Tag: women

  • ನೀಟ್ ಪರೀಕ್ಷಾ ಹಾಲ್‌ಗೆ ಪ್ರವೇಶಿಸುವ ಮೊದಲು ಬ್ರಾಗಳನ್ನು ತೆಗೆದುಹಾಕಲು ಒತ್ತಾಯ – ತನಿಖೆಗೆ ಆದೇಶ

    ನೀಟ್ ಪರೀಕ್ಷಾ ಹಾಲ್‌ಗೆ ಪ್ರವೇಶಿಸುವ ಮೊದಲು ಬ್ರಾಗಳನ್ನು ತೆಗೆದುಹಾಕಲು ಒತ್ತಾಯ – ತನಿಖೆಗೆ ಆದೇಶ

    ತಿರುವನಂತಪುರಂ: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(NEET)ಯ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಿದ ಮಹಿಳೆಯರ ಬ್ರಾಗಳನ್ನು ತೆಗೆಯುವಂತೆ ಸಿಬ್ಬಂದಿ ಒತ್ತಾಯಿಸಿದ್ದಾರೆ ಎಂದು ಆಕ್ರೋಶಗೊಂಡ ತಂದೆ ಇದರ ವಿರುದ್ಧ ತನಿಖೆ ಮಾಡುವಂತೆ ಮನವಿ ಮಾಡಿರುವ ಸುದ್ದಿಯೊಂದು ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನೆಡೆದಿದೆ.

    NEET ಪರೀಕ್ಷೆ ಬರೆದ ಮಹಿಳೆಯ ತಂದೆ ಕೊಟ್ಟಾರಕರ ಪೊಲೀಸರಿಗೆ ದೂರು ನೀಡಿದ್ದು, ಚಾತಮಂಗಲಂನಲ್ಲಿರುವ ಪರೀಕ್ಷಾ ಕೊಠಡಿಗೆ ಪ್ರವೇಶಿಸುವ ಮೊದಲು ನನ್ನ ಮಗಳು ಸೇರಿದಂತೆ ಮಹಿಳಾ ನೀಟ್ ಆಕಾಂಕ್ಷಿಗಳು ತಮ್ಮ ಒಳಉಡುಪುಗಳನ್ನು ತೆಗೆಯುವಂತೆ ಸಿಬ್ಬಂದಿ ಹೇಳಿದ್ದಾರೆ. ಇದರಿಂದ ಪರೀಕ್ಷೆ ಬರೆಯಲು ಮಹಿಳಾ ಆಕಾಂಕ್ಷಿಗಳಿಗೆ ಮಾನಸಿಕವಾಗಿ ಹಿಂಸೆಯಾಗಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ:  ಬೊಮ್ಮಾಯಿ ಅಲ್ಲ, ಮೋದಿ ನಿತ್ಕೊಂಡ್ರು ನಾನು ಸ್ಪರ್ಧೆ ಮಾಡ್ತೀನಿ: ಮಲ್ಲಿಕಾರ್ಜುನ್

    EXAM

    ಈ ಹಿನ್ನೆಲೆ ಮಾನವ ಹಕ್ಕುಗಳ ಆಯೋಗವು ಕೊಲ್ಲಂ ಗ್ರಾಮಾಂತರ ಎಸ್‍ಪಿಗೆ ಈ ಬಗ್ಗೆ ತನಿಖೆ ನಡೆಸಿ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದೆ.

    ದೂರಿನಲ್ಲಿ ಏನಿದೆ?
    ಪ್ರಾಥಮಿಕ ತಪಾಸಣೆಯ ನಂತರ, ಲೋಹ ಶೋಧಕದಿಂದ ಮಹಿಳೆಯರ ಒಳಉಡುಪಿನ ಕೊಕ್ಕೆ ಪತ್ತೆಯಾಯಿತು. ಈ ವೇಳೆ ಸಿಬ್ಬಂದಿ ಅದನ್ನು ತೆಗೆದುಹಾಕಲು ಕೇಳಿದರು. ಇದೇ ರೀತಿ ಸುಮಾರು 90 ಪ್ರತಿಶತ ಮಹಿಳಾ ಅಭ್ಯರ್ಥಿಗಳು ತಮ್ಮ ಒಳಉಡುಪುಗಳನ್ನು ತೆಗೆದು ಸ್ಟೋರ್ ರೂಂನಲ್ಲಿ ಹಾಕಬೇಕಾಯಿತು. ಇದಾದ ಬಳಿಕ ಪರೀಕ್ಷೆಯನ್ನು ನೀಡುವಾಗ ಅಭ್ಯರ್ಥಿಗಳು ಮಾನಸಿಕವಾಗಿ ತೊಂದರೆಗೀಡಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಸತ್ಯ ಹೇಳಿದ ದಿನ ಅವರಿಗೆ ಸಾವು ಬರುತ್ತೆ: ಕಾರಜೋಳ ಕಿಡಿ

    ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‍ಟಿಎ) ಡ್ರೆಸ್ ಕೋಡ್‍ನಲ್ಲಿ ಒಳಉಡುಪುಗಳನ್ನು ತೆಗೆದುಹಾಕಲು ಸೂಚಿಸಿಲ್ಲ ಎಂದು ದೂರುದಾರರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪುರುಷನೊಂದಿಗೆ ಸಂಬಂಧ ಹದಗೆಟ್ಟ ಬಳಿಕ ಮಹಿಳೆ ಅತ್ಯಾಚಾರ ಪ್ರಕರಣ ದಾಖಲಿಸುವಂತಿಲ್ಲ: ಸುಪ್ರೀಂಕೋರ್ಟ್

    ಪುರುಷನೊಂದಿಗೆ ಸಂಬಂಧ ಹದಗೆಟ್ಟ ಬಳಿಕ ಮಹಿಳೆ ಅತ್ಯಾಚಾರ ಪ್ರಕರಣ ದಾಖಲಿಸುವಂತಿಲ್ಲ: ಸುಪ್ರೀಂಕೋರ್ಟ್

    ನವದೆಹಲಿ: ಪುರುಷನೊಂದಿಗೆ ಸಂಬಂಧವಿಟ್ಟುಕೊಂಡು ಆತನೊಂದಿಗೆ ಸ್ವ-ಇಚ್ಛೆಯಿಂದ ವಾಸಿಸುತ್ತಿದ್ದ ಮಹಿಳೆ ಆ ಸಂಬಂಧ ಹದಗೆಟ್ಟ ಬಳಿಕ ಅತ್ಯಾಚಾರ ಪ್ರಕರಣ ದಾಖಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

    ಅತ್ಯಾಚಾರ, ಅಸಹಜ ಅಪರಾಧಗಳು ಹಾಗೂ ಕ್ರಿಮಿನಲ್ ಬೆದರಿಕೆ ಆರೋಪ ಎದುರಿಸುತ್ತಿದ್ದ ಅನ್ಸಾರ್ ಮೊಹಮ್ಮದ್ ಅವರ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿಕ್ರಮ್ ನಾಥ್ ಅವರಿದ್ದ ದ್ವೀ-ಸದಸ್ಯ ಪೀಠವು ಅನ್ಸಾರ್‌ಗೆ ಜಾಮೀನು ನೀಡಿದೆ. ಇದನ್ನೂ ಓದಿ: 2025ರ ವೇಳೆಗೆ ಕಾಂಡೋಮ್ ಮಾರುಕಟ್ಟೆ ಶತಕೋಟಿ ಡಾಲರ್‌ಗಳಷ್ಟು ವಿಸ್ತಾರ

    ಈ ಪ್ರಕರಣದಲ್ಲಿ ಮೇಲ್ಮನವಿದಾರನಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ರಾಜಸ್ಥಾನ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ದೂರುದಾರೆ ಮಹಿಳೆ ಸ್ವಇಚ್ಛೆಯಿಂದ ಮೇಲ್ಮನವಿದಾರ ಅನ್ಸಾರ್ ಜೊತೆ ಇದ್ದು ಆತನೊಂದಿಗೆ ಸಂಬಂಧ ಹೊಂದಿದ್ದರು. ಈಗ ಸಂಬಂಧ ಹದಗೆಟ್ಟಿದ್ದರೆ ಅದು ಐಪಿಸಿ ಸೆಕ್ಷನ್ 376 (2) (ಎನ್) ಅಡಿ ಪ್ರಕರಣ ದಾಖಲಿಸಲು ಆಧಾರವಾಗುವುದಿಲ್ಲ ಎಂದು ತನ್ನ ಆದೇಶದಲ್ಲಿ ತಿಳಿಸಿದೆ. ಇದನ್ನೂ ಓದಿ: ದೇಗುಲದ ಅರ್ಚಕರ ತಲೆ ಕಡಿಯೋದಾಗಿ ಬೆದರಿಕೆ ಪತ್ರ – ಉದಯಪುರ ಮತ್ತೆ ಉದ್ವಿಗ್ನ

    ಅನ್ಸಾರ್ ಜೊತೆ ದೂರುದಾರೆ ಕಳೆದ 4 ವರ್ಷಗಳಿಂದಲೂ ಸಂಬಂಧ ಹೊಂದಿದ್ದು ಆಕೆ ಮತ್ತು ಅನ್ಸಾರ್ ನಡುವೆ ಸಂಬಂಧ ಬೆಳೆದಾಗ ಮಹಿಳೆಗೆ 21 ವರ್ಷ ವಯಸ್ಸಾಗಿತ್ತು ಎಂಬುದನ್ನೂ ದೂರುದಾರೆ ಒಪ್ಪಿಕೊಂಡಿದ್ದಾರೆ. ಈ ಅಂಶವನ್ನು ಗಮನಿಸಿದ ನ್ಯಾಯಾಲಯವು ಅನ್ಸಾರ್‌ಗೆ ನಿರೀಕ್ಷಣಾ ಜಾಮೀನು ನೀಡಲು ನಿರ್ಧರಿಸಿತು.

    Live Tv
    [brid partner=56869869 player=32851 video=960834 autoplay=true]

  • ಕೊರಳಿಗೆ ಹಾಕಿಕೊಳ್ಳುವ ಮಾಂಗಲ್ಯ ಕೈಗೂ ಬಂತು – ಮಾರುಕಟ್ಟೆಯಲ್ಲಿವೆ ವೆರೈಟಿ ಡಿಸೈನ್ಸ್

    ಕೊರಳಿಗೆ ಹಾಕಿಕೊಳ್ಳುವ ಮಾಂಗಲ್ಯ ಕೈಗೂ ಬಂತು – ಮಾರುಕಟ್ಟೆಯಲ್ಲಿವೆ ವೆರೈಟಿ ಡಿಸೈನ್ಸ್

    ಭಾರತೀಯ ಸಂಸ್ಕೃತಿಯಲ್ಲಿ ಮಂಗಳಸೂತ್ರಕ್ಕೆ ಆದರದೇ ಆದ ಪ್ರಾಮುಖ್ಯತೆ ಇದೆ. ಮಾಂಗಲ್ಯವನ್ನು ಮದುವೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಮದುವೆಯ ನಂತರ ಸಾಮಾನ್ಯವಾಗಿ ಪ್ರತಿ ಮಹಿಳೆಯು ಕುತ್ತಿಗೆಯಲ್ಲಿ ಸರದಂತಿರುವ ಮಂಗಳಸೂತ್ರವನ್ನು ಧರಿಸಿರುವುದನ್ನು ನೀವು ನೋಡುರುತ್ತೀರಿ. ಆದರೆ ಅನೇಕ ಮಹಿಳೆಯರು ಮಂಗಳಸೂತ್ರವನ್ನು ಧರಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಮಂಗಳಸೂತ್ರದ ಸಾಂಪ್ರದಾಯಿಕ ವಿನ್ಯಾಸಗಳು ಅವರ ಸೊಗಸಾದ ನೋಟಕ್ಕೆ ಹೊಂದಿಕೆಯಾಗುವುದಿಲ್ಲ ಎಂಬುವುದು ಅವರ ನಂಬಿಕೆ. ಮದುವೆಯ ನಂತರ ಪ್ರತಿಯೊಬ್ಬ ಮಹಿಳೆಯೂ ಮಂಗಳಸೂತ್ರವನ್ನು ಧರಿಸಲು ಇಷ್ಟಪಡುತ್ತಾರೆ. ಹಾಗಾಗಿಯೇ ಈಗ ಮಾರುಕಟ್ಟೆಗೆ ಹಲವಾರು ಡಿಸೈನ್‍ನ ಕೈ ಮಂಗಳಸೂತ್ರಗಳು ಬಂದಿವೆ. ಈ ಮಂಗಳ ಸೂತ್ರಗಳನ್ನು ನೀವು ಕೈಯಲ್ಲಿ ಧರಿಸಬಹುದಾಗಿದೆ.

     

    ಹಿಂದಿನ ಕಾಲದಲ್ಲಿ ಮಹಿಳೆಯರು ಕರಿಮಣಿ ಸರವನ್ನು ಕೊರಳಿನಲ್ಲಿ ಮಾತ್ರ ಧರಿಸುತ್ತಿದ್ದರು. ಆದರೆ ಇದೀಗ ಕಾಲ ಬದಲಾಗಿದೆ. ಕೊರಳಿನಲ್ಲಿ ಮಾಂಗಲ್ಯಸೂತ್ರವನ್ನು ಧರಿಸಲು ಸಾಧ್ಯವಾಗದೇ ಇರುವವರು ಕೈಯಲ್ಲಿ ಧರಿಸಲು ಆರಂಭಿಸಿದ್ದಾರೆ. ಇದೀಗ ಬ್ರಾಸ್ಲೈಟ್ ಮಾದರಿಯ ವಿನೂತನ ಕೈ ಮಂಗಳ ಸೂತ್ರ ಡಿಸೈನ್ ಕುರಿತಂತೆ ಕೆಲವೊಂದಷ್ಟು ಮಾಹಿತಿ ಕೆಳಗಿನಂತಿದೆ. ಇದನ್ನೂ ಓದಿ: ನನ್ನ ತಲೆ ಕೆಡಿಸಿ, ಡಿವೋರ್ಸ್ ಕೊಡಿಸಿ ಮೋಸ ಮಾಡಿದ್ದಾನೆ- ಚಿಕ್ಕಬಳ್ಳಾಪುರದಲ್ಲಿ `ಪವಿತ್ರಾ ಮ್ಯಾರೇಜ್ ಸ್ಟೋರಿ’

    ಗಂಡನ ರಾಶಿ ಚಕ್ರ ಚಿಹ್ನೆ ಮಂಗಳಸೂತ್ರ
    ನೀವು ಜ್ಯೋತಿಷ್ಯವನ್ನು ನಂಬುವವರಾಗಿದ್ದರೆ, ನಿಮ್ಮ ಗಂಡನ ರಾಶಿಚಕ್ರ ಚಿಹ್ನೆ ಅಥವಾ ಅದೃಷ್ಟ ಸಂಖ್ಯೆ ವಿನ್ಯಾಸದೊಂದಿಗೆ ಮಾಡಿರುವ ಮಂಗಳಸೂತ್ರವನ್ನು ಧರಿಸಬಹುದು. ಈ ಮಂಗಳಸೂತ್ರ ಡಿಸೈನ್‍ನಲ್ಲಿ ವಿವಿಧ ರೀತಿಯ ರಾಶಿ ಚಿಹ್ನೆಗಳನ್ನು ಕಾಣಬಹುದಾಗಿದೆ. ನೀವು ಆ ಚಿಹ್ನೆಯ ಪೆಂಡೆಂಟ್ ಅನ್ನು ಮಾಡಬಹುದು ಇದಲ್ಲದೇ ನಿಮ್ಮ ರಾಶಿಚಕ್ರ ಚಿಹ್ನೆಯ ಪ್ರಕಾರ ಮಂಗಳಸೂತ್ರದ ಪೆಂಡೆಂಟ್‍ನ ಬಣ್ಣವನ್ನು ಸಹ ನೀವೇ ನಿರ್ಧರಿಸಬಹುದು.

    ಗಂಡನ ಹೆಸರಿನ ಮಂಗಳಸೂತ್ರ
    ನೀವು ನಿಮ್ಮ ಗಂಡನ ಹೆಸರನ್ನು ಸೊಗಸಾದ ಫಾಂಟ್‍ನಲ್ಲಿ ಕಸ್ಟಮೈಸ್ ಮಾಡಬಹುದು ಮತ್ತು ಅವರ ಪೆಂಡೆಂಟ್ ಅನ್ನು ಮಂಗಳಸೂತ್ರದಲ್ಲಿ ತಯಾರಿಸಬಹುದು. ಗಂಡನ ಹೆಸರು ತುಂಬಾ ದೊಡ್ಡದಾಗಿದ್ದರೆ, ನೀವು ಅವರ ಹೆಸರಿನ ಮೊದಲ ಅಕ್ಷರದಿಂದ ಮಾಡಿದ ಪೆಂಡೆಂಟ್ ಅನ್ನು ಪಡೆಯಬಹುದು. ಇಷ್ಟೇ ಅಲ್ಲದೇ ನಿಮ್ಮ ಮತ್ತು ನಿಮ್ಮ ಗಂಡನ ಹೆಸರಿನಲ್ಲಿ ಸಂಯೋಜಿತ ಪೆಂಡೆಂಟ್ ಸಹ ನೀವು ಮಾಡಿಸಬಹುದು. ಒಂದು ವೇಳೆ ನಿಮ್ಮ ಗಂಡನ ಹೆಸರನ್ನು ಬರೆಸಲು ಇಷ್ಟಪಡದಿದ್ದರೆ, ನಿಮ್ಮ ಗಂಡನ ಯಾವುದೇ ನೆಚ್ಚಿನ ಹೆಸರನ್ನು ಪೆಂಡೆಂಟ್ ಆಗಿ ಮಾಡಿಸಬಹುದು.  ಇದನ್ನೂ ಓದಿ: ಸಮ್ಮತಿಯ ಸೆಕ್ಸ್‌ನಿಂದ ಅವಿವಾಹಿತೆ ಗರ್ಭಧಾರಣೆ – 20 ವಾರಗಳ ಬಳಿಕ ಗರ್ಭಪಾತಕ್ಕೆ ಅವಕಾಶವಿಲ್ಲ: ಹೈಕೋರ್ಟ್

    ಡಿಸೈನರ್ ಮಂಗಳಸೂತ್ರ
    ಕೈ ಮಂಗಳಸೂತ್ರದಲ್ಲಿ ನೀವು ಹಲವಾರು ಡಿಸೈನರ್ ಮಂಗಳಸೂತ್ರ ಇರುವುದನ್ನು ಕಾಣಬಹುದು. ಬಹು-ಸರಪಳಿ ಮಂಗಳಸೂತ್ರ ಅಥವಾ ಟಸೆಲ್ ಮಂಗಳಸೂತ್ರದ ಜೊತೆಗೆ ನೀವು ಕಂಕಣ ಶೈಲಿಯ ಮಂಗಳಸೂತ್ರವನ್ನು ಸಹ ಕಾಣಬಹುದು. ಅಲ್ಲದೇ ಮಂಗಳಸೂತ್ರದಲ್ಲಿನ ಅನೇಕ ಪವಿತ್ರ ಪದಗಳು ಮತ್ತು ಚಿಹ್ನೆಗಳ ಹೊರತಾಗಿ, ನಿಮ್ಮ ಮದುವೆಯ ದಿನಾಂಕವನ್ನು ಪೆಂಡೆಂಟ್ ಆಗಿ ಪಡೆಯಬಹುದು. ಈ ರೀತಿಯ ಮಂಗಳಸೂತ್ರಗಳು ಅತ್ಯಂತ ವಿಶಿಷ್ಟವಾಗಿ ಕಾಣುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಮಹಿಳೆಯ ಕುತ್ತಿಗೆ ಕೊಯ್ದು ಬರ್ಬರ ಕೊಲೆ – ಚಿನ್ನಾಭರಣ ದೋಚಿ ಕಳ್ಳರು ಪರಾರಿ

    ಮಹಿಳೆಯ ಕುತ್ತಿಗೆ ಕೊಯ್ದು ಬರ್ಬರ ಕೊಲೆ – ಚಿನ್ನಾಭರಣ ದೋಚಿ ಕಳ್ಳರು ಪರಾರಿ

    ಚಿಕ್ಕಬಳ್ಳಾಪುರ: ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯನ್ನು ಹತ್ಯೆ ಮಾಡಿರುವ ದುಷ್ಕರ್ಮಿಗಳು, ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಐಶ್ವರ್ಯ ಬಡಾವಣೆಯಲ್ಲಿ ನಡೆದಿದೆ.

    ಅಂಚನಾ ತುಳಸಿಯಾನ (57 ) ಕೊಲೆಯಾದ ಮಹಿಳೆ. ಮಹಿಳೆಯ ಕುತ್ತಿಗೆಗೆ ಇರಿದು ಕೊಲೆ ಮಾಡಿರುವ ಖದೀಮರು, ಕೊಲೆ ನಂತರ ಮನೆಯಲ್ಲಿದ್ದ 12 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 4 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ. ಮನೆಯವರು ಅಂಗಡಿಗೆ ಹೋಗಿದ್ದನ್ನು ಕಂಡು ಪರಿಚಿತರೇ ದುಷ್ಕೃತ್ಯ ನಡೆಸಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಇದನ್ನೂ ಓದಿ: ಹೂಮಾಲೆಯಲ್ಲಿ ಹುಳು ಇರುತ್ತೆ ನನಗೆ ಹಾಕ್ಬೇಡಿ – ಕಾರ್ಯಕರ್ತರ ವಿರುದ್ಧ ಸಿದ್ದರಾಮಯ್ಯ ಗರಂ

    ಮನೆಯಲ್ಲಿದ್ದ ಸಿಸಿಟಿವಿಗಳನ್ನು ಕಿತ್ತಾಕಿ ಡಿವಿಆರ್‌ ಅನ್ನು ಕಿಡಿಗೇಡಿಗಳು ತೆಗೆದುಕೊಂಡು ಹೋಗಿದ್ದಾರೆ. ಇನ್ನೂ ಮನೆಯಲ್ಲಿ ಯಾವುದೇ ವಸ್ತುಗಳನ್ನು ಮುಟ್ಟದ ಹಂತಕರು, ಕೇವಲ ಲಾಕರ್‌ಗಳನ್ನು ತೆರೆದು ಚಿನ್ನಾಭರಣ ನಗದು ಹಣ ಕದಿದ್ದಾರೆ. ಪರಿಚಯದವರೇ ಸಂಚು ರೂಪಿಸಿ ಫ್ರೀ ಪ್ಲಾನ್ ಆಗಿ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಕೊಲೆಯಾದ ಸ್ಥಳಕ್ಕೆ ಈಶಾನ್ಯ ವಿಭಾಗ ಡಿಸಿಪಿ ಅನೂಪ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ದೇಗುಲದ ಅರ್ಚಕರ ತಲೆ ಕಡಿಯೋದಾಗಿ ಬೆದರಿಕೆ ಪತ್ರ – ಉದಯಪುರ ಮತ್ತೆ ಉದ್ವಿಗ್ನ

    ಸ್ಥಳಕ್ಕೆ ಬೆರಳಚ್ಚು ತಂಡ, ಶ್ವಾನದಳದಿಂದ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯ ಕೊಲೆಯಿಂದಾಗಿ ಇಡೀ ಬಡಾವಣೆಯ ಜನತೆ ಬೆಚ್ಚಿ ಬಿದ್ದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • BBMP ಯಮ ಸ್ವರೂಪಿ ಕಸದ ಲಾರಿಗೆ ಮತ್ತೊಂದು ಬಲಿ – ಅಪಘಾತದಲ್ಲಿ ಮಹಿಳೆ ಸಾವು

    BBMP ಯಮ ಸ್ವರೂಪಿ ಕಸದ ಲಾರಿಗೆ ಮತ್ತೊಂದು ಬಲಿ – ಅಪಘಾತದಲ್ಲಿ ಮಹಿಳೆ ಸಾವು

    ಬೆಂಗಳೂರು: ಬಿಬಿಎಂಪಿ ಯಮ ಸ್ವರೂಪಿ ಕಸದ ಲಾರಿಗೆ ಇಂದು ಮತ್ತೊಂದು ಜೀವ ಬಲಿಯಾಗಿದೆ. ಮುಂದೆ ಚಲಿಸುತ್ತಿದ್ದ ಬೈಕ್‌ಗೆ ಹಿಂದಿನಿಂದ ವೇಗವಾಗಿ ಬಂದು ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

    ವಿಜಯ ಕಲಾ (37) ಅಪಘಾತದಲ್ಲಿ ಮೃತಪಟ್ಟ ಮಹಿಳೆ. ನಾಗರಭಾವಿ ರಿಂಗ್‌ ರಸ್ತೆಯಲ್ಲಿ ಬೆಳಗ್ಗೆ 9:50ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಬೈಕ್‌ ಚಲಾಯಿಸುತ್ತಿದ್ದ ವಿಜಯ ಕಲಾ ಅವರ ಪತಿ ಯೋಗೇಂದ್ರ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: BBMP ಕಸದ ಲಾರಿಗೆ ಮತ್ತೊಂದು ಬಲಿ – ಫುಡ್ ಡೆಲಿವರಿ ಬಾಯ್ ಸ್ಥಳದಲ್ಲೇ ಸಾವು

    ಯೋಗೇಂದ್ರ ಅವರು ಪತ್ನಿ ವಿಜಯ ಕಲಾ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಹಿಂದೆಯಿಂದ ವೇಗವಾಗಿ ಬಂದ ಬಿಬಿಎಂಪಿ ಕಸದ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ವಿಜಯ ಕಲಾ ಮೃತಪಟ್ಟಿದ್ದಾರೆ. ಅವರ ಪತಿ ಯೋಗೇಂದ್ರ ಸ್ಥಿತಿ ಗಂಭೀರವಾಗಿದೆ. ಘಟನೆ ಸಂಬಂಧ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಬಿಬಿಎಂಪಿ ಕಸದ ಲಾರಿಗೆ ಜೀವಗಳು ಬಲಿಯಾಗುತ್ತಿವೆ. ಆದರೆ ಬಿಬಿಎಂಪಿ ಇದನ್ನು ಇನ್ನೂ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಈ ಹಿಂದೆಯೂ ಕಸದ ಲಾರಿಗೆ ನಾಲ್ಕು ಜೀವಗಳು ಬಲಿಯಾಗಿದ್ದವು. ಲಾರಿ ಚಾಲಕರ ಅತಿಯಾದ ವೇಗ ಹಾಗೂ ಮದ್ಯ ಸೇವನೆ ಮಾಡಿ ವಾಹನ ಚಾಲಾಯಿಸಿದ್ದೆ ಘಟನೆಗೆ ಕಾರಣ ಎಂದು ಪೊಲೀಸ್ ತನಿಖೆ ವೇಳೆ ದೃಢಪಟ್ಟಿದೆ. ಆದರೆ ಬಿಬಿಎಂಪಿ ಮಾತ್ರ ಅದಕ್ಕೂ ನನಗೂ ಸಂಬಂಧವೇ ಇಲ್ಲವೆಂಬಂತೆ ನಡೆದುಕೊಳ್ಳುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಒಂದು ಕಾಲದಲ್ಲಿ ಗುರು, ಈಗ ಬೇರೆ ಗುರು ಬಂದಿದ್ದಾರೆ: ಎಂಟಿಬಿ

    Live Tv
    [brid partner=56869869 player=32851 video=960834 autoplay=true]

  • ಅಮೆರಿಕದಲ್ಲಿ ಗರ್ಭಪಾತ ಹಕ್ಕು ನಿಷೇಧ: ಆಸ್ಟ್ರೇಲಿಯಾದಲ್ಲಿ ಹೋರಾಟದ ಕಿಚ್ಚು

    ಅಮೆರಿಕದಲ್ಲಿ ಗರ್ಭಪಾತ ಹಕ್ಕು ನಿಷೇಧ: ಆಸ್ಟ್ರೇಲಿಯಾದಲ್ಲಿ ಹೋರಾಟದ ಕಿಚ್ಚು

    ಕಾನ್ಬೆರಾ: ಗರ್ಭಪಾತದ ಹಕ್ಕನ್ನು ನಿಷೇಧಿಸಿರುವ ಅಮೆರಿಕ ಸರ್ಕಾರದ ವಿರುದ್ಧ ಹೋರಾಟ ಭುಗಿಲೆದ್ದಿದೆ. ಅಮೆರಿಕ ಮಹಿಳೆಯರ ಹೋರಾಟ ಬೆಂಬಲಿಸಿ ಆಸ್ಟ್ರೇಲಿಯನ್ನರೂ ತಮ್ಮ ದೇಶದಲ್ಲಿ ಹೋರಾಟ ನಡೆಸುತ್ತಿದ್ದಾರೆ.

    ಗರ್ಭಪಾತ ಹಕ್ಕು ನಿಷೇಧವನ್ನು ಖಂಡಿಸಿ ಆಸ್ಟ್ರೇಲಿಯಾದ ಮೆಲ್ಬರ್ನ್ ಸುಮಾರು 15,000ಕ್ಕೂ ಹೆಚ್ಚು ಮಂದಿ ಘೋಷಣಾ ಫಲಕಗಳನ್ನು ಹಿಡಿದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಇದನ್ನೂ ಓದಿ: 48 ವರ್ಷಗಳ ಹಿಂದೆ ಹೀಗಿತ್ತು ನನ್ನ ರೆಸ್ಯೂಮ್ – ಉದ್ಯೋಗಾಕಾಂಕ್ಷಿಗಳಿಗೆ ಆತ್ಮವಿಶ್ವಾಸ ತುಂಬಿದ ಬಿಲ್‌ಗೇಟ್ಸ್

    ನಾವು ಆಸ್ಟ್ರೇಲಿಯಾದ ಮಹಿಳೆಯರು ಮಾತ್ರವಲ್ಲ ವಿಶ್ವದಾದ್ಯಂತ ಇರುವ ಮಹಿಳೆಯರ ಹಕ್ಕುಗಳ ರಕ್ಷಣೆಗೂ ನಿಲ್ಲುತ್ತೇವೆ. ಅಮೆರಿದಲ್ಲಿ ಲಕ್ಷಾಂತರ ಮಹಿಳೆಯರು ತಮ್ಮ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ. ಇದರಿಂದ ನಾವೂ ಕೋಪಗೊಂಡಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೋಮಾದಲ್ಲಿರುವ ಮಗನ ಜೀವ ಉಳಿಸಲು ದೇವರ ಮೊರೆ ಹೋದ ತಾಯಿ – ಮಗು ಚೇತರಿಕೆ!

    ಈಗ ಅಮೆರಿಕದಲ್ಲಿರುವಂತೆ ಆಸ್ಟ್ರೇಲಿಯಾದ ರಾಜ್ಯಗಳೂ ಗರ್ಭಪಾತದ ಕಾನೂನುಗಳನ್ನು ಹೊರಡಿಸಲು ಮುಂದಾಗಿವೆ. ದೇಶದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ನ್ಯೂ ಸೌತ್‌ವೆಲ್ 2019ರಲ್ಲಿ ಗರ್ಭಪಾತವನ್ನು ಕಾನೂನುಬದ್ಧಗೊಳಿಸಿದೆ. ಅದುವೇ ಕಾನೂನು ಮಾಡಿದ ಕೊನೆಯ ರಾಜ್ಯ. ಇದೀಗ ಅಮೆರಿಕದಲ್ಲಿ ಕಾನೂನು ಅನುಷ್ಟಾನಗೊಂಡ ಬೆನ್ನಲ್ಲೇ ಆಸ್ಟ್ರೇಲಿಯಾದಲ್ಲಿಯೂ ಕಾನೂನು ಜಾರಿಗೊಳಿಸಲಾಗುತ್ತಿದೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ.

    ಏನಿದು ಘಟನೆ?: ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ಅಮೆರಿಕದ ಸುಪ್ರೀಂ ಕೋರ್ಟ್ ಈಚೆಗಷ್ಟೇ ರದ್ದುಗೊಳಿಸಿತು. ಗರ್ಭಪಾತಕ್ಕೆ ಸಂಬಂಧಿಸಿದಂತೆ ಸಾಂವಿಧಾನಿಕ ಹಕ್ಕು ಎಂದು ಘೋಷಿಸಲಾಗಿದ್ದ 1973ರ ತೀರ್ಪನ್ನು ಅಮೆರಿಕ ಸುಪ್ರೀಂ ಕೋರ್ಟ್ ಕಳೆದ ಶುಕ್ರವಾರ ರದ್ದುಗೊಳಿಸಿತು. ಈ ನಿರ್ಧಾರವನ್ನು ವಿರೋಧಿಸಿ ದೇಶದ ಪ್ರಮುಖ ನಗರಗಳಲ್ಲಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ.

    Live Tv

  • 24ರ ಯುವತಿ ಮೇಲೆ ಗ್ಯಾಂಗ್‌ರೇಪ್ – ಗರ್ಭಿಣಿಯಾಗಿದ್ದಾಳೆಂದು ಹಲ್ಲೆ ಮಾಡಿ ಗರ್ಭಪಾತ

    ಲಕ್ನೋ: ನಾಲ್ವರು ಕಾಮುಕರು ಯುವತಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆ ಗರ್ಭ ಧರಿಸಿದ ಘಟನೆ ನಡೆದಿದೆ. ಗರ್ಭಿಣಿಯಾಗಿರುವ ವಿಷಯ ತಿಳಿದ ಕಿಡಿಗೇಡಿಗಳು ಆಕೆಯ ಮೇಲೆ ಹಲ್ಲೆ ನಡೆಸಿ ಗರ್ಭಪಾತ ಆಗುವಂತೆ ಮಾಡಿದ್ದಾರೆ.

    ಉತ್ತರಪ್ರದೇಶದ ದೇವಬಂದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಕುರಿತು ಸಂತ್ರಸ್ತ ಯುವತಿ ದೂರು ನೀಡಿದ್ದಾಳೆ. ಇದನ್ನೂ ಓದಿ: 48 ವರ್ಷಗಳ ಹಿಂದೆ ಹೀಗಿತ್ತು ನನ್ನ ರೆಸ್ಯೂಮ್ – ಉದ್ಯೋಗಾಕಾಂಕ್ಷಿಗಳಿಗೆ ಆತ್ಮವಿಶ್ವಾಸ ತುಂಬಿದ ಬಿಲ್‌ಗೇಟ್ಸ್

    ಈ ಕುರಿತು ಮಾಹಿತಿ ನೀಡಿದ ಪೊಲೀಸರು, ಯುವತಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಲಾಗಿತ್ತು. ಆಕೆ ಗರ್ಭಿಣಿಯಾಗಿದ್ದಾಳೆಂದು ತಿಳಿದ ಕೂಡಲೇ ಆಕೆಯನ್ನು ಕೊಲ್ಲಲು ಮುಂದಾಗಿದ್ದಾರೆ. ಜೂನ್ 25 ರಂದು ಆಕೆ ಅವರಿಂದ ತಪ್ಪಿಸಿಕೊಂಡು ಮನೆಗೆ ಮರಳಿದ್ದಳು. ಜೂನ್ 26 ರಂದು ನಾಲ್ವರೂ ಆಕೆಯ ಮನೆಗೆ ಬಂದು ಮತ್ತೆ ಆಕೆಯ ಮೇಲೆ ಹಲ್ಲೆ ನಡೆಸಲಾಗಿ ಆಕೆಗೆ ಗರ್ಭಪಾತವಾಗಿದೆ ಎಂದು ಎಸ್ಪಿ ಸೂರಜ್ ರೈ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಭಾಸ್, ಅನುಷ್ಕಾ ಶೆಟ್ಟಿ ಕೊಟ್ರು ಗುಡ್‌ನ್ಯೂಸ್: ಮತ್ತೆ ಒಂದಾದ ‘ಬಾಹುಬಲಿ’ ಜೋಡಿ

    ದೂರಿನಲ್ಲಿ ಏನಿದೆ?
    ಜನವರಿಯಲ್ಲಿ ತಾನು ಒಬ್ಬಂಟಿಯಾಗಿರುವಾಗ ಯುವಕನೊಬ್ಬ ತನ್ನ ಮನೆಗೆ ಪ್ರವೇಶಿಸಿದ್ದಾನೆ. ಆಕೆಯ ಮೇಲೆ ಅತ್ಯಾಚಾರ ಎಸಗಿ ಕೃತ್ಯವನ್ನು ಚಿತ್ರೀಕರಿಸಿದ್ದಾನೆ. ದೂರು ನೀಡಿದರೆ ಪೋಷಕರನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ವೀಡಿಯೋವನ್ನು ಜಾಲತಾಣದಲ್ಲಿ ಹರಿಯಬಿಡುವುದಾಗಿ ಹೆದರಿಸಿದ್ದಾನೆ. ನಂತರ ನನ್ನ ಮೇಲಿನ ಲೈಂಗಿಕ ದೌರ್ಜನ್ಯ ಮುಂದುವರಿಸಿದ್ದಾನೆ. ಅಲ್ಲದೆ ದೇವಬಂದ್‌ನ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಒತ್ತೆಯಾಳಾಗಿರಿಸಿ ಇತರ ಮೂವರಿಂದಲೂ ಅತ್ಯಾಚಾರ ಮಾಡಿಸಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

    Live Tv

  • ಯುವತಿ ಸ್ನೇಹಿತೆಯಾದ ಮಾತ್ರಕ್ಕೆ ಲೈಂಗಿಕ ಸಂಬಂಧಕ್ಕೆ ಒಪ್ಪಿಗೆಯಿದೆ ಎಂದರ್ಥವಲ್ಲ – ಹೈಕೋರ್ಟ್

    ಯುವತಿ ಸ್ನೇಹಿತೆಯಾದ ಮಾತ್ರಕ್ಕೆ ಲೈಂಗಿಕ ಸಂಬಂಧಕ್ಕೆ ಒಪ್ಪಿಗೆಯಿದೆ ಎಂದರ್ಥವಲ್ಲ – ಹೈಕೋರ್ಟ್

    ಮುಂಬೈ: ಯುವತಿಯೊಬ್ಬಳು ಸ್ನೇಹಿತೆಯಾದ ಮಾತ್ರಕ್ಕೆ ಆಕೆಯೊಂದಿಗೆ ಲೈಂಗಿಕ ಸಂಬಂಧಕ್ಕೆ ಒಪ್ಪಿಗೆಯಿದೆ ಎಂದರ್ಥವಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

    ಮದುವೆಯಾಗುವ ನೆಪದಲ್ಲಿ ಯುವತಿ ಗರ್ಭ ಧರಿಸುವಂತೆ ಮಾಡಿ ಬಂಧನಕ್ಕೆ ಒಳಗಾಗಿರುವ ಆರೋಪಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋಟ್ ತಿರಸ್ಕರಿಸಿದೆ. ಇದನ್ನೂ ಓದಿ: IND Vs SA T20 – ರದ್ದಾದ ಪಂದ್ಯದ ಶೇ.50 ರಷ್ಟು ಟಿಕೆಟ್ ಹಣ ಜುಲೈ 1ರಿಂದ ವಾಪಸ್

    court order law

    ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ ಮುಂಬೈ ನಗರದ ನಿವಾಸಿ ಆಶಿಷ್ ಚಾಕೋರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರಿದ್ದ ಏಕಸದಸ್ಯ ಪೀಠವು ಜಾಮೀನು ನೀಡಲು ನಿರಾಕರಿಸಿದೆ.

    STOP RAPE

    ಸ್ನೇಹದಿಂದ ಇರುವುದನ್ನೇ ನೆಪವಾಗಿಟ್ಟುಕೊಂಡು ಲೈಂಗಿಕ ಸಂಬಂಧಕ್ಕೆ ಆಕೆಯ ಒಪ್ಪಿಗೆ ಇದೆ ಎಂದು ತಾನೆ ಅಂದುಕೊಳ್ಳುವಂತಿಲ್ಲ. ಹೀಗಾಗಿ ಆರೋಪಿಗಳ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸಬೇಕು ಎಂದು ಕೋರ್ಟ್ ಸೂಚಿಸಿದೆ. ಇದನ್ನೂ ಓದಿ: ಅಮರನಾಥ ಯಾತ್ರೆಗೆ ಎರಡೇ ದಿನ: ಯಾತ್ರಾರ್ಥಿಗಳಿಗೆ ಆಧಾರ್, ಸರ್ಕಾರಿ ಗುರುತಿನ ಚೀಟಿ ಕಡ್ಡಾಯ

    ಈ ಬಗ್ಗೆ ಹೇಳಿಕೆ ನೀಡಿರುವ ಸಂತ್ರಸ್ತೆ, ಚಾಕೋರ್ ಜೊತೆ ಸ್ನೇಹದಿಂದ ಇದ್ದೆ, ನಂತರದ ದಿನಗಳಲ್ಲಿ ಆತ ನನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ಸಂಬಂಧಕ್ಕೆ ಒತ್ತಾಯಿಸಿದ್ದಾನೆ. ನಾನು ಗರ್ಭಿಣಿ ಆಗುತ್ತಿದ್ದಂತೆ ಮದುವೆಯಾಗಲು ನಿರಾಕರಿಸಿದ್ದಾನೆ. ಈ ಆರೋಪದಿಂದ ಮುಕ್ತಗೊಳ್ಳಲು ಆತ ನನಗೂ ಸಹ ಲೈಂಗಿಕ ಸಂಬಂಧಕ್ಕೆ ಒಪ್ಪಿಗೆ ಇದೆ ಎಂದು ಹೇಳಿರುವುದಾಗಿ ಹೇಳಿಕೆ ನೀಡಿದ್ದಾಳೆ.

    Live Tv

  • ಶವದ ಮುಂದೆ ಕೋತಿ ಕಿರಿಕ್ – ಅಂತ್ಯ ಸಂಸ್ಕಾರಕ್ಕೆ ಬಿಡದೇ ಕಾಟ

    ಶವದ ಮುಂದೆ ಕೋತಿ ಕಿರಿಕ್ – ಅಂತ್ಯ ಸಂಸ್ಕಾರಕ್ಕೆ ಬಿಡದೇ ಕಾಟ

    ಕಲಬುರಗಿ: ಜಿಲ್ಲೆಯ ಮಾಲಗತ್ತಿ ಗ್ರಾಮದ ಶ್ಯಾಮಲಾ ಎಂಬುವವರು ನಿನ್ನೆ ಮಧ್ಯಾಹ್ನ ಸಾವನ್ನಪ್ಪಿದರು. ಬಳಿಕ ಸಂಜೆ ಸಾವಿನ ಮನೆಗೆ ಬಂದ ಕೋತಿಯೊಂದು ಶವ ಸಂಸ್ಕಾರ ಮಾಡಲು ಬಿಡದೇ ಸಾವಿನ ಮನೆಯಲ್ಲೇ ಕೂತಿರುವ ವಿಚಿತ್ರ ಘಟನೆಯೊಂದು ನಡೆದಿದೆ.

    ಕಾಯಿಲೆಯಿಂದ ಬಳಲುತ್ತಿದ್ದ ಶ್ಯಾಮಲಾ ನಿನ್ನೆ ಮಧ್ಯಾಹ್ನ ಸಾವನ್ನಪ್ಪಿದರು. ಬಳಿಕ ಸಂಜೆ ಕೋತಿಯೊಂದು ಶ್ಯಾಮಲಾ ಮನೆಗೆ ಬಂದಿದೆ. ಈ ವೇಳೆ ಗ್ರಾಮಸ್ಥರು ಹಾಗೂ ಸಂಬಂಧಿಕರು ಶವದ ಮುಂದೆ ಕೂತಿದ್ದರು. ಬಳಿಕ ಕೋತಿ ಕೂಡ ಶವದ ಮುಂದೆ ಬಂದು ಕೂತಿದೆ ಆ ಬಳಿಕ ಯಾರನ್ನು ಕೂಡ ಶವವನ್ನು ಮುಟ್ಟಲು ಬಿಡುತ್ತಿಲ್ಲ. ಇದನ್ನೂ ಓದಿ: ಅರ್ಚಕನ ಜೊತೆ ಪರಾರಿಯಾಗಿದ್ದ ವಿವಾಹಿತೆ ಕಾಡಂಚಿನಲ್ಲಿ ಪ್ರತ್ಯಕ್ಷ – ಮದ್ವೆಯಾಗೋದಾಗಿ ನಂಬಿಸಿ ಮೋಸ

    ನಿನ್ನೆ ಮಧ್ಯಾಹ್ನದಿಂದಲೇ ಸಾವಿನ ಮನೆಯಲ್ಲಿ ಶವದ ಪಕ್ಕದಲ್ಲಿ ಬಂದು ಕೂತಿರುವ ಕೋತಿಯಿಂದಾಗಿ ಯಾರೂ ಕೂಡ ಹತ್ತಿರ ಬರಲು ಪ್ರಯತ್ನ ಮಾಡುತ್ತಿಲ್ಲ. ಕೋತಿಯನ್ನು ಶವದ ಬಳಿಯಿಂದ ಓಡಿಸಲು ಪ್ರಯತ್ನಿಸಿದರೂ ಕೂಡ ಕೋತಿ ಮಾತ್ರ ಜಾಗ ಬಿಟ್ಟು ಕದಲುತ್ತಿಲ್ಲ. ಹಾಗಾಗಿ ಅಂತ್ಯ ಸಂಸ್ಕಾರ ಮಾಡೋದಕ್ಕೆ ಶವ ತೆಗೆದುಕೊಂಡು ಹೋಗಲು ಜನ ಭಯ ಪಡುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಇಲಾಖೆಯವರು ಕ್ರಮ ಕೈಗೊಳ್ಳಬೇಕಾಗಿದೆ. ಇದನ್ನೂ ಓದಿ: ಯಾರು ಸ್ತ್ರೀಯರಿಗೆ ಅಪಮಾನ ಮಾಡುತ್ತಾರೋ ಅವರ ಪತನ ನಿಶ್ಚಿತ – ಕಂಗನಾ ಹಳೇ ವೀಡಿಯೋ ವೈರಲ್

    ಈ ನಡುವೆ ಕೋತಿಯ ಈ ವಿಚಿತ್ರ ಉಪಟಳದಿಂದಾಗಿ ಸಂಬಂಧಿಕರು ಶವಸಂಸ್ಕಾರ ಮಾಡಲಾಗದೆ ಪರದಾಡುವಂತಾಗಿದೆ. ಜೊತೆಗೆ ಈ ಹಿಂದೆ ಎಲ್ಲೂ ಕೂಡ ಈ ಕೋತಿ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಏಕಾಏಕಿ ಈ ರೀತಿ ನಡೆಯುತ್ತಿರುವುದು ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.

    Live Tv

  • ಕೊಲೆಯಾದ ಮಹಿಳೆಯರ ಸುಳಿವು ನೀಡಿದವರಿಗೆ 1 ಲಕ್ಷ ಬಹುಮಾನ

    ಕೊಲೆಯಾದ ಮಹಿಳೆಯರ ಸುಳಿವು ನೀಡಿದವರಿಗೆ 1 ಲಕ್ಷ ಬಹುಮಾನ

    ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ನಡೆದಿರುವ ಇಬ್ಬರು ಮಹಿಳೆಯರ ಬರ್ಬರ ಕೊಲೆಯನ್ನು ಕಂಡು ಜನರು ಬೆಚ್ಚಿ ಬಿದ್ದಿದ್ರೆ, ಪೊಲೀಸರು ಪ್ರಕರಣ ಬೇಧಿಸಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಯಾಕೆಂದರೆ ಕೊಲೆಯಾಗಿರುವ ಮಹಿಳೆಯರ ಗುರುತು ಇದುವರೆಗೂ ಪತ್ತೆಯಾಗಿಲ್ಲ. ಹೀಗಾಗಿ ಇದೀಗ ಮಂಡ್ಯ ಪೊಲೀಸರು ಆ ಮಹಿಳೆಯರ ಗುರುತು ಹೇಳಿದ್ರೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

    ಏನಿದು ಪ್ರಕರಣ?
    ಮಂಡ್ಯ ಜಿಲ್ಲೆಯಲ್ಲಿ ದಿನೇ ದಿನೇ ಕೊಲೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದಲ್ಲೂ ಇದೇ ತಿಂಗಳ 7ನೇ ತಾರೀಖಿನಂದು ಬೆಳಕಿಗೆ ಬಂದಿರುವ ಇಬ್ಬರು ಮಹಿಳೆಯರ ಬರ್ಬರ ಕೊಲೆಯಂತು ಇಡೀ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ. ಈ ಕೊಲೆಗಳು ಯಾರ ಊಹೆಗೂ ಸಿಗದ ಹಾಗೆ ಜರುಗಿರುವ ಕಾರಣ ಮಂಡ್ಯ ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿದೆ.

    ಇದೇ ತಿಂಗಳ 7ರಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಗ್ರಾಮದ ಕೆರೆಯ ಕಾಲುವೆಯಲ್ಲಿ ಸುಮಾರು 35 ವರ್ಷದ ಮಹಿಳೆಯನ್ನು ಕೊಲೆ ಮಾಡಿ ದೇಹವನ್ನು 2 ತುಂಡು ಮಾಡಿ ಸೊಂಟದ ಕೆಳಭಾಗದ ತುಂಡನ್ನು ಕಾಲು ಕಟ್ಟಿ ಎಸೆದು ಹೋಗಿರುವುದು ಪತ್ತೆಯಾಗಿತ್ತು. ಇದೇ ಮಾದರಿಯಲ್ಲಿ ಸುಮಾರು 28 ರಿಂದ 30 ವರ್ಷದ ಮಹಿಳೆಯ ಶವವೂ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ಚಿಕ್ಕದೇವರಾಜ ನಾಲೆಯ ಪಕ್ಕದ ಜಮೀನಿನಲ್ಲಿ ಕಾಣಿಸಿಕೊಂಡಿತ್ತು. ಈ 2 ಭೀಕರ ಕೊಲೆಯನ್ನು ಕಂಡ ಜನರು ಬೆಚ್ಚಿಬಿದ್ದಿದ್ದರು. ಇದನ್ನೂ ಓದಿ: ಮಹಾರಾಷ್ಟ್ರ ವಿಧಾನಸಭೆ ವಿಸರ್ಜನೆ – ಸುಳಿವು ಕೊಟ್ಟ ಸಂಜಯ್ ರಾವತ್

    ಪೊಲೀಸರಿಗೆ ತಲೆನೋವು:
    ಈ ಎರಡೂ ಕೊಲೆಗಳನ್ನು ಭೇದಿಸುವ ನಿಟ್ಟಿನಲ್ಲಿ ಪಾಂಡವಪುರ ಹಾಗೂ ಅರಕೆರೆ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡ ಪೊಲೀಸರು 100 ಮಂದಿಯ ತಂಡವನ್ನು ನಿಯೋಜಿಸಿ, ಕೊಲೆಯಾಗಿರುವ ಮಹಿಳೆಯರ ಮುಖದ ಭಾಗವನ್ನು ಹುಡುಕಲು ಶೋಧ ಮಾಡುತ್ತಾರೆ. ಆದರೆ ಇದುವರೆಗೆ ಮಹಿಳೆಯರ ಮುಖದ ಭಾಗದ ದೇಹದ ತುಂಡು ಪತ್ತೆಯಾಗಿಲ್ಲ. ಮೊದಲು ಕೊಲೆಯಾದ ಮಹಿಳೆಯರು ಯಾರು ಎಂದು ಪತ್ತೆ ಮಾಡಿದರೆ ಮಾತ್ರವೇ ಹಂತಕರನ್ನು ಹಿಡಿಯಲು ಸಾಧ್ಯವಾಗುತ್ತದೆ. ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರ ಯಾವುದೇ ಕಾರಣಕ್ಕೂ ಉಳಿಯುವುದಿಲ್ಲ: ಈಶ್ವರಪ್ಪ

    ಸುಳಿವಿಗೆ 1 ಲಕ್ಷ ಬಹುಮಾನ:
    ಈ ಕೇಸ್‌ನಲ್ಲಿ ಕರ್ನಾಟಕ ರಾಜ್ಯವಲ್ಲದೇ ಅಕ್ಕ-ಪಕ್ಕದ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ನಾಪತ್ತೆಯಾಗಿರುವ ಮಹಿಳೆಯರ ವರದಿಯನ್ನು ತೆಗೆದು ನೋಡಿದಾಗಲೂ ಇಲ್ಲಿ ದೊರೆತಿರುವ ಮಹಿಳೆಯರ ಶವದ ತುಂಡಿಗೆ ಹೊಂದಾಣಿಕೆಯಾಗಿಲ್ಲ. ಹೀಗಾಗಿ ಮಹಿಳೆಯರು ಧರಿಸಿರುವ ಬಟ್ಟೆಯ ಆಧಾರವನ್ನು ಇಟ್ಟುಕೊಂಡು ಪೊಲೀಸರು ಕರಪತ್ರ ಅಭಿಯಾನವನ್ನು ಮಾಡಿದ್ದಾರೆ. ಮಂಡ್ಯ ಪೊಲೀಸ್ ಇಲಾಖೆ ಮಹಿಳೆಯರ ಗುರುತು ಹೇಳಿದರೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ. ಅಲ್ಲದೇ ತಮ್ಮ ಅಕ್ಕ-ಪಕ್ಕದ ಮನೆಯವರು ಹಲವು ದಿನಗಳಿಂದ ಕಾಣೆಯಾಗಿದ್ದರೆ, ಅವರ ಮಾಹಿತಿಯನ್ನು ನೀಡಿ ಎಂದು ಪ್ರಕಟಣೆಯನ್ನು ಹೊರಡಿಸಿದ್ದಾರೆ.

    Live Tv