ಲಕ್ನೋ: ಅಪ್ಪನೊಂದಿಗೆ ಸೇರಿ ತನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ್ದ ಇಬ್ಬರು ಆರೋಪಿಗಳನ್ನು ಉತ್ತರಪ್ರದೇಶದ (Uttar Pradesh) ಚಂದಾಪುರ ವಿಶೇಷ ನ್ಯಾಯಾಲಯವು (Court) ದೋಷಿ ಎಂದು ಪರಿಗಣಿಸಿ, ಇಬ್ಬರಿಗೂ ಜೈಲು ಶಿಕ್ಷೆ ವಿಧಿಸಿದೆ.
ಘಟನೆ ಕುರಿತು ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್, 30 ವರ್ಷದ ಮಹಿಳೆಯ ಮೇಲೆ ಆಕೆಯ ಪತಿ ಮತ್ತು ಮಾವ ಹಲ್ಲೆ ನಡೆಸಿ, ಅತ್ಯಾಚಾರ ಎಸಗಿದ್ದರು. ಇಬ್ಬರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಆರೋಪ ಸಾಬೀತಾಗಿ ನ್ಯಾಯಾಲಯ ದೋಷಿ ಎಂದು ಪರಿಗಣಿಸಿದ ನಂತರ ಇಬ್ಬರನ್ನೂ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಮ್ಮ ಕೈಲಾಸ ಗಡಿಯಿಲ್ಲದ ದೇಶ – ನಿತ್ಯಾನಂದ
ಭೋಪಾಲ್: ಸಾಫ್ಟ್‌ವೇರ್ ಇಂಜಿನಿಯರೊಬ್ಬ (Software Engineer) ಇಬ್ಬರನ್ನು ಮದುವೆಯಾಗಿದ್ದು, ಅವರಿಬ್ಬರೊಂದಿಗಿರಲು ಸಮಯವನ್ನು ನಿಗದಿ ಮಾಡಿ ಸುದ್ದಿಯಾಗಿದ್ದಾನೆ.
ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್‌ನಲ್ಲಿ 28 ವರ್ಷದ ಸಾಫ್ಟ್‌ವೇರ್ ಇಂಜಿನಿಯರೊಬ್ಬ 2 ಮದುವೆಯಾಗಿದ್ದ. ಆದರೆ ಇನ್ನೊಂದು ಮದುವೆ ಆಗಿರುವುದು ಮೊದಲ ಪತ್ನಿಗೆ ತಿಳಿದಿರಲಿಲ್ಲ. ತಿಳಿದ ನಂತರ ಕೋರ್ಟ್‍ಗೆ ಹೋಗಿದ್ದಾಳೆ. ಈ ಹಿನ್ನೆಲೆಯಲ್ಲಿ ವ್ಯಕ್ತಿಯು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಪ್ಲ್ಯಾನ್‍ವೊಂದನ್ನು ಹುಡುಕಿದ್ದಾನೆ.
ಈ ಪ್ಲ್ಯಾನ್‍ನಂತೆ ತನ್ನ ಇಬ್ಬರು ಪತ್ನಿಯರನ್ನು ಒಟ್ಟಿಗೆ ಕೂರಿಸಿ ನಿರ್ಧಾರಕ್ಕೆ ಬಂದಿದ್ದಾನೆ. ಇದರ ಪ್ರಕಾರ ವಾರದಲ್ಲಿ 3 ದಿನ ಮೊದಲ ಪತ್ನಿಗಾದರೆ ಉಳಿದ ಮೂರು ದಿನ ಮತ್ತೋರ್ವ ಪತ್ನಿಯೊಂದಿಗೆ ಇರಲು ಸಮಯವನ್ನು ನಿಗದಿ ಮಾಡಿದ್ದಾನೆ. ಉಳಿದಂತೆ ಇನ್ನೊಂದು ದಿನ ಅಂದರೆ ಭಾನುವಾರ ತನ್ನಿಷ್ಟದಂತೆ ಸಮಯ ಕಳೆಯಲು ನಿರ್ಧರಿಸಿದ್ದು, ಇದಕ್ಕೆ ಆತನ ಪತ್ನಿಯರು ಒಪ್ಪಿಗೆ ಸೂಚಿಸಿದ್ದಾರೆ.
ಏನಿದು ಪ್ರಕರಣ?: 2008ರಲ್ಲಿ ವ್ಯಕ್ತಿಯು 26 ವರ್ಷದ ಮಹಿಳೆಯನ್ನು ವಿವಾಹವಾಗಿದ್ದ. ಆ ವೇಳೆ ಆತ ಗುರುಗ್ರಾಮನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. 2 ವರ್ಷಗಳ ಕಾಲ ದಂಪತಿ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು. ಅಷ್ಟೇ ಅಲ್ಲದೇ ಅವರಿಗೆ ಓರ್ವ ಮಗನು ಇದ್ದ. ಆದರೆ 2020ರಲ್ಲಿ ಕೊರೊನಾ ಪ್ರಾರಂಭವಾದಾಗಿನಿಂದ ದಂಪತಿ ವರ್ಕ್ ಫ್ರಂ ಹೋಮ್‍ನಿಂದಾಗಿ ಗ್ವಾಲಿಯರ್‍ಗೆ ಬಂದರು. ಅದಾದ ಕೆಲ ತಿಂಗಳ ನಂತರ ವ್ಯಕ್ತಿಯೊಬ್ಬನೇ ಗುರುಗ್ರಾಮ್‍ಗೆ ಹಿಂದಿರುಗಿದ.
ಗ್ವಾಲಿಯರ್‌ನಿಂದ ಗುರುಗ್ರಾಮಕ್ಕೆ ಪತ್ನಿಯು ಬರುತ್ತಿರುವುದಾಗಿ ಹೇಳಿದ್ದಾಳೆ. ಆ ವೇಳೆ 2021ರಲ್ಲೇ ಆ ಪತಿಗೆ ಅದೇ ಕಂಪನಿಯ ತನ್ನ ಸಹೋದ್ಯೋಗಿಯೊಂದಿಗೆ ಮದುವೆಯಾಗಿರುವುದು ಗೊತ್ತಾಗಿದೆ. ಅಷ್ಟೇ ಅಲ್ಲದೇ 2ನೇ ಪತ್ನಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದನ್ನೂ ಓದಿ: ಲೆದರ್ ಬೆಲ್ಟ್‌ನಲ್ಲಿ ಶ್ವಾನಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ- ಭಾರೀ ಆಕ್ರೋಶ
ಈ ಹಿನ್ನೆಲೆಯಲ್ಲಿ ಮೊದಲ ಪತ್ನಿ ಜೀವನಾಂಶ ಕೋರಿ ಗ್ವಾಲಿಯರ್‍ನ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಈ ವೇಳೆ ವಕೀಲರೊಬ್ಬರು ಮೊದಲ ಪತ್ನಿ ವಿರೋಧಿಸಿದರೆ ಶಿಕ್ಷೆ ಆಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಇದರಿಂದಾಗಿ ಆತ ತನ್ನ ಇಬ್ಬರು ಪತ್ನಿಯರನ್ನು ಸೇರಿಸಿ ಮಾತುಕತೆ ನಡೆಸಿದ್ದಾನೆ. ಈ ವೇಳೆ ಮೂವರು ಸೇರಿ ನ್ಯಾಯಾಲಯಕ್ಕೆ ಹೊಗದಿರಲು ಒಪ್ಪಂದವನ್ನು ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಈ ಒಪ್ಪಂದದ ಪ್ರಕಾರ ವ್ಯಕ್ತಿಯು ವಾರದ ಮೂರು ದಿನಗಳನ್ನು ತನ್ನ ಹೆಂಡತಿಯರಲ್ಲಿ ಒಬ್ಬಳೊಂದಿಗೆ ಮತ್ತು ಮುಂದಿನ ಮೂರು ದಿನಗಳನ್ನು ಇನ್ನೊಬ್ಬಳೊಂದಿಗೆ ಕಳೆಯಬೇಕು. ಅವರು ಆಯ್ಕೆ ಮಾಡಿದವರ ಜೊತೆ ಭಾನುವಾರ ಕಳೆಯಬಹುದಾಗಿದೆ. ಒಂದು ವೇಳೆ ಈ ಒಪ್ಪಂದವನ್ನು ತಪ್ಪಿದರೆ ಒಪ್ಪಂದವನ್ನು ಉಲ್ಲಂಘಿಸಿದರೆ ಮೊದಲ ಪತ್ನಿ ನ್ಯಾಯಾಲಯಕ್ಕೆ ಹೋಗಬಹುದು ಎಂದು ನಿರ್ಧರಿಸಿಕೊಂಡಿದ್ದಾರೆ. ಇದನ್ನೂ ಓದಿ:ಸ್ವಾಭಿಮಾನಿ ಅನ್ನೋ ಪದ ಬಳಸಬೇಡಿ: ಸುಮಲತಾ ವಿರುದ್ಧ ರವೀಂದ್ರ ವಾಗ್ದಾಳಿ
ಹೈದರಾಬಾದ್: ಯುವಕನೊಬ್ಬ ಕಳೆದ 3 ವರ್ಷಗಳಿಂದ ಲಿವ್- ಇನ್ ಸಂಬಂಧದಲ್ಲಿದ್ದ (Live In Relationship) ಇಬ್ಬರು ಮಹಿಳೆಯರನ್ನು (Women) ಮದುವೆಯಾದ (Wedding) ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ (Telangana) ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಸಮಾರಂಭ ನಡೆದಿದೆ. ಎಂ. ಸತ್ತಿಬಾಬು ಎಂಬಾತ ಸ್ವಪ್ನಾ ಹಾಗೂ ಸುನೀತಾ ಎನ್ನುವ ಇಬ್ಬರು ಯುವತಿಯನ್ನು ಪ್ರೀತಿಸುತ್ತಿದ್ದ. ಅಷ್ಟೇ ಅಲ್ಲದೇ ಇವರೊಂದಿಗೆ ಕಳೆದ ಮೂರು ವರ್ಷಗಳಿಂದ ದೈಹಿಕ ಸಂಪರ್ಕವನ್ನು ಹೊಂದಿದ್ದ. ಈ ಮೂವರು ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದರು.
ಸುನೀತಾ ಗಂಡು ಮಗುವಿಗೆ, ಸ್ವಪ್ನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಮದುವೆ ವಿಚಾರವಾಗಿ ಇಬ್ಬರು ಯುವತಿಯರ ಕುಟುಂಬದ ನಡುವೆ ಜಗಳ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸತ್ತಿಬಾಬು ಈ ಇಬ್ಬರನ್ನು ಯುವತಿಯರನ್ನು ಮದುವೆಯಾಗಲು ನಿರ್ಧರಿಸಿದ್ದಾನೆ. ಅಷ್ಟೇ ಅಲ್ಲದೇ ಆ ಇಬ್ಬರು ಯುವತಿಯರ ಕುಟುಂಬದವರನ್ನು ಒಪ್ಪಿಸಿದ್ದಾನೆ. ಇದನ್ನೂ ಓದಿ:ಅಘೋರಿ ಪೂಜೆಗಾಗಿ ಮಹಿಳೆಯ ಮುಟ್ಟಿನ ರಕ್ತ ಮಾರಾಟ – ಪತಿ, ಅತ್ತೆ, ಮಾವನ ವಿರುದ್ಧ ದೂರು
ಕೋಲಾರ ಗ್ರಾಮಾಂತರ ಪೊಲೀಸರು (Kolar Rural Police) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಹಿಳೆಯ ಗುರುತು ಪತ್ತೆಯಾಗಿದೆ. ಇಲ್ಲಿನ ನಿವಾಸಿ ವೆಂಕಟರಮಣ ಈಕೆಯನ್ನ 2ನೇ ಮದುವೆಯಾಗಿದ್ದ. ಮಹಿಳೆ ಶೋಭಾ ಶ್ರೀನಿವಾಸಪುರದಲ್ಲೇ ಬ್ಯೂಟಿಪಾರ್ಲರ್ (Beauty Parlour) ನಡೆಸುತ್ತಿದ್ದರು ಎಂದು ಹೇಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ನವದೆಹಲಿ: ಭಾರತದಾದ್ಯಂತ ವಿದ್ಯಾರ್ಥಿನಿಯರು ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ನೋವಿನ ರಜೆಯನ್ನು (Menstrual Pain Leave) ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ ವಿಲೇವಾರಿ ಮಾಡಿದೆ. ಅರ್ಜಿದಾರರು ಕೇಂದ್ರ ಸರ್ಕಾರದ (Central Government) ಮುಂದೆ ಪ್ರಾತಿನಿಧ್ಯವನ್ನು ನೀಡಲು ಅವಕಾಶ ನೀಡಿದೆ.
ಶೈಲೇಂದ್ರ ಮಣಿ ತ್ರಿಪಾಠಿ ಎನ್ನುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸಿಜೆಐ ಡಿ.ವೈ ಚಂದ್ರಚೂಡ್ (Dhananjaya Y. Chandrachud) ನೇತೃತ್ವದ ಪೀಠ, ಪ್ರಕರಣವೂ ಸರ್ಕಾರದ ನೀತಿಗೆ ಸಂಬಂಧಿಸಿದೆ. ಅರ್ಜಿದಾರರು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಮುಂದೆ ಪ್ರಾತಿನಿಧ್ಯವನ್ನು ಸಲ್ಲಿಸಬಹುದು ಎಂದು ಹೇಳಿದೆ. ಇದನ್ನೂ ಓದಿ: ಪವನ್ ಖೇರಾ ಕ್ಷಮೆಯಾಚಿಸಿದ್ದಾರೆ: ಅಸ್ಸಾಂ ಸಿಎಂ
ಸಮಾಜ, ಸರ್ಕಾರವು ಮಹಿಳೆಯರ ಮುಟ್ಟಿನ ಅವಧಿಯನ್ನು ಹೆಚ್ಚಾಗಿ ಕಡೆಗಣಿಸಿದೆ. Ivipanan, Zomato, Byju’s, Swiggy, Mathrubhumi, Magzter, Industry, ARC, FlyMyBiz ಮತ್ತು Gozoop ನಂತಹ ಕಂಪನಿಗಳು ಮುಟ್ಟಿನ ರಜೆ ನೀಡುವ ಮೂಲಕ ಮಹಿಳೆಯರಿಗೆ ಕೆಲಸ ಮಾಡಲು ಬೆಂಬಲಿಸಿವೆ. ಇದೇ ಮಾದರಿಯಲ್ಲಿ ಮುಟ್ಟಿನ ಅವಧಿಯಲ್ಲಿ ರಜೆ ನೀಡಲು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲಾಗಿತ್ತು.
1992ರ ವಿಶೇಷ ನೀತಿಯ ಭಾಗವಾಗಿ ಬಿಹಾರ ಮುಟ್ಟಿನ ರಜೆ ನೀಡುತ್ತಿದೆ. ಉಳಿದ ರಾಜ್ಯಗಳಲ್ಲಿ ಮಹಿಳೆಯರಿಗೆ ಋತುಚಕ್ರದ ನೋವಿನ ರಜೆ ಅಥವಾ ಅವಧಿ ರಜೆಯನ್ನು ನಿರಾಕರಿಸುವುದು ಸಂವಿಧಾನದ 14 ನೇ ವಿಧಿಯ ಅಡಿಯಲ್ಲಿ ಅವರ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ವಿಚಾರಣೆ ವೇಳೆ ವಾದಿಸಲಾಯಿತು. ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ – 11 ಜನ ಸ್ಥಳದಲ್ಲೇ ಸಾವು
LIVE TV
[brid partner=56869869 player=32851 video=960834 autoplay=true]
ನವದೆಹಲಿ: ಕೋವಿಡ್-19 (Covid 19) ಸೋಂಕಿನ ಭೀತಿಯಿಂದಾಗಿ ಮಹಿಳೆಯೊಬ್ಬರು ಬರೋಬ್ಬರಿ 3 ವರ್ಷಗಳ ಕಾಲ ಮಗನೊಂದಿಗೆ ಮನೆಯಲ್ಲೇ ಬಂಧಿಯಾಗಿದ್ದ ಅಚ್ಚರಿದಾಯಕ ಘಟನೆ ಗುರುಗ್ರಾಮ್‌ನ (Gurugram) ಚಕ್ಕರ್‌ಪುರದಲ್ಲಿ ನಡೆದಿದೆ.
ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದ ಮುನ್‌ಮುನ್ ಮಜ್ಹಿ ಹೆಸರಿನ ಮಹಿಳೆಯ ಪತಿ ಸುಜನ್ ಮಾಝಿ, ಚಕ್ಕರ್‌ಪುರ ಪೊಲೀಸ್ ಪೋಸ್ಟ್‌ನಲ್ಲಿ ಪೊಲೀಸರನ್ನು ಸಂಪರ್ಕಿಸಿದಾಗ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ರಿಸೆಪ್ಷನ್‍ಗೂ ಮುನ್ನ ನವದಂಪತಿ ಶವವಾಗಿ ಪತ್ತೆ
ಮಹಿಳೆಯ ಪತಿ ಕೋರಿಕೆ ಮೇರೆಗೆ ಪೊಲೀಸರು, ಆರೋಗ್ಯ ಅಧಿಕಾರಿಗಳು ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸದಸ್ಯರ ತಂಡ ಮಂಗಳವಾರ ನಿವಾಸಕ್ಕೆ ತಲುಪಿ ಬಾಗಿಲು ಒಡೆದು ಮತ್ತು ಮಹಿಳೆ ಮತ್ತು ಆಕೆಯ 10 ವರ್ಷದ ಮಗನನ್ನು ರಕ್ಷಿಸಿದ್ದಾರೆ. ಪೊಲೀಸರು ಮತ್ತು ಆರೋಗ್ಯಾಧಿಕಾರಿಗಳು ಮನೆಯ ಒಳಗೆ ಹೋದಾಗ ಕೊಳಕು ಬಟ್ಟೆ, ತಲೆಗೂದಲು ರಾಶಿ, ಕಸ ಮತ್ತು ರಾಶಿ ಇಟ್ಟಿದ್ದ ದಿನಸಿ ದೃಶ್ಯಗಳು ಕಂಡುಬಂದಿದೆ. ರಕ್ಷಣೆ ಬೆನ್ನಲ್ಲೇ ತಾಯಿ-ಮಗ ಇಬ್ಬರನ್ನೂ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು.
ಮಹಿಳೆ ತನ್ನ ಮಗನ ತಲೆಗೂದಲನ್ನೂ ತಾನೇ ಕಟ್ ಮಾಡುತ್ತಿದ್ದರಂತೆ. ಮನೆಯಲ್ಲಿ ಗ್ಯಾಸ್ ಸ್ಟೌ ಬದಲು ಇಂಡಕ್ಷನ್ ಮೂಲಕ ಅಡುಗೆ ಮಾಡಲಾಗುತ್ತಿತ್ತು. 3 ವರ್ಷಗಳಿಂದ ಮನೆಯ ಕಸವನ್ನು ಕೂಡ ಹೊರಗೆ ಹಾಕಿರಲಿಲ್ಲ. ಈ ಅವಧಿಯಲ್ಲಿ ಯಾರೂ ಕೂಡ ಮನೆಗೆ ಭೇಟಿ ನೀಡಿರಲಿಲ್ಲ. ಬಾಲಕ ಮನೆಯ ಗೋಡೆಗಳ ಮೇಲೆ ಪೇಂಟಿಂಗ್ ಮಾಡುತ್ತಿದ್ದ. ಆಘಾತಕಾರಿ ಸಂಗತಿಯೆಂದರೆ, ಮಹಿಳೆಯ ಮಗ ಕಳೆದ ಮೂರು ವರ್ಷಗಳಿಂದ ಸೂರ್ಯನನ್ನೇ ನೋಡಿರಲಿಲ್ಲ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ಇದನ್ನೂ ಓದಿ: ದೆಹಲಿ ಪಾಲಿಕೆ ಚುಕ್ಕಾಣಿ ಹಿಡಿದ ಆಮ್ ಆದ್ಮಿ – ಶೆಲ್ಲಿ ಒಬೆರಾಯ್ ಮೇಯರ್ ಆಗಿ ಆಯ್ಕೆ
ಇಷ್ಟೆಲ್ಲಾ ಆದರೂ ಇಬ್ಬರೂ ಮನೆಗೆ ಬೀಗ ಹಾಕಿರುವ ಬಗ್ಗೆ ಅಕ್ಕಪಕ್ಕದವರಿಗೆ ಸುಳಿವೇ ಸಿಕ್ಕಿರಲಿಲ್ಲ. ಕೋವಿಡ್-19 ಕಾರಣದಿಂದಾಗಿ ಮಹಿಳೆ ಭಯಭೀತರಾಗಿದ್ದರು. ಮನೆಯಿಂದ ಹೊರಗಡೆ ಹೋದರೆ ಮಗ ಮತ್ತು ತಾನು ಸಾಯಬಹುದು ಎಂಬ ಭೀತಿಯಿಂದ ಸತತ 3 ವರ್ಷ ಮನೆಯಲ್ಲೇ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಅವಧಿಯಲ್ಲಿ ಮಹಿಳೆ ತನ್ನ ಪತಿಯನ್ನು ಸಹ ಮನೆಯೊಳಗೆ ಬಿಟ್ಟುಕೊಂಡಿರಲಿಲ್ಲ. 2020ರಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಆಕೆ ಪತಿ ಕಚೇರಿ ಕೆಲಸಕ್ಕಾಗಿ ಮನೆಯಿಂದ ಹೊರಬಂದಿದ್ದರು. ಅದಾದ ಬಳಿಕ ಆತನನ್ನೂ ಮಹಿಳೆ ಮನೆಗೆ ಬಿಟ್ಟುಕೊಂಡಿರಲಿಲ್ಲ. ಮಾಝಿ ತನ್ನ ಪತ್ನಿಯೊಂದಿಗೆ ವೀಡಿಯೋ ಕರೆಗಳ ಮೂಲಕ ಸಂಪರ್ಕದಲ್ಲಿದ್ದ. ಮನೆಯ ತಿಂಗಳ ಬಾಡಿಗೆ ಕಟ್ಟುವುದು, ವಿದ್ಯುತ್ ಬಿಲ್ ಕಟ್ಟುವುದು, ಮಗನ ಶಾಲಾ ಶುಲ್ಕ ಕಟ್ಟುವುದು, ದಿನಸಿ ಸಾಮಾನು, ತರಕಾರಿ ಕೊಂಡುಕೊಳ್ಳುವುದು, ಪಡಿತರ ಚೀಲಗಳನ್ನು ಬಾಗಿಲಿನ ಹೊರಗಿಟ್ಟು ಹೋಗಬೇಕಾಗಿತ್ತು.
LIVE TV
[brid partner=56869869 player=32851 video=960834 autoplay=true]
ಗುವಾಹಟಿ: ಮಹಿಳೆಯೊಬ್ಬಳು ತನ್ನ ಪತಿ ಮತ್ತು ಅತ್ತೆಯನ್ನು ಕೊಂದು, ಅವರ ದೇಹಗಳನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿದ್ದ ಭಯಾನಕ ಘಟನೆ ಅಸ್ಸಾಂನ (Assam) ನೂನ್‌ಮತಿಯಲ್ಲಿ ಬೆಳಕಿಗೆ ಬಂದಿದೆ.
ಕೊಲೆ ಮಾಡಿದ ವಂದನಾ ಕಲಿತಾ ಎಂಬ ಮಹಿಳೆ ವಿವಾಹೇತರ ಸಂಬಂಧ ಹೊಂದಿದ್ದಳು. ಪತಿ ಅಮರಜ್ಯೋತಿ ಡೇ ಮತ್ತು ಅತ್ತೆ ಶಂಕರಿ ಡೇ ಅವರನ್ನು ಹತ್ಯೆ ಮಾಡಿ ಮೂರು ದಿನಗಳ ನಂತರ ತನ್ನ ಪ್ರಿಯಕರನೊಂದಿಗೆ ಸೇರಿ, ಇಬ್ಬರ ದೇಹಗಳ ಭಾಗಗಳನ್ನು ಬೇರೆಡೆಗೆ ಸಾಗಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ಇಡಿ ದಾಳಿ: ಕಾಂಗ್ರೆಸ್ ಮಹಾಧಿವೇಶನಕ್ಕೂ ಮುನ್ನ ನಾಯಕರಿಗೆ ಶಾಕ್
ಗುವಾಹಟಿಯಿಂದ 150 ಕಿಮೀ ದೂರದಲ್ಲಿರುವ ಮೇಘಾಲಯ ರಾಜ್ಯದ ಚಿರಾಪುಂಜಿಗೆ ಕೊಂಡೊಯ್ದಿದ್ದರು. ಅಲ್ಲಿ ದೇಹದ ಭಾಗಗಳನ್ನು ಎಸೆದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಂದನಾ ತನ್ನ ಪತಿ ಹಾಗೂ ಅತ್ತೆಯನ್ನು ಹತ್ಯೆ ಮಾಡಿದ್ದಾಳೆ. ನಂತರ ಅವರ ದೇಹಗಳನ್ನು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದಳು. ಪ್ರಿಯಕರನೊಂದಿಗೆ ಸೇರಿಕೊಂಡು ದೇಹದ ಭಾಗಗಳನ್ನು ಬೇರೆಡೆಗೆ ಸಾಗಿಸಿ ಎಸೆದಿದ್ದಳು. ಈ ಪ್ರಕರಣವನ್ನು ನಮ್ಮ ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗಿ ಭೇದಿಸಿದ್ದಾರೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ತಪಾಸಣೆ ಭಯಕ್ಕೆ ಮೊಬೈಲ್ ನುಂಗಿದ ಕೈದಿ
ಕಳೆದ ವರ್ಷ ದೆಹಲಿಯಲ್ಲಿ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಆಫ್ತಾಬ್ ಪೂನಾವಾಲಾನಿಂದ (Aftab) ಶ್ರದ್ಧಾ ವಾಕರ್ (Shraddha Walkar) ಹತ್ಯೆ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಆ ಕೃತ್ಯದ ಮಾದರಿಯಲ್ಲೇ ಅಸ್ಸಾಂನಲ್ಲಿ ಮಹಿಳೆ ಕೊಲೆ ಮಾಡಿದ್ದಾಳೆ.
LIVE TV
[brid partner=56869869 player=32851 video=960834 autoplay=true]
ತನ್ನೊಂದಿಗೆ ಸಹಜೀವನ ನಡೆಸುತ್ತಿದ್ದ ಸಂಗಾತಿ ಮೇಘಾ ಎಂಬಾಕೆಯನ್ನು ಹಾರ್ದಿಕ್ ಶಾ ಕೊಲೆ ಮಾಡಿದ್ದ. ನಂತರ ಮಹಾರಾಷ್ಟ್ರದ (Maharashtra) ಪಾಲ್ಘರ್ ಜಿಲ್ಲೆಯಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ್ದ. ಆದರೆ ರೈಲ್ವೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕೇರಳ ಮುಖ್ಯಮಂತ್ರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಬಂಧನ
ಹಾರ್ದಿಕ್ ಶಾ ನಿರುದ್ಯೋಗಿಯಾಗಿದ್ದ. ನರ್ಸ್ ಆಗಿದ್ದ ಮೇಘಾ ಅವರೊಂದಿಗೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ. ಇಬ್ಬರೂ ಮುಂಬೈನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮೇಘಾ ಅವರನ್ನು ಕೊಂದ ನಂತರ ಹಾರ್ದಿಕ್ ಮನೆಯ ಕೆಲ ವಸ್ತುಗಳನ್ನು ಮಾರಿ ಹಣದೊಂದಿಗೆ ಪರಾರಿಯಾಗಿದ್ದ. ಈತನ ಬಗ್ಗೆ ಮಾಹಿತಿ ಪಡೆದು ಮಧ್ಯಪ್ರದೇಶದ ನಗ್ಡಾದಲ್ಲಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಮೂರು ವರ್ಷಗಳಿಂದ ಸಂಬಂಧದಲ್ಲಿದ್ದ ಹಾರ್ದಿಕ್ ಮತ್ತು ಮೇಘಾ ಕಳೆದ ಆರು ತಿಂಗಳಿಂದ ಒಟ್ಟಿಗೆ ವಾಸಿಸುತ್ತಿದ್ದರು. ಸುಮಾರು ಒಂದು ತಿಂಗಳ ಹಿಂದೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇಬ್ಬರೂ ಆಗಾಗ್ಗೆ ಜಗಳವಾಡುತ್ತಿದ್ದ ಬಗ್ಗೆ ಅವರ ನೆರೆಹೊರೆಯವರು ದೂರು ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕಾರು ಬಾಂಬ್ ಸ್ಫೋಟ ಪ್ರಕರಣ – ಕರ್ನಾಟಕ, ತಮಿಳುನಾಡು, ಕೇರಳದ 60 ಸ್ಥಳಗಳಲ್ಲಿ NIA ದಾಳಿ
Live Tv
[brid partner=56869869 player=32851 video=960834 autoplay=true]
ಲಕ್ನೋ: ಪ್ರಧಾನ ಮಂತಿ ಆವಾಸ್ ಯೋಜನೆಯ (PMAY) ಅಡಿಯಲ್ಲಿ ಹಣವನ್ನು (Money) ಪಡೆದ ನಾಲ್ವರು ವಿವಾಹಿತ ಮಹಿಳೆಯರು (Women) ತಮ್ಮ ಪತಿಯರನ್ನು ಬಿಟ್ಟು ಪ್ರೇಮಿಗಳೊಂದಿಗೆ (Lovers) ಓಡಿಹೋಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.
ಪಿಎಂಎವೈ ಯೋಜನೆ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಇದು ಬಡವರಿಗೆ ನಗರ ವಸತಿ ಕೊರತೆಯನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಆರ್ಥಿಕವಾಗಿ ದುರ್ಬಲರಾದವರು, ಕಡಿಮೆ ಹಾಗೂ ಮಧ್ಯಮ ಆದಾಯದ ಗುಂಪುಗಳಿಗೆ ಸೇರಿದವರಿಗೆ ಈ ಯೋಜನೆ ನಗದು ರೂಪದಲ್ಲಿ ಸಹಾಯ ಮಾಡುತ್ತದೆ. ಇದನ್ನು ಬಳಸಿಕೊಂಡು ಜನರು ಮನೆಗಳನ್ನು ಹೊಂದಬಹುದಾಗಿದೆ.
ಪಿಎಂಎವೈ ಅಡಿಯಲ್ಲಿ ಕುಟುಂಬದ ಒಬ್ಬ ಮಹಿಳಾ ಸದಸ್ಯೆ ಮನೆಯ ಮಾಲಕಿ ಅಥವಾ ಸಹ-ಮಾಲಕಿಯಾಗಿರುವುದು ಕಡ್ಡಾಯವಾಗಿದೆ. ವರದಿಗಳ ಪ್ರಕಾರ ಈ ಯೋಜನೆಯ ಫಲಾನುಭವಿಗಳಾದ ನಾಲ್ವರು ಮಹಿಳೆಯರು ತಮ್ಮ ಖಾತೆಗೆ 50,000 ರೂ. ಅನುದಾನ ಬಂದ ತಕ್ಷಣವೇ ತಮ್ಮ ಪತಿಯರನ್ನು ತೊರೆದು ಓಡಿ ಹೋಗಿದ್ದಾರೆ.
ಈ ಘಟನೆಯ ಪರಿಣಾಮವಾಗಿ ಮಹಿಳೆಯರ ಗಂಡಂದಿರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒಂದೆಡೆ ಮನೆಯ ನಿರ್ಮಾಣದ ಕಾಮಗಾರಿ ಇನ್ನೂ ಪ್ರಾರಂಭವಾಗದ ಕಾರಣ ಜಿಲ್ಲಾ ನಗರಾಭಿವೃದ್ಧಿ ಸಂಸ್ಥೆ (DUDA) ಎಚ್ಚರಿಕೆಯನ್ನು ನೀಡುವ ಭೀತಿಯಲ್ಲಿದ್ದರೆ, ಇನ್ನೊಂದೆಡೆ ತಮ್ಮ ಪತ್ನಿಯರ ಖಾತೆಗಳಿಗೆ ಮುಂದಿನ ಕಂತಿನ ಹಣ ವರ್ಗಾವಣೆಯಾಗುವ ಆತಂಕದಲ್ಲಿದ್ದಾರೆ.
ಇದೀಗ ಗೊಂದಲದಲ್ಲಿರುವ ಪತಿಯರು ಏನು ಮಾಡಬೇಕೆಂದು ತೋಚದೇ ಓಡಿ ಹೋಗಿರುವ ಪತ್ನಿಯರ ಖಾತೆಗೆ ವರ್ಗಾವಣೆಯಾಗಬಹುದಾದ ಮುಂದಿನ ಕಂತನ್ನು ಕಳುಹಿಸದಂತೆ ಡಿಯುಡಿಎಯ ಯೋಜನಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರು ಚಿತ್ರೋತ್ಸವಕ್ಕೆ ರೂ. 4.49 ಕೋಟಿ ಮೀಸಲು : ಆರ್.ಅಶೋಕ್
ನಗರ ಪಂಚಾಯಿತಿ ಬೆಲ್ಹಾರ, ಬಂಕಿ, ಜೈದ್‌ಪುರ ಹಾಗೂ ಸಿದೌರ್‌ನ ನಾಲ್ವರು ಮಹಿಳೆಯರು ಯೋಜನೆಯ ಮೊದಲ ಕಂತಿನ ಹಣವನ್ನು ಪಡೆದಿದ್ದು, ಬಳಿಕ ತಮ್ಮ ಪ್ರೇಮಿಗಳೊಂದಿಗೆ ಓಡಿಹೋಗಿದ್ದಾರೆ. ಫಲಾನುಭವಿಗಳ ಮನೆಗಳ ನಿರ್ಮಾಣ ಕಾಮಗಾರಿ ಆರಂಭವಾಗದೇ ಹೋಗಿರುವ ಹಿನ್ನೆಲೆ ಈ ವಿಚಿತ್ರ ಪ್ರಕರಣ ಅಧಿಕಾರಿಗಳ ಗಮನಕ್ಕೆ ಬಂದಿದೆ.
ಕುಟುಂಬಗಳಿಗೆ ಹಣ ವರ್ಗಾವಣೆಯಾಗಿದ್ದರೂ ಮನೆ ನಿರ್ಮಾಣ ಇನ್ನೂ ಪ್ರಾರಂಭವಾಗಿಲ್ಲ ಎಂಬ ಕಾರಣಕ್ಕೆ ದುಡಾದ ಯೋಜನಾಧಿಕಾರಿ ಸೌರಭ್ ತ್ರಿಪಾಠಿ ನೋಟಿಸ್ ಕಳುಹಿಸಿ ತಕ್ಷಣವೇ ಮನೆ ನಿರ್ಮಾಣ ಕಾಮಗಾರಿ ಪ್ರಾರಂಭಿಸುವಂತೆ ಆದೇಶ ನೀಡಿದ್ದರು. ಕೊನೆಗೆ ಓಡಿಹೋದ ಮಹಿಳೆಯರ ಪತಿಯರು ಸರ್ಕಾರಿ ಕಚೇರಿಗೆ ತೆರಳಿ ನಡೆದಿರುವ ಘಟನೆಯನ್ನು ವಿವರಿಸಿದ್ದಾರೆ ಹಾಗೂ 2ನೇ ಕಂತು ಜಮಾ ಮಾಡದಂತೆ ಕೇಳಿಕೊಂಡಿದ್ದಾರೆ.
ಇದೀಗ ಓಡಿಹೋಗಿರುವ ಮಹಿಳೆಯರಿಂದ ಹಣವನ್ನು ವಸೂಲಿ ಮಾಡುವುದು ಹೇಗೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ. ಆದರೂ ಪ್ರತಿ ಫಲಾನುಭವಿಗಳಿಂದಲೂ ಹಣವನ್ನು ಹಿಂಪಡೆಯಲು ಇಲಾಖೆ ಪ್ರಯತ್ನಿಸುತ್ತಿದೆ ಎಂದು ತ್ರಿಪಾಠಿ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತವನ್ನೂ ಟಾರ್ಗೆಟ್ ಮಾಡಿದೆ ಚೀನಾದ ಬೇಹುಗಾರಿಕಾ ಬಲೂನ್
Live Tv
[brid partner=56869869 player=32851 video=960834 autoplay=true]
ಜೈಪುರ: ಮಹಿಳೆಯೊಬ್ಬಳು (Women) 55 ಸಾವಿರ ರೂ.ಗೆ ಬಾಲಕಿಯನ್ನು ಖರೀದಿಸಿ ತನ್ನ ಮಗ ಹಾಗೂ ಪತಿಯಿಂದ ನಿರಂತರವಾಗಿ ಅತ್ಯಾಚಾರ ಮಾಡಿಸಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ (Jaipur) ನಡೆದಿದೆ.
ಜಾರ್ಖಂಡ್‌ನ (Jharkhand) 13 ವರ್ಷದ ಬಾಲಕಿ ನಗರದ ಮನಕ್ ಚೌಕ್ ಪೊಲೀಸ್ ಠಾಣೆಗೆ (Manak Chowk Police Station) ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಓರ್ವ ಆರೋಪಿಯನ್ನ ಬಂಧಿಸಿದ್ದಾರೆ. ಆರೋಪಿ ವಿಕಾಸ್ ರಾಣಾ (27) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: Cyber Crimeː 1 ತಿಂಗಳಲ್ಲಿ 1,228 ಕೇಸ್ – ಪರಿಹರಿಸಲು ಪೊಲೀಸ್ ಸಿಬ್ಬಂದಿ ಕೊರತೆ
ತನ್ನನ್ನು ಜೈಪುರದಿಂದ 55 ಸಾವಿರ ರೂ.ಗೆ ಖರೀದಿಸಿ ಕರೆತಂದು ತನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿಸಿದ್ದಾಳೆ ಎಂದು ಬಾಲಕಿ ಆರೋಪಿಸಿದ್ದಾರೆ.
ಏನಿದು ಘಟನೆ?
ಸುಮಾರು 2 ತಿಂಗಳಿನಿಂದ ಜಾರ್ಖಂಡ್ ನಗರದಲ್ಲಿ ತರಕಾರಿ ಮಾರಾಟ ಮಾಡಿಕೊಂಡಿದ್ದ ಮಹಿಳೆ ಬಾಲಕಿಯನ್ನ ನೋಡಿದ್ದಾಳೆ. ಈ ವೇಳೆ ಮದುವೆ ಪ್ರಸ್ತಾಪದೊಂದಿಗೆ ಬಾಲಕಿ ಕುಟುಂಬವನ್ನ ಸಂಪರ್ಕಿಸಿದ್ದಾಳೆ. ಬಾಲಕಿ ಮನೆಗೆ ಬಂದು ಜೈಪುರದ ಉತ್ತಮ ಕುಟುಂಬಕ್ಕೆ ನಿಮ್ಮ ಹುಡುಗಿಯನ್ನು ಮದುವೆ ಮಾಡಿಸಿಕೊಡುವುದಾಗಿ ಆಕೆಯ ತಾಯಿ ಹಾಗೂ ಅಜ್ಜಿಗೆ ಹೇಳಿದ್ದಾಳೆ. ಅಲ್ಲದೇ ಹುಡುಗಿಯನ್ನು ತನ್ನೊಂದಿಗೆ ಕಳುಹಿಸಿಕೊಟ್ಟರೆ 55 ಸಾವಿರ ರೂ. ನೀಡುವುದಾಗಿ ಆಸೆ ತೋರಿಸಿದ್ದಾಳೆ. ಇದರಿಂದ ಬಾಲಕಿಯ ಅಜ್ಜಿ ಮರುದಿನವೇ ರೈಲಿನಲ್ಲಿ ಜೈಪುರಕ್ಕೆ ಕರೆತಂದಿದ್ದಾರೆ.
ನಂತರ ಬಾಲಕಿಯನ್ನು ಮಹಿಳೆಯ ಕುಟುಂಬದೊಂದಿಗೆ ಇರಲು ಬಿಡಲಾಗಿದೆ. ಈ ವೇಳೆ ಖರೀದಿಸಿದ ಮಹಿಳೆ ತನ್ನ ಮಗನಿಂದ ಅತ್ಯಾಚಾರ ಮಾಡಿಸಿದ್ದಾಳೆ. ಆಕೆಯ ಪತಿ ಎಂದು ಹೇಳಿಕೊಂಡ ವ್ಯಕ್ತಿ ಸಹ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 58ರ ಮಹಿಳೆ ಮೇಲೆ ಅತ್ಯಾಚಾರ ಮಾಡಿ, ಹೊಡೆದು ಸಾಯಿಸಿದ 16ರ ಬಾಲಕ
ಮನಕ್ ಚೌಕ್ ಪೊಲೀಸ್ ಠಾಣೆಯ ಬಳಿ ಬಾಲಕಿ ಅಳುತ್ತಾ ತಿರುಗಾಡುತ್ತಿರುವುದನ್ನು ಗಮನಿಸಿದ ಪೊಲೀಸರು ಆಕೆಯನ್ನ ಪ್ರಶ್ನಿಸಿದ್ದಾರೆ. ನಂತರ ಬಾಲಕಿ ವಿಷಯ ಬಾಯ್ಬಿಟ್ಟಿದ್ದಾಳೆ.
ಬಾಲಕಿ ನೀಡಿದ ದೂರಿನ ಆಧಾರದ ಮೇರೆಗೆ ಐಪಿಸಿ (IPC) ಹಾಗೂ ಪೋಕ್ಸೊ ಕಾಯ್ದೆಯ (POCSO Act) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ವಿಕಾಸ್ ರಾಣಾ (27) ನನ್ನ ಬಂಧಿಸಲಾಗಿದೆ. ಉಳಿದವರಿಗಾಗಿ ಶೋಧ ಆರಂಭಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]