Tag: women

  • ಟೋಲ್ ಪಾವತಿ ವಿಚಾರದಲ್ಲಿ ಕಿರಿಕ್ – ಜುಟ್ಟು ಹಿಡಿದು ಕಿತ್ತಾಡಿದ ಮಹಿಳೆಯರು

    ಟೋಲ್ ಪಾವತಿ ವಿಚಾರದಲ್ಲಿ ಕಿರಿಕ್ – ಜುಟ್ಟು ಹಿಡಿದು ಕಿತ್ತಾಡಿದ ಮಹಿಳೆಯರು

    ಮುಂಬೈ: ಕ್ಷುಲ್ಲಕ ಕಾರಣಕ್ಕೆ ಮಹಿಳೆಯರಿಬ್ಬರು (Women) ಪರಸ್ಪರ ಕೂದಲು ಹಿಡಿದು ಹೊಡೆದಾಡಿಕೊಂಡಿರುವ ಘಟನೆ ನಾಸಿಕ್ (Nashik) ಬಳಿಯ ಪಿಂಪಲ್ಗಾವ್ ಟೋಲ್ ಬೂತ್ (Toll Plaza) ಬಳಿ ನಡೆದಿದೆ.

    ಸಿಆರ್‌ಪಿಎಫ್ (CRPF) ಅಧಿಕಾರಿಯ ಪತ್ನಿ ಹಾಗೂ ಟೋಲ್ ಸಿಬ್ಬಂದಿ (Toll Employee) ಟೋಲ್‌ಬೂತ್ ರಸ್ತೆಯಲ್ಲೇ ನಿಂತು ಪರಸ್ಪರ ಮುಂದಲೆ ಹಿಡಿದು ಎಳೆದಾಡಿದ್ದಾರೆ, ನಿಂದಿಸಿದ್ದಾರೆ. ಮಹಿಳೆಯರಿಬ್ಬರ ನಡುವಿನ ಮಾರಾಮಾರಿ ದೃಶ್ಯ ಜಾಲತಾಣದಲ್ಲಿ ವೈರಲ್  (Video Viral) ಆಗಿದೆ. ಇದನ್ನೂ ಓದಿ: ಮೂಲಂಗಿ ಮಾರಿ ಜೀವನ ನಡೆಸುತಿದ್ದ ಪತ್ನಿಯನ್ನ ಕುಡಿದ ಅಮಲಿನಲ್ಲಿ ಕೊಲೆ ಮಾಡಿದ ಪತಿ

    ಟೋಲ್ (Toll) ಪಾವತಿಸುವ ವಿಚಾರಕ್ಕೆ ಇಬ್ಬರ ನಡುವೆ ಆರಂಭದಲ್ಲಿ ಮಾತಿನ ಚಕಮಕಿ ನಡೆದಿತ್ತು. ನಂತರ ಇದು ವಿಕೋಪಕ್ಕೆ ತಿರುಗಿ ಮಾರಾಮಾರಿಯಾಗಿದೆ. ಬಳಿಕ ಇಬ್ಬರು ಜುಟ್ಟು ಹಿಡಿದು ಎಳೆದಾಡಿದ್ದಾರೆ, ಕಪಾಳಕ್ಕೆ ಬಾರಿಸಿದ್ದಾರೆ. ಹತ್ತಾರು ಮಂದಿ ಸ್ಥಳದಲ್ಲೇ ನಿಂತಿದ್ದರೂ ಘಟನೆಯನ್ನು ಮೊಬೈಲ್‌ನಲ್ಲಿ (Mobile) ಸೆರೆ ಹಿಡಿಯುತ್ತಿದ್ದರೆ ಹೊರತು, ಯಾರೊಬ್ಬರೂ ಜಗಳ ಬಿಡಿಸುವ ಪ್ರಯತ್ನ ಮಾಡಲಿಲ್ಲ. ಸುಮಾರು 10 ನಿಮಿಷದ ಬಳಿಕ ಜಗಳ ಬಿಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಹಿಳೆಯ ಕಿವಿಯೊಳಗೆ ಹೊಕ್ಕಿತು ವಿಷಕಾರಿ ಹಾವು!

    ಮಹಿಳೆಯ ಕಿವಿಯೊಳಗೆ ಹೊಕ್ಕಿತು ವಿಷಕಾರಿ ಹಾವು!

    ನವದೆಹಲಿ: ದೇಶದಲ್ಲಿ ಇತ್ತೀಚಿನ ಕೆಲ ಘಟನೆಗಳು ಸಾರ್ವಜನಿಕರನ್ನ ದಿಗ್ಭ್ರಮೆಗೊಳಿಸುತ್ತಿವೆ. ಹೀಗೂ ಉಂಟೇ ಎನ್ನುವಷ್ಟು ಅಚ್ಚರಿಯನ್ನೂ ಮೂಡಿಸುತ್ತಿದೆ. ಅಂತಹದ್ದೇ ಘಟನೆಯೊಂದು ಬೆಳಕಿಗೆ ಬಂದಿದ್ದು, ವೀಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.

    ಹೌದು… ಮಹಿಳೆಯೊಬ್ಬರು ಮಲಗಿದ್ದ ವೇಳೆ ಅತ್ಯಂತ ವಿಷಕಾರಿ ಹಾವಿನ ಮರಿಯೊಂದು (Snake) ಆಕೆಯ ಕಿವಿಯಿಂದ (Ear) ಒಳಹೊಕ್ಕಿದೆ. ಬಳಿಕ ಹೊರಬಾರದೇ ಕಿವಿಯಲ್ಲೇ ಸಿಕ್ಕಿಕೊಂಡಿದೆ. ಈ ಕುರಿತ ವೀಡಿಯೋ ಒಂದು ಜಾಲತಾಣದಲ್ಲಿ ಹರಿದಾಡುತ್ತಿದ್ದು, 87 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. 

    ವೀಡಿಯೋ ನಲ್ಲಿ ಹಳದಿ ಬಣ್ಣದ ಹಾವೊಂದು ಮಹಿಳೆಯ (Women) ಕಿವಿಯೊಳಗೆ ಗಟ್ಟಿಯಾಗಿ ಸಿಕ್ಕಿಕೊಂಡಿದೆ. ಆದರೆ ಹೊರಬರುವ ಯಾವುದೇ ಲಕ್ಷಣಗಳೂ ಕಾಣುತ್ತಿಲ್ಲ. ವೈದ್ಯರು (Doctors) ಸತತವಾಗಿ ಮಹಿಳೆ ಕಿವಿಯಿಂದ ಹಾವನ್ನು ಹೊರತೆಗೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಘಟನೆ ನಡೆದ ಸ್ಥಳ ಸಮಯವನ್ನು ಬಹಿರಂಗಪಡಿಸಿಲ್ಲ. ಕೊನೆಗೆ ಮಹಿಳೆಯ (Women) ಕಿವಿಯಿಂದ ಹಾವು ಹೊರ ಬಂದಿತೇ ಇಲ್ಲವೇ ಎನ್ನುವ ಕುತೂಹಲದೊಂದಿಗೆಯೇ ವೀಡಿಯೋ ಕೊನೆಗೊಂಡಿದೆ. ಇದನ್ನೂ ಓದಿ: ಮಹಾದೇವಪುರದಲ್ಲಿ ರಾಜಕಾಲುವೆ ಒತ್ತುವರಿ – 8 ಕಡೆ ಜೆಸಿಬಿ ಆಪರೇಷನ್ ಆರಂಭ

    SNAKE
    ಸಾಂದರ್ಭಿಕ ಚಿತ್ರ

    ಕೆಲವರು ವೀಡಿಯೋ ನೋಡುತ್ತಿದ್ದಂತೆ ಬೆಚ್ಚಿಬಿದ್ದಿದ್ದಾರೆ, ಇನ್ನೂ ಕೆಲವರು ಇದು 100 ಪರ್ಸೆಂಟ್ ಸುಳ್ಳು, ಕೇವಲ ವೀವ್ಸ್ಗಾಗಿ ವೀಡಿಯೋ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಕೇಸ್‌ – ಹಿಂದೂ ಮಹಿಳೆಯರಿಗೆ ಗೆಲುವು, ಅರ್ಜಿ ವಿಚಾರಣೆಗೆ ಯೋಗ್ಯ

    ವಿಶ್ವ ಆರೋಗ್ಯ ಸಂಸ್ಥೆ ಸಂಶೋಧನೆಯ ಪ್ರಕಾರ, ಹಾವು ಕಡಿತದಿಂದ ಪ್ರತಿ ವರ್ಷ 81 ಸಾವಿರದಿಂದ 1.38 ಲಕ್ಷ ಮಂದಿಯಷ್ಟು ಜನ ಸಾವನ್ನಪ್ಪುತ್ತಿದ್ದಾರೆ. ಇದರ ಮೂರು ಪಟ್ಟು ಅಧಿಕ ಮಂದಿ ಶಾಶ್ವತ ಅಂಕವೈಕಲ್ಯ ಉಂಟುಮಾಡುತ್ತಿದೆ ಎಂದು ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಗೇಟ್ ತೆಗೆಯೋದು ತಡವಾಗಿದ್ದಕ್ಕೆ ಸೆಕ್ಯೂರಿಟಿಗೆ ಕಪಾಳಮೋಕ್ಷ ಮಾಡಿದ ಪ್ರಾಧ್ಯಾಪಕಿ

    ಗೇಟ್ ತೆಗೆಯೋದು ತಡವಾಗಿದ್ದಕ್ಕೆ ಸೆಕ್ಯೂರಿಟಿಗೆ ಕಪಾಳಮೋಕ್ಷ ಮಾಡಿದ ಪ್ರಾಧ್ಯಾಪಕಿ

    ಲಕ್ನೋ: ಸೆಕ್ಯೂರಿಟಿ ಗಾರ್ಡ್ (Security) ಒಬ್ಬರು ಅಪಾರ್ಟ್ಮೆಂಟ್ ಗೇಟ್ ಬಾಗಿಲು ತೆಗೆಯೋದು ತಡವಾಗಿದ್ದಕ್ಕೇ ಮಹಿಳಾ ಪ್ರೊಫೆಸರ್( Women Professor) ಸಿಬ್ಬಂದಿಯ ಕಾಲರ್‌ಪಟ್ಟಿ ಹಿಡಿದು ಎಳೆದಾಡಿದ್ದಾಳೆ. ಅಲ್ಲದೇ ಬಾಯಿಗೆ ಬಂದಂತೆ ಬೈದು ನಿಂದಿಸಿದ್ದಾಳೆ.

    ನೊಯ್ಡಾದ ಸೆಕ್ಟರ್ 121 ರಲ್ಲಿರುವ ಕ್ಲಿಯೋ ಕೌಂಟಿಯಲ್ಲಿ ಘಟನೆ ನಡೆದಿದ್ದು, ಕಳೆದ ಒಂದು ತಿಂಗಳಲ್ಲಿ ಇದು ನೊಯ್ಡಾದಲ್ಲಿ ನಡೆದ 2ನೇ ಘಟನೆಯಾಗಿದೆ. ಮಹಿಳಾ ಪ್ರೊಫೆಸರ್ (Professor) ಸುತಾಪ್ ದಾಸ್ ಎಂಬಾಕೆಯೇ ತನ್ನ ಕಾರಿನಿಂದ ಇಳಿದು ಭದ್ರತಾ ಸಿಬ್ಬಂದಿ (security guard) ಸಚಿನ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ದೃಶ್ಯಾವಳಿ ಸಿಸಿಟಿಯಲ್ಲಿ (CCTV) ಸೆರೆಯಾಗಿದೆ. ಇದನ್ನೂ ಓದಿ: ʼಬ್ರಹ್ಮಾಸ್ತ್ರʼ ಚಿತ್ರದಲ್ಲಿ ನಾಯಕನ ತಾಯಿ ಪಾತ್ರ ಮಾಡಿರೋ ನಟಿ ರಣಬೀರ್‌ ಮಾಜಿ ಪ್ರೇಯಸಿ?

    ಘಟನೆ ಬಳಿಕ ಮಾತನಾಡಿದ ಭದ್ರತಾ ಸಿಬ್ಬಂದಿ ಸಚಿನ್, ನಾವು ಆರ್‌ಎಫ್‌ಐಡಿ (RFID) ಕೆಲಸ ಮಾಡುತ್ತಿದೆವು. ಈ ವೇಳೆ ಮಹಿಳೆ ಆಕೆಯ ಕಾರಿನ ಸಂಖ್ಯೆಯನ್ನು ತೋರಿಸಲಿಲ್ಲ. ಆದರೂ ನಾವು ಕಾರನ್ನು ಒಳಗೆ ಹೋಗಲು ಅನುಮತಿಸಿದೆವು. ನಂತರ ಆಕೆ ಕಾರನ್ನು ನಿಲ್ಲಿಸಿ ಬಂದು ಬಾಯಿಗೆ ಬಂದಂತೆ ನಿಂದಿಸಲು ಶುರು ಮಾಡಿದ್ಲು. ಜೊತೆಗೆ ಕಪಾಳಮೋಕ್ಷ ಮಾಡಿದಳು. ತಕ್ಷಣ ನಾವು ಪೊಲೀಸರಿಗೆ (Police) ದೂರವಾಣಿ ಕರೆ ಮಾಡಿ ಘಟನೆ ವಿವರಿಸಿದೆವು. ಇದನ್ನೂ ಓದಿ: ಕ್ರಾಂತಿಕಾರಿ ಸಾಧು ಎಂದೇ ಹೆಸರಾಗಿದ್ದ ಸ್ವಾಮಿ ಸ್ವರೂಪಾನಂದ ಸರಸ್ವತಿ ನಿಧನ

    ಭದ್ರತಾ ಸಿಬ್ಬಂದಿ ಗೇಟ್ ತೆರೆಯುವುದು ತಡ ಮಾಡಿದ್ದಕ್ಕೇ ಪ್ರಾಧ್ಯಾಪಕಿ ಕಪಾಳಮೋಕ್ಷ ಮಾಡಿದ್ದಾರೆ. ಮಹಿಳೆ, ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿ ನಿಂದಿಸುತ್ತಿದ್ದರೂ ಯಾರೊಬ್ಬರೂ ಮಧ್ಯ ಪ್ರವೇಶಿಸಲಿಲ್ಲ. ಆದರೆ ಸಹ ಸಿಬ್ಬಂದಿ ತಮ್ಮ ಮೊಬೈಲ್‌ನಲ್ಲಿ ಘಟನೆಯನ್ನು ರೆಕಾರ್ಡ್ ಮಾಡುತ್ತಿದ್ದರು. ಈ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಭದ್ರತಾ ಸಿಬ್ಬಂದಿ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅದಾದ ಕೆಲವೇ ಕ್ಷಣಗಳಲ್ಲಿ ಆಕೆಗೆ ಜಾಮೀನು ನೀಡಲಾಯಿತು ಎಂದು ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಸೆಕ್ಯೂರಿಟಿ ಕಾಲರ್ ಹಿಡಿದು ಎಳೆದಾಡಿದ ಮಹಿಳೆ – ರಂಪಾಟದ ವೀಡಿಯೋ ವೈರಲ್

    ಕಳೆದ ತಿಂಗಳು ಇದೇ ರೀತಿ ಘಟನೆಯೊಂದು ನಡೆದಿತ್ತು. ಸೆಕ್ಯೂರಿಟಿ ಕಾಲರ್ ಹಿಡಿದು ಎಳೆದಾಡಿ ತನ್ನ ದರ್ಪ ತೋರಿಸಿದ್ದು, ಹಲ್ಲೆಗೂ ಮುಂದಾಗಿರುವ ಘಟನೆ ನೊಯ್ಡಾದ ಜೇಪೆ ಗ್ರೂಪ್ ಸೊಸೈಟಿ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.

    Live Tv
    [brid partner=56869869 player=32851 video=960834 autoplay=true]

  • ಹೊಟ್ಟೆನೋವೆಂದು ಖಾಸಗಿ ಕ್ಲಿನಿಕ್ ಸೇರಿದ ಮಹಿಳೆ – ಆಪರೇಷನ್ ನೆಪದಲ್ಲಿ ಎರಡೂ ಕಿಡ್ನಿ ಕದ್ದ ವೈದ್ಯರು

    ಹೊಟ್ಟೆನೋವೆಂದು ಖಾಸಗಿ ಕ್ಲಿನಿಕ್ ಸೇರಿದ ಮಹಿಳೆ – ಆಪರೇಷನ್ ನೆಪದಲ್ಲಿ ಎರಡೂ ಕಿಡ್ನಿ ಕದ್ದ ವೈದ್ಯರು

    ಪಾಟ್ನಾ: ಹೊಟ್ಟೆನೋವೆಂದು ಚಿಕಿತ್ಸೆಗಾಗಿ ಖಾಸಗಿ ಕ್ಲಿನಿಕ್‌ಗೆ (Private Clinic) ದಾಖಲಾಗಿದ್ದ ಮಹಿಳೆಗೆ ಶಸ್ತ್ರಚಿಕಿತ್ಸೆ (Opration) ಮಾಡುವ ನೆಪದಲ್ಲಿ ವೈದ್ಯರು (Doctors) ಎರಡೂ ಕಿಡ್ನಿಗಳನ್ನು ಕದ್ದಿರುವ ಘಟನೆ ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ನಡೆದಿದೆ.

    ಮಹಿಳೆಯ ಆರೋಗ್ಯ ತೀವ್ರವಾಗಿ ಕ್ಷೀಣಿಸಿದ ಬಳಿಕ ಹೆಚ್ಚುವರಿ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ (Hospital) ದಾಖಲಿಸಲಾಯಿತು. ಬಳಿಕ ಕಿಡ್ನಿ (Kidney) ತೆಗೆದಿರುವ ವಿಷಯ ತಿಳಿದುಬಂದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಹಿಳೆ ಕುಟುಂಬಸ್ಥರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಬರಿಯಾರ್‌ಪುರ ಠಾಣೆಯ ಪೊಲೀಸರು (Police) ತನಿಖೆ ಆರಂಭಿಸಿದ್ದಾರೆ.

    ಸಂತ್ರಸ್ತ ಮಹಿಳೆ (Women) ಬಾಜಿರೌತ್ ಗ್ರಾಮದವರಾಗಿದ್ದು, ಮಹಿಳೆಯ ವೈದ್ಯಕೀಯ ವರದಿಗಳನ್ನು ನೀಡುವಂತೆ ಕುಟುಂಬಸ್ಥರನ್ನು ಕೇಳಿದಾಗ ಆಕೆಯ ಎರಡೂ ಕಿಡ್ನಿಗಳನ್ನು ತೆಗೆಯಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದಕ್ಕೂ ಮುನ್ನ ರೊಚ್ಚಿಗೆದ್ದ ಮಹಿಳೆಯ ಕುಟುಂಬಸ್ಥರು ಕ್ಲಿನಿಕ್ ಮುಂಭಾಗದಲ್ಲೇ ಗಲಾಟೆ ಆರಂಭಿಸಿದ್ದರು. ಇದನ್ನೂ ಓದಿ: ರಾಜಕಾಲುವೆ ಒತ್ತುವರಿ ಹಿಂದೆ IT ಕಂಪನಿಗಳ ಕೈವಾಡವೂ ಇದೆ: ಸಂತೋಷ್ ಹೆಗ್ಡೆ

    ಅಷ್ಟಕ್ಕೂ ನಡೆದಿದ್ದೇನು?
    ಬಾಜಿರೌತ್ ನಿವಾಸಿ ಲಾಲ್‌ದೇವ್ ರಾಮ್ ಅವರ ಪುತ್ರಿ ಸುನೀತಾ ದೇವಿ ಆರೋಗ್ಯ ಕಳೆದ ಆಗಸ್ಟ್ 3 ರಂದು ಕ್ಷೀಣಿಸಿತ್ತು. ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಬರಿಯಾರ್‌ಪುರದ ಖಾಸಗಿ ಕ್ಲಿನಿಕ್‌ಗೆ ಕರೆದೊಯ್ಯಲಾಗಿತ್ತು. ಬಳಿಕ ಆಪರೇಷನ್ ಮಾಡಬೇಕಾಗುತ್ತದೆ ಎಂದು ಹೇಳಿದ ವೈದ್ಯರು 20 ಸಾವಿರ ರೂಪಾಯಿಯಿಂದ ಚಿಕಿತ್ಸೆ ಆರಂಭಿಸಿದ್ದರು. ಅದಾದ ನಂತರವೂ ಹೊಟ್ಟೆನೋವು ಹೆಚ್ಚಾದ ಬಳಿಕ ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸಲಾಯಿತು. ಅಲ್ಲಿ ವೈದ್ಯರು ತಪಾಸಣೆ ನಡೆಸಿದ ಬಳಿಕ ಎರಡೂ ಕಿಡ್ನಿ ತೆಗೆದಿರುವ ರಹಸ್ಯ ಬಯಲಾಗಿದೆ ಕುಟುಂಬಸ್ಥರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ರೀಲ್ಸ್ ಮಾಡಲು ಹೋಗಿ ಯುವತಿ ಕೆರೆ ಪಾಲು – ಉಪ್ಪು ಸುರಿದು ಬದುಕಿಸಲು ಯತ್ನ

    ಸದ್ಯ ಪೊಲೀಸರು ವೈದ್ಯಕೀಯ ವರದಿಯ ಮಾಹಿತಿ ಪಡೆಯುತ್ತಿದ್ದಾರೆ. ವೈದ್ಯರಿಂದ ಮಹಿಳೆ ವಂಚನೆಗೆ ಒಳಗಾಗಿದ್ದಾರೆ ಎಂಬುದು ಸತ್ಯಾಂಶವಾಗಿದ್ದು, ಎರಡೂ ಕಿಡ್ನಿ ತೆಗೆಯಲಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಮಹಿಳೆ ನೇಣಿಗೆ ಶರಣು

    ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಮಹಿಳೆ ನೇಣಿಗೆ ಶರಣು

    ವಿಜಯಪುರ: ಮನನೊಂದ ಮಹಿಳೆ (Women) ನೇಣಿಗೆ ಶರಣಾದ ಘಟನೆ ವಿಜಯಪುರದ (Vijayapura) ಜಲನಗರದಲ್ಲಿ ನಡೆದಿದೆ.

    35 ವರ್ಷದ ಗಂಗಾ ನರ್ಸರೆಡ್ಡಿ ಆತ್ಮಹತ್ಯೆಗೆ (Suicide) ಶರಣಾದ ಮಹಿಳೆ. ಕೌಟುಂಬಿಕ ಸಮಸ್ಯೆಯಿಂದಾಗಿ ಗಂಗಾ ಮಾನಸಿಕವಾಗಿ ಸಮಸ್ಯೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ.

    CRIME 2

    ಯಾರೂ ಇಲ್ಲದ ಸಮಯ ನೋಡಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸ್ಥಳಕ್ಕೆ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅವಧಿಯಲ್ಲಿ ಶಿಕ್ಷಕರ ನೇಮಕಾತಿ ಅಕ್ರಮ ಆರೋಪ – 11 ಜನರ ಬಂಧನ

    ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

    Live Tv
    [brid partner=56869869 player=32851 video=960834 autoplay=true]

  • ಮಹಿಳೆಯರಿಗೆ ಬೇಗ ಇಷ್ಟವಾಗುವಂತಹ ಫ್ಯಾನ್ಸಿ ಬಾಬಿ ಪಿನ್ ಡಿಸೈನ್‌ಗಳು

    ಮಹಿಳೆಯರಿಗೆ ಬೇಗ ಇಷ್ಟವಾಗುವಂತಹ ಫ್ಯಾನ್ಸಿ ಬಾಬಿ ಪಿನ್ ಡಿಸೈನ್‌ಗಳು

    ಲವಾರು ವರ್ಷಗಳಿಂದಲೂ ಬಾಬಿ ಪಿನ್‌ಗಳು (Bobby Pin) ಬಳಕೆಯಲ್ಲಿದೆ. ಅದರಲ್ಲಿಯೂ ಕಡಿಮೆ ಬೆಲೆಗೆ ಸಿಗುವ ಈ ಕಪ್ಪು ಬಣ್ಣದ ಪಿನ್‌ ನಿಮ್ಮಕೂದಲು ಅಂಟಿಕೊಳ್ಳದೇ ಇರುವಂತೆ ಮತ್ತು ದೊಡ್ಡದಾದ ಬನ್‌ಗಳನ್ನು ಧರಿಸಲು ಸಹಾಯಕರವಾಗಿದೆ. ಸಾಮಾನ್ಯವಾಗಿ ಕೇಶ ವಿನ್ಯಾಸಕರು ತಮ್ಮ ಮಾಡೆಲ್‌ಗಳಿಗೆ(Models) ಹೇರ್‌ಸ್ಟೈಲ್‌ ಮಾಡಲು ಟ್ರೆಂಡಿಯಸ್ಟ್‌ ಹೇರ್‌ ಆಕ್ಸೆಸರೀಸ್‌(Hair Accessories) ಬಳಸಲು ಇಷ್ಟಪಡುತ್ತಾರೆ. ಅವುಗಳಲ್ಲಿ ಅವುಗಳಲ್ಲಿ ಬಾಬಿ ಪಿನ್‌ಗಳು ಕೂಡ ಒಂದು.

    ಬಾಬಿ ಪಿನ್‌ಗಳಲ್ಲಿ ಈಗ ಹಲವಾರು ಶೈಲಿಯ ವಿವಿಧ ಸೈಜ್‌, ಡಿಸೈನ್ ಮತ್ತು ಕಲರ್‌ಗಳು ಲಭ್ಯವಿದೆ. ಇದು ಕೂದಲನ್ನು ಸುರಕ್ಷಿತವಾಗಿ ಇರಿಸುವುದರ ಜೊತೆಗೆ ಸುಂದರವಾಗಿ ಕಾಣಿಸಲು ಸಹಾಯಕವಾಗಿದೆ. ಬಾಬಿ ಪಿನ್‌ಗಳ ಡಿಸೈನ್‌ ಕುರಿತಂತೆ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ. ಇದನ್ನೂ ಓದಿ: ತಾಲಿಬಾನ್ ತರಬೇತಿ ವೇಳೆ ಹೆಲಿಕಾಪ್ಟರ್ ಪತನ – ಮೂವರು ಸಾವು

    ಲವ್ ಟ್ರಯಾಂಗಲ್ ಬಾಬಿ ಪಿನ್ ವಿನ್ಯಾಸ
    ನಿಮ್ಮ ಮನೆ ಕೆಲಸ ಅಥವಾ ಗಂಡನ ಅಗತ್ಯತೆಗಳನ್ನು ಪೂರೈಸುವುದರಲ್ಲಿಯೇ ಬೆಳಗ್ಗಿನಿಂದ ರಾತ್ರಿವರೆಗೂ ನೀವು ಸುಸ್ತಾಗಿ ಹೋಗಿರುತ್ತೀರಾ. ಈ ನಡುವೆ ನಿಮಗೂ ಕೊಂಚ ಬಿಡುವು ಮಾಡಿಕೊಳ್ಳಬೇಕಾಗುತ್ತದೆ. ಹಲವಾರು ಡಿಸೈನ್‌ಗಳ ಟ್ರಯಾಂಗಲ್‌ ಬಾಬಿ ಪಿನ್‌ (Triangle Bobby Pin) ನಿಮ್ಮ ಲುಕ್‌ ಚೇಂಜ್‌ ಮಾಡುವುದರ ಜೊತೆಗೆ ಕೂದಲನ್ನು ಸುರಕ್ಷಿತವಾಗಿರಿಸುತ್ತದೆ. ಇದನ್ನು ನೀವು ಎಲ್ಲಿ ಬೇಕೂ ಅಲ್ಲಿ ಸಿಕ್ಕಿಸಿಕೊಳ್ಳಬಹುದಾಗಿದೆ.

    ಬ್ರೈಡ್‌ ಎನ್ಸೆಂಬಲ್ ಬಾಬಿ ಪಿನ್‌ಗಳು (Bride’s Ensemble Bobby Pin)
    ಮದುವೆ ವೇಳೆ ಎಲ್ಲದರಲ್ಲಿಯೂ ಪರ್ಫೆಕ್ಟ್‌ ಬಯಸುವ ನೀವು ನಿಮ್ಮ ಕೂದಲಿಗೆ ಧರಿಸುವ ಹೇರ್‌ ಪಿನ್‌ ಚೆನ್ನಾಗಿ ಕಾಣಿಸಬೇಕು ಎಂದು ಬಯಸಿದರೆ, ಸಖತ್‌ ಕ್ಯೂಟ್‌ ಆಗಿರುವ ಬಿಳಿ ಮುತ್ತಿನ ಬಾಬಿ ಪಿನ್‌ಗಳನ್ನುಧರಿಸುವುದರ ಬಗ್ಗೆ ಯೋಚಿಸಿ. ಇದು ನೋಡಲು ಚಿಕ್ಕದಾಗಿದ್ದು, ನಿಮಗೆ ಟ್ರೆಂಡಿ ಲುಕ್‌ ನೀಡುತ್ತದೆ.

    ಜೆಮ್ಸ್‌ಸ್ಟೋನ್ ಬಾಬಿ ಪಿನ್‌ಗಳು (Gemstone Bobby Pin)
    ವರ್ಣರಂಜಿತ, ಟ್ರೆಂಡಿ ಮತ್ತು ತುಂಬಾ ದಪ್ಪದಾಗಿರುವ ರತ್ನದ ಬಾಬಿ ಪಿನ್‌ಗಳು ನೀವು ಯಾವ ಡ್ರೆಸ್‌ ಜೊತೆ ಧರಿಸಿದರು ಮ್ಯಾಚ್‌ ಆಗುತ್ತದೆ. ಫರ್ಮಲ್ಸ್‌ನಿಂದ ಹಿಡಿದು ದಿನ ನಿತ್ಯ ಧರಿಸುವ ಉಡುಪುಗಳವರೆಗೂ ಇದು ನಿಮಗೆ ಬೆಸ್ಟ್‌ ಲುಕ್‌ ನೀಡುತ್ತದೆ.

    ಪೀಕಾಕ್ ಬಾಬಿ ಪಿನ್‌ಗಳು (peacock bobby pin)
    ನವಿಲುಗರಿಯಿಂದ ವಿನ್ಯಾಸಗೊಳಿಸಿರುವ ಈ ಬಾಬಿ ಪಿನ್‌ಗಳು ಪಾರ್ಟಿ ವೇಳೆ ಧರಿಸಲು ಉತ್ತಮವಾಗಿರುತ್ತದೆ. ಅಲ್ಲದೇ ಟ್ರೆಡಿಷನಲ್‌ ಡ್ರೆಸ್‌ಗಳ ಜೊತೆಗೆ ಕೂಡ ಧರಿಸಬಹುದಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ, ರಾಯಚೂರಲ್ಲಿ ಟ್ರ್ಯಾಕ್ಟರ್ ಹೆಸರಲ್ಲಿ ರೈತರಿಗೆ ಮೋಸ

    Live Tv
    [brid partner=56869869 player=32851 video=960834 autoplay=true]

  • 16ರ ಬಾಲಕಿ ವರಿಸಿದ 52ರ ವ್ಯಕ್ತಿ – ಮೂರು ತಿಂಗಳ ಬಳಿಕ ಬಯಲಾಯ್ತು ರಹಸ್ಯ

    16ರ ಬಾಲಕಿ ವರಿಸಿದ 52ರ ವ್ಯಕ್ತಿ – ಮೂರು ತಿಂಗಳ ಬಳಿಕ ಬಯಲಾಯ್ತು ರಹಸ್ಯ

    ಕಾರವಾರ: 52 ವರ್ಷದ ವ್ಯಕ್ತಿಯೊಬ್ಬ 16ರ ಬಾಲಕಿಯನ್ನು ವರಿಸಿದ ಘಟನೆ ಉತ್ತರಕನ್ನಡ (UttaraKannada) ಜಿಲ್ಲೆಯ ಕಾರವಾರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಮೂರು ತಿಂಗಳ ನಂತರ ತಾನು ಮದುವೆಯಾದವಳು (Marriage) ಅಪ್ರಾಪ್ತೆ ಎಂದು ತಿಳಿದು ಬಂಧನದ ಭೀತಿಯಿಂದ 52ರ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. 16 ವರ್ಷದ ಅಪ್ರಾಪ್ತೆಯನ್ನು ವರಿಸಿದ 52 ವರ್ಷದ ಅನಿಲ್ ಆತ್ಮಹತ್ಯೆಗೆ (Suicide) ಯತ್ನಿಸಿದ್ದಾನೆ. ಇದನ್ನೂ ಓದಿ: ಹಾಡಹಗಲೇ ರೈತ ಮುಖಂಡನ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ

    ಅಂಗನವಾಡಿ ಕಾರ್ಯಕರ್ತರ ಖಚಿತ ಮಾಹಿತಿ ಮೇರೆಗೆ ವಧು ಅಪ್ರಾಪ್ತೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಕೂಡಲೆ ಎಚ್ಚೆತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (women and child development) ಅಧಿಕಾರಿಗಳು ವಧುವನ್ನ ಪತ್ತೆ ಹಚ್ಚಿದ್ದಾರೆ. ಬಳಿಕ ವರ ಅನಿಲ್‌ನನ್ನು ಪೋಲಿಸರು (Police) ಬಂಧಿಸಿದ್ದಾರೆ. ಇದರಿಂದ ಆತಂಕಗೊಂಡ ಅನಿಲ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನೂ ಓದಿ: ದಲಿತ ಬಾಲಕಿಯನ್ನ ಇಡೀ ರಾತ್ರಿ ಠಾಣೆಯಲ್ಲಿರಿಸಿ ಥಳಿಸಿದ ಮೂವರು ಪೊಲೀಸ್ ಅಧಿಕಾರಿಗಳು ಅಮಾನತು

    CRIME

    ವಧು-ವರರಿಬ್ಬರೂ ಕಾರವಾರ ನಗರದ ನಿವಾಸಿಗಳಾಗಿದ್ದಾರೆ. ಕಳೆದ ಜುಲೈ 19ರಂದು ಕಾರವಾರದ ದೇವಾಲಯವೊಂದರಲ್ಲಿ ಅದ್ಧೂರಿಯಾಗಿ ಅನಿಲ್ ವಿವಾಹವಾಗಿತ್ತು. ಮದುವೆಯಲ್ಲಿ ಭಾಗಿಯಾದ ಸಂಬಂಧಿಕರು ಸೇರಿ ಒಟ್ಟು 60 ಮಂದಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೋಟಿಸ್ ನೀಡಿದ್ದು, ಕಾರವಾರ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ (FIR) ದಾಖಲಾಗಿದೆ.

    ಅಪ್ರಾಪ್ತೆ ವಧುವನ್ನು ರಕ್ಷಿಸಿ ಸಾಂತ್ವನ ಕೇಂದ್ರದಲ್ಲಿರಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • 15 ತಿಂಗಳ ಕಂದನನ್ನು ಉಳಿಸಿಕೊಳ್ಳಲು ಹುಲಿಯೊಂದಿಗೆ ಹೋರಾಡಿದ ಮಹಿಳೆ

    15 ತಿಂಗಳ ಕಂದನನ್ನು ಉಳಿಸಿಕೊಳ್ಳಲು ಹುಲಿಯೊಂದಿಗೆ ಹೋರಾಡಿದ ಮಹಿಳೆ

    ಭೋಪಾಲ್: ತನ್ನ 15 ತಿಂಗಳ ಮಗನನ್ನು ರಕ್ಷಿಸಲು ಬರಿಗೈಯಲ್ಲಿ ಮಹಿಳೆಯೊಬ್ಬರು ಹುಲಿಯೊಂದಿಗೆ ಹೋರಾಡಿರುವ ಅಚ್ಚರಿದಾಯಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    25 ವಯಸ್ಸಿನ ಅರ್ಚನಾ ಚೌಧರಿ ಭಾನುವಾರ ರಾತ್ರಿ ಅಳುತ್ತಿದ್ದ ಮಗನನ್ನು ಸಮಾಧಾನಪಡಿಸುತ್ತಾ ಮನೆಯಿಂದ ಹೊರ ಬಂದಿದ್ದಾಳೆ. ಈ ವೇಳೆ ಸಮೀಪದ ಬಾಂಧವಗಢ ಹುಲಿ ಸಂರಕ್ಷಿತಾರಣ್ಯದಿಂದ ದಾರಿ ತಪ್ಪಿ ಬಂದಿದ್ದ ಹುಲಿಯು ಹೊಲಗಳಲ್ಲಿ ಅಡಗಿ ಕುಳಿತ್ತು. ನಂತರ ದಾಳಿ ನಡೆಸಿದೆ. ಇದನ್ನೂ ಓದಿ: ಐಐಟಿ ಕ್ಯಾಂಪಸ್‌ಗಳಲ್ಲಿ 2 ದಿನದಲ್ಲಿ 2ನೇ ಆತ್ಮಹತ್ಯೆ

    ಈ ವೇಳೆ ಅಚಾನಕ್‌ ದಾಳಿ ನಡೆಸಿದ ಹುಲಿ, ಮಹಿಳೆಯ ಮಗುವನ್ನು ದವಡೆಯಲ್ಲಿ ಹಿಡಿಯಿತು. ಮಹಿಳೆ ತನ್ನ ಮಗುವನ್ನು ಬಿಡದೇ ಹುಲಿಯೊಂದಿಗೆ ಹೋರಾಡಿದ್ದಾಳೆ. ಆಗ ಬಾಲಕನನ್ನು ಬಲವಾಗಿ ಎಳೆದುಕೊಳ್ಳಲು ಹುಲಿ ಪ್ರಯತ್ನಿಸಿ ವಿಫಲವಾಗಿದೆ. ಈ ವೇಳೆ ಮಹಿಳೆ ಜೋರಾಗಿ ಕಿರುಚಿದ್ದಾಳೆ. ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಇದರಿಂದ ಭಯಗೊಂಡ ಹುಲಿ ಕಾಡಿನೊಳಕ್ಕೆ ನುಗ್ಗಿದೆ.

    ಹುಲಿಯೊಂದಿಗಿನ ಹೋರಾಟದಲ್ಲಿ ಮಹಿಳೆ ಕೈಗೆ ಗಾಯಗಳಾಗಿವೆ. ಅಲ್ಲದೇ ಮಗುವಿನ ತಲೆಗೂ ಆಳವಾದ ಗಾಯವಾಗಿದೆ. ತಾಯಿ, ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದನ್ನೂ ಓದಿ: ಮಾಸ್ಕ್ ಹಾಕ್ಕೊಂಡೇ ತೀರ್ಥ ಸೇವಿಸಿದ ಗೆಹ್ಲೋಟ್ – ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್

    Live Tv
    [brid partner=56869869 player=32851 video=960834 autoplay=true]

  • ಹಿಂದೂ ಸಂಪ್ರದಾಯದಂತೆ ಬ್ರಾಹ್ಮಣ ಯುವತಿಯನ್ನು ವರಿಸಿದ ಬಾಂಗ್ಲಾದೇಶದ ಮಹಿಳೆ

    ಹಿಂದೂ ಸಂಪ್ರದಾಯದಂತೆ ಬ್ರಾಹ್ಮಣ ಯುವತಿಯನ್ನು ವರಿಸಿದ ಬಾಂಗ್ಲಾದೇಶದ ಮಹಿಳೆ

    ಒಟ್ಟಾವಾ: ತಮಿಳುನಾಡಿನ ಬ್ರಾಹ್ಮಣ ಕುಟುಂಬದ ಯುವತಿ ಬಾಂಗ್ಲಾದೇಶದ ಮಹಿಳೆಯೊಂದಿಗೆ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿರುವ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ.

    ಕೆನಡಾದ ಕ್ಯಾಲ್ಗರಿಯಲ್ಲಿ ನೆಲೆಸಿರುವ ತಮಿಳುನಾಡಿನ ಯುವತಿ ಸುಭೀಕ್ಷಾ ಸುಬ್ರಮಣಿ (29) ಹಾಗೂ ಬಾಂಗ್ಲಾದೇಶದ ಮಹಿಳೆ ಟೀನಾ (35) ಇಬ್ಬರೂ ಕಳೆದ 6 ವರ್ಷಗಳ ಹಿಂದೆ ಡೇಟಿಂಗ್ ಆಪ್ ಮೂಲಕ ಪರಿಚಯವಾಗಿದ್ದಾರೆ. ನಂತರ ಇಬ್ಬರ ಪರಿಚಯ ಪ್ರೀತಿಗೆ ತಿರುಗಿದ್ದು, ಮದುವೆಯಾಗಲು ನಿರ್ಧರಿಸಿದ್ದರು. ಇದಕ್ಕೆ ಎರಡೂ ಕುಟುಂಬಸ್ಥರೂ ಪೂರ್ಣ ಸಹಕಾರ ನೀಡಿದ್ದರಿಂದಾಗಿ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ. ಇದನ್ನೂ ಓದಿ: ಮುಸ್ಲಿಂ ವ್ಯಕ್ತಿಯ ಪಾರ್ಥೀವ ಶರೀರದ ಮೆರವಣಿಗೆ ಕಂಡು ಡಿಜೆ ಬಂದ್ ಮಾಡಿದ ಗಣೇಶ ಭಕ್ತರು

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಸುಭೀಕ್ಷಾ, ನಮ್ಮ ಪೋಷಕರು ಸಂಪ್ರದಾಯವಾದಿಗಳು, ಹಿಂದೂ ಶೈಲಿಯಲ್ಲಿ ಮದುವೆಯಾಗಲು ಒಪ್ಪಿಗೆ ನೀಡುತ್ತಾರೆಯೇ ಎಂಬ ಆತಂಕದಲ್ಲಿದ್ದೆ. ಆದರೆ ಅವರು ಯಾವುದೇ ವಿರೋಧವಿಲ್ಲದೇ ನಮ್ಮ ಬೆಂಬಲಕ್ಕೆ ನಿಂತರು. ಬ್ರಾಹ್ಮಣ ವಿವಾಹ ಕ್ರಮದಂತೆ ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸಿದರು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮುರುಘಾ ಶ್ರೀಗಳ ಕೇಸ್ – 3ನೇ ಆರೋಪಿ ಮಠದ ಮರಿಸ್ವಾಮಿ ಪೊಲೀಸರ ವಶಕ್ಕೆ

    ಟೀನಾ ಸಹ ಇದರಿಂದ ಹರ್ಷಗೊಂಡಿದ್ದು, ನನಗೆ 19 ವರ್ಷ ಇದ್ದಾಗಲೇ ಬೇರೆ ವ್ಯಕ್ತಿಯೊಂದಿಗೆ ಮದುವೆಯಾಗಿತ್ತು. ಆದರೆ ನನಗೆ ಸಲಿಂಗಿಗಳ ಕಡೆಗೆ ಒಲವಿತ್ತು. ತಾನು ಸುಭೀಕ್ಷಾಳನ್ನು ಮದುವೆಯಾಗಬೇಕು ಅಂದುಕೊಂಡಾಗ ಆಕೆಯ ಸಹೋದರಿ ವಿರೋಧಿಸಿದ್ದರು. ಆದರೆ ಸುಭೀಕ್ಷಾಳ 84 ವರ್ಷದ ಅಜ್ಜಿ ಮದುವೆಗೆ ಒಪ್ಪಿದ ನಂತರ ಎಲ್ಲರೂ ಒಪ್ಪಿಕೊಂಡು ಮದುವೆ ನೆರವೇರಿಸಿಕೊಟ್ಟರು.

    ತಮಿಳುನಾಡಿನ ಮೂಲದ ಸುಭೀಕ್ಷಾ ಕೆನಡಾದಲ್ಲಿ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಆಗಿ ಕೆಲಸ ಮಾಡುತ್ತಿದ್ದಾರೆ. ಬಾಂಗ್ಲಾದೇಶ ಮೂಲದ ಟೀನಾ 2003ರಲ್ಲಿ ಕೆನಡಾಕ್ಕೆ ಬಂದು ನೆಲೆಸಿದ್ದು, ಕ್ಯಾಲ್ಗರಿಯ ಫೂತ್‌ಹಿಲ್ಸ್ ಆಸ್ಪತ್ರೆಯ ಪೇಷೆಂಟ್ ಕೇರ್ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹುಡುಗಿಯರ ಮೈಕಾಂತಿ ಹೆಚ್ಚಿಸುವ ಸೀರೆಗೊಂದು ಸಿಂಗಾರ ಬೇಡವೇ?

    ಹುಡುಗಿಯರ ಮೈಕಾಂತಿ ಹೆಚ್ಚಿಸುವ ಸೀರೆಗೊಂದು ಸಿಂಗಾರ ಬೇಡವೇ?

    ಬೇರೆ ಯಾವ ಬಟ್ಟೆ ಧರಿಸಿದ್ರೂ ಸೀರೆಯ ಅಂದ ಮೀರಿಸಲು ಸಾಧ್ಯವಿಲ್ಲ. ಸೀರೆಯುಟ್ಟ ಮಹಿಳೆಯರು ಸುಂದರವಾಗಿ ಕಾಣುತ್ತಾರೆ. ಆದರೆ ಈಗ ಸ್ವಲ್ಪ ಟ್ರೆಂಡ್ ಬದಲಾಗಿದೆ.

    ಹೌದು. ಬೇಸಿಗೆಯಲ್ಲಿ ಟ್ಯಾನ್ಸ್ಪರೆಂಟ್ ಅಥವಾ ಕಾಟನ್ ಬಟ್ಟೆಯ ಸೀರೆಗಳು ಹೆಚ್ಚು ಬೇಡಿಕೆಯಲ್ಲಿರುವಂತೆ ಮಳೆ, ಚಳಿಗಾಲದಲ್ಲಿ ಚರ್ಮದ ಸುರಕ್ಷತೆಯೊಂದಿಗೆ ಅಂದ ಹೆಚ್ಚಿಸುವ ಉಡುಪುಗಳನ್ನೇ ಮಹಿಳೆಯರು, ಯುವತಿಯರು ಹೆಚ್ಚಾಗಿ ಇಷ್ಟಪಡುತ್ತಾರೆ. ಕೆಲವು ಮಹಿಳೆಯರು ಗ್ರ್ಯಾಂಡ್‌ ಪಾರ್ಟಿಗೆ ಹೋಗುವಂತ ಸಂದರ್ಭದಲ್ಲಿ ತಮ್ಮ ಮೈಮಾಟದಿಂದಲೇ ಅಂದದ ಹೊಳಪನ್ನು ಹೆಚ್ಚಿಸಲು ಪ್ರಯತ್ನಿಸುತ್ತಾರೆ. ಇದನ್ನೂ ಓದಿ: ತಮ್ಮ ಮಗುವಿಗೆ ಭಾರತೀಯ ಖಾದ್ಯದ ಹೆಸರಿಟ್ಟ ವಿದೇಶಿ ದಂಪತಿ

    ಅದಕ್ಕಾಗಿ ಸುಂದರವಾದ ಹೂವುಗಳಿಂದ ಅಲಂಕೃತವಾದ ಪ್ರಿಂಟೆಡ್ ಸೀರೆಯನ್ನು ಆಯ್ಕೆ ಮಾಡಿಕೊಳ್ಳುವ ಜೊತೆಗೆ ಗ್ರ‍್ಯಾಂಡ್ ವರ್ಕ್ವುಳ್ಳ ಬ್ಲೌಸ್ ಧರಿಸುವುದು ಮರೆಯುವುದೇ ಇಲ್ಲ. ಸ್ಲೀವ್‌ಲೆಸ್ ಬ್ಲೌಸ್‌ಗಳು ಬೇಸಿಗೆ ಕಾಲದಲ್ಲಿ ಮಾರ್ಡನ್ ಲುಕ್ ಮತ್ತು ಆರಾಮದಾಯಕವಾಗಿರುವಂತೆ ಮಳೆಗಾಲದಲ್ಲಿ ಚಳಿಯಿಂದಲೂ ಸುರಕ್ಷತೆ ನೀಡಲು ವೆಸ್ಟ್ರನ್‌ ಲುಕ್ ನೀಡುವ ಸೀರೆಗಳೂ ಇಂದು ಹೆಚ್ಚು ಟ್ರೆಂಡಿಯಾಗಿವೆ.

    ಸೀರೆಗೆ ಮ್ಯಾಚಿಂಗ್ ಬ್ಲೌಸ್, ಇಸ್ತ್ರಿ, ನಿರ್ವಹಣೆ ಹೀಗೆ ಹಲವು ಕೆಲಸಗಳಿರುತ್ತವೆ. ಆದರೂ ಆಧುನಿಕ ಉಡುಪುಗಳ ಟ್ರೆಂಡ್ ಕಡಿಮೆಯಾಗುತ್ತಿದ್ದು, ಯುವತಿಯರು ಮಹಿಳೆಯರಿಂದು ಸ್ಟೈಲ್‌ಗಾಗಿ ಸೀರೆಯತ್ತ ವಾಲುತ್ತಿದ್ದಾರೆ. ಮಾರುಕಟ್ಟೆಯಲ್ಲೂ ಸಹ ಅವರ ಅಭಿರುಚಿಗೆ ತಕ್ಕಂತೆ ಆಧುನಿಕ ಅವತಾರದಲ್ಲಿ ಸೀರೆಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ. ಅಲ್ಲದೆ ಹೆಚ್ಚು ಭಾರವಿರದ, ಸಮಯ ವ್ಯರ್ಥ ಮಾಡದೇ ಸುಲಭವಾಗಿ ಉಡಲು ಬರುವ ಸೀರೆಗಳು ಇಂದಿನ ಪೀಳಿಗೆಗೆ ಅಚ್ಚುಮೆಚ್ಚಾಗಿದೆ. ಇದನ್ನೂ ಓದಿ: ಪ್ರೆಗ್ನೆನ್ಸಿ ಫೋಟೋಶೂಟ್‌ನಲ್ಲಿ ಮಿಂಚಿದ ಬಾಲಿವುಡ್‌ ನಟಿ ಬಿಪಾಶಾ ಬಸು

    ಫ್ಯಾಷನ್ ಡಿಸೈನರ್‌ಗಳ ಪ್ರಕಾರ ಬ್ಲೇಜರ್‌ನೊಂದಿಗೆ ಸೀರೆ, ಬಿಕಿನಿ ಟಾಪ್ ಜೊತೆ ಸೀರೆ, ಶರ್ಟ್ನೊಂದಿಗೆ ಸೀರೆ ಧರಿಸುವ ಫ್ಯಾಷನ್ ಬಂದಿದೆ. ಫ್ರೆಂಡ್ಸ್ ಜೊತೆ ಪಾರ್ಟಿಗಳಿಗೆ ಹೋಗುವುದರಿಂದ ಲೇಟ್‌ನೈಟ್ ಪಾರ್ಟಿ, ಕ್ಲಬ್-ಪಬ್‌ಗಳಿಗೂ ಈ ಸೀರೆ ಹೆಚ್ಚು ಸೂಕ್ತವಾಗಿದೆ. ಬಗೆಬಗೆಯ ಫ್ಯಾಷನ್ ಟ್ರೆಂಡ್ ಗಳು ಹೆಚ್ಚಾಗುತ್ತಿದ್ದರೂ ಹಳೆಯ ಸೀರೆ ಉಡುವ ರೀತಿ ನೋಡಲು ಸುಂದರವಾಗಿರುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

    Live Tv
    [brid partner=56869869 player=32851 video=960834 autoplay=true]