Tag: Women and Child Welfare Department

  • ಸಾಮೂಹಿಕ ವಿವಾಹ | 101 ಜೋಡಿಗಳಿಗೆ ಸ್ಥಳದಲ್ಲೇ ಸೀಮೆಹಸು ಗಿಫ್ಟ್‌ ಕೊಟ್ಟ ಶಾಸಕ

    ಸಾಮೂಹಿಕ ವಿವಾಹ | 101 ಜೋಡಿಗಳಿಗೆ ಸ್ಥಳದಲ್ಲೇ ಸೀಮೆಹಸು ಗಿಫ್ಟ್‌ ಕೊಟ್ಟ ಶಾಸಕ

    ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ (SN Subbareddy) ಪ್ರತಿ ವರ್ಷದಂತೆ ಈ ವರ್ಷವೂ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜನೆ ಮಾಡಿದ್ದು 101 ಜೋಡಿಗಳು ಸಾಮೂಹಿಕ ವಿವಾಹ (Mass Marriage) ಕಾರ್ಯಕ್ರಮದಲ್ಲಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    ಬಾಗೇಪಲ್ಲಿ ತಾಲೂಕಿನ ಗಡಿದಂ ಗ್ರಾಮದ ಶ್ರೀಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನೇರವೇರಿದ್ದು, ಮದುವೆಯಾದ ನೂತನ ವಧು-ವರರಿಗೆ ಸ್ಥಳದಲ್ಲೇ ಒಂದೊಂದು ಸೀಮೆ ಹಸು ವಿತರಣೆ ಮಾಡಲಾಯಿತು. ಇದನ್ನೂ ಓದಿ: ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಶಾಸಕರ ಭರ್ಜರಿ ಆಫರ್‌ – ಮದ್ವೆಯಾಗಲು ಅಪ್ರಾಪ್ತರಿಂದಲೂ ಅರ್ಜಿ!

    ಇನ್ನೂ ನೂತನ ವಧುವರರಿಗೆ ಸರ್ಕಾರದಿಂದ 50,000 ಪ್ರೋತ್ಸಾಹ ಧನ ಕೊಡಿಸಲಿದ್ದಾರೆ. ಜೊತೆಗೆ ಸಣ್ಣ ರೈತರಾದವರಿಗೆ ಉಚಿತ ಕೊಳವೆಬಾವಿ, ಡಿಎಲ್ ಇದ್ದ ವರನಿಗೆ 4 ಚಕ್ರದ ವಾಹನ ಕೊಡಿಸುವುದಾಗಿ ಸುಬ್ಬಾರೆಡ್ಡಿ ಭರವಸೆ ನೀಡಿದ್ದಾರೆ.

    ಇನ್ನೂ ಮದುವೆಗೆ ಯಾವುದೂ ಕೊರತೆ ಆಗದಂತೆ ವಧು-ವರ ಸೇರಿ ಅವರ ತಂದೆ ತಾಯಿಗೂ ಹೊಸ ಬಟ್ಟೆಗಳನ್ನ ಕೊಡಿ, ತಲಾ ಒಂದೊಂದು ಜೋಡಿಗೂ ಒಬ್ಬೊಬ್ಬರು ಅರ್ಚಕರಂತೆ ಕಾಲುಂಗುರ, ಚಿನ್ನದ ತಾಳಿ ಕೊಟ್ಟು ಶಾಸ್ತ್ರೋಕ್ತವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿಕೊಟ್ಟರು. ಇದನ್ನೂ ಓದಿ: ನನಗೆ ಮಿನಿಸ್ಟರ್ ಪೋಸ್ಟ್ ಬೇಕೇ ಬೇಕು – ಶಾಸಕ ಸುಬ್ಬಾರೆಡ್ಡಿ ಡಿಮ್ಯಾಂಡ್!

    ಕಾರ್ಯಕ್ರಮದಲ್ಲಿ 20,000ಕ್ಕೂ ಹೆಚ್ಚು ಮಂದಿ ಆಗಮಿಸಿದ್ದು ಎಲ್ಲರಿಗೂ ಭರ್ಜರಿ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು. ಸೀಮೆ ಹಸು ಸಾಕಾಣಿಕೆ ಮೂಲಕ ನವ ದಂಪತಿ ಸುಃಖ ಜೀವನ ನಡೆಸಲಿ, ಅವರ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲಿ ಅಂತ ಶಾಸಕ ಸುಬ್ಬಾರೆಡ್ಡಿ ಶುಭ ಹಾರೈಸಿದರು. ಇದನ್ನೂ ಓದಿ: ಬಾಲಕಿಯರ ಮೇಲೆ ಬಾಲಮಂದಿರದ ಅಧೀಕ್ಷಕಿಯಿಂದಲೇ ಹಲ್ಲೆ, ದೌರ್ಜನ್ಯ – ಕ್ರಿಮಿನಲ್ ಕೇಸ್ ದಾಖಲು

  • ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಶಾಸಕರ ಭರ್ಜರಿ ಆಫರ್‌ – ಮದ್ವೆಯಾಗಲು ಅಪ್ರಾಪ್ತರಿಂದಲೂ ಅರ್ಜಿ!

    ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಶಾಸಕರ ಭರ್ಜರಿ ಆಫರ್‌ – ಮದ್ವೆಯಾಗಲು ಅಪ್ರಾಪ್ತರಿಂದಲೂ ಅರ್ಜಿ!

    ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಶಾಸಕ ಸುಬ್ಬಾರೆಡ್ಡಿ (SN SubbaReddy) ನೇತೃತ್ವದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾದವರಿಗೆ ಜೊತೆಗೆ ಸೀಮೆ ಹಸು, 50,000 ರೂ. ನಗದು ಹಣ, ಕೊಳವೆಬಾವಿ ಸೇರಿದಂತೆ ಡಿ.ಎಲ್ ಇದ್ದವರಿಗೆ ವಾಹನ ಹೀಗೆ ಹತ್ತು ಹಲವು ಅಫರ್‌ ಘೋಷಿಸಿದ್ದರು. ಇದರಿಂದ ಆಫರ್‌ಗೆ ಮನಸೋತು ಅಪ್ರಾಪ್ತರೂ ಮದುವೆಯಾಗಲು ಅರ್ಜಿ ಹಾಕಿದ್ದು ಕೊನೆ ಕ್ಷಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Women and Child Welfare Department) ಅಧಿಕಾರಿಗಳ ಎಂಟ್ರಿಯಿಂದ ಅಪ್ರಾಪ್ತರ ಮದುವೆಗೆ ಬ್ರೇಕ್ ಬಿದ್ದಿದೆ.

    ಹೌದು. ಡಿಸೆಂಬರ್ 06 ರಂದು ಗಡಿದಂ ದೇವಾಲಯದ ಆವರಣದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮದುವೆಯಲ್ಲಿ ವಧು-ವರ ಹಾಗೂ ಅವರ ತಂದೆ ತಾಯಿಗೆ ಹೊಸ ಬಟ್ಟೆ ಸೇರಿದಂತೆ ನೂತನ ದಂಪತಿಗೆ ಒಂದು ಸೀಮೆ ಹಸು, ಸರ್ಕಾರದಿಂದ 50,000 ರೂ. ಪ್ರೋತ್ಸಾಹ ಧನ, ಸೇರಿದಂತೆ ಕಡು ಬಡವರಾದಲ್ಲಿ ಸಣ್ಣ ರೈತರಾಗಿದ್ರೆ ಉಚಿತ ಕೊಳವೆಬಾವಿ, ಡಿಎಲ್ ಇರುವ ವರನಿಗೆ ಒಂದು ವಾಹನ ಸಹ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಮಾಸುವ ಮುನ್ನವೇ ಹೆರಿಗೆ ಬಳಿಕ ಮಗು ಸಾವು!

    ಶಾಸಕರ ಆಫರ್‌ಗಳಿಗೆ ಮನಸೋತ ನೂರಾರು ಮಂದಿ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮದುವೆಯಾಗಲು ತುದಿಗಾಲಲ್ಲಿ ನಿಂತಿದ್ದು, ನಾ ಮುಂದು ತಾ ಮುಂದು ಅಂತ ಅರ್ಜಿ ಸಲ್ಲಿಸಿದ್ದರು. ಬರೋಬ್ಬರಿ 160ಕ್ಕೂ ಹೆಚ್ಚು ಜೋಡಿಗಳು ಮದುವೆಯಾಗಲು ಅರ್ಜಿ ಸಲ್ಲಿಸಿದ್ದರು. ಆದ್ರೆ ಅವರಲ್ಲಿ 50 ರಿಂದ 60 ಮಂದಿ 18 ವರ್ಷ ತುಂಬದ ಬಾಲಕಿಯರು, 21 ವರ್ಷ ಆಗದ ಯುವಕರು ಇದ್ದಿದ್ದು ಕಂಡುಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಂಟ್ರಿಯಾದ ನಂತರ 60ಕ್ಕೂ ಹೆಚ್ಚು ಅರ್ಜಿಗಳನ್ನ ತಿರಸ್ಕಾರ ಮಾಡಲಾಗಿದೆ. ಅದ್ರಲ್ಲೂ 18 ವರ್ಷ ಆಗಲು ಒಂದು ವಾರ, ಒಂದು ತಿಂಗಳು, 2-3 ವಾರ ಹೀಗೆ ಹಲವು ಜೋಡಿಗಳಿದ್ದು ಅವರ ಅರ್ಜಿಗಳನ್ನ ಅಂಗೀಕಾರ ಮಾಡಿಲ್ಲ ಅಂತ ಸ್ವತಃ ಶಾಸಕ ಸುಬ್ಬಾರೆಡ್ಡಿ ಹೇಳಿದರು. ಇದನ್ನೂ ಓದಿ: ಆಧ್ಯಾತ್ಮಿಕ ಶುದ್ಧೀಕರಣ ಕಾರ್ಯಕ್ರಮದಲ್ಲಿ ಕಪ್ಪೆಯ ವಿಷ ಸೇವಿಸಿ ಮೆಕ್ಸಿಕನ್‌ ನಟಿ ಸಾವು!

    ಸಲ್ಲಿಕೆಯಾಗಿದ್ದ ಅರ್ಜಿಗಳನ್ನ ಬಾಲ್ಯವಿವಾಹಗಳನ್ನ ತಡೆಯುವ ಸಲುವಾಗಿ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಒಂದೊಂದಾಗಿ ಪರಿಶೀಲನೆ ನಡೆಸಿದಾಗ ಅಪ್ರಾಪ್ತರು ಸಹ ಮದುವೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿರೋದು ಬೆಳಕಿಗೆ ಬಂದಿದೆ. ಇದ್ರಿಂದ ಎಚ್ಚೆತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳು ಕಾನೂನು ಪ್ರಕಾರ 18 ವರ್ಷ ವಯಸ್ಸಾಗಿರುವ ವಧು ಹಾಗೂ 21 ವರ್ಷ ತುಂಬಿದ ವರನ ವಿವಾಹಕ್ಕೆ ಮಾತ್ರ ಅನುಮತಿ ಕೊಟ್ಟಿದ್ದಾರೆ. ಇನ್ನೂ ಶಾಸಕರ ಆಫರ್ಸ್ ಕೇಳಿದ ಕೂಡಲೇ ಮತ್ತೆ ಈ ಆಫರ್ಸ್ ಸಿಗುತ್ತೋ ಇಲ್ವೋ ಅಂತ ಅಪ್ರಾಪ್ತರು ಸಹ ಮದುವೆಯಾಗುವ ಬಯಕೆ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿಕೊಂಡಿದ್ರು. ಆದ್ರೆ ಅಪ್ರಾಪ್ತರ ಮದುವೆಗೆ ಬ್ರೇಕ್ ಹಾಕಿದ್ದಾರೆ.

  • ರಾಜ್ಯದಲ್ಲಿ 1,89,958 ಮಕ್ಕಳಲ್ಲಿ ಅಪೌಷ್ಠಿಕತೆ ಸಮಸ್ಯೆ

    ರಾಜ್ಯದಲ್ಲಿ 1,89,958 ಮಕ್ಕಳಲ್ಲಿ ಅಪೌಷ್ಠಿಕತೆ ಸಮಸ್ಯೆ

    ಬೆಂಗಳೂರು: ಕಳೆದ 6 ತಿಂಗಳಲ್ಲಿ ರಾಜ್ಯಾದ್ಯಂತ ಅಪೌಷ್ಠಿಕತೆಯಿಂದ (Malnutrition) ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Women and Child Welfare Department) ನೀಡಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ 1,89,958 ಮಕ್ಕಳು ಅಪೌಷ್ಠಿಕತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದನ್ನೂ ಓದಿ: ಬೆಂಗ್ಳೂರು ಟ್ರಾಫಿಕ್ ತಪ್ಪಿಸಲು ನಯಾ ಪ್ಲಾನ್- 273 ಕೋಟಿ ವೆಚ್ಚದಲ್ಲಿ ಬರಲಿದೆ ಫ್ರೀ ಕಾರಿಡಾರ್ ರಸ್ತೆ

    1,80,130 ಮಕ್ಕಳು ಮಧ್ಯಮ ಪ್ರಮಾಣದ ಅಪೌಷ್ಠಿಕತೆಯಿಂದ ಬಳಲುತ್ತಿದ್ದರೆ, 9,828 ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಇದರಿಂದ ಸರ್ಕಾರ ಮಕ್ಕಳ (Children) ಪೌಷ್ಠಿಕತೆಗಾಗಿ ಕೋಟಿ ಕೋಟಿ ಹಣ ಖರ್ಚು ಮಾಡ್ತಿದ್ದರೂ ಅಪೌಷ್ಠಿಕತೆಯ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ ಅನ್ನೋ ಆರೋಪ ಕೇಳಿಬರ್ತಿದೆ. ಇದನ್ನೂ ಓದಿ: 98 ವರ್ಷದ ವೃದ್ಧ ಜೈಲಿನಿಂದ ಬಿಡುಗಡೆ – ಎಸ್ಕಾರ್ಟ್ ನೀಡಿ ಮನೆಗೆ ಕಳುಹಿಸಿದ ಪೊಲೀಸರು

    ಅದರಲ್ಲೂ ಮೈಸೂರು (Mysuru) ಮತ್ತು ಬೀದರ್ ಜಿಲ್ಲೆಗಳಲ್ಲಿ ಅತಿಹೆಚ್ಚಿನ ಅಪೌಷ್ಠಿಕತೆಯಿಂದ ಮಕ್ಕಳು ಬಳಲುತ್ತಿದ್ದಾರೆ. ಇದರಿಂದ ಸರ್ಕಾರ ಮಕ್ಕಳ ಪೌಷ್ಠಿಕತೆ ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ. ಅದಕ್ಕಾಗಿ ಶಾಲೆಯಲ್ಲಿ ಮಕ್ಕಳಿಗೆ ವಾರದಲ್ಲಿ ಎರಡು ಮೊಟ್ಟೆ, 150 ಮಿಲಿ ಹಾಲು ನೀಡಲಾಗುತ್ತೆ ಎಂದು ಸಿಎಂ (Chief Minister) ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಾಸನದಲ್ಲಿ 13ರ ಬಾಲಕಿ ಗರ್ಭಿಣಿ – ಅತ್ಯಾಚಾರ ಎಸಗಿದ್ದ ಮೂವರು ಅರೆಸ್ಟ್

    ಹಾಸನದಲ್ಲಿ 13ರ ಬಾಲಕಿ ಗರ್ಭಿಣಿ – ಅತ್ಯಾಚಾರ ಎಸಗಿದ್ದ ಮೂವರು ಅರೆಸ್ಟ್

    ಹಾಸನ: 13 ವರ್ಷದ ಬಾಲಕಿ ಮೇಲೆ ಮೂವರು ಕಾಮುಕರು ಅತ್ಯಾಚಾರ ಎಸಗಿದ್ದು, ಬಾಲಕಿ ಗರ್ಭಿಣಿಯಾಗಿರುವ ಪ್ರಕರಣ (FIR) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಗ್ರಾಮವೊಂದರಲ್ಲಿ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಗಡಿಯಲ್ಲಿ ಭಾರತ – ಚೀನಾ ಸೈನಿಕರ ಸಂಘರ್ಷ ; ರಾಜನಾಥ್ ಸಿಂಗ್ ನಿವಾಸದಲ್ಲಿ ಸಭೆ

    ಅಪ್ರಾಪ್ತೆ ಗರ್ಭಿಣಿಯಾದ (Pregnant) ನಂತರ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳಾದ (Accused) ಸ್ವಾಗತ್, ಸುದರ್ಶನ್, ಪಾಪಣ್ಣ ಮೂವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: 5 ಮತ್ತು 8ನೇ ತರಗತಿಗಳಿಗೂ ವಿಶೇಷ ವಾರ್ಷಿಕ ಪರೀಕ್ಷೆ – ಶಿಕ್ಷಣ ಇಲಾಖೆ ಆದೇಶ

    ಸದ್ಯ ಬಾಲಕಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ (Women and Child Welfare Department)  ಆಶ್ರಯದಲ್ಲಿರಿಸಲಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ (Police Station) ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

    Live Tv
    [brid partner=56869869 player=32851 video=960834 autoplay=true]

  • ಕಾಯಿಲೆಯೆಂದು ಮಗುವನ್ನೇ ಬಿಟ್ಟುಹೋದ ಪೋಷಕರು

    ಕಾಯಿಲೆಯೆಂದು ಮಗುವನ್ನೇ ಬಿಟ್ಟುಹೋದ ಪೋಷಕರು

    ಮಂಡ್ಯ: ಕಾಯಿಲೆಯಿದೆ ಎಂದು ಮಗುವನ್ನು ಬಿಟ್ಟು ಹೋದ ಘಟನೆ ನಗರದ ಫ್ಯಾಕ್ಟರಿ ಸರ್ಕಲ್‍ನಲ್ಲಿ ಇರುವ ಚರ್ಚ್‍ನಲ್ಲಿ ನಡೆದಿದೆ.

    ನಮಗೆ ಒಂದು ಹೊತ್ತಿನ ಊಟವಿಲ್ಲದಿದ್ದರೂ ಪರವಾಗಿಲ್ಲ. ಮಗುವಿಗೆ ಉತ್ತಮ ಚಿಕಿತ್ಸೆ ಕೊಡಿಸಬೇಕು. ಒಳ್ಳೆಯ ಶಿಕ್ಷಣ ಕೊಡಿಸಬೇಕೆಂದು ಅದೇಷ್ಟೋ ತಂದೆ ತಾಯಿಗಳು ಹೊಟ್ಟೆ ಬಟ್ಟೆ ಕಟ್ಟಿ ತಮ್ಮ ಮಕ್ಕಳಿಗೋಸ್ಕರ ಬದುಕುತ್ತಿದ್ದಾರೆ. ಅಂತಹದರಲ್ಲಿ ತಮ್ಮ ಮಗುವಿಗೆ ಕಾಯಿಲೆ ಇದೆ ಎಂದು ಆ ಮಗುವನ್ನು ಅನಾಥ ಮಾಡಿ ಪೋಷಕರು ಬಿಟ್ಟು ಹೋಗಿದ್ದು, ಇತ್ತ ತಂದೆ ತಾಯಿಗಳ ಲಾಲನೆ ಪಾಲನೆ ಇಲ್ಲದೇ ಮಗು ಒದ್ದಾಡುತ್ತಿದೆ.

    ಇಂದು ಬೆಳಗ್ಗೆ 6:30ರ ವೇಳೆಗೆ ನಗರದ ಫ್ಯಾಕ್ಟರಿ ಸರ್ಕಲ್‍ನಲ್ಲಿ ಇರುವ ಚರ್ಚ್‍ನಲ್ಲಿ ಪೋಷಕರು ಮಗುವನ್ನು ಅನಾಥವಾಗಿ ಬಿಟ್ಟು ಹೋಗಿದ್ದಾರೆ. ಇದನ್ನು ಕಂಡ ಚರ್ಚ್‍ನ ಸಿಬ್ಬಂದಿ ಆ ಕಂದಮ್ಮನನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸಿದ್ದಾರೆ.

    ಮಗುವನ್ನು ವಶಕ್ಕೆ ಪಡೆದಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಗುವಿನ ಆರೋಗ್ಯ ಚೆನ್ನಾಗಿ ಇಲ್ಲ ಎಂದು ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪಾಪ ಈ ಎಳೆಯ ಕಂದಮ್ಮನಿಗೆ ಅಪಸ್ಮಾರ ಇದ್ದು, ಒದ್ದಾಡುತ್ತಿದೆ. ಅಲ್ಲದೇ ಈ ಮಗುವಿಗೆ ಬುದ್ಧಿಮಾಂದ್ಯತೆಯೂ ಸಹ ಇದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಹೀಗಾಗಿ ಮಿಮ್ಸ್ ವೈದ್ಯರು ಮಗುವಿಗೆ ಚಿಕಿತ್ಸೆ ನೀಡುತ್ತಾ ಇದ್ದಾರೆ.

  • ಗಣಿ ಜಿಲ್ಲೆಯಲ್ಲಿ 7 ಬಾಲ್ಯ ವಿವಾಹಕ್ಕೆ ಬ್ರೇಕ್

    ಗಣಿ ಜಿಲ್ಲೆಯಲ್ಲಿ 7 ಬಾಲ್ಯ ವಿವಾಹಕ್ಕೆ ಬ್ರೇಕ್

    ಬಳ್ಳಾರಿ: ಜಿಲ್ಲೆಯಲ್ಲಿ ನಡೆಯಬೇಕಿದ್ದ 7 ಬಾಲ್ಯ ವಿವಾಹಗಳನ್ನ ಪತ್ತೆಹಚ್ಚಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ತಂಡ ಅವುಗಳನ್ನ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಬಳ್ಳಾರಿ ತಾಲೂಕಿನ ಕುಂಟನಾಳು ಗ್ರಾಮದಲ್ಲಿ ಮೇ 10-13ರಂದು ಪ್ರತ್ಯೇಕವಾಗಿ 7 ಬಾಲ್ಯವಿವಾಹಗಳನ್ನ ಗುರು-ಹಿರಿಯರು ನಿಶ್ಚಯಿಸಿದ್ದರು. ಈ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ಕೂಡಲೇ ಗ್ರಾಮಕ್ಕೆ ತೆರಳಿ, ಬಾಲ್ಯ ವಿವಾಹಗಳನ್ನ ತಡೆದಿದ್ದಾರೆ.

    17 ವರ್ಷದ ಇಬ್ಬರು, 16 ವರ್ಷದ ನಾಲ್ವರು ಹಾಗೂ 14 ವರ್ಷದ ಓರ್ವ ಬಾಲಕಿಯನ್ನ ಅಧಿಕಾರಿಗಳ ತಂಡ ರಕ್ಷಣೆ ಮಾಡಿ ಬಳ್ಳಾರಿಯ ಶಾಂತಿ ಧಾಮದಲ್ಲಿರಿಸಿದ್ದಾರೆ. ಈ ಎಲ್ಲ ಬಾಲ್ಯ ವಿವಾಹಗಳನ್ನು ಪ್ರತ್ಯೇಕವಾಗಿ ಆಯೋಜಿಸಲಾಗಿತ್ತು. ಜಿಲ್ಲೆಯ ಕುರುಗೋಡು ತಾಲೂಕಿನ ಲಕ್ಷ್ಮಿಪುರದಲ್ಲಿ ಮೇ 11ರಂದು ನಡೆಯಬೇಕಿದ್ದ ಈ ಬಾಲ್ಯ ವಿವಾಹಗಳನ್ನ ತಡೆಯಲಾಗಿದೆ. ವಧು- ವರರ ಪೋಷಕರಿಂದ ಮುಚ್ಚಳಿಕೆ ಬರೆಯಿಸಿಕೊಂಡು ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಒಂದೇ ದಿನ ನಾಲ್ಕು ಬಾಲ್ಯ ವಿವಾಹ ತಡೆದ ಅಧಿಕಾರಿಗಳು

    ಒಂದೇ ದಿನ ನಾಲ್ಕು ಬಾಲ್ಯ ವಿವಾಹ ತಡೆದ ಅಧಿಕಾರಿಗಳು

    – ಪ್ರೀತಿ, ಪ್ರೇಮದ ನೆಪವೊಡ್ಡಿ ವಿವಾಹ

    ಬಳ್ಳಾರಿ: ಲಾಕ್‍ಡೌನ್ ನಡುವೆಯೂ ಅಕ್ಷಯ ತೃತಿಯ ನಿಮಿತ್ತ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ನಾಲ್ಕು ಜೋಡಿ ಬಾಲ್ಯವಿವಾಹ ಪ್ರಕರಣಗಳು ಪತ್ತೆ ಯಾಗಿವೆ.

    ಕೂಡ್ಲಿಗಿ ತಾಲೂಕು, ಬಳ್ಳಾರಿ ನಗರ, ಸಂಡೂರು ತಾಲೂಕು ಹಾಗೂ ಬಳ್ಳಾರಿ ತಾಲೂಕಿನಲ್ಲಿ ನಡೆಯುತ್ತಿದ್ದ ಎರಡು ನಿಶ್ಚಿತಾರ್ಥ ಹಾಗೂ ಎರಡು ಬಾಲ್ಯವಿವಾಹಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಡೆದಿದ್ದಾರೆ.

    ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಮೂಲದ 17 ವರ್ಷದ ಯುವತಿಗೆ ಬೆಳಗ್ಗೆ 5 ಗಂಟೆಗೆ ತರಾತುರಿಯಲ್ಲಿ ನಿಶ್ಚಿತಾರ್ಥ ಮಾಡಿ ಮುಗಿಸಿದ್ದಾರೆ. ಇನ್ನೊಂದೆಡೆ ಬಳ್ಳಾರಿ ಗಾಂಧಿನಗರ ಮೂಲದ 16.8 ವರ್ಷದ ಬಾಲಕಿಗೆ ನಿಶ್ಚಿತಾರ್ಥ ಮಾಡಲು ಮುಂದಾದಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ರಕ್ಷಿಸಿದ್ದಾರೆ. ಈ ಇಬ್ಬರು ಬಾಲಕಿಯೊಂದಿಗೆ ಮದುವೆಯಾಗಲು ಮುಂದಾಗಿದ್ದ ವರರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಜಿಲ್ಲೆಯ ಸಂಡೂರು ತಾಲೂಕು ಹಾಗೂ ಬಳ್ಳಾರಿ ತಾಲೂಕಿನ ಯಾಳ್ಪಿ ಗ್ರಾಮದಲ್ಲಿ ನಡೆಯಬೇಕಿದ್ದ ಎರಡು ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ. ಅಲ್ಲದೆ ಬಾಲ್ಯ ವಿವಾಹ ತಡೆಯಲು ಹೋಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ವಧು-ವರರ ಕಡೆಯವರು ಕಟ್ಟುಕಥೆಗಳನ್ನು ಹೇಳಿದ್ದಾರೆ. ಬಳ್ಳಾರಿಯ ಗಾಂಧಿನಗರ ಮೂಲದ 16 ವರ್ಷದ ಬಾಲಕಿಯ ಕಡೆಯವರು ಪ್ರೀತಿ, ಪ್ರೇಮ, ಪ್ರಣಯದ ಮಾತುಗಳನ್ನಾಡಿದ್ದಾರೆ. ನನ್ನ ಮಗಳು ಕಾಲೇಜು ಹಂತದಲ್ಲಿ ಹುಡುಗನನ್ನು ಪ್ರೀತಿ ಮಾಡಿದ್ದಾಳೆ. ಹೀಗಾಗಿ ನನ್ನ ಮನೆತನದ ಪ್ರತಿಷ್ಠೆ- ಗೌರವ ಏನಾದೀತು ಎಂಬ ಕಟ್ಟುಕಥೆಯನ್ನು ಕಟ್ಟಿದ್ದಾರೆ.

    ಇಬ್ಬರು ಬಾಲಕಿಯರು ಶಾಂತಿಧಾಮದಲ್ಲಿ, ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹಾಗೂ ಬಳ್ಳಾರಿ ಗಾಂಧಿನಗರ ಮೂಲದ ಇಬ್ಬರು ಬಾಲಕಿಯರನ್ನು ರಕ್ಷಣೆ ಮಾಡಿ ನಗರದ ಶಾಂತಿಧಾಮದಲ್ಲಿ ಇರಿಸಲಾಗಿದೆ. ಅಲ್ಲದೆ ನಾಲ್ಕು ಜನ ವರನ ಅವಲಂಬಿತರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

  • 16ರ ಬಾಲಕಿಗೆ ಬಾಲ್ಯ ವಿವಾಹ – ಮದುಮಗ ಸೇರಿದಂತೆ 6 ಮಂದಿ ಅರೆಸ್ಟ್

    16ರ ಬಾಲಕಿಗೆ ಬಾಲ್ಯ ವಿವಾಹ – ಮದುಮಗ ಸೇರಿದಂತೆ 6 ಮಂದಿ ಅರೆಸ್ಟ್

    ಚಾಮರಾಜನಗರ: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಕ್ಷೇತ್ರದಲ್ಲೇ ಬಾಲ್ಯವಿವಾಹ ನಡೆದಿದ್ದು, ಈ ಬಾಲ್ಯ ವಿವಾಹದ ವರದಿ ಮಾಡಲು ತೆರಳಿದ್ದ ಮಾಧ್ಯಮದವರ ಮೇಲೆ ಹಲ್ಲೆ ಯತ್ನವೂ ನಡೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಸ್ವಕ್ಷೇತ್ರ ಚಾಮರಾಜನಗರದ ಕಲ್ಯಾಣ ಮಂಟಪವೊಂದರಲ್ಲಿ ಬಾಲ್ಯ ವಿವಾಹ ನಡೆದಿದೆ. ಸಚಿವರ ಸಮುದಾಯಕ್ಕೆ ಸೇರಿದ 16 ವರ್ಷದ ಬಾಲಕಿಗೆ 24 ವರ್ಷದ ಯುವಕನೊಂದಿಗೆ ವಿವಾಹ ನೆರವೇರಿದೆ.

    ಚಾಮರಾಜನಗರದ ಉಪ್ಪಾರ ಬಡಾವಣೆಯ ಬಾಲಕಿಯೊಂದಿಗೆ ಅದೇ ಬಡಾವಣೆಯ ಯುವಕನೊಂದಿಗೆ ಮದುವೆ ನಡೆಯುತ್ತಿರುವ ಬಗ್ಗೆ ಮಕ್ಕಳ ಸಹಾಯವಾಣಿಗೆ ದೂರವಾಣಿ ಕರೆಯೊಂದು ಬಂದಿದೆ. ಈ ಮಾಹಿತಿ ಆಧರಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪೊಲೀಸರೊಂದಿಗೆ ಕಲ್ಯಾಣಮಂಟಪಕ್ಕೆ ಹೋಗಿದ್ದಾರೆ. ಆದರೆ ಅಷ್ಟೊತ್ತಿಗೆ ಮಾಂಗಲ್ಯಧಾರಣೆ ಆಗಿ ಹೋಗಿತ್ತು. ಬಾಲಕಿಗೆ 18 ವರ್ಷ ತುಂಬಿರುವ ಬಗ್ಗೆ ದಾಖಲಾತಿ ಒದಗಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಮದುಮಗ ಮಹೇಶ್ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಬಾಲಕಿಯನ್ನು ವಶಕ್ಕೆ ಪಡೆದು ಬಾಲಮಂದಿರದಲ್ಲಿ ಆಶ್ರಯ ನೀಡಲಾಗಿದೆ. ಈ ಸಂದರ್ಭದಲ್ಲಿ ವರದಿ ಮಾಡಲು ಹೋದ ಮಾಧ್ಯಮದವರ ಮೇಲೆ ಬಾಲಕಿಯ ಸಂಬಂಧಿಕರು ಹಲ್ಲೆ ಮಾಡಲು ಯತ್ನಿಸಿದ್ದಾರೆ. ಜೊತೆಗೆ ವಿಡಿಯೋ ಮಾಡದಂತೆ ಧಮ್ಕಿ ಹಾಕಿದ್ದಾರೆ.

    ಬಾಲ್ಯ ವಿವಾಹದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸಿ.ಪುಟ್ಟರಂಗಶೆಟ್ಟಿ, ಬಾಲ್ಯ ವಿಹಾಹಕ್ಕೆ ತಮ್ಮ ತೀವ್ರ ವಿರೋಧವಿದ್ದು ಯಾವುದೇ ಮುಲಾಜಿಲ್ಲದೆ ಪೋಷಕರ ವಿರುದ್ಧ ಕ್ರಮ ಜರುಗಿಸಲು ಪೊಲೀಸರಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.

  • ಬಾಲ್ಯ ವಿವಾಹ ತಡೆದ ಅಧಿಕಾರಿಗಳು: ನಾಪತ್ತೆಯಾದ್ರು ವಧು-ವರ

    ಬಾಲ್ಯ ವಿವಾಹ ತಡೆದ ಅಧಿಕಾರಿಗಳು: ನಾಪತ್ತೆಯಾದ್ರು ವಧು-ವರ

    ಬೆಂಗಳೂರು: ಬಾಲ್ಯ ವಿವಾಹ ನಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಮದುವೆ ಮನೆ ಮೇಲೆ ದಾಳಿ ನಡೆಸಿ, ಮದುವೆ ತಡೆದ ಘಟನೆ ನೆಲಮಂಗಲ ತಾಲೂಕಿನ ಹೊನ್ನಗಂಗಯ್ಯನ ಪಾಳ್ಯದಲ್ಲಿ ನಡೆದಿದೆ.

    ಹೊನ್ನಗಂಗಯ್ಯನ ಪಾಳ್ಯದ ಗಂಗಮ್ಮ ತಿಮ್ಮಯ್ಯ ಸಮುದಾಯ ಭವನದಲ್ಲಿ ಮದುವೆ ಆಯೋಜಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಕಲ್ಯಾಣ ಮಂಟಪಕ್ಕೆ ಬಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ನೆಲಮಂಗಲ ತಾಲೂಕು ಆಡಳಿತ ಅಧಿಕಾರಿಗಳು ವಿವಾಹ ತಡೆದಿದ್ದಾರೆ. ಆದರೆ ಅಧಿಕಾರಿಗಳು ಕಲ್ಯಾಣ ಮಂಟಪಕ್ಕೆ ಬಂದಿದ್ದಾರೆ ಎನ್ನುವುದು ವಧು-ವರರಿಗೆ ಗೊತ್ತಾಗಿದ್ದು ಅವರಿಬ್ಬರು ಮದುವೆ ಮಂಟಪಕ್ಕೆ ಆಗಮಿಸದೇ ನಾಪತ್ತೆಯಾಗಿದ್ದಾರೆ.

    ವಿವಾಹಕ್ಕೆ ಆಗಮಿಸಲಿದ್ದ ಸಂಬಂಧಿಕರಿಗಾಗಿ ತರತರಿಯ ಭೋಜನವನ್ನು ಸಿದ್ಧಪಡಿಸಲಾಗುತ್ತಿತ್ತು. ಹೀಗಾಗಿ ಅದನ್ನು ಕೂಡಾ ಅಧಿಕಾರಿಗಳು ತಡೆದರು. ಘಟನೆ ಸಂಬಂಧ ವಧು ಹಾಗೂ ವರನ ಪೋಷಕರ ವಿರುದ್ಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 20 ಸಾವಿರ ರೂ.ಗೆ ಮೂರು ದಿನದ ಹೆಣ್ಣು ಮಗು ಮಾರಾಟ-ಆರೋಪಿಗಳ ಬಂಧನ

    20 ಸಾವಿರ ರೂ.ಗೆ ಮೂರು ದಿನದ ಹೆಣ್ಣು ಮಗು ಮಾರಾಟ-ಆರೋಪಿಗಳ ಬಂಧನ

    ದಾವಣಗೆರೆ: ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆಯಾಗಿದ್ದು, 20 ಸಾವಿರ ರೂ. ಗೆ ಮೂರು ದಿನಗಳ ಹಸುಗೂಸನ್ನು ಮಾರಾಟ ಮಾಡುತ್ತಿದ್ದ ಪ್ರಕರಣ ನಗರದ ಅಜಾದ್ ನಗರದಲ್ಲಿ ಬೆಳಕಿಗೆ ಬಂದಿದೆ.

    ಅಜಾದ್ ನಗರದ ನಿವಾಸಿಗಳಾದ ಸಬೀನಾ ಹಾಗೂ ಸಿಕಂದರ್ ದಂಪತಿ ತಮ್ಮ ಮೂರು ದಿನಗಳ ಮಗುವನ್ನು ಮುಕ್ತಾರ್ ಎಂಬ ವ್ಯಕ್ತಿಗೆ ಮಾರಾಟ ಮಾಡಲು ಮುಂದಾಗುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.

    ಮಗು ಮಾರಾಟ ಮಾಡುವ ಕುರಿತು ಖಚಿತ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಇಲಾಖೆಯ ಡಿಡಿ ವಿಜಯಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ ಮಗುವನ್ನು ರಕ್ಷಣೆ ಮಾಡಿದ್ದಾರೆ.

    ಮಗುವನ್ನು ಮಾರಾಟ ಮಾಡಲು ಯತ್ನಿಸಿದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಗಳ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.