Tag: women

  • ಮಹಿಳೆ ಮೇಲೆ ಅತ್ಯಾಚಾರ; ವೀಡಿಯೋ ಲೀಕ್‌ ಮಾಡೋದಾಗಿ ಬೆದರಿಕೆ ಹಾಕಿದ್ದ IAS ಅಧಿಕಾರಿ, ಮಾಜಿ ಶಾಸಕ ವಿರುದ್ಧ ಕೇಸ್‌

    ಮಹಿಳೆ ಮೇಲೆ ಅತ್ಯಾಚಾರ; ವೀಡಿಯೋ ಲೀಕ್‌ ಮಾಡೋದಾಗಿ ಬೆದರಿಕೆ ಹಾಕಿದ್ದ IAS ಅಧಿಕಾರಿ, ಮಾಜಿ ಶಾಸಕ ವಿರುದ್ಧ ಕೇಸ್‌

    ಪಾಟ್ನಾ: ಬಿಹಾರದಲ್ಲಿ (Bihar) ಮಹಿಳೆಯೊಬ್ಬರ ಮೇಲೆ ಅತ್ಯಾಚಾರ (Rape) ಎಸಗಿ ವೀಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಐಎಎಸ್‌ ಅಧಿಕಾರಿ (IAS Officer) ಹಾಗೂ ಮಾಜಿ ಶಾಸಕನ (Ex MLA) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಹಿರಿಯ ಐಎಎಸ್‌ ಅಧಿಕಾರಿ ಸಂಜೀವ್‌ ಹನ್ಸ್‌ ಮತ್ತು ಆರ್‌ಜೆಡಿ ಮಾಜಿ ಶಾಸಕ ಗುಲಾಬ್‌ ಯಾದವ್‌ ವಿರುದ್ಧ ದಾನಾಪುರದ ನ್ಯಾಯಾಲಯ ಆದೇಶದ ಮೇರೆಗೆ ಪಾಟ್ನಾದ ರೂಪಸ್‌ಪುರ ಪೊಲೀಸ್ ಠಾಣೆಯಲ್ಲಿ ಕೇಸ್‌ ಹಾಕಿದ್ದಾರೆ. ಇದನ್ನೂ ಓದಿ: ಹಿಮದಿಂದ ಕೂಡಿದ್ದ ಟ್ರ್ಯಾಕ್‌ನಿಂದ ಜಾರಿ ಕಮರಿಗೆ ಬಿದ್ದ ವಾಹನ – 3 ಯೋಧರು ಹುತಾತ್ಮ

    2021 ರಲ್ಲಿ ದೆಹಲಿಯ ಹೋಟೆಲ್‌ನಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಮಹಿಳೆ ದೂರಿದ್ದರು. ಐಎಎಸ್‌ ಅಧಿಕಾರಿ, ಮಾಜಿ ಶಾಸಕನ ವಿರುದ್ಧ ಆರೋಪ ಹೊರಿಸಲಾಗಿದೆ. ಬಂದೂಕು ತೋರಿಸಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಗಂಭೀರ ಆರೋಪ ಹೊರಿಸಲಾಗಿದೆ.

    ಸಂತ್ರಸ್ತೆ ಮೊದಲು ಸಿವಿಲ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್‌ ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಸಂತ್ರಸ್ತೆ ಪಾಟ್ನಾ ಹೈಕೋರ್ಟ್‌ನ ಬಾಗಿಲು ತಟ್ಟಿದ್ದು, ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸದ ಪಾಟ್ನಾ ಪೊಲೀಸರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ಸಿವಿಲ್ ನ್ಯಾಯಾಲಯವು ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸುವಂತೆ ಸೂಚಿಸಿತು. ಈ ವಿಚಾರದಲ್ಲಿ ನಿರಾಸಕ್ತಿ ವಹಿಸಿದ್ದ ಪಾಟ್ನಾ ಪೊಲೀಸರಿಗೆ ಎಚ್ಚರಿಕೆಯನ್ನೂ ನೀಡಿದೆ. ಇದನ್ನೂ ಓದಿ: ಮದುವೆಯಾಗಲು ಹೆಣ್ಣು ಹುಡುಕಿಕೊಡುವಂತೆ ಯುವಕ ಕರೆ- ಡಿಟೇಲ್ಸ್ ಕಳುಹಿಸು ಅಂದ್ರು ಶಾಸಕ

    ಆಗ ಶಾಸಕನಾಗಿದ್ದ ಗುಲಾಬ್‌ ಯಾದವ್‌, ಮಹಿಳಾ ಆಯೋಗದ ಸದಸ್ಯೆ ಮಾಡುವುದಾಗಿ ಭರವಸೆ ನೀಡಿ ಪಾಟ್ನಾದ ತನ್ನ ನಿವಾಸದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ. ಅದನ್ನು ವೀಡಿಯೋ ಮಾಡಿಕೊಂಡು ಆಕೆಗೆ ಬ್ಲ್ಯಾಕ್‌ಮೇಲ್‌ ಮಾಡಿದ್ದ. ಮತ್ತೆ ಆಕೆಯನ್ನು ದೆಹಲಿಗೆ ಕರೆಸಿಕೊಂಡು ತಾನು ಹಾಗೂ ಐಎಎಸ್‌ ಅಧಿಕಾರಿ ಇಬ್ಬರೂ ಅತ್ಯಾಚಾರ ಎಸಗಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಂಡ್ಯದಲ್ಲಿ ಮಲಗಿದ್ದಲ್ಲೇ ಒಂಟಿ ಮಹಿಳೆ ಸುಟ್ಟು ಕರಕಲು

    ಮಂಡ್ಯದಲ್ಲಿ ಮಲಗಿದ್ದಲ್ಲೇ ಒಂಟಿ ಮಹಿಳೆ ಸುಟ್ಟು ಕರಕಲು

    ಮಂಡ್ಯ: ಒಂಟಿ ಮಹಿಳೆಯ (Wpmen) ಮೃತದೇಹ ಮಲಗಿದ್ದಲ್ಲೇ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ಮೇಲ್ನೋಟಕ್ಕೆ ಇದು ಶಾರ್ಟ್ ಸರ್ಕ್ಯೂಟ್‌ನಂತೆ ಕಂಡುಬಂದಿತ್ತು. ಈ ಕುರಿತು ಪ್ರಾಥಮಿಕ ತನಿಖೆ ನಡೆಸಿದಾಗ ಮೃತರ ಚಿನ್ನಾಭರಣ ಸೇರಿ ಬೆಲೆ ಬಾಳುವ ವಸ್ತುಗಳು ಕಳುವಾಗಿದ್ದು, ಕೊಲೆ ಎಸಗಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಶಾಲಾ ಮಕ್ಕಳಿಗೆ ಎನ್‌ಇಪಿ ತರುವ ಬದಲು ಡ್ರಗ್ಸ್ ದಂಧೆ ತಡೆಯಲಿ: ಕುಮಾರಸ್ವಾಮಿ

    ಮಾರಸಿಂಗನಹಳ್ಳಿ ಗ್ರಾಮದ ಪ್ರೇಮಾ (42) ಎಂಬಾಕೆ ಮೃತಪಟ್ಟ ಮಹಿಳೆ. ಪ್ರೇಮಾಳ ಗಂಡ 10 ವರ್ಷಗಳ ಹಿಂದೆಯೇ ಅನಾರೋಗ್ಯದಿಂದ ಮೃತಪಟ್ಟಿದ್ದರು. ಒಬ್ಬನೇ ಮಗ ಹಾಗೂ ಸೊಸೆ ಬೆಂಗಳೂರಿನಲ್ಲಿ ವಾಸವಿದ್ದಾರೆ. ಹೀಗಾಗಿ ಪ್ರೇಮ ಊರಿನಲ್ಲಿ ಒಂಟಿಯಾಗಿ ವಾಸವಿದ್ದರು. ಇದನ್ನೂ ಓದಿ: ಮ್ಯೂಸಿಕ್‌ ಸೌಂಡ್‌ ಕಡಿಮೆ ಮಾಡಿ ಎಂದಿದ್ದಕ್ಕೆ ಸೇನಾಧಿಕಾರಿ ಕಾರಿಗೆ ಬೆಂಕಿ ಇಟ್ಟವರ ಹೋಟೆಲ್‌ಗೆ ಬಿತ್ತು ಬೀಗ

    ಶನಿವಾರ ಊರಿಗೆ ಬಂದಿದ್ದ ಮಗ ಸೊಸೆ ಸೋಮವಾರ ಬೆಳಿಗ್ಗೆಯಷ್ಟೇ ವಾಪಸ್ಸಾಗಿದ್ರು. ಮಂಗಳವಾರ ಬೆಳಿಗ್ಗೆ ಅಕ್ಕಪಕ್ಕದ ಮನೆಯವರು ಎಂದಿನಂತೆ ಎದ್ದು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿದ್ದರು. ಈ ವೇಳೆ ಪ್ರೇಮಾ ಮನೆಯಿಂದ ದಟ್ಟ ಹೊಗೆ ಬರ್ತಿತ್ತು. ಬೆಂಕಿಯನ್ನು ನಂದಿಸಲು ಅಂತ ಒಳಗೆ ತೆರಳಿದವರಿಗೆ ಶಾಕ್ ಕಾದಿತ್ತು. ರೂಮಿನಲ್ಲಿ ಪ್ರೇಮ ಮಲಗಿದ್ದ ಮಂಚಕ್ಕೆ ಬೆಂಕಿ ಬಿದ್ದಿದ್ದು, ಅಷ್ಟರಲ್ಲಿ ಮೃತ ದೇಹ ಭಾಗಶಃ ಸುಟ್ಟು ಕರಕಲಾಗಿತ್ತು.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರಿಗೆ ತನಿಖೆ (Police Investigation) ವೇಳೆ ಗೊಂದಲಗಳು ಎದುರಾಗಿತ್ತು. ಹಿಂದೊಮ್ಮೆ ಅದೇ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದರಿಂದ ಅದೇ ಸಮಸ್ಯೆ ಆಗಿರಬಹುದಾ ಅನ್ನೋ ಪ್ರಶ್ನೆ ಉದ್ಭವಿಸಿತ್ತು. ಬಳಿಕ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಹಾಗೂ ಕೆಇಬಿ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿ ಕೆಲವು ಸಾಕ್ಷ್ಯಗಳನ್ನ ಕಲೆ ಹಾಕಿದ್ರು.

    ಮನೆಯ ಬೀರು ಬಾಗಿಲು ತೆರೆದಿತ್ತು. ಬಟ್ಟೆಗಳು ಚಲ್ಲಾಪಿಲ್ಲಿ ಆಗಿದ್ದವು. ಅದ್ರಲ್ಲಿದ್ದ ಸುಮಾರು 100 ಗ್ರಾಮ್ ಚಿನ್ನಾಭರಣ, ಒಂದು ಲ್ಯಾಪ್‌ಟಾಪ್ ಕಳುವಾಗಿದೆ. ಈ ಹಿನ್ನೆಲೆಯಲ್ಲಿ ಕೊಲೆ ಶಂಕೆ ವ್ಯಕ್ತವಾಗಿದೆ. ಸದ್ಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪೊಲೀಸರು ವರದಿಗಾಗಿ ಕಾಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೊಳದಲ್ಲಿ ಸ್ನಾನ ಮಾಡ್ತಿದ್ದ ಮಹಿಳೆ ವಿರುದ್ಧ DMK ಸದಸ್ಯನಿಂದ ಜಾತಿ ನಿಂದನೆ

    ಕೊಳದಲ್ಲಿ ಸ್ನಾನ ಮಾಡ್ತಿದ್ದ ಮಹಿಳೆ ವಿರುದ್ಧ DMK ಸದಸ್ಯನಿಂದ ಜಾತಿ ನಿಂದನೆ

    ಚೆನ್ನೈ: ಸಾರ್ವಜನಿಕ ಕೊಳದಲ್ಲಿ (Public Pond) ಸ್ನಾನ ಮಾಡುತ್ತಿದ್ದ ದಲಿತ ಮಹಿಳೆ ವಿರುದ್ಧ ಜಾತಿ (Scheduled Caste) ನಿಂದನೆ ಮಾಡಿ, ಆಕೆಯನ್ನು ಅರೆಬರೆ ಬಟ್ಟೆಯಲ್ಲೇ ಓಡಿಸಿದ ಘಟನೆ ತಮಿಳುನಾಡಿನ (TamilNadu) ಪುದುಕೊಟ್ಟೈ ಜಿಲ್ಲೆಯ ಕುತ್ತಂಕುಡಿ ಗ್ರಾಮದಲ್ಲಿ ನಡೆದಿದೆ.

    ಸಂತ್ರಸ್ತ ಮಹಿಳೆಯೊಂದಿಗೆ (Women) ಗ್ರಾಮಸ್ಥರು ಜಾತಿ ನಿಂದನೆ ಮಾಡಿದ ವ್ಯಕ್ತಿ ಅಯ್ಯಪ್ಪನ್ ವಿರುದ್ಧ ದೂರು ನೀಡಿದ್ದಾರೆ. ಇದನ್ನೂ ಓದಿ: ಟಿಪ್ಪು ನಿಜಕನಸುಗಳು ಮಾದರಿಯಲ್ಲಿ ಸಿದ್ದು ನಿಜಕನಸುಗಳು ಪುಸ್ತಕ ಇಂದು ಬಿಡುಗಡೆ

    ನಡೆದಿದ್ದೇನು?: ಇದೇ ಜನವರಿ 1ರಂದು ಮಹಿಳೆ ಕುತ್ತಂಕುಡಿ ಗ್ರಾಮದ ಸಾರ್ವಜನಿಕ ಕೊಳದಲ್ಲಿ ಸ್ನಾನ ಮಾಡಲು ಹೋಗಿದ್ದರು. ಈ ವೇಳೆ ಮಹಿಳೆಯನ್ನು ನೋಡಿದ ಅಯ್ಯಪ್ಪನ್ ಎಂಬ ವ್ಯಕ್ತಿ ಆಕೆಯನ್ನ ತಡೆದು ಗದರಿಸಿದ್ದಾನೆ. ಮಹಿಳೆ ಏಕೆ ಸ್ನಾನ ಮಾಡಬಾರದು ಎಂದು ಪ್ರಶ್ನಿಸಿದಾಗ ಮೀನು ಸಾಕಾಣಿಕೆಗಾಗಿ (Fish Breeding) ಈಗಾಗಲೇ ಕೆರೆಯನ್ನು ಹರಾಜು ಮಾಡಲಾಗಿದೆ ಎಂದು ಅಯ್ಯಪ್ಪನ್ ಹೇಳಿದ್ದಾನೆ. ಇದನ್ನೂ ಓದಿ: ಏರ್ ಇಂಡಿಯಾದಲ್ಲಿ ಮೂತ್ರವಿಸರ್ಜನೆ ಪ್ರಕರಣ ಬಳಿಕ ಗೋ ಫಸ್ಟ್‌ನಲ್ಲಿ ಗಗನಸಖಿಗೆ ವಿದೇಶಿಗನಿಂದ ಕಿರುಕುಳ

    ನಂತರ ಮಹಿಳೆ ಅರೆಬರೆ ಬಟ್ಟೆ ತೊಟ್ಟಿದ್ದರೂ ಹಾಗೆಯೇ ಓಡಿಸಿದ್ದಾನೆ. ಮಹಿಳೆಯ ಬಟ್ಟೆಯನ್ನು ಮುಳ್ಳಿನ ಪೊದೆ ಮೇಲೆ ಎಸೆದಿದ್ದಾನೆ. ಬಳಿಕ ಗ್ರಾಮಸ್ಥರು ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: 98 ವರ್ಷದ ವೃದ್ಧ ಜೈಲಿನಿಂದ ಬಿಡುಗಡೆ – ಎಸ್ಕಾರ್ಟ್ ನೀಡಿ ಮನೆಗೆ ಕಳುಹಿಸಿದ ಪೊಲೀಸರು

    ಅಯ್ಯಪ್ಪನ್ ಡಿಎಂಕೆ ಸದಸ್ಯ ಹಾಗೂ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಎಂದು ಮಹಿಳೆ ಶ್ರೀದೇವಿ ಪತಿ ವಡಿವೇಶ್ವರನ್ ಹೇಳಿದ್ದಾರೆ. ಅಲ್ಲದೇ ಮಹಿಳೆ ಸ್ನಾನ ಮಾಡುವಾಗ ಅಯ್ಯಪ್ಪನ್ ಜೊತೆಗೆ ಮುತ್ತುರಾಮನ್ ಎಂಬ ಇನ್ನೊಬ್ಬ ವ್ಯಕ್ತಿಯೂ ಇದ್ದ ಎಂದು ಆರೋಪಿಸಿದ್ದಾರೆ.

    ಪುದುಕೊಟ್ಟೈ ಜಿಲ್ಲೆಯಲ್ಲಿ ಜಾತಿ ನಿಂದನೆ ಸಂಬಂಧಿತ ನಡೆದ 2ನೇ ಪ್ರಕರಣ ಇದಾಗಿದೆ. ಕಳೆದ ಡಿಸೆಂಬರ್ 26ರಂದು ವೆಂಗೈವಾಯಲ್‌ನ ಪರಿಶಿಷ್ಟ ಜಾತಿ ಸಮುದಾಯದ ನಿವಾಸಿಗಳು ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಮಾನವನ ಮಲ ಬೆರಸಿದ್ದ ಪ್ರಕರಣ ಪತ್ತೆಯಾಗಿತ್ತು. ಈ ಸಂಬಂಧ ಕೇಸ್ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿಲ್ಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದ ಬಿರಿಯಾನಿ ತಿಂದು ಕಾಸರಗೋಡು ಯುವತಿ ಸಾವು

    ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದ ಬಿರಿಯಾನಿ ತಿಂದು ಕಾಸರಗೋಡು ಯುವತಿ ಸಾವು

    ತಿರುವನಂತಪುರ: ಸ್ಥಳೀಯ ಹೋಟೆಲ್‌ನಿಂದ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದ ಬಿರಿಯಾನಿ (Biriyani) ತಿಂದು ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ (Kerala) ನಡೆದಿದೆ.

    ಕಾಸರಗೋಡು (Kasaragodu) ಸಮೀಪದ ಪೆರುಂಬಳದ ಅಂಜು ಶ್ರೀಪಾರ್ವತಿ ಅವರು ರೆಸ್ಟೋರೆಂಟ್‌ನಿಂದ ಆನ್‌ಲೈನ್‌ನಲ್ಲಿ ಖರೀದಿಸಿದ ‘ಕುಜಿಮಂತಿ’ ಬಿರಿಯಾನಿಯನ್ನು ಸೇವಿಸಿದ್ದರು. ನಂತರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಶಂಕರ್ ಮಿಶ್ರಾ ಬೆಂಗಳೂರಲ್ಲಿ ಬಂಧನ

    ಆಕೆಯ ಪೋಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಶನಿವಾರ ಮುಂಜಾನೆ ಬಾಲಕಿ ಸಾವನ್ನಪ್ಪಿದ್ದಾಳೆ. ವಿಧಿವಿಜ್ಞಾನ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ಮೊದಲು ಆಕೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಕರ್ನಾಟಕದ ಮಂಗಳೂರಿನ ಮತ್ತೊಂದು ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಮೃತಪಟ್ಟಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ತನಿಖೆಗೆ ಆದೇಶಿಸಿದ್ದಾರೆ. ಇದನ್ನೂ ಓದಿ: ಜೋಶಿಮಠದ ಬಳಿಕ ಕರ್ಣಪ್ರಯಾಗದಲ್ಲಿ ಭೂಮಿ, ಮನೆಯ ಗೋಡೆ ಬಿರುಕು – ಮುಳುಗಡೆ ಭೀತಿ, ಆತಂಕದಲ್ಲಿ ಜನ

    ಘಟನೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಆಹಾರ ಸುರಕ್ಷತಾ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ಘಟನೆ ಮತ್ತು ಯುವತಿಗೆ ನೀಡಿದ ಚಿಕಿತ್ಸೆಯ ಬಗ್ಗೆಯೂ ಡಿಎಂಒ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

    ಕೆಲದಿನಗಳ ಹಿಂದೆಯಷ್ಟೇ ಇದೇ ರೀತಿ ಕೋಝಿಕ್ಕೋಡ್‌ನ ಉಪಾಹಾರ ಗೃಹದಲ್ಲಿ ತಯಾರಿಸಿದ್ದ ಆಹಾರ ಸೇವಿಸಿ ನರ್ಸ್‌ವೊಬ್ಬರು ಸಾವಿಗೀಡಾಗಿದ್ದರು. ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ‌ ಈ ನರ್ಸ್‌ ಕರ್ತವ್ಯ ನಿರ್ವಹಿಸುತ್ತಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆಪರೇಷನ್ ಥಿಯೇಟರ್‌ನಲ್ಲಿ ಮಹಿಳೆಯ ಖಾಸಗಿ ಭಾಗಗಳನ್ನು ಮುಟ್ಟಿ ಕಿರುಕುಳ

    ಆಪರೇಷನ್ ಥಿಯೇಟರ್‌ನಲ್ಲಿ ಮಹಿಳೆಯ ಖಾಸಗಿ ಭಾಗಗಳನ್ನು ಮುಟ್ಟಿ ಕಿರುಕುಳ

    ಕೋಲ್ಕತ್ತಾ: ಇಲ್ಲಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ (Operation Theatre) ಅರೆಪ್ರಜ್ಞಾವಸ್ಥೆಯಲ್ಲಿ ಮಲಗಿದ್ದಾಗ ಆಸ್ಪತ್ರೆ (Hospital) ಸಿಬ್ಬಂದಿಯೊಬ್ಬ ಆಕೆಯ ಖಾಸಗಿ ಭಾಗಗಳನ್ನ ಮುಟ್ಟಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಮಹಿಳೆಯೊಬ್ಬರು ಆರೋಪಿಸಿ ಫೂಲ್ಬಗಾನ್ ಪೊಲೀಸರಿಗೆ (Police) ದೂರು ನೀಡಿದ್ದಾರೆ.

    CRIME COURT

    ಕೋಲ್ಕತ್ತಾ (Kolkata) ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಪಿತ್ತಕೋಶದ ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದರು. ಗುರುವಾರ ಬೆಳಗ್ಗೆ 9 ಗಂಟೆ ವೇಳೆಗೆ ಆಪರೇಷನ್ ಥಿಯೇಟರ್‌ಗೆ ವರ್ಗಾಯಿಸಿ ಅರಿವಳಿಕೆ ನೀಡಿದ್ದಾರೆ. 11 ಗಂಟೆಗೆ ವೇಳೆಗೆಲ್ಲಾ ಶಸ್ತçಚಿಕಿತ್ಸೆ ಮುಗಿದಿದೆ. ಬಳಿಕ ಮಹಿಳೆ ಅರೆ ಪ್ರಜ್ಞಾವಸ್ಥೆಯಲ್ಲಿ ಮಲಗಿದ್ದಾಗ ಯಾರೋ ತನ್ನ ಖಾಸಗಿ ಭಾಗಗಳನ್ನು ಮುಟ್ಟಿ ಕಿರುಕುಳ ನೀಡಿರುವುದಾಗಿ ಮಹಿಳೆ ಲಿಖಿತ ದೂರು ನೀಡಿದ್ದಾರೆ. ಇದನ್ನೂ ಓದಿ: ವಿಧಾನಸೌಧದಲ್ಲಿ 10 ಲಕ್ಷ ಹಣ ಸಿಕ್ಕಿದ ಕೇಸ್ – ಆರೋಪಿ ಜಗದೀಶ್‌ಗೆ ಷರತ್ತುಬದ್ಧ ಜಾಮೀನು

    ಮಹಿಳೆ ಹೇಳಿದ್ದೇನು?
    ನಾನು ನಿಧಾನವಾಗಿ ಪ್ರಜ್ಞಾವಸ್ಥೆಗೆ ಬರುತ್ತಿದ್ದೆ. ಈ ವೇಳೆ ಸ್ವಲ್ಪವೇ ಕಣ್ಣು ತೆರೆದು ನೋಡಿದಾಗ ನನ್ನ ಬಲಭಾಗದಲ್ಲಿ ವ್ಯಕ್ತಿಯೊಬ್ಬ ನಿಂತಿದ್ದ. ಅವನು ನನ್ನನ್ನು ತಬ್ಬಿಕೊಳ್ಳುತ್ತಿದ್ದ. ನನಗೆ ತುಂಬಾ ನೋವಾಗುತ್ತಿತ್ತು. ನನಗೆ ಅರಿವಳಿಕೆ ನೀಡಿದ್ದರಿಂದ ಅವನನ್ನು ತಡೆಯಲು ಸಾಧ್ಯವಾಗಲಿಲ್ಲ. ಆದರೆ ನನಗೆ ಪ್ರಜ್ಞೆ ಬಂದು ನೋಡಿದಾಗ ನನ್ನ ಖಾಸಗಿ ಭಾಗಗಳಲ್ಲಿ ಆಗಿದ್ದ ಗುರುತುಗಳನ್ನು ಗಮನಿಸಿದೆ ಎಂದು ಹೇಳಿದ್ದಾರೆ.

    ಆಪರೇಷನ್ ಥಿಯೇಟರ್‌ನಲ್ಲಿ ನನಗೆ ಏನಾಯಿತು ಅನ್ನೋದು ಸಂಪೂರ್ಣವಾಗಿ ತಿಳಿದಿಲ್ಲ. ಆದ್ರೆ ಅಪರಾಧ ನಡೆಯುವಾಗ ಯಾರೊಬ್ಬರೂ ಮಹಿಳಾ ಸಿಬ್ಬಂದಿ ಇರಲಿಲ್ಲ. ಆದ್ರೆ ನನ್ನ ಬಲ ಎದೆಯ ಮೇಲೆ ಗುರುತುಗಳು ಕಂಡುಬಂದಿವೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕನ್ನಡಿಗರಿಗೆ ಕೈಗಾರಿಕೆಗಳ ಉದ್ಯೋಗದಲ್ಲಿ ಶೇ.80 ರಷ್ಟು ಪ್ರಾಶಸ್ತ್ಯ, ಭಾಷಾ ಅಭಿವೃದ್ಧಿಗೆ ಶೀಘ್ರ ಕಾನೂನು ಸ್ವರೂಪ: ಬೊಮ್ಮಾಯಿ

    ಮಹಿಳೆ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಫೂಲ್ಬಗಾನ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಆರೋಪಿ ವಿರುದ್ಧ ಐಪಿಸಿ (IPC) ಸೆಕ್ಷನ್ 354ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಮಹಿಳೆಯ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಿದ್ದು, ಮೆಡಿಕಲ್ ರಿಪೋರ್ಟ್‌ಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾರ್‌ನಲ್ಲಿದ್ರೂ ಹಿಜಬ್‌ ಧರಿಸಬೇಕು – ಇರಾನ್‌ನಲ್ಲಿ ಮಹಿಳೆಯರಿಗೆ ಪೊಲೀಸರ ಕಟ್ಟೆಚ್ಚರ

    ಕಾರ್‌ನಲ್ಲಿದ್ರೂ ಹಿಜಬ್‌ ಧರಿಸಬೇಕು – ಇರಾನ್‌ನಲ್ಲಿ ಮಹಿಳೆಯರಿಗೆ ಪೊಲೀಸರ ಕಟ್ಟೆಚ್ಚರ

    ತೆಹ್ರಾನ್: ಮಹ್ಸಾ ಅಮಿನಿಯ (Mahsa Amini) ಸಾವಿನ ನಂತರ ಇರಾನ್‌ನಲ್ಲಿ (Iran) ಹಿಜಬ್‌ (Hijab) ವಿರುದ್ಧ ಪ್ರತಿಭಟನೆ ಭುಗಿಲೆದ್ದಿದೆ. ಇದರ ನಡುವೆಯೇ, ಕಾರುಗಳಲ್ಲಿಯೂ ಕಡ್ಡಾಯವಾಗಿ ಹಿಜಾಬ್‌ ಧರಿಸಬೇಕು ಎಂದು ಇರಾನ್ ಪೊಲೀಸರು ಮಹಿಳೆಯರಿಗೆ ಮತ್ತೆ ಕಟ್ಟೆಚ್ಚರ ನೀಡಿದ್ದಾರೆ.

    ಕಳೆದ ವರ್ಷ ಸೆಪ್ಟೆಂಬರ್ 16 ರಂದು, 22 ವಯಸ್ಸಿನ ಮಹ್ಸಾ ಅಮಿನಿ ಹಿಜಬ್‌ ಧರಿಸದೇ ಇದ್ದಿದ್ದಕ್ಕೆ ಟೆಹ್ರಾನ್‌ನಲ್ಲಿ ಬಂಧನಕ್ಕೊಳಗಾಗಿ ನೈತಿಕ ಪೊಲೀಸ್‌ಗಿರಿಗೆ ಬಲಿಯಾಗಿದ್ದರು. ನಂತರ ಇರಾನ್‌ನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಮಹಿಳೆಯರು ಹಿಜಬ್‌ ಸುಟ್ಟು, ತಲೆಗೂದಲು ಕತ್ತರಿಸಿ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಇರಾನ್‍ನಲ್ಲಿ ಹೆಚುತ್ತಿರುವ ಹಿಜಬ್ ವಿರೋಧಿ ಪ್ರತಿಭಟನೆ- ಮೆಟ್ರೋದಲ್ಲಿ ಮಹಿಳೆಯರನ್ನು ಥಳಿಸಿದ ಪೊಲೀಸರು

    ಮಹಿಳೆಯರು ಕಾರ್‌ಗಳಲ್ಲಿ ಹಿಜಬ್‌ ತೆಗೆಯುತ್ತಾರೆ ಎಂಬುದನ್ನು ಮನಗಂಡು 2020ರಲ್ಲೇ ʼನಜೀರ್-‌1ʼ ಎಂಬ ಕಾರ್ಯಕ್ರಮವನ್ನು ಪರಿಚಯಿಸಲಾಗಿತ್ತು. ಈ ಬಗ್ಗೆ ಎಚ್ಚರಿಕೆ ನೀಡುವಂತೆ ಮತ್ತೆ ಕಾರ್ಯಕ್ರಮವನ್ನು ದೇಶಾದ್ಯಂತ ಪರಿಚಯಿಸಲು ಪೊಲೀಸರು ಮುಂದಾಗಿದ್ದಾರೆ. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಿದ್ದಾರೆ.

    “ನಿಮ್ಮ ವಾಹನದಲ್ಲಿ ಹಿಜಬ್ ತೆಗೆಯುವುದನ್ನು ಗಮನಿಸಲಾಗಿದೆ. ಸಮಾಜದ ನಿಯಮಗಳನ್ನು ಗೌರವಿಸುವುದು ಮತ್ತು ಈ ಕ್ರಮ ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದು ಅವಶ್ಯಕ ಎಂದು ಪೊಲೀಸರು ಸಂದೇಶ ರವಾನಿಸಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಇರಾನ್‌ನಲ್ಲಿ ಹಿಜಬ್ ವಿರೋಧಿ ಪ್ರತಿಭಟನೆ- ಮೊದಲ ಮರಣದಂಡನೆ ಶಿಕ್ಷೆ

    ಇರಾನ್‌ನ ನೈತಿಕ ಪೊಲೀಸರು ಕಟ್ಟುನಿಟ್ಟಾದ ವಸ್ತ್ರ ಸಂಹಿತೆ ಅನುಷ್ಠಾನವನ್ನು ಪರಿಶೀಲಿಸಲು ಸಾರ್ವಜನಿಕ ಪ್ರದೇಶಗಳಿಗೆ ಭೇಟಿ ನೀಡುವಂತೆ ಆದೇಶ ಹೊರಡಿಸಲಾಗಿದೆ. ಆದರೆ ಪ್ರತಿಭಟನೆಯ ನಡುವೆ ಮಹಿಳೆಯರು ಹಿಜಬ್ ಇಲ್ಲದೆ ಓಡಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೃಷಿ ಕೂಲಿ ಮಹಿಳೆಯರಿಂದ ಹೊಸ ವರ್ಷಾಚರಣೆ- ಗದ್ದೆಯಲ್ಲಿ ಕೇಕ್ ಕತ್ತರಿಸಿ ಸಂಭ್ರಮ

    ಕೃಷಿ ಕೂಲಿ ಮಹಿಳೆಯರಿಂದ ಹೊಸ ವರ್ಷಾಚರಣೆ- ಗದ್ದೆಯಲ್ಲಿ ಕೇಕ್ ಕತ್ತರಿಸಿ ಸಂಭ್ರಮ

    ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಭತ್ತದ ಗದ್ದೆಯೊಂದರಲ್ಲಿ ಕೃಷಿ ಕೂಲಿ ಮಹಿಳಾ ಕಾರ್ಮಿಕರು (Women) ಕೇಕ್ (Cake) ಕತ್ತರಿಸಿ ಹೊಸವರ್ಷವನ್ನು (New Year) ಸಂಭ್ರಮದಿಂದ ಸ್ವಾಗತಿಸಿದ್ದಾರೆ.

    ಹೊಸವರ್ಷದ ಹಿನ್ನೆಲೆಯಲ್ಲಿ ಗದ್ದೆ ಮಾಲೀಕ ಕೇಕ್ ತರಿಸಿದ್ದ. ಈ ಎರಡು ಕೇಕ್ ಕತ್ತರಿಸಿ ಭತ್ತ ನಾಟಿ ಮಾಡಿ ದಣಿವಾಗಿದ್ದ ಮಹಿಳೆಯರು ಸಂಭ್ರಮಿಸಿದ್ದಾರೆ. ಭತ್ತ ನಾಟಿ ಮಾಡುವ ಕಾಯಕಕ್ಕೆ ಬಂದಿದ್ದ 30ಕ್ಕೂ ಹೆಚ್ಚು ಮಹಿಳೆಯರು ಹೊಸ ವರ್ಷದ ಮೊದಲ ದಿನ ಭತ್ತ ನಾಟಿ ಕಾರ್ಯ ಮುಗಿದ ಮೇಲೆ ಹೊಸ ವರ್ಷಾಚರಣೆ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದೇಶ್ವರ ಸ್ವಾಮೀಜಿ ನನ್ನನ್ನು ಗುರುತು ಹಿಡಿದರು : ಬೊಮ್ಮಾಯಿ

    ಗ್ರಾಮೀಣ ಭಾಗದ ರೈತಾಪಿ ಜನ ಯುಗಾದಿಯಂದೆ ಹೊಸವರ್ಷವನ್ನ ಸಂಭ್ರಮದಿಂದ ಬರಮಾಡಿಕೊಳ್ಳುತ್ತಾರಾದರೂ ಕ್ಯಾಲೆಂಡರ್ ಹೊಸ ವರ್ಷವನ್ನೂ ಕೇಕ್ ಕತ್ತರಿಸುವ ಮೂಲಕ ಕೃಷಿ ಕೂಲಿ ಕಾರ್ಮಿಕರು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಇದನ್ನೂ ಓದಿ: ರಾಜೌರಿಯಲ್ಲಿ ಗುಂಡಿನ ದಾಳಿ ನಡೆದ ಮನೆ ಬಳಿ ಮತ್ತೊಂದು ಸ್ಫೋಟ – ಮಗು ಸಾವು

    Live Tv
    [brid partner=56869869 player=32851 video=960834 autoplay=true]

  • ಸೆಲ್ಫಿ ತೆಗೆದುಕೊಳ್ಳಲು ಮಹಿಳೆಯರಿಗೆ ಒತ್ತಾಯ- 2 ಗುಂಪುಗಳ ನಡುವೆ ಮಾರಾಮಾರಿ

    ಸೆಲ್ಫಿ ತೆಗೆದುಕೊಳ್ಳಲು ಮಹಿಳೆಯರಿಗೆ ಒತ್ತಾಯ- 2 ಗುಂಪುಗಳ ನಡುವೆ ಮಾರಾಮಾರಿ

    ಲಕ್ನೋ: ಹೊಸ ವರ್ಷ (New Year) ಆಚರಣೆ ವೇಳೆ ಕೆಲವು ಪುಂಡರು ಸೆಲ್ಫಿಗಾಗಿ ಮಹಿಳೆಯರನ್ನು (Women) ಬಲವಂತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ (Noida) ಹೌಸಿಂಗ್ ಸೊಸೈಟಿಯಲ್ಲಿ ನಡೆದಿದೆ.

    ಗೌರ್ ಸಿಟಿ ಫಸ್ಟ್ ಅವೆನ್ಯೂ ಸೊಸೈಟಿಯಲ್ಲಿ ನಡೆದ ಹೊಸ ವರ್ಷದ (New Year) ಸಂಭ್ರಮಾಚರಣೆಯಲ್ಲಿ ಗುಂಪೊಂದು ಮಹಿಳೆಯರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದೆ. ಇದರಿಂದಾಗಿ ಕೋಪಗೊಂಡ ಮಹಿಳೆಯ ಪತಿ ಹಾಗೂ ಪುಂಡರ ನಡುವೆ ತೀವ್ರ ವಾಗ್ವಾದ ನಡೆದಿದೆ. ಅಷ್ಟೇ ಅಲ್ಲದೇ ಪುಂಡರಿಂದ ಹಲ್ಲೆಯೂ ನಡೆದಿದೆ.

    ಈ ವೇಳೆ ಅಲ್ಲಿನ ಅಧಿಕಾರಿಗಳು ಮಧ್ಯಪ್ರವೇಶಿಸಿ ಗಲಾಟೆಯನ್ನು ನಿಲ್ಲಿಸಿದರು. ಈ ವೇಳೆ ಇತರ ಕೆಲವು ನಿವಾಸಿಗಳು ಮತ್ತು ಭದ್ರತಾ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಇನ್ನು 15 ದಿನಗಳಲ್ಲಿ ಪಕ್ಷದ ಪ್ರಣಾಳಿಕೆ ರಿಲೀಸ್ – ಜನಾರ್ದನ ರೆಡ್ಡಿ

    ಘಟನೆಗೆ ಸಂಬಂಧಿಸಿ ಮಹಿಳೆಯ ಪತಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ. ಇದನ್ನೂ ಓದಿ: ಇನ್ನು 15 ದಿನಗಳಲ್ಲಿ ಪಕ್ಷದ ಪ್ರಣಾಳಿಕೆ ರಿಲೀಸ್ – ಜನಾರ್ದನ ರೆಡ್ಡಿ

    Live Tv
    [brid partner=56869869 player=32851 video=960834 autoplay=true]

  • 3ನೇ ಮದುವೆಯಾದ್ರೂ 2ನೇ ಗಂಡನೊಂದಿಗೆ ಸಂಬಂಧ- ರೊಚ್ಚಿಗೆದ್ದು ಪತ್ನಿಯನ್ನೇ ಕೊಲೆಗೈದ ಮೂರನೇ ಪತಿ

    3ನೇ ಮದುವೆಯಾದ್ರೂ 2ನೇ ಗಂಡನೊಂದಿಗೆ ಸಂಬಂಧ- ರೊಚ್ಚಿಗೆದ್ದು ಪತ್ನಿಯನ್ನೇ ಕೊಲೆಗೈದ ಮೂರನೇ ಪತಿ

    ಲಕ್ನೋ: ತಾನು 3ನೇ ಮದುವೆಯಾಗಿದ್ರೂ (Marriage) 2ನೇ ಗಂಡನೊಂದಿಗೆ ಸಂಬಂಧ ಮುಂದುವರಿಸಿದ್ದಾಳೆ ಎಂದು ತನ್ನ ಪತ್ನಿಯನ್ನೇ ಕೊಲೆಗೈದಿರುವ (Murder) ಘಟನೆ ಗಾಜಿಯಾಬಾದ್‌ನಲ್ಲಿ (Ghaziabad) ನಡೆದಿದೆ.

    ಕೊಲೆ ಆರೋಪದ ಮೇಲೆ 3ನೇ ಪತಿಯನ್ನು ಪೊಲೀಸರು (Police) ಬಂಧಿಸಿದ್ದಾರೆ. ಬಳಿಕ ನಡೆದ ತನಿಖೆಯಲ್ಲಿ ಆಕೆ 3ನೇ ಮದುವೆಯಾಗಿದ್ದರೂ 2ನೇ ಗಂಡನೊಂದಿಗೆ ಸಂಬಂಧ ಹೊಂದಿದ್ದಳು. ಅದಕ್ಕಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಗಾಜಿಯಾಬಾದ್ ಪೊಲೀಸರು (Ghaziabad Police) ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಫ್ಯೂಚರ್‌ನಲ್ಲಿ ಮದುವೆ ಆದರೆ ರಾಜಣ್ಣ ಥರ ಇರುತ್ತೀನಿ: ರೂಪೇಶ್ ಶೆಟ್ಟಿ

    ಏನಿದು ಘಟನೆ?: ಇದೇ ತಿಂಗಳ ಡಿಸೆಂಬರ್ 26ರಂದು ಗಾಜಿಯಾಬಾದ್‌ನ ಕಾಶ್ಕಿರಾಮ್ ಕಾಲೋನಿಯಲ್ಲಿ ಭವ್ಯ ಶರ್ಮಾ ಹೆಸರಿನ ಮಹಿಳೆ (Women) ಕೊಲೆಯಾಗಿತ್ತು. ಬಳಿಕ ಪತಿ ವಿನೋದ್ ಶರ್ಮಾನನ್ನ ಪೊಲೀಸರು ಬಂಧಿಸಿದ್ದರು. ವಿಚಾರಣೆ ನಡೆಸಿದಾಗ ಭವ್ಯ ಈಗಾಗಲೇ ಮೂರು ಮದುವೆಯಾಗಿದ್ದಳು ಎಂಬುದು ತಿಳಿದುಬಂದಿದೆ. ಯೋಗೇಂದ್ರ ಯಾದವ್ ಜೊತೆ ಬೇಬಿ ಎಂಬ ಹೆಸರಿನಲ್ಲಿ ಮೊದಲ ಮದುವೆಯಾಗಿದ್ದ ಭವ್ಯ ಈ ಸಂಬಂಧ ಮುರಿದುಕೊಂಡು ಅನೀಸ್ ಅನ್ಸಾರಿ ಜೊತೆ ಆಸಿಫಾ ಎಂಬ ಹೆಸರಿನಲ್ಲಿ 2ನೇ ಮದುವೆಯಾಗಿದ್ದಳು. ಕಳೆದ 5 ತಿಂಗಳ ಹಿಂದೆ ಈ ಸಂಬಂಧವನ್ನೂ ಕಡಿದುಕೊಂಡು ವಿನೋದ್ ಶರ್ಮಾನೊಂದಿಗೆ ಭವ್ಯ ಹೆಸರಿನಲ್ಲಿ ಮದುವೆಯಾಗಿದ್ದಳು.

    ಕೆಲ ದಿನಗಳ ವರೆಗೆ ಸಂಸಾರ ಚೆನ್ನಾಗಿಯೇ ಇತ್ತು. ವಿನೋದ್ ಶರ್ಮಾಗೆ ಮಕ್ಕಳಿಲ್ಲದ ಕಾರಣ 2ನೇ ಪತಿ ಅನೀಸ್ ಅನ್ಸಾರಿಯ ಮಗನನ್ನೇ ತನ್ನ ಮಗನೆಂದು ಭಾವಿಸಿದ್ದಳು. ಆಗಾಗ್ಗೆ ಮಗುವನ್ನು ನೋಡಿಕೊಂಡು ಬರುತ್ತಿದ್ದಳು. ಇದೇ ಡಿಸೆಂಬರ್ 24 ರಂದು ಇಂಧೋರ್‌ಗೆ ಹೋಗಿದ್ದ ಭವ್ಯ 2ನೇ ಪತಿಯೊಂದಿಗಿದ್ದುಕೊಂಡೇ 3ನೇ ಪತಿಗೆ ವೀಡಿಯೋ ಕಾಲ್‌ ಮಾಡಿದ್ದಳು. ಇದರಿಂದ ಸಿಟ್ಟಿಗೆದ್ದ ಪತಿ ಆಗಲೇ ಕೊಲೆಗೆ ಪ್ಲ್ಯಾನ್ ಮಾಡಿದ್ದಾನೆ. ಇದನ್ನೂ ಓದಿ: ತಾಯಿಗೆ ಸರ್ಪ್ರೈಸ್‌ ಕೊಡಲು ತೆರಳ್ತಿದ್ದಾಗಲೇ ದುರಂತ – ಪಂತ್ ಅಭಿಮಾನಿಗಳ ಆಕ್ರಂದನ

    ಬಳಿಕ ಆಕೆ ಮನೆಗೆ ಬಂದಾಗ ಮಗನನ್ನು ಹೊರಗೆ ಕಳುಹಿಸಿ ಹರಿತವಾದ ಚಾಕುವಿನಿಂದ ಚುಚ್ಚಿ-ಚುಚ್ಚಿ ಕೊಲೆ ಮಾಡಿದ್ದಾನೆ. ರಕ್ತದ ಕಲೆಗಳು ಕಾಣಬಾರದು ಅಂತಾ ಶುಚಿಗೊಳಿಸಿದ್ದಾನೆ. ಬಳಿಕ ಮಗ ಬಂದಾಗ ಭವ್ಯ ಮಲಗಿರೋದಾಗಿ ಹೇಳಿ ಸುಮ್ಮನಾಗಿಸಿದ್ದಾನೆ. ಒಂದು ದಿನವಾದ್ರೂ ಆಕೆ ಎಚ್ಚರವಾಗದ ಹಿನ್ನೆಲೆಯಲ್ಲಿ ಅಳಲು ಶುರು ಮಾಡಿದ್ದಾನೆ. ನಂತರ ಕೊಲೆಯಾಗಿರುವುದು ಗೊತ್ತಾಗಿ ಆತನನ್ನು ಬಂಧಿಸಿದ್ದಾರೆ ಎಂದು ಗಾಜಿಯಾಬಾದ್ ಪೊಲೀಸರು ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 6 ವರ್ಷವಾದ್ರೂ ಮಕ್ಕಳಾಗಿಲ್ಲವೆಂದು ಪತ್ನಿಯ ಗುಪ್ತಾಂಗವನ್ನ ಬ್ಲೇಡ್‌ನಿಂದ ಕೊಯ್ದು ವಿಕೃತಿ!

    6 ವರ್ಷವಾದ್ರೂ ಮಕ್ಕಳಾಗಿಲ್ಲವೆಂದು ಪತ್ನಿಯ ಗುಪ್ತಾಂಗವನ್ನ ಬ್ಲೇಡ್‌ನಿಂದ ಕೊಯ್ದು ವಿಕೃತಿ!

    ಲಕ್ನೋ: ಮದುವೆಯಾಗಿ (Marriage) 6 ವರ್ಷ ಕಳೆದರೂ ಮಕ್ಕಳಾಗಿಲ್ಲ ಅಂತಾ ತನ್ನ ಪತ್ನಿಗೆ ಚಿತ್ರಹಿಂಸೆ ಕೊಟ್ಟು ವಿಕೃತಿ ಮೆರೆದಿರುವ ಘಟನೆ ಉತ್ತರಪ್ರದೇಶದ (Uttar Pradesh) ಲಕ್ನೋದಲ್ಲಿ ನಡೆದಿದೆ.

    ಪತ್ನಿಯೊಂದಿಗೆ ಅಸಹಜವಾಗಿ ವರ್ತಿಸಿರುವ ಪತಿ ಆಕೆಯ ಗುಪ್ತಾಂಗವನ್ನು ಬ್ಲೇಡ್‌ನಿಂದ ಕೊಯ್ದು ವಿಕೃತಿ ಮೆರೆದಿದ್ದಾನೆ. ಪತ್ನಿ ತೀವ್ರ ಗಾಯಗೊಂಡ ಬಳಿಕ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಆರೋಪಿ ಪತಿಯನ್ನು ಲಕ್ನೋದ ಮೋಹನ್‌ಲಾಲ್‌ಗಂಜ್ ಪೊಲೀಸರು (Lucknow Police) ಬಂಧಿಸಿದ್ದಾರೆ. ಇದನ್ನೂ ಓದಿ: ಆಸ್ತಿ ವಿಚಾರಕ್ಕೆ ಯುವಕನ ಮೇಲೆ ಗುಂಡೇಟು – ಕ್ಷಣಮಾತ್ರದಲ್ಲಿ ತಪ್ಪಿದ ಅನಾಹುತ

    ಏನಿದು ಘಟನೆ?: ದಂಪತಿಗೆ ಮದುವೆಯಾಗಿ 6 ವರ್ಷಗಳಾದರೂ ಮಕ್ಕಳಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಪತಿ, ಪತ್ನಿಗೆ ಚಿತ್ರಹಿಂಸೆ ನೀಡಲು ಪ್ರಾರಂಭಿಸಿದ್ದ. ನಿನ್ನೆ ಮದ್ಯದ ಅಮಲಿನಲ್ಲಿದ್ದ ಪತಿ, ಆಕೆಯ ಮೇಲೆ ಅಸ್ವಾಭಾವಿಕವಾಗಿ ವರ್ತಿಸಿದ್ದಾನೆ. ಆಕೆ ವಿರೋಧಿಸಲು ಮುಂದಾದಾಗ ಆಕೆಯ ಗುಪ್ತಾಂಗ ಹಾಗೂ ಎದೆಯ ಭಾಗಕ್ಕೆ ಬ್ಲೇಡ್‌ನಿಂದ ಹಲ್ಲೆ ನಡೆಸಿದ್ದಾನೆ. ಪತಿಯ ಚಿತ್ರಹಿಂಸೆ ತಾಳಲಾರದೇ ಆಕೆ ತವರು ಮನೆಗೆ ಹೋಗಿದ್ದಾಳೆ. ಅಲ್ಲಿ ತನ್ನ ತಾಯಿಯೊಂದಿಗೆ ಘಟನೆ ಬಗ್ಗೆ ಹೇಳಿಕೊಂಡಿದ್ದಾಳೆ. ಬಳಿಕ ಆಕೆಯನ್ನು ಝಲ್ಕರಿ ಬಾಯಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಪತ್ನಿಯ ಸಹೋದರ ನೀಡಿದ ದೂರಿನ ಮೇರೆಗೆ ಕೇಸ್ (FIR) ದಾಖಲಿಸಿ ಕ್ರೂರಿ ಪತಿಯನ್ನ ಬಂಧಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿಯುತ್ತಿದೆ ಎಂದು ದಕ್ಷಿಣ ವಲಯದ ಡಿಸಿಪಿ ರಾಹುಲ್ ರಾಜ್ ತಿಳಿಸಿದ್ದಾರೆ. ಇದನ್ನೂ ಓದಿ: ದೊಡ್ಮನೆಯಲ್ಲಿ ಹುಲಿವೇಷ: ಕುಣಿದು ಕುಪ್ಪಳಿಸಿದ ರೂಪೇಶ್ ಶೆಟ್ಟಿ

    Live Tv
    [brid partner=56869869 player=32851 video=960834 autoplay=true]