Tag: women

  • ಮಗಳಿಗಾಗಿ 36 ವರ್ಷ ಪುರುಷನ ವೇಷದಲ್ಲಿದ್ದ ತಾಯಿ

    ಮಗಳಿಗಾಗಿ 36 ವರ್ಷ ಪುರುಷನ ವೇಷದಲ್ಲಿದ್ದ ತಾಯಿ

    ಚೆನ್ನೈ: ಮಹಿಳೆಯರಿಂದು ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮನಾಗಿ ನಿಲ್ಲುತ್ತಿದ್ದಾರೆ. ಆದರೆ, ಲೈಂಗಿಕ ಕಿರುಕುಳದಿಂದ ಬೇಸತ್ತಿದ್ದ 57 ವರ್ಷದ ಮಹಿಳೆಯೊಬ್ಬರು ತನ್ನ ಮಗಳಿಗಾಗಿ ಕಳೆದ 36 ವರ್ಷಗಳಿಂದ ಪುರುಷನ ಸೋಗಿನಲ್ಲೇ ಜೀವಿಸುತ್ತಿದ್ದ ಮನಕಲಕುವ ಘಟನೆ ಇದೀಗ ಬೆಳಕಿಗೆ ಬಂದಿದೆ.

    ತಮಿಳುನಾಡಿನ ಕಾಟುನಾಯಕನಹಟ್ಟಿ ನಿವಾಸಿಯಾದ ಎಸ್.ಪಚ್ಚಿಯಮ್ಹಾಳ್ ಎಂಬವರೇ ಈ ಘಟನೆಗೆ ಸಾಕ್ಷಿಯಾಗಿರುವುದು. ಇದನ್ನೂ ಓದಿ: ಯುವತಿಯರೊಂದಿಗೆ ಕುಣಿದು ಕುಪ್ಪಳಿಸಿದ MLA ಗೋಪಾಲ್ ಮಂಡಲ್ – ವೀಡಿಯೋ ವೈರಲ್ 

    02

    ಈಕೆ ತನ್ನ 20ನೇ ವಯಸ್ಸಿನಲ್ಲಿ ಮದುವೆಯಾಗಿ, 15 ದಿನಗಳಲ್ಲೇ ಪತಿಯನ್ನು ಕಳೆದುಕೊಂಡಿದ್ದರು. ಘಟನೆ ನಡೆದ ಕೆಲ ತಿಂಗಳಲ್ಲೇ ಹೆಣ್ಣುಮಗುವಿಗೆ ಜನ್ಮ ನೀಡಿದ ಪಚ್ಚಿಯಮ್ಹಾಳ್ ತನ್ನ ಕುಟುಂಬದ ನಿರ್ವಹಣೆಗಾಗಿ ಕೆಲಸ ಮಾಡುವುದು ಅನಿವಾರ್ಯವಾಗಿತ್ತು. ಈ ನಡುವೆ ಗ್ರಾಮಸ್ಥರ ಲೈಂಗಿಕ ಕಿರುಕುಳದಿಂದ ಬೇಸತ್ತ ಈಕೆ ಪಾರಾಗಲು ಪುರುಷನ ವೇಷ ಧರಿಸುವ ದೃಢ ನಿರ್ಧಾರ ಮಾಡಿದರು.

    ಪುರುಷರಂತೆ ತಮ್ಮ ಕೂದಲು ಕತ್ತರಿಸಿಕೊಂಡು, ಸೀರೆ ಬಿಟ್ಟು ಶರ್ಟ್, ಲುಂಗಿ ಧರಿಸಲು ಮುಂದಾದರು. ತಮ್ಮ ಹೆಸರನ್ನು ಮುತ್ತು ಎಂದು ಬದಲಾಯಿಸಿಕೊಂಡು ಪುರುಷನಂತೆಯೇ ಜೀವಿಸಲು ಆರಂಭಿಸಿದರು. ಹೋಟೆಲ್‌ಗಳಲ್ಲಿ, ಚಹಾ ಅಂಗಡಿಗಳಲ್ಲಿ ಕೆಲಸ ಮಾಡಿದ ಪಚ್ಚಿಯಮ್ಹಾಳ್ ಅಲಿಯಾಸ್ ಮುತ್ತು ತಮ್ಮ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಹಾಗೂ ಬ್ಯಾಂಕ್ ಖಾತೆಯನ್ನು ಅದೇ ಹೆಸರಿನಲ್ಲೇ ಪಡೆದಿದ್ದಾರೆ.

    TAMILNADU WOMEN (1)

    ಸತತ 36 ವರ್ಷಗಳ ಕಾಲ ಪುರುಷನಂತೆ ವೇಷ ಧರಿಸಿ ಬದುಕಿದ್ದ ಈಕೆ ತನ್ನ ಮಗಳಿಗೆ ಮಾತ್ರ ಮಹಿಳೆ ಎಂಬುದು ತಿಳಿದಿತ್ತು ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಅಲ್ಪಸಂಖ್ಯಾತರ ಮೀಸಲಾತಿ ನಿಲ್ಲಿಸುತ್ತೇವೆ – ತೆಲಂಗಾಣ ಸರ್ಕಾರದ ವಿರುದ್ಧ ಶಾ ಗುಡುಗು

    ಮಗಳು ಷಣ್ಮುಗಸುಂದರಿ ಈಗ ಮದುವೆಯಾಗಿದ್ದು, ಕುಟುಂಬ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದೆ. ಆದರೆ, ಪೆಚ್ಚಿಯಮ್ಮಾಳ್ ತನ್ನ ಉಡುಪನ್ನು ಅಥವಾ ಗುರುತನ್ನು ಬದಲಾಯಿಸಲು ಇನ್ನೂ ಸಿದ್ಧವಾಗಿಲ್ಲ. ಏಕೆಂದರೆ ತನ್ನ ಗುರುತಿನ ಬದಲಾವಣೆ ಮಗಳಿಗೆ ಸುರಕ್ಷಿತ ಜೀವನ ಕಲ್ಪಿಸಿದೆ ಎಂಬುದನ್ನು ಆಕೆ ದೃಢವಾಗಿ ನಂಬಿದ್ದಾಳೆ.

  • ಬೆಳ್ಳಂಬೆಳಗ್ಗೆ ಗೃಹಿಣಿ ಬರ್ಬರ ಹತ್ಯೆ – ದೂರು ದಾಖಲಿಸಿದ್ದಕ್ಕೆ ಪ್ರೇಯಸಿಯನ್ನೇ ಕೊಂದನಾ ಪ್ರಿಯಕರ?

    ಬೆಳ್ಳಂಬೆಳಗ್ಗೆ ಗೃಹಿಣಿ ಬರ್ಬರ ಹತ್ಯೆ – ದೂರು ದಾಖಲಿಸಿದ್ದಕ್ಕೆ ಪ್ರೇಯಸಿಯನ್ನೇ ಕೊಂದನಾ ಪ್ರಿಯಕರ?

    ಚಿಕ್ಕಬಳ್ಳಾಪುರ: ಗೃಹಿಣಿಯೊಬ್ಬಳು ಮನೆಯ ಮುಂದೆಯೇ ಬರ್ಬರವಾಗಿ ಕೊಲೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ವಡಗೆರೆ ಗ್ರಾಮದಲ್ಲಿ ನಡೆದಿದೆ.

    ಭಾಗ್ಯಶ್ರೀ(35) ಕೊಲೆಯಾದ ದುರ್ದೈವಿ. ಪತಿ ಚನ್ನಬಸವಪ್ಪ ಮತ್ತು ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ಭಾಗ್ಯಶ್ರೀ ಇಂದು ಬೆಳ್ಳಂಬೆಳಗ್ಗೆ ಕೊಲೆಯಾಗಿದ್ದಾಳೆ. ಈ ಕೊಲೆಯನ್ನು ಇದೇ ಗ್ರಾಮದ ರಿಯಾಜ್ ಮಾಡಿರಬೇಕು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಕಪಿಲ್ ಕ್ರಿಕೆಟ್ ಕ್ಲಬ್‍ನಿಂದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ – ವೃತ್ತಿಪರ ಕ್ರಿಕೆಟ್‍ಗೆ ಪೂರಕವಾಗಿ ಆಯೋಜನೆ

    ಹೌದು, ಮೃತ ಭಾಗ್ಯಶ್ರೀ ಇದೇ ಗ್ರಾಮದ ಮುಸ್ಲಿಂ ಸಮುದಾಯದ ರಿಯಾಜ್ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದೇ ಸಲುಗೆಯಲ್ಲಿ ದುಡ್ಡು ಕಾಸು ಕೊಟ್ಟು ತೆಗೆದುಕೊಳ್ಳುವ ವ್ಯವವಹಾರ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದಿದ್ದು, ಕಳೆದ 3 ದಿನಗಳ ಹಿಂದೆ ರಿಯಾಜ್ ಸುಖಾಸುಮ್ಮನೆ ದುಡ್ಡು ಕೊಡಬೇಕು ಅಂತ ನನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಭಾಗ್ಯಶ್ರೀ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎನ್ನಲಾಗುತ್ತಿದೆ.

    ಇದೇ ಜಿದ್ದಿಗೆ ಭಾಗ್ಯಶ್ರೀಯನ್ನು ರಿಯಾಜ್ ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಇಂದು ಬೆಳಗ್ಗೆ ಗಂಡ ಸಹ 5 ಗಂಟೆಗೆ ಫಂಕ್ಷನ್ ಇದೇ ಅಂತ ಮನೆಯಿಂದ ಹೊರಟು ಹೋಗಿದ್ದರು. ಮನೆಯಲ್ಲಿ ಗಂಡನಿಲ್ಲದ ಹೊತ್ತು ನೋಡಿ ರಿಯಾಜ್ ಬಂದು ಕೃತ್ಯ ಎಸಗಿ ಹೋಗಿದ್ದಾನೆ ಎನ್ನುವ ಅನುಮಾನ ಮೂಡಿದೆ. ಇದನ್ನೂ ಓದಿ: ಉದ್ದನೆ ಕೂದಲಿನ, ತುಟಿಗೆ ಬಣ್ಣ ಹಚ್ಚಿ ದೈತ ದಾಂಡಿಗನಾಗಿ ಗಮನಸೆಳೆದ ಸೈಮಂಡ್ಸ್ ಇನ್ನು ನೆನಪು ಮಾತ್ರ

    ಇದೀಗ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪ್ರಾಥಮಿಕ ತನಿಖೆ ನಡೆಸಿ ಮೃತದೇಹವನ್ನ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಆರಂಭದಲ್ಲಿ ಗಂಡನ ಫೋನ್ ಸ್ವಿಚ್ ಆಫ್ ಆದ ಕಾರಣ ಗಂಡ ಏನಾದರೂ ಕೊಲೆ ಮಾಡಿ ಹೋದನಾ ಅಂತಲೂ ಅನುಮಾನ ಮೂಡಿತ್ತು. ಆದರೆ ಕೊನೆಗೆ ವಿಷಯ ತಿಳಿದು ಗಂಡನೇ ಪೊಲೀಸ್ ಠಾಣೆ ಬಳಿ ಬಂದಿದ್ದು, ತನಗೇನು ಗೊತ್ತಿಲ್ಲ ಅಂತ ಹೇಳುತ್ತಿದ್ದಾನೆ. ರಿಯಾಜ್ ಸಹ ಘಟನೆ ನಂತರ ನಾಪತ್ತೆಯಾಗಿದ್ದು, ರಿಯಾಜ್‍ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ಪುರುಷ-ಮಹಿಳೆ ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವಂತಿಲ್ಲ, ಪಾರ್ಕ್‌ಗೆ ಹೋಗುವಂತಿಲ್ಲ: ತಾಲಿಬಾನ್‌

    ಪುರುಷ-ಮಹಿಳೆ ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವಂತಿಲ್ಲ, ಪಾರ್ಕ್‌ಗೆ ಹೋಗುವಂತಿಲ್ಲ: ತಾಲಿಬಾನ್‌

    ಕಾಬೂಲ್‌: ಪಶ್ಚಿಮ ಆಫ್ಘಾನಿಸ್ತಾನದ ಹೆರಾತ್‌ ನಗರದಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಕುಳಿತು ಊಟ ಮಾಡುವುದು ಹಾಗೂ ಉದ್ಯಾನಗಳಿಗೆ ಭೇಟಿ ನೀಡುವುದನ್ನು ತಾಲಿಬಾನ್‌ ನಿಷೇಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆಫ್ಘಾನಿಸ್ತಾನವು ಸಂಪ್ರದಾಯವಾದಿ ಮತ್ತು ಪಿತೃಪ್ರಭುತ್ವದ ರಾಷ್ಟ್ರವಾಗಿದೆ. ಆದರೆ ರೆಸ್ಟೋರೆಂಟ್‌ಗಳಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಕುಳಿತು ಊಟ ಮಾಡುವುದನ್ನು ಸಾಮಾನ್ಯ ಎನ್ನುವಂತಾಗಿದೆ. ಮುಖ್ಯವಾಗಿ ಆಫ್ಘಾನ್‌ ಮಾನದಂಡಗಳನ್ನು ಮೀರಿ ಉದಾರವಾದಿ ನಗರ ಎನಿಸಿರುವ ಹೆರಾತ್‌ನಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾಗಿದೆ. ಇಲ್ಲೂ ಸಹ ತಾಲಿಬಾನ್‌ ಕಠಿಣ ನಿಯಮಗಳನ್ನು ವಿಧಿಸಿದೆ. ಇದನ್ನೂ ಓದಿ: ಮಹಿಳೆಯರ ಮೇಲೆ ತಾಲಿಬಾನ್ ವಿಧಿಸುತ್ತಿರುವ ನಿರ್ಬಂಧ ಖಂಡಿಸಿದ G7

    ಆಗಸ್ಟ್‌ನಲ್ಲಿ ಆಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಮರಳಿದ ನಂತರ ತಾಲಿಬಾನ್‌, ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವ ನಿರ್ಬಂಧಗಳನ್ನು ವಿಧಿಸುತ್ತಿದೆ.

    ಹೆರಾತ್‌ನಲ್ಲಿ ಸದ್ಗುಣ ಪ್ರಚಾರ ಮತ್ತು ದುರಾಚಾರ ತಡೆಗಟ್ಟುವಿಕೆ ಸಚಿವಾಲಯದ ತಾಲಿಬಾನ್ ಅಧಿಕಾರಿ ರಿಯಾಜುಲ್ಲಾ ಸೀರತ್, ರೆಸ್ಟೋರೆಂಟ್‌ಗಳಲ್ಲಿ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ನಿಯಮ ಕೇವಲ ಪುರುಷ ಮತ್ತು ಮಹಿಳೆಯರಿಗಷ್ಟೇ ಅಲ್ಲ, ಗಂಡ-ಹೆಂಡತಿಗೂ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೆಣ್ಣುಮಕ್ಕಳಿಗೆ ಶಿಕ್ಷಣ ನಿಷೇಧಿಸಿ ತನ್ನ ಪುತ್ರಿಯರನ್ನು ಶಾಲೆಗೆ ಸೇರಿಸಿದ ತಾಲಿಬಾನ್‌ ವಕ್ತಾರ

    ಹೆರಾತ್ ರೆಸ್ಟೋರೆಂಟ್‌ನಲ್ಲಿ ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ನನಗೆ ಮತ್ತು ನನ್ನ ಪತಿಗೆ ಮ್ಯಾನೇಜರ್‌ ಹೇಳಿದ್ದರು ಎಂದು ಹೆಸರು ಹೇಳಲಿಚ್ಛಿಸದ ಮಹಿಳೆಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

    ರೆಸ್ಟೋರೆಂಟ್‌ ಮಾಲೀಕ ಸಫೀವುಲ್ಲಾ ಅವರು ತಾಲಿಬಾನ್‌ ಕಠಿಣ ನಿಯಮ ವಿಧಿಸಿರುವುದನ್ನು ಖಚಿತಪಡಿಸಿದ್ದಾರೆ. ನಾವು ಆದೇಶವನ್ನು ಅನುಸರಿಸಬೇಕು. ಆದರೆ ಇದು ನಮ್ಮ ವ್ಯವಹಾರದ ಮೇಲೆ ಬಹಳ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಸಫೀವುಲ್ಲಾ ತಿಳಿಸಿದ್ದಾರೆ.

  • ಮಹಿಳೆಯರ ಮೇಲೆ ತಾಲಿಬಾನ್ ವಿಧಿಸುತ್ತಿರುವ ನಿರ್ಬಂಧ ಖಂಡಿಸಿದ G7

    ಮಹಿಳೆಯರ ಮೇಲೆ ತಾಲಿಬಾನ್ ವಿಧಿಸುತ್ತಿರುವ ನಿರ್ಬಂಧ ಖಂಡಿಸಿದ G7

    ಬರ್ಲಿನ್: ತಾಲಿಬಾನ್ ಸರ್ಕಾರ ಅಫ್ಘಾನ್‍ನಲ್ಲಿರುವ ಮಹಿಳೆಯರ ಮೇಲೆ ನಿರ್ಬಂಧಗಳನ್ನು ಹೆಚ್ಚು ವಿಧಿಸುತ್ತಿರುವುದನ್ನು ಏಳು ಕೈಗಾರಿಕೀಕರಣಗೊಂಡ ರಾಷ್ಟ್ರಗಳು(G7) ಖಂಡಿಸಿದೆ.

    ಮಹಿಳೆಯರು ಮತ್ತು ಹುಡುಗಿಯರ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲು ತುರ್ತಾಗಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ತಾಲಿಬಾನ್‍ಗೆ ಕರೆ ನೀಡುತ್ತೇವೆ ಎಂದು ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಯುನೈಟೆಡ್ ಸ್ಟೇಟ್ಸ್‍ನ ವಿದೇಶಾಂಗ ಮಂತ್ರಿಗಳು ಗುರುವಾರ ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮಿರದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಮುಂದುವರಿಯುತ್ತಿದೆ: ಒಮರ್ ಅಬ್ದುಲ್ಲಾ 

    ಸಮಾಜದಲ್ಲಿ ಸಂಪೂರ್ಣವಾಗಿ, ಸಮಾನವಾಗಿ ಭಾಗವಹಿಸಲು ಎಲ್ಲರಿಗೂ ಅವಕಾಶವಿದೆ. ಆ ಹಕ್ಕು ಮತ್ತು ಸಾಮರ್ಥ್ಯವನ್ನು ತೀವ್ರವಾಗಿ ಮಿತಿಗೊಳಿಸುವುದು ಮತ್ತು ನಿರ್ಬಂಧಿತ ಕ್ರಮಗಳನ್ನು ಹೇರುವುದನ್ನು ನಾವು ಖಂಡಿಸುತ್ತೇವೆ. ಮಹಿಳೆಯರು ಮತ್ತು ಹುಡುಗಿಯರ ಹಕ್ಕುಗಳನ್ನು ನಿರ್ಬಂಧಿಸುವ ಮೂಲಕ, ತಾಲಿಬಾನ್ ಅಂತರರಾಷ್ಟ್ರೀಯ ಸಮುದಾಯದಿಂದ ತಮ್ಮನ್ನು ಮತ್ತಷ್ಟು ಪ್ರತ್ಯೇಕಿಸಿಕೊಳ್ಳುತ್ತಿದೆ ಎಂದು ವಿರೋಧ ವ್ಯಕ್ತಪಡಿಸಿದರು.

    G7 Condemns Taliban Over Growing Restrictions On Afghan Women

    1996 ರಿಂದ 2001 ರ ಸಮಯದಲ್ಲಿ ತಾಲಿಬಾನ್ ಮಾನವ ಹಕ್ಕುಗಳನ್ನು ಉಲ್ಲಂಘಿಸಿ ಹಲವು ಕೃತ್ಯಗಳನ್ನು ಮಾಡಿತ್ತು. ಆದರೆ ಕಳೆದ ವರ್ಷ ತಾಲಿಬಾನ್ ಮತ್ತೆ ಅಧಿಕಾರವನ್ನು ವಶಪಡಿಸಿಕೊಳ್ಳಬೇಕಾದರೆ ನಾವು ಮಾನವ ಹಕ್ಕುಗಳನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸುವುದಿಲ್ಲ. ಶಾಂತಿಯಿಂದ ಆಡಳಿತ ನಡೆಸುತ್ತೇವೆ ಎಂದು ಭರವಸೆಯನ್ನು ಕೊಟ್ಟಿತ್ತು. ಇದನ್ನೂ ಓದಿ: ನಡು ರಸ್ತೆಯಲ್ಲಿ ಉಪನ್ಯಾಸಕನ ಬರ್ಬರ ಹತ್ಯೆ

    ಆದರೂ ಸಹ ತಾಲಿಬಾನ್ ಅಫ್ಘನ್ ಪ್ರಜೆಗಳ ಹಕ್ಕುಗಳನ್ನು ಹೆಚ್ಚು ನಿರ್ಬಂಧಿಸಿದೆ. ಅದರಲ್ಲಿಯೂ ವಿಶೇಷವಾಗಿ ಹುಡುಗಿಯರು ಮತ್ತು ಮಹಿಳೆಯರು ಮಾಧ್ಯಮಿಕ ಶಾಲೆಗಳಿಗೆ ಮತ್ತು ಅನೇಕ ಸರ್ಕಾರಿ ಉದ್ಯೋಗಗಳಿಗೆ ಬರುವುದನ್ನು ತಡೆಯಲಾಗಿದೆ. ಈ ಹಿನ್ನೆಲೆ G7 ರಾಷ್ಟ್ರ ತಾಲಿಬಾನ್ ಸರ್ಕಾರದ ನಡವಳಿಕೆಯನ್ನು ತೀವ್ರವಾಗಿ ಖಂಡಿಸುತ್ತಿದೆ.

  • ತಲೆಯಿಂದ ಕಾಲಿನವರೆಗೆ ದೇಹ ಮುಚ್ಚಿಕೊಳ್ಳಿ – ಅಫ್ಘಾನ್ ಮಹಿಳೆಯರಿಗೆ ತಾಲಿಬಾನ್ ಆದೇಶ

    ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ಶನಿವಾರ ಎಲ್ಲಾ ಅಫ್ಘಾನ್ ಮಹಿಳೆಯರಿಗೆ ಸಾರ್ವಜನಿಕವಾಗಿ ತಲೆಯಿಂದ ಕಾಲಿನವರೆಗೂ ಸಂಪೂರ್ಣ ಉಡುಪುಗಳನ್ನು ಧರಿಸಲು ಆದೇಶಿಸಿದೆ.

    ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಅಫ್ಘಾನಿಸ್ತಾನದ ಸರ್ಕಾರ ಪತನವಾಗಿ ತಾಲಿಬಾನ್ ಆಡಳಿತಕ್ಕೆ ಬಂತು. ಅಂದಿನಿಂದ ಅಲ್ಲಿನ ನಾಗರಿಕರಿಗೆ, ಮುಖ್ಯವಾಗಿ ಮಹಿಳೆಯರನ್ನು ಗುರಿಯಾಗಿಸಿಕೊಂಡಿರುವ ತಾಲಿಬಾನ್ ಜನರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದೆ. ಇದನ್ನೂ ಓದಿ: 21 ವರ್ಷಗಳಿಂದ ಪತ್ನಿ ಶವದೊಂದಿಗಿದ್ದ ವೃದ್ಧನಿಂದ ಕೊನೆಗೂ ಅಂತ್ಯಕ್ರಿಯೆ!

    ತಾಲಿಬಾನ್ ಇತ್ತೀಚೆಗೆ ಹೊರಡಿಸಿರುವ ಆದೇಶಗಳಲ್ಲಿ ಮುಖ್ಯವಾಗಿ ಮಹಿಳೆಯರ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದೆ. ಇತ್ತೀಚೆಗೆ ತಾಲಿಬಾನ್ ಮಹಿಳೆಯರಿಗೆ ಒಂಟಿಯಾಗಿ ಪ್ರಯಾಣಿಸುವುದನ್ನು ನಿಷೇಧಿಸಿತ್ತು. ಆದರೆ ಈ ಕಾನೂನಿಗೆ ಪ್ರಜೆಗಳು ವಿರೋಧ ವ್ಯಕ್ತಪಡಿಸಿದ್ದು, ಬಳಿಕ ಮೌನವಾಗಿ ಕಾನೂನನ್ನು ನಿರ್ಲಕ್ಷಿಸಲಾಗಿದೆ. ಇದನ್ನೂ ಓದಿ: ಉಕ್ರೇನ್‌ಗೆ ಬ್ರಿಟನ್‌ನಿಂದ ಮತ್ತೆ 12 ಸಾವಿರ ಕೋಟಿ ಮಿಲಿಟರಿ ನೆರವು

    ತಾಲಿಬಾನ್‌ನ ಇತ್ತೀಚೆಗೆ ಕಾಬೂಲ್ ಹಾಗೂ ಇತರ ಪ್ರಾಂತ್ಯಗಳಲ್ಲಿ ಮಹಿಳೆಯರಿಗೆ ಡ್ರೈವಿಂಗ್ ಲೈಸೆನ್ಸ್(ವಾಹನ ಪರವಾನಗಿ) ನೀಡುವುದನ್ನೂ ನಿಲ್ಲಿಸಿದೆ. ಅಫ್ಘಾನಿಸ್ತಾನದಲ್ಲಿ ಆಹಾರ ಹಾಗೂ ಅಗತ್ಯ ವಸ್ತುಗಳ ಸರಬರಾಜಿನ ತೀವ್ರ ಕೊರತೆ ಉಂಟಾಗಿದೆ. ದೇಶ ವಿನಾಶಕಾರಿ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿರುವ ನಡುವೆಯೂ ಹಲವಾರು ನಿಷೇಧಗಳನ್ನು ಹೇರುತ್ತಿದೆ.

  • ನೈಸ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ – ಇಬ್ಬರು ಸಾವು

    ನೈಸ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ – ಇಬ್ಬರು ಸಾವು

    ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನೈಸ್ ರಸ್ತೆಯಲ್ಲಿ ನಡೆದಿದೆ.

    ಸುಮುಖ್ (22), ಲೀನಾ ನಾಯ್ಡು (19) ಮೃತ ದುರ್ದೈವಿಗಳು. ಸುಮುಖ್ ಸಂಜೆ 5 ಗಂಟೆ ಸುಮಾರು ಲೀನಾರ ಜೊತೆಗೆ ಕಾರಿನಲ್ಲಿ ಪಿಇಎಸ್ ಕಾಲೇಜು ಕಡೆಯಿಂದ ನೈಸ್ ರೋಡ್ ಮುಖಾಂತರ ಸೋಂಪುರ ಕಡೆ ಅತಿವೇಗವಾಗಿ ಕಾರು ಚಲಾಯಿಸಿದ್ದಾನೆ. ಈ ವೇಳೆ ನೈಸ್ ರಸ್ತೆಯ ಬಿಡಿಎ ಟೋಲ್ ಬಳಿ ಕಾರು ನಿಯಂತ್ರಣ ತಪ್ಪಿ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಬಸ್‍ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಈ ಪರಿಣಾಮ ಹಿಂದೆ ಇದ್ದ ಬರುತ್ತಿದ್ದ ಮತ್ತೊಂದು ಕಾರು ಕೂಡಾ ಪಲ್ಟಿಯಾಗಿದೆ.

    ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮಿನಿ ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿ ಹೋಗಿದ್ದು ಬಸ್ ಚಾಲಕನ ಎರಡು ಕಾಲುಗಳು ತುಂಡಾಗಿದೆ. ಬೇರೊಂದು ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ. ಹೋಂಡಾ ಸಿಟಿ ಕಾರ್‍ನಲ್ಲಿದ್ದ ಸುಮುಖ್, ಲೀನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಇಬ್ಬರು ಬೇರೆ ಬೇರೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಲೀನಾ ಪಿಇಎಸ್ ಕಾಲೇಜ್‍ನಲ್ಲಿ ಬಿಸಿಎ, ಸುಮುಖ್ ರಾಮಯ್ಯ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದರು. ಘಟನೆ ಸಂಬಂಧ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪರಿಹಾರದ ಹಣಕ್ಕಾಗಿ ಅಧಿಕಾರಿಯ ಕಾಲಿಗೆ ಬಿದ್ದು ಕಣ್ಣೀರು ಹಾಕಿದ ಮಹಿಳೆ

    ಪರಿಹಾರದ ಹಣಕ್ಕಾಗಿ ಅಧಿಕಾರಿಯ ಕಾಲಿಗೆ ಬಿದ್ದು ಕಣ್ಣೀರು ಹಾಕಿದ ಮಹಿಳೆ

    ಧಾರವಾಡ: ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿಸಿದಂತೆ ಭೂಮಿ ಕಳೆದುಕೊಂಡ ಸಂತ್ರಸ್ತ ಮಹಿಳೆಯೊಬ್ಬರು ತನಗೆ ಪರಿಹಾರ ನೀಡುವಂತೆ ಕೆಐಎಡಿಬಿ ಅಧಿಕಾರಿಗೆ ಕಾಲಿಗೆ ಬಿದ್ದು ಕಣ್ಣೀರು ಹಾಕಿದ ಪ್ರಸಂಗ ಧಾರವಾಡದಲ್ಲಿ ನಡೆದಿದೆ.

    ಇಟಿಗಟ್ಟಿ ಗ್ರಾಮದ ಅಕ್ಕವ್ವ ಲಕ್ಕಪ್ಪನವರ ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿಸಿದಂತೆ ಭೂಮಿ ಕಳೆದುಕೊಂಡು ಅಸಹಾಯಕಳಾಗಿ ಅಧಿಕಾರಿ ಕಾಲಿಗೆ ಬಿದ್ದಿದ್ದಾರೆ. ಗಾಮನಗಟ್ಟಿ ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿಸಿದಂತೆ ಅಕ್ಕವ್ವ ಅವರಿಗೆ ಸೇರಿದ ಒಂದು ಎಕರೆ ಜಮೀನನ್ನು ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡಿತ್ತು. ಇದರಲ್ಲಿ ಅಕ್ಕವ್ವಳಿಗೆ 55 ಲಕ್ಷ ಪರಿಹಾರ ಬರಬೇಕಿದೆ. ಆದರೆ, ಈ ಹಣ ಅಧಿಕಾರಿಗಳ ಅಚಾತುರ್ಯದಿಂದ ಆಕೆಯ ಕೈ ಸೇರಿಲ್ಲ. ಇದರಿಂದ ದಿಕ್ಕು ತೋಚದ ಅಕ್ಕವ್ವ ಕೆಐಎಡಿಬಿ ಕಚೇರಿಗೆ ಬಂದು ಅಧಿಕಾರಿ ಕಾಲಿಗೆ ಬಿದ್ದು ತನಗೆ ಬರಬೇಕಾದ ಪರಿಹಾರವನ್ನು ನೀಡುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಆ್ಯಸಿಡ್ ದಾಳಿ ಸಂತ್ರಸ್ತೆಯಿಂದ ಡೈಯಿಂಗ್ ಡಿಕ್ಲರೇಶನ್ ಪಡೆದ ಪೊಲೀಸರು

    ಅಕ್ಕವ್ವಳಿಗೆ ಸೇರಬೇಕಾದ ಪರಿಹಾರ ಮೊತ್ತವನ್ನು ಕೆಐಎಡಿಬಿ ಅಧಿಕಾರಿಗಳು ಆಕೆಯ ಸಹೋದರನ ಅಕೌಂಟ್‍ಗೆ ನೆಫ್ಟ್ ಮಾಡಿದ್ದಾರೆ. ದಾಖಲೆಗಳಲ್ಲಿ ಅಕ್ಕವ್ವ ಅವರ ಸಹಿ ಇದೆ. ಆದರೆ, ಆಕೆ ಕಚೇರಿಗೆ ಬರದೇ ಇದ್ದರೂ ನಕಲಿ ಸಹಿ ಸೃಷ್ಟಿಸಿ ಆಕೆಯ ಸಹೋದರನ ಅಕೌಂಟ್‍ಗೆ ಹಣ ವರ್ಗಾವಣೆ ಮಾಡಿದ್ದಾರೆ. ಇದೇ ವಿಷಯವನ್ನು ಕೇಳಲು ಬಂದ ಅಕ್ಕವ್ವಳಿಗೆ ಅಧಿಕಾರಿಗಳು ಉಡಾಫೆ ಉತ್ತರ ನೀಡಿದ್ದಾರೆ. ಇದನ್ನೂ ಓದಿ: ಮನೆಯಿಂದ ಹೋಗಬೇಕಾದ್ರೆ ರಾಜಕುಮಾರಿ ತರ ಹೋದ್ಳು, ಆದರೆ ಈಗ….: ಆ್ಯಸಿಡ್ ಸಂತ್ರಸ್ತೆ ತಾಯಿ ಅಳಲು

    ಅಕ್ಕವ್ವರ ಸಹೋದರನ ಬ್ಯಾಂಕ್ ಖಾತೆಗೆ ಅಧಿಕಾರಿಗಳು ಒಟ್ಟು 4 ಕೋಟಿ 8 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ ಅಕ್ಕವ್ವ ಅವರಿಗೆ 55 ಲಕ್ಷ ಪರಿಹಾರ ಬರಬೇಕಿದೆ. ಅಕ್ಕವ್ವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡದ ಅಧಿಕಾರಿಗಳು ಆಕೆಯ ಸಹೋದರನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದನ್ನು ನೋಡಿದರೆ ಇದರಲ್ಲಿ ಗೋಲ್‍ಮಾಲ್ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

  • ಠಾಣೆಯಲ್ಲೇ ಮಹಿಳೆಯರಿಂದ ಮಸಾಜ್ ಮಾಡಿಸಿಕೊಂಡ ಪೊಲೀಸ್ ಅಧಿಕಾರಿ ಸಸ್ಪೆಂಡ್‌

    ಠಾಣೆಯಲ್ಲೇ ಮಹಿಳೆಯರಿಂದ ಮಸಾಜ್ ಮಾಡಿಸಿಕೊಂಡ ಪೊಲೀಸ್ ಅಧಿಕಾರಿ ಸಸ್ಪೆಂಡ್‌

    ಪಾಟ್ನಾ: ಪೊಲೀಸ್ ಠಾಣೆಯೊಳಗೆ ಮಹಿಳಾ ದೂರುದಾರರಿಂದ ಮಸಾಜ್ ಮಾಡಿಸಿಕೊಂಡಿದ್ದ ಬಿಹಾರದ ಹಿರಿಯ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

    ಈ ಘಟನೆ ರಾಜ್ಯದ ಸಹರ್ಸಾ ಜಿಲ್ಲೆಯಲ್ಲಿ ವರದಿಯಾಗಿದ್ದು, ಮಹಿಳಾ ದೂರುದಾರರಿಂದ ಪೊಲೀಸ್ ಮಸಾಜ್ ಮಾಡಿಸಿಕೊಂಡ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರಕ್ಕೆ ಮೋದಿ ಭೇಟಿ ಬಗ್ಗೆ ಮಾತನಾಡುವ ಹಕ್ಕು ಪಾಕಿಸ್ತಾನಕ್ಕಿಲ್ಲ: ಭಾರತ ತಿರುಗೇಟು

    POLICE JEEP

    ನೌಹಟ್ಟಾ ಪೊಲೀಸ್ ಠಾಣೆಯ ದರ್ಹಾರ್ ಔಟ್‍ಪೋಸ್ಟ್‌ನ ಹಿರಿಯ ಅಧಿಕಾರಿ ಶಶಿಭೂಷಣ ಸಿನ್ಹಾ ಅವರು ಫೋನ್‍ನಲ್ಲಿ ಮಾತನಾಡುತ್ತಾ ಮಹಿಳೆಯರಿಂದ ಮಸಾಜ್ ಮಾಡಿಸಿಕೊಳ್ಳುತ್ತಿರುವ ದೃಶ್ಯವನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಪೊಲೀಸ್ ಔಟ್‍ಪೋಸ್ಟ್‌ನಲ್ಲಿರುವ ವಸತಿ ಕ್ವಾರ್ಟರ್‌ನಿಂದ ಈ ವೀಡಿಯೋವನ್ನು ಸೆರೆಹಿಡಿಯಲಾಗಿದೆ. ಇದನ್ನೂ ಓದಿ: ಹಿಂಸಾಚಾರದಿಂದ ಯಾರಿಗೂ ಪ್ರಯೋಜನವಾಗಲ್ಲ: ಮೋಹನ್ ಭಾಗವತ್

  • ಸಾಮೂಹಿಕ ಅತ್ಯಾಚಾರ ಮಾಡಿ ಮಹಿಳೆಯನ್ನು ಕೊಲೆಗೈದ ಪಾಪಿಗಳು

    ಸಾಮೂಹಿಕ ಅತ್ಯಾಚಾರ ಮಾಡಿ ಮಹಿಳೆಯನ್ನು ಕೊಲೆಗೈದ ಪಾಪಿಗಳು

    ಜೈಪುರ: ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ, ಆಕೆಯನ್ನು ಕೊಲೆಗೈದಿರುವ ಘಟನೆ ರಾಜಸ್ಥಾನದ ದೌಸಾದಲ್ಲಿ ನಡೆದಿದೆ. ಈ ಹಿನ್ನೆಲೆ  ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

    ರಾಜಸ್ಥಾನದ ದೌಸಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಭಾನುವಾರ 35 ವರ್ಷದ ಮಹಿಳೆ ಮೇಲೆ ಗ್ಯಾಂಗ್ ರೇಪ್ ಮಾಡಿದ ಪಾಪಿಗಳು, ಆಕೆಯನ್ನು ಕೊಲೆ ಮಾಡಿದ್ದರು. ಈ ಪರಿಣಾಮ ಪೊಲೀಸರು ಆರೋಪಿಗಳಿಗಾಗಿ ಬಲೆ ಹಾಕಿದ್ದು, ಸೋಮವಾರ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಇತರ ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಾಲೀಕನ ಅನುಮತಿ ಇಲ್ಲದೇ ಸಮೋಸಾ ತಿಂದಿದ್ದಕ್ಕೆ ಕೊಲೆ

    KILLING CRIME

    ನಡೆದಿದ್ದೇನು?
    ಈ ಕುರಿತು ದೌಸಾದ ಪೊಲೀಸ್ ಅಧೀಕ್ಷಕ ರಾಜ್‍ಕುಮಾರ್ ಗುಪ್ತಾ ವಿವರಿಸಿದ್ದು, ಮಹಿಳೆ ಭಾನುವಾರ ಬೆಳಗ್ಗೆ ಜೈಪುರದಿಂದ ದೌಸಾಗೆ ಬಸ್ಸಿನಲ್ಲಿ ಹೋಗುತ್ತಿದ್ದಳು. ಬಸ್ಸನ್ನು ಇಳಿದು ತನ್ನ ಪೋಷಕರ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳು ತಮ್ಮ ಕಾರಿನಲ್ಲಿ ಲಿಫ್ಟ್ ನೀಡುವುದಾಗಿ ಹತ್ತಿಸಿಕೊಂಡಿದ್ದಾರೆ.

    ಮಹಿಳೆ ಕೇಳಿದ ಜಾಗಕ್ಕೆ ಬಿಟ್ಟು ಬೇರೆ ಪ್ರದೇಶಕ್ಕೆ ಕರೆದುಕೊಂಡು ಹೋದ ಆರೋಪಿಗಳು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ನಂತರ ಆರೋಪಿಗಳು ಮಹಿಳೆಯನ್ನು ಕೊಂದು ಆಕೆಯ ದೇಹವನ್ನು ಬಾವಿಗೆ ಎಸೆದು ಪರಾರಿಯಾಗಿದ್ದಾರೆ. ಇದನ್ನೂ ಓದಿ:  ಮಹಿಳಾ ಪೊಲೀಸ್ ಮೇಲೆ ಹಲ್ಲೆ ಆರೋಪ – ಜಿಗ್ನೇಶ್ ಮೇವಾನಿ ವಿರುದ್ಧ ಮತ್ತೊಂದು ಕೇಸ್

    ಸೋಮವಾರ ಬೆಳಗ್ಗೆ ಮಹಿಳೆಯ ಶವವನ್ನು ಬಾವಿಯಿಂದ ಹೊರತೆಗೆಯಲಾಯಿತು. ಪ್ರಸ್ತುತ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಅಪರಾಧಕ್ಕೆ ಬಳಸಿದ ಕಾರನ್ನು ಗುರುತಿಸಲಾಗಿದೆ. ಈ ಆಧಾರ ಮೇಲೆ ಆರೋಪಿಗಳನ್ನು ಹುಡುಕುತ್ತಿದ್ದೇವೆ ಎಂದು ಹೇಳಿದ್ದಾರೆ.

  • ತೇಜಸ್ವಿ ಸೂರ್ಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಮಹಿಳಾಮಣಿಗಳು

    ತೇಜಸ್ವಿ ಸೂರ್ಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಮಹಿಳಾಮಣಿಗಳು

    ಚಿಕ್ಕಮಗಳೂರು: ಇತಿಹಾಸ ಪ್ರಸಿದ್ಧ ಮಠದ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಮಹಿಳಾಮಣಿಗಳು ಸಂಸದ ತೇಜಸ್ವಿ ಸೂರ್ಯ ಜೊತೆ ಸೆಲ್ಫಿಗಾಗಿ ಮುಗಿಬಿದ್ದಿದ್ದರು.

    ಕಳೆದ 12 ದಿನಗಳಿಂದ ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀಶಾರದಾ ಲಕ್ಷ್ಮಿ ನರಸಿಂಹಸ್ವಾಮಿ ದೇಗುಲದಲ್ಲಿ ಕುಂಭಾಭಿಷೇಕ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಸಂಸದ ತೇಜಸ್ವಿ ಸೂರ್ಯ ಕೂಡ ಆಗಮಿಸಿದ್ದರು. ಈ ವೇಳೆ ಸಂಸದರ ಜೊತೆ ಮಹಿಳೆಯರು ಸೆಲ್ಫಿಗಾಗಿ ಮುಗಿಬಿದ್ದಿದ್ದರು. ಇದನ್ನೂ ಓದಿ: ಧರ್ಮವೇ ಮುಖ್ಯ- ಹಾಲ್ ಟಿಕೆಟ್ ಪಡೆದರೂ ಪರೀಕ್ಷೆಗೆ ಬಾರದ ಉಡುಪಿಯ ಅಲ್ಮಾಸ್

    ಒಬ್ಬರಾದ ಮೇಲೋಬ್ಬರಂತೆ ಸರ್.. ನಮ್ಮ ಜೊತೆ ಒಂದು.. ಸರ್.. ನಮ್ಮ ಜೊತೆ ಒಂದು ಎನ್ನುತ್ತಾ ಒಬ್ಬರಾದ ಫೋಟೋಗಾಗಿ ಕ್ಯೂ ನಿಂತರು. ತೇಜಸ್ವಿ ಸೂರ್ಯ ಸಾಕು ಬಿಡಿ. ಇದು ಧಾರ್ಮಿಕ ಕಾರ್ಯಕ್ರಮ ಎಂದರೂ ಬಿಡದೇ ಸರ್.. ಒಂದು, ಒಂದು ಎಂದು ಅಕ್ಕಪಕ್ಕದವರ ಕೈಯಲ್ಲಿ ಮೊಬೈಲ್ ಕೊಟ್ಟು ಫೋಟೋ ತೆಗೆಸಿಕೊಂಡರು. ತೇಜಸ್ವಿ, ಸಾಕು ಬಿಡಿ ಎಂದು ಬಂದವರಿಗೆಲ್ಲಾ ಕೈಮುಗಿದರೂ ಒಬ್ಬೊಬ್ಬರೇ ಬರುತ್ತಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್‍ಗಾಗಿ ವೇದಿಕೆ ಮುಂಭಾಗದಲ್ಲೇ ಕಾಯುತ್ತಿದ್ದ ತೇಜಸ್ವಿಯನ್ನು ಕಂಡ ಮಹಿಳೆಯರು ವೇದಿಕೆ ಮುಂಭಾಗದಲ್ಲೇ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.

    ಮಹಿಳೆಯರ ಸರದಿ ಮುಗಿಯುತ್ತಿದ್ದಂತೆ ಆಮೇಲೆ ಪುರುಷರ ಸರದಿಯೂ ಶುರುವಾಗಿತ್ತು. ತೇಜಸ್ವಿ ಅವರು ಹೋಗಿ ಕೂತರೂ ಬಿಡದ ಜನ ಕೂತಲ್ಲೇ ಫೋಟೋ-ಸೆಲ್ಫಿ ಕ್ಲಿಕ್ಕಿಸಿಕೊಂಡರು. ಕಾರ್ಯಕ್ರಮದಲ್ಲಿ ಬಿ.ಎಸ್.ಯಡಿಯೂರಪ್ಪ, ಅರುಣ್ ಸಿಂಗ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಸಚಿವ ಡಿ.ಎನ್.ಜೀವರಾಜ್, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ರವಿಸುಬ್ರಹ್ಮಣ್ಯ, ಅಶೋಕ್ ಹಾರ್ನಳ್ಳಿ ಉಪಸ್ಥಿತರಿದ್ದರು. ಇದನ್ನೂ ಓದಿ: ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣ – ಸ್ಫೋಟಕ ಆಡಿಯೋ ಔಟ್