Tag: women

  • ಮುರುಘಾ ಮಠದ ಆಡಳಿತಾಧಿಕಾರಿ, ಅಧಿಕಾರಿ ಪತ್ನಿ ವಿರುದ್ಧ ಕೇಸ್

    ಮುರುಘಾ ಮಠದ ಆಡಳಿತಾಧಿಕಾರಿ, ಅಧಿಕಾರಿ ಪತ್ನಿ ವಿರುದ್ಧ ಕೇಸ್

    ಚಿತ್ರದುರ್ಗ: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಅಡಿಯಲ್ಲಿ ಮುರುಘಾ ಮಠದ ಆಡಳಿತಾಧಿಕಾರಿಯೂ ಆಗಿರುವ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಹಾಗೂ ಅವರ ಪತ್ನಿ ಸೌಭಾಗ್ಯ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    CRIME 2

    ಮುರುಘಾ ಮಠದ ಹಾಸ್ಟೆಲ್ ವಾರ್ಡನ್ ರಶ್ಮಿ ಅವರು ನೀಡಿದ ದೂರನ್ನು ಆಧರಿಸಿ ಎಸ್.ಕೆ.ಬಸವರಾಜನ್ ವಿರುದ್ಧ ಸೆಕ್ಷನ್ 354 (ಅತ್ಯಾಚಾರಕ್ಕೆ ಯತ್ನ) ಹಾಗೂ ಬಸವರಾಜನ್ ಮತ್ತು ಸೌಭಾಗ್ಯ ವಿರುದ್ಧ ಸೆಕ್ಷನ್ 341, 342, 504, 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ – ಮುರುಘಾ ಶರಣರ ವಿರುದ್ಧ ಕೇಸ್‌

    ಆಡಳಿತಾಧಿಕಾರಿ ಬಸವರಾಜನ್ ಹಾಸ್ಟೆಲ್ ಪರಿಶೀಲನೆ ಮಾಡುವ ನೆಪದಲ್ಲಿ ಆಗಾಗ್ಗೆ ಬಂದು ದೇಹದ ಅಂಗಾಂಗಗಳನ್ನು ಮುಟ್ಟಿ ಹಿಂಸೆ ನೀಡುತ್ತಿದ್ದರು. ಅತ್ಯಾಚಾರಕ್ಕೆ ಯತ್ನಿಸಿದಾಗ ಪ್ರತಿರೋಧ ತೋರಲಾಯಿತು. ಇದರಿಂದ ವಿಚಾರ ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ನಟಿ, ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಕೊಲೆಗೆ ಮೆಗಾ ಟ್ವಿಸ್ಟ್: ವೈರಲ್ ವಿಡಿಯೋ ಬಗ್ಗೆ ಅನುಮಾನ

    ಮಠದ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯರಿಬ್ಬರು ವೈಯಕ್ತಿಕ ಕಾರಣ ನೀಡಿ ಹಾಸ್ಟೆಲ್ ನಿಂದ ಹೊರ ಹೋಗಿದ್ದರು. ಆದರೆ ಅವರು ಮನೆಗೆ ತೆರಳದೇ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆ ತಲುಪಿದ್ದರು. ಆದರೆ ಮಕ್ಕಳ ಸಂಬಧಪಟ್ಟವರಿಗೆ ಮಾಹಿತಿ ನೀಡದೇ ತನ್ನ ಮನೆಯಲ್ಲೇ ಅಕ್ರಮವಾಗಿ ಮನೆಯಲ್ಲಿ ಇರಿಸಿಕೊಂಡಿದ್ದರು. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉಡುಪಿಯಲ್ಲಿ ಮಹಿಳಾ ಮೀನು ವ್ಯಾಪಾರಿಗಳ ಶೆಡ್ ಧ್ವಂಸ – ಸ್ಥಳೀಯರ ಆಕ್ರೋಶ

    ಉಡುಪಿಯಲ್ಲಿ ಮಹಿಳಾ ಮೀನು ವ್ಯಾಪಾರಿಗಳ ಶೆಡ್ ಧ್ವಂಸ – ಸ್ಥಳೀಯರ ಆಕ್ರೋಶ

    ಉಡುಪಿ: ಮೀನುಗಾರ ಮಹಿಳೆಯರಿಗೆ, ಮಳೆಯಿಂದ ರಕ್ಷಣೆ ನೀಡಲು ನಿರ್ಮಿಸಿದ್ದ ಶೆಡ್ ಅನ್ನು ನಗರಸಭೆ ಕೆಡವಿದೆ. ಮುನಿಸಿಪಾಲಿಟಿ ಸದಸ್ಯರು ಸ್ವಂತ ಖರ್ಚಲ್ಲಿ ಮಾಡಿದ್ದ ಅಭಿವೃದ್ಧಿ ಕೆಲಸವನ್ನು ಅಧಿಕಾರಿಗಳು ಕೆಡವಿದ್ದಕ್ಕೆ ಜನಾಕ್ರೋಶಕ್ಕೆ ಕಾರಣರಾಗಿದ್ದಾರೆ.

    ಉಡುಪಿಯ ಕಿನ್ನಿಮುಲ್ಕಿ ಗೋಪುರ ಬಳಿ ಕಳೆದ 30 ವರ್ಷದಿಂದ ಮೊಗವೀರ ಮಹಿಳೆಯರು ಮೀನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಬೀದಿ ಬದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಾ ಬಿಸಿಲು ಮಳೆಯನ್ನು ಲೆಕ್ಕಿಸದೇ ಜೀವನವನ್ನು ಮಾಡುತ್ತಿದ್ದಾರೆ. ಸ್ಥಳೀಯ ನಗರಸಭಾ ಸದಸ್ಯೆ ತನ್ನ ಗೌರವ ಧನ 2 ಲಕ್ಷ ರೂ. ಬಳಸಿ ತಾತ್ಕಾಲಿಕ ಶೆಡ್ ನಿರ್ಮಿಸಿದ್ದರು. ಕಳೆದ 2-3 ದಿನಗಳಿಂದ ಕೆಲಸ ಆಗುತ್ತಿತ್ತು. ಈ ಪುಟ್ಟ ಶೆಡ್ ನಿರ್ಮಿಸಲಾಗುತ್ತಿತ್ತು. ಉಡುಪಿ ನಗರಸಭೆ ಅಧಿಕಾರಿಗಳು ಶೀಟ್ ಶೆಡ್ ಅನ್ನು ಬುಲ್ಡೋಜರ್ ತಂದು ಕೆಡವಿ ಹಾಕಿದ್ದಾರೆ. ಇದನ್ನೂ ಓದಿ: ಮಕ್ಕಳ ಬುದ್ಧಿ ಕೆಡಿಸಿ ದೂರು: ಮುರುಘಾ ಮಠದ ವಕೀಲ ವಿಶ್ವನಾಥಯ್ಯ

    ಈ ಬೆಳವಣಿಗೆ ವಿರುದ್ಧ ಸ್ಥಳೀಯ ಆಟೋ ಸ್ಟ್ಯಾಂಡ್ ನಗರಸಭಾ ಸದಸ್ಯೆ, ನೂರಾರು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು. ನಗರಸಭೆಯ ಅಧಿಕಾರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು. ಬಂದಿದ್ದ ಕಾರಿಗೆ ಮುತ್ತಿಗೆ ಹಾಕಿ ಸ್ಥಳದಿಂದ ತೆರಳದಂತೆ ದಿಗ್ಬಂಧನ ಮಾಡಿದ್ದಾರೆ. ಇದನ್ನೂ ಓದಿ: ಮಲಗಿದ್ದ ಮಹಿಳೆ ಮೇಲೆ ಹೆಡೆ ಎತ್ತಿ ಕುಳಿತ ನಾಗರಹಾವು – ಪವಾಡದ ರೀತಿ ಪಾರು

    ಇದೊಂದು ಅಕ್ರಮ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರೋಡ್ ಪಕ್ಕದಲ್ಲೇ ಶೆಡ್ ಹಾಕಲಾಗಿದೆ. ಹೀಗಾಗಿ ನಾವು ತೆರವು ಮಾಡುತ್ತಿದ್ದೇವೆ ಎಂದು ನಗರಸಭೆ ಅಧಿಕಾರಿಗಳು ಹೇಳಿದ್ದಾರೆ. ಸುಮಾರು 2 ಗಂಟೆಗಳ ಕಾಲ ಅಧಿಕಾರಿಗಳು ಮತ್ತು ಸ್ಥಳೀಯರ ನಡುವೆ ವಾದ ಪ್ರತಿವಾದ ನಡೆಯಿತು. ನಂತರ ಮಲ್ಪೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ನಗರಸಭೆ ಆಡಳಿತದ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರೈಲಿಗಾಗಿ ಕಾಯುತ್ತಿದ್ದ ಮಹಿಳೆ ಮೇಲೆ ಪೊಲೀಸ್ ಠಾಣೆಯ ಸಮೀಪದಲ್ಲೇ ಸಾಮೂಹಿಕ ಅತ್ಯಾಚಾರ

    ರೈಲಿಗಾಗಿ ಕಾಯುತ್ತಿದ್ದ ಮಹಿಳೆ ಮೇಲೆ ಪೊಲೀಸ್ ಠಾಣೆಯ ಸಮೀಪದಲ್ಲೇ ಸಾಮೂಹಿಕ ಅತ್ಯಾಚಾರ

    ಜೈಪುರ: ಪೊಲೀಸ್ ಠಾಣೆಯಿಂದ 200 ಮೀಟರ್ ದೂರದಲ್ಲೇ ರೈಲಿಗಾಗಿ ಕಾಯುತ್ತಿದ್ದ ಮಹಿಳೆಯ ಮೇಲೆ ಐವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಹೃದಯ ವಿದ್ರಾವಕ ಘಟನೆ ರಾಜಾಸ್ಥಾನದ ಜೈಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ರಾತ್ರಿ 10 ರಿಂದ 12 ಗಂಟೆಯ ನಡುವೆ 35 ವರ್ಷದ ಮಹಿಳೆ ತನ್ನ ಪತ್ನಿಯೊಂದಿಗೆ ದೆಹಲಿಗೆ ಹೋಗುವ ರೈಲಿಗಾಗಿ ಕಾಯುತ್ತಿದ್ದ ಮಹಿಳೆ ಮೇಲೆ ಐವರು ಅತ್ಯಾಚಾರ ಎಸಗಿದ್ದಾರೆ. ಘಟನೆ ಬಳಿಕ ಮಹಿಳೆ ಜಿಆರ್‌ಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಪಾಕ್ ಬೆಂಬಲಕ್ಕೆ ಸೌದಿ ಅರೇಬಿಯಾ – 8 ಸಾವಿರ ಕೋಟಿ ಹೂಡಿಕೆ ಮಾಡೋದಾಗಿ ಘೋಷಣೆ

    STOP RAPE

    ಘಟನೆ ನಡೆದಿದ್ದು ಹೇಗೆ?
    ಜೈಪುರ ರೈಲ್ವೆ ಜಂಕ್ಷನ್‌ನಲ್ಲಿ ದೆಹಲಿಗೆ ಹೋಗುವ ರೈಲಿಗಾಗಿ ಕಾಯುತ್ತಿದ್ದರು. ದೆಹಲಿಯಿಂದ ತ್ರಿಪುರಾಗೆ ಮತ್ತೊಂದು ರೈಲಿನಲ್ಲಿ ತೆರಳಬೇಕಿತ್ತು. ಪತಿ ಕುಡಿದ ಅಮಲಿನಲ್ಲಿದ್ದ. ಈ ವೇಳೆ ಹಸಿವಿನಲ್ಲಿದ್ದ ಮಹಿಳೆ ರೆಸ್ಟೋರೆಂಟ್‌ನಲ್ಲಿ ಆಹಾರ ತೆಗೆದುಕೊಳ್ಳಲು ಹೋಗಿದ್ದಳು. ಅಲ್ಲಿಂದ ವಾಪಸ್ ಬರುವಾಗ ಐವರು ಯುವಕರು ರೈಲ್ವೆ ಜಂಕ್ಷನ್ ಬಳಿ ಡ್ರಾಪ್ ಮಾಡುವುದಾಗಿ ಹೇಳಿದ್ದಾರೆ. ಆದರೆ ಆಕೆ ಒಪ್ಪದೇ ಇದ್ದಾಗ ಆಕೆಯ ಬಾಯಿ ಬಿಗಿದು, ಅಪಹರಿಸಿ ರೈಲಿನ ಬೇಲಿಯಿಂದ ಅಳಿಯ ಪಕ್ಕಕ್ಕೆ ಎಸೆದಿದ್ದಾರೆ. ನಂತರ ಅತ್ಯಾಚಾರ ಎಸಗಿ, ಕಾಮುಕರು ಪರಾರಿಯಾಗಿದ್ದಾರೆ ಎಂದು ಜಿಆರ್‌ಪಿ ಉಪ ಪೊಲೀಸ್ ವರಿಷ್ಠಾಧಿಕಾರಿ ಕಿಶನ್ ಸಿಂಗ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪತ್ನಿಯೊಂದಿಗೆ ಮುನಿಸು – 80 ಅಡಿ ಎತ್ತರದ ತಾಳೆ ಮರದಲ್ಲಿ 1 ತಿಂಗಳು ಕಳೆದ ವ್ಯಕ್ತಿ

    ಇದು ಜೈಪುರದ ಜಿಪಿಆರ್ ಠಾಣೆಯ ಸ್ಥಳದಿಂದ ಕೇವಲ 200 ಮೀಟರ್ ದೂರದಲ್ಲೇ ನಡೆದಿದೆ. ಮಹಿಳೆ ಘಟನೆಯ ಬಗ್ಗೆ ಪತಿಗೆ ತಿಳಿಸಿದ ಬಳಿಕ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಂತ್ರಸ್ತೆಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರಿಯಕರನಿಗೆ 15 ಬಾರಿ ಕರೆ ಮಾಡಿ ಟೆಕ್ಕಿ ಸುಂದರಿ ಆತ್ಮಹತ್ಯೆ

    ಪ್ರಿಯಕರನಿಗೆ 15 ಬಾರಿ ಕರೆ ಮಾಡಿ ಟೆಕ್ಕಿ ಸುಂದರಿ ಆತ್ಮಹತ್ಯೆ

    ಭುವನೇಶ್ವರ: ಒಡಿಶಾದಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ ಯುವತಿಯೊಬ್ಬಳು ಪ್ರಿಯಕರನಿಂದ ಬ್ಲ್ಯಾಕ್‌ಮೇಲ್‌ಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಸಾಫ್ಟ್‌ವೇರ್‌ ಎಂಜಿನಿಯರ್ ಶ್ವೇತಾ ಉತ್ಕಲ್ ಕುಮಾರಿ ಎಂಬಾಕೆಯೇ ತನ್ನನ್ನು ಉಸಿರುಗಟ್ಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕವೇ ಇದು ಗೊತ್ತಾಗಿದ್ದು, ಯುವತಿ ಕುಟುಂಬಸ್ಥರು ಪ್ರಿಯಕರ ಸೌಮ್ಯಜಿತ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಯುವತಿಯ ದೇಹದ ಮೇಲೆ ಯಾವುದೇ ಗಾಯದ ಗುರುತುಗಳೂ ಇರಲಿಲ್ಲ ಎಂದು ವರದಿ ಹೇಳಿದೆ. ಇದನ್ನೂ ಓದಿ: ಒಪ್ಪಿಗೆಯಿಲ್ಲದೇ ಅಪ್ರಾಪ್ತೆಯೊಂದಿಗೆ ಸೆಕ್ಸ್ ನಡೆಸಿದ ವ್ಯಕ್ತಿಗೆ 100 ವರ್ಷ ಜೈಲು!

    ಏನಿದು ಟೆಕ್ಕಿ ಸುಂದರಿಯ ಕಹಾನಿ?
    ಭುವನೇಶ್ವರದ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶ್ವೇತಾ, ಸೌಮ್ಯಜಿತ್ ಎಂಬಾತನನ್ನು ಪ್ರೀತಿಸುತ್ತಿದ್ದರು. ಆಗಾಗ್ಗೆ ಇಬ್ಬರೂ ಹೊರಗೆ ಸುತ್ತಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಸೌಮ್ಯಜಿತ್, ಶ್ವೇತಾಳ ಖಾಸಗಿ ಫೋಟೋಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದನು. ಇಬ್ಬರ ನಡುವೆ ಮದುವೆ ಮಾತುಕತೆ ನಡೆದಾಗ ಪಬ್‌ವೊಂದರಲ್ಲಿ ಜಗಳ ಮಾಡಿಕೊಂಡಿದ್ದರು. ವರದಕ್ಷಿಣೆಗಾಗಿ ಸೌಮ್ಯಜಿತ್ 30 ಲಕ್ಷ ರೂ. ಬೇಡಿಕೆಯಿಟ್ಟದ್ದನು. ಇದನ್ನು ನಿರಾಕರಿಸಿದ ನಂತರ ಶ್ವೇತಾಳ ಖಾಸಗಿ ಫೋಟೋಗಳನ್ನು ತೋರಿಸಿ ಸೌಮ್ಯಜಿತ್ ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡಲು ಶುರು ಮಾಡಿದ್ದಾನೆ. ಹಣ ಕೊಡದೇ ಇದ್ದರೇ ಖಾಸಗಿ ಫೋಟೋಗಳನ್ನು ಜಾಲತಾಣಗಳಲ್ಲಿ ಹರಿಯಬಿಡುವುದಾಗಿಯೂ ಬೆದರಿಕೆ ಹಾಕಿದ್ದನು. ಇದನ್ನೂ ಓದಿ: ತುಮಕೂರಿನ ಭೀಕರ ರಸ್ತೆ ಅಪಘಾತಕ್ಕೆ ಪ್ರಧಾನಿ ಸಂತಾಪ- ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ

    ಇದರಿಂದ ಮನನೊಂದ ಶ್ವೇತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಸೌಮ್ಯಜಿತ್‌ಗೆ 15 ಬಾರಿ ಕರೆ ಮಾಡಿದ್ದರು. ಆದರೆ ಸೌಮ್ಯಜಿತ್ ಫೋನ್ ರಿಸೀವ್ ಮಾಡಿಲ್ಲ ಎಂಬುದು ತನಿಖೆ ವೇಳೆ ತಿಳಿದುಬಂದಿದೆ ಎಂದು ಚಂದ್ರಶೇಖರಪುರದ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

    ಶ್ವೇತಾಳ ಫೋನ್ ಕರೆಗಳು ಹಾಗೂ ಡೈರಿ ಪರಿಶೀಲಿಸಿದಾಗ ಗೆಳೆಯನ ಬಗ್ಗೆ ಮಾಹಿತಿ ಸಿಕ್ಕಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಶ್ವೇತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಾಜಿ ‘ಬಿಗ್ ಬಾಸ್’ ಸ್ಪರ್ಧಿ ಸೊನಾಲಿ ಕೊಲೆಯಾಗಿದ್ದಾಳೆ: ಸಹೋದರ ರಿಂಕು ಆರೋಪ

    ಸದ್ಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ ಅಥವಾ ದುಷ್ಪ್ರೇರಣೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಸೆರೆಹಿಡಿಯಲು ಬಲೆ ಬೀಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪತಿಗೆ ತಿಳಿಸದೇ ಮಾಡಿದ್ದ 8 ಲಕ್ಷ ಸಾಲ ತೀರಿಸಲು ತಂದೆ-ತಾಯಿಗೆ ಟೀಯಲ್ಲಿ ಇಲಿ ಪಾಷಾಣ ಹಾಕಿದ್ಲು

    ಪತಿಗೆ ತಿಳಿಸದೇ ಮಾಡಿದ್ದ 8 ಲಕ್ಷ ಸಾಲ ತೀರಿಸಲು ತಂದೆ-ತಾಯಿಗೆ ಟೀಯಲ್ಲಿ ಇಲಿ ಪಾಷಾಣ ಹಾಕಿದ್ಲು

    ತಿರುವನಂತಪುರಂ: ಪತಿಗೆ ತಿಳಿಸದೇ ಮಾಡಿದ್ದ ಸಾಲ ತೀರಿಸಲು ಮಹಿಳೆಯೊಬ್ಬರು ತನ್ನ ತಂದೆ-ತಾಯಿಗೆ ವಿಷ ಹಾಕಿರುವ ದಾರುಣ ಘಟನೆ ಕೇರಳದಲ್ಲಿ ನಡೆದಿದೆ.

    ತ್ರಿಶೂರ್‌ ಜಿಲ್ಲೆಯ ಕುನ್ನಂಕುಲಂನಲ್ಲಿ ಈ ಘಟನೆ ನಡೆದಿದ್ದು, ಇಂದುಲೇಖಾ (39) ತನ್ನ ತಂದೆ-ತಾಯಿಗೆ ವಿಷ ಹಾಕಿದ ಮಹಿಳೆ. ಈಕೆ ತನ್ನ ತಂದೆ ಚಂದ್ರನ್‌ ಹಾಗೂ ತಾಯಿ ರುಕ್ಮಿಣಿ ಅವರಿಗೆ ಕುಡಿಯಲು ಕೊಟ್ಟಿದ್ದ ಟೀನಲ್ಲಿ ಇಲಿ ಪಾಷಾಣ ಹಾಕಿದ್ದಳು. ಟೀ ಕುಡಿದು ತಾಯಿ ಮೃತಪಟ್ಟರೆ, ರುಚಿಯಲ್ಲಿ ವ್ಯತ್ಯಾಸ ಕಂಡ ತಂದೆ ಅದನ್ನು ಕುಡಿಯದೇ ಪ್ರಾಣ ಉಳಿಸಿಕೊಂಡಿದ್ದಾರೆ. ಇದನ್ನೂ ಓದಿ: ಒಪ್ಪಿಗೆಯಿಲ್ಲದೇ ಅಪ್ರಾಪ್ತೆಯೊಂದಿಗೆ ಸೆಕ್ಸ್ ನಡೆಸಿದ ವ್ಯಕ್ತಿಗೆ 100 ವರ್ಷ ಜೈಲು!

    ಏನಿದು ಪ್ರಕರಣ?
    ದುಬೈನಲ್ಲಿ ಕೆಲಸ ಮಾಡುತ್ತಿರುವ ಪತಿಗೆ ತಿಳಿಸದೆಯೇ ಇಂದುಲೇಖಾ ಆಭರಣಗಳನ್ನು ಒತ್ತೆ ಇಟ್ಟು 8 ಲಕ್ಷ ರೂ. ಸಾಲ ಪಡೆದಿದ್ದರು. ಪತಿ ರಜೆ ಮೇಲೆ ಊರಿಗೆ ಬರುತ್ತಿದ್ದುದನ್ನು ತಿಳಿದು, ಸಾಲ ತೀರಿಸಲು ದಿಕ್ಕು ತೋಚಿಲ್ಲ. ಪತಿ ಬರುವಷ್ಟರಲ್ಲಿ ಹೇಗಾದರೂ ಸಾಲ ತೀರಿಸಬೇಕೆಂದು ನಿರ್ಧರಿಸಿದ ಇಂದುಲೇಖಾ ಕಣ್ಣಿಗೆ ಬಿದ್ದಿದ್ದು ಆಕೆಯ ತಂದೆ-ತಾಯಿ. ಪೋಷಕರ ಆಸ್ತಿಯನ್ನು ಮಾರಿ ಸಾಲ ತೀರಿಸಲು ಮುಂದಾಗಿದ್ದಳು.

    ಪೋಷಕರಿಗೆ ಟೀಯಲ್ಲಿ ಇಲಿ ಪಾಷಾಣ
    ತನ್ನ ಪೋಷಕರನ್ನು ಕೊಲ್ಲಲು ಇಂದುಲೇಖಾ ನಿರ್ಧರಿಸಿದ್ದಾಳೆ. ನಂತರ ಅವರಿಗೆ ಕುಡಿಯಲು ಕೊಟ್ಟಿದ್ದ ಟೀಯಲ್ಲಿ ಇಲಿ ಪಾಷಾಣ ಬೆರೆಸಿದ್ದಾಳೆ. ಟೀಯನ್ನು ತಾಯಿ ಕುಡಿದಿದ್ದಾರೆ. ಆದರೆ ಟೀ ರುಚಿಯಲ್ಲಿ ಕಹಿ ಅನುಭವವಾಗಿ ಆಕೆ ತಂದೆ ಒಂದು ಗುಟುಕನ್ನಷ್ಟೇ ಕುಡಿದು ಸುಮ್ಮನಾಗಿದ್ದಾರೆ.

    ಟೀ ಕುಡಿದ ಇಂದುಲೇಖಾ ತಾಯಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸಾವಿನ ಕಾರಣದ ಬಗ್ಗೆ ಅನುಮಾನಗೊಂಡ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ದೇಹದಲ್ಲಿ ವಿಷದ ಅಂಶ ಪತ್ತೆಯಾಗಿದ್ದು, ಪೊಲೀಸರು ಬುಧವಾರ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಕುಟುಂಬ ಸದಸ್ಯರ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಉರಿಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

    ವಿಚಾರಣೆ ವೇಳೆ ಚಂದ್ರನ್ ಅವರು ತಮ್ಮ ಮಗಳು ನೀಡಿದ ಚಹಾವನ್ನು ಕುಡಿದು ಪತ್ನಿ ಕುಸಿದು ಬಿದ್ದಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ರುಚಿಯಲ್ಲಿ ಸ್ವಲ್ಪ ಬದಲಾವಣೆಯನ್ನು ಅನುಭವಿಸಿದ ಅವರು ಚಹಾವನ್ನು ಕುಡಿಯಲಿಲ್ಲ. ಚಂದ್ರನ್ ಅವರು ತಮ್ಮ ಪತ್ನಿಯ ಸಾವಿನಲ್ಲಿ ಅವರ ಹಿರಿಯ ಮಗಳು ಇಂದುಲೇಖಾ ಪಾತ್ರದ ಬಗ್ಗೆ ಕೆಲವು ಅನುಮಾನಗಳನ್ನು ವ್ಯಕ್ತಪಡಿಸಿದರು.

    ಪೊಲೀಸರು ಪ್ರಕರಣ ಭೇದಿಸಿದ್ದು ಹೇಗೆ?
    ವಿಚಾರಣೆ ವೇಳೆ ಇಂದುಲೇಖಾ ಮೊಬೈಲ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಗೂಗಲ್‌ ಸರ್ಚಿಂಗ್‌ ಹಿಸ್ಟರಿ ಪರಿಶೀಲಿಸುವಾಗ, ʼಜನರಿಗೆ ವಿಷ ಹಾಕಿ ಸಾಯಿಸುವುದು ಹೇಗೆʼ ಎಂದು ಸರ್ಚ್‌ ಆಗಿರುವುದು ತಿಳಿದುಬಂದಿದೆ. ಈ ಸಂಬಂಧ ವಿಚಾರಣೆ ನಡೆಸಿದಾಗ, ಆಕೆ ತನ್ನ ಪೋಷಕರಿಗೆ ನೀಡಿದ ಚಹಾದಲ್ಲಿ ಇಲಿ ಪಾಷಾಣ ಹಾಕಿದ್ದನ್ನು ಒಪ್ಪಿಕೊಂಡಿದ್ದಾಳೆ. ಚಹಾ ಕುಡಿದು ಕುಸಿದು ಬಿದ್ದ ರುಕ್ಮಿಣಿಯನ್ನು ಇಂದುಲೇಖಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳು. ಆಸ್ತಿ ಪಡೆಯಲು ಪೋಷಕರನ್ನು ಕೊಂದು ಹಾಕಲು ಯತ್ನಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ.

    Live Tv
    [brid partner=56869869 player=32851 video=960834 autoplay=true]

  • ವರ್ಕ್ ಫ್ರಮ್ ಹೋಮ್‌ನಿಂದ ಸೆಕ್ಸ್ ವೀಡಿಯೋ ನೋಡುವವರ ಸಂಖ್ಯೆ ಹೆಚ್ಚಳ!

    ವರ್ಕ್ ಫ್ರಮ್ ಹೋಮ್‌ನಿಂದ ಸೆಕ್ಸ್ ವೀಡಿಯೋ ನೋಡುವವರ ಸಂಖ್ಯೆ ಹೆಚ್ಚಳ!

    ಲಂಡನ್: ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಕಂಪನಿಗಳು ವರ್ಕ್ ಫ್ರಮ್ ಹೋಮ್ ನೀಡಿದ್ದು, ಇದರಿಂದ ಯುಕೆ ನಲ್ಲಿ ಅಶ್ಲೀಲ ವೀಡಿಯೋ ಹಾಗೂ ಫೋಟೋಗಳನ್ನು ನೋಡುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ ಹೆಚ್ಚಿನ ಜನ ವ್ಯಸನಿಗಳಾಗುತ್ತಿದ್ದಾರೆ ಎಂಬವುದು ಸರ್ವೇಯೊಂದರಲ್ಲಿ ಬಯಲಾಗಿದೆ.

    ವರ್ಕ್ ಫ್ರಂ ಹೋಮ್ ಜನಪ್ರಿಯವಾದಾಗಿನಿಂದ ಪೋರ್ನೋಗ್ರಫಿ ನೋಡುವ ಯುಕೆ ನಾಗರಿಕರ ಸಂಖ್ಯೆ ವಾಸ್ತವವಾಗಿ ದ್ವಿಗುಣಗೊಂಡಿದೆ ಎಂದು ವರದಿಯಾಗಿದೆ. ತಜ್ಞರ ಪ್ರಕಾರ, ವರ್ಕ್ ಫ್ರಮ್ ಹೋಮ್ ಸಾಂದರ್ಭಿಕ ಅಶ್ಲೀಲ ವೀಕ್ಷಕರನ್ನೂ ವ್ಯಸನಿಗಳನ್ನಾಗಿ ಮಾಡಲು ಕಾರಣವಾಗಿದೆ. ಈ ಮೂಲಕ ಸಮಸ್ಯೆಗೆ ಸಿಲುಕಿ ವೈದ್ಯಕೀಯ ಆರೈಕೆ ಪಡೆಯುತ್ತಿರುವವರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತಿದೆ. ಆದ್ದರಿಂದ ಅಶ್ಲೀಲ ವ್ಯಸನಿಗಳ ಸಂಖ್ಯೆ ಸಹಜವಾಗಿಯೇ ಹೆಚ್ಚಾಗುತ್ತಿದೆ. ಇದನ್ನೂ ಓದಿ: ‘ರಾಕೆಟ್ರಿ’ ಸಿನಿಮಾದಲ್ಲಿ ಇಸ್ರೊಗೆ ಕಳಂಕ ತರುವಂತಹ ಸುಳ್ಳುಗಳನ್ನು ಹೇಳಲಾಗಿದೆ: ಮಾಜಿ ವಿಜ್ಞಾನಿಗಳ ಆರೋಪ

    ಅಶ್ಲೀಲ ವ್ಯಸನವು ಲೈಂಗಿಕ ವ್ಯಸನದ ಒಂದು ಭಾಗವಾಗಿದೆ. ಇದರಿಂದ ಮುಕ್ತರಾಗಲು ಲಂಡನ್ನಿನ ಲಾರೆಲ್ ಸೆಂಟರ್ ಲೈಂಗಿಕ ಚಿಕಿತ್ಸಾಲಯದಲ್ಲಿ, ದಿನಕ್ಕೆ 14 ಗಂಟೆ ಕೆಲಸ ಮಾಡುತ್ತಾ ಅಶ್ಲೀಲತೆ ವೀಕ್ಷಿಸುವವರಿಗೆ ರಿಮೋಟ್ ಚಿಕಿತ್ಸೆ ನೀಡುತ್ತಿದೆ ಎಂದು ಹೇಳಿದೆ. ಇದನ್ನೂ ಓದಿ: ಗುತ್ತಿಗೆದಾರರ ಸಂಘ, ಕೆಂಪಣ್ಣ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ: ಮುನಿರತ್ನ

    ಕೇಂದ್ರದ ಕ್ಲಿನಿಕಲ್ ನಿರ್ದೇಶಕಿ ಪೌಲಾ ಹಾಲ್ ಈ ಕುರಿತು ಮಾತನಾಡಿದ್ದು, ಡಬ್ಲ್ಯುಎಫ್‌ಎಚ್ ಎಂದರೆ ಜನರು ಈಗ ತಮ್ಮ ಕಂಪ್ಯೂಟರ್ಗಳ ಮುಂದೆ ಹಿಂದೆಂದಿಗಿಂತಲೂ ಹೆಚ್ಚು ಸಮಯವನ್ನು ಏಕಾಂಗಿಯಾಗಿ ಕಳೆಯುತ್ತಿದ್ದಾರೆ ಎಂಬುದನ್ನು ಅಂದಾಜಿಸುವುದು ಆಗಿದೆ. ಲಾರೆಲ್ ಚಿಕಿತ್ಸಾಲಯವು 2019ರಲ್ಲಿ 950 ಮಂದಿಗೆ ಲೈಂಗಿಕ ವ್ಯಸನದಿಂದ ಮುಕ್ತರಾಗಲು ಚಿಕಿತ್ಸೆ ನೀಡಿತ್ತು. ಆದರೆ ಪ್ರಸಕ್ತ 2022ರ ವರ್ಷದಲ್ಲಿ ಈಗಾಗಲೇ 750 ಮಂದಿಗೆ ಚಿಕಿತ್ಸೆ ನೀಡುತ್ತಿದೆ. ಹೀಗಾಗಿ ಲೈಂಗಿಕ ವ್ಯಸನಿಗಳ ಸಂಖ್ಯೆ ಹೆಚ್ಚಾಗ್ತಿದೆ ಎಂದು ವರದಿ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಸೆಕ್ಯೂರಿಟಿ ಕಾಲರ್ ಹಿಡಿದು ಎಳೆದಾಡಿದ ಮಹಿಳೆ – ರಂಪಾಟದ ವೀಡಿಯೋ ವೈರಲ್

    ಸೆಕ್ಯೂರಿಟಿ ಕಾಲರ್ ಹಿಡಿದು ಎಳೆದಾಡಿದ ಮಹಿಳೆ – ರಂಪಾಟದ ವೀಡಿಯೋ ವೈರಲ್

    ಲಕ್ನೋ: ಸೆಕ್ಯೂರಿಟಿ ಒಬ್ಬರು ಗೇಟ್ ಬಾಗಿಲು ತೆಗೆಯೋದು ತಡವಾಗಿದ್ದಕ್ಕೇ ಕುಡಿದ ಮತ್ತಿನಲ್ಲಿದ್ದ ಮಹಿಳೆ ಸಿಬ್ಬಂದಿಯ ಕಾಲರ್‌ಪಟ್ಟಿ ಹಿಡಿದು ಎಳೆದಾಡಿದ್ದಾಳೆ. ಬಾಯಿಗೆ ಬಂದಂತೆ ಬೈದಿದ್ದು, ಸಮುದಾಯವನ್ನೂ ನಿಂದಿಸಿದ್ದಾಳೆ.

    ಸೆಕ್ಯೂರಿಟಿ ಕಾಲರ್ ಹಿಡಿದು ಎಳೆದಾಡಿ ತನ್ನ ದರ್ಪ ತೋರಿಸಿದ್ದು, ಹಲ್ಲೆಗೂ ಮುಂದಾಗಿರುವ ಘಟನೆ ನೋಯ್ಡಾದ ಜೇಪೆ ಗ್ರೂಪ್ ಸೊಸೈಟಿ ಠಾಣಾ ವ್ತಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಸಿನಿಮಾ ನೋಡಿಕೊಂಡು ಬರುತ್ತಿದ್ದಾಗ ಭೀಕರ ಅಪಘಾತ – ನವ ವಿವಾಹಿತೆ ಸ್ಥಳದಲ್ಲೇ ಸಾವು, ಪತಿ ಗಂಭೀರ

    ಗೇಟ್ ಬಾಗಿಲು ತೆಗೆಯಲು ವಿಳಂಬ ಮಾಡಿದ ಕಾರಣಕ್ಕೆ ಮಹಿಳೆ ಸೆಕ್ಯೂರಿಟಿ ಗಾರ್ಡ್‌ಗೆ ಬಾಯಿಗೆ ಬಂದಂತೆ ನಿಂಧಿಸಿದ್ದಾಳೆ. ಅಲ್ಲದೇ ಕೊರಳ ಪಟ್ಟಿ ಹಿಡಿದು ಎಳೆದಾಡಿದ್ದಾಳೆ. ಇದೇ ವೇಳೆ ಮಹಿಳೆಯರಿಗೆ ಗೌರವಿಸುವುದನ್ನು ಕಲಿಯಿರಿ ಎಂದು ಉಪದೇಶ ಮಾಡಿದ್ದಾಳೆ. ಜೊತೆಗೆ ಬಿಹಾರದ ಸಮುದಾಯವನ್ನೂ ನಿಂದಿಸಿದ್ದಾಳೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್‌ಗೆ ಜೀವ ಬೆದರಿಕೆ- ಶಿರಚ್ಛೇದನ ಮಾಡುವುದಾಗಿ ಫೇಸ್‍ಬುಕ್‍ನಲ್ಲಿ ಪೋಸ್ಟ್

    ವೀಡಿಯೋ ಗಮನಿಸಿದ ದೆಹಲಿ ಮಹಿಳಾ ಆಯೋಗದ ಆಯುಕ್ತರಾದ ಸ್ವಾತಿ ಮಾಲಿವಾಲ್ ಅವರು ನೋಯ್ಡಾದ ಪೊಲೀಸರಿಗೆ ಮಹಿಳೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಮಹಿಳೆ ರಂಪಾಟ ಮಾಡಿರುವ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬ್ಯಾಂಡೇಜ್ ಬದಲಿಗೆ ಕಾಂಡೋಮ್ ಪ್ಯಾಕೆಟ್ ಬಳಸಿ ಮಹಿಳೆ ತಲೆಗೆ ಡ್ರೆಸ್ಸಿಂಗ್ – ಬೆಚ್ಚಿಬಿದ್ದ ವೈದ್ಯರು

    ಬ್ಯಾಂಡೇಜ್ ಬದಲಿಗೆ ಕಾಂಡೋಮ್ ಪ್ಯಾಕೆಟ್ ಬಳಸಿ ಮಹಿಳೆ ತಲೆಗೆ ಡ್ರೆಸ್ಸಿಂಗ್ – ಬೆಚ್ಚಿಬಿದ್ದ ವೈದ್ಯರು

    ಭೋಪಾಲ್: ಮಧ್ಯಪ್ರದೇಶದ ಪೋರ್ಸಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಬಳಿಕ ಕಾಂಡೋಮ್ ಪ್ಯಾಕೆಟ್ ಬಳಸಿ ಮಹಿಳೆಯ ತಲೆ ಗಾಯಕ್ಕೆ ಡ್ರೆಸ್ಸಿಂಗ್ ಮಾಡಲಾಗಿದೆ. ಗಾಯದ ತೀವ್ರತೆಯಿಂದ ಆಕೆಯನ್ನು ಮೊರೆನಾದ ಜಿಲ್ಲಾಸ್ಪತ್ರೆಗೆ ದಾಖಲಿಸಿದಾಗ ಈ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ.

    ಮೊರೆನಾ ಜಿಲ್ಲಾಸ್ಪತ್ರೆ ವೈದ್ಯರು ಮಹಿಳೆಯ ತಲೆಯ ಭಾಗದ ಗಾಯಕ್ಕೆ ಡ್ರೆಸ್ಸಿಂಗ್ ಬದಲಾಯಿಸಲು ಮುಂದಾದಾಗ ಮಹಿಳೆಯ ತಲೆಯಲ್ಲಿ ಬ್ಯಾಂಡೇಜ್‌ಗೆ ಬದಲಾಗಿ ಕಾಂಡೋಮ್ ಪ್ಯಾಕೆಟ್ ಬಳಸಿರುವುದನ್ನು ಕಂಡು ಶಾಕ್ ಆಗಿದ್ದಾರೆ.

    ಚಿಕಿತ್ಸೆ ಪಡೆದ ಮಹಿಳೆಯನ್ನು ಧರ್ಮಗಢ ಮೂಲದ ರೇಷ್ಮಾ ಬಾಯಿ ಎಂದು ಗುರುತಿಸಲಾಗಿದೆ. ಈಕೆ ಇತ್ತೀಚೆಗೆ ತಲೆಯ ಗಾಯದ ಚಿಕಿತ್ಸೆಗಾಗಿ ಪೋರ್ಸಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋದಾಗ ರಕ್ತಸ್ರಾವ ನಿಲ್ಲಿಸಲು ಕಾಂಡೋಮ್ ಬಳಸಲಾಗಿದೆ. ಇದಾದ ಕೆಲ ದಿನಗಳಲ್ಲೇ ಮಹಿಳೆಗೆ ಗಾಯದ ತೀವ್ರತೆ ಹೆಚ್ಚಾಗಿದೆ. ಆಕೆಯನ್ನು ಮೊರೆನಾದಲ್ಲಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದಾಗ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

    ಅಂದು ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಡಾ.ಧರ್ಮೇಂದ್ರ ರಜಪೂತ್ ತುರ್ತು ಕರ್ತವ್ಯದಲ್ಲಿದ್ದರು. ವಾರ್ಡ್ ಬಾಯ್ ಆಗಿ ಅನಂತರಾಮ್ ಇದ್ದರು. ಈ ವೇಳೆ ವೈದ್ಯರು ವಾರ್ಡ್ ಬಾಯ್‌ಗೆ ಹತ್ತಿ ಪ್ಯಾಡ್‌ನ ಮೇಲೆ ಕೆಲವು ಕಾರ್ಡ್ ಬೋರ್ಡ್‌ಗಳನ್ನು ಇರಿಸುವಂತೆ ಸೂಚಿಸಿದರು. ಆದರೆ ವಾರ್ಡ್ಬಾಯ್ ಕಾಂಡೋಮ್ ಪ್ಯಾಕೆಟ್ ಅನ್ನು ಬಳಸಿದ್ದಾನೆ ಎಂದು ವರದಿಯಾಗಿದೆ.

    ಸದ್ಯ ಪೋರ್ಸಾ ಸಮುದಾಯ ಆರೋಗ್ಯ ಕೇಂದ್ರದ ಡ್ರೆಸ್ಸರ್‌ನನ್ನು ರಾಜ್ಯ ಆರೋಗ್ಯ ಇಲಾಖೆ ಅಮಾನತುಗೊಳಿಸಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 11 ರಾಜ್ಯಗಳಲ್ಲಿ ಮಹಿಳೆಯರೇ ಹೆಚ್ಚು ಸೆಕ್ಸ್ ಪಾಲುದಾರರನ್ನು ಹೊಂದಿದ್ದಾರೆ: ವರದಿ

    11 ರಾಜ್ಯಗಳಲ್ಲಿ ಮಹಿಳೆಯರೇ ಹೆಚ್ಚು ಸೆಕ್ಸ್ ಪಾಲುದಾರರನ್ನು ಹೊಂದಿದ್ದಾರೆ: ವರದಿ

    ನವದೆಹಲಿ: ದೇಶದ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಸರಾಸರಿ ಲೈಂಗಿಕ ಪಾಲುದಾರರನ್ನು ಹೊಂದಿದ್ದಾರೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ಸಮೀಕ್ಷಾ ವರದಿ ಹೇಳಿದೆ.

    ತಮ್ಮ ಸಂಗಾತಿ ಅಲ್ಲದ ಹಾಗೂ ತಮ್ಮೊಂದಿಗೆ ವಾಸಿಸದ ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಮಹಿಳೆಯರ ಪ್ರಮಾಣ ಶೇ.4 ರಷ್ಟಿದೆ. ಇದೇ ರೀತಿಯ ಪುರುಷರ ಪ್ರಮಾಣ ಕೇವಲ ಶೇ 0.5 ಮಾತ್ರ ಇದೆ ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ.

    1.1 ಲಕ್ಷ ಮಹಿಳೆಯರು ಹಾಗೂ 1 ಲಕ್ಷ ಪುರುಷರನ್ನೊಳಗೊಂಡು ನಡೆಸಲಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ರಾಜಸ್ಥಾನ, ಹರಿಯಾಣ, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಮಧ್ಯ ಪ್ರದೇಶ, ಅಸ್ಸಾಂ, ಕೇರಳ, ಲಕ್ಷದ್ವೀಪ, ಪುದುಚೇರಿ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಮಹಿಳೆಯರ ಲೈಂಗಿಕ ಪಾಲುದಾರರ ಸಂಖ್ಯೆ ಪುರುಷರಿಗಿಂತ ಹೆಚ್ಚಾಗಿದೆ. ಇದನ್ನೂ ಓದಿ: ನ್ಯೂಯಾರ್ಕ್‍ನಲ್ಲಿ ಗಾಂಧಿ ಪ್ರತಿಮೆ ಧ್ವಂಸ – ಎರಡು ವಾರಗಳಲ್ಲಿ 2ನೇ ಬಾರಿಗೆ ಕೃತ್ಯ

    ರಾಜಸ್ಥಾನದಲ್ಲಿ ಮಹಿಳೆಯರು ಹೊಂದಿರುವ ಲೈಂಗಿಕ ಪಾಲುದಾರರ ಪ್ರಮಾಣ ಶೇ.3.1 ರಷ್ಟಿದೆ. ಇದು ಪುರುಷರಲ್ಲಿ ಶೇ.1.8 ಆಗಿದೆ. ಆದರೆ ಕಳೆದ 1 ವರ್ಷದ ಅವಧಿಯಲ್ಲಿ ತಮ್ಮ ಸಂಗಾತಿಗಳಲ್ಲದವರು ಅಥವಾ ಲಿವ್ ಇನ್ ರಿಲೇಶನ್‌ನಲ್ಲಿ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಪುರುಷರ ಪ್ರಮಾಣ ಶೇ.4 ರಷ್ಟಿದ್ದರೆ. ಇದು ಮಹಿಳೆಯರಲ್ಲಿ ಶೇ0.5ರಷ್ಟಿದೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಕರ್ತವ್ಯ ಲೋಪ ಆರೋಪ – 1,500 ಪುಟಗಳ ದಾಖಲೆ ಸಲ್ಲಿಸಿದ ಸಾ.ರಾ.ಮಹೇಶ್

    2019-21ರ ಅವಧಿಯಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5ರಲ್ಲಿ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿಂದ ದೇಶದ 707 ಜಿಲ್ಲೆಗಳನ್ನು ಸಮೀಕ್ಷೆಗೆ ಒಳಪಡಿಸಿದೆ. ರಾಷ್ಟ್ರೀಯ ವರದಿಯು ಸಾಮಾಜಿಕ-ಆರ್ಥಿಕ ಮತ್ತು ಇತರ ಹಿನ್ನೆಲೆಗೆ ಸಂಬಂಧಿಸಿದ ಡೇಟಾವನ್ನು ಸಹ ಒದಗಿಸುತ್ತದೆ. ಇದು ನೀತಿ ನಿರೂಪಣೆ ಮತ್ತು ಪರಿಣಾಮಕಾರಿ ಕಾರ್ಯಕ್ರಮ ಅನುಷ್ಠಾನಕ್ಕೆ ಉಪಯುಕ್ತವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹಾಡಹಗಲೇ ಮೆಡಿಕಲ್‍ನಲ್ಲಿ ಬುರ್ಖಾಧಾರಿಗಳಿಂದ ಕಳ್ಳತನ

    ಹಾಡಹಗಲೇ ಮೆಡಿಕಲ್‍ನಲ್ಲಿ ಬುರ್ಖಾಧಾರಿಗಳಿಂದ ಕಳ್ಳತನ

    ಕಾರವಾರ: ಹಾಡಹಗಲೇ ಮೆಡಿಕಲ್ ಶಾಪ್‍ಗೆ ಬುರ್ಖಾ ಧರಿಸಿ ಬಂದ ಮೂವರು ಮಹಿಳೆಯರು ಕೈಗೆ ಸಿಕ್ಕವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದ ಕಟ್ಟಿಗೆ ಡಿಪೋ ಸಮೀಪದ ಅಪೋಲೋ ಮೆಡಿಕಲ್‍ನಲ್ಲಿ ಕಳ್ಳಿಯರು ತಮ್ಮ ಕೈಚಳಕ ತೋರಿಸಿದ್ದಾರೆ. ಆಗಸ್ಟ್ 3 ರಂದು ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆಬಂದಿದೆ. ಮಧ್ಯಾಹ್ನ 2 ಗಂಟೆ ವೇಳೆಗೆ ಔಷಧ ಖರೀದಿ ನೆಪದಲ್ಲಿ ಮೆಡಿಕಲ್‍ಗೆ ಆಗಮಿಸಿದ್ದ ಮಹಿಳೆಯರು ಮೆಡಿಕಲ್ ಸಿಬ್ಬಂದಿ ಕಣ್ತಪ್ಪಿಸಿ ಶಾಪ್‍ನಿಂದ ಕೆಲ ವಸ್ತುಗಳನ್ನು ಕದ್ದು ಬುರ್ಖಾದಲ್ಲಿರಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಹತ್ಯೆಗೆ RSS, ಬಿಜೆಪಿ ಸಂಚು ಮಾಡಿದೆ: ಶಿವರಾಮ್ ಗಂಭೀರ ಆರೋಪ

    ಮಹಿಳೆಯರು ಕಳ್ಳತನ ಮಾಡಿರುವ ದೃಶ್ಯ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಿಬ್ಬಂದಿ ಸಿಸಿಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಪೇದೆಗೆ ಗುಂಡು ಹಾರಿಸಿ, 24 ವರ್ಷ ಪರಾರಿಯಾಗಿದ್ದ ಮಾಜಿ ಶಾಸಕ ಕೊನೆಗೂ ಬಂಧನ

    Live Tv
    [brid partner=56869869 player=32851 video=960834 autoplay=true]