Tag: Women Constable

  • ಕಳ್ಳನಿಗೆ ಮಹಿಳಾ ಪೇದೆಯ ಸಿಡಿಆರ್‌ – ಪೊಲೀಸರಿಂದಲೇ ಮಾರಾಟ

    ಕಳ್ಳನಿಗೆ ಮಹಿಳಾ ಪೇದೆಯ ಸಿಡಿಆರ್‌ – ಪೊಲೀಸರಿಂದಲೇ ಮಾರಾಟ

    ಕಲಬುರಗಿ: ನಗರದಲ್ಲಿ ಮತ್ತೆ ಪೊಲೀಸರ (Kalaburgi) ಕಳ್ಳಾಟ ಬಯಲಾಗಿದ್ದು, ಈ ಬಾರಿ ಮಹಿಳಾ ಪೇದೆಯ (Women Constable) ಮೊಬೈಲ್ ನಂಬರ್‌ನ ಸಿಡಿಆರ್‌ (ಕರೆ ವಿವರದ ದಾಖಲೆಗಳು) ಅನ್ನು ಕಳ್ಳನಿಗೆ ಪೊಲೀಸರು ಮಾರಾಟ ಮಾಡಿದ್ದಾರೆ.

    ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಮಹಿಳಾ ಪೇದೆಗೆ ಒನ್ ಸೈಡ್ ಲವ್ (Onne Side Love) ಮಾಡುತ್ತಿದ್ದ ಅಶೋಕ ನಗರ ಠಾಣಾ ವ್ಯಾಪ್ತಿಯ ಕಳ್ಳನಾದ ಮಹೇಶ್ ಎಂಬವನಿಗೆ ಪೊಲೀಸರು (Police) ಸಿಡಿಆರ್ ಮಾರಾಟ ಮಾಡಿದ್ದಾರೆ.  ಇದನ್ನೂ ಓದಿ: ಅನುದಾನ ಖಾಲಿ – 3 ವರ್ಷ ಜಾರಿಯಿದ್ದ ಮಹಿಳಾ ಪರ ಯೋಜನೆ ಸ್ಥಗಿತ

    ಈ ಸಿಡಿಆರ್ ಬಳಸಿ ಆ ಕಳ್ಳ ಮಹಿಳಾ ಪೇದೆಗೆ ಪ್ರೀತಿಸುವಂತೆ ಮಾನಸಿಕ ಕಿರುಕುಳ ನೀಡಿದ್ದಾನೆ. ಪೇದೆ ಪ್ರೀತಿಯನ್ನು ಒಪ್ಪದಾಗ ಕರೆ ಮಾಹಿತಿಯನ್ನು ಆಕೆಯ ಜೊತೆ ನಿಶ್ಚಿತಾರ್ಥವಾಗಿದ್ದ ಯುವಕನಿಗೆ ಕಳುಹಿಸಿ ನಾವಿಬ್ಬರು ಪರಸ್ಪರ ಪ್ರೀತಿಸುತ್ತಿರುವುದಾಗಿ ಹೇಳಿದ್ದಾನೆ. ಕಳ್ಳನ ಮಾತನ್ನು ನಂಬಿದ ಆ ಯುವಕ ಮಹಿಳಾ ಪೇದೆ ಜೊತೆ ಮಾಡಿಕೊಂಡಿದ್ದ ನಿಶ್ಚಿತಾರ್ಥವನ್ನು ರದ್ದು ಮಾಡಿದ್ದಾನೆ.

    ನೊಂದ ಪೇದೆ ಈಗ ಸಿಡಿಆರ್ ನೀಡಿರುವ ಅಧಿಕಾರಿಗಳ ವಿರುದ್ಧ ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನ್ ಗೆ ದೂರು ನೀಡಿದ್ದಾರೆ. ತನಿಖೆ ವೇಳೆ ಮಹಿಳಾ ಠಾಣೆಯಲ್ಲಿ ದಾಖಲಾದ ಕ್ರೈ ನಂಬರ್ 47 ರ ತನಿಖೆ ಹೆಸರಲ್ಲಿ ಮಹಿಳಾ ಪೇದೆ ನಂಬರ್ ಸೇರಿಸಿ ಸಿಡಿಆರ್ ಕೊಟ್ಟಿರುವ ವಿಷಯ ಬೆಳಕಿಗೆ ಬಂದಿದೆ.

  • ಠಾಣೆಯಲ್ಲೇ ಮಹಿಳಾ ಪೇದೆಯ ಸಮವಸ್ತ್ರ ಹರಿದುಹಾಕಿ ಹಲ್ಲೆ – ರೇಪ್ ಆರೋಪಿಯ ಸಂಬಂಧಿಕರು ಅರೆಸ್ಟ್

    ಠಾಣೆಯಲ್ಲೇ ಮಹಿಳಾ ಪೇದೆಯ ಸಮವಸ್ತ್ರ ಹರಿದುಹಾಕಿ ಹಲ್ಲೆ – ರೇಪ್ ಆರೋಪಿಯ ಸಂಬಂಧಿಕರು ಅರೆಸ್ಟ್

    ಲಕ್ನೋ: ಪೊಲೀಸ್ ಠಾಣೆಯೊಳಗೆ ಮಹಿಳಾ ಪೇದೆಯೊಬ್ಬಳನ್ನು (Women Constable) ಅಮಾನುಷವಾಗಿ ನಡೆಸಿಕೊಂಡು ಆಕೆಯ ಸಮವಸ್ತ್ರವನ್ನು ಹರಿದುಹಾಕಿದ ಆರೋಪದ ಮೇಲೆ ಅತ್ಯಾಚಾರ (Rape) ಆರೋಪಿಯ ಐದು ಕುಟುಂಬ ಸದಸ್ಯರನ್ನು ಬಂಧಿಸಿದ ಘಟನೆ ಉತ್ತರ ಪ್ರದೇಶದ (Uttar Pradesh) ಬರೇಲಿಯಲ್ಲಿ (Bareli) ನಡೆದಿದೆ.

    ಭಾನುವಾರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಬ್ಬು (23) ಎಂಬಾತನನ್ನು ಬಂಧಿಸಲಾಗಿತ್ತು. ಬಂಧನಕ್ಕೆ ಸಂಬಂಧಿಸಿದಂತೆ ಆತನ ಸಂಬಂಧಿಕರು ಶಿಶ್‌ಗಢ ಪೊಲೀಸ್ ಠಾಣೆಯಲ್ಲಿ ಗಲಾಟೆ ನಡೆಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜ್‌ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ. ಇದನ್ನೂ ಓದಿ: 3 ದಿನದಲ್ಲೇ ಗೋಲ್ಡನ್ ಟೆಂಪಲ್ ಬಳಿ 2ನೇ ಬಾರಿ ಸ್ಫೋಟ

    ಮಾರ್ಚ್ 20ರಂದು ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ತಂದೆ ಶಬ್ಬು ವಿರುದ್ಧ ದೂರು ದಾಖಲಿಸಿದ್ದರು. ಈ ಕುರಿತು ಆತನ ಕುಟುಂಬದವರು ಆತನನ್ನು ಸುಮ್ಮನೆ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಆತನ ಕುಟುಂಬ ಸದಸ್ಯರಾದ ಶಬ್ಬೀರ್, ಶಹನಾಜ್, ತರನ್ನುಮ್, ಫೂಲ್ಜಹಾನ್ ಮತ್ತು ಶೈದಾನ್ ಪೊಲೀಸ್ ಠಾಣೆಯಲ್ಲಿ ಗಲಾಟೆ ನಡೆಸಿದ್ದಾರೆ. ಈ ವೇಳೆ ಮಹಿಳಾ ಪೇದೆಗೆ ಹಲ್ಲೆ ನಡೆಸಿ, ಆಕೆಯ ಸಮವಸ್ತ್ರವನ್ನು ಹರಿದುಹಾಕಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಇದನ್ನೂ ಓದಿ: ಇಬ್ಬರ ತಲೆಗೆ ಒಟ್ಟು 11 ಲಕ್ಷ ಘೋಷಣೆಯಾಗಿದ್ದ ನಕ್ಸಲರ ಎನ್‍ಕೌಂಟರ್

    ಈ ವೇಳೆ ಇತರೆ ಪೊಲೀಸ್ ಸಿಬ್ಬಂದಿಗಳು ಮಧ್ಯಪ್ರವೇಶಿಸಿ ಐದು ಜನರನ್ನು ಹಿಡಿದು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಈ ಕುರಿತು ಎಫ್‌ಐಆರ್ (FIR) ದಾಖಲಾಗಿದ್ದು, ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: ವಾಯುಸೇನೆಯ ವಿಮಾನ ಪತನ- ಮೂವರ ದುರ್ಮರಣ

  • ಚಲಿಸುತ್ತಿದ್ದ ರೈಲಿನಿಂದ ಪ್ರಯಾಣಿಕರನ್ನು ರಕ್ಷಿಸಿದ ಮಹಿಳಾ ಕಾನ್ಸ್‌ಟೇಬಲ್ – ವೀಡಿಯೋ ವೈರಲ್

    ಚಲಿಸುತ್ತಿದ್ದ ರೈಲಿನಿಂದ ಪ್ರಯಾಣಿಕರನ್ನು ರಕ್ಷಿಸಿದ ಮಹಿಳಾ ಕಾನ್ಸ್‌ಟೇಬಲ್ – ವೀಡಿಯೋ ವೈರಲ್

    ಲಕ್ನೋ: ಚಲಿಸುತ್ತಿದ್ದ ರೈಲಿನ ಕೆಳಗೆ ಸಿಲುಕಿಕೊಳ್ಳುತ್ತಿದ್ದ ಮಹಿಳೆಯನ್ನು, ಮಹಿಳಾ ಕಾನ್ಸ್‌ಟೇಬಲ್ ರಕ್ಷಿಸಿರುವ ಘಟನೆ ಲಕ್ನೋ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಮಹಿಳಾ ಕಾನ್ಸ್‌ಟೇಬಲ್ ಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

    ಫೆಬ್ರವರಿ 23ರಂದು ರೈಲ್ವೆ ಸಚಿವಾಲಯವು ಈ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿನೀತ ಕುಮಾರಿ ಎಂಬ ಮಹಿಳಾ ಕಾನ್ಸ್‌ಟೇಬಲ್ ಚಲಿಸುತ್ತಿದ್ದ ರೈಲಿನಿಂದ ಪ್ರಯಾಣಿಕರೊಬ್ಬರ ಪ್ರಾಣ ಉಳಿಸಿ ಮತ್ತೊಮ್ಮೆ ಇಂತಹ ಸಾಹಸಗಳಿಗೆ ಕೈ ಹಾಕದಂತೆ ಮಹಿಳೆಗೆ ಮನವಿ ಮಾಡಿದ್ದಾರೆ.

    ವೀಡಿಯೋದಲ್ಲಿ ಮಹಿಳೆಯ ಸ್ನೇಹಿತನೊಂದಿಗೆ ಬರುತ್ತಾಳೆ. ಈ ವೇಳೆ ಆಕೆಯ ಸ್ನೇಹಿತ ಚಲಿಸುತ್ತಿದ್ದ ರೈಲನ್ನು ಸುಲಭವಾಗಿ ಏರುತ್ತಾನೆ. ಆತನ ಹಿಂದೆ ಮಹಿಳೆ ಕೂಡ ರೈಲನ್ನು ಏರಲು ಪ್ರಯತ್ನಿಸಿ ಕಾಲು ಜಾರಿ ಕೆಳಗೆ ಬೀಳುತ್ತಾರೆ. ರೈಲು ಮತ್ತು ಫ್ಲಾಟ್‍ಫಾರ್ಮ್ ಮಧ್ಯೆ ಮಹಿಳೆ ಸಿಲುಕಿಕೊಳ್ಳುತ್ತಿದಂತೆಯೇ ಕರ್ತವ್ಯದಲ್ಲಿದ್ದ ವಿನೀತ ಕುಮಾರಿ ಕೂಡಲೇ ಓಡಿ ಬಂದ ಮಹಿಳೆಯನ್ನು ತಮ್ಮ ಕಡೆಗೆ ಎಳೆದುಕೊಳ್ಳುತ್ತಾರೆ.

    ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಸುಮಾರು 49.7 ಸಾವಿರ ವ್ಯೂವ್ಸ್ ಪಡೆದಿದ್ದು, 2.8 ಸಾವಿರ ಲೈಕ್ಸ್ ಪಡೆದುಕೊಂಡಿದೆ. ಜೊತೆಗೆ ಕಮೆಂಟ್‍ಗಳ ಸುರಿಮಳೆ ಹರಿದು ಬರುತ್ತಿದೆ.

  • ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದ ವ್ಯಕ್ತಿ – ಪ್ರಯಾಣಿಕನ ಪ್ರಾಣ ಉಳಿಸಿದ ಮಹಿಳಾ ಕಾನ್ಸ್‌ಟೇಬಲ್

    ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದ ವ್ಯಕ್ತಿ – ಪ್ರಯಾಣಿಕನ ಪ್ರಾಣ ಉಳಿಸಿದ ಮಹಿಳಾ ಕಾನ್ಸ್‌ಟೇಬಲ್

    ಹೈದರಾಬಾದ್: ಚಲಿಸುತ್ತಿದ್ದ ರೈಲಿನಿಂದ ಕಾಲುಜಾರಿ ಕೆಳಗೆ ಬಿದ್ದ ವ್ಯಕ್ತಿ ಪ್ರಾಣವನ್ನು ರೈಲ್ವೆ ರಕ್ಷಣಾ ಪಡೆಯ ಮಹಿಳಾ ಕಾನ್ಸ್‌ಟೇಬಲ್ ಉಳಿಸಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ಘಟನೆ ಕುರಿತ ಸಣ್ಣ ವೀಡಿಯೋವನ್ನು ರೈಲ್ವೆ ಸಚಿವಾಲಯವು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಮಹಿಳಾ ಕಾನ್ಸ್‌ಟೇಬಲ್ ಕಾರ್ಯವನ್ನು ಶ್ಲಾಘಿಸಿದೆ. ಇದೀಗ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

    ವೀಡಿಯೋನಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲನ್ನು ಏರಲು ಮುಂದಾಗಿ ಕಾಲು ಜಾರಿ ಕೆಳಗೆ ಬೀಳುತ್ತಾನೆ. ಇದನ್ನು ಗಮನಿಸಿದ ಅಲ್ಲೇ ಇದ್ದ ಮಹಿಳಾ ಕಾನ್ಸ್‌ಟೇಬಲ್ ಒಬ್ಬರು ಕೂಡಲೇ ಓಡಿ ಹೋಗಿ ಕೆಳಗೆ ಬಿದ್ದ ಪ್ರಯಾಣಿಕನನ್ನು ಹಿಂದಕ್ಕೆ ಎಳೆದುಕೊಳ್ಳುತ್ತಾರೆ. ಸದ್ಯ ಮಹಿಳಾ ಕಾನ್ಸ್‌ಟೇಬಲ್ ನನ್ನು ಮೇರಿ ಸಾಹೇಲಿ ಎಂದು ಗುರುತಿಸಲಾಗಿದ್ದು, ಈಕೆ ಆರ್‍ಪಿಎಫ್ ಮಹಿಳಾ ಕಾನ್ಸ್‌ಟೇಬಲ್ ಆಗಿದ್ದಾರೆ.

    ಒಟ್ಟಾರೆ ಚಲಿಸುತ್ತಿದ್ದ ರೈಲಿನಿಂದ ವ್ಯಕ್ತಿಯ ಪ್ರಾಣ ಉಳಿಸಿ ಮಾನವೀಯತೆ ಮೆರೆದಿರುವ ಮಹಿಳಾ ಕಾನ್ಸ್‌ಟೇಬಲ್ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ನೆಟ್ಟಿಗರು ವ್ಯಕ್ತಿಯ ಪ್ರಾಣವನ್ನು ಉಳಿಸಿದಕ್ಕಾಗಿ ಕಾನ್ಸ್‌ಟೇಬಲ್ ಗೆ ಧನ್ಯವಾದ ತಿಳಿಸುವುದರ ಜೊತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಮಹಿಳಾ ಪೊಲೀಸ್ ಪೇದೆ ಬಾವಿಯಲ್ಲಿ ಶವವಾಗಿ ಪತ್ತೆ

    ಮಹಿಳಾ ಪೊಲೀಸ್ ಪೇದೆ ಬಾವಿಯಲ್ಲಿ ಶವವಾಗಿ ಪತ್ತೆ

    ಕಲಬುರಗಿ: ಮಹಿಳಾ ಪೊಲೀಸ್ ಪೇದೆಯೊಬ್ಬರು ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಯಡ್ರಾಮಿ ತಾಲೂಕಿನ ಸುಂಬಡ ಗ್ರಾಮದಲ್ಲಿ ನಡೆದಿದೆ.

    34 ವರ್ಷದ ಸುರೇಖಾ ಬಾವಿಯಲ್ಲಿ ಶವವಾಗಿ ಪತ್ತೆಯಾದ ಮಹಿಳಾ ಪೇದೆ. ಮೃತ ಸುರೇಖಾ ಕಲಬುರಗಿ ನಗರದಲ್ಲಿ ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಭಾನುವಾರ ಸಂಜೆ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

    ಕೆಲ ತಿಂಗಳ ಹಿಂದೆ ಸುರೇಖಾ ಪತಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದರು. ಇದೀಗ ಮಹಿಳಾ ಪೇದೆ ಸುರೇಖಾ ಕೂಡ ಸಾವನ್ನಪ್ಪಿದ್ದಾರೆ. ಆದರೆ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಇದು ಆತ್ಮಹತ್ಯೆಯೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ ಎಂದು ಸಂಬಂಧಿಕರು ಹೇಳಿದ್ದಾರೆ.

    ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಿವಾಹಿತ ಪ್ರಿಯಕರನನ್ನ ಪತಿ ಅಂತ ಸುಳ್ಳು ಹೇಳಿ ಕ್ವಾರಂಟೈನ್ ಆದ ಮಹಿಳಾ ಕಾನ್ಸ್‌ಟೇಬಲ್

    ವಿವಾಹಿತ ಪ್ರಿಯಕರನನ್ನ ಪತಿ ಅಂತ ಸುಳ್ಳು ಹೇಳಿ ಕ್ವಾರಂಟೈನ್ ಆದ ಮಹಿಳಾ ಕಾನ್ಸ್‌ಟೇಬಲ್

    – ಕ್ವಾರಂಟೈನ್ ಕೇಂದ್ರಕ್ಕೆ ನಿಜವಾದ ಪತ್ನಿ ಎಂಟ್ರಿ

    ಮುಂಬೈ: ಮಹಿಳಾ ಕಾನ್ಸ್‌ಟೇಬಲ್ ತಾವು ಸಂಬಂಧ ಹೊಂದಿದ್ದ ವಿವಾಹಿತ ಪುರುಷನೊಂದಿಗೆ ಕ್ವಾರಂಟೈನ್ ಆಗಿದ್ದಾರೆ. ಆದರೆ ಪೇದೆ ಕ್ವಾರಂಟೈನ್ ಆಗುವಾಗ ಆತನನ್ನು ತನ್ನ ಪತಿ ಎಂದು ಸುಳ್ಳು ಹೇಳಿರುವ ವಿಚಾರ ಬಹಿರಂಗವಾಗಿದೆ.

    ಮಹಿಳೆ ನಾಗ್ಪುರ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚೆಗೆ ಮಹಿಳಾ ಕಾನ್ಸ್‌ಟೇಬಲ್ ಸಹೋದ್ಯೋಗಿಗೆ ಕೊರೊನಾ ಪಾಸಿಟವ್ ಬಂದಿದೆ. ಹೀಗಾಗಿ ಪಾಸಿಟಿವ್ ಬಂದಿದ್ದ ಸಹೋದ್ಯೋಗಿಗೆ ಪ್ರಾಥಮಿಕ ಸಂಪರ್ಕವಾಗಿದ್ದ ಕಾರಣ ಮಹಿಳಾ ಕಾನ್ಸ್‌ಟೇಬಲ್ ಅನ್ನು ಕ್ವಾರಂಟೈನ್ ಮಾಡಬೇಕಿತ್ತು.

    ಅಧಿಕಾರಿಗಳು ಈ ವಿಚಾರವನ್ನು ಪೇದೆಗೆ ತಿಳಿಸಿದ್ದಾರೆ. ಆಗ ಮಹಿಳಾ ಕಾನ್ಸ್‌ಟೇಬಲ್, ನನ್ನ ಪತಿ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನನ್ನ ಜೊತೆ ಅವರನ್ನು ಕ್ವಾರಂಟೈನ್ ಮಾಡಬೇಕು ಎಂದು ಅಧಿಕಾರಿಗಳ ಬಳಿ ಕೇಳಿಕೊಂಡಿದ್ದಾರೆ. ಅದರಂತೆಯೇ ಇಬ್ಬರನ್ನು ಒಟ್ಟಿಗೆ ಪೊಲೀಸ್ ತರಬೇತಿ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇತ್ತ ಕ್ವಾರಂಟೈನ್ ಆಗಿದ್ದ ವ್ಯಕ್ತಿಯ ನಿಜವಾದ ಪತ್ನಿ ಮೂರು ದಿನನಗಳಾದರೂ ಮನೆಗೆ ಬಂದಿಲ್ಲ ಎಂದು ಆತಂಕಗೊಂಡಿದ್ದರು. ನಂತರ ಪತಿ ಮಹಿಳಾ ಕಾನ್ಸ್‌ಟೇಬಲ್ ಜೊತೆ ಕ್ವಾರಂಟೈನ್ ಆಗಿರುವ ವಿಚಾರವನ್ನು ತಿಳಿದುಕೊಂಡಿದ್ದಾರೆ. ಕೂಡಲೇ ಕ್ವಾರಂಟೈನ್ ಕೇಂದ್ರಕ್ಕೆ ವ್ಯಕ್ತಿಯ ಪತ್ನಿ ಬಂದಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಕ್ವಾರಂಟೈನ್ ಸೆಂಟರ್‌ಗೆ ಬಿಟ್ಟಿಲ್ಲ. ನಂತರ ಆಕೆ ಪತಿ ವಿರುದ್ಧ ಬಜಾಜ್ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ಪೊಲೀಸ್ ಆಯುಕ್ತ ಡಾ.ಭೂಷಣ್‍ಕುಮಾರ್ ಉಪಾಧ್ಯಾಯ ಅವರನ್ನು ಭೇಟಿಯಾಗಿದ್ದಾರೆ.

    ಮಹಿಳೆ ನೀಡಿದ ದೂರಿನ ಅನ್ವಯ ಪೊಲೀಸ್ ಆಯುಕ್ತ ಡಾ.ಭೂಷಣ್‍ಕುಮಾರ್ ಉಪಾಧ್ಯಾಯ ಈ ಬಗ್ಗೆ ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ.

    ಮಹಿಳಾ ಕಾನ್ಸ್‌ಟೇಬಲ್ ಮತ್ತು ಪುರುಷ ಕಳೆದ ವರ್ಷ ಸರ್ಕಾರಿ ಯೋಜನೆಯೊಂದರಲ್ಲಿ ಭೇಟಿಯಾಗಿದ್ದರು. ಅಂದಿನಿಂದ ಇಬ್ಬರಿಬ್ಬರು ಸಂಬಂಧ ಹೊಂದಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಸದ್ಯಕ್ಕೆ ವ್ಯಕ್ತಿಯನ್ನು ಮತ್ತೊಂದು ಕ್ವಾರಂಟೈನ್ ಕ್ರೇಂದ್ರಕ್ಕೆ ವರ್ಗಾಹಿಸಲಾಗಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ.

  • ಮಗುವನ್ನ ಎತ್ತಿಕೊಂಡೇ ಕರ್ತವ್ಯಕ್ಕೆ ಕಾನ್ಸ್‌ಟೇಬಲ್ ಹಾಜರ್

    ಮಗುವನ್ನ ಎತ್ತಿಕೊಂಡೇ ಕರ್ತವ್ಯಕ್ಕೆ ಕಾನ್ಸ್‌ಟೇಬಲ್ ಹಾಜರ್

    – ಕರ್ತವ್ಯವೂ ಮುಖ್ಯ ಎಂದ ಪೇದೆ
    – ಪತಿ ಸ್ಮರ್ಧಾತ್ಮಕ ಪರೀಕ್ಷೆಯಲ್ಲಿ ಭಾಗಿ

    ಲಕ್ನೋ: ಮಹಿಳಾ ಕಾನ್ಸ್‌ಟೇಬಲ್ ತನ್ನ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡೇ ಕರ್ತವ್ಯಕ್ಕೆ ಹಾಜರಾಗಿರುವ ಮಾಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

    ಪ್ರೀತಿ ರಾಣಿ ಒಂದುವರೆ ವರ್ಷದ ಮಗುವನ್ನು ಎತ್ತಿಕೊಂಡು ಕರ್ತವ್ಯ ಪಾಲನೆ ಮಾಡಿರುವ ಕಾನ್ಸ್‌ಟೇಬಲ್. ಇವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಸಿಬ್ಬಂದಿ ಭದ್ರತೆಯ ಭಾಗವಾಗಿ ಕರ್ತವ್ಯದಲ್ಲಿದ್ದರು.

    ಇವನ ತಂದೆ ಸ್ಮರ್ಧಾತ್ಮಕ ಪರೀಕ್ಷೆಯೊಂದರಲ್ಲಿ ಭಾಗಿಯಾಗಿದ್ದರು. ಆದ್ದರಿಂದ ಅವರು ಮಗುವನ್ನು ನೋಡಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ನಾನೇ ಮಗನನ್ನು ನೋಡಿಕೊಳ್ಳಬೇಕಾಯಿತು. ಕರ್ತವ್ಯವೂ ಮುಖ್ಯವಾಗಿದೆ. ಆದ್ದರಿಂದ ನಾನು ಮಗುವನ್ನು ಇಲ್ಲಿಗೆ ಕರೆದುಕೊಂಡು ಬರಬೇಕಾಯಿತು ಎಂದು ಕಾನ್ಸ್‌ಟೇಬಲ್ ಪ್ರೀತಿ ರಾಣಿ ಹೇಳಿದ್ದಾರೆ.

    ಯೋಗಿ ಆದಿತ್ಯನಾಥ್ ಎರಡು ದಿನಗಳ ಕಾಲ ಗ್ರೇಟರ್ ನೋಯ್ಡಾದ ಗೌತಮ್ ಬುದ್ಧ ನಗರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಆದಿತ್ಯನಾಥ್  ಅವರು 1,452 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಸಂಸದರಾದ ಮಹೇಶ್ ಶರ್ಮಾ, ತರುಣ್ ವಿಜಯ್, ಶಾಸಕರಾದ ಪಂಕಜ್ ಸಿಂಗ್ ಮತ್ತು ಧೀರೇಂದ್ರ ಸಿಂಗ್ ಸೇರಿದಂತೆ ಇನ್ನೂ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ಇದೀಗ ಕಾನ್ಸ್‌ಟೇಬಲ್ ಪ್ರೀತಿ ರಾಣಿ ಅವರು ತಮ್ಮ ಮಗುವನ್ನು ಎತ್ತಿಕೊಂಡು ಕರ್ತವ್ಯಕ್ಕೆ ಹಾಜರಾಗಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ಮಹಿಲಾ ಕಾನ್‍ಸ್ಟೇಬಲ್ ಕರ್ತವ್ಯ ಪಾಲನೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಪ್ರೀತ್ಸೆ ಎಂದು ಮಹಿಳಾ ಪೇದೆ ಹಿಂದೆ ಬಿದ್ದ ಪಿಸಿ ವಿರುದ್ಧ ದೂರು ದಾಖಲು

    ಪ್ರೀತ್ಸೆ ಎಂದು ಮಹಿಳಾ ಪೇದೆ ಹಿಂದೆ ಬಿದ್ದ ಪಿಸಿ ವಿರುದ್ಧ ದೂರು ದಾಖಲು

    ಬೆಂಗಳೂರು: ಪಿಸಿಯೊಬ್ಬ ಮಹಿಳಾ ಪೇದೆಗೆ ಪ್ರೀತ್ಸೆ ಪ್ರೀತ್ಸೆ ಎಂದು ಹಿಂದೆ ಬಿದ್ದಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಸಂತೋಷ್ ಪ್ರೀತ್ಸೆ ಎಂದು ಹಿಂದೆ ಬಿದ್ದಿದ್ದ ಪಾಗಲ್ ಪೇದೆ. ಸಂತೋಷ್ ಹಾಗೂ ಮಹಿಳಾ ಪೇದೆ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಇಬ್ಬರಿಗೂ ಪರಿಚಯವಾಗಿದೆ. ಬಳಿಕ ಸಂತೋಷ್, ಮಹಿಳಾ ಪೇದೆಗೆ ಪ್ರಪೋಸ್ ಮಾಡಿದ್ದನು.

    ಇವರಿಬ್ಬರ ಮದುವೆಗೆ ಸಂತೋಷ್ ಮನೆಯಲ್ಲಿ ಒಪ್ಪದಿದ್ದಾಗ ಮಹಿಳೆ ಆತನ ಜೊತೆ ಮಾತನಾಡುವುದನ್ನು ಬಿಟ್ಟಿದ್ದಳು. ಬಳಿಕ ಸಂತೋಷ್ ಪ್ರೀತಿಸುವಂತೆ ಮಹಿಳೆಗೆ ದುಂಬಾಲು ಬಿದ್ದಿದ್ದನು. ಇದರಿಂದ ಮನನೊಂದ ಮಹಿಳಾ ಪೇದೆ ಅಶೋಕ್‍ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‍ಐಆರ್ ದಾಖಲಾಗಿದೆ.

    ದೂರಿನಲ್ಲಿ ಏನಿದೆ?
    ನಾನು ಆಟೋಮೆಷನ್(ಟಿಎಂಸಿ)ನಲ್ಲಿ ಪಿಸಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇದಕ್ಕೂ ಮೊದಲು ವಿವೇಕನಗರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದೆ. ಇದೇ ಠಾಣೆಯಲ್ಲಿ ಸಂತೋಷ್ ಕುಮಾರ್ ಕೆಲಸ ಮಾಡುತ್ತಿದ್ದರು. ಒಂದು ದಿನ ಸಂತೋಷ್ ಅವರು ನನಗೆ ಪ್ರಪೋಸ್ ಮಾಡಿದ್ದರು. ನಾನು ಕೂಡ ಅವರ ಪ್ರೀತಿಯನ್ನು ಒಪ್ಪಿದೆ. ಬಳಿಕ ಸಂತೋಷ್ ಮನೆಯವರು ನಮ್ಮ ಪ್ರೀತಿಯನ್ನು ಒಪ್ಪದಿದ್ದಾಗ ನಾನು ಅವರ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದೆ.

    ನಾನು ಮಾತನಾಡುವುದನ್ನು ನಿಲ್ಲಿಸಿದ್ದಕ್ಕೆ ಸಂತೋಷ್ ನಾನು ಕೆಲಸಕ್ಕೆ ಹೋಗುವಾಗ ಬರುವಾಗ ಹಿಂಬಾಲಿಸಿ ಮಾತನಾಡಿಸುತ್ತಿದ್ದು, ಬೆದರಿಕೆ ಕೂಡ ಹಾಕುತ್ತಿದ್ದಾರೆ. ಅಕ್ಟೊಬರ್ 3 ಹಾಗೂ 4ರಂದು ಸಂತೋಷ್ ನನ್ನ ಮನೆ ಬಳಿ ಕುಡಿದು ಬಂದು ಕೆಟ್ಟದಾಗಿ ನಿಂದಿಸಲು ಶುರು ಮಾಡಿದ್ದರು. ಅದಾದ ಬಳಿಕ ಮತ್ತೆ 5ರಂದು ಮನೆ ಬಳಿ ಬಂದು ಕೆಟ್ಟದಾಗಿ ನಿಂದಿಸಿದಲ್ಲದೇ ನನ್ನ ಮೇಲೆ ಹಲ್ಲೆ ಕೂಡ ನಡೆಸಿದ್ದಾರೆ. ಹೀಗಾಗಿ ಸಂತೋಷ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಎಂದು ಮನವಿ ಮಾಡಿಕೊಳ್ಳುತ್ತೇನೆ.

  • ಕೋಲಾರ ಎಸ್‍ಪಿ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದ ಮಹಿಳಾ ಪೇದೆಗಳು

    ಕೋಲಾರ ಎಸ್‍ಪಿ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದ ಮಹಿಳಾ ಪೇದೆಗಳು

    ಕೋಲಾರ: ಸಾಮಾನ್ಯವಾಗಿ ಅಭಿಮಾನಿಗಳು ನೆಚ್ಚಿನ ನಟ-ನಟಿಯರು ಇಲ್ಲವಾದಲ್ಲಿ ರಾಜಕೀಯ ನಾಯಕರು, ಒಳ್ಳೆಯ ಪ್ರವಾಸಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಕಾಮನ್. ಆದರೆ ಕೋಲಾರದಲ್ಲಿ ತಮ್ಮ ನೆಚ್ಚಿನ ಹಿರಿಯ ಪೊಲೀಸ್ ಅಧಿಕಾರಿಯೊಂದಿಗೆ ಮಹಿಳಾ ಪೊಲೀಸ್ ಪೇದೆಗಳು ಸೆಲ್ಫಿಗಾಗಿ ಮುಗಿಬಿದ್ದ ಪ್ರಸಂಗವೊಂದು ವೈರಲ್ ಆಗಿದೆ.

    ಕೋಲಾರ ಎಸ್‍ಪಿ ರೋಹಿಣಿ ಕಟೋಜ್ ಅವರೊಂದಿಗೆ ತಮ್ಮ ಕೈ ಕೆಳಗೆ ಕೆಲಸ ಮಾಡುವ ಮಹಿಳಾ ಪೊಲೀಸ್ ಸಿಬ್ಬಂದಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಖುಷಿ ಪಟ್ಟಿದ್ದಾರೆ. ತಮ್ಮ ನೆಚ್ಚಿನ ಅಧಿಕಾರಿಯಾಗಿರುವ ಎಸ್‍ಪಿ ಮೇಡಂ ಜೊತೆಗೆ 30ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ ನಗರದ ಕವಾಯತು ಮೈದಾನದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

    ತಮ್ಮ ಕೆಳಗೆ ಕೆಲಸ ಮಾಡುವ ಮಹಿಳಾ ಸಿಬ್ಬಂದಿ ಸೆಲ್ಫಿ ತೆಗೆದುಕೊಂಡಿದ್ದಕ್ಕೆ ಎಸ್‍ಪಿ ರೋಹಿಣಿ ಕಟೋಜ್ ಖುಷಿಯಾಗಿ ಪೋಸ್ ಕೊಟ್ಟಿದ್ದಾರೆ. ಅಲ್ಲದೆ ಮತ್ತೊಮ್ಮ ಗ್ರೂಪ್ ಫೋಟೋ ತೆಗೆಸಿಕೊಳ್ಳುವ ಇಂಗಿತ ಕೂಡ ವ್ಯಕ್ತಪಡಿಸಿದ್ದಾರೆ.

  • ಪೊಲೀಸರಿಂದ ಠಾಣೆಯಲ್ಲಿಯೇ ಮಹಿಳಾ ಪೇದೆಗೆ ಸೀಮಂತ

    ಪೊಲೀಸರಿಂದ ಠಾಣೆಯಲ್ಲಿಯೇ ಮಹಿಳಾ ಪೇದೆಗೆ ಸೀಮಂತ

    ಮೈಸೂರು: ನಗರದ ಠಾಣೆಯಲ್ಲಿ ಮಹಿಳಾ ಪೊಲೀಸ್ ಪೇದೆಗೆ ಸೀಮಂತ ಕಾರ್ಯ ನಡೆದಿದೆ.

    ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಸಂಪ್ರದಾಯಬದ್ಧವಾಗಿ ಠಾಣೆಯ ಪೇದೆಯ ಸೀಮಂತ ಕಾರ್ಯ ನೆರವೇರಿದೆ. ಮನೆ ಮಂದಿಯಂತೆ ಸಹದ್ಯೋಗಿಗಳು ಠಾಣೆಯ ಪೇದೆ ರಕ್ಷಿತಾರಿಗೆ ಸೀಮಂತ ನೆರವೇರಿಸಿದ್ದಾರೆ. ಇದನ್ನೂ ಓದಿ: ಕುಟುಂಬಸ್ಥರಂತೆ ಸಿಬ್ಬಂದಿಯಿಂದ ಠಾಣೆಯಲ್ಲಿಯೇ ಸಬ್ ಇನ್ಸ್‌ಪೆಕ್ಟರ್‌ಗೆ ಸೀಮಂತ!

    ಠಾಣೆಯ ಇನ್ಸ್ ಪೆಕ್ಟರ್ ನಾಗೇಗೌಡ ನೇತೃತ್ವದಲ್ಲಿ ಸೀಮಂತ ಕಾರ್ಯ ನಡೆದಿದ್ದು, ಸಂಪ್ರದಾಯದಂತೆ ಸೀಮಂತ ಕಾರ್ಯದಲ್ಲಿ ಸಿಬ್ಬಂದಿಗಳು ಭಾಗಿಯಾಗಿದ್ದರು. ಈ ಹಿಂದೆ ಮಂಡ್ಯದಲ್ಲೂ ಕೂಡ ಮಹಿಳಾ ಪೊಲೀಸ್ ಗೆ ಕುಟುಂಬದವರಂತೆ ಸೀಮಂತ ಮಾಡಿದ್ದರು.