Tag: Woman Techie

  • 4 ನೇ ಮಹಡಿಯಿಂದ ಬಿದ್ದು ರಕ್ಷಿಸಲ್ಪಟ್ಟಿದ್ದ ಮಗುವಿನ ತಾಯಿ ಟೆಕ್ಕಿ ಆತ್ಮಹತ್ಯೆ!

    4 ನೇ ಮಹಡಿಯಿಂದ ಬಿದ್ದು ರಕ್ಷಿಸಲ್ಪಟ್ಟಿದ್ದ ಮಗುವಿನ ತಾಯಿ ಟೆಕ್ಕಿ ಆತ್ಮಹತ್ಯೆ!

    ಚೆನ್ನೈ: ಕೆಲದಿನಗಳ ಹಿಂದೆ ಪುಟ್ಟ ಕಂದಮ್ಮವೊಂದು ಅಪಾರ್ಟ್‌ ಮೆಂಟ್‌ನ ಬಾಲ್ಕನಿಯಿಂದ ಸನ್ ಶೇಡ್ ಮೇಲೆ ಬಿದ್ದಿದ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗಿತ್ತು. ಇದೀಗ ಈ ಮಿರಾಕಲ್ ಮಗುವಿನ ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಹೌದು. ಆಕಸ್ಮಿಕವಾಗಿ ತನ್ನ ಕೈಯಿಂದ ಜಾರಿ ಮಗು ಅಪಾರ್ಟ್‌ ಮೆಂಟ್‌ ಬಾಲ್ಕನಿಯಲ್ಲಿ (Apartment Balcony) ಬಿದ್ದ ಘಟನೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ನಿಂದನೆ ವ್ಯಕ್ತವಾಗಿದ್ದರಿಂದ ಮನನೊಂದು ಟೆಕ್ಕಿ ರಮ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಯಮತ್ತೂರಿನ (Coimbatore) ಕಾರಮಡೈಯಲ್ಲಿರುವ ತವರು ಮನೆಯಲ್ಲಿ ಭಾನುವಾರ ರಮ್ಯಾ ಸಾವಿನ ದಾರಿ ಹಿಡಿದಿದ್ದಾರೆ.

    ರಮ್ಯಾ (Techie Ramya) ಚೆನ್ನೈನ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಪತಿ ವೆಂಕಟೇಶ್ ಕೂಡ ಐಟಿ ಉದ್ಯೋಗಿ. ಎರಡು ವಾರಗಳ ಹಿಂದೆ ರಮ್ಯಾ ಮತ್ತು ಅವರ ಪತಿ ತಮ್ಮ ಮಗುವಿನೊಂದಿಗೆ ಕರಾಮಡೈನಲ್ಲಿರುವ ತಮ್ಮ ತವರು ಮನೆಗೆ ಬಂದಿದ್ದರು. ಇದನ್ನೂ ಓದಿ: ಇರಾನ್ ಅಧ್ಯಕ್ಷ ರೈಸಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

    ಭಾನುವಾರದಂದು ಪೋಷಕರು ಶುಭ ಸಮಾರಂಭದಲ್ಲಿ ಭಾಗವಹಿಸಲು ಮನೆಯಿಂದ ತೆರಳಿದ್ದರು. ಇತ್ತ ರಮ್ಯಾ ಮನೆಯಲ್ಲಿ ಒಬ್ಬಳೇ ಇದ್ದರು. ಇದೇ ಸಮಯವನ್ನು ನೋಡಿಕೊಂಡ ರಮ್ಯಾ ಆತ್ಮಹತ್ಯೆಯ ನಿರ್ಧಾರ ಮಾಡಿದರು. ಇನ್ನು ಸಮಾರಂಭ ಮುಗಿಸಿ ಹಿಂದಿರುಗಿದ ಪೋಷಕರಿಗೆ ಆಘಾತವೇ ಕಾದಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಮ್ಯಾರನ್ನು ಪೋಷಕರು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಆಕೆ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.

    ಅಂದು ನಡೆದಿದ್ದೇನು..?: ಏಪ್ರಿಲ್ 28 ರಂದು ರಮ್ಯಾ ಅವರ 7 ತಿಂಗಳ ಮಗು ಕೈಜಾರಿ 4ನೇ ಮಹಡಿಯಿಂದ ಮೊದಲ ಮಹಡಿಯ ಸನ್ ಶೇಡ್ ಮೇಲೆ ಬಿದ್ದಿತ್ತು. ಬಳಿಕ ಸ್ಥಳೀಯರು ಸೇರಿ ಮಗುವನ್ನು ರಕ್ಷಿಸಿದ್ದರು. ಇದಾದ ಬಳಿಕ ರಮ್ಯಾ ಸ್ಥಳೀಯರಿಂದ ಹಾಗೂ ಸಾಮಾಜಿಕ ಜಾಲದಲ್ಲಿ ಭಾರೀ ಟಿಕೆಗೆ ಒಳಗಾದರು.

    ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ತಾಯಿಯ ನಿರ್ಲಕ್ಷ್ಯವೇ ಕಾರಣ. ತಾಯಿ ಅಜಾಗರೂಕತೆಯಿಂದ ಈ ಅವಘಡ ಸಂಭವಿಸಿದೆ. ಹೀಗಾಗಿ ಈ ಘಟನೆ ನಡೆಯಲು ತಾಯಿಯೇ ನೇರ ಕಾರಣ ಎಂದೆಲ್ಲ ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಲಾಗಿತ್ತು. ಇದರಿಂದ ರಮ್ಯ ಮನೊಂದಿದ್ದರು. ಇಷ್ಟು ಮಾತ್ರವಲ್ಲದೇ ಕೆಲ ಸುದ್ದಿ ವಾಹಿನಿಗಳಿಗೆ ಬೈಟ್‌ ಕೊಟ್ಟಿದ್ದ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಕೂಡ ತಾಯಿಯ ವೈಫಲ್ಯವೇ ಈ ಘಟನೆಗೆ ಕಾರಣ ಎಂದು ಬಿಂಬಿಸುವಂತಹ ಹೇಳಿಕೆಗಳನ್ನು ನೀಡಿದ್ದರು. ಈ ಎಲ್ಲಾ ಅವಮಾನಗಳು, ಹೇಳಿಕೆಗಳು ರಮ್ಯಾ ಅವರನ್ನು ಖಿನ್ನತೆಗೆ ದೂಡಿತು. ಅಂತಿಮವಾಗಿ ಅವರ ಸಾವಿಗೆ ಕಾರಣವಾಯಿತು.

    ಪ್ರಕರಣ ಸಂಬಂಧ ಕರಮಡೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಟೆಕ್ಕಿ ಯುವತಿಯನ್ನ ಗುಂಡಿಕ್ಕಿ ಹತ್ಯೆಗೈದ ಪ್ರಿಯತಮ – ಪೊಲೀಸರು ಪ್ರಕರಣ ಭೇದಿಸಿದ್ದು ಹೇಗೆ?

    ಟೆಕ್ಕಿ ಯುವತಿಯನ್ನ ಗುಂಡಿಕ್ಕಿ ಹತ್ಯೆಗೈದ ಪ್ರಿಯತಮ – ಪೊಲೀಸರು ಪ್ರಕರಣ ಭೇದಿಸಿದ್ದು ಹೇಗೆ?

    ಮುಂಬೈ: ಪುಣೆಯ (Pune) ಐಟಿ ಸಂಸ್ಥೆಯೊಂದರಲ್ಲಿ ವ್ಯವಸ್ಥಾಪಕಿಯಾಗಿ (IT Professional) ಕೆಲಸ ಮಾಡುತ್ತಿದ್ದ 26 ವರ್ಷದ ಯುವತಿಯನ್ನ ಆಕೆಯ ಪ್ರಿಯತಮನೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಜ.28ರಂದು ಬೆಳಗ್ಗೆ ಲಕ್ಷ್ಮಿ ನಗರದ ಹಿಂಜೆವಾಡಿ ಪ್ರದೇಶದಲ್ಲಿರುವ ಹೋಟೆಲ್‌ ಕೊಠಡಿಯಲ್ಲಿ ತಲೆಗೆ ಗುಂಡಿಕ್ಕಿ ಹತ್ಯೆಗೈದಿದ್ದಾನೆ. ಮೃತ ಯುವತಿಯನ್ನು ವಂದನಾ ದ್ವಿವೇದಿ ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ರಿಷಬ್ ನಿಗಮ್ ಎಂದು ಗುರುತಿಸಲಾಗಿದೆ. ರಿಷಬ್‌ ಉತ್ತರ ಪ್ರದೇಶದ ಲಕ್ನೋ ನಿವಾಸಿಯಾಗಿದ್ದು, ಕೊಲೆ ಮಾಡಿ ಮುಂಬೈಗೆ ಎಸ್ಕೇಪ್‌ ಆಗುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಪಿಂಪ್ರಿ ಚಿಂಚ್‌ವಾಡ್ ಪೊಲೀಸರು (Pimpri Chinchwad Police) ತಿಳಿಸಿದ್ದಾರೆ.

    ಪೊಲೀಸರ ಪ್ರಕಾರ, ವಂದನಾ ಶನಿವಾರ ತನ್ನ ಪ್ರಿಯಕರನೊಂದಿಗೆ ಹೋಟೆಲ್‌ಗೆ ಬಂದಿದ್ದಳು. ಮೃತ ಯುವತಿ ಹಾಗೂ ಆರೋಪಿ ರಿಷಬ್‌ ಕಳೆದ 10 ವರ್ಷಗಳಿಂದಲೂ ಸಂಬಂಧ ಹೊಂದಿದ್ದರು. ಇತ್ತೀಚೆಗೆ ಇಬ್ಬರ ನಡುವೆ ವೈಯಕ್ತಿಕ ಕಾರಣಗಳಿಗೆ ಜಗಳವಾಗಿತ್ತು. ವಂದನಾ ನಡವಳಿಕೆಯ ಬಗ್ಗೆ ಸಂಶಯ ಪಟ್ಟಿದ್ದ ರಿಷಬ್‌ ಆಕೆಯನ್ನ ಕೊಲ್ಲಲ್ಲು ಸ್ಕೆಚ್‌ ಹಾಕಿದ್ದ. ಭಾನುವಾರವೂ ಇಬ್ಬರ ನಡುವೆ ಜಗಳ ನಡೆಯುತ್ತಿದ್ದಾಗಲೇ ರಿಷಬ್‌, ವಂದನಾ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹನುಮಧ್ವಜ ಸಂಘರ್ಷ; ರಾಜ್ಯಾದ್ಯಂತ ಹೋರಾಟದ ಕಿಚ್ಚು – ಮಂಡ್ಯದಲ್ಲಿಂದು ಹೆಚ್‌ಡಿಕೆ, ರೆಡ್ಡಿ ಪಾದಯಾತ್ರೆ

    ಘಟನೆಯ ನಂತರ ಹೋಟೆಲ್‌ನಿಂದ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದರು. ಭಾನುವಾರ ರಿಷಬ್‌ ಮುಂಬೈಗೆ ಎಸ್ಕೇಪ್‌ ಆಗುತ್ತಿದ್ದ ವೇಳೆ ಬಂಧಿಸಿದ್ದಾರೆ. ಇದನ್ನೂ ಓದಿ: ಶಾಲಾ ಬಸ್-ಟ್ರ್ಯಾಕ್ಟರ್‌ ನಡುವೆ ಭೀಕರ ಅಪಘಾತ – ನಾಲ್ವರು ವಿದ್ಯಾರ್ಥಿಗಳ ದುರ್ಮರಣ 

    ಸದ್ಯ ವಂದನಾಳ ಶವ ಪತ್ತೆಯಾದ ಹೋಟೆಲ್ ಕೋಣೆಗೆ ಪೊಲೀಸರು ಸೀಲ್ ಹಾಕಿದ್ದಾರೆ ಮತ್ತು ರಿಷಬ್ ಅವರನ್ನು ಕೊಲ್ಲಲು ಬಳಸಿದ್ದ ಗನ್ ಎಲ್ಲಿಂದ ಬಂತು ಅನ್ನೋ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

  • ಗೆಳತಿ ಮೇಲೆ ಪ್ರೀತಿ; ಲಿಂಗ ಬದಲಿಸಿಕೊಂಡ್ರೂ ಮದುವೆಗೆ ಒಪ್ಪದ ಮಹಿಳಾ ಟೆಕ್ಕಿಯನ್ನ ಜೀವಂತ ಸುಟ್ಟು ಹತ್ಯೆ

    ಗೆಳತಿ ಮೇಲೆ ಪ್ರೀತಿ; ಲಿಂಗ ಬದಲಿಸಿಕೊಂಡ್ರೂ ಮದುವೆಗೆ ಒಪ್ಪದ ಮಹಿಳಾ ಟೆಕ್ಕಿಯನ್ನ ಜೀವಂತ ಸುಟ್ಟು ಹತ್ಯೆ

    ಚೆನ್ನೈ: ಮಹಿಳಾ ಟೆಕ್ಕಿಯನ್ನು (Women Techie) ಮದುವೆಯಾಗಲು ಲಿಂಗ ಬದಲಾಯಿಸಿಕೊಂಡಿದ್ದ ಮಾಜಿ ಸಹಪಾಠಿ, ಆಕೆ ಮೇಲೆ ಬ್ಲೇಡ್‌ನಿಂದ ಹಲ್ಲೆ ನಡೆಸಿ ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ತಮಿಳುನಾಡಿನಲ್ಲಿ (Tamil Nadu) ನಡೆದಿದೆ.

    24 ವರ್ಷದ ಸಾಫ್ಟ್‌ವೇರ್‌ ಎಂಜಿನಿಯರ್‌ ನಂದಿನಿ ಕೊಲೆಯಾದ ಯುವತಿ. ಆಕೆಯ ಹುಟ್ಟುಹಬ್ಬದ ಮುನ್ನಾದಿನ ಈ ಘಟನೆ ನಡೆದಿದೆ. ಚೆನ್ನೈನ (Chennai) ದಕ್ಷಿಣ ಉಪನಗರವಾದ ಕೆಲಂಬಾಕ್ಕಂ ಬಳಿಯ ತಲಂಬೂರ್‌ನಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ವೆಟ್ರಿಮಾರನ್ ಅಲಿಯಾಸ್ ಪಾಂಡಿ ಮಹೇಶ್ವರಿ (26)ಯಿಂದ ಈ ಹತ್ಯೆ ನಡೆದಿದೆ. ನಂದಿನಿಗೆ ಹುಟ್ಟುಹಬ್ಬದ ಸರ್ಪ್ರೈಸ್‌ ನೀಡುವ ನೆಪದಲ್ಲಿದಲ್ಲಿ ಆರೋಪಿಯಿಂದ ಹತ್ಯೆ ನಡೆದಿದೆ. ಇದನ್ನೂ ಓದಿ: ಆಕ್ಸಿಡೆಂಟ್ ಆಗಿ ಕಟ್ ಆದ ತಲೆ ಮೂರೂವರೆ ಗಂಟೆ ಶೋಧದ ಬಳಿಕ ಸಿಕ್ತು..!

    ಮಧುರೈ ಮೂಲದ ಮತ್ತು ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ನಂದಿನಿ ಚೆನ್ನೈನಲ್ಲಿ ಸಂಬಂಧಿಕರೊಂದಿಗೆ ನೆಲೆಸಿದ್ದಳು. ನಂದಿನಿ ಸಹಪಾಠಿಯಾಗಿದ್ದ ಪಾಂಡಿ ಮಹೇಶ್ವರಿ ಲಿಂಗ ಬದಲಾಯಿಸಿಕೊಂಡು ವೆಟ್ರಿಮಾರನ್ ಆಗಿದ್ದ. ಗೆಳತಿ ಮೇಲಿನ ಪ್ರೀತಿಯಿಂದ ಪಾಂಡಿ ಮಹೇಶ್ವರಿ ಲಿಂಗ ಬದಲಾಯಿಸಿಕೊಂಡಿದ್ದಳು. ನಂತರ ವೆಟ್ರಿಮಾರನ್‌ ಆಗಿ ಬದಲಾಗಿದ್ದ.

    ಚೆನ್ನೈನಲ್ಲಿ ಸ್ನೇಹಿತರಾಗಿದ್ದ ಇವರು ಒಟ್ಟಿಗೆ ವಾಸಿಸುತ್ತಿದ್ದರು. ಯಾವುದೇ ಲೈಂಗಿಕ ದೌರ್ಜನ್ಯದ ಸುಳಿವು ಇನ್ನೂ ಕಂಡುಬಂದಿಲ್ಲ. ವೆಟ್ರಿಮಾರನ್ ಈ ಹಿಂದೆ ಹಿಂಸಾತ್ಮಕ ಪ್ರವೃತ್ತಿಯನ್ನು ಪ್ರದರ್ಶಿಸಿದ್ದಾನೆಯೇ ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಾಂಬರಂ ಪೊಲೀಸ್ ಕಮಿಷನರ್ ಅಮಲ್ರಾಜ್ ತಿಳಿಸಿದ್ದಾರೆ. ಇದನ್ನೂ ಓದಿ: ಮಿಮಿಕ್ರಿ ಮಾಡೋದು ಕಲೆ ಆಗಿದ್ದು, ಬೇಕಿದ್ರೆ ಸಾವಿರ ಬಾರಿ ಮಾಡ್ತೀನಿ: ಟಿಎಂಸಿ ಸಂಸದ

    ಇವರಿಬ್ಬರ ನಡುವಿನ ಸಂಬಂಧದಲ್ಲಿ ಕರಾಳ ತಿರುವು ಮೂಡಿರುವುದು ತನಿಖೆಯಿಂದ ತಿಳಿದುಬಂದಿದೆ. ಮಧುರೈನಲ್ಲಿ ಒಟ್ಟಿಗೆ ಓದಿದ ನಂದಿನಿ, ವೆಟ್ರಿಮಾರನ್ ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರವೂ ಸ್ನೇಹವನ್ನು ಮುಂದುವರೆಸಿದ್ದಳು. ಇವರಿಬ್ಬರೂ ತೊರೈಪಾಕ್ಕಂನಲ್ಲಿರುವ ಖಾಸಗಿ ಐಟಿ ಸಂಸ್ಥೆಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ನಂದಿನಿ ಬೇರೆಯವರ ಮೇಲೆ ಆಸಕ್ತಿ ಹೊಂದಿದ್ದಾಳೆ ಎಂಬ ಶಂಕೆ ವೆಟ್ರಿಮಾರನ್‌ನಲ್ಲಿ ಮೂಡಿತ್ತು. ಇದು ಭೀಕರ ಹತ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕೊಲೆ ಆರೋಪದಡಿ ವೆಟ್ರಿಮಾರನ್‌ನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ಸೇನೆ, ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ – ಮೂವರು ನಕ್ಸಲರ ಹತ್ಯೆ

  • ಮನೆ ಶುಚಿಗೊಳಿಸುವಾಗ ಕಾಲು ಜಾರಿ ಬಿದ್ದು ಮಹಿಳಾ ಟೆಕ್ಕಿ ಸಾವು

    ಮನೆ ಶುಚಿಗೊಳಿಸುವಾಗ ಕಾಲು ಜಾರಿ ಬಿದ್ದು ಮಹಿಳಾ ಟೆಕ್ಕಿ ಸಾವು

    ಬೆಂಗಳೂರು: ಮನೆ ಸ್ವಚ್ಛಗೊಳಿಸುತ್ತಿರುವ ಸಂದರ್ಭದಲ್ಲಿ ಕಾಲು ಜಾರಿ ಅಪಾರ್ಟ್‍ಮೆಂಟ್‍ನಿಂದ ಕೆಳಗೆ ಬಿದ್ದು ಮಹಿಳಾ ಟೆಕ್ಕಿಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಖುಷ್ಬು ಅಶೀಷ್ ತ್ರಿವೇದಿ (31) ಸಾವನ್ನಪ್ಪಿರುವ ಮಹಿಳೆ. ಈ ಘಟನೆ ಬೆಂಗಳೂರಿನ ಕಾಡುಗೋಡಿ (Kadugodi) ಸಮೀಪದ ದೊಡ್ಡಬನಹಳ್ಳಿಯ ಬಿಡಿಎ ವಿಂಧ್ಯಗಿರಿ ಅಪಾರ್ಟಮೆಂಟ್ ನಲ್ಲಿ ನಡೆದಿದೆ. ಇದನ್ನೂ ಓದಿ: ಕಾರು ಅಡ್ಡಗಟ್ಟಿ 50 ಲಕ್ಷ ರೂ. ಹಣ ದೋಚಿದ ಕಿಡಿಗೇಡಿಗಳು

    ತ್ರಿವೇದಿಯವರು ಎಂದಿನಂತೆ ಅಪಾರ್ಟ್ ಮೆಂಟ್‍ನ 5ನೇ ಮಹಡಿಯಲ್ಲಿರುವ ತಮ್ಮ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದರು. ಅಂತೆಯೇ ಮನೆಯ ಹೊರಗಡೆ ಕ್ಲೀನ್ ಮಾಡುತ್ತಿದ್ದ ವೇಳೆ ಕಾಲು ಜಾರಿ ಆಯತಪ್ಪಿ ಕಟ್ಟಡದಿಂದ ಕೆಳಕ್ಕೆ ಬಿದ್ದಿದ್ದಾರೆ. ಪರಿಣಾಮ ಗಂಭೀರ ಗಾಯಗೊಂಡು ತ್ರಿವೇದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಏಕಾಏಕಿ ರೂಮ್ ಲಾಕ್ ಮಾಡ್ಕೊಂಡು ಮಹಿಳಾ ಟೆಕ್ಕಿ ನೇಣಿಗೆ ಶರಣು

    ಏಕಾಏಕಿ ರೂಮ್ ಲಾಕ್ ಮಾಡ್ಕೊಂಡು ಮಹಿಳಾ ಟೆಕ್ಕಿ ನೇಣಿಗೆ ಶರಣು

    ಬೆಂಗಳೂರು: ಮಹಿಳಾ ಟೆಕ್ಕಿಯೊಬ್ಬರು (Woman Techie) ಆತ್ಮಹತ್ಯೆಗೆ ಶರಣಾದ ಘಟನೆ ಸಿಲಿಕಾನ್ ಸಿಟಿಯ ಜೋಗುಪಾಳ್ಯದಲ್ಲಿ ನಡೆದಿದೆ.

    ದಿವ್ಯಾ(30) ಆತ್ಮಹತ್ಯೆಗೆ ಶರಣಾದ ಟೆಕ್ಕಿ. ದಿವ್ಯಾ ಅವರು 2014 ರಲ್ಲಿ ಅರವಿಂದ್ ಎಂಬ ಟೆಕ್ಕಿಯನ್ನ ವಿವಾಹವಾಗಿದ್ದರು. ದಂಪತಿ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಗಳಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

    ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ದಿವ್ಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾತ್ರಿ 10 ಗಂಟೆಯ ಬಳಿಕ ದಿವ್ಯಾ ರೂಮ್ ಡೋರ್ ಲಾಕ್ ಮಾಡಿಕೊಂಡಿದ್ದಾಳೆಂದು ಪತಿ ಅರವಿಂದ್ ಅತ್ತೆ ಮನೆಯವರಿಗೆ ಕರೆ ಮಾಡಿ ತಿಳಿಸಿದ್ದಾನೆ. ಕೂಡಲೇ ದಿವ್ಯಾ ಕುಟುಂಬಸ್ಥರು ಬಂದು ನೋಡಿದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದು ಬಯಲಾಗಿದೆ.

    ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಮೃತ ದಿವ್ಯಾ ಪೋಷಕರು ಕೊಲೆ ಆರೋಪ ಮಾಡುತ್ತಿದ್ದಾರೆ. ಮದುವೆಯ ನಂತರ ಗಂಡನ ಕುಟುಂಬಸ್ಥರು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಸದ್ಯ ಘಟನೆ ಸಂಬಂಧ ಹಲಸೂರು ಪೊಲೀಸರು ಪತಿ ಅರವಿಂದ್‍ನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಿಳಾ ಟೆಕ್ಕಿಯನ್ನು ಮನೆಯವರೆಗೂ ಫಾಲೋ ಮಾಡಿ ಕಾರ್ ಗ್ಲಾಸ್ ಒಡೆದ್ರು!

    ಮಹಿಳಾ ಟೆಕ್ಕಿಯನ್ನು ಮನೆಯವರೆಗೂ ಫಾಲೋ ಮಾಡಿ ಕಾರ್ ಗ್ಲಾಸ್ ಒಡೆದ್ರು!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಿತಿಮೀರಿದ ಪುಂಡರ ಹಾವಳಿ ಮಿತಿ ಮೀರುತ್ತಿದ್ದು, ಇದೀಗ ಫೋನ್ ನಂಬರ್ ಕೊಟ್ಟಿಲ್ಲವೆಂದು ಮಹಿಳಾ ಟೆಕ್ಕಿ (Woman Techie) ಯನ್ನು ಮನೆಯವರೆಗೂ ಫಾಲೋ ಮಾಡಿ ಕಾರ್ ಗ್ಲಾಸ್ (Car Glass) ಒಡೆದ ಪ್ರಸಂಗವೊಂದು ನಡೆದಿದೆ.

    ಬೆಂಗಳೂರು (Bengaluru) ಉತ್ತರ ತಾಲೂಕಿನ ಬೃಂದಾವನ ನಗರದಲ್ಲಿ ಈ ಘಟನೆ ನಡೆದಿದೆ. ಡ್ಯೂಟಿ ಮುಗಿಸಿ ಮನೆಗೆ ಬರುತ್ತಿದ್ದಾಗ ಅಡ್ಡಗಟ್ಟಿ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ಟೆಕ್ಕಿ ಆರೋಪಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗೆ ಬೆಂಕಿ ಹಚ್ಚಿದ ಪ್ರಕರಣ- ಮನೆಗೆ ಬೀಗ ಜಡಿದು ಯುವತಿ ಮನೆಯವರು ಎಸ್ಕೇಪ್

    ಆರೋಪವೇನು..?: ಎಂದಿನಂತೆ ಡ್ಯೂಟಿ ಮುಗಿಸಿ ಬರುತ್ತಿದ್ದ ವೇಳೆ ಏಕಾಏಕಿ ನುಗ್ಗಿ ಬಂದ ಇಬ್ಬರು, ಟೈಮ್ ಪಾಸ್ ಗಾಗಿ ನಿಮ್ಮ ಪೆÇೀನ್ ನಂಬರ್ ಕೊಡಿ ಮಾತನಾಡಬೇಕೆಂದು ಟಾರ್ಚರ್ ಕೊಟ್ಟಿದ್ದಾರೆ. ಈ ವೇಳೆ ಫೋನ್ ನಂಬರ್ (Phone Number) ಕೊಡಲು ನಿರಾಕರಿಸಿದ್ದೇನೆ. ಅಲ್ಲದೆ ನಿನಗೇಕೆ ನನ್ನ ನಂಬರ್ ಕೊಡಬೇಕು ಎಂದು ಬೈದು ಮನೆಗೆ ತೆರಳಿದ್ದೆ. ಆದರೆ ಕಿಡಿಗೇಡಿಗಳು ಮನೆವರೆಗೂ ಫಾಲೋ ಮಾಡಿಕೊಂಡು ಬಂದು ಕಾರ್ ಗ್ಲಾಸ್ ಒಡೆದು ಪರಾರಿಯಾಗಿದ್ದಾರೆ. ಮೊದಲು ಇಬ್ಬರೂ ತಮ್ಮ ಮುಖವನ್ನು ಮುಚ್ಚಿಕೊಂಡು ಬಂದು ಕಲ್ಲು ತೂರಿ ಪರಾರಿಯಾಗಿದ್ದಾರೆ. ಮತ್ತೆ ಕೆಲವೇ ನಿಮಿಷಗಳಲ್ಲಿ ಮತ್ತೊಮ್ಮೆ ಬೈಕ್ ನಲ್ಲಿ ಬಂದು ಬ್ರೀಜಾ ಕಾರಿನ ಮುಂಭಾಗದ ಗ್ಲಾಸ್ ಹೊಡೆದು ಎಸ್ಕೇಪ್ ಆಗಿದ್ದಾರೆ ಎಂದು ದೂರಿದ್ದಾರೆ.

    ಓರ್ವನನ್ನು ಸ್ಥಳೀಯ ನಿವಾಸಿ ವೆಂಕಟೇಶ್ ಎಂದು ಗುರುತಿಸಲಾಗಿದೆ. ಸದ್ಯ ಮಹಿಳಾ ಟೆಕ್ಕಿ ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ (Peenya Police Station) ಪ್ರಕರಣ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳಾ ಟೆಕ್ಕಿ ದುರ್ಮರಣ

    ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳಾ ಟೆಕ್ಕಿ ದುರ್ಮರಣ

    ಬೆಂಗಳೂರು: ಹೊಸಕೆರೆಹಳ್ಳಿ ನೈಸ್ ರಸ್ತೆ (Nice Road Toll) ಟೋಲ್ ಬಳಿ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳಾ ಟೆಕ್ಕಿ ಮೃತಪಟ್ಟಿದ್ದಾರೆ.

    ಸುಲೋಚನ ಮೃತ ದುರ್ದೈವಿ. ಆನಂದ್ ಮತ್ತು ಸುಲೋಚನ ಕೋರಮಂಗಲದ ಖಾಸಗಿ ಕಂಪನಿಯಲ್ಲಿ ಸಾಫ್ಟ್‍ವೇರ್ ಎಂಜಿನಿಯರ್ಸ್ ಆಗಿದ್ರು. ಆನಂದ್ ಫುಲ್ ಹೆಲ್ಮೆಟ್ ಹಾಕಿದ್ರೆ, ಸುಲೋಚನ ಹಾಫ್ ಹೆಲ್ಮೆಟ್ ಹಾಕಿದ್ರು. ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಲ್ಲಿ ಸಹ ಪ್ರಯಾಣಿಕನಿಗೆ ಬೆಂಕಿ ಹಚ್ಚಿದ ವ್ಯಕ್ತಿ – ಮೂವರು ಸಾವು

    ಶನಿವಾರ ಕೆಲಸ ಮುಗಿಸಿ ವಾಪಸ್ ಹೋಗುವ ವೇಳೆ ನೈಸ್ ರಸ್ತೆಯಲ್ಲಿ ಡಿವೈಡರ್ ಗೆ ಬೈಕ್ ಡಿಕ್ಕಿ (Bike Accident) ಹೊಡೆದಿತ್ತು. ಈ ವೇಳೆ ಇಬ್ಬರಿಗೂ ಗಂಭೀರ ಸ್ವರೂಪದ ಗಾಯವಾಗಿತ್ತು. ಇದೀಗ ಗಂಭೀರವಾಗಿ ಗಾಯಗೊಂಡಿದ್ದ ಸುಲೋಚನ ಚಿಕಿತ್ಸೆ ಫಲಕಾರಿಯಾದೇ ಸಾವನ್ನಪ್ಪಿದ್ದಾರೆ.

    ಯುವಕನ ಸ್ಥಿತಿ ಕೂಡ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಕೆಂಗೇರಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಚೇರಿಗೆ ನಡೆದುಕೊಂಡು ಹೋಗ್ತಿದ್ದಾಗ ಕಟ್ಟಡ ಉರುಳಿ ಬಿದ್ದು ಮಹಿಳಾ ಟೆಕ್ಕಿ ದುರ್ಮರಣ

    ಕಚೇರಿಗೆ ನಡೆದುಕೊಂಡು ಹೋಗ್ತಿದ್ದಾಗ ಕಟ್ಟಡ ಉರುಳಿ ಬಿದ್ದು ಮಹಿಳಾ ಟೆಕ್ಕಿ ದುರ್ಮರಣ

    ಚೆನ್ನೈ: ಕಟ್ಟಡ (building Collapse) ಉರುಳಿ ಬಿದ್ದ ಪರಿಣಾಮ ಮಹಿಳಾ ಟೆಕ್ಕಿ (Woman Techie) ಯೊಬ್ಬರು ದುರ್ಮರಣಕ್ಕೀಡಾದ ಘಟನೆ ಚೆನ್ನೈನ ಥೌಸಂಡ್ ಲೈಟ್ಸ್ ಪ್ರದೇಶದಲ್ಲಿ ನಡೆದಿದೆ.

    ಮೃತಳನ್ನು ಪದ್ಮ ಪ್ರಿಯಾ (22) ಎಂದು ಗುರುತಿಸಲಾಗಿದೆ. ಮಧುರೈ ನಿವಾಸಿಯಾಗಿರುವ ಈಕೆ ಸಾಫ್ಟ್ ವೇರ್ ಎಂಜಿನಿಯರ್ (Software Engineer) ಆಗಿ ಕೆಲಸ ಮಾಡುತ್ತಿದ್ದರು.

    ಪದ್ಮಪ್ರಿಯ ಅವರು ತನ್ನ ಗೆಳತಿಯ ಜೊತೆಗೆ ಮೆಟ್ರೋ ಸ್ಟೇಷನ್ ಕಡೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಟ್ಟಡ ಏಕಾಏಕಿ ಇವರ ಮೇಲೆ ಬಿದ್ದಿದೆ. ಕೂಡಲೇ ಸ್ಥಳೀಯರು ಅವರನ್ನು ರಕ್ಷಣೆ ಮಾಡಲು ಪ್ರಯತ್ನಿಸಿದ್ದಾರೆ. ಅಲ್ಲದೆ ಅಂಬುಲೆನ್ಸ್ (Ambulance) ಗೂ ಕರೆ ಮಾಡಿದ್ದಾರೆ. ಇದನ್ನೂ ಓದಿATMನಿಂದ ಹಣ ಡ್ರಾ ಮಾಡಿ ಕೊಟ್ಟು ವೃದ್ಧನಿಗೆ ವಂಚಿಸಿದ ಸೆಕ್ಯೂರಿಟಿ ಗಾರ್ಡ್ – ದೋಚಿದ್ದು 2.50 ಲಕ್ಷ ರೂ.!

    ಇತ್ತ ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ಸ್ಥಳಕ್ಕೆ ದೌಡಾಯಿಸಿದ್ದಾರೆ. ನಂತರ ಕಟ್ಟಡದ ಅವಶೇಷಗಳಡಿಯಿಂದ ಹೊರತೆಗೆದು ಅಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದರು. ಆದರೆ ಅದಾಗಲೇ ಪದ್ಮ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    ಕಟ್ಟಡವನ್ನು ಕೆಡವಲು ಬಳಸುತ್ತಿದ್ದ ಯಂತ್ರಗಳ ಭಾರೀ ಕಂಪನದಿಂದಾಗಿ ಗೋಡೆ ಕುಸಿದಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

    ಘಟನೆ ಸಂಬಂಧ ಥೌಸಂಡ್ ಲೈಟ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆನ್‍ಲೈನಿನಲ್ಲಿ ದುಬಾರಿ ಮದ್ಯ ಆರ್ಡರ್ – 51 ಸಾವಿರ ಕಳೆದುಕೊಂಡ ಮಹಿಳಾ ಟೆಕ್ಕಿ!

    ಆನ್‍ಲೈನಿನಲ್ಲಿ ದುಬಾರಿ ಮದ್ಯ ಆರ್ಡರ್ – 51 ಸಾವಿರ ಕಳೆದುಕೊಂಡ ಮಹಿಳಾ ಟೆಕ್ಕಿ!

    – ವೀಕೆಂಡ್ ಪಾರ್ಟಿಗೆ ಮದ್ಯಕ್ಕೆ ಆರ್ಡರ್
    – ಕೋಲ್ಕತ್ತಾದಿಂದ ಪುಣೆಗೆ ಬಂದಿದ್ದ ಟೆಕ್ಕಿ
    – ಮದ್ಯ ನಿಷೇಧದಂದೇ ಪೇಚಿಗೆ ಸಿಲುಕಿದ ಮಹಿಳೆ

    ಪುಣೆ: ಅಯೋಧ್ಯೆ ತೀರ್ಪಿನಂದು ದೇಶಾದ್ಯಂತ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ಆದರೆ ಮಹಿಳಾ ಟೆಕ್ಕಿಯೊಬ್ಬರು ಮದ್ಯವನ್ನು ಆನ್ ಲೈನ್‍ನಲ್ಲಿ ಆರ್ಡರ್ ಮಾಡಿ ಸುಮಾರು 51 ಸಾವಿರ ಕಳೆದುಕೊಂಡಿದ್ದಾರೆ.

    ಹೌದು. ಕೋಲ್ಕತ್ತಾದ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ 32 ವರ್ಷದ ಮಹಿಳೆ 50,778 ರೂ. ಮೌಲ್ಯದ ಮದ್ಯವನ್ನು ಆರ್ಡರ್ ಮಾಡಿದ್ದರು. ಆ ದಿನ ಮಾಮೂಲಿ ದಿನಕ್ಕಿಂತ ಸ್ವಲ್ಪ ಹೆಚ್ಚಿಗೆ ಹಣ ಇದ್ದರೂ ಮಹಿಳೆ ಆರ್ಡರ್ ಮಾಡಿಯೇ ಬಿಟ್ಟಿದ್ದಾರೆ.

    ಸುಮಾರು 4 ದಿನಗಳ ಹಿಂದೆ ಟೆಕ್ಕಿ ಕೋಲ್ಕತ್ತಾದಿಂದ ಪುಣೆಗೆ ಬಂದಿದ್ದರು. ಈ ವೇಳೆ ಗೆಳೆಯ-ಗೆಳತಿಯನ್ನು ಭೇಟಿ ಮಾಡಿದ್ದಾರೆ. ಆ ಬಳಿಕ ವೀಕೆಂಡ್ ಇದೆ ಪಾರ್ಟಿ ಮಾಡೋಣವೆಂದು ನಿರ್ಧಾರ ಮಾಡಿದರು. ಆದರೆ ಆಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಪುಣೆಯ ಜಿಲ್ಲಾಧಿಕಾರಿ ಶನಿವಾರ ಹಾಗೂ ಭಾನುವಾರ ಮದ್ಯ ಮಾರಾಟ ನಿಷೇಧಿಸುವಂತೆ ಆದೇಶ ಹೊರಡಿಸಿದ್ದರು.

    ಇದರಿಂದ ಏನು ಮಾಡುವುದೆಂದು ಯೋಚನೆ ಮಾಡಿದ ಟೆಕ್ಕಿಗೆ ಒಂದು ಉಪಾಯ ಹೊಳೆದಿದೆ. ಅದೇ ಆನ್ ಲೈನ್ ಆರ್ಡರ್. ಕೂಡಲೇ ಟಿಕ್ಕಿ, ಹಲವು ಮದ್ಯದಂಗಡಿಗಳಿಗೆ ಕರೆ ಮಾಡಿದ್ದಾರೆ. ಆದರೆ ಎಲ್ಲರೂ ಟೆಕ್ಕಿಗೆ ಮದ್ಯ ನೀಡಲು ನಿರಾಕರಿಸಿದರು. ಇದರಿಂದ ಟೆಕ್ಕಿ ಬೇಸರಗೊಂಡಿದ್ದರು. ಇದೇ ವೇಳೆ ಶನಿವಾರ ಟೆಕ್ಕಿಗೆ ಇಂಟರ್ನೆಟ್ ನಲ್ಲಿ ಒಂದು ಫೋನ್ ನಂಬರ್ ಸಿಕ್ಕಿದೆ. ಕೂಡಲೇ ಆಕೆ ಆ ನಂಬರಿಗೆ ಕರೆ ಮಾಡಿದರು. ಆ ಕಡೆ ವ್ಯಕ್ತಿಯೊಬ್ಬ ಕರೆ ಸ್ವೀಕರಿಸಿ, ಮನೆಗೆ ಮದ್ಯ ತಂದು ಕೊಡಲು ಒಪ್ಪಿಕೊಂಡಿದ್ದಾನೆ.

    ಅಂತೆಯೇ ವ್ಯಕ್ತಿಯು ಟೆಕ್ಕಿ ಬಳಿ ಓಟಿಪಿ ಕಳುಹಿಸುವಂತೆ ಹೇಳಿದ್ದಾನೆ. ಟೆಕ್ಕಿಯೂ ಆತನನ್ನು ನಂಬಿ ತನಗೆ ಬಂದ ಒಟಿಪಿ ನಂಬರ್ ಕಳುಹಿಸಿದ್ದಾರೆ. ಇದಾದ ಕೆಲಸ ನಿಮಿಷಗಳಲ್ಲಿ ಮಹಿಳೆಯ ಬ್ಯಾಂಕ್ ಅಕೌಂಟಿನಿಂದ 31,777 ರೂ. ವಿಥ್‍ಡ್ರಾ ಆಗಿದೆ. ಇದರಿಂದ ಗಾಬರಿಗೊಂಡ ಟೆಕ್ಕಿ, ಕೂಡಲೇ ವ್ಯಕ್ತಿಗೆ ಕರೆ ಮಾಡಿದ್ದಾರೆ. ಆಗ ಆತ ಗಾಬರಿಯಾಗಬೇಡಿ ನಿಮ್ಮ ಹಣ ಮತ್ತೆ ನಿಮಗೆ ಕ್ರೆಡಿಟ್ ಆಗುತ್ತೆ. ಅದಕ್ಕಾಗಿ ನೀವು ಮತ್ತೊಮ್ಮೆ ಓಟಿಪಿ ನಂಬರ್ ಕಳುಹಿಸಿ ಎಂದಿದ್ದಾನೆ.

    ಟೆಕ್ಕಿ ಮತ್ತೆ ಓಟಿಪಿ ನಂಬರ್ ಕಳುಹಿಸಿದ್ದಾರೆ. ಈ ವೇಳೆ ಟೆಕ್ಕಿ ಮತ್ತೆ ತನ್ನ ಅಕೌಂಟಿನಿಂದ 19,001 ರೂ. ಕಳೆದುಕೊಂಡರು. ಇದರಿಂದ ಮತ್ತೆ ಗಾಬರಿಗೊಂಡ ಟೆಕ್ಕಿ, ವ್ಯಕ್ತಿಗೆ ಕರೆ ಮಾಡಿದ್ದಾರೆ. ಆದರೆ ಈ ವೇಳೆ ಆತನನ್ನು ಸಂಪರ್ಕಿಸಲು ಟೆಕ್ಕಿಗೆ ಸಾಧ್ಯವಾಗಲಿಲ್ಲ.

    ಈ ಹಿನ್ನೆಲೆಯಲ್ಲಿ ಮಹಿಳಾ ಟೆಕ್ಕಿ ಕೂಡಲೇ ಹಿಂಜೇವಾಡಿ ಪೊಲೀಸ್ ಠಾಣೆಗೆ ತೆರಳಿ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರೆ.

  • ಮಹಿಳಾ ಟೆಕ್ಕಿಗೆ ಕಿರುಕುಳ ನೀಡ್ತಿದ್ದ ಉದ್ಯಮಿ ಅರೆಸ್ಟ್

    ಮಹಿಳಾ ಟೆಕ್ಕಿಗೆ ಕಿರುಕುಳ ನೀಡ್ತಿದ್ದ ಉದ್ಯಮಿ ಅರೆಸ್ಟ್

    ಬೆಂಗಳೂರು: ನಾಯಿ ಜೊತೆ ವಾಕಿಂಗ್ ಮಾಡುತ್ತಿದ್ದ ಮಹಿಳಾ ಟೆಕ್ಕಿಗೆ ಕಿರುಕುಳ ನೀಡುತ್ತಿದ್ದ ಉದ್ಯಮಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಉದ್ಯಮಿ ವೀರಯ್ಯ (44) ಬಂಧಿತ ಆರೋಪಿ. ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಜರಗನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮಹಿಳಾ ಟೆಕ್ಕಿ ಪ್ರತಿನಿತ್ಯ ನಾಯಿಯ ಜೊತೆ ವಾಕಿಂಗ್ ಹೋಗುತ್ತಿದ್ದರು. ಈ ವೇಳೆ ವೀರಯ್ಯ ಮಹಿಳಾ ಟೆಕ್ಕಿಯನ್ನು ಹಿಂಬಾಲಿಸುತ್ತಿದ್ದನು.

    ಟೆಕ್ಕಿ ಬರುವ ಜಾಗದಲ್ಲಿಯೇ ವೀರಯ್ಯ ದಿನಾ ಕಾಯುತ್ತಿದ್ದನು. ಅಲ್ಲದೆ ಯುವತಿ ಹತ್ತಿರ ಬರುತ್ತಿದ್ದಂತೆ ವೀರಯ್ಯ ಆಕೆಯನ್ನು ನೋಡಿ ಹಾಡು ಹಾಡುತ್ತಿದ್ದನು. ಪ್ರತಿನಿತ್ಯ ಈತನ ಕಾಟಕ್ಕೆ ಬೇಸತ್ತ ಮಹಿಳಾ ಟೆಕ್ಕಿ ಕೊನೆಗೆ ಪುಟ್ಟೇನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

    ಸದ್ಯ ಮಫ್ತಿಯಲ್ಲಿ ಜಾಗಿಂಗ್‍ಗೆ ಬಂದು ವೀರಯ್ಯನನ್ನು ಪೊಲೀಸರು ಬಂಧಿಸಿದ್ದಾರೆ. ವೀರಯ್ಯನ ವಿಚಾರಣೆ ಬಳಿಕ ಪೊಲೀಸರು ಆರೋಪಿಯನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ. ಅಲ್ಲದೆ ಆತನ ವಿರುದ್ಧ ಐಪಿಸಿ ಸೆಕ್ಷನ್ 354ಡಿ, 294 ಹಾಗೂ 509 ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv