Tag: women

  • ಕೂಡಿಬಾಳಲು ಒಪ್ಪಿಕೊಳ್ಳದ ಮಾಜಿ ಪತ್ನಿಗೆ HIV ರೋಗಿಯ ರಕ್ತ ಇಂಜೆಕ್ಟ್ ಮಾಡಿದ ಭೂಪ

    ಕೂಡಿಬಾಳಲು ಒಪ್ಪಿಕೊಳ್ಳದ ಮಾಜಿ ಪತ್ನಿಗೆ HIV ರೋಗಿಯ ರಕ್ತ ಇಂಜೆಕ್ಟ್ ಮಾಡಿದ ಭೂಪ

    – ಕ್ರೈಂ ಥ್ರಿಲರ್ ಟಿವಿ ಶೋ ನಿಂದ ಪ್ರೇರಣೆ
    – ತನಿಖೆ ವೇಳೆ ರೋಚಕ ರಹಸ್ಯ ಬಯಲು

    ನವದೆಹಲಿ: ಪ್ರತಿಷ್ಠಿತ ಟಿ.ವಿ ಕಾರ್ಯಕ್ರಮವೊಂದರಿಂದ (TV Show) ಪ್ರೇರಣೆ ಪಡೆದ ವ್ಯಕ್ತಿಯೊಬ್ಬ ತನ್ನೊಂದಿಗೆ ಕೂಡಿಬಾಳಲು ಒಪ್ಪಿಕೊಳ್ಳದ ಮಾಜಿ ಪತ್ನಿಗೆ ಹೆಚ್‌ಐವಿ ರೋಗಿಯ ರಕ್ತವನ್ನು ಇಂಜೆಕ್ಟ್ ಮಾಡಿರುವ ಘಟನೆ ಗುಜರಾತ್‌ನ (Gujarat) ಸೂರತ್‌ನಲ್ಲಿ  ನಡೆದಿದೆ.

    ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನ ಸೂರತ್ ಪೊಲೀಸರು (Surat Police) ಬಂಧಿಸಿದ್ದಾರೆ. ಬಳಿಕ ತನಿಖೆಯಲ್ಲಿ ಆತ ಕ್ರೈಂ (Crime) ಥ್ರಿಲ್ಲಿಂಗ್ ಟಿವಿ ಶೋ ನಿಂದ ಪ್ರೇರಿತನಾಗಿದ್ದಾನೆ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಪೆರೋಲ್ ಪಡೆದು ಪರಾರಿಯಾದಾತ ತನ್ನದೇ ಸಾವಿನ ಕತೆ ಕಟ್ಟಿದ – 15 ವರ್ಷಗಳ ಬಳಿಕ ಮತ್ತೆ ಅಂದರ್

    ಸಂತ್ರಸ್ತ ಮಹಿಳೆ ಹಾಗೂ ಆರೋಪಿ (Accused) ಕಳೆದ 15 ವರ್ಷಗಳ ಹಿಂದೆ ಮದುವೆಯಾಗಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ಕಳೆದ 2 ತಿಂಗಳಿನಿಂದ ನಿರಂತರ ಜಗಳದಿಂದಾಗಿ ವಿಚ್ಛೇದನ ಪಡೆದು ಇಬ್ಬರೂ ದೂರವಾಗಿದ್ದರು. ಒಂಟಿ ಜೀವನದಿಂದ ಬೇಸತ್ತಿದ್ದ ಆರೋಪಿ ಪತಿ ಮತ್ತೆ ತನ್ನ ಸಂಗಾತಿಯೊಂದಿಗೆ ಕೂಡಿಬಾಳಲು ನಿರ್ಧರಿಸಿದ್ದನು. ಆದ್ರೆ ಇದಕ್ಕೆ ಮಹಿಳೆ ಒಪ್ಪಿಕೊಳ್ಳಲಿಲ್ಲ. ಹಾಗಾಗಿ ಆಕೆ ವಿರುದ್ಧ ಸೇಡು ತೀರಿಸಿಕೊಳ್ಳಲು ಕಳೆದ ಒಂದು ತಿಂಗಳಿನಿಂದ ಸ್ಕೆಚ್ ಹಾಕಿ ಭೇಟಿಯಾಗಲು ಕಾಯುತ್ತಿದ್ದನು. ಇದನ್ನೂ ಓದಿ: ರಚನಾ ದಶರಥ್ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡ ಲೋಕೇಶ್ ಬಸವಟ್ಟಿ

    ಬಹುದಿನಗಳ ನಂತರ ಭಾನುವಾರ (ಡಿ.25) ಇಬ್ಬರೂ ಭೇಟಿಯಾಗಿದ್ದರು. ಇಬ್ಬರೂ ರೆಸ್ಟೋರೆಂಟ್ ಹೋಗಿ ಊಟ ಮಾಡಿ, ಶಾಪಿಂಗ್ ಸಹ ಮುಗಿಸಿದ್ದರು. ಸಂಜೆ ಸ್ವಲ್ಪ ಖಾಸಗಿ ಸಮಯ ಕಳೆಯೋದಕ್ಕಾಗಿ ಮೋರಾ ಭಾಗಲ್ ಪ್ರದೇಶದಲ್ಲಿ ಪ್ರತ್ಯೇಕ ಸ್ಥಳಕ್ಕೆ ತೆರಳಿದ್ದರು. ಈ ಸಮಯದಲ್ಲಿ ಮಾಜಿ ಪತಿ ಆಕೆಯ ಮನವೊಲಿಸಲು ಶತಾಯಗತಾಯ ಪ್ರಯತ್ನಿಸಿದ್ದಾನೆ. ಆದರೂ ಆಕೆ ಒಪ್ಪಿಕೊಳ್ಳದ ಮೇಲೆ, ತಬ್ಬಿಕೊಳ್ಳುವ ನೆಪದಲ್ಲಿ ಪೃಷ್ಠ ಭಾಗಕ್ಕೆ (ಹಿಂಬದಿಯ ಪಕ್ಕೆಯಿಂದ ಕೆಳಭಾಗ) ಹೆಚ್‌ಐವಿ ರೋಗಿಯ ರಕ್ತವನ್ನು ಇಂಜೆಕ್ಟ್ ಮಾಡಿದ್ದಾನೆ. ಸ್ವಲ್ಪ ಸಮಯದಲ್ಲೇ ಮಹಿಳೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾಳೆ. ಮರಳಿ ಪ್ರಜ್ಞೆ ಬಂದೊಡನೆ ವೈದ್ಯರಿಂದ ಮಾಹಿತಿ ಪಡೆದು ನಂತರ ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿಯನ್ನು ಬಂಧಿಸಿ ತನಿಖೆಗೆ ಒಳಪಡಿಸಿದಾಗ ಆತನ ಪ್ಯಾಂಟ್ ಜೇಬಿನಲ್ಲಿ ರಕ್ತದ ಕಲೆ ಪತ್ತೆಯಾಗಿದೆ.

    ಥ್ರಿಲ್ಲರ್ ಟಿವಿ ಶೋ ಪ್ರೇರಣೆ: ಮಹಿಳೆಗೆ ಇಂಜೆಕ್ಟ್ ಮಾಡಲು ಒಂದು ತಿಂಗಳ ಹಿಂದೆಯೇ ಯೋಜಿಸಿದ್ದನು. ಒಂದು ಟಿವಿ ಶೋನಿಂದ ಪ್ರೇರಣೆ ಪಡೆದಿದ್ದನು. ಆ ಟಿವಿ ಶೋನಲ್ಲಿ `ವ್ಯಕ್ತಿಯೊಬ್ಬ ಹೆಣ್ಣು ನಾಯಿಗೆ ರಕ್ತವನ್ನು ಇಂಜೆಕ್ಟ್ ಮಾಡುತ್ತಾನೆ’ ಅದನ್ನು ನಾನೂ ನೋಡಿದ್ದೆ ಎಂದು ಆರೋಪಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ರಕ್ತ ಹೇಗೆ ಪಡೆದುಕೊಂಡನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ರಸ್ತೆ ಬದಿ ಮಹಿಳೆ ಅನುಮಾನಾಸ್ಪದ ಸಾವು

    ರಸ್ತೆ ಬದಿ ಮಹಿಳೆ ಅನುಮಾನಾಸ್ಪದ ಸಾವು

    ರಾಮನಗರ: ಮಹಿಳೆಯೊಬ್ಬರು (Women) ರಸ್ತೆ ಬದಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ರಾಮನಗರ (Ramanagara) ಜಿಲ್ಲೆಯಲ್ಲಿ ನಡೆದಿದೆ.

    ಕನಕಪುರ (Kanakapura) ತಾಲ್ಲೂಕಿನ ಮಾರಣ್ಣ ದೊಡ್ಡಿಯ ರಸ್ತೆ ಬಳಿ ಮಹಿಳೆಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಮೃತ ಮಗಿಳೆ ಶೃತಿ (32) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ತೋಟದ ಮನೆಗೆ ಹೋಗಲು ಅಡ್ಡಿಯಾಗಿದ್ದನೆಂದು ಗಂಡನನ್ನೇ ಕೊಲೆಗೈದ ಪತ್ನಿ

    ಕನಕಪುರ ಟೌನ್ ಕುರುಪೇಟೆ ಸೊಲ್ಲಾಪುರದಮ್ಮ ಬೀದಿ ನಿವಾಸಿ ಶೃತಿಯನ್ನ ಕೊಲೆ ಮಾಡಿ ರಸ್ತೆ ಬದಿ ಮೃತದೇಹ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಸಾತನೂರು ಪೊಲೀಸರು (Sathanur Police) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆಗೆ 6 ಸ್ಪರ್ಧಿಗಳ ಎಂಟ್ರಿ: ಕಾದಿದೆ ಮತ್ತೊಂದು ಶಾಕ್

    ಇತ್ತೀಚೆಗೆ ರಾಮನಗರ ಜಿಲ್ಲೆಯ ಕೆಂಪೇಗೌಡನ ದೊಡ್ಡಿ ಬಳಿ ದಶಪಥ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಹೆಂಡತಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಚನ್ನಪಟ್ಟಣ ತಾಲೂಕಿನ ರಾಮನರಸಿಂಹರಾಜಪುರ (ಕೃಷ್ಣಾಪುರ) ನಿವಾಸಿ ದೇಸೇಗೌಡನನ್ನು(45) ಕೊಲೆಗೈದಿರುವುದು ಸಾಬೀತಾಗಿತ್ತು. ಬಳಿಕ ಹೆಂಡತಿ ಹಾಗೂ ಪ್ರಿಯಕರನನ್ನ ಬಂಧಿಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಹಿಜಬ್ ಸೂಚನೆ ಕಡೆಗಣನೆ, ಮಹಿಳೆಯರು ಮದುವೆಗೆ ಹೋಗುವ ಉಡುಪು ಧರಿಸುತ್ತಾರೆ: ತಾಲಿಬಾನ್ ಸಮರ್ಥನೆ

    ಹಿಜಬ್ ಸೂಚನೆ ಕಡೆಗಣನೆ, ಮಹಿಳೆಯರು ಮದುವೆಗೆ ಹೋಗುವ ಉಡುಪು ಧರಿಸುತ್ತಾರೆ: ತಾಲಿಬಾನ್ ಸಮರ್ಥನೆ

    ಕಾಬೂಲ್: ತಾಲಿಬಾನ್ (Taliban) ಸರ್ಕಾರ ಅಫ್ಘಾನಿಸ್ತಾನದಲ್ಲಿ (Afghanistan) ಮಹಿಳೆಯರ (Women) ವಿಶ್ವವಿದ್ಯಾಲಯ (University) ಶಿಕ್ಷಣವನ್ನು ನಿಷೇಧಿಸಿದ್ದು, ಜಾಗತಿಕವಾಗಿ ಟೀಕೆಗಳಿಗೆ ಗುರಿಯಾಗಿದೆ. ಇದೀಗ ತಾಲಿಬಾನ್ ಸರ್ಕಾರದ ಉನ್ನತ ಶಿಕ್ಷಣ ಸಚಿವರು ಮಹಿಳೆಯರನ್ನು ಶಿಕ್ಷಣದಿಂದ ದೂರವಿಡುವ ನಿರ್ಧಾರಕ್ಕೆ ಸಮರ್ಥನೆ ನೀಡಿದ್ದಾರೆ.

    ಮಹಿಳೆಯರ ಶಿಕ್ಷಣವನ್ನು ನಿಷೇಧಿಸುವ ವಿಚಾರದ ಬಗ್ಗೆ ಮೊದಲ ಬಾರಿ ಸಾರ್ವಜನಿಕವಾಗಿ ಮಾತನಾಡಿರುವ ತಾಲಿಬಾನ್ ಸಚಿವ ಮೊದಮ್ಮದ್ ನದೀಮ್, ವಿಶ್ವವಿದ್ಯಾಲಯಗಳಲ್ಲಿ ಹುಡುಗರು ಹಾಗೂ ಹುಡುಗಿಯರು ಜೊತೆಯಾಗಿ ಓದುವುದನ್ನು ತಪ್ಪಿಸುವ ಸಲುವಾಗಿ ಮಹಿಳೆಯರಿಗೆ ವಿಶ್ವವಿದ್ಯಾಲಯಗಳ ಶಿಕ್ಷಣವನ್ನು ನಿಷೇಧಿಸಲಾಗಿದೆ. ವಿಶ್ವವಿದ್ಯಾಲಯಗಳ ಕೆಲವು ವಿಚಾರಗಳು ಇಸ್ಲಾಂನ ತತ್ವಗಳನ್ನು ಉಲ್ಲಂಘಿಸುತ್ತವೆ. ಮುಂದಿನ ಸೂಚನೆ ಬರುವವರೆಗೂ ಈ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಅವರು ತಿಳಿಸಿದ್ದಾರೆ.

    ಹುಡುಗಿಯರು ವಿಶ್ವವಿದ್ಯಾಲಯಕ್ಕೆ ಹೋಗುವ ಸಂದರ್ಭ ಮದುವೆಗೆ ಹೋಗುವವರಂತೆ ಉಡುಪುಗಳನ್ನು ಧರಿಸಿಕೊಂಡು ಹೋಗುತ್ತಿದ್ದಾರೆ. ಅವರು ಕಟ್ಟುನಿಟ್ಟಾಗಿ ಹಿಜಬ್ ಧರಿಸುವ ಸೂಚನೆಯನ್ನೂ ಕಡೆಗಣಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೂಗಿನ ಮೂಲಕ ತೆಗೆದುಕೊಳ್ಳುವ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ

    ವಿಶ್ವವಿದ್ಯಾಲಯಗಳ ಕೆಲವು ವಿಜ್ಞಾನ ವಿಷಯಗಳು ಮಹಿಳೆಯರ ಓದಿಗೆ ಸೂಕ್ತವಾಗಿಲ್ಲ. ಎಂಜಿನಿಯರಿಂಗ್, ಕೃಷಿ ಹಾಗೂ ಇತರ ಕೆಲವು ಕೋರ್ಸ್‌ಗಳು ವಿದ್ಯಾರ್ಥಿನಿಯರ ಘನತೆ, ಗೌರವ ಹಾಗೂ ಅಫ್ಘಾನ್ ಸಂಸ್ಕೃತಿಗೆ ಹೊಂದಿಕೆಯಾಗುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

    ತಾಲಿಬಾನ್‌ನ ನಿರ್ಧಾರವನ್ನು ಮುಸ್ಲಿಂ ಬಹುಸಂಖ್ಯಾತ ಸೌದಿ ಅರೇಬಿಯಾ, ಟರ್ಕಿ, ಕತಾರ್ ಸೇರಿದಂತೆ ಹಲವು ದೇಶಗಳಲ್ಲಿನ ಜನರು ವ್ಯಾಪಕವಾಗಿ ಖಂಡಿಸಿದ್ದಾರೆ. ಆದರೆ ಅಫ್ಘಾನಿಸ್ತಾನದ ಆಂತರಿಕ ವ್ಯವಹಾರಗಳಲ್ಲಿ ವಿದೇಶಿಗರು ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು ಎಂದು ನದೀಮ್ ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್ ಜೊತೆಗಿನ ಯುದ್ಧವನ್ನು ಶೀಘ್ರವೇ ನಿಲ್ಲಿಸುತ್ತೇವೆ: ಪುಟಿನ್

    ಸದ್ಯ ಮಹಿಳೆಯರಿಗೆ ವಿಶ್ವವಿದ್ಯಾಲಯಗಳನ್ನು ಮುಚ್ಚಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಈ ನಿರ್ಧಾರವನ್ನು ಪರಿಶೀಲಿಸುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಓದಿದ್ದು 8ನೇ ತರಗತಿ, ಆದ್ರೆ IPS ಅಧಿಕಾರಿ ಎಂದು ಮಹಿಳೆಯರನ್ನು ನಂಬಿಸಿ ಲಕ್ಷ ಲಕ್ಷ ಹಣ ದೋಚಿದ

    ಓದಿದ್ದು 8ನೇ ತರಗತಿ, ಆದ್ರೆ IPS ಅಧಿಕಾರಿ ಎಂದು ಮಹಿಳೆಯರನ್ನು ನಂಬಿಸಿ ಲಕ್ಷ ಲಕ್ಷ ಹಣ ದೋಚಿದ

    ನವದೆಹಲಿ: ಓದಿದ್ದು 8ನೇ ತರಗತಿ, ಆದರೂ ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು 12ಕ್ಕೂ ಹೆಚ್ಚು ಮಹಿಳೆಯರಿಗೆ (Women) ಮೋಸ ಮಾಡಿ ಲಕ್ಷಾಂತರ ಹಣ (Money) ಕೊಳ್ಳೆ ಹೊಡೆದ ಘಟನೆ ದೆಹಲಿಯಲ್ಲಿ (New Delhi) ನಡೆದಿದೆ.

    ವಿಕಾಸ್ ಗೌತಮ್ ಬಂಧಿತ ಆರೋಪಿ. ಈತ ವಿಕಾಸ್ ಯಾದವ್ ಎಂಬ ಹೆಸರಿನಲ್ಲಿ ಟ್ವಿಟ್ಟರ್, ಇನ್‍ಸ್ಟಾಗ್ರಾಮ್ ಹಾಗೂ ಫೇಸ್‍ಬುಕ್‍ನಲ್ಲಿ ನಕಲಿ ಖಾತೆಯನ್ನು ರಚಿಸಿದ್ದ. ಅಷ್ಟೇ ಅಲ್ಲದೇ ಖಾತೆಯನ್ನು ಅಧಿಕೃತ ಎಂದು ತೊರಿಸಲು ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದ. ತಾನು ಸರ್ಕಾರಿ ಅಧಿಕಾರಿ ಎಂದು ಹೇಳಲು ಸರ್ಕಾರಿ ಕಾರಿನ ಮುಂದೆ ನಿಂತು ಪೋಸ್ ನೀಡಿದ್ದ.

    ಅದಾದ ಬಳಿಕ ಸಂಜಯ್ ಗಾಂಧಿ ಆಸ್ಪತ್ರೆಯ ವೈದ್ಯೆಯೊಬ್ಬಳು (Doctor) ಆನ್‍ಲೈನ್‍ನಲ್ಲಿ ಪರಿಚಯವಾಗಿದ್ದಳು. ಪ್ರತಿದಿನ ಅವಳೊಂದಿಗೆ ಚಾಟ್ ಮಾಡಿ, ಅವಳನ್ನು ತಾನು ಸರ್ಕಾರಿ ಅಧಿಕಾರಿ ಎಂದು ನಂಬಿಸಿದ್ದಾನೆ. ಅಷ್ಟೇ ಅಲ್ಲದೇ ಆತ ವೈದ್ಯೆಯಿಂದ 25,000 ರೂ.ಯನ್ನು ಪಡೆದಿದ್ದಾನೆ. ಆದರೆ ವೈದ್ಯೆಗೆ ಈತ ಮೋಸ ಮಾಡುತ್ತಿದ್ದಾನೆ ಎಂದು ಸಂಶಯ ಬಂದಿದೆ. ಈ ಹಿನ್ನೆಲೆಯಲ್ಲಿ ವೈದ್ಯೆ ಪೊಲೀಸರ ಬಳಿ ಹೋಗಲು ನಿರ್ಧರಿಸಿದ್ದಾಳೆ. ಆದರೆ ವಿಕಾಸ್ ತನಗೆ ರಾಜಕೀಯ ನಾಯಕರ ಸಂಪರ್ಕವಿದೆ ಎಂದು ಬೆದರಿಕೆ ಹಾಕಿದ್ದಾನೆ.

    ಅದಕ್ಕೂ ಹೆದರದ ವೈದ್ಯೆ ಪೊಲೀಸರಿಗೆ ದೂರು ನೀಡಿದ್ದಾಳೆ. ಮಹಿಳೆಯ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರಿಗೆ ವಿಕಾಸ್ ಇದೇ ರೀತಿ ಹೇಳಿಕೊಂಡು ಹತ್ತಾರು ಮಹಿಳೆಯರ ಬಳಿ ಲಕ್ಷಾಂತರ ರೂ. ವಂಚಿಸಿದ್ದಾನೆ ಎಂಬ ವಿಷಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಚುನಾವಣೆಗೆ ಸಮೀಪದಲ್ಲಿ ಡಿಕೆಶಿಗೆ ಶಾಕ್ – 5 ವರ್ಷದಲ್ಲಿ ಎಷ್ಟು ಆಸ್ತಿ ಹೆಚ್ಚಾಗಿತ್ತು? ತನಿಖೆ ಎಲ್ಲಿಯವರೆಗೆ ಬಂದಿದೆ?

    ಘಟನೆಗೆ ಸಂಬಂಧಿಸಿ ವಿಕಾಸ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಈತ ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿ. 8ನೇ ತರಗತಿ ಉತ್ತೀರ್ಣರಾದ ನಂತರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕೆಲವು ವೆಲ್ಡಿಂಗ್ ಕೋರ್ಸ್ ಮಾಡಿದ್ದ. ಅದಾದ ಬಳಿಕ ವಿಕಾಸ್ ನಾಗರಿಕ ಸೇವಾ ಪರೀಕ್ಷಾ ಕೋಚಿಂಗ್ ಕೇಂದ್ರಗಳ ಕೇಂದ್ರವಾದ ಉತ್ತರ ದೆಹಲಿಯ ಮುಖರ್ಜಿ ನಗರದ ರೆಸ್ಟೋರೆಂಟ್‍ನಲ್ಲಿಯೂ ಕೆಲಸ ಮಾಡುತ್ತಿದ್ದ. ಆ ಪ್ರದೇಶದಲ್ಲಿ ನಾಗರಿಕ ಸೇವೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ನೋಡಿ, ತಾನೂ ಐಪಿಎಸ್ ಅಧಿಕಾರಿಯಂತೆ ನಟಿಸುವ ಆಲೋಚನೆ ಬಂದಿದೆ ಎಂಬುದನ್ನು ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾನೆ. ಇದನ್ನೂ ಓದಿ: ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳ ಎನ್‌ಕೌಂಟರ್ – 3 ಲಷ್ಕರ್ ಉಗ್ರರ ಸಾವು

    Live Tv
    [brid partner=56869869 player=32851 video=960834 autoplay=true]

  • ಬಸ್ ನಿಲ್ದಾಣದಲ್ಲಿ ಅಧಿಕಾರಿಗಳಿಗೆ ಮಚ್ಚು ತೋರಿಸಿದ ಪ್ರಕರಣ – ದಂಪತಿ ವಿರುದ್ಧ ರೌಡಿಶೀಟರ್ ಕೇಸ್ ಹಾಕಿ ಅರೆಸ್ಟ್

    ಬಸ್ ನಿಲ್ದಾಣದಲ್ಲಿ ಅಧಿಕಾರಿಗಳಿಗೆ ಮಚ್ಚು ತೋರಿಸಿದ ಪ್ರಕರಣ – ದಂಪತಿ ವಿರುದ್ಧ ರೌಡಿಶೀಟರ್ ಕೇಸ್ ಹಾಕಿ ಅರೆಸ್ಟ್

    ಮೈಸೂರು: ಅಧಿಕಾರಿಗಳು ಬಾಡಿಗೆ ಕೇಳಿದ್ದೆ ಮಹಾ ಅಪರಾಧವೆಂಬಂತೆ ಮಹಿಳೆಯೊಬ್ಬರು ಮಚ್ಚು ಹಿಡಿದು ಸರ್ಕಾರಿ ಅಧಿಕಾರಿಗಳಿಗೆ ಹಲ್ಲೆ ಮಾಡಲು ಮುಂದಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಹೀಗೆ ಮಚ್ಚು ತೋರಿಸಿ ಬೆದರಿಸಿದ ಮಹಿಳೆ ಹಾಗೂ ಆಕೆ ಪತಿ ಇಬ್ಬರು ಈಗ ಜೈಲು ಸೇರಿದ್ದಾರೆ.

    ಮೈಸೂರಿನ (Mysuru) ಕಾಂಗ್ರೆಸ್ ಮುಖಂಡ ಶಫಿ ಪತ್ನಿ ಸಯ್ಯದ್ ಮೈಬುನಿಸಾ ಅವರನ್ನು ಮೈಸೂರಿನ ಪೊಲೀಸರು ಕೊಡಗಿನ (Kodagu) ವಿರಾಜಪೇಟೆಯಲ್ಲಿ (Virajpet) ಬಂಧಿಸಿದ್ದಾರೆ. ಜೊತೆಗೆ ರೌಡಿಶೀಟರ್ ಕೇಸ್ ದಾಖಲಿಸಿದ್ದಾರೆ. ಇದನ್ನೂ ಓದಿ: ಅಧಿಕಾರಿಗೆ ಹಲ್ಲೆ ನಡೆಸಲು ಮಚ್ಚು ಹಿಡಿದು ಬಂದ ಮಹಿಳೆ

    ಮೈಸೂರಿನ ಸಾತಗಳ್ಳಿಯ ಬಸ್ ಡಿಪೋ ಬಳಿ ಅಧಿಕಾರಿಗಳ ವಿರುದ್ಧ ಮಹಿಳೆ ಕೂಗಾಡಿದ್ದರು. ಅಧಿಕಾರಿಗಳು ಬಾಕಿ ಇದ್ದ ಬಾಡಿಗೆ ಹಣ ಕಟ್ಟುವಂತೆ ನೋಟಿಸ್ ನೀಡಿದ್ದಕ್ಕೆ ಅವರ ವಿರುದ್ಧ ಕೂಗಾಡಿದ್ದಲ್ಲದೇ ಮಚ್ಚು ತೋರಿಸಿ ಬೆದರಿಕೆ ಕೂಡ ಹಾಕಿದ್ದರು.

    ಕಾಂಗ್ರೆಸ್ ಮುಖಂಡ ಶಫೀ ಅಹಮದ್ ಸಾತಗಳ್ಳಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದ ಸ್ಥಳವನ್ನ 12 ವರ್ಷಗಳ ಅವಧಿಗೆ ಪರವಾನಗಿ ನೀಡಿ ಕರಾರು ಒಪ್ಪಂದ ಮಾಡಿಕೊಂಡಿದ್ದ. ಬಾಡಿಗೆ ಪಡೆದ ಮಳಿಗೆಗಳನ್ನ 6 ಕ್ಕೂ ಹೆಚ್ಚು ವಿವಿಧ ಸಂಸ್ಥೆಗಳಿಗೆ ಅಕ್ರಮವಾಗಿ ಬಾಡಿಗೆಗೆ ನೀಡಿದ್ದ. ಅವರಿಂದ ಪ್ರತಿ ತಿಂಗಳು ತಪ್ಪದೆ ಬಾಡಿಗೆ ಪಡೆದಿದ್ದಾನೆ. ಆದರೆ ಶಫೀಕ್ ಅಹಮದ್ ಬಾಡಿಗೆಯನ್ನ ಸಾರಿಗೆ ಇಲಾಖೆಗೆ ಸರಿಯಾಗಿ ಪಾವತಿ ಮಾಡಿಲ್ಲ. ಒಂದಲ್ಲ ಎರೆಡಲ್ಲಾ ಬರೋಬ್ಬರಿ 1 ಕೋಟಿ 80 ಲಕ್ಷ ಬಾಡಿಗೆ ಹಣ ಬಾಕಿ ಉಳಿಸಿಕೊಂಡಿದ್ದ. ಈ ಸಂಬಂಧ ಸಾಕಷ್ಟು ಭಾರಿ ಅಧಿಕಾರಿಗಳು ಹೇಳಿದರೂ ಸ್ಪಂದಿಸಿಲ್ಲ. ಕಡೆಗೆ ಅಧಿಕಾರಿಗಳು ಕೋರ್ಟ್ ಮೂಲಕ ಕಾನೂನಾತ್ಮಕವಾಗಿ ನೋಟಿಸ್ ಜಾರಿಗೊಳಿಸಿದ್ದರು. ನೋಟಿಸ್ ನೀಡಿದ್ದಕ್ಕೆ ಪತಿ ಹಾಗೂ ಪತ್ನಿ ಇಬ್ಬರೂ ಬಸ್ ಡಿಪೋ ಬಳಿ ಅಧಿಕಾರಿಗಳ ಜೊತೆ ಗಲಾಟೆ ಮಾಡಿದ್ದರು. ಇದನ್ನೂ ಓದಿ: ಕುರಿಕೋಟಾ ಸೇತುವೆ ಬಳಿ ಯುವತಿ ಶವ ಪತ್ತೆ – ಆತ್ಮಹತ್ಯೆ ಶಂಕೆ?

    ಮಚ್ಚನ್ನ ತೋರಿಸಿ ಅವಾಚ್ಯ ಶಬ್ಧಗಳಿಂದ ಅಧಿಕಾರಿಗಳನ್ನ ನಿಂದಿಸಿದ್ದರು. ಅಧಿಕಾರಿಗಳು ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಪ್ರಕರಣ ದಾಖಲಾಗುತ್ತಿದಂತೆ ದಂಪತಿ ಪರಾರಿಯಾಗಿದ್ದರು. ಅವರಿಗಾಗಿ ಪೊಲೀಸರು ಶೋಧ ನಡೆಸಿದ್ದರು. ಘಟನೆ ನಡೆದು ಐದು ದಿನ ಬಳಿಕ ಈ ದಂಪತಿಯನ್ನು ಮೈಸೂರು ಪೊಲೀಸರು ಕೊಡಗಿನ ವಿರಾಜಪೇಟೆಯಲ್ಲಿ ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 4 ಕಾಲುಗಳಿರುವ ಮಗುವಿಗೆ ಜನ್ಮ ನೀಡಿದ ಮಹಿಳೆ

    4 ಕಾಲುಗಳಿರುವ ಮಗುವಿಗೆ ಜನ್ಮ ನೀಡಿದ ಮಹಿಳೆ

    ಭೋಪಾಲ್: ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್ (Gwalior) ಜಿಲ್ಲೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಕಾಲುಗಳಿರುವ ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ.

    ಸಿಕಂದರ್ ಕಂಪೂ ಪ್ರದೇಶದ ಆರತಿ ಕುಶ್ವಾಹ ಅವರು ಕಮಲರಾಜ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹೆಣ್ಣು ಮಗುವಿನ ತೂಕ 2.3 ಕೆಜಿ ಇದೆ. ಗ್ವಾಲಿಯರ್‌ನ ಜಯರೋಗ ಆಸ್ಪತ್ರೆಯ ಅಧೀಕ್ಷಕರೊಂದಿಗೆ ವೈದ್ಯರ ತಂಡವು ಶಿಶುವನ್ನು ಪರೀಕ್ಷೆಗೊಳಪಡಿಸಿತು. ಇದನ್ನೂ ಓದಿ: 100 ದಿನ ಪೂರೈಸಿದ ಭಾರತ್ ಜೋಡೋ ಯಾತ್ರೆ – ಇದು ಮಹಾಸಾಧನೆ ಅಂದ್ರು ಕಾಂಗ್ರೆಸ್ ನಾಯಕರು

    ಜಯರೋಗ್ಯ ಆಸ್ಪತ್ರೆ ಸೂಪರಿಂಟೆಂಡೆಂಟ್ ಡಾ. ಆರ್.ಕೆ.ಎಸ್.ಧಕಡ್ ಮಾತನಾಡಿ, ನಾಲ್ಕು ಕಾಲಿರುವ ಮಗು ಜನಿಸಿದೆ. ಆ ಮಗುವಿಕೆ ಅಂಗ ವಿಕಲತೆ ಇದೆ. ಈ ರೀತಿಯ ಹೆಚ್ಚಿನ ಅಂಗಗಳೊಂದಿಗೆ ಜನಿಸುವ ಶಿಶುಗಳಿಗೆ ವೈದ್ಯಕೀಯ ವಿಜ್ಞಾನದ ಭಾಷೆಯಲ್ಲಿ ಇಶಿಯೋಪಾಗಸ್ ಎಂದು ಕರೆಯಲಾಗುತ್ತದೆ. ಈ ಹೆಣ್ಣು ಮಗುವಿನ ಸೊಂಟದ ಕೆಳಗಿನ ಭಾಗವು ಎರಡು ಹೆಚ್ಚುವರಿ ಕಾಲುಗಳೊಂದಿಗೆ ಅಭಿವೃದ್ಧಿಗೊಂಡಿದೆ. ಆದರೆ ಆ ಕಾಲುಗಳು ನಿಷ್ಕ್ರಿಯವಾಗಿವೆ ಎಂದು ತಿಳಿಸಿದ್ದಾರೆ.

    ಮಕ್ಕಳ ವಿಭಾಗದ ವೈದ್ಯರು ದೇಹದ ಯಾವುದೇ ಭಾಗದಲ್ಲಿ ಬೇರೆ ಯಾವುದೇ ವಿಕಾರವಿದೆಯೇ ಎಂದು ಪರಿಶೀಲಿಸುತ್ತಿದ್ದಾರೆ. ಮಗುವಿಗೆ ಯಾವುದೇ ಅಪಾಯವಿಲ್ಲ ಎಂದರೆ, ನಂತರ ಆ ಕಾಲುಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಲಾಗುತ್ತದೆ. ಇದರಿಂದ ಮಗು ಮುಂದೆ ಸಹಜ ಜೀವನ ನಡೆಸಬಹುದು ಎಂದು ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಝಿಕಾ ವೈರಸ್‌ ಭೀತಿ – ಚಿಕಿತ್ಸಾ ಕ್ರಮ ಪಟ್ಟಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

    ಈ ವರ್ಷದ ಮಾರ್ಚ್‌ನಲ್ಲಿ ಮಧ್ಯಪ್ರದೇಶದ ರತ್ಲಾಮ್‌ನಲ್ಲಿ ಮಹಿಳೆಯೊಬ್ಬರು ಎರಡು ತಲೆ, ಮೂರು ಕೈಗಳು ಮತ್ತು ಎರಡು ಕಾಲುಗಳಿರುವ ಮಗುವಿಗೆ ಜನ್ಮ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಆರ್‌ಎಸ್‌ಎಸ್‌ನಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ, ಸೀತಾ ಮಾತೆಯನ್ನು ಅವಮಾನಿಸುತ್ತಿದೆ: ರಾಹುಲ್ ಗಾಂಧಿ

    ಆರ್‌ಎಸ್‌ಎಸ್‌ನಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ, ಸೀತಾ ಮಾತೆಯನ್ನು ಅವಮಾನಿಸುತ್ತಿದೆ: ರಾಹುಲ್ ಗಾಂಧಿ

    ಜೈಪುರ: ಆರ್‌ಎಸ್‌ಎಸ್ (RSS) ಮಹಿಳೆಯರನ್ನು (Women) ನಿಗ್ರಹಿಸುತ್ತಿದೆ. ಇದಕ್ಕಾಗಿಯೇ ಆರ್‌ಎಸ್‌ಎಸ್ ಸಂಘಟನೆಯಲ್ಲಿ ಯಾವುದೇ ಮಹಿಳಾ ಸದಸ್ಯರಿಲ್ಲ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಆರೋಪಿಸಿದ್ದಾರೆ.

    ರಾಜಸ್ಥಾನದಲ್ಲಿ (Rajasthan) ಸಾಗುತ್ತಿರುವ ಭಾರತ್ ಜೋಡೋ ಯಾತ್ರೆ (Bharat Jodo Yatra) ವೇಳೆ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ (BJP) ಹಾಗೂ ಆರ್‌ಎಸ್‌ಎಸ್‌ನ ಯೋಜನೆ ಭಯವನ್ನು ಹರಡುವುದು. ಆದರೆ ನಮ್ಮ ನಿಲುವು ಈ ಭಯ ಹಾಗೂ ದ್ವೇಷದ ವಿರುದ್ಧ ನಿಲ್ಲುವುದಾಗಿದೆ ಎಂದು ತಿಳಿಸಿದರು.

    ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರೇ ನಂಬುವ ದೇವರಿಗೆ ಜೈಕಾರ ಹಾಕುವಾಗ ಅವರು ಜೈ ಸೀತಾರಾಮ್ ಬದಲಿಗೆ ಕೇವಲ ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಾರೆ. ಇದು ಸೀತಾ ಮಾತೆಗೆ ಅವಮಾನ ಮಾಡಿದಂತೆ ಎಂದು ರಾಗಾ ಕಿಡಿಕಾರಿದರು.

    ಅವರ ಸಂಘಟನೆಯಲ್ಲಿ ಮಹಿಳೆಯರೇ ಸಿಗುವುದಿಲ್ಲ. ಆರ್‌ಎಸ್‌ಎಸ್‌ನಲ್ಲಿ ಮಹಿಳೆಯರೇ ಇಲ್ಲ. ಅವರು ಮಹಿಳೆಯರನ್ನು ನಿಗ್ರಹಿಸುತ್ತಾರೆ. ತಮ್ಮ ಸಂಘಟನೆಗೆ ಮಹಿಳೆಯರು ಪ್ರವೇಶಿಸುವುದನ್ನು ನಿಗ್ರಹಿಸುತ್ತಾರೆ ಎಂದು ಟೀಕಿಸಿದರು.

    ನಾನು ಆರ್‌ಎಸ್‌ಎಸ್ ಹಾಗೂ ಬಿಜೆಪಿಯವರನ್ನು ಕೇಳಲು ಬಯಸುತ್ತೇನೆ. ನೀವು ಜೈ ಶ್ರೀರಾಮ್ ಎಂದು ಹೇಳುತ್ತೀರಿ, ಜೈ ಸೀತಾರಾಮ್ ಎಂದು ಏಕೆ ಹೇಳುವುದಿಲ್ಲ? ಸೀತಾ ಮಾತೆಯನ್ನು ಏಕೆ ತೆಗೆದುಹಾಕುತ್ತೀರಿ? ಆಕೆಯನ್ನು ಏಕೆ ಅವಮಾನಿಸುತ್ತೀರಿ? ಮಾತ್ರವಲ್ಲದೇ ಭಾರತದ ಮಹಿಳೆಯನ್ನೇ ನೀವು ಏಕೆ ಅವಮಾನಿಸುತ್ತೀರಿ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬಿಕ್ಕಟ್ಟಿಗೆ ಮೂಲ ಕಾರಣವಾಗಿದ್ದ ವಿಷಯಕ್ಕೆ ತೆರೆ – ಕೊನೆಗೂ ಬಿಎಸ್‍ವೈಗೆ ಮಣಿದ ಸಿಎಂ

    ಈ ಹಿಂದೆಯೂ ಈ ವಿಚಾರವನ್ನು ರಾಹುಲ್ ಗಾಂಧಿ ಪ್ರಸ್ತಾಪಿಸಿದಾಗ ಸಂಘಪರಿವಾರದ ನಾಯಕರು ಆರ್‌ಎಸ್‌ಎಸ್‌ನಲ್ಲಿ ರಾಷ್ಟ್ರ ಸೇವಿಕಾ ಸಮಿತಿ ಎಂಬ ಮಹಿಳಾ ವಿಭಾಗವಿದೆ ಎಂದು ತಿರುಗೇಟು ನೀಡಿದ್ದರು.

    ಸಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಈಗ ರಾಜಸ್ಥಾನದಲ್ಲಿ ಸಾಗುತ್ತಿದೆ. ಶುಕ್ರವಾರಕ್ಕೆ ಜೋಡೋ ಯಾತ್ರೆ 100 ದಿನ ಪೂರೈಸಲಿದೆ. ಇದನ್ನೂ ಓದಿ: ತನ್ನ ಚುನಾವಣೆಯ ಗೆಲುವಿನ ರಹಸ್ಯ ರಿವೀಲ್ ಮಾಡಿದ ಮೋದಿ

    Live Tv
    [brid partner=56869869 player=32851 video=960834 autoplay=true]

  • ಸಾವು-ಬದುಕಿನ ನಡುವೆ ಹೋರಾಡ್ತಿದ್ದ 185 ಕೆಜಿ ತೂಕದ ಮಹಿಳೆ ಜೀವ ಉಳಿಸಿದ ವೈದ್ಯರು

    ಸಾವು-ಬದುಕಿನ ನಡುವೆ ಹೋರಾಡ್ತಿದ್ದ 185 ಕೆಜಿ ತೂಕದ ಮಹಿಳೆ ಜೀವ ಉಳಿಸಿದ ವೈದ್ಯರು

    ಹಾವೇರಿ: ತೀವ್ರ ಉಸಿರಾಟದ ಸಮಸ್ಯೆಯಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ 185 ಕೆಜಿ ತೂಕದ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ವೈದ್ಯರು ಜೀವ ಉಳಿಸಿದ್ದಾರೆ.

    ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಸೋಮಲಾಪುರ ಗ್ರಾಮದ 48 ವರ್ಷದ ಚಂದ್ರಮ್ಮ ಎಂಬ ಮಹಿಳೆಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಚಂದ್ರಮ್ಮ ಬರೋಬ್ಬರಿ 185 ಕೆಜಿ ತೂಕವಿದ್ದು, ಹೊಟ್ಟೆಯಲ್ಲಿನ ಕರಳುಗಳು ಒಂದಕ್ಕೊಂದು ತಳುಕು ಹಾಕಿಕೊಂಡಿದ್ದವು. ದೇಹದ ತೂಕ ಅಧಿಕವಾಗಿದ್ದು ಒಂದೆಡೆಯಾದರೆ, ಕರುಳುಗಳು ಒಂದಕ್ಕೊಂದು ತಳುಕು ಹಾಕಿಕೊಂಡಿದ್ದವು. ಇದರಿಂದ ಆಗಾಗ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಚಂದ್ರಮ್ಮಳಿಗೆ ಕೆಲವು ದಿನಗಳಿಂದ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಉಸಿರಾಟದ ಪ್ರಮಾಣ ಸಾಮಾನ್ಯವಾಗಿ 90 ರಿಂದ 92 ಇರಬೇಕಿತ್ತು. ಆದರೆ ಚಂದ್ರಮ್ಮಳ ಉಸಿರಾಟದ ಪ್ರಮಾಣ ಕೇವಲ 40 ಇತ್ತು. ಇದರಿಂದ ತಾಯಿ ಬದುಕುವುದೇ ಇಲ್ಲವೆಂದು ಚಂದ್ರಮ್ಮಳ ಪುತ್ರಿ ಚೈತ್ರಾ ಭಾವಿಸಿದ್ದಳು. ಇದನ್ನೂ ಓದಿ: ಆಡಳಿತದಲ್ಲಿ ಗುಜರಾತ್ ಮಾದರಿ, ಟಿಕೆಟ್ ಹಂಚಿಕೆಯಲ್ಲಿ ಪಕ್ಷ ನಿಷ್ಠೆ ಗೆಲುವಿಗೆ ಮಾನದಂಡವಾಗುತ್ತೆ: ಪ್ರಹ್ಲಾದ್‌ ಜೋಶಿ

    ತಾಯಿಗೆ ತೀವ್ರ ಉಸಿರಾಟದ ಸಮಸ್ಯೆ ಆಗುತ್ತಿದ್ದಂತೆ ಆಕೆಯನ್ನು ಉಳಿಸಿಕೊಳ್ಳಲು ಮಗಳು ಚೈತ್ರಾ ಸಾಕಷ್ಟು ಆಸ್ಪತ್ರೆಗಳನ್ನು ಸುತ್ತಿದ್ದಾಳೆ. ಬಹುತೇಕ ಆಸ್ಪತ್ರೆಗಳಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ನಿರಾಕರಿಸಿ ಮನೆಗೆ ಕಳಿಸಿದ್ದರು. ತೂಕದ ಪ್ರಮಾಣ ಸಾಕಷ್ಟು ಹೆಚ್ಚಿದ್ದರಿಂದ ವಿವಿಧ ಆಸ್ಪತ್ರೆಗಳಲ್ಲಿನ ವೈದ್ಯರು ರಿಸ್ಕ್ ತೆಗೆದುಕೊಂಡು ಶಸ್ತ್ರಚಿಕಿತ್ಸೆ ಮಾಡಲು ನಿರಾಕರಿಸಿದ್ದರಂತೆ. ಸಾಕಷ್ಟು ಆಸ್ಪತ್ರೆಗಳನ್ನು ಸುತ್ತಾಡಿ ಕೊನೆಗೆ ಚೈತ್ರಾ ತನ್ನ ತಾಯಿಯನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದಾಳೆ. ಆರಂಭದಲ್ಲಿ ಜಿಲ್ಲಾಸ್ಪತ್ರೆಯಿಂದಲೂ ಚಂದ್ರಮ್ಮಳನ್ನು ಬೇರೆ ಆಸ್ಪತ್ರೆಗೆ ಸೇರಿಸಲು ಹೇಳಲಾಗಿತ್ತು. ನಂತರ ಮತ್ತೊಮ್ಮೆ ಚೈತ್ರಾ ತಾಯಿಯನ್ನು ಕರೆದುಕೊಂಡು ಜಿಲ್ಲಾಸ್ಪತ್ರೆಗೆ ಬಂದ ಮೇಲೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

    ಜಿಲ್ಲಾಸ್ಪತ್ರೆಯ ಡಾ.ನಿರಂಜನ ನೇತೃತ್ವದ ವೈದ್ಯರು ಹಾಗೂ ಸಿಬ್ಬಂದಿ ತಂಡ ಬರೋಬ್ಬರಿ ನಾಲ್ಕು ಗಂಟೆಗೂ ಅಧಿಕ ಕಾಲ ಚಂದ್ರಮ್ಮಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಕೊಳೆತ ಭಾಗವನ್ನು ಕತ್ತರಿಸಿ ತೆಗೆದು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ ಚಂದ್ರಮ್ಮಳ ಜೀವ ಉಳಿಸಿದ್ದಾರೆ. ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಚಂದ್ರಮ್ಮಳ ಆರೋಗ್ಯ ಸಹಜ ಸ್ಥಿತಿಗೆ ಮರಳಿದೆ. ಇದನ್ನೂ ಓದಿ: ಹೆಡ್ ಕಾನ್ಸ್‌ಟೇಬಲ್ ಮನೆಗೆ ಕನ್ನ

    Live Tv
    [brid partner=56869869 player=32851 video=960834 autoplay=true]

  • ಹಾದಿ ಬೀದಿಯಲ್ಲಿ ಹುಡುಗಿಯರನ್ನ ರೇಗಿಸಿದ್ರೆ 2 ವರ್ಷ ಜೈಲು..!

    ಹಾದಿ ಬೀದಿಯಲ್ಲಿ ಹುಡುಗಿಯರನ್ನ ರೇಗಿಸಿದ್ರೆ 2 ವರ್ಷ ಜೈಲು..!

    ಲಂಡನ್: ಇನ್ಮುಂದೆ ಹಾದಿ-ಬೀದಿಗಳಲ್ಲಿ ಹುಡುಗಿಯರು, ಮಹಿಳೆಯರನ್ನ (Women) ರೇಗಿಸಿದ್ರೆ, ಅಣಕಿಸುವುದು, ರಸ್ತೆ ಅಡ್ಡಗಟ್ಟುವುದು ಅಥವಾ ಲೈಂಗಿಕ ಕಿರುಕುಳ ನೀಡಿದ್ರೆ 2 ವರ್ಷದ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಬ್ರಿಟನ್ (UK) ಗೃಹ ಸಚಿವಾಲಯ ಹೇಳಿದೆ.

    ಮಹಿಳೆಯರು ಹಾಗೂ ಹುಡುಗಿಯರಿಗೆ ಕಿರಕುಳ ನೀಡುವುದು ಬೆಂಬಲಿತ ಯೋಜನೆಗಳ ಅಡಿಯಲ್ಲಿ ಅಪರಾಧವಾಗುತ್ತದೆ ಅಂತಹವರಿಗೆ 2 ವರ್ಷ ಜೈಲುಶಿಕ್ಷೆ ವಿಧಿಸಲಾಗುವುದು. ಪ್ರತಿಯೊಬ್ಬ ಮಹಿಳೆಯೂ ತಮ್ಮ ಬೀದಿಗಳಲ್ಲಿ ನಡೆಯಲು ಅವರಿಗೆ ಸುರಕ್ಷಿತವಾಗಿದೆ ಅನ್ನೋ ಭಾವನೆ ಬರಬೇಕು. ಅದಕ್ಕಾಗಿ ಹೊಸ ನಿಯಮ ಜಾರಿಗೆ ತರಲಾಗಿದೆ ಎಂದು ಗೃಹಚಿವಾಲಯದ ಸುಯೆಲ್ಲಾ ಬ್ರಾವರ್ಮನ್ (Suella Braverman) ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ವ್ಯವಸ್ಥೆ ಸಾಂವಿಧಾನಿಕರಣಗೊಳಿಸಲು ಒತ್ತಾಯ – ಬಾಂಗ್ಲಾದಲ್ಲಿ ಭುಗಿಲೆದ್ದ ಹಿಂಸಾಚಾರ

    ಲೈಂಗಿಕ ಕಿರುಕುಳವು ಈಗಾಗಲೇ ಕಾನೂನುಬಾಹಿರವಾಗಿದೆ. ಇದರ ಹೊರತಾಗಿಯೂ ಹಾದಿ, ಬೀದಿಗಳಲ್ಲಿ ಕಿರಕುಳ ನೀಡುತ್ತಿರುವುದು ಗಮನಕ್ಕೆ ಬರುತ್ತಿದೆ. ಈ ಹೊಸ ಕ್ರಮ ಕೈಗೊಳ್ಳುವುದರಿಂದ ಸೌರ್ವಜನಿಕರು ಹಾಗೂ ಮಹಿಳೆಯರು ಪೊಲೀಸರಿಗೆ (Police) ಬೇಗನೇ ದೂರು ನೀಡಲು ಉತ್ತೇಜಿಸುತ್ತದೆ ಎಂದು ಭಾವಿಸಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಗರ್ಭಿಣಿ, ವೃದ್ಧನ ಮೇಲೆ ಕಾರು ಹರಿಸಿದ ಭಾರತೀಯ ಮೂಲದ ಚಾಲಕನಿಗೆ 16 ವರ್ಷ ಜೈಲು ಶಿಕ್ಷೆ

    ಸಮೀಕ್ಷೆಯ ಪ್ರಕಾರ ದೇಶದಲ್ಲಿ ರಾತ್ರಿವೇಳೆಯಲ್ಲಿ ಒಂಟಿಯಾಗಿ ಓಡಾಡುವ ಮೂರನೇ ಎರಡರಷ್ಟು ಮಹಿಳೆಯರು ಸುರಕ್ಷಿತ ಎಂದು ಭಾವಿಸುತ್ತಿಲ್ಲ. ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ (CPS) ಪ್ರಕಾರ, 34 ವರ್ಷದೊಳಗಿನ ಮಹಿಳೆಯರು ಲೈಂಗಿಕ ಅಪರಾಧಗಳಿಗೆ ಗುರಿಯಾಗುವ ಸಾಧ್ಯತೆ ಇದೆ. ಆದರೂ ಪ್ರಕರಣ ವರದಿ ಮಾಡುವ ಸಾಧ್ಯತೆಗಳು ಕಡಿಮೆಯಿವೆ. ಆದ್ದರಿಂದ ಹಾದಿ, ಬೀದಿಗಳಲ್ಲಿ ಕಂಡುಬರುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಮಟ್ಟಹಾಕುವ ನಿಟ್ಟಿನಲ್ಲಿ ಸರ್ಕಾರ ಹೊಸ ಕಾನೂನು ನಿಯಮವನ್ನು ಜಾರಿಗೊಳಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಐಷಾರಾಮಿ ಕಾರು ಡಿಕ್ಕಿ – ಭೀಕರ ಅಪಘಾತಕ್ಕೆ 24ರ ಯುವತಿ ಸಾವು

    ಐಷಾರಾಮಿ ಕಾರು ಡಿಕ್ಕಿ – ಭೀಕರ ಅಪಘಾತಕ್ಕೆ 24ರ ಯುವತಿ ಸಾವು

    ಲಕ್ನೊ: ಐಷಾರಾಮಿ ಕಾರೊಂದು (Luxury Car) ಯುವತಿಯ ದ್ವಿಚಕ್ರ ವಾಹನಕ್ಕೆ ಗುದ್ದಿ, ಕೆಲ ಮೀಟರ್‌ಗಳ ದೂರ ಎಳೆದೊಯ್ದು ಭೀರಕವಾಗಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ (Uttar Pradesh) ನೋಯ್ಡಾದಲ್ಲಿ ನಡೆದಿದೆ.

    ದೀಪಿಕಾ ತ್ರಿಪಾಠಿ (24) ಮೃತಪಟ್ಟ ಯುವತಿ. ನೋಯ್ಡಾದ ಸೆಕ್ಟರ್ 96ನಲ್ಲಿ ಡಿವೈಡರ್ ನಿಂದ ತಮ್ಮ ಕಚೇರಿಗೆ ತಿರುವು ತೆಗೆದುಕೊಳ್ಳುತ್ತಿದ್ದಾಗ ಶರವೇಗದಲ್ಲಿ ಬಂದ ಜಾಗ್ವಾರ್ ಕಾರು (Jaguar Car) ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಅಲ್ಲದೇ ಕೆಲದೂರದ ವರೆಗೆ ಎಳೆದೊಯ್ದರಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಕಾರಿನ ಚಾಲಕ ಹರಿಯಾಣ ಮೂಲದ ಸ್ಯಾಮ್ಯುಯೆಲ್ ಆಂಡ್ರ‍್ಯೂ ಪೈಸ್ಟರ್ ತನ್ನ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ. ಬಳಿಕ ಪೊಲೀಸರು ಆತನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಚುನಾವಣೆಗೆ ಹಿಂದುತ್ವ, ದೇಶಾಭಿಮಾನವೇ ಬಿಜೆಪಿ ತಂತ್ರ- ಸಚಿವರಿಗೆ ಹೈಕಮಾಂಡ್ ಟಾಸ್ಕ್ ಡೆಡ್ ಲೈನ್

    ತೀವ್ರವಾಗಿ ಗಾಯಗೊಂಡಿದ್ದ ಯುವತಿಯನ್ನು ಸ್ಥಳೀಯರು ಆಸ್ಪತ್ರೆಗೆ (Hospital) ಕರೆದೊಯ್ದರು, ಆದರೆ ಆಕೆ ಆಸ್ಪತ್ರೆ ತಲುಪುವಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ನಂತರ ತಿಳಿಸಿದ್ದಾರೆ. ಇದನ್ನೂ ಓದಿ: ಮೋರ್ಬಿ ಸೇತುವೆ ದುರಂತದ ಬಗ್ಗೆ ಟ್ವೀಟ್ ಮಾಡಿದ TMC ವಕ್ತಾರ ಅರೆಸ್ಟ್ – ಮೋದಿ ವಿರುದ್ಧ ಮಮತಾ ಗರಂ

    ದೀಪಿಕಾ ಅವರ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]