Tag: Women constables

  • ಹೆಲ್ಮೆಟ್‌ ಇಲ್ಲದೇ ತ್ರಿಬಲ್‌ ರೈಡಿಂಗ್‌ ಬಂದ ಮಹಿಳಾ ಪೊಲೀಸರು – ಹಿಗ್ಗಾಮುಗ್ಗ ಕ್ಲಾಸ್‌ ತೆಗೆದುಕೊಂಡ ಮಹಿಳೆ

    ಹೆಲ್ಮೆಟ್‌ ಇಲ್ಲದೇ ತ್ರಿಬಲ್‌ ರೈಡಿಂಗ್‌ ಬಂದ ಮಹಿಳಾ ಪೊಲೀಸರು – ಹಿಗ್ಗಾಮುಗ್ಗ ಕ್ಲಾಸ್‌ ತೆಗೆದುಕೊಂಡ ಮಹಿಳೆ

    ಬೆಂಗಳೂರು: ಸಾರ್ವಜನಿಕರು ಸಂಚಾರ ನಿಯಮ (Traffic Rules) ಉಲ್ಲಂಘಿಸಿದರೆ ಬುದ್ದಿಮಾತು ಹೇಳಿ ಜಾಗೃತಿ ಮೂಡಿಸಬೇಕಾದ ಪೊಲೀಸ್‌ ಇಲಾಖೆಯವರೇ ತಪ್ಪು ಮಾಡಿ ಟೀಕೆಗೆ ಗುರಿಯಾಗಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ. ಸ್ಕೂಟಿಯಲ್ಲಿ ಹೆಲ್ಮೆಟ್‌ ಕೂಡ ಇಲ್ಲದೇ ತ್ರಿಬಲ್‌ ರೈಡಿಂಗ್‌ ಬಂದ ಮಹಿಳಾ ಪೊಲೀಸ್‌ ಪೇದೆಗಳಿಗೆ ಮಹಿಳೆಯೊಬ್ಬರು ಕ್ಲಾಸ್‌ ತೆಗೆದುಕೊಂಡಿದ್ದಾರೆ.

    ಮೂವರು ಮಹಿಳಾ ಪೊಲೀಸ್‌ ಪೇದೆಗಳು ಹೆಲ್ಮೆಟ್‌ ಇಲ್ಲದೇ ಸ್ಕೂಟಿಯಲ್ಲಿ ತ್ರಿಬಲ್‌ ರೈಡಿಂಗ್‌ ಬಂದಿದ್ದಾರೆ. ಮತ್ತೊಂದು ಸ್ಕೂಟಿಯಲ್ಲಿ ಇನ್ನಿಬ್ಬರು ಮಹಿಳಾ ಕಾನ್‌ಸ್ಟೇಬಲ್‌ಗಳಲ್ಲಿ ಹಿಂಬದಿ ಸವಾರರು ಹೆಲ್ಮೆಟ್‌ ಧರಿಸಿರಲಿಲ್ಲ. ಇದನ್ನು ಗಮನಿಸಿದ ಮಹಿಳೆಯೊಬ್ಬರು, “ರೂಲ್ಸ್ ಮಾಡೊರೂ ನೀವೇ.. ಬ್ರೇಕ್ ಮಾಡೊರೂ ನೀವೇ..ʼ ಅಂತಾ ತರಾಟೆ ತೆಗೆದುಕೊಂಡಿದ್ದಾರೆ. ಅಲ್ಲದೇ ಈ ದೃಶ್ಯವನ್ನು ವೀಡಿಯೋ ಕೂಡ ಮಾಡಿದ್ದಾರೆ. ಇದನ್ನೂ ಓದಿ: ಗಾಳಿಯಲ್ಲಿ ಗುಂಡುಹಾರಿಸಿ ಹಿಡಿಯಲು ಮುಂದಾದ ಅರಣ್ಯಾಧಿಕಾರಿಗಳ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಗಂಧಚೋರರು

    ಮಹಿಳೆ ರೇಗುತ್ತಿದ್ದಂತೆಯೇ ಹಿಂಬದಿ ಸವಾರರು ಸ್ಕೂಟಿಯಿಂದ ಇಳಿದಿದ್ದಾರೆ. “ತುರ್ತು ಕೆಲಸ ಇತ್ತು. ಅದಕ್ಕಾಗಿ ಹೆಲ್ಮೆಟ್‌ ಇಲ್ಲದೇ ಬಂದಿದ್ದೇವೆ” ಎಂದು ಉಡಾಫೆ ಉತ್ತರ ಕೂಡ ಮಹಿಳಾ ಪೊಲೀಸರು ನೀಡಿದ್ದಾರೆ.

    “ನೀವು ಏನ್ ಏನ್ ರೂಲ್ಸ್ ಬ್ರೇಕ್ ಮಾಡಿದೀರಾ ನೋಡಿಕೊಳ್ಳಿ. ದಯವಿಟ್ಟು ಗಾಡಿಯಿಂದ ಇಳಿಯಿರಿ, ಹೆಲ್ಮೆಟ್ ಹಾಕಿಕೊಳ್ಳಿ. ಇವರೇ ರೂಲ್ಸ್ ಮಾಡ್ತಾರೇ ಅಂತ ಹೇಳಲ್ವಾ ಎಂದು ಮಹಿಳೆ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಮಹಿಳೆ ಈ ವೀಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ವೀಡಿಯೋ ವೈರಲ್‌ ಆಗಿದೆ. ಇದನ್ನೂ ಓದಿ: ನಾವು ಯಾವುದೇ ರೌಡಿಗಳನ್ನು ಸೇರಿಸಿಕೊಂಡಿಲ್ಲ, ಪ್ರೋತ್ಸಾಹ ನೀಡಿಲ್ಲ: ಬೊಮ್ಮಾಯಿ

    Live Tv
    [brid partner=56869869 player=32851 video=960834 autoplay=true]

  • ಪರೀಕ್ಷೆ ಬರೆಯಲು ಹೋದ ತಾಯಂದಿರು – ಮಕ್ಳನ್ನು ನೋಡ್ಕೊಂಡ ಪೇದೆಗಳಿಗೆ ಮೆಚ್ಚುಗೆ

    ಪರೀಕ್ಷೆ ಬರೆಯಲು ಹೋದ ತಾಯಂದಿರು – ಮಕ್ಳನ್ನು ನೋಡ್ಕೊಂಡ ಪೇದೆಗಳಿಗೆ ಮೆಚ್ಚುಗೆ

    ದಿಸ್ಪುರ್: ಪರೀಕ್ಷೆ ಬರೆಯಲು ಹೋದ ತಾಯಂದಿರ ಮಕ್ಕಳನ್ನು ನೋಡಿಕೊಂಡ ಅಸ್ಸಾಂನ ಮಹಿಳಾ ಪೇದೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಅಸ್ಸಾಂನ ಮಹಿಳಾ ಪೇದೆಗಳು ಮಕ್ಕಳನ್ನು ಎತ್ತಿಕೊಂಡು ಅವರನ್ನು ನೋಡಿಕೊಳ್ಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ಸಾಕಷ್ಟು ಶೇರ್ ಆಗುತ್ತಿದ್ದು, ಅನೇಕರು ಪೇದೆಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ತರಗತಿ ಹೊರಗೆ ನಿಂತ ಬಾಲಕಿ- ಫೋಟೋ ವೈರಲ್ ಆಗ್ತಿದ್ದಂತೆ ಅದೇ ಶಾಲೆಯಲ್ಲಿ ದಾಖಲಾತಿ

    ಅಸ್ಸಾಂ ಪೊಲೀಸರು, ಇಬ್ಬರು ಮಹಿಳಾ ಪೇದೆಗಳು ಮಗುವನ್ನು ಎತ್ತಿಕೊಂಡು ಸಂತೈಸುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ, “ತಾಯಿಯಾಗುವುದು ಒಂದು ಕ್ರಿಯೆ. ನೀವು ಅದನ್ನು ಮಾಡಬೇಕಾಗುತ್ತದೆ. ಅಸ್ಸಾಂ ಪೊಲೀಸರು ದಾರಂಗ್ ಜಿಲ್ಲೆಯಲ್ಲಿ ಈ ಮಕ್ಕಳ ತಾಯಂದಿರು ಶಿಕ್ಷಕರ ಅರ್ಹತಾ ಪರೀಕ್ಷೆ ಬರೆಯಲು ಹೋಗಿದ್ದರು. ಈ ವೇಳೆ ಅವರವರ ಮಕ್ಕಳನ್ನು ಇಬ್ಬರು ಪೇದೆಗಳು ನೋಡಿಕೊಂಡಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಭಿಕ್ಷೆ ಬೇಡುವ ಮಕ್ಕಳಿಗಾಗಿ ಶಾಲೆ ತೆರೆದ ಪೊಲೀಸರು – 450 ಮಕ್ಕಳಿಗೆ ವಿದ್ಯಾಭ್ಯಾಸ

    ನವೆಂಬರ್ 10ರಂದು ಅಸ್ಸಾಂನಲ್ಲಿ ಈ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಆಯ್ಕೆಯಾದ ಶಿಕ್ಷಕರು ಮೊದಲನೇ ತರಗತಿಯಿಂದ 8ನೇ ತರಗತಿವರೆಗೂ ಕಲಿಸಲು ಅರ್ಹರಾಗುತ್ತಾರೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಹಲವು ಮಂದಿ ಪೇದೆಗಳನ್ನು ಹೊಗಳಿದ್ದಾರೆ. ಕೆಲವರು ‘ಸೆಲ್ಯೂಟ್’ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೆ ಕೆಲವರು ‘ಸೆಲ್ಯೂಟ್ ಮ್ಯಾಮ್. ನೀವು ಸೂಪರ್ ಮೇಡಂ’ ಎಂದು ಟ್ವೀಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.