Tag: Women Police Station

  • ಬೆಂಗಳೂರಿನಲ್ಲಿ ಮಹಿಳೆ ಮೇಲೆ ಗ್ಯಾಂಗ್‌ ರೇಪ್‌ – ಇಬ್ಬರು ಕಾಮುಕರು ಅರೆಸ್ಟ್‌

    ಬೆಂಗಳೂರು: ಬಸ್‌ಗಾಗಿ ಕಾಯುತ್ತಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ (GangRape) ನಡೆಸಿ ಚಿನ್ನಾಭರಣ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಗಣೇಶ್, ಶರವಣ ಬಂಧಿತ ಆರೋಪಿಗಳಾಗಿದ್ದು, ಕೆ.ಆರ್‌ ಮಾರ್ಕೆಟ್‌ನಲ್ಲಿ (KR Market) ಕೂಲಿ ಕೆಲಸ ಮಾಡಿಕೊಂಡಿದ್ದರು ಎಂದು ಪೊಲೀಸ್‌ ಮೂಲಗಳು ʻಪಬ್ಲಿಕ್‌ ಟಿವಿʼಗೆ ತಿಳಿಸಿವೆ.

    STOP RAPE

    ಏನಿದು ಪ್ರಕರಣ?
    ಕಳೆದ ಭಾನುವಾರ ಮಧ್ಯರಾತ್ರಿ 11.30ರ ವೇಳೆಗೆ ತಮಿಳುನಾಡಿನಿಂದ ಬಂದ ಮಹಿಳೆ ಯಲಹಂಕಕ್ಕೆ ತೆರಳಲು ಕೆ.ಆರ್ ಮಾರ್ಕೆಟ್ ಬಳಿ ಬಸ್ ಗಾಗಿ ಕಾಯುತ್ತಿರುವಾಗ ಘಟನೆ ನಡೆದಿದೆ.

    ಯಲಹಂಕ ಕಡೆಗೆ ಬಸ್ ಬರದ ಕಾರಣ ಬಸ್ ಎಲ್ಲಿ ಬರುತ್ತೆ ಅಂತಾ ದುಷ್ಕರ್ಮಿಗಳನ್ನ ವಿಚಾರಿಸಿದ್ದಾರೆ. ಬಸ್ ಬರುವ ಜಾಗ ತೋರಿಸತ್ತೇವೆ ಅಂತಾ ಬಸ್ ನಿಲ್ದಾಣದ ಸಮೀಪದಲ್ಲೇ ಇರುವ ಗೋಡೌನ್ ಸ್ಟ್ರೀಟ್‌ಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾರೆ. ಅತ್ಯಾಚಾರ ಮಾಡಿ ಮಹಿಳೆಯ ಮೇಲಿದ್ದ ಆಭರಣಗಳನ್ನ ದೋಚಿ ಪರಾರಿಯಾಗಿದ್ದಾರೆ. ಸಂತ್ರಸ್ತ ಮಹಿಳೆ ಬೆಂಗಳೂರಿನ ಕೇಂದ್ರ ವಿಭಾಗದ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.

    ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಎರಡು ವಿಶೇಷ ತಂಡಗಳನ್ನ ರಚಿಸಿ ಕಾಮುಕರಿಗೆ ಹೆಡೆಮುರಿ ಕಟ್ಟಲು ಬಲೆ ಬೀಸಿದ್ದರು. ಇಂದು ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

  • ಕಾಮಗಾರಿಗೆ ಅಗೆದಿದ್ದ ಗುಂಡಿಗೆ ಬಿದ್ದು ಆಸ್ಪತ್ರೆ ಮುಂದೆಯೇ 15 ವರ್ಷದ ಬಾಲಕಿ ಸಾವು

    ಕಾಮಗಾರಿಗೆ ಅಗೆದಿದ್ದ ಗುಂಡಿಗೆ ಬಿದ್ದು ಆಸ್ಪತ್ರೆ ಮುಂದೆಯೇ 15 ವರ್ಷದ ಬಾಲಕಿ ಸಾವು

    ಕೊಪ್ಪಳ: ಕಾಮಗಾರಿಗೆ ಅಗೆದಿದ್ದ ಗುಂಡಿಯನ್ನು ಒಂದು ವರ್ಷವಾದರೂ ಮುಚ್ಚದೇ ಬಾಲಕಿಯೊಬ್ಬಳು ಗುಂಡಿಗೆ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಇಲ್ಲಿನ ಹೊಸಪೇಟೆ ರಸ್ತೆಯಲ್ಲಿರುವ ಕೆಎಸ್ ಆಸ್ಪತ್ರೆಯ ಬಳಿ ನಡೆದಿದೆ.

    15 ವರ್ಷದ ಭೂಮಿಕಾ ಪ್ರಾಣ ಕಳೆದುಕೊಂಡ ಬಾಲಕಿ. ಕಾಮಗಾರಿಗಾಗಿ ಅಗೆದಿದ್ದ ಗುಂಡಿಯನ್ನು ಒಂದು ವರ್ಷವಾದರೂ ಮುಚ್ಚದೇ, ಈಚೆಗಷ್ಟೇ ಸುರಿದ ಭಾರೀ ಮಳೆಯಿಂದ ನೀರು ತುಂಬಿಕೊಂಡಿತ್ತು. ಇದೇ ಗುಂಡಿಗೆ ಆಯತಪ್ಪಿ ಬಿದ್ದ ಬಾಲಕಿ ಪ್ರಾಣ ಕಳೆದುಕೊಂಡಿದ್ದಾಳೆ. ಇದನ್ನೂ ಓದಿ: ಗೃಹ ಸಚಿವರ ತವರಲ್ಲೇ ಹೇಯಕೃತ್ಯ – ಹೆಂಡತಿಯ ಅಪ್ರಾಪ್ತ ತಂಗಿ ಮೇಲೆ ಅತ್ಯಾಚಾರ

    DRINE IN KPL

    ಬಾಲಕಿಯ ತಂದೆ ಶಂಭುಲಿಂಗಯ್ಯ ಪಾನ್‌ಶಾಪ್ ನಡೆಸುತ್ತಿದ್ದರು. ಇದ್ದ ಒಬ್ಬಳೇ ಮಗಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ನಿನ್ನೆ ಪಾನ್‌ಶಾಪ್‌ಗೆ ಬಂದು ವಾಪಸ್ ಮನೆಗೆ ಹೋಗುತ್ತಿದ್ದ ಬಾಲಕಿ ಆಯತಪ್ಪಿ ಗುಂಡಿಯೊಳಗೆ ಬಿದ್ದಿದ್ದಾಳೆ. ಸಂಜೆಯಾದರೂ ಮಗಳು ಮನೆಗೆ ಬರಲಿಲ್ಲವೆಂದು ಕುಟುಂಬದವರು ಇಡೀ ಊರೆಲ್ಲಾ ಹುಡುಕಾಡಿದ್ದಾರೆ. ಆದರೂ ಮಗಳು ಸಿಕ್ಕಿರಲಿಲ್ಲ.

    CRIME 2

    ನಂತರ ಕೊಪ್ಪಳದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಕೈಗೊಂಡಿದ್ದ ಪೊಲೀಸರು ಸಿಸಿಟಿವಿ ಕ್ಯಾಮೆರಾದಲ್ಲಿ ಪರಿಶೀಲಿಸಿದಾಗ ಬಾಲಕಿ ಗುಂಡಿಗೆ ಬಿದ್ದಿರುವುದು ಗೊತ್ತಾಗಿ, ಇಂದು ಶವ ಪತ್ತೆಹಚ್ಚಿದ್ದಾರೆ. ತಂದೆ-ತಾಯಿ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.  ಇದನ್ನೂ ಓದಿ: ಶವ ಸಾಗಿಸ್ತಿದ್ದಾಗ ಡಿಸಿ ಕಚೇರಿ ಮುಂದೆಯೇ ಬೈಕ್ ಸ್ಕಿಡ್- ಮಹಿಳೆಯ ಕೊಲೆ ರಹಸ್ಯ ಬಯಲು

    ಕಾಮಗಾರಿಗೆಂದು ಒಂದು ವರ್ಷದ ಹಿಂದೆ ಅಗೆದ 8 ಆಳದ ಗುಂಡಿಯನ್ನು ಈವರೆಗೂ ಮುಚ್ಚಿರುವುದಿಲ್ಲ. ಇದರಿಂದ ಆಯತಪ್ಪಿಬಿದ್ದ ನಮ್ಮ ಮಗು ಪ್ರಾಣ ಕಳೆದುಕೊಮಡಿದೆ. ಆಸ್ಪತ್ರೆಯವರು ರಾತ್ರಿ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ್ದರೂ ಬಾಲಕಿಯನ್ನು ರಕ್ಷಿಸಬಹುದಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ.

  • ಕಾನೂನು ಪಾಠ ಮಾಡಬೇಕಿದ್ದ ವಕೀಲನಿಂದಲೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

    ಕಾನೂನು ಪಾಠ ಮಾಡಬೇಕಿದ್ದ ವಕೀಲನಿಂದಲೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

    – ಮಂಗಳೂರಿನ ಖ್ಯಾತ ವಕೀಲನ ವಿರುದ್ಧ ದೂರು
    – ಕಚೇರಿಗೆ ಬೀಗ ಹಾಕಿ ಗಣೇಶ್ ನಾಪತ್ತೆ

    ಮಂಗಳೂರು: ಮಂಗಳೂರಿನ ಪ್ರಸಿದ್ದ ವಕೀಲ ಕೆ.ಎಸ್.ಎನ್ ರಾಜೇಶ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ.

    ನಗರದ ಕರಂಗಾಲ್ಪಡಿಯ ರಾಜೇಶ್ ಭಟ್ ಕಚೇರಿಯಲ್ಲಿ ಇಂಟರ್ನ್ ಆಗಿ ಕೆಲಸ ಮಾಡುತ್ತಿದ್ದ ಕಾನೂನು ವಿದ್ಯಾರ್ಥಿನಿ ಈ ಆರೋಪವನ್ನು ಮಾಡಿದ್ದು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.  ಇದನ್ನೂ ಓದಿ: ಸಿದ್ದರಾಮಯ್ಯ ಮೇಲೆ ಜಗಳಕ್ಕೆ ಹೋಗಲು ನನಗೆ ಬೇರೆ ಕೆಲಸ ಇಲ್ಲವೇ?: ಹೆಚ್‍ಡಿಕೆ

    ಸೆಪ್ಟೆಂಬರ್ 25ರಂದು ವಿದ್ಯಾರ್ಥಿನಿಯ ಖಾಸಗಿ ಅಂಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ನೀಡಿದ್ದು, ಈ ವಿಚಾರವನ್ನು ಬಹಿರಂಗಗೊಳಿಸದಂತೆ ರಾಜೇಶ್ ಬೆದರಿಕೆಯನ್ನು ಹಾಕಿದ್ದ ಎಂದು ಸಂತ್ರಸ್ತೆ ವಿದ್ಯಾರ್ಥಿನಿ ಆರೋಪಿಸಿದ್ದಾರೆ. ಘಟನೆಯ ಬಳಿಕ ವಿದ್ಯಾರ್ಥಿನಿಗೆ ದೂರವಾಣಿ ಕರೆ ಮಾಡಿರುವ ರಾಜೇಶ್ ನನ್ನಿಂದ ತಪ್ಪಾಗಿದೆ ಎಂದು ಗೋಗರೆದಿದ್ದಾರೆ. ಈ ಆಡಿಯೋ ಸಹ ವೈರಲ್ ಆಗಿದ್ದು, ನಿನ್ನೆ ಮಹಿಳಾ ಪೊಲೀಸ್ ಠಾಣೆಯಲ್ಲಿ ರಾಜೇಶ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.

     Mangaluru Lawyer

    ರಾಜೇಶ್ ಲೈಂಗಿಕ ದೌರ್ಜನ್ಯ ನೀಡಿರುವುದಲ್ಲದೇ ಸಂತ್ರಸ್ತೆಯ ಸ್ನೇಹಿತೆಗೂ ಬೆದರಿಕೆ ಹಾಕಿರುವ ದೂರು ದಾಖಲಾಗಿದೆ. ಸಂತ್ರಸ್ತೆ ವಿದ್ಯಾರ್ಥಿನಿ ಹಾಗೂ ರಾಜೇಶ್ ಭಟ್ ಫೋನ್‍ನಲ್ಲಿ ಮಾತನಾಡಿರುವ ಆಡಿಯೋವನ್ನು ಲೀಕ್ ಮಾಡಿದ್ದು, ನೀನೇ ಎಂದು ಆರೋಪಿಸಿ ಈ ಹಿಂದೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತೆ ಸ್ನೇಹಿತೆಗೆ ತನ್ನ ಕಡೆಯವರಿಂದ ಬೆದರಿಕೆ ಹಾಕಿಸಿದ್ದಾರೆ. ಹೀಗಾಗಿ ಸಂತ್ರಸ್ತೆಯ ಸ್ನೇಹಿತೆಯು ಈ ಬಗ್ಗೆ ದೂರು ನೀಡಿದ್ದು ರಾಜೇಶ್ ಸೇರಿದಂತೆ ಬೆದರಿಕೆ ಹಾಕಿದ ಇತರ ಸಿಬ್ಬಂದಿ ವಿರುದ್ಧವು ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ: ಶೇ.40 ರಷ್ಟು ಮಹಿಳೆಯರಿಗೆ ಟಿಕೆಟ್ – ಯುಪಿಯಲ್ಲಿ ಪ್ರಿಯಾಂಕಾ ಗಾಂಧಿ ಕ್ರಾಂತಿಕಾರಿ ನಿರ್ಧಾರ

     Mangaluru Lawyer

    ಪ್ರಕರಣ ದಾಖಲಾಗುತ್ತಿದ್ದಂತೆ ತನ್ನ ಕಚೇರಿಗೆ ಬೀಗ ಹಾಕಿ ರಾಜೇಶ್ ನಾಪತ್ತೆಯಾಗಿದ್ದಾರೆ. ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಕಚೇರಿ ಇದ್ದ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದು ಸಿ.ಸಿ ಕ್ಯಾಮೆರಾ ಫೂಟೇಜ್ ವಶಪಡಿಸುವಂತೆ ಸೂಚನೆ ನೀಡಿದ್ದಾರೆ. ಈ ನಡುವೆ ಆರೋಪಿ ವಕೀಲ ರಾಜೇಶ್ ಭಟ್ ಅಜ್ಞಾತ ಸ್ಥಳದಿಂದ ಸ್ಪಷ್ಟನೆಯ ವೀಡಿಯೋ ರಿಲೀಸ್ ಮಾಡಿದ್ದು ನನ್ನ ವಿರುದ್ಧ ಇಬ್ಬರು ಯುವತಿಯರು ಷಡ್ಯಂತ್ರ ಮಾಡಿದ್ದಾರೆ ಎಂದು ದೂರಿದ್ದಾರೆ. ಲೈಂಗಿಕ ದೌರ್ಜನ್ಯ ಹಾಗೂ ಬೆದರಿಕೆ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  ಇದನ್ನೂ ಓದಿ: 45 ವರ್ಷದ ವ್ಯಕ್ತಿಯ ಜೊತೆ 25ರ ಯುವತಿ ಮದುವೆ