Tag: Women Commission

  • `ಡಿ’ ಫ್ಯಾನ್ಸ್‌ನಿಂದ ಅಶ್ಲೀಲ ಕಾಮೆಂಟ್ – ರಮ್ಯಾ ದೂರು ಕೊಟ್ರೆ 7 ವರ್ಷ ಜೈಲು ಗ್ಯಾರಂಟಿ: ಮಹಿಳಾ ಆಯೋಗ

    `ಡಿ’ ಫ್ಯಾನ್ಸ್‌ನಿಂದ ಅಶ್ಲೀಲ ಕಾಮೆಂಟ್ – ರಮ್ಯಾ ದೂರು ಕೊಟ್ರೆ 7 ವರ್ಷ ಜೈಲು ಗ್ಯಾರಂಟಿ: ಮಹಿಳಾ ಆಯೋಗ

    – ಸ್ವಯಂಪ್ರೇರಿತ ದೂರು ದಾಖಲಿಸಲು ನಿರ್ಧಾರ

    ಬೆಂಗಳೂರು: ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾಗೆ (Actress Ramay) ಇನ್‌ಸ್ಟಾಗ್ರಾಂ (Instagram) ಖಾತೆಯಲ್ಲಿ ಅಶ್ಲೀಲ ಮೆಸೇಜ್ ಬರುತ್ತಿರುವ ಹಿನ್ನೆಲೆ ಮಹಿಳಾ ಆಯೋಗ (Women Commission) ಸ್ವಯಂಪ್ರೇರಿತ ದೂರು ದಾಖಲಿಸಲು ನಿರ್ಧರಿಸಿದೆ. ಅಲ್ಲದೇ ನಟಿ ರಮ್ಯಾ ಅಶ್ಲೀಲ ಕಾಮೆಂಟ್ ಮಾಡಿದವರ ವಿರುದ್ಧ ದೂರು ಕೊಟ್ಟರೆ, 3 ರಿಂದ 7 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

    ಈ ಕುರಿತು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿ, ರಮ್ಯಾ ಅಂತಲ್ಲ, ಬೇರೆ ಬೇರೆ ಕಡೆ ಏನಾದರೂ ಆದಾಗ ಈ ತರ ಕೆಟ್ಟದಾಗಿ ಕಮೆಂಟ್ ಮಾಡುತ್ತಾರೆ. ತುಂಬಾ ಜನ ಸೆಲೆಬ್ರಿಟಿಗಳು ನಮ್ಮಲ್ಲಿಗೆ ಬಂದು ದೂರು ಕೊಡುತ್ತಾರೆ. ಯಾರು ಅಶ್ಲೀಲ ಪದವನ್ನು ಬಳಕೆ ಮಾಡಬೇಡಿ. ಯಾವ ಮಹಿಳೆಗೂ ಕೂಡ ಅಗೌರವ ತೋರಬೇಡಿ. ನಿಮ್ಮ ಕೆಟ್ಟ ಪದಬಳಕೆಯಿಂದಾಗಿ ಮುಂದೊಂದು ದಿನ ಜೈಲಿಗೂ ಹೋಗಬಹುದು. ಕಾನೂನಿನ ಪ್ರಕಾರ ಇದು ದೊಡ್ಡ ಅಪರಾಧ. ಈ ರೀತಿ ಒಬ್ಬರನ್ನು ನೋಡಿ ಇನ್ನೊಬ್ಬರು ಮಾಡೋದು ಬೇಡ. ಇದು ಸರಿಯಲ್ಲ. ಒಂದು ವೇಳೆ ರಮ್ಯಾ ದೂರು ದಾಖಲು ಮಾಡಿದರೆ ಖಂಡಿತಾ ಎಫ್‌ಐಆರ್ ಆಗುತ್ತದೆ. ಬಳಿಕ ಮೂರರಿಂದ ಏಳು ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯಿರುತ್ತದೆ ಎಂದು ಎಚ್ಚರಿಸಿದ್ದಾರೆ.ಇದನ್ನೂ ಓದಿ: `ಡಿ ಬಾಸ್‌’ ಮೇಲೆ ಗೌರವ ಇರೋರು ಯಾವುದಕ್ಕೂ ರಿಯಾಕ್ಟ್‌ ಮಾಡಬೇಡಿ: ಸೆಲೆಬ್ರಿಟಿಗಳಿಗೆ ಫ್ಯಾನ್ಸ್‌ ಪೇಜ್‌ನಲ್ಲಿ ಮನವಿ

    ಸೋಷಿಯಲ್ ಮೀಡಿಯಾದಲ್ಲಿ ಮಾನಹಾನಿ ಪ್ರಕರಣ ಮಾಡಿದರೆ ಅದಕ್ಕೆ ತುಂಬಾ ಗಂಭೀರ ಶಿಕ್ಷೆ ಇದೆ. ಬಹುತೇಕರಿಗೆ ಇದರ ಬಗ್ಗೆ ಅರಿವೇ ಇಲ್ಲ. ಸದ್ಯ ಮಹಿಳಾ ಆಯೋಗ ರಮ್ಯಾ ವಿಚಾರವಾಗಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಪೊಲೀಸ್ ಕಮೀಷನರ್‌ಗೆ ಪತ್ರ ಬರೆಯಲು ನಿರ್ಧರಿಸಿದೆ. ಇಲ್ಲದೇ ಹೋದರೆ ಇದೇ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ.

    ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತ ಕಾರಣಕ್ಕೆ ನಟಿ ರಮ್ಯಾ ಪದೇ ಪದೇ ದರ್ಶನ್ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗುತ್ತಿದ್ದಾರೆ. ಜೊತೆಗೆ ಡಿ-ಬಾಸ್ ಅಭಿಮಾನಿಗಳು ನಿರಂತರವಾಗಿ ರಮ್ಯಾಗೆ ಸೋಷಿಯಲ್ ಮೀಡಿಯಾ ಮೂಲಕ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದಾರೆ. ಇದರ ಬೆನ್ನಲ್ಲೇ ನಟಿ ಕೂಡ ದರ್ಶನ್ ಫ್ಯಾನ್ಸ್ ವಿರುದ್ಧ ಗರಂ ಆಗಿದ್ದಾರೆ. ಜೊತೆಗೆ ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ರಮ್ಯಾಗೆ ಅಶ್ಲೀಲ ಕಮೆಂಟ್ ಮಾಡಿದ್ದವರ ಅಕೌಂಟ್‌ಗಳನ್ನು ಬಹಿರಂಗೊಳಿಸಿದ್ದಾರೆ.ಇದನ್ನೂ ಓದಿ: `I Stand With Ramya’ – ಸ್ಯಾಂಡಲ್‌ವುಡ್ ಕ್ವೀನ್ ಬೆಂಬಲಕ್ಕೆ ನಿಂತ ಒಳ್ಳೆ ಹುಡ್ಗ ಪ್ರಥಮ್

  • ಇತ್ಯರ್ಥ ಆಗಿರೋ ಅತ್ಯಾಚಾರ ಪ್ರಕರಣದ ಲಿಸ್ಟ್ ಕೇಳಿದ ವಿದ್ಯಾರ್ಥಿನಿ – ತಡಬಡಾಯಿಸಿದ ಮಹಿಳಾ ಆಯೋಗದ ಅಧ್ಯಕ್ಷೆ

    ಇತ್ಯರ್ಥ ಆಗಿರೋ ಅತ್ಯಾಚಾರ ಪ್ರಕರಣದ ಲಿಸ್ಟ್ ಕೇಳಿದ ವಿದ್ಯಾರ್ಥಿನಿ – ತಡಬಡಾಯಿಸಿದ ಮಹಿಳಾ ಆಯೋಗದ ಅಧ್ಯಕ್ಷೆ

    ಮೈಸೂರು: ರಾಜ್ಯದಲ್ಲಿ ಇತ್ಯರ್ಥವಾಗಿರುವ ಅತ್ಯಾಚಾರ ಪ್ರಕರಣಗಳ ಲಿಸ್ಟ್ ಕೊಡಿ ಎಂದು ವಿದ್ಯಾರ್ಥಿನಿ (Student) ಮಹಿಳಾ ದಿನಾಚರಣೆ ಕಾರ್ಯಕ್ರಮದ ವೇದಿಕೆ ಹತ್ತಿ ಪ್ರಶ್ನಿಸಿದ ಘಟನೆ ಮೈಸೂರಲ್ಲಿ ನಡೆದಿದೆ.

    ಮೈಸೂರಿನ (Mysuru) ಮಹಾರಾಣಿ ಕಲಾ ಕಾಲೇಜಿನಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಸ್ವಾತಿ ದಿಢೀರನೆ ವೇದಿಕೆ ಹತ್ತಿ ಮಹಿಳಾ ಆಯೋಗದ ಅಧ್ಯಕ್ಷೆಗೆ ಪ್ರಶ್ನೆ ಮಾಡಿದ್ದಾರೆ. ವಿದ್ಯಾರ್ಥಿನಿ ಪ್ರಶ್ನೆಗೆ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ (Nagalakshmi Choudhary) ಹಾರಿಕೆ ಉತ್ತರ ನೀಡಿ ಎಸ್ಕೇಪ್ ಜಾರಿ ಕೊಂಡಿದ್ದಾರೆ. ಇದನ್ನೂ ಓದಿ:  ಸ್ನೇಹಿತರ ಸಂಬಂಧ ಗಂಡ-ಹೆಂಡತಿ ಜಗಳ ಇದ್ದಂತೆ, ನಮ್ಮಿಬ್ಬರ ಮಧ್ಯೆ ಬ್ರೇಕಪ್ ಏನಿಲ್ಲ: ವಿನಯ್‌ ಗೌಡ

    ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಪ್ರಕರಣ ಎಷ್ಟು, ಎಷ್ಟು ಪ್ರಕರಣ ಇತ್ಯಾರ್ಥ ಆಗಿದೆ? ನಿಮ್ಮ ಸರ್ಕಾರದಿಂದ ಮಾಹಿತಿ ಕೊಡಿ ಅಂತ ಅಂತಿಮ ಬಿ.ಎ ವಿದ್ಯಾರ್ಥಿನಿ ಸ್ವಾತಿ ಪ್ರಶ್ನಿಸಿದ್ದಾರೆ. ಇದಕ್ಕೆ ನ್ಯಾಯಾಲಯದ ಆದೇಶ ನಾವು ಪ್ರಶ್ನಿಸಲು ಸಾಧ್ಯವಿಲ್ಲ, ಎಲ್ಲದಕ್ಕೂ ಸಾಕ್ಷಿ ಮುಖ್ಯ ಎಂದು ಕಾನೂನು ಹೇಳುತ್ತದೆ. ಯಾವುದೇ ಪ್ರಕರಣವಾದರೂ ಸಾಕ್ಷಿಗಳು ಮುಖ್ಯವಾಗುತ್ತೆ. ಲ್ಯಾಬ್ ಪರೀಕ್ಷೆಗೆ ಕಳುಹಿಸಿದ್ರೆ, 5 ತಿಂಗಳು ಬೇಕು ರಿಪೋರ್ಟ್ ಬರುವುದಕ್ಕೆ. ಇಲ್ಲಿ ನಮಗೆ ಹಿನ್ನಡೆಯಾಗುತ್ತಿದೆ ಎಂದು ಉತ್ತರಿಸಿ ನಾಗಲಕ್ಷ್ಮಿ ಔಧರಿ ಸುಮ್ಮನಾಗಿದ್ದಾರೆ.  ಇದನ್ನೂ ಓದಿ:  ಭಾರತೀಯ ಔಷಧ ಕಂಪನಿ ಮೇಲೆ ರಷ್ಯಾ ಕ್ಷಿಪಣಿ ದಾಳಿ – ಭಾರತದ ಕಂಪನಿಗಳೇ ಟಾರ್ಗೆಟ್ ಎಂದ ಉಕ್ರೇನ್‌

  • ಪ್ರಜ್ವಲ್ ಪೆನ್‍ಡ್ರೈವ್ ಪ್ರಕರಣಕ್ಕೆ ಟ್ವಿಸ್ಟ್- ಸಂತ್ರಸ್ತೆಗೆ ಮೂವರಿಂದ ಬೆದರಿಕೆ!

    ಪ್ರಜ್ವಲ್ ಪೆನ್‍ಡ್ರೈವ್ ಪ್ರಕರಣಕ್ಕೆ ಟ್ವಿಸ್ಟ್- ಸಂತ್ರಸ್ತೆಗೆ ಮೂವರಿಂದ ಬೆದರಿಕೆ!

    – ಟ್ವಿಸ್ಟ್ ಕೊಟ್ಟ ಮಹಿಳಾ ಆಯೋಗ

    ಬೆಂಗಳೂರು: ಭಾರೀ ಕೋಲಾಹಲ ಎಬ್ಬಿಸಿರುವ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಪೆನ್‌ಡ್ರೈವ್ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರೆಂದು ಹೇಳಿಕೊಂಡು ಬಂದಿರುವ ಮೂವರು ಸಂತ್ರಸ್ತೆಗೆ ಬೆದರಿಕೆ ಹಾಕಿರುವ ಆರೋಪವೊಂದು ಕೇಳಿಬಂದಿದೆ.

    ಈ ಸಂಬಂಧ ಇಂದು ರಾಷ್ಟ್ರೀಯ ಮಹಿಳಾ ಆಯೋಗ (‌ National Women’s Commission) ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ. ಇದರಲ್ಲಿ ಬೆದರಿಕೆ ಹಾಕಿರುವ ಬಗ್ಗೆ ಸಂತ್ರಸ್ತೆ ಆಯೋಗಕ್ಕೆ ದೂರು ನೀಡಿದ್ದಾರೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಪ್ರಜ್ವಲ್ ಪೆನ್‍ಡ್ರೈವ್ ಪ್ರಕರಣ- ರಾಜ್ಯಪಾಲರಿಗೆ ಹೆಚ್‍ಡಿಕೆ, ಜೆಡಿಎಸ್ ನಿಯೋಗ ದೂರು

    ಆಯೋಗ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಏನಿದೆ?: ಕರ್ನಾಟಕ ಪೊಲೀಸ್ ಹೆಸರಿನಲ್ಲಿ ಸಾಮಾನ್ಯ ಉಡುಪು ಧರಿಸಿದ್ದ ಮೂವರು ವ್ಯಕ್ತಿಗಳ ಮೇಲೆ ಮಹಿಳೆಯೋರ್ವಳು ದೂರು ನೀಡಿದ್ದಾರೆ. ತಮ್ಮನ್ನು ಕರ್ನಾಟಕ ಪೊಲೀಸ್ ಅಧಿಕಾರಿಗಳು ಎಂದು ಪರಿಚಯಿಸಿಕೊಂಡು, ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸುಳ್ಳು ದೂರು ನೀಡುವಂತೆ ಒತ್ತಾಯಿಸಿದ್ದಾರೆ. ವಿವಿಧ ದೂರವಾಣಿ ಸಂಖ್ಯೆಗಳ ಮೂಲಕ ಕರೆ ಮಾಡಿ ದೂರು ನೀಡಬೇಕು ಎಂದು ಬೆದರಿಕೆ ಹಾಕಿದ್ದಾರೆ. ಸಂತ್ರಸ್ತೆ ತನ್ನ ಕುಟುಂಬದ ಹಿತಕ್ಕಾಗಿ ರಕ್ಷಣೆ ಕೋರಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ.

    700 ಮಹಿಳೆಯರು ಆನ್‌ಲೈನದ ಮೂಲಕ ದೂರು ನೀಡಿದ್ದಾರೆ ಎನ್ನಲಾಗಿದೆ. ಆದರೆ ಈ ಪ್ರಕರಣದಲ್ಲಿ ಯಾವುದೇ ದೂರು ಸ್ವೀಕರಿಸಿಲ್ಲ, NCW ಮಹಿಳೆಯರ ಕಾಳಜಿಗಳನ್ನು ಸಂಪೂರ್ಣವಾಗಿ ತನಿಖೆ ಮಾಡಲು ಬದ್ಧವಾಗಿದೆ, ಕರ್ನಾಟಕ ಪೊಲೀಸ್ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕ ಸಾಧಿಸುತ್ತದೆ.

    ಒಟ್ಟಿನಲ್ಲಿ ಒಂದೆಡೆ ಪ್ರಜ್ವಲ್ ರೇವಣ್ಣ ಕೇಸ್ ಸಂಬಂಧ ತನಿಖೆ ಮಾಡಲಾಗುತ್ತಿದೆ. ಇದಕ್ಕೆ ವಿಶೇಷ ತನಿಖೆ ತಂಡವನ್ನು ಕೂಡ ರಚನೆ ಮಾಡಲಾಗಿದೆ. ಆದರೆ ಇತ್ತ ಪ್ರಜ್ವಲ್ ವಿರುದ್ಧ ಸುಳ್ಳು ದೂರು ನೀಡಲು ಮಹಿಳೆ ಮೇಲೆ ಒತ್ತಡ ಹಾಕಲಾಗಿದೆ ಎನ್ನುವ ಮೂಲಕ ಆಯೋಗ ಸ್ಫೋಟಕ ತಿರುವು ಕೊಟ್ಟಿದೆ.

  • ಹೆಚ್‌ಡಿಕೆಗೆ ಹೈಕೋರ್ಟ್‌ ರಿಲೀಫ್‌; ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ತಡೆ

    ಹೆಚ್‌ಡಿಕೆಗೆ ಹೈಕೋರ್ಟ್‌ ರಿಲೀಫ್‌; ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ತಡೆ

    ಬೆಂಗಳೂರು: ಮಹಿಳೆಯರ ಬಗ್ಗೆ ಅವಮಾನಕರ ಹೇಳಿಕೆ ನೀಡಿದ ಆರೋಪದಲ್ಲಿ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ (H.D.Kumaraswamy) ವಿರುದ್ಧ ರಾಜ್ಯ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ (High Court) ತಡೆ ನೀಡಿದೆ.

    ಗ್ಯಾರಂಟಿ ಯೋಜನೆಗಳಿಂದ ಹೆಣ್ಣುಮಕ್ಕಳು ದಾರಿ ತಪ್ಪುತ್ತಾ ಇದ್ದಾರೆ ಎಂದು ಹೆಚ್‌ಡಿಕೆ ಹೇಳಿಕೆ ನೀಡಿದ್ದರು. ಮಹಿಳೆಯರ ಬಗ್ಗೆ ಅವಮಾನಕರ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಸ್ಪಷ್ಟನೆ ಕೋರಿ ಮಹಿಳಾ ಆಯೋಗ (Women Commission) ನೋಟಿಸ್‌ ನೀಡಿತ್ತು. ಆಯೋಗದ ನೋಟಿಸ್ ಪ್ರಶ್ನಿಸಿ ಕುಮಾರಸ್ವಾಮಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದನ್ನೂ ಓದಿ: ಕೇರಳದ ರೀತಿ ರಾಜ್ಯದಲ್ಲೂ ಲವ್ ಜಿಹಾದ್ ನಡೀತಿದೆ ಅಂದಿದ್ವಿ: ಆರ್.ಅಶೋಕ್

    ದೂರುಗಳಿಲ್ಲದಿದ್ದರೂ ಸ್ವಪ್ರೇರಿತ ಪ್ರಕರಣ ದಾಖಲಿಸಲಾಗಿದೆ. ಸ್ವತಃ ಅಧ್ಯಕ್ಷೆ ಸ್ಪಷ್ಟೀಕರಣ ಕೇಳಿ ನೋಟಿಸ್ ನೀಡಲಾಗಿದೆ. ಸೆಕ್ಷನ್ 7 ಕ್ಕೆ ವಿರುದ್ಧವಾಗಿ ಮಹಿಳಾ ಆಯೋಗದ ಅಧ್ಯಕ್ಷೆ ನೋಟಿಸ್ ನೀಡಿದ್ದಾರೆ ಎಂದು ಮಾಜಿ ಸಿಎಂ ಹೆಚ್‌ಡಿಕೆ ಪರ ವಕೀಲ ನಿಶಾಂತ್ ಎ.ವಿ. ವಾದ ಮಂಡಿಸಿದ್ದರು.

    ಕಾರಣ ಕೇಳಿ ನೋಟಿಸ್ ನೀಡಿಲ್ಲ, ಸಮನ್ಸ್ ನೀಡಿಲ್ಲ. ಸ್ಷಷ್ಟೀಕರಣ ನೀಡಿ, ಇಲ್ಲವಾದರೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ರಾಜ್ಯ ಮಹಿಳಾ ಆಯೋಗದ ಕ್ರಮ ವ್ಯಾಪ್ತಿ ಮೀರಿದಂತಿದೆ ಎಂದು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಹೇಳಿದೆ. ಇದನ್ನೂ ಓದಿ: ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು.. ಲವ್ ಜಿಹಾದ್ ನನಗೆ ಕಾಣುತ್ತಿಲ್ಲ: ಹುಬ್ಬಳ್ಳಿ ಕೊಲೆ ಬಗ್ಗೆ ಪರಮೇಶ್ವರ್ ಹೇಳಿಕೆ

  • ನಿಷ್ಕ್ರಿಯ ಮಹಿಳಾ ಆಯೋಗದ ವಜಾಗೆ ಎಎಪಿ ಆಗ್ರಹ

    ನಿಷ್ಕ್ರಿಯ ಮಹಿಳಾ ಆಯೋಗದ ವಜಾಗೆ ಎಎಪಿ ಆಗ್ರಹ

    ಬೆಂಗಳೂರು: ನಾಡಿನ ಮಹಿಳೆಯರ ರಕ್ಷಣೆಯಲ್ಲಿ ರಾಜ್ಯ ಮಹಿಳಾ ಆಯೋಗವು ಸಂಪೂರ್ಣ ವಿಫಲವಾಗಿದ್ದು, ಆಯೋಗದ ಈಗಿನ ಅಧ್ಯಕ್ಷರು ಹಾಗೂ ಸದಸ್ಯರನ್ನು ವಜಾ ಮಾಡಿ ನೂತನ ಆಯೋಗ ರಚಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.

    ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಎಪಿಯ ಮಹಿಳಾ ಘಟಕದ ಅಧ್ಯಕ್ಷರಾದ ಕುಶಲ ಸ್ವಾಮಿ, ‘ಮಹಿಳಾ ಆಯೋಗದ ಅಧ್ಯಕ್ಷರಾದ ಆರ್.ಪ್ರಮೀಳಾ ನಾಯ್ಡು ಹಾಗೂ ಸದಸ್ಯರು ಸರ್ಕಾರದ ಸೌಲಭ್ಯ ಪಡೆಯುವುದಕ್ಕೆ ಸೀಮಿತವಾಗಿದ್ದಾರೆ. ರಾಜ್ಯಾದ್ಯಂತ ಮಹಿಳೆಯರ ಮೇಲೆ ಕಿರುಕುಳ, ದೌರ್ಜನ್ಯ, ಅತ್ಯಾಚಾರ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸಂತ್ರಸ್ತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಕನಿಷ್ಠ ಸೌಜನ್ಯ ಕೂಡ ಆಯೋಗದ ಅಧ್ಯಕ್ಷರಿಗೆ ಇಲ್ಲ. ಪೊಲೀಸ್ ಇಲಾಖೆಯ ಮೇಲೆ ಹಿಡಿತ ಸಾಧಿಸುವುದರಲ್ಲಿ ಆಯೋಗ ವಿಫಲವಾಗಿದೆ. ರಾಜ್ಯದ ಜನತೆಗೆ ಆಯೋಗದ ಮೇಲೆ ವಿಶ್ವಾಸವೇ ಇಲ್ಲವಾಗಿದೆ’ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಎಲ್ಲಾ ಕ್ಷೇತ್ರದಲ್ಲೂ ಇಬ್ಬಿಬ್ಬರನ್ನು ಇಟ್ಟಿರ್ತಾರೆ: ಎಸ್.ಆರ್ ಶ್ರೀನಿವಾಸ್

    ಪ್ರಮೀಳಾ ನಾಯ್ಡುರವರು ಆಯೋಗದ ಅಧ್ಯಕ್ಷರೋ ಅಥವಾ ಬಿಜೆಪಿಯ ಏಜೆಂಟೋ ಎಂಬ ಅನುಮಾನ ಕಾಡುತ್ತಿದೆ. ಮಹಿಳಾ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದರೆ, ಪ್ರಕರಣಗಳು ಜನರ ಗಮನಕ್ಕೆ ಬಂದು ಸರ್ಕಾರದ ಮಾನ ಬೀದಿ ಪಾಲಾಗುತ್ತದೆ ಎಂಬ ಕಾರಣಕ್ಕೆ ಅವರು ನಿಷ್ಕ್ರಿಯರಾಗಿದ್ದಾರೆ. ರಾಜ್ಯದಲ್ಲಿ ಪ್ರತಿದಿನ ಸರಾಸರಿ ಒಂದಕ್ಕಿಂತ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದರೂ ಆಯೋಗ ನಿದ್ರಾವಸ್ಥೆಯಲ್ಲಿ ಇರುವುದು ಖಂಡನೀಯ. ಬಾಲ್ಯ ವಿವಾಹಗಳು ಎಗ್ಗಿಲ್ಲದೇ ನಡೆಯುತ್ತಿವೆ. ಕಾಟಾಚಾರಕ್ಕೆ ಎಫ್‍ಐಆರ್ ದಾಖಲಿಸಿಕೊಳ್ಳಲಾಗುತ್ತಿದೆಯೇ ಹೊರತು, ಆರೋಪಿಗಳಿಗೆ ಶಿಕ್ಷೆ ಆಗುತ್ತಿಲ್ಲ. ಕೋಟ್ಯಾಂತರ ಅನುದಾನ, ನಾನಾ ಸೌಲಭ್ಯಗಳನ್ನು ಆಯೋಗಕ್ಕೆ ನೀಡಿ ದುಂದುವೆಚ್ಚ ಮಾಡುವ ಮಾಡಲು ಆಯೋಗವನ್ನು ವಜಾ ಮಾಡಿ, ಮಹಿಳೆಯರ ಬಗ್ಗೆ ಕಾಳಜಿ ಹೊಂದಿರುವ ದಿಟ್ಟ ಮಹಿಳೆಯ ನೇತೃತ್ವದಲ್ಲಿ ನೂತನ ಆಯೋಗ ರಚಿಸಲಿ ಎಂದು ಕುಶಲ ಸ್ವಾಮಿಯವರು ಒತ್ತಾಯಿಸಿದ್ದಾರೆ.

    ಆಮ್ ಆದ್ಮಿ ಪಾರ್ಟಿಯ ಮಹಿಳಾ ಮುಖಂಡರಾದ ಉಷಾ ಮೋಹನ್‍ರವರು ಮಾತನಾಡಿ, ‘ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‍ರವರ ಸರ್ಕಾರವು ಸ್ವಾತಿ ಮಾಲಿವಾಲ್ ಎಂಬ ದಿಟ್ಟ ಹೋರಾಟಗಾರ್ತಿಯನ್ನು ಮಹಿಳಾ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿದೆ. ಕಳೆದ ಐದು ವರ್ಷಗಳಲ್ಲಿ ಅವರ ನೇತೃತ್ವದಲ್ಲಿ 1,00,672 ಪ್ರಕರಣಗಳಿಗೆ ಸಂಬಂಧಿಸಿ 1,42,234 ಜನರ ವೈಯಕ್ತಿಕ ವಿಚಾರಣೆ ನಡೆದಿದೆ. ಸಹಾಯವಾಣಿಗೆ ಕರೆ ಮಾಡಿ ಕಷ್ಟ ಹೇಳಿಕೊಂಡ ದೆಹಲಿಯ 4.25 ಲಕ್ಷ ಮಹಿಳೆಯರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಗಿದೆ. ದೆಹಲಿಯ ಮಹಿಳಾ ಆಯೋಗವು 250ಕ್ಕೂ ಶಿಫಾರಸ್ಸುಗಳು ಸರ್ಕಾರ ಹಾಗೂ ಪ್ರಾಧಿಕಾರಕ್ಕೆ ಕಳುಹಿಸಿದೆ. ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಸ್ವಾತಿ ಮಾಲಿವಾಲ್‍ರವರನ್ನು ಇಡೀ ದೇಶವೇ ಕೊಂಡಾಡುತ್ತಿದೆ. ನಮ್ಮ ಕರ್ನಾಟಕದ ಮಹಿಳಾ ಆಯೋಗಕ್ಕೂ ಅಂತಹ ಅಧ್ಯಕ್ಷರ ಅಗತ್ಯವಿದೆ. ಮಹಿಳೆಯರ ಮೇಲೆ ದೌರ್ಜನ್ಯವಾದಾಗ ಜಾಣ ಕುರುಡು ತೋರುವ ಈಗಿನ ಅಧ್ಯಕ್ಷರಿಂದ ಮಹಿಳೆಯರಿಗೆ ಏನೂ ಉಪಯೋಗವಿಲ್ಲ. ಬಸವರಾಜ್ ಬೊಮ್ಮಾಯಿಯವರು ಈ ಬಗ್ಗೆ ಗಮನವಹಿಸಬೇಕು’ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ನಾಲ್ವರು ತೊಗರಿ ಕಳ್ಳರ ಬಂಧನ – 7.80 ಸಾವಿರ ಮೌಲ್ಯದ ತೊಗರಿ ಜಪ್ತಿ

  • 8 ವರ್ಷದ ಬಾಲಕನಿಗೆ ಮಲತಾಯಿಯಿಂದ ಕಿರುಕುಳ – ಮಹಿಳಾ ಆಯೋಗದಿಂದ ರಕ್ಷಣೆ

    8 ವರ್ಷದ ಬಾಲಕನಿಗೆ ಮಲತಾಯಿಯಿಂದ ಕಿರುಕುಳ – ಮಹಿಳಾ ಆಯೋಗದಿಂದ ರಕ್ಷಣೆ

    ದೆಹಲಿ: ಮಲತಾಯಿಯಿಂದ ಕಿರುಕುಳಕ್ಕೆ ಒಳಗಾಗಿದ್ದ 8 ವರ್ಷದ ಬಾಲಕನನ್ನು ದೆಹಲಿ ಮಹಿಳಾ ಆಯೋಗ ರಕ್ಷಿಸಿದೆ.

    ಈ ವಿಚಾರವಾಗಿ ಮಾಹಿತಿ ದೊರೆತ ದೆಹಲಿ ಮಹಿಳಾ ಆಯೋಗ ತಂಡ, ಪಶ್ಚಿಮ ದೆಹಲಿಯ ಹರಿ ನಗರದಲ್ಲಿರುವ ಬಾಲಕನ ನಿವಾಸಕ್ಕೆ ತಲುಪಿ ಆತನನ್ನು ತನ್ನ ಮಲತಾಯಿಯಿಂದ ರಕ್ಷಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

    ಬಳಿಕ ವಿಚಾರಣೆ ವೇಳೆ ಬಾಲಕ ಮಲತಾಯಿ ಹೊರಗೆ ಹೋಗುವಾಗ ಹಗ್ಗಗಳಿಂದ ತನ್ನ ಕೈಗಳನ್ನು ಕಟ್ಟಿ ಹೋಗುತ್ತಿದ್ದರು. ತನ್ನನ್ನು ಹೊರಗೆ ಹೋಗಲು ಮತ್ತು ಯಾರೊಂದಿಗೂ ಬೆರೆಯಲು ಬಿಡುತ್ತಿರಲಿಲ್ಲ. ನನ್ನನ್ನು ನೆಲದ ಮೇಲೆ ಮಲಗಿಸುತ್ತಿದ್ದರು. ಅಲ್ಲದೆ ಸರಿಯಾಗಿ ಊಟ ಕೂಡ ನೀಡುತ್ತಿರಲಿಲ್ಲ ಎಂದು ದೂರಿದ್ದಾನೆ.

    ಬಾಲಕನ ದೇಹದಲ್ಲಿ ಸಣ್ಣ-ಪುಟ್ಟ ಗಾಯಗಳಾಗಿದ್ದು, ಆತನ ಬೆನ್ನಿನ ಮೇಲೆ ಕೆಲವು ಗೀರುಗಳ ಗುರುತುಗಳು ಪತ್ತೆಯಾಗಿದೆ. ನಂತರ ಬಾಲಕನನ್ನು ದೆಹಲಿ ಮಹಿಳಾ ಆಯೋಗ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಿದ್ದಾರೆ.

  • ಬಲವಂತವಾಗಿ ವೇಶ್ಯಾವಾಟಿಕೆಗೆ ಮಹಿಳೆಯ ಮಾರಾಟ – ದಿನಕ್ಕೆ 15, 20 ಮಂದಿಯಿಂದ ರೇಪ್

    ಬಲವಂತವಾಗಿ ವೇಶ್ಯಾವಾಟಿಕೆಗೆ ಮಹಿಳೆಯ ಮಾರಾಟ – ದಿನಕ್ಕೆ 15, 20 ಮಂದಿಯಿಂದ ರೇಪ್

    ನವದೆಹಲಿ: ದೊಡ್ಡ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಯನ್ನು ಬಲವಂತವಾಗಿ ದೆಹಲಿಯ ರೆಡ್ ಲೈಟ್ ಏರಿಯಾ ಜಿಬಿ ರಸ್ತೆಯಲ್ಲಿರುವ ವೇಶ್ಯಾವಾಟಿಕೆಗೆ ಮಾರಾಟ ಮಾಡಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ರೆಡ್ ಲೈಟ್ ಏರಿಯಾಗೆ ಬಂದ ಗ್ರಾಹಕನೊಬ್ಬನ ಸಹಾಯದಿಂದ ಮಹಿಳೆಯನ್ನು ಅಲ್ಲಿಂದ ರಕ್ಷಣೆ ಮಾಡಲಾಗಿದೆ. ಪ್ರತಿ ದಿನ 15-20 ಮಂದಿ ನನ್ನ ಮೇಲೆ ಬಲವಂತವಾಗಿ ಅತ್ಯಾಚಾರ ನಡೆಸುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.

    ಏನಿದು ಪ್ರಕರಣ?
    ಮಹಿಳೆ ಮೂಲತಃ ಪಶ್ಚಿಮ ಬಂಗಾಳದವಳಾಗಿದ್ದು, ಆಕೆ ಕೋಲ್ಕತ್ತಾದಲ್ಲಿ ದೊಡ್ಡ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ವ್ಯಕ್ತಿಯೊಬ್ಬ ಒಳ್ಳೆಯ ಕೆಲಸ ಕೊಡಿಸುವುದಾಗಿ ಹೇಳಿ ಆಕೆಯನ್ನು ದೆಹಲಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಜಿಬಿ ರಸ್ತೆಯಲ್ಲಿ ಆಕೆಯನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಿದ್ದಾನೆ. ನಂತರ ಮಹಿಳೆಯನ್ನು ವೇಶ್ಯಾವಾಟಿಕೆಯಲ್ಲಿದ್ದ ವ್ಯಕ್ತಿಯೊಬ್ಬ ಮಾರಾಟ ಮಾಡಿದ್ದಾನೆ ಎಂದು ವರದಿಯಾಗಿದೆ.

    ಒಂದು ದಿನ ಬಂಗಾಲಿ ವ್ಯಕ್ತಿಯೊಬ್ಬ ಗ್ರಾಹಕನಾಗಿ ಮಹಿಳೆ ಬಳಿಗೆ ಬಂದಿದ್ದಾನೆ. ಆಗ ಮಹಿಳೆ ಆತನ ಬಳಿ ಸಹಾಯ ಕೇಳಿದ್ದು, ಗ್ರಾಹಕ ಮಹಿಳೆಗೆ ಸಹಾಯ ಮಾಡಲು ಒಪ್ಪಿಕೊಂಡಿದ್ದಾನೆ. ನಂತರ ಮಹಿಳೆ ತನ್ನ ಸಹೋದರನ ಫೋನ್ ನಂಬರ್ ಆತನಿಗೆ ಕೊಟ್ಟಿದ್ದಾಳೆ. ಗ್ರಾಹಕ ಸಹೋದರನಿಗೆ ಫೋನ್ ಮಾಡಿ ನಡೆದಿರುವ ಘಟನೆಯ ಬಗ್ಗೆ ವಿವರಿಸಿದ್ದಾನೆ. ತಕ್ಷಣ ಸಹೋದರ ಪಶ್ಚಿಮ ಬಂಗಾಳದಿಂದ ದೆಹಲಿಗೆ ಬಂದು ಆತನೂ ಗ್ರಾಹಕನಾಗಿ ವೇಶ್ಯಾಗೃಹಕ್ಕೆ ಹೋಗಿ ಸಹೋದರಿಯನ್ನು ಭೇಟಿ ಮಾಡಿದ್ದಾನೆ.

    ಸಹೋದರಿಯ ಜೊತೆ ಮಾತನಾಡಿ ನಂತರ ಮಹಿಳಾ ಆಯೋಗದಲ್ಲಿ ದೂರು ನೀಡಿದ್ದಾರೆ. ದೆಹಲಿ ಮಹಿಳಾ ಆಯೋಗ ಸ್ಥಳೀಯ ಪೊಲೀಸರ ಸಹಾಯದಿಂದ ವೇಶ್ಯಾವಾಟಿಕೆ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿ ಮಹಿಳೆಯನ್ನು ರಕ್ಷಿಸಿದ್ದಾರೆ. ಸದ್ಯಕ್ಕೆ ದೆಹಲಿ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆಯನ್ನು ರಕ್ಷಣೆ ಮಾಡಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮ್ಯಾನೇಜರ್‌ನನ್ನು ಬಂಧಿಸಿದ್ದಾರೆ.

    ಮಹಿಳೆಯನ್ನು ದೆಹಲಿಯ ಜಬಿ ರಸ್ತೆಯಲ್ಲಿ ಮಾರಾಟ ಮಾಡಿದ್ದರು. ಹೀಗಾಗಿ ಆಕೆ ಕುಟುಂಬದವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಇತ್ತ ಆಕೆಯ ಸಹೋದರ ಕೂಡ ಕೋಲ್ಕತ್ತಾದಲ್ಲಿ ನಾಪತ್ತೆ ದೂರನ್ನು ದಾಖಲಿಸಿದ್ದರು. ಜೂನ್ 8ರಂದು ಮಹಿಳೆಯನ್ನು ದೆಹಲಿಗೆ ಕರೆತರಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.