Tag: women

  • ಸಚಿವ ಸೋಮಣ್ಣ ಕಪಾಳಮೋಕ್ಷ ಕೇಸ್ – ಸಂಘಟನೆಗಳು ಕಿರುಕುಳ ನೀಡ್ತಿವೆ ಎಂದು ಪೊಲೀಸರಿಗೆ ಮಹಿಳೆ ದೂರು

    ಸಚಿವ ಸೋಮಣ್ಣ ಕಪಾಳಮೋಕ್ಷ ಕೇಸ್ – ಸಂಘಟನೆಗಳು ಕಿರುಕುಳ ನೀಡ್ತಿವೆ ಎಂದು ಪೊಲೀಸರಿಗೆ ಮಹಿಳೆ ದೂರು

    ಚಾಮರಾಜನಗರ: ಸಚಿವ ವಿ.ಸೋಮಣ್ಣ (V.Somanna) ನನ್ನ ಕೆನ್ನೆಗೆ ಹೊಡೆದಿದ್ದಾರೆ ಎಂದು ಹೇಳಿಕೆ ನೀಡುವಂತೆ ಕೆಲವು ಸಂಘಟನೆಗಳು ನನಗೆ ಕಿರುಕುಳ ನೀಡುತ್ತಿವೆ ಎಂದು ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾಳೆ.

    ಸಚಿವ ಸೋಮಣ್ಣ ನನ್ನ ಕೆನ್ನೆಗೆ ಹೊಡೆದಿದ್ದಾರೆ ಎಂದು ಹೇಳಿ ಹಲವು ಸಂಘಟನೆಗಳು ನನಗೆ ಕಿರುಕುಳ ನೀಡುತ್ತಿವೆ. ಇಂಥ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಂಪಮ್ಮ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ನಂಗೆ ಎರಡು ಮುಖವಿಲ್ಲ, ಇರೋದು ಒಂದೇ ಮುಖ: ಹೆಚ್‍ಡಿಕೆಗೆ ಸೋಮಣ್ಣ ಟಾಂಗ್

    ಸಚಿವರ ವಿರುದ್ಧ ಪೊಲೀಸ್ ಠಾಣೆಗೆ ದೂರು ಕೊಡುವಂತೆ ವಿವಿಧ ಸಂಘಟನೆಗಳಿಂದ ಬೆದರಿಕೆ ಬರುತ್ತಿದೆ ಅಂತಾ ಆರೋಪ ಮಾಡಿದ್ದಾರೆ. ವಿವಿಧ ಸಂಘಟನೆಗಳ ವಿರುದ್ಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ಕೆಂಪಮ್ಮ ದೂರು ದಾಖಲಿಸಿದ್ದಾರೆ.

    ಸೋಮಣ್ಣ ಹೊಡೆದಿದ್ದಾರೆಂದು ಹೇಳಿಕೆ ನೀಡು, ಪೊಲೀಸರಿಗೆ ದೂರು ಕೊಡು. ಇಲ್ಲದಿದ್ದರೆ ವಾಸ ಮಾಡಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ವಿವಿಧ ಸಂಘಟನೆಗಳಿಂದ ಪ್ರಾಣ ಬೆದರಿಕೆ ಇದೆ. ನನಗೆ ರಕ್ಷಣೆ ನೀಡಿ ಎಂದು ಗುಂಡ್ಲುಪೇಟೆ ತಾಲೂಕಿನ ರೈತ ಸಂಘ, ತಾಲೂಕು ನಾಯಕರ ಹಿತರಕ್ಷಣಾ ಸಮಿತಿ, ತಾಲೂಕು ದಸಂಸ, ತಾಲೂಕು ಕೆಆರ್‌ಎಸ್ ಪಾರ್ಟಿ ವಿರುದ್ಧ ಮಹಿಳೆ ದೂರು ನೀಡಿದ್ದಾರೆ. ಇದನ್ನೂ ಓದಿ: ಮಹಿಳೆಗೆ ಕಪಾಳಮೋಕ್ಷ ಪ್ರಕರಣ- ಸೋಮಣ್ಣ ಕ್ಷಮೆಯಾಚನೆ

    Live Tv
    [brid partner=56869869 player=32851 video=960834 autoplay=true]

  • ಮಹಿಳೆಯರನ್ನು ಐಟಂ ಎಂದು ಕರೆಯುವಂತಿಲ್ಲ- ರೋಡ್ ರೋಮಿಯೋಗಳಿಗೆ ಕೋರ್ಟ್ ಖಡಕ್ ಎಚ್ಚರಿಕೆ

    ಮಹಿಳೆಯರನ್ನು ಐಟಂ ಎಂದು ಕರೆಯುವಂತಿಲ್ಲ- ರೋಡ್ ರೋಮಿಯೋಗಳಿಗೆ ಕೋರ್ಟ್ ಖಡಕ್ ಎಚ್ಚರಿಕೆ

    ಮುಂಬೈ: ಅಪ್ರಾಪ್ತ ಬಾಲಕಿಯನ್ನು `ಐಟಂ’ ಎಂದು ಕರೆದು ಲೈಂಗಿಕವಾಗಿ ಕಿರುಕುಳ ನೀಡಿದ 25 ವರ್ಷದ ಉದ್ಯಮಿಯೊಬ್ಬನಿಗೆ 7 ವರ್ಷಗಳ ಬಳಿಕ 1.5 ವರ್ಷ ಜೈಲು ಶಿಕ್ಷೆ ವಿಧಿಸಿರುವ ಮುಂಬೈ ಕೋರ್ಟ್ (Mumbai Court), ಮಹಿಳೆಯರನ್ನು ಐಟಂ ಎಂದು ಕರೆಯುವಂತಿಲ್ಲ ಎಂದು ರೋಡ್ ರೋಮಿಯೋಗಳಿಗೆ ಖಡಕ್ ಎಚ್ಚರಿಕೆ ನೀಡಿದೆ.

    ಮುಂಬೈನ ದಿಂಡೋಶಿಯಲ್ಲಿರುವ ಸೆಷನ್ಸ್ ಕೋರ್ಟ್‌ನ (Sessions Court) ವಿಶೇಷ ನ್ಯಾಯಾಧೀಶರಾದ ಎಸ್.ಜೆ ಅನ್ಸಾರಿ ಅವರ ನೇತೃತ್ವದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಿತು. ಈ ವೇಳೆ `ಐಟಂ’ ಎಂಬ ಪದವು ಮಹಿಳೆಯರನ್ನು ಲೈಂಗಿಕ ರೀತಿಯಲ್ಲಿ ಆಕ್ಷೇಪಿಸುತ್ತದೆ. ಇದು ಐಪಿಸಿ (IPC) ಸೆಕ್ಷನ್ 354ರ ಅತಿರೇಖದ ವರ್ತನೆಯನ್ನು ಸೂಚಿಸುವ ಅಪರಾಧವಾಗಿದೆ ಎಂದು ಪರಿಗಣಿಸಿದೆ. ಇದನ್ನೂ ಓದಿ: ಮಹಿಳೆಯರ ನಗ್ನ ವೀಡಿಯೋ ಇಟ್ಕೊಂಡು ಬ್ಲಾಕ್‌ಮೇಲ್ ಮಾಡ್ತಿದ್ದ ಆರೋಪಿ ಅರೆಸ್ಟ್

    ಹಾಗಾಗಿ ಅಪ್ರಾಪ್ತ ಬಾಲಕಿಯನ್ನು ಐಟಂ ಎಂದು ಕರೆದ ಉದ್ಯಮಿಯನ್ನು ಐಪಿಸಿ (IPC) ಸೆಕ್ಷನ್ 354 ಹಾಗೂ ಲೈಂಗಿಕ ಅಪರಾಧಗಳು ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಅಪರಾಧಿ ಎಂದು ಘೋಷಿಸಿ, 1.5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ ಮಹಿಳೆಯರನ್ನು (Womens) ರಕ್ಷಿಸಲು ಇಂತಹ ಕಠಿಣ ಅಪರಾಧ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತವಾಗಿದೆ ಎಂದು ನ್ಯಾಯಾಧೀಶರು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ನಿಷೇಧದ ನಡುವೆಯೂ ಪಟಾಕಿ ಸದ್ದು- ಅತಿಯಾದ ವಾಯುಮಾಲಿನ್ಯದಿಂದ ಉಸಿರಾಟಕ್ಕೂ ತೊಂದರೆ

    Law

    ಆರೋಪಿಯು `ಐಟಂ’ ಎಂಬ ಪದವನ್ನು ಬಳಸುವ ಮೂಲಕ ಆಕೆಯನ್ನು ಸಂಬೋಧಿಸಿದ್ದಾನೆ. ಇದು ಹುಡುಗಿಯರನ್ನು ಅವಹೇಳನಕಾರಿ ಶೈಲಿ ಸಂಬೋಧಿಸುವ ಸಾಮಾನ್ಯ ಪದವಾಗಿದೆ, ಜೊತೆಗೆ ಅತಿರೇಕದ ವರ್ತನೆಯನ್ನು ತೋರುತ್ತದೆ. ಇಂತಹ ಅಪರಾಧಗಳನ್ನು ಕಠಿಣ ಕ್ರಮಗಳ ಮೂಲಕ ನಿಭಾಯಿಸಬೇಕಿದೆ. ಜೊತೆಗೆ ರೋಡ್ ರೋಮಿಯೋಗಳಿಗೆ ತಕ್ಕಪಾಠ ಕಲಿಸುವ ಜೊತೆಗೆ ಮಹುಳೆಯರನ್ನು ರಕ್ಷಿಸಬೇಕಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಮೇಲಿನ ಎಲ್ಲ ಅಂಶಗಳನ್ನು ಪರಿಗಣಿಸಿ ಆರೋಪಿಗೆ 1.5 ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ಮುಂಬೈನ ದಿಂಡೋಶಿಯಲ್ಲಿರುವ ಸೆಷನ್ಸ್ ಕೋರ್ಟ್ 2015ರಲ್ಲಿ ನಡೆದ ಘಟನೆಗೆ ಈಗ ಶಿಕ್ಷೆ ವಿಧಿಸಿದೆ. 2015ರಂದು ಅಪ್ರಾಪ್ತ ಬಾಲಕಿ ಶಾಲೆಯಿಂದ ಹಿಂದಿರುಗುತ್ತಿದ್ದಾಗ ಉದ್ಯಮಿಯೊಬ್ಬ ಬಾಲಕಿಯನ್ನು ಐಟಂ ಎಂದು ಸಂಬೋಧಿಸಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು, ಇದೀಗ ಕೋರ್ಟ್ ಶಿಕ್ಷೆ ವಿಧಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ತ್ರೀ ನಿಂದನೆ, ಶೋಷಣೆ ಬಿಜೆಪಿಯವರ ಹುಟ್ಟುಗುಣ- ಗುಂಡೂರಾವ್ ಟೀಕೆ

    ಸ್ತ್ರೀ ನಿಂದನೆ, ಶೋಷಣೆ ಬಿಜೆಪಿಯವರ ಹುಟ್ಟುಗುಣ- ಗುಂಡೂರಾವ್ ಟೀಕೆ

    ಬೆಂಗಳೂರು: ಸ್ತ್ರೀ ನಿಂದನೆ, ಸ್ತ್ರೀ ಪೀಡನೆ, ಸ್ತ್ರೀ ಶೋಷಣೆ ಬಿಜೆಪಿಯವರ (BJP) ಹುಟ್ಟುಗುಣ ಎಂದು ಕಾಂಗ್ರೆಸ್ (Congress) ನಾಯಕ ದಿನೇಶ್ ಗುಂಡೂರಾವ್ (Dinesh Gundu Rao) ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

    ಚಾಮರಾಜನಗರದಲ್ಲಿ (Chamarajanagar) ಮಹಿಳೆಯೊಬ್ಬರಿಗೆ ಸಚಿವ ವಿ.ಸೋಮಣ್ಣ (V Somanna) ಕಪಾಳಮೋಕ್ಷ ಮಾಡಿದ ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮೂಲಕ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಪಾಳಮೋಕ್ಷ ಪ್ರಕರಣಕ್ಕೆ ಟ್ವಿಸ್ಟ್- ಸಚಿವರು ನಂಗೆ ಹೊಡೆದಿಲ್ಲವೆಂದು ಮಹಿಳೆ ಸ್ಪಷ್ಟನೆ

    ಗುಂಡ್ಲುಪೇಟೆಯ ಹಂಗಳದಲ್ಲಿ ಸಮಸ್ಯೆ ಹೇಳಿಕೊಂಡು ಬಂದ ಮಹಿಳೆಯೊಬ್ಬರ ಮೇಲೆ ಸಚಿವ ಸೋಮಣ್ಣ ಕಪಾಳಮೋಕ್ಷ ಮಾಡಿದ್ದಾರೆ. ಸೋಮಣ್ಣ ಒಬ್ಬ ಹಿರಿಯ ಸಚಿವ. ನಾಲ್ಕು ಜನರಿಗೆ ಬುದ್ಧಿ ಹೇಳುವ ಸ್ಥಾನದಲ್ಲಿದ್ದು ಈ ರೀತಿ ವರ್ತಿಸುವುದು ಶೋಭೆಯಲ್ಲ. ಸ್ತ್ರೀಯರೊಂದಿಗೆ ಸಂಸ್ಕಾರಯುತವಾಗಿ ವರ್ತಿಸಬೇಕು ಅನ್ನೋ ಕನಿಷ್ಠ ಜ್ಞಾನವೂ ಸೋಮಣ್ಣರಗಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕಾಳಿಂಗ ಸರ್ಪಗೆ ಕಿಸ್ ಕೊಟ್ಟ ಭೂಪ – ವ್ಯಕ್ತಿ ಧೈರ್ಯಕ್ಕೆ ಶಹಬ್ಬಾಸ್‌ ಅಂದ ನೆಟ್ಟಿಗರು

    ಸ್ತ್ರೀ ನಿಂದನೆ, ಸ್ತ್ರೀ ಪೀಡನೆ, ಸ್ತ್ರೀ ಶೋಷಣೆ ಬಿಜೆಪಿಯವರ ಹುಟ್ಟುಗುಣ. ಮಹಿಳೆಯ ಕೆನ್ನೆಗೆ ಹೊಡೆಯುವ ಮೂಲಕ ಸ್ತ್ರೀಯರ ಬಗ್ಗೆ ಬಜೆಪಿಯವರ ಮನಸ್ಥಿತಿಯನ್ನು ಸೋಮಣ್ಣ ಅನಾವರಣ ಮಾಡಿದ್ದಾರೆ. ಸಾರ್ವಜನಿಕವಾಗಿಯೇ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾರೆ. ಸ್ತ್ರೀಯರ ಬಗ್ಗೆ ಗೌರವವಿಲ್ಲದ ವ್ಯಕ್ತಿಗಳಿಂದ ಮಾತ್ರ ಇಂತಹ ವರ್ತನೆ ತೋರಿಸಲು ಸಾಧ್ಯ ಎಂದು ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗ್ಯಾಂಗ್ ರೇಪ್ ಕಥೆ ಕಟ್ಟಿದ್ದ ಮಹಿಳೆ ಅರೆಸ್ಟ್ – 420 ಕೇಸ್ ದಾಖಲು

    ಗ್ಯಾಂಗ್ ರೇಪ್ ಕಥೆ ಕಟ್ಟಿದ್ದ ಮಹಿಳೆ ಅರೆಸ್ಟ್ – 420 ಕೇಸ್ ದಾಖಲು

    ನವದೆಹಲಿ/ಲಕ್ನೋ: ಆಸ್ತಿ ದೋಚುವ ಸಲುವಾಗಿ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಗ್ಯಾಂಗ್‌ರೇಪ್ (Ghaziabad Gang Rape) ನಡೆದಿರುವುದಾಗಿ ಕಥೆ ಕಟ್ಟಿದ್ದ ಮಹಿಳೆ ಹಾಗೂ ಮೂವರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

    ದೆಹಲಿ ಮಹಿಳೆ (Delhi Women) ಐವರು ಪುರುಷರು ತನ್ನನ್ನು ಎರಡು ದಿನಗಳ ಕಾಲ ಅಪಹರಿಸಿ ಅತ್ಯಾಚಾರವೆಸಗಿದ್ದಾರೆ ಎಂದು ಹೇಳಿಕೊಂಡಿದ್ದಳು. ಕೊನೆಗೂ ಸತ್ಯ ಬಯಲಾಗಿದ್ದು, ಮಹಿಳೆ ಹಾಗೂ ಆಕೆಯ ಸಹಚರರಾದ ಆಜಾದ್, ಅಫ್ಜಲ್ ಮತ್ತು ಗೌರವ್ ಮೂವರನ್ನು ಬಂಧಿಸಿ, ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ನಂತರ ನ್ಯಾಯಾಲಯವು (Court) ಮಹಿಳೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಗಾಜಿಯಾಬಾದ್ ಎಸ್ಪಿ ನಿಪುನ್ ಅಗರ್ವಾಲ್ ಹೇಳಿದ್ದಾರೆ.

    ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (IPC) 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಗೆ ಪ್ರೇರೇಪಿಸುವುದು), 467 (ಮೌಲ್ಯಯುತ ಭದ್ರತೆಯ ಖೋಟಾ), 468 (ವಂಚನೆಯ ಉದ್ದೇಶಕ್ಕಾಗಿ ನಕಲು ಮಾಡೋದು) ಮತ್ತು 471 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಘಟನೆ?
    ಗಾಜಿಯಾಬಾದ್‌ನ ಪುರುಷರ ಗುಂಪೊಂದು ದೆಹಲಿ ಮೂಲದ 38 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಮಹಿಳೆ ಮೇಲೆ ಅಮಾನುಷವಾಗಿ ಹಲ್ಲೆಯನ್ನೂ ನಡೆಸಿ, ಬಳಿಕ ಆರೋಪಿಗಳು ಮಹಿಳೆಯನ್ನು ರಸ್ತೆ ಬದಿಯಲ್ಲಿ ತಳ್ಳಿ ಹೋಗಿದ್ದರು. ಅ.18 ರಂದು ಮುಂಜಾನೆ 3:30ರ ವೇಳೆಗೆ ನಂದಗ್ರಾಮ್ ಪೊಲೀಸ್ ಠಾಣೆಯ ಆಶ್ರಮದ ರಸ್ತೆ ಬಳಿ ಸಂತ್ರಸ್ತ ಮಹಿಳೆ ಪತ್ತೆಯಾಗಿದ್ದರು. ಮಹಿಳೆ ನೆಲದ ಮೇಲೆ ಬಿದ್ದಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಲ್ಲದೇ ಕ್ರೂರವಾಗಿ ಚಿತ್ರಹಿಂಸೆ ನೀಡಲಾಗಿರುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು, ಸಂತ್ರಸ್ತ ಮಹಿಳೆ ಸುಳ್ಳು ಆರೋಪ ಮಾಡಿರುವ ಸತ್ಯ ಬಯಲಾಗಿದೆ.

    ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮೀರತ್‌ನ ಐಜಿ ಪ್ರವೀಣ್ ಕುಮಾರ್, ಮಹಿಳೆ ಆಸ್ತಿ ವಿವಾದದಲ್ಲಿ ಆರೋಪಿಯನ್ನು ಸಿಲುಕಿಸಲು ಆಜಾದ್ ಎಂಬಾತನೊಂದಿಗೆ ಸೇರಿಕೊಂಡು ಸುಳ್ಳು ಆರೋಪ ಹೊರಿಸಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಆರೋಪಿ ಮತ್ತು ಮಹಿಳೆ ನಡುವೆ ಆಸ್ತಿ ವಿವಾದವೊಂದಿದೆ. ಹಾಗಾಗಿ ಆಜಾದ್ ಎಂಬಾತನೊಂದಿಗೆ ಸೇರಿಕೊಂಡು ಪ್ಲ್ಯಾನ್‌ ಮಾಡಿ ಈ ರೀತಿ ಕಥೆ ಕಟ್ಟಿದ್ದಾರೆ. ಹಾಗಾಗಿ ಆಜಾದ್ ಮತ್ತು ಆತನ ಸಹಚರರಾದ ಗೌರವ್ ಮತ್ತು ಅಫ್ಜಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗ್ಳೂರಿನ ವೈದ್ಯೆ ಹೆಸರಲ್ಲಿ ಮಹಿಳೆಯರಿಗೆ ಅಶ್ಲೀಲ ಫೋಟೋ – ಆರೋಪಿಗಳು ಅರೆಸ್ಟ್

    ಬೆಂಗ್ಳೂರಿನ ವೈದ್ಯೆ ಹೆಸರಲ್ಲಿ ಮಹಿಳೆಯರಿಗೆ ಅಶ್ಲೀಲ ಫೋಟೋ – ಆರೋಪಿಗಳು ಅರೆಸ್ಟ್

    ಬೆಂಗಳೂರು: ಖ್ಯಾತ ವೈದ್ಯೆ (Doctor) ಪದ್ಮಿನಿ ಪ್ರಸಾದ್ ಹೆಸರಿನಲ್ಲಿ ಮಹಿಳೆಗೆ (Women) ಅಶ್ಲೀಲ ಫೋಟೋ ಕಳಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಲೈಂಗಿಕವಾಗಿ ತೊಂದರೆ ಇರುವ ಮಹಿಳೆಯರಿಗೆ ಸೂಕ್ತ ಸಲಹೆ ನೀಡುತ್ತಿದ್ದ ವೈದ್ಯೆ ಡಾ.ಪದ್ಮಿನಿ ಪ್ರಸಾದ್ ಅವರ ಹೆಸರಿನಲ್ಲಿ ಇತರ ಮಹಿಳೆಯರಿಗೆ ಫೋಟೋ ಕಳಿಸಲಾಗುತ್ತಿತ್ತು. ಕಿಡಿಗೇಡಿಗಳ ಕೃತ್ಯದ ಬಗ್ಗೆ ಬೆಂಗಳೂರು (Bengaluru) ಉತ್ತರ ವಿಭಾಗ ಸಿಇಎನ್ ಪೊಲೀಸ್ ಠಾಣೆಯಲ್ಲಿ (CEN Police Station) ಪದ್ಮಿನಿ ಪ್ರಸಾದ್ ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ: ಕಾಪಿ ಚೀಟಿಯನ್ನು ಲವ್ ಲೆಟರ್ ಎಂದು ತಪ್ಪಾಗಿ ಭಾವಿಸಿದ ವಿದ್ಯಾರ್ಥಿನಿ- ವಿದ್ಯಾರ್ಥಿಯ ಬರ್ಬರ ಕೊಲೆ

    ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬರ್ತ್‍ಡೇ, ಗ್ರಾಜುಯೇಷನ್ ಪಾರ್ಟಿಗೆ ಬೆಸ್ಟ್ ಇಯರ್‌ರಿಂಗ್ ಡಿಸೈನ್‍ಗಳು

    ಬರ್ತ್‍ಡೇ, ಗ್ರಾಜುಯೇಷನ್ ಪಾರ್ಟಿಗೆ ಬೆಸ್ಟ್ ಇಯರ್‌ರಿಂಗ್ ಡಿಸೈನ್‍ಗಳು

    ಜೀವನದಲ್ಲಿ ನಾವು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಇರುವ ದಿನಗಳು ಇದೆ ಮತ್ತು ರೆಡಿಯಾಗುವುದಕ್ಕೆ ಗಂಟೆ ಗಟ್ಟಲೆ ಟೈಂ ತೆಗೆದುಕೊಳ್ಳುವ ದಿನಗಳು ಇದೆ. ಕೊರೊನಾ ಸೋಂಕಿನ ಬಳಿಕ ಶಾಲಾ-ಕಾಲೇಜುಗಳು ಆರಂಭವಾಗಿ ವರ್ಷ ತುಂಬುತ್ತಿದೆ. ಈ ಹೊತ್ತಿನಲ್ಲಿ ಗೆಟ್-ಟು ಗೆದರ್ ಪಾರ್ಟಿ ಮಾಡಲು ಟೈಂ ಇರುವುದಿಲ್ಲ. ಬರೀ ಪಾಠ ಓದುವುದರಲ್ಲೇ ಸಮಯ ಕಳೆಯುತ್ತಿದೆ. ಹೀಗಿದ್ದರೂ ಗ್ರಾಜುಯೇಷನ್ ಪಾರ್ಟಿ ಮತ್ತು ಸ್ನೇಹಿತರ ಬರ್ತ್‍ಡೇ ಪಾರ್ಟಿಗೆ ಮಾತ್ರ ಯಾರು ಕೂಡ ಮಿಸ್ ಮಾಡಲ್ಲ. ಸದ್ಯ ಈ ರೀತಿಯ ಕಾರ್ಯಕ್ರಮಗಳಲ್ಲಿ ಯಾವ ರೀತಿಯ ಕಿವಿಯೋಲೆ ಧರಿಸಬೇಕೆಂದು ಯುವತಿಯರು ಹೆಚ್ಚು ತಲೆಕೆಡಿಸಿಕೊಂಡಿರುತ್ತಾರೆ. ಅಂತವರಿಗೆ ಒಂದಷ್ಟು ಡಿಸೈನ್‍ಗಳ ಇಯರ್‌ರಿಂಗ್‍ಗಳ ಕುರಿತಂತೆ ಮಾಹಿತಿಯನ್ನು ನೀಡಲಾಗಿದೆ.

    ಝವೇರಿ ಪಲ್ರ್ಸ್‌  ರೋಸ್ ಗೋಲ್ಡ್
    ಚಿನ್ನದ ಬಣ್ಣದ ಹಿತ್ತಾಳೆಯ ಈ ಇಯರಿಂಗ್ ಕ್ಲಾಸಿಕ್ ಆಗಿದ್ದು, ಇದನ್ನು ನೀವು ಎಲ್ಲಾ ರೀತಿಯ ಬಟ್ಟೆಗಳಿಗೂ ಕೂಡ ಧರಿಸಬಹುದಾಗಿದೆ. ಸಾಂಪ್ರದಾಯಿಕ ಉಡುಪಿನೊಂದಿಗೆ ಈ ಇಯರ್‌ರಿಂಗ್ ಬೆಸ್ಟ್ ಆಗಿ ಕಾಣಿಸುತ್ತದೆ. ಅದರಲ್ಲಿಯೂ ಚೋಕರ್  ನೆಕ್ಲೇಸ್ ಜೊತೆಗೆ ಸಖತ್ ಮ್ಯಾಚ್ ಆಗುತ್ತದೆ. ನೀವು ಗ್ಲಾಮರ್ ಲುಕ್‍ನಲ್ಲಿ ಆಕರ್ಷಕವಾಗಿ ಕಾಣುವುದರ ಜೊತೆಗೆ ನಿಮ್ಮನ್ನು ಸುಂದರವಾಗಿ ಕಾಣಿಸಲು ಈ ಇಯರ್‌ರಿಂಗ್ ಸಹಾಯಕವಾಗಿದೆ.

    ಗೋಲ್ಡನ್ ಹ್ಯೂಸ್ ಕಾಂಟೆಂಪ್ರಿ ಇಯರ್‌ರಿಂಗ್
    ಇದೊಂದು ಟ್ರೆಂಡಿಂಗ್ ಇಯರ್‌ರಿಂಗ್ ಆಗಿದ್ದು, ಸಖತ್ ಡಿಫರೆಂಟ್ ಡಿಸೈನ್ ಹೊಂದಿದೆ. ಬ್ಲಾಕ್ ಕಲರ್ ಹಾಗೂ ಗೋಲ್ಡನ್ ಡ್ರಾಪ್‍ನ ಈ ಇಯರ್‌ರಿಂಗ್ ಅನ್ನು ನೀವು ಪಾರ್ಟಿ ಹಾಗೂ ಸಾಂಪ್ರದಾಯಿಕ ಉಡುಗೆ ಎರಡರ ಜೊತೆಗೂ ಕೂಡ ಧರಿಸಬಹುದು. ಇದನ್ನೂ ಓದಿ: ಅಪ್ಪು ಅಭಿಮಾನಿಗಳಿಂದ ಆವಲಬೆಟ್ಟಕ್ಕೆ `ಗಂಧದಗುಡಿ ರೈಡ್’ – ಆಲದ ಗಿಡ ನೆಟ್ಟು ಪುನೀತ್‌ ನಾಮಕರಣ

    ಇಯರ್‌ರಿಂಗ್ ಸಪೋರ್ಟ್ ಇಯರ್ ಚೈನ್
    ಒಂದು ಜೋಡಿಯ ಇಯರ್ ಚೈನ್‍ಗಳು ಕೂಡ ಆಭರಣವಾಗಿದ್ದು, ಇದರಿಂದ ಕಿವಿ ಮತ್ತು ಕೂದಲಿನ ಒಂದು ಭಾಗವನ್ನು ಅಲಂಕರಿಸಲಾಗುತ್ತದೆ. ನೀವು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲು ನಿಮ್ಮ ಅಂದವನ್ನು ಹೆಚ್ಚಿಸಲು ಈ ಇಯರ್‌ರಿಂಗ್ ಅನ್ನು ಧರಿಸಬಹುದು. ಅಲ್ಲದೇ ಈ ಇಯರ್‌ರಿಂಗ್ ನೋಡಲು ದಪ್ಪವಾಗಿ ಕಾಣಿಸುತ್ತದೆ, ಆದರೆ ತೂಕ ಮಾತ್ರ ಲೈಟ್ ವೈಟ್ ಆಗಿದೆ.

    ಯೆಲ್ಲೋ ಚೈಮ್ಸ್ ಸ್ಟಡ್ ಇಯರ್‌ರಿಂಗ್‍ಗಳು
    ಬಟರ್ ವಿಂಗ್ಸ್-ಲೈಫ್ ಕ್ರಿಸ್ಟಲ್-ಸ್ಟಡ್‌ನ ಈ ಇಯರ್‌ರಿಂಗ್ ಅನ್ನು ನೀವು ಯಾವುದೇ ಗೊಂದಲವಿಲ್ಲದೇ ಧರಿಸಬಹುದಾಗಿದೆ. ಇದು ನೋಡಲು ಸುಂದರವಾಗಿ ಕಾಣಿಸುವ ಇಯರ್‌ರಿಂಗ್ ಆಗಿದ್ದು, ಪ್ರತಿ ದಿನ ಬೇಕಾದರೂ ಈ ಇಯರ್‌ರಿಂಗ್ ಅನ್ನು ನೀವು ಧರಿಸಬಹುದಾಗಿದೆ. ಇದನ್ನೂ ಓದಿ: T20WorldCup: ಶ್ರೀಲಂಕಾ ವಿರುದ್ಧ ನಮೀಬಿಯಾ ಆರ್ಭಟ – ಉದ್ಘಾಟನಾ ಪಂದ್ಯದಲ್ಲೇ 55 ರನ್‌ಗಳ ಭರ್ಜರಿ ಜಯ

    Live Tv
    [brid partner=56869869 player=32851 video=960834 autoplay=true]

  • ಕೇರಳ ನರಬಲಿ ಪ್ರಕರಣ – ನರಭಕ್ಷಕರ ಜಾಡು ಹಿಡಿದಿದ್ದು ಹೀಗೆ

    ಕೇರಳ ನರಬಲಿ ಪ್ರಕರಣ – ನರಭಕ್ಷಕರ ಜಾಡು ಹಿಡಿದಿದ್ದು ಹೀಗೆ

    ತಿರುವನಂತಪುರಂ: ಕೇರಳದಲ್ಲಿ (Kerala) ನಡೆದ ನರಬಲಿ (Human Sacrifice) ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇಬ್ಬರು ಮಹಿಳೆಯರನ್ನು (Women) ಪಾಪಿಗಳು ನರಬಲಿ ನೀಡಿರದೇ ಅವರ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿ, ಬೇಯಿಸಿ ಭಕ್ಷಿಸಿದ್ದಾರೆ (Cannibalism) ಎಂಬ ಆಘಾತಕಾರಿ ವಿಚಾರವನ್ನು ಪೊಲೀಸರು ತಿಳಿಸಿದ್ದಾರೆ.

    ನರಬಲಿ ಪ್ರಕರಣದಲ್ಲಿ ಪೊಲೀಸರಿಗೆ ಮೊದಲ ಸುಳಿವು ನೀಡಿದ್ದು, ಕೇರಳದ ಪತ್ತನಂತಿಟ್ಟದ ಸಿಸಿಟಿವಿ (CCTV) ದೃಶ್ಯಾವಳಿ. ವೀಡಿಯೋ ತುಣುಕಿನಲ್ಲಿ ಬಲಿಯಾದ ಪದ್ಮಾ ಘಟನೆಗೂ ಮೊದಲು ಸ್ಕಾರ್ಪಿಯೋವನ್ನು ಏರಿ ಎಲ್ಲಿಗೋ ಹೊರಟಿರುವುದು ಕಂಡುಬಂದಿದೆ. ಆಕೆಯ ಜೊತೆಗೆ ಇದ್ದ ವ್ಯಕ್ತಿ ಘಟನೆಯ ಪ್ರಮುಖ ಆರೋಪಿ ಮೊಹಮ್ಮದ್ ಶಾಫಿ ಎಂಬುದು ತಿಳಿದುಬಂದಿದೆ.

    ಈ ಪ್ರಕರಣದ ಆರೋಪಿಗಳನ್ನು ಜಾಡು ಹಿಡಿಯಲು ಪೊಲೀಸರು ಮೊದಲಿಗೆ ಪದ್ಮಾ ಅವರ ಮೊಬೈಲ್ ಅನ್ನು ಟ್ರ್ಯಾಕ್ ಮಾಡಿದ್ದಾರೆ. ಬಳಿಕ ಆರೋಪಿಗಳ ನೆರೆಮನೆಯವರ ಸಿಸಿಟಿವಿ ದೃಶ್ಯಾವಳಿಗಳನ್ನು ಕಲೆ ಹಾಕಿ, ಆರೋಪಿಗಳನ್ನು ಹಿಡಿಯುವಲ್ಲಿ ಸಫಲರಾದರು ಎಂದು ಪೊಲೀಸರು ತಿಳಿಸಿದ್ದಾರೆ.

    ಶೀಘ್ರವೇ ಶ್ರೀಮಂತರಾಗುತ್ತೀರಿ ಎಂದು ನಂಬಿಸಿದ ಶಾಫಿ, ದಂಪತಿಯಾದ ಭಗವಲ್ ಸಿಂಗ್ ಹಾಗೂ ಪತ್ನಿ ಲೈಲಾಗೆ ನರಬಲಿ ನೀಡುವಂತೆ ಸಲಹೆ ನೀಡಿದ್ದ. ಅದರಂತೆಯೇ ದಂಪತಿ ಪದ್ಮಾ ಹಾಗೂ ರೋಸ್ಲಿನ್ ರನ್ನು ಬಲಿ ನೀಡಲು ಕೈಜೋಡಿಸಿದ್ದಾರೆ.

    ವರದಿಗಳ ಪ್ರಕಾರ, ಪದ್ಮಾ ಸೆಪ್ಟೆಂಬರ್ 26ರಂದು ನಾಪತ್ತೆಯಾಗಿದ್ದರು. ಅಕ್ಟೋಬರ್ 9ರಂದು ಪೊಲೀಸರು ಆ ದಿನದ ಸಿಸಿಟಿವಿ ದೃಶ್ಯಾವಳಿಯನ್ನು ಜೋಸ್ ಥಾಮಸ್ ಎಂಬವರ ಮನೆಯಿಂದ ಪಡೆದಿದ್ದಾರೆ. ಸಿಸಿಟಿವಿ ದೃಶ್ಯದಲ್ಲಿ ರಸ್ತೆ ಬದಿಯಲ್ಲಿ ಸ್ಕಾರ್ಪಿಯೋ ಕಾರು ಹಾಗೂ ಪದ್ಮಾ ಆರೋಪಿಗಳ ಮನೆಯೊಳಗೆ ಹೋಗುವುದು ಕಂಡುಬಂದಿದೆ.

    ಈ ಎಲ್ಲಾ ಸಾಕ್ಷಿಗಳನ್ನು ಬಳಸಿ ಪೊಲೀಸರು ಆರೋಪಿ ದಂಪತಿಯ ಮನೆಯಲ್ಲಿ ಶೋಧ ನಡೆಸಿದಾಗ ಅಲ್ಲಿ ನಡೆದಿದ್ದ ಭಯಾನಕ ಸತ್ಯ ಹೊರ ಬಿದ್ದಿದೆ. ಆರೋಪಿಗಳು ಮಹಿಳೆಯರ ದೇಹದ ಭಾಗಗಳನ್ನು ತುಂಡು ತುಂಡಾಗಿ ಕತ್ತರಿಸಿ, ಅವಶೇಷಗಳನ್ನು ತಮ್ಮದೇ ಮನೆಯ ತೋಟದಲ್ಲಿ 3 ಗುಂಡಿಗಳಲ್ಲಿ ಹೂತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ನರಬಲಿ ಪ್ರಕರಣ – ಮಹಿಳೆ ದೇಹವನ್ನು 56 ತುಂಡು ಮಾಡಿ ಭಕ್ಷಿಸಿರುವ ಶಂಕೆ

    ಆರೋಪಿಗಳು ಪದ್ಮಾ ಅವರಿಗೆ ಚಾಕುವಿನಿಂದ ಚಿತ್ರಹಿಂಸೆ ನೀಡಿ, ಕತ್ತು ಹಿಸುಕಿ ಕೊಲೆ ಮಾಡಿದ್ದು ಮಾತ್ರವಲ್ಲದೇ ದೇಹವನ್ನು 56 ತುಂಡುಗಳನ್ನಾಗಿ ಕತ್ತರಿಸಿ ಹೂತಿದ್ದಾರೆ. ರೋಸ್ಲಿನ್‌ಗೂ ಚಿತ್ರಹಿಂಸೆ ನೀಡಿ, ಖಾಸಗಿ ಭಾಗಕ್ಕೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವುದು ತಿಳಿದುಬಂದಿದೆ. ವಿಚಾರಣೆ ವೇಳೆ ಕೊಲೆ ನಡೆಸಿರುವುದನ್ನು ಆರೋಪಿ ಭಗವಲ್ ಸಿಂಗ್ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಹಂತಕರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಾಫಿ ಈ ಹಿಂದೆ 75 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಜೈಲು ಸೇರಿದ್ದ. 2020ರಲ್ಲಿ ಆತ ಜಾಮೀನಿನ ಮೇಲೆ ಹೊರ ಬಂದಿದ್ದ ಎನ್ನಲಾಗಿದೆ. ಆತ ಇಂತಹ ಕ್ರೌರ್ಯಗಳನ್ನು ನಡೆಸುವಲ್ಲಿ ಆನಂದ ಪಡುತ್ತಿದ್ದ ಎನ್ನಲಾಗಿದ್ದು, ವಿಕೃತ ಮನಸ್ಥಿತಿಯ ವ್ಯಕ್ತಿ ಎಂದು ಪೊಲೀಸರು ಹೆಸರಿಸಿದ್ದಾರೆ. ಇದನ್ನೂ ಓದಿ: ಬಲವಂತವಾಗಿ ಮಂಗಳಮುಖಿಯ ಮುಂದೆಲೆ ಕತ್ತರಿಸಿ ಹಲ್ಲೆ – ಇಬ್ಬರು ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ಕೇರಳದಲ್ಲಿ ನರಬಲಿ ಪ್ರಕರಣ – ಮಹಿಳೆ ದೇಹವನ್ನು 56 ತುಂಡು ಮಾಡಿ ಭಕ್ಷಿಸಿರುವ ಶಂಕೆ

    ಕೇರಳದಲ್ಲಿ ನರಬಲಿ ಪ್ರಕರಣ – ಮಹಿಳೆ ದೇಹವನ್ನು 56 ತುಂಡು ಮಾಡಿ ಭಕ್ಷಿಸಿರುವ ಶಂಕೆ

    ತಿರುವನಂತಪುರಂ: ಆದಷ್ಟು ಬೇಗ ಹಣ ಗಳಿಸುವ ಆಸೆಯಿಂದ ಕೇರಳದ (Kerala) ದಂಪತಿ (Couple) ಇಬ್ಬರು ಮಹಿಳೆಯರನ್ನು (Women) ನರಬಲಿ (Human Sacrifice) ನೀಡಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮಹಿಳೆಯರ ದೇಹವನ್ನು 56 ತುಂಡುಗಳನ್ನಾಗಿ ಕತ್ತರಿಸಿದ್ದು ಮಾತ್ರವಲ್ಲದೇ ದುರುಳರು ನರಮಾಂಸ ಭಕ್ಷಣೆ (Cannibalism) ಮಾಡಿರುವ ಶಂಕೆಯೂ ಮೂಡಿರುವುದಾಗಿ ಪೊಲೀಸರು ಬುಧವಾರ ತಿಳಿಸಿದ್ದಾರೆ.

    ನರಬಲಿಯಾದ ರೋಸ್ಲಿನ್ ಹಾಗೂ ಪದ್ಮಾ ಅವರನ್ನು ಕತ್ತು ಹಿಸುಕಿ ಸಾಯಿಸುವುದಕ್ಕೂ ಮೊದಲು ಅವರಿಗೆ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಲಾಗಿದೆ. ಮಹಿಳೆಯರ ಸ್ತನಗಳನ್ನು ಕತ್ತರಿಸಿ, ರಕ್ತ ಹರಿಯುವಂತೆ ಮಾಡಲಾಗಿದ್ದು, ಬಳಿಕ ಒಂದು ದೇಹವನ್ನು 56 ತುಂಡುಗಳನ್ನಾಗಿ ಕತ್ತರಿಸಲಾಗಿದೆ. ಮಹಿಳೆಯರ ದೇಹದ ಭಾಗಗಳು ಒಟ್ಟು 3 ಹೊಂಡಗಳಲ್ಲಿ ಪತ್ತೆಯಾಗಿರುವುದಾಗಿ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.

    ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾಫಿ 2020ರಲ್ಲಿ 75 ವರ್ಷದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬಂದಿದ್ದ. ಬಳಿಕ ಆತ ದಂಪತಿ ಭಗವಲ್ ಸಿಂಗ್ ಹಾಗೂ ಲೈಲಾಗೆ ಬೇಗನೆ ಹಣ ಗಳಿಸಲು ನರಬಲಿ ನೀಡುವಂತೆ ಸಲಹೆ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹಣಗಳಿಸಲು ಇಬ್ಬರು ಮಹಿಳೆಯರ ನರಬಲಿ ಕೊಟ್ಟ ಪಾಪಿಗಳು

    ಶಫಿ ಸಾಮಾಜಿಕ ಮಾಧ್ಯಮಗಳಲ್ಲಿ ರೋಸ್ಲಿನ್ ಹಾಗೂ ಪದ್ಮಾರನ್ನು ಸಂಪರ್ಕಿಸಿ, ಅಶ್ಲೀಲ ಚಿತ್ರದಲ್ಲಿ ನಟಿಸಲು ಹಣದ ಆಮಿಷ ಒಡ್ಡಿದ್ದ ಎಂದು ಶಂಕಿಸಲಾಗಿದೆ. ನರಬಲಿ ವೇಳೆ ಶಫಿ ಪದ್ಮಾಳ ಕತ್ತು ಹಿಸುಕಿ, ಶಿರಚ್ಛೇದ ಮಾಡಿ ಆಕೆಯ ದೇಹವನ್ನು 56 ತುಂಡುಗಳಾಗಿ ಕತ್ತರಿಸಿದ್ದಾನೆ ಎಂದು ಹೇಳಿದ್ದಾರೆ.

    ಆರೋಪಿ ಲೈಲಾ ರೋಸೆಲಿನ್‌ಳ ಕತ್ತು ಹಿಸುಕಿ, ಆಕೆಯ ಸ್ತನಗಳನ್ನು ಕತ್ತರಿಸಿದ್ದಾಳೆ. ಆಕೆಗೆ ಚಾಕುವಿನಿಂದ ಚಿತ್ರಹಿಂಸೆ ನೀಡಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್‌ ವಿವಾದ – ಗುರುವಾರ ಸುಪ್ರೀಂ ತೀರ್ಪು ಪ್ರಕಟ ಸಾಧ್ಯತೆ

    Live Tv
    [brid partner=56869869 player=32851 video=960834 autoplay=true]

  • ಮುಸ್ಲಿಂ ಪತಿ 2ನೇ ಮದುವೆಯಾಗುವಂತಿಲ್ಲ – ಕುರಾನ್ ಉಲ್ಲೇಖಿಸಿ ಹೈಕೋರ್ಟ್ ತೀರ್ಪು

    ಮುಸ್ಲಿಂ ಪತಿ 2ನೇ ಮದುವೆಯಾಗುವಂತಿಲ್ಲ – ಕುರಾನ್ ಉಲ್ಲೇಖಿಸಿ ಹೈಕೋರ್ಟ್ ತೀರ್ಪು

    – ಮೊದಲ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳದ ವ್ಯಕ್ತಿಗೆ ಮದುವೆಗೆ ಅವಕಾಶವಿಲ್ಲ
    – ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟ

    ಲಕ್ನೋ: ತನ್ನ ಹೆಂಡತಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವಾಗದ ಮುಸ್ಲಿಂ ಸಮುದಾಯದ (Muslim Community) ಪುರುಷ ಕುರಾನ್ ಪ್ರಕಾರವೇ 2ನೇ ಮದುವೆಯಾಗಲು (Marriage) ಅವಕಾಶವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ (Allahabad HighCourt) ಮಹತ್ವದ ತೀರ್ಪು ನೀಡಿದೆ.

    ವೈವಾಹಿಕ ಹಕ್ಕುಗಳ ಮರುಸ್ಥಾಪನೆಗಾಗಿ ಕೌಟುಂಬಿಕ ನ್ಯಾಯಾಲಯ (Family Court) ನೀಡಿದ ತೀರ್ಪನ್ನು ಪ್ರಶ್ನಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯಪ್ರಕಾಶ್ ಕೇಸರವಾಣಿ ಹಾಗೂ ನ್ಯಾಯಮೂರ್ತಿ ರಾಜೇಂದ್ರ ಕುಮಾರ್ ಅವರಿದ್ದ ದ್ವಿಸದಸ್ಯ ಪೀಠವು ಈ ಆದೇಶ ಪ್ರಕಟಿಸಿದೆ. ಇದನ್ನೂ ಓದಿ: ನೌಕಾಪಡೆಯ MiG-29K ಪತನ – ಪೈಲಟ್‌ ಅಪಾಯದಿಂದ ಪಾರು

    ಇದರೊಂದಿಗೆ ಮೊದಲ ಪತ್ನಿಯ ಇಚ್ಛೆಯನ್ನು ವಿರೋಧಿಸಿ, 2ನೇ ಮದುವೆಯಾದ ವ್ಯಕ್ತಿ ಮೊದಲ ಪತ್ನಿಯೂ ತನ್ನೊಂದಿಗೆ ಇರಬೇಕು ಎಂದು ಒತ್ತಾಯಿಸುವಂತಿಲ್ಲ ಎಂದು ತಿಳಿಸಿದೆ.

    Allahabad high court 1

    ಮುಸ್ಲಿಂ ಪುರುಷನು ತನ್ನ ಹೆಂಡತಿ ಮತ್ತು ಮಕ್ಕಳನ್ನು ಪೋಷಿಸುವ ಸಾಮರ್ಥ್ಯ ಹೊಂದಿಲ್ಲದಿದ್ದರೆ, ಆತನಿಗೆ ಇತರ ಮಹಿಳೆಯರನ್ನು ಮದುವೆಯಾಗುವ ಅರ್ಹತೆ ಇಲ್ಲವೆಂದು ಕುರಾನ್ (Quran) ಹೇಳುತ್ತದೆ. ಈ ವಿಚಾರದಲ್ಲಿ ನ್ಯಾಯಾಲಯದ ನಿರ್ಣಯವೂ ಅದೇ ಆಗಿರುತ್ತದೆ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಾಜಣ್ಣ ಮೇಲೆ ಪ್ರಶಾಂತ್ ಸಂಬರ್ಗಿ ವಾಗ್ದಾಳಿ

    ನ್ಯಾಯಾಲಯವು (Court) ಮದುವೆಯ  ಪಾವಿತ್ರ‍್ಯತೆ ಗೌರವಿಸುತ್ತದೆ. ಆದರೆ ಮೊದಲ ಹೆಂಡತಿಯ ಇಚ್ಛೆಗೆ ವಿರುದ್ಧವಾಗಿ, ಮತ್ತೊಬ್ಬರನ್ನು ಮದುವೆಯಾದ ಮುಸ್ಲಿಂ ಪುರುಷನು ಮತ್ತೆ ಮೊದಲ ಪತ್ನಿ ತನ್ನೊಂದಿಗೆ ವಾಸಿಸುವಂತೆ ಒತ್ತಾಯಿಸುವಂತಿಲ್ಲ. ಹಾಗೆ ಮಾಡಿದರೆ ಅದು ಅಸಮಾನತೆ ಎಂದು ಹೇಳಿದೆ.

    ಏನಿದು ಪ್ರಕರಣ?
    ಅಝೀಝುರ್ರಹ್ಮಾನ್, ಹಮೀದುನ್ನಿಶಾ ದಂಪತಿ ವಿವಾಹವಾಗಿ ನಾಲ್ಕು ಮಕ್ಕಳನ್ನ ಹೊಂದಿದ್ದಾರೆ. ಹೀಗಿದ್ದೂ ಪತಿ ಅಝೀಝುರ್ರಹ್ಮಾನ್ 2ನೇ ವಿವಾಹವಾಗಿ, ಆಕೆಯೊಂದಿಗೂ ಮಕ್ಕಳನ್ನು ಹೊಂದಿದ್ದನು. ಈ ವಿಷಯ ಮೊದಲ ಪತ್ನಿಯಿಂದ ಮರೆ ಮಾಚಿದ್ದ. ಹೇಗೋ ಹಂಮೀದುನ್ನಿಶಾಗೆ ವಿಷಯ ತಿಳಿದು ಆಕೆ ತನ್ನ ತವರು ಮನೆಯಲ್ಲಿ ವಾಸಿಸುತ್ತಿದ್ದಳು. ನಂತರ ಅಝೀಝುರ್ರಹ್ಮಾನ್ ಕೌಟುಂಬಿಕ ನ್ಯಾಯಾಲಯ ಸಂಪರ್ಕಿಸಿ ಮೊದಲ ಪತ್ನಿ ತನ್ನೊಂದಿಗೆ ವಾಸಿಸುವಂತೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ಕೋರಿದ್ದ. ಕಳೆದ ಆಗಸ್ಟ್ನಲ್ಲಿ ಮನವಿಯನ್ನು ತಿರಸ್ಕರಿಸಿದ್ದ ನ್ಯಾಯಾಲಯ ಮಹಿಳೆಯರ ಹಕ್ಕುಗಳನ್ನೂ ಗೌರವಿಸುವಂತೆ ಹೇಳಿತ್ತು. ಈ ಆದೇಶವನ್ನು ಪ್ರಶ್ನಿಸಿ ಆತ ಹೈಕೋರ್ಟ್ ಮೊರೆ ಹೋಗಿದ್ದ.

    Live Tv
    [brid partner=56869869 player=32851 video=960834 autoplay=true]

  • ಮೂರು ಮಕ್ಕಳೊಂದಿಗೆ ಕರ್ನಾಟಕದ ಮಹಿಳೆ ಶವ ಮಹಾರಾಷ್ಟ್ರದ ಕೆರೆಯಲ್ಲಿ ಪತ್ತೆ

    ಮೂರು ಮಕ್ಕಳೊಂದಿಗೆ ಕರ್ನಾಟಕದ ಮಹಿಳೆ ಶವ ಮಹಾರಾಷ್ಟ್ರದ ಕೆರೆಯಲ್ಲಿ ಪತ್ತೆ

    ಚಿಕ್ಕೋಡಿ: ಕರ್ನಾಟಕ‌ (Karnataka) ಮೂಲದ ಬೆಳಗಾವಿ (Belagavi) ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಮಹಿಳೆ ಮತ್ತು ಮೂವರು ಪುಟ್ಟ ಹೆಣ್ಮಕ್ಕಳು ಮಹಾರಾಷ್ಟ್ರದ (Maharashtra) ಜತ್ತ ತಾಲೂಕಿನ ಬಿಳ್ಳೂರು ಗ್ರಾಮದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

    ಕಳೆದ ಭಾನುವಾರ ಮುಂಜಾನೆ ಮನೆ ಬಿಟ್ಟು ಹೋಗಿದ್ದ ಮಹಿಳೆ ಮತ್ತು ಮೂವರು ಪುಟ್ಟ ಹೆಣ್ಮಕ್ಕಳು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದವರಾದ ಸುನಿತಾ ತುಕಾರಾಮ್ ಮಾಳಿ ಮತ್ತು ಪುತ್ರಿಯರಾದ ಅಮೃತಾ, ಅಂಕಿತಾ ಹಾಗೂ ಐಶ್ವರ್ಯಾ ಕೆರೆಯಲ್ಲಿ ಶವವಾಗಿ ಪತ್ತೆಯಾದವರು. ಇದನ್ನೂ ಓದಿ: ಡಿಸಿ ಕಚೇರಿಗೆ ಬೀಗ ಹಾಕಿ ರೈತರಿಂದ ಪ್ರತಿಭಟನೆ

    POLICE JEEP

    ಇವರು ಮಹಾರಾಷ್ಟ್ರದ ಜತ್ತ ತಾಲೂಕಿನ ಬಿಳ್ಳೂರು ಗ್ರಾಮದಲ್ಲಿ ಮೃತಪಟ್ಟಿದ್ದಾರೆ. ಸುನಿತಾ ಅವರನ್ನು ಮಹಾರಾಷ್ಟ್ರದ ಬಿಳ್ಳೂರು ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿದ್ದು, ಅವರಿಗೆ ಮೂವರೂ ಹೆಣ್ಮಕ್ಕಳಿದ್ದಾರೆ. ಅಲ್ಲಿ ಸಂಸಾರ ಹೇಗೆ ನಡೆಯುತ್ತಿತ್ತು ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಆಕೆ ಒಮ್ಮಿಂದೊಮ್ಮೆಗೇ ನಾಪತ್ತೆಯಾಗಿ ಶವವಾಗಿ ಪತ್ತೆಯಾಗಿರುವುದರಿಂದ ಕೌಟುಂಬಿಕ ಸಮಸ್ಯೆಗಳೇ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ.

    ಸುನೀತಾ ಅವರು ಕಳೆದ ಭಾನುವಾರ ಮುಂಜಾನೆ ಒಮ್ಮಿಂದೊಮ್ಮೆಗೇ ನಾಪತ್ತೆಯಾಗಿದ್ದು, ಜತೆಗೆ ಮಕ್ಕಳೂ ಕಾಣಿಸುತ್ತಿರಲಿಲ್ಲ. ಮನೆಯವರು ಹುಡುಕಾಟಕ್ಕೆ ಆರಂಭ ಮಾಡಿದಾಗ ಸಂಜೆಯ ಹೊತ್ತಿಗೆ ಬಿಳ್ಳೂರು ಗ್ರಾಮದಲ್ಲಿ ಶವವಾಗಿ ಪತ್ತೆಯಾದರು. ಪ್ರಕರಣವು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಮಹಾರಾಷ್ಟ್ರದ ಜತ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಫುಟ್‌ಪಾತ್‌ ಮೇಲೆ ಚಲಾಯಿಸಿದ ಚಾಲಕ – ಅಪಘಾತಕ್ಕೆ ನಿವೃತ್ತ ಯೋಧ ಬಲಿ

    Live Tv
    [brid partner=56869869 player=32851 video=960834 autoplay=true]