Tag: women

  • ಚಿಟ್ ಫಂಡ್ ಮಾಡಿ ಜನರಿಗೆ ಚೀಟಿಂಗ್ ಮಾಡಿದ್ದ ಲೇಡಿ ಅರೆಸ್ಟ್

    ಚಿಟ್ ಫಂಡ್ ಮಾಡಿ ಜನರಿಗೆ ಚೀಟಿಂಗ್ ಮಾಡಿದ್ದ ಲೇಡಿ ಅರೆಸ್ಟ್

    ಬೆಂಗಳೂರು: ಚಿಟ್ ಫಂಡ್ ಮಾಡಿ ಜನರನ್ನು ವಂಚನೆ ಮಾಡುತ್ತಿದ್ದ ಮಹಿಳೆಯನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.

    ಲಕ್ಷ್ಮೀವಾಣಿ ಬಂಧಿತ ವಂಚಕಿ. ವಾರಿಧಿ ಚಿಟ್ ಫಂಡ್ ಮಾಡುತ್ತಿದ್ದ ಲಕ್ಷ್ಮೀವಾಣಿ ಜನರನ್ನು ವಂಚಿಸಿ ಹಣ ಸಂಗ್ರಹಣೆ ಮಾಡುತ್ತಿದ್ದಳು. ಈ ಹಿನ್ನೆಲೆ ಸಾರ್ವಜನಿಕರು ದೂರು ನೀಡಿದ್ದು, ಅದರ ಆಧಾರದ ಮೇಲೆ ಪೊಲೀಸರು ಲಕ್ಷ್ಮೀವಾಣಿಯನ್ನು ಬಂಧಿಸಿದ್ದಾರೆ.

    POLICE JEEP

    ಏನಿದು ಪ್ರಕರಣ?
    ಲಕ್ಷ್ಮೀವಾಣಿ ಮೊದಲು ಲಗ್ಗೆರೆಯಲ್ಲಿ ವಾರಿಧಿ ಚಿಟ್ ಫಂಡ್ ಪ್ರೈ.ಲಿ. ಪ್ರಾರಂಭಿಸಿದ್ದು, ನಂತರ ರಾಜಾಜಿನಗರದಲ್ಲಿ ಮತ್ತೊಂದು ಬ್ರಾಂಚ್ ಓಪನ್ ಮಾಡಿದ್ದಳು. ಈಕೆ ತನ್ನ ಗಂಡನನ್ನೆ ಮ್ಯಾನೆಜಿಂಗ್ ಡೈರೆಕ್ಟರ್ ಮಾಡಿಕೊಂಡು ಚಿಟ್ ಫಂಡ್ ಕಂಪನಿ ಓಪನ್ ಮಾಡಿದ್ದಳು. ಅಲ್ಲದೇ ಈ ಕಂಪನಿಗೆ ಉದ್ಯೋಗಿಗಳನ್ನ ನೇಮಕ ಮಾಡಿಕೊಂಡಿದ್ದಳು. ಇದನ್ನೂ ಓದಿ: ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ: ಆರೋಪಿ ಮೇಲೆ ಫೈರಿಂಗ್

    ಚಿಟ್ ಫಂಡ್ ಉದ್ಯೋಗಿಗಳನ್ನು ಡೈರೆಕ್ಟರ್ ಎಂದು ಬಂದ ಜನರಿಗೆ ಪರಿಚಯ ಮಾಡಿಸ್ತಿದ್ಳು. ಅದನ್ನು ನಂಬುತ್ತಿದ್ದ ವೃದ್ಧರು ತಮ್ಮ ಜೀವನದ ಪೆನ್ಷನ್ ಹಣವನ್ನು ಲಕ್ಷ್ಮೀವಾಣಿ ಚಿಟ್ ಫಂಡ್‍ಗೆ ಹಾಕುತ್ತಿದ್ದರು. ಆದರೆ ಈಕೆ ಜನರನ್ನು ವಂಚಿಸಿ ಹಣವನ್ನು ತೆಗೆದುಕೊಂಡು ಮೋಸ ಮಾಡುತ್ತಿದ್ದಳು.

    ಈ ಹಿನ್ನೆಲೆ ಲಕ್ಷ್ಮೀವಾಣಿ ವಿರುದ್ಧ ಸಾರ್ವಜನಿಕರು ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಸ್ತುತ ಆರೋಪಿ ಲಕ್ಷ್ಮೀವಾಣಿಯನ್ನು ಪೊಲೀಸರು ಬಂಧಿಸಿದ್ದಾರೆ.

    Live Tv

  • ಅಶ್ಲೀಲ ಚಿತ್ರ ವೀಕ್ಷಿಸುವ ಕೆಲಸಕ್ಕೆ 22ರ ಯುವತಿ ನೇಮಕ – ಗಂಟೆಗೆ 1,500 ರೂ. ವೇತನ

    ಅಶ್ಲೀಲ ಚಿತ್ರ ವೀಕ್ಷಿಸುವ ಕೆಲಸಕ್ಕೆ 22ರ ಯುವತಿ ನೇಮಕ – ಗಂಟೆಗೆ 1,500 ರೂ. ವೇತನ

    ಸ್ಕಾಟ್‌ಲ್ಯಾಂಡ್: ಸ್ಕಾಟ್‌ಲ್ಯಾಂಡ್‌ನ 22 ವರ್ಷದ ಮಹಿಳೆಯನ್ನು ವೆಬ್‌ಸೈಟ್ ಕಂಪನಿಯೊಂದು ಅಶ್ಲೀಲ ಚಿತ್ರ ವೀಕ್ಷಿಸಲು ನೇಮಿಸಿಕೊಂಡಿದೆ.

    ಗಂಟೆಗೆ 1,500 ರೂ. ವೇತನ ನೀಡುವ ಮೂಲಕ ಗ್ರೀನಾಕ್‌ನಿಂದ ಬಂದಿರುವ ರೆಬೆಕಾ ಡಿಕ್ಸನ್ ಎನ್ನುವ ಯುವತಿಯನ್ನು ನೇಮಕ ಮಾಡಿಕೊಂಡಿದೆ. ಸಂಸ್ಥೆಯು ಅಶ್ಲೀಲ ಉದ್ಯಮದ ಬಗ್ಗೆ ಸಂಶೋಧನೆ ನಡೆಸಲು ಈಕೆಯನ್ನು ನೇಮಿಸಿಕೊಂಡಿದೆ. 90 ಸಾವಿರ ಅರ್ಜಿದಾರರು ಪೂರೈಕೆ ಸಂಸ್ಥೆ ರೆಬೆಕಾರನ್ನು ಆಯ್ಕೆ ಮಾಡಿದೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಪಾಕಿಸ್ತಾನಿ ಎಲ್‍ಇಟಿ ಉಗ್ರ ಎನ್‍ಕೌಂಟರ್ – ಮೂವರು ಅರೆಸ್ಟ್

    ಈ ಕೆಲಸವು ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ಲೈಂಗಿಕ ಸ್ಥಾನಗಳು, ಅವಧಿ, ಪರಾಕಾಷ್ಠೆಗಳ ಸಂಖ್ಯೆ, ಪುರುಷ – ಸ್ತ್ರೀಯರ ಅನುಪಾತ ಮತ್ತು ಭಾಷೆಯ ವಿತರಣೆಯಂತಹ ಕೇಂದ್ರೀಕೃತ ಕ್ಷೇತ್ರಗಳ ಕುರಿತು ಡೇಟಾವನ್ನು ಸಂಗ್ರಹಿಸುವುದಾಗಿದೆ. ಇದನ್ನೂ ಓದಿ: ಅಸ್ಸಾಂ, ಮೇಘಾಲಯ ಪ್ರವಾಹ: ಸಾವಿನಸಂಖ್ಯೆ 46ಕ್ಕೆ ಏರಿಕೆ – 4,000 ಹಳ್ಳಿಗಳಿಗೆ ಹಾನಿ

    ಈ ಕುರಿತು ಮಾತನಾಡಿರುವ ಯುವತಿ, ನನ್ನನ್ನು ಈ ಕೆಲಸಕ್ಕೆ ನೇಮಿಸಿಕೊಂಡದ್ದು ನನಗೇ ಶಾಕ್ ಆಗಿದೆ. ಅಲ್ಲದೆ ಈ ಕೆಲಸ ನನಗೆ ಉತ್ತಮ ಅವಕಾಶ ನೀಡಿದೆ. ನಾನು ಇದನ್ನು ಒಂದು ಪ್ರಾಜೆಕ್ಟ್ ಆಗಿಯೇ ಪರಿಗಣಿಸುತ್ತೇನೆ ಎಂದು ಹೇಳಿದ್ದರೆ.

    Live Tv

  • ಕಲರ್‌ಫುಲ್ ಸೀರೆಗೆ ಮ್ಯಾಚಿಂಗ್ ಮಿಂಚಿಂಗ್ – ಬೊಂಬಾಟ್ ಬ್ಲೌಸ್‍ಗಳ ಸ್ಲೀವ್ಸ್ ಡಿಸೈನ್

    ಕಲರ್‌ಫುಲ್ ಸೀರೆಗೆ ಮ್ಯಾಚಿಂಗ್ ಮಿಂಚಿಂಗ್ – ಬೊಂಬಾಟ್ ಬ್ಲೌಸ್‍ಗಳ ಸ್ಲೀವ್ಸ್ ಡಿಸೈನ್

    ಸೀರೆಯಷ್ಟೇ ಬ್ಲೌಸ್ ಕೂಡ ಬಹಳ ಮುಖ್ಯ. ಮಹಿಳೆಯರು ಸೀರೆಗೆ ನೀಡುವಷ್ಟೇ ಪ್ರಾಮುಖ್ಯತೆ ಬ್ಲೌಸ್‍ಗೂ ಕೂಡ ನೀಡುತ್ತಾರೆ. ಸೀರೆಯ ಅಂದವನ್ನು ಹೆಚ್ಚಿಸುವುದೇ ಬ್ಲೌಸ್. ಇಂತಹ ಬ್ಲೌಸ್‍ಗಳಲ್ಲಿ ಸಾವಿರಾರು ವೆರೈಟಿ ಡಿಸೈನ್‍ಗಳಿಗೆ. ಹಾಗಾಗಿ ಬ್ಲೌಸ್ ಡಿಸೈನ್ ಆಯ್ಕೆ ಮಾಡುವ ವೇಳೆ ಬಹಳ ಜಾಗೃತರಾಗಿರಬೇಕು. ಅದರಲ್ಲಿಯೂ ಬ್ಲೌಸ್ ಸ್ಲೀವ್ಸ್ ಸ್ಲೀವ್‍ಲೆಸ್ ಡಿಸೈನ್ ನೋಡುವವರನ್ನೂ ಬೆರಗಾಗಿಸುವಂತೆ ಮಾಡುತ್ತದೆ. ಒಂದು ಬ್ಲೌಸ್‍ಗೆ ಕಂಪ್ಲೀಟ್ ಲುಕ್ ನೀಡುವುದೇ ಸ್ಲೀವ್ಸ್. ಆದರೆ ಯಾವ ಸೀರೆಗೆ ಯಾವ ರೀತಿಯ ಸ್ಲೀವ್ಸ್ ಸ್ಯೂಟ್ ಆಗುತ್ತದೆ ಎಂಬುವುದರ ಬಗ್ಗೆ ನಿಮಗೆ ತಿಳಿಯದಿದ್ದರೆ, ಈ ಕುರಿತ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ ಓದಿ.

    ಸಿಂಪಲ್ ಬ್ಲೌಸ್ ಸ್ಲೀವ್ಸ್ ಡಿಸೈನ್
    ಕೇವಲ ಲೆಹೆಂಗಾಗಳಿಗೆ ಮಾತ್ರ ಸಿಂಪಲ್ ಸ್ಲೀವ್ಸ್ ಬ್ಲೌಸ್ ಸ್ಯೂಟ್ ಆಗುತ್ತದೆ ಎಂದು ಎಷ್ಟೋ ಮಂದಿ ಹೇಳುತ್ತಾರೆ. ಆದರೆ ಲೆಹೆಂಗಾಗೇ ನೀಡುವಷ್ಟೇ ಲುಕ್ ಸೀರೆಗೂ ಕೂಡ ಸಿಂಪಲ್ ಬ್ಲೌಸ್ ನೀಡುತ್ತದೆ. ಈ ಮೇಲಿನ ಫೋಟೋದಲ್ಲಿ ಸೀರೆಗೆ ಸರಿಹೊಂದುವಂತೆ ಬ್ಲೌಸ್‍ ಅನ್ನು ಸಿಂಪಲ್ ಆಗಿ ಹೋಲಿಸಿದ್ದರೂ, ಎಷ್ಟು ಸುಂದರವಾಗಿ ಕಾಣಿಸುತ್ತದೆ ಎಂದು ನೋಡಬಹುದು.

    ಪಫ್ ಬ್ಲೌಸ್ ಸ್ಲೀವ್ಸ್ ಡಿಸೈನ್
    ಹೊಸ ಟ್ರೆಂಡ್‍ಗಳಲ್ಲಿ ಪಫ್ ಸ್ಲೀವ್ಸ್ ಬ್ಲೌಸ್ ಕೂಡ ಒಂದು. ಇದು ನಿಮಗೆ ಸ್ಟೈಲಿಶ್ ಲುಕ್ ನೀಡುತ್ತದೆ. ಈ ರೀತಿಯ ಬ್ಲೌಸ್‍ಗಳು ಔಪಚಾರಿಕ ಹಾಗೂ ಮಿನಿ ಪಾರ್ಟಿಗಳಿಗೆ ಹೆಚ್ಚಾಗಿ ಸ್ಯೂಟ್ ಆಗುತ್ತದೆ. ಈ ಬ್ಲೌಸ್ ತೋಳು ಕೊಂಚ ಫ್ರೀ ಆಗಿರುವುದರಿಂದ ರಕ್ತಪರಿಚಲನೆ ಸರಾಗವಾಗಿ ನಡೆಯಲು ಸಹಾಯಕವಾಗುತ್ತದೆ. ನೀವು ಅದ್ಭುತವಾಗಿ ಕಾಣಲು ಇಚ್ಛಿಸಿದರೆ ಈ ಸ್ಲೀವ್ಸ್ ಡಿಸೈನರ್ ಬ್ಲೌಸ್ ಧರಿಸಿ.

    3/4 ಬ್ಲೌಸ್ ಸ್ಲೀವ್ಸ್ ಡಿಸೈನ್
    ಫೇಮಸ್ ಮತ್ತು ಸ್ಟೈಲಿಶ್ ಲುಕ್ ನೀಡುವ 3/4 ಬ್ಲೌಸ್ ಅಂದರೆ ಮಹಿಳೆಯರಿಗೆ ಬಹಳ ಅಚ್ಚುಮೆಚ್ಚು. ಈ ರೀತಿ ಬ್ಲೌಸ್‍ಗಳು ಫಾರ್ಮಲ್ ಹಾಗೂ ಇನ್‍ಫಾರ್ಮಲ್ ಆಗಿ ಕೂಡ ಇರುತ್ತದೆ. ಈ ಬ್ಲೌಸ್‍ಗಳು ಹಬ್ಬ, ಮದುವೆ ಹೀಗೆ ಹಲವಾರು ಕಾರ್ಯಕ್ರಮಗಳಿಗೆ ಹೇಳಿ ಮಾಡಿಸಿದಂತಹ ಲುಕ್ ನೀಡುತ್ತದೆ. ಬಂಗಾರದ ಬಳೆ ಜೊತೆಗೆ ಈ ಬ್ಲೌಸ್ ನಿಮ್ಮನ್ನು ಮತ್ತಷ್ಟು ಸುಂದರಗೊಳಿಸುತ್ತದೆ.

    ನೆಟ್ ಬ್ಲೌಸ್ ಸೀವ್ಸ್ ಡಿಸೈನ್
    ನೆಟ್ ಬ್ಲೌಸ್ ಸ್ಲೀವ್ಸ್ ಡಿಸೈನ್ ಹೆಚ್ಚಾಗಿ ಯಂಗ್ ಹುಡುಗಿಯರಿಗೆ ಬಹು ಬೇಗ ಇಷ್ಟವಾಗುತ್ತದೆ. ಸದ್ಯದ ಫ್ಯಾಶನ್‍ಗಳಲ್ಲಿ ಈ ಡಿಸೈನ್‍ನನ್ನು ಹೆಚ್ಚಾಗಿ ಮಹಿಳೆಯರು ಆಯ್ಕೆ ಮಾಡುತ್ತಿದ್ದಾರೆ. ಅದರಲ್ಲಿಯೂ ಚಿಫೋನ್ ಸೀರೆಗೆ ನೆಟ್ ಸ್ಲೀವ್ಸ್ ಡಿಸೈನ್ ಬಹು ಬೇಗ ಸ್ಯೂಟ್ ಆಗುತ್ತದೆ.

    Live Tv

  • ವರ್ಕ್ ಔಟ್ ಆಯ್ತು ಮೋದಿಯ ಮನ್ ಕೀ ಬಾತ್ ಐಡಿಯಾ – ಎಂ.ಟೆಕ್ ಪದವೀಧರೆಯ ಬಾಳು ಬೆಳಗುತ್ತಿದೆ ಬಾಳೆ ದಿಂಡು

    ವರ್ಕ್ ಔಟ್ ಆಯ್ತು ಮೋದಿಯ ಮನ್ ಕೀ ಬಾತ್ ಐಡಿಯಾ – ಎಂ.ಟೆಕ್ ಪದವೀಧರೆಯ ಬಾಳು ಬೆಳಗುತ್ತಿದೆ ಬಾಳೆ ದಿಂಡು

    ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಎಷ್ಟೋ ಮಂದಿಗೆ ಪ್ರೇರಣೆಯಾಗಿದೆ. ಮನ್ ಕೀ ಬಾತ್‍ನಿಂದಲೇ ಪ್ರೇರಣೆಗೊಂಡ ಚಾಮರಾಜನಗರದ ಎಂ.ಟೆಕ್ ಪದವೀಧರೆ ಮಹಿಳೆಯೊಬ್ಬರು ಕಸದಿಂದ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.

    ರೈತರು ಬಾಳೆಗೊನೆ ಕೊಯ್ದ ನಂತರ ಬಾಳೆ ದಿಂಡು ಅನುಪಯುಕ್ತ ಎಂದು ಬಿಸಾಡುತ್ತಾರೆ. ಆದರೆ ಈ ಅನುಪಯುಕ್ತ ಬಾಳೆ ದಿಂಡಿನಿಂದ ಮ್ಯಾಟ್, ಫ್ಲೋರ್ ಮ್ಯಾಟ್, ಚಾಪೆ, ಬ್ಯಾಗ್, ಪರ್ಸ್‍ಗಳನ್ನು ತಯಾರಿಸಬಹುದು ಎಂಬುದನ್ನು ಚಾಮರಾಜನಗರದ ವರ್ಷಾ ತೋರಿಸಿಕೊಟ್ಟಿದ್ದಾರೆ. ಗುಂಡ್ಲುಪೇಟೆ ತಾಲೂಕು ಆಲಹಳ್ಳಿಯ ವರ್ಷಾ ಎಂ.ಟೆಕ್ ಪದವೀಧರೆಯಾದರು ಯಾವುದೇ ಉದ್ಯೋಗಕ್ಕೆ ಸೇರಿರಲಿಲ್ಲ. ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಎಂಬ ಹಂಬಲ ಹೊಂದಿದ್ದ ಅವರಿಗೆ ಬೇರೆಯವರ ಕೈ ಕೆಳಗೆ ಕೆಲಸ ಮಾಡಲು ಇಷ್ಟ ಇರಲಿಲ್ಲ. ಸ್ವ ಉದ್ಯೋಗ ಪ್ರಾರಂಭಿಸಬೇಕು, ಮಹಿಳೆಯರಿಗೆ ಉದ್ಯೋಗ ನೀಡಬೇಕು ಆ ಮೂಲಕ ಸ್ತ್ರೀ ಸಬಲೀಕರಣಕ್ಕೆ ಕೈ ಜೋಡಿಸಬೇಕು ಎಂದು ಕನಸು ಹೊತ್ತಿದ್ದ ವರ್ಷಾ ಅವರು ಯೂಟ್ಯೂಬ್‍ನಲ್ಲಿ ಸರ್ಚ್ ಮಾಡುತ್ತಿದ್ದಾಗ, ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್‍ನಲ್ಲಿ ಪ್ರಸ್ತಾಪಿಸಿದ್ದ ವಿಚಾರವೊಂದು ಗಮನ ಸೆಳೆದಿದೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಅಭಾವ – ಮುಂದಿನ ವಾರದಿಂದಲೇ ಶಾಲೆಗಳು ಬಂದ್

    ಅನುಪಯುಕ್ತ ಬಾಳೆ ದಿಂಡಿನಿಂದ ಹಲವು ರೀತಿಯ ಉಪಯುಕ್ತ ವಸ್ತುಗಳನ್ನು ತಯಾರಿಸಬಹುದು ಉದಾಹರಣೆ ಸಹಿತ ಹೇಳಿದ್ದ ಮೋದಿ ಅವರ ಮಾತಿನಿಂದ ಪ್ರೇರಣೆಗೊಂಡ ವರ್ಷಾ, ತಾವೇಕೆ ಪ್ರಯತ್ನಿಸಿಸಬಾರದು ಎಂದುಕೊಂಡು ಮತ್ತೆ ಯೂಟ್ಯೂಬ್‍ನಲ್ಲಿ ಸರ್ಚ್ ಮಾಡಿದಾಗ ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಾಳೆ ದಿಂಡಿನಿಂದ ಉತ್ಪನ್ನಗಳ ತಯಾರಿಕೆ ಮಾಡುತ್ತಿರುವ ದೃಶ್ಯಾವಳಿ ನೋಡಿದ್ದಾರೆ. ಬಳಿಕ ಕೊಯಮತ್ತೂರಿನಿಂದ 3 ಲಕ್ಷ ರೂಪಾಯಿಗಳಿಗೆ ಯಂತ್ರೋಪಕರಣಗಳನ್ನು ಖರೀದಿಸಿ ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿರುವ ತಮ್ಮ ಜಮೀನಿನಲ್ಲಿ ಬಾಳೆ ದಿಂಡು ಉತ್ಪನ್ನಗಳ ತಯಾರಿಕಾ ಉದ್ಯಮ ಆರಂಭಿಸಿದ್ದಾರೆ. ಇದನ್ನೂ ಓದಿ: ಅಂಗನವಾಡಿ ಶಿಕ್ಷಕಿಯಾಗಿ ದಲಿತೆ ನೇಮಕವಾಗಿದ್ದಕ್ಕೆ ಮಕ್ಕಳನ್ನು ಕಳುಹಿಸದ ಮೇಲ್ಜಾತಿ ಪಾಲಕರು!

    ಈ ಘಟಕದಲ್ಲಿ ಐವರು ಮಹಿಳೆಯರಿಗೆ ಉದ್ಯೋಗ ನೀಡಿರುವ ವರ್ಷಾ ನಗರ ಪ್ರದೇಶಗಳಲ್ಲಿರುವ ಆರ್ಗ್ಯಾನಿಕ್ ಶಾಪ್, ಗೂಗಲ್, ಫ್ಲಿಪ್‍ಕಾರ್ಟ್, ಅಮೆಜಾನ್ ಮೂಲಕ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ಮುಂದಾಗಿದ್ದಾರೆ. ಬಾಳೆ ದಿಂಡಿನಲ್ಲಿರುವ ರಸದಲ್ಲಿ ಪೊಟ್ಯಾಶಿಯಂ ಅಂಶ ಇರುವುದರಿಂದ ಅದನ್ನು ಬೀಸಾಡದೆ ರಾಸಾಯನಿಕ ಗೊಬ್ಬರದ ಬದಲು ಬಾಳೆ ದಿಂಡಿನ ರಸ ಹಾಗೂ ದಿಂಡಿನಿಂದ ನಾರು ತೆಗೆದ ನಂತರ ಉಳಿಯುವ ವೇಸ್ಟ್‌ನಿಂದ ಸಾವಯವ ಗೊಬ್ಬರ ತಯಾರಿಸಿ ತಮ್ಮ ಜಮೀನಿಗೆ ಬಳಸುತ್ತಿದ್ದಾರೆ. ಇವರು ತಯಾರಿಸುತ್ತಿರುವ ಬಾಳೆದಿಂಡಿನ ಚಾಪೆಗಳನ್ನು ಕೊಯಮತ್ತೂರಿನ ಕಂಪನಿಯೊಂದು ಖರೀದಿಸುತ್ತಿದ್ದು, ಬಾಳೆದಿಂಡಿನಿಂದ ತಯಾರಿಸಲಾದ ವಸ್ತುಗಳು ಪರಿಸರ ಸ್ನೇಹಿ ಆಗಿರುವುದರಿಂದ ಬೇಡಿಕೆ ಹೆಚ್ಚಾಗಬಹುದು ಎಂಬ ಆಶಯವನ್ನೂ ಅವರು ಹೊಂದಿದ್ದಾರೆ. ಇದನ್ನೂ ಓದಿ: ಮದುವೆಯಾಗಲು ಒತ್ತಾಯಿಸಿದ್ದಕ್ಕೆ ಪ್ರೀತಿಸಿದವಳನ್ನೇ ಇಟ್ಟಿಗೆಯಿಂದ ಹೊಡೆದು ಕೊಂದ

    ಮೈಸೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿ ಆಗಿರುವ ವರ್ಷಾ ಅವರ ಪತಿ ಶ್ರೀಕಂಠಸ್ವಾಮಿ ಅವರು ರಜಾ ದಿನಗಳಲ್ಲಿ ಬಾಳೆ ದಿಂಡಿನ ಉತ್ಪನ್ನಗಳನ್ನು ತಯಾರಿಸುವ ಕೆಲಸದಲ್ಲಿ ನಿರತರಾಗಿ ತಮ್ಮ ಪತ್ನಿಯ ಕಾರ್ಯಕ್ಕೆ ಸಾಥ್ ನೀಡುತ್ತಿದ್ದಾರೆ. ಈ ದಂಪತಿ ಸುತ್ತಮುತ್ತಲಿನ ಜಮೀನಿಗಳಲ್ಲಿ ಬಾಳೆ ಬೆಳೆಯುವ ರೈತರನ್ನು ಸಂಪರ್ಕಿಸಿ ಬಾಳೆ ದಿಂಡು ಬಿಸಾಡದೆ ತಮಗೆ ನೀಡುವಂತೆ ಕೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಒಂದು ಬಾಳೆ ದಿಂಡಿಗೆ 8 ರಿಂದ 10 ರೂಪಾಯಿಗೆ ಖರೀದಿಸಲು ಆಲೋಚಿಸಿದ್ದಾರೆ, ಇದರಿಂದ ಸುತ್ತಮುತ್ತಲಿನ ರೈತರಿಗೂ ಲಾಭವಾಗಲಿದೆ ಎಂಬುದು ಅವರ ಆಶಯವಾಗಿದೆ. ಒಟ್ಟಾರೆ ಮೋದಿ ಅವರ ಮನ್ ಕೀ ಬಾತ್ ವಿದ್ಯಾವಂತ ಮಹಿಳೆಯೊಬ್ಬರು ಯಶಸ್ವಿ ಉದ್ಯಮಿಯಾಗಲು ನಿಜಕ್ಕೂ ಪ್ರೇರಣೆ ನೀಡಿದೆ ಎಂದರೆ ತಪ್ಪಾಗಲಾರದು.

    Live Tv

  • ಹಿಜಬ್ ಧರಿಸದಿದ್ದರೆ ಮಹಿಳೆಯರು ಪ್ರಾಣಿಗಳಂತೆ ಕಾಣ್ತಾರೆ: ತಾಲಿಬಾನ್

    ಹಿಜಬ್ ಧರಿಸದಿದ್ದರೆ ಮಹಿಳೆಯರು ಪ್ರಾಣಿಗಳಂತೆ ಕಾಣ್ತಾರೆ: ತಾಲಿಬಾನ್

    ಕಾಬೂಲ್: ತಮ್ಮ ದೇಹವನ್ನು ಸಂಪೂರ್ಣವಾಗಿ ಮುಚ್ಚುವ ಇಸ್ಲಾಮಿಕ್ ಹಿಜಬ್ ಧರಿಸದ ಮುಸ್ಲಿಂ ಮಹಿಳೆಯರು ಪ್ರಾಣಿಗಳಂತೆ ಕಾಣಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ತಾಲಿಬಾನ್‍ನ ಧಾರ್ಮಿಕ  ಪೊಲೀಸರು ದಕ್ಷಿಣ ಅಫ್ಘಾನಿಸ್ತಾನದ ಕಂದಹಾರ್ ನಗರದಾದ್ಯಂತ ಪೋಸ್ಟರ್‌ಗಳನ್ನು ಹಾಕಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕಳೆದ ವರ್ಷ ಆಗಸ್ಟ್‌ನಲ್ಲಿ ಆಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ, ಅಫ್ಘಾನ್ ಮಹಿಳೆಯರ ಮೇಲೆ ತಾಲಿಬಾನ್ ಕಠಿಣ ನಿರ್ಬಂಧಗಳನ್ನು ಹೇರಿದೆ. ಮೇ ತಿಂಗಳಲ್ಲಿ ತಾಲಿಬಾನ್ ಮುಖ್ಯಸ್ಥ ಹಿಬತುಲ್ಲಾ ಅಖುಂಡ್ಜಾದಾ, ಮಹಿಳೆಯರು ಮನೆಯಲ್ಲಿಯೇ ಇರಬೇಕು. ಒಂದು ವೇಳೆ ಮನೆಯಿಂದ ಹೊರಗೆ ಹೋಗಬೇಕಾದರೆ, ತಮ್ಮ ಮುಖ ಸೇರಿದಂತೆ ದೇಹವನ್ನು ಸಂಪೂರ್ಣವಾಗಿ ಮುಚ್ಚುವ ಹಿಜಬ್ ಧರಿಸಿ ಹೋಗಬೇಕು ಎಂದು ಆದೇಶ ಹೊರಡಿಸಿದ್ದರು. ಇದನ್ನೂ ಓದಿ: ‘ಅಗ್ನಿಪಥ್’ ವಿರೋಧ- ಮತ್ತೇ ಪ್ಯಾಸೆಂಜರ್ ರೈಲಿನ 2 ಬೋಗಿಗೆ ಬೆಂಕಿ

    ಇದೀಗ ತಾಲಿಬಾನ್‍ನ ಸಚಿವಾಲಯವು ಇಸ್ಲಾಂ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಕಂದಹಾರ್ ನಗರದಾದ್ಯಂತ ಪೋಸ್ಟರ್‌ಗಳನ್ನು ಹಾಕಿದೆ. ಪೋಸ್ಟರ್‌ನಲ್ಲಿ ಮಹಿಳೆಯರ ದೇಹವನ್ನು ತಲೆಯಿಂದ ಕಾಲಿನವರೆಗೂ ಮುಚ್ಚಲ್ಪಡುವ ಬುರ್ಖಾಗಳ ಫೋಟೋಗಳನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿದ ರಾಜ್ಯಪಾಲ ಗೆಹ್ಲೋಟ್

    ಪೋಸ್ಟರ್ ಕೆಳಗಡೆ ಹಿಜಬ್ ಧರಿಸದ ಮುಸ್ಲಿಂ ಮಹಿಳೆಯರು ಪ್ರಾಣಿಗಳಂತೆ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಬರೆಯಲಾಗಿದೆ. ಈ ಪೋಸ್ಟರ್‌ಗಳನ್ನು ಅನೇಕ ಕೆಫೆಗಳು, ಅಂಗಡಿಗಳ ಮೇಲೆ ಮತ್ತು ತಾಲಿಬಾನ್‍ನ ವಾಸ್ತವಿಕ ಶಕ್ತಿ ಕೇಂದ್ರವಾದ ಕಂದಹಾರ್‌ನಾದ್ಯಂತ ಜಾಹೀರಾತು ಹೋರ್ಡಿಂಗ್‍ಗಳ ಮೇಲೆ ಹಾಕಲಾಗಿದೆ.

    Live Tv

  • ಒಂಟಿ ಮಹಿಳೆಯನ್ನ ಭೀಕರವಾಗಿ ಹತ್ಯೆಗೈದು ಪರಾರಿಯಾದ ಪಾಪಿಗಳು

    ಒಂಟಿ ಮಹಿಳೆಯನ್ನ ಭೀಕರವಾಗಿ ಹತ್ಯೆಗೈದು ಪರಾರಿಯಾದ ಪಾಪಿಗಳು

    ಮಂಡ್ಯ: ಒಂಟಿ ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದ ನಿವಾಸಿ ಒಂಟಿ ಮಹಿಳೆ ಪುಷ್ಪಲತಾ (45) ಮನೆಗೆ ಅಪರಿಚಿತರು ನುಗ್ಗಿ ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ. ಪುಷ್ಪಲತಾ ಅವರ ಪತಿ ಕಳೆದ 10 ವರ್ಷದ ಹಿಂದೆ ಮೃತಪಟ್ಟಿದ್ದರು. ಅದಕ್ಕೆ ಒಂಟಿಯಾಗಿಯೇ ಪುಷ್ಪಲತಾ ತನ್ನ ಮಗನನ್ನು ನೋಡಿಕೊಂಡು ಜೀವನ ನಡೆಸುತ್ತಿದ್ದರು. ಇದನ್ನೂ ಓದಿ: ಕೊಳವೆ ಬಾವಿ ತೋಡಿಸಿಕೊಡಿ ಅಂತಾ ಮತಪೆಟ್ಟಿಗೆಗೆ ಪತ್ರ ಹಾಕಿರುವ ಯುವಕ!

    ನಡೆದಿದ್ದೇನು?
    ಪುಷ್ಪಲತಾ ಜೀವನ ಸಾಗಿಸಲು ಮೆಡಿಕಲ್ ಸ್ಟೋರ್ ನಡೆಸುತ್ತಿದ್ದರು. ಬುಧವಾರ ಮಧ್ಯಾಹ್ನ ಊಟಕ್ಕೆಂದು ಮನೆಗೆ ತೆರಳಿದಾಗ ಪುಷ್ಪಲತಾ ಕೊಲೆ ನಡೆದಿದೆ. ತಾಯಿ ಎಷ್ಟು ಸಮಯವಾದರೂ ಮೆಡಿಕಲ್ ಸ್ಟೋರ್‌ಗೆ ಬಾರದ ಹಿನ್ನೆಲೆ ಪುಷ್ಪಲತಾ ಪುತ್ರ ಮನೆಗೆ ತೆರಳಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಹಂತಕರು ಪುಷ್ಪಲತಾ ತಲೆ ಹಾಗೂ ಕತ್ತಿನ ಭಾಗಕ್ಕೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಅಲ್ಲದೇ ಪುಷ್ಪಲತಾ ಮೃತದೇಹ ಅರ್ಧಂಬರ್ಧ ಬಟ್ಟೆಯಲ್ಲಿ ಪತ್ತೆಯಾಗಿರುವುದರಿಂದ ಆಕೆಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ದೇಶದಲ್ಲಿ 2023ರ ಮಾರ್ಚ್ ವೇಳೆಗೆ ಪೂರ್ಣ ಪ್ರಮಾಣದ 5G ಸೇವೆ: ಕೇಂದ್ರ ಸಚಿವ

    ಪುಷ್ಪಲತಾ ಅವರ ಕೊಲೆ ಸಾಕಷ್ಟು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಸ್ಥಳಕ್ಕೆ ಕಿಕ್ಕೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳಿಗಾಗಿ ಶೋಧಕಾರ್ಯವನ್ನು ಪ್ರಾರಂಭಿಸಿದ್ದಾರೆ.

    Live Tv

  • ಕೌಟುಂಬಿಕ ಕಲಹ: ಕೆರೆಗೆ ಹಾರಿದ ಒಂದೇ ಕುಟುಂಬದ ಮೂವರು ಮಹಿಳೆಯರು

    ಕೌಟುಂಬಿಕ ಕಲಹ: ಕೆರೆಗೆ ಹಾರಿದ ಒಂದೇ ಕುಟುಂಬದ ಮೂವರು ಮಹಿಳೆಯರು

    ರಾಮನಗರ: ಕೌಟುಂಬಿಕ ಕಲಹದ ಹಿನ್ನೆಲೆ ಮೂವರು ಮಹಿಳೆಯರು ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಾಗಡಿಯಲ್ಲಿ ನಡೆದಿದೆ.

    ಮಾಗಡಿ ಟೌನ್‍ನ ಗೌರಮ್ಮನ ಕೆರೆಗೆ ಮೂರು ಮಹಿಳೆಯರು ಹಾರಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಇಬ್ಬರು ಮಹಿಳೆಯರು ಅಪಾಯದಿಂದ ಪಾರಾಗಿದ್ದಾರೆ ಮೃತ ಮಹಿಳೆಯನ್ನು ಅಜ್ಜಿ ಶಾಂತಾ ಭಾಯಿ(50) ಎಂದು ಗುರುತಿಸಲಾಗಿದೆ. ಇವರು ಮಾಗಡಿ ಟೌನ್‍ನ ನೇಯಿಗೆ ಬೀದಿ ನಿವಾಸಿಯಾಗಿದ್ದರು. ಇದನ್ನೂ ಓದಿ: ಅನುಭವ ಮಂಟಪ ದಾಖಲೆಗಳನ್ನು ಪುರಾತತ್ವ ಇಲಾಖೆ ಪರಿಶೀಲಿಸಲಿದೆ: ಬೊಮ್ಮಾಯಿ 

    CRIME 2

    ಭಾನುವಾರ ಈ ಮೂರು ಮಹಿಳೆಯರು ಕೆರೆಗೆ ಹಾರಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣ ಉಷಾ ಭಾಯಿ ಹಾಗೂ ನಿರ್ಮಲಾ ಭಾಯಿಯನ್ನು ರಕ್ಷಣೆ ಮಾಡಿದ್ದು, ಶಾಂತಾಭಾಯಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಮಾಡಿದ್ದು, ಇವರು ಒಂದೇ ಕುಟುಂಬದ ಮಹಿಳೆಯರು ಎಂಬುದು ತಿಳಿದುಬಂದಿದೆ. ಕೌಟುಂಬಿಕ ಕಲಹದಿಂದ ಇವರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ.

    POLICE JEEP

    ಮಾಗಡಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರೇಪ್‌ಗೆ ಉತ್ತೇಜನ ನೀಡುವ ಪರ್ಫ್ಯೂಮ್ ಜಾಹೀರಾತು ತೆಗೆಯುವಂತೆ ಕೇಂದ್ರ ಸೂಚನೆ

    ರೇಪ್‌ಗೆ ಉತ್ತೇಜನ ನೀಡುವ ಪರ್ಫ್ಯೂಮ್ ಜಾಹೀರಾತು ತೆಗೆಯುವಂತೆ ಕೇಂದ್ರ ಸೂಚನೆ

    ನವದೆಹಲಿ: ಅತ್ಯಾಚಾರ ಸಂಸ್ಕೃತಿಯನ್ನು ಉತ್ತೇಜಿಸುವ ಸುಗಂಧ ದ್ರವ್ಯ (ಪರ್ಫ್ಯೂಮ್) ಬ್ರಾಂಡ್ ಜಾಹೀರಾತುಗಳನ್ನು ತೆಗೆದುಹಾಕುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಟ್ವಿಟ್ಟರ್, ಯುಟ್ಯೂಬ್ ಹಾಗೂ ಟಿವಿ ಚಾನೆಲ್‌ಗಳಿಗೆ ಹೇಳಿದೆ.

    ಸುಗಂಧ ದ್ರವ್ಯದ ಬ್ರಾಂಡ್ (ಪರ್ಫ್ಯೂಮ್) ಜಾಹಿರಾತುಗಳು ಉದ್ದೇಶಪೂರ್ವಕವಾಗಿ ಗ್ಯಾಂಗ್ ರೇಪ್ ಸಂಸ್ಕೃತಿಗೆ ಉತ್ತೇಜನ ನೀಡುತ್ತಿವೆ. ಇದರ ವಿರುದ್ಧ ತುರ್ತು ಕ್ರಮ ಕೈಗೊಳ್ಳುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಪತ್ರ ಬರೆದಿದ್ದರು. ಅಲ್ಲದೆ ಅನೇಕ ಜಾಹೀರಾತಿನ ನಿದರ್ಶನಗಳನ್ನೂ ಉಲ್ಲೇಖಿಸಿದ್ದರು. ಇದಕ್ಕೆ ಶೀಘ್ರವೇ ಸ್ಪಂದಿಸಿರುವ ಸಚಿವರು ಮಧ್ಯಾಹ್ನದ ವೇಳೆಗೆ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಐವರು ಟಾಪ್ ನಾಯಕರು ಕಾಂಗ್ರೆಸ್‌ಗೆ ಗುಡ್‌ಬೈ – ಕಮಲಕ್ಕೆ ಹಾಯ್

    ಆಯುಕ್ತರ ಪತ್ರವನ್ನಾಧರಿಸಿ ಸ್ವಯಂಪ್ರೇರಿತವಾಗಿ ಕ್ರಮ ತೆಗೆದುಕೊಂಡಿರುವ ಸಚಿವಾಲಯ ತನಿಖೆ ನಡೆಸಿ FIR ದಾಖಲಿಸಲು ಮತ್ತು ಸಮೂಹ ಮಾಧ್ಯಮದಿಂದ ಜಾಹೀರಾತನ್ನು ತೆಗೆದುಹಾಕಲು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದೆ. ತನಿಖೆ ಸಂಬಂಧಿತ ವರದಿಯನ್ನು ಜೂನ್ 9ರ ಒಳಗೆ ನೀಡುವಂತೆ ಹೇಳಿದೆ.

  • ರಜೆ ಬೇಕೆಂದ್ರೆ ಲಾಡ್ಜ್‌ಗೆ ಬನ್ನಿ – ಮಹಿಳಾ ನೌಕರರಿಗೆ ಎಸ್‌ಪಿ ಕಚೇರಿ ಅಧಿಕಾರಿಯಿಂದ ಕಿರುಕುಳ

    ರಜೆ ಬೇಕೆಂದ್ರೆ ಲಾಡ್ಜ್‌ಗೆ ಬನ್ನಿ – ಮಹಿಳಾ ನೌಕರರಿಗೆ ಎಸ್‌ಪಿ ಕಚೇರಿ ಅಧಿಕಾರಿಯಿಂದ ಕಿರುಕುಳ

    ಕೊಪ್ಪಳ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಸಹಾಯಕ ಆಡಳಿತಾಧಿಕಾರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಈ ಅಧಿಕಾರಿ ಡಿ ಗ್ರೂಪ್ ಮಹಿಳಾ ನೌಕರರು ರಜೆ ಬೇಕೆಂದ್ರೆ ಲಾಡ್ಜ್‌ಗೆ ಬನ್ನಿ ಎಂದು ಕರೆಯುತ್ತಾನೆ ಎಂದು ನೌಕರರು ಸಾಕ್ಷಿ ಸಮೇತ ದೂರು ನೀಡಿದ್ದಾರೆ.

    CRIME COURT

    ಡಿವೈಎಸ್‌ಪಿ ರ‍್ಯಾಂಕ್‌ನ ಸಹಾಯಕ ಆಡಳಿತಾಧಿಕಾರಿ ಮಲ್ಲಿನಾಥ್ ಕಚೇರಿಯ ಡಿ ಗ್ರೂಪ್ ಮಹಿಳಾ ನೌಕರರಿಗೆ ಲೈಂಗಿಕ ಕಿರುಕುಳ ನೀಡುವ ಆರೋಪ ಕೇಳಿಬಂದಿದೆ. ಅನುಕಂಪದ ಆಧಾರದಡಿ ಕೆಲಸಕ್ಕೆ ಸೇರಿರೋ ವಿಧವಾ ಮಹಿಳಾ ನೌಕರರೇ ಇತನಿಗೆ ಟಾರ್ಗೆಟ್ ಎಂದು ನೊಂದ ಮಹಿಳೆಯರು ಎಸ್‌ಪಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮಂಕಿಪಾಕ್ಸ್ ತಡೆಯಬೇಕಾದ್ರೆ ಸೆಕ್ಸ್ ಮಾಡೋದು ನಿಲ್ಲಿಸಿ, ಇಲ್ಲವೇ 8 ವಾರ ಕಾಂಡೋಮ್ ಬಳಸಿ – UK

    crime

    ಮಹಿಳಾ ನೌಕರರು ರಜೆ ಸೇರಿ ಇತರೇ ಸೌಲಭ್ಯ ಬೇಕು ಎಂದರೂ ಲಾಡ್ಜಗೆ ಬಂದು ಬಟ್ಟೆ ಬಿಚ್ಚಬೇಕು ಎಂದು ಮಲ್ಲಿನಾಥ್ ಹೇಳುತ್ತಾನೆ ಎಂದು ಮಹಿಳೆಯರು ಕಷ್ಟ ಹೇಳಿಕೊಂಡಿದ್ದಾರೆ. ಅಲ್ಲದೇ ಎಸ್‌ಪಿ ಕಚೇರಿಯಲ್ಲೇ ಸ್ವಚ್ಛತಾ ಕೆಲಸಕ್ಕೆ ಬರುವ ಡಿ ಗ್ರೂಪ್ ಮಹಿಳಾ ಸಿಬ್ಬಂದಿಯನ್ನು ಎಳೆದು ಕೊಂಡು ಚುಂಬಿಸುವ ಮತ್ತು ಅಸಭ್ಯವಾಗಿ ವರ್ತಿಸುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಗನ್ ಸಂಸ್ಕೃತಿಗೆ ಕಡಿವಾಣ ಹಾಕಲು ನ್ಯೂಜಿಲೆಂಡ್‍ನ ಸಹಕಾರ ಕೇಳಿದ ಬೈಡನ್

    ಈ ದೃಶ್ಯಗಳ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಿರೋ ನೊಂದ ಮಹಿಳೆಯರು ಈತನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕಳೆದ 2019ರಲ್ಲೇ ಇಬ್ಬರು ಮಹಿಳಾ ಸಿಬ್ಬಂದಿ ಈತನ ವಿರುದ್ಧ ದೂರು ನೀಡಿದ್ದಾರೆ. ಕಚೇರಿಯಲ್ಲೇ ಮಹಿಳಾ ಸಿಬ್ಬಂದಿಗೆ ಕಿಸ್ ಮಾಡುವ ಸಿಸಿಟಿವಿ ಕ್ಯಾಮೆರಾ ಪುಟೇಜ್ ಸಹಿತ ದೂರು ನೀಡಿದ್ದು, ಆಗಿನ ಡಿವೈಎಸ್‌ಪಿ ವೆಂಕಟಪ್ಪ ನಾಯಕ ತನಿಖೆ ಮಾಡಿ ವರದಿ ನೀಡಿದ್ದಾರೆ.

    CRIME

    ಕೊಪ್ಪಳ ಎಸ್‌ಪಿ ಕಚೇರಿಯಲ್ಲಿನ ಎಲ್ಲ ಡಿ ಗ್ರೂಪ್ ನೌಕರರನ್ನು ತನಿಖೆಗೆ ಒಳಪಡಿಸಲಾಗಿದ್ದು, ದೂರು ಪ್ರತಿಯಲ್ಲಿ ಹೆಸರು ಇರುವ ರೇಣುಕಮ್ಮ ಮತ್ತು ರೇಖಾ ಕೂಡ ಇಂಥ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ನಂತರವೂ ಕೆಲ ಮಹಿಳಾ ಸಿಬ್ಬಂದಿಗೆ ಕಿರುಕುಳ ಮುಂದುವರಿದಿದೆ. ಈ ಹಿನ್ನೆಲೆ ಮಲ್ಲಿನಾಥ್‌ನ ಕಾಟಕ್ಕೆ ಬೇಸತ್ತು ಇದೀಗ ದೂರು ಪ್ರತಿ ಮತ್ತು ಸಿಸಿಟಿವಿ ಕ್ಯಾಮೆರಾ ಫುಟೇಜ್‌ಗಳನ್ನು ಮಹಿಳಾ ನೌಕರರು ಮಾಧ್ಯಮಗಳಿಗೆ ತಲುಪಿಸಿದ್ದಾರೆ. ಈ ಎಲ್ಲ ಆರೋಪಗಳನ್ನು ಮಲ್ಲಿನಾಥ್ ಅಲ್ಲಗಳೆದಿದ್ದಾನೆ.

    CRIME 2

    ಡಿವೈಎಸ್‌ಪಿ ರ‍್ಯಾಂಕ್ ಅಧಿಕಾರಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ಆತನನ್ನು ಅಮಾನತು ಮಾಡಿ. ತನಿಖೆ ಮಾಡಿದ್ರೆ ಮಾತ್ರ ಕೆಳ ಹಂತದ ನೌಕರರು ಸತ್ಯ ಬಾಯಿಬಿಡಲು ಸಾಧ್ಯ. ಆದರೆ ಖಡಕ್ ನಿರ್ಧಾರಕ್ಕೆ ಯಾವೊಬ್ಬ ಅಧಿಕಾರಿಯೂ ಮುಂದಾಗದಿರುವುದು ನೊಂದ ಮಹಿಳೆಯರಲ್ಲಿ ನ್ಯಾಯ ಸಿಗುವ ಆಸೆ ಕಮರಿದೆ.

  • 29 ಹೂಡಿಕೆದಾರರಿಗೆ 1.82 ಕೋಟಿ ರೂ. ವಂಚಿಸಿದ ಮಹಿಳೆ ಅರೆಸ್ಟ್

    29 ಹೂಡಿಕೆದಾರರಿಗೆ 1.82 ಕೋಟಿ ರೂ. ವಂಚಿಸಿದ ಮಹಿಳೆ ಅರೆಸ್ಟ್

    ಮುಂಬೈ: 29 ಹೊಡಿಕೆದಾರರಿಗೆ 1.82 ಕೋಟಿ ರೂ. ವಂಚಿಸಿದ ಮಹಿಳೆ ಮಹಾರಾಷ್ಟ್ರದ ಥಾಣೆ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾಳೆ.

    ಸುಳಿವಿನ ಆಧಾರ ಮೇರೆಗೆ ಥಾಣೆಯ ಆರ್ಥಿಕ ಅಪರಾಧ ವಿಭಾಗ(EOW) ಪುಣೆಯ ದೇಹು ರಸ್ತೆಯಲ್ಲಿದ್ದ ಶ್ರದ್ಧಾ ಶ್ರೀಕಾಂತ್ ಪಲಾಂಡೆ ಮಹಿಳೆಯನ್ನು ಬಂಧಿಸಿದೆ ಎಂದು ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಜಗದೀಶ್ ಪನ್ಹಾಲೆ ತಿಳಿಸಿದರು.

    CRIME 2

    ಎಂಟು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಶ್ರದ್ಧಾ ಮತ್ತು ಆಕೆಯ ಪತಿ ಶ್ರೀಕಾಂತ್ ಪಾಂಡುರಂಗ ಪಲಾಂಡೆ ವಿರುದ್ಧ ಕಾಸರವಾಡವಲಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಮತ್ತು ಎಂಪಿಐಡಿಎಯ ಸೆಕ್ಷನ್ 420(ವಂಚನೆ) ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ದಾಳಿ ವೇಳೆ ಶ್ರದ್ಧಾ ಸಿಕ್ಕಿದ್ದು, ಶ್ರೀಕಾಂತ್ ಪರಾರಿಯಾಗಿದ್ದಾನೆ ಎಂದು ವಿವರಿಸಿದರು. ಇದನ್ನೂ ಓದಿ: ಮಹಿಳಾ ಶೌಚಾಲಯ ಪ್ರವೇಶಿಸಿ ಬಾಗಿಲು ಲಾಕ್ ಮಾಡಿಕೊಂಡ 

    ನಡೆದಿದ್ದೇನು?
    ದಂಪತಿ ಸಲಹಾ ಸಂಸ್ಥೆಯನ್ನು ಸ್ಥಾಪಿಸಿದ್ದು, ವಿದೇಶಿ ವಿನಿಮಯ ವ್ಯಾಪಾರದಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರುತ್ತೆ ಎಂದು ಆದಾಯದ ಭರವಸೆ ನೀಡುವ ಮೂಲಕ ಹೂಡಿಕೆದಾರರನ್ನು ಆಕರ್ಷಿಸಿದ್ದರು. ಈ ಹಿನ್ನೆಲೆ ಇವರ ಮಾತಿಗೆ ನಂಚಿಕೆಯಿಟ್ಟು ಇಬ್ಬರು ಹೂಡಿಕೆದಾರರು ಹಣವನ್ನು ಕೊಟ್ಟಿದ್ದರು. ಆದರೆ ದಂಪತಿ ಹೂಡಿಕೆದಾರರ ಬಡ್ಡಿಯನ್ನು ಮತ್ತು ಅಸಲು ಮೊತ್ತವನ್ನು ಹಿಂದಿರುಗಿಸದೆ ಪರಾರಿಯಾಗಿದ್ದಾರೆ. ಇದೇ ರೀತಿ ಇವರು ಸುಮಾರು 29 ಹೂಡಿಕೆದಾರರಿಗೆ 1.82 ಕೋಟಿ ರೂ. ವಂಚಿಸಿದ್ದರು.

    ಆರೋಪಿ ಮಹಿಳೆಯನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಆಕೆಯನ್ನು ಮೇ 31 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಆಕೆಯ ಪತಿ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದರು.