿರಿಕ್‌ ಮಾಡಿಕೊಂಡಿರುವ ಘಟನೆ ನಡೆದಿದೆ. ಲಸಿಕೆ ಹಾಕಿಸಿಕೊಳ್ಳಿ ಎಂದ ಆರೋಗ್ಯ ಸಿಬ್ಬಂದಿಗೆ, ಒಂದು ತೊಟ್ಟು ವಿಷ ಕೊಟ್ಬಿಡಿ ಆದ್ರೆ ವ್ಯಾಕ್ಸಿನ್‌ ಮಾತ್ರ ಬೇಡ ಎಂದು ಮಹಿಳೆ ನಿರಾಕರಿಸಿರುವ ಪ್ರಸಂಗ ನಡೆದಿದೆ. ಇದನ್ನೂ ಓದಿ: ಭಾರತದಲ್ಲಿ ಮುಂಬರುವ ವಾರಗಳಲ್ಲಿ ಓಮಿಕ್ರಾನ್ ಅಲೆ ತೀವ್ರಗೊಳ್ಳಬಹುದು ಎಂದ ತಜ್ಞರು!

    ಅಮ್ಮ ನೀವು ಲಸಿಕೆ ಹಾಕಿಸಿಕೊಳ್ಳಿ ಎಂದು ಆರೋಗ್ಯ ಸಿಬ್ಬಂದಿ ಹೇಳಿದ್ದಾರೆ. ನಾನು ಲಸಿಕೆ ಹಾಕಿಸಿಕೊಳ್ಳುವುದಿಲ್ಲ, ನಾಲ್ಕು ದಿನ ಚೆನ್ನಾಗಿರಲಿ ಅಂತ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ ಎಂದು ಮಹಿಳೆ ತಿಳಿಸಿದ್ದಾರೆ. ಅದಕ್ಕೆ ಆರೋಗ್ಯ ಸಿಬ್ಬಂದಿ ಪ್ರತಿಕ್ರಿಯಿಸಿ, ನಾವು ಆರೋಗ್ಯವಾಗಿರಬೇಕು ಎಂದೇ ಲಸಿಕೆ ನೀಡುತ್ತಿರುವುದು ಎಂದು ಮನವೊಲಿಸಲು ಪ್ರಯತ್ನಿಸಿದ್ದಾರೆ. ಅದಕ್ಕೆ ಮಹಿಳೆ, ಅನ್ನದಲ್ಲಿ ವಿಷ ಹಾಕಿ ಕೊಟ್ಬಿಡಿ, ಆದರೆ ಕೊರೊನಾ ಲಸಿಕೆ ಪಡೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

    CORONA-VIRUS.

    ಮಹಿಳೆಗೆ ಲಸಿಕೆ ನೀಡಲು ಸಾಧ್ಯವಾಗದೇ ಆರೋಗ್ಯ ಸಿಬ್ಬಂದಿ ತಂಡ ಬೇರೆ ದಾರಿ ಇಲ್ಲದೇ ವಾಪಸ್‌ ಆಗಿದೆ. ಇದನ್ನೂ ಓದಿ: ಕೋವಿಡ್ ಮೊದಲ ಡೋಸ್‍ನಲ್ಲಿ 100% ಪ್ರಗತಿ: ಸಚಿವ ಸುಧಾಕರ್

  • ಪ್ರಿಯತಮೆ ಕೈಕೊಟ್ಟಿದ್ದಕ್ಕೆ ಆಕೆಯ ಸಹೋದರನನ್ನೇ ಕಿಡ್ನಾಪ್ ಮಾಡಿದ ಭೂಪ

    ಪ್ರಿಯತಮೆ ಕೈಕೊಟ್ಟಿದ್ದಕ್ಕೆ ಆಕೆಯ ಸಹೋದರನನ್ನೇ ಕಿಡ್ನಾಪ್ ಮಾಡಿದ ಭೂಪ

    ಬೆಂಗಳೂರು: ತನ್ನ ಜೊತೆ ಬರಲು ನಿರಾಕರಿಸಿದ ಪ್ರಿಯತಮೆಯ ತಮ್ಮನನ್ನು ಪ್ರೇಮಿಯೊಬ್ಬ ಅಪಹರಿಸಿ ನೀನು ನನ್ನ ಜೊತೆ ಬರದಿದ್ದರೆ ನಿನ್ನ ತಮ್ಮನ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುವ ಘಟನೆ ನಗರದ ಬ್ಯಾಡರಹಳ್ಳಿಯಲ್ಲಿ ನಡೆದಿದೆ.

    kidnap

    ಆರೋಪಿಯನ್ನು ಶ್ರೀನಿವಾಸ್ ಎಂದು ಗುರುತಿಸಲಾಗಿದ್ದು, ಪ್ರಿಯತಮೆಯ ತಮ್ಮ ವೆಂಕಟೇಶ್‍ನನ್ನು ಆರೋಪಿ ಅಪಹರಿಸಿದ್ದಾನೆ. ಪ್ರಿಯತಮೆ ಬೇರೊಬ್ಬನ ಜೊತೆ ಮದುವೆ ಆಗಿದ್ದಳು. ಆದರೂ ಗಂಡನ ಬಿಟ್ಟು ಪ್ರಿಯಕರನ ಜೊತೆ ಸ್ವಲ್ಪ ದಿನ ಜೀವನ ಮಾಡಿದ್ದಾಳೆ. ಬಳಿಕ ರಾಜಿ ಪಂಚಾಯತಿ ಮಾಡಿ ಗಂಡನ ಮನೆಗೆ ಹೋಗಿದ್ದಾಳೆ. ನಂತರ ಗಂಡನನ್ನೂ ಬಿಟ್ಟು ತವರು ಮನೆ ಬಂದು ಸೇರಿಕೊಂಡಿದ್ದಳು. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಅರೆಸ್ಟ್

    ಪ್ರಿಯತಮೆ ತವರು ಮನೆ ಸೇರಿರುವ ವಿಚಾರ ತಿಳಿದ ಆರೋಪಿ ತನ್ನ ಜೊತೆ ಬರುವಂತೆ ಪೀಡಿಸಿದ್ದಾನೆ. ಈ ವೇಳೆ ಪ್ರಿಯತಮೆ ಬರಲು ಒಪ್ಪದಿದ್ದಾಗ ಆಕೆಯ ತಮ್ಮನ ಕಿಡ್ನಾಪ್ ಮಾಡಿದ್ದಾನೆ. ಅಲ್ಲದೇ ನೀನು ನನ್ನ ಜೊತೆ ಬರದೇ ಹೋದರೆ ನಿನ್ನ ತಮ್ಮನ ಕೊಲೆ ಮಾಡುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾನೆ.  ಇದನ್ನೂ ಓದಿ: ಆನ್‍ಲೈನ್‍ನಲ್ಲಿ ತಾಜ್‍ಮಹಲ್‍ಗೆ ನಕಲಿ ಟಿಕೆಟ್ ಮಾರುತ್ತಿದ್ದ ಟೆಕ್ಕಿ ಅರೆಸ್ಟ್

    kidnap

    ನಂತರ ವೆಂಕಟೇಶ್‍ನನ್ನು ಆಂಧ್ರಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಎಲು ಯತ್ನಿಸಿದ್ದಾನೆ. ಈ ವೇಳೆ ಆರೋಪಿಯ ಬೆನ್ನತ್ತಿದ್ದ ಬ್ಯಾಡರಹಳ್ಳಿ ಪೊಲೀಸರು ಆತನನ್ನು ಬಂಧಿಸಿ ಪ್ರಿಯತಮೆಯ ತಮ್ಮನ ಜೀವ ಉಳಿಸಿದ್ದಾರೆ.