Tag: women

  • ತುಮಕೂರಿನಲ್ಲಿ ಬಾಣಂತಿ ಸಾವು – ವೈದ್ಯರ ನಿರ್ಲಕ್ಷ್ಯ ಆರೋಪ

    ತುಮಕೂರಿನಲ್ಲಿ ಬಾಣಂತಿ ಸಾವು – ವೈದ್ಯರ ನಿರ್ಲಕ್ಷ್ಯ ಆರೋಪ

    ತುಮಕೂರು: ಚಿಕ್ಕನಾಯಕನಹಳ್ಳಿ ಪಟ್ಟಣದ ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ 2 ತಿಂಗಳ ಬಾಣಂತಿ ಸಾವನ್ನಪ್ಪಿದ್ದಾರೆ (Maternal Death) ಎಂದು ಆರೋಪಿಸಿದ ಸಂಬಂಧಿಕರು ತಡರಾತ್ರಿ ಆಸ್ಪತ್ರೆ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದರು.

    ಕುದ್ದೂರು ಗ್ರಾಮದ ದೀಪಕ್ ಎಂಬುವವರ ಪತ್ನಿ ಸಿಂಧು (28) ಹೊಟ್ಟೆ ನೋವಿಗೆ ಚಿಕಿತ್ಸೆ ಪಡೆಯಲು ಬುಧವಾರ ಮಧ್ಯಾಹ್ನ ಖಾಸಗಿ ಆಸ್ಪತ್ರೆಗೆ ಬಂದಿದ್ದರು.

    ರಾತ್ರಿವರೆಗೂ ಚಿಕಿತ್ಸೆ ನೀಡಿದ ವೈದ್ಯರು ನಂತರ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದಿದ್ದಾರೆ. ಆದರೆ ಆಸ್ಪತ್ರೆಯಿಂದ ಸ್ವಲ್ಪ ದೂರ ಹೋಗುವಷ್ಟರಲ್ಲಿ ಬಾಣಂತಿ ಮೃತಪಟ್ಟಿದ್ದಾರೆ. ಆಸ್ಪತ್ರೆಯ ಮುಂದೆ ಶವವಿಟ್ಟು ಸಂಬಂಧಿಕರು ಪ್ರತಿಭಟನೆ ನಡೆಸಿದರು.

    ಬಾಣಂತಿಯನ್ನು ಐಸಿಯುನಲ್ಲಿ ಇಟ್ಟು ಸಾವಿಗೆ ಕಾರಣರಾಗಿದ್ದಾರೆ ಎಂದು ಮೃತರ ತಂದೆ, ತಾಯಿ ಆರೋಪಿಸಿದರು.

  • ಪರ ಸ್ತ್ರೀ ಜೊತೆ ಸಲುಗೆ – ಪತಿಯ ಕಾಲು ಮುರಿಯಲು ಪತ್ನಿಯಿಂದಲೇ 5 ಲಕ್ಷಕ್ಕೆ ಸುಪಾರಿ

    ಪರ ಸ್ತ್ರೀ ಜೊತೆ ಸಲುಗೆ – ಪತಿಯ ಕಾಲು ಮುರಿಯಲು ಪತ್ನಿಯಿಂದಲೇ 5 ಲಕ್ಷಕ್ಕೆ ಸುಪಾರಿ

    ಕಲಬುರಗಿ: ಪರ ಸ್ತ್ರೀ ಜೊತೆ ಸಲುಗೆಯಿಂದ ಇದ್ದ ಪತಿಯ ಕಾಲು ಮುರಿಯಲು ಆತನ ಪತ್ನಿಯೇ ಸುಪಾರಿ ನೀಡಿರುವ ಘಟನೆ ಕಲಬುರಗಿ (Kalaburagi) ನಗರದ ಅತ್ತರ ಕಂಪೌಡ್ ಬಳಿ ನಡೆದಿದೆ.

    ವೆಂಕಟೇಶ್ ಎಂಬಾತ ಎರಡು ಕಾಲು ಮುರಿತಕ್ಕೆ ಒಳಗಾದ ಪತಿಯಾಗಿದ್ದು, ಸುಪಾರಿ ನೀಡಿದ ಪತ್ನಿ ಉಮಾದೇವಿ ಹಾಗೂ ಹಂತಕರಾದ ಆರೀಫ್, ಮನಹೋರ, ಸುನೀಲ್ ರನ್ನ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಸಿಎಂ ನೈತಿಕತೆ ಕಳೆದುಕೊಂಡಿದ್ದಾರೆ, ಮುಡಾ ಕೇಸ್‌ ಸಿಬಿಐಗೆ ಹೋಗೋದು ನಿಶ್ಚಿತ: ಸ್ನೇಹಮಹಿ ಕೃಷ್ಣ

    ವೆಂಕಟೇಶ್ ಕೆಲ ತಿಂಗಳಿನಿಂದ ಮತ್ತೊಬ್ಬ ಮಹಿಳೆಯ ಜೊತೆಗೆ ಸಲುಗೆಯಿಂದ ವರ್ತಿಸುತ್ತಿದ್ದ, ಹೀಗಾಗಿ ದಂಪತಿಗಳ ನಡುವೆ ಹಲವು ಬಾರಿ ಜಗಳವಾಗಿತ್ತು. ಕೊನೆಗೆ ಮಾತು ಕೇಳದ ಪತಿಯ ಎರಡೂ ಕಾಲುಗಳನ್ನ ಮುರಿದ್ರೆ ಮನೆಯಲ್ಲಿಯೇ ಬಿದ್ದಿರುತ್ತಾನೆ ಅಂತ ಪತ್ನಿ ಸ್ಕೆಚ್‌ ಹಾಕಿದ್ದಾಳೆ. ಇದನ್ನೂ ಓದಿ: ಟೋಲ್ ತಪ್ಪಿಸುತ್ತಿದ್ದ ವಾಹನ ಸವಾರರಿಗೆ ಹೆದ್ದಾರಿ ಪ್ರಾಧಿಕಾರ ಶಾಕ್; ಬಿಡದಿ ಬಳಿಯ ಎಕ್ಸಿಟ್ ರೋಡ್ ಬಂದ್

    ಪತಿಯ ಎರಡೂ ಕಾಲುಗಳನ್ನ ಮುರಿಯಲು 5 ಲಕ್ಷಕ್ಕೆ ಪತ್ನಿ ಸುಪಾರಿ ನೀಡಿದ್ದಳು. ಆದ್ರೆ ವೆಂಕಟೇಶ್‌ ಮಗ ಇದು ದರೋಡೆ ಪ್ರಕರಣದ ವೇಳೆ ಕಾಲು ಮುರಿತ ಎಂದು ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾಗ ಉಮಾದೇವಿಯ ಅಸಲಿ ಬಣ್ಣ ಬಯಲಾಗಿದೆ. ಸದ್ಯ ಸುಪಾರಿ ನೀಡಿದ ಪತ್ನಿ ಸೇರಿದಂತೆ ಕಾಲು ಮುರಿದ ಆರೋಪಿಗಳನ್ನ ಬ್ರಹ್ಮಪೂರ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಟೋಲ್ ತಪ್ಪಿಸುತ್ತಿದ್ದ ವಾಹನ ಸವಾರರಿಗೆ ಹೆದ್ದಾರಿ ಪ್ರಾಧಿಕಾರ ಶಾಕ್; ಬಿಡದಿ ಬಳಿಯ ಎಕ್ಸಿಟ್ ರೋಡ್ ಬಂದ್

  • ಮಹಿಳೆಯರಿಗೆ ಹಣ| ರಾಜ್ಯದ ಹಣಕಾಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತೆ: ಎಸ್‌ಬಿಐ ಎಚ್ಚರಿಕೆ

    ಮಹಿಳೆಯರಿಗೆ ಹಣ| ರಾಜ್ಯದ ಹಣಕಾಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತೆ: ಎಸ್‌ಬಿಐ ಎಚ್ಚರಿಕೆ

    – ಆಯ್ದ ರಾಜ್ಯಗಳ ಹಣಕಾಸು ಸ್ಥಿತಿ ಏರುಪೇರಾಗಬಹುದು

    ನವದೆಹಲಿ: ವಿವಿಧ ರಾಜ್ಯಗಳು ಘೋಷಿಸಿರುವ ಮಹಿಳಾ ಕೇಂದ್ರಿತ ನೇರ ಲಾಭ (DBT) ವರ್ಗಾವಣೆ ಯೋಜನೆಗಳು ರಾಜ್ಯದ ಹಣಕಾಸಿನ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವರದಿಯೊಂದು ಎಚ್ಚರಿಸಿದೆ.

    ಮಹಿಳೆಯರಿಗೆ ನೇರವಾಗಿ ಹಣವನ್ನು ವರ್ಗಾಯಿಸುವ ಗುರಿಯನ್ನು ಹೊಂದಿರುವ ಈ ಯೋಜನೆಗಳು ಇತ್ತೀಚಿನ ವರ್ಷಗಳಲ್ಲಿ ಚುನಾವಣೆ (Election) ಸಂದರ್ಭದಲ್ಲಿ ಘೋಷಣೆಯಾಗುತ್ತಿವೆ. ಅಂತಹ ಉಪಕ್ರಮಗಳು ರಾಜ್ಯ ಹಣಕಾಸಿನ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಬಹುದು ಎಂದು ವರದಿ ತಿಳಿಸಿದೆ.

    ಎಂಟು ರಾಜ್ಯಗಳಲ್ಲಿ ಈ ಯೋಜನೆಗಳ ಒಟ್ಟು ವೆಚ್ಚವು ಈಗ 1.5 ಲಕ್ಷ ಕೋಟಿ ರೂ.ಗಳನ್ನು ದಾಟಿದೆ. ಇದು ಈ ರಾಜ್ಯಗಳ ಆದಾಯದ 3-11 ಪ್ರತಿಶತದಷ್ಟಿದೆ ಎಂದು ವರದಿಯು ಹೈಲೈಟ್ ಮಾಡಿದೆ.

    ಒಡಿಶಾದಂತಹ ಕೆಲವು ರಾಜ್ಯಗಳು ಹೆಚ್ಚಿನ ತೆರಿಗೆಯೇತರ ಆದಾಯ ಮತ್ತು ಸಾಲದ ಅವಶ್ಯಕತೆಗಳಿಂದಾಗಿ ಈ ವೆಚ್ಚಗಳನ್ನು ಭರಿಸಲು ಉತ್ತಮ ಸ್ಥಿತಿಯಲ್ಲಿದ್ದರೂ ಇನ್ನೂ ಅನೇಕ ರಾಜ್ಯಗಳು ಹಣಕಾಸಿನ ಸವಾಲುಗಳನ್ನು ಎದುರಿಸಬಹುದು ಎಂದು ವರದಿ ಹೇಳಿದೆ. ಇದನ್ನೂ ಓದಿ: ಭಾರತಕ್ಕೆ ಜಯ – ಮುಂಬೈ ದಾಳಿಕೋರ ತಹಾವೂರ್ ರಾಣಾ ಹಸ್ತಾಂತರಕ್ಕೆ ಅಮೆರಿಕ ಸುಪ್ರೀಂ ಅನುಮತಿ

    ಯಾವ ರಾಜ್ಯದಲ್ಲಿ ಎಷ್ಟು ಹಣ ನಿಗದಿ?
    ಕುಟುಂಬದ ಓರ್ವ ಮಹಿಳೆಗೆ ತಿಂಗಳಿಗೆ 2,000 ರೂ. ಒದಗಿಸುವ ಕರ್ನಾಟಕದ (Karnataka) ಗೃಹ ಲಕ್ಷ್ಮಿ ಯೋಜನೆಗೆ 28,608 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಇದು ರಾಜ್ಯದ ಆದಾಯದ 11% ರಷ್ಟಿದೆ.

    ಆರ್ಥಿಕವಾಗಿ ದುರ್ಬಲ ವರ್ಗಗಳ ಮಹಿಳೆಯರಿಗೆ 1,000 ರೂ. ಅನುದಾನವನ್ನು ನೀಡುವ ಪಶ್ಚಿಮ ಬಂಗಾಳದ ಲಕ್ಷ್ಮಿ ಭಂಡಾರ್ ಯೋಜನೆಗೆ 14,400 ಕೋಟಿ ರೂ. ಮೀಸಲಿಡಲಾಗಿದೆ. ಇದು ರಾಜ್ಯದ ಆದಾಯದ 6% ರಷ್ಟಿದೆ.

    ವಯಸ್ಕ ಮಹಿಳೆಯರಿಗೆ ತಿಂಗಳಿಗೆ ರೂ. 1,000 ರೂ. ಭರವಸೆ ನೀಡುವ ದೆಹಲಿಯ ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆಗೆ 2,000 ಕೋಟಿ ರೂ. ಅಗತ್ಯವಿದೆ. ಇದು ರಾಜ್ಯದ ಆದಾಯದ 3% ರಷ್ಟಿದೆ.

    ಮಹಿಳೆಯರಿಗೆ ಹಣ ನೀಡುವ ಭರವಸೆಯ ಪ್ರವೃತ್ತಿ ಹೆಚ್ಚುತ್ತಿರುವ ಕಾರಣ ಕೇಂದ್ರ ಸರ್ಕಾರ ಇದೇ ರೀತಿಯ ನೀತಿಗಳನ್ನು ಅಳವಡಿಸಿಕೊಳ್ಳಲು ಒತ್ತಡಕ್ಕೊಳಗಾಗಬಹುದು ಎಂದು ಎಸ್‌ಬಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

    ಮಹಿಳೆಯರ ಸಬಲೀಕರಣ ಮತ್ತು ಚುನಾವಣಾ ಬೆಂಬಲ ಪಡೆಯಲು ಘೋಷಣೆಯಾಗುವ ಯೋಜನೆಗಳನ್ನು ಜಾರಿಗೆ ತರುವ ಮೊದಲು ರಾಜ್ಯಗಳು ತನ್ನ ಹಣಕಾಸಿನ ಸ್ಥಿತಿಗತಿ, ಸಾಲದ ಪ್ರಮಾಣ ಎಷ್ಟಿದೆ ಎಂದು ನೋಡಿಕೊಳ್ಳಬೇಕೆಂದು ವರದಿ ಒತ್ತಾಯಿಸಿದೆ.

     

  • ಹೋಟೆಲ್‌ಗೆ ಕರೆಸಿ ಪ್ರಿಯಕರನ ಮರ್ಮಾಂಗ ಕಟ್ ಮಾಡಿದ್ಳು ಪ್ರಿಯತಮೆ!

    ಹೋಟೆಲ್‌ಗೆ ಕರೆಸಿ ಪ್ರಿಯಕರನ ಮರ್ಮಾಂಗ ಕಟ್ ಮಾಡಿದ್ಳು ಪ್ರಿಯತಮೆ!

    – ಬೇರೆ ಹುಡುಗಿಯನ್ನು ಮದುವೆಯಾಗಲು ಮುಂದಾಗಿದ್ದಕ್ಕೆ ಕೃತ್ಯ

    ಲಕ್ನೋ: ಪ್ರೀತಿಯಿಂದ ಹಿಂದೆ ಸರಿದಿದ್ದಕ್ಕೆ 22 ವರ್ಷದ ಯುವತಿಯೊಬ್ಬಳು ತನ್ನ ಪ್ರಿಯಕರನನ್ನು ಹೋಟೆಲ್ ರೂಮ್‌ಗೆ ಕರೆಸಿ ಆತನ ಗುಪ್ತಾಂಗವನ್ನು ಕತ್ತರಿಸಿದ್ದಾಳೆ. ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಈ ಘಟನೆ ನಡೆದಿದೆ. 24 ವರ್ಷದ ತನ್ನ ಪ್ರಿಯಕರನಿಗೆ ಬೇರೊಬ್ಬ ಹುಡುಗಿಯ ಜೊತೆ ಮದುವೆ ನಿಶ್ಚಯವಾಗಿರುವುದು ಗೊತ್ತಾದ ಬಳಿಕ ಪ್ರಿಯತಮೆ ಈ ಕ್ರೂರ ಕೃತ್ಯ ಎಸಗಿದ್ದಾಳೆ. ಇವರಿಬ್ಬರೂ ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದರು.

    ಆತ್ಮಹತ್ಯೆಗೆ ಯತ್ನ!:
    ಹಲ್ಲೆಯ ನಂತರ ಯುವತಿ ತನ್ನ ಕೈಯ ನರವನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತನ್ನ ಮರ್ಮಾಂಗಕ್ಕೆ ಕತ್ತರಿಸುತ್ತಿದ್ದಂತೆಯೇ ಯುವಕ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಆಸಿಡ್ ದಾಳಿ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ನಿರಾಕರಿಸುವಂತಿಲ್ಲ: ದೆಹಲಿ ಹೈಕೋರ್ಟ್‌

    ಯುವತಿಗೆ ಸಿಟ್ಯಾಕೆ..?
    ಯುವಕ ಮದುವೆಗೆ ತಯಾರಿ ನಡೆಸುತ್ತಿರುವ ವಿಷಯ ಯುವತಿಗೆ ಗೊತ್ತಾಗಿದೆ. ಹೀಗಾಗಿ ಆತನನ್ನು ಕೊನೆಯ ಬಾರಿ ನೋಡಬೇಕು ಎಂದು ಹೇಳಿ ಹೋಟೆಲ್ ಕೊಠಡಿಗೆ ಕರೆಸಿಕೊಂಡಿದ್ದಾಳೆ. ಬಳಿಕ ಯುವತಿ ಯುವಕನ ಗುಪ್ತಾಂಗವನ್ನು ಕತ್ತರಿಸಿದ್ದಾಳೆ. ಪೊಲೀಸರು ತಕ್ಷಣ ಬಂದು ಆಸ್ಪತ್ರೆಗೆ ಸೇರಿಸಿದ ಕಾರಣ ಯುವತಿ ಹಾಗೂ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ತಡರಾತ್ರಿ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ

    ಗೊಂದಲದ ಹೇಳಿಕೆಗಳು!
    ಕಾರಿನಲ್ಲಿಯೇ ಪ್ರಿಯತಮೆ ಈ ಕೃತ್ಯವೆಸಗಿದ್ದಾಳೆ ಎಂದು ಯುವಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆದರೆ ಘಟನೆ ನಡೆದಿರುವುದು ಹೋಟೆಲ್‌ನಲ್ಲಿ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದು, ಇಬ್ಬರ ಮೊಬೈಲ್ ಫೋನ್‌ಗಳನ್ನೂ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ ರೇಪ್ & ಮರ್ಡರ್ ಕೇಸ್ | ಘಟನಾ ಸ್ಥಳದಲ್ಲಿ ಪ್ರತಿರೋಧದ ಪುರಾವೆ ಇಲ್ಲ – ಸಿಬಿಐಗೆ CFSL ವರದಿ ಸಲ್ಲಿಕೆ

  • ಮನೆಗೆ ಬಂದ ಪಾರ್ಸೆಲ್‌ನಲ್ಲಿತ್ತು ವ್ಯಕ್ತಿಯ ಮೃತದೇಹ – ಬಾಕ್ಸ್‌ ಓಪನ್‌ ಮಾಡಿ ಮಹಿಳೆ ಶಾಕ್‌!

    ಮನೆಗೆ ಬಂದ ಪಾರ್ಸೆಲ್‌ನಲ್ಲಿತ್ತು ವ್ಯಕ್ತಿಯ ಮೃತದೇಹ – ಬಾಕ್ಸ್‌ ಓಪನ್‌ ಮಾಡಿ ಮಹಿಳೆ ಶಾಕ್‌!

    ಅಮರಾವತಿ: ಮನೆಗೆ ಬಂದ ಪಾರ್ಸೆಲ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಕಂಡು ಮಹಿಳೆ ಶಾಕ್‌ ಆಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಜಿಲ್ಲೆಯ ಉಂಡಿ ಮಂಡಲದ ಯಂಡಗಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪಾರ್ಸೆಲ್‌ನಲ್ಲಿ ಮೃತದೇಹದ ಜೊತೆಗೆ ಒಂದು ಪತ್ರ ಕೂಡ ಇತ್ತು. ನಾಗ ತುಳಸಿ ಎಂದು ಗುರುತಿಸಲಾದ ಮಹಿಳೆ ತನ್ನ ಮನೆ ನಿರ್ಮಿಸಲು ಹಣಕಾಸಿನ ನೆರವು ಕೋರಿ ಕ್ಷತ್ರಿಯ ಸೇವಾ ಸಮಿತಿಗೆ ತೆರಳಿದ್ದರು. ಆಕೆಯ ಅರ್ಜಿಯ ಆಧಾರದ ಮೇಲೆ ಸಮಿತಿಯು ಆಕೆಗೆ ಟೈಲ್ಸ್ ಕಳುಹಿಸಿತ್ತು.

    ಆಕೆ ಮತ್ತೆ ಸಮಿತಿಗೆ ಮನವಿ ಸಲ್ಲಿಸಿದ್ದರು. ನಿರ್ಮಾಣಕ್ಕೆ ಹೆಚ್ಚಿನ ಸಹಾಯವನ್ನು ಕೇಳಿದ್ದರು. ಸಂಸ್ಥೆಯು ಆಕೆಗೆ ವಿದ್ಯುತ್ ಉಪಕರಣಗಳನ್ನು ಒದಗಿಸುವ ಭರವಸೆ ನೀಡಿತ್ತು. ಮಹಿಳೆಗೆ ವಾಟ್ಸಾಪ್ ಸಂದೇಶದಲ್ಲಿ, ಲೈಟ್‌ಗಳು, ಫ್ಯಾನ್‌ಗಳು ಮತ್ತು ಸ್ವಿಚ್‌ಗಳಂತಹ ವಸ್ತುಗಳನ್ನು ಕಳುಹಿಸಲಾಗುವುದು ಎಂದು ಸಮಿತಿ ತಿಳಿಸಿತ್ತು.

    ಗುರುವಾರ ರಾತ್ರಿ ಮಹಿಳೆ ಮನೆಗೆ ಪಾರ್ಸೆಲ್‌ವೊಂದು ತಲುಪಿತು. ಅದರಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು ಇದ್ದವು ಎಂದು ಡೆಲಿವರಿ ಮಾಡುವಾತ ತಿಳಿಸಿದ್ದ. ಮಹಿಳೆ ನಂತರ ಪಾರ್ಸೆಲ್ ತೆರೆದು ನೋಡುತ್ತಿದ್ದಂತೆ ಆಘಾತಕ್ಕೆ ಒಳಗಾಗಿದ್ದಾರೆ. ಪಾರ್ಸೆಲ್‌ನಲ್ಲಿ ವಿದ್ಯುತ್‌ ಉಪಕರಣಗಳಿಗೆ ಬದಲಾಗಿ, ವ್ಯಕ್ತಿಯೊಬ್ಬರ ದೇಹ ಇತ್ತು.

    ಕೂಡಲೇ ಆಕೆಯ ಕುಟುಂಬಸ್ಥರು ಮೃತದೇಹದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸ್ ತಂಡವೊಂದು ಸ್ಥಳಕ್ಕೆ ಧಾವಿಸಿ‌ ಪರಿಶೀಲನೆ ನಡೆಸಿತು. ಅಧಿಕಾರಿಗಳು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

    ಮೃತದೇಹದ ಜೊತೆಗೆ ಪಾರ್ಸೆಲ್‌ನಲ್ಲಿ ಪತ್ರವೊಂದು ಸಿಕ್ಕಿದ್ದು, ಅದರಲ್ಲಿ 1.30 ಕೋಟಿ ಕೊಡಬೇಕು ಎಂದು ಮಹಿಳೆಗೆ ಬೇಡಿಕೆ ಇಡಲಾಗಿದೆ. ಬೇಡಿಕೆ ಈಡೇರಿಸಲು ವಿಫಲವಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕುಟುಂಬಕ್ಕೆ ಎಚ್ಚರಿಕೆ ನೀಡಲಾಗಿದೆ.

  • ರಾಜಕೀಯ ಪಕ್ಷಗಳು ಪಾಶ್‌ ಕಾಯ್ದೆಯಡಿ ಬರುತ್ತವೆಯೇ?; ಏನಿದು ಕಾಯ್ದೆ – ವಿಚಾರಣೆಯಲ್ಲಿ  ʼಸುಪ್ರೀಂʼ ಹೇಳಿದ್ದೇನು?

    ರಾಜಕೀಯ ಪಕ್ಷಗಳು ಪಾಶ್‌ ಕಾಯ್ದೆಯಡಿ ಬರುತ್ತವೆಯೇ?; ಏನಿದು ಕಾಯ್ದೆ – ವಿಚಾರಣೆಯಲ್ಲಿ ʼಸುಪ್ರೀಂʼ ಹೇಳಿದ್ದೇನು?

    ಧುನಿಕತೆ ಬೆಳೆದರೂ, ಕಾನೂನುಗಳು ಬಿಗಿಯಾದರೂ ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮಾತ್ರ ಕಡಿಮೆಯಾಗಿಲ್ಲ. ಎಲ್ಲಾ ಸ್ತರಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಲೇ ಇವೆ. ಪುರುಷ ಪ್ರಧಾನ ವ್ಯವಸ್ಥೆಯ ದಬ್ಬಾಳಿಕೆಗೆ ಮಿತಿ ಇಲ್ಲ ಎನ್ನುವಂತಾಗಿದೆ. ಹೆಣ್ಣು ಸದಾ ಶೋಷಿತೆಯಾಗಿ ಸಮಾಜದಲ್ಲಿ ದುಸ್ಥರ ಬದುಕು ನಡೆಸುವಂತಾಗಿದೆ. ಇದನ್ನು ತಡೆಗಟ್ಟಲು ಹಲವಾರು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಆದರೆ, ಕಾನೂನು ವ್ಯಾಪ್ತಿಯನ್ನು ಮೀರಿ ದೌರ್ಜನ್ಯಗಳು ನಡೆಯುತ್ತಿರುವುದು ಸಂತ್ರಸ್ತರಿಗೆ ನ್ಯಾಯ ಸಿಗುವುದು ಸವಾಲಾಗಿದೆ.

    ಎಲ್ಲ ವಲಯಗಳಲ್ಲೂ ಪುರುಷರಿಗೆ ಸರಿಸಮಾನರಾಗಿ ಮಹಿಳೆಯರು ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ರಾಜಕೀಯ ವಲಯದಲ್ಲಿ ಮಹಿಳೆಯರ ಪ್ರಾತಿನಿಧ್ಯ ತುಂಬಾ ಕಡಿಮೆ. ಭಾರತದಲ್ಲಿ ಪಕ್ಷದ ಕಾರ್ಯಕರ್ತರು, ಸ್ಥಳೀಯ ನಾಯಕರು, ಚುನಾಯಿತ ಪ್ರತಿನಿಧಿಗಳು ಅಥವಾ ಪಕ್ಷಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಸದಸ್ಯರಾಗಿ ಸಂಘಟಿತ ರಾಜಕೀಯದಲ್ಲಿ ಮಹಿಳೆಯರು ಕಡಿಮೆ ಪ್ರಾತಿನಿಧ್ಯ ಹೊಂದಿದ್ದಾರೆ. ಸಂಘರ್ಷ, ದೌರ್ಜನ್ಯವೆಂಬ ಕಲ್ಲು-ಮುಳ್ಳಿನ ಹಾದಿಯಲ್ಲಿ ಸಾಗಬೇಕಾಗಿರುವುದು ವಿವಿಧ ಸ್ತರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ಪ್ರಮುಖ ತೊಡಕಾಗಿದೆ. ಮಹಿಳೆಯರ ಮೇಲಿನ ನಿರಂತರ ದಬ್ಬಾಳಿಕೆ, ದೌರ್ಜನ್ಯ ಈಗ ರಾಜಕೀಯ ವ್ಯವಸ್ಥೆಯಿಂದಲೂ ಹೊರತಾಗಿಲ್ಲ.

    ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಾಗುವ ಲೈಂಗಿಕ ದೌರ್ಜನ್ಯ, ಕಿರುಕುಳ ತಡೆಗಟ್ಟಲು ಜಾರಿಗೊಳಿಸಿದ್ದ ಕಾಯ್ದೆಯಡಿ ರಾಜಕೀಯ ಪಕ್ಷಗಳನ್ನೂ ತರಬೇಕು ಎಂಬ ಕೂಗು ಎದ್ದಿದೆ. ಏನದು ಕಾಯ್ದೆ? ಇದು ಜಾರಿಯಾಗಿದ್ಯಾವಾಗ? ಕಾಯ್ದೆ ವ್ಯಾಪ್ತಿ ಎಷ್ಟಿದೆ? ರಾಜಕೀಯ ಪಕ್ಷಗಳನ್ನು ಇದರ ವ್ಯಾಪ್ತಿಗೆ ಯಾಕೆ ತರಬೇಕು? ಈ ಬಗ್ಗೆ ನ್ಯಾಯಾಲಯ ಹೇಳೋದೇನು?

    ಪಾಶ್-2013 ಕಾಯ್ದೆ, ಏನಿದು?
    ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರ ಜೊತೆ ಅನಪೇಕ್ಷಿತ ಲೈಂಗಿಕ ವರ್ತನೆಗಳು, ದೌರ್ಜನ್ಯ, ಸಲ್ಲದ ಮಾತುಗಾರಿಕೆ ಮತ್ತು ಲೈಂಗಿಕ ದೌರ್ಜನ್ಯ ಕಾನೂನುಬಾಹಿರ. ಇದನ್ನು ತಡೆಗಟ್ಟಲು ಜಾರಿಗೆ ತಂದ ಕಾಯ್ದೆಯೇ ‘ಪಾಶ್’. ಈ ಕಾಯ್ದೆಯನ್ನು 2013ರಲ್ಲಿ ಅಂಗೀಕರಿಸಲಾಯಿತು. ಲೈಂಗಿಕ ಕಿರುಕುಳದ ವಿರುದ್ಧ ದೂರು, ವಿಚಾರಣೆಯ ಕಾರ್ಯವಿಧಾನಗಳು ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಇದು ವಿವರಿಸುತ್ತದೆ.

    ಆಂತರಿಕ ದೂರು ಸಮಿತಿ ಕಡ್ಡಾಯ?
    ವಿಶಾಕಾ ಮಾರ್ಗಸೂಚಿ ಪ್ರಕಾರ, ಪಾಶ್ 2013ರ ಅಧಿನಿಯಮದಡಿ ಯಾವುದೇ ಸರ್ಕಾರಿ/ಖಾಸಗಿ ಸಂಸ್ಥೆಯಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರೆ, ಸಂಘಟಿತ ಸಂಸ್ಥೆಯಾದಲ್ಲಿ ಆಂತರಿಕ ದೂರು ಸಮಿತಿ ರಚಿಸುವುದು ಕಡ್ಡಾಯ.

    ವಿಶಾಕಾ ಮಾರ್ಗಸೂಚಿ ಬಂದಿದ್ಹೇಗೆ?
    ಸುಪ್ರೀಂ ಕೋರ್ಟ್ 1997ರಲ್ಲಿ ವಿಶಾಕಾ ಮಾರ್ಗಸೂಚಿಗಳನ್ನು ಹಾಕಿತು. ಮಹಿಳಾ ಹಕ್ಕುಗಳ ಗ್ರೂಪ್‌ಗಳಲ್ಲಿ ಒಂದಾಗಿತ್ತು ವಿಶಾಕಾ. ರಾಜಸ್ಥಾನದ ಸಾಮಾಜಿಕ ಕಾರ್ಯಕರ್ತೆ ಭನ್ವಾರಿ ದೇವಿ ಅವರ ಮೇಲಿನ ಸಾಮೂಹಿಕ ಅತ್ಯಾಚಾರದ ಕುರಿತು ವಿಶಾಕಾ ಗ್ರೂಪ್‌ನವರು ಪಿಐಎಲ್ ಸಲ್ಲಿಸಿದ್ದರು. 1992ರಲ್ಲಿ ಭನ್ವಾರಿ ಅವರು 1 ವರ್ಷದ ಮಗುವಿನ ಮದುವೆಯನ್ನು ತಡೆದಿದ್ದರು. ಸೇಡಿನ ಪ್ರತಿಕಾರವಾಗಿ ಮದುವೆ ತಡೆದಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು.

    ಪಾಶ್ ಕಾಯ್ದೆ ಮತ್ತೆ ಮುನ್ನೆಲೆಗೆ ಬಂದಿದ್ಯಾಕೆ?
    ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ-2013ಯನ್ನು ರಾಜಕೀಯ ಪಕ್ಷಗಳಿಗೂ ಅನ್ವಯಿಸಬೇಕು ಎಂಬ ಪಿಐಎಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಹಿನ್ನೆಲೆಯಲ್ಲಿ ಪಾಶ್ ಕಾಯ್ದೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.

    ಸುಪ್ರೀಂ ಕೋಟ್ ಹೇಳಿದ್ದೇನು?
    ಲೈಂಗಿಕ ಕಿರುಕುಳದ ವಿರುದ್ಧದ ಹೋರಾಟಕ್ಕೆ ‘ಆಂತರಿಕ ದೂರು ಸಮಿತಿ’ ರಚಿಸಲು, ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಮೇಲೆ ಮೇಲುಗೈ ಸಾಧಿಸಲು ಸಮರ್ಥ ಅಧಿಕಾರ ಹೊಂದಿರುವ ಚುನಾವಣಾ ಆಯೋಗವನ್ನು ಮೊದಲು ಸಂಪರ್ಕಿಸುವಂತೆ ಸುಪ್ರೀಂ ಕೋರ್ಟ್ ಅರ್ಜಿದಾರರಿಗೆ ನಿರ್ದೇಶನ ನೀಡಿದೆ. ಸಾಂಪ್ರದಾಯಿಕ ಕಾರ್ಯಸ್ಥಳದ ರಚನೆಯನ್ನು ಹೊಂದಿರುವ ರಾಜಕೀಯ ಪಕ್ಷಗಳಂತಹ ಸಂಸ್ಥೆಗಳಿಗೆ ಪಾಶ್ ಕಾಯ್ದೆ ಹೇಗೆ ಅನ್ವಯಿಸುತ್ತದೆ ಎಂಬ ಚರ್ಚೆ ಹುಟ್ಟುಕೊಂಡಿದೆ.

    ಕೇರಳ ಹೈಕೋರ್ಟ್ ತೀರ್ಪೇನು?
    ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಮೊದಲು ಪಿಐಎಲ್ ವಿಚಾರಣೆಯನ್ನು ಕೇರಳ ಹೈಕೋರ್ಟ್ ನಡೆಸಿತ್ತು. ರಾಜಕೀಯ ಪಕ್ಷಗಳಲ್ಲಿ ಅದರ ಸದಸ್ಯರೊಂದಿಗೆ ಉದ್ಯೋಗದಾತ-ಉದ್ಯೋಗಿ ಎಂಬುದು ಇಲ್ಲ. ರಾಜಕೀಯ ಪಕ್ಷಗಳು ಯಾವುದೇ ಖಾಸಗಿ ಉದ್ಯಮ, ಸಂಸ್ಥೆ ಎಂದು ರೂಪುಗೊಂಡಿರುವುದಿಲ್ಲ. ಹೀಗಾಗಿ, ರಾಜಕೀಯ ಪಕ್ಷಗಳು ಯಾವುದೇ ಆಂತರಿಕ ದೂರುಗಳ ಸಮಿತಿಯನ್ನು ಮಾಡಲು ಜವಾಬ್ದಾರಿರಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.

    ರಾಜಕೀಯ ಪಕ್ಷಗಳಿಗೆ ಕಾಯ್ದೆ ಅನ್ವಯಿಸಬಹುದೇ?
    ಜನರ ಪ್ರಾತಿನಿಧ್ಯ ಕಾಯಿದೆ 1951 (ಆರ್‌ಪಿ ಕಾಯ್ದೆ), ರಾಜಕೀಯ ಪಕ್ಷವನ್ನು ಹೇಗೆ ನೋಂದಾಯಿಸಬೇಕು ಎಂಬುದನ್ನು ನಿಯಂತ್ರಿಸುತ್ತದೆ. ಸೆಕ್ಷನ್ 29ಎ ಅಡಿಯಲ್ಲಿ ‘ಯಾವುದೇ ಅಸೋಸಿಯೇಷನ್ ತನ್ನನ್ನು ರಾಜಕೀಯ ಪಕ್ಷವೆಂದು ಕರೆದುಕೊಳ್ಳಲು ನೋಂದಣಿಗಾಗಿ ಚುನಾವಣಾ ಆಯೋಗಕ್ಕೆ ಅರ್ಜಿ ಹಾಕಬೇಕು. ಪಕ್ಷದ ಹೆಸರು, ಅದರ ಕೇಂದ್ರ ಕಚೇರಿ ಇರುವ ರಾಜ್ಯ, ಪದಾಧಿಕಾರಿಗಳ ಹೆಸರು, ಸ್ಥಳೀಯ ಘಟಕಗಳ ವಿವರ ಮತ್ತು ಸದಸ್ಯರ ಸಂಖ್ಯೆ ಸೇರಿದಂತೆ ವಿವರಗಳು ಅರ್ಜಿಯಲ್ಲಿರಬೇಕು. ಅಪ್ಲಿಕೇಶನ್ ನಿಯಮಗಳು ಮತ್ತು ನಿಬಂಧನೆಗಳ ಜ್ಞಾಪನ ಪತ್ರವನ್ನು ಸಹ ಹೊಂದಿರಬೇಕು. ಪಕ್ಷವು ಭಾರತದ ಸಂವಿಧಾನಕ್ಕೆ ನಿಜವಾದ ನಂಬಿಕೆ ಮತ್ತು ನಿಷ್ಠೆ ಹೊಂದಿರಬೇಕು ಎಂದು ಹೇಳುವ ನಿಬಂಧನೆ ಹೊಂದಿರಬೇಕು. ಈ ಎಲ್ಲ ಕಾರಣಗಳಿಗಾಗಿ ರಾಜಕೀಯ ಪಕ್ಷಕ್ಕೆ ಕಾಯ್ದೆಯನ್ನು ಅನ್ವಯಿಸುವುದು ಕಷ್ಟಕರವಾಗುತ್ತದೆ.

    ಪಕ್ಷಗಳಲ್ಲಿ ಕೆಲಸ ಮಾಡಲು ಒಲವು ತೋರುವ ಕಾರ್ಯಕರ್ತರು, ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಕಡಿಮೆ ಸಂವಹನ ಹೊಂದಿರುತ್ತಾರೆ. ಕೆಲಸದ ಸ್ಥಳ ಇಲ್ಲದೇ ಸಾರ್ವಜನಿಕವಾಗಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಒಂದು ವೇಳೆ, ಪಾಶ್ ಕಾಯ್ದೆ ವ್ಯಾಪ್ತಿಗೆ ತರಬೇಕು ಎಂದಾದರೆ, ರಾಜಕೀಯ ಪಕ್ಷದಲ್ಲಿ ಉದ್ಯೋಗದಾತ ಯಾರು ಎಂಬುದನ್ನು ಸ್ಪಷ್ಟಪಡಿಸಬೇಕಾಗುತ್ತದೆ. ಪಾಶ್ ಕಾಯ್ದೆಯು ‘ಉದ್ಯೋಗಿ’ ಎಂಬ ಪದಕ್ಕೆ ವ್ಯಾಪಕವಾದ ವ್ಯಾಖ್ಯಾನವನ್ನು ಒದಗಿಸುತ್ತದೆ.

    ಇಸಿಐ ನಿಲುವು ಏನು?
    ಚುನಾವಣಾ ಆಯೋಗವು ತನ್ನ ಅಧಿಕಾರವನ್ನು ಸಂವಿಧಾನದ 324ನೇ ವಿಧಿಯಿಂದ ಪಡೆದುಕೊಂಡಿದೆ. ಇದು ಸಂಸತ್ತು, ರಾಜ್ಯ ಶಾಸಕಾಂಗಗಳು, ಅಧ್ಯಕ್ಷರ ಕಚೇರಿ ಮತ್ತು ಉಪಾಧ್ಯಕ್ಷರ ಕಚೇರಿಗೆ ಚುನಾವಣೆಗಳ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣದ ಅಧಿಕಾರವನ್ನು ಹೊಂದಿದೆ. ಆರ್‌ಪಿ ಕಾಯಿದೆಯಿಂದ ಈ ಅಧಿಕಾರವನ್ನು ಮತ್ತಷ್ಟು ಬಲಪಡಿಸಲಾಗಿದೆ. ಇತರೆ ಕಾನೂನುಗಳ ವಿಚಾರದಲ್ಲಿ ಪಕ್ಷಗಳಿಗೆ ಸಲಹೆಗಳನ್ನು ನೀಡುವ ವಿಧಾನವನ್ನು ಇಸಿಐ ಅವಳಡಿಸಿಕೊಂಡಿದೆ. ಉದಾಹರಣೆಗೆ: ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ಪ್ರಕಾರ ಮಕ್ಕಳನ್ನು ಪ್ರಚಾರದಲ್ಲಿ ತೊಡಗಿಸದಂತೆ 2024ರ ಲೋಕಸಭಾ ಚುನಾವಣೆಗೂ ಮುಂಚಿತವಾಗಿ ಪಕ್ಷಗಳಿಗೆ ಸೂಚನೆ ನೀಡಿತ್ತು.

  • ಒಂದೇ ದಿನದಲ್ಲಿ ಮಹಿಳೆಗೆ ಸಿಕ್ತು ನಿವೇಶನ; ಸಿಎಂ ಮುಂದೆ ಗೋಳಾಡಿದ್ದ ರಾಬಿಯಾ

    ಒಂದೇ ದಿನದಲ್ಲಿ ಮಹಿಳೆಗೆ ಸಿಕ್ತು ನಿವೇಶನ; ಸಿಎಂ ಮುಂದೆ ಗೋಳಾಡಿದ್ದ ರಾಬಿಯಾ

    ತುಮಕೂರು: ಕಾರ್ಯಕ್ರಮವೊಂದರಲ್ಲಿ ಗೋಳಾಡಿದ್ದ ಮಹಿಳೆಗೆ ಒಂದೇ ದಿನದಲ್ಲಿ ನಿವೇಶನ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ನಿವೇಶನ ಮಂಜೂರು ಮಾಡಲಾಗಿದೆ.

    ಸೋಮವಾರ ತುಮಕೂರು ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಮುಂದೆ ಮಹಿಳೆ ರಾಬಿಯಾ ಗೋಳಾಡಿದ್ದರು. ನಿವೇಶನಕ್ಕಾಗಿ ಎರಡು ಚಿಕ್ಕ ಹೆಣ್ಣುಮಕ್ಕಳೊಂದಿಗೆ ಸಿಎಂ ಮುಂದೆ ಕಣ್ಣೀರಿಟ್ಟಿದ್ದರು.

    ಪರಿಸ್ಥಿತಿ ಕಂಡು ಜಿಲ್ಲಾಧಿಕಾರಿಗೆ ಕೂಡಲೇ ನಿವೇಶನ ನೀಡುವಂತೆ ಸಿಎಂ ಸೂಚಿಸಿದ್ದರು. ನಿನ್ನೆ ರಾಬಿಯ ಹೆಸರಿಗೆ 20-30 ಅಳತೆಯ ನಿವೇಶನ ಮಂಜೂರಾಗಿದೆ. ರಾಜೀವ್ ಗಾಂಧಿ ವಸತಿ ನಿಗಮದ ಅಡಿಯಲ್ಲಿ ಠರಾವು ಮಾಡಿ ಆದೇಶ ಹೊರಡಿಸಲಾಗಿದೆ.

    ನಿವೇಶನ ಇಲ್ಲದೇ ಸರ್ಕಾರಿ ಕಚೇರಿಗಳಲ್ಲಿ ರಾಬಿಯಾ ಅಲೆದಾಡುತ್ತಿದ್ದರು. ಕೊನೆಗೆ ಶಿರಾ ನಗರಸಭಾ ಕಾರ್ಯಾಲಯದಿಂದ ಅಧಿಕೃತ ಆದೇಶ ಹೊರಬಿದ್ದಿದೆ. ಶಿರಾ ನಗರದ ಸರ್ವೆ ನಂಬರ್ 100 ರಲ್ಲಿ ನಿವೇಶನ ಹಂಚಿಕೆಯಾಗಿದೆ.

  • ಬೆಂಗಳೂರಿನಲ್ಲಿ ಗೃಹಿಣಿ ಆತ್ಮಹತ್ಯೆ

    ಬೆಂಗಳೂರಿನಲ್ಲಿ ಗೃಹಿಣಿ ಆತ್ಮಹತ್ಯೆ

    ಬೆಂಗಳೂರು: ನಗರದಲ್ಲಿ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

    ಗೀತಾ (37) ಆತ್ಮಹತ್ಯೆಗೆ ಶರಣಾದ ಮಹಿಳೆ. ಪತಿ ಮುರುಳಿ ಮೋಹನ್ ವಿರುದ್ದ ಪತ್ನಿ ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ. ಪತಿಯೇ ನೇಣು ಬಿಗಿದು‌ ಪತ್ನಿ ಕೊಲೆ ಮಾಡಿರುವ ಆರೋಪ ಹೊರಿಸಿದ್ದಾರೆ.

    ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗೀತಾ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. 17 ವರ್ಷಗಳ ಹಿಂದೆ ಗೀತಾ ಮದುವೆಯಾಗಿದ್ದರು. ಕಳೆದ ಕೆಲ ತಿಂಗಳಿನಿಂದ ಪತಿ ಜೊತೆ ಕಲಹವಾಗಿತ್ತು.

    ಘಟನೆ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತ್ನಿಯ ಶೀಲ ಶಂಕಿಸಿ ಕೊಲೆ – ಸಂಬಂಧಿಕರ ಜೊತೆ ಸೇರಿ ಮೃತದೇಹ ಸುಟ್ಟುಹಾಕಿದ ಪತಿ

    ಪತ್ನಿಯ ಶೀಲ ಶಂಕಿಸಿ ಕೊಲೆ – ಸಂಬಂಧಿಕರ ಜೊತೆ ಸೇರಿ ಮೃತದೇಹ ಸುಟ್ಟುಹಾಕಿದ ಪತಿ

    ಕೊಪ್ಪಳ: ವ್ಯಕ್ತಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ, ಕೊಲೆ ಮಾಡಿ ಆಕೆಯನ್ನು ಸುಟ್ಟುಹಾಕಿರುವ ಘಟನೆ ಕೊಪ್ಪಳದಲ್ಲಿ (Koppal) ನಡೆದಿದೆ.

    ಕುಕನೂರು ತಾಲೂಕಿನ ಅರಕೇರಿ ಗ್ರಾಮದಲ್ಲಿ ಗೀತಾ ಎಂಬಾಕೆಯ ಕೊಲೆಯಾಗಿದೆ. ಪತಿ ದೇವರೆಡ್ಡೆಪ್ಪ ಭಾವಿಕಟ್ಟಿಯಿಂದ ಆಕೆ ಕೊಲೆಯಾಗಿದ್ದಾಳೆ. ಇದನ್ನೂ ಓದಿ: ಸಾವಿನ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿ ಎಸ್ಕೇಪ್ ಆಗಿದ್ದ ಸಂಬಂಧಿಕರು ಅರೆಸ್ಟ್

    ಸೆ.6 ರ ರಾತ್ರಿ ಕೊಲೆ ನಡೆದಿದೆ. ಮೃತಳ ಸಹೋದರ ಸಿದ್ಧರೆಡ್ಡಿ ದೂರು ಆಧರಿಸಿ, ಕೊಲೆ ಆರೋಪದಡಿ ದೇವರೆಡ್ಡೆಪ್ಪ ಭಾವಿಕಟ್ಟಿ ಹಾಗೂ ಆತನ ತಂದೆ ಮಲ್ಲಾರೆಡ್ಡೆಪ್ಪ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

    ಮಕ್ಕಳಾಗದ ಹಿನ್ನೆಲೆಯಲ್ಲಿ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಮೃತಳ ಕುಟುಂಬಕ್ಕೆ ಸಹಜ ಸಾವು ಎಂದು ಹೇಳಿ, ತರಾತುರಿಯಲ್ಲಿ ಸುಟ್ಟು ಹಾಕಿದ್ದಾರೆ. ಸಂಶಯಗೊಂಡ ಮೃತಳ ಸಹೋದರ ಸಿದ್ಧರೆಡ್ಡಿ ದೂರು ನೀಡಿದ್ದು, ಕುಕನೂರು ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಯೂಟ್ಯೂಬ್ ವೀಡಿಯೋ ನೋಡಿ ಸರ್ಜರಿ ಮಾಡಿದ ನಕಲಿ ವೈದ್ಯ- 17ರ ಬಾಲಕ ಸಾವು

  • Digital Arrest | ಮಹಿಳೆಯರ ನಗ್ನ ವೀಡಿಯೋ ರೆಕಾರ್ಡ್ ಮಾಡಿ ಹಣಕ್ಕಾಗಿ ಬ್ಲ್ಯಾಕ್​ ಮೇಲ್!

    Digital Arrest | ಮಹಿಳೆಯರ ನಗ್ನ ವೀಡಿಯೋ ರೆಕಾರ್ಡ್ ಮಾಡಿ ಹಣಕ್ಕಾಗಿ ಬ್ಲ್ಯಾಕ್​ ಮೇಲ್!

    – ಬೆಳಗಾವಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

    ಬೆಳಗಾವಿ: ಮುಂಬೈ ಕ್ರೈಂ ಬ್ರ್ಯಾಂಚ್, ಗುಪ್ತಚರ ಇಲಾಖೆ ಅಧಿಕಾರಿಗಳು ಅಂತ ಹೇಳಿಕೊಂಡು ಮಹಿಳೆಯರಿಗೆ ವಿಡಿಯೋ ಕಾಲ್​ ಮಾಡಿ, ಅವರ ನಗ್ನ ದೇಹವನ್ನು ವಿಡಿಯೋ ರೆಕಾರ್ಡ್​ ಮಾಡಿಕೊಂಡು ಹಣಕ್ಕಾಗಿ ಬ್ಲ್ಯಾಕ್​ ಮೇಲ್​ ಮಾಡುತ್ತಿರುವ ಪ್ರಕರಣ ಬೆಳಗಾವಿಯಲ್ಲಿ (Belagavi) ಬೆಳಕಿಗೆ ಬಂದಿದೆ. ಇದನ್ನು ಡಿಜಿಟಲ್‌ ಅರೆಸ್ಟ್‌ (Digital Arrest) ಎಂದೂ ಸಹ ಕರೆಯುತ್ತಾರೆ. ಈ ಕುರಿತು ಇಲ್ಲಿನ ಸೈಬರ್ ಎಕನಾಮಿಕ್ಸ್ ಮತ್ತು ನಾರ್ಕೋಟಿಕ್ಸ್ (CEN) ಠಾಣೆಯಲ್ಲಿ ದೂರು ದಾಖಲಾಗಿದೆ.

    ಪ್ರಕರಣ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿರುವ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಸೈಬರ್‌ ಕಳ್ಳರು ಹೊಸ ಮಾರ್ಗಗಳಲ್ಲಿ ಅಪರಾಧ ಕೃತ್ಯಗಳಿಗೆ ಮುಂದಾಗುತ್ತಿದ್ದಾರೆ. ಮೊದಲಿಗೆ ಇ-ಮೇಲ್‌, ಮೆಸೇಜ್, ಕಾಲ್ಸ್ ಅಥವಾ ವಾಟ್ಸಪ್‌ ಮೂಲಕ ಒಂದು ಮೆಸೇಜ್ ಬರುತ್ತದೆ. ಕ್ರೈಮ್‌ ಬ್ರ್ಯಾಂಚ್‌ನಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ಹೆಸರು ಕ್ರಿಮಿನಲ್ ಕೇಸ್‌ನಲ್ಲಿದೆ. ನೀವು ನಮ್ಮ ಹತ್ತಿರ ಬರಬೇಕು ರಿಪೋರ್ಟ್ ಕೊಡಬೇಕು ಯಾಕೆ ನೀವು ಈ ರೀತಿ ಮಾಡಿದೀರಿ ಅಂತ ಹೇಳ್ತಾರೆ. ಈ ರೀತಿ ಮಾಡಿ ಸಂತ್ರಸ್ತರಿಗೆ ಭಯ ಹುಟ್ಟಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಸದ್ದು ಮಾಡುತ್ತಿದೆ ಅನೀಶ್, ಮಿಲನಾ ನಾಗರಾಜ್ ನಟನೆಯ ‘ಆರಾಮ್ ಅರವಿಂದ ಸ್ವಾಮಿ’ ಚಿತ್ರದ ಪೋಸ್ಟರ್

    ಈಗ ನಾವು ನಿಮ್ಮನ್ನು ವಿಚಾರಣೆ ಮಾಡಬೇಕು. ಕ್ಯಾಮೆರಾ ಮುಂದೆ ನೀವು ಬರಬೇಕು. ಬೇರೆ ಕಡೆ ನೀವು ಹೋದರೆ ನಿಮ್ಮ ಕ್ರೈಮ್ ಬಗ್ಗೆ ಫ್ಯಾಮಿಲಿ ಅವರಿಗೆ ಹೇಳುತ್ತೇವೆ. ಹೇಗೆ ಕ್ರೈಮ್ ಮಾಡಿದೀರಿ ಅಂತಾ ನಿಮ್ಮ ಬಾಡಿ ವೆರಿಫಿಕೇಶನ್ ಆಗಬೇಕು ಬಟ್ಟೆ ಬಿಚ್ಚಬೇಕು ಅಂತಾ ಹೇಳ್ತಾರೆ. ಬಳಿಕ ಆ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಾರೆ. ಈ ರೀತಿ ಸುಳ್ಳು ಹೇಳಿ ನಂಬಿಸಿ ಹಣ ದೋಚುವ ಕೆಲಸ ಮಾಡುತ್ತಿದ್ದಾರೆ. ಈ ರೀತಿ ಮೂರು ಪ್ರಕರಣಗಳು ಸೆನ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ ಪಕ್ಷವನ್ನು ಅಧಿಕೃತಗೊಳಿಸಿದ ಚುನಾವಣಾ ಆಯೋಗ

    ಈ ರೀತಿ ದೂರವಾಣಿ ಕರೆಗಳು ಬಂದು ಬ್ಲ್ಯಾಕ್ ಮೇಲ್ ಮಾಡಿದರೆ ಕೂಡಲೇ ಪೊಲೀಸರ ಗಮನಕ್ಕೆ ತರಬೇಕು ಎಂದು ಕರೆ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಒಂದೇ ದಿನದಲ್ಲಿ ತನಗೆ ಸೇರಿದ ಜಾಗದ 848 ಖಾತೆ ಮಾಡಿಸಿಕೊಂಡ ಮುಡಾ ಮಾಜಿ ಅಧ್ಯಕ್ಷ