Tag: women

  • ‘ಬ್ರೋಕನ್‌ ಹಾರ್ಟ್‌ ಸಿಂಡ್ರೋಮ್‌’; ಇದು ಹೃದಯದ ಮಾತು – ಪುರುಷರೇ ಜೋಕೆ!

    ‘ಬ್ರೋಕನ್‌ ಹಾರ್ಟ್‌ ಸಿಂಡ್ರೋಮ್‌’; ಇದು ಹೃದಯದ ಮಾತು – ಪುರುಷರೇ ಜೋಕೆ!

    ವಳು ನನಗೆ ಕೈಕೊಟ್ಟಳು.. ಅಮ್ಮ ನಿನ್ನ ಪ್ರೀತಿ ಸಾಗರ, ನನ್ನನ್ನೇಕೆ ಬಿಟ್ಟು ಹೋದೆ.. ನನ್ನ ಮುದ್ದಿನ ಟೋನಿ (ಸಾಕು ನಾಯಿ) ಇನ್ನಿಲ್ಲ.. ಹೀಗೆ ಪ್ರೀತಿ ಪಾತ್ರರನ್ನು ಕಳೆದುಕೊಂಡು ಕೊರಗುವವರು ಎಷ್ಟು ಮಂದಿ. ಪ್ರೀತಿ-ವಾತ್ಸಲ್ಯಕ್ಕೆ ಬೆಲೆ ಕಟ್ಟಲಾಗದು. ಇದು ಹೃದಯಕ್ಕೆ ಸಂಬಂಧಿಸಿದ ಮಾತು. ಮನುಷ್ಯನಿಗೆ ಹೃದಯ ಎಷ್ಟು ಮುಖ್ಯ ಅಲ್ವಾ? ಅದು ಸದಾ ಲಬ್‌ ಡಬ್‌.. ಲಬ್‌ ಡಬ್‌ ಎನ್ನಲು ದೇಹಕ್ಕೆ ಆರೋಗ್ಯ ಮತ್ತು ಮನಸ್ಸಿಗೆ ಉಲ್ಲಾಸ ಬೇಕು. ಇವರೆಡೂ ಇಲ್ಲ ಅಂದ್ರೆ ಹೃದಯದ ಕಥೆ ಏನಾಗಬಹುದು?

    ಹೃದಯ ಮುರಿದೀತು ಜೋಕೆ! ಹೀಗೆನ್ನುತ್ತಿದ್ದಾರೆ ಆರೋಗ್ಯ ತಜ್ಞರು. ಪ್ರೀತಿ ವಿಷಯದಲ್ಲಿ ಹೆಚ್ಚು ಭಾವನೆಗೆ ಒಳಗಾಗಬೇಡಿ. ಅದು ನಿಮ್ಮ ಪ್ರಾಣಕ್ಕೆ ಅಪಾಯ ತರಬಹುದು. ‘ಬ್ರೋಕನ್‌ ಹಾರ್ಟ್‌ ಸಿಂಡ್ರೋಮ್‌’. ಇದು ಹೃದಯವಂತರಿಗೆ ಎಚ್ಚರಿಕೆಯ ಕರೆಗಂಟೆ. ಈ ಸಿಂಡ್ರೋಮ್‌ಗೆ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಬಲಿಯಾಗುತ್ತಿದ್ದಾರಂತೆ. ಹೀಗಾಗಿ, ಹೃದಯಕ್ಕೆ ಹೆಚ್ಚು ನೋವು ಕೊಡಬೇಡಿ ಎನ್ನುತ್ತಿದ್ದಾರೆ ವೈದ್ಯರು.

    ಬ್ರೋಕನ್‌ ಹಾರ್ಟ್‌ ಸಿಂಡ್ರೋಮ್‌ಗೆ ವೈದ್ಯಕೀಯ ಪರಿಭಾಷೆಯಲ್ಲಿ ‘ಟಕೋಟ್ಸುಬೊ ಕಾರ್ಡಿಯೊಮಯೋಪತಿ’ ಎಂದು ಕರೆಯುತ್ತಾರೆ. ಪ್ರೀತಿಪಾತ್ರರನ್ನು ಕಳೆದುಕೊಳ್ಳುವ, ಗಂಭೀರ ಅನಾರೋಗ್ಯ ಅಥವಾ ಶಸ್ತ್ರಚಿಕಿತ್ಸೆಯಿಂದಾಗಿ ತೀವ್ರವಾದ ಭಾವನಾತ್ಮಕ ಅಥವಾ ದೈಹಿಕ ಒತ್ತಡಕ್ಕೆ ಒಳಗಾಗುವವರಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಈ ಸಿಂಡ್ರೋಮ್‌ ಕೂಡ ಹೃದಯಘಾತದಂತೆಯೇ ಎದೆ ನೋವು, ಉಸಿರಾಟದ ತೊಂದರೆ ಮತ್ತು ಜೋರಾದ ಹೃದಯ ಬಡಿತವನ್ನು ಉಂಟುಮಾಡುತ್ತದೆ. ಆದರೆ ಸಾಮಾನ್ಯ ಹೃದಯಾಘಾತದಂತೆ ಇದು ನಿರ್ಬಂಧಿತ ಅಪಧಮನಿಗಳನ್ನು ಒಳಗೊಂಡಿರುವುದಿಲ್ಲ.

    ಜರ್ನಲ್ ಆಫ್ ದಿ ಅಮೆರಿಕನ್ ಹಾರ್ಟ್ ಅಸೋಸಿಯೇಷನ್‌ನಲ್ಲಿ ಪ್ರಕಟವಾದ ವರದಿಯು 2016 ಮತ್ತು 2020 ರ ನಡುವೆ ಆಸ್ಪತ್ರೆಗೆ ದಾಖಲಾದ ಸುಮಾರು 2,00,000 ಪ್ರಕರಣಗಳನ್ನು ವಿಶ್ಲೇಷಣೆಗೆ ಒಳಪಡಿಸಿದೆ.

    ಸಂಶೋಧಕರು ಕಂಡುಕೊಂಡಿದ್ದೇನು?
    ಆಸ್ಪತ್ರೆಯಲ್ಲಿ ಒಟ್ಟಾರೆ ಮರಣ ಪ್ರಮಾಣ: 6.5%
    ಮಹಿಳೆಯರ ಮರಣ ಪ್ರಮಾಣ: 5.5%
    ಪುರುಷರ ಮರಣ ಪ್ರಮಾಣ: 11.2%

    ಈ ವರದಿಯನ್ನು ಗಮನಿಸಿದರೆ ಪುರುಷರಲ್ಲಿ ಹೆಚ್ಚಿನ ಮರಣ ಪ್ರಮಾಣ ಕಂಡುಬರುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದಕ್ಕೆ ಉತ್ತಮ ಚಿಕಿತ್ಸೆಗಳು ಮತ್ತು ಹೆಚ್ಚಿನ ಸಂಶೋಧನೆಯ ತುರ್ತು ಅಗತ್ಯವಿದೆ ಎಂದು ಅರಿಜೋನಾ ವಿಶ್ವವಿದ್ಯಾನಿಲಯದ ಹೃದ್ರೋಗ ತಜ್ಞ ಡಾ. ಮೊಹಮ್ಮದ್ ರೆಜಾ ಮೊವಾಹೆದ್ ತಿಳಿಸಿದ್ದಾರೆ.

    ಸಿಂಡ್ರೋಮ್‌ಗೆ ಅಪಾಯ ಏನು?
    ಬ್ರೋಕನ್‌ ಹಾರ್ಟ್‌ ಸಿಂಡ್ರೋಮ್‌ಗೆ ಒಳಗಾಗುವವರಿಗೆ ತ್ವರಿತವಾಗಿ ಚಿಕಿತ್ಸೆ ನೀಡದಿದ್ದರೆ ಈ ಸ್ಥಿತಿಯು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
    ಹೃದಯ ವೈಫಲ್ಯ – 35.9%
    ಅನಿಯಮಿತ ಹೃದಯ ಬಡಿತ (ಹೃತ್ಕರ್ಣದ ಕಂಪನ) – 20.7%
    ಹೃದಯ ಆಘಾತ – 6.6%
    ಪಾರ್ಶ್ವವಾಯು – 5.3%
    ಹೃದಯ ಸ್ತಂಭನ – 3.4% ಕಾಣಿಸಿಕೊಳ್ಳಬಹುದು.

    ಯಾರಿಗೆ ಹೆಚ್ಚು ಅಪಾಯವಿದೆ?
    61 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. 46–60 ಮತ್ತು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ 3.25 ಕ್ಕಿಂತ ಹೆಚ್ಚು ಪಟ್ಟು ಪರಿಣಾಮ ಬೀರುತ್ತಾರೆ. ಶ್ವೇತ ವರ್ಣೀಯರು ಈ ಸಮಸ್ಯೆಗೆ ಹೆಚ್ಚು ತುತ್ತಾಗುತ್ತಾರೆ (0.16%). ನಂತರ ಸ್ಥಳೀಯ ಅಮೆರಿಕನ್ನರು (0.13%) ಮತ್ತು ಕಪ್ಪು ವಯಸ್ಕರು (0.07%) ಸಮಸ್ಯೆಯಿಂದ ಬಳಲುತ್ತಾರೆ.

    ಪುರುಷರೇ ಹೆಚ್ಚು ಸಾಯೋದು ಏಕೆ?
    ಈ ಸಿಂಡ್ರೋಮ್‌ಗೆ ಶೇ.83% ರಷ್ಟು ಮಹಿಳೆಯರು ತುತ್ತಾಗುತ್ತಿದ್ದಾರೆ. ಆದರೆ, ಸಾವಿನ ಪ್ರಮಾಣದಲ್ಲಿ ಪುರುಷರೇ ಹೆಚ್ಚಿದ್ದಾರೆ. ಏಕೆಂದರೆ, ಪುರುಷರು ದೈಹಿಕ ಒತ್ತಡಗಳನ್ನು (ಶಸ್ತ್ರಚಿಕಿತ್ಸೆ ಅಥವಾ ಅನಾರೋಗ್ಯದಂತಹ) ಎದುರಿಸುವ ಸಾಧ್ಯತೆ ಹೆಚ್ಚು. ಪುರುಷರಿಗೆ ಸಾಮಾಜಿಕ ಬೆಂಬಲದ ಕೊರತೆಯೂ ಇರಬಹುದು. ಸಾಮಾಜಿಕ ಬೆಂಬಲವು ಗುಣಪಡಿಸುವಿಕೆಗೆ ನಿರ್ಣಾಯಕವಾಗಿದೆ. ಆ ಬೆಂಬಲವಿಲ್ಲದೆ, ಚೇತರಿಕೆ ನಿಧಾನ ಮತ್ತು ಹೆಚ್ಚು ಅಪಾಯಕಾರಿಯಾಗಬಹುದು. ಮಹಿಳೆಯರು ಹೆಚ್ಚಾಗಿ ಭಾವನಾತ್ಮಕ ಒತ್ತಡಗಳನ್ನು (ದುಃಖ ಅಥವಾ ಉದ್ಯೋಗ ನಷ್ಟ) ಎದುರಿಸುತ್ತಾರೆ.

    5 ವರ್ಷಗಳಲ್ಲಿ ಯಾವುದೇ ಪ್ರಗತಿ ಇಲ್ಲ
    ಐದು ವರ್ಷಗಳ ಅಧ್ಯಯನ ಅವಧಿಯಲ್ಲಿ ಮರಣ ಪ್ರಮಾಣವು ಸುಧಾರಿಸಲಿಲ್ಲ. ಈ ಸಿಂಡ್ರೋಮ್‌ಗೆ ಸದ್ಯದ ಚಿಕಿತ್ಸೆಗಳು ಪರಿಣಾಮಕಾರಿಯಾಗಿಲ್ಲ. ಆಸ್ಪತ್ರೆ ಸಂಪನ್ಮೂಲಗಳು, ಆದಾಯ ಮಟ್ಟ ಮತ್ತು ವಿಮಾ ಸ್ಥಿತಿಯಂತಹ ಅಂಶಗಳು ಫಲಿತಾಂಶಗಳ ಮೇಲೆ ಪರಿಣಾಮ ಬೀರಬಹುದು ಎಂದು ಅಧ್ಯಯನವು ತಿಳಿಸಿದೆ.

  • ಇಬ್ಬರು ಗಂಡು ಮಕ್ಕಳನ್ನು ಕೊಂದು ಐದನೇ ಮಹಡಿಯಿಂದ ಜಿಗಿದ ಮಹಿಳೆ

    ಇಬ್ಬರು ಗಂಡು ಮಕ್ಕಳನ್ನು ಕೊಂದು ಐದನೇ ಮಹಡಿಯಿಂದ ಜಿಗಿದ ಮಹಿಳೆ

    ಹೈದರಾಬಾದ್: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಇಬ್ಬರು ಗಂಡು ಮಕ್ಕಳನ್ನು ಕೊಂದು ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನ (Hyderabad) ಗಜುಲರಾಮರಂನ (Gajularamaram) ಬಾಲಾಜಿ ಲೇಔಟ್‌ನಲ್ಲಿ ನಡೆದಿದೆ.

    ಆಶಿಶ್ ರೆಡ್ಡಿ(8), ಅರ್ಷಿತ್ ರೆಡ್ಡಿ(6) ಎಂಬ ಇಬ್ಬರು ಗಂಡು ಮಕ್ಕಳನ್ನು ತೇಜಸ್ವಿನಿ(33) ತೆಂಗಿನಕಾಯಿ ತುರಿಯುವ ಮಣೆಯಿಂದ (Coconut Chopper) ಹೊಡೆದು ಕೊಲೆ ಮಾಡಿ, ಬಳಿಕ ತಾನೂ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ತಾಯಿ, ಮಗನ ಕೊಲೆ ಕೇಸ್‌ – ಪೊಲೀಸರಿಗೆ ಹೆದರಿ ಆರೋಪಿ ನೇಣಿಗೆ ಶರಣು

    ಮನೆಯಲ್ಲಿ ಕಿರುಚಾಟದ ಶಬ್ದ ಕೇಳಿದ್ದರಿಂದ ಬಂದು ನೋಡಿದಾಗ ಮಕ್ಕಳಿಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಶಿಶ್ ಸ್ಥಳದಲ್ಲೇ ಮೃತಪಟ್ಟಿದ್ದು, ಅರ್ಷಿತ್ ರೆಡ್ಡಿ ಗಂಭೀರ ಸ್ಥಿತಿಯಲ್ಲಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ ಎಂದು ವೈದ್ಯರು ಹೇಳಿದರು ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಇನ್ನು ಮುಂದೆ ಪಿಯುಸಿಯಲ್ಲಿ ಕಲೆ, ವಾಣಿಜ್ಯ ಓದಿದವರೂ ಪೈಲಟ್‌ ಆಗಬಹುದು!

    7 ಪುಟಗಳ ಡೆತ್‌ನೋಟ್ (Suicide Note) ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ತೇಜಸ್ವಿನಿ, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಬಗ್ಗೆ ಉಲ್ಲೇಖಿಸಿದ್ದಾರೆ. ಪುತ್ರರಿಬ್ಬರ ಉಸಿರಾಟದ ತೊಂದರೆ ಹಾಗೂ ಪತಿಯ ಬೆಂಬಲದ ಕೊರತೆಯಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮುದ್ದು ಮಗಳಿಗೆ ಸುಂದರ ಹೆಸರಿಟ್ಟ ಅಥಿಯಾ ಶೆಟ್ಟಿ ದಂಪತಿ- ಅದರ ಅರ್ಥವೇನು ಗೊತ್ತಾ?

    ಘಟನಾ ಸ್ಥಳಕ್ಕೆ ಜೀಡಿಮೆಲ್ಲಾ ಪೊಲೀಸರು (Jeedimetla Police) ಭೇಟಿ ನೀಡಿ, ಪರಿಸೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಸಾಕು ನಾಯಿ ದಾಳಿ – ಮಹಿಳೆಯ ಮುಖಕ್ಕೆ ಬಿತ್ತು 20 ಸ್ಟಿಚ್

    ಸಾಕು ನಾಯಿ ದಾಳಿ – ಮಹಿಳೆಯ ಮುಖಕ್ಕೆ ಬಿತ್ತು 20 ಸ್ಟಿಚ್

    – ಡಾಬರ್‌ಮ್ಯಾನ್ & ಪಿಟ್‌ಬುಲ್ ನಾಯಿಗಳಿಂದ ದಾಳಿ

    ಮುಂಬೈ: ಇಲ್ಲಿನ ಪೋವೈ (Powai) ಹೌಸಿಂಗ್ ಸೊಸೈಟಿ ಬಳಿ 37 ವರ್ಷದ ಮಹಿಳೆ ಮೇಲೆ 2 ಸಾಕು ನಾಯಿಗಳು ದಾಳಿ ಮಾಡಿದ್ದು, ಪರಿಣಾಮ ಆಕೆಯ ಮುಖಕ್ಕೆ 20 ಸ್ಟಿಚ್ ಹಾಕಲಾಗಿದೆ. ಡಾಬರ್‌ಮ್ಯಾನ್ (Doberman) ಹಾಗೂ ಪಿಟ್‌ಬುಲ್ (Pit bull) ನಾಯಿಗಳು ಮಹಿಳೆಯ ಮೇಲೆ ದಾಳಿ ಮಾಡಿದೆ.

    ರೀಚಾ ಸಂಚಿತ್ ಕೌಶಿಕ್ ಸಿಂಗ್ ಅರೋರ ಎಂಬ ಮಹಿಳೆ ಅಪಾರ್ಟ್ಮೆಂಟ್‌ನಿಂದ ತೆರಳುತ್ತಿದ್ದಾಗ ಡಾಬರ್‌ಮ್ಯಾನ್ ಹಾಗೂ ಪಿಟ್‌ಬುಲ್ ನಾಯಿಗಳು ಮುಖದ ಮೇಲೆ ದಾಳಿ ಮಾಡಿದೆ. ರೀಚಾ ಸಂಚಿತ್ ಅವರು ತಮ್ಮ ಹೊಸ ಮನೆಯ ನಿರ್ಮಾಣ ಕಾರ್ಯವನ್ನು ಪರಿಶೀಸಲು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಇದನ್ನೂ ಓದಿ: ರೀಲ್ಸ್ ವಿವಾದ: ನಮಗೆ ಪೊಲೀಸರ ದಿಕ್ಕು ತಪ್ಪಿಸೋ ಉದ್ದೇಶವಿಲ್ಲ ಎಂದ ವಿನಯ್ ಗೌಡ

    ರಿಚಾ ತನ್ನ ಅಪಾರ್ಟ್ಮೆಂಟ್‌ನಿಂದ ಹೊರಗೆ ಹೋಗುತ್ತಿದ್ದಾಗ ಸ್ಥಳೀಯ ನಿವಾಸಿ ದಿವೇಶ್ ವಿರ್ಕ್ ಅವರ ಎರಡು ನಾಯಿಗಳು ಇದ್ದಕ್ಕಿದ್ದಂತೆ ದಾಳಿ ಮಾಡಿದೆ. ಈ ವೇಳೆ ದಿವೇಶ್ ವೀರ್ಕ್ ಅವರ ಚಾಲಕ ಅತುಲ್ ಸಾವಂತ್ ಹಾಗೂ ಮನೆಕೆಲಸದವರಾದ ಸ್ವಾತಿ ಅವರು ನಾಯಿಯನ್ನು ಹಿಡಿದುಕೊಂಡಿದ್ದರು. ಸ್ವಾತಿ ಹಿಡಿದುಕೊಂಡಿದ್ದ ಕಂದು ಬಣ್ಣದ ನಾಯಿ ಆಕೆ ಮೇಲೆ ದಾಳಿ ಮಾಡಿ ಕಚ್ಚಿದೆ. ನಾಯಿಯನ್ನು ದೂರ ತಳ್ಳಲು ಪ್ರಯತ್ನಿಸಿದಾಗ, ಸಾವಂತ್ ಹಿಡಿದುಕೊಂಡಿದ್ದ ಕಪ್ಪು ನಾಯಿ ಕೂಡ ದಾಳಿ ಮಾಡಿದೆ ಎಂದು ಪೊಲೀಸರು ತಿಳಿಸಿದರು. ಇದನ್ನೂ ಓದಿ: ರೀಲ್ಸ್ ಮಾಡಿದ ಜಾಗದಲ್ಲಿ ವಿನಯ್‌, ರಜತ್‌ರನ್ನು ಸ್ಥಳ ಮಹಜರಿಗೆ ಕರೆತಂದ ಪೊಲೀಸರು

    ನಾಯಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ, ನಾನು ಬಿದ್ದೆ. ನಂತರ ಕಪ್ಪು ನಾಯಿ ನನ್ನ ಮೂಗು ಮತ್ತು ಬಲ ತೊಡೆಯ ಮೇಲೆ ಕಚ್ಚಿದ್ದು, ಇದರಿಂದ ನನಗೆ ಗಂಭೀರ ಗಾಯವಾಯಿತು ಎಂದು ರಿಚಾ ತಿಳಿಸಿದರು. ಇದನ್ನೂ ಓದಿ: ಡಿಕೆಶಿ ಪ್ರತಿಕೃತಿ ಸುಟ್ಟು 200ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

    ಗಾಯಗೊಂಡ ರಿಚಾರನ್ನು, ಆಕೆಯ ಮಾವ ಜಿತೇಂದ್ರ ಶರ್ಮಾ ಮತ್ತು ಸ್ಥಳೀಯ ನಿವಾಸಿ ಸಂಜಯ್ ಜಲಾನ್ ಅವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರು. ಮುಖದ ಭಾಗಕ್ಕೆ ತೀವ್ರ ಗಾಯಗಳಾಗಿದ್ದರಿಂದ ಆಕೆಯ ಮುಖಕ್ಕೆ ವೈದ್ಯರು 20 ಹೊಲಿಗೆಯನ್ನು ಹಾಕಲಾಗಿದೆ. ಪೋವೈ ಪೊಲೀಸರು ನಾಯಿ ಮಾಲೀಕರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಕಾರು ಚಾಲನೆ ಮಾಡುವಾಗಲೇ ಹೃದಯಾಘಾತ – ಗುತ್ತಿಗೆದಾರ ದುರ್ಮರಣ

  • ಅತ್ಯಾಚಾರಕ್ಕೆ ಯತ್ನ – ಕಾಮುಕನಿಂದ ತಪ್ಪಿಸಿಕೊಳ್ಳಲು ಚಲಿಸುತ್ತಿದ್ದ ರೈಲಿಂದ ಜಿಗಿದ ಮಹಿಳೆ

    ಅತ್ಯಾಚಾರಕ್ಕೆ ಯತ್ನ – ಕಾಮುಕನಿಂದ ತಪ್ಪಿಸಿಕೊಳ್ಳಲು ಚಲಿಸುತ್ತಿದ್ದ ರೈಲಿಂದ ಜಿಗಿದ ಮಹಿಳೆ

    ಹೈದರಾಬಾದ್: ರೈಲಿನಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಹಿನ್ನೆಲೆ ಮಹಿಳೆಯು ರೈಲಿನಿಂದ ಹಾರಿದ ಪರಿಣಾಮ ಗಂಭೀರ ಗಾಯಗೊಂಡ ಘಟನೆ ತೆಲಂಗಾಣದಲ್ಲಿ (Telangana) ನಡೆದಿದೆ.

    ಖಾಸಗಿ ವಲಯದ ಉದ್ಯೋಗಿಯಾಗಿರುವ ಮಹಿಳೆ, ಮೊಬೈಲ್ ಫೋನ್ ಸರಿಮಾಡಲು ಮೆಡ್ಚಲ್‌ನಿಂದ ಸಿಕಂದರಾಬಾದ್‌ಗೆ (Secunderabad) ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇದನ್ನೂ ಓದಿ: ನಾನು ಸಿಎಂ ಆದ್ರೆ ಸಾವಿರ ಜೆಸಿಬಿ ಆರ್ಡರ್, ಪ್ರತಿ ತಾಲೂಕಿಗೆ 35 ಇಡ್ತೀನಿ: ಯತ್ನಾಳ್‌

    ಮಾ. 22ರಂದು ಸಂಜೆ ಸಿಕಂದರಾಬಾದ್ ರೈಲ್ವೆ ನಿಲ್ದಾಣದಿಂದ ಮೆಡ್ಚಲ್‌ಗೆ (Medchal) ಹೋಗುವ ಮಲ್ಟಿ ಮಾಡಲ್ ಟ್ರಾರ್ನ್ಸ್‌ಪೋರ್ಟ್‌ ಸರ್ವಿಸ್ ರೈಲಿನ ಮಹಿಳಾ ಕೋಚ್‌ನಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದೆ. ಅಲ್ವಾಲ್ ರೈಲ್ವೆ ನಿಲ್ದಾಣದಲ್ಲಿ (Alwal railway station) ಹತ್ತಿದ ಸುಮಾರು 25 ವಯಸ್ಸಿನ ಒಬ್ಬ ಅಪರಿಚಿತ ವ್ಯಕ್ತಿ ಲೈಂಗಿಕ ಕ್ರಿಯೆಗೆ ಬೇಡಿಕೆ ಇಟ್ಟಿದ್ದ. ಆತನಿಗೆ ಸಹಕರಿಸಲು ನಿರಾಕರಿಸಿದಾಗ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದನು. ಆತನಿಂದ ತಪ್ಪಿಸಿಕೊಳ್ಳಲು ಚಲಿಸುವ ರೈಲಿನಿಂದ ಹೊರಗೆ ಹಾರಿದೆ ಎಂದು ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ: ನ್ಯಾ.ಯಶವಂತ್ ವರ್ಮಾ ನ್ಯಾಯಾಂಗ ಕರ್ತವ್ಯ ನಿರ್ವಹಣೆ ಮಾಡುವಂತಿಲ್ಲ: ದೆಹಲಿ ಹೈಕೋರ್ಟ್

    ಮಹಿಳೆಯ ತಲೆ, ಗಲ್ಲ, ಬಲಗೈ ಮತ್ತು ಸೊಂಟದ ಮೇಲೆ ತೀವ್ರ ಗಾಯಗಳಾಗಿದ್ದು, ರೈಲ್ವೆ ಹಳಿ ಬಳಿ ಹೋಗುತ್ತಿದ್ದ ಕೆಲವರು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು. ಮಹಿಳೆಯ ದೂರಿನ ಆಧಾರದ ಮೇಲೆ ಬಿಎನ್‌ಎಸ್‌ನ (BNS) ಸೆಕ್ಷನ್ 75 ಮತ್ತು 131 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಹನಿಟ್ರ್ಯಾಪ್‌ ಕೇಸ್‌- ಮಂಗಳವಾರ ರಾಜಣ್ಣ ದೂರು, ಎಸ್‌ಐಟಿ ರಚನೆ ಸಾಧ್ಯತೆ

  • ನಾರಿಯರ ಅಂದ ಹೆಚ್ಚಿಸುವ ಮಸಾಬ ಬ್ಲೌಸ್ ಡಿಸೈನ್

    ನಾರಿಯರ ಅಂದ ಹೆಚ್ಚಿಸುವ ಮಸಾಬ ಬ್ಲೌಸ್ ಡಿಸೈನ್

    ಹೆಣ್ಣಿಗೆ ಸೀರೆ ಯಾಕೆ ಅಂದಾ! ಸೌಂದರ್ಯ ಪ್ರಿಯೇ ಹೆಣ್ಣಿಗೆ ಸೀರೆ ಎಂದರೆ ಅಚ್ಚುಮೆಚ್ಚು. ಸೀರೆಯುಟ್ಟ ನವಿಲಿನಂತೆ ಕಂಗೊಳಿಸುವ ಹೆಣ್ಣುಮಕ್ಕಳು ವಿವಿಧ ಶೈಲಿಯ, ಬಣ್ಣಗಳ, ಚಿತ್ತಾರದ ಸೀರೆಯನ್ನು ತುಂಬಾ ಇಷ್ಟಪಡುತ್ತಾರೆ. ಸೀರೆಗಳಲ್ಲೇ ನಾವು ಹಲವಾರು ವಿಧಗಳನ್ನ ಕಾಣಬಹುದು. ಕಾಟನ್ ಸೀರೆ, ರೇಷ್ಮೆ ಸೀರೆ, ಬನಾರಸಿ ಸೀರೆ, ಜಾರ್ಜೆಟ್ ಸೀರೆ ಇನ್ನೂ ಹಲವಾರು ವಿಧದ ಸೀರೆಗಳು ನಾರಿಮಣಿಯರನ್ನು ಸುಂದರವಾಗಿ ಕಾಣಿಸುತ್ತದೆ.

    ಬರೀ ಸೀರೆ ಬಗ್ಗೆ ಹೇಳಿದ್ರೆ ಸಾಕಾ? ಇಲ್ಲ ಸೀರೆಯ ಲುಕ್ ಬದಲಿಸುವ ಇನ್ನೊಂದು ಬಹಳ ಮುಖ್ಯವಾದ ವಿಷಯ ಇದೆ. ಅದೇನಂದ್ರೆ ಬ್ಲೌಸ್ ಡಿಸೈನ್ಸ್. ಹೌದು, ಸೀರೆಯ ಲುಕ್ ಅನ್ನ ಗ್ರ್ಯಾಂಡ್ ಆಗಿ ಮತ್ತು ಬ್ಯೂಟಿಫುಲ್ ಆಗಿ ಕಾಣುವಂತೆ ಮಾಡುವುದೇ ಬ್ಲೌಸ್ ಡಿಸೈನ್. ಸೀರೆ ಸಿಂಪಲ್ ಆಗಿದ್ರೂ, ಬ್ಲೌಸ್ ಡಿಸೈನ್‌ಯಿಂದ ನಮ್ಮ ಬ್ಯೂಟಿ ಕ್ವೀನ್ಸ್‌ಗಳನ್ನು ಮತ್ತಷ್ಟು ಸೌಂದರ್ಯವತಿಯನ್ನಾಗಿಸುತ್ತದೆ. ಅಬ್ಬಬ್ಬಾ ಈಗಂತೂ ಬ್ಲೌಸ್ ಡಿಸೈನ್‌ಗಳನ್ನ ನೋಡೋಕೆ ಹೋದ್ರೆ ಅಲ್ಲೇ ಕನ್ಫ್ಯೂಸ್ ಆಗಿಬಿಡುತ್ತೇವೆ.

    ದಿನಕ್ಕೊಂದು ಸೀರೆಗಳ ಟ್ರೆಂಡ್ ಹೇಗೆ ಬದಲಾಗುತ್ತದೆಯೋ ಅದೇ ರೀತಿ ಡಿಸೈನರ್ಸ್‌ ಕೂಡ ತಾ ಮುಂದು ನಾ ಮುಂದು ಅಂತ ಹೊಸ ಹೊಸ ಡಿಸೈನ್ಸ್ ಗಳ ಮೂಲಕ ಅವರ ಕೈಚಳಕ ತೋರಿಸುತ್ತಿದ್ದಾರೆ. ದಿನೇ ದಿನೇ ಫ್ಯಾಶನ್ ವರ್ಲ್ಡ್‌ನಲ್ಲಿ ಟ್ರೆಂಡ್ ಚೇಂಜ್ ಆಗುತ್ತಿದ್ದು, ಇದೀಗ ಮಸಾಬ ಬ್ಲೌಸ್ ಡಿಸೈನ್ಸ್ ಸೆಲೆಬ್ರಿಟಿಗಳ ಮನ ಗೆದ್ದಿದೆ. ಮಾಡರ್ನ್ ಹಾಗೂ ಕಾಸಿಕ್ ವೇರ್‌ಗೂ ಮ್ಯಾಚ್ ಆಗುವ ಈ ಡಿಸೈನ್ ಈಗ ಸಖತ್ ಟ್ರೆಂಡ್ ನಲ್ಲಿದೆ.

    ಬಾಲಿವುಡ್ ನಿಂದ ಹಿಡಿದು ಸ್ಯಾಂಡಲ್‌ವುಡ್ ವರೆಗಿನ ತಾರೆಯರು ಈ ಡಿಸೈನ್‌ಗೆ ಮಾರುಹೋಗಿದ್ದಾರೆ. ಸಿಂಪಲ್ ಆಗಿದ್ರುನೂ ಸಖತ್ ಸ್ಟೈಲಿಶ್ ಹಾಗೂ ಬೋಲ್ಡ್ ಆಗಿ ಕಾಣಿಸುತ್ತದೆ. ಈಗ ಸೆಲೆಬ್ರಿಟಿಗಳಿಂದ ಹಿಡಿದು ಎಲ್ಲರೂ ಈ ಒಂದು ಪ್ಯಾಟ್ರನ್‌ ಬ್ಲೌಸ್‌ನಲ್ಲಿ ಮಿಂಚುತ್ತಿರುತ್ತಾರೆ. ಹುಡುಗಿರಂತೂ ಕಾಲೇಜ್ ಡೇ, ಮದುವೆ, ಫ್ರೆಶರ್ ಪಾರ್ಟಿ ಅಂತ ಸೀರೆ ತೆಗೆದುಕೊಳ್ಳುವಾಗ ಟ್ರೆಂಡಿಂಗ್ ಡಿಸೈನ್‌ಗಳತ್ತ ನೋಡ್ತಾ ಇರ್ತಾರೆ.

    ಮಸಾಬ ಬ್ಲೌಸ್‌ನ ವಿಶೇಷತೆಗಳು:

    ಸೀರೆ ಫ್ಯಾಬ್ರಿಕ್ ಆಗಿರಲಿ, ಕಾಟನ್ ಆಗಿರಲಿ, ರೇಷ್ಮೆ ಅಥವಾ ಜಾರ್ಜೆಟ್ ಆಗಿರಲಿ ಎಲ್ಲಾ ಬಗೆಯ ಸೀರೆಗೆ ಈ ಬ್ಲೌಸ್‌ ಡಿಸೈನ್‌ ಸೂಟ್‌ ಆಗುತ್ತೆ ಎಂಬುವುದೇ ಇದರ ಮತ್ತೊಂದು ವಿಶೇಷತೆ. ನೀವು ಇತ್ತೀಚೆಗೆ ಬಿಗ್‌ಬಾಸ್‌ನಲ್ಲಿ ಖ್ಯಾತಿಯ ಮೋಕ್ಷಿತ ಪೈ ಇತ್ತೀಚಿಗಷ್ಟೇ ಕೊಲ್ಲೂರು ಮೂಕಾಂಬಿಕೆ ದೇವಾಲಯಕ್ಕೆ ಭೇಟಿ ನೀಡಿದಾಗ ಇದೇ ಮಸಾಬ ಡಿಸೈನ್ ಬ್ಲೌಸ್ ನಲ್ಲಿ ಮಿಂಚಿದರು. ಅಲ್ಲದೆ ಗಿಣಿರಾಮ ಖ್ಯಾತಿಯ ಕಾವೇರಿ ಬಾಗಲಕೋಟೆ ಸಹ ಇದೆ ಬ್ಲೌಸ್ ಡಿಸೈನ್‌ನಲ್ಲಿ ಸಖತ್ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದರು.

    ನೀವು ಈ ಡಿಸೈನ್‌ ಬ್ಲೌಸ್ ಸ್ಟಿಚ್‌ ಮಾಡಿ ಗ್ರ್ಯಾಂಡ್‌ ಸೀರೆಗೆ ಹಾಕಬಹುದು. ಸಿಂಪಲ್‌ ಸೀರೆಗೂ ಬಳಸಬಹುದು. ಈ ಲುಕ್‌ ಸಖತ್ ಸ್ಟೈಲಿಷ್‌ ಲುಕ್‌ ನೀಡುತ್ತದೆ. ಅಲ್ಲದೆ ನಿಮಗೆ ಟ್ರೆಂಡಿ ಲುಕ್‌ ಕೂಡಾ ನೀಡುತ್ತದೆ. ಮಾಡ್ರನ್ ಲುಕ್ ಕೊಟ್ಟ ಮಸಾಬ ಬ್ಲೌಸ್ ಧರಿಸಿ ನ್ಯಾಷನಲ್ ಕ್ರಷ್ ರಶ್ಮಿಕ ಮಂದಣ್ಣ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹಾಟ್ ಆ್ಯಂಡ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು.

    ಅಲ್ಲದೆ ಬಾಲಿವುಡ್‌ನ ನಟಿ ಶಾರ್ವರಿ ಸಹ ಹಳದಿ ಬಣ್ಣದ ಸೀರೆ ಉಟ್ಟು, ಮಸಾಬ ಬ್ಲೌಸ್ ಧರಿಸಿ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸಿದ್ದರು. ಟಾಲಿವುಡ್‌ನ ಸುಂದ್ರಿ, ಮಿಲ್ಕಿ ಬ್ಯೂಟಿ ಎಂದೇ ಹೆಸರುವಾಸಿಯಾಗಿರುವ ತಮನ್ನಾ ಭಾಟಿಯಾ ಮಾಡ್ರನ್ ಡ್ರೆಸ್ಸಿಗೆ ಹಸಿರು ಬಣ್ಣದ ಮಸಾಬ ಬ್ಲೌಸ್ ಧರಿಸಿದ ಫೋಟೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು.

    ಸ್ಲೀವ್‌ಲೆಸ್‌ ಅಥವಾ ಫುಲ್‌ಸ್ಲಿವ್ ರೀತಿಯಲ್ಲೂ ಇದನ್ನೂ ಧರಿಸಬಹುದು. ಹೀಗಾಗಿ ಸ್ಲೀವ್‌ಲೆಸ್‌ ಹಾಕುವುದೇ ಇಲ್ಲ ಎನ್ನುವವರು ಕೂಡ ಈ ಬ್ಲೌಸ್‌ ಡಿಸೈನ್‌ ಟ್ರೈ ಮಾಡಬಹುದು. ಟ್ರೆಡಿಷನಲ್ ಮತ್ತು ಮಾಡ್ರನ್ ಸೀರೆಗಳಿಗೆ ಮ್ಯಾಚ್ ಆಗುವ ಈ ಬ್ಲೌಸ್‌ನಲ್ಲಿ ನೀವೂ ಕೂಡಾ ಸೆಲೆಬ್ರಿಟಿಗಳ ರೀತಿಯಲ್ಲಿ ಪಾರ್ಟಿ, ಮದುವೆ ಇನ್ನಿತರ ಸಮಾರಂಭಗಳಲ್ಲಿ ಮಿಂಚಬಹುದು.

    ನೀವು ಧರಿಸುವ ಸೀರೆ, ಹೇರ್‌ ಸ್ಟೈಲ್, ಅಲಂಕಾರದ ಪ್ರಕಾರ ನಿಮ್ಮ ಲುಕ್ ಬದಲಾಗುವುದು. ಮಸಾಬ ಬ್ಲೌಸ್‌ನ ಬ್ಯಾಕ್‌ ಡಿಸೈನ್ ನಿಮಗೆ ಇಷ್ಟವಾಗುವಂತೆ ಸ್ಟಿಚ್‌ ಮಾಡಿಸಬಹುದು. ಅಲ್ಲದೆ ಇದು ಬ್ಯಾಕ್ ಬಟನ್ ಬ್ಲೌಸ್ ಆಗಿದೆ. ಇನ್ನು ಬೆನ್ನಿನ ಭಾಗಕ್ಕೆ ಥ್ರೆಡ್‌ ಅನ್ನು ಪ್ಲೈನ್ ಆಗಿ ಇಡಬಹುದು. ಇಲ್ಲದಿದ್ದರೆ ಆ ದಾರದ ಮೂಲಕವೇ ಮತ್ತಷ್ಟು ಟ್ರೆಂಡಿ ಆಗಿ ಕಾಣುವಂತೆ ವಿನ್ಯಾಸ ಮಾಡಬಹುದು.

    ಈ ವಿನ್ಯಾಸಕ್ಕೆ ಸೀರೆಯ ಸೆರಗು ಸಿಂಗಲ್‌ ಪಿನ್ ರೀತಿಯಲ್ಲಿ ಜೋತು ಬಿಟ್ಟರೆ ಇನ್ನಷ್ಟು ಚೆನ್ನಾಗಿ ಕಾಣುತ್ತದೆ. ಈ ಮಸಾಬ ಬ್ಲೌಸ್ ಡಿಸೈನ್ ಅನ್ನು ಕೇವಲ ಸೀರೆಗಳಿಗೆ ಮಾತ್ರ ಧರಿಸದೆ, ಲಂಗ ದಾವಣಿ ಅಥವಾ ಸ್ಕರ್ಟ್ ಆ್ಯಂಡ್ ಬ್ಲೌಸ್ ರೀತಿಯಲ್ಲಿ ಧರಿಸಿದರೆ ಟ್ರೆಂಡಿ ಹಾಗೂ ಬೋಲ್ಡ್ ಆಗಿ ಕಾಣಿಸುತ್ತೀರಾ. ಪಾರ್ಟಿ ಅಥವಾ ಮದುವೆ ಸಮಾರಂಭಗಳಲ್ಲಿ ಈ ವಿನ್ಯಾಸದ ಬ್ಲೌಸ್‌ಗಳನ್ನ ಧರಿಸಿ ಟ್ರೆಂಡಿ ಹಾಗೂ ಡಿಫ್ರೆಂಟ್ ಆಗಿ ಕಾಣಿಸಿಕೊಳ್ಳಿ.

  • ವ್ಯಕ್ತಿಯ ಬರ್ಬರ ಹತ್ಯೆ – ಜೊತೆಗಿದ್ದ ಪ್ರೇಯಸಿ ಮೇಲೆಯೇ ಅನುಮಾನ

    ವ್ಯಕ್ತಿಯ ಬರ್ಬರ ಹತ್ಯೆ – ಜೊತೆಗಿದ್ದ ಪ್ರೇಯಸಿ ಮೇಲೆಯೇ ಅನುಮಾನ

    ಮೈಸೂರು: ಇಲ್ಲಿನ ಅನುಗನಹಳ್ಳಿಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ ನಡೆದಿದೆ.

    ಸೂರ್ಯ ಕೊಲೆಯಾದ ವ್ಯಕ್ತಿ. ಮದುವೆಯಾಗಿದ್ದರು ಸೂರ್ಯ ಮತ್ತೊಬ್ಬಳ ಜೊತೆ ಸಂಬಂಧ ಹೊಂದಿದ್ದ. ಇದರಿಂದ ಬೇಸತ್ತು ಆತನ ಹೆಂಡತಿ ಹಾಗೂ ತಾಯಿ ಮನೆ ಬಿಟ್ಟು ಹೋಗಿದ್ದರು. ಇದನ್ನೂ ಓದಿ: ಗುಜರಾತ್ | ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಸರಣಿ ಅಪಘಾತ – ಓರ್ವ ಮಹಿಳೆ ಸಾವು, 7 ಜನರಿಗೆ ಗಾಯ

    ಕೆಲ ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಶ್ವೇತಾ ಅನ್ನುವವಳನ್ನ ಪರಿಚಯ ಮಾಡಿಕೊಂಡಿದ್ದ ಸೂರ್ಯ ಬಳಿಕ ಅವಳ ಜೊತೆಯೇ ಸಂಬಂಧದಲ್ಲಿದ್ದ. ಇಬ್ಬರೂ ಜೊತೆಗಿರುವ ಖಾಸಗಿ ಫೋಟೋಗಳನ್ನ ಸ್ಟೇಟಸ್‌ ಕೂಡ ಹಾಕಿದ್ದ. ಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು. ಬಳಿಕ ಶ್ವೇತಾ ಹಣ ಆಸ್ತಿಗಾಗಿ ಪೀಡಿಸಿದ್ದಾಳೆ.

    ಹಣಕ್ಕೆ ಪೀಡಿಸುತ್ತಿರುವ ವಿಚಾರವನ್ನ ಕುಟುಂಬಸ್ಥರಿಗೂ ಸೂರ್ಯ ತಿಳಿಸಿದ್ದ. ನಿನ್ನೆ ರಾತ್ರಿ ಕೂಡ ತೋಟದಲ್ಲಿ ಶ್ವೇತಾ ಹಾಗೂ ಸೂರ್ಯ ಇದ್ದರು ಎನ್ನಲಾಗಿದೆ. ಬೆಳಗಾಗುವಷ್ಟರಲ್ಲಿ ಸೂರ್ಯನ ಕೊಲೆಯಾಗಿದೆ. ರಾತ್ರಿ ಅವಳ ಜೊತೆಯಲ್ಲೇ ಇದ್ದು ಬೆಳಿಗ್ಗೆ ವಾಪಸ್ಸು ಹೋಗಿರುವುದನ್ನು ಕೆಲವರು ನೋಡಿದ್ದಾರೆ. ಹೀಗಾಗಿ ಕೊಲೆಯನ್ನ ಶ್ವೇತಾಳೆ ಮಾಡಿರಬಹುದು ಎಂದು ಕುಟುಂಬಸ್ಥರ ಆರೋಪಿಸಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿ ನಿಷೇಧಿತ PFI ಮತ್ತೆ ಆಕ್ಟಿವ್‌? – ಅಕ್ರಮ ಪಿಸ್ತೂಲ್‌ ಮಾರಾಟ ಜಾಲ ಭೇದಿಸಿದ ಪೊಲೀಸರು

    ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 3ನೇ ಮಗುವಿಗೆ ಜನ್ಮ ನೀಡುವ ಮಹಿಳೆಯರಿಗೆ ಬಂಪರ್‌ – ಹೆಣ್ಣು ಜನಿಸಿದ್ರೆ 50,000 ರೂ., ಗಂಡು ಜನಿಸಿದ್ರೆ ಹಸು ಗಿಫ್ಟ್‌!

    3ನೇ ಮಗುವಿಗೆ ಜನ್ಮ ನೀಡುವ ಮಹಿಳೆಯರಿಗೆ ಬಂಪರ್‌ – ಹೆಣ್ಣು ಜನಿಸಿದ್ರೆ 50,000 ರೂ., ಗಂಡು ಜನಿಸಿದ್ರೆ ಹಸು ಗಿಫ್ಟ್‌!

    ಅಮರಾವತಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (International Womens Day) ಕಾರ್ಯಕ್ರಮದ ವೇಳೆ ತೆಲುಗು ದೇಶಂ ಪಕ್ಷ (TDP)ದ ಸಂಸದ ಕಾಳಿಸೆಟ್ಟಿ ಅಪ್ಪಲನಾಯ್ಡು ಅವರು, 3ನೇ ಮಗುವಿಗೆ ಜನ್ಮ ನೀಡುವ ಮಹಿಳೆಯರಿಗೆ ಬಂಪರ್‌ ಕೊಡುಗೆ ಘೋಷಣೆ ಮಾಡಿದ್ದಾರೆ. ಇದು ಆಂಧ್ರಪ್ರದೇಶದಲ್ಲಿ (Andhra Pradesh) ಭಾರೀ ಸಂಚಲನ ಸೃಷ್ಟಿಸಿದೆ.

    ಪ್ರಕಾಶಂ ಜಿಲ್ಲೆಯ ಮಾರ್ಕಾಪುರದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ, ಮಹಿಳೆಯೊಬ್ಬರು 3ನೇ ಮಗುವಿಗೆ ಜನ್ಮ ನೀಡಿದ್ರೆ ವಿಶೇಷ ಉಡುಗೊರೆ ನೀಡಲಾಗುವುದು. ಹೆಣ್ಣು ಮಗುವಿಗೆ ಜನ್ಮ ನೀಡಿದ್ರೆ ನನ್ನ ಸ್ವಂತ ವೇತನದಲ್ಲಿ 50,000 ರೂ., ಗಂಡು ಮಗುವಿಗೆ ಜನ್ಮ ನೀಡಿದ್ರೆ 1 ಹಸುವನ್ನು ಉಡಗೊರೆಯಾಗಿ ಕೊಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಸಂಸದರು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: Champions Trophy Final: ಟೀಂ ಇಂಡಿಯಾ ಗೆಲುವಿಗಾಗಿ ಅಭಿಮಾನಿಗಳಿಂದ ದೇವರಿಗೆ ವಿಶೇಷ ಪೂಜೆ

    ಜನಸಂಖ್ಯೆ ಬೆಳವಣಿಗೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಕರೆಗಳ ಮೇರೆಗೆ ಈ ವಿಶೇಷ ಉಡುಗೊರೆಗಳನ್ನು ಘೋಷಣೆ ಮಾಡಲಾಗಿದೆ. ಮಹಿಳೆಯರು ಹೆಚ್ಚು ಮಕ್ಕಳನ್ನು ಹೊಂದಬೇಕೆಂದು ಹೇಳುತ್ತಿದ್ದೇವೆ. ಹೀಗಾಗಿ 3ನೇ ಮಗು ಜನಿಸಿದ್ರೆ ಪ್ರೋತ್ಸಾಹ ಧನ ನೀಡಲು ಮುಂದಾಗಿದ್ದೇವೆ ಸಂಸದ ಅಪ್ಪಲನಾಯ್ಡು ತಿಳಿಸಿದ್ದಾರೆ.

    ಕೆಲ ದಿನಗಳ ಹಿಂದೆ ಚಂದ್ರಬಾಬು ನಾಯ್ಡು ಅವರು, ಮಹಿಳೆಯರು ಸಂಖ್ಯೆಯನ್ನು ಲೆಕ್ಕಿಸದೇ ಹೆಚ್ಚೆಚ್ಚು ಮಕ್ಕಳನ್ನು ಮಾಡಿಕೊಳ್ಳಿ. ಅದಕ್ಕಾಗಿ ಉದ್ಯೋಗಸ್ಥ ಮಹಿಳೆಯರಿಗೆ ವೇತನ ಸಹಿತ ಹೆರಿಗೆ ರಜೆ ನೀಡಲಾಗುವುದು ಎಂದು ಘೋಷಣೆ ಮಾಡಿದ್ದರು. ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್‌ ಅವರು ಸಹ 2026ರ ಒಳಗೆ ಮಹಿಳೆಯರು ಹೆಚ್ಚೆಚ್ಚು ಮಕ್ಕಳನ್ನು ಮಾಡಿಕೊಳ್ಳುವಂತೆ ಕರೆ ನೀಡಿದ್ದರು. ಇದನ್ನೂ ಓದಿ: ‘ಹುಡುಗರು’ ಚಿತ್ರದಲ್ಲಿ ಅಪ್ಪು ತಂಗಿ ಪಾತ್ರ ಮಾಡಿದ್ದ ಅಭಿನಯಗೆ ಮದುವೆ ಫಿಕ್ಸ್

  • 11 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆ ಅರೆಸ್ಟ್‌

    11 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆ ಅರೆಸ್ಟ್‌

    ಲಕ್ನೋ: ತನ್ನ 11 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನಲ್ಲಿ (UP Mahrajganj) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಗುರುವಾರ ರಾತ್ರಿ ಸಂತ್ರಸ್ತೆಯ ತಾಯಿ ತನ್ನ ತವರು ಮನೆಗೆ ಹೋಗಿದ್ದಾಗ ಘಟನೆ ನಡೆದಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ (Kotwali Police Station) ಎಸ್‌ಹೆಚ್‌ಒ ಸತ್ಯೇಂದ್ರ ಕುಮಾರ್ ರೈ ತಿಳಿಸಿದ್ದಾರೆ. ದನ್ನೂ ಓದಿ: ಐಶ್ವರ್ಯಗೌಡ ವಂಚನೆ ಕೇಸ್‌ಗೆ ಟ್ವಿಸ್ಟ್ – ವಿನಯ್ ಕುಲಕರ್ಣಿ ಕಾರು ಚಾಲಕನ ವಿಚಾರಣೆ

    ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿರುವುದಲ್ಲದೇ ಯಾರಿಗಾದ್ರೂ ಹೇಳಿದ್ರೆ, ವಿಷ ನೀಡಿ ಸಾಯಿಸುವುದಾಗಿ ಬೆದರಿಕೆ ಸಹ ಹಾಕಿದ್ದಾನೆ. ಆದ್ರೆ ತಾಯಿ ತವರು ಮನೆಯಿಂದ ಬಂದ ಬಳಿಕ ಬಾಲಕಿ ಈ ವಿಷಯ ಹೇಳಿಕೊಂಡಿದ್ದಾಳೆ. ನಂತರ ಬಾಲಕಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ದನ್ನೂ ಓದಿ:  ತೇಜಸ್ವಿ ಸೂರ್ಯ, ಶಿವಶ್ರೀ ರಿಸೆಪ್ಷನ್ – ಸಿಎಂ, ಡಿಸಿಎಂ ಸೇರಿದಂತೆ ಗಣ್ಯರಿಂದ ನವದಂಪತಿಗೆ ಶುಭಹಾರೈಕೆ

    ಮಹಿಳೆಯ ದೂರಿನ ಆಧಾರದ ಮೇಲೆ, ಆರೋಪಿ ತಂದೆಯನ್ನ ಬಂಧಿಸಲಾಗಿದೆ ಮತ್ತು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ರೈ ಹೇಳಿದ್ದಾರೆ. ದನ್ನೂ ಓದಿ: ಹಾಸನ| ಪಾಳು ಬಿದ್ದಿದ್ದ ಕಟ್ಟಡ ಕುಸಿತ – ಬೀದಿಬದಿ ವ್ಯಾಪಾರ ಮಾಡ್ತಿದ್ದ ನಾಲ್ವರು ದುರ್ಮರಣ

  • Women’s Day | ಈ ಬಾರಿಯ ಥೀಮ್‌ – ಆಕ್ಸಲರೇಟ್‌ ಆಕ್ಷನ್‌ ಎಂದರೇನು?

    Women’s Day | ಈ ಬಾರಿಯ ಥೀಮ್‌ – ಆಕ್ಸಲರೇಟ್‌ ಆಕ್ಷನ್‌ ಎಂದರೇನು?

    ಹಿಂದಿನಕಾಲದಲ್ಲಿ ಹೆಣ್ಣು ಎಂದರೆ ಆಕೆ ಮನೆಗೆಲಸಕ್ಕೆ ಮಾತ್ರ ಸೀಮಿತ ಎಂದು ಹೇಳುತ್ತಿದ್ದವರಿಗೆ ಇಂದು ಮಹಿಳೆಯರು ಯಾರಿಗೂ, ಯಾವುದಕ್ಕೂ ಕಮ್ಮಿ ಇಲ್ಲ ಎಂದು ತೋರಿಸಿಕೊಡುತ್ತಿದ್ದಾರೆ. ಹೆಣ್ಣು ಅಬಲೆಯಲ್ಲ ಆಕೆ ಸಬಲೆ ಎಂಬ ಮಾತಿಗೆ ಉದಾಹರಣೆಯಂತೆ ಜಗತ್ತಿನ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡು ಮುಂದುವರೆಯುತ್ತಿದ್ದಾರೆ. ರಾಜಕೀಯವಾಗಲಿ, ಕ್ರೀಡೆಯಾಗಲಿ, ಶಿಕ್ಷಣವಾಗಲಿ ಪ್ರತಿಯೊಂದರಲ್ಲೂ ಮಹಿಳೆಯರು ತಮ್ಮ ಚಾಪನ್ನು ಮೂಡಿಸಿದ್ದಾರೆ.

    ಪತ್ರಿವರ್ಷ ಮಾರ್ಚ್‌ 8ನ್ನು ಮಹಿಳಾ ದಿನವಾಗಿ ಆಚರಿಸಲಾಗುತ್ತದೆ. ಅಂದು ಹೆಣ್ಣುಮಕ್ಕಳ ಸಾಧನೆಯನ್ನು ನೆನೆಯುವ ದಿನ. ಹಲವಾರು ಸಮಸ್ಯೆಗಳನ್ನು ಮೆಟ್ಟಿ ನಿಂತು ಮಹಿಳೆಯರು ಬಹುತೇಕ ರಂಗದಲ್ಲಿ ತಮ್ಮನ್ನು ತಾನು ಗುರುತಿಸಿಕೊಂಡಿದ್ದಾರೆ. ದೌರ್ಜನ್ಯ, ದಬ್ಬಾಳಿಕೆ, ಹಿಂಸೆಯಂತಹ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ಹಲವಾರು ಕ್ಷೇತ್ರಗಳಲ್ಲಿ ಪುರುಷರಷ್ಟೇ ಸರಿಸಮಾನವಾಗಿ ಮುಂದುವರಿದಿದ್ದಾರೆ. ಕ್ರೀಡೆಯಲ್ಲಿ, ಸೈನ್ಯದಲ್ಲಿ, ಬಾಹ್ಯಾಕಾಶದಲ್ಲಿ, ಯುದ್ಧ ವಿಮಾನಗಳಲ್ಲಿ ಮಹಿಳೆಯರು ಮಹತ್ತರ ಸಾಧನೆ ಮಾಡಿ, ಯಾವ ಪುರುಷರಿಗೂ ತಾವು ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ.

    ಆಕ್ಸಲರೇಟ್‌ ಆಕ್ಷನ್‌ (Accelerate Action)
    ಈ ಬಾರಿಯ ಮಹಿಳೆಯರ ದಿನವನ್ನು ʻಆಕ್ಸಲರೇಟ್‌ ಆಕ್ಷನ್‌ʼಥೀಮ್‌ನಲ್ಲಿ ಆಚರಿಸಲಾಗುತ್ತದೆ. ಮನ್ನುಗ್ಗು, ಧೈರ್ಯದಿಂದ ಮಾತನಾಡು, ಸಮಾನತೆಗಾಗಿ ಹೋರಾಡು ಎಂದು ಮಹಿಳೆಯರಿಗೆ ಅವರ ನಿಲುವುಗಳನ್ನು ತೆಗೆದುಕೊಳ್ಳಲು ಹುರಿದುಂಬಿಸಲಾಗುತ್ತದೆ.

    ಮಹಿಳಾ ದಿನಾಚರಣೆಯನ್ನು ಕಳೆದ ಒಂದು ಶತಕದಿಂದಲೂ ಆಚರಿಸಲಾಗುತ್ತಿದೆ. 1911ರಲ್ಲಿ ಡೆನ್ಮಾರ್ಕ್‌, ಆಸ್ಷ್ರೇಲಿಯಾ, ಜಮರ್ನಿ, ಸ್ವಿಜರ್‌ಲ್ಯಾಂಡ್ ದೇಶಗಳಲ್ಲಿ ಜನರು ಒಂದು ಕಡೆ ಸೇರುವ ಮೂಲಕ ಮಹಿಳಾ ದಿನಾಚರಣೆಯನ್ನು ಆಚರಿಸಲು ಆರಂಭಿಸಿದರು. ನಂತರ ಅಮೆರಿಕ, ಬ್ರಿಟನ್‌ಗಳು ಸೇರಿದಂತೆ ಹಲವು ದೇಶಗಳಲ್ಲಿನ ಮಹಿಳೆಯರನ್ನು ಗೌರವಿಸುವ ಮೂಲಕ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿತ್ತು.

    ಅಂತರಾಷ್ಟ್ರೀಯ ಮಹಿಳೆಯರ ದಿನವನ್ನು ಪ್ರಥಮ ಬಾರಿಗೆ ಕಾರ್ಮಿಕ ಚಳುವಳಿಯ ಮೂಲಕ ಉತ್ತರ ಅಮೆರಿಕ ಮತ್ತು ಯೂರೋಪ್ ದೇಶಗಳಲ್ಲಿ ಪ್ರಾರಂಭಿಸಲಾಯಿತು. ಮಹಿಳಾ ದಿನಾಚರಣೆ ಮೂಲಕ ಲಿಂಗ ಸಮಾನತೆ ರೂಪಿಸುವಲ್ಲಿ ಪ್ರತಿಯೊಬ್ಬರ ಪಾತ್ರವಿದೆ ಎಂಬ ಅಂಶವನ್ನು ಸಾರಲು ಈ ದಿನವನ್ನು ಆಚರಿಸಲಾಯಿತು. ಅಲ್ಲದೇ ದೇಶಕ್ಕೆ, ಪ್ರಪಂಚಕ್ಕೆ ಮಹಿಳಾ ಸಾಧಕರ ಕೊಡುಗೆಗಳನ್ನು ನೆನೆದು ಸಾರುವ ದಿನವಾಗಿದೆ. 18 ಮತ್ತು 19 ನೇ ಶತಮಾನದಲ್ಲಿ ಹಲವು ಮಹಿಳೆಯರು ಲಿಂಗ ಸಮಾನತೆಗಾಗಿ ಹೋರಾಟ ನಡೆಸಿದ್ದಾರೆ. ಮತದಾನ, ಸಮಾನ ಕೆಲಸ, ಸಮಾನ ವೇತನಕ್ಕಾಗಿ ಹೋರಾಟವನ್ನು ನಡೆಸಿದ್ದರು.

    ಭಾರತದಲ್ಲೇ ಕಲ್ಪನಾ ಚಾವ್ಲಾ, ಕಿರಣ್‌ ಬೇಡಿ, ಮೇರಿ ಕೋಮ್‌, ಸಾಲುಮರದ ತಿಮ್ಮಕ್ಕ, ಇಂದಿರಾಗಾಂಧಿ, ಸೈನಾ ನೆಹ್ವಾಲ್‌, ಸುಧಾಮೂರ್ತಿ ಹಲವಾರು ಮಹಿಳೆಯರು ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ. ಈ ಸಾಧಕರ ಸಾಲಿಗೆ ಇನ್ನಷ್ಟು ಮಹಿಳೆಯರು ಸೇರಬೇಕು. ಹೆಣ್ಣು ಯಾವುದಕ್ಕೂ ಕಡಿಮೆಯಿಲ್ಲ ಎಂದು ಇಡೀ ಜಗತ್ತಿಗೆ ಒತ್ತಿ ಒತ್ತಿ ಹೇಳಬೇಕು.

    ಹೆಣ್ಣುಮಕ್ಕಳು ಯಾರಿಗೂ ಕಮ್ಮಿ ಇಲ್ಲ ಎಂದೆಲ್ಲಾ ಹೇಳಿದರೂ ಸಹ ಆಕೆಯ ಮೇಲೆ ದೌರ್ಜನ್ಯ, ಅತ್ಯಾಚಾರ, ಹೀಯಾಳಿಸುವುದು, ಕಿರುಕುಳ ಪ್ರಕರಣಗಳಂತೂ ದೇಶದಲ್ಲಿ ಕೇಳಿ ಬರುತ್ತಲೇ ಇದೆ. ಹೆಣ್ಣನ್ನೂ ದೇವತೆಯೆಂದು ಪೂಜಿಸುವ ನಮ್ಮ ದೇಶದಲ್ಲೇ ಆಕೆಯನ್ನು ಅಮಾನುಷವಾಗಿ ನಡೆಸಿಕೊಂಡಿರುವ ಹಲವಾರು ಘಟನೆಗಳಿವೆ. ಮಹಿಳಾ ದಿನಾಚರಣೆ ಕೇವಲ ಆಚರಣೆ ಮಾತ್ರ ಆಗಬಾರದು ಆಕೆಗೆ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ, ಗೌರವ, ಸಮಾನತೆ, ಸ್ವಾತಂತ್ರ್ಯ ಎಲ್ಲವು ಸಿಗುವಂತಾಗಬೇಕು.

    ಅಂತರರಾಷ್ಟ್ರೀಯ ಮಹಿಳಾ ದಿನದ ಹಿನ್ನಲೆ ಗುಜರಾತ್‌ನ ನವಸಾರಿ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುತ್ತಿದ್ದು ಈ ಕಾರ್ಯಕ್ರಮದ ಭದ್ರತಾ ವ್ಯವಸ್ಥೆಯನ್ನು ಸಂಪೂರ್ಣ ಮಹಿಳಾ ಪೊಲೀಸ್ ಸಿಬ್ಬಂದಿಯೇ ನಿರ್ವಹಿಸುತ್ತಿರುವುದು ಈ ಬಾರಿಯ ಮಹಿಳಾ ದಿನಾಚರಣೆಯ ವಿಶೇಷವಾಗಿದೆ.

  • ಅಪರಿಚಿತ ಮಹಿಳೆಗೆ `ನೀನು ತೆಳ್ಳಗೆ, ಬೆಳ್ಳಗೆ ಇದ್ದೀಯʼ ಅಂತ ಮೆಸೇಜ್‌ ಕಳಿಸೋದು ಅಶ್ಲೀಲತೆ: ಮುಂಬೈ ಕೋರ್ಟ್‌

    ಅಪರಿಚಿತ ಮಹಿಳೆಗೆ `ನೀನು ತೆಳ್ಳಗೆ, ಬೆಳ್ಳಗೆ ಇದ್ದೀಯʼ ಅಂತ ಮೆಸೇಜ್‌ ಕಳಿಸೋದು ಅಶ್ಲೀಲತೆ: ಮುಂಬೈ ಕೋರ್ಟ್‌

    ಮುಂಬೈ: ರಾತ್ರಿ ವೇಳೆ ಅಪರಿಚಿತ ಮಹಿಳೆಗೆ ʻನೀನು ತೆಳ್ಳಗೆ, ಬೆಳ್ಳಗೆ ಇದ್ದೀಯ, ತುಂಬಾ ಸ್ಮಾರ್ಟ್ ಮತ್ತು ಫೇರ್ ಆಗಿ ಕಾಣ್ತೀಯಾ, ನೀನಂದ್ರೆ ನನಗಿಷ್ಟʼ ಅನ್ನುವಂತಹ ಸಂದೇಶಗಳನ್ನ ಕಳುಹಿಸುವುದು ಅಶ್ಲೀಲತೆಗೆ ಸಮಾನ ಎಂದು ಮುಂಬೈನ ದಿಂಡೋಶಿ ಸೆಷನ್ಸ್ ಕೋರ್ಟ್‌ (Mumbai Sessions Court) ಹೇಳಿದೆ.

    ಮಾಜಿ ಕಾರ್ಪೊರೇಟರ್ ಒಬ್ಬರಿಗೆ ವಾಟ್ಸಪ್‌ನಲ್ಲಿ ಅಶ್ಲೀಲ ಸಂದೇಶಗಳನ್ನು (WhatsApp texts) ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯ ಶಿಕ್ಷೆಯನ್ನು ಎತ್ತಿಹಿಡಿಯುವಾಗ ದಿಂಡೋಶಿ ಹೆಚ್ಚುವರಿ ಸೆಷನ್ಸ್ ಕೋರ್ಟ್‌ನ ನ್ಯಾಯಾಧೀಶರಾದ ಡಿ.ಜಿ ಧೋಬ್ಲೆ ಅವರಿದ್ದ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ಇದನ್ನೂ ಓದಿ: ಬಸ್‌, ಮೆಟ್ರೋ ದರ ಏರಿಕೆ ಬೆನ್ನಲ್ಲೇ ಅಡುಗೆ ಎಣ್ಣೆ ಬೆಲೆ ಏರಿಕೆ! – ತೆಂಗಿನ ಎಣ್ಣೆ ದರ ದಿಢೀರ್‌ ಏರಿಕೆಯಾಗಿದ್ದು ಯಾಕೆ?

    ʻದೂರುದಾರರಿಗೆ ರಾತ್ರಿ 11 ರಿಂದ 12.30ರ ನಡುವೆ ಫೋಟೋಗಳು ಮತ್ತು ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ನ್ಯಾಯಾಲಯ ಗಮನಿಸಿದೆ. ನೀವು ತೆಳ್ಳಗಿದ್ದೀರಿ, ನೀವು ತುಂಬಾ ಸ್ಮಾರ್ಟ್ ಆಗಿ ಕಾಣುತ್ತಿದ್ದೀರಿ, ನೀವು ಸುಂದರವಾಗಿದ್ದೀರಿ, ನನ್ನ ವಯಸ್ಸು 40 ವರ್ಷ, ನೀವು ಮದುವೆಯಾಗಿದ್ದೀರಾ ಅಥವಾ ಇಲ್ಲವೇ? ನಾನು ನಿಮ್ಮನ್ನು ಇಷ್ಟಪಡುತ್ತೇನೆʼ ಎಂಬಂತಹ ಸಂದೇಶ ಕಳಹಿಸಿರುವುದನ್ನು ನ್ಯಾಯಾಲಯ ಗಮನಿಸಿದೆ.

    ಯಾವುದೇ ವಿವಾಹಿತ ಮಹಿಳೆ ಅಥವಾ ಅವರ ಪತಿ ಅಂತಹ ವಾಟ್ಸಪ್ ಸಂದೇಶಗಳು ಮತ್ತು ಅಶ್ಲೀಲ ಫೋಟೋಗಳನ್ನು ಸಹಿಸುವುದಿಲ್ಲ, ಅದರಲ್ಲೂ ವಿಶೇಷವಾಗಿ ದೂರುದಾರರು ಮತ್ತು ಸಂದೇಶ ಕಳಹಿಸಿದವರು ಅಪರಿಚಿತರಾಗಿದ್ದಾಗ ಇದು ಸಾಧ್ಯವೇ ಇಲ್ಲ. ಇಂತಹ ಸಂದೇಶಗಳು ಮಹಿಳೆಯ ಘನತೆಗೆ ಧಕ್ಕೆ ಉಂಟು ಮಾಡುತ್ತದೆ ಎಂದು ಕೋರ್ಟ್‌ ಒತ್ತಿ ಹೇಳಿದೆ.

    ಇದಕ್ಕೂ ಮುನ್ನ 2022ರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆರೋಪಿಯನ್ನು ದೋಷಿ ಎಂದು ಘೋಷಿಸಿ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿತು. ನಂತರ ಅವರು ಈ ನಿರ್ಧಾರವನ್ನು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ರಾಜಕೀಯ ದ್ವೇಷದ ಕಾರಣದಿಂದಾಗಿ ಪ್ರಕರಣದಲ್ಲಿ ನನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ಆರೋಪಿ ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಬೌಂಡರಿ ಚಚ್ಚಿ ಆರ್‌ಸಿಬಿ ಗೆಲುವು ಕಸಿದ 16ರ ಹುಡುಗಿ – ಯಾರು ಈ ಕಮಲಿನಿ? ಮುಂಬೈ 1.6 ಕೋಟಿ ನೀಡಿದ್ದು ಯಾಕೆ?

    ಆರೋಪಿಯು ಮಹಿಳೆಗೆ ಅಶ್ಲೀಲ ವಾಟ್ಸಪ್ ಸಂದೇಶಗಳು ಮತ್ತು ಫೋಟೊಗಳನ್ನು ಕಳುಹಿಸಿದ್ದಾನೆ ಎಂದು ಪ್ರಾಸಿಕ್ಯೂಷನ್ ಸಾಬೀತುಪಡಿಸಿದೆ ಎಂದು ನ್ಯಾಯಾಲಯ ಹೇಳಿದೆ. ಆದ್ದರಿಂದ, ಆರೋಪಿಯನ್ನು ವಿಚಾರಣಾ ನ್ಯಾಯಾಲಯ ಅಪರಾಧಿ ಎಂದು ಘೋಷಿಸಿದೆ ಎಂಬ ಅಂಶವನ್ನು ಸೆಷನ್ಸ್ ಕೋರ್ಟ್‌ ಗಮನಿಸಿತು. ಇದನ್ನೂ ಓದಿ: ಜಸ್ಟ್ ಮಿಸ್, ಮರ ಹತ್ತಿ ಆನೆ ದಾಳಿಯಿಂದ ತಪ್ಪಿಸಿಕೊಂಡ ಇಟಿಎಫ್ ಸಿಬ್ಬಂದಿ!