Tag: woman police

  • 4 ತಿಂಗಳ ಪುಟ್ಟ ಕಂದಮ್ಮನಿಗೆ ಹಾಲುಣಿಸಿ ಸಂತೈಸಿದ ಮಹಿಳಾ ಪೊಲೀಸ್: ಭಾರೀ ಮೆಚ್ಚುಗೆ

    4 ತಿಂಗಳ ಪುಟ್ಟ ಕಂದಮ್ಮನಿಗೆ ಹಾಲುಣಿಸಿ ಸಂತೈಸಿದ ಮಹಿಳಾ ಪೊಲೀಸ್: ಭಾರೀ ಮೆಚ್ಚುಗೆ

    ತಿರುವನಂತಪುರಂ: ಈ ಹಿಂದೆ ಪರೀಕ್ಷೆ ಬರೆಯಲು ಹೋಗಿದ್ದಾಗ ಅಳುತ್ತಿದ್ದ ಪುಟ್ಟ ಕಂದಮ್ಮನನ್ನ ಮಹಿಳಾ ಪೊಲೀಸ್ ಸಮಾಧಾನ ಮಾಡಿದ್ದ ಸುದ್ದಿಯನ್ನು ಓದಿದ್ದೇವೆ. ಇದೀಗ ಅಂಥದ್ದೇ ಮನಸ್ಸಿಗೆ ಮುಟ್ಟುವಂತಹ ಘಟನೆಯೊಂದು ಕೇರಳದಲ್ಲಿ ನಡೆದಿದೆ.

    ಕೇರಳದ ಕೊಚ್ಚಿಯಲ್ಲಿ (Kochi Kerala) ಈ ಘಟನೆ ನಡೆದಿದ್ದು, ನಾಲ್ಕು ತಿಂಗಳ ಮಗುವಿಗೆ ಸ್ವತಃ ತಾವೇ ಎದೆ ಹಾಲುಣಿಸುವ ಮೂಲಕ ತಾಯಿ ಪ್ರೀತಿ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಮಹಿಳಾ ಪೊಲೀಸ್ ಅಧಿಕಾರಿಗೆ ಇಲಾಖೆ ಮತ್ತು ಸಾರ್ವಜನಿಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡೀಪ್‌ಫೇಕ್ ವಿಡಿಯೋಗಳ ನಿಯಂತ್ರಣಕ್ಕೆ ವಿಶೇಷ ಅಧಿಕಾರಿಯ ತಂಡ ರಚನೆ

    ಘಟನೆ ಏನು..?: ಬಿಹಾರ (Bihar) ಮೂಲದ ಮಗುವಿನ ತಾಯಿಗೆ ಶಸ್ತ್ರಚಿಕಿತ್ಸೆಯೊಂದು ನಡೆದಿತ್ತು. ಆ ಬಳಿಕ ಆಕೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಆ ತಾಯಿಯನ್ನು ಎರ್ನಾಕುಲಂ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಪುಟ್ಟ ಕಂದಮ್ಮನ ಆರೈಕೆಗೆ ಎರ್ನಾಕುಲಂ ವನಿತಾ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ಆರ್ಯ ಅವರು ಮುಂದಾಗಿದ್ದಾರೆ. ಸದ್ಯ ಆರ್ಯ ಅವರ ಈ ಕಾರ್ಯಕ್ಕೆ ಸಹ ಅಧಿಕಾರಿಗಳು ಮತ್ತು ಸಾರ್ವಜನಿಕರು ಭೇಷ್ ಎಂದಿದ್ದಾರೆ.

    ಈ ಸಂಬಂಧ ಆ ತಾಯಿಯ 13 ವರ್ಷದ ಹಿರಿಯ ಪುತ್ರಿ ಪ್ರತಿಕ್ರಿಯಿಸಿ, ತಮ್ಮ ತಂದೆ ಜೈಲಿನಲ್ಲಿದ್ದಾರೆ. ನಾನು ಮತ್ತು ನನ್ನ ಒಡಹುಟ್ಟಿದವರು ಕ್ರಮವಾಗಿ 5 ಮತ್ತು 3 ವರ್ಷ ವಯಸ್ಸಿನ ಹುಡುಗ ಮತ್ತು ಹುಡುಗಿ, ತಾಯಿಯೊಂದಿಗೆ ಕೇರಳದಲ್ಲಿ ನೆಲೆಸಿದ್ದೇವೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಇದನ್ನೂ ಓದಿ: ಬಿಟ್‌ಕಾಯಿನ್‌ ರೂಪದಲ್ಲಿ 8 ಕೋಟಿ ಕೊಡದಿದ್ರೆ ಮುಂಬೈ ಏರ್ಪೋರ್ಟ್‌ ಬ್ಲಾಸ್ಟ್‌ – ಬೆದರಿಕೆ

    ಮಲಯಾಳಂ ಅನ್ನು ಚೆನ್ನಾಗಿ ಮಾತನಾಡುವ ಬಾಲಕಿಗೆ ಬಿಹಾರದಲ್ಲಿ ತಾವಿರುವ ಸ್ಥಳದ ಬಗ್ಗೆ ಗೊತ್ತಿಲ್ಲ ಎಂದಿದ್ದಾಳೆ. ಪೊಲೀಸರು ಅವರ ತಾಯಿಯ ಆರೋಗ್ಯ ಸ್ಥಿತಿಯ ಬಗ್ಗೆ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಜೊತೆಗೆ ಬಿಹಾರದಲ್ಲಿರುವ ಅವರ ಸಂಬಂಧಿಕರ ಪತ್ತೆಗೆ ಅಲ್ಲಿನ ಪೊಲೀಸರ ನೆರವು ಪಡೆಯುತ್ತಿದ್ದಾರೆ.

     

  • ರೈಲಿನಲ್ಲಿದ್ದ ಮಗುವಿಗೆ ಮನೆಯಿಂದ್ಲೇ ಹಾಲು ತಂದುಕೊಟ್ಟ ಮಹಿಳಾ ಪೊಲೀಸ್

    ರೈಲಿನಲ್ಲಿದ್ದ ಮಗುವಿಗೆ ಮನೆಯಿಂದ್ಲೇ ಹಾಲು ತಂದುಕೊಟ್ಟ ಮಹಿಳಾ ಪೊಲೀಸ್

    – ಮಹಿಳಾ ಅಧಿಕಾರಿಯ ಕಾರ್ಯಕ್ಕೆ ಭಾರೀ ಮೆಚ್ಚುಗೆ

    ರಾಂಚಿ: ನಿಂತಿದ್ದ ರೈಲಿನಲ್ಲಿ ಅಳುತ್ತಿದ್ದ ಮಗುವಿಗೆ ಮಹಿಳಾ ಪೊಲೀಸೊಬ್ಬರು ತನ್ನ ಮನೆಯಿಂದಲೇ ಹಾಲು ತಂದುಕೊಟ್ಟಿದ್ದು, ಇದೀಗ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    ಮಹಿಳಾ ಪ್ರಯಾಣಿಕೆ ಮೆಹರುನ್ನಿಸಾ ಅವರು ತನ್ನ 4 ತಿಂಗಳ ಗಂಡು ಮಗುವಿನ ಜೊತೆ ಬೆಂಗಳೂರಿನಿಂದ ಗೊರಖ್ ಪುರಕ್ಕೆ ಶ್ರಮಿಕ್ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಹೀಗೆ ಹೋಗುತ್ತಿದ್ದಾಗ ರೈಲು ಹಾತಿಯಾ ಪೊಲೀಸ್ ಠಾಣೆಯಲ್ಲಿ ನಿಲುಗಡೆಯಾಯಿತು. ಇದೇ ವೇಳೆ ಮಗು ಹಸಿವಿನಿಂದ ಜೋರಾಗಿ ಅಳುತ್ತಿತ್ತು. ಹೀಗಾಗಿ ರೈಲು ನಿಲ್ಲುತ್ತಿದ್ದಂತೆ ಮೆಹರುನ್ನಿಸಾ ಅವರು, ತನ್ನ ಮಗುವಿಗೆ ಹೇಗಾದರೂ ಮಾಡಿ ಸ್ವಲ್ಪ ಹಾಲು ತಂದು ಕೊಡಿ ಎಂದು ರೈಲ್ವೇ ನಿಲ್ದಾಣದಲ್ಲಿದ್ದ ಅಧಿಕಾರಿಗಳ ಬಳಿ ಕೇಳಿಕೊಂಡಿದ್ದಾರೆ. ಮೇಹರುನ್ನಿಸಾ ಅವರು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡ ಸಂದರ್ಭದಲ್ಲಿ ಎಎಸ್‍ಐ ಸುಶೀಲ ಬರೈಕ್ ಕೂಡ ಅಲ್ಲೇ ಇದ್ದರು.

    ಸುಶೀಲ ಅವರು ಮನೆ ರೈಲ್ವೇ ನಿಲ್ದಾಣದ ಪಕ್ಕದಲ್ಲೇ ಇದೆ. ಹೀಗಾಗಿ ಮೆಹರುನ್ನಿಸಾ ಅವರು ಮನವಿ ಮಾಡಿಕೊಂಡ ತಕ್ಷಣ ಎಎಸ್‍ಐ ಸುಶೀಲ ಅವರು ತಮ್ಮ ಮನೆಗೆ ಓಡಿದ್ದಾರೆ. ಅಲ್ಲದೆ ಒಂದು ಬಾಟ್ಲಿಯಲ್ಲಿ ಹಾಲು ತುಂಬಿಕೊಂಡು ತಂದುಕೊಟ್ಟಿದ್ದಾರೆ. ಎಎಸ್‍ಐ ಅವರು ಮಹಿಳೆಗೆ ಹಾಲು ತಂದು ಕೊಡುತ್ತಿರುವಾಗ ಅಲ್ಲೇ ಇದ್ದ ಇತರ ಪ್ರಯಾಣಿಕರು ಫೋಟೋ ಕ್ಲಿಕ್ಕಿಸಿದ್ದಾರೆ. ಈ ಫೋಟೋವನ್ನು ಡಿಆರ್‍ಎಂ ರಾಂಚಿ ಎಂಬ ಟ್ವಿಟ್ಟರ್ ಅಕೌಂಟಿನಿಂದ ಟ್ವೀಟ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಮಹಿಳಾ ಪೊಲೀಸ್ ಮಾನವೀಯತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಇದೇ ವರ್ಷದ ಮೇ ತಿಂಗಳಲ್ಲಿ ಆರ್‍ಪಿಎಫ್ ಕಾನ್‍ಸ್ಟೇಬಲ್ ಒಬ್ಬರು ಚಲಿಸುತ್ತಿದ್ದ ಶ್ರಮಿಕ್ ರೈಲಿನ ಹಿಂದೆಯೇ ಓಡಿ 4 ತಿಂಗಳ ಮಗುವಿಗೆ ಹಾಲಿನ ಪ್ಯಾಕೆಟ್ ಕೊಟ್ಟಿದ್ದರು. ರೈಲು ಭೋಪಾಲ್ ನಿಲ್ದಾಣದಲ್ಲಿ ನಿಂತಿದ್ದಾಗ ಮಗುವಿನ ಫೋಷಕರು ಹಾಲು ನೀಡಿ ಮಗುವಿಗೆ ಸಹಾಯ ಮಾಡುವಂತೆ ಕಾನ್‍ಸ್ಟೇಬಲ್ ಬಳಿ ಕೇಳಿಕೊಂಡಿದ್ದರು. ಹೀಗೆ ಅಂಗಡಿಗೆ ತೆರಳಿ ಪ್ಯಾಕೆಟ್ ಹಾಲು ತೆಗೆದುಕೊಂಡು ಬರುತ್ತಿದ್ದಾಗ ರೈಲು ಚಲಿಸಲು ಆರಂಭಿಸಿದೆ.

    ರೈಲು ಚಲಿಸುತ್ತಿರುವುದನ್ನು ಅರಿತ ಕಾನ್ಸ್ ಸ್ಟೇಬಲ್ ಅದರ ಹಿಂದೆ ಓಡಿ ಹೋಗಿ ಹೇಗೋ ಮಗುವಿನ ಪೋಷಕರಿಗೆ ಹಾಲನ್ನು ಒಪ್ಪಿಸಿದ್ದರು. ಈ ವೇಳೆ ಕಾನ್ಸ್ ಸ್ಟೇಬಲ್ ಧೈರ್ಯ ಹಾಗೂ ಮನವೀಯತೆಗೆ ಜನ ಪ್ರಶಂಸೆ ವ್ಯಕ್ತಪಡಿಸಿದ್ದರು.

  • ಕುಣಿಗಲ್ ಅಪಘಾತ: ಮಕ್ಕಳ ಮೃತದೇಹಗಳನ್ನು ಕಂಡು ಬಿಕ್ಕಿ ಬಿಕ್ಕಿ ಅತ್ತ ಮಹಿಳಾ ಪೊಲೀಸ್

    ಕುಣಿಗಲ್ ಅಪಘಾತ: ಮಕ್ಕಳ ಮೃತದೇಹಗಳನ್ನು ಕಂಡು ಬಿಕ್ಕಿ ಬಿಕ್ಕಿ ಅತ್ತ ಮಹಿಳಾ ಪೊಲೀಸ್

    ತುಮಕೂರು: ಸಾವು ಎಂಥವರನ್ನೂ ಕಣ್ಣೀರು ತರಿಸುತ್ತದೆ. ಸಾವನ್ನಪ್ಪಿದವನು ಎಷ್ಟೇ ವಿರೋಧಿಯಾಗಿರಲಿ ಅಥವಾ ಪರಿಚಯ ಇಲ್ಲದವನೇ ಆಗಿರಲಿ. ಆದ್ರೆ ಆತನ ಮೃತದೇಹವನ್ನು ನೋಡಿದರೆ ಎಂಥವರಿಗೂ ಒಂದು ಬಾರಿ ಕಣ್ಣೀರು ಬರದೇ ಇರದು. ಹಾಗೆಯೇ ಕುಣಿಗಲ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರನ್ನು ಕಂಡು ಮಹಿಳಾ ಪೊಲೀಸೊಬ್ಬರು ಕಣ್ಣೀರು ಹಾಕಿದ್ದಾರೆ.

    ಕಣ್ಣೀರು ಹಾಕಿದ ಮಹಿಳಾ ಪೊಲೀಸ್ ಗೆ ಅವರು ಯಾರು, ಎಲ್ಲಿಯವರೂ ಎಂಬೂದು ಗೊತ್ತಿರಲಿಲ್ಲವೇನು. ಆದರೂ ಅಲ್ಲಿಯ ದಯನೀಯ ಸ್ಥಿತಿ ಕಂಡು ಮರುಗಿದ್ದಾರೆ. ಅಪಘಾತದ ರಭಸಕ್ಕೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿ ಪುಟ್ಟ ಪುಟ್ಟ ಮಕ್ಕಳ ಮೃತದೇಹಗಳನ್ನು ಕಂಡು ಮಹಿಳಾ ಪೊಲೀಸ್ ಅವರ ದುಃಖದ ಕಟ್ಟೆಯೊಡೆದಿದೆ.

    ಹೌದು. ತುಮಕೂರಿನ ಕುಣಿಗಲ್ ತಾಲೂಕಿನ ಬ್ಯಾಲದ ಕೆರೆ ಬಳಿ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 8 ಮಂದಿ ಮೃತಪಟ್ಟಿದ್ದಾರೆ. ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಕ್ಕೆ ಹಸ್ತಾಂತರಿಸುವ ಮೊದಲು ತಾಲೂಕು ಆಸ್ಪತ್ರೆಯಲ್ಲಿದ್ದ ಮಕ್ಕಳ ಮೃತದೇಹಗಳನ್ನ ನೋಡಿ ಮಹಿಳಾ ಪೋಲಿಸ್ ಪೇದೆಯೊಬ್ಬರು ಕಣ್ಣೀರು ಸುರಿಸಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಣ್ಣೀರು ತರಿಸುವಂತಿದೆ.

    ಘಟನೆಯ ಬಗ್ಗೆ ಮೃತ ಮಂಜುನಾಥ್ ಕುಟುಂಬಸ್ಥರು ಮಾತನಾಡಿ, ಮಂಜುನಾಥ್ ಅವರ ಮಗುವಿಗೆ ಮುಡಿ ಕೊಡಲು ಧರ್ಮಸ್ಥಳಕ್ಕೆ ಹೋಗಿದ್ದರು. ಆದರೆ ರಾತ್ರಿ ಕುಣಿಗಲ್ ಬಳಿ ದುರ್ಘಟನೆ ಸಂಭವಿಸಿದೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.

    ನಡೆದಿದ್ದೇನು?
    ಧರ್ಮಸ್ಥಳ ಮಂಜುನಾಥನ ದರ್ಶನ ವಾಪಸ್ಸಾಗ್ತಿದ್ದ ತಮಿಳುನಾಡಿನ ಟವೆರಾ ವಾಹನಕ್ಕೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೊರಟ್ಟಿದ್ದ ಬ್ರೀಜಾ ಕಾರು ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ. ಧರ್ಮಸ್ಥಳಕ್ಕೆ ಹೊರಟ್ಟಿದ್ದ ಬ್ರೀಜಾ ಕಾರು ನಿಯಂತ್ರಣ ತಪ್ಪಿ ಡಿವೈಡರ್‍ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸದಲ್ಲೇ ರಸ್ತೆಗೆ ಬಂದು ಬಳಿಕ ಟವೇರಾ ಕಾರಿಗೆ ಡಿಕ್ಕಿಯಾಗಿದೆ. ಟವೇರಾ ಕಾರಿನಲ್ಲಿದ್ದ ತಮಿಳುನಾಡಿನ ಕೃಷ್ಣಗಿರಿಯ ಸೂಳೆಗಿರಿಯ 10 ಜನರು ಸಾವನಪ್ಪಿದ್ದಾರೆ. ಮಂಜುನಾಥ್ ಎಂಬವರ ಕುಟುಂಬದ 8 ಜನರು ಸಾವನಪ್ಪಿದ್ದಾರೆ. ಅದರಲ್ಲಿ ಮಂಜುನಾಥ್ ಅವರ ಒಂದೂವರೆ ವರ್ಷದ ಹಾಗೂ ನಾಲ್ಕು ವರ್ಷದ ಮಗುವೂ ಅಸುನೀಗಿದ್ದು ಕರುಣಾಜನಕವಾಗಿತ್ತು.

    ಬ್ರೀಜಾ ಕಾರಿನಲ್ಲಿನದ್ದ ನಾಲ್ವರು ಬೆಂಗಳೂರಿನ ರಾಮೋನಹಳ್ಳಿಯವರಾಗಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋರ್ವನ ಕಾಲು ಮುರಿದು ನೆಲಮಂಗಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಮೋಹಳ್ಳಿಯ ಲಕ್ಷ್ಮೀಕಾಂತ್, ಸಂದೀಪ್, ಮಧು ಮೃತ ದುರ್ದೈವಿಗಳಾಗಿದ್ದು. ತಮಿಳುನಾಡಿನ ಕೃಷ್ಣಗಿರಿಯ ಸೂಳೆಗಿರಿಯ ಮಂಜುನಾಥ್, ತನುಜ, ಗೌರಮ್ಮ, ರತ್ನಮ್ಮ, ಸೌಂದರರಾಜ್, ರಾಜೇಂದ್ರ, ಸರಳ, ಪ್ರಶನ್ಯಾ, ಮಾಲಾಶ್ರೀ ಎಂಬುದಾಗಿ ತಿಳಿದುಬಂದಿದೆ.

    ಟವೆರಾದಲ್ಲಿ ಒಟ್ಟು 13 ಜನರು ಪ್ರಯಾಣಿಸುತ್ತಿದ್ದು ಅದರಲ್ಲಿ 10 ಜನ ಸಾವನಪ್ಪಿದ್ದಾರೆ. ಉಳಿದ ಮೂವರು ಬೆಂಗಳೂರು ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಣಿಗಲ್ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆದಿದ್ದು, ಮೃತದೇಹಗಳನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

  • ಮದ್ವೆ ಮಾತುಕತೆಗೆಂದು ಕರೆದು ಅರೆಸ್ಟ್ ಮಾಡಿದ ಮಹಿಳಾ ಪೊಲೀಸ್

    ಮದ್ವೆ ಮಾತುಕತೆಗೆಂದು ಕರೆದು ಅರೆಸ್ಟ್ ಮಾಡಿದ ಮಹಿಳಾ ಪೊಲೀಸ್

    – ಮಹಿಳೆಯ ಐಡಿಯಾಕ್ಕೆ ಪ್ರಶಂಸೆಯ ಸುರಿಮಳೆ

    ಭೋಪಾಲ್: ಸಾಮಾನ್ಯವಾಗಿ ಕಾಲಿಗೆ ಗುಂಡೇಟು ನೀಡಿ ಆರೋಪಿಗಳನ್ನು ಪೊಲೀಸರು ಬಂಧಿಸುತ್ತಾರೆ. ಆದರೆ ಇಲ್ಲೊಬ್ಬರು ಮಹಿಳಾ ಪೊಲೀಸ್ ಕೊಲೆ ಆರೋಪಿಯನ್ನು ಹಿಡಿಯಲು ಪ್ಲಾನ್ ಮಾಡಿದ್ದು, ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಹೌದು. ಮಧ್ಯಪ್ರದೇಶದ ಛತ್ತಾರ್ ಪುರ ನೌಗಾಂವ್ ಬ್ಲಾಕ್ ನ ಗರೋಲಿ ಚೌಕಿಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮಾಧವಿ ಅಗ್ನಿಹೋತ್ರಿ ಅವರು ಮದುವೆ ಮಾತುಕತೆಗೆಂದು ಕರೆದು ಆರೋಪಿಯನ್ನು ಬಂಧಿಸಿದ್ದು, ಎಲ್ಲರ ಪ್ರಶಂಸೆಗೆ ಕಾರಣರಾಗಿದ್ದಾರೆ.

    ಬಾಲಕೃಷ್ಣ ಚೌಬೆ(55) ಎಂಬಾತ ಕಳೆದ ಮೂರು ವರ್ಷಗಳಿಂದ ಮಧ್ಯಪ್ರದೇಶದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದನು. ಈತ ಕೊಲೆ ಮತ್ತು ದರೋಡೆ ಕೇಸಿನಲ್ಲಿ ಗುರುತಿಸಿಕೊಂಡ ಬಳಿಕ ತನ್ನ ಗ್ರಾಮದಿಂದ ತಲೆಮರೆಸಿಕೊಂಡಿದ್ದನು. ಅದರಲ್ಲೂ ಕೊಲೆ ಪ್ರಕರಣದ ಬಳಿಕ ಬಾಲಕೃಷ್ಣ ಉತ್ತರಪ್ರದೇಶಕ್ಕೆ ಹಾರಿದ್ದನು.

    ಆರೋಪಿಯನ್ನು ಹಿಡಿಯಲು ಪೊಲೀಸರು ಹಲವು ಬಾರಿ ಪ್ರಯತ್ನಿಸಿದರೂ ವಿಫಲರಾಗುತ್ತಿದ್ದರು. ಹೀಗೆ ಹಲವು ತಿಂಗಳು ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಬಾಲಕೃಷ್ಣ, ಒಂದು ದಿನ ತನ್ನ ಪರಿಚಯಸ್ಥರಿಗೆ ಮೆಸೇಜ್ ಮಾಡಿದ್ದಾನೆ. ತನಗೆ ಮದುವೆಯಾಗಬೇಕು, ಹುಡುಗಿ ಹುಡುಕಿ ಎಂದು ಸಂದೇಶದಲ್ಲಿ ತಿಳಿಸಿದ್ದನು.

    ಈ ವಿಚಾರ ತಿಳಿದು ನೌಗಾಂವ್ ಬ್ಲಾಕ್ ನ ಗರೋಲಿ ಚೌಕಿಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮಾಧವಿ ಅಗ್ನಿಹೋತ್ರಿ ಅವರು ಆರೋಪಿಯನ್ನು ಕರೆತರುವ ಜಾವಾಬ್ದಾರಿಯನ್ನು ಹೊತ್ತುಕೊಂಡರು. ಅಂತೆಯೇ ಮೂವತ್ತರ ಹರೆಯದ ಮಾಧವಿ ಒಂದೊಳ್ಳೆ ಉಪಾಯವನ್ನು ಕಂಡುಕೊಂಡು ತನ್ನ ಹಳೆಯ ಫೋಟೋವೊಂದನ್ನು ಮಾಹಿತಿ ನಿಡಿದವರ ಮೂಲಕ ಬಾಲಕೃಷ್ಣಗೆ ಕಳುಹಿಸಿ ಮದುವೆ ಪ್ರಸ್ತಾಪವನ್ನು ಮುಂದಿಡುವ ಐಡಿಯಾವನ್ನು ತಿಳಿಸಿದರು.

    ಮಾಧವಿಯ ಅದ್ಭುತ ಉಪಾಯಕ್ಕೆ ಪೊಲೀಸ್ ಉಪವಿಭಾಗಾಧಿಕಾರಿ(ಎಸ್‍ಡಿಓಪಿ) ಶ್ರೀನಾಥ್ ಸಿಂಗ್ ಬಗೇಲ್ ತಲೆದೂಗಿದರು. ಅಲ್ಲದೆ ಮಾಧ್ವಿ ಸಹಾಯಕ್ಕಾಗಿ ಎಸ್ ಐ ಅತುಲ್ ಝಾ, ಮನೋಜ್ ಯಾದವ್, ಎಎಸ್‍ಐ ಗ್ಯಾನ್ ಸಿಂಗ್ ಹಾಗೂ ಇತರ ಮೂವರು ಪೊಲೀಸ್ ಸಿಬ್ಬಂದಿಯನ್ನು ನೇಮಿಸುವ ಮೂಲಕ ಆರೋಪಿಯ ಪತ್ತೆಗೆ ತಂಡ ರಚಿಸಿದರು.

    ಇತ್ತ ಗುರುವಾರ ಉತ್ತರಪ್ರದೇಶದ ಬಿಜೋರಿ ಗ್ರಾಮಕ್ಕೆ ಬಂದು ಭೇಟಿಯಾಗುವಂತೆ ಬಾಲಕೃಷ್ಣ, ಮಾಧವಿ ಅಗ್ನಿಹೋತ್ರಿಯವರನ್ನು ಆಹ್ವಾನಿಸಿದ್ದಾನೆ. ಹಾಗೆಯೇ ಭೇಟಿಗೆ ಬಂದ ಮಾಧವಿ, ಆರೋಪಿ ತನ್ನನ್ನು ಭೇಟಿಯಾಗಲು ಬರುತ್ತಿದ್ದಂತೆಯೇ ತಂಡಕ್ಕೆ ಸೂಚನೆ ನೀಡಿದರು. ಹಾಗೆಯೇ ತಂಡ ಆತನನ್ನು ಅರೆಸ್ಟ್ ಮಾಡಿತು. ಶುಕ್ರವಾರ ಪೊಲಿಸರು ಆರೋಪಿಯನ್ನು ಜೈಲಿಗಟ್ಟಿದ್ದಾರೆ.

  • ಮಹಿಳಾ ಎಸ್‍ಐ ಕತ್ತಿನ ಪಟ್ಟಿ ಹಿಡಿದು ಎಳೆದಾಡಿ ಎಎಸ್‍ಐ ಹಲ್ಲೆ

    ಮಹಿಳಾ ಎಸ್‍ಐ ಕತ್ತಿನ ಪಟ್ಟಿ ಹಿಡಿದು ಎಳೆದಾಡಿ ಎಎಸ್‍ಐ ಹಲ್ಲೆ

    ಮಂಡ್ಯ: ರಾತ್ರಿ ಗಸ್ತಿಗೆ ಪೊಲೀಸರನ್ನ ನಿಯೋಜಿಸುವ ವಿಚಾರದಲ್ಲಿ ಮಹಿಳಾ ಎಸ್‍ಐ ಮೇಲೆ ಎಎಸ್‍ಐ ಹಲ್ಲೆ ನಡೆಸಿದ್ದಾರೆ.

    ಮಂಡ್ಯ ತಾಲೂಕಿನ ಬಸರಾಳು ಠಾಣೆಯ ಎಸ್‍ಐ ಜಯಗೌರಿ ಮೇಲೆ ಎಎಸ್‍ಐ ಶಿವನಂಜೇಗೌಡ ಹಲ್ಲೆ ನಡೆಸಿದ್ದಾರೆ. ಶನಿವಾರ ಮುಖ್ಯಮಂತ್ರಿಗಳ ಕಾರ್ಯಕ್ರಮದ ಬಂದೋಬಸ್ತ್ ಮುಗಿಸಿ ಸಂಜೆ 4 ಗಂಟೆ ಸುಮಾರಿಗೆ ಎಸ್‍ಐ ಜಯಗೌರಿ ಠಾಣೆಗೆ ವಾಪಸ್ಸಾಗಿದ್ದರು. ಈ ವೇಳೆ ಪೊಲೀಸರನ್ನು ರಾತ್ರಿ ಗಸ್ತಿಗೆ ನಿಯೋಜನೆ ಮಾಡುವ ಸಂಬಂಧ ಇಬ್ಬರ ನಡುವೆ ಗಲಾಟೆ ನಡೆದಿತ್ತು.

    ಈ ವೇಳೆ ಜಯಗೌರಿ ಬಳಿ ಸಿಬ್ಬಂದಿ ಇಲ್ಲವೆಂದು ಎಎಸ್‍ಐ ಶಿವನಂಜೇಗೌಡ ಹೇಳಿದರು. ಈಗ ನೀವು ಮನೆಗೆ ಹೋಗಿ ವಿಶ್ರಾಂತಿ ಪಡೆದು ರಾತ್ರಿ ಗಸ್ತಿಗೆ ಬನ್ನಿ ಅಂತ ಎಸ್‍ಐ ಜಯಗೌರಿ ಹೇಳಿರು. ಇದರಿಂದ ಮತ್ತೆ ಸಿಟ್ಟುಗೊಂಡ ಎಎಸ್‍ಐ ಬೆಳಗ್ಗೆಯಿಂದ ಕರ್ತವ್ಯ ನಿರ್ವಹಿಸಿದ್ದೀನಿ. ರಾತ್ರಿ ಗಸ್ತಿಗೆ ನಾನ್ಯಾಕೆ ಹೋಗಲಿ ಅಂತ ಜಯಗೌರಿ ಜೊತೆಗೆ ಜಗಳಕ್ಕಿಳಿದಿದ್ರು.

    ಇದಾದ ಬಳಿಕ ರೈಟರ್ ಕೊಠಡಿಯಲ್ಲಿ ಯೂನಿಫಾರ್ಮ್‍ಗೆ ಕೈ ಹಾಕಿ ಕತ್ತಿನ ಪಟ್ಟಿ ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಅಂತ ಜಯಗೌರಿ ಆರೋಪಿಸಿದ್ದಾರೆ ಈ ಹಿನ್ನೆಲೆಯಲ್ಲಿ ಎಎಸ್‍ಐ ಶಿವನಂಜೇಗೌಡ ವಿರುದ್ಧ ಐಪಿಸಿ ಸೆಕ್ಷನ್ 323(ಹಲ್ಲೆ), 354(ಕಿರುಕುಳ), 504(ಅವಾಚ್ಯ ನಿಂದನೆ), 506(ಕೊಲೆ ಬೆದರಿಕೆ) ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.

  • ಮಹಿಳಾ ಪೊಲೀಸರ ಖಾಕಿ ಸೀರೆ, ಸಲ್ವಾರ್ ಯೂನಿಫಾರ್ಮ್ ಗೆ ಬ್ರೇಕ್!

    ಮಹಿಳಾ ಪೊಲೀಸರ ಖಾಕಿ ಸೀರೆ, ಸಲ್ವಾರ್ ಯೂನಿಫಾರ್ಮ್ ಗೆ ಬ್ರೇಕ್!

    ಬೆಂಗಳೂರು: ಡೊಳ್ಳು ಹೊಟ್ಟೆ ಪೊಲೀಸರ ವಿರುದ್ಧ ಕ್ರಮಕ್ಕೆ ಮುಂದಾದ ಬೆನ್ನಲ್ಲೇ ಮಹಿಳಾ ಪೊಲೀಸರ ಯೂನಿಫಾರ್ಮ್ ನಲ್ಲಿ ಬದಲಾವಣೆ ತರಲು ಇಲಾಖೆ ನಿರ್ಧರಿಸಿದೆ.

    ಖಾಕಿ ಸೀರೆ, ಖಾಕಿ ಸಲ್ವಾರ್ ಸೇರಿದಂತೆ ವೆರೈಟಿ ಯೂನಿಫಾರ್ಮ್ ಗೆ ಬ್ರೇಕ್ ಹಾಕಿ, ಪುರಷ ಪೊಲೀಸರ ರೀತಿಯಲ್ಲೆ ಒಂದೇ ಯೂನಿಫಾರ್ಮ್ ಧರಿಸಬೇಕು. ಕೆಎಸ್‍ಆರ್ ಪಿ ಮಹಿಳಾ ಪೊಲೀಸರು ನಾಲ್ಕು ರೀತಿಯ ಯೂನಿಫಾರ್ಮ್ ಧರಿಸುತ್ತಿದ್ದಾರೆ.

    ಮಹಿಳಾ ಪೊಲೀಸ್ ಪೇದೆಗಳಿಗೂ ಫಿಟ್ನೆಸ್ ಕಾಪಾಡಿಕೊಳ್ಳುವ ದೃಷ್ಟಿಯಿಂದ ಈ ನಿರ್ಧಾರ ಅಂತ ಕೆಎಸ್‍ಆರ್ ಪಿ ಎಡಿಜಿಪಿ ಭಾಸ್ಕರ್ ರಾವ್ ಹೇಳಿದ್ದಾರೆ.

    ಡೊಳ್ಳು ಹೊಟ್ಟೆ ಪೊಲೀಸರಿಂದ ಪೊಲೀಸ್ ಇಲಾಖೆಗೆ ಮುಜುಗರವಾಗುತ್ತಿದೆ. ಹೀಗಾಗಿ ಡೊಳ್ಳು ಹೊಟ್ಟೆ ಇರುವ ಪೊಲೀಸರ ಹೊಟ್ಟೆ ಕರಗಿಸುವ ಜವಾಬ್ದಾರಿ ಕಮಾಂಡೇಟ್ ಗಳದ್ದಾಗಿದೆ. ರಾಜ್ಯದಲ್ಲಿ ಕೆಎಸ್‍ಆರ್ ಪಿ 12 ಪಡೆಗಳಿವೆ. ಈ 12 ಪಡೆಗಳಲ್ಲಿರುವ ಡೊಳ್ಳು ಹೊಟ್ಟೆ ಪೊಲೀಸರ ಹೊಟ್ಟೆ ಕರಗಿಸುವ ಜವಾಬ್ದಾರಿ ಆಯಾ ಕಾಮಾಂಡೇಟ್‍ಗಳದ್ದು ಎಂದು ಕೆಎಸ್‍ಆರ್ ಪಿ ಎಡಿಜಿಪಿ ಭಾಸ್ಕರ್ ರಾವ್ ಸುತ್ತೊಲೆ ಹೊರಡಿಸಿದ್ದಾರೆ. ಜುಲೈ 3ರಂದು ಭಾಸ್ಕರ್ ರಾವ್ ಅವರು ಈ ಸುತ್ತೋಲೆ ಹೊರಡಿಸಿದ್ದಾರೆ.

  • ಪೊಲೀಸ್ ಠಾಣೆಯಲ್ಲಿ ಆರಂಭವಾದ ಪ್ರೀತಿ ಆತ್ಮಹತ್ಯೆಯಲ್ಲಿ ಅಂತ್ಯ!

    ಪೊಲೀಸ್ ಠಾಣೆಯಲ್ಲಿ ಆರಂಭವಾದ ಪ್ರೀತಿ ಆತ್ಮಹತ್ಯೆಯಲ್ಲಿ ಅಂತ್ಯ!

    ಉಡುಪಿ: ಪೊಲೀಸ್ ಕಾನ್ ಸ್ಟೇಬಲ್ ಒಬ್ಬರು ತನ್ನ ಕ್ವಾಟ್ರಸ್ ನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಮತ್ತೋರ್ವ ಮಹಿಳಾ ಪೇದೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

    ಉಡುಪಿ ಜಿಲ್ಲೆಯ ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಹಿಂದೆ ಪೊಲೀಸ್ ಕಾನ್ ಸ್ಟೇಬಲ್ ನಾಗರಾಜ್ (27) ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಅವರ ಪ್ರೇಯಸಿ ರಮ್ಯಾ(ಹೆಸರು ಬದಲಾಯಿಸಲಾಗಿದೆ) ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರು ಕೂಡ ಕೊಲ್ಲೂರು ಠಾಣೆಯಲ್ಲೇ ಸೇವೆಯಲ್ಲಿದ್ದರು. ಪ್ರೀತಿ ಹಾಗೂ ಮನಸ್ತಾಪವೇ ಈ ಎರಡು ದುರ್ಘಟನೆಗೆ ಕಾರಣ ಎಂಬುದು ಸ್ಪಷ್ಟವಾಗಿದೆ.

    ನಾಗರಾಜ್ ಸೌಪರ್ಣಿಕ ವಸತಿ ಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರೆ, ರಮ್ಯಾ ಕೊಲ್ಲೂರು ಪೊಲೀಸ್ ಠಾಣೆಯಲ್ಲೇ ಇರುವ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ. ಅದೃಷ್ಟವಶಾತ್ ರಮ್ಯಾರನ್ನು ಪೊಲೀಸರೇ ಬದುಕಿಸಿದ್ದಾರೆ.

    ನಾಗರಾಜ್ ಮೂಲತಃ ದಾವಣಗೆರೆಯ ಮಲೆಬೆನ್ನೂರಿನ ಹಿಡಗನಗಟ್ಟ ಗ್ರಾಮದ ನಿವಾಸಿ. ಕಳೆದ 2 ವರ್ಷಗಳಿಂದ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್ ಕಳೆದ ಕೆಲವು ದಿನಗಳಿಂದ ಜೋಯ್ಡಾಗೆ ಹೆಚ್ಚುವರಿ ಕೆಲಸದ ನಿಮಿತ್ತ ತೆರಳಿದ್ದರು. 2 ದಿನಗಳ ಹಿಂದೆಯಷ್ಟೇ ಕೊಲ್ಲೂರಿಗೆ ಬಂದಿದ್ದ ನಾಗರಾಜ್ ಭಾನುವಾರ ಮುಂಜಾನೆ ಪೊಲೀಸ್ ವಸತಿ ಗೃಹದಲ್ಲೇ ನೇಣಿಗೆ ಶರಣಾಗಿದ್ದಾರೆ.

    ನಾಗರಾಜ್ ಅವರ ಸಾವಿನ ಸುದ್ದಿ ತಿಳಿದ ಪ್ರೇಯಸಿ ರಮ್ಯಾ ಪೊಲೀಸ್ ಠಾಣೆಯಲ್ಲೇ ಇದ್ದ ಬಾವಿಗೆ ಹಾರಿದ್ದಾರೆ. ಠಾಣೆಯಲ್ಲಿದ್ದ ಪೊಲೀಸರೇ ಬಾವಿಗೆ ಧುಮುಕಿ ಆಕೆಯನ್ನು ಬದುಕಿಸಿದ್ದಾರೆ. ಬಳಿಕ ಕುಂದಾಪುರ ಸಮೀಪದ ವಿನಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಆತ್ಮಹತ್ಯೆಗೆ ಶರಣಾದ ನಾಗರಾಜ್ ಹಾಗೂ ರಮ್ಯಾ ಒಂದೇ ಬ್ಯಾಚ್ ಮೇಟ್ ಆಗಿದ್ದರು. ಕಳೆದ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ನಾಗರಾಜ್ ಹಾಗೂ ರಮ್ಯಾ ಅದೃಷ್ಟವೆಂಬಂತೆ ಒಂದೇ ಪೊಲೀಸ್ ಠಾಣೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದರು. ನಾಗರಾಜ್ ತನ್ನ ಪ್ರೇಮದ ಬಗ್ಗೆ ಮನೆಯಲ್ಲೂ ಹೇಳಿಕೊಂಡಿದ್ದ. ನಾಗರಾಜ್ ಹಾಗೂ ರಮ್ಯಾ ಮನೆಯವರಿಂದಲೂ ಒಪ್ಪಿಗೆ ಸಿಕ್ಕಿತ್ತು.

    ದಿನ ಕಳೆದಂತೆ ಇವರಿಬ್ಬರ ನಡುವೆ ಮನಸ್ತಾಪ ಬೆಳೆದಿತ್ತು. ಚಿಕ್ಕಪುಟ್ಟ ವಿಷಯಕ್ಕೂ ಜಗಳ ನಡೆಯುತ್ತಿತ್ತು. ಈ ಬಗ್ಗೆ ಡೆತ್ ನೋಟ್ ಕೂಡ ಬರೆದ ನಾಗರಾಜ್ ತನ್ನ ಸಾವಿಗೆ ನಾನೇ ಕಾರಣ. ನನಗೆ ತುಂಬಾ ನೋವಾಗಿದೆ. ನನ್ನ ಮಾತನ್ನು ರಮ್ಯಾ ಕೇಳುತ್ತಿಲ್ಲ. ಅವಳೊಂದಿಗೆ ನೆಮ್ಮದಿಯಿಲ್ಲ. ನನ್ನನ್ನು ಕ್ಷಮಿಸಿ. ನನ್ನ ಸಾವಿಗೆ ನಾನೇ ಹೊಣೆ ಎಂದು ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾನೆ. ಈ ಬಗ್ಗೆ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

    ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಮಾತನಾಡಿದ ನಾಗರಾಜ್ ಸ್ನೇಹಿತ ಫಾರುಕ್, ಕೂಲಿ ಮಾಡಿಕೊಂಡಿದ್ದ ನಾಗರಾಜ್, ಪೊಲೀಸ್ ಉದ್ಯೋಗ ಸೇರಿದ್ದ. ಆತ್ಮಹತ್ಯೆ ಮಾಡಿರುವುದು ಬೇಸರ ತಂದಿದೆ. ನಾಗರಾಜ್ ತುಂಬಾ ಸ್ನೇಹಸ್ವಭಾವ ವ್ಯಕ್ತಿಯಾಗಿದ್ದನು ಅಂತ ಹೇಳಿದ್ದಾರೆ.

    ಕೆಲಸದ ವಿಚಾರದಲ್ಲಿ ಒತ್ತಡ ತಂದುಕೊಳ್ಳುತ್ತಿದ್ದ. ಇನ್ನುಳಿದಂತೆ ಮನೆ ವಿಚಾರ ಬಂದಾಗ ಖುಷಿಯಾಗಿದ್ದ. ಪೊಲೀಸ್ ಆಗಬೇಕೆಂದು ತುಂಬ ಆಸೆಯನ್ನಿಟ್ಟುಕೊಂಡಿದ್ದ ನಾಗರಾಜ್, ಕೂಲಿ ಕೆಲಸ ಮಾಡಿ ಪೊಲೀಸ್ ಕೆಲಸಕ್ಕೆ ಸೇರಿದ್ದ. ಇನ್ನು ಪ್ರೀತಿ ವಿಚಾರವಾಗಿ ಮನೆಯಲ್ಲಿ ಯುವತಿಯ ಫೋಟೋ ತೋರಿಸಿದ್ದ. ಫೋಟೋ ನೋಡಿ ಮನೆಯಲ್ಲೂ ಒಪ್ಪಿಗೆ ನೀಡಲಾಗಿತ್ತು. ಆದರೆ ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದ ಏಕೆ ಅನ್ನೋದು ಗೊತ್ತಾಗುತ್ತಿಲ್ಲ. ಡೆತ್ ನೋಟಿನಲ್ಲೂ ಕ್ಷಮಿಸಿ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದ್ದಾನೆ. ನಾಗರಾಜ್ ಸಾವು ದುಃಖ ತಂದಿದೆ ಅಂತ ಸಹೋದರ್ ಅರುಣ್ ಹೇಳಿದ್ದಾರೆ.

    ಸದ್ಯ ಮೃತ ನಾಗರಾಜ್ ಮೃತದೇಹವನ್ನು ಮಣಿಪಾಲದ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಕುಟುಂಬದವರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿದೆ.

    ಮನೆಯಲ್ಲಿ ವಿರೋಧವಿದ್ದು ಠಾಣೆಗೆ ಹಾರಿ ಬರುವ ಅದೆಷ್ಟೋ ಜೋಡಿ ಹಕ್ಕಿಗಳನ್ನು ದಂಪತಿಗಳನ್ನಾಗಿ ಮಾಡಿ ಕಳುಹಿಸಿದ ಉದಾಹರಣೆ ಸಾಕಷ್ಟಿದೆ. ಆದ್ರೆ ಈ ಪ್ರಕರಣ ಅದಕ್ಕೆ ತದ್ವಿರುದ್ಧವಾಗಿದೆ. ವರ್ಷಗಟ್ಟಲೆ ಸಾಕಿ ಸಲಹಿದ- ಮಗ ಮಗಳಿಗೆ ಬೆಟ್ಟದಷ್ಟು ಪ್ರೀತಿಕೊಟ್ಟು, ಸಿಕ್ಕಾಪಟ್ಟೆ ಕನಸನ್ನಿಟ್ಟ ಪೋಷಕರು ಈ ಪ್ರೀತಿ- ಪ್ರೇಮ- ಆತ್ಮಹತ್ಯೆಯ ಸಂದರ್ಭ ಒಂದು ಕ್ಷಣವೂ ಕಣ್ಮುಂದೆ ಬರೋದೇ ಇಲ್ವಾ ಅನ್ನೋದೆ ಉತ್ತರ ಸಿಗದ ಪ್ರಶ್ನೆಯಾಗಿದೆ.