Tag: women

  • ಅಫ್ಘಾನ್ ಮಹಿಳೆಯರ ಮೇಲೆ ಕಠಿಣ ಕ್ರಮ – ವಿಶ್ವಸಂಸ್ಥೆಯ ಕರೆಗೆ ಕ್ಯಾರೇ ಅನ್ನದ ತಾಲಿಬಾನ್

    ಅಫ್ಘಾನ್ ಮಹಿಳೆಯರ ಮೇಲೆ ಕಠಿಣ ಕ್ರಮ – ವಿಶ್ವಸಂಸ್ಥೆಯ ಕರೆಗೆ ಕ್ಯಾರೇ ಅನ್ನದ ತಾಲಿಬಾನ್

    ವಾಷಿಂಗ್ಟನ್: ಅಫ್ಘಾನಿಸ್ತಾನದ ಮಹಿಳೆಯರ ಮೇಲೆ ತಾಲಿಬಾನ್ ವಿಧಿಸುತ್ತಿರುವ ಕಠಿಣ ನಿಯಮಗಳನ್ನು ತೆಗೆದು ಹಾಕಬೇಕೆಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ(ಯುಎನ್‌ಎಸ್‌ಸಿ) ಕರೆಯನ್ನು ತಾಲಿಬನ್ ತಿರಸ್ಕರಿಸಿದೆ

    ಅಫ್ಘಾನಿಸ್ತಾನದ ಮಹಿಳೆಯರ ಮೇಲೆ ತಾಲಿಬಾನ್ ವಿಧಿಸುತ್ತಿರುವ ಕಟ್ಟುನಿಟ್ಟಿನ ಕ್ರಮಗಳಿಗೆ ಯುಎನ್‌ಎಸ್‌ಸಿ ಕಳವಳ ವ್ಯಕ್ತಪಡಿಸಿದ್ದು, ಇದನ್ನು ತಾಲಿಬಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿರಸ್ಕರಿಸಿದೆ ಎಂದು ವರದಿಯಾಗಿದೆ.

    ಅಫ್ಘಾನಿಸ್ತಾನದ ಜನರು ಪ್ರಧಾನವಾಗಿ ಮುಸ್ಲಿಮರಾಗಿರುವುದರಿಂದ ನಮ್ಮ ಸರ್ಕಾರ ಇಸ್ಲಾಮಿಕ್ ಹಿಜಬ್ ಅನ್ನು ಸಮಾಜದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳಿಗೆ ಅನುಗುಣವಾಗಿ ಪರಿಗಣಿಸುತ್ತದೆ ಎಂದು ತಾಲಿಬಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಕಹರ್ ಬಾಲ್ಖಿ ಹೇಳಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಿಂದ ಬಂದ ಶೇ.87 ಮಂದಿಗೆ ಭಾರತದ ಪೌರತ್ವ

    ಇತ್ತೀಚೆಗೆ ಭದ್ರತಾ ಮಂಡಳಿ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸುವ ನೀತಿಗಳನ್ನು ತಕ್ಷಣವೇ ತೆಗೆದುಹಾಕುವಂತೆ ತಾಲಿಬಾನ್‌ಗೆ ಸೂಚಿಸಿತ್ತು.

    ಅಫ್ಘಾನ್ ಮಹಿಳೆಯರ ಶಿಕ್ಷಣ, ಉದ್ಯೋಗ, ಚಳುವಳಿಯ ಸ್ವಾತಂತ್ರ್ಯ ಹಾಗೂ ಸಾರ್ವಜನಿಕ ಜೀವನದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಮೇಲೆ ತಾಲಿಬಾನ್ ವಿಧಿಸಿರುವ ನಿರ್ಬಂಧಗಳನ್ನು ಅನುಸರಿಸಿ ಅಲ್ಲಿನ ಹುಡುಗಿಯರು ಹಾಗೂ ಮಹಿಳೆಯರ ಬಗ್ಗೆ ಆಳವಾಗಿ ಕಳವಳ ವ್ಯಕ್ತಪಡಿಸಿರುವುದಾಗಿ ತಿಳಿಸಿತ್ತು. ಇದನ್ನೂ ಓದಿ: 1991ರ ಕಾಯಿದೆ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮತ್ತೊಂದು ಅರ್ಜಿ

    ಇತ್ತೀಚೆಗೆ ತಾಲಿಬಾನ್ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೇರಿದ ನಿರ್ಬಂಧ, ಕಟ್ಟುನಿಟ್ಟಿನ ಹಿಜಬ್ ಜಾರಿ ಹಾಗೂ ರಾಜಕೀಯರಂಗದಿಂದ ಮಹಿಳೆಯರನ್ನು ದೂರ ಉಳಿಸಿದ ಸಂದರ್ಭದಲ್ಲಿ ಭದ್ರತಾ ಮಂಡಳಿ ತಕ್ಷಣವೇ ವಿದ್ಯಾರ್ಥಿನಿಯರಿಗೆ ಶಾಲೆಗಳನ್ನು ತೆರೆಯಲು ಸೂಚನೆ ನೀಡಿತ್ತು.

  • ಬಳ್ಳಿಯಂತಹ ನಡುವಿಗೆ ಫ್ರೆಶ್ ಲುಕ್ ನೀಡುವ ಸ್ಮಾರ್ಟ್ ಬೆಲ್ಟ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

    ಬಳ್ಳಿಯಂತಹ ನಡುವಿಗೆ ಫ್ರೆಶ್ ಲುಕ್ ನೀಡುವ ಸ್ಮಾರ್ಟ್ ಬೆಲ್ಟ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

    ನೆಯ ಹೊರಗಡೆ ಹೋದಂತಹ ಸಂದರ್ಭದಲ್ಲಿ ನಾವು ನೋಡಲು ಚೆನ್ನಾಗಿ ಕಾಣ್ಬೇಕು ಅನ್ನೋ ಬಯಕೆ ಪ್ರತಿಯೊಬ್ಬರಿಗೂ ಇರುತ್ತದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ತಮ್ಮ ಅಂದ ಚಂದ ಹೆಚ್ಚು ಮಾಡುವ ಸ್ಟೈಲಿಶ್‌ ಬಟ್ಟೆಗಳೆಂದರೆ ಬಹಳ ಇಷ್ಟ. ಮಾರುಕಟ್ಟೆಯಲ್ಲೂ ಹಲವಾರು ಚೂಡಿದಾರ್, ಸಲ್ವಾರ್ ಸೂಟ್, ಜೀನ್ಸ್, ಕ್ಯಾಶುವಲ್ ವೇರ್ ಇತ್ಯಾದಿಗಳು ಮಹಿಳೆಯರಿಗೆ ಪ್ರಿಯವಾಗಿಯೇ ಸಿಗಲಿವೆ.

    BELTS (3)

    ಇತ್ತೀಚೆಗೆ ಹೊಸ ಟ್ರೆಂಡ್ ಶುರುವಾಗಿದೆ. ಪ್ಯಾಂಟ್ ಧರಿಸುವವರು ಹಾಗೂ ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ ಮಾಡುವ ಮಹಿಳೆಯರು ಶಾರ್ಟ್ ಬೆಲ್ಟ್‌ಗಳನ್ನು ಬಳಸುತ್ತಾರೆ. ಶರ್ಟ್ ಪ್ಯಾಂಟ್ ಅಲ್ಲದೆ ಮಹಿಳೆಯರ ಡ್ರೆಸ್ ಗೂ ಈಗ ಬೆಲ್ಟ್ ಧರಿಸುತ್ತಾರೆ. ತಮ್ಮ ಡ್ರೆಸ್ ಮೇಲೆ ಬಣ್ಣ ಬಣ್ಣದ, ವಿಭಿನ್ನ ಶೈಲಿಯ ಬೆಲ್ಟ್‌ಗಳನ್ನು ಧರಿಸುತ್ತಾರೆ.

    ಹೌದು ಸಿಂಪಲ್ ಆದ ಸೀರೆಗೂ ಗ್ರ‍್ಯಾಂಡ್ ಆಗಿರೋ ಬೆಲ್ಟ್ ತುಂಬಾ ಸ್ಟೈಲಿಶ್‌ ಆಗಿ ಕಾಣಿಸುತ್ತದೆ. ಹಾಗೆಯೇ ಟೀ ಶರ್ಟ್ ಹಾಗೂ ಶಾರ್ಟ್ ಸ್ಕರ್ಟ್‌ಗಳಿಗೆ ಹೊಂದಿಕೆಯಾಗುವ ಬೆಲ್ಟ್‌ಗಳನ್ನು ಧರಿಸುವುದು ನಿಮಗೆ ಹೊಸ ಲುಕ್ ನೀಡುತ್ತದೆ. ಅವುಗಳ ಬಗೆಯನ್ನಿಲ್ಲಿ ನೋಡೋಣ…

    BELTS (3)

    ನೀಳ ದೇಹಕ್ಕುಂಟು ಬೆಲ್ಟ್: ನಿಮ್ಮ ದೇಹವು ನೇರವಾಗಿದ್ದರೆ, ಮಧ್ಯಮ ಅಗಲದ ಡಾರ್ಕ್ ಬೆಲ್ಟ್ ಅನ್ನು ಆಯ್ಕೆ ಮಾಡಿ ಅಥವಾ ರಫಲ್ಸ್ (ಹುಡುಗರೂ ಧರಿಸಬಹುದಾದ ಲೆದರ್ ಬೆಲ್ಟ್) ಹೊಂದಿರುವ ಫ್ಯಾಬ್ರಿಕ್ ಬೆಲ್ಟ್ ಧರಿಸಿ ಕೊಳ್ಳಬಹುದು.

    BELTS (3)

    ಬಳ್ಳಿ ನಡುವಿಗೂ ಬೆಲ್ಟ್: ಕೆಲ ಹುಡುಗಿಯರು ಹಾಗೂ ಮಹಿಳೆಯರು ತೀರಾ ಸಣ್ಣಗಿರುವವರು ಕಡಿಮೆ ಅಗಲದ ಬೆಲ್ಟ್‌ಗಳನ್ನು ಧರಿಸುತ್ತಾರೆ. ಬಳ್ಳಿಯಂತೆ ಬಳುಕುವ ನಡುವಿಗೆ ಆಕರ್ಷಕವೆಂದರೆ ಲೋಹ ಅಥವಾ ಚರ್ಮದಿಂದ ಮಾಡಿದ ಬೆಲ್ಟ್. ಇಂತಹವರು ಹೆಚ್ಚು ಅಗಲವಾದ ಬೆಲ್ಟ್‌ಗಳನ್ನು ಧರಿಸುವುದರಿಂದ ದೇಹಕ್ಕೆ ಬ್ಯಾಂಡೇಜ್ ಸುತ್ತಿದಂತೆ ಕಾಣುತ್ತದೆ.

    ಶಾರ್ಟ್‌ಸ್ಕರ್ಟ್‌ಗೆ ಒಪ್ಪುವ ಬೆಲ್ಟ್: ನಿಮ್ಮ ಉಡುಪನ್ನು ಎದ್ದು ಕಾಣುವಂತೆ ಮಾಡಲು ಅಗಲವಾದ ಕಪ್ಪು ಬೆಲ್ಟ್ ಪರ್ಫೆಕ್ಟ್ ಆಗಿರುತ್ತದೆ. ಉದಾಹರಣೆಗೆ ನೀವು ಬಿಳಿ ಶರ್ಟ್ ಹಾಗೂ ಹೂವಿನ ಬಾರ್ಡರ್‌ವುಳ್ಳ ಸ್ಕರ್ಟ್ ಧರಿಸಿದರೆ, ಅದಕ್ಕೆ ಕಪ್ಪು ಬೆಲ್ಟ್ ಸೂಟ್ ಆಗುತ್ತದೆ.

    BELTS (3)

    ಫಾರ್ಮಲ್ ಸೂಟ್ಸ್: ಕೆಲಸದ ಸ್ಥಳಗಳಲ್ಲಿ ಸೂಟ್ಸ್ ಧರಿಸುವ ಮಹಿಳೆಯರು ತಿಳಿ ಕಂದು ಅಥವಾ ಕಪ್ಪು ಚರ್ಮದ ಬೆಲ್ಟ್ ಅನ್ನು ಧರಿಸುವುದು ಉತ್ತಮ. ಮೆರೂನ್, ಗಾಢ ಹಸಿರು ಅಥವಾ ರಕ್ತ ಚಂದನ ಬಣ್ಣದ ಬೆಲ್ಟ್‌ಗಳನ್ನು ಪ್ರಯತ್ನಿಸಬಹುದು.

    ಜೀನ್ಸ್ ಲುಕ್: ಸೂಪರ್ ಕ್ಯಾಶ್ಯುಯಲ್ ನೋಟಕ್ಕಾಗಿ ಜೀನ್ಸ್ ಧರಿಸುವ ಯುವತಿಯರು ಹಾಗೂ ಮಹಿಳೆಯರು ಕೊಂಚ ಅಗಲವಾದ ಬೆಲ್ಟ್ ಧರಿಸುವುದು ಒಳ್ಳೆಯದು. ಇವು ನಿಮ್ಮನ್ನು ಮತ್ತಷ್ಟು ಸ್ಟೈಲಿಶ್‌ ಆಗಿ ಕಾಣುವಂತೆ ಮಾಡುತ್ತದೆ.

  • ಇಬ್ಬರು ಮಹಿಳೆಯರ ಹೊಟ್ಟೆಯಲ್ಲಿತ್ತು 28 ಕೋಟಿ ಮೌಲ್ಯದ ಕೊಕೇನ್ – ಬೆಚ್ಚಿಬಿದ್ದ ಪೊಲೀಸರು

    ಇಬ್ಬರು ಮಹಿಳೆಯರ ಹೊಟ್ಟೆಯಲ್ಲಿತ್ತು 28 ಕೋಟಿ ಮೌಲ್ಯದ ಕೊಕೇನ್ – ಬೆಚ್ಚಿಬಿದ್ದ ಪೊಲೀಸರು

    ನವದೆಹಲಿ: ತಮಿಳಿನ ಖ್ಯಾತ ನಟ ಸೂರ್ಯ ಅಭಿನಯದ ಅಯನ್ ಸಿನಿಮಾದಲ್ಲಿರುವ ದೃಶ್ಯದಂತೆ ತಮ್ಮ ಹೊಟ್ಟೆಯೊಳಗೆ ಸುಮಾರು 28 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ಅನ್ನು ಸಾಗಿಸುತ್ತಿದ್ದ ಇಬ್ಬರು ಚಾಲಾಕಿ ಮಹಿಳೆಯರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

    ಉಗಾಂಡಾದಿಂದ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರ ಹೊಟ್ಟೆಯಲ್ಲಿ 181 ಕ್ಯಾಪ್ಸುಲ್‌ಗಳಲ್ಲಿ ಅಡಗಿಸಿಟ್ಟು ಸಾಗಿಸುತ್ತಿದ್ದ 28 ಕೋಟಿ ಮೌಲ್ಯದ ಕೊಕೇನ್ ಪತ್ತೆಯಾಗಿದ್ದು, ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಇದನ್ನೂ ಓದಿ: ಬೆಂಗ್ಳೂರು ಡ್ರೋನ್ ಹಾರಿಸಿ ಉತ್ಸವಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

    ಇಬ್ಬರು ಮಹಿಳೆಯರು ಸುಮಾರು 2 ಕೆಜಿ ಕೊಕೇನ್ ಅನ್ನು ಮಾತ್ರೆಗಳಲ್ಲಿ ಅಡಗಿಸಿಟ್ಟು ನುಂಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಕಿಂಗ್‍ಪಿನ್ ಅರೆಸ್ಟ್

    ಒಬ್ಬ ಮಹಿಳೆ ನಿನ್ನೆ ಸಿಕ್ಕಿಬಿದ್ದಿದ್ದರು. ಈಕೆ ತನ್ನ ಹೊಟ್ಟೆಯೊಳಗೆ 81 ಮಾತ್ರೆಗಳನ್ನು ತುಂಬಿಕೊಂಡಿದ್ದರು. ಆಕೆಯನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಸುಮಾರು 891 ಗ್ರಾಂ ತೂಕದ ತೂಕದ ಕೊಕೇನ್ ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ 13.6 ಕೋಟಿಗಳಷ್ಟಿದೆ ಎಂದು ಹೇಳಿದ್ದಾರೆ.

    ಇದಕ್ಕೂ ಮುನ್ನ ಮೇ 22 ರಂದು ಬಂಧಿತ ಮಹಿಳೆಯ ಹೊಟ್ಟೆಯಲ್ಲಿ ಸುಮಾರು 80 ಕ್ಯಾಪ್ಸುಲ್‌ಗಳು ಬಚ್ಚಿಟ್ಟಿರುವುದು ಪತ್ತೆಯಾಗಿತ್ತು. ಆಕೆಯನ್ನು ಇದೇ ಆಸ್ಪತ್ರೆಗೆ ದಾಖಲಿಸಿ 0.957 ಕೆಜಿ ತೂಕದ ಕೊಕೇನ್ ಇರುವುದನ್ನು ಪತ್ತೆ ಹಚ್ಚಿ ಅದನ್ನು ವಶಪಡಿಸಿಕೊಳ್ಳಲಾಗಿತ್ತು. ಇದರ ಮೌಲ್ಯ 14 ಕೋಟಿಗಳಷ್ಟಿತ್ತು ಎಂದು ಅಂದಾಜಿಸಿದ್ದರು.

  • ಮಹಿಳೆಯನ್ನು ಗುದ್ದಿ ಕೊಂದ ಟಗರಿಗೆ 3 ವರ್ಷ ಜೈಲು ಶಿಕ್ಷೆ

    ಮಹಿಳೆಯನ್ನು ಗುದ್ದಿ ಕೊಂದ ಟಗರಿಗೆ 3 ವರ್ಷ ಜೈಲು ಶಿಕ್ಷೆ

    ದಕ್ಷಿಣ ಸುಡಾನ್ (ಆಫ್ರಿಕಾ): ವಿಲಕ್ಷಣ ಪ್ರಕರಣವೊಂದರಲ್ಲಿ, ದಕ್ಷಿಣ ಸುಡಾನ್‌ನಲ್ಲಿ ಟಗರೊಂದು ಮಹಿಳೆಯನ್ನು ಕೊಂದ ಆರೋಪ ಸಾಬೀತಾದ ನಂತರ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

    ದಕ್ಷಿಣ ಸುಡಾನ್‌ನಲ್ಲಿ 45 ವರ್ಷದ ಅಧಿಯು ಚಾಪಿಂಗ್ ಎಂಬವರ ಮೇಲೆ ಟಗರು ದಾಳಿ ನಡೆಸಿದೆ. ʼರಾಮ್‌ʼ ಹೆಸರಿನ ಟಗರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದರು. ಟಗರು, ಚಾಪಿಂಗ್‌ ಅವರಿಗೆ ಗುದ್ದಿ ಗಂಭೀರವಾಗಿ ಗಾಯಗೊಳಿಸಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಉತ್ತರ ಕೊರಿಯಾದಲ್ಲಿ ನಿಯಂತ್ರಣಕ್ಕೆ ಬಂದ ಕೊರೊನಾ

    ರುಂಬೆಕ್ ಪೂರ್ವದಲ್ಲಿನ ಅಕುಯೆಲ್ ಯೋಲ್ ಎಂಬ ಸ್ಥಳದಲ್ಲಿ ಈ ಘಟನೆ ನಡೆದಿದೆ. ಮಾಲೆಂಗ್ ಆಗೋಕ್ ಪಾಯಂನ ಪೊಲೀಸ್ ಠಾಣೆಯಲ್ಲಿ ಟಗರನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    court order law

    ಮಾಲೀಕ ನಿರಪರಾಧಿ. ಆದರೆ ಟಗರು ʼರಾಮ್‌ʼ ಅಪರಾಧವನ್ನು ಎಸಗಿದ ಕಾರಣ ಅದನ್ನು ಬಂಧಿಸಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಮುಂದಿನ ಮೂರು ವರ್ಷಗಳ ಕಾಲ ಸುಡಾನ್‌ನ ಲೇಕ್ಸ್ ಸ್ಟೇಟ್‌ನಲ್ಲಿರುವ ಅಡ್ಯುಯೆಲ್ ಕೌಂಟಿಯ ಪ್ರಧಾನ ಕಚೇರಿಯ ಮಿಲಿಟರಿ ಶಿಬಿರದಲ್ಲಿ ಟಗರು ಸೆರೆವಾಸ ಕಳೆಯಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಟಗರಿನ ಮಾಲೀಕ ಡುಯೋನಿ ಮಾನ್ಯಂಗ್ ಧಾಲ್, ಸಂತ್ರಸ್ತೆ ಕುಟುಂಬಕ್ಕೆ ತಮ್ಮ ಐದು ಹಸುಗಳನ್ನು ಪರಿಹಾರವಾಗಿ ನೀಡಬೇಕು ಎಂದು ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿದೆ. ಇದನ್ನೂ ಓದಿ: ಲುಲು ಗ್ರೂಪ್‍ನೊಂದಿಗೆ 2,000 ಕೋಟಿ ರೂ. ಹೂಡಿಕೆ ಒಪ್ಪಂದ – ಪ್ರತಿಷ್ಠಿತ ಕಂಪನಿಗಳೊಂದಿಗೆ ಬೊಮ್ಮಾಯಿ ಚರ್ಚೆ

    ಅಮೆರಿಕದಲ್ಲೂ ನಡೆದಿತ್ತು ದಾಳಿ
    ಕುರಿ, ಟಗರು ದಾಳಿಯಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ, ಅಮೆರಿಕಾದಲ್ಲಿ ಮಹಿಳೆಯೊಬ್ಬರು ಕೂಡ ಜಮೀನಿನಲ್ಲಿ ಕುರಿಗಳ ದಾಳಿಯಿಂದ ಸಾವನ್ನಪ್ಪಿದ್ದರು. 73 ವರ್ಷದ ಕಿಮ್ ಟೇಲರ್ ಮಸಾಚುಸೆಟ್ಸ್‌ನ ಬೋಲ್ಟನ್‌ನಲ್ಲಿರುವ ಕಲ್ಟಿವೇಟ್ ಕೇರ್ ಫಾರ್ಮ್‌ನಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾಗ, ಅವರು ಸಾಕುಪ್ರಾಣಿ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ವೇಳೆ ಹೃದಯ ಸ್ತಂಭನಕ್ಕೆ ಒಳಗಾಗಿ ಮೃತಪಟ್ಟಿದ್ದರು. ಇದನ್ನೂ ಓದಿ: ಆಸ್ಟ್ರೇಲಿಯಾ ನೂತನ ಪ್ರಧಾನಿಯಾಗಿ ಅಂಥೋನಿ ಎಲ್ಬನೀಸ್ ಅಧಿಕಾರಕ್ಕೆ

  • ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ – 2 ಹೆಣ್ಣು, 2 ಗಂಡು

    ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ – 2 ಹೆಣ್ಣು, 2 ಗಂಡು

    ಶಿವಮೊಗ್ಗ: ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಹಿಳೆಯೊಬ್ಬರು ಏಕಕಾಲದಲ್ಲಿ ಬರೋಬ್ಬರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ಜಿಲ್ಲೆಯ ಭದ್ರಾವತಿ ತಾಲೂಕಿನ ತಡಸಾ ಗ್ರಾಮದ ಆರೀಫ್ ಹಾಗೂ ಅಲ್ಮಾಜಾ ಬಾನು ದಂಪತಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ಅಲ್ಮಾಜಾ ಬಾನು ಎರಡು ಗಂಡು, ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದನ್ನೂ ಓದಿ: ಅನೈತಿಕ ಪ್ರೇಮದ ಮದ್ವೆಗೆ ಮಗು ಅಡ್ಡಿ- ಹೆತ್ತ ಮಗುವನ್ನೇ ಅನಾಥವೆಂದು ಬಿಂಬಿಸಲು ಕಥೆ ಹೆಣೆದಳು!

    ವೈದ್ಯಕೀಯ ಕ್ಷೇತ್ರದ ಪ್ರಕಾರ ಒಟ್ಟಿಗೆ 4 ಮಕ್ಕಳಿಗೆ ಜನ್ಮ ನೀಡುವ ಪ್ರಕರಣಗಳು ತುಂಬಾ ಅಪರೂಪ. 5.12 ಲಕ್ಷ ಜನರಲ್ಲಿ ಒಬ್ಬರು ಮಾತ್ರ ಈ ರೀತಿ 4 ಮಕ್ಕಳಿಗೆ ಜನ್ಮ ನೀಡುವುದು ಕಂಡು ಬರುತ್ತದೆ. 4 ಮಕ್ಕಳಾಗುವುದಕ್ಕೆ ಅನುವಂಶಿಯ ಅಂಶಗಳೇ ಕಾರಣ ಎಂದು ತಜ್ಞ ವೈದ್ಯರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯ ಡಾ.ಧನಂಜಯ ಸರ್ಜಿ ತಿಳಿಸಿದ್ದಾರೆ. ಇದನ್ನೂ ಓದಿ: ಪತ್ನಿಗೆ 90,000 ಮೌಲ್ಯದ ಉಡುಗೊರೆ ನೀಡಿದ ಭಿಕ್ಷುಕ

  • ತಲೆ ಮೇಲೆ ಮದ್ಯದ ಬಾಟಲಿ ಹಿಡಿದು ನಡುರಸ್ತೆಯಲ್ಲಿ ಆಂಟಿ ಡ್ಯಾನ್ಸ್..!

    ತಲೆ ಮೇಲೆ ಮದ್ಯದ ಬಾಟಲಿ ಹಿಡಿದು ನಡುರಸ್ತೆಯಲ್ಲಿ ಆಂಟಿ ಡ್ಯಾನ್ಸ್..!

    ಚಿಕ್ಕಮಗಳೂರು: ನಡು ರಸ್ತೆಯಲ್ಲಿ ತಲೆ ಮೇಲೆ ಮದ್ಯದ ಬಾಟಲಿ ಹೊತ್ತು ಮಹಿಳೆಯೊಬ್ಬಳು ಡ್ಯಾನ್ಸ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಒಮ್ಮೆ ಎಣ್ಣೆ ಒಳಗೆ ಸೇರಿದರೆ ಎಷ್ಟೋ ಮಂದಿ ಮೈ ಮರೆತು ಬಿಡುತ್ತಾರೆ. ಸಾಮಾನ್ಯವಾಗಿ ಗಂಡಸರು ಮದ್ಯ ಸೇವಿಸಿ ಎಲ್ಲೆಂದರಲ್ಲಿ ಬಿದ್ದು ಒದ್ದಾಡುವುದನ್ನು ಆಗಾಗ ರಸ್ತೆಗಳಲ್ಲಿ ನೋಡುತ್ತಲೇ ಇರುತ್ತೇವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪುರುಷರಿಗೇನೂ ಕಡಿಮೆ ಇಲ್ಲ ಎಂಬAತೆ ಮದ್ಯ ಸೇವಿಸಿ ರಂಪಾಟ ಮಾಡಿರುವ ಅನೇಕ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ನೋಡುತ್ತಲೇ ಇರುತ್ತೇವೆ. ಇದೀಗ ಕೊಂಚ ವಿಭಿನ್ನವೆಂಬಂತೆ ಚಿಕ್ಕಮಗಳೂರಿನ ಮೂಡಿಗೆರೆ ಪಟ್ಟಣದ ಮುಖ್ಯರಸ್ತೆಯಲ್ಲಿ ಮಹಿಳೆಯೊಬ್ಬಳು ಕುಡಿದ ಅಮಲಿನಲ್ಲಿ ಸಖತ್ ಸ್ಟೆಪ್ಸ್ ಹಾಕಿದ್ದಾಳೆ. ಇದನ್ನೂ ಓದಿ: 20 ವರ್ಷದ ಹುಡುಗಿ ಅಂತ 50ರ ಆಂಟಿ ತುಂಟಾಟ – ಚಾಟ್ ಮಾಡಿ ಮೋಸ ಹೋದ ಯುವಕ

    ಹೌದು, ನಡು ರಸ್ತೆಯಲ್ಲಿ ಸೀರೆಯುಟ್ಟ ಮಹಿಳೆ ತಲೆ ಮೇಲೆ ಬಿಯರ್ ಬಾಟಲಿ ಹೊತ್ತುಕೊಂಡು, ಕೈಗಳ ಸಹಾಯವಿಲ್ಲದೇ ಮಸ್ತ್ ಕುಣಿದು ಕುಪ್ಪಳಿಸಿದ್ದಾಳೆ. ದಾರಿಯಲ್ಲಿ ಹೋಗುತ್ತಿರುವವರೆಲ್ಲರೂ ಮಹಿಳೆಯನ್ನು ನೋಡುತ್ತಿದ್ದರೂ, ಮಹಿಳೆ ಕೊಂಚವೂ ಲೆಕ್ಕಿಸದೇ ಕುಡಿದ ಮತ್ತಿನಲ್ಲಿ ತನ್ನದೇ ಲೋಕದಲ್ಲಿ ಮುಳುಗಿ ನೃತ್ಯ ಮಾಡಿದ್ದಾಳೆ. ಇದನ್ನೂ ಓದಿ: ಇಂಟರ್‌ವ್ಯೂಗೆಂದು ಹೋದ ಯುವತಿ, ಟ್ಯಾಲಿಕ್ಲಾಸ್‌ಗೆ ಹೋಗ್ತೀನೆಂದಿದ್ದ ಯುವಕ – ಆತ್ಮಹತ್ಯೆಗೂ ಮುನ್ನ ನಡೆದಿದ್ದೇನು?

  • ಬಟ್ಟೆ ಧರಿಸಿದರೆ ಸೋಮಾರಿತನ ಬರುತ್ತೆ ಎಂದು 5 ವರ್ಷದಿಂದ ಬಟ್ಟೆನೇ ಧರಿಸಿಲ್ಲ ಈ ಮಹಿಳೆ

    ಬಟ್ಟೆ ಧರಿಸಿದರೆ ಸೋಮಾರಿತನ ಬರುತ್ತೆ ಎಂದು 5 ವರ್ಷದಿಂದ ಬಟ್ಟೆನೇ ಧರಿಸಿಲ್ಲ ಈ ಮಹಿಳೆ

    ಬರ್ನಿನ್: ಇತ್ತೀಚೆಗೆ ಮಹಿಳೆಯೊಬ್ಬರಿಗೆ ನೀರು ಎಂದರೆ ಅಲರ್ಜಿ ಇತ್ತು. ಈಗ ಇಲ್ಲೊಬ್ಬ ಮಹಿಳೆಗೆ ಬಟ್ಟೆ ಎಂದರೇ ಅಲರ್ಜಿ. ಮಹಿಳೆಯೊಬ್ಬಳಿಗೆ ಬಟ್ಟೆ ಎಂದರೆ ಆಗುವುದಿಲ್ಲ ಎಂದು ಆಕೆಯೇ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಇದು ಭಾರೀ ಸುದ್ದಿಯಾಗಿದೆ.

    ಜರ್ಮನಿ ನಿವಾಸಿ ಕೆರ್ಸ್ಟಿನ್ ಅವರಿಗೆ ಬಟ್ಟೆ ಎಂದರೆ ಆಗುವುದಿಲ್ಲ. ಇವರಿಗೆ ಬಟ್ಟೆ ಹಾಕಿಕೊಂಡರೆ ಸೋಮಾರಿತನ ಬರುತ್ತೆ ಎಂದು ಕಳೆದ 5 ವರ್ಷಗಳಿಂದ ಬಟ್ಟೆಯನ್ನು ಹಾಕಿಕೊಂಡಿಲ್ಲ. ಬಟ್ಟೆ ಬದಲಿಗೆ ಕೆರ್ಸ್ಟಿನ್ ತಮ್ಮ ಮೈ ಮುಚ್ಚಿಕೊಳ್ಳಲು ಟ್ಯಾಟೂ ಹಾಕಿಸಿಕೊಂಡಿರುವುದು ವಿಶೇಷವಾಗಿದೆ. ಇದನ್ನೂ ಓದಿ: ಪಾಪದ ಕೊಡ ನಮ್ಮದಾ ನಿಮ್ಮದಾ?: ಅಶೋಕ್‍ಗೆ ತಿರುಗೇಟು ಕೊಟ್ಟ ಸಿದ್ದು 

    ಈ ಫೋಟೋಗಳನ್ನು ಕೆರ್ಸ್ಟಿನ್ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೆರ್ಸ್ಟಿನ್ ಟ್ಯಾಟೂಗಾಗಿ 25,000 ಡಾಲರ್(ರೂ.24 ಲಕ್ಷಕ್ಕೂ ಹೆಚ್ಚು) ಖರ್ಚು ಮಾಡಿದ್ದಾಳೆ ಎಂದು ಆಕೆಯೇ ನೆಟ್ಟಿಗರಿಗೆ ತಿಳಿಸಿದ್ದಾರೆ.

    1992, 2014 ಮತ್ತು 2022 ರಲ್ಲಿ ಕೆರ್ಸ್ಟಿನ್ ಟ್ರಿಸ್ಟಾನ್ ಹೇಗಿದ್ದರು ಎಂಬುದನ್ನು ತೋರಿಸಲು ಆಕೆ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಫುಲ್ ವೈರಲ್ ಆಗಿದೆ. ಕೆರ್ಸ್ಟಿನ್ ಭಿನ್ನ ಫೋಟೋಗಳು ನೆಟ್ಟಿಗರನ್ನು ಆಕರ್ಪಿಸುವ ಕೇಂದ್ರವಾಗುತ್ತಿದೆ. ಪ್ರಸ್ತುತ ಕೆರ್ಸ್ಟಿನ್ ಅವರಿಗೆ 50 ವರ್ಷವಾಗಿದ್ದು, ಇನ್‍ಸ್ಟಾದಲ್ಲಿ ಸುಮಾರು ಎರಡು ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಇದನ್ನೂ ಓದಿ: ಬೆಣ್ಣೆ ಹಳ್ಳದಲ್ಲಿ ಪ್ರವಾಹ – ನಾಲ್ವರು ಕಾರ್ಮಿಕರನ್ನ ರಕ್ಷಿಸಿದ ಅಗ್ನಿಶಾಮಕ ದಳ 

  • ಚುಮು ಚುಮು ಚಳಿಯಲ್ಲೂ ಬೆಚ್ಚನೆಯ ಅನುಭವ ನೀಡುವ ಬಗೆಬಗೆಯ ಸ್ವೆಟರ್

    ಚುಮು ಚುಮು ಚಳಿಯಲ್ಲೂ ಬೆಚ್ಚನೆಯ ಅನುಭವ ನೀಡುವ ಬಗೆಬಗೆಯ ಸ್ವೆಟರ್

    ತಂಪಾದ ವಾತಾವರಣ, ಬೆಳ್ಳಂ ಬೆಳಗ್ಗೆ ಹಲವೆಡೆ ಮಂಜು ಮುಸುಕಿದ ವಾತಾವರಣ ಸಿಟಿಗೆ ಆವರಿಸುತ್ತಿದೆ. ಚುಮು – ಚುಮು ಚಳಿ ಮೈ ಕೊರೆಯುತ್ತಿದೆ. ತಣ್ಣನೆಯ ತಂಗಾಳಿ ಮಧ್ಯೆ ಸೂರ್ಯನ ರಶ್ಮಿ ತಾಕುತಿದ್ರೆ ಸ್ವರ್ಗವೂ ಅದೇ ಆಗಿದೆ. ಬೇಸಿಗೆ ಮುಗಿಯುವ ಮುನ್ನವೇ ಹಲವು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಶುರುವಾಗಿದ್ದು, ಜನರು ಈಗಾಗಲೇ ಮಳೆಗಾಲದ ಲೈಫ್‌ಸ್ಟೈಲ್‌ಗೆ ಸಿದ್ಧರಾಗಿದ್ದಾರೆ.

    ಸಿಲಿಕಾನ್ ಸಿಟಿಯಲ್ಲಿ ಮಳೆಯೊಂದಿಗೆ ಚಳಿಯ ವಾತಾವರಣವೂ ಹೆಚ್ಚಿರುವ ಕಾರಣ. ಯುವಕ, ಯುವತಿಯರು ಸ್ಟೈಲ್‌ ಸ್ವೆಟರ್‌ ಖರೀದಿಯಲ್ಲಿ ಮಗ್ನರಾಗಿದ್ದಾರೆ. ಪ್ರಮುಖ ಕಂಪೆನಿಗಳು ಸಹ ಗ್ರಾಹಕರ ಅಭಿರುಚಿಗೆ ತಕ್ಕಂತೆ ತರಹೇವಾರಿ ಸ್ವೆಟರ್‌ಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿವೆ. ಇದನ್ನೂ ಓದಿ: ಮಾರುಕಟ್ಟೆಗೆ ಬಂದಿದೆ 6 ಸಾವಿರ ರೂಪಾಯಿಯ ಝರಾ ಲುಂಗಿ!

    OPEN STYLE

    ಪುಲ್ಲೋವರ್ ಸ್ವೆಟರ್: ಪುಲ್ಲೋವರ್ ಮಾದರಿಯಲ್ಲೇ ಕ್ರೂನೆಕ್ಸ್ ನೂಲಿನಿಂದ ಹೆಣೆಯಲಾದ ಈ ಸ್ವೆಟರ್ ವಿಶಿಷ್ಟ ಮತ್ತು ಆರಾಮಯದಾಯಕವಾಗಿದೆ. ಶರ್ಟ್‌ಗಳು, ಟಾಪ್‌ಗಳು ಮತ್ತು ಬ್ಲೌಸ್‌ಗಳ ಮೇಲೆಯೂ ಧರಿಸಬಹುದು. ಚಳಿಯ ನಡುವೆ ಇದು ಬೆಚ್ಚನೆಯ ಅನುಭವ ನೀಡುತ್ತದೆ. ಇದನ್ನೂ ಓದಿ: ಫ್ರೆಶ್ ಲುಕ್ ನೀಡುವ ವೆಡ್ಡಿಂಗ್ ಸೂಟ್ಸ್‌ – ಏನಿದೆ ವಿಶೇಷ?

    ಓಪನ್ ಸ್ಟೈಲ್‌ ಸ್ವೆಟರ್: ತೆರೆದ ಭಾಗದ ಈ ಸ್ವೆಟರ್ ಚಳಿಯಿಂದ ರಕ್ಷಿಸುವುದು ಮಾತ್ರವಲ್ಲದೆ, ಟೀ ಶರ್ಟ್‌ಗಳ ಮೇಲೆ ಧರಿಸಿದ್ರೆ ಫ್ರೆಶ್‌ಲುಕ್ ನೀಡುತ್ತದೆ. ಹೆಚ್ಚಿನ ಯುವಕ – ಯುವತಿಯರು ಇದೇ ಟ್ರೆಂಡ್ ಅನ್ನು ಬಸುತ್ತಾರೆ. ಕೆಲವರು ಇನ್ನಷ್ಟು ಸುಲಭ ಮಾಡಿಕೊಳ್ಳಲು ಸ್ವೆಟ್‌ ಟೀ ಶರ್ಟ್‌ಗಳನ್ನೇ ಧರಿಸುತ್ತಾರೆ.

    V NECK

    ಕ್ರೀವ್ ನೆಕ್ ಸ್ವೆಟರ್: ಇದು ಚಳಿಗಾಲದಲ್ಲಿ ಸಾಧಾರಣವಾಗಿ ಸಿಗುವ ಸ್ವೆಟರ್‌ಗಳು. ಪುಲ್ಲೋವರ್ ಶೈಲಿಯನ್ನೇ ಹೋಲುತ್ತವೆ. ಮಹಿಳೆಯರು, ಪುರುಷರು ಸಹ ಇದನ್ನು ಧರಿಸಬಹುದು. ಇದನ್ನೂ ಓದಿ: ಫ್ಯಾಷನ್‍ನಲ್ಲೂ ರಾಷ್ಟ್ರಪ್ರೇಮ ಅಭಿವ್ಯಕ್ತ

    ULLAN

    ವಿ-ನೆಕ್ ಸ್ವೆಟರ್: ಹೆಸರೇ ಸೂಚಿಸುವಂತೆ ಇದು ಕುತ್ತಿಗೆ ಭಾಗದಲ್ಲಿ ವಿ-ಶೈಲಿಯಲ್ಲಿ ಇರುತ್ತದೆ. ಇವು ತುಂಬು ತೋಳು ಹಾಗೂ ಅರ್ಧ ತೋಳಿನ ಶೈಲಿಯಲ್ಲೂ ಲಭ್ಯವಿರುತ್ತವೆ. ಸಾಧಾರಣಾ ಶರ್ಟ್‌ಗಳ ಮೇಲೂ ಧರಿಸಬಹುದಾಗಿದ್ದು, ಕಚೇರಿ ಕೆಲಸಗಳಿಗೆ ತರಳುವವರು ಈ ಮಾದರಿಯ ಸ್ವೆಟರ್ ಅನ್ನು ಹೆಚ್ಚಾಗಿ ಬಳಸುತ್ತಾರೆ.

    CREW NECK

    ಉಲ್ಲನ್ ಸ್ವೆಟರ್: ರೇಷ್ಮೆ ಹಾಗೂ ಹತ್ತಿ ಮಿಶ್ರಿತದಿಂದ ತಯಾರಿಸಲಾದ ಈ ಸ್ಟೆಟರ್‌ ಹೆಚ್ಚು ಚಳಿಯನ್ನು ನಿಯಂತ್ರಿಸುತ್ತದೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ಮಕ್ಕಳು ಹಾಗೂ ಮಹಿಳೆಯರು ಹೆಚ್ಚಾಗಿ ಈ ಮಾದರಿಯ ಸ್ವೆಟರ್ ಅನ್ನು ಬಳಸುತ್ತಾರೆ.

  • ಹೊರಗುತ್ತಿಗೆ ನೇಮಕಾತಿಯಲ್ಲಿ ಇನ್ಮುಂದೆ 33% ಮಹಿಳೆಯರಿಗೆ ಮೀಸಲು

    ಹೊರಗುತ್ತಿಗೆ ನೇಮಕಾತಿಯಲ್ಲಿ ಇನ್ಮುಂದೆ 33% ಮಹಿಳೆಯರಿಗೆ ಮೀಸಲು

    ಬೆಂಗಳೂರು: ಹೊರಗುತ್ತಿಗೆ ನೇಮಕಾತಿಯಲ್ಲಿ ಇನ್ನು ಮುಂದೆ 33% ಮಹಿಳೆಯರಿಗೆ ಮೀಸಲು ನೀಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

    ರಾಜ್ಯ ಸರ್ಕಾರದ ಕಚೇರಿಗಳಲ್ಲಿ ಹೊರಗುತ್ತಿಗೆ ನೇಮಕಾತಿಯಲ್ಲಿ ಕಡ್ಡಾಯವಾಗಿ 33% ಮಹಿಳಾ ಅಭ್ಯರ್ಥಿಗಳನ್ನ ಭರ್ತಿ ಮಾಡಿಕೊಳ್ಳಬೇಕು ಎಂದು ತಿಳಿಸಿದೆ. ಇದನ್ನೂ ಓದಿ: ಅತೀ ಹಿಂದುಳಿದ ವರ್ಗಗಳ ಪ್ರತಿನಿಧಿಗಳಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್‍ಗೆ ಒತ್ತಾಯ

    ಸರ್ಕಾರದ ಸ್ವಾಯತ್ತತೆ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸ್ಥಳೀಯ ಸಂಸ್ಥೆಗಳು, ಸರ್ಕಾರಿ ವಲಯದ ಅಂಗ ಸಂಸ್ಥೆಗಳು ಸೇರಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಈ ನಿಯಮ ಅನ್ವಯವಾಗಲಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಆದೇಶ ಹೊರಡಿಸಿದೆ.

  • ದೂರದರ್ಶನ ನಿರೂಪಕಿಯರೇ, ಮುಖ ಮುಚ್ಚಿ ನಿರೂಪಣೆ ಮಾಡಿ: ತಾಲಿಬಾನ್

    ದೂರದರ್ಶನ ನಿರೂಪಕಿಯರೇ, ಮುಖ ಮುಚ್ಚಿ ನಿರೂಪಣೆ ಮಾಡಿ: ತಾಲಿಬಾನ್

    ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ದಿನೇ ದಿನೇ ಮಹಿಳೆಯರ ಸ್ವತಂತ್ರ್ಯವನ್ನು ಕಸಿದುಕೊಳ್ಳುತ್ತಲೇ ಇದೆ. ಚಾಲನಾ ಪರವಾನಗಿ ಕಸಿದುಕೊಂಡಾಯ್ತು, ಪುರುಷರೊಂದಿಗೆ ಉದ್ಯಾನವನ, ಉಪಹಾರಗೃಹಕ್ಕೆ ಹೋಗುವುದನ್ನೂ ನಿಷೇಧಿಸಿತು. ಇದೀಗ ದೂರದರ್ಶನಗಳಲ್ಲಿ ಕೆಲಸ ಮಾಡುವ ನಿರೂಪಕಿಯರಿಗೂ ತಮ್ಮ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳುವಂತೆ ಆದೇಶಿಸಿದೆ.

    ದೂರದರ್ಶನ, ಸುದ್ದಿ ವಾಹಿನಿಗಳಲ್ಲಿ ಮಹಿಳಾ ನಿರೂಪಕಿಯರು ಸುದ್ದಿ ಪ್ರಸಾರ ಮಾಡುವ ಸಂದರ್ಭ ತಮ್ಮ ಮುಖವನ್ನು ಮುಚ್ಚಿಕೊಳ್ಳುವಂತೆ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ದೂರದರ್ಶನ ಅಧಿಕಾರಿಗಳನ್ನು ಕೇಳಿದ್ದಾರೆ ಎಂದು ಗುರುವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಸೆಕ್ಸ್‌ನಿಂದಲೂ ಹರಡಬಹುದು ಮಂಕಿಪಾಕ್ಸ್- ತಜ್ಞರಿಂದ ಎಚ್ಚರಿಕೆ

    ಕೆಲವು ದಿನಗಳ ಹಿಂದೆ ತಾಲಿಬಾನ್ ಅಫ್ಘಾನಿಸ್ತಾನದ ಎಲ್ಲಾ ಮಹಿಳೆಯರೂ ಅಡಿಯಿಂದ ಮುಡಿ ವರೆಗೆ ತಮ್ಮ ದೇಹವನ್ನು ಮುಚ್ಚಿಕೊಳ್ಳಬೇಕಾಗಿ ಆದೇಶ ನೀಡಿತ್ತು. ಇದೀಗ ಸುದ್ದಿ ನಿರೂಪಕಿಯರಿಗೂ ಮುಖ ಮುಚ್ಚಿಕೊಳ್ಳುವಂತೆ ಹೇಳಿದ್ದು, ಮೇ 21ರ ಒಳಗಾಗಿ ಎಲ್ಲಾ ನಿರೂಪಕಿಯರೂ ಈ ನಿಯಮವನ್ನು ಪಾಲಿಸಬೇಕಾಗಿ ಗಡುವು ನೀಡಿದೆ. ಇದನ್ನೂ ಓದಿ: ರಾಜ್ಯದಲ್ಲಿ 124 ಮಂದಿಗೆ ಕೊರೊನಾ -159 ಮಂದಿ ಡಿಸ್ಚಾರ್ಜ್

    ತಾಲಿಬಾನ್ ಮತ್ತೆ ಈ ಹಿಂದೆ ವಿಧಿಸುತ್ತಿದ್ದ ಕಠಿಣ ಕ್ರಮಗಳನ್ನು ಮುಂದುವರಿಸಲಾರಂಭಿಸಿದೆ. ತಾಲಿಬಾನ್‌ನ ಈ ಕಠಿಣ ನಿಯಮಗಳಿಂದ ಅಫ್ಘಾನಿಸ್ತಾನ ಮಾತ್ರವಲ್ಲದೇ ವಿದೇಶಗಳಲ್ಲೂ ಜನರು ಕೆಂಗಣ್ಣು ತೋರಿದ್ದಾರೆ. ಮುಖ್ಯವಾಗಿ ಮಹಿಳೆಯರ ಸ್ವತಂತ್ರ್ಯವನ್ನು ಕಿವುಚಿ ಹಾಕುತ್ತಿರುವ ತಾಲಿಬಾನ್ ಬಗ್ಗೆ ಎಲ್ಲೆಲ್ಲೂ ಟೀಕೆಗಳು ಗ್ರಾಸವಾಗುತ್ತಿವೆ.