Tag: women

  • ನಿಮ್ಮ ಫ್ರೆಂಡ್ ಮದುವೆಯಲ್ಲಿ ಎಲ್ಲರ ಕಣ್ಣು ನಿಮ್ಮ ಮೇಲೆ ಇರಬೇಕಾ? ಹಾಗಿದ್ರೆ ಈ ಸೀರೆ ಬೆಸ್ಟ್

    ನಿಮ್ಮ ಫ್ರೆಂಡ್ ಮದುವೆಯಲ್ಲಿ ಎಲ್ಲರ ಕಣ್ಣು ನಿಮ್ಮ ಮೇಲೆ ಇರಬೇಕಾ? ಹಾಗಿದ್ರೆ ಈ ಸೀರೆ ಬೆಸ್ಟ್

    ನಿಮ್ಮ ಸ್ನೇಹಿತೆಯ ಮದುವೆ ಸಮಾರಂಭಗಳಲ್ಲಿ ನೀವು ಸ್ಟೈಲಿಶ್ ಹಾಗೂ ಹಾಟ್ ಆಗಿ ಕಾಣಿಸಿಕೊಳ್ಳಲು ಬಯಸುತ್ತಿದ್ದರೆ ಒಂದಷ್ಟು ಬೆಸ್ಟ್ ವೆರೈಟಿ ಡಿಸೈನರ್ ಸೀರೆಗಳ ಕಲೆಕ್ಷನ್ ಇಲ್ಲಿದೆ. ಈ ಸೀರೆಗಳನ್ನು ನಿಮ್ಮ ಸ್ನೇಹಿತೆಯ ಮೆಹಂದಿ ಶಾಸ್ತ್ರ, ಪಾರ್ಟಿ ಹೀಗೆ ಹಲವಾರು ಕಾರ್ಯಕ್ರಮಗಳಲ್ಲಿ ಧರಿಸಬಹುದಾಗಿದೆ. ಈ ಸೀರೆಗಳು ನಿಮಗೆ ಗ್ಲಾಮರ್ ಲುಕ್ ನೀಡುವುದರ ಜೊತೆಗೆ ಐಷಾರಾಮಿ ಲುಕ್ ಸಹ ನೀಡುತ್ತದೆ. ಅಲ್ಲದೇ ಈ ತರಹದ ಸೀರೆಗಳನ್ನು ನಿಮ್ಮ ಪ್ರೀತಿಪಾತ್ರರಿಗೂ ಸಹ ಗಿಫ್ಟ್ ಆಗಿ ನೀಡಬಹುದಾಗಿದೆ.

    ರೆಡ್ ರಫಲ್ ಸೀರೆ
    ಮದುವೆ ಸಮಾರಂಭಗಳಲ್ಲಿ ಈ ಸೀರೆ ನಿಮಗೆ ಅದ್ಭುತವಾದಂತಹ ನೋಟ ನೀಡುತ್ತದೆ. ಅದರಲ್ಲೂ ರೆಡ್ ಕಲರ್ ಸೀರೆ ಮದುವೆ ಸಮಾರಂಭಗಳಿಗೆ ಹೇಳಿ ಮಾಡಿಸಿದಂತೆ ಇರುತ್ತದೆ. ಈ ಸೀರೆಗೆ ಚಿಕ್ಕ ಆಭರಣ ಮತ್ತು ಸ್ಟೈಲಿಶ್ ಹೇರ್ ಕಟ್ ಮಾಡಿಸಿದ್ದರೆ ಸಖತ್ ಆಗಿ ಸೂಟ್ ಆಗುತ್ತದೆ. ಇದನ್ನೂ ಓದಿ : ಕಂಗನಾಳನ್ನು ಹೀರೋಯಿನ್ ಮಾಡಿದ್ದು ಆ ಜ್ಯೋತಿಷಿ: ಅಸಲಿ ಸತ್ಯ ಬಾಯ್ಬಿಟ್ಟ ನಟ ಪ್ರಭಾಸ್

    ಎಂಬ್ರಾಯ್ಡರಿ ನೆಟ್ ಸೀರೆ
    ಈ ಸುಂದರವಾದ ಸೀರೆಗೆ ಎಂಬ್ರಾಯ್ಡರಿ ವರ್ಕ್‍ಗೊಳಿಸಲಾಗಿದ್ದು, ಇದು ಆಫ್‍ಬೀಟ್ ಕಲರ್‌ನಿಂದ ವಿನ್ಯಾಸಗೊಳಿಸಲಾಗಿದೆ. ಇದು ಎಲ್ಲರ ಸ್ಕಿನ್ ಕಲರ್‌ಗೆ ಸೂಟ್ ಆಗುತ್ತದೆ. ಈ ಸೀರೆ ಧರಿಸಲು ಬಹಳ ಸಾಫ್ಟ್ ಆಗಿದ್ದು, ಎಲ್ಲರನ್ನು ಆಕರ್ಷಿಸುತ್ತದೆ. ಇದು ಮದುವೆ ಸಮಾರಂಭಗಳಲ್ಲಿ ತೊಡಲು ಬೆಸ್ಟ್ ಸೀರೆ ಎಂದೇ ಹೇಳಬಹುದು.

    ಪ್ರಿ ಡ್ರಾಪ್ಡ್ ಸೀರೆ ವಿಥ್ ಪಾಂಟ್ಸ್
    ಇದು ಸಖತ್ ಕೂಲ್ ಫೀಲ್ ನೀಡುತ್ತದೆ. ಸದ್ಯ ಈ ಸೀರೆ ಟ್ರೆಂಡಿಯಾಗಿದ್ದು, ಫುಲ್ ನೆಕ್ ಡಿಸೈನ್ ಜೊತೆಗೆ ಬ್ಲೌವ್ಸ್ ಎಂಬ್ರಾಯ್ಡರಿಯಿಂದ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಈ ಸೀರೆಯನ್ನು ಪ್ಯಾಂಟ್ ರೀತಿ ಸುಲಭವಾಗಿ ಧರಿಸಬಹುದಾಗಿದೆ.

    ಸಿಕ್ವೇನ್ ಸೀರೆ
    ಸಿಕ್ವೇನ್ ಸೀರೆಗಳು ಹೆಚ್ಚಾಗಿ ಪಾರ್ಟಿಗಳಿಗೆ ಸೂಟ್ ಆಗುತ್ತದೆ. ಸದ್ಯ ಟ್ರೆಂಡ್‍ನಲ್ಲಿ ಸೀರೆಗಳಿಲ್ಲಿ ಒಂದಾಗಿರುವ ಈ ಸೀರೆಗಳನ್ನು ಹೆಚ್ಚಾಗಿ ಬಾಲಿವುಡ್ ಸೆಲೆಬ್ರಿಟಿಗಳು ಧರಿಸುತ್ತಾರೆ. ನೇರಳೆ ಬಣ್ಣದ ಈ ಸೀರೆ ಬೆಳಕಿನಲ್ಲಿ ಸಖತ್ ಶೈನಿಂಗ್ ಆಗಿ ಕಾಣಿಸುತ್ತದೆ. ಈ ಸೀರೆಗೆ ಸಿಲ್ವರ್ ಕಲರ್ ಸ್ಲೀವ್ ಲೆಸ್ ಬ್ಲೌವ್ಸ್ ಅಥವಾ ಬ್ಲ್ಯಾಕ್ ಕಲರ್ ಫುಲ್ ಸ್ಲೀವ್ಸ್ ಬ್ಲೌವ್ಸ್ ಸಖತ್ ಆಗಿ ಕಾಣಿಸುತ್ತದೆ. ಇದನ್ನೂ ಓದಿ : ಸೋನಂ ಕಪೂರ್ ಮಾವನಿಗೆ 27 ಕೋಟಿ ರೂ. ವಂಚಿಸಿದ ಸೈಬರ್ ಕ್ರಿಮಿನಲ್ಸ್!

     

  • ಶಿವಮೊಗ್ಗದಲ್ಲಿ ಇಬ್ಬರು ಮಹಿಳೆಯರಿಗೆ ಮಂಗನಕಾಯಿಲೆ ದೃಢ

    ಶಿವಮೊಗ್ಗದಲ್ಲಿ ಇಬ್ಬರು ಮಹಿಳೆಯರಿಗೆ ಮಂಗನಕಾಯಿಲೆ ದೃಢ

    ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಇಬ್ಬರು ಮಹಿಳೆಯರಿಗೆ ಮಂಗನ ಕಾಯಿಲೆ ದೃಢಪಟ್ಟಿದೆ.

    ದಾವಣಗೆರೆ ಮೂಲದ 40 ವರ್ಷದ ಮಹಿಳೆ ಕೆಲಸಕ್ಕೆಂದು ತೀರ್ಥಹಳ್ಳಿಗೆ ಬಂದಿದ್ದರು. ಆದರೆ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವೇಳೆ ಅವರಿಗೆ ಮಂಗನ ಕಾಯಿಲೆ ಇರುವುದು ದೃಢವಾಗಿದೆ.

    ಇಬ್ಬರು ಮಹಿಳೆಯರಲ್ಲಿ ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಮತ್ತೊಬ್ಬ ಮಹಿಳೆಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇದನ್ನೂ ಓದಿ: ಪ್ರಧಾನಿ, ಭಾರತದ ರಾಯಭಾರಿ ಕಚೇರಿಗೆ ಧನ್ಯವಾದ ತಿಳಿಸಿದ ಪಾಕ್ ಯುವತಿ

    ಒಟ್ಟಾರೆಯಾಗಿ ಕಳೆದ ವರ್ಷ ಮಲೆನಾಡಿಗರ ನಿದ್ದೆ ಗೆಡಿಸಿದ್ದ ಮಂಗನ ಕಾಯಿಲೆ ಭೀತಿ ಇದೀಗ ಶಿವಮೊಗ್ಗ ಜಿಲ್ಲೆಗೆ ಕಾಲಿಟ್ಟಿದೆ.  ಜಿಲ್ಲೆಯ ಇಬ್ಬರು ಮಹಿಳೆಯರಲ್ಲಿ ಮಂಗನ ಕಾಯಿಲೆ ಪತ್ತೆಯಾದ ಹಿನ್ನೆಲೆಯಲ್ಲಿ ಆ ಭಾಗದ ಜನರು ಆತಂಕಗೊಂಡಿದ್ದಾರೆ. ಇದನ್ನೂ ಓದಿ: ಮೋದಿ ಸ್ಟ್ರಾಂಗ್: ಸೇನಾಬಲ ಬಳಸಿ ಪಾಕ್‍ಗೆ ತಿರುಗೇಟು ನೀಡುವ ಸಾಧ್ಯತೆ! 

  • ಬೆಕ್ಕು ಕಚ್ಚಿದ್ದರಿಂದ ಇಬ್ಬರು ಮಹಿಳೆಯರು ಸಾವು

    ಬೆಕ್ಕು ಕಚ್ಚಿದ್ದರಿಂದ ಇಬ್ಬರು ಮಹಿಳೆಯರು ಸಾವು

    ಅಮರಾವತಿ: ಬೆಕ್ಕು ಕಚ್ಚಿದ ಪರಿಣಾಮ ಇಬ್ಬರು ಮಹಳೆಯರು ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ.

    ಮೃತ ದುರ್ದೈವಿಗಳನ್ನು ಕಮಲ(64) ಹಾಗೂ ನಾಗಮಣಿ(43) ಎಂದು ಗುರುತಿಸಲಾಗಿದೆ. ಇವರು ಶನಿವಾರ ಮೊವ್ವಾ ಮಂಡಲ್ ನಲ್ಲಿರುವ ವೆಮುಲಮಾಡ ಗ್ರಾಮದ ನಿವಾಸಿಗಳು. ಇದನ್ನೂ ಓದಿ: ಆಸ್ತಿ ವಿಚಾರಕ್ಕೆ ತಂದೆಯ ಕತ್ತು ಹಿಸುಕಿ ಕೊಂದು ಬೆಂಕಿ ಹಚ್ಚಿದ ಪಾಪಿ ಮಗ

    ಕಮಲ ಹಾಗೂ ನಾಗಮಣಿಗೆ ಎರಡು ತಿಂಗಳ ಹಿಂದೆ ಬೆಕ್ಕು ಕಚ್ಚಿತ್ತು. ಕೂಡಲೇ ಅವರು ಸ್ಥಳೀಯ ಆಸ್ಪತ್ರೆಗೆ ತೆರಳಿ ಚುಚ್ಚುಮದ್ದು ಪಡೆದುಕೊಂಡಿದ್ದರು. ಆದರೆ ಮಾ.4 ರಂದು ಕಮಲಾ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದ್ದು, ಹೀಗಾಗಿ ಅವರನ್ನು ಮಂಗಳಗಿರಿಯ ಎನ್‍ಆರ್‍ಐ ಆಸ್ಪತ್ರೆಗೆ ದಾಖಲಿಸಲಾಯಿತು. ಇತ್ತ ನಾಗಮಣಿ ಆರೋಗ್ಯ ಕುಡ ಕೈಕೊಟ್ಟಿದ್ದರಿಂದ ಅವರನ್ನು ಕೂಡ ವಿಜಯವಾಡದ ಕಾರ್ಪೊರೇಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಶನಿವಾರ ಮೃತಪಟ್ಟಿದ್ದಾರೆ.

    ಸಾಂದರ್ಭಿಕ ಚಿತ್ರ

    ಬೆಕ್ಕು ಕಚ್ಚಿದ ನಂತರ ಈ ಮಹಿಳೆಯರಿಗೆ ರೇಬಿಸ್ ತಗುಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಾಯಿ, ಇಲಿ, ಹಾವು ಕಚ್ಚಿದರೆ ಕೂಡಲೇ ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಆರೋಗ್ಯ ಕೇಂದ್ರದ ಅಧಿಕಾರಿ ಶಿವರಾಮಕೃಷ್ಣ ರಾವ್ ಸಲಹೆ ಕೊಟ್ಟಿದ್ದಾರೆ.

  • ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದ ಟ್ಯಾಟೂ ಕಲಾವಿದ ಅರೆಸ್ಟ್

    ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದ ಟ್ಯಾಟೂ ಕಲಾವಿದ ಅರೆಸ್ಟ್

    ಕೊಚ್ಚಿ: ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದ ಆರೋಪದ ಮೇಲೆ ಟ್ಯಾಟೂ ಕಲಾವಿದನೊಬ್ಬನನ್ನು ಕೇರಳ ಪೊಲೀಸರು ಶನಿವಾರ ಕೊಚ್ಚಿಯಲ್ಲಿ ಬಂಧಿಸಿದ್ದಾರೆ.

    ನಗರದ ಎಡಪಲ್ಲಿಯಲ್ಲಿ ಟ್ಯಾಟೂ ಸ್ಟುಡಿಯೋ ನಡೆಸುತ್ತಿರುವ ಆರೋಪಿ ಸುಜೀಶ್ ಬಂಧಿತ ಆರೋಪಿ. ಸುಜೀಶ್ ವಿರುದ್ಧ 6 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಟ್ಯಾಟೂ ಸ್ಟುಡಿಯೋದಲ್ಲಿ ಟ್ಯಾಟೂ ಹಾಕುವಾಗ ಸುಜೀಶ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು 18 ವರ್ಷದ ಯುವತಿಯೊಬ್ಬರು ಆರೋಪಿಸಿದ್ದರು. ಇದನ್ನೂ ಓದಿ: ಮೊದಲು ಉಕ್ರೇನ್ ಸ್ವರ್ಗದಂತಿತ್ತು, ಈಗ ನರಕವಾಗಿದೆ – ಉಕ್ರೇನ್‍ನಲ್ಲಿ ಸಿಲುಕಿದ್ದ ಬೀದರ್ ಮೂಲದ ಯುವಕ

    ಈಗಾಗಲೇ ಸುಜೀಶ್‍ನನ್ನು ಪೊಲೀಸರು ವಶಕ್ಕೆ ಪಡೆಯಲಾಗಿದ್ದು, ಭಾನುವಾರ ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತ ಸಿ.ಎಚ್.ನಾಗರಾಜು ತಿಳಿಸಿದ್ದಾರೆ. ಇದನ್ನೂ ಓದಿ: ಅವಧಿಗೂ ಮುನ್ನವೇ ರಾಜ್ಯದಲ್ಲಿ ಚುನಾವಣೆ ಬರುವ ಸಾಧ್ಯತೆ: ಹೆಚ್‍ಡಿಕೆ

    ಆರೋಪಿಯನ್ನು ಚೇರನಲ್ಲೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಮತ್ತು 376ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.

  • ನಿಮ್ಮ ಗರ್ಲ್‍ಫ್ರೆಂಡ್ ಬರ್ತ್‍ಡೇಗೆ ಯಾವ ಗಿಫ್ಟ್ ಕೊಟ್ಟರೆ ಫುಲ್ ಖುಷ್ ಆಗ್ತಾರೆ ಗೊತ್ತಾ?

    ನಿಮ್ಮ ಗರ್ಲ್‍ಫ್ರೆಂಡ್ ಬರ್ತ್‍ಡೇಗೆ ಯಾವ ಗಿಫ್ಟ್ ಕೊಟ್ಟರೆ ಫುಲ್ ಖುಷ್ ಆಗ್ತಾರೆ ಗೊತ್ತಾ?

    ಸಾಮಾನ್ಯವಾಗಿ ಹುಡುಗರಿಗೆ ತಮ್ಮ ಗರ್ಲ್‍ಫ್ರೆಂಡ್ ಬರ್ತ್‍ಡೇ ವೇಳೆ ಯಾವ ರೀತಿಯ ಉಡುಗೊರೆಗಳನ್ನು ನೀಡಬೇಕು ಎಂದು ತಿಳಿಯದೇ ಗೊಂದಲದಲ್ಲಿರುತ್ತಾರೆ. ಆದರೆ ಪ್ರತಿಯೋರ್ವ ಮಹಿಳೆಯರಿಗೆ ಆಭರಣಕ್ಕಿಂತ ಪ್ರಿಯವಾದದ್ದು ಮತ್ತೊಂದಿಲ್ಲ. ಚಿಕ್ಕ ಆಭರಣಗಳು ಸಹ ಮಹಿಳೆಯರಿಗೆ ಸಖತ್ ಖುಷಿ ನೀಡುತ್ತದೆ. ನೀವು ನಿಮ್ಮ ಗರ್ಲ್‍ಫ್ರೆಂಡ್‍ಗೆ ವಿಶೇಷವಾದ ಉಡುಗೊರೆ ನೀಡಲು ಬಯಸುತ್ತಿದ್ದರೆ, ಚೀಪ್ ಆ್ಯಂಡ್ ಬೆಸ್ಟ್ ರೇಟ್‍ನಲ್ಲಿ ಸಿಗುವ ಪುಟ್ಟ-ಪುಟ್ಟ ಆಭರಣಗಳನ್ನು ಗಿಫ್ಟ್ ಆಗಿ ನೀಡಬಹುದು.

    ಇಯರಿಂಗ್ಸ್ ಸೆಟ್
    ಈ ಇಯರಿಂಗ್ ಸೆಟ್‍ನಲ್ಲಿ 6 ರೀತಿಯ ಸುಂದರವಾದ ಇಯರಿಂಗ್ಸ್‍ಗಳಿದ್ದು, ಇದನ್ನು ನಿಮ್ಮ ಗೆಳತಿ ದಿನನಿತ್ಯ ಬಳಸಬಹುದಾಗಿದೆ. ಅಲ್ಲದೇ ಡೈಮಂಡ್ ಸ್ಟಡ್‍ಗಳು ಮತ್ತು ಪರ್ಲ್ ಸ್ಟಡ್, ರೌಂಡ್ ಶೇಪ್ ಇಯರಿಂಗ್ ಸೇರಿದಂತೆ ಹಲವಾರು ಆಕಾರಗಳಲ್ಲಿ ಇಯರಿಂಗ್ಸ್‍ಗಳಿದ್ದು, ಇವುಗಳನ್ನು ನಿಮ್ಮ ಗೆಳತಿ ಆಫೀಸ್ ವೇರ್ ಮತ್ತು ಡೇಟ್ ನೈಟ್‍ಗೆ ತೆರಳುವ ವೇಳೆ ಕೂಡ ಧರಿಸಬಹುದಾಗಿದೆ.

    Jewelry

    ಟ್ರೆಡಿಷನಲ್ ಇಯರಿಂಗ್
    ಮಹಿಳೆಯರ ಇಯರ್ ಕಲೆಕ್ಷನ್‍ನಲ್ಲಿ ಟ್ರೆಡಿಷನಲ್ ಇಯರ್ ಕೂಡ ಒಂದು. ಮದುವೆ ಸಮಾರಂಭಗಳಲ್ಲಂತೂ ಮಹಿಳೆಯರಿಗೆ ಟ್ರೆಡಿಷನಲ್ ಇಯರಿಂಗ್ಸ್ ಬಹಳ ಮುಖ್ಯ. ಸದ್ಯ ಕೆಳಗೆ ನೀಡಲಾಗಿರುವ ಈ ಚಿನ್ನದ ಇಯರಿಂಗ್ ಸೀರೆ ಹಾಗೂ ಲೆಹೆಂಗಾದ ಜೊತೆ ಧರಿಸುವುದರಿಂದ ಇದು ನಿಮ್ಮ ಗೆಳತಿಯ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ.

    Jewelry

    ಜ್ಯುವೆಲರಿ ಕೊಂಬೋ
    ಈ ಜ್ಯುವೆಲರಿ ಕೊಂಬೋದಲ್ಲಿ ಇಯರಿಂಗ್, ಮ್ಯಾಚಿಂಗ್ ನೆಕ್ಲೇಸ್ ಮತ್ತು ಬ್ರೇಸ್ಲೆಟ್‍ಗಳನ್ನು ನೀಡಲಾಗಿರುತ್ತದೆ. ಈ ಸೆಟ್ ಶೈನಿಂಗ್ ನೀಡುವುದರ ಜೊತೆಗೆ ನಿಮ್ಮ ಗೆಳತಿಗೆ ಕಂಪ್ಲೀಟ್ ಲುಕ್ ನೀಡುತ್ತದೆ. ಇದನ್ನು ಕೋಬಾಲ್ಟ್ ನೀಲಿ ಕಲ್ಲು ಮತ್ತು ಸಣ್ಣ ವಜ್ರಗಳಿಂದ ತಯಾರಿಸಲಾಗಿದೆ. ಈ ಜ್ಯುವೆಲರಿ ಸೆಟ್ ಟ್ರೆಡಿಷನ್ ಮತ್ತು ವೆಸ್ಟ್ರನ್ ಡ್ರೆಸ್ ಎರಡಕ್ಕೂ ಸೂಟ್ ಆಗುತ್ತದೆ.

    Jewelry

    ಸಾಲಿಟೇರ್ ರಿಂಗ್
    ಏಕ ವಜ್ರದ ಉಂಗುರವನ್ನು ಸಾಲಿಟೇರ್ ರಿಂಗ್ ಎಂದು ಕರೆಯಲಾಗುತ್ತದೆ. ಇದು ನಿಶ್ಚಿತಾರ್ಥದ ರಿಂಗ್ ಎಂದೇ ಫೇಮಸ್ ಆಗಿದೆ. ಇದರಲ್ಲಿ ಸಾಕಷ್ಟು ಬೆಸ್ಟ್ ಡಿಸೈನ್‍ಗಳಿದೆ. ನಿಮ್ಮ ಗರ್ಲ್ ಫ್ರೆಂಡ್ ಅಥವಾ ಪತ್ನಿ ವಜ್ರದ ಉಂಗುರಗಳಲ್ಲಿ ಕ್ಲಾಸಿಕ್ ಅಥವಾ ದೊಡ್ಡ ಸಾಲಿಟೇರ್ ಡೈಮಂಡ್ ರಿಂಗ್‍ಗಳನ್ನು ಇಷ್ಟಪಟ್ಟರೆ ಈ ಉಂಗುರಗಳನ್ನು ಗಿಫ್ಟ್ ಆಗಿ ನೀಡಬಹುದಾಗಿದೆ.

    Jewelry

  • ನ್ಯಾಯ ಸಿಗಲಿಲ್ಲವೆಂದು ಪೊಲೀಸ್ ಠಾಣೆ ಮುಂದೆಯೇ ಬೆಂಕಿ ಹಚ್ಚಿಕೊಂಡಳು!

    ನ್ಯಾಯ ಸಿಗಲಿಲ್ಲವೆಂದು ಪೊಲೀಸ್ ಠಾಣೆ ಮುಂದೆಯೇ ಬೆಂಕಿ ಹಚ್ಚಿಕೊಂಡಳು!

    ಲಕ್ನೋ: ನ್ಯಾಯ ಸಿಗಲಿಲ್ಲವೆಂದು ಮಹಿಳೆಯೊಬ್ಬಳು ಪೊಲೀಸ್ ಠಾಣೆ ಎದುರೇ ಬೆಂಕಿ ಹಚ್ಚಿಕೊಂಡಿರುವ ಘಟನೆ ನೊಯ್ಡಾದಲ್ಲಿ ನಡೆದಿದೆ.

    ತನಗೆ ಲೈಂಗಿಕ ಕಿರುಕುಳ ನೀಡಿದ ಮಾವನ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ನಿರಾಕರಿಸಿದ್ದಾರೆ ಎಂದು ಸಂತ್ರಸ್ತೆಯೊಬ್ಬರು ನಿನ್ನೆ ನೊಯ್ಡಾ 2ನೇ ಹಂತದ ಪೊಲೀಸ್ ಠಾಣೆಯ ಹೊರಗೆ ಬೆಂಕಿ ಹಚ್ಚಿಕೊಂಡಿದ್ದಾರೆ. ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಿಳೆ ದೇಹ 40% ಸುಟ್ಟುಹೋಗಿದೆ. ಈ ಹಿನ್ನೆಲೆ ಆಕೆಯನ್ನು ದೆಹಲಿಯ ಸಫ್ದರ್‍ಜಂಗ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ. ಇದನ್ನೂ ಓದಿ:  ಪೋಷಕರ ವಿರೋಧದ ನಡುವೆಯೂ ಪ್ರೇಮ ವಿವಾಹ – ನವದಂಪತಿ ಆತ್ಮಹತ್ಯೆ

    ನೊಯ್ಡಾದ ಇಲಾಬಸ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಪೊಲೀಸರು ಸಂತ್ರಸ್ತೆಯ ದೂರನ್ನು ತೆಗೆದುಕೊಳ್ಳಲು ನಿರಕಾರಿಸಿದ್ದರು. ಪರಿಣಾಮ ಮಹಿಳೆ ಈ ರೀತಿ ಕೃತ್ಯಕ್ಕೆ ಕೈಹಾಕಿದ್ದಾಳೆ. ಘಟನೆ ನಂತರ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ತನ್ನ ಆಳಲನ್ನು ಹೇಳಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಏನಿದು ಘಟನೆ?
    ಗೌತಮ್ ಬುಧ್ ನಗರದ ಜಂಟಿ ಪೊಲೀಸ್ ಕಮಿಷನರ್ ಲವ್ ಕುಮಾರ್ ಈ ಕುರಿತು ಮಾತನಾಡಿದ್ದು, ಮಹಿಳೆಯು ಇಲಬಾಸ್ ಗ್ರಾಮದ ನೀರಜ್ ಮತ್ತು ಸುಮಿತ್ ಹೆಸರಿನ ಇಬ್ಬರು ಪುರುಷರ ವಿರುದ್ಧ ಎನ್‍ಎಸ್‍ಇಜೆಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆದರೆ ಅವರು ದೂರು ತೆಗೆದುಕೊಳ್ಳಲು ನಿರಾಕರಿಸಿದ್ದು, ತನ್ನ ವ್ಯಕ್ತಿತ್ವಕ್ಕೆ ಹಾನಿ ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ ಎಂದು ಸಂಗೀತ ರೋಚಿಗೆದ್ದಿದ್ದಾಳೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: 1,200 ವರ್ಷದಷ್ಟು ಹಳೆಯ ಮಕ್ಕಳ, ವಯಸ್ಕರ ಅವಶೇಷ ಪತ್ತೆ!

    ಈ ವೇಳೆ ಆಕೆಯ ವಿರುದ್ಧವೂ ಪೊಲೀಸರಿಗೆ ದೂರು ಬಂದಿದೆ. ಈ ದೂರಿನಲ್ಲಿ ಸಂಗೀತ ಸಾಕಷ್ಟು ಜನರಿಂದ ಸಾಲ ಪಡೆದಿದ್ದಾರೆ. ಆದರೆ ತೆಗೆದುಕೊಂಡಿದ್ದ ಹಣವನ್ನು ಹಿಂತಿರುಗಿಸುತ್ತಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಸಂಬಂಧ ಭಾನುವಾರ ಎರಡೂ ಕಡೆಯವರನ್ನು ಠಾಣೆಗೆ ಕರೆಸಲಾಗಿತ್ತು. ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ತಿಳಿಸಲಾಗಿತ್ತು. ಆದರೆ ಆಕೆ ಮಂಗಳವಾರ ಪೊಲೀಸ್ ಠಾಣೆಗೆ ಬಂದು ಆತ್ಮಾಹುತಿಗೆ ಯತ್ನಿಸಿದ್ದಾಳೆ ಎಂದು ತಿಳಿಸಿದ್ದಾರೆ. ನೊಯ್ಡಾ ಹಂತ 1ರ ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ತನಿಖೆಯನ್ನು ಪ್ರಾರಂಭಿಸಲಾಗಿದೆ.

  • ಮಹಿಳೆ ಹೆಚ್ಚು ಸ್ಟ್ರಾಂಗ್ ಎಂಬುದನ್ನು ಪುರುಷರು ಅರ್ಥಮಾಡಿಕೊಳ್ಳಬೇಕು: ಮಾಧವನ್

    ಮಹಿಳೆ ಹೆಚ್ಚು ಸ್ಟ್ರಾಂಗ್ ಎಂಬುದನ್ನು ಪುರುಷರು ಅರ್ಥಮಾಡಿಕೊಳ್ಳಬೇಕು: ಮಾಧವನ್

    ಮುಂಬೈ:  ಮಹಿಳೆಯರು ಹೆಚ್ಚು ಸ್ಟ್ರಾಂಗ್ ಎಂಬುದನ್ನು ಪುರುಷರು ಅರ್ಥ ಮಾಡಿಕೊಳ್ಳಬೇಕು ಎಂದು ಬಾಲಿವುಡ್ ನಟ ಮಾಧವನ್ ಹೇಳಿದ್ದಾರೆ.

    ಲಿಂಗ ತಾರತಮ್ಯದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಸಕ್ರಿಯವಾಗಿ ಏನನ್ನೂ ಮಾಡದಿದ್ದರೂ, ತಮ್ಮ ನಿಯಮಗಳನ್ನು ತೊಡೆದುಹಾಕುವುದು ಅತ್ಯಂತ ಮುಖ್ಯವಾದ ವಿಷಯ ಎಂದು ನಾನು ಭಾವಿಸುತ್ತೇನೆ. ಆದರೆ ಎಲ್ಲದಕ್ಕೂ ಪುರುಷರನ್ನು ದೂಷಿಸಲು ಸಾಧ್ಯವಿಲ್ಲ. ಏಕೆಂದರೆ ಅವರು ಈ ನಿಯಮಗಳಲ್ಲಿ ಬೆಳೆದು ಬಂದಿದ್ದಾರೆ ಎಂದು ವಿವರಿಸಿದ ಅವರು, ಪುರುಷ ಮತ್ತು ಮಹಿಳೆಯರ ಕೆಲಸ ಹೇಗೆ ಹಂಚಿಕೆಯಾಗಿದೆ ಎಂಬುದು ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಕಹಳೆ – ರಷ್ಯಾ ಮೇಲೆ ಹಣಕಾಸು ಸೇರಿ ವಿವಿಧ ನಿರ್ಬಂಧ ಹೇರಿದ ಅಮೆರಿಕ!
    ಮಹಿಳೆಯರು ಮತ್ತು ಪುರುಷರು ಬೆಳೆದು ಬರುವ ವಾತಾವರಣದಿಂದ ವ್ಯಕ್ತಿತ್ವ ನಿರ್ಧಾರವಾಗುತ್ತೆ. ಇದರಲ್ಲಿ ಜನರದ್ದು ಏನೂ ತಪ್ಪಿಲ್ಲ. ಕುಟುಂಬವೂ ಮೊದಲು ಶಿಕ್ಷಣ ಕೊಡಬೇಕು. ಕುಟುಂಬವೇ ಮಹಿಳೆಯರನ್ನು ಕೆಲವೊಮ್ಮೆ ನಿರ್ಬಂಧಿಸುವ ವಿಷಯಗಳು ಇವೆ ಎಂಬುದು ನನ್ನ ಭಾವನೆ ಎಂದು ಹೇಳಿದ್ದಾರೆ.

    ಮಹಿಳೆಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಬಲಶಾಲಿಗಳು. ಪುರುಷರಿಗೆ ಈ ವಿಷಯವನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತೆ. ಆದರೆ ಇದು ಸತ್ಯ. ಮಹಿಳೆಯರು ಬೆಳೆದಂತೆ ಅವರ ಬುದ್ದಿಶಕ್ತಿ ಹೆಚ್ಚಾಗುತ್ತೆ ಎಂದಿದ್ದಾರೆ. ಇದನ್ನೂ ಓದಿ: ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ

    Actor Madhavan Family Members Wife, Son, Father, Mother Photos & Biography - YouTube

    ನನ್ನ ಮನೆಯಲ್ಲಿ ಎಲ್ಲ ಮಹಿಳೆಯರು ಪವರ್‌ಫುಲ್ ಆಗಿದ್ದಾರೆ. ನನ್ನ ತಾಯಿ, ಅಜ್ಜಿ ಎಲ್ಲರು ಮಾತೃಪ್ರಧಾನವಾಗಿ ಮನೆಯನ್ನು ನಡೆಸುತ್ತಾರೆ. ಇದರಿಂದ ನಮ್ಮ ಮನೆಯಲ್ಲಿ ಪುರುಷರು ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತ ಸಂತೋಷವಾಗಿದ್ದಾರೆ. ಅವರು ಕಾಳಜಿ ವಹಿಸುವುದು, ನಮ್ಮನ್ನು ನೋಡಿಕೊಳ್ಳುವ ರೀತಿ ನೋಡಿದರೆ ಸಂತೋಷವಾಗುತ್ತೆ ಎಂದು ತಿಳಿಸಿದ್ದಾರೆ.

  • ತಂದೆಯ ತಿಥಿ ಕಾರ್ಯದ ದಿನವೇ ಮಗಳ ದಾರುಣ ಸಾವು

    ತಂದೆಯ ತಿಥಿ ಕಾರ್ಯದ ದಿನವೇ ಮಗಳ ದಾರುಣ ಸಾವು

    ಬೆಂಗಳೂರು: ತಂದೆಯ ತಿಥಿ ಕಾರ್ಯಕ್ಕೆಂದು ಮಗಳು ಅಡುಗೆ ಮಾಡುವಾಗ ಸಿಲಿಂಡರ್ ಬ್ಲ್ಯಾಸ್ಟ್ ಆಗಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಕೆ ಎಸ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ನಡೆದಿದೆ.

    ಮಗಳು ಪರಮೇಶ್ವರಿ (42) ಮೃತ ಮಹಿಳೆ. ಕಾಶಿನಾಥ್‍ರ 6ನೇ ವರ್ಷದ ಪುಣ್ಯತಿಥಿ ಹಿನ್ನೆಲೆ ಕುಟುಂಬಸ್ಥರು ತಿಥಿ ಕಾರ್ಯಕ್ಕೆ ಮಾಂಸಾಹಾರ ಅಡುಗೆ ಮಾಡಲು ಸಿಲಿಂಡರ್ ತರಿಸಿದ್ದರು. ಮನೆ ಚಿಕ್ಕದಾಗಿದ್ದು ಕೋಣೆಯಲ್ಲೇ ಸ್ಟೌವ್ ಇಟ್ಟು ಅಡುಗೆ ಮಾಡಲು ತಯಾರಿ ನಡೆಸಿದ್ದರು. ಇದೇ ವೇಳೆ ಗ್ಯಾಸ್ ಸೋರಿಕೆಯಾಗಿ ಸ್ಟೌವ್ ಬೆಂಕಿಯ ತೀವ್ರತೆಗೆ ಗ್ಯಾಸ್ ಫ್ಲೇಮ್ ದೊಡ್ಡದಾಗಿ ಹೊತ್ತಿಕೊಂಡಿದೆ. ಇದನ್ನೂ ಓದಿ: ಆಫ್‍ಲೈನ್ ಕ್ಲಾಸ್‍ಗೆ ಹೋಗು ಅಂದಿದ್ದಕ್ಕೆ ಹುಡುಗಿ ಆತ್ಮಹತ್ಯೆ

    ಬೆಂಕಿಯ ತೀವ್ರತೆಯ ಪರಿಣಾಮ ಕಾಶಿನಾಥ್‍ರ ಪತ್ನಿ ಸೌಭಾಗ್ಯ (75) ದೇಹ ಹೆಚ್ಚು ಸುಟ್ಟಿದೆ. ಮಗ ಶರವಣ (43) ತಲೆ ಮತ್ತು ಕೈ ಕಾಲು, ಹೊಟ್ಟೆ ಭಾಗ ಸುಟ್ಟಿದೆ. ಸಂಬಂಧಿ ಪರಮಶಿವಂ (47) ಎರಡು ಕೈ ಕಾಲು ಸುಟ್ಟು ಹೋಗಿದೆ. ಪರಮಶಿವಂ ಪತ್ನಿ ಭುವನೇಶ್ವರಿ (40)ತಲೆ, ಎರಡು ಕೈ ಮತ್ತು ಒಂದು ಕಾಲು ಸುಟ್ಟಿದೆ. ಮತ್ತೊಬ್ಬ ಸಂಬಂಧಿ ಮಾಲಾ (60) ಕೈ , ಕತ್ತಿನ ಭಾಗ ಸುಟ್ಟಿದ್ದು, ಗಾಯಾಳುಗಳಿಗೆ ವಿಕ್ಟೋರಿಯಾ ಬರ್ನಿಂಗ್ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ರಾಜಧಾನಿಯಲ್ಲಿ ಮತ್ತೆ ಶುರುವಾಯ್ತು ದುಷ್ಕರ್ಮಿಗಳ ಪುಂಡಾಟ!

    ಕುಮಾರಸ್ವಾಮಿ ಲೇ ಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 7 ರಾಜ್ಯಗಳ ಅಳಿಯ, 14 ಮಹಿಳೆಯರಿಗೆ ಪತಿ ಈ ನಕಲಿ ವೈದ್ಯ

    7 ರಾಜ್ಯಗಳ ಅಳಿಯ, 14 ಮಹಿಳೆಯರಿಗೆ ಪತಿ ಈ ನಕಲಿ ವೈದ್ಯ

    ಭುವನೇಶ್ವರ: ವ್ಯಕ್ತಿಯೊಬ್ಬ ತಾನೂ ವೈದ್ಯ ಎಂದು ಹೇಳಿ ಏಳು ರಾಜ್ಯಗಳಲ್ಲಿ ಒಟ್ಟು 14 ಮಹಿಳೆಯರನ್ನು ಮದುವೆಯಾಗಿ ವಂಚಿಸಿದ್ದನು. ಈ ಖತರ್ನಾಕ್ ನಕಲಿ ವೈದ್ಯನನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.

    ಬಿಧು ಪ್ರಕಾಶ್ ಸ್ವೈನ್(54) ಅಲಿಯಾಸ್ ರಮೇಶ್ ಸ್ವೈನ್ ಆರೋಪಿಯಾಗಿದ್ದಾನೆ. ಈತ ಒಡಿಶಾದ ಕೇಂದ್ರಪ್ಪ ಜಿಲ್ಲೆಯ ನಿವಾಸಿಯಾಗಿದ್ದಾನೆ. ಮ್ಯಾಟ್ರಿಮೋನಿಯಲ್ ವೆಬ್ ಸೈಟ್‍ಗಳಲ್ಲಿ ತಾನು ವೈದ್ಯ ಎಂದು ಹೇಳಿಕೊಂಡು 14 ಮಹಿಳೆಯರನ್ನು ಮದುವೆಯಾಗಿದ್ದಾನೆ. ಸರಿಸುಮಾರು 7 ರಾಜ್ಯಗಳ ಮಹಿಳೆಯರಿಗೆ ಮೋಸ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಕೆಂಪುಕೋಟೆ ಮೇಲೆ ಸಿಖ್‌ ಬಾವುಟ ಹಾರಿಸಿದ್ದ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಸಾವು

    ಪಂಜಾಬ್, ದೆಹಲಿ, ಅಸ್ಸಾಂ, ಜಾರ್ಖಂಡ್, ಒಡಿಶಾದ ಮಧ್ಯವಯಸ್ಕ ಮಹಿಳೆಯರು ಮತ್ತು ವಿಚ್ಛೇದಿತರನ್ನು ಸ್ವೈನ್ ಟಾರ್ಗೆಟಾಗಿದ್ದರು. ಕೆಲವು ವೈವಾಹಿಕ ವೆಬ್‍ಸೈಟ್‍ಗಳ ಮೂಲಕ ಮಹಿಳೆಯರನ್ನು ಸಂಪರ್ಕಿಸಿ ತಾನು ಕೇಂದ್ರ ಆರೋಗ್ಯ ಸಚಿವಾಲಯದಲ್ಲಿ ಕೆಲಸ ಮಾಡುವ ವೈದ್ಯ ಎಂದು ಸುಳ್ಳು ಹೇಳಿ ಬಲೆ ಬೀಸುತ್ತಿದ್ದನು. ಮದುವೆಯಾಗುವ ಮಹಿಳೆಯರ ಬಳಿ ಇರುವ ಹಣ ಪಡೆಯಲು ಸಂಚು ರೂಪಿಸಿ ವಿವಾಹ ವಾಗುತ್ತಿದ್ದನು. ಮದುವೆಯ ನಂತರ ಕೆಲವು ದಿನಗಳ ಕಾಲ ಅವರೊಂದಿಗೆ ಇರುತ್ತಿದ್ದ. ನಂತರ ಭುವನೇಶ್ವರಕ್ಕೆ ಯಾವುದೋ ಕೆಲಸದ ನಿಮಿತ್ತ ಹೋಗುವ ನೆಪದಲ್ಲಿ ಆ ಹೆಣ್ಣಮಕ್ಕಳನ್ನು ಅವರ ಪೋಷಕರ ಬಳಿ ಬಿಟ್ಟು ಹೋಗುತ್ತಿದ್ದರು ದಾಶ್ ಹೇಳಿದ್ದಾರೆ. ಎಂದು ಭುವನೇಶ್ವರ ಡಿಸಿಪಿ ಉಮಾಶಂಕರ್ ದಾಶ್ ಹೇಳಿದ್ದಾರೆ. ಇದನ್ನೂ ಓದಿ: ಪದ್ಮಶ್ರೀ ಪ್ರಶಸ್ತಿ ತಿರಸ್ಕರಿಸಿದ್ದ ಗಾಯಕಿ ಸಂಧ್ಯಾ ಮುಖರ್ಜಿ ನಿಧನ

    ಸ್ವೇನ್ ವಿವಾಹವಾದವರಲ್ಲಿ ಸುಪ್ರೀಂ ಕೋರ್ಟ್‍ನ ವಕೀಲರು, ಹಿರಿಯ ಕೇಂದ್ರ ಸಶಸ್ತ್ರ ಪೆÇಲೀಸ್ ಪಡೆಗಳ ಅಧಿಕಾರಿಯೂ ಸೇರಿದ್ದಾರೆ. 10 ಲಕ್ಷದ ಆಸೆಗಾಗಿ 2018ರಲ್ಲಿ ಪಂಜಾಬ್‍ನ ಅಂPಈ ಅಧಿಕಾರಿಯನ್ನು ವಿವಾಹವಾದರು. ಬಳಿಕ ಗುರುದ್ವಾರಕ್ಕೆ ಆಸ್ಪತ್ರೆ ಮಂಜೂರು ಮಾಡುವುದಾಗಿ ಹೇಳಿ 11 ಲಕ್ಷ ರೂ.ಗಳನ್ನು ವಂಚಿಸಿದ್ದನು. ಸ್ವೇನ್ ಐದು ಮಕ್ಕಳ ತಂದೆಯಾಗಿದ್ದು, 1982 ರಲ್ಲಿ ಮೊದಲ ಬಾರಿಗೆ ವಿವಾಹವಾದರು. ನಂತರ 2002 ರಲ್ಲಿ ಮತ್ತೊಂದು ವಿವಾಹವಾದರು. 2002 ರಿಂದ 2020ರ ನಡುವೆ ಅವರು ಹಲವಾರು ಮಹಿಳೆಯರೊಂದಿಗೆ ಸ್ನೇಹ ಬೆಳೆಸಿ ಅವರನ್ನು ಮದುವೆಯಾಗಿದ್ದಾನೆ ಎಂದು ಹೇಳಿದ್ದಾರೆ.

    ಜುಲೈ 2021ರಲ್ಲಿ ದೆಹಲಿ ಮೂಲದ ಶಿಕ್ಷಕಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸ್ವೈನ್ ಅವರನ್ನು ಬಂಧಿಸಲಾಗಿದೆ. ಸಂತ್ರಸ್ತೆ ತನ್ನ ದೂರಿನಲ್ಲಿ, ಸ್ವೈನ್ ತನ್ನನ್ನು ನವದೆಹಲಿಯ ಆರ್ಯ ಸಮಾಜ ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ ಎಂದು ಹೇಳಿದ್ದಾರೆ. ಮಹಿಳೆ ನೀಡಿದ ಭುವನೇಶ್ವರದ ಖಂಡಗಿರಿ ಪ್ರದೇಶದ ಬಾಡಿಗೆ ವಸತಿಯಿಂದ ಬಂಧಿಸಲಾಯಿತು. ಸೆಕ್ಷನ್ 498 (ಎ), 419, 468, 471 ಮತ್ತು 494 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿವಿಧ ಮ್ಯಾಟ್ರಿಮೋನಿಯಲ್ ಸೈಟ್‍ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದ ಇನ್ನೂ 13 ಮಹಿಳೆಯರನ್ನು ಆತ ವಂಚಿಸಿರುವುದು ತನಿಖೆಯ ವೇಳೆ ಪತ್ತೆಯಾಗಿದೆ.

  • 4 ಬಾರಿ ಕಾರ್ಡಿಯಾಕ್‌ ಅರೆಸ್ಟ್‌ಗೆ ಒಳಗಾಗಿದ್ದ ಮಹಿಳೆ ವೆಂಟಿಲೇಟರ್‌ ಸಪೋರ್ಟ್‌ ಇಲ್ಲದೇ ಸೇಫ್‌!

    4 ಬಾರಿ ಕಾರ್ಡಿಯಾಕ್‌ ಅರೆಸ್ಟ್‌ಗೆ ಒಳಗಾಗಿದ್ದ ಮಹಿಳೆ ವೆಂಟಿಲೇಟರ್‌ ಸಪೋರ್ಟ್‌ ಇಲ್ಲದೇ ಸೇಫ್‌!

    ನವದೆಹಲಿ: ಕ್ಷಯ ರೋಗದಿಂದ ಬಳಲುತ್ತಿದ್ದ 51 ವರ್ಷದ ಮಹಿಳೆಗೆ ಒಂದು ವಾರದಲ್ಲಿ ನಾಲ್ಕು ಬಾರಿ ಹೃದಯ ಸ್ತಂಭನ (ಕಾರ್ಡಿಯಾಕ್‌ ಅರೆಸ್ಟ್‌) ಸಂಭವಿಸಿಯೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ನಾಲ್ಕು ಬಾರಿ ಹೃದಯ ಸ್ತಂಭನಕ್ಕೊಳಗಾದ ಮಹಿಳೆಯನ್ನು ದೆಹಲಿಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಯಾವುದೇ ವೆಂಟಿಲೇಟರ್‌ ಬೆಂಬಲವಿಲ್ಲದೇ ಮಹಿಳೆ ಬದುಕುಳಿದಿದ್ದಾರೆ. ಇದನ್ನೂ ಓದಿ: ಬಿಜೆಪಿ ಸುಳ್ಳುಗಾರರ ಪಕ್ಷ: ಅಖಿಲೇಶ್ ಯಾದವ್

    ತೀವ್ರವಾದ ಉಸಿರಾಟದ ಸಮಸ್ಯೆ ಮತ್ತು ದೇಹದಲ್ಲಿ ಊತ ಕಂಡುಬಂದಾಗ ಅವರನ್ನು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಗಿಯ ಹೃದಯದ ಸುತ್ತ ದ್ರವದ ಶೇಖರಣೆಯಾಗಿರುವುದು ಪ್ರಾಥಮಿಕ ಪರೀಕ್ಷೆಯಿಂದ ತಿಳಿದುಬಂದಿತ್ತು. ಹೀಗಾಗಿ ಹೃದಯದ ಬಡಿತದ ಮೇಲೆ ಪ್ರಭಾವ ಬೀರಿ ರಕ್ತದೊತ್ತಡ ಸಮಸ್ಯೆಗೆ ಕಾರಣವಾಗಿತ್ತು.

    ಹೆಚ್ಚುತ್ತಿದ್ದ ರಕ್ತದೊತ್ತಡ ನಿಯಂತ್ರಿಸಲು ಆಕೆಗೆ ಔಷಧ ಚಿಕಿತ್ಸೆಯನ್ನು ನೀಡಲಾಗಿತ್ತು. ರೋಗಿಯು ಟಿಬಿ ಕಾಯಿಲೆಯಿಂದಲೂ ಬಳಲುತ್ತಿದ್ದರು. ಕ್ಷಯ-ವಿರೋಧಿ ಚಿಕಿತ್ಸೆಯ ಸಮಯದಲ್ಲಿ, ರೋಗಿಯಲ್ಲಿ ನಿರಂತರ ವೇಗದ ಹೃದಯ ಬಡಿತ ಕಂಡುಬಂತು. ಇದು ನಮಗೆ ಸವಾಲೆನಿಸಿತು. ವಾರದೊಳಗೆ ಅವರು ನಾಲ್ಕು ಬಾರಿ ಹೃದಯ ಸ್ತಂಭನಕ್ಕೆ ಒಳಗಾಗಿದ್ದರು. ಆದರೂ ವೆಂಟಿಲೇಟರ್‌ ಬೆಂಬಲವಿಲ್ಲದೇ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಪತ್ನಿ ಬಿಟ್ಟು ಪ್ರೇಯಸಿಯನ್ನು ಮದುವೆಯಾಗಲು ಹೊರಟಿದ್ದ ಭೂಪ – ಕುಟುಂಬಸ್ಥರಿಂದಲೇ ಬಿತ್ತು ಗೂಸಾ

    ವೈದ್ಯಕೀಯವಾಗಿ ಇದು ತುಂಬಾ ಸವಾಲಿನ ಪ್ರಕರಣವಾಗಿತ್ತು. ವೈದ್ಯರ ತಂಡದ ಸೂಕ್ತ ತಪಾಸಣೆ, ಅಗತ್ಯ ಚಿಕಿತ್ಸೆ, ನಿಗಾವಹಿಸುವಿಕೆಯಿಂದಾಗಿ ರೋಗಿಯು ಅಪಾಯದಿಂದ ಪಾರಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಓಖ್ಲಾದ ಫೋರ್ಟಿಸ್‌ ಎಸ್ಕಾರ್ಟ್ಸ್‌ ಹಾರ್ಟ್‌ ಇನ್‌ಸ್ಟಿಟ್ಯೂಟ್‌ನ ವಲಯ ನಿರ್ದೇಶಕ ಬಿದೇಶ್‌ ಚಂದ್ರ ಪೌಲ್‌ ಹೇಳಿದ್ದಾರೆ.

    ಇತ್ತೀಚೆಗೆ ಕನ್ನಡದ ನಟ ಪುನೀತ್‌ ರಾಜ್‌ಕುಮಾರ್‌ ಅವರು ಹೃದಯ ಸ್ತಂಭನ (ಕಾರ್ಡಿಯಾಕ್‌ ಅರೆಸ್ಟ್‌)ದಿಂದಾಗಿ ಕೊನೆಯುಸಿರೆಳೆದಿದ್ದರು. ಒಮ್ಮೆ ಕಾರ್ಡಿಯಾಕ್‌ ಅರೆಸ್ಟ್‌ ಆದರೆ ಬದುಕುಳಿಯುವುದು ತುಂಬಾ ಕಷ್ಟ. ವೈದ್ಯರಿಗೆ ಅದು ಸವಾಲಿನ ಕೆಲಸ ಎಂಬುದು ತಜ್ಞರ ಅಭಿಪ್ರಾಯವಾಗಿದೆ.