Tag: Women Protection

  • ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ರಾಜ್ಯಗಳು ಪ್ರಾಮಾಣಿಕ ಪ್ರಯತ್ನ ಮಾಡ್ತಿಲ್ಲ: ರಾಜನಾಥ್ ಸಿಂಗ್ ಆರೋಪ

    ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ರಾಜ್ಯಗಳು ಪ್ರಾಮಾಣಿಕ ಪ್ರಯತ್ನ ಮಾಡ್ತಿಲ್ಲ: ರಾಜನಾಥ್ ಸಿಂಗ್ ಆರೋಪ

    – ಸೈನಿಕ್ ಶಾಲೆಗಳಿಗೆ ಮಹಿಳೆಯರಿಗೂ ಪ್ರವೇಶ

    ನವದೆಹಲಿ: ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಕೇಂದ್ರ ಸರ್ಕಾರವು ಕಟ್ಟುನಿಟ್ಟಾದ ಧೋರಣೆ ಅನುಸರಿಸಿದರೂ ಹಲವು ರಾಜ್ಯಗಳು ಇದರಲ್ಲಿ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಆರೋಪಿಸಿದ್ದಾರೆ.

    ತಿರುವನಂತಪುರಂನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಕೋಲ್ಕತ್ತಾದ ಆರ್‌.ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 31 ವರ್ಷದ ಟ್ರೈನಿ ವೈದ್ಯೆಯ ಮೇಲೆ ನಡೆದ ಭೀಕರ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ (Kolkata rape-murder case) ಹಿನ್ನೆಲೆಯಲ್ಲಿ ಮಹಿಳಾ ಆರೋಗ್ಯ ಮತ್ತು ಮಹಿಳೆಯರ ಸುರಕ್ಷತೆ ಸಂಬಂಧ ಸರ್ಕಾರದ ಪ್ರಯತ್ನಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಇದನ್ನೂ ಓದಿ: ಮಳೆಯ ನಡುವೆ ಶ್ರೀ ಶಂಕರಾಚಾರ್ಯ ಬೆಟ್ಟದ ಮೆಟ್ಟಿಲು ಹತ್ತಿ ಶಿವನ ದರ್ಶನ ಪಡೆದ ಮಾಜಿ ಪ್ರಧಾನಿ

    ತಮ್ಮ ಭಾಷಣದಲ್ಲಿ ಕೋಲ್ಕತ್ತಾದ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ಬಂಗಾಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಈ ಘಟನೆ ಹೃದಯ ವಿದ್ರಾವಕ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು. ಇದನ್ನೂ ಓದಿ: ನಿವೇಶನ ಲೂಟಿ ಮಾಡುತ್ತಿರುವುದು ನಾನಾ ನೀವಾ? – ಎಂ.ಬಿ.ಪಾಟೀಲರ ಸೈಟ್ ಅಕ್ರಮ ಸದ್ಯದಲ್ಲೇ ಬಯಲು: ಛಲವಾದಿ ನಾರಾಯಣಸ್ವಾಮಿ

    ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಮತ್ತು ಅಪರಾಧಗಳನ್ನು ಪರಿಗಣಿಸಿದರೆ, ಎಲ್ಲಾ ಬದಲಾವಣೆಗಳ ಹೊರತಾಗಿಯೂ, ಬಹಳಷ್ಟು ಮಾಡಬೇಕಾಗಿದೆ ಎಂದು ತೋರುತ್ತದೆ. ನಮ್ಮ ಸರ್ಕಾರವು ಮಹಿಳೆಯರ (Womens) ಮೇಲಿನ ಅಪರಾಧಗಳ ಬಗ್ಗೆ ಕಟ್ಟುನಿಟ್ಟಾದ ಧೋರಣೆ ಅನುಸರಿಸಿದೆ, ಆದರೆ ಅನೇಕ ರಾಜ್ಯಗಳು ಈ ದಿಕ್ಕಿನಲ್ಲಿ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ವಾಧ್ವಾನ್ ಪೋರ್ಟ್ ಪ್ರಾಜೆಕ್ಟ್ ಉದ್ಘಾಟನೆ, ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನಲ್ಲಿ ಭಾಗಿಯಾದ ಪ್ರಧಾನಿ ಮೋದಿ

    ಅತ್ಯಾಚಾರದಂತಹ ಘೋರ ಅಪರಾಧಗಳಿಗೆ ಮರಣದಂಡನೆ ವಿಧಿಸಲು ನರೇಂದ್ರ ಮೋದಿ ಸರ್ಕಾರ (Modi Government) ಕಾನೂನನ್ನು ತಿದ್ದುಪಡಿ ಮಾಡಿದೆ. ಐಪಿಸಿಯನ್ನು ಬದಲಿಸಿ ಭಾರತೀಯ ನ್ಯಾಯ ಸಂಹಿತಾ ಕಾನೂನಿನಲ್ಲಿ ಅತ್ಯಾಚಾರದಲ್ಲಿ ಬಲಿಪಶುವಿನ ಸಾವಿಗೆ ಕಾರಣವಾದ ಪ್ರಕರಣಗಳಲ್ಲಿ ಮರಣದಂಡನೆಗೆ ಅವಕಾಶ ನೀಡಿದೆ. ಹರಿಯಾಣದಂತಹ ರಾಜ್ಯಗಳಲ್ಲಿ ಲಿಂಗ ಅನುಪಾತದಲ್ಲಿ ಸುಧಾರಣೆಗಾಗಿ ಪ್ರಧಾನಿ ಮೋದಿಯವರ ‘ಬೇಟಿ ಬಚಾವೋ, ಬೇಟಿ ಪಢಾವೋ ‘ ಅಭಿಯಾನ ಆರಂಭಿಸಿದೆ. ತ್ರಿವಳಿ ತಲಾಖ್ ರದ್ದತಿ ಮುಸ್ಲಿಂ ಮಹಿಳೆಯರಿಗೆ ದೊಡ್ಡ ಪರಿಹಾರವಾಗಿದೆ ಎಂದು ಸರ್ಕಾರದ ಸಾಧನೆಗಳನ್ನು ಬಣ್ಣಿಸಿದರು.

    2014-2019ರ ನಡುವೆ ಕೇಂದ್ರ ಗೃಹ ಸಚಿವರಾಗಿದ್ದ ಅವಧಿಯನ್ನು ನೆನಪಿಸಿಕೊಂಡ ರಾಜನಾಥ್ ಸಿಂಗ್, ಭದ್ರತಾ ಪಡೆಗಳಲ್ಲಿ ಮಹಿಳೆಯರೊಂದಿಗೆ ಮೂರನೇ ಒಂದು ಭಾಗದಷ್ಟು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಎಲ್ಲಾ ರಾಜ್ಯಗಳಿಗೆ ಸಲಹೆಯನ್ನು ನೀಡಿದ್ದೇನೆ ಎಂದು ಹೇಳಿದರು. ಇಂದು ಎಲ್ಲಾ ಪೊಲೀಸ್ ಪಡೆಗಳು ಮತ್ತು ಅರೆಸೇನಾ ಪಡೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ. ಸಶಸ್ತ್ರ ಪಡೆಗಳಿಗೆ ಮಹಿಳೆಯರ ಪ್ರವೇಶಕ್ಕೆ ಇದ್ದ ಹಲವು ಅಡೆತಡೆಗಳನ್ನು ತೆಗೆದುಹಾಕಲಾಗಿದೆ. ಸಶಸ್ತ್ರ ಪಡೆಗಳ ಎಲ್ಲಾ ಮೂರು ವಿಭಾಗಗಳಲ್ಲಿ ನಾವು ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಿದ್ದೇವೆ. ಸೈನಿಕ್ ಶಾಲೆಗಳಿಗೆ ಮಹಿಳೆಯರಿಗೂ ಪ್ರವೇಶ ನೀಡಲಾಗುತ್ತಿದೆ ಎಂದು ವಿವರಿಸಿದರು. ಇದನ್ನೂ ಓದಿ: ಅಸ್ಸಾಂ ವಿಧಾನಸಭೆಯ ಶುಕ್ರವಾರದ 2 ಗಂಟೆ ಅವಧಿಯ ನಮಾಜ್ ಬ್ರೇಕ್‌ಗೆ ತಡೆಯೊಡ್ಡಿದ ಸಿಎಂ ಶರ್ಮಾ

  • ಕಾಮುಕರ ಹೆಡೆಮುರಿಕಟ್ಟಲು ರಾಯಚೂರಿನಲ್ಲಿ ತಲೆ ಎತ್ತಿದೆ ಓಬವ್ವ ಪಡೆ

    ಕಾಮುಕರ ಹೆಡೆಮುರಿಕಟ್ಟಲು ರಾಯಚೂರಿನಲ್ಲಿ ತಲೆ ಎತ್ತಿದೆ ಓಬವ್ವ ಪಡೆ

    – ವಿಶೇಷ ಪಿಂಕ್ ವಾಹನದಲ್ಲಿ ಗಸ್ತು ತಿರುಗಲಿದೆ 10 ಜನರ ತಂಡ
    – ನಗರ ಹಾಗೂ ಹೊರವಲಯದಲ್ಲಿ ಮಹಿಳೆಯರ ರಕ್ಷಣೆಗೆ ಖಾಕಿ ಕ್ರಮ

    ರಾಯಚೂರು: ನಗರದಲ್ಲೀಗ ವಿದ್ಯಾರ್ಥಿನಿಯರು, ಮಹಿಳೆಯರ ಮೇಲೆ ಎಲ್ಲೇ ದೌರ್ಜನ್ಯ ನಡೆಯುತ್ತೆ ಅಂತ ತಿಳಿದರೂ ಈ ವಿಶೇಷ ಸಿಬ್ಬಂದಿ ಅಲ್ಲಿ ಹೆಣ್ಣುಮಕ್ಕಳ ರಕ್ಷಣೆಗೆ ಪ್ರತ್ಯಕ್ಷವಾಗುತ್ತೆ. ಮಹಿಳಾ ಪೊಲೀಸರ ಓಬವ್ವ ಪಡೆ ಕಾಮುಕರ ಹೆಡೆಮುರಿಕಟ್ಟಲು ರಾಯಚೂರಿನಲ್ಲಿ ಸಿದ್ಧವಾಗಿದೆ.

    ಎಲ್ಲೆಡೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ರಾಯಚೂರು ಜಿಲ್ಲಾ ಪೊಲೀಸರು ಹೊಸ ಯೋಜನೆ ರೂಪಿಸಿದ್ದಾರೆ. 10 ಮಹಿಳಾ ಸಿಬ್ಬಂದಿಗೆ ಕರಾಟೆ ಸೇರಿ ಇತರೆ ತರಬೇತಿ ಹಾಗೂ ಮಹಿಳೆಯರ ರಕ್ಷಣೆ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಕಾರ್ಯಗಾರಗಳ ಮೂಲಕ ತಿಳುವಳಿಕೆ ನೀಡಲಾಗಿದೆ. ಎರಡು ತಂಡಗಳಾಗಿ ನಗರದ ಕಾಲೇಜು, ಹಾಸ್ಟೆಲ್ ಗಳು ಸೇರಿದಂತೆ ಎಲ್ಲಡೆ ಬೆಳಿಗ್ಗೆ 8 ರಿಂದ ರಾತ್ರಿ 10 ರವರೆಗೆ ಓಬವ್ವ ಪಡೆ ವಿಶೇಷ ಪಿಂಕ್ ವಾಹನದಲ್ಲಿ ಸಂಚರಿಸಿ ಮಹಿಳೆಯರಿಗೆ ರಕ್ಷಣೆ ನೀಡಲಿದ್ದಾರೆ. ಸಹಾಯ ವಾಣಿ ಸಂಖ್ಯೆ 94808 03800 ಕ್ಕೆ ಕರೆ ಮಾಡಿದರೆ ಓಬವ್ವ ಪಡೆ ಪ್ರತ್ಯಕ್ಷ ವಾಗುತ್ತೆ.

    ಕಳೆದ ಐದು ವರ್ಷದಲ್ಲಿ ರಾಯಚೂರು ಜಿಲ್ಲೆಯಲ್ಲಿ 72 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷ 2018 ರಲ್ಲಿ 22 ಪ್ರಕರಣ, 2019ರಲ್ಲಿ 9 ಪ್ರಕರಣ ದಾಖಲಾಗಿವೆ. ಅಲ್ಲದೆ ಕಳೆದ ಐದು ವರ್ಷದಲ್ಲಿ 173 ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು, 2019ರಲ್ಲೇ 31 ಪ್ರಕರಣ ದಾಖಲಾಗಿವೆ. ಆದರೆ ಇಷ್ಟು ಪ್ರಕರಣಗಳಲ್ಲಿ ಇದುವರೆಗೆ ಕೇವಲ 3 ಪ್ರಕರಗಣಗಳಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗಿದ್ದು, 70 ಪ್ರಕರಣಗಳು ನ್ಯಾಯಾಲಯದಲ್ಲಿ ವಜಾಗೊಂಡಿವೆ. ಇದಕ್ಕೆ ಪ್ರತಿಕೂಲ ಸಾಕ್ಷಿಯೇ ಕಾರಣವಾಗಿದ್ದು, ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ. ಹೀಗಾಗಿ ಓಬವ್ವ ಪಡೆಗೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಹೇಳಿದ್ದಾರೆ.

    ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಜಿಲ್ಲಾ ಪೊಲೀಸರು ಹೊಸದೊಂದು ಹೆಜ್ಜೆಯನ್ನಿಟ್ಟಿದ್ದಾರೆ. ಆಸಕ್ತ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಕರಾಟೆ ಸೇರಿದಂತೆ ಆತ್ಮರಕ್ಷಣೆ ವಿದ್ಯೆ ಕಲಿಸಲು ಇಲಾಖೆ ಮುಂದಾಗಿದೆ. ಖಾರದ ಪುಡಿ, ಮೆಣಸಿನ ಪುಡಿ ಸದಾ ಜೊತೆಗಿಟ್ಟುಕೊಳ್ಳಿ ಅಂತ ಸಲಹೆ ನೀಡುವ ಪೊಲೀಸರು ಓಬವ್ವ ಪಡೆಯ ಮೂಲಕ ಮಹಿಳಾ ರಕ್ಷಣೆಗೆ ಮುಂದಾಗಿರುವುದಕ್ಕೆ ರಾಯಚೂರಿನ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.