Tag: women

  • ಪ್ರಿಯಕರನಿಗೋಸ್ಕರ ಗಂಡನಿಗೇ ಸ್ಕೆಚ್‌ ಹಾಕಿ ಮುಗಿಸಿದ್ಲು ಕೋಲಾರದ ಖತರ್ನಾಕ್ ಲೇಡಿ

    ಪ್ರಿಯಕರನಿಗೋಸ್ಕರ ಗಂಡನಿಗೇ ಸ್ಕೆಚ್‌ ಹಾಕಿ ಮುಗಿಸಿದ್ಲು ಕೋಲಾರದ ಖತರ್ನಾಕ್ ಲೇಡಿ

    ಕೋಲಾರ: ಇತ್ತೀಚಿನ ದಿನಗಳಲ್ಲಿ ಅಕ್ರಮ ಸಂಬಂಧ ಪ್ರಕರಣಗಳು ವರದಿಯಾಗುತ್ತಿದ್ದು, ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗಿ ಪ್ರಾಣಕ್ಕೆ ಕುತ್ತು ತರುತ್ತಿವೆ. ಅದೇ ರೀತಿ ಖತರ್ನಾಕ್‌ ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ (Lovers) ಸೇರಿ ಪತಿಯನ್ನೇ ಮುಗಿಸಿದ್ದಾಳೆ. ಅಲ್ಲದೇ ಅದನ್ನು ಅಪಘಾತವೆಂದು (Accident) ಬಿಂಬಿಸಲು ಹೋಗಿ ಪೊಲೀಸರಿಗೆ ತಗಲಾಕಿಕ್ಕೊಂಡಿರುವ ಘಟನೆ ಕೋಲಾರ ತಾಲೂಕಿನಲ್ಲಿ ನಡೆದಿದೆ.

    ಕೋಲಾರ ತಾಲೂಕಿನ ಕನ್ನಘಟ್ಟ ಬಳಿ ಘಟನೆ ನಡೆದಿದ್ದು ಮೃತನ ಪತ್ನಿ ಸೌಮ್ಯಾ, ಆಕೆಯ ಪ್ರಿಯಕರ ಚೊಕ್ಕರೆಡ್ಡಪಲ್ಲಿ ಶ್ರೀಧರ್ ಮತ್ತವನ ಸ್ನೇಹಿತನನ್ನ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಜಾನಪದ ಕಲಾವಿದ ಜನ್ನಘಟ್ಟ ಕೃಷ್ಣ ಮೂರ್ತಿ, ಸೌಮ್ಯಾಳ ಪತಿ. ಇದನ್ನೂ ಓದಿ: ರಾಜಕಾರಣ ಬದಿಗಿಟ್ಟು ಪುತ್ರನ ಮದುವೆಗೆ ಮುಖ್ಯಮಂತ್ರಿಯನ್ನು ಆಹ್ವಾನಿಸಿದ ಸುಮಲತಾ

    ಪ್ರಿಯಕರನಿಗಾಗಿ ಪತಿಗೆ ಸ್ಕೆಚ್‌:
    ಸೋಮವಾರ ರಾತ್ರಿ ಪ್ರಿಯಕರ ಮತ್ತವನ ಸ್ನೇಹಿತನ ಜೊತೆ ಸೇರಿದ ಆರೋಪಿ ಸೌಮ್ಯಾ ಪತಿಯನ್ನ ಹತ್ಯೆ ಮಾಡಿಸಿದ್ದಾಳೆ. ಬಳಿಕ ಎಸ್ಕೇಪ್‌ ಆಗಲು, ತನ್ನ ಪತಿ ಬೈಕ್‌ನಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ಬಿಂಬಿಸಿದ್ದಳು. ಆದ್ರೆ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಅನುಮಾನ ಮೂಡಿತ್ತು. ಸೌಮ್ಯಾಳನ್ನ ವಿಚಾರಣೆಗೆ ಒಳಪಡಿಸಿದಾಗ ಬಣ್ಣ ಬಯಲಾಗಿ ತಗಲಾಕಿಕೊಂಡಿದ್ದಾಳೆ. ಆರೋಪಿಗಳನ್ನ ಕೋಲಾರ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಐಪಿಎಸ್ ಅಧಿಕಾರಿ ಜೊತೆಗಿನ ಕಿರಿಕ್: ಬಾಲಯ್ಯನ ವಿಡಿಯೋ ಹಾಕಿ ಹಯಾತಿ ಟಾಂಗ್ 

  • 40 ಮಹಿಳೆಯರಿಗೆ ಒಬ್ನೇ ಪತಿ

    40 ಮಹಿಳೆಯರಿಗೆ ಒಬ್ನೇ ಪತಿ

    ಪಾಟ್ನಾ: ಬಿಹಾರದ (Bihar) ಅರ್ವಾಲ್ ಜಿಲ್ಲೆಯ ವ್ಯಕ್ತಿಯೊಬ್ಬ ಬರೋಬ್ಬರಿ 40 ಪತ್ನಿಯರನ್ನು ಹೊಂದುವ ಮೂಲಕ ಸುದ್ದಿಯಾಗಿದ್ದಾನೆ.

    ಬಿಹಾರದ ಅಗರ್ವಾಲ್ ಜಿಲ್ಲೆಯ ರೆಡ್‍ಲೈಟ್ ಏರಿಯಾದಲ್ಲಿ ಜಾತಿ ಗಣತಿ ನಡೆಸಲಾಗಿತ್ತು. ಈ ವೇಳೆ 40 ಮಹಿಳೆಯರು (Women) ಹೇಳಿದ ಉತ್ತರ ಕೇಳಿ ಅಧಿಕಾರಿಗಳು ಒಮ್ಮೆಲೇ ಶಾಕ್ ಆಗಿದ್ದಾರೆ. 40 ಮಹಿಳೆಯರು ರೂಪಚಂದ್ ಎಂಬಾತನನ್ನು ತಮ್ಮ ಪತಿ (Husband) ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅವರ ಮಕ್ಕಳು ಕೂಡ ರೂಪಚಂದ್ ಹೆಸರನ್ನು ತಮ್ಮ ತಂದೆಯ ಹೆಸರಾಗಿ ಬರೆದಿದ್ದಾರೆ.

    ವರದಿಗಳ ಪ್ರಕಾರ, ವಾರ್ಡ್ ಸಂಖ್ಯೆ 7ರ ರೆಡ್‍ಲೈಟ್ ಏರಿಯಾದಲ್ಲಿ ವಾಸಿಸುವ ಜನರು ಜೀವನಕ್ಕಾಗಿ ಹಾಡುತ್ತಾರೆ ಹಾಗೂ ನೃತ್ಯ ಮಾಡುತ್ತಾರೆ. ಆದರೆ ಇವರ್ಯಾರಿಗೂ ಸ್ಥಿರ ವಿಳಾಸವಿಲ್ಲ. ಇದರಿಂದಾಗಿ ಈ ಮಹಿಳೆಯರು ತಮ್ಮ ಪತಿಗೆ ರೂಪಚಂದ್ ಎಂದು ಹೆಸರಿಸಿದ್ದಾರೆ. ಈ ಘಟನೆ ಸುತ್ತಮುತ್ತಲ ಪ್ರದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಡಿಕೆಶಿಗೆ ಸೋಲಿನ ಭಯ ಕಾಡ್ತಿದೆ, ಅದಕ್ಕಾಗಿ‌ ಮಾಟ-ಮಂತ್ರ ಮಾಡಿಸ್ತಿದ್ದಾರೆ: ಆರ್.ಅಶೋಕ್

    ನಿತೀಶ್ ಕುಮಾರ್ ಸರ್ಕಾರವು ಜನವರಿ 7ರಂದು ಬಿಹಾರದಲ್ಲಿ ಜಾತಿ ಆಧಾರಿತ ಜನಗಣತಿಯನ್ನು ಪ್ರಾರಂಭಿಸಿತು. ಎಣಿಕೆ ಯೋಜನೆಗೆ 500 ಕೋಟಿ ವೆಚ್ಚವಾಗಲಿದೆ. ಬಿಹಾರ ಸರ್ಕಾರ ಎರಡು ಹಂತಗಳಲ್ಲಿ ಈ ಎಣಿಕೆಯನ್ನು ನಡೆಸುತ್ತಿದೆ. ಮೊದಲ ಹಂತದಲ್ಲಿ, ಎಲ್ಲಾ ಮನೆಗಳ ಸಂಖ್ಯೆಯನ್ನು ಎಣಿಕೆ ಮಾಡಬೇಕಾಗಿತ್ತು. ಎರಡನೇ ಹಂತದಲ್ಲಿ ಎಲ್ಲ ಜಾತಿ, ಉಪಜಾತಿ ಮತ್ತು ಧರ್ಮದ ಜನರಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಬೇಕಿತ್ತು. ಇದನ್ನೂ ಓದಿ: ಉತ್ತರ ಪ್ರದೇಶ ಅಂದ್ರೆ ಗೂಂಡಾ ರಾಜ್ಯ ಅನ್ನೋ ವಾತಾವರಣವಿತ್ತು – ಸುಮಲತಾ

  • ಅಫ್ಘಾನಿಸ್ತಾನದಲ್ಲಿ ಉದ್ಯಾನವನ, ರೆಸ್ಟೊರೆಂಟ್‌ಗಳಿಗೆ ಕುಟುಂಬ, ಮಹಿಳೆಯರೊಂದಿಗೆ ಹೋಗೋದು ಬ್ಯಾನ್

    ಅಫ್ಘಾನಿಸ್ತಾನದಲ್ಲಿ ಉದ್ಯಾನವನ, ರೆಸ್ಟೊರೆಂಟ್‌ಗಳಿಗೆ ಕುಟುಂಬ, ಮಹಿಳೆಯರೊಂದಿಗೆ ಹೋಗೋದು ಬ್ಯಾನ್

    ಕಾಬೂಲ್: ಅಫ್ಘಾನಿಸ್ತಾನದ (Afghanistan) ಹೆರಾತ್ (Herat) ಪ್ರಾಂತ್ಯದಲ್ಲಿ ಉದ್ಯಾನವನಗಳು (Gardens) ಹಾಗೂ ರೆಸ್ಟೊರೆಂಟ್‌ಗಳಿಗೆ (Restaurant) ಕುಟುಂಬ (Family) ಹಾಗೂ ಮಹಿಳೆಯರು (Women) ಹೋಗುವುದನ್ನು ತಾಲಿಬಾನ್ (Taliban) ನಿಷೇಧಿಸಿದೆ ಎಂದು ಸೋಮವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ತಾಲಿಬಾನ್ ಮುಖ್ಯವಾಗಿ ಮಹಿಳೆಯರ ಮೇಲೆ ಹಿಡಿತ ಸಾಧಿಸುವುದನ್ನು ಮುಂದುವರಿಸುತ್ತಲೇ ಇದೆ. ಈ ಹಿಂದೆ ಪಾರ್ಕ್, ಜಿಮ್, ವಿಶ್ವವಿದ್ಯಾಲಯಗಳಿಗೆ ಮಹಿಳೆಯರು ಹೋಗುವುದನ್ನು ನಿಷೇಧಿಸಿದ ತಾಲಿಬಾನ್ ಇದೀಗ ಕುಟುಂಬದೊಂದಿಗೂ ಉದ್ಯಾನವನ ಹಾಗೂ ರೆಸ್ಟೊರೆಂಟ್‌ಗಳಿಗೆ ಹೋಗುವುದನ್ನು ನಿಷೇಧಿಸಿದೆ.

    ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರದೇಶದಲ್ಲಿ ತಾಲಿಬಾನ್ ಲಿಂಗ ಪ್ರತ್ಯೇಕತೆಯ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಈಗ ಪುರುಷರು ಫ್ಯಾಮಿಲಿ ರೆಸ್ಟೊರೆಂಟ್‌ಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಊಟ ಮಾಡುವಂತಿಲ್ಲ. ಮಾತ್ರವಲ್ಲದೇ ಪುರುಷರು ಹಾಗೂ ಮಹಿಳೆಯರು ಒಟ್ಟಿಗೆ ಉದ್ಯಾನವನಕ್ಕೂ ಹೋಗುವಂತಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಮುಸ್ಲಿಮರು ಭಾರತದಲ್ಲಿ ಚೆನ್ನಾಗೇ ಇದ್ದಾರೆ: ಪಾಶ್ಚಿಮಾತ್ಯ ದೇಶಗಳ ವಿರುದ್ಧ ಸೀತಾರಾಮನ್ ಕಿಡಿ

    ಸಾರ್ವಜನಿಕ ಪ್ರದೇಶಗಳಲ್ಲಿ ಮಹಿಳೆಯರು ಹಿಜಬ್ ಅನ್ನು ಸರಿಯಾಗಿ ಧರಿಸದ ಕಾರಣ ಹಾಗೂ ಇಂತಹ ಪ್ರದೇಶಗಳಲ್ಲಿ ಲಿಂಗ ಮಿಶ್ರಣದ ಕಾರಣದಿಂದಾಗಿ ಈ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೆಸ್ಟೊರೆಂಟ್‌ಗಳಲ್ಲಿ ಊಟಕ್ಕೆ ನಿಷೇಧ ಹೆರಾತ್ ಪ್ರದೇಶದಲ್ಲಿ ಮಾತ್ರವೇ ಅನ್ವಯಿಸುತ್ತದೆ. ಇಂತಹ ಆವರಣಗಳು ಪರುಷರಿಗೆ ತೆರೆದಿರುತ್ತದೆ ಎಂದು ವರದಿಗಳು ತಿಳಿಸಿವೆ.

    ಈ ಹಿಂದೆ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಪುರುಷರು ಹಾಗೂ ಮಹಿಳೆಯರು ವಿವಿಧ ದಿನಗಳಲ್ಲಿ ಉದ್ಯಾನವನಕ್ಕೆ ಭೇಟಿ ನೀಡಬಹುದು ಎಂದು ತಿಳಿಸಿತ್ತು. ಇದರ ಪ್ರಕಾರ ಗುರುವಾರ, ಶುಕ್ರವಾರ ಮತ್ತು ಶನಿವಾರ ಉದ್ಯಾನವನಗಳಲ್ಲಿ ಮಹಿಳೆಯರಿಗೆ ಹೋಗಲು ಅವಕಾಶವಿದ್ದು, ಭಾನುವಾರ, ಸೋಮವಾರ, ಮಂಗಳವಾರ ಹಾಗೂ ಬುಧವಾರ ಪುರುಷರಿಗೆ ಮಾತ್ರವೇ ತೆರೆಯಲಾಗುತ್ತದೆ ಎಂದು ತಿಳಿಸಲಾಗಿತ್ತು. ಇದನ್ನೂ ಓದಿ: ಉದ್ಯೋಗಿಯಿಂದಲೇ ಬ್ಯಾಂಕ್‌ನಲ್ಲಿ ಗುಂಡಿನ ದಾಳಿ – 5 ಮಂದಿ ಸಾವು, 9 ಮಂದಿಗೆ ಗಾಯ

  • ಮೂಲಭೂತ ಸೌಕರ್ಯ ಕೊಡದೇ ಪ್ರಚಾರಕ್ಕೆ ಬಂದ್ರೆ ವೋಟ್ ಕೊಡಲ್ಲ: ನಿಖಿಲ್‌ಗೆ ಮಹಿಳೆಯರಿಂದ ತರಾಟೆ

    ಮೂಲಭೂತ ಸೌಕರ್ಯ ಕೊಡದೇ ಪ್ರಚಾರಕ್ಕೆ ಬಂದ್ರೆ ವೋಟ್ ಕೊಡಲ್ಲ: ನಿಖಿಲ್‌ಗೆ ಮಹಿಳೆಯರಿಂದ ತರಾಟೆ

    ರಾಮನಗರ: ಮೂಲಭೂತ ಸೌಕರ್ಯ ಒದಗಿಸದೇ ಪ್ರಚಾರಕ್ಕೆ ಬಂದ್ರೆ ವೋಟ್ ಕೊಡಲ್ಲ ಎಂದು ಪ್ರಚಾರಕ್ಕೆ ಬಂದ ನಿಖಿಲ್ ಕುಮಾರಸ್ವಾಮಿಗೆ (Nikhil Kumaraswamy) ಮಹಿಳೆಯರು (Women) ತರಾಟೆ ತೆಗೆದುಕೊಂಡಿದ್ದಾರೆ.

    ರಾಮನಗರ (Ramanagara) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡಬಾದಿಗೆರೆ ಗ್ರಾಮದಲ್ಲಿ ಪ್ರಚಾರ ಮಾಡುತ್ತಿದ್ದ ನಿಖಿಲ್‌ಗೆ ಗ್ರಾಮದ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ. ನಮಗೆ ಕುಡಿಯುವ ನೀರಿನ ಸೌಲಭ್ಯ ಇಲ್ಲ, ಚರಂಡಿ ವ್ಯವಸ್ಥೆ ಇಲ್ಲ. ಅಲ್ಲದೇ ನಿಮ್ಮ ತಾಯಿ ಬಂದು ಗುದ್ದಲಿ ಪೂಜೆ ಮಾಡಿದ್ದರು. ಆದರೆ ಕೆಲಸ ಪೂರ್ಣ ಆಗದೇ ಅರ್ಧಕ್ಕೆ ನಿಂತಿದೆ. ನಮ್ಮ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಹೀಗಿದ್ದಮೇಲೆ ನಾವು ಮತ ಹಾಕಲ್ಲ ಎಂದು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: UPSCಯಿಂದ ನೇಮಕಗೊಂಡ ಅಧಿಕಾರಿಗಳು ಡಕಾಯಿತರು: ಕೇಂದ್ರ ಸಚಿವ

    ಈ ವೇಳೆ ಸಮಾಧಾನದಿಂದಲೇ ಮಹಿಳೆಯರ ಅಳಲು ಆಲಿಸಿದ ನಿಖಿಲ್ ಕುಮಾರಸ್ವಾಮಿ ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಸದ್ಯ ಮಹಿಳೆಯರು ನಿಖಿಲ್ ಅವರನ್ನು ತರಾಟೆ ತೆಗೆದುಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಹ್ಯಾಟ್ರಿಕ್ ಸಾಧನೆ ಮಾಡ್ತಾರಾ ಹೆಚ್‍ಕೆ ಪಾಟೀಲ್? – ಕಾಂಗ್ರೆಸ್ ಕೋಟೆ ಛಿದ್ರ ಮಾಡುತ್ತಾ ಬಿಜೆಪಿ?

    
    
  • ಹಿಜಬ್ ಧರಿಸದ ಮಹಿಳೆಯರನ್ನು ಗುರುತಿಸಿ ದಂಡ ವಿಧಿಸಲು ಇರಾನ್‌ನಲ್ಲಿ ಸಿಸಿಟಿವಿ ಅಳವಡಿಕೆ

    ಹಿಜಬ್ ಧರಿಸದ ಮಹಿಳೆಯರನ್ನು ಗುರುತಿಸಿ ದಂಡ ವಿಧಿಸಲು ಇರಾನ್‌ನಲ್ಲಿ ಸಿಸಿಟಿವಿ ಅಳವಡಿಕೆ

    ಟೆಹ್ರಾನ್: ಇರಾನ್‌ನಲ್ಲಿ (Iran) ಮಹಿಳೆಯರಿಗೆ (Women) ಕಡ್ಡಾಯ ಮಾಡಲಾಗಿರುವ ಡ್ರೆಸ್ ಕೋಡ್ (Dress Code) ಅನ್ನು ಧಿಕ್ಕರಿಸುತ್ತಿರುವವರ ಸಂಖ್ಯೆ ದಿನಕಳೆದಂತೆ ಹೆಚ್ಚುತ್ತಿದೆ. ಮಹಿಳೆಯರು ನಿಯಮವನ್ನು ಉಲ್ಲಂಘಿಸುವುದನ್ನು ತಡೆಯಲು ಇದೀಗ ಅಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿಗಳನ್ನು (CCTV) ಅಳವಡಿಸಿ, ಹಿಜಬ್ (Hijab) ಧರಿಸದ ಮಹಿಳೆಯರನ್ನು ಗುರುತಿಸಿ, ಬಳಿಕ ದಂಡ ವಿಧಿಸಲಾಗುತ್ತಿದೆ.

    ಇರಾನ್‌ನಲ್ಲಿ ಈ ಕ್ರಮವನ್ನು ಹಿಜಬ್ ಕಾನೂನಿನ ವಿರುದ್ಧ ಪ್ರತಿರೋಧವನ್ನು ತಡೆಗಟ್ಟುವ ಸಲುವಾಗಿ ಕೈಗೊಳ್ಳಲಾಗುತ್ತಿದೆ. ಹಿಜಬ್ ಧರಿಸದೇ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದರೆ ಅಂತಹವರಿಗೆ ಅಧಿಕಾರಿಗಳು ದಂಡ ವಿಧಿಸುವುದರೊಂದಿಗೆ ಮುಂದೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡುತ್ತಿದ್ದಾರೆ ಎನ್ನಲಾಗಿದೆ.

     

    ಹಿಜಬ್‌ಗೆ ಸಂಬಂಧಿಸಿದಂತೆ ಕಳೆದ ಹಲವು ತಿಂಗಳುಗಳಿಂದ ಇರಾನ್‌ನಲ್ಲಿ ವಿವಾದಗಳು ಏಳುತ್ತಲೇ ಇದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 22 ವರ್ಷದ ಯುವತಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ನಿಯಮವನ್ನು ಉಲ್ಲಂಘಿಸಿ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಹಿಜಬ್ ಅನ್ನು ಸರಿಯಾಗಿ ಧರಿಸದೇ ಇದ್ದುದಕ್ಕೆ ಯುವತಿ ಮಹ್ಸಾ ಅಮಿನಿಯನ್ನು ಪೊಲೀಸರು ಬಂಧಿಸಿದ್ದರು. ಆಕೆ ಪೊಲೀಸ್ ಕಸ್ಟಡಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಬಳಿಕ ಇರಾನ್‌ನಾದ್ಯಂತ ಭಾರೀ ಹಿಂಸಾಚಾರ ನಡೆದಿದೆ. ಇದನ್ನೂ ಓದಿ: ಬಂಡೀಪುರದಲ್ಲಿ ಮೋದಿ ಸಫಾರಿ – ಪ್ರಕೃತಿ ಸೌಂದರ್ಯ ಸವಿದ ಪ್ರಧಾನಿ

    ಇರಾನ್‌ನಲ್ಲಿ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸುವುದರಿಂದ ಬಂಧನದ ಸಾಧ್ಯತೆಗಳಿದ್ದರೂ ದೇಶಾದ್ಯಂತ ಮಾಲ್, ರೆಸ್ಟೊರೆಂಟ್, ಅಂಗಡಿ, ಬೀದಿಗಳಲ್ಲಿ ಹಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಿಜಬ್ ಧರಿಸದೇ ಓಡಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೀಗೆ ಡ್ರೆಸ್ ಕೋಡ್‌ಗಳನ್ನು ಉಲ್ಲಂಘಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಮಹಿಳೆಯರ ನೈತಿಕ ಪೊಲೀಸ್‌ಗಿರಿಯನ್ನು ವಿರೋಧಿಸುವ ವೀಡಿಯೋಗಳು ಕೂಡಾ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿವೆ.

    ಇದರೊಂದಿಗೆ ಹೆಣ್ಣುಮಕ್ಕಳ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುವ ಸಲುವಾಗಿ ಅವರಿಗೆ ವಿಷಪ್ರಾಶನ ಮಾಡಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್ ಬಳಿಕ ದೇಶಾದ್ಯಂತ ಸಾವಿರಾರು ವಿದ್ಯಾರ್ಥಿನಿಯರು ವಿಷ ಸೇವಿಸಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ.  ಇದನ್ನೂ ಓದಿ: ರಾಹುಲ್‌ಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರ ನಾಲಿಗೆ ಕತ್ತರಿಸ್ತೀನಿ – ಬೆದರಿಕೆ ಹಾಕಿದ ಕಾಂಗ್ರೆಸ್ ನಾಯಕನ ವಿರುದ್ಧ ಪ್ರಕರಣ ದಾಖಲು

  • ಮಂಡ್ಯದಲ್ಲಿ ಈಗ ಪುರುಷರ ಪಾರುಪತ್ಯ- ಹಿಂದೆ ಮಹಿಳೆಯರದ್ದೆ ಗದ್ದುಗೆ

    ಮಂಡ್ಯದಲ್ಲಿ ಈಗ ಪುರುಷರ ಪಾರುಪತ್ಯ- ಹಿಂದೆ ಮಹಿಳೆಯರದ್ದೆ ಗದ್ದುಗೆ

    ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya Election) ಜಿಲ್ಲೆಯ ರಾಜಕೀಯ ಸಂಪೂರ್ಣ ವಿಭಿನ್ನ. ಈ ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯದ ನಾಯಕರದ್ದೇ ಪಾರುಪತ್ಯವಾಗಿದೆ. ಈ ಜಿಲ್ಲೆಯಲ್ಲಿ ಸದ್ಯ 7 ಕ್ಷೇತ್ರಗಳಲ್ಲಿ ಪುರುಷ ನಾಯಕತ್ವ ಇದೆ, ಆದರೆ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ಮಹಿಳಾ ನಾಯಕತ್ವ ಗಣನೀಯವಾಗಿ ಇತ್ತು. ಜಿಲ್ಲೆಯ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರು ಸ್ಪರ್ಧೆ ಮಾಡುವುದರ ಜೊತೆಗೆ ಗೆಲುವಿನ ನಗೆಯನ್ನು ಬೀರುತ್ತಿದ್ರು.

    ವಿಧಾನಸಭಾ ಚುನಾವಣೆ (Vidhanasabha Election) ಗೆ ಸಂಬಂಧಿಸಿದಂತೆ ಜಿಲ್ಲೆಯ ಮಟ್ಟಿಗೆ ಶ್ರೀರಂಗಪಟ್ಟಣ ಕ್ಷೇತ್ರದಿಂದ ಹೆಚ್ಚು ಮಹಿಳೆಯರು ಶಾಸಕಿಯರಾಗಿ ಆಯ್ಕೆಯಾಗಿದ್ದಾರೆ. ಅದರಲ್ಲೂ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಅವರು ಮೂರು ಬಾರಿ ಆಯ್ಕೆಯಾಗಿರುವುದು ವಿಶೇಷ. ಪುರುಷರೇ ಸ್ಪರ್ಧಿಸಿ ಜಯಗಳಿಸುತ್ತಿದ್ದ ಕ್ಷೇತ್ರದಲ್ಲಿ ಮೊದಲ ಬಾರಿಗೆ ಅಂದರೆ 1972ರಲ್ಲಿ ದಮಮಂತಿ ಬೋರೇಗೌಡ 7,139 ಮತಗಳ ಅಂತರದಿಂದ ಗೆದ್ದು ಶಾಸಕಿಯಾಗಿ ಆಯ್ಕೆಯಾಗುತ್ತಾರೆ. ನಂತರ 1986ರಲ್ಲಿ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ, 1989ರಲ್ಲಿ ದಮಯಂತಿ ಬೋರೇಗೌಡ, 1994ರಲ್ಲಿ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ, 1999ರಲ್ಲಿ ಪಾರ್ವತಮ್ಮ ಶ್ರೀಕಂಠಯ್ಯ, 2004ರಲ್ಲಿ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ ಶಾಸಕಿಯಾಗಿ ಆಯ್ಕೆಯಾಗಿದ್ದು ಇತಿಹಾಸ.

    ಮದ್ದೂರು ವಿಧಾನಸಭಾ ಕ್ಷೇತ್ರ (Maddur Vidhanasabha Constituency) ದಿಂದ 1984ರಲ್ಲಿ ಜಯವಾಣಿ ಮಂಚೇಗೌಡ, 2009ರಲ್ಲಿ ಕಲ್ಪನಾ ಸಿದ್ದರಾಜು, ಮಂಡ್ಯ ವಿಧಾನಸಭಾ ಕ್ಷೇತ್ರದಿಂದ 1997ರಲ್ಲಿ ಪ್ರಭಾವತಿ ಜಯರಾಂ, ಮಳವಳ್ಳಿ ಕ್ಷೇತ್ರದಿಂದ 1989ರಲ್ಲಿ ಮಲ್ಲಾಜಮ್ಮ ಹಾಗೂ ಈ ಹಿಂದೆ ಅಸ್ತಿತ್ವದಲ್ಲಿದ್ದ ಕಿರುಗಾವಲು ಕ್ಷೇತ್ರದಿಂದ 2004ರಲ್ಲಿ ಎಂ.ಕೆ.ನಾಗಮಣಿ ಶಾಸಕಿಯಾಗಿ ಆಯ್ಕೆಯಾಗಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಟಿಕೆಟ್ ಮಿಸ್- ಪುತ್ರನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ತಾಯಿ ಕಾಂತಾದೇವಿ

    ಜಿಲ್ಲೆಯ ಐದು ವಿಧಾನಸಭಾ(ಕಿರುಗಾವಲು ಸೇರಿದಂತೆ) ಕ್ಷೇತ್ರದಿಂದ ಎಂಟು ಮಹಿಳಾ ಶಾಸಕಿಯರಾಗಿ ಇತಿಹಾಸ ನಿರ್ಮಿಸಿರುವುದು ಒಂದೆಡೆಯಾದರೆ, ಮೇಲುಕೋಟೆ ಮತ್ತು ಕೆ.ಆರ್.ಪೇಟೆ, ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಈವರೆಗೆ ಮಹಿಳೆಯರು ಶಾಸಕಿಯರಾಗಿಲ್ಲ. ಜಿಲ್ಲೆಯಿಂದ 8 ಶಾಸಕಿಯರು ಆಯ್ಕೆಯಾಗಿ ವಿಧಾನಸಭೆ ಪ್ರವೇಶ ಮಾಡಿದ್ದರೂ, ಯಾರೊಬ್ಬರೂ ಸಚಿವ ಹುದ್ದೆ ಅಲಂಕರಿಸಿಲ್ಲ ಎನ್ನುವುದು ಗಮನಾರ್ಹ. ಆದರೆ 1994ರಲ್ಲಿ ಶಾಸಕಿಯಾಗಿ ಆಯ್ಕೆಯಾದ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಅವರು ಜೆ.ಎಚ್.ಪಟೇಲರ ಸರ್ಕಾರದಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು. ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಮಳವಳ್ಳಿ ಕ್ಷೇತ್ರದ ಮಲ್ಲಾಜಮ್ಮ ಅವರು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿ ಕೆಲಸ ನಿರ್ವಹಿಸಿದ್ದಾರೆ.

  • ರಂಜಾನ್ ಸಂದರ್ಭ ಸಂಗೀತ ನಿಷೇಧ – ಅಫ್ಘಾನಿಸ್ತಾನದ ಮಹಿಳಾ ರೇಡಿಯೋ ಸ್ಟೇಷನ್ ಮುಚ್ಚಿದ ತಾಲಿಬಾನ್

    ರಂಜಾನ್ ಸಂದರ್ಭ ಸಂಗೀತ ನಿಷೇಧ – ಅಫ್ಘಾನಿಸ್ತಾನದ ಮಹಿಳಾ ರೇಡಿಯೋ ಸ್ಟೇಷನ್ ಮುಚ್ಚಿದ ತಾಲಿಬಾನ್

    ಕಾಬೂಲ್: ಇಸ್ಲಾಮಿಕ್ ಎಮಿರೇಟ್‌ನ ಕಾನೂನುಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಫ್ಘಾನಿಸ್ತಾನದಲ್ಲಿ (Afghanistan) ಮಹಿಳಾ ಚಾಲಿತ ರೇಡಿಯೊ ಕೇಂದ್ರವನ್ನು (Radio Station) ಮುಚ್ಚಲಾಗಿದೆ.

    ವರದಿಗಳ ಪ್ರಕಾರ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ರೇಡಿಯೊ ಸ್ಟೇಷನ್ ‘ಸದಾಯ್ ಬನೋವನ್’ ಮುಸ್ಲಿಮರ ಪವಿತ್ರ ರಂಜಾನ್ (Ramadan) ತಿಂಗಳಿನಲ್ಲಿ ಸಂಗೀತವನ್ನು ನುಡಿಸಿದೆ ಎಂದು ತಾಲಿಬಾನ್ (Taliban) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೇಡಿಯೋ ಸ್ಟೇಷನ್‌ನಲ್ಲಿ 8 ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅವರಲ್ಲಿ 6 ಮಂದಿ ಮಹಿಳೆಯರೇ ಇದ್ದಾರೆ ಎನ್ನಲಾಗಿದೆ.

    ಇತ್ತೀಚೆಗೆ ರಂಜಾನ್ ಸಮಯದಲ್ಲಿ ಸಂಗೀತಗಳನ್ನು ಪ್ರಸಾರ ಮಾಡುವ ಮೂಲಕ ರೇಡಿಯೋ ಸ್ಟೇಷನ್ ಇಸ್ಲಾಮಿಕ್ ಎಮಿರೇಟ್‌ನ ಕಾನೂನುಗಳು ಮತ್ತು ನಿಬಂಧನೆಗಳನ್ನು ಹಲವಾರು ಬಾರಿ ಉಲ್ಲಂಘಿಸಿದೆ. ಈ ಉಲ್ಲಂಘನೆಯ ಕಾರಣದಿಂದ ರೇಡಿಯೋ ಕೇಂದ್ರವನ್ನು ಮುಚ್ಚಲಾಗಿದೆ ಎಂದು ಬಡಾಕ್ಷನ್ ಪ್ರಾಂತ್ಯದ ಮಾಹಿತಿ ಮತ್ತು ಸಂಸ್ಕೃತಿಯ ನಿರ್ದೇಶಕ ಮೊಯೆಜುದ್ದೀನ್ ಅಹ್ಮದಿ ಹೇಳಿದ್ದಾರೆ. ಇದನ್ನೂ ಓದಿ: ಕಾರ್ಗಿಲ್ ಯುದ್ಧದ ಹೀರೋ ರಸ್ತೆ ಅಪಘಾತದಲ್ಲಿ ದುರ್ಮರಣ

    ಈ ರೇಡಿಯೋ ಸ್ಟೇಷನ್ ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ ನೀತಿಯನ್ನು ಒಪ್ಪಿಕೊಂಡರೆ ಮತ್ತು ಅಂತಹದನ್ನು ಮತ್ತೆ ಪುನರಾವರ್ತಿಸುವುದಿಲ್ಲ ಎಂಬುದನ್ನು ಖಚಿತಪಡಿಸಿದರೆ ನಾವು ಅದನ್ನು ಮತ್ತೆ ಕಾರ್ಯನಿರ್ವಹಿಸಲು ಅನುಮತಿಸುತ್ತೇವೆ ಎಂದು ಅಹ್ಮದಿ ತಿಳಿಸಿದ್ದಾರೆ.

    ಈ ನಡುವೆ ರೇಡಿಯೋ ಸ್ಟೇಷನ್‌ನ ಮುಖ್ಯಸ್ಥರು ಇಸ್ಲಾಮಿಕ್ ಕಾನೂನನ್ನು ಉಲ್ಲಂಘಿಸಿದ ಆರೋಪವನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ರೇಡಿಯೋ ಸ್ಟೇಷನ್ ಅನ್ನು ಮುಚ್ಚುವ ಅಗತ್ಯವೇ ಇರಲಿಲ್ಲ. ನಾವು ಸಂಗೀತವನ್ನು ಪ್ರಸಾರ ಮಾಡಿರುವುದಾಗಿ ತಾಲಿಬಾನ್ ಹೇಳಿದೆ. ಆದರೆ ನಾವು ಯಾವುದೇ ರೀತಿಯ ಸಂಗೀತವನ್ನು ಪ್ರಸಾರ ಮಾಡಿಲ್ಲ ಎಂದು ತಿಳಿಸಿದ್ದಾರೆ.

    ಅಫ್ಘಾನಿಸ್ತಾನವನ್ನು 2021ರಲ್ಲಿ ತಾಲಿಬಾನ್ ವಶಪಡಿಸಿಕೊಂಡ ಬಳಿಕ ಆರಂಭದಲ್ಲಿ ಮೃದುವಾಗಿಯೇ ಆಡಳಿತದ ಭರವಸೆಯನ್ನು ನೀಡಿತ್ತು. ಆದರೆ ಬಳಿಕ ನಿಧಾನವಾಗಿ ಮಹಿಳೆಯರ ಹಕ್ಕು ಹಾಗೂ ಸ್ವಾತಂತ್ರ್ಯಗಳನ್ನು ತಾಲಿಬಾನ್ ಕಸಿದುಕೊಳ್ಳಲು ಪ್ರಾರಂಭಿಸಿತು. ಇದಕ್ಕೆ ಉದಾಹರಣೆ ಎಂಬಂತೆ ಪಾರ್ಕ್, ಜಿಮ್ ಹಾಗೂ ಸರ್ವಜನಿಕ ಸ್ನಾನಗೃಹಗಳಿಂದ ಮಹಿಳೆಯರನ್ನು ನಿಷೇಧಿಸಲಾಯಿತು. ಇಷ್ಟು ಮಾತ್ರವಲ್ಲದೇ ಅಫ್ಘಾನಿಸ್ತಾನದಲ್ಲಿ ಮಹಿಳೆಯರನ್ನು ವಿಶ್ವವಿದ್ಯಾನಿಲಯಗಳಿಗೆ ಹೋಗುವುದನ್ನೂ ತಡೆಯಲಾಯಿತು. ಇದು ದೇಶದ ಯುವಜನರಲ್ಲಿ ಹಾಗೂ ಅಂತಾರಾಷ್ಟ್ರೀಯವಾಗಿ ಖಂಡನೆಗೆ ಗುರಿಯಾಯಿತು. ಇದನ್ನೂ ಓದಿ: Naxals killed: ಜಾರ್ಖಂಡ್‌ನಲ್ಲಿ ಎನ್‌ಕೌಂಟರ್‌ಗೆ 5 ನಕ್ಸಲರು ಬಲಿ

  • ಹಿಜಬ್ ಧರಿಸಿಲ್ಲ ಅಂತ ಮಹಿಳೆಯರ ತಲೆ ಮೇಲೆ ಮೊಸರು ಸುರಿದು ಹಲ್ಲೆ

    ಹಿಜಬ್ ಧರಿಸಿಲ್ಲ ಅಂತ ಮಹಿಳೆಯರ ತಲೆ ಮೇಲೆ ಮೊಸರು ಸುರಿದು ಹಲ್ಲೆ

    ಟೆಹ್ರಾನ್: ಮಹಿಳೆಯರಿಬ್ಬರು (Women) ಸಾರ್ವಜನಿಕ ಸ್ಥಳದಲ್ಲಿ ಹಿಜಬ್ (Hijab) ಧರಿಸದ್ದಕ್ಕೆ ಮೊಸರು ಸುರಿದು (Yoghurt) ಹಲ್ಲೆ ನಡೆಸಿದ ಘಟನೆ ಇರಾನಿನಲ್ಲಿ (Iran) ನಡೆದಿದೆ.

    ಇರಾನಿನ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ. ಘಟನೆಯ ಸಂಪೂರ್ಣ ವೀಡಿಯೋ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೀಡಿಯೋವು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ವೀಡಿಯೋದಲ್ಲಿ ಏನಿದೆ?: ಇಬ್ಬರು ಮಹಿಳೆಯರು ಅಂಗಡಿಯೊಂದಕ್ಕೆ ಹಿಜಬ್ ಧರಿಸದೇ ಬಂದಿದ್ದಾರೆ. ಅದೇ ಸಂದರ್ಭದಲ್ಲಿ ಬಂದ ವ್ಯಕ್ತಿಯೊಬ್ಬ ಆ ಇಬ್ಬರು ಮಹಿಳೆಯರ ಮೇಲೆ ಕೂಗಾಡಿದ್ದಾನೆ. ನಂತರ ಆತ ಹತ್ತಿರ ಕಪಾಟಿನಲ್ಲಿದ್ದ ಮೊಸರಿನ ಪ್ಯಾಕೆಟ್‍ನ್ನು ತೆಗೆದುಕೊಂಡು ಕೋಪದಿಂದ ಇಬ್ಬರು ಮಹಿಳೆಯರ ತಲೆ ಮೇಲೆ ಎಸೆದಿದ್ದಾನೆ. ನಂತರ ಅಂಗಡಿಯಿಂದ ಹೊರಗೆ ಓಡಿ ಹೋಗಿದ್ದಾನೆ.

    ಘಟನೆಯ ನಂತರ ಇರಾನ್ ಪೊಲೀಸರು ಹಿಜಬ್ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ. ಜೊತೆಗೆ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತಂದಿದ್ದಕ್ಕೆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಕಾನೂನಿನ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಅಂಗಡಿಯ ಮಾಲೀಕರಿಗೆ ನೋಟೀಸ್ ನೀಡಲಾಗಿದೆ.

    ಇರಾನ್‍ನಲ್ಲಿ ಮಹಿಳೆಯರೂ ಹಿಜಬ್ ಧರಿಸುವುದು ಕಡ್ಡಾಯವಾಗಿದ್ದು, 7 ವರ್ಷದ ಹುಡುಗಿಯಿಂದ ಹಿಡಿದು ಪ್ರತಿಯೊಬ್ಬ ಮಹಿಳೆಯು ಹಿಜಬ್ ಧರಿಸಬೇಕು ಎಂದು ಕಾನೂನು ಇದೆ. ಆದರೆ ಕಳೆದ ವರ್ಷದಿಂದ ಹಲವೆಡೆ ಹಿಜಬ್ ವಿರೋಧಿಸಿ ಇರಾನ್‍ನ ನಾನಾ ಪ್ರದೇಶದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹಕ್ಕೆ ಅಮೆರಿಕ, ಜರ್ಮನಿ ಸ್ಪಂದನೆ ಅನಗತ್ಯ: ಕೇಂದ್ರ ಸಚಿವ ಜೈಶಂಕರ್

    ಹಿಜಬ್ ವಿರೋಧಿ ಹೋರಾಟ?: ಕಳೆದ ವರ್ಷ ಮಹ್ಸಾ ಅಮಿನಿ ಎಂಬ ಯುವತಿಯನ್ನು ಹಿಜಬ್ ಧರಿಸಿಲ್ಲ ಎಂಬ ಕಾರಣಕ್ಕೆ ಬಂಧಿಸಲಾಗಿತ್ತು. ನೈತಿಕ ಪೊಲೀಸ್‍ಗಿರಿಗೆ ಆಕೆ ಬಲಿಯಾಗಿದ್ದಳು. ಸಾವಿನ ಸುದ್ದಿ ಬಹಿರಂಗವಾಗುತ್ತಿದ್ದಂತೆ ಇರಾನ್‍ನಲ್ಲಿ ಸಾವಿರಾರು ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದ್ದರು. ಯುವತಿ ಸಾವಿನ ಬಳಿಕ ಇರಾನ್‍ನಲ್ಲಿ ಹಿಜಬ್ ವಿರೋಧಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಸುಮಾರು 14,000 ಮಂದಿಯನ್ನು ಆಗ ಬಂಧಿಸಲಾಗಿತ್ತು. ಅವರಲ್ಲಿ ಸಾವಿರಾರು ಪುರುಷರು, ಮಹಿಳೆಯರು, ಮಕ್ಕಳೂ ಸೇರಿದ್ದರು. ಮಾತ್ರವಲ್ಲದೇ ಹಿಜಬ್ ವಿರೋಧಿ ಪ್ರತಿಭಟನೆಯನ್ನು ಬೆಂಬಲಿಸಿ ಹಲವರು ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸಿಕೊಂಡು, ನಡುರಸ್ತೆಯಲ್ಲೇ ಹಿಜಬ್ ಸುಟ್ಟು ಆಕ್ರೋಶ ಹೊರಹಾಕಿದ್ದರು. ಇದನ್ನೂ ಓದಿ:  ಬೆಂಗಳೂರಿನಲ್ಲಿ ಬೈಕ್‌ಗೆ ಲಾರಿ ಡಿಕ್ಕಿ- ಮಹಿಳೆ ಸಾವು

  • ಮದುವೆಯಾಗಿ 2 ವರ್ಷ ಆದ್ರೂ ಮಕ್ಕಳಾಗಿಲ್ಲ ಅಂತಾ ಗೃಹಿಣಿ ಆತ್ಮಹತ್ಯೆ

    ಮದುವೆಯಾಗಿ 2 ವರ್ಷ ಆದ್ರೂ ಮಕ್ಕಳಾಗಿಲ್ಲ ಅಂತಾ ಗೃಹಿಣಿ ಆತ್ಮಹತ್ಯೆ

    ಶಿವಮೊಗ್ಗ: ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ (Shivamogga) ನಗರದ ಮಿಳಘಟ್ಟ ಬಡಾವಣೆಯಲ್ಲಿ ನಡೆದಿದೆ. ಮೃತ ಗೃಹಿಣಿಯನ್ನು ಸಂಗೀತ (21) ಎಂದು ಗುರುತಿಸಲಾಗಿದೆ.

    ಕಳೆದ ಎರಡು ವರ್ಷದ ಹಿಂದೆ ಮಿಳಘಟ್ಟದ ನಿವಾಸಿ ಗುರುಮೂರ್ತಿ‌ ಜೊತೆ ಸಂಗೀತ ವಿವಾಹವಾಗಿತ್ತು. ವಿವಾಹವಾಗಿ ಎರಡು ವರ್ಷವಾದರೂ ಮಕ್ಕಳಾಗಿರಲಿಲ್ಲ ಎಂದು ಕೊರಗುತ್ತಿದ್ದಳು ಎನ್ನಲಾಗಿದೆ. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ – ಕೊಲೆ ಆರೋಪ

    ಆದರೆ ಸಂಗೀತ ಪತಿಯ ಸಹೋದರಿ ಇತ್ತೀಚೆಗೆ ವಿವಾಹವಾಗಿದ್ದರು. ಮದುವೆಯಾದ ಕೆಲವೇ ತಿಂಗಳಿಗೆ ಆಕೆ ಗರ್ಭಿಣಿಯಾಗಿದ್ದಳು. ಮದುವೆಯಾಗಿ ಎರಡು ವರ್ಷ ಕಳೆದರೂ ತನಗೆ ಮಕ್ಕಳಾಗಿರಲಿಲ್ಲ ಎಂಬ ಕೊರಗಿನಿಂದಲೇ ಕೊರಳಿಗೆ ಉರುಳು ಹಾಕಿಕೊಂಡಿದ್ದಾಳೆ ಎನ್ನಲಾಗಿದೆ.

    ಸ್ಥಳಕ್ಕೆ ದೊಡ್ಡಪೇಟೆ ಠಾಣೆ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇದನ್ನೂ ಓದಿ: ಮಹಿಳಾ ಆಟಗಾರ್ತಿಯ ಸ್ನಾನದ ವಿಡಿಯೋ ಸೆರೆ ಹಿಡಿದ ಮತ್ತೋರ್ವ ಆಟಗಾರ್ತಿ

  • ಬೆಡ್‌ರೂಂನಲ್ಲಿ ಮಲಗಿದ್ದ 6 ಅಡಿ ಬುಸ್ ಬುಸ್ ಹಾವು – ಎದ್ನೋ ಬಿದ್ನೋ ಅಂತಾ ಓಡಿದ ಮಹಿಳೆ!

    ಬೆಡ್‌ರೂಂನಲ್ಲಿ ಮಲಗಿದ್ದ 6 ಅಡಿ ಬುಸ್ ಬುಸ್ ಹಾವು – ಎದ್ನೋ ಬಿದ್ನೋ ಅಂತಾ ಓಡಿದ ಮಹಿಳೆ!

    ಕ್ಯಾನ್ಬೆರಾ: ಸಾಮಾನ್ಯವಾಗಿ ಬೇಸಿಗೆಯಲ್ಲಿ ಹಾವುಗಳು ಹುತ್ತದಿಂದ ಹೊರಬರುತ್ತವೆ. ವಾಸಕ್ಕೆ ತಂಪಾದ ಜಾಗಗಳನ್ನೇ ಹುಡುಕುತ್ತವೆ. ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ಮನೆಗಳಿಗೂ ಹೊಕ್ಕಿಬಿಡುತ್ತವೆ.

    ಅದೇ ರೀತಿ ಆಸ್ಟ್ರೇಲಿಯಾ (Australia) ಕ್ವೀನ್ಸ್‌ಲ್ಯಾಂಡ್‌ ನಲ್ಲಿ ಮನೆಯೊಂದಕ್ಕೆ ಹೊಕ್ಕಿದ ಅತ್ಯಂತ ವಿಷಕಾರಿ ಹಾವು (Venomous Snake) ನುಗ್ಗಿದ್ದು, ಮಹಿಳೆಯ ಬೆಡ್‌ರೂಮ್ ಹಾಸಿಗೆಯಲ್ಲೇ ಮಲಗಿದ್ದ ದೃಶ್ಯ ಕಂಡುಬಂದಿದೆ. ಹಾವು ಸುಮಾರು 6 ಅಡಿ ಉದ್ಧ ಇತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ: ಸಲಿಂಗಕಾಮಿಗಳು ಅಂತಾ ಹೇಳಿಕೊಂಡ್ರೆ ಮರಣದಂಡನೆ – ಮಸೂದೆ ಪಾಸ್‌ ಮಾಡಿದ ಉಗಾಂಡ

    ತನ್ನ ಹಾಸಿಗೆ ಮೇಲೆ ಮಲಗಿದ್ದ ಹಾವನ್ನು ಕಂಡೊಡನೆ ಮಹಿಳೆ ಎದ್ನೋ ಬಿದ್ನೋ ಅಂತಾ ಓಡಿಬಂದಿದ್ದಾಳೆ. ತಕ್ಷಣ ಬಾಗಿಲು ಹಾಕಿಕೊಂಡು ಹಾವು ಹೊರಕ್ಕೆ ಹೋಗದಂತೆ ತಡೆದಿದ್ದಾಳೆ. ಬಾಗಿಲು ಸಂದಿಯನ್ನು ಟವೆಲ್‌ನಿಂದ ಮುಚ್ಚಿದ್ದಾಳೆ. ನಂತರ ಸ್ಥಳೀಯ ಉರಗ ರಕ್ಷಕರೊಬ್ಬರಿಗೆ ಕರೆ ಮಾಡಿ ಬರಲು ಹೇಳಿದ್ದು, ಹಾವನ್ನು ರಕ್ಷಣೆ ಮಾಡಿದ ನಂತರ ಮಹಿಳೆ ತನ್ನ ರೂಮಿಗೆ ಪ್ರವೇಶ ಮಾಡಿದ್ದಾಳೆ.

    ಈ ಫೋಟೋವನ್ನು ಉರಗ ರಕ್ಷಕ ಜಾಲತಾಣದಲ್ಲೂ ಹಂಚಿಕೊಂಡಿದ್ದು, ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ದೆಹಲಿ ಬೆನ್ನಲ್ಲೇ ಪಾಕಿಸ್ತಾನದಲ್ಲೂ ಪ್ರಬಲ ಭೂಕಂಪ – 9 ಮಂದಿ ಸಾವು