Tag: women

  • ಬಸ್ ಸೀಟಿಗಾಗಿ ಕೈಕೈ ಮಿಲಾಯಿಸಿದ ಮೈಸೂರು ಮಹಿಳೆಯರು – ನಾರಿ ʻಶಕ್ತಿʼ ಪ್ರದರ್ಶನ

    ಬಸ್ ಸೀಟಿಗಾಗಿ ಕೈಕೈ ಮಿಲಾಯಿಸಿದ ಮೈಸೂರು ಮಹಿಳೆಯರು – ನಾರಿ ʻಶಕ್ತಿʼ ಪ್ರದರ್ಶನ

    ಮೈಸೂರು: ಸರ್ಕಾರದ ಪ್ರಮುಖ ಗ್ಯಾರಂಟಿಯಾದ ಶಕ್ತಿ ಯೋಜನೆ ಜಾರಿಯಾದ ದಿನದಿಂದಲೇ ಮಹಿಳೆಯರು ನಾ ಮುಂದು ತಾ ಮುಂದು ಅಂತಾ ಬಸ್ ಗಳಲ್ಲಿ ನುಗ್ಗುತ್ತಿದ್ದಾರೆ. ಬಸ್ ನ ಕಿಟಿಕಿಗಳು,ಬಾಗಿಲುಗಳು ಸಹ ಪೀಸ್ ಪೀಸ್ ಆಗ್ತಿವೆ. ದೇವಸ್ಥಾನಗಳಂತೂ ಪುಲ್ ರೇಶ್ ಆಗುತ್ತಿದ್ದು, ಅವಾಂತರಗಳು ಮುಂದುವರಿದಿವೆ.

    ಮೈಸೂರಿನಲ್ಲಿ ಚಾಮುಂಡಿಬೆಟ್ಟಕ್ಕೆ ತೆರಳುವ ನಗರ ಸಾರಿಗೆ ಬಸ್‌ನಲ್ಲಿ ಮಹಿಳೆಯರ ಗಲಾಟೆ ಮಾಡಿ ಕೊಂಡಿರುವ ದೃಶ್ಯ ಕಂಡುಬಂದಿದೆ. ಮಹಿಳೆಯರು ಸೀಟಿಗಾಗಿ ಕೈಕೈ ಮಿಲಾಯಿಸಿದ್ದಾರೆ. ಬಸ್‌ನೊಳಗೆ ಕಿತ್ತಾಡಿಕೊಂಡ ವೀಡಿಯೋ ಸದ್ಯ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ- ಬೆಳ್ಳಂಬೆಳಗ್ಗೆ ಕೊಡೆ ಹಿಡಿದ ಜನ

    ಒಂದೆರಡು ದಿನಗಳಲ್ಲೇ ಮಾರ್ಗಸೂಚಿ:
    ಉಚಿತ ಪ್ರಯಾಣ ಹಿನ್ನೆಲೆಯಲ್ಲಿ ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವ ಮಹಿಳೆಯರ ದಂಡನ್ನು ಕಂಟ್ರೋಲ್ ಮಾಡೋಕೆ ಸಾರಿಗೆ ಇಲಾಖೆ ಮುಂದಾಗ್ತಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ನಿನ್ನೆ ಸಭೆ ನಡೆಸಿದ್ದಾರೆ. ಕಿಟಕಿ ಹೊಡೆಯೋದು, ಡೋರ್ ಒಡೆಯೋದು ಆದ್ರೇ ಕಷ್ಟ. ಶಿಸ್ತಿನಲ್ಲಿ ಬರಬೇಕು. ಸಪರೇಟ್ ಗೈಡ್ ಲೈನ್ಸ್ ತನ್ನಿ ಅಂತಾ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಮಹಿಳೆಯರ `ಶಕ್ತಿ’ಗೆ ಶೀಘ್ರವೇ ಹೊಸ ಮಾರ್ಗಸೂಚಿ – ವಾರಕ್ಕೆ ಮುಂಚೆ ಬುಕ್ಕಿಂಗ್ ಕಡ್ಡಾಯ ಸಾಧ್ಯತೆ

    ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದ ಸಚಿವ ರಾಮಲಿಂಗ ರೆಡ್ಡಿ, ಉಚಿತ ಪ್ರಯಾಣ ನಿಭಾಯಿಸೋದು ಕಷ್ಟವಾಗೋದ್ರಿಂದ ಈಗ ನಾವು ಹೊಸ ಮಾರ್ಗಸೂಚಿ ಅನಿವಾರ್ಯ. ಬುಕ್ಕಿಂಗ್‌ ಮೂಲಕವೇ ಪ್ರಯಾಣಕ್ಕೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಇನ್ನೆರಡು ದಿನಗಳಲ್ಲಿ ನಿರ್ಧಾರ ಮಾರ್ಗಸೂಚಿ ಹೊರಡಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಹೆಂಡತಿ ನನ್ನ ಮಾತು ಕೇಳುತ್ತಿಲ್ಲ, ದಯಮಾಡಿ ಪರಿಹರಿಸಿ- ಶಾಸಕರಿಗೆ ವ್ಯಕ್ತಿ ದೂರು

    ಈ ವೀಕೆಂಡ್ ನಿಂದ ಮಹಿಳಾ ಪ್ರಯಾಣಿಕರ ಪ್ರಯಾಣದ ರೂಲ್ಸ್ ಬದಲಾಗುವ ಸಾಧ್ಯತೆಯಿದೆ. ಸಿಕ್ಕ ಸಿಕ್ಕ ಬಸ್ ಹತ್ತುವಂತಿಲ್ಲ, ಪ್ರಯಾಣ ಮಾಡಬೇಕಾದ್ರೇ ಮುಂಗಡ ಬುಕ್ಕಿಂಗ್ ಕಡ್ಡಾಯವಾಗಿ ಮಾಡಿಕೊಂಡಿರಬೇಕಾಗುತ್ತದೆ. ಒಟ್ಟಿನಲ್ಲಿ ಸಾರಿಗೆ ಇಲಾಖೆ ಏನು ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನ ಕಾದು ನೋಡಬೇಕಿದೆ.

  • ತರಕಾರಿ ತರ್ತೀನಿ ಅಂತಾ ಮಾರ್ಕೆಟ್‌ಗೆ ಹೋದ ಮಹಿಳೆ ಪ್ರಿಯಕರನೊಂದಿಗೆ ಪರಾರಿ – ಗಂಡನ ಪಾಡು ಕೇಳೋರಿಲ್ಲ

    ತರಕಾರಿ ತರ್ತೀನಿ ಅಂತಾ ಮಾರ್ಕೆಟ್‌ಗೆ ಹೋದ ಮಹಿಳೆ ಪ್ರಿಯಕರನೊಂದಿಗೆ ಪರಾರಿ – ಗಂಡನ ಪಾಡು ಕೇಳೋರಿಲ್ಲ

    ಲಕ್ನೋ: ಮಾರ್ಕೆಟ್‌ಗೆ ಹೋಗಿ ತರಕಾರಿ ತಗೊಂಡು ಬರ್ತೀನಿ ಅಂತಾ ಹೋದ ನವವಿವಾಹಿತೆ (Newlu Married Women) ಮದುವೆಯಾದ ಒಂದೇ ವಾರಕ್ಕೆ ಗಂಡನನ್ನ ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ (Uttar Pradeh) ಕಲಿಂಜರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಮೇ 31 ರಂದು ಮದುವೆಯಾಗಿದ್ದ (Marriage) ಮಹಿಳೆ ಒಂದೇ ವಾರಕ್ಕೆ ಗಂಡನನ್ನ ಬಿಟ್ಟು ಪರಾರಿಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕುಟುಂಬಸ್ಥರನ್ನು ಭೇಟಿ ಮಾಡಬೇಕೆಂಬ ನೆಪದಲ್ಲಿ ತವರು ಮನೆಗೆ ಬಂದಿದ್ದ ಆಕೆ, ಮನೆಗೆ ಸಾಮಾನು ತರ್ತೀನಿ ಅಂತಾ ಮಾರುಕಟ್ಟೆಗೆ ಹೋದವಳೇ ತನ್ನ ಪ್ರಿಯಕರನೊಂದಿಗೆ ಎಸ್ಕೇಪ್‌ ಆಗಿದ್ದಾಳೆ. ಜೊತೆಗೆ ತವರು ಮನೆಯಲ್ಲಿದ್ದ ಚಿನ್ನಾಭರಣವನ್ನೆಲ್ಲಾ ದೋಚಿಕೊಂಡು ಹೋಗಿದ್ದಾಳೆ ಎಂಬುದು ತಿಳಿದುಬಂದಿದೆ.

    ಮಗಳು ಮನೆಗೆ ಬಾರದೇ ಇದ್ದಾಗ ಆತಂಕಕ್ಕೊಳಗಾದ ಪೋಷಕರು ಫೋನ್‌ ಮಾಡಿದ್ದಾರೆ. ಫೋನ್‌ ಸ್ವಿಚ್‌ ಆಫ್‌ ಆಗಿರುವುದು ಕಂಡು ಹುಡುಕಾಟ ನಡೆಸಿದ್ದಾರೆ. ನಂತರ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿರುವುದು ತಿಳಿದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಕೇಸ್‌ ದಾಖಲಿಸಿಕೊಂಡ ಪೊಲೀಸರು (Police) ಮಹಿಳೆ ಹಾಗೂ ಆಕೆಯ ಗೆಳೆಯನಿಗಾಗಿ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ. ಇದನ್ನೂ ಓದಿ: Indonesia Open 2023: ಐತಿಹಾಸಿಕ ಜಯ ತಂದ ಮೊದಲ ಭಾರತೀಯ ಜೋಡಿ, ಸಾತ್ವಿಕ್‌ಸಾಯಿರಾಜ್, ಚಿರಾಗ್‌ಗೆ ಪ್ರಶಸ್ತಿ

    ಆ ದಿನ ನಡೆದಿದ್ದೇನು?
    ಪರಾರಿಯಾದ ಮಹಿಳೆಗೆ ಕಳೆದ ಮೇ 31 ರಂದು ಮದುವೆ ಮಾಡಿಸಲಾಗಿತ್ತು. ಜೂನ್‌ 6 ರಂದು ತನ್ನ ತವರಿಗೆ ಮರಳಿದ್ದಳು. ಜೂನ್‌ 11ರಂದು ಮನೆಗೆ ಸಾಮಾನು ಖರೀದಿಸುವ ನೆಪದಲ್ಲಿ ಮಾರುಕಟ್ಟೆಗೆ ಹೋದ ಅವಳು ವಾಪಸ್‌ ಮನೆಗೆ ಬಂದಿರಲಿಲ್ಲ. ಸಂಜೆಯಾದರೂ ಮಗಳು ಮನೆಗೆ ಬಾರದಿದ್ದಾಗ ಆತಂಕಗೊಂಡ ಪೋಷಕರು ತೀವ್ರ ಹುಡುಕಾಟ ನಡೆಸಿದ್ದರು. ಇದನ್ನೂ ಓದಿ: ಭಾರತೀಯ ಸೇನೆಗಾಗಿ ಮಹಿಂದ್ರಾ ಗ್ರೂಪ್‍ನಿಂದ ನೂತನ ಶಸ್ತ್ರಸಜ್ಜಿತ ವಾಹನ ನಿರ್ಮಾಣ

    ನಂತರ ಅವಳು ಪ್ರಿಯಕರನೊಂದಿಗೆ ಓಡಿ ಹೋಗಿರುವುದು ತಿಳಿದು ಬಂದಿತು. ಆಕೆ ಬರಿಗೈನಲ್ಲಿ ಓಡಿ ಹೋಗಿರಲಿಲ್ಲ. ಮನೆಯಲ್ಲಿದ್ದ ಚಿನ್ನಾಭರಣವನ್ನೂ ದೋಚಿಕೊಂಡು ಹೋಗಿದ್ದಳು. ಆ ಹುಡುಗ ಬೇರೆ ಯಾರೂ ಅಲ್ಲ ತನ್ನ ಸಹೋದರನ ಕಡೆಯ ಸಂಬಂಧಿಯಾಗಿದ್ದ. ಬಳಿಕ ಪೋಷಕರ ದೂರಿನ ಮೇರೆಗೆ ಕೇಸ್‌ ದಾಖಲಿಸಿಕೊಂಡ ಪೊಲೀಸರು ಓಡಿಹೋದ ಇಬ್ಬರಿಗಾಗಿ ಬಲೆ ಬೀಸಿದ್ದಾರೆ.

  • ಗಂಡ ಜೊತೆಗೆ ಬಾರದೇ ನಮಗೆ ಭದ್ರತೆ ಇಲ್ಲ; ಫ್ರೀ ಬಸ್ ಪ್ರಯಾಣ ಯೋಜನೆಗೆ ಮಹಿಳೆ ವಿರೋಧ

    ಗಂಡ ಜೊತೆಗೆ ಬಾರದೇ ನಮಗೆ ಭದ್ರತೆ ಇಲ್ಲ; ಫ್ರೀ ಬಸ್ ಪ್ರಯಾಣ ಯೋಜನೆಗೆ ಮಹಿಳೆ ವಿರೋಧ

    – ಅವರಿಲ್ಲದೇ ಮಕ್ಕಳು ಬಂದ್ರಾ? ಗಂಡನೂ ಜೊತೆಯೇ ಇರಬೇಕು ಎಂದ ಮಹಿಳೆ

    ಚಿಕ್ಕಮಗಳೂರು: ಸರ್ಕಾರದ ಫ್ರೀ ಬಸ್ (Free Bus Travel) ಪ್ರಯಾಣದ ಶಕ್ತಿ ಯೋಜನೆ ಸರಿ ಇಲ್ಲ. ಗಂಡ ಜೊತೆಗೆ ಬಾರದೇ ನಮ್ಮ ಭದ್ರತೆ ಇಲ್ಲದಂತಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ (Shakti Scheme) ವಿರುದ್ಧ ಮಹಿಳೆಯೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.

    ಮತ ಹಾಕುವಾಗ ಮಹಿಳೆಯರು ಮಾತ್ರ ಹಾಕಿ ಎಂದಿದ್ರಾ? ನಾವ್ ಇಲ್ದೆ ನೀವ್ ಬಂದ್ರಾ ಅಂತಿದ್ದಾರೆ ಯಜಮಾನರು. ಅವರಿಲ್ಲದೆ ಮಕ್ಕಳು ಬಂದ್ರಾ? ಗಂಡ ಬೇಕು. ಗಂಡನ ಜೊತೆಯೇ ಇರಬೇಕು. ಈ ಕಾನೂನು ಬೇಡ ಎಂದು ಮಹಿಳೆಯರಿಗೆ ಬಸ್ ಉಚಿತ ಪ್ರಯಾಣಕ್ಕೆ ಪಿರಿಯಾಪಟ್ಟಣದ ಮಮತಾ ಎಂಬವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅವರಿಗೆ ಸಚಿವರಾಗಿ ಕೆಲಸ ಮಾಡೋದಕ್ಕಿಂತ ಬೇರೆಯದ್ದರ ಬಗ್ಗೆಯೇ ಆಸಕ್ತಿ ಜಾಸ್ತಿ: ಮಹದೇವಪ್ಪಗೆ ಸುರೇಶ್ ಟಾಂಗ್

    ದುಡ್ಡು ಕೊಟ್ಟು ಬಂದರೂ ಈ ರೀತಿ ನೂಕು ನುಗ್ಗಲು ಇರುವಂತೆ ಮಾಡಬೇಡಿ. ಹೊರನಾಡಿನಿಂದ ಮಂಗಳೂರಿಗೆ ಹೋಗುವವರನ್ನು ಮಾತ್ರ ಬಸ್ಸಿಗೆ ಹತ್ತಿಸಿದ್ದಾರೆ. ಮಧ್ಯ ಇಳಿಯುವವರನ್ನ ಖಾಸಗಿ ಬಸ್ಸಿನಲ್ಲಿ ಹತ್ತಿಸುತ್ತಿಲ್ಲ. ದೊಡ್ಡವರು, ಚಿಕ್ಕವರು ಬರುತ್ತಾರೆ, ಕೈಮುಗಿದು ಕೇಳಿಕೊಳ್ಳುತ್ತೇವೆ. ಎದ್ದು ಬಿದ್ದು ಬರುವಂತೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

    ಸರ್ಕಾರದ ಯೋಜನೆ ಕಾಲು ಭಾಗ ಖುಷಿ ನೀಡಿದೆ. ಗಂಡ-ಮಕ್ಕಳು, ಅತ್ತೆ-ಮಾವ ಎಲ್ಲ ಮನೆಯಲ್ಲೇ ಇದ್ದಾರೆ. ಹೆಂಡ್ತಿ ಮಾತ್ರ ಎಲ್ಲಾ ಕಡೆ ಓಡಾಡಿಕೊಂಡು ಇರೋದಕ್ಕೆ ಆಗುವುದಿಲ್ಲ. ಒಂದು ಬಸ್ಸಿಗೆ ಇಷ್ಟೇ ಮಹಿಳೆಯರು ಎಂಬ ಕಾನೂನು ಬಲವಾಗಬೇಕು. ಈ ನೂಕು ನುಗ್ಗಲಿನ ಬಸ್ಸಿನಲ್ಲಿ ಮಹಿಳೆಯರು ಹತ್ತುವುದು ಅಸಾಧ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಕ್ಕಿ ವಿತರಣೆ ರಾಜ್ಯ ಸರ್ಕಾರದ ಜವಾಬ್ದಾರಿ, ಎಲ್ಲಿಯಾದ್ರೂ ಖರೀದಿ ಮಾಡಿ ಕೊಡಲಿ: ಯಡಿಯೂರಪ್ಪ

    ಗಂಡನನ್ನ ಮನೆಯಲ್ಲಿ ಬಿಟ್ಟು ಬಂದಿದ್ದೇವೆ. ನಮಗೆ ಸೂಕ್ತ ಭದ್ರತೆ ಇಲ್ಲ. ವಿದ್ಯೆ ಹಾಗೂ ಆಸ್ಪತ್ರೆ ಕಡೆಯೂ ಸ್ವಲ್ಪ ಗಮನಹರಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

  • ಸರ್ಕಾರಿ ಬಸ್ಸಿನಲ್ಲಿ ನಾರಿಯರ ತೀರ್ಥಯಾತ್ರೆ- ಕುಕ್ಕೆ, ಧರ್ಮಸ್ಥಳ ಕ್ಷೇತ್ರದಲ್ಲಿ ಮಹಿಳಾ ಜನಸಾಗರ

    ಸರ್ಕಾರಿ ಬಸ್ಸಿನಲ್ಲಿ ನಾರಿಯರ ತೀರ್ಥಯಾತ್ರೆ- ಕುಕ್ಕೆ, ಧರ್ಮಸ್ಥಳ ಕ್ಷೇತ್ರದಲ್ಲಿ ಮಹಿಳಾ ಜನಸಾಗರ

    ಮಂಗಳೂರು: ರಾಜ್ಯ ಸರ್ಕಾರದ ಉಚಿತ ಬಸ್ ಪ್ರಯಾಣ ಯೋಜನೆಯಿಂದ ಮಹಿಳೆಯರಿಗೆ ದೇವರ ದರ್ಶನ ಪಡೆಯೋ ಭಾಗ್ಯ ಸಿಕ್ಕಿದಂತಾಗಿದೆ. ಉಚಿತ ಪ್ರಯಾಣ ಜಾರಿಗೆ ಬಂದ ಮೊದಲ ವೀಕೆಂಡ್ ಆದ ಶನಿವಾರ ಕರಾವಳಿಯ ತೀರ್ಥ ಕ್ಷೇತ್ರಗಳಿಗೆ ಮಹಿಳೆಯರ ದಂಡೇ ಹರಿದು ಬಂದಿದೆ. ಸರ್ಕಾರಿ ಬಸ್ ಫುಲ್ ರಶ್ ಆಗುತ್ತಿದ್ದು, ಕರಾವಳಿಯ ಪುಣ್ಯಕ್ಷೇತ್ರಗಳಲ್ಲಿ ಮಹಿಳೆಯರೇ ತುಂಬಿಕೊಂಡಿದ್ದಾರೆ.

    ಕಳೆದ ಭಾನುವಾರ ಸರ್ಕಾರಿ ಬಸ್ಸಿನಲ್ಲಿ ಮಹಿಳೆಯರಿಗೆ ಫ್ರೀ ಯೋಜನೆ ಜಾರಿಗೆ ಬಂದಿತ್ತು. ಅದರ ನಂತರದ ವೀಕೆಂಡ್ ಇಂದು ಆಗಿರೋ ಕಾರಣ ಉಚಿತ ಬಸ್ ನಲ್ಲಿ ವೀಕೆಂಡ್ ರಜೆಯೊಂದಿಗೆ ಕರಾವಳಿಯ ತೀರ್ಥ ಕ್ಷೇತ್ರಗಳಿಗೆ ಮಹಿಳೆಯರು ಬಂದಿದ್ದಾರೆ. ಉತ್ತರ ಕರ್ನಾಟಕದಿಂದ ಗುಳೇ ಹೊರಟಂತೆ ಎಲ್ಲಾ ಮಹಿಳೆಯರು ಮಕ್ಕಳು ಮರಿಗಳ ಜೊತೆ ತೀರ್ಥಕ್ಷೇತ್ರ ದರ್ಶನ ಮಾಡ್ತಾ ಇದ್ದಾರೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದ ಜನರೆಲ್ಲ ಕರಾವಳಿಯ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಕ್ಷೇತ್ರಗಳಲ್ಲಿ ಭಾರೀ ಭಕ್ತರ ಸಂಖ್ಯೆ ಏರ್ಪಟ್ಟಿದ್ದು ಜನಸಾಗರವೇ ಹರಿದು ಬರುತ್ತಿದೆ. ಮಹಿಳೆಯರು ಗುಂಪು ಗುಂಪಾಗಿ ಬಂದು ಸೇರುತ್ತಿದ್ದು, ಕೆಎಸ್‍ಆರ್‍ಟಿಸಿ ಬಸ್‍ಗಳೆಲ್ಲ ಫುಲ್ ರಶ್ ಆಗಿದೆ.

    ಕೆಎಸ್‍ಆರ್‍ಟಿಸಿ ಬಸ್ಸಿನಲ್ಲಿ ಉಚಿತ ಪ್ರಯಾಣದ ಯೋಜನೆ ಜಾರಿಯಾದ ದಿನದಿಂದಲೇ ಹಳ್ಳಿಗಾಡಿನ ಜನರು ಸರ್ಕಾರಿ ಬಸ್ ಹತ್ತತೊಡಗಿದ್ದಾರೆ. ಹಬ್ಬಳ್ಳಿ, ಧಾರವಾಡ, ಗದಗ, ಚಿತ್ರದುರ್ಗ, ಬೀದರ್, ಬಿಜಾಪುರ ಹಾಗೂ ಬಾಗಲಕೋಟೆ ಸೇರಿದಂತೆ ಬೆಂಗಳೂರು, ಕೋಲಾರ ಹಾಗೂ ತುಮಕೂರುನ ಮಹಿಳೆಯರು ಕರಾವಳಿಯ ತೀರ್ಥಕ್ಷೇತ್ರಕ್ಕೆ ಬಂದಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಸರಕಾರಿ ಬಸ್ಸುಗಳಲ್ಲಿ ಮಹಿಳೆಯರು ಬರುತ್ತಿದ್ದು ದೇವಸ್ಥಾನ ಪರಿಸರದಲ್ಲಿ ಮಹಿಳಾ ಮಣಿಯರ ದಂಡೇ ಸೇರುತ್ತಿದೆ. ಬಸ್ ಫ್ರೀ ಆಗಿದ್ದರಿಂದ ಒಂದು ಬಾರಿಯೂ ಈ ದೇವಸ್ಥಾನಗಳನ್ನು ನೋಡದವರು ದೇವರ ದರ್ಶನ ಪಡೆದು ಸರ್ಕಾರ ದೇವರನ್ನು ನೋಡುವ ಭಾಗ್ಯ ಕರುಣಿಸಿದೆ ಎಂದಿದ್ದಾರೆ.

    ಧರ್ಮಸ್ಥಳಕ್ಕೆ ಬಂದು ಅಲ್ಲಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುವ ಬಸ್ಸುಗಳಲ್ಲೂ ಕಾಲಿಡುವುದಕ್ಕೂ ಸಾಧ್ಯವಾಗದ ಸ್ಥಿತಿಯಿದೆ. ದೂರದ ಜಿಲ್ಲೆಗಳಿಂದ ಕರಾವಳಿಯ ತೀರ್ಥ ಕ್ಷೇತ್ರಗಳಿಗೆ ಬರುವುದಕ್ಕೆ ಸಾಮಾನ್ಯವಾಗಿ ಸಾವಿರಾರು ರೂಪಾಯಿ ಬೇಕಿದ್ದರೆ, ಈಗ ಉಚಿತ ಪ್ರಯಾಣ ಯೋಜನೆಯಿಂದ ಹಳ್ಳಿ ಮಹಿಳೆಯರು ಮಕ್ಕಳು, ಇಡೀ ಕುಟುಂಬವನ್ನು ಕಟ್ಟಿಕೊಂಡು ದೇವರ ದರ್ಶನಕ್ಕೆ ಬಂದಿದ್ದಾರೆ. ಇಂತಹ ಯೋಜನೆ ಕೊಟ್ಟ ಸರ್ಕಾರಕ್ಕೆ ಮಹಿಳೆಯರು ಜೈ ಎಂದಿದ್ದಾರೆ. ಇದನ್ನೂ ಓದಿ: ಅಕ್ಕಿ ಮಾರಾಟಕ್ಕೆ ಕೇಂದ್ರ ನಿರ್ಬಂಧ ಹೇರಿರುವ ಬಗ್ಗೆ ತೇಜಸ್ವಿ ಸೂರ್ಯ ಸ್ಪಷ್ಟೀಕರಣ

    ಮಾಮೂಲಿಯಾಗಿ ಜೂನ್ ತಿಂಗಳಲ್ಲಿ ಕರಾವಳಿಯ ತೀರ್ಥ ಕ್ಷೇತ್ರಗಳಲ್ಲಿ ಹೆಚ್ಚಿನ ಭಕ್ತರು ಇರೋದಿಲ್ಲ. ಆದರೆ ಈ ಬಾರಿ ಜೂನ್ ತಿಂಗಳಲ್ಲೇ ಫ್ರೀ ಬಸ್ ಯೋಜನೆ ಜಾರಿಯಾಗಿರೋದ್ರಿಂದ ಎಲ್ಲಾ ದೇವಸ್ಥಾನಗಳಲ್ಲೂ ಫುಲ್ ರಶ್ ಆಗಿದೆ. ಜನರ ದಟ್ಟಣೆಯಿಂದಾಗಿ ಕರಾವಳಿಯ ದೇವಸ್ಥಾನಗಳಲ್ಲಿ ಮಹಿಳೆಯರೇ ತುಂಬಿಕೊಂಡಿದ್ದಾರೆ. ಪ್ರವಾಸಿ ತಾಣ, ದೇವಸ್ಥಾನ ಪರಿಸರದಲ್ಲಿ ವ್ಯಾಪಾರವೂ ಜೋರಾಗಿದೆ. ಒಟ್ಟಿನಲ್ಲಿ ಉಚಿತ ಬಸ್ ಯೋಜನೆ ಎಲ್ಲರಿಗೂ ಸಹಕಾರಿಯಾದಂತಿದೆ.

     

  • ಫ್ರೀ ಬಸ್ ಘೋಷಣೆ ಬಳಿಕ ಮೊದಲ ವೀಕೆಂಡ್ – ಸರ್ಕಾರಿ ಬಸ್‌ಗಳು ಫುಲ್ ರಶ್

    ಫ್ರೀ ಬಸ್ ಘೋಷಣೆ ಬಳಿಕ ಮೊದಲ ವೀಕೆಂಡ್ – ಸರ್ಕಾರಿ ಬಸ್‌ಗಳು ಫುಲ್ ರಶ್

    – ಧರ್ಮಸ್ಥಳ, ಮೈಸೂರು, ಮಹದೇಶ್ವರ ಬೆಟ್ಟಕ್ಕೆ ಮಹಿಳೆಯರ ದಂಡು

    ಬೆಂಗಳೂರು: ಕರ್ನಾಟಕದ (Karnataka) ಈಗಿನ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ (Govt Bus) ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು (Shakti Scheme) ಜಾರಿಗೊಳಿಸಿ ಒಂದು ವಾರವಾಗಿದ್ದು, ಇಂದು ಮೊದಲ ವೀಕೆಂಡ್. ಈ ಹಿನ್ನೆಲೆ ದೂರದೂರುಗಳಿಗೆ, ಪ್ರವಾಸಿ ತಾಣ, ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ದಂಡು ಸಾಗುತ್ತಿದೆ. ಹೆಚ್ಚಿನ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಂತೂ (KSRTC Bus) ಕಾಲಿಡಲು ಸಾಧ್ಯವಾಗದಷ್ಟು ಫುಲ್ ರಶ್ ಆಗಿದೆ.

    ಕೆಎಸ್‌ಆರ್‌ಟಿಸಿ ವೆಬ್‌ಸೈಟ್ ಕ್ರ್ಯಾಶ್:
    ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸಲು ಮಹಿಳೆಯರು ಟಿಕೆಟ್ ಮುಂಗಡ ಬುಕ್ಕಿಂಗ್ ಮಾಡಲು ಮುಂದಾಗಿದ್ದಾರೆ. ಆದರೆ ಫ್ರೀ ಟಿಕೆಟ್ ರಿಸರ್ವೇಶನ್ ಕೆಎಸ್‌ಆರ್‌ಟಿಸಿಯ ವೆಬ್‌ಸೈಟ್ ಕ್ರ್ಯಾಶ್ ಆಗಿದೆ. ಧಾರ್ಮಿಕ ಸ್ಥಳಗಳಿಗೆ ಹೆಚ್ಚಾಗಿ ಮಹಿಳೆಯರೇ ಪ್ರಯಾಣ ಮಾಡುತ್ತಿದ್ದು, ಈ ಹಿನ್ನೆಲೆ 20 ರೂ. ನೀಡಿ ಮುಂಗಡವಾಗಿ ಟಿಕೆಟ್ ಬುಕಿಂಗ್ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಏಕಕಾಲಕ್ಕೆ ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆ ಆಗುತ್ತಿರುವುದರಿಂದ ಸರ್ವರ್ ಡೌನ್ ಆಗಲು ಕಾರಣವಾಗುತ್ತಿದೆ. ಹಣ ಕಡಿತವಾದರೂ ಟಿಕೆಟ್ ಬುಕ್ ಆಗುತ್ತಿಲ್ಲ ಎಂದು ಹಲವು ಪ್ರಯಾಣಿಕರು ಆರೋಪಿಸಿದ್ದಾರೆ. ಈ ಹಿನ್ನೆಲೆ ಸಾಮಾನ್ಯ ಬಸ್‌ಗಳಿಗೆ ಕೆಎಸ್‌ಆರ್‌ಟಿಸಿ ಆ್ಯಪ್ ಅಥವಾ ವೆಬ್‌ನಲ್ಲಿ ರಿಸರ್ವೇಶನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

    ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ದಂಡು:
    ರಾಜ್ಯದ ವಿವಿಧ ಭಾಗಗಳಿಗೆ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಒಂದು ಬಸ್‌ನಲ್ಲಿ ಸೀಟ್ ಭರ್ತಿಯಾದರೆ ಅದರಿಂದ ಇಳಿದು ಇನ್ನೊಂದು ಬಸ್ ಹತ್ತುತ್ತಿದ್ದಾರೆ. ಮಹಿಳಾ ಪ್ರಯಾಣಿಕರು ಕೈಯಲ್ಲಿ ಆಧಾರ್ ಕಾರ್ಡ್ ಹಿಡಿದು ಕುಳಿತಿದ್ದು, ಇವರಲ್ಲಿ ಹೆಚ್ಚಿನವರು ಸಿಗಂದೂರು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ತೆರಳುವವರು ಇದ್ದಾರೆ. ನಾಳೆ ಭಾನುವಾರ ಆಗಿರುವುದರಿಂದ ಅತ್ಯಧಿಕ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಪ್ರಯಾಣ ಮಾಡುತ್ತಿದ್ದಾರೆ. ಇದನ್ನೂ ಓದಿ: ಇಂದಿನಿಂದ ಬೆಂಗಳೂರಲ್ಲಿ ಮತ್ತೆ ಜೆಸಿಬಿಗಳ ಘರ್ಜನೆ – ಬಿಬಿಎಂಪಿಯಿಂದ ಆಪರೇಷನ್‌ ರಾಜಕಾಲುವೆ

    ಧರ್ಮಸ್ಥಳಕ್ಕೆ 10 ನಿಮಿಷಕ್ಕೊಂದು ಬಸ್ ವ್ಯವಸ್ಥೆ:
    ಬೆಂಗಳೂರು ಬಸ್ ಡಿಪೋದಿಂದ ಧರ್ಮಸ್ಥಳಕ್ಕೆ 10 ನಿಮಿಷಕ್ಕೆ ಒಂದರಂತೆ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗಿನ ಜಾವ 5:30ರಿಂದಲೇ ಸಾವಿರಾರು ಪ್ರಯಾಣಿಕರು ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದ್ದಾರೆ. ಹಾಸನ, ಕುಣಿಗಲ್, ಮಾಗಡಿ, ಚಿಕ್ಕಮಗಳೂರು, ಮಂಗಳೂರು ಡಿಪೋ ಸೇರಿದಂತೆ ರಾಜ್ಯಾದ್ಯಂತ 15ಕ್ಕೂ ಹೆಚ್ಚು ಡಿಪೋ ಬಸ್‌ಗಳು ಧರ್ಮಸ್ಥಳಕ್ಕೆ ತೆರಳಿವೆ.

    ಚಿಕ್ಕಬಳ್ಳಾಪುರ, ಮೈಸೂರಿಗೂ ಪ್ರಯಾಣಿಕರ ಸಾಗರ:
    ಫ್ರೀ ಬಸ್ ಹಿನ್ನೆಲೆ ಆದಿಯೋಗಿ ಶಿವನ ಪ್ರತಿಮೆ ನೋಡಲು ಪ್ರವಾಸಿಗರ ದಂಡು ಚಿಕ್ಕಬಳ್ಳಾಪುರಕ್ಕೆ ಹರಿದಿದೆ. ವೀಕೆಂಡ್ ಹಿನ್ನೆಲೆ ಮೈಸೂರಿನ ಕಡೆಗೂ ಹೋಗುತ್ತಿರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಎಲ್ಲಾ ಬಸ್‌ಗಳಲ್ಲಿ ಮಹಿಳೆಯರೇ ಹೆಚ್ಚಾಗಿದ್ದರೂ ಅದರಲ್ಲೂ ಹೆಚ್ಚಿನ ವಿದ್ಯಾರ್ಥಿಗಳೇ ತೆರಳುತ್ತಿದ್ದಾರೆ. ಮೈಸೂರು, ನಂಜನಗೂಡು, ಮಲೆಮಹದೇಶ್ವರ ದೇವಾಲಯದ ಕಡೆಗೆ ಮಹಿಳಾ ಪ್ರಯಾಣಿಕರು ಹೆಚ್ಚಾಗಿದ್ದಾರೆ.

    ಫ್ರೀ ಬಸ್ ಹಿನ್ನೆಲೆ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಜನಸಾಗರವೇ ಹರಿದಿದೆ. ಟಿಕೆಟ್ ಕೌಂಟರ್ ಬಳಿ ಮಹಿಳೆಯರು, ಯುವತಿಯರು ಉಚಿತ ಬಸ್ ಟಿಕೆಟ್‌ಗಾಗಿ ಆಧಾರ್ ಕಾರ್ಡ್ ಹಿಡಿದು ನಿಂತಿದ್ದಾರೆ. ಇದೀಗ ಪ್ರಯಾಣಿಕರ ಸಂಖ್ಯೆ ಆಧರಿಸಿ ಬಸ್‌ಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ 9 ಗಂಟೆ ವರೆಗೆ ಮೈಸೂರಿಗೆ 15 ನಾನ್‌ಸ್ಟಾಪ್ ಬಸ್‌ಗಳು ತೆರಳಿವೆ. ಮಲೆಮಹದೇಶ್ವರ ದೇವಾಲಯಕ್ಕೂ 9 ಬಸ್‌ಗಳು ತೆರಳಿವೆ. ಇದನ್ನೂ ಓದಿ: ಭಯಾನಕ ಅಣ್ವಸ್ತ್ರ ಹೊರತೆಗೆದ ರಷ್ಯಾ – ಕೀವ್‌ನಿಂದ 200 ಕಿಮೀ ದೂರದಲ್ಲಿರೋ ಬೆಲಾರಸ್‌ಗೆ ರವಾನೆ!

  • ವರ್ಕ್ ಫ್ರಂ ಹೋಮ್ ಸಾಕು, ಆಫೀಸಿಗೆ ಬನ್ನಿ ಎಂದಿದ್ದಕ್ಕೆ ಮಹಿಳಾ ಟೆಕ್ಕಿಗಳು ಸಾಮೂಹಿಕ ರಾಜೀನಾಮೆ!

    ವರ್ಕ್ ಫ್ರಂ ಹೋಮ್ ಸಾಕು, ಆಫೀಸಿಗೆ ಬನ್ನಿ ಎಂದಿದ್ದಕ್ಕೆ ಮಹಿಳಾ ಟೆಕ್ಕಿಗಳು ಸಾಮೂಹಿಕ ರಾಜೀನಾಮೆ!

    ನವದೆಹಲಿ: ಮಹಾಮಾರಿ ಕೊರೊನಾ ವೈರಸ್ (Corona Virus) ನಿಂದಾಗಿ ದೇಶಾದ್ಯಂತ ವರ್ಕ್ ಫ್ರಂ ಹೋಮ್ ಜಾರಿಗೆ ತರಲಾಗಿತ್ತು. ಇದೀಗ ಕಂಪನಿಯೊಂದು ವರ್ಕ್ ಫ್ರಂ ಹೋಂ ಸಾಕು, ಆಫೀಸಿಗೆ ಬಂದು ಕೆಲಸ ಮಾಡಿ ಎಂದು ಸೂಚನೆ ನೀಡಿದೆ. ಈ ಬೆನ್ನಲ್ಲೇ ಮಹಿಳಾ ಟೆಕ್ಕಿಗಳು (Women Techies) ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿರುವ ವಿಚಾರವೊಂದು ಬೆಳಕಿಗೆ ಬಂದಿದೆ.

    ಹೌದು. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಕಂಪನಿಯು ಆಫೀಸಿಗೆ ಬಂದು ಕೆಲಸ ಮಾಡುವಂತೆ ತನ್ನ ಉದ್ಯೋಗಿಗಳಿಗೆ ಸೂಚನೆ ನೀಡಿದೆ. ಕಳೆದ ಮೂರು ವರ್ಷಗಳಿಂದ ಮನೆಯಿಂದ ಕಲಸ ಮಾಡುತ್ತಿದ್ದೀರ. ಇನ್ಮೇಲೆ ಕಡ್ಡಾಯವಾಗಿ ಆಫೀಸಿಗೆ ಬಂದು ಕೆಲಸ ಮಾಡುವಂತೆ ಕಂಪನಿ ಹೇಳಿದೆ. ಈ ಸೂಚನೆ ಹೊರ ಬೀಳುತ್ತಿದ್ದಂತೆಯೇ ಮಹಿಳಾ ಟೆಕ್ಕಿಗಳು ಇಂತಹ ನಿರ್ಧಾರ ತೆಗೆದುಕೊಂಡಿರುವುದಾಗಿ ವರದಿಯಾಗಿದೆ.

    ಈ ಸಂಬಂಧ ಟಿಸಿಎಸ್ ಮಾನವ ಸಂಪನ್ಮೂಲ ಮುಖ್ಯಸ್ಥ ಮಿಲಿಂದ್ ಲಕ್ಕಡ್ (Milind Lakkad) ಮಾತನಾಡಿ, ಕಂಪನಿಯು ಮನೆಯಿಂದಲೇ ಕೆಲಸ ಮಾಡಿದ್ದು ಸಾಕು, ಕಚೇರಿಗೆ ಬಂದು ಕಾರ್ಯ ನಿರ್ವಹಿಸಿ ಎಂದು ಹೇಳಿದ ನಂತರ ಅನೇಕ ಮಂದಿ ಉದ್ಯೋಗಿಗಳಿಂದ ರಾಜೀನಾಮೆ ಪತ್ರಗಳು ಬಂದವು. ಅದರಲ್ಲಿ ಹೆಚ್ಚಿನದ್ದು ಮಹಿಳೆಯರ ರಾಜೀನಾಮೆ ಪತ್ರಗಳೇ ಆಗಿವೆ. ಆದರೆ ಈ ಮಹಿಳಾ ಉದ್ಯೋಗಿಗಳ ರಾಜೀನಾಮೆ (Women Employees Resign) ಯು ತಾರತಮ್ಯದಿಂದ ಪ್ರೇರಿತವಾಗಿಲ್ಲ. ಸಾಮಾನ್ಯವಾಗಿ ಟಿಸಿಎಸ್ ಕಂಪನಿಯಲ್ಲಿ ಹಿಂದೆಲ್ಲ ಪುರುಷರಿಗಿಂತ ಮಹಿಳೆಯರು ರಾಜೀನಾಮೆ ನೀಡುವ ಪ್ರಮಾಣ ಕಡಿಮೆ ಇತ್ತು. ಆದರೆ ಈ ಬಾರಿ ಮಾತ್ರ ಪುರುಷರಿಗಿಂತ ಮಹಿಳೆಯರೇ ಹೆಚ್ಚು ರಾಜೀನಾಮೆ ಕೊಟ್ಟಿದ್ದಾರೆ. ರಾಜೀನಾಮೆಗೆ ಬೇರೆ ಬೇರೆ ಕಾರಣಗಳಿರಬಹುದಾದರೂ ಪ್ರಮುಖ ಕಾರಣ ಮಾತ್ರ ವರ್ಕ್ ಫ್ರಂ ಹೋಮ್ (Work From Home) ರದ್ದತಿ ಎಂಬುದು ಹೇಳಿದ್ದಾರೆ.

    ಟಿಸಿಎಸ್ ನಲ್ಲಿ 6,00,000 ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಾರೆ. ಅದರಲ್ಲಿ 35% ಮಹಿಳಾ ಉದ್ಯೋಗಿಗಳಿದ್ದಾರೆ. ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಕಂಪನಿ ನಿಲ್ಲಿಸಿದ ನಂತರ ಮಹಿಳಾ ಟೆಕ್ಕಿಗಳು ಹೆಚ್ಚಾಗಿ ರಾಜೀನಾಮೆಗಳನ್ನು ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: 1 ಷೇರಿನ ಬೆಲೆ 1 ಲಕ್ಷ – ಭಾರತದಲ್ಲಿ ದಾಖಲೆ ಬರೆದ ಎಂಆರ್‌ಎಫ್‌: ಯಾವ ವರ್ಷ ಎಷ್ಟಿತ್ತು?

    ಒಟ್ಟಿನಲ್ಲಿ ಕೋವಿಡ್ ಕಾರಣಕ್ಕೆ ಉದ್ಯೋಗಿಗಳಿಗೆ ಪ್ರಪಂಚದಾದ್ಯಂತ ವರ್ಕ್ ಫ್ರಂ ಹೋಮ್ ಸೌಲಭ್ಯ ನೀಡಲಾಗಿತ್ತು. ಹಲವು ಸಮೀಕ್ಷೆಗ ಪ್ರಕಾರ, ಈ ಸೌಲಭ್ಯದಿಂದಾಗಿ ಕೆಲಸದ ಔಟ್‍ಪು‌ಟ್ ಹೆಚ್ಚಾಗಿದೆ. ಕಂಪನಿಗಳಿಗೂ ಕೆಲವೊಂದಿಷ್ಟು ಆಡಳಿತಾತ್ಮಕ ವೆಚ್ಚ ತಗ್ಗಿದೆ ಎನ್ನಲಾಗಿತ್ತು. ಆದರೆ ಮನೆಯಿಂದ ಕೆಲಸ ಮಾಡಿದರೆ ತಂಡಗಳನ್ನು ನಿರ್ವಹಿಸುವುದು ಕಷ್ಟ ಎಂಬುದು ಕೆಲ ಕಂಪನಿಗಳ ಮ್ಯಾನೇಜ್ಮೆಂಟ್ ವಾದವಾಗಿತ್ತು. ಆದರೆ ಹೆಚ್ಚಿನ ಉದ್ಯೋಗಿಗಳು ಈಗಲೂ ವರ್ಕ್ ಫ್ರಂ ಹೋಮ್ ಸೌಲಭ್ಯವನ್ನೇ ಇಷ್ಟಪಡುತ್ತಾ ಇದ್ದಾರಂತೆ. ಮ್ಯಾನೇಜ್ಮೆಂಟ್ ಬಲವಂತಕ್ಕೆ ಕಚೇರಿಗೆ ಬರುವ ಉದ್ಯೋಗಿಗಳ ಸಂಖ್ಯೆ ಹೆಚ್ಚಿದೆ ಎಂದು ಕೆಲ ಸಮೀಕ್ಷೆಗಳು ಹೇಳಿವೆ.

  • ರಾಜ್ಯಾದ್ಯಂತ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್- ಇಂದೂ ಸರ್ಕಾರಿ ಬಸ್‍ಗಳು ಫುಲ್ ರಶ್

    ರಾಜ್ಯಾದ್ಯಂತ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್- ಇಂದೂ ಸರ್ಕಾರಿ ಬಸ್‍ಗಳು ಫುಲ್ ರಶ್

    ಬೆಂಗಳೂರು: ಇಡೀ ರಾಷ್ಟ್ರದ ಗಮನ ಸೆಳೆದಿದ್ದ ಕಾಂಗ್ರೆಸ್‍ನ ಗ್ಯಾರಂಟಿ (Congress Guarantee) ಗಳಲ್ಲಿ ಒಂದಾದ ಶಕ್ತಿ ಯೋಜನೆ (Shakthi Yojana) ಗೆ ಚಾಲನೆ ಸಿಕ್ಕಿ ಇಂದಿಗೆ ಮೂರು ದಿನ. ಮಹಿಳಾ ಪ್ರಯಾಣಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗ್ತಿದ್ದು, ಬಡವರಿಗೆ ಅನುಕೂಲ ಆಗ್ತಿರೋದಕ್ಕೆ ಕೊಂಡಾಡ್ತಿದ್ದಾರೆ.

    ಬೆಂಗಳೂರಿನಲ್ಲಂತೂ ಬಿಎಂಟಿಸಿ (BMTC) ಬಸ್‍ಗಳು ಫುಲ್ ರಶ್ ಆಗುತ್ತಿದ್ದರೆ, ಕೆಎಸ್‍ಆರ್ ಟಿಸಿ (KSRTC) ಬಸ್‍ಗಳಲ್ಲಿ ಸಾಧಾರಣ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸ್ತಿದ್ದಾರೆ. ಸೋಮವಾರ ಒಂದೇ ದಿನ ರಾಜ್ಯಾದ್ಯಂತ 41 ಲಕ್ಷದ 34 ಸಾವಿರದ 726 ಮಹಿಳೆಯರು ಸಂಚಾರ ಮಾಡಿದ್ದಾರೆ. ಇದರ ಮೌಲ್ಯ ಒಟ್ಟು 8 ಕೋಟಿ 83 ಲಕ್ಷ 53 ಸಾವಿರದ 434 ರೂಪಾಯಿ, ಮೊನ್ನೆ 5 ಲಕ್ಷದ 71 ಸಾವಿರ 23 ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ರು. ಇದರ ಮೌಲ್ಯ 1 ಕೋಟಿ 40 ಲಕ್ಷದ 22 ಸಾವಿರದ 878 ರೂಪಾಯಿ. ಕಳೆದೆರಡು ದಿನಗಳಲ್ಲಿ ಅರ್ಧ ಕೋಟಿ ಸನಿಹದಷ್ಟು ನಾರಿಯರು ಪ್ರಯಾಣ ಮಾಡಿದ್ದಾರೆ.

    ಯಾವ್ಯಾವ ಬಸ್‍ನಲ್ಲಿ ಎಷ್ಟು ಮಹಿಳೆಯರ ಸಂಚಾರ..?
    ಕೆಎಸ್‍ಆರ್ ಟಿಸಿ- 11,40,057
    ಬಿಎಂಟಿಸಿ- 17,57,887
    ವಾಯುವ್ಯ ಸಾರಿಗೆ- 8,31,840
    ಕಲ್ಯಾಣ ಕರ್ನಾಟಕ ಸಾರಿಗೆ-4,04,942
    ಒಟ್ಟು ಮಹಿಳಾ ಪ್ರಯಾಣಿಕರ ಸಂಖ್ಯೆ-41,34,726

    ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (Free Bus Ticket For Women) ಕ್ಕೆ ಅವಕಾಶ ಸಿಕ್ಕ ಹಿನ್ನೆಲೆಯಲ್ಲಿ ಓಲಾ, ಊಬರ್ ಟ್ಯಾಕ್ಸಿಗೂ ಹೊಡೆತ ಬಿದ್ದಿದೆ. ಕಳೆದ ಮೂರು ದಿನಗಳಿಂದ ಬುಕ್ಕಿಂಗ್ ಸಂಖ್ಯೆ ಕಡಿಮೆಯಾಗಿದೆ. ಎರಡು ಗಂಟೆಗೊಮ್ಮೆ ಒಂದು ಆರ್ಡರ್ ಸಿಗ್ತಿದೆ ಅಂತ ಟ್ಯಾಕ್ಸಿ ಚಾಲಕರು ಕಿಡಿ ಕಾರುತ್ತಿದ್ದಾರೆ. ಇನ್ನೂ ಹೆಣ್ಮಕ್ಕಳು ಮೆಟ್ರೋ ಪ್ರಯಾಣ ಬಿಟ್ಟು, ಬಿಂಎಂಟಿಸಿ ಕಡೆ ಮುಖ ಮಾಡಿದ್ದಾರೆ. ಹೀಗಾಗಿ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಾಗ್ತಿದೆ. ಇದನ್ನೂ ಓದಿ: ಸೋಮವಾರ 41.34 ಲಕ್ಷ ಮಹಿಳೆಯರಿಂದ ಪ್ರಯಾಣ – ಸರ್ಕಾರ ಪಾವತಿಸಬೇಕು 8.83 ಕೋಟಿ ರೂ.

    ಕೆಲ ಬಿಎಂಟಿಸಿ ಬಸ್‍ಗಳಲ್ಲಿ ಅಂತರ್ ರಾಜ್ಯ ಮಹಿಳಾ ಪ್ರಯಾಣಿಕರು ತಮ್ಮ ರಾಜ್ಯದ ಆಧಾರ್ ಕಾರ್ಡ್‍ಗಳನ್ನ ಕನ್ನಡ ಅಕ್ಷರಗಳಲ್ಲಿ ಪ್ರಿಂಟ್ ಮಾಡಿಸಿ, ನಕಲಿ ಆಧಾರ್ ತೋರಿಸಿ ಸಂಚಾರ ಮಾಡ್ತಿದ್ದಾರೆ. ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನ ಇಬ್ಬರು ಮಹಿಳಾ ಪ್ರಯಾಣಿಕರು ಸುಳ್ಳು ದಾಖಲೆ ನೀಡಿ ಪ್ರಯಾಣಿಸ್ತಿರುವಾಗ ತಗ್ಲಾಕ್ಕೊಂಡಿದ್ದು, ಕಂಡೆಕ್ಟರ್‍ಗಳು ಮತ್ತಷ್ಟು ಅಲರ್ಟ್ ಆಗಿದ್ದಾರೆ. ಅದೇನೆ ಆಗ್ಲಿ, ಯೋಜನೆಯ ಆರಂಭದ ದಿನಗಳಲ್ಲೇ ಭರ್ಜರಿ ರೆಸ್ಪಾನ್ಸ್ ಸಿಗ್ತಿರೋದು ಖುಷಿಯ ವಿಚಾರ.

  • ‘ಶಕ್ತಿ’ ಯೋಜನೆಗೆ ಭರ್ಜರಿ ರೆಸ್ಪಾನ್ಸ್- ಮೊದಲ ದಿನವೇ 5.71 ಲಕ್ಷ ಮಹಿಳೆಯರ ಸಂಚಾರ

    ‘ಶಕ್ತಿ’ ಯೋಜನೆಗೆ ಭರ್ಜರಿ ರೆಸ್ಪಾನ್ಸ್- ಮೊದಲ ದಿನವೇ 5.71 ಲಕ್ಷ ಮಹಿಳೆಯರ ಸಂಚಾರ

    ಬೆಂಗಳೂರು: ರಾಜ್ಯ ಸರ್ಕಾರ ಭಾನುವಾರ ಜಾರಿ ಮಾಡಿದ ‘ಶಕ್ತಿ’ ಯೋಜನೆ (Shakti Scheme) ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ನಾರಿಮಣಿಯರು ದೊಡ್ಡ ಮಟ್ಟದಲ್ಲಿಯೇ ಉಚಿತ ಸಂಚಾರ ಯೋಜನೆಯನ್ನು ಸದುಪಯೋಗ ಮಾಡಿಕೊಳ್ತಿದ್ದಾರೆ.

    ಮೆಜೆಸ್ಟಿಕ್, ಯಶವಂತಪುರ, ಶಾಂತಿನಗರ, ಯಲಹಂಕ, ಸ್ಯಾಟಲೈಟ್ ಬಸ್ ನಿಲ್ದಾಣ ಸೇರಿದಂತೆ ಬೆಂಗಳೂರಿನ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ವಾರದ ಮೊದಲ ದಿನವಾಗಿದ್ರಿಂದ ಇಂದು ಕೆಲಸಕ್ಕೆ ಹೋಗುವ ಮಹಿಳೆಯರು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿತ್ತು. ಸೀಟ್ ಸಿಗದಿದ್ರೂ ಕೆಲವರು ನಿಂತೇ ಪ್ರಯಾಣಿಸಿದ್ರು.

    ಜಿಲ್ಲಾ ಕೇಂದ್ರಗಳಲ್ಲೂ ಉಚಿತ ಸಂಚಾರ ಭರಾಟೆ ಜೋರಾಗಿತ್ತು. ಮಹಿಳೆಯರಿಂದ ಮಿಶ್ರ ಪ್ರತಿಕ್ರಿಯೆ ಬಂತು. ಫ್ರೀ ಪ್ರಯಾಣ ಒಳ್ಳೆಯದೇ ಆದರೆ ಮುಂದಿನ ದಿನಗಳಲ್ಲಿ ಇದರ ಎಫೆಕ್ಟ್ ನಮ್ಮ ಮೇಲೆ ಬೀಳಬಾರದು ಅಂತೇಳಿದ್ರು. ಸಹಜವಾಗಿ ಸಾಮಾನ್ಯ ಬಸ್ ಹೊರತುಪಡಿಸಿ ಎಸಿ ಬಸ್, ಐಷಾರಾಮಿ ಬಸ್‍ಗಳಾದ ಪವರ್ ಪ್ಲಸ್, ರಾಜಹಂಸ, ಐರಾವತ ಬಸ್‍ಗಳು ಮತ್ತು ಕೆಲವಡೆ ರೈಲುಗಳು ಖಾಲಿ ಹೊಡಿತಿದ್ವು.

    ಆನ್‍ಲೈನ್ ರಿಸರ್ವೇಷನ್ ಇಳಿಮುಖವಾಗಿತ್ತು. ಈ ಮಧ್ಯೆ ಸಚಿವರಾದ ರಾಮಲಿಂಗಾರೆಡ್ಡಿ, ಮಹದೇವಪ್ಪ ಶಕ್ತಿಯೋಜನೆಯನ್ನು ಸಮರ್ಥಿಸಿಕೊಂಡ್ರು. ಅಂದ ಹಾಗೆ, ಮೊದಲ ದಿನವಾದ ಭಾನುವಾರ ಮಧ್ಯಾಹ್ನ 1 ಗಂಟೆಯಿಂದ 5 ಲಕ್ಷಕ್ಕೂ ಅಧಿಕ ಮಹಿಳೆಯರು ಉಚಿತ ಸಂಚಾರ ಮಾಡಿದ್ದಾರೆ. ಇದನ್ನೂ ಓದಿ: ಬೆಂ-ಮೈ ದಶಪಥ ಹೆದ್ದಾರಿ ಟೋಲ್ ಮತ್ತಷ್ಟು ದುಬಾರಿ- ಜೂನ್ 1ರಿಂದಲೇ ಪ್ರಯಾಣಿಕರ ಜೇಬಿಗೆ ಕತ್ತರಿ

    ದಾಖಲೆ ಬರೆದ ಉಚಿತ ಸಂಚಾರ:
    * ಕೆಎಸ್‍ಆರ್ ಟಿಸಿಯಲ್ಲಿ ಮಹಿಳೆಯರ ಪ್ರಯಾಣ -1,93,831, ಪ್ರಯಾಣ ಮೌಲ್ಯ- 58,16,178 (ಕೆಎಸ್‍ಆರ್ ಟಿಸಿಯಲ್ಲಿ ನಿತ್ಯ ಅಂದಾಜು 14.43 ಲಕ್ಷ ಮಹಿಳೆಯರು ಸಂಚರಿಸ್ತಾರೆ.)
    * ಬಿಎಂಟಿಸಿಯಲ್ಲಿ ಮಹಿಳೆಯರ ಪ್ರಯಾಣ 2,01,215, ಪ್ರಯಾಣ ಮೌಲ್ಯ- 26,19,604 (ಬಿಎಂಟಿಸಿಯಲ್ಲಿ ನಿತ್ಯ ಅಂದಾಜು 10.86 ಲಕ್ಷ ಮಹಿಳೆಯರು ಸಂಚರಿಸ್ತಾರೆ.)
    * ವಾಯುವ್ಯ ಸಾರಿಗೆಯಲ್ಲಿ ಮಹಿಳೆಯರ ಪ್ರಯಾಣ 1,22,354, ಪ್ರಯಾಣ ಮೌಲ್ಯ- 36,17,096 (ವಾಯುವ್ಯ ಸಾರಿಗೆಯಲ್ಲಿ ನಿತ್ಯ ಅಂದಾಜು 09.12 ಲಕ್ಷ ಮಹಿಳೆಯರು ಸಂಚರಿಸ್ತಾರೆ.)
    * ಕಲ್ಯಾಣ ಸಾರಿಗೆಯಲ್ಲಿ ಮಹಿಳೆಯರ ಪ್ರಯಾಣ 53,623, ಪ್ರಯಾಣ ಮೌಲ್ಯ 19,70,000 (ಕಲ್ಯಾಣ ಸಾರಿಗೆಯಲ್ಲಿ ನಿತ್ಯ ಅಂದಾಜು 07.41 ಲಕ್ಷ ಮಹಿಳೆಯರು ಸಂಚರಿಸ್ತಾರೆ.)
    * 4 ಸಾರಿಗೆ ನಿಗಮದಲ್ಲಿ ಮಹಿಳೆಯರ ಪ್ರಯಾಣ 5,71,023, ಪ್ರಯಾಣ ಮೌಲ್ಯ- 1,40,22,878 (ನಾಲ್ಕು ನಿಗಮಗಳ ಬಸ್‍ಗಳಲ್ಲಿ ನಿತ್ಯ ಅಂದಾಜು 41.81 ಲಕ್ಷ ಮಹಿಳೆಯರು ಸಂಚರಿಸ್ತಾರೆ.)

  • ಶಕ್ತಿ ಯೋಜನೆ- ಮಂಜುನಾಥನ ಸನ್ನಿಧಿಗೆ ಮೊದಲ ಬಸ್ ಪ್ರಯಾಣ

    ಶಕ್ತಿ ಯೋಜನೆ- ಮಂಜುನಾಥನ ಸನ್ನಿಧಿಗೆ ಮೊದಲ ಬಸ್ ಪ್ರಯಾಣ

    ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Guarantee) ದ ಗ್ಯಾರಂಟಿಗಳಲ್ಲಿ ಒಂದಾದ ‘ಶಕ್ತಿ’ ಯೋಜನೆಗೆ ಇಂದು ಚಾಲನೆ ದೊರಕಿದ್ದು, ಮೊದಲ ಬಸ್ ಮಂಜುನಾಥನ ಸನ್ನಿಧಿ ಧರ್ಮಸ್ಥಳ (First Bus To Dharmasthala) ಕ್ಕೆ ತೆರಳಿದೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಧರ್ಮಸ್ಥಳಕ್ಕೆ ಹೊರಡುವ ಬಸ್ಸಿಗೆ ಮೆಜೆಸ್ಟಿಕ್ ಕೆಎಸ್‍ಆರ್ ಟಿಸಿಯಲ್ಲಿ ಚಾಲನೆ ನೀಡುವ ಮೂಲಕ ‘ಶಕ್ತಿ’ ಯೋಜನೆಯನ್ನು ರಾಜ್ಯದಲ್ಲಿ ಪ್ರಾರಂಭಿಸಿದರು. ಎರಡನೇ ಬಸ್ ಮೈಸೂರು ಕಡೆಗೆ ತೆರಳಿದ್ದು, ಮೂರನೇ ಬಸ್ ಕಲಬುರುಗಿ ಹಾಗೂ ನಾಲ್ಕನೇ ಬಸ್ ಬೆಳಗಾವಿ ಕಡೆಗೆ ಹೊರಟಿದೆ. ಇದನ್ನೂ ಓದಿ: ನಮಗೆ ಎಷ್ಟೇ ಕಷ್ಟ ಬರಲಿ 5 ಗ್ಯಾರಂಟಿ ಈಡೇರಿಸುತ್ತೇವೆ: ಸಿದ್ದರಾಮಯ್ಯ ಶಪಥ

    ಎಲ್ಲರ ಪ್ರಯಾಣ ಸುಖವಾಗಿರಲಿ ಎಂದು ವಿಷ್ ಮಾಡಿ ಸ್ವೀಟ್ ಹಂಚಿಕೆ ಮಾಡಲಾಯಿತು. ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೂಡ ಮೆಜೆಸ್ಟಿಕ್ ನತ್ತ ಪ್ರಯಾಣ ಬೆಳೆಸಿದರು. ಇಂದು ಮಧ್ಯಾಹ್ನ 1 ಗಂಟೆಯ ನಂತರ ಎಲ್ಲ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಈ ಸೌಲಭ್ಯ ಸಿಕ್ಕಿದೆ. 18,609 ಬಸ್‍ಗಳು ಉಚಿತ ಪ್ರಯಾಣಕ್ಕೆ ಲಭ್ಯ ಇವೆ. 41.80 ಲಕ್ಷ ಮಹಿಳೆಯರು ಈ ಸೌಲಭ್ಯದ ಫಲಾನುಭವಿಗಳು ಎಂದು ಅಂದಾಜಿಸಲಾಗಿದೆ.