Tag: women

  • ಸೀಟಿಗಾಗಿ ಮೆಟ್ರೋದಲ್ಲಿ ಮಹಿಳೆಯರಿಬ್ಬರ ಕಿತ್ತಾಟ – ವೀಡಿಯೋ ವೈರಲ್

    ಸೀಟಿಗಾಗಿ ಮೆಟ್ರೋದಲ್ಲಿ ಮಹಿಳೆಯರಿಬ್ಬರ ಕಿತ್ತಾಟ – ವೀಡಿಯೋ ವೈರಲ್

    ನವದೆಹಲಿ: ಆಫೀಸ್‍ಗೆ ಹೋಗುವ ಸಮಯಗಳಲ್ಲಿ ಮೆಟ್ರೋದಲ್ಲಿ ಸೀಟ್ ಹಿಡಿದುಕೊಳ್ಳುವುದು ದೊಡ್ಡ ಕೆಲಸವಾಗಿ ಹೋಗಿದೆ. ಯಾವಾಗಲೂ ಕಡಿಮೆ ಜನ ಇರುವ ಹಾಗೂ ಕುಳಿತುಕೊಳ್ಳಲು ಸೀಟ್ ಖಾಲಿ ಇರುವ ಸ್ಥಳಗಳನ್ನೇ ಜನರು ಹೆಚ್ಚಾಗಿ ಹುಡುಕುತ್ತಾರೆ. ಒಂದು ಸೀಟು ಸಿಕ್ಕರೆ ಅದನ್ನು ಮತ್ತೊಬ್ಬರಿಗೆ ಬಿಟ್ಟುಕೊಡಲು ಕಷ್ಟಪಡುತ್ತಾರೆ.

    ಸದ್ಯ ಇತ್ತೀಚೆಗಷ್ಟೇ ದೆಹಲಿ ಮೆಟ್ರೋದಲ್ಲಿ ಮಹಿಳೆಯರಿಬ್ಬರು ಪ್ರಯಾಣಿಸುವ ವೇಳೆ ಸೀಟಿಗಾಗಿ ಕಿತ್ತಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಪ್ರಯಾಣಿಕರೊಬ್ಬರು ತಮ್ಮ ಫೋನ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.  ಇದನ್ನೂ ಓದಿ: ಈ ಬಾರಿ ಗಣಪನ ಜೊತೆ ಸಾವರ್ಕರ್ ಫೋಟೋ- ಹಿಂದೂ ಸಂಘಟನೆಗಳಿಂದ ಹೊಸ ಪ್ಲ್ಯಾನ್

    ಪ್ರತಿಭಾ ಶರ್ಮಾ ಎಂಬವರು ಈ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದು, ಸೀರೆಯುಟ್ಟ ಮಹಿಳೆಯೊಬ್ಬರು ಮೆಟ್ರೋದಲ್ಲಿ ಖಾಲಿ ಸೀಟಿನಲ್ಲಿ ಇಟ್ಟಿದ ತಮ್ಮ ಬ್ಯಾಗ್ ಅನ್ನು ಪಕ್ಕಕ್ಕೆ ಸರಿಸಲು ನಿರಾಕರಿಸಿರುವುದನ್ನು ಕಾಣಬಹುದಾಗಿದೆ. ಸೀಟಿಗಾಗಿ ಸೀರೆಯುಟ್ಟ ಮಹಿಳೆಗೆ, ಮತ್ತೋರ್ವ ಮಹಿಳೆ ತಾನು ಕುಳಿತುಕೊಳ್ಳಲು ಜಾಗ ನೀಡಬಹುದಲ್ಲವೇ ಎಂದು ಕೇಳುತ್ತಾರೆ. ಇನ್ನೋರ್ವ ಮಹಿಳೆ ಕೂಡ ಸೀರೆಯುಟ್ಟ ಮಹಿಳೆಗೆ ತಮ್ಮ ಬ್ಯಾಗ್ ಅನ್ನು ಪಕ್ಕಕ್ಕೆ ಸರಿಸುವಂತೆ ಒತ್ತಾಯಿಸುತ್ತಿರುತ್ತಾರೆ. ಆದರೂ ಬ್ಯಾಗ್ ಎತ್ತಿಕೊಳ್ಳಲು ಮಹಿಳೆ ನಿರಾಕರಿದ್ದು, ಕೊನೆಗೆ ರೊಚ್ಚಿಗೆದ್ದ ಮತ್ತೋರ್ವ ಮಹಿಳೆ ಜಗ್ಗದೇ ಸಿಕ್ಕ ಜಾಗದಲ್ಲಿಯೇ ತುರುಕಿಕೊಂಡು ಕುಳಿತುಕೊಳ್ಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

     

    View this post on Instagram

     

    A post shared by Pratibha Sharma (@pratibha.sharma_09)

     

    ವೀಡಿಯೋ ಜೊತೆಗೆ ಈ ಮಹಿಳೆಗೆ ಮೆಟ್ರೋದಲ್ಲಿ ಬ್ಯಾಗ್ ಇರಿಸಿಕೊಳ್ಳಲು ಸಹ ಸೀಟ್ ಬೇಕಂತೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ವೀಡಿಯೋಗೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ – ಪತಿಯ ಗುಪ್ತಾಂಗಕ್ಕೆ ಬಿಸಿ ನೀರು ಎರಚಿದ್ಲು

    Live Tv
    [brid partner=56869869 player=32851 video=960834 autoplay=true]

  • ಪತ್ನಿಯನ್ನು ಇತರ ಮಹಿಳೆಯರಿಗೆ ಹೋಲಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮ: ಹೈಕೋರ್ಟ್

    ಪತ್ನಿಯನ್ನು ಇತರ ಮಹಿಳೆಯರಿಗೆ ಹೋಲಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮ: ಹೈಕೋರ್ಟ್

    ತಿರುವನಂತರಪುರಂ: ಹೆಂಡತಿಯನ್ನು ಇತರ ಮಹಿಳೆಯರಿಗೆ ಹೋಲಿಸುವುದು ಹಾಗೂ ಆಕೆ ನಿರೀಕ್ಷೆಯ ಸಂಗಾತಿಯಲ್ಲ ಎಂದು ಅವಳನ್ನು ನಿರಂತರವಾಗಿ ನಿಂದಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮವಾಗಿದೆ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

    ಸುಮಾರು 13 ವರ್ಷಗಳ ಕಾಲದಿಂದ ಪತ್ನಿಯಿಂದ ಬೇರ್ಪಟ್ಟಿದ್ದ ಪತಿಯು ತಮ್ಮ ಮದುವೆಯನ್ನು ರದ್ದು ಮಾಡಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿ ಈ ತೀರ್ಪು ನೀಡಿದೆ. ಮಹಿಳೆಯೂ ಪತಿಯಿಂದ ಈ ರೀತಿಯ ನಡುವಳಿಕೆಯನ್ನು ಸಹಿಸಿಕೊಳ್ಳಬಾರದು ಎಂದಿದೆ.

    ನ್ಯಾಯಮೂರ್ತಿಗಳಾದ ಅನಿಲ್ ಕೆ. ನರೇಂದ್ರನ್ ಹಾಗೂ ಸಿಎಸ್ ಸುಧಾ ಅವರ ಪೀಠವು ವಿಚ್ಛೇದಿತ ಕಾಯ್ದೆಯಡಿಯಲ್ಲಿ ಈ ತೀರ್ಪನ್ನು ನೀಡಿದೆ. ಪತಿಯು ಪದೇ ಪದೇ ಪತ್ನಿಯನ್ನು ತಮ್ಮ ನಿರೀಕ್ಷೆಯ ಪತ್ನಿಯಲ್ಲ ಎನ್ನುವುದರ ಜೊತೆಗೆ ಇತರ ಮಹಿಳೆಯರೊಂದಿಗೆ ಹೋಲಿಕೆ ಮಾಡುವುದು ಮಾನಸಿಕ ಕ್ರೌರ್ಯವಾಗಿದೆ. ಇದನ್ನು ಪತ್ನಿಯು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ. ಇದನ್ನೂ ಓದಿ: ಸಹೋದ್ಯೋಗಿ ಗಟ್ಟಿಯಾಗಿ ತಬ್ಬಿಕೊಂಡಿದ್ರಿಂದ ಮುರಿಯಿತಂತೆ ಮಹಿಳೆಯ 3 ಪಕ್ಕೆಲುಬು!

    ದಾಖಲೆಗಳ ಪ್ರಕಾರ ದಂಪತಿ ಕೇವಲ ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಒಟ್ಟಿಗೆ ಇದ್ದಂತೆ ಕಂಡುಬರುತ್ತದೆ. ನಂತರ ಅವರು ಬೇರ್ಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಪತಿಯು ಪತ್ನಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ವಿಚಾರಣೆ ಸಂದರ್ಭದಲ್ಲಿ ತಿಳಿದುಬಂದಿದೆ. ಜೊತೆಗೆ ಪತ್ನಿಯು ದೈಹಿಕವಾಗಿ ಆಕರ್ಷಣೀಯವಾಗಿ ಇಲ್ಲ ಎಂಬ ಕಾರಣಕ್ಕೆ ಆಕೆಯೊಂದಿಗೆ ಪತಿ ಒಡನಾಟದಲ್ಲಿ ತೊಡಗಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದಿದೆ. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ – ಕೊಡಲಿಯಿಂದ ಪತ್ನಿ ಹತ್ಯೆಗೈದ ಪತಿ

    Law

    ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ಪತಿ, ಪತ್ನಿಯರಾಗಿ ಮುಂದುವರಿಯಲು ಹೆಚ್ಚು ಉತ್ಸಾಹಕರಾಗಿಲ್ಲ. ಪತ್ನಿಗೆ 26 ಮತ್ತು ಪತಿಗೆ 29 ವರ್ಷ ವಯಸ್ಸಾಗಿದ್ದು, ಮದುವೆ ಬಳಿಕ ಅವರ ನಡುವೆ ಯಾವುದೇ ಭಾವನಾತ್ಮಕ ಸಂಬಂಧ ಏರ್ಪಟ್ಟಂತೆ ಕಾಣುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ತನ್ನ ಪತಿಯನ್ನು ಖುಷಿಯಾಗಿರಿಸಲು ಮೂವರು ಸುಂದರಿಯರನ್ನ ಕೆಲಸಕ್ಕೆ ನೇಮಿಸಿದ ಪತ್ನಿ!

    ತನ್ನ ಪತಿಯನ್ನು ಖುಷಿಯಾಗಿರಿಸಲು ಮೂವರು ಸುಂದರಿಯರನ್ನ ಕೆಲಸಕ್ಕೆ ನೇಮಿಸಿದ ಪತ್ನಿ!

    ಬ್ಯಾಂಕಾಕ್: ಸತಿ-ಪತಿಗಳಿಬ್ಬರು ಒಬ್ಬರಿಗೊಬ್ಬರು ಅರ್ಥಮಾಡಿಕೊಂಡು ಸುಖವಾಗಿದ್ದರೆ ಸಂಸಾರ ಹಾಲು-ಜೇನು ಎಂದು ಎಲ್ಲರೂ ಹೇಳುತ್ತಾರೆ. ಇದಕ್ಕೆ ಥಾಯ್‌ಲ್ಯಾಂಡ್‌ನ ಮಹಿಳೆಯೊಬ್ಬರು ಸಾಕ್ಷಿಯಾಗಿ ನಿಲ್ಲುತ್ತಾಳೆ.

    ಹೌದು.. ಬ್ಯಾಂಕಾಕ್‌ನ 44 ವರ್ಷದ ಪಾತೀಮಾ ಚಮ್ನಾನ್, ತನ್ನ ಪತಿಯನ್ನು ಸಂತೋಷವಾಗಿಡಲು ಮೂವರು ಸುಂದರ ಹಾಗೂ ವಿದ್ಯಾವಂತ ಪ್ರೇಯಸಿಯರನ್ನ ಕೆಲಸಕ್ಕೆ ನೇಮಿಸಿಕೊಂಡಿದ್ದಾಳೆ. ತನ್ನ ಪತಿಯೊಂದಿಗೆ ಆಕೆ ಹೆಚ್ಚು ಸಮಯ ಕೊಡಲು ಆಗುತ್ತಿಲ್ಲ ಎಂಬ ಕಾರಣಕ್ಕೆ ಪ್ರೇಯಸಿಯನ್ನ ಕೆಲಸಕ್ಕೆ ನೇಮಿಸಿಕೊಂಡಿರುವುದಾಗಿ ಹೇಳಿದ್ದಾಳೆ. ಇದನ್ನೂ ಓದಿ: ವಾಮನ ಟೀಸರ್ ರಿಲೀಸ್, ಆಕ್ಷನ್ ಮೂಡ್ ನಲ್ಲಿ ಶೋಕ್ದಾರ್ ಧನ್ವೀರ್

    ಇತ್ತೀಚೆಗೆ ಚಮ್ನಾನ್ ಅವರು ಕಾಲೇಜು ಡಿಪ್ಲೋಮಾ ಹೊಂದಿರುವ ಯುವ ಹಾಗೂ ಏಕಾಂಗಿ ಮಹಿಳೆಯರನ್ನು ಕೆಲಸಕ್ಕಾಗಿ ಹುಡುಕುವ ಬಗ್ಗೆ ವೀಡಿಯೋ ಜಾಹೀರಾತನ್ನು ಜಾಲತಾಣದಲ್ಲಿ ಪ್ರಕಟಿಸಿದ್ದರು. ಅದಕ್ಕಾಗಿ 15 ಸಾವಿರ ಬಹ್ತ್ (33,800 ರೂ.) ವೇತನ ನೀಡುವುದಾಗಿಯೂ ಹೇಳಿದ್ದರು. ಇದರೊಂದಿಗೆ ಉಚಿತ ಊಟ ಹಾಗೂ ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು ನೀವು ನನಗೆ ಸಹಾಯ ಮಾಡಬೇಕು. ನನ್ನ ಕಚೇರಿಯಲ್ಲಿ ದಾಖಲೆಗಳ ಸಿದ್ಧತೆಗಾಗಿ ಇಬ್ಬರು ಹಾಗೂ ನಾನು, ನನ್ನ ಪತಿ-ಮಗುವನ್ನು ನೋಡಿಕೊಳ್ಳಲು ಒಬ್ಬರನ್ನು ನೇಮಿಸಿಕೊಳ್ಳಲಾಗುತ್ತದೆ ಎಂದು ವೀಡಿಯೋನಲ್ಲಿ ಹೇಳಿದ್ದರು.

    ನನ್ನ ನಿಮ್ಮ ನಡುವೆ ಯಾವುದೇ ಜಗಳ ನಡೆಯುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ನನ್ನ ಪತಿ ಏಕಾಂಗಿಯಾಗಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾನೆ. ನಾನು ಅವನನ್ನು ಸಂತೋಷವಾಗಿಡಲು ಬಯಸುತ್ತೇನೆ. ಮನೆಗೆ ಸ್ನೇಹಿತರು ಬಂದಾಗ ನಾನು ಅವನೊಂದಿಗೆ ಇರಲು ಬಯಸುತ್ತೇನೆ. ಹಾಗಾಗಿ ಮಹಿಳೆಯರ ಅಗತ್ಯವಿದೆ. ಆದರೆ ಕೆಲಸಕ್ಕೆ ಬರುವವರು ಮಕ್ಕಳನ್ನು ಹೊಂದಿರಬಾರದು, ಉತ್ತಮ ಸಂವಹನ ಕೌಶಲ ಇರಬೇಕು. ಜೊತೆಗೆ ಪ್ರೇಯಸಿಯರು ನನ್ನ ಪತಿಯನ್ನು ಮೆಚ್ಚಿಸಲು, ಅವನನ್ನು ಸಂತೋಷಪಡಿಸಲು ಹಾಗೂ ಒಡನಾಟದಲ್ಲಿ ಸಮರ್ಥರಾಗಿರುವಂತಹವರು ಆಗಿರಬೇಕು ಎಂದು ಷರತ್ತು ವಿಧಿಸಿದ್ದಾರೆ. ಇದನ್ನೂ ಓದಿ: ದೇಶ ವಿಭಜನೆ ಒಪ್ಪಿಕೊಳ್ಳದಿದ್ರೆ ಭಾರತ ಛಿದ್ರವಾಗ್ತಿತ್ತು- ಪಟೇಲ್ ಹೇಳಿಕೆ ಪುನರುಚ್ಚರಿಸಿದ ಸೋನಿಯಾ

    ಅದರಂತೆ ಮೂವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಕಚೇರಿ ಕೆಲಸ ಮಾಡಲು ಇಬ್ಬರು ಹಾಗೂ ಮನೆಯಲ್ಲಿ ಗಂಡ-ಹೆಂಡತಿ ಮಕ್ಕಳನ್ನು ನೋಡಿಕೊಳ್ಳಲು 33 ವರ್ಷದ ಮಹಿಳೆ ಒಪ್ಪಿಕೊಂಡಿದ್ದಾಳೆ. ಆದರೆ ಆಕೆ ಚಮ್ಮಾನ್ ಸ್ನೇಹಿತೆಯೇ ಆಗಿದ್ದಾಳೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ.

    Live Tv

  • ಮನೆ ಬಾಡಿಗೆ ವೇಳೆ `ಸೆಕ್ಸ್ ಒಪ್ಪಂದ’ಕ್ಕೆ ಸಹಿ ಹಾಕಿದ ಮಹಿಳೆ- ಮುಂದೇನಾಯ್ತು..?

    ಮನೆ ಬಾಡಿಗೆ ವೇಳೆ `ಸೆಕ್ಸ್ ಒಪ್ಪಂದ’ಕ್ಕೆ ಸಹಿ ಹಾಕಿದ ಮಹಿಳೆ- ಮುಂದೇನಾಯ್ತು..?

    ವಾಷಿಂಗ್ಟನ್: ಸಾಮಾನ್ಯವಾಗಿ ಮನೆ ಬಾಡಿಗೆ ಪಡೀಬೇಕಾದ್ರೆ ಬಾಡಿಗೆದಾರರು ಕೆಲವು ಒಪ್ಪಂದಗಳಿಗೆ ಸಹಿ ಮಾಡಿಸಿಕೊಳ್ತಾರೆ. `ಕೆಲವರು ನೋ ಪಾರ್ಟಿ, ನೋ ಸ್ಮೋಕಿಂಗ್, ನೋ ಶೌಟಿಂಗ್’ ಹೀಗೆ ಏನೇನೋ ಕಾರಣಗಳನ್ನ ನೀಡಿ, ತಮಗೂ ತೊಂದರೆಯಾದಂತೆ ನೋಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಮಾಲೀಕ ಮನೆ ಬಾಡಿಗೆ ನೀಡಬೇಕಾದ್ರೆ `ಲೈಂಗಿಕ ಸಂಭೋಗ- ಸೆಕ್ಸ್’ ಒಪ್ಪಂದಕ್ಕೆ ಸಹಿ ಮಾಡಿಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

    ಅಮೆರಿಕದ ನೆವಾಡಾದ ಲಾಸ್ ವೇಗಸ್‌ನಲ್ಲಿರುವ ವ್ಯಕ್ತಿಯೊಬ್ಬ ಸ್ಥಳೀಯ ಮಹಿಳೆಗೆ ಬಾಡಿಗೆ ನೀಡಲು ಮಾಲೀಕ `ಸೆಕ್ಸ್ ಒಪ್ಪಂದಕ್ಕೆ’ ದಾಖಲೆಗಳ ಮೇಲೆ ಸಹಿ ಮಾಡಿಸಿಕೊಂಡಿದ್ದಾನೆ. ಕೆಲ ದಿನಗಳ ನಂತರ ಮನೆಯ ಮಾಲೀಕನ ವಿರುದ್ಧ ಸ್ಥಳೀಯ ಫೆಡರಲ್ ನ್ಯಾಯಾಲಯಲ್ಲಿ ವಿಚಾರಣೆ ಬಂದಾಗ ದಾಖಲೆಗಳನ್ನು ನೀಡಿದ್ದು, ವಿಚಾರ ಬಹಿರಂಗಗೊಂಡಿದೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ನಿಲ್ಲದ ವೀಲ್ಹಿಂಗ್ ಪುಂಡರ ಹಾವಳಿ – ಪೊಲೀಸರಿಗೂ ಡೋಂಟ್‌ ಕೇರ್‌

    ಸಂತ್ರಸ್ತ ಮಹಿಳೆಗೆ ಮನೆ ಬಾಡಿಗೆ ಪಡೆಯುವ ಸಂದರ್ಭದಲ್ಲಿ ತನ್ನ ಮಕ್ಕಳಿಗಾಗಿ ಮನೆ ಅವಶ್ಯವಿತ್ತು. ಇದೇ ಕಾರಣದಿಂದಾಗಿ ಮನೋ ವಿಕೃತಿ ಮೆರೆದಿರುವ ಮಾಲೀಕ ಅಲನ್ ರೋಥ್‌ಸ್ಟೈನ್ ಮನೆಯ ಬಾಡಿಗೆ ಪಡೆಯುವ ಸಲುವಾಗಿ ಲೈಂಗಿಕ ಬೇಡಿಕೆಗಳಿಗೆ ಸಹಿ ಮಾಡಿಸಿರುತ್ತಾನೆ. ನಂಬಲು ಅಸಾಧ್ಯವಾದರೂ ಒಪ್ಪಂದಕ್ಕೆ ಒಳಪಟ್ಟಿರುವುದು ದಾಖಲೆಗಳಲ್ಲಿ ಸಾಬೀತಾಗಿದೆ. ಇದು ವಂಚನೆ ಹಾಗೂ ಕಿರುಕುಳಕ್ಕೆ ಸಮನಾಗಿದೆ ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: ಯುವತಿ ಮೇಲೆ ಗೆಳತಿಯ ಸಹೋದರನಿಂದ್ಲೆ ಅತ್ಯಾಚಾರ- ಮದ್ವೆ ಕ್ಯಾನ್ಸಲ್ ಭಯದಿಂದ ಆತ್ಮಹತ್ಯೆಗೆ ಯತ್ನ

    ನ್ಯಾಯಾಲಯದ ದಾಖಲೆಗಳ ಪ್ರಕಾರ, ನವೆಂಬರ್ 2018 ರಲ್ಲಿ ಲಾಸ್ ವೇಗಸ್ ಬೌಲೆವಾರ್ಡ್ ಮತ್ತು ಸೇಂಟ್ ರೋಸ್ ಪಾರ್ಕ್ವೇಗೆ ಸಮೀಪವಿರುವ ವೆಡ್ಜ್‌ಬ್ರೂಕ್ ಸ್ಟ್ರೀಟ್‌ನಲ್ಲಿ 4 ಬೆಡ್‌ರೂಮ್ ಮನೆಯನ್ನು ಬಾಡಿಗೆಗೆ ಪಡೆಯುವ ಸಲುವಾಗಿ ಆತ ವಿಕೃತಿ ಮೆರಿದ್ದಾನೆ. ಸಂಭಾವ್ಯ ಬಾಡಿಗೆದಾರರಿಂದ ಸಹಿ ಮಾಡಿಸಿ ಬಲಿಪಶುಗಳನ್ನಾಗಿ ಮಾಡಿದ್ದಾನೆ ಎಂದು ಹೇಳಲಾಗಿದೆ.

    ಸದ್ಯ ವಿಚಾರಣೆ ನಂತರ ಬಾಡಿಗೆ ಪರವಾನಗಿಗಳನ್ನು ನಿಷೇಧಿಸಲಾಗಿದ್ದು, ಈ ಹಿಂದಿನ ಹಿಡುವಳಿದಾರನಿಂದ ಮೊಕದ್ದಮೆ ಹೂಡಲ್ಪಟ್ಟಿದೆ. ಒಂದು ವೇಳೆ ನ್ಯಾಯಾಧೀಶರು ಫೇರ್ ಹೌಸಿಂಗ್ ಆಕ್ಟ್ ಅನ್ನು ಉಲ್ಲಂಘಿಸಿದ್ದಾರೆಂದು ಪರಿಗಣಿಸಿದರೆ ಕಾನೂನು ಕ್ರಮವಾಗುತ್ತದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    Live Tv
    [brid partner=56869869 player=32851 video=960834 autoplay=true]

  • ಈ ಸಲ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯಿಂದ ಪಿ.ವಿ.ಸಿಂಧು ಔಟ್ – ಕಾರಣ ಏನು?

    ಈ ಸಲ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯಿಂದ ಪಿ.ವಿ.ಸಿಂಧು ಔಟ್ – ಕಾರಣ ಏನು?

    ಮುಂಬೈ: ಕಾಮನ್‌ವೆಲ್ತ್ ಗೇಮ್ಸ್-2022ರಲ್ಲಿ ಚಿನ್ನ ಗೆದ್ದು ದಾಖಲೆ ನಿರ್ಮಿಸಿದ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಈ ವರ್ಷದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಿಂದ ಹೊರಗುಳಿಯಲಿದ್ದಾರೆ.

    ಪಿ.ವಿ ಸಿಂಧು ಅವರು ಸದ್ಯ ಕಾಲಿನ ಪಾದದ ಫ್ರ್ಯಾಕ್ಚರ್‌ ಸಮಸ್ಯೆಯಿಂದಾಗಿ ಬಳಲುತ್ತಿದ್ದು, ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಸ್ಪೂರ್ತಿದಾಯಕ ಸಾಧನೆಯೊಂದಿಗೆ ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಕಾಲಿಡುತ್ತಿರುವುದು ವಿಶೇಷ: ಮೋದಿ

    ಕಾಮನ್‌ಲ್ತ್‌ನಲ್ಲಿ ಚಿನ್ನದ ಪದಕ ಗೆದ್ದ ಪಿ.ವಿ.ಸಿಂದು ಕಾಲು ನೋವಿನ ಹೊರತಾಗಿಯೂ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಫೈನಲ್ಸ್ ಪಂದ್ಯವನ್ನು ಆಡಿದ್ದರು.

    ಈ ಕುರಿತು ಟ್ವೀಟ್ ಮಾಡಿರುವ ಸಿಂಧು, `ದುರಾದೃಷ್ಟವಶಾತ್ ನಾನು ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯಿಂದ ಹೊರಗುಳಿಯಬೇಕಿದೆ. ಸದ್ಯ ನಾನು ಗಾಯದ ಸಮಸ್ಯೆಯಿಂದ ನೋವು ಅನುಭವಿಸುತ್ತಿದ್ದೇನೆ. ಕಾಮನ್‌ವೆಲ್ತ್ ಕ್ವಾಲಿಫೈಯರ್‌ನಲ್ಲಿಯೇ ಗಾಯದ ಭಯವಿತ್ತು. ಆದರೆ ನನ್ನ ತರಬೇತುದಾರರು ಹಾಗೂ ದೈಹಿಕ ತರಬೇತುದಾರರ ಸಹಾಯದಿಂದ ಪಂದ್ಯವನ್ನಾಡಿದೆ ಎಂದು ಸಿಂಧು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಸ್ಫೋಟಕ ಆಟವಾಡಿದ ಟೆಸ್ಟ್ ಸ್ಪೆಷಲಿಷ್ಟ್‌ – ಒಂದೇ ಓವರ್‌ನಲ್ಲಿ 22 ರನ್ ಚಚ್ಚಿದ ಪೂಜಾರ

    ಬರ್ಮಿಂಗ್‌ಹ್ಯಾಮ್‌ನಿಂದ ಹೈದರಾಬಾದ್‌ಗೆ ಹಿಂದಿರುಗಿದ ನಂತರ ತಕ್ಷಣ ನಾನು ಎಂಆರ್‌ಐ ಸ್ಕ್ಯಾನ್‌ಗೆ ಧಾವಿಸಿದೆ. ವೈದ್ಯರು ನನ್ನ ಎಡಪಾದದಲ್ಲಿ ಗಂಭೀರ ಸಮಸ್ಯೆಯಾಗಿರುವುದನ್ನು ಗುರುತಿಸಿ ಕೆಲ ವಾರಗಳ ವರೆಗೆ ವಿಶ್ರಾಂತಿ ಪಡೆಯುವಂತೆ ಶಿಫಾರಸು ಮಾಡಿದ್ದಾರೆ. ಕೆಲವೇ ವಾರಗಳಲ್ಲಿ ನಾನು ತರಬೇತಿಗೆ ಹಿಂದಿರುಗಬೇಕು. ನಿಮ್ಮೆಲ್ಲರ ಪ್ರೀತಿ ಹಾಗೂ ಬೆಂಬಲಕ್ಕಾಗಿ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮತ್ತೊಮ್ಮೆ ಟೀಂ ಇಂಡಿಯಾದ ಚುಕ್ಕಾಣಿ ಹಿಡಿದ ದಾದಾ – ಭಾರತ ಮಹಾರಾಜರ ರಾಜನಾದ ಗಂಗೂಲಿ

    2020ರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಇದಕ್ಕೂ ಮುನ್ನ 2016ರಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಬೆಳ್ಳಿ ಪದಕ, 2019ರ ಟೂರ್ನಿಯಲ್ಲಿ ಚಿನ್ನದ ಪದಕ ನಂತರ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. ಕೊನೆಯದಾಗಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಗುಂಪು ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಹಾಗೂ ಸಿಂಗಲ್ಸ್ನಲ್ಲಿ ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಹಿಳೆಯರ ನಡುವಿನ ಅಂದವನ್ನು ಹೆಚ್ಚಿಸುವ ವೆರೈಟಿ ಸೊಂಟದ ಚೈನ್‍ಗಳು

    ಮಹಿಳೆಯರ ನಡುವಿನ ಅಂದವನ್ನು ಹೆಚ್ಚಿಸುವ ವೆರೈಟಿ ಸೊಂಟದ ಚೈನ್‍ಗಳು

    ಪುರುಷರಿಗೆ ಹೊಲಿಸಿದರೆ ಮಹಿಳೆಯರು ಧರಿಸಲು ಲೆಕ್ಕವಿರದಷ್ಟು ಆಭರಣಗಳಿದೆ. ಮಹಿಳೆಯರಿಗೆ ಯಾವೆಲ್ಲಾ ಆಭರಣಗಳಿದೆ ಎಂದು ಲೆಕ್ಕ ಹಾಕಲು ಕುಳಿತುಕೊಂಡರೆ ನೀವು ಖಂಡಿತವಾಗಿಯೂ ಸುಸ್ತಾಗಬಹುದು. ನೀವು ಮಾರುಕಟ್ಟೆಗಳಿಗೆ ಹೋದರೆ ಮಹಿಳೆಯರಿಗೆಂದೇ ತರಾವರಿ ಟ್ರೆಂಡಿ ಹಾಗೂ ಟ್ರೆಡಿಷನಲ್ ಆಭರಣಗಳಿರುವುದನ್ನು ಕಾಣಬಹುದಾಗಿದೆ.

    ಸಾಮಾನ್ಯವಾಗಿ ಮಹಿಳೆಯರನ್ನು ಸುಂದರಗೊಳಿಸುವುದೇ ಆಭರಣಗಳು. ಮಹಿಳೆಯರು ಯಾವ ಆಭರಣ ಧರಿಸಿದರೂ ಮುದ್ದಾಗಿ ಕಾಣಿಸುತ್ತಾರೆ. ಅದರಲ್ಲಿಯೂ ಮಹಿಳೆಯರು ಧರಿಸುವ ಸೊಂಟದ ಚೈನ್ ಅವರ ನಡುವಿನ ಅಂದವನ್ನು ಹೆಚ್ಚಿಸುತ್ತದೆ. ಸಾಕಷ್ಟು ಮಹಿಳೆಯರು ಮದುವೆಯಾದ ನಂತರ ಆಭರಣವನ್ನು ಹೆಚ್ಚಾಗಿ ಧರಿಸುತ್ತಾರೆ. ಆದರೆ ಇದೀಗ ಹಲವಾರು ಆಭರಣಗಳ ಜೊತೆಗೆ ಸೊಂಟದ ಚೈನ್ ಧರಿಸಲು ಆರಂಭಿಸಿದ್ದಾರೆ. ಮಹಿಳೆಯರಿಗೆಂದೇ ಮಾರುಕಟ್ಟೆಗೆ ಹಲವಾರು ಡಿಸೈನ್‍ಗಳ ಸೊಂಟದ ಚೈನ್ ಬಂದಿದೆ. ಇವುಗಳನ್ನು ಲೆಹೆಂಗಾ, ಸೀರೆಯೊಂದಿಗೆ ಧರಿಸುವುದು ಮಾತ್ರವಲ್ಲದೇ ಜೀನ್ಸ್ ಮೇಲೆ ಕೂಡ ಧರಿಸುವ ಟ್ರೆಂಡ್ ಶುರುವಾಗಿದೆ. ಈ ಕುರಿತ ಒಂದಷ್ಟು ಮಾಹಿತಿಯನ್ನು ಇಂದು ನಿಮಗೆ ನಾವು ನೀಡುತ್ತೇವೆ. ಇದನ್ನೂ ಓದಿ: ಹನಿಟ್ರ್ಯಾಪ್ ಮೂಲಕ ಉದ್ಯಮಿಗೆ ಬೆದರಿಕೆ – ಸ್ಯಾಂಡಲ್‍ವುಡ್ ಯುವ ನಟ ಅರೆಸ್ಟ್

    ಬಂಜಾರ ಶೈಲಿಯ ಸೊಂಟದ ಚೈನ್ ಡಿಸೈನ್
    ಬಂಜಾರ ಶೈಲಿಯ ಸೊಂಟದ ಚೈನ್ ನೀವು ಸೀರೆಯೊಂದಿಗೂ ಧರಿಸಬಹುದು ಮತ್ತು ಜೀನ್ಸ್ ಪ್ಯಾಂಟ್ ಮೇಲೆ ಕೂಡ ಧರಿಸಬಹುದಾಗಿದೆ. ನೋಡಲು ಸಿಲ್ವರ್ ಚೈನ್ ರೀತಿ ಇರುವ ಈ ಸರ ನಿಮಗೆ ಮಾರುಕಟ್ಟೆಯಲ್ಲಿ 250 ರೂಪಾಯಿಯಿಂದ 500 ರೂಪಾಯಿವರೆಗೂ ಸಿಗಬಹುದು. ಇದನ್ನು ನೀವು ಸಲ್ವಾರ್ ಸೂಟ್‍ನೊಂದಿಗೆ ಸಹ ಧರಿಸಬಹುದು. ಪಾರ್ಟಿ ವೇಳೆ, ಡ್ಯಾನ್ಸ್ ಮಾಡುವಾಗ ಈ ಚೈನ್ ಧರಿಸುವುದರಿಂದ ನಿಮ್ಮ ಸೊಂಟ ಸುಂದರವಾಗಿ ಕಾಣಿಸುತ್ತದೆ. ಅದರಲ್ಲಿಯೂ ಬ್ಲ್ಯಾಕ್ ಕಲರ್ ಸೀರೆ ಜೊತೆಗೆ ಈ ಸೀರೆಯನ್ನು ಧರಿಸಿದರೆ ಸಖತ್ ಸ್ಟೈಲಿಶ್ ಲುಕ್ ನೀಡುತ್ತದೆ. ಸಾಂಪ್ರದಾಯಿಕ ರಾಜಸ್ಥಾನಿ ಲೆಹೆಂಗಾ ಮತ್ತು ಗುಜರಾತಿ ಘಾಗ್ರಾದೊಂದಿಗೆ ಕೂಡ ಇದನ್ನು ಧರಿಸಬಹುದು.

    ಮೆಶ್ವರ್ಕ್ ಸೊಂಟದ ಚೈನ್ ಡಿಸೈನ್
    ಜಾಲಿ ವರ್ಕ್ ಮಾಡಿರುವ ಈ ಟ್ರೆಡಿಷನ್ ಸೊಂಟದ ಚೈನ್ ಅನ್ನು ಹೆಚ್ಚಾಗಿ ಮಾರುಕಟ್ಟೆಗಳಲ್ಲಿ ನೀವು ಕಾಣುತ್ತೀರಾ. ಅದರಲ್ಲಿಯೂ ವಿಶೇಷವಾಗಿ ಹಿಂದೂಗಳ ಮದುವೆ ಸಮಾರಂಭಗಳಲ್ಲಿ ವಧು ಧರಿಸಿರುವುದನ್ನು ನೋಡಬಹುದಾಗಿದೆ. ಈ ರೀತಿಯ ಚೈನ್‍ಗಳು ಚಿನ್ನ ಹಾಗೂ ಬೆಳ್ಳಿ ಎರಡರಲ್ಲಿಯೂ ಸಿಗುತ್ತದೆ. ನೀವೇನಾದರೂ ಸೊಂಟದ ಚೈನ್ ಹುಡುಕುತ್ತಿದ್ದರೆ, 300 ರೂಪಾಯಿಯಿಂದ 1,000 ರೂಪಾಯಿವರೆಗೂ ಈ ಚೈನ್ ಮಾರುಕಟ್ಟೆಯಲ್ಲಿ ಸಿಗುತ್ತದೆ. ಇದನ್ನೂ ಓದಿ: ವೈಯಕ್ತಿಕ ಬಳಕೆಗಾಗಿ ಬಾಡಿಗೆ ನೀಡಿದ್ದರೆ ಜಿಎಸ್‌ಟಿ ಇಲ್ಲ- ಕೇಂದ್ರ

    ಇದನ್ನು ನೀವು ಲೆಹೆಂಗಾಗಳು ಮತ್ತು ಸೀರೆಗಳ ಜೊತೆಗೆ ಅಫ್ಘಾನಿ ಸಲ್ವಾರ್ ಮತ್ತು ಕ್ರಾಪ್ ಟಾಪ್‍ಗಳೊಂದಿಗೆ ಕೂಡ ಧರಿಸಬಹುದು. ಈ ರೀತಿಯ ಸೊಂಟದ ಚೈನ್‍ಗಳು ಸ್ವಲ್ಪ ಭಾರವಾಗಿರುತ್ತದೆ. ಹಾಗಾಗಿ ನೀವು ಇದನ್ನು ಪಾರ್ಟಿ ಮತ್ತು ಹಬ್ಬದ ಸಮಾರಂಭಗಳಲ್ಲಿ ಮಾತ್ರ ಧರಿಸಿದರೆ ಉತ್ತಮ. ಜೀನ್ಸ್ ಜೊತೆಗೆ ಕೊಂಚ ಎಥ್ನಿಕ್ ಲುಕ್ ನೀಡಲು ನೀವು ಬಯಸಿದರೆ, ಇವುಗಳನ್ನು ಸ್ಕಿನ್ ಫಿಟ್ ಜೀನ್ಸ್ ಮತ್ತು ಸ್ಕಿನ್ ಫಿಟ್ ಟೀ ಶರ್ಟ್‍ನೊಂದಿಗೆ ಧರಿಸಬಹುದು.

    ಪರ್ಲ್ ವರ್ಕ್ ಸೊಂಟದ ಚೈನ್ ಡಿಸೈನ್
    ಮುತ್ತಿನಿಂದ ವಿನ್ಯಾಸಗೊಳಿಸಿರುವ ಈ ಚೈನ್ ನಿಮಗೆ ರಾಯಲ್ ಲುಕ್ ನೀಡುತ್ತದೆ. ಇದನ್ನು ನೀವು ಸಿಂಪಲ್ ಆಗಿರುವಂತಹ ಸೀರೆ ಅಥವಾ ಲೆಹೆಂಗಾ ಜೊತೆಗೆ ಧರಿಸುವುದು ಉತ್ತಮ. ಈ ಚೈನ್ ಕೊಂಚ ಕಾಸ್ಟಿಯಾಗಿದ್ದು, ಮಾರುಕಟ್ಟೆಯಲ್ಲಿ 500 ರೂಪಾಯಿಯಿಂದ 1,000 ರೂಪಾಯಿವರೆಗೂ ಪಡೆಯಬಹುದಾಗಿದೆ. ಯಾವುದೇ ಮದುವೆ, ಹಬ್ಬ ಅಥವಾ ಪಾರ್ಟಿಯಾಗಿರಲಿ ಸಲ್ವಾರ್, ಸೀರೆ ಅಥವಾ ಲೆಹೆಂಗಾದೊಂದಿಗೆ ಈ ರೀತಿಯ ಸರ ಮ್ಯಾಚ್ ಆಗುತ್ತದೆ. ಅಲ್ಲದೇ ಈ ಚೈನ್ ನಿಮಗೆ ರಾಣಿಯರಂತೆ ರಿಚ್ ಲುಕ್ ನೀಡುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಗಂಡ-ಹೆಂಡತಿ ಜಗಳ ಬಿಡಿಸಲು ಮಧ್ಯ ಬಂದವನೇ ಕೊಲೆ

    ಗಂಡ-ಹೆಂಡತಿ ಜಗಳ ಬಿಡಿಸಲು ಮಧ್ಯ ಬಂದವನೇ ಕೊಲೆ

    ವಿಜಯಪುರ: ಗಂಡ ಹೆಂಡತಿಯ ಜಗಳ ಬಿಡಿಸಲು ಮಧ್ಯ ಬಂಧವನೇ ಭೀಕರವಾಗಿ ಕೊಲೆಯಾಗಿರುವ ಘಟನೆ ವಿಜಯಪುರದ ಗುರುಪಾದೇಶ್ವರ ನಗರದಲ್ಲಿ ನಡೆದಿದೆ.

    ಪರುಶರಾಮ ಅಬಟೇರಿ (30) ಮೃತಪಟ್ಟಿದ್ದಾನೆ. ಮೂಲತಃ ಬಾಗಲಕೋಟೆ ಜಿಲ್ಲೆಯ ಅಚನೂರ ಗ್ರಾಮದ ನಿವಾಸಿಯಾಗಿರುವ ಪರಶುರಾಮ ವಿಜಯಪುರದ ಖಾಸಗಿ ಕಂಪನಿಯಲ್ಲಿ ಉದ್ಯೋಗಿ ಮಾಡುತ್ತಿದ್ದ. ಗುರುಪಾದೇಶ್ವರ ನಗರದಲ್ಲಿ ಕೆಇಬಿ ನಿವೃತ್ತ ನೌಕರ ಇಜೇರಿ ಎಂಬುವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ. ಇದನ್ನೂ ಓದಿ: ಒಂದು ಹುಡುಗಿ ನಿಮ್ಮೊಂದಿಗೆ ಸೆಕ್ಸ್ ಮಾಡಬೇಕು ಅಂದ್ರೆ..? – ಶಕ್ತಿಮಾನ್ ಖ್ಯಾತಿಯ ಮುಖೇಶ್ ವಿವಾದಾತ್ಮಕ ಹೇಳಿಕೆ

    ಇಂದು ಸಂಜೆ 4:30ರ ವೇಳೆಗೆ ಮನೆಯ ಮಾಲೀಕನ ಮಗ ಮತ್ತು ಆತನ ಹೆಂಡತಿ ಜಗವಾಡುತ್ತಿದ್ದರು. ಜಗಳ ಬಿಡಿಸಲು ಪರುಶರಾಮ ಹೋಗಿದ್ದಾನೆ. ಈ ಸಂದರ್ಭದಲ್ಲಿ ಜಗಳ ವಿಕೋಪ ಹೋಗಿ ಹೆಂಡತಿಯ ಸಂಬಂಧಿಕರು ಪರಶುರಾಮನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

    ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

    Live Tv
    [brid partner=56869869 player=32851 video=960834 autoplay=true]

  • ಮಕ್ಕಳಿಗೆ ಊಟ ಹಾಕ್ಲೋ, ಸಾಯಿಸ್ಲೋ – ಬೆಲೆ ಏರಿಕೆ ಖಂಡಿಸಿ ಪಾಕ್ ಪ್ರಧಾನಿಗೆ ಮಹಿಳೆಯಿಂದ ಕ್ಲಾಸ್

    ಮಕ್ಕಳಿಗೆ ಊಟ ಹಾಕ್ಲೋ, ಸಾಯಿಸ್ಲೋ – ಬೆಲೆ ಏರಿಕೆ ಖಂಡಿಸಿ ಪಾಕ್ ಪ್ರಧಾನಿಗೆ ಮಹಿಳೆಯಿಂದ ಕ್ಲಾಸ್

    ಇಸ್ಲಾಮಾಬಾದ್: ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ನಡುವೆ ಕರಾಚಿಯಲ್ಲಿ ಔಷಧಿಗಳು, ದಿನಸಿ ಮತ್ತು ವಿದ್ಯುತ್ ಬೆಲೆ ಗಗನಕ್ಕೇರುತ್ತಿರುವ ಬಗ್ಗೆ ವಿವರಿಸುತ್ತಾ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಪಿಎಂಎಲ್-ಎನ್ ನಾಯಕಿ ಮರ್ಯಮ್ ನವಾಜ್ ವಿರುದ್ಧ ಪಾಕಿಸ್ತಾನಿ ಮಹಿಳೆಯೊಬ್ಬರು ವಾಗ್ದಾಳಿ ನಡೆಸಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

    Shehbaz Sharif

    ಪಾಕಿಸ್ತಾನವು ಆರ್ಥಿಕ ಬಿಕ್ಕಟ್ಟಿನ ನಡುವೆ ಹೋರಾಟ ನಡೆಸುತ್ತಿದೆ. ರಾಜಕೀಯವಾಗಿ ಸರ್ಕಾರ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಎಲ್ಲೆಡೆ ಆತಂಕವನ್ನು ಸೃಷ್ಟಿಸುತ್ತಿದೆ. ಪಾಕ್ ನಾಗರಿಕರು ಸಾಮಾಜಿಕ ಜಾಲತಾಣ ಮೂಲಕ ತಮ್ಮ ಆರ್ಥಿಕತೆಯನ್ನು ಸುಧಾರಿಸುವ ಕೆಲಸವನ್ನು ಪ್ರಧಾನಿ ಮಾಡುತ್ತಿಲ್ಲ ಎಂದು ಟೀಕಿಸುತ್ತಿದ್ದಾರೆ. ಇದನ್ನೂ ಓದಿ: ನೈಟ್ ಕ್ಲಬ್​ನಲ್ಲಿ ಯುವತಿಗೆಯೊಂದಿಗೆ ಅಸಭ್ಯ ವರ್ತನೆ – ಪ್ರಶ್ನಿಸಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಬೌನ್ಸರ್ಸ್!

    ಸದ್ಯ ಮಹಿಳೆಯೊಬ್ಬರ ವೀಡಿಯೋವನ್ನು ಪಾಕಿಸ್ತಾನಿ ಪತ್ರಕರ್ತ ಹಮೀದ್ ಮಿರ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಬಗ್ಗೆ ಕರಾಚಿ ಮಹಿಳೆಯೊಬ್ಬರು ಇನ್ನೂ ಮುಂದೆ ಮಕ್ಕಳಿಗೆ ಊಟ ನೀಡದೇ ಅವರ ಜೀವನವನ್ನು ಕೊನೆಗೊಳಿಸಬೇಕೇ ಎಂದು ಪ್ರಶ್ನಿಸುವ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಹೌದು, ರಾಬಿಯಾ ಅವರು, ಬೆಲೆ ಏರಿಕೆಯಿಂದಾಗಿ ತಾವು ಎದುರಿಸುತ್ತಿರುವ ಕಷ್ಟವನ್ನು ಕ್ಯಾಮೆರಾ ಮುಂದೆ ತೊಡಿಕೊಂಡಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ತಮಗೆ ಆಗುತ್ತಿರುವ ಖರ್ಚುಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ತಿಳಿಸಬೇಕು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ನಾನು ಏನು ಮಾಡಬೇಕು, ಮನೆ ಬಾಡಿಗೆ ಕಟ್ಟಬೇಕೋ, ದುಬಾರಿ ವಿದ್ಯುತ್ ಬಿಲ್‍ಗಳನ್ನು ಪಾವತಿಸಬೇಕೋ, ನನ್ನ ಮಕ್ಕಳಿಗೆ ಹಾಲು ಮತ್ತು ಔಷಧಿಗಳನ್ನು ಖರೀದಿಸಬೇಕೋ, ನನ್ನ ಮಕ್ಕಳಿಗೆ ಊಟ ಹಾಕಬೇಕೋ ಅಥವಾ ಅವರನ್ನು ಕೊಲ್ಲಬೇಕೋ? ಎಂದು ಪ್ರಶ್ನಿಸುತ್ತಾ ಕಣ್ಣೀರು ಹಾಕಿದ್ದಾರೆ.  ಇದನ್ನೂ ಓದಿ: ಕಾಂಗ್ರೆಸ್ಸಿಗರ ಮನಸ್ಥಿತಿಯಲ್ಲಿ ಅತಂತ್ರವಿದೆ, ನಾನು ಮತ್ತಷ್ಟು ಗಟ್ಟಿಯಾಗಿದ್ದೇನೆ: ಬೊಮ್ಮಾಯಿ

    ನನ್ನ ಮಕ್ಕಳಲ್ಲಿ ಒಬ್ಬರಿಗೆ ಫಿಟ್ಸ್ ಇದೆ. ಆದರೆ ನಾಲ್ಕು ತಿಂಗಳಿನಿಂದ ಅವರಿಗೆ ನೀಡಲಾಗುತ್ತಿರುವ ಔಷಧಿ ಬೆಲೆ ಏರಿಕೆಯಾಗಿದೆ. ಹಾಗಂತ ನನ್ನ ಮಕ್ಕಳಿಗೆ ಔಷಧಿ ನೀಡದೇ ಇರುವುದಕ್ಕೆ ಆಗುತ್ತಾ? ಸರ್ಕಾರ ಈಗಾಗಲೇ ಬಹುತೇಕ ಬಡವರನ್ನು ಕೊಂದಿದೆ. ಸರ್ವಶಕ್ತನಾದ ಅಲ್ಲಾಹನಿಗೆ ಈ ಬಗ್ಗೆ ಪ್ರಶ್ನಿಸಲು ನೀವು ಭಯಪಡುತ್ತೀರೋ ಅಥವಾ ಇಲ್ಲವೋ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಈ ವೀಡಿಯೋಗೆ ಪ್ರತಿಕ್ರಿಯಿಸಿದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಅವರು, ದೇಶದ ಆರ್ಥಿಕ ಪರಿಸ್ಥಿತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಸರ್ಕಾರ ಜೂನ್‍ನಲ್ಲಿ ವಿದ್ಯುತ್ ದರವನ್ನು ಹೆಚ್ಚಿಸಿಲ್ಲ ಅಥವಾ ಔಷಧಿಗಳ ಮೇಲೆ ಹೊಸ ತೆರಿಗೆಯನ್ನು ವಿಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 2022ರ ಏಪ್ರಿಲ್‍ನಲ್ಲಿ ಅಧಿಕಾರ ವಹಿಸಿಕೊಂಡ ಪಿಎಂ ಶೆಹಬಾಜ್ ಷರೀಫ್ ಅವರ ಸಮ್ಮಿಶ್ರ ಸರ್ಕಾರವು ಸಾಕಷ್ಟು ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಗಂಡ ತೀರಿಕೊಂಡ ಬಳಿಕ ಮತ್ತೊಬ್ಬನ ಸಂಗ, ಅಕ್ರಮ ಸಂಬಂಧ ವಿರೋಧಿಸಿದಕ್ಕೆ ಮಗನನ್ನೇ ಕೊಂದ ತಾಯಿ

    ಗಂಡ ತೀರಿಕೊಂಡ ಬಳಿಕ ಮತ್ತೊಬ್ಬನ ಸಂಗ, ಅಕ್ರಮ ಸಂಬಂಧ ವಿರೋಧಿಸಿದಕ್ಕೆ ಮಗನನ್ನೇ ಕೊಂದ ತಾಯಿ

    ಲಕ್ನೋ: ಗಂಡ ತೀರಿಕೊಂಡ ಬಳಿಕ ಮತ್ತೊಬ್ಬನೊಂದಿಗಿನ ಸಂಬಂಧ ವಿರೋಧಿಸಿದ್ದಕ್ಕಾಗಿ ಹದಿಹರೆಯದ ಮಗನನ್ನೇ ಕೊಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    16 ವರ್ಷದ ಮಗನನ್ನೇ ಕೊಂದಿರುವ ವಿಧವೆ ಹಾಗೂ ಆಕೆಯ ಪ್ರೇಮಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳ ಆಸ್ತಿ ಸೀಜ್: ಅಲೋಕ್ ಕುಮಾರ್

    KILLING CRIME

    ಮುನೇಶ ಗೋದಾರ ಹಾಗೂ ಆಕೆಯ ಪ್ರಿಯಕರ ಸತೇಂದ್ರ ಸೋಮವಾರ ಮುಂಜಾನೆ 16 ವರ್ಷದ ಆಶಿಶ್‌ನನ್ನು ಕೊಂದು ಶವವನ್ನು ಕೊಳವೆ ಬಾವಿಯಲ್ಲಿ ಎಸೆದಿದ್ದಾರೆ. ಬಳಿಕ ಮೃತದೇಹ ಪತ್ತೆಯಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವಿನಿತ್ ಜೈಸ್ವಾಲ್ ಹೇಳಿದ್ದಾರೆ. ಇದನ್ನೂ ಓದಿ: ನಿನ್ನ ತರ ನಕಲಿ ಸರ್ಟಿಫಿಕೇಟ್ ಕ್ರಿಯೇಟ್ ಮಾಡಿ ದಂಧೆ ನಡೆಸಿಕೊಂಡು ಬಂದಿಲ್ಲ ನಾನು: ಹೆಚ್‍ಡಿಕೆ ಕಿಡಿ

    ಆಶಿಶ್ ತಮ್ಮ ಸಂಬಂಧವನ್ನು ವಿರೋಧಿಸಿದ್ದರಿಂದ ಕೊಲೆ ಮಾಡಿದ್ದೇವೆ ಎಂದು ಆರೋಪಿಗಳು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಪತಿ ತೀರಿಕೊಂಡ ಬಳಿಕ ಮಹಿಳೆ, ಸತೇಂದ್ರ ಜತೆ ಸಂಬಂಧ ಬೆಳೆಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲವ್, ಸೆಕ್ಸ್, ದೋಖಾ – ಫೇಸ್‍ಬುಕ್‍ನಲ್ಲಿ ಪರಿಚಯವಾದ ಯುವಕನಿಂದ ಅಸ್ಸಾಂ ಮಹಿಳೆ ಕೊಲೆ

    ಲವ್, ಸೆಕ್ಸ್, ದೋಖಾ – ಫೇಸ್‍ಬುಕ್‍ನಲ್ಲಿ ಪರಿಚಯವಾದ ಯುವಕನಿಂದ ಅಸ್ಸಾಂ ಮಹಿಳೆ ಕೊಲೆ

    ಕಲಬುರಗಿ: ಫೇಸ್‍ಬುಕ್ ಮೂಲಕ ಪರಿಚಯವಾದ ಅಸ್ಸಾಂ ರಾಜ್ಯದ ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಬೆಳೆಸಿದ್ದ ಬಿಹಾರ ಮೂಲದ ಯುವಕ ಮಹಿಳೆಯನ್ನು ಕೊಲೆ ಮಾಡಿದ ಘಟನೆಯನ್ನು ಚಿಂಚೋಳಿ ಠಾಣೆ ಪೊಲೀಸರು ಭೇದಿಸಿದ್ದಾರೆ.

    ಮೃತ ಮಹಿಳೆಯನ್ನು ಜಸ್ಮೀನಾ ಎಂದು ಗುರುತಿಸಲಾಗಿದೆ. ಉತ್ತರ ಭಾರತದ ಅಸ್ಸಾಂ ರಾಜ್ಯದಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಸುಖವಾಗಿ ಸಂಸಾರ ನಡೆಸುತ್ತಿದ್ದ ಜಸ್ಮೀನಾಗೆ ಫೇಸ್ ಬುಕ್ ಮೂಲಕ ಬಿಹಾರ ರಾಜ್ಯದ ಮೊಹಮ್ಮದ್ ಜುಲ್ಫಿಕರ್ ಎಂಬ ಯುವಕನ ಪರಿಚಯವಾಗಿದೆ. ನಂತರ ಇಬ್ಬರು ಪರಸ್ಪರ ಪ್ರೀತಿಸ ತೊಡಗಿದ್ದರು. ಇಬ್ಬರು ಕೂಡಿ ಸಂಸಾರ ನಡೆಸಲು ನಿರ್ಧರಿಸಿ ಒಂದೂವರೆ ವರ್ಷದ ಹಿಂದೆ ಕಲಬುರಗಿ ಜಿಲ್ಲೆಯ ಚಿಂಚೋಳಿಗೆ ಆಗಮಿಸಿ ಒಂದು ತಿಂಗಳು ಸಂಸಾರ ನಡೆಸಿದ್ದರು. ಅದಾದ ಬಳಿಕ ನನ್ನನ್ನ ಮದ್ವೆಯಾಗು ಅಂತಾ ಜಸ್ಮಿನಾ ಮಹ್ಮದ್ ಜುಲ್ಫಿಕರ್‌ಗೆ ಒತ್ತಾಯಿಸಿದ್ದಾಳೆ. ಆದರೆ ಆಕೆ ಎಷ್ಟೇ ಒತ್ತಾಯ ಮಾಡಿದರೂ ಜುಲ್ಫಿಕರ್ ಮದುವೆಯಾಗಲು ನಿರಾಕರಿಸುತ್ತಾ ಬಂದಿದ್ದನು.

    ಕಳೆದ ವರ್ಷ ಏಪ್ರಿಲ್ 5 ರಂದು ಜಸ್ಮಿನಾಳನ್ನು ಪೋಲಕಪಳ್ಳಿ ಬಳಿ ಮಹ್ಮದ್ ಜುಲ್ಫಿಕರ್ ಕರೆದುಕೊಂಡು ಹೋಗಿದ್ದನು. ಈ ವೇಳೆ ಇಬ್ಬರ ನಡುವೆ ಅಲ್ಲಿಯೂ ಸಹ ಇಬ್ಬರ ಮಧ್ಯೆ ಜಗಳ ನಡೆದಿದೆ. ನಂತರ ಮಹ್ಮದ್ ಜುಲ್ಫಿಕರ್ ಜಸ್ಮೀನಾಳ ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹವನ್ನ ನಿರ್ಜನ ಪ್ರದೇಶದಲ್ಲಿ ಬಿಸಾಕಿ ಸ್ಥಳದಿಂದ ಪರಾರಿಯಾಗಿದ್ದನು.  ಇದನ್ನೂ ಓದಿ: ನೀರಿನ ಬಾಟಲಿಗೆ ಜಗಳ – ಚಲಿಸುವ ರೈಲಿನಿಂದ ಹೊರಗೆ ದೂಡಿದ ಸಿಬ್ಬಂದಿ

    ಆರಂಭದಲ್ಲಿ ಜಸ್ಮಿನಾಳ ಮೃತದೇಹ ಯಾರದೆಂಬುದು ಪೊಲೀಸರಿಗೆ ತಿಳಿದಿರಲಿಲ್ಲ. ಹೀಗಾಗಿ ಪ್ರಕರಣ ಪೊಲೀಸರಿಗೆ ದೊಡ್ಡ ತಲೆ ನೋವಾಗಿತ್ತು. ಅಷ್ಟಕ್ಕೂ ಚಿಂಚೋಳಿ ಮತ್ತು ತೆಲಂಗಾಣದ ಗಡಿ ಪೊಲೀಸ್ ಠಾಣೆಗಳಲ್ಲಿ ಯಾವುದಾದರೂ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಾಗಿದೆಯಾ ಎಂಬುದನ್ನು ಸಹ ಪೊಲೀಸರು ಪರಿಶೀಲನೆ ನಡೆಸಿದ್ದರು. ಆದರೂ ಯಾವುದೇ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಾಗಿರಲಿಲ್ಲ. ಹೀಗಾಗಿ ಪೊಲೀಸರು ಜಸ್ಮಿನಾಳ ಮೊಬೈಲ್ ನಂಬರ್ ಪಡೆದು ಕಾಲ್ ಡಿಟೈಲ್ ಸಂಗ್ರಹಿಸಿದರು. ಆಗ ಜಸ್ಮಿನಾ ಸಿಮ್ ಖರೀದಿ ಮಾಡಿದಾಗ ನೀಡಿದ ಫೋಟೊ ಸಂಗ್ರಹಿಸಿ ಮೃತದೇಹದ ಜೊತೆ ಹೋಲಿಕೆ ಮಾಡಿದಾಗ, ಮೃತದೇಹ ಜಸ್ಮಿನಾಳದ್ದೇ ಅಂತಾ ಪೊಲೀಸರಿಗೆ ತಿಳಿದುಬಂದಿದೆ. ಇದನ್ನೂ ಓದಿ: ಭಾರತದ ಜಲಗಡಿಗೆ ಬಂದಿದ್ದ ಪಾಕ್ ಯದ್ಧನೌಕೆಯನ್ನು ಓಡಿಸಿದ ಡಾರ್ನಿಯರ್

    ನಂತರ ಆಕೆಯ ನಂಬರ್‌ಗೆ ಯಾವ ನಂಬರ್‌ನಿಂದ ಕರೆ ಬಂದಿದೆ ಅಂತಾ ಪರಿಶೀಲಿಸಿದಾಗ, ಆಕೆಯ ಪ್ರಿಯಕರ ಮಹ್ಮದ್ ಜುಲ್ಫಿಕರ್‌ನ ಮೊಬೈಲ್‍ನಿಂದ ಜಸ್ಮಿನಾಳ ಮೊಬೈಲ್‍ಗೆ ಎಂಟು ಸಲ ಕಾಲ್ ಬಂದಿರುವುದು ಪತ್ತೆಯಾಗಿದೆ. ತಕ್ಷಣವೇ ಅಲರ್ಟ್ ಆದ ಚಿಂಚೋಳಿ ಠಾಣೆ ಪೊಲೀಸರು, ಮಹ್ಮದ್ ಜುಲ್ಫಿಕರ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಾನೇ ಕೊಲೆ ಮಾಡಿರುವುದಾಗಿ ಮಹ್ಮದ್ ಜುಲ್ಫಿಕರ್ ಒಪ್ಪಿಕೊಂಡಿದ್ದಾನೆ.

    Live Tv
    [brid partner=56869869 player=32851 video=960834 autoplay=true]