Tag: Women staff

  • ಫುಡ್ ಡೆಲಿವರಿ ಬಾಯ್ ಮೇಲೆ ಮಹಿಳಾ ಸಿಬ್ಬಂದಿ ದರ್ಪ

    ಫುಡ್ ಡೆಲಿವರಿ ಬಾಯ್ ಮೇಲೆ ಮಹಿಳಾ ಸಿಬ್ಬಂದಿ ದರ್ಪ

    ಬೆಂಗಳೂರು: ಫುಡ್ ಪ್ಯಾಕೆಟ್ ನೀಡಲು ತಡವಾಗಿದ್ದನ್ನು ಪ್ರಶ್ನಿಸಿದ ಫುಡ್ ಡೆಲಿವರಿ ಬಾಯ್ ಮೇಲೆ ಮಹಿಳಾ ಸಿಬ್ಬಂದಿ ದರ್ಪ ಮೆರೆದಿರುವ ಘಟನೆ ನಗರದ ವೈಟ್ ಫೀಲ್ಡ್ ಬಳಿಯ ರೆಸ್ಟೋರೆಂಟ್‍ವೊಂದರಲ್ಲಿ ನಡೆದಿದೆ.

    ಫುಡ್ ಡೆಲಿವರಿ ಬಾಯ್ ಸಂಜಯ್ ಫುಡ್ ಪ್ಯಾಕೆಟ್ ಪಡೆಯಲು ರೆಸ್ಟೋರೆಂಟ್‍ಗೆ ಬಂದಿದ್ದರು. ಈ ವೇಳೆ ಫುಡ್ ಪ್ಯಾಕೆಟ್ ನೀಡಲು ತಡವಾದ ಹಿನ್ನೆಲೆ ಗ್ರಾಹಕರಿಗೆ ತಲುಪಿಸಲು ತಡವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ಮಹಿಳಾ ಸಿಬ್ಬಂದಿ ಆತನೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಇದನ್ನೂ ಓದಿ: ವಿಧಾನಸಭೆಯಲ್ಲಿ ಮತಾಂತರ ತಡೆ ವಿಧೇಯಕ ಅಂಗೀಕಾರ

    ನಂತರ ಮಾತಿಗೆ ಮಾತು ಬೆಳೆದು ಮಹಿಳೆ ಡೆಲಿವರಿ ಬಾಯ್ ಕುತ್ತಿಗೆ ಪಟ್ಟಿ ಹಿಡಿದು ಎಳೆದೊಯ್ದು ರೆಸ್ಟೋರೆಂಟ್‍ನಿಂದ ಹೊರದಬ್ಬಿದ್ದಾರೆ. ನಂತರ ಕನ್ನಡಪರ ಸಂಘಟನೆಗಳು ರೆಸ್ಟೋರೆಂಟ್ ಮ್ಯಾನೇಜರ್ ಪ್ರಶಾಂತ್ ಅವರನ್ನು ಭೇಟಿಯಾಗಿ ಮಹಿಳೆಯನ್ನು ಕೆಲಸದಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ. ಮಹಿಳೆಯ ಕೃತ್ಯ ಗಮನಿಸಿದ ಬಳಿಕ ಮ್ಯಾನೇಜರ್ ಮಹಿಳೆಯಿಂದ ಫುಡ್ ಡೆಲಿವರಿ ಬಾಯ್‍ಗೆ ಕ್ಷಮಾಪಣೆ ಕೇಳಿಸಿ, ಕೆಲಸದಿಂದ ವಜಾಗೊಳಿಸಿದ್ದಾರೆ. ಅಲ್ಲದೇ ಕನ್ನಡಪರ ಸಂಘಟನೆಗಳು ಡೆಲಿವರಿ ಬಾಯ್ ಗೆ ಒಂದು ದಿನದ ಸಂಬಳ ಕೊಡಿಸಿದ್ದಾರೆ. ಇದನ್ನೂ ಓದಿ  ಹಿಂದಿನ ಸರ್ಕಾರವೇ ರೈತರ ಆತ್ಮಹತ್ಯೆಗೆ ಕಾರಣ – ಯೋಗಿ ಆದಿತ್ಯನಾಥ್

  • ಕೋವಿಡ್ ಟೆಸ್ಟಿಂಗ್ ಲ್ಯಾಬ್‍ನಲ್ಲಿ ಮಹಿಳಾ ಸಿಬ್ಬಂದಿ ಮೇಲೆ ಕಿರುಕುಳ

    ಕೋವಿಡ್ ಟೆಸ್ಟಿಂಗ್ ಲ್ಯಾಬ್‍ನಲ್ಲಿ ಮಹಿಳಾ ಸಿಬ್ಬಂದಿ ಮೇಲೆ ಕಿರುಕುಳ

    ಧಾರವಾಡ: ಕೋವಿಡ್ ಟೆಸ್ಟಿಂಗ್ ಲ್ಯಾಬ್‍ನಲ್ಲಿ ಮಹಿಳಾ ಸಿಬ್ಬಂದಿಯ ಮೇಲೆ ಕಿರುಕುಳ ನಡೆದಿರುವ ಆರೋಪ ಕೇಳಿ ಬಂದಿದೆ.

    ಧಾರವಾಡದ ಡಿಮ್ಹಾನ್ಸ್ ನಲ್ಲಿರುವ ಕೋವಿಡ್ ಟೆಸ್ಟಿಂಗ್ ಲ್ಯಾಬ್‍ನ ಮಹಿಳಾ ಸಿಬ್ಬಂದಿಯೊಬ್ಬರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿರುವ ತಂತ್ರಜ್ಞನ ಮೇಲೆ ಈ ಆರೋಪ ಮಾಡಿದ್ದಾರೆ. ಕರ್ನಾಟಕ ವಿವಿಯ ಈ ಪ್ರಾಧ್ಯಾಪಕರನ್ನು ಡಿಮ್ಹಾನ್ಸ್ ನಲ್ಲಿರುವ ಕೋವಿಡ್ ಲ್ಯಾಬ್‍ಗೆ ಕಳೆದ 15 ದಿನಗಳಿಂದ ಅಧಿಕಾರಿಯನ್ನಾಗಿ ನಿಯೋಜನೆ ಮಾಡಲಾಗಿತ್ತು.

    ಈ ಹಿನ್ನೆಲೆ ಇಬ್ಬರು ಇದೇ ಲ್ಯಾಬ್‍ನಲ್ಲಿ ಕೆಲಸ ಮಾಡುವ ವೇಳೆ ನನಗೆ ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಪ್ರಾಧ್ಯಾಪಕನ ಮೇಲೆ ಮಹಿಳೆ ಆರೋಪ ಮಾಡಿದ್ದಾರೆ. ಈ ಸಂಬಂಧ ಡಿಮ್ಹಾನ್ಸ್ ನಿರ್ದೇಶಕ ಮತ್ತು ಕರ್ನಾಟಕ ವಿವಿ ಕುಲಪತಿಗೆ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಡಿಮ್ಹಾನ್ಸ್ ನಿರ್ದೇಶಕರಿಂದ ಕಮಿಟಿ ರಚನೆ ಮಾಡಲಾಗಿದ್ದು, ಪ್ರಾಥಮಿಕ ಹಂತದ ವಿಚಾರಣೆ ಪೂರ್ಣಗೊಳಿಸಿರುವ ಕಮಿಟಿ, ಪ್ರಕರಣ ಕುರಿತು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಿದೆ.

  • ಐಪಿಎಲ್ ಇತಿಹಾಸದಲ್ಲೇ ಮೊದಲ ಮಹಿಳಾ ಸಹಾಯಕ ಸಿಬ್ಬಂದಿಯನ್ನು ನೇಮಿಸಿದ ಆರ್‌ಸಿಬಿ

    ಐಪಿಎಲ್ ಇತಿಹಾಸದಲ್ಲೇ ಮೊದಲ ಮಹಿಳಾ ಸಹಾಯಕ ಸಿಬ್ಬಂದಿಯನ್ನು ನೇಮಿಸಿದ ಆರ್‌ಸಿಬಿ

    – ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ

    ಬೆಂಗಳೂರು: ಇಂಡಿಯಾನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ ಮಹಿಳಾ ಸಿಬ್ಬಂದಿಯನ್ನು ನೇಮಿಸಿಕೊಂಡಿದೆ.

    ತಂಡದ ಕ್ರೀಡಾ ಮಸಾಜ್ ಥೆರಪಿಸ್ಟ್ ಆಗಿ ನವನೀತಾ ಗೌತಮ್ ಅವರನ್ನು ನೇಮಕ ಮಾಡಲಾಗಿದೆ. ಐಪಿಎಲ್‍ನ ಯಾವುದೇ ತಂಡವೂ ಕೂಡ ಸಹಾಯಕ ಸಿಬ್ಬಂದಿಯಾಗಿ ಮಹಿಳೆಯರನ್ನು ಇದುವರೆಗೂ ನೇಮಕ ಮಾಡಿಕೊಂಡಿರಲಿಲ್ಲ.

    ಮುಂದಿನ ಐಪಿಎಲ್ ಟೂರ್ನಿಗೆ ಬೆಂಗಳೂರು ತಂಡಕ್ಕೆ ಮೈಕ್ ಹೇಸನ್ ರನ್ನು ನೂತನ ನಿರ್ದೇಶಕರನ್ನಾಗಿ ನೇಮಸಿ, ಸೈಮನ್ ಕ್ಯಾಟಿಚ್‍ರನ್ನು ಮುಖ್ಯ ಕೋಚ್ ಹುದ್ದೆಗೆ ನೇಮಕ ಮಾಡಿದೆ. ಈಗ ಕ್ರೀಡಾ ಪಟುಗಳಿಗೆ ಮಸಾಜ್ ಮಾಡುವ ಪರಿಣಿತೆಯಾಗಿರುವ ನವನೀತಾ ಗೌತಮ್ ಅವರನ್ನು ಸಹಾಯಕ ಸಿಬ್ಬಂದಿಯಾಗಿ ನೇಮಕ ಮಾಡಲಾಗಿದೆ.

    ಸದ್ಯ ತಂಡದ ಮುಖ್ಯ ಫಿಸಿಯೋ ಥೆರಪಿಸ್ಟ್ ಆಗಿ ಈವನ್ ಸ್ಪೀಚ್ಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಆಟಗಾರರ ಸ್ಥಿತಿಗತಿ ಅರಿತು ಸೂಕ್ತ ಮಸಾಜ್ ಮಾಡುವ ಕಾರ್ಯವನ್ನು ಮಾಡಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಆರ್ ಸಿಬಿ ವಕ್ತಾರರು, ಪ್ರತಿಭಾನಿತ್ವ ವ್ಯಕ್ತಿಯನ್ನು ಹುದ್ದೆಯನ್ನು ನೇಮಕ ಮಾಡಿದಕ್ಕೆ ಸಂತಸವಿದ್ದು, ಇತಿಹಾಸದ ಭಾಗವಾಗುವುದಕ್ಕೆ ಹೆಮ್ಮೆ ಇದೆ ಎಂದಿದ್ದಾರೆ.

    ಕಳೆದ 12 ಟೂರ್ನಿಗಳಲ್ಲಿ ಆರ್ ಸಿಬಿ ಐಪಿಎಲ್ ಟ್ರೋಫಿ ಗೆಲುವು ಪಡೆಯಲು ವಿಫಲವಾಗಿದ್ದು, ಈ ಬಾರಿ ಕಪ್ ಗೆಲುವಿನ ಲೆಕ್ಕಾಚಾರಗಳನ್ನು ಇಟ್ಟುಕೊಂಡು ತಂಡವನ್ನು ರೂಪಿಸಲಾಗುತ್ತಿದೆ. ಆದರೆ ಮಹಿಳಾ ಸಿಬ್ಬಂದಿ ನೇಮಕಕ್ಕೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲು ಉತ್ತಮ ತಂಡದೊಂದಿಗೆ ಟ್ರೋಫಿ ಗೆಲ್ಲಿ ಎಂದು ಕೆಲವರು ತಂಡದ ಕಾಲೆಳೆದಿದ್ದಾರೆ. ಮತ್ತೆ ಕೆಲವರು ತಂಡದ ಬೆಂಬಲಕ್ಕೆ ನಿಂತಿದ್ದು, ಮಹಿಳಾ ಸಿಬ್ಬಂದಿಯಾಗಿ ನೇಮಕಗೊಂಡಿರುವ ನವನೀತಾ ಅವರಿಗೆ ಶುಭ ಕೋರಿದ್ದಾರೆ.

  • ಜೈಲಿನ ಆವರಣದಲ್ಲೇ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರ

    ಜೈಲಿನ ಆವರಣದಲ್ಲೇ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರ

    ಜೈಪುರ: ತಪ್ಪು ಮಾಡುವ ಅಪರಾಧಿಗಳಿಗೆ ಶಿಕ್ಷೆ ನೀಡಿ, ತಪ್ಪು ತಿದ್ದುವ ಜೈಲಿನಲ್ಲೇ ತಪ್ಪು ನಡೆದಿದೆ. ಜೈಲಿನ ಭದ್ರತಾ ಸಿಬ್ಬಂದಿಯೇ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.

    ರಾಜಸ್ಥಾನದ ಬನ್ಸ್ವಾರ ಜೈಲಿನ ಅವರಣದಲ್ಲೇ ಈ ಘಟನೆ ನಡೆದಿದೆ. ಸಾಮಾನ್ಯವಾಗಿ ಕೈದಿಗಳನ್ನು ಸುಧಾರಿಸಲು ಜೈಲಿನಲ್ಲಿ ಇರಿಸಲಾಗುತ್ತದೆ. ಆದರೆ ತಪ್ಪು ತಿದ್ದುವ ಜಾಗದಲ್ಲಿಯೇ ತಪ್ಪು ನಡೆದಿದೆ. ಜೈಲಿನಲ್ಲೂ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಸೆಪ್ಟೆಂಬರ್ 8ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬನ್ಸ್ವಾರ ಜೈಲಿನ ಭದ್ರತಾ ಸಿಬ್ಬಂದಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಅಲ್ಲಿನ ಮಹಿಳಾ ಸಿಬ್ಬಂದಿಯೊಬ್ಬರು ದೂರು ದಾಖಲಿಸಿದ್ದಾರೆ.

    ಮಂಗಳವಾರ ಎಸ್‌ಪಿ ಭೇಟಿ ಮಾಡಿದ ಸಂತ್ರಸ್ತೆ, ಸಹೋದ್ಯೋಗಿ ಮೇಲೆ ದೂರು ನೀಡಿದ್ದಾರೆ. ಘಟನೆ ನಡೆದ ದಿನ ಕೆಲಸ ಮುಗಿಸಿ ಜೈಲಿನ ಆವರಣದಲ್ಲಿರುವ ಕ್ವಾರ್ಟರ್ಸ್ ಗೆ ಸಂತ್ರಸ್ತೆ ತೆರಳಿದ್ದರು. ಈ ವೇಳೆ ಸಂತ್ರಸ್ತೆಯ ಮನೆಗೆ ಆರೋಪಿ ಹಿಂದಿನ ಬಾಗಿಲಿನಿಂದ ನುಗ್ಗಿ, ಆಕೆಗೆ ಚಾಕು ತೋರಿಸಿ ಅತ್ಯಾಚಾರ ಮಾಡಿದ್ದಾನೆ. ಅಲ್ಲದೆ ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೆ ಕೊಲೆ ಮಾಡುತ್ತೇನೆ ಎಂದು ಹೆದರಿಸಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಈ ಸುದ್ದಿ ಕೇಳಿದ ಜೈಲಿನ ಕೆಲ ಸಿಬ್ಬಂದಿ ಇದು ಸತ್ಯಕ್ಕೆ ದೂರವಾದದ್ದು, ಮಹಿಳೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ. ಆರೋಪಿ ಹಾಗೂ ಸಂತ್ರಸ್ತೆ ಇಬ್ಬರ ಮಧ್ಯೆ ಅನೇಕ ದಿನಗಳಿಂದ ಪ್ರೇಮ ಸಂಬಂಧವಿತ್ತು. ಇಬ್ಬರು ಒಟ್ಟಿಗೆ ಓಡಾಡುತ್ತಿದ್ದದನ್ನು ಹಲವು ಬಾರಿ ನೋಡಿದ್ದೇವೆ. ತನ್ನ ಮಾನ ಉಳಿಸಿಕೊಳ್ಳಲು ಮಹಿಳಾ ಸಿಬ್ಬಂದಿ ಅತ್ಯಾಚಾರದ ಆರೋಪ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.

  • ಠಾಣೆಯಲ್ಲೇ ಸಿಬ್ಬಂದಿಗೆ ಸೀಮಂತ ನೆರವೇರಿಸಿ ಸಂಭ್ರಮಿಸಿದ ಪೊಲೀಸರು

    ಠಾಣೆಯಲ್ಲೇ ಸಿಬ್ಬಂದಿಗೆ ಸೀಮಂತ ನೆರವೇರಿಸಿ ಸಂಭ್ರಮಿಸಿದ ಪೊಲೀಸರು

    ಮಂಡ್ಯ: ಸದಾ ಕಾನೂನು ಸುವ್ಯವಸ್ಥೆಯಲ್ಲಿ ಬ್ಯುಸಿ ಆಗಿರುವ ಪೊಲೀಸರು ತಮ್ಮ ಕರ್ತವ್ಯದ ನಡುವೆ ಬಿಡುವು ಮಾಡಿಕೊಂಡು, ಮಹಿಳಾ ಸಿಬ್ಬಂದಿಯೊಬ್ಬರ ಸೀಮಂತ ಕಾರ್ಯವನ್ನು ಪೊಲೀಸ್ ಠಾಣೆಯಲ್ಲಿ ನೆರವೇರಿಸಿ ಸಂಭ್ರಮಿಸಿದ್ದಾರೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಪೊಲೀಸ್ ಠಾಣೆಯಲ್ಲಿ ಪಿಸಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಲ್ಮಾಭಾನು ಗರ್ಭಿಣಿಯಾಗಿದ್ದು, ಪೊಲೀಸ್ ಠಾಣೆಯಲ್ಲೇ ಸೀಮಂತ ಮಾಡಿ ಸಿಬ್ಬಂದಿ ಗೌರವ ಸಲ್ಲಿಸಿದ್ದಾರೆ. ಇದನ್ನೂ ಓದಿ: ಪೊಲೀಸರಿಂದ ಠಾಣೆಯಲ್ಲಿಯೇ ಮಹಿಳಾ ಪೇದೆಗೆ ಸೀಮಂತ

    ತಮ್ಮ ಒತ್ತಡದ ಕೆಲಸದ ನಡುವೆ ಬಿಡುವು ಮಾಡಿಕೊಂಡು ತಮ್ಮ ಸೀಮಂತ ನೆರವೇರಿಸಿದ ಸಹೋದ್ಯೋಗಿಗಳ ಪ್ರೀತಿಗೆ ಸಲ್ಮಾ ಭಾನು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗರ್ಭಿಣಿ ಸಿಬ್ಬಂದಿಗೆ ಪೊಲೀಸ್ ಠಾಣೆಯಲ್ಲೇ ಸೀಮಂತ

    ಈ ಹಿಂದೆ ಮೈಸೂರಿನಲ್ಲಿ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಯೊಬ್ಬರಿಗೆ ಸೀಮಂತ ಶಾಸ್ತ್ರವನ್ನು ಮಾಡಲಾಗಿತ್ತು. ಆದರೆ ಮಡಿಕೇರಿಯಲ್ಲಿ ಮೊದಲ ಬಾರಿಗೆ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಶಿಕ್ಷಕರು ಹಾಗೂ ಸಹಪಾಠಿ ಸೇರಿ ಸೀಮಂತ ಶಾಸ್ತ್ರವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv