Tag: women police

  • ಮಾಡೆಲ್ ಆಗಲು ಪೊಲೀಸ್ ಉದ್ಯೋಗ ಬಿಡಲ್ಲ ಎಂದ ವಿಶ್ವಸುಂದರಿ ಡಯಾನಾ

    ಮಾಡೆಲ್ ಆಗಲು ಪೊಲೀಸ್ ಉದ್ಯೋಗ ಬಿಡಲ್ಲ ಎಂದ ವಿಶ್ವಸುಂದರಿ ಡಯಾನಾ

    ಬೊಗೋಟಾ: ಕೊಲಂಬಿಯಾದ (Colombia) ಮಹಿಳಾ ಪೊಲೀಸ್ (Women Police) ಅಧಿಕಾರಿಯೊಬ್ಬರು ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ (Social Media) ಭಾರೀ ಸದ್ದು ಮಾಡ್ತಿದ್ದಾರೆ. ಈಕೆಯ ಮಾಡೆಲಿಂಗ್ (Model) ಫೋಟೋಗಳು ಹಾಗೂ ಚಟುವಟಿಕೆಗಳನ್ನು ನೋಡಿ, ಅಭಿಮಾನಿಗಳು ಈಕೆಯನ್ನ ವಿಶ್ವದ ಅತ್ಯಂತ ಸುಂದರ ಮಹಿಳಾ ಪೊಲೀಸ್ (World Beautiful Cop) ಎಂದು ಕರೆದಿದ್ದಾರೆ.

    ಆದ್ರೆ ಇಂದಿಗೂ ರಾಷ್ಟ್ರೀಯ ಪೊಲೀಸ್ ಪಡೆಗೆ ಸೇವೆ ಸಲ್ಲಿಸುವುದ್ನು ಗೌರವವೆಂದೇ ಪರಿಗಣಿಸುವ ಮಹಿಳಾ ಪೊಲೀಸ್ ಡಯಾನಾ ರಾಮಿರೆಜ್ (Diana Ramirez) ತನ್ನ ಇನ್ಸ್ಟಾಗ್ರಾಮ್‌ನಲ್ಲಿ 4 ಲಕ್ಷ ಫಾಲೋವರ್ಸ್ಗಳನ್ನ ಹೊಂದಿದ್ದಾರೆ. ಇದನ್ನೂ ಓದಿ: ಯಾರಿಗೂ ಭಯಪಡಬೇಡಿ, ದೇಶದಲ್ಲಿ ಪ್ರೀತಿ, ಭ್ರಾತೃತ್ವವನ್ನು ಹರಡಿ – ಯುವ ಜನತೆಗೆ ರಾಹುಲ್ ಸಂದೇಶ

    ಮಾಹಿತಿಗಳ ಪ್ರಕಾರ, ವಿಶ್ವದಲ್ಲೇ ಅತ್ಯಂತ ಅಪಾಯಕಾರಿ ನಗರವೆಂದು ಪರಿಗಣಿಸುವ ಕೊಲಂಬಿಯಾದ (Colombia) ಮೆಡಿಲಿನ್‌ನಲ್ಲಿ ಗಸ್ತು ತಿರುಗುವ ರಾಮಿರೇಜ್ ಆಗಾಗ್ಗೆ ಕೆಲವು ಮಾಡೆಲಿಂಗ್ ಚಟುವಟಿಗಳನ್ನೂ ಮಾಡುತ್ತಾ ಅದನ್ನು ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಅಭಿಮಾನಿಗಳು ಈಕೆಯನ್ನು ಸಂಪೂರ್ಣ ಮಾಡೆಲಿಂಗ್ ಆಗಿ ಬದಲಾಗುವಂತೆ ಸಲಹೆಗಳು ಕೇಳಿ ಬರುತ್ತಿದ್ದಂತೆ ನಾನು ಮಾಡೆಲ್ ಆಗಲು ಅಥವಾ ಆನ್‌ಲೈನ್‌ನಲ್ಲಿ ಫೇಮಸ್ ಆಗಲು ನನ್ನ ಪೊಲೀಸ್ ಉದ್ಯೋಗ(Police Job) ಬಿಟ್ಟುಕೊಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಮೋದಿಯಿಂದ ಏಷ್ಯಾದ ಮೊದಲ ಗಾರ್ಡನ್‌ ಟರ್ಮಿನಲ್‌ ಉದ್ಘಾಟನೆ – ವಿಶೇಷತೆ ಏನು?

    ನಾನು ಯಾವುದಕ್ಕೂ ಹಿಂಜರಿಯುವುದಿಲ್ಲ, ಏಕೆಂದರೆ ನನಗೆ ಮತ್ತೆ ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಆದರೂ ನಾನು ಪೊಲೀಸ್ ಅಧಿಕಾರಿಯಾಗಿ ಇರುತ್ತೇನೆ. ಏಕೆಂದರೆ ನಾನು ನಾನಾಗಿ ಇದ್ದೇನೆ, ಅದಕ್ಕಾಗಿ ನನ್ನ ಸಂಸ್ಥೆಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.

    ಹೆಚ್ಚಿನ ಡಿಜಿಟಲ್ ಫಾಲೋವರ್ಸ್ಗಳನ್ನು ಹೊಂದಿರುವ ಡಯಾನಾ ವರ್ಷದ ಅತ್ಯುತ್ತಮ ಪೊಲೀಸ್ ಅಥವಾ ಮಿಲಿಟರಿ ಪ್ರಭಾವಿ ಎಂದು ನಾಮನಿರ್ದೇಶನಗೊಂಡಿದ್ದಾರೆ. ಇದರೊಂದಿಗೆ ಪೊಲೀಸ್ ಪಡೆ ಪ್ರತಿನಿಧಿಸುವುದು ನನ್ನ ಗೌರವ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

    ಇದಕ್ಕೆ ಅಭಿಮಾನಿಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಡಯಾನಾ ರಾಮಿರೆಜ್ ಅತ್ಯಂತ ಸುಂದರ ಪೊಲೀಸ್ ಅಧಿಕಾರಿ, ಅಸಾಧಾರಣ ಸುಂದರಿ, ನಾನು ಅವರನ್ನು ಪ್ರೀತಿಸುತ್ತೇನೆ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಡಯಾನಾ ಅವರ ಅಭಿಪ್ರಾಯಗಳನ್ನು ಸಂತೋಷದಿಂದಲೇ ಸ್ವೀಕರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಟ್ಕಳದಲ್ಲಿ ಮಹಿಳಾ ಪೊಲೀಸರಿಂದಲೇ ರಾತ್ರಿ ಗಸ್ತು – ನಿರ್ಭೀತಿಯಿಂದ ವಾಹನಗಳ ತಪಾಸಣೆ, ವಿಚಾರಣೆ

    ಭಟ್ಕಳದಲ್ಲಿ ಮಹಿಳಾ ಪೊಲೀಸರಿಂದಲೇ ರಾತ್ರಿ ಗಸ್ತು – ನಿರ್ಭೀತಿಯಿಂದ ವಾಹನಗಳ ತಪಾಸಣೆ, ವಿಚಾರಣೆ

    ಕಾರವಾರ: ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮಾನರಾಗಿ ಪೈಪೋಟಿ ನೀಡುತ್ತಿದ್ದಾರೆ. ಅದರಲ್ಲೂ ಪೊಲೀಸ್ ಇಲಾಖೆಯಲ್ಲೂ ಸಹ ಸೇವೆ ಸಲ್ಲಿಸುವ ಮೂಲಕ ತಮ್ಮ ಸಾಮರ್ಥ್ಯವನ್ನ ಪ್ರದರ್ಶಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಗೆ ರಾತ್ರಿ ಗಸ್ತಿಗೆ ನಿಯೋಜನೆ ಮಾಡಿದ್ದಾರೆ. ಸಂಪೂರ್ಣ ಮಹಿಳಾ ಪೊಲೀಸರ ತಂಡವೇ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸಿದೆ.

    ಹೌದು, ಸಾಮಾನ್ಯವಾಗಿ ಪೊಲೀಸ್ ಇಲಾಖೆಯಲ್ಲಿ ರಾತ್ರಿ ಕರ್ತವ್ಯಕ್ಕೆ ಮಹಿಳಾ ಸಿಬ್ಬಂದಿಯನ್ನು ಠಾಣೆಯಲ್ಲಿ ಮಾತ್ರ ನಿಯೋಜನೆ ಮಾಡುತ್ತಿದ್ದರು. ಇದೀಗ ಮೊದಲ ಬಾರಿಗೆ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ರಾತ್ರಿ ವೇಳೆ ಮಹಿಳಾ ಪೊಲೀಸರನ್ನು ಗಸ್ತು ಕಾರ್ಯಕ್ಕೆ ನಿಯೋಜಿಸಲಾಗಿದೆ. ಪಿಎಸ್‍ಐ ಸುಮಾ ನೇತೃತ್ವದಲ್ಲಿ ತಡರಾತ್ರಿ ಆಯಕಟ್ಟಿನ ಸ್ಥಳಗಳಲ್ಲಿ ವಾಹನ ತಪಾಸಣೆ ನಡೆಸಿದ್ದಾರೆ. ಶಂಕಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಸುರಕ್ಷತೆ ಮರೆತ ಬಿಎಂಟಿಸಿ – ಕಳ್ಳರ ಅಡ್ಡವಾದ ಬಸ್‍ಗಳು

    ಈ ವಿಚಾರವಾಗಿ ಮಾತನಾಡಿದ ಸ್ಥಳೀಯರೊಬ್ಬರು, ಮಹಿಳಾ ಸಿಬ್ಬಂದಿಯ ರಾತ್ರಿ ಗಸ್ತು ಇತರೆ ಮಹಿಳೆಯರಿಗೂ ಸ್ಫೂರ್ತಿ ನೀಡುವಂತಿದೆ. ಜೊತೆಗೆ ಮಹಿಳೆಯರಿಗೂ ಸುರಕ್ಷತೆಯ ಭಾವನೆ ಮೂಡಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಠಾಣೆಯಲ್ಲೂ ಹದಿನೈದು ದಿನಗಳಿಗೊಮ್ಮೆ ಮಹಿಳಾ ಸಿಬ್ಬಂದಿಯನ್ನು ರಾತ್ರಿ ಗಸ್ತಿಗೆ ನಿಯೋಜಿಸಲು ಚಿಂತನೆ ನಡೆದಿದೆ. ಇದು ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗಲಿದೆ. ಇದನ್ನೂ ಓದಿ: ಕಸದ ವಾಹನಗಳ ಮೇಲೆ BBMP ನಾಮಫಲಕ ಹಾಕುವಂತಿಲ್ಲ – ಹೆಸರು ಹಾಕಿದ ವಾಹನಗಳ ಮೇಲೆ ಕ್ರಿಮಿನಲ್ ಕೇಸ್

    Live Tv
    [brid partner=56869869 player=32851 video=960834 autoplay=true]

  • ಕುಡಿದು ವಾಹನ ಚಾಲನೆ, ಮಹಿಳಾ ಪೊಲೀಸ್‌ ಮೇಲೆ ಹಲ್ಲೆ – ನಟಿ ಕಾವ್ಯ ಥಾಪರ್ ಅರೆಸ್ಟ್‌

    ಕುಡಿದು ವಾಹನ ಚಾಲನೆ, ಮಹಿಳಾ ಪೊಲೀಸ್‌ ಮೇಲೆ ಹಲ್ಲೆ – ನಟಿ ಕಾವ್ಯ ಥಾಪರ್ ಅರೆಸ್ಟ್‌

    ಮುಂಬೈ: ಕುಡಿದು ವಾಹನ ಚಲಾಯಿಸಿದ್ದಲ್ಲದೇ ಮಹಿಳಾ ಪೊಲೀಸ್‌ ಕಾನ್‌ಸ್ಟೇಬಲ್‌ ಮೇಲೆ ಹಲ್ಲೆ ನಡೆಸಿದ ಆರೋಪದಡಿ ನಟಿ ಕಾವ್ಯ ಥಾಪರ್‌ರನ್ನು ಪೊಲೀಸರು ಬಂಧಿಸಿದ್ದಾರೆ.

    ಜೆಡಬ್ಲ್ಯೂ ಮ್ಯಾರಿಯಟ್‌ ಹೋಟೆಲ್‌ ಬಳಿ ಗುರುವಾರ ಮಧ್ಯರಾತ್ರಿ 1 ಗಂಟೆ ಸುಮಾರಿ ಈ ಘಟನೆ ನಡೆದಿದ್ದು, ಜುಹು ಪೊಲೀಸರು ನಟಿಯನ್ನು ಬಂಧಿಸಿದ್ದಾರೆ. ನಟಿ ಅಲ್ಲಿಗೆ ಪಾರ್ಟಿಗಾಗಿ ಬಂದಿದ್ದರು. ತಮ್ಮ ಕಾರಿನಲ್ಲಿ ಸ್ನೇಹಿತನೊಂದಿಗೆ ಪೂರ್ವ ಉಪನಗರದಲ್ಲಿರುವ ತಮ್ಮ ನಿವಾಸಕ್ಕೆ ಹಿಂತಿರುಗುತ್ತಿದ್ದರು. ಇದನ್ನೂ ಓದಿ: ಅರ್ಧಂಬರ್ಧ ಬಟ್ಟೆ ತೊಡೋದೇ ಉರ್ಫಿ ಸ್ಟೈಲ್- ನೆಟ್ಟಿಗರು ಸಖತ್ ಖುಷ್

    ಥಾಪರ್‌ ಮದ್ಯದ ಅಮಲಿನಲ್ಲಿದ್ದ ಕಾರಣ ಆಕೆ ತನ್ನ ಕಾರನ್ನು, ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾಳೆ. ಅಪಘಾತದ ಬಗ್ಗೆ ಪೊಲೀಸ್‌ ನಿಯಂತ್ರಣ ಕೊಠಡಿಗೆ ಮಾಹಿತಿ ಲಭಿಸಿದೆ. ಜುಹು ಪೊಲೀಸ್‌ ಠಾಣೆಯಿಂದ ನಿರ್ಭಯಾ ಸ್ಕ್ವಾಡ್‌ ಸ್ಥಳಕ್ಕೆ ಧಾವಿಸಿದೆ. ನಟಿ ಥಾಪರ್‌, ಮಹಿಳಾ ಪೇದೆಯೊಬ್ಬರ ಕಾಲರ್‌ ಹಿಡಿದು ಹಲ್ಲೆ ನಡೆಸಿದ್ದಾರೆ. ಈ ವೇಳೆ ಮಹಿಳಾ ಪೇದೆ ನೆಲದ ಮೇಲೆ ಬಿದ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ನಟಿ ವಿರುದ್ಧ ಐಪಿಸಿ ಮತ್ತು ಮೋಟಾರು ವಾಹನಗಳ ಕಾಯ್ದೆಯಡಿ ಮದ್ಯಪಾನ ಮಾಡಿ ವಾಹನ ಚಾಲನೆ, ಸಾರ್ವಜನಿಕ ಸೇವಕರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಪ್ರಕರಣ ದಾಖಲಿಸಲಾಗಿದೆ. ನಟಿಯನ್ನು ಅಂಧೇರಿಯ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಬಿರಿಯಾನಿ ಊಟ, ಹೆಲಿಕಾಪ್ಟರ್ ನಿಂದ ಹೂಮಳೆ : ಇನ್ನೇನಿದೆ ವಿಶೇಷ?

  • ಪ್ರತಿ ಜಿಲ್ಲೆಗಳಲ್ಲೂ ಮಹಿಳಾ ಪೊಲೀಸ್ ಠಾಣೆ ಇರಬೇಕು – ಸಂಸದೀಯ ಸಮಿತಿ

    ಪ್ರತಿ ಜಿಲ್ಲೆಗಳಲ್ಲೂ ಮಹಿಳಾ ಪೊಲೀಸ್ ಠಾಣೆ ಇರಬೇಕು – ಸಂಸದೀಯ ಸಮಿತಿ

    ನವದೆಹಲಿ: ದೇಶದ ಪ್ರತೀ ಜಿಲ್ಲೆಗಳಲ್ಲೂ ಕನಿಷ್ಟ 1 ಮಹಿಳಾ ಪೊಲೀಸ್ ಠಾಣೆಯನ್ನು ರಚಿಸಲು ಸಂಸದೀಯ ಸಮಿತಿ ಶಿಫಾರಸ್ಸು ಮಾಡಿದೆ.

    ದೇಶದ ಪೊಲೀಸ್ ಪಡೆಗಳಲ್ಲಿ ಮಹಿಳೆಯರ ಸಂಖ್ಯೆ ಅತ್ಯಂತ ಕಡಿಮೆ ಇದೆ. ದೇಶಾದ್ಯಂತ ಶೇ.10.3 ರಷ್ಟು ಮಾತ್ರವೇ ಮಹಿಳಾ ಪೊಲೀಸರು ಇದ್ದಾರೆ. ಪ್ರತಿ ಜಿಲ್ಲೆಗಳಲ್ಲೂ ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಾಪಿಸಬೇಕು ಎಂದು ಸಂಸದೀಯ ಸಮಿತಿ ಸಲಹೆ ನೀಡಿದೆ.

    ದೇಶದಲ್ಲಿ ಮಹಿಳಾ ಪೊಲೀಸ್ ಪಡೆಯಲ್ಲಿ ಶೇ.33 ರ ವರೆಗೆ ಪ್ರಾತಿನಿಧ್ಯವನ್ನು ಹೆಚ್ಚಿಸಲು ಮಾರ್ಗಸೂಚಿ ರೂಪಿಸಬೇಕು ಎಂದು ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ಸಿಂಗಾಪುರ ಏರ್ ಶೋನಲ್ಲಿ ಭಾಗಿಯಾಗಲಿದೆ ತೇಜಸ್ ಫೈಟರ್ ಜೆಟ್

    ಪೊಲೀಸ್ ಪಡೆಯಲ್ಲಿ ಶೇ.10.3 ರಷ್ಟು ಮಹಿಳೆಯರು ಮಾತ್ರವೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 1 ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಾಪಿಸಲು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಬೇಕು ಎಂದು ಸಮಿತಿ ತಿಳಿಸಿದೆ. ಇದನ್ನೂ ಓದಿ: ಭಾರತ್ ಬಜಾಜ್ ಆಟೋ ಅಧ್ಯಕ್ಷ ರಾಹುಲ್ ಬಜಾಜ್‌ ನಿಧನ

    ಪುರುಷ ಕಾನ್‌ಸ್ಟೆಬಲ್‌ಗಳ ಖಾಲಿ ಹುದ್ದೆಗಳನ್ನು ರೂಪಿಸುವ ಬದಲು ಹೆಚ್ಚುವರಿ ಹುದ್ದೆಗಳನ್ನು ರಚಿಸಿ ಮಹಿಳಾ ಪೊಲೀಸರನ್ನು ನೇಮಕಾತಿ ಮಾಡಬಹುದು. ಇದರಿಂದ ದೇಶದಲ್ಲಿ ಪೊಲೀಸರ ಲಿಂಗಾನುಪಾತ ಸುಧಾರಿಸಲು ಸಹಾಯವಾಗುತ್ತದೆ ಎಂದು ಸಮಿತಿ ಹೇಳಿದೆ.

  • ಮಹಾರಾಷ್ಟ್ರದಲ್ಲಿ ಮಹಿಳಾ ಪೊಲೀಸ್ ಕರ್ತವ್ಯದ ಸಮಯ ಕಡಿತ

    ಮಹಾರಾಷ್ಟ್ರದಲ್ಲಿ ಮಹಿಳಾ ಪೊಲೀಸ್ ಕರ್ತವ್ಯದ ಸಮಯ ಕಡಿತ

    ಮುಂಬೈ: ಮಹಾರಾಷ್ಟ್ರದ್ಯಂತ ಮಹಿಳಾ ಪೊಲೀಸ್ ಸಿಬ್ಬಂದಿ ಇನ್ಮುಂದೆ 12 ಗಂಟೆಗಳ ಬದಲಿಗೆ ಎಂಟು ಗಂಟೆಗಳ ಕಾಲ ಮಾತ್ರ ಕರ್ತವ್ಯ ನಿರ್ವಹಿಸುಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸಂಜಯ್ ಪಾಂಡೆ ಆದೇಶ ಹೊರಡಿಸಿದ್ದಾರೆ.

    Women Cops

    ಸಾಮಾನ್ಯವಾಗಿ ಪುರುಷರು ಹಾಗೂ ಮಹಿಳಾ ಸಿಬ್ಬಂದಿ 12 ಗಂಟೆಗಳ ಕಾಲ ಕಾರ್ಯನಿರ್ವಸುತ್ತಾರೆ. ಆದರೆ ಮಹಿಳಾ ಪೊಲೀಸ್ ಸಿಬ್ಬಂದಿ ಕೆಲಸವನ್ನು ಕಡಿಮೆ ಮಾಡುವ ಸಲುವಾಗಿ ಈ ಆದೇಶವನ್ನು ಜಾರಿಗೊಳಿಸಲಾಗಿದೆ. ಮುಂದಿನ ಆದೇಶದವರೆಗೂ ಮಹಿಳೆಯರು ಇನ್ಮುಂದೆ 8 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಬಹುದು. ಯುನಿಟ್ ಕಮಾಂಡರ್‌ಗಳು ಆದೇಶವನ್ನು ಕಾರ್ಯಗತಗೊಳಿಸುವುದನ್ನು ಖಚಿತಪಡಿಸಿದ್ದಾರೆ. ಇದನ್ನೂ ಓದಿ: IPS ರವಿ ಚೆನ್ನಣ್ಣವರ್ ವರ್ಗ ಆದೇಶಕ್ಕೆ ಬ್ರೇಕ್

    Women Cops

    ಮಹಿಳಾ ಅಧಿಕಾರಿಗಳಿಗೆ ಉತ್ತಮ ಕೆಲಸ-ಜೀವನದ ಸಮತೋಲನವನ್ನು ಒದಗಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ಮುನ್ನ ನಾಗಪುರ ನಗರ, ಅಮರಾವತಿ ನಗರ ಮತ್ತು ಪುಣೆ ಗ್ರಾಮಾಂತರದಲ್ಲಿ ಕೂಡ ಇದೇ ರೀತಿಯ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿತ್ತು. ಇದನ್ನೂ ಓದಿ: ಇನ್‍ಸ್ಟಾದಲ್ಲಿ ತಲಾಖ್ ಘೋಷಿಸಿದ ಪತಿ ವಿರುದ್ಧ ಪತ್ನಿ ದೂರು

    ಆದರೆ ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಥವಾ ಉಪ ಪೊಲೀಸ್ ಆಯುಕ್ತರ ಅನುಮತಿಯೊಂದಿಗೆ ಮಾತ್ರ ತುರ್ತು ಸಂದರ್ಭಗಳಲ್ಲಿ ಅಥವಾ ಹಬ್ಬಗಳ ಸಂದರ್ಭದಲ್ಲಿ ಮಹಿಳಾ ಸಿಬ್ಬಂದಿಯ ಕರ್ತವ್ಯದ ಸಮಯವನ್ನು ಹೆಚ್ಚಿಸಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಕೆಸರೆಚಿದವನ ಕೈಯಲ್ಲೇ ಪ್ಯಾಂಟ್ ಕ್ಲೀನ್ ಮಾಡಿಸಿ ಕಪಾಳಮೋಕ್ಷ ಮಾಡಿದ ಮಹಿಳಾ ಪೊಲೀಸ್

    ಕೆಸರೆಚಿದವನ ಕೈಯಲ್ಲೇ ಪ್ಯಾಂಟ್ ಕ್ಲೀನ್ ಮಾಡಿಸಿ ಕಪಾಳಮೋಕ್ಷ ಮಾಡಿದ ಮಹಿಳಾ ಪೊಲೀಸ್

    ಭೋಪಾಲ್: ಪ್ಯಾಂಟ್ ಮೇಲೆ ಕೆಸರೆಚಿದವನ ಕೈಯಲ್ಲೇ ಕ್ಲೀನ್ ಮಾಡಿಸಿಕೊಂಡ ಮಹಿಳಾ ಪೊಲೀಸ್, ಆತನಿಗೆ ಕಪಾಳಮೋಕ್ಷ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

    ವೀಡಿಯೋದಲ್ಲಿ ಏನಿದೆ?
    ವ್ಯಕ್ತಿಯೊಬ್ಬನು ತನ್ನ ಬೈಕ್ ಅನ್ನು ಹಿಂದೆ ತೆಗೆಯಬೇಕಾದಾಗ ಮಹಿಳಾ ಪೊಲೀಸ್ ಸಿಬ್ಬಂದಿಯ ಪ್ಯಾಂಟ್ ಮೇಲೆ ಕೆಸರು ಹಾರಿದೆ. ಅದಕ್ಕೆ ಪೊಲೀಸ್ ಕೋಪಗೊಂಡಿದ್ದು, ಕೆಸರು ಒರೆಸುವಂತೆ ಹೇಳಿದ್ದಾರೆ. ನಂತರ ಆ ವ್ಯಕ್ತಿ ಪ್ಯಾಂಟ್ ಮೇಲೆ ಬಿದ್ದಿದ್ದ ಕೆಸರನ್ನು ಒರೆಸಿ ಮೇಲೆಕ್ಕೆ ಎದ್ದ ತಕ್ಷಣ ಆ ಸಿಬ್ಬಂದಿ ಆತನ ಕಪಾಳಕ್ಕೆ ಹೊಡೆದು ಅಲ್ಲಿಂದು ಹೊರಟು ಹೋಗಿದ್ದಾರೆ. ಈ ವೀಡಿಯೋವನ್ನು ದೂರದಿಂದ ಮೊಬೈಲ್ ನಲ್ಲಿ ಸೆರೆಹಿಡಿಯಾಲಾಗಿದ್ದು, ಸೋಶಿಯಲ್ ಮಿಡಿಯಾದಲ್ಲಿ ಹರಿಬಿಡಲಾಗಿದೆ. ಇದನ್ನೂ ಓದಿ: 800 ವರ್ಷಗಳ ಇತಿಹಾಸವಿರುವ ಪುರಾತನ ದೇವಾಲಯದಲ್ಲಿ ಸರಳ ವೈಕುಂಠ ಏಕಾದಶಿ

    ವೀಡಿಯೋವನ್ನು ಅನುರಾಗ್ ದ್ವಾರಿ ಟ್ವಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದು, ಮಧ್ಯಪ್ರದೇಶದ ರೇವಾದಲ್ಲಿ, ಸಿರ್ಮೌರ್ ಚೌಕ್ ಬಳಿ ಮಹಿಳಾ ಪೆÇಲೀಸ್ ಪ್ಯಾಂಟ್ ಅನ್ನು ಯುವಕ ಮೊದಲ ಸ್ವಚ್ಛಗೊಳಿಸಿದನು. ನಂತರ ಮಹಿಳಾ ಪೊಲೀಸ್ ಯುವಕನ ಮೇಲೆ ಬಲವಾಗಿ ಕಪಾಳಮೋಕ್ಷ ಮಾಡಿದ್ದಾರೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಈ ವೀಡಿಯೋ ನೋಡಿದ ನೆಟ್ಟಿಗರು ಪೊಲೀಸ್ ಪ್ರತಿಕ್ರಿಯೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸ್ ಮಹಿಳೆ ತಲೆಗೆ ಬಿಳಿ ಸ್ಕಾರ್ಫ್ ಸುತ್ತಿಕೊಂಡಿದ್ದರಿಂದ ಮುಖ ಕಾಣುತ್ತಿಲ್ಲ. ಆದರೆ ಅವರು ಶಶಿಕಲಾ ಎಂದು ಗುರುತಿಸಲಾಗಿದ್ದು, ಗೃಹರಕ್ಷಕ ದಳದ ಕಾನ್‍ಸ್ಟೆಬಲ್ ಆಗಿದ್ದಾರೆ ಎಂದು ತಿಳಿದುಬಂದಿದೆ.

    ಎಸ್‍ಪಿ ಶಿವಕುಮಾರ್ ಈ ಕುರಿತು ಪ್ರತಿಕ್ರಿಯಿಸಿದ್ದು, ನಾವು ವೀಡಿಯೋವನ್ನು ನೋಡಿದ್ದೇವೆ. ಆ ವೀಡಿಯೋದಲ್ಲಿ ಒಬ್ಬ ಯುವಕ ಅಧಿಕಾರಿಯ ಪ್ಯಾಂಟ್ ಅನ್ನು ಬಲವಂತವಾಗಿ ಒರೆಸುವಂತೆ ತೋರಿಸುತ್ತಿದ್ದೆ. ಪ್ಯಾಂಟ್ ಒರೆಸಿದ ಮೇಲೆ ಯುವಕನಿಗೆ ಕಪಾಳಮೋಕ್ಷ ಮಾಡಿ ಅಲ್ಲಿಂದ ಹೋಗಿದ್ದಾರೆ. ಈ ಬಗ್ಗೆ ಇನ್ನೂ ಯಾರು ದೂರನ್ನು ನೀಡಿಲ್ಲ. ಈ ಕುರಿತು ಯಾರಾದರೂ ದೂರು ನೀಡಿದರೆ, ನಂತರ ನಾವು ವಿಚಾರಣೆ ನಡೆಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: 180 ಮಿಲಿಯನ್ ವರ್ಷದ ಹಳೆಯ ‘ಸೀ ಡ್ರ್ಯಾಗನ್’ ಅತೀ ದೊಡ್ಡ ಪಳೆಯುಳಿಕೆ ಪತ್ತೆ

    ಈ ವೀಡಿಯೋದಲ್ಲಿ ಪೊಲೀಸ್ ಮೇಲೆ ಮಣ್ಣು ಬಿದ್ದ ದೃಶ್ಯ ಸೆರೆಯಾಗಿಲ್ಲ. ಆದರೆ ನಂತರ ಯುವಕ ಪ್ಯಾಂಟ್ ಒರೆಸುತ್ತಿರುವುದು ಮಾತ್ರ ಸೆರೆಯಾಗಿದೆ.

  • ಪ್ರಿಯಾಂಕಾ ಗಾಂಧಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಪೊಲೀಸರ ವಿರುದ್ಧ ಕ್ರಮ

    ಪ್ರಿಯಾಂಕಾ ಗಾಂಧಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಪೊಲೀಸರ ವಿರುದ್ಧ ಕ್ರಮ

    ಲಕ್ನೋ: ಕಾಂಗ್ರೆಸ್ ಹಿರಿಯ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಮಹಿಳಾ ಪೊಲೀಸ್ ಕಾನ್ಸ್‌ಸ್ಟೇಬಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

    ಉತ್ತರ ಪ್ರದೇಶದಿಂದ ಆಗ್ರಾಕ್ಕೆ ಹೋಗುವಾಗ ಲಕ್ನೋ ಹೊರವಲಯದಲ್ಲಿ ಪ್ರಿಯಾಂಕಾ ಗಾಂಧಿ ಜೊತೆ ಮಹಿಳಾ ಕಾನ್ಸ್‌ಸ್ಟೇಬಲ್‌ ಗುಂಪೊಂದು ಸೆಲ್ಫಿ ಕ್ಲಿಕ್ಕಿಸಿಕೊಂಡಿದೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದಾಗ್ಯೂ ಈ ವಿಚಾರ ಕಾನ್ಸ್‌ಸ್ಟೇಬಲ್‍ಗಳಿಗೆ ಖುಷಿಯಾದ ವಿಚಾರವಾಗಿ ಪರಿಣಮಿಸದೇ ಸಮಸ್ಯೆಯಾಗಿ ಎದುರಾಗಿದೆ. ಇದನ್ನೂ ಓದಿ: ಮಹಿಳೆಯರ ಆತ್ಮರಕ್ಷಣೆಗಾಗಿ ವಿಶೇಷ ತರಬೇತಿ: ಬಸವರಾಜ ಬೊಮ್ಮಾಯಿ

    ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆ ಫೋಟೋಗೆ ಪೋಸ್ ನೀಡಿದ ಮಹಿಳಾ ಕಾನ್ಸ್‌ಸ್ಟೇಬಲ್‌ಗಳು ಕ್ರಮ ಎದುರಿಸಬೇಕಾಗುತ್ತದೆ ಎಂದು ಲಕ್ನೋ ಪೊಲೀಸ್ ಆಯುಕ್ತ ಡಿ.ಕೆ. ಠಾಕೂರ್ ತಿಳಿಸಿದ್ದಾರೆ. ಇದನ್ನೂ ಓದಿ: ಪಠ್ಯಪುಸ್ತಕದಲ್ಲಿ ಪ್ರವಾದಿ, ಇಸ್ಲಾಂ ಅವಹೇಳನ – ಪ್ರೊ.ಬಿ.ಆರ್.ರಾಮಚಂದ್ರಯ್ಯರನ್ನು ಕೆಲಸದಿಂದ ವಜಾಗೊಳಿಸಿಲು ಆಗ್ರಹ

    ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಿಯಾಂಕಾ ಗಾಂಧಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ನನ್ನ ಜೊತೆ ಫೋಟೋ ತೆಗೆದುಕೊಳ್ಳುವುದು ಅಪರಾಧ ಆಗಿದ್ದರೆ, ನನಗೆ ಶಿಕ್ಷೆ ನೀಡಬೇಕು, ಆದರೆ ಮಹಿಳಾ ಕಾನ್ಸ್‌ಸ್ಟೇಬಲ್‌ಗಳನ್ನು ದೂಷಿಸುವುದು ಏಕೆ? ಎಂದು ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ- ನಾಳೆ ತುಮಕೂರು ಬಂದ್

    ಯೋಗಿ ಆದಿತ್ಯನಾಥ್ ಅವರಿಗೆ ಈ ಫೋಟೋ ವಿಚಾರವಾಗಿ ಅಸಮಾಧಾನವಿದ್ದು, ಅವರು ಈ ಮಹಿಳಾ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಇದ್ದಾರೆ ಎಂಬ ವಿಚಾರ ಹರಿದಾಡುತ್ತಿದೆ. ನನ್ನೊಂದಿಗೆ ಫೋಟೋ ತೆಗೆದುಕೊಂಡಿರುವುದು ಅಪರಾಧವಾಗಿದ್ದರೆ, ಅದಕ್ಕಾಗಿ ನನಗೆ ಶಿಕ್ಷೆ ನೀಡಬೇಕು. ಅದನ್ನು ಹೊರತುಪಡಿಸಿ ಈ ಶ್ರಮಜೀವಿ ಮತ್ತು ನಿಷ್ಠಾವಂತ ಪೊಲೀಸರ ವೃತ್ತಿಯನ್ನು ಹಾಳುಮಾಡುವುದು ಸರ್ಕಾರಕ್ಕೆ ಕ್ಷೋಭೆಯಲ್ಲ ಎಂದಿದ್ದಾರೆ.

    25 ಲಕ್ಷ ಕಳ್ಳತನ ಮಾಡಿದ ಆರೋಪದಲ್ಲಿ ಅರುಣ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧನ ಮಾಡಿದ್ದರು. ಆದರೆ ಆ ವ್ಯಕ್ತಿಯು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಲು ಹೊರಟಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಆಗ್ರಾಕ್ಕೆ ತೆರಳುತ್ತಿದ್ದರು. ಆದರೆ ಈ ವೇಳೆ ಪ್ರಿಯಾಂಕಾ ಗಾಂಧಿ ಭೇಟಿಯಿಂದ ಅಲ್ಲಿನ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದ್ದಿದ್ದರಿಂದ ಪೊಲೀಸರು ಅವರನ್ನು ವಶಕ್ಕೆ ಪಡೆದಿದರು. ಆದರೆ ಸ್ವಲ್ಪ ಸಮಯದ ನಂತರ ಬಿಡುಗಡೆಗೊಳಿಸಿ ಕೇವಲ ನಾಲ್ಕು ಮಂದಿಗೆ ಮಾತ್ರ ಆಗ್ರಾಗೆ ಹೋಗಲು ಅನುಮತಿ ನೀಡಲಾಯಿತು.

  • ಮಹಿಳಾ ಪೊಲೀಸ್ ಅಧಿಕಾರಿ ಸ್ನಾನದ ವೀಡಿಯೋ ರೆಕಾರ್ಡ್ – ಚಾಲಕನಿಂದಲೇ ಬ್ಲಾಕ್‍ಮೇಲ್

    ಮಹಿಳಾ ಪೊಲೀಸ್ ಅಧಿಕಾರಿ ಸ್ನಾನದ ವೀಡಿಯೋ ರೆಕಾರ್ಡ್ – ಚಾಲಕನಿಂದಲೇ ಬ್ಲಾಕ್‍ಮೇಲ್

    ಭೋಪಾಲ್: ಮಹಿಳಾ ಪೊಲೀಸ್ ಅಧಿಕಾರಿ ಸ್ನಾನ ಮಾಡುತ್ತಿರುವ ವೀಡಿಯೋ ರೆಕಾರ್ಡ್ ಮಾಡಿ ನಂತರ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿದ ಆರೋಪಿ ವಿರುದ್ಧ ಭೋಪಾಲ್ ಪೊಲೀಸರು ದೂರು ದಾಖಲಿಸಿದ್ದಾರೆ.

    ಆರೋಪಿಯನ್ನು ಮಹಿಳಾ ಪೊಲೀಸ್ ಅಧಿಕಾರಿಯ ಚಾಲಕನಾಗಿ ನೇಮಿಸಲಾಗಿತ್ತು. ಆದರೆ ಸೆಪ್ಟೆಂಬರ್ 22ರಂದು ಸ್ನಾನ ಮಾಡುವ ವೇಳೆ ತನ್ನ ವೀಡಿಯೋವನ್ನು ಯಾರೋ ಚಿತ್ರೀಕರಿಸಲು ಪ್ರಯತ್ನಿಸಿರುವ ವಿಚಾರವನ್ನು ಮಹಿಳಾ ಪೊಲೀಸ್ ಅರಿತುಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೊಂದು ಮನೆ ಕುಸಿತ- ಆಶ್ಚರ್ಯಕರ ರೀತಿಯಲ್ಲಿ ಜನ ಪಾರು

    ಈ ಕುರಿತಂತೆ ಅಪರಾಧ ವಿಭಾಗದ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಸ್ನಾನ ಮಾಡುವ ವೇಳೆ ಸ್ನಾನ ಗೃಹದ ಬಾಗಿಲ ತಳದಲ್ಲಿ ಮೊಬೈಲ್ ಫೋನ್‍ನನ್ನು ಇರಿಸಲಾಗಿರುವುದನ್ನು ಗಮನಿಸಿದ್ದಾರೆ. ನಂತರ ಹೊರಗೆ ಹೋಗುತ್ತಿದ್ದಂತೆಯೇ ಆಕೆಯ ಚಾಲಕ ಸ್ಥಳದಿಂದ ಓಡಿ ಹೋಗುತ್ತಿರುವುದನ್ನು ನೋಡಿದ್ದಾರೆ. ಬಳಿಕ ಸೆಪ್ಟೆಂಬರ್ 26ರಂದು ಚಾಲಕ ಆಕೆಯ ಮನೆಗೆ ಹೋಗಿ 5 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಅಲ್ಲದೇ ಹಣ ನೀಡದೇ ಇದ್ದಲ್ಲಿ ಆ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆಯೊಡ್ಡಿರುವುದಾಗಿ ತಿಳಿಸಿದ್ದಾರೆ.

    ಈ ವಿಚಾರವಾಗಿ ಮಹಿಳಾ ಪೊಲೀಸ್ ಅಧಿಕಾರಿ ಭೋಪಾಲ್ ಪೊಲೀಸ್ ಪ್ರಧಾನ ಕಚೇರಿಯನ್ನು ಸಂಪರ್ಕಿಸಿ ದೂರು ನೀಡಿದ ಬಳಿಕ ನಗರದ ಅಪರಾಧ ವಿಭಾಗವು ತನಿಖೆ ನಡೆಸಲು ಆರಂಭಿಸಿತು. ಸದ್ಯ ಭಾರತೀಯ ದಂಡ ಸಂಹಿತೆಗೆ ಸಂಬಂಧಿಸಿದ ಕಾಯ್ದೆಯ ಕೆಲವು ಸೆಕ್ಷನ್‍ಗಳ ಅಡಿಯಲ್ಲಿ ಬ್ಲಾಕ್ ಮೇಲ್ ಮತ್ತು ಸುಲಿಗೆ ಪ್ರಕರಣವನ್ನು ಆರೋಪಿ ವಿರುದ್ಧ ದಾಖಲಿಸಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲೂ ಮತಾಂತರ- ಸೈಟ್ ಆಸೆ ತೋರಿಸಿ ಕೃತ್ಯ, ಸ್ಥಳೀಯರಿಂದ ಆಕ್ರೋಶ

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶನಿವಾರ ಭೋಪಾಲ್‍ನ ಹಬಿಬ್‍ಗಂಜ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದು, ಭೋಪಾಲ್‍ನ ಚಾರ್ ಇಮ್ಲಿಯಲ್ಲಿರುವ ಅಧಿಕಾರಿ ನಿವಾಸದಲ್ಲಿ ಆತನನ್ನು ಪೊಲೀಸ್ ವರಿಷ್ಠಾಧಿಕಾರಿ ರಾಮ್ ಜಿ ಶ್ರೀವಾಸ್ತವ ಮತ್ತು ಅಪರಾಧ ವಿಭಾಗದ ಅಧಿಕಾರಿಗಳು ಥಳಿಸಿದ್ದಾರೆ ಎಂದು ಆರೋಪಿಸಿದ್ದಾನೆ.

  • ಅಪ್ರಾಪ್ತೆ ಮೇಲೆ ಹಲ್ಲೆ – ಮೂವರು ಮಹಿಳಾ ಪೊಲೀಸರ ವಿರುದ್ಧ ಎಫ್‍ಐಆರ್

    ಅಪ್ರಾಪ್ತೆ ಮೇಲೆ ಹಲ್ಲೆ – ಮೂವರು ಮಹಿಳಾ ಪೊಲೀಸರ ವಿರುದ್ಧ ಎಫ್‍ಐಆರ್

    ಮಂಗಳೂರು: ಅಪ್ರಾಪ್ತೆಯ ಮೇಲೆ ಹಲ್ಲೆ ನಡೆಸಿದ್ದ ಮೂವರು ಮಹಿಳಾ ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಾದ ಘಟನೆ ಮಂಗಳೂರಿನ ಬಜ್ಪೆಯಲ್ಲಿ ನಡೆದಿದೆ.

    ಮಂಗಳೂರಿನ ಹೊರವಲಯದ ಗಂಜಿಮಠದ ಅಪ್ರಾಪ್ತೆ, ಮೂಡಬಿದಿರೆಯ ಯುವಕನೋರ್ವನನ್ನು ಪ್ರೀತಿಸುತ್ತಿದ್ದಳು. ಆದರೆ ಆತ ಪ್ರತಿದಿನ ಫೋನ್ ಮಾಡಿ ಟಾರ್ಚರ್ ಕೊಡುತ್ತಿದ್ದ ಹಿನ್ನೆಲೆಯಲ್ಲಿ ತನ್ನ ಹೆತ್ತವರೊಂದಿಗೆ ಬಂದು ಬಜ್ಪೆ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ನೀಡಿದ್ದಳು. ಆದರೆ ಬಜ್ಪೆ ಪೊಲೀಸ್ ಠಾಣೆಯ ಪೊಲೀಸರು ದೂರು ದಾಖಲಿಸಿಕೊಳ್ಳದೆ, ದೂರು ನೀಡಲು ಬಂದಿದ್ದ ಆಕೆಯನ್ನು ವಿಚಾರಣೆ ನಡೆಸುವ ನೆಪದಲ್ಲಿ ಲಾಠಿಯಿಂದ ಹಿಗ್ಗಾಮುಗ್ಗ ಥಳಿಸಿದ್ದಾರೆ.

    ಮೂವರು ಮಹಿಳಾ ಪೊಲೀಸರು ಕೈ, ಸೊಂಟ ಹಾಗೂ ಕಾಲಿನ ಅಡಿಭಾಗಕ್ಕೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ರಕ್ತ ಹೆಪ್ಪುಗಟ್ಟಿದ್ದು ಅಪ್ರಾಪ್ತೆ ಮಂಗಳೂರಿನ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಹಲ್ಲೆ ನಡೆಸಿದ ಬಜ್ಪೆ ಠಾಣೆಯ ಮೂವರು ಮಹಿಳಾ ಪೊಲೀಸರ ವಿರುದ್ಧ ಮಂಗಳೂರಿನ ಪಾಂಡೇಶ್ವರದಲ್ಲಿರುವ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

    ಜಿಲ್ಲಾ ಕಾಂಗ್ರೆಸ್ ನಿಯೋಗ ಹುಡುಗಿಯನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದ್ದು, ತಪ್ಪಿತಸ್ಥ ಪೊಲೀಸರ ವಿರುದ್ದ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ಮೂವರು ಮಹಿಳಾ ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಮಹಿಳಾ ಠಾಣೆಯ ಇನ್ಸ್ ಪೆಕ್ಟರ್ ತನಿಖೆ ನಡೆಸುತ್ತಾರೆ. ವಿಚಾರಣೆ ನಡೆಸಿ ಪೊಲೀಸರ ತಪ್ಪಿದ್ದರೆ ಆಡಳಿತಾತ್ಮಕ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.

  • ಹೆಣ್ಮಕ್ಳನ್ನ ಕೆಣಕಿದ್ರೆ ಹುಷಾರ್ – ತುಮಕೂರಿನಲ್ಲಿ ಹೆಣ್ಮಕ್ಳ ರಕ್ಷಣೆಗೆ ಕಲ್ಪತರು ಪಡೆ ಸಜ್ಜು

    ಹೆಣ್ಮಕ್ಳನ್ನ ಕೆಣಕಿದ್ರೆ ಹುಷಾರ್ – ತುಮಕೂರಿನಲ್ಲಿ ಹೆಣ್ಮಕ್ಳ ರಕ್ಷಣೆಗೆ ಕಲ್ಪತರು ಪಡೆ ಸಜ್ಜು

    ತುಮಕೂರು: ಹೆಣ್ಣು ಮಕ್ಕಳನ್ನು ಚುಡಾಯಿಸುವ ಬೀದಿ ಕಾಮಣ್ಣರಿಗೆ, ಕಾಲೇಜು ಬಳಿ ನಿಂತು ವಿದ್ಯಾರ್ಥಿಯರನ್ನ ಕಾಡುವ ಕಾಮುಕರಿಗೆ ಬುದ್ಧಿ ಕಲಿಸಲು ತುಮಕೂರಿನಲ್ಲಿ ಹೊಸ ಪಡೆ ಸಜ್ಜಾಗಿದೆ. ಹುಡುಗಿಯರನ್ನು ಕೆಣಕಿದರೆ ಕೇಳೋರು ಯಾರು ಅಂತ ಕಾಲರ್ ಮೇಲೇರಿಸಿ ಓಡಾಡಿದರೆ ಜೈಲೂಟ ಗ್ಯಾರೆಂಟಿ. ಯಾಕೆಂದರೆ ಬೀದಿ ಕಾಮಣ್ಣರಿಗೆ, ಸ್ತ್ರೀ ಪೀಡಕರಿಗೆ ಬುದ್ಧಿ ಕಲಿಸಲು ತುಮಕೂರಿನಲ್ಲಿ ಕಲ್ಪತರು ಪಡೆ ಎಂಬ ಮಹಿಳಾ ಪೊಲೀಸ್ ಪಡೆ ಸನ್ನದ್ಧವಾಗಿದೆ. ರಾಜ್ಯದಲ್ಲೇ ಮೊದಲನೆ ಬಾರಿಗೆ ತುಮಕೂರು ಪೊಲೀಸರು ಕಲ್ಪತರು ಪಡೆ ಹೆಸರಿನ ಮಹಿಳಾ ಪೊಲೀಸರ ತಂಡ ರೆಡಿಮಾಡಿದ್ದಾರೆ.

    ಮಹಿಳೆಯರು, ಬಾಲಕಿಯರು, ಯುವತಿಯರ ರಕ್ಷಣೆಗೆ ಶಾಲಾ-ಕಾಲೇಜು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಹಿಳಾ ಹಾಸ್ಟೇಲ್ ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರನ್ನು ಕಾಡುವ ಪೋಲಿಗಳಿಗೆ ಬುದ್ಧಿ ಕಲಿಸಲು ಈ ತಂಡ ಸಜ್ಜಾಗಿದೆ. ಅಬಲೆಯರಿಗೆ ರಕ್ಷಣೆ ನೀಡುವ ಜವಬ್ದಾರಿ ಹೊತ್ತಿರುವ ಈ ತಂಡಕ್ಕೆ ಕಳೆದ 6 ತಿಂಗಳಿಂದ ನಿರಂತರವಾಗಿ ತರಬೇತಿ ನೀಡಲಾಗಿದೆ. ಈ ತಂಡ ಪ್ರತಿದಿನ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಸ್ವಯಂ ರಕ್ಷಣೆ ಬಗ್ಗೆ ಹೆಣ್ಣು ಮಕ್ಕಳಿಗೆ ತರಬೇತಿ ನೀಡುತ್ತಿದೆ. ಜೊತೆಗೆ ಅಪತ್ಕಾಲದಲ್ಲಿ ಕಿಡಿಗೇಡಿಗಳಿಂದ ತಪ್ಪಿಸಿಕೊಳ್ಳುವುದು ಹೇಗೆ? ಎದುರಾಳಿಗಳ ದಾಳಿಗೆ ಪ್ರತಿದಾಳಿ ತೋರುವ ಕಲೆಯನ್ನು ಹೇಳಿ ಕೊಡಲಾಗುತ್ತಿದೆ. ಇದರ ಜೊತೆಗೆ ಬಾಲಕಿಯರಿಗೆ ತಮ್ಮನ್ನು ತಾವು ಕಾಪಾಡುವುದು ಹೇಗೆ? ಕಾಮುಕರ ವರ್ತನೆಗಳು ಹೇಗಿರುತ್ತೇವೆ? ಸಾರ್ವಜನಿಕ ಸ್ಥಳದಲ್ಲಿ ಹೇಗೆಲ್ಲಾ ಎಚ್ಚರವಾಗಿರಬೇಕು? ಎನ್ನುವುದನ್ನ ಮನದಟ್ಟು ಮಾಡಿಕೊಡಲಾಗುತ್ತಿದೆ.

    ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುವ ಈ ಪಡೆಗೆ ನಾಲ್ಕು ವಿಭಾಗಗಳಿಂದ 80 ಮಹಿಳಾ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ತುಮಕೂರು ನಗರ, ಶಿರಾ, ತಿಪಟೂರು, ಕುಣಿಗಲ್ ವಿಭಾಗಕ್ಕೆ ಪ್ರತ್ಯೇಕವಾಗಿ 8 ಮಹಿಳಾ ಪೊಲೀಸ್ ಪೇದೆಗಳ ತಂಡವಿದ್ದು, ಪ್ರತಿ ತಂಡಕ್ಕೆ ಓರ್ವ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಅನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಈ ತಂಡಕ್ಕೆ ಪ್ರತ್ಯೇಕವಾದ ವಾಹನ, ಸಮವಸ್ತ್ರ ಕೂಡ ನೀಡಲಾಗಿದೆ.

    ಎಸ್‍ಪಿ ಡಾ. ಕೋನ ವಂಶಿ ಕೃಷ್ಣ ಈ ಯೋಜನೆಯ ರೂವಾರಿಯಾಗಿದ್ದು, ಈ ಕಲ್ಪತರು ಪಡೆ ಮಹಿಳಾ ರಕ್ಷಣೆಯ ಜವಬ್ದಾರಿಯನ್ನು ಮಾತ್ರ ಗಮನಿಸುವಂತೆ ಸೂಚನೆ ನೀಡಲಾಗಿದೆ. ಪ್ರತಿದಿನ ಶಾಲಾ-ಕಾಲೇಜು ಸೇರಿದ್ದಂತೆ ಮಹಿಳೆಯರಿಗೆ ಅಸುರಕ್ಷತೆ ಅನ್ನಿಸುವ ಸ್ಥಳಗಳಿಗೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

    ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಾಗೂ ದೈಹಿಕ, ಮಾನಸಿಕ ಹಿಂಸೆಗಳನ್ನು ಹತ್ತಿಕ್ಕುವ ಉದ್ದೇಶದಿಂದ ಈ ರೀತಿ ವಿಭಿನ್ನವಾದ ತಂಡ ರಚನೆಯಾಗಿದೆ. ಕಾಮುಕರಿಂದ ತೊಂದರೆಗೊಳಗಾದ ಮಹಿಳೆಯರು ಕೂಡಲೇ ಈ ಕಲ್ಪತರು ಪಡೆಗೆ ಮಾಹಿತಿ ನೀಡಬಹುದಾಗಿದೆ. ಅದಕ್ಕಾಗಿ ಕಲ್ಪತರು ಪಡೆ ಸಿಬ್ಬಂದಿಗಳ ನಂಬರ್ ಗಳನ್ನು ಮಹಿಳೆಯರಿಗೆ ನೀಡಲಾಗುತ್ತಿದೆ. ಮಹಿಳೆಯರ ಸುರಕ್ಷತೆಗೆ ತುಮಕೂರು ಪೊಲೀಸರು ತೆಗೆದುಕೊಂಡಿರುವ ಈ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿದೆ.