ಚೆನ್ನೈ: ಉಚಿತ ಸೀರೆಯನ್ನು (Saree) ಪಡೆಯಲು ನೂಕು ನುಗ್ಗಲು ಉಂಟಾಗಿ, ಕಾಲ್ತುಳಿತದಿಂದ ನಾಲ್ವರು ವೃದ್ಧ ಮಹಿಳೆಯರು (Women) ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡ ಘಟನೆ ತಮಿಳುನಾಡಿನ (Tamil Nadu) ತಿರುಪತ್ತೂರು ಜಿಲ್ಲೆಯ ವನ್ನಿಯಂಬಾಡಿ ಬಳಿ ನಡೆದಿದೆ.
ಸೀರೆ ವಿತರಣಾ ಕಾರ್ಯಕ್ರಮದ ವೇಳೆ ಈ ಘಟನೆ ಸಂಭವಿಸಿದೆ. ತೈಪೂಸಂ ಹಬ್ಬದ ಮುನ್ನ ಅಯ್ಯಪ್ಪನ್ ಎಂಬಾತ ಉಚಿತ ಸೀರೆ ವಿತರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಟೋಕನ್‍ಗಳನ್ನು ಸಂಗ್ರಹಿಸಲು ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ್ದರು.
ಉಚಿತ ಸೀರೆ ಪಡೆಯಲು ನೂಕು ನುಗ್ಗಲು ಉಂಟಾಗಿದೆ. ಈ ವೇಳೆ ಕಾಲ್ತುಳಿತಕ್ಕೆ ನಾಲ್ವರು ವೃದ್ಧ ಮಹಿಳೆಯರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೇ ಅನೇಕರು ಗಾಯಗೊಂಡಿದ್ದಾರೆ. ಜೊತೆಗೆ ಪ್ರಜ್ಞೆ ಕಳೆದುಕೊಂಡಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಸಿದ್ದಗಂಗೆ, ಆದಿ ಚುಂಚನಗಿರಿ ಗುರುಗಳ ಪರಮ ಶಿಷ್ಯ, ಅಭಿವೃದ್ಧಿ ಜಪ ಮಾಡೋನು: ಸೋಮಣ್ಣ
ಕಾರವಾರ: ಅಂಕೋಲಕ್ಕೆ ತನ್ನ ವೈಯಕ್ತಿಕ ಸಮಸ್ಯೆ ನಿವಾರಣೆಗೆ ಕಾಲಭೈರವ ದೇವರ ಬಳಿ ಬಂದಿದ್ದ ಬೆಳಗಾವಿ (Belagavi) ಮೂಲದ ಮಹಿಳೆಗೆ (Women) ಮದುವೆಯಾಗುವುದಾಗಿ ದೈವ ನರ್ತಕ (Daiva Narthaka) ಅಭಯವಿತ್ತ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ (Uttara Kannada Ankola) ಅಂಬಾರಕೊಡ್ಲೆನಲ್ಲಿ ನಡೆದಿದೆ.
ಏನಿದು ಘಟನೆ?
ಬೆಳಗಾವಿಯ ಮಹಿಳೆಯೊಬ್ಬರು ಕೌಟುಂಬಿಕ ಸಮಸ್ಯೆಯನ್ನು ಹೇಳಿಕೊಂಡು ಅಂಕೋಲದಲ್ಲಿರುವ ಕಾಲಭೈರವ ದೇವರ ಸನ್ನಿದಾನಕ್ಕೆ ಬಂದಿದ್ದಾರೆ. ಬಂದು ತಮ್ಮ ಸಮಸ್ಯೆಯನ್ನು ದೈವದ ನರ್ತಕನ ಬಳಿ ಹೇಳಿಕೊಂಡಿದ್ದಾರೆ. ಈ ವೇಳೆ ಅವನ ಅರ್ಧಾಂಗಿ ಅವನಿಗೆ ಕೈಕೊಟ್ಟು 10 ವರ್ಷವಾಯಿತು. ಆದ್ರೂ ಒಬ್ಬಂಟಿಯಾಗಿ ಈ ಸ್ಥಳದಲ್ಲಿ ಸಾಧನೆ ಮಾಡುತ್ತಿದ್ದಾನೆ. ಆದ್ರೆ ನಾನು ಮಹಾ ಕಾಳಿಯಾಗಿ, ದುರ್ಗಿಯಾಗಿ ಒಂದು ನಿರ್ಧಾರ ಮಾಡುತ್ತಿದ್ದೇನೆ. ಇದು ಸಂಪೂರ್ಣವಾಗಿ ಬಹಿರಂಗ ಪಡಿಸುತ್ತಿದ್ದೇನೆ. ಇವತ್ತಿನಿಂದ ಈ ಬಾಲಕಿ ಈ ಬಾಲಕನ ಅರ್ಧಾಂಗಿಯಾಗಿ ಸಂಪೂರ್ಣ ಅರ್ಧನಾರೇಶ್ವರಿಯಾಗಿ ಈ ಬಾಲಕನ ಹೃದಯದಲ್ಲಿ ಮನೆ ಮಾಡಿರುತ್ತಾಳೆ. ಇದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಈ ಬಾಲಕಿಯೇ ಈ ಬಾಲಕನ ಮುಂದಿನ ಮಡದಿ. ಕೊನೆಯ ಉಸಿರು ಇರುವವರೆಗೆ ಶೀಲವಂತವಳಾಗಿ ಯಾವುದೇ ಹೀನವಾಗದ ರೀತಿಯಲ್ಲಿ ಮರ್ಯಾದೆ ಮುಖಾಂತರವಾಗಿ ಈ ಬಾಲಕನ ಒಟ್ಟಿಗೆ ಬೆಳೆಯುತ್ತಾಳೆ. ಇಂದು ಇಲ್ಲವೇ ನಾಳೆ ಧರ್ಮಸ್ಥಳ, ಮಂತ್ರಾಲಯ, ಈ ಮೂರು ಸ್ಥಳದಲ್ಲಿ ಒಂದು ಸ್ಥಳದಲ್ಲಿ ಈ ಬಾಲಕಿಗೆ ತಾಳಿ ಬೀಳುತ್ತದೆ ಎಂದು ನುಡಿದಿದ್ದಾನೆ. ಇದನ್ನೂ ಓದಿ: ವೈದ್ಯರ ನಿರ್ಲಕ್ಷ್ಯಕ್ಕೆ ಜ್ಯೂನಿಯರ್ ಆರ್ಟಿಸ್ಟ್ ಬಲಿ : ತಾಯಿಯ ಆರೋಪ
ಈ ದೈವನರ್ತಕನ ಅಭಯದ ಮಾತಿನ ವೀಡಿಯೋ ತುಣುಕು ಇದೀಗ ಎಲ್ಲೇಡೆ ವೈರಲ್ ಆಗುತ್ತಿದೆ. ಈ ನಡುವೆ ದೈವ ನರ್ತಕ ಪಾತ್ರಿಗೆ ಮದುವೆಯಾಗಿ ಹೆಂಡತಿ ಬಿಟ್ಟು ಹೋಗಿದ್ದಾಳೆ. ವಿವಾಹಿತ ಮಹಿಳೆಗೂ ಗಂಡ ಬಿಟ್ಟಿರುವ ಮಾಹಿತಿ ಈತನಿಗೆ ಮೊದಲೇ ತಿಳಿದಿತ್ತು. ಹಾಗಾಗಿ ಈತ ಮೋಸ ಮಾಡಲು ಮುಂದಾಗಿದ್ದಾನೆ ಎಂಬ ಆರೋಪಗಳು ಸ್ಥಳೀಯರಿಂದ ಕೇಳಿ ಬರುತ್ತಿದೆ. ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ – ಪ್ರಾಂಶುಪಾಲನ ವಿರುದ್ಧ ರೇಪ್ ಕೇಸ್
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ವರದಕ್ಷಿಣೆ (Dowry) ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ಟೆಕ್ಕಿ (Techie) ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ (Bengaluru Varthur Police Station) ವ್ಯಾಪ್ತಿಯಲ್ಲಿ ನಡೆದಿದೆ.
ಟೆಕ್ಕಿ ಗೃಹಿಣಿ ಮಾಧುರಿ (26) ಮೃತ ಮಹಿಳೆ. ಗುರುಪ್ರಸಾದ್ ಎಂಬಾತನೊಂದಿಗೆ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಮಾಧುರಿ ಕಳೆದ ಗುರುವಾರ ವಿಷ ಸೇವಿಸಿ ಆತ್ಮಹತ್ಯೆಗೆ (Suicide) ಯತ್ನಿಸಿದ್ದಾಳೆ. ಮಂಗಳವಾರ (ಜ.31) ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ (Private Hospital) ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಶುದ್ಧ ಹಿಂದೂಗಳು ರಾಮಮಂದಿರಕ್ಕೆ ವಿರೋಧ ಮಾಡಲ್ಲ – ಸಿ.ಟಿ ರವಿ
ಮದುವೆಯಾದ (Marriage) ಆರಂಭದಲ್ಲಿ ಸಂಸಾರ ಚೆನ್ನಾಗಿಯೇ ಇತ್ತು. ಕೆಲ ವರ್ಷಗಳ ನಂತರ ಇಬ್ಬರ ನಡುವೆ ಜಗಳ ಶುರುವಾಗಿದೆ. ಮದುವೆಯಾದ್ರೂ ಮತ್ತೊಬ್ಬಳು ಯುವತಿಯ ಜೊತೆ ಪತಿ ಗುರುಪ್ರಸಾದ್ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಬಗ್ಗೆ ಗೊತ್ತಾಗಿದ್ದೇ ತಡ ಮಾಧುರಿ ಆತನನ್ನ ಪ್ರಶ್ನೆ ಮಾಡಲು ಶುರು ಮಾಡಿದ್ದಾಳೆ. ಆಗಾಗ್ಗೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಇದರಿಂದ ಪತಿ ವರದಕ್ಷಿಣೆಗಾಗಿ ಮಾಧುರಿಗೆ ಕಿರುಕುಳ ನೀಡುತ್ತಿದ್ದ ಅಂತಾ ಗುರುಪ್ರಸಾದ್ ಮತ್ತು ಕುಟುಂಬಸ್ಥರ ವಿರುದ್ಧ ವರ್ತೂರು ಠಾಣೆಗೆ ದೂರು ನೀಡಲಾಗಿತ್ತು.
ಇದರ ಹೊರತಾಗಿಯೂ ಕಳೆದ ಗುರುವಾರ ಮನೇಲಿ ಮತ್ತೆ ಜಗಳ ಶುರುವಾಗಿದೆ. ಈ ವೇಳೆ ಮಾಧುರಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ನಂತರ ಆಕೆಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಾವನ್ನಪ್ಪಿದ್ದಾಳೆ. ಮಗಳ ಸಾವಿಗೆ ಪತಿ ಗುರುಪ್ರಸಾದ್ ಹಾಗೂ ಕುಟುಂಬಸ್ಥರೇ ಕಾರಣ ಎಂದು ಮಾಧುರಿ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯರನ್ನ ಕೆಣಕಲ್ಲ, ಡಿಕೆಶಿ ಸಿಂಗಲ್ ಟಾರ್ಗೆಟ್- ರಮೇಶ್ ಶಪಥ?
ಸದ್ಯ ಘಟನೆ ನಡೆಯುತ್ತಿದ್ದಂತೆ ಗುರುಪ್ರಸಾದ್ ಮತ್ತು ಕುಟುಂಬಸ್ಥರು ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಶುರು ಮಾಡಿರೋ ಪೊಲೀಸರು ಗುರುಪ್ರಸಾದ್ ಕುಟುಂಬದ ಓರ್ವ ವ್ಯಕ್ತಿಯನ್ನ ವಶಕ್ಕೆ ಪಡೆದಿದ್ದಾರೆ. ಉಳಿದವರಿಗಾಗಿ ಶೋಧ ಆರಂಭಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಹಾಸನ: ಫೇಸ್‌ಬುಕ್‌ನಲ್ಲಿ (FaceBook) ಪರಿಚಯವಾದ ಯುವಕನಿಗಾಗಿ ಬೆಂಗಳೂರು ಬಿಟ್ಟು ಹಾಸನಕ್ಕೆ ಬಂದಿದ್ದವಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ (Hassan) ಹೊರವಲಯದ ಗುಡ್ಡೇನಹಳ್ಳಿಯಲ್ಲಿ ನಡೆದಿದೆ.
ಬೆಂಗಳೂರಿನ (Bengaluru) ವಿಜಯನಗರದ ಸಿರಿಸ್ ಅಲಿಯಾಸ್ ಸಿರಿ (23) ಮೃತಪಟ್ಟವಳು. ಈಕೆಗೆ ಕಟ್ಟಾಯ ಹೋಬಳಿಯ ಮಾರನಾಯಕನಹಳ್ಳಿ ಗ್ರಾಮದ ಆದರ್ಶ್ (26) ಎಂಬಾತನ ಜೊತೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿತ್ತು. ನಂತರ ಇಬ್ಬರೂ ಪೆಟ್ರೋಲ್ ಬಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಹಾಸನದ ಗುಡ್ಡೇನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇಬ್ಬರೂ ಲಿವಿಂಗ್ ಟುಗೆದರ್ ರಿಲೇಷನ್‌ಶಿಪ್‌ನಲ್ಲಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕಾರು ಗ್ಯಾರೇಜ್‍ನಲ್ಲಿ ನೋಡನೋಡ್ತಿದ್ದಂತೆ 3ಕ್ಕೂ ಹೆಚ್ಚು ವಾಹನಗಳು ಧಗಧಗ
ಈ ಮೊದಲು ಸಿರಿಸ್ ಬೆಂಗಳೂರಿನಲ್ಲೇ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಆದರ್ಶ್ ಪರಿಚಯವಾಗಿದೆ. ಬಳಿಕ ಆಕೆ ಬೆಂಗಳೂರು ಬಿಟ್ಟು ಹಾಸನಕ್ಕೆ ಬಂದಿದ್ದಾಳೆ. ನಂತರ ಇಬ್ಬರೂ ಪೆಟ್ರೋಲ್ ಬಂಕ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರು ಮದುವೆಯಾಗಿರುವ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಲಿವಿಂಗ್ ಟುಗೆದರ್‌ನಲ್ಲಿದ್ದರು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸಿರಿಸ್‌ನ್ನು ಕೊಲೆ ಮಾಡಿ ಮನೆಗೆ ಬೀಗ ಹಾಕಿಕೊಂಡು ಆದರ್ಶ್ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಶ್ವಾನ ದಳ, ಎಎಸ್‌ಪಿ ತಮ್ಮಯ್ಯ, ಡಿವೈಎಸ್‌ಪಿ ಉದಯ್‌ಭಾಸ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Live Tv
[brid partner=56869869 player=32851 video=960834 autoplay=true]
ಮಂಡ್ಯ: ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ಓರ್ವ ಮಹಿಳೆ ಹಾಗೂ ಓರ್ವ ವೃದ್ಧೆ ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯ (Mandya) ರೈಲ್ವೆ ನಿಲ್ದಾಣದಲ್ಲಿ (Railway Station) ನಡೆದಿದೆ.
ಬುಧವಾರ ಬೆಳಗ್ಗೆ 9 ಗಂಟೆಗೆ ಮೈಸೂರಿನಿಂದ (Mysuru) ಮಂಡ್ಯಗೆ ಸಾವಿರಾರು ಜನರನ್ನು ಹೊತ್ತು ಬಂದ ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲು ಇಬ್ಬರು ಪ್ರಾಣ ಪಕ್ಷಿಯನ್ನು ಹಾರಿಸಿದೆ. ಓರ್ವ ಮಹಿಳೆ ಹಾಗೂ ಓರ್ವ ವೃದ್ಧೆ ಬೆಂಗಳೂರಿನಿಂದ (Bengaluru) ರೈಲಿನಲ್ಲಿ ಬಂದಿಳಿದು ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಪೇಟೆ ಬೀದಿಯ ರೈಲ್ವೆ ಜಂಕ್ಷನ್ ದಾಟುವ ವೇಳೆ ಮಾಲ್ಗುಡಿ ಎಕ್ಸ್‌ಪ್ರೆಸ್ ವೇಗವಾಗಿ ಬಂದಿದೆ. ಇದನ್ನು ಕಂಡ ಜನರು ಇಬ್ಬರನ್ನು ಕೂಗಿಕೊಂಡಿದ್ದಾರೆ. ರೈಲು ಬರುವ ಶಬ್ಧಕ್ಕೆ ಜನರ ಕೂಗು ಆ ಇಬ್ಬರಿಗೆ ಕೇಳಿಲ್ಲ. ನಂತರ ರೈಲು ಬಂದು ಮಹಿಳೆ ಹಾಗೂ ವೃದ್ಧೆಯ ಮೇಲೆ ಹರಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಸರ್ಕಾರಿ ಕಚೇರಿಗಳ ಕರೆಂಟ್ ಬಿಲ್ ಕಳ್ಳಾಟ – 5,058 ಕೋಟಿ ರೂ. ಬಿಲ್ ಬಾಕಿ
ರೈಲು ಬಂದು ಹರಿದ ಪರಿಣಾಮ ಮಹಿಳೆ ಸೊಂಟದ ಭಾಗ ತುಂಡಾಗಿದ್ದು, ವೃದ್ಧೆಯ ತಲೆ ನಜ್ಜು-ಗುಜ್ಜಾಗಿದೆ. ಇಬ್ಬರ ಗುರುತನ್ನು ಹೇಗೆ ಪತ್ತೆ ಮಾಡುವುದು ಎಂದು ರೈಲ್ವೆ ಪೊಲೀಸರಿಗೆ ಸಹ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿತ್ತು. ಈ ವೇಳೆ ಸೌಭಾಗ್ಯ ಎಂಬ ಮಹಿಳೆ ಮೃತ ಮಹಿಳೆಯ ದೇಹವನ್ನು ನೋಡಿ ಗುರುತು ಹಿಡಿದು ಗೋಳಾಡಿದರು.
ರೈಲಿಗೆ ಸಿಕ್ಕಿ ಸಾವನ್ನಪ್ಪಿದ ಮಹಿಳೆ ಮಂಡ್ಯದ ಬಸರಾಳು ಸಮೀಪದ ಹುರುಳಿಜವರನಕೊಪ್ಪಲು ಗ್ರಾಮದ ಶಶಿ ಎಂದು ತಿಳಿದುಬಂದಿದೆ. ಶಶಿ ಹಾಗೂ ಸಂಸಾರ ಬೆಂಗಳೂರಿನಲ್ಲಿ ವಾಸವಾಗಿದ್ದು, ಇಂದು ಬೆಂಗಳೂರಿನಿಂದ ಹುರುಳಿಜವರನಕೊಪ್ಪಲು ಗ್ರಾಮಕ್ಕೆ ಹೋಗಲು ರೈಲಿನಿಂದ ಮಂಡ್ಯಗೆ ಬಂದಿದ್ದಾರೆ. ಈ ವೇಳೆ ರೈಲ್ವೆ ಹಳಿಯನ್ನು ದಾಟುವಾಗ ಈ ಅವಘಡ ಜರುಗಿದೆ. ಇನ್ನೂ ಸಾವನ್ನಪ್ಪಿರುವ ವೃದ್ಧೆಯ ತಲೆ ನಜ್ಜುಗುಜ್ಜು ಆಗಿರುವ ಕಾರಣ ಆಕೆಯ ಗುರುತು ಇನ್ನೂ ಪತ್ತೆಯಾಗಿಲ್ಲ.
Live Tv
[brid partner=56869869 player=32851 video=960834 autoplay=true]
ಲಕ್ನೋ: ಮಹಿಳೆಯೊಬ್ಬರು ನಾಗವಲ್ಲಿ ವೇಷ ತೊಟ್ಟು (ಹಿಂದಿ – ಮಂಜುಲಿಕಾ) ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಬೆದರಿಸುತ್ತಿರುವ ದೃಶ್ಯಗಳ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
2007ರಲ್ಲಿ ಬಿಡುಗಡೆಯಾಗಿದ್ದ ಬಾಲಿವುಡ್ ಸಿನಿಮಾ ʼಭೂಲ್ ಭುಲಯ್ಯ’ದಲ್ಲಿ (Bhool Bhulaiya) ಮಂಜುಲಿಕಾ (Manjulika) ಪಾತ್ರ ಗಮನ ಸೆಳೆದಿತ್ತು. ಆ ಪಾತ್ರದ ಮಾದರಿಯ ವೇಷ ತೊಟ್ಟಿದ್ದ ಮಹಿಳೆ ನೋಯ್ಡಾ ಮೆಟ್ರೋ (Noida Metro) ಹತ್ತಿ, ಪ್ರಯಾಣಿಕರನ್ನು ಬೆದರಿಸುವಂತೆ ನಟಿಸಿದ್ದಾರೆ. ಇದನ್ನೂ ಓದಿ: ವಿಧವೆ ತಾಯಿಗೆ ತಾನೇ ಮುಂದೆ ನಿಂತು ಮರುಮದುವೆ ಮಾಡಿಸಿದ ಮಗ
ಮೆಟ್ರೋದಲ್ಲಿ ನಿಂತಿದ್ದವರನ್ನಷ್ಟೇ ಅಲ್ಲ, ಸೀಟ್‌ನಲ್ಲಿ ಕುಳಿತಿದ್ದವರ ಬಳಿಗೂ ಹೋಗಿ ಮಹಿಳೆ ಹೆದರಿಸುವುದು, ಪಾತ್ರದ ಸನ್ನಿವೇಶಗಳನ್ನು ಮಹಿಳೆ ಅಭಿನಯ ಮಾಡಿದ್ದಾರೆ.
ಕಿವಿಗೆ ಹೆಡ್‌ಫೋನ್ ಹಾಕಿಕೊಂಡು ತನ್ನಷ್ಟಕ್ಕೆ ತಾನು ಮೊಬೈಲ್ ನೋಡುತ್ತಿದ್ದ ಯುವಕನ ಬಳಿಗೆ ಮಹಿಳೆ ಹೋಗಿ ಬೆನ್ನು ತಟ್ಟಿದ್ದಾರೆ. ಆತನನ್ನೂ ಬೆದರಿಸುವಂತೆ ಅಭಿನಯಿಸಿದ್ದಾರೆ. ಇದನ್ನು ಗಮನಿಸಿದ ಯುವಕ ಸೀಟ್‌ನಿಂದ ಎದ್ದು ಹೋಗಿದ್ದಾನೆ. ನಂತರ ಆಕೆ ಆ ಸೀಟ್‌ನಲ್ಲಿ ಕುಳಿತುಕೊಂಡ ದೃಶ್ಯದ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಸರ್ಕಾರಿ ಹುದ್ದೆ ಉಳಿಸಿಕೊಳ್ಳಲು ಹೆಣ್ಣು ಮಗುವನ್ನು ಕಾಲುವೆಗೆ ಎಸೆದ ದಂಪತಿ!
ಆಕೆ ನಂತರ, ನೆಟ್‌ಫ್ಲಿಕ್ಸ್ ಶೋ ‘ಮನಿ ಹೀಸ್ಟ್’ನಿಂದ ಪ್ರೇರಿತ ಪಾತ್ರದಂತೆ ವೇಶ ಧರಿಸಿದ್ದ ಮತ್ತೊಬ್ಬ ವ್ಯಕ್ತಿ ಮೆಟ್ರೋದಲ್ಲಿ ಕಾಣಿಸಿಕೊಳ್ಳುತ್ತಾನೆ. ವೀಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. “ಮೆಟ್ರೋದಲ್ಲಿ ಮಕ್ಕಳು ಹೆದರಿಕೊಳ್ಳುತ್ತಾರೆ” ಎಂದು ಅನೇಕರು ಮಹಿಳೆಯ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೀಡಿಯೋ ವೈರಲ್ ಆದ ಬಳಿಕ ಘಟನೆಯನ್ನು ಗಮನಿಸಿ ಅನೇಕರು ಪೊಲೀಸ್ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದಾರೆ. ಆಕೆಯ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.
Live Tv
[brid partner=56869869 player=32851 video=960834 autoplay=true]
ತುಮಕೂರು: ಜ.20 ಮತ್ತು 21ರಂದು ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ನಡೆಯಲಿದೆ ಎಂದು ರಾಜ್ಯ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ (BJP) ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಆಶಯದಂತೆ ಕಾರ್ಯಕ್ರಮ ಏರ್ಪಡಿಸಿದ್ದು, ಆರ್‌ಟಿಪಿ ಕನ್ವೆನ್ಶನ್ ಸೆಂಟರ್, ಶೆಟ್ಟಿ ಹಳ್ಳಿ ರಿಂಗ್ ರೋಡ್ ತುಮಕೂರಿನಲ್ಲಿ ಕಾರ್ಯಕಾರಿಣಿ ನಡೆಯಲಿದೆ ಎಂದರು. ಇದನ್ನೂ ಓದಿ: ಕೆ.ಆರ್. ಪೇಟೆಯಲ್ಲಿ ಜೆಡಿಎಸ್ ಬಂಡಾಯದ ಬಾವುಟ – ಹೆಚ್‍ಡಿಕೆ ನಡೆಗೆ ವಿರೋಧ
ಮಹಿಳೆಯರಿಗೆ ವಿಶೇಷ ಗೌರವ, ಘನತೆಯನ್ನು ಕರ್ನಾಟಕ ರಾಜ್ಯ ನೀಡಿದೆ. ಕಳೆದ 8 ವರ್ಷಗಳ ಅವಧಿಯಲ್ಲಿ ನಮ್ಮ ರಾಜ್ಯದ ಅನೇಕ ಸಾಧಕ ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪದ್ಮ ಪುರಸ್ಕಾರ ಸೇರಿ ವಿಶೇಷ ಗೌರವ ನೀಡಿದ್ದಾರೆ. ತುಮಕೂರು ಜಿಲ್ಲೆಯ ಸೂಲಗಿತ್ತಿ ನರಸಮ್ಮ, ಸುಕ್ರಿ ಬೊಮ್ಮನಗೌಡ ಅವರಿಗೂ ಗೌರವ ಲಭಿಸಿದೆ. ಪರಿಸರಕ್ಕೆ ಕೊಡುಗೆ ನೀಡಿದ ಸಾಲುಮರದ ತಿಮ್ಮಕ್ಕ ಅವರನ್ನೂ ಗೌರವಿಸಲಾಗಿದೆ ಎಂದು ತಿಳಿಸಿದರು.
ಅನೇಕ ವಿಷಯಗಳ ಚಿಂತನ-ಮಂಥನ ನಡೆಯಲಿದೆ. 37 ರಾಜ್ಯಗಳ ಮಹಿಳಾ ಘಟಕದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮೋರ್ಚಾದ ರಾಷ್ಟ್ರೀಯ ಪ್ರಭಾರಿ ದುಷ್ಯಂತಕುಮಾರ್ ಗೌತಂ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರೂ ಭಾಗವಹಿಸಲಿದ್ದಾರೆ. 20ರಂದು ಸಂಜೆ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾದ ವಾನತಿ ಶ್ರೀನಿವಾಸನ್ ಅಧ್ಯಕ್ಷತೆಯಲ್ಲಿ ಉದ್ಘಾಟನೆಯಾಗಲಿದೆ. ಸ್ಥಳೀಯ ಸಂಸದರು, ಶಾಸಕರು ಭಾಗವಹಿಸಲಿದ್ದಾರೆ. 21ರಂದು ಮಧ್ಯಾಹ್ನ ಸಮಾರೋಪ ಸಮಾರಂಭ ನಡೆಯಲಿದೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ತಾಖತ್, ಶಕ್ತಿ ಇದ್ರೆ ಯೂ ಟರ್ನ್ ಮಾಡದೆ ಸ್ಪರ್ಧೆ ಮಾಡಲಿ: ವರ್ತೂರು ಪ್ರಕಾಶ್ ಸವಾಲ್
ಮೊದಲ ದಿನ ಬೆಳಗ್ಗೆ ತುಮಕೂರಿನ ಟೌನ್‍ಹಾಲ್ ಸರ್ಕಲ್‍ನಿಂದ ತುಮಕೂರು (Tumakuru) ಸಿದ್ಧಗಂಗಾ ಮಠದ ಆವರಣಕ್ಕೆ ಬೈಕ್ ರ‍್ಯಾಲಿ ನಡೆಯಲಿದೆ. ಪರಿಸರ ಸ್ನೇಹಿ ಮತ್ತು ಸ್ಥಳೀಯ ಉಡುಗೆ ತೊಡುಗೆಗಳಿಗೆ, ಆಹಾರಕ್ಕೆ ಆದ್ಯತೆ ಕೊಡಲಾಗುತ್ತಿದೆ ಎಂದರಲ್ಲದೇ, ‘ನಾ ನಾಯಕಿ’ ಎಂದು ಘೋಷಿಸಿದ ಪ್ರಿಯಾಂಕಾ ಗಾಂಧಿ (Priyanka Gandhi) ಅವರು ಚುನಾವಣೆ ಬಳಿಕ ನಾ ನಾಪತ್ತೆ ಆಗಲಿದ್ದಾರೆ ಎಂದು ವ್ಯಂಗ್ಯವಾಡಿದರು.
ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷರಾದ ಗೀತಾ ವಿವೇಕಾನಂದ ಮಾತನಾಡಿ, ಇದಲ್ಲದೆ ರಾಜ್ಯ ಮಹಿಳಾ ಸಮಾವೇಶವು ಇದೇ 28 ಅಥವಾ 29ರಂದು ನಡೆಯಲಿದೆ. ‘ನಾ ನಾಯಕಿ’ ಎನ್ನುವವರು ವರ್ಷಗಳಿಂದ ಬೇರೆಯವರಿಗೆ ಅವಕಾಶವನ್ನೇ ಕೊಟ್ಟಿಲ್ಲ. ಕಾಂಗ್ರೆಸ್‍ನವರು ಸುಳ್ಳು, ಅವೈಜ್ಞಾನಿಕ ಭರವಸೆ ಕೊಡುತ್ತಿದ್ದಾರೆ. ಅಂಥ ಭರವಸೆಗಳನ್ನು ನಾವು ನೀಡುವುದಿಲ್ಲ ಎಂದರು.
ಛತ್ತೀಸಗಡದಲ್ಲಿ 4 ವರ್ಷಗಳ ಹಿಂದೆ ಚುನಾವಣೆ ನಡೆದಿತ್ತು. ನಿರುದ್ಯೋಗ ಯುವತಿಯರಿಗೆ 2,500 ರೂಪಾಯಿ ಭತ್ಯೆ, 1,000 ರೂ. ವಿಧವಾ ಪಿಂಚಣಿ ಕೊಡುವ ಭರವಸೆ ಕೊಟ್ಟಿದ್ದರೂ ಅವು ಈಡೇರಿಲ್ಲ. ಹಿಮಾಚಲಪ್ರದೇಶ ಇಂಥದ್ದೇ ಭರವಸೆ ನೀಡಿದ್ದು, ಅದು ಜಾರಿಯಾಗಿಲ್ಲ. ರಾಜಸ್ಥಾನದಲ್ಲಿ ಮಹಿಳೆಯರಿಗೆ ಸಂಬಂಧಿಸಿ ವಿವಿಧ ಭರವಸೆ ಕೊಟ್ಟಿದ್ದರು. ಪ್ರಿಯಾಂಕಾ ಗಾಂಧಿ ಘೋಷಣೆಗಳು ಕೇವಲ ಘೋಷಣೆಯಾಗಿ ಉಳಿದಿವೆ ಎಂದು ಟೀಕಿಸಿದರು.
ಎಲ್ಲ ಗೃಹಿಣಿಯರಿಗೆ 2 ಸಾವಿರ ರೂಪಾಯಿ ಕೊಡಲು ಸಾಧ್ಯವೇ ಎಂದು ಕೇಳಿದ ಅವರು ಇದು ಓಲೈಕೆ ರಾಜಕಾರಣ. ಕರ್ನಾಟಕದ ಪ್ರಜ್ಞಾವಂತ ಮಹಿಳೆಯರು ಇವರ ಮಾತಿಗೆ ಮರುಳಾಗುವುದಿಲ್ಲ. ನಾವು ಕೇವಲ ಘೋಷಣೆ ಮಾಡುವುದಿಲ್ಲ. ಅವುಗಳನ್ನು ಜಾರಿಗೆ ತಂದಿವೆ ಎಂದು ತಿಳಿಸಿದರು. ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಎಲ್.ದೀಪಿಕಾ ಉಪಸ್ಥಿತರಿದ್ದರು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ರಾಜ್ಯ ಕಾಂಗ್ರೆಸ್ (Congress) ಪಾಳಯ ಈ ಬಾರಿ ಮಹಿಳಾ (Women) ವೋಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಹಟಕ್ಕೆ ಬಿದ್ದಿದೆ ಎನ್ನಲಾಗಿದೆ. ಮಹಿಳಾ ಮತದಾರರು ʼಕೈʼ ಹಿಡಿದರಷ್ಟೇ ಗೆಲುವು ಎಂಬ ಲೆಕ್ಕಾಚಾರದಲ್ಲಿ ನಾರಿಯರ ಮನ ಗೆಲ್ಲಲು ಕೈ ಪಾಳಯದಲ್ಲಿ ಸಿದ್ದತೆ ಜೋರಾಗಿದೆ.
ರಾಜ್ಯದ ಮಹಿಳಾ ಮತದಾರರ ಮನವೊಲಿಕೆಗೆ ಇನ್ನಷ್ಟು ಯೋಜನೆ ಘೋಷಣೆ ಮಾಡಲು ʼಕೈʼ ಪಾಳಯ ಮುಂದಾಗಿದೆ ಎನ್ನಲಾಗುತ್ತಿದೆ. ರಾಜ್ಯದ ಮಹಿಳಾ ಮತದಾರರ ಮನಗೆಲ್ಲುವ ಭರವಸೆ ಘೋಷಣೆಯ ಟಾಸ್ಕ್‌ನ್ನು ಪ್ರಿಯಾಂಕಾ ಗಾಂಧಿ (Priyanka Gandhi) ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ 3 ಮಂತ್ರಗಳ ತಂತ್ರಕ್ಕೆ ಮೊರೆ ಹೋಗಲು ಕಾಂಗ್ರೆಸ್ ಸಿದ್ಧತೆ
ಪ್ರಚಾರಕ್ಕೆ ನಾನು ಬರ್ತೀನಿ. ನೀವು ಮಹಿಳಾಪರ ವಿಚಾರವನ್ನ ಮಹಿಳೆಯರ ಮುಂದಿಡಿ ಎಂದು ಪ್ರಿಯಾಂಕಾ ಗಾಂಧಿ ಸೂಚಿಸಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿಗೆ ಪ್ರಿಯಾಂಕಾ ಗಾಂಧಿ ಮಹಿಳಾ ಮಂತ್ರ ಜಪ ಮಾಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ (Congress) ಈಗಾಗಲೇ ಘೋಷಿಸಿರುವ ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಎರಡು ಕೂಡ ಮಹಿಳೆಯರ ಮನಗೆಲ್ಲುವಂತಿದೆ. ಈ ಹಿಂದೆ ರಾಜ್ಯದಲ್ಲಿ ಸ್ರೀಶಕ್ತಿ ಸಂಘ ಹುಟ್ಟು ಹಾಕಿದ್ದು ಕಾಂಗ್ರೆಸ್. ಅದರ ಲಾಭ ಪಡೆದಿದ್ದು ಬಿಜೆಪಿ. ಈ ಬಾರಿ ಹಾಗಾಗಬಾರದು. ಹಾಗಾಗದಂತೆ ಎಚ್ಚರ ವಹಿಸಿ. ನಮ್ಮ ಸರ್ಕಾರ ಅಧಿಕಾರದಲ್ಲಿ ಇರುವಷ್ಟು ದಿನ ನಮ್ಮ ಯೋಜನೆ ನೇರವಾಗಿ ಜನರಿಗೆ ತಲುಪಬೇಕು. ಅದರಲ್ಲೂ ಮಹಿಳೆಯರನ್ನೇ ಗುರಿಯಾಗಿಟ್ಟುಕೊಂಡು ದೊಡ್ಡ ದೊಡ್ಡ ಯೋಜನೆ ರೂಪಿಸಿ ಪ್ರಣಾಳಿಕೆಗೆ ತನ್ನಿ ರಾಜ್ಯ ನಾಯಕರಿಗೆ ಮಹಿಳಾ ಶಕ್ತಿ ಬಳಸಿಕೊಳ್ಳಲು ಪ್ರಿಯಾಂಕಾ ಗಾಂಧಿ ಈ ಟಿಪ್ಸ್ ನೀಡಿದ್ದಾರೆ ಎನ್ನುತ್ತಿದೆ ಕೈ ಪಾಳಯದ ಮೂಲಗಳು. ಇದನ್ನೂ ಓದಿ: ಕರ್ನಾಟಕದ 4 ದಿಕ್ಕುಗಳ ರಥಯಾತ್ರೆಗೆ ಬಿಜೆಪಿ ಬ್ಲೂಪ್ರಿಂಟ್ ಏನು? ಯಾರು ಯಾವ ಕಡೆ!?
ಮಹಿಳಾ ಮತದಾರರ ಮನಗೆಲ್ಲುವ ಹೆಚ್ಚೆಚ್ಚು ಯೋಜನೆ ಘೋಷಣೆ ಮಾಡಿ. ಅಗತ್ಯ ಇದ್ದಲ್ಲಿ ಪ್ರಚಾರಕ್ಕೆ ನಾನು ಬಂದೇ ಬರುತ್ತೇನೆ. ಮಹಿಳಾ ಮತದಾರರ ಮನಗೆಲ್ಲಲು ಅಗತ್ಯ ಯೋಜನೆ ಮುಂದಿಡಿ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಅಕ್ರಮ ಸಂಬಂಧ ನಿರಾಕರಿಸಿದ್ದಕ್ಕೆ ಮಹಿಳೆಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿರೋ ಘಟನೆ ಬೆಂಗಳೂರಿನ (Bengaluru) ಆರ್.ಟಿ ನಗರದಲ್ಲಿ ನಡೆದಿದೆ.
ಹಬೀಬಾ ತಾಜ್ (30) ಚಾಕು ಇರಿತಕ್ಕೊಳಗಾದ ಮಹಿಳೆ (Women). ಹಬೀಬಾ ತಾಜ್‌ಗೆ ವಿವಾಹವಾಗಿ 6 ವರ್ಷದ ಹಿಂದೆ ಪತಿ ಸಾವನ್ನಪ್ಪಿದ್ದರು. ಇಬ್ಬರು ಮಕ್ಕಳ ಜೊತೆ ತಾಜ್ ಆರ್.ಟಿ ನಗರದಲ್ಲಿ ವಾಸವಾಗಿದ್ದಳು. ಈ ಮಧ್ಯೆ ಹಬೀಬಾ ಆಟೋ ಚಾಲಕ (Auto Driver) ಶೇಖ್ ಮೆಹಬೂಬ್ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಳು. ಆತನಿಗೂ ಮದುವೆಯಾಗಿ ಮಕ್ಕಳಿದ್ದಾರೆ. ಶೇಖ್‌ಗೆ ಮದುವೆ ವಯಸ್ಸಿನ ಮಕ್ಕಳಿದ್ದರೂ ಮಹಿಳೆಯೊಂದಿಗೆ ಸಲುಗೆಯಿಂದಲೇ ಇದ್ದ ಎಂದು ಹೇಳಲಾಗಿದೆ. ಇದನ್ನೂ ಓದಿ: ಸರ್ಕಾರಕ್ಕೆ ಮತ್ತೆ ಈದ್ಗಾ ವಿವಾದ ಟೆನ್ಷನ್- ಜ. 21ರೊಳಗೆ ನಿಲುವು ಪ್ರಕಟಿಸಲು ಡೆಡ್‍ಲೈನ್
ಆದ್ರೆ ಇತ್ತೀಚೆಗೆ ಹಬೀಬಾ ಬೇರೊಬ್ಬನ ಜೊತೆ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಳು. ಇದನ್ನು ಶೇಖ್ ವಿರೋಧಿಸುತ್ತಲೇ ಇದ್ದ. ಈ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಕೂಡ ಆಗ್ತಾ ಇತ್ತು. ಭಾನುವಾರ ರಾತ್ರಿ ಕೂಡ ಇಬ್ಬರು ಗಲಾಟೆ ಮಾಡಿದ್ದಾರೆ. ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿ, ಶೇಖ್ ಮಹಿಳೆಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಸ್ಯಾಂಟ್ರೋ ರವಿ ಕೇಸ್- ಸಿಐಡಿಗೆ ವರ್ಗಾಯಿಸಿದ ರಾಜ್ಯ ಸರ್ಕಾರ: ಆರಗ ಮಾಹಿತಿ
ಘಟನೆ ಬಳಿಕ ಶೇಖ್ ವಿರುದ್ಧ ಮಹಿಳೆ ಕುಟುಂಬಸ್ಥರು ದೂರು ನೀಡಿದ್ದಾರೆ. ಕೊಲೆ ಪ್ರಯತ್ನ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರೋ ಆರ್.ಟಿ ನಗರದ ಪೊಲೀಸರು ಆರೋಪಿ ಶೇಖ್ ನನ್ನ ಬಂಧಿಸಿದ್ದಾರೆ. ತನಿಖೆಗೆ ಒಳಪಡಿಸಿದಾಗ ಆರೋಪಿ ಸತ್ಯ ಬಾಯ್ಬಿಟ್ಟಿದ್ದಾನೆ.
Live Tv
[brid partner=56869869 player=32851 video=960834 autoplay=true]
“ಪುರುಷರು ನಮ್ಮನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ” ಎಂಬುದು ಬಹುಪಾಲು ಮಹಿಳೆಯರ ಆರೋಪ. ಹೆಣ್ಣು ನಿಜವಾಗಿಯೂ ಏನು ಬಯಸುತ್ತಾಳೆ ಎಂಬುದನ್ನು ಅರಿತುಕೊಳ್ಳುವಲ್ಲಿ ಗಂಡು ಸೋಲುತ್ತಾನೆ. ಕೆಲವರು ತನ್ನವಳ ಬಗ್ಗೆ ಎಲ್ಲವನ್ನೂ ತಿಳಿದಿದ್ದೇನೆ ಎಂದು ಹೆಮ್ಮೆಪಟ್ಟುಕೊಳ್ಳುತ್ತಾರೆ. ಆದರೆ ತಿಳಿದಿರುವಿಕೆಯಲ್ಲಿ ಹೆಚ್ಚಿನವು ತಪ್ಪು ಎಂದು ಸಾಬೀತಾಗಿವೆ. ಪುರುಷರು ತಮ್ಮನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎಲ್ಲಾ ಮಹಿಳೆಯರು ಬಯಸುತ್ತಾರಂತೆ.
ಸಪೋರ್ಟ್
ಸ್ವಲ್ಪ ವಿನೋದ ಮತ್ತು ಜಗಳ, ಮುನಿಸು ಜೀವನದಲ್ಲಿ ಚೆನ್ನಾಗಿರುತ್ತೆ. ಆದರೆ ನಿಮ್ಮಾಕೆಯನ್ನು ಯಾರಾದರು ಗೇಲಿ ಮಾಡಿದಾಗ, ನೀವು ಆಕೆ ಪರವಾಗಿ ನಿಲ್ಲಿರಿ. ಏನೇ ಆಗಲಿ.. ನೀವು ಅವಳ ಪರವಾಗಿ ನಿಲ್ಲಬೇಕೆಂದು ಅವಳು ಮನಸ್ಸಿನೊಳಗೆ ಬಯಸುತ್ತಾಳೆ. ಆಕೆ ಗಟ್ಟಿತನದ ಮಹಿಳೆಯಾಗಬೇಕೆಂದರೆ ಕೆಲವೊಮ್ಮೆ ನಿಮ್ಮ ಬೆಂಬಲ ತುಂಬಾ ಮುಖ್ಯ. ಇದನ್ನೂ ಓದಿ: ವಿವಾಹಿತರೊಂದಿಗೆ ಅಫೇರ್ ಇಟ್ಕೊಂಡಿರೋರಿಗೆ ಒಂದಷ್ಟು ಸಲಹೆ…
ಪ್ರೀತಿ ನಿರೀಕ್ಷೆ
ಹೆಣ್ಣು ತನ್ನ ಸಂಗಾತಿ ಸ್ವಲ್ಪಮಟ್ಟಿನ ಪ್ರೀತಿಯನ್ನಾದರೂ ತೋರಿಸಲಿ ಎಂದು ಅಪೇಕ್ಷಿಸುತ್ತಾಳೆ. ನಾನು ನಿನ್ನೊಂದಿಗಿದ್ದೇನೆ ಎನ್ನುವಂತೆ ಕೈಗಳು ಅಥವಾ ಸೊಂಟವನ್ನು ಹಿಡಿದುಕೊಳ್ಳುವುದು ಆಕೆ ನಿಮ್ಮವಳೆಂದು ಜಗತ್ತಿಗೆ ತೋರಿಸಲು ಒಂದು ಚಿಕ್ಕ ಮಾರ್ಗವಾಗಿದೆ.
ಜೊತೆಗೆ ಸಮಯ ಕಳೆಯಲು ಬಯಕೆ
ನೀವು ಮನೆಯಲ್ಲಿದ್ದಾಗ ಹೆಚ್ಚಿನ ಸಮಯ ಸಂಗಾತಿಯೊಂದಿಗೆ ಕಳೆಯಿರಿ. ಅವನು ನನ್ನ ಕಡೆ ಗಮನ ಕೊಡಲಿ, ತುಂಬಾ ಕೇರ್ ಮಾಡಿ ಎಂದು ಮಹಿಳೆಯರು ಬಯಸುವುದು ಹೆಚ್ಚು. ಆದ್ದರಿಂದ ನಿಮ್ಮ ಫೋನ್ ಅಥವಾ ಕೆಲಸವನ್ನು ಪಕ್ಕಕ್ಕೆ ಇರಿಸಿ. ನಿಮ್ಮಾಕೆಯೊಂದಿಗೆ ಸಮಯ ಕಳೆಯಿರಿ. ಒಟ್ಟಿಗೆ ಸಿನಿಮಾ ವೀಕ್ಷಿಸಿ. ಮನೆಯ ಕೆಲಸವನ್ನು ಒಟ್ಟಿಗೆ ಮಾಡಿ. ಇದು ನಿಮ್ಮ ಸಂಗಾತಿಗೆ ತುಂಬಾ ಮುಖ್ಯವಾಗಿರುತ್ತದೆ. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?
ಭಾವನೆ ಹಂಚಿಕೊಳ್ಳುವುದು, ಪ್ರಾಮಾಣಿಕತೆ
ಸತ್ಯವು ಎಷ್ಟೇ ಕಹಿ ಆಗಿರಲಿ, ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿರಿ. ಆಕೆಗೆ ಸುಳ್ಳು ಹೇಳುವುದು ಮತ್ತು ದ್ರೋಹ ಮಾಡುವುದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಸಂಗಾತಿಗೆ ಸತ್ಯವೇ ಮುಖ್ಯವಾಗಿರುತ್ತದೆ. ಸಂಗಾತಿಯೊಂದಿಗೆ ನೀವು ಪ್ರಾಮಾಣಿಕರಾಗಿದ್ದಷ್ಟೂ ಸಂಬಂಧ ಗಟ್ಟಿಗೊಳ್ಳುತ್ತದೆ.
ಹೇಳುವುದನ್ನು ಆಲಿಸುವುದು
ನಿಮ್ಮವಳು ಏನು ಹೇಳುತ್ತಿದ್ದಾಳೆಂಬುದನ್ನು ಮೊದಲು ಆಲಿಸಿ. ಆಕೆ ಮಾತನಾಡುವಾಗಿ ಅಡ್ಡಿಪಡಿಸಬೇಡಿ. ಸಂಗಾತಿಯ ಮಾತುಗಳನ್ನು ತಾಳ್ಮೆಯಿಂದ ಆಲಿಸಿ. ಈ ನಡವಳಿಕೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಸದಾ ಹ್ಯಾಪಿಯಾಗಿರುವವರ ಸೀಕ್ರೆಟ್ ಗುಣಗಳೇನು ಗೊತ್ತಾ?
ವಿಶೇಷವಾಗಿ ಟ್ರೀಟ್ ಮಾಡುವುದು
ನಿಮ್ಮ ಸಂಗಾತಿಯನ್ನು ಸ್ನೇಹಿತೆಯಂತೆ ಪರಿಗಣಿಸಿ. ಇದರಿಂದ ನಿಮ್ಮಾಕೆಗೆ ನೀವು ಇನ್ನಷ್ಟು ಇಷ್ಟವಾಗಬಹುದು. ಆಕೆ ನಿಮ್ಮ ಜೀವನದಲ್ಲಿ ವಿಶೇಷ ವ್ಯಕ್ತಿಯಾಗಿರಬೇಕು. ನನ್ನನ್ನು ವಿಶೇಷವಾಗಿ ಟ್ರೀಟ್ ಮಾಡಲಿ ಅಂತಾ ಬಯಸುವ ಮಹಿಳೆಯರೇ ಹೆಚ್ಚು.
Live Tv
[brid partner=56869869 player=32851 video=960834 autoplay=true]