Tag: Women Education

  • ಮಹಿಳೆಯರು ಅವಿದ್ಯಾವಂತರು, ಅವ್ರಿಗೆ ಜನಸಂಖ್ಯಾ ನಿಯಂತ್ರಣದ ಬಗ್ಗೆ ಜ್ಞಾನ ಕಡಿಮೆ – ನಿತೀಶ್ ಕುಮಾರ್

    ಮಹಿಳೆಯರು ಅವಿದ್ಯಾವಂತರು, ಅವ್ರಿಗೆ ಜನಸಂಖ್ಯಾ ನಿಯಂತ್ರಣದ ಬಗ್ಗೆ ಜ್ಞಾನ ಕಡಿಮೆ – ನಿತೀಶ್ ಕುಮಾರ್

    ಪಾಟ್ನಾ: ಬಿಹಾರ (Bihar) ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಜನಸಂಖ್ಯೆ ನಿಯಂತ್ರಣದ (Population Control) ಬಗ್ಗೆ ನೀಡಿರುವ ಅಭಿಪ್ರಾಯದಿಂದ ರಾಜಕೀಯ ಕೋಲಾಹಲ ಸೃಷ್ಟಿಯಾಗಿದೆ.

    ನಿತೀಶ್ ಕುಮಾರ್ ತಮ್ಮ ಹೇಳಿಕೆಯಲ್ಲಿ ಮಹಿಳೆಯರನ್ನು (Women) ಅವಹೇಳನ ಮಾಡಿದ್ದಾರೆಂದು ಪ್ರತಿಪಕ್ಷಗಳು ತೀವ್ರ ತರಾಟೆಗೆ ತೆಗೆದುಕೊಂಡಿವೆ. ಇದನ್ನೂ ಓದಿ: ಪ್ರತಿ ತಿಂಗಳು 6 ಸಾವಿರ ಪಿಂಚಣಿ ಕೊಡಿ – ಸರ್ಕಾರಕ್ಕೆ ಬೋಳುತಲೆ ಪುರುಷರ ಸಂಘ ಮನವಿ

    ಬಿಹಾರದ ವೈಶಾಲಿಯಲ್ಲಿ ನಡೆಯುತ್ತಿರುವ `ಸಮಾಧಾನ ಯಾತ್ರೆ’ಯನ್ನುದ್ದೇಶಿಸಿ ಮಾತನಾಡಿದ ನಿತೀಶ್ ಕುಮಾರ್, ಜನಸಂಖ್ಯಾ ನಿಯಂತ್ರಣಕ್ಕೆ (Population Control) ಪುರುಷರು ಹೆಚ್ಚಿನ ಒಲವು ತೋರಬೇಕು. ಮಹಿಳೆಯರು ಅವಿದ್ಯಾವಂತರಾಗಿದ್ದು (UnEducated), ಜನಸಂಖ್ಯೆ ನಿಯಂತ್ರಣದ ಕುರಿತು ಅವರಿಗೆ ಜ್ಞಾನ ಕಡಿಮೆ. ಹೀಗಾಗಿ ಪುರುಷರು ತಮ್ಮನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಮೂಲಕ, ಜನಸಂಖ್ಯೆ ಹೆಚ್ಚಾಗದಂತೆ ನೋಡಿಕೊಳ್ಳಬೇಕು ಎಂದು ಪ್ರತಿಪಾದಿಸಿದ್ದಾರೆ.

    ಸಾಂದರ್ಭಿಕ ಚಿತ್ರ

    ಮಹಿಳೆಯರು ಶಿಕ್ಷಿತರಾಗಿದ್ದರೆ ತಾವು ಗರ್ಭಿಣಿಯಾಗದಂತೆ (Pregnant) ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದು ತಿಳಿದಿರುತ್ತಿತ್ತು. ಆದ್ರೆ ಮಹಿಳೆಯರು ಸರಿಯಾಗಿ ಶಿಕ್ಷಣ ಪಡೆಯದ ಕಾರಣ, ಜನಸಂಖ್ಯೆ ನಿಯಂತ್ರಿಸಲು ಅವರಿಂದ ಆಗುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇದರಲ್ಲಿ ವಿಷ ಇದ್ರೆ? – UP ಪೊಲೀಸರು ನೀಡಿದ ಚಹಾವನ್ನು ನಿರಾಕರಿಸಿದ ಅಖಿಲೇಶ್ ಯಾದವ್

    ಇದಕ್ಕೆ ಪ್ರತಿಪಕ್ಷ ಬಿಜೆಪಿ (BJP) ಕಿಡಿ ಕಾರಿದೆ. ಸಿಎಂ ಹೇಳಿಕೆ ಬಿಹಾರದ ಪ್ರತಿಷ್ಟೆಗೆ ಕಳಂಕ ತಂದಿದೆ ಎಂದು ವಾಗ್ದಾಳಿ ನಡೆಸಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಹುದ್ದೆಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಘ್ಘಾನಿಸ್ತಾನದಲ್ಲಿ ವಿದ್ಯಾರ್ಥಿನಿಯರು ಪ್ರತ್ಯೇಕವಾಗಿದ್ದರೆ ಮಾತ್ರ ಶಿಕ್ಷಣ

    ಅಘ್ಘಾನಿಸ್ತಾನದಲ್ಲಿ ವಿದ್ಯಾರ್ಥಿನಿಯರು ಪ್ರತ್ಯೇಕವಾಗಿದ್ದರೆ ಮಾತ್ರ ಶಿಕ್ಷಣ

    ಕಾಬೂಲ್: ತಾಲಿಬಾನಿಗಳ ಅಟ್ಟಹಾಸದ ಬಳಿಕ ಅಘ್ಘಾನಿಸ್ತಾನದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಈ ನಡುವೆ ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಕುಳಿತುಕೊಳ್ಳಲು ಅವಕಾಶವಿದ್ದರೆ ಅಂತಹ ವಿವಿಗಳಲ್ಲಿ ಮಹಿಳೆಯರು ಶಿಕ್ಷಣ ಪಡೆಯಬಹುದು ಎಂದು ಅಘ್ಘಾನಿಸ್ತಾನದ ಶಿಕ್ಷಣ ಸಚಿವ ಶೇಖ್ ಅಬ್ದುಲ್ ಬಕಿ ಹಕ್ಕಾನಿ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.

    ಅಘ್ಘಾನಿಸ್ತಾನದಲ್ಲಿ ಮಹಿಳೆಯರ ಶಿಕ್ಷಣ ಕುರಿತಾಗಿ ರೂಪಿಸಿರುವ ಹೊಸ ನಿಯಮಗಳನ್ನು ತಿಳಿಸಿರುವ ಹಕ್ಕಾನಿ, ಪುರುಷ ಮತ್ತು ಮಹಿಳೆಯರನ್ನು ಪ್ರತ್ಯೇಕವಾಗಿ ಕೂರಿಸಿ ಅವರ ಮಧ್ಯೆ ಪರದೆ ಹಾಕಿರುವ ವ್ಯವಸ್ಥೆ ಇದ್ದರೆ ಅಂತಹ ವಿವಿಗಳಲ್ಲಿ ಮಹಿಳಾ ಅಭ್ಯರ್ಥಿಗಳು ಶಿಕ್ಷಣ ಪಡೆಯಬಹುದು. ಪದವಿ ಮತ್ತು ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಿಜಾಬ್ ಧರಿಸಬೇಕು ಎಂಬ ನಿಯಮಾವಳಿ ರೂಪಿಸಿ ಮಹಿಳಾ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ತಾಲಿಬಾನಿಗಳ ಹೊಸ ಆದೇಶ- ಹುಡುಗ, ಹುಡುಗಿ ಜೊತೆಯಾಗಿ ಓದುವಂತಿಲ್ಲ

    ಈ ಹಿಂದೆ ಅಫ್ಘಾನಿಸ್ತಾನ ವಶ ಪಡೆದುಕೊಂಡ ಬಳಿಕ ತಾಲಿಬಾನಿಗಳು ಮಹಿಳಾ ಶಿಕ್ಷಣದ ಬಗ್ಗೆ ದಿನಕ್ಕೊಂದು ಆದೇಶಗಳನ್ನು ಹೊರಡಿಸುತ್ತಿದ್ದರು. ಹುಡುಗ ಮತ್ತು ಹುಡುಗಿಯರು ಶಾಲೆಗಳಲ್ಲಿ ಜೊತೆಯಾಗಿ ಓದುವಂತಿಲ್ಲ. ವಿದ್ಯಾರ್ಥಿಗಳು ಶಿಕ್ಷಕರು ಪಾಠ ಮಾಡುವ ಹಾಗಿಲ್ಲ. ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಿ ಶಿಕ್ಷಕಿಯರೇ ಪಾಠ ಮಾಡಬೇಕು ಎಂದು ಆದೇಶ ಹೊರಡಿಸಿಲಾಗಿತ್ತು. ಶೇಖ್ ಅಬ್ದುಲ್ ಬಾಕಿ ಹಕ್ಕಾನಿಯನ್ನು ಶಿಕ್ಷಣ ಸಚಿವ ಎಂದು ತಾಲಿಬಾನಿಗಳು ನೇಮಕ ಮಾಡಿದ್ದ ಬಳಿಕ ಇದೀಗ ಚರ್ಚೆ ನಡೆಸಿ ಪ್ರತ್ಯೇಕ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಇದಕ್ಕೂ ಮೊದಲು ಅಫ್ಘಾನಿಸ್ತಾನದ ಪೂರ್ವ ಹೆರಾತ್ ನಗರದಲ್ಲಿ ಕೋ-ಎಜುಕೇಶನ್ ಮೇಲೆ ನಿರ್ಬಂಧ ಹಾಕಲಾಗಿತ್ತು. ಇದನ್ನೂ ಓದಿ: ಪ್ರಮಾಣವಚನ ಸ್ವೀಕಾರ ಸಮಾರಂಭವನ್ನೇ ರದ್ದುಗೊಳಿಸಿದ ತಾಲಿಬಾನ್ ಸರ್ಕಾರ