Tag: woman psi

  • ಮದ್ವೆಯಾಗೋದಾಗಿ ನಂಬಿಸಿ ಸೆಕ್ಸ್, ಗರ್ಭಪಾತ- ಸಬ್‌ಇನ್ಸ್‌ಪೆಕ್ಟರ್ ವಿರುದ್ಧ ಮಹಿಳಾ ಪಿಎಸ್‍ಐ ದೂರು!

    ಮದ್ವೆಯಾಗೋದಾಗಿ ನಂಬಿಸಿ ಸೆಕ್ಸ್, ಗರ್ಭಪಾತ- ಸಬ್‌ಇನ್ಸ್‌ಪೆಕ್ಟರ್ ವಿರುದ್ಧ ಮಹಿಳಾ ಪಿಎಸ್‍ಐ ದೂರು!

    ಮೈಸೂರು: ಮದುವೆಯಾಗುವುದಾಗಿ ಹೇಳಿ ವಂಚಿಸಿದ ಸಬ್‌ಇನ್ಸ್‌ಪೆಕ್ಟರ್ ವಿರುದ್ಧ ಮಹಿಳಾ ಸಬ್‌ಇನ್ಸ್‌ಪೆಕ್ಟರ್ ಒಬ್ಬರು ದೂರು ನೀಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

    ಮೈಸೂರಿನ ಎನ್.ಆರ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್‍ಐ ಆನಂದ್ ವಿರುದ್ಧ ಈ ಆರೋಪ ಕೇಳಿ ಬಂದಿದೆ. ವಿವಿಪುರಂ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಪಿಎಸ್‍ಐ ಅವರೇ ಆನಂದ್ ವಿರುದ್ಧ ಈ ಬಗ್ಗೆ ದೂರು ನೀಡಿದ್ದಾರೆ.

    ಮೈಸೂರಿನ ಎರಡು ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್‍ಐಗಳ ಮಧ್ಯೆ ಪರಿಚಯವಾಗಿದ್ದು, ಈ ಪರಿಚಯ ಪ್ರೇಮಕ್ಕೆ ತಿರುಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಜೋಡಿ ಸುತ್ತಾಟ ನಡೆಸಿದೆ.

    ಇತ್ತ ಆನಂದ್ ಮದುವೆಯಾಗುವುದಾಗಿ ನಂಬಿಸಿ ನನ್ನ ಮೇಲೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಪರಿಣಾಮ ಗರ್ಭಿಣಿಯಾಗಿದ್ದು, ಮುದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಈ ಮಧ್ಯೆ ಆನಂದ್ ಬೇರೊಂದು ಮದುವೆ ಆಗಿದ್ದಾನೆ. ಬಳಿಕ ಆತ ನನ್ನನ್ನು ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ ಎಂದು ಮಹಿಳಾ ಪಿಎಸ್ಐ ಗಂಭೀರ ಆರೋಪ ಮಾಡಿದ್ದಾರೆ.

    ಸದ್ಯ ನನಗೆ ಆನಂದ್ ನಿಂದ ಅನ್ಯಾಯವಾಗಿದೆ, ನ್ಯಾಯ ಕೊಡಿಸಿ ಎಂದು ಮಹಿಳಾ ಪಿಎಸ್‍ಐ ಮೈಸೂರಿನ ವಿಜಯನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ದೂರಿನಂತೆ ಪಿಎಸ್‍ಐ ಆನಂದ್ ಮೇಲೆ ಎಫ್‍ಐಆರ್ ದಾಖಲು ಮಾಡಲಾಗಿದೆ. ಸದ್ಯ ಪೊಲೀಸರ ಲವ್ವಿಡವ್ವಿ ಕೇಸ್ ಇಲಾಖೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

  • ಪೆಟ್ರೋಲ್ ಬಂಕ್‍ಗೆ ಬೆಂಕಿ ಹಚ್ತೀನಿ: ನಂಜನಗೂಡಿನಲ್ಲಿ ಮಹಿಳಾ ಪಿಎಸ್‍ಐ ದರ್ಪ

    ಪೆಟ್ರೋಲ್ ಬಂಕ್‍ಗೆ ಬೆಂಕಿ ಹಚ್ತೀನಿ: ನಂಜನಗೂಡಿನಲ್ಲಿ ಮಹಿಳಾ ಪಿಎಸ್‍ಐ ದರ್ಪ

    ಮೈಸೂರು: ನಗರದ ನಂಜನಗೂಡಿನಲ್ಲಿ ಮಹಿಳಾ ಪಿಎಸ್‍ಐ ಒಬ್ಬರು ದರ್ಪ ಮೆರೆದ ಪ್ರಸಂಗವೊಂದು ನಡೆದಿದೆ.

    ನಂಜನಗೂಡು ಪಟ್ಟಣದ ಹುಲ್ಲಹಳ್ಳಿ ವೃತ್ತದಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‍ನಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದೆ. ಸದ್ಯ ಈ ವಿಡಿಯೋ ಇದೀಗ ವೈರಲ್ ಆಗಿದೆ. ಬಲವಂತವಾಗಿ ಬಂಕ್ ಮುಚ್ಚುವಂತೆ ಬೆದರಿಸಿರುವ ಮಹಿಳಾ ಪಿಎಸ್‍ಐ ವರ್ತನೆಗೆ ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ನಂಜನಗೂಡು ಗ್ರಾಮಾಂತರ ಠಾಣೆ ಸಬ್‌ಇನ್ಸ್‌ಪೆಕ್ಟರ್ ಯಾಸ್ಮಿನ್ ತಾಜ್ ಅವರು ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಅವಾಜ್ ಹಾಕಿದ್ದಾರೆ. ನನ್ನ ಜೀಪ್‍ಗೆ ಡೀಸೆಲ್ ಹಾಕದಿದ್ರೆ ಪೆಟ್ರೋಲ್ ಬಂಕ್‍ಗೆ ಬೆಂಕಿ ಹಚ್ಚಿತ್ತೀನಿ ಎಂದು ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಅವಾಜ್ ಹಾಕಿದ್ದಾರೆ.

    ಪೆಟ್ರೋಲ್ ಬಂಕ್‍ನಲ್ಲಿ ಸಿಬ್ಬಂದಿ ಪೊಲೀಸ್ ಜೀಪ್‍ಗೆ ಡೀಸೆಲ್ ಹಾಕಲು ನಿರಾಕರಿಸಿದ್ದಾರೆ. ಇಷ್ಟಕ್ಕೆ ಸಿಟ್ಟಾದ ಮಹಿಳಾ ಪಿಎಸ್‍ಐ ಯಾಸ್ಮಿನ್ ತಾಜ್, ಅವಾಚ್ಯ ಶಬ್ದಗಳಿಂದ ಸಿಬ್ಬಂದಿಗೆ ನಿಂದಿಸಿದ್ದಾರೆ. ನನ್ನ ಜೀಪ್‍ಗೆ ಡೀಸೆಲ್ ಹಾಕದಿದ್ದ ಮೇಲೆ ಈ ಬಂಕ್ ಯಾಕೆ ಬೇಕು. ಈಗಲೇ ಪೆಟ್ರೋಲ್ ಬಂಕ್ ಅನ್ನ ಬೆಂಕಿ ಹಚ್ಚಿ ಸುಟ್ಟುಬಿಡುತ್ತೀನಿ ಅಂತ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಹಿಗ್ಗಾಮುಗ್ಗ ಬೈದಿದ್ದಾರೆ.

    ಇಷ್ಟು ಮಾತ್ರವಲ್ಲದೆ ಬಂಕ್‍ನಲ್ಲಿದ್ದ ಆಟೋ ಚಾಲಕನಿಗೂ ಲಾಠಿಯಿಂದ ಹಲ್ಲೆ ಮಾಡಿದ್ದಾರೆ. ಇಲ್ಲಿ ಪೆಟ್ರೋಲ್ ಡೀಸೆಲ್ ಸಿಗೋಲ್ಲ ಹೋಗ್ತಾ ಇರು ಎನ್ನುತ್ತಲೆ ಲಾಠಿ ಬೀಸಿದ್ದಾರೆ.