Tag: Woman police officer

  • ಕ್ಯಾಮೆರಾವನ್ನು ಲೆಕ್ಕಿಸದೇ ಕಿತ್ತಾಡಿದ ಮಹಿಳಾ ಆಯೋಗದ ಅಧ್ಯಕ್ಷೆ – ಪೊಲೀಸ್ ಅಧಿಕಾರಿ

    ಕ್ಯಾಮೆರಾವನ್ನು ಲೆಕ್ಕಿಸದೇ ಕಿತ್ತಾಡಿದ ಮಹಿಳಾ ಆಯೋಗದ ಅಧ್ಯಕ್ಷೆ – ಪೊಲೀಸ್ ಅಧಿಕಾರಿ

    ಚಂಡೀಗಢ: ಹರಿಯಾಣಮಹಿಳಾ ಆಯೋಗದ ಅಧ್ಯಕ್ಷೆ (Chief of the Women’s Panel) ಮತ್ತು ಮಹಿಳಾ ಪೊಲೀಸ್ ಅಧಿಕಾರಿಯ(Woman Police Officer) ನಡುವೆ ಮಾತಿನ ಚಕಮಕಿ ನಡೆದಿದ್ದು, ಕ್ಯಾಮೆರಾ ಇರುವುದನ್ನು ಲೆಕ್ಕಿಸದೇ ಅಶ್ಲೀಲ ಪದಗಳನ್ನು ಬಳಸಿದ್ದಾರೆ.

    ಹರಿಯಾಣದ(Haryana) ಕೈತಾಲ್‍ನಲ್ಲಿ ವೈವಾಹಿಕ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಸಭೆ ವೇಳೆ ಮಹಿಳಾ ಸಮಿತಿಯ ಮುಖ್ಯಸ್ಥೆ ರೇಣು ಭಾಟಿಯಾ(Renu Bhatia) ಅವರು ಪೊಲೀಸ್ ಅಧಿಕಾರಿಯ ಮೇಲೆ ಕೂಗಾಡಿದ್ದಾರೆ. ಇದನ್ನೂ ಓದಿ: ದ್ರಾವಿಡ್ ಕೋಚ್ ಆಗಿ ಹನಿಮೂನ್ ಅವಧಿ ಮುಗಿದಿದೆ ನೆನಪಿರಲಿ: ಸಬಾ ಕರೀಂ ಟಾಂಗ್

    ವೀಡಿಯೋದಲ್ಲಿ ನೀವು ಅವನ ಕಪಾಳಕ್ಕೆ ಹೊಡೆಯಬಹುದಾಗಿತ್ತು. ಮಹಿಳೆಯನ್ನು ಮೂರು ಬಾರಿ ಪರೀಕ್ಷೆಗೆ ಒಳಪಡಿಸುವ ಅಗತ್ಯವಿತ್ತಾ? ನಿಮ್ಮಿಂದ ನಾನು ಯಾವುದೇ ಕಾರಣವನ್ನು ಕೇಳಲು ಬಯಸುವುದಿಲ್ಲ. ಹೊರಗೆ ಹೋಗಿ. ಎಸ್‍ಎಚ್‍ಒ ಆಕೆಯನ್ನು ಹೊರಗೆ ಕರೆದೊಯ್ಯಿರಿ, ನೀವು ಇಲಾಖಾ ವಿಚಾರಣೆಯನ್ನು ಎದುರಿಸುತ್ತೀರಾ ಎಂದು ಪೊಲೀಸ್ ಅಧಿಕಾರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನನಗೆ ಜ್ವರ ಇತ್ತು: ತೆಪ್ಪದಲ್ಲಿ ಪ್ರವಾಹ ವೀಕ್ಷಣೆಗೆ ಮಹೇಶ್‌ ಸ್ಪಷ್ಟನೆ

    ಈ ವೇಳೆ ನಾನು ಅವಮಾನ ಮಾಡಿಸಿಕೊಳ್ಳಲು ನಾನು ಇಲ್ಲಿಗೆ ಬಂದಿಲ್ಲ. ಅವರು ಹೇಳುವುದನ್ನು ಕೇಳಬೇಕಾಗಿರುತ್ತದೆ ಎಂದು ಪೊಲೀಸ್ ಅಧಿಕಾರಿ ಹೇಳಿದಾಗ, ಹಾಗಾದರೆ ನೀವು ಮಹಿಳೆಯನ್ನು ಅವಮಾನಿಸಲು ಇಲ್ಲಿಗೆ ಬಂದಿದ್ದೀರಾ ಎಂದು ರೇಣು ಭಾಟಿಯಾ ಕಿಡಿಕಾರಿದ್ದಾರೆ. ಪತಿ-ಪತ್ನಿಯರ ನಡುವಿನ ಜಗಳವನ್ನು ಸರಿಪಡಿಸುವ ವಿಚಾರವಾಗಿ ಪೊಲೀಸ್ ಅಧಿಕಾರಿ ಕೂಡ ವಾದ ಮಾಡಿದ್ದಾರೆ.

    ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಬಾಟಿಯಾ ಅವರು, ನಾವು ಪತಿ ಮತ್ತು ಪತ್ನಿ ನಡುವಿನ ಜಗಳ ಕುರಿತ ಪ್ರಕರಣವನ್ನು ನಿಭಾಯಿಸುತ್ತಿದ್ದೇವೆ. ಪತಿ ಆಯೋಗದ ಸದಸ್ಯರು ಮತ್ತು ಪೊಲೀಸರೊಂದಿಗೆ ಹಲವಾರು ಬಾರಿ ಅನುಚಿತವಾಗಿ ವರ್ತಿಸಿದ್ದಾನೆ. ವ್ಯಕ್ತಿ ತನ್ನ ಹೆಂಡತಿಯನ್ನು ಬಿಡಲು ಮುಂದಾಗಿದ್ದೇನೆ. ಏಕೆಂದರೆ ಅವನ ಪ್ರಕಾರ ಆಕೆ ದೈಹಿಕವಾಗಿ ಸದೃಢಳಾಗಿಲ್ಲ. ಆದ್ದರಿಂದ, ನಾವು ಅವರಿಬ್ಬರಿಗೂ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಆದೇಶಿದ್ದೇವೆ. ಆದರೆ ಮಹಿಳೆಯನ್ನು ಮೂರು ಬಾರಿ ಪರೀಕ್ಷಿಸಿದ್ದಾರೆ, ವ್ಯಕ್ತಿ ಮಾತ್ರ ಪರೀಕ್ಷೆಗೆ ಒಳಗಾಗಲು ನಿರಾಕರಿಸಿದ್ದಾನೆ. ತನಿಖಾಧಿಕಾರಿಯೂ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಪೊಲೀಸ್ ಅಧಿಕಾರಿ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದ್ದೇವೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪತಿ, ಮಕ್ಕಳ ಮುಂದೆಯೇ 8 ತಿಂಗಳ ಗರ್ಭಿಣಿ ಪೊಲೀಸ್ ಅಧಿಕಾರಿಯ ಹತ್ಯೆಗೈದ್ರು!

    ಪತಿ, ಮಕ್ಕಳ ಮುಂದೆಯೇ 8 ತಿಂಗಳ ಗರ್ಭಿಣಿ ಪೊಲೀಸ್ ಅಧಿಕಾರಿಯ ಹತ್ಯೆಗೈದ್ರು!

    ಕಾಬೂಲ್: ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ಪಡೆದುಕೊಂಡ ಬಳಿಕ ಪ್ರತಿನಿತ್ಯ ಹಿಂಸಾತ್ಮಕ ಘಟನೆಗಳನ್ನು ನಡೆಸುತ್ತಲೇ ಇದ್ದಾರೆ. ಇದೀಗ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಆಕೆಯ ಪತಿ ಹಾಗೂ ಮಕ್ಕಳ ಎದುರೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

    ಈ ಘಟನೆ ಅಫ್ಘಾನಿಸ್ತಾನದ ಘೋರ್ ಪ್ರಾಂತ್ಯದ ಕೇಂದ್ರ ನಗರದ ಫಿರೋಜ್ಕೋಹ್ ನಲ್ಲಿ ನಡೆದಿದೆ. ಮೃತ ಮಹಿಳಾ ಅಧಿಕಾರಿಯನ್ನು ಬಾನು ನೆಗರ್ ಎಂದು ಗುರುತಿಸಲಾಗಿದೆ. ಈಕೆ ಸ್ಥಳೀಯ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, 8 ತಿಂಗಳ ಗರ್ಭಿಣಿಯಾಗಿದ್ದರು.

    ಮಹಿಳಾ ಅಧಿಕಾರಿಯನ್ನು ತಾಲಿಬಾನಿಗಳು ಗುಂಡಿಟ್ಟು ಕೊಂದು ಬಳಿಕ ಆಕೆಯ ಮುಖವನ್ನು ವಿರೂಪಗೊಳಿಸಿದ್ದಾರೆ. ಸದ್ಯ ಸ್ಥಳೀಯ ತಾಲಿಬಾನ್ ಈ ಗಟನೆಯ ಕುರಿತು ತನಿಖೆ ನಡೆಸುವ ಭರವಸೆ ನೀಡಿದೆ ಎಂದು ಕುಟುಂಬ ಹೇಳಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹೊಸ ಸರ್ಕಾರ ರಚನೆ- ಎರಡು ವಾರಗಳ ಬಳಿಕ ಆಡಳಿತ ಆರಂಭ?

    ಅಫ್ಘಾನಿಸ್ತಾನ ತಮ್ಮ ವಶವಾದ ಬಳಿಕ ತಾಲಿಬಾನಿಗಳು ಉದಾರವಾದಿಗಳೆಂದು ಬಿಂಬಿಸುಲು ಪ್ರಯತ್ನಿಸುತ್ತಿದ್ದಾರೆ. ಆದರೂ ಕಾಬೂಲ್ ನಲ್ಲಿ ಉಗ್ರರ ಗುಂಪು ತಮ್ಮ ವಿರೋಧಿಗಳನ್ನು ಸಿಕ್ಕ ಸಿಕ್ಕಲ್ಲಿ ಕೊಲೆ ಮಾಡುತ್ತಿರುವುದಲ್ಲದೇ, ಅಮಾಯಕರನ್ನು ಕೂಡ ಬಲಿ ತೆಗೆದುಕೊಳ್ಳುವ ಮೂಲಕ ರಾಕ್ಷಸ ಕ್ರೌರ್ಯ ಮೆರೆಯುತ್ತಿದ್ದಾರೆ.

  • ಸ್ಕೂಟಿಗೆ ಡಿಕ್ಕಿ ಹೊಡೆದು ಬೀಳಿಸಿ, ಚಾಕುವಿನಿಂದ ಇರಿದು ಬೆಂಕಿ ಹಚ್ಚಿ ಕೊಲೆಗೈದ

    ಸ್ಕೂಟಿಗೆ ಡಿಕ್ಕಿ ಹೊಡೆದು ಬೀಳಿಸಿ, ಚಾಕುವಿನಿಂದ ಇರಿದು ಬೆಂಕಿ ಹಚ್ಚಿ ಕೊಲೆಗೈದ

    ತಿರುವನಂತಪುರಂ: ಮಹಿಳಾ ಪೊಲೀಸ್ ಅಧಿಕಾರಿಗೆ ಓರ್ವ ಟ್ರಾಫಿಕ್ ಪೊಲೀಸ್ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಘಟನೆ ಕೇರಳದಲ್ಲಿ ಇಂದು ನಡೆದಿದೆ.

    ಸೌಮ್ಯಾ ಪುಷ್ಪಕರಣ್ (34) ಮೃತ ಮಹಿಳಾ ಪೊಲೀಸ್ ಅಧಿಕಾರಿ. ಅಜಾಝ್ ಕೃತ್ಯ ಎಸಗಿದ ಟ್ರಾಫಿಕ್ ಪೊಲೀಸ್. ಘಟನೆಯಲ್ಲಿ ಅಜಾಝ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ.

    ಸೌಮ್ಯಾ ಪುಷ್ಪಕರಣ್ ಅಲಪ್ಪುಳ ಜಿಲ್ಲೆಯ ವಲ್ಲಿಕುನ್ನಂ ಪೊಲೀಸ್ ಠಾಣೆಯ ಸಿಪಿಓ (Civil Police Officer) ಆಗಿದ್ದರು. ಆರೋಪಿ ಅಜಾಝ್ ಅಲುವಾ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ. ಆದರೆ ಕೊಲೆಗೆ ಕಾರಣ ತಿಳಿದು ಬಂದಿಲ್ಲ.

    ಆಗಿದ್ದೇನು?:
    ಸೌಮ್ಯಾ ಅವರು ಕೆಲಸ ಮುಗಿಸಿ ಬೈಕ್‍ನಲ್ಲಿ ಇಂದು ಮಧ್ಯಾಹ್ನ 3:30ಕ್ಕೆ ಮನೆಗೆ ಹೋಗುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಅಜಾಝ್ ಸೌಮ್ಯಾ ಅವರ ಬೈಕ್‍ಗೆ ಗುದ್ದಿ ಕೆಳಗೆ ಬೀಳಿಸಿದ್ದಾನೆ. ಅಜಾಝ್ ವರ್ತನೆ ಕೊಲೆ ಮಾಡಲು ಬಂದಿದ್ದಾನೆ ಎಂದು ಅರಿತ ಸೌಮ್ಯಾ ಓಡಲು ಆರಂಭಿಸಿದ್ದಾರೆ. ತಕ್ಷಣವೇ ಹಿಂಬಾಲಿಸಿದ ಆರೋಪಿ, ಚಾಕುನಿಂದ ಇರಿದು, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸೌಮ್ಯಾ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಈ ಘಟನೆಯಲ್ಲಿ ಅಜಾಝ್‍ಗೂ ಬೆಂಕಿ ತಗುಲಿದ್ದು, ಆತನ ದೇಹದ ಮೇಲೆ ಶೇ. 50 ರಷ್ಟು ಸುಟ್ಟ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡಿರುವ ಆರೋಪಿಯನ್ನು ಅಲಪ್ಪುಳ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಸೌಮ್ಯಾ ಅವರು ಪತಿ ಸಂಜೀವ್, ಮೂವರು ಮಕ್ಕಳನ್ನು ಅಗಲಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತದೆ ಎಂದು ಅಲಪ್ಪುಳ ಜಿಲ್ಲಾ ಪೊಲೀಸ್ ಮುಖ್ಯಸ್ಥ ಕೆ.ಎಂ.ಟಾಮಿ ತಿಳಿಸಿದ್ದಾರೆ.

  • ಮಹಿಳಾ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ ಬಿಜೆಪಿ ಶಾಸಕ- ವಿಡಿಯೋ ವೈರಲ್

    ಮಹಿಳಾ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ ಬಿಜೆಪಿ ಶಾಸಕ- ವಿಡಿಯೋ ವೈರಲ್

    ಡೆಹ್ರಾಡೂನ್: ಉತ್ತರಾಖಂಡ್‍ದ ಬಿಜೆಪಿ ಶಾಸಕರೊಬ್ಬರು ಮಹಿಳಾ ಸಬ್‍ಇನ್ಸ್‌ಪೆಕ್ಟರ್ ಗೆ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ರುದ್ರಪುರ್ ಕ್ಷೇತ್ರದ ಶಾಸಕ ರಾಜ್‍ಕುಮಾರ್ ತುಕ್ರಾಲ್ ಅವರ ಇಬ್ಬರು ಸಹಚರರು ಸಂಚಾರ ನಿಯಮ ಉಲ್ಲಂಘಿಸಿದ್ದರು. ಹೀಗಾಗಿ ಅವರನ್ನು ರುದ್ರಪುರ್ ಸಂಚಾರ ಠಾಣೆಯ ಪೊಲೀಸರು ಬಂಧಿಸಿದ್ದರು. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಠಾಣೆಗೆ ಬಂದ ಶಾಸಕರು ಸಬ್‍ಇನ್ಸ್‌ಪೆಕ್ಟರ್ ಅನಿತಾ ಗೈರೊಲಾ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದಾರೆ.

    ಬಂಧನಕ್ಕೆ ಕಾರಣ ತಿಳಿಸುತ್ತಿದ್ದರೂ ಕೇಳದ ಶಾಸಕ, ಅನಿತಾ ಗೈರೊಲಾ ಅವರ ಮೇಲೆ ಹರಿಹಾಯ್ದು, ಬೆದರಿಕೆ ಒಡ್ಡಿದ್ದಾರೆ. ಬಳಿಕ ಹಿಂಬಾಲಕರು ಹೇಳಿದ್ದರಿಂದ ಮತ್ತೇ ಠಾಣೆ ಬಾಗಿಲ ಬಳಿ ನಿಂತು, ಬಂಧಿತರನ್ನು ಬಿಡುವಂತೆ ಒತ್ತಾಯಿಸಿದ್ದಾರೆ.

    ಸ್ಥಳದಲ್ಲಿಯೇ ಇದ್ದ ವ್ಯಕ್ತಿಯೊಬರು ತಮ್ಮ ಮೊಬೈಲ್‍ನಲ್ಲಿ ದೃಶ್ಯ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಭಾರೀ ಟೀಕೆ ವ್ಯಕ್ತವಾಗಿದೆ.

    ಇದೇ ಮೊದಲಲ್ಲ, ಈ ಹಿಂದೆಯೂ ಯುವಕನೊಬ್ಬ ಪರಿಶಿಷ್ಟ ಜಾತಿಯ ಯುವತಿಯ ಜೊತೆಗೆ ಓಡಿ ಹೋಗಿದ್ದನು. ಹೀಗಾಗಿ ಯುವತಿಯ ಕುಟುಂಬದ ಮೂರು ಜನ ಮಹಿಳೆಯರ ಮೇಲೆ ಶಾಸಕರು ಹಲ್ಲೆ ಮಾಡಿದ್ದಾರೆ. ನಡು ರಸ್ತೆಯಲ್ಲಿಯೇ ಯುವತಿಯ ತಾಯಿ ಸೇರಿದಂತೆ ಇಬ್ಬರು ಸಹೋದರಿಯರನ್ನು ಥಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv