Tag: woman officer

  • ಕೊಡಗು ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿ ನೇಣಿಗೆ ಶರಣು

    ಕೊಡಗು ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿ ನೇಣಿಗೆ ಶರಣು

    ಮಡಿಕೇರಿ: ಅರಣ್ಯ ಇಲಾಖೆಯಲ್ಲಿ (Forest Department) ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಅಧಿಕಾರಿಯೊಬ್ಬರು (Woman Officer) ನೇಣಿಗೆ ಶರಣಾಗಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

    ಮಂಡ್ಯ  ಮೂಲದ ರಶ್ಮಿ (27) ಮೃತ ದುರ್ದೈವಿ. ಅರಣ್ಯ ಇಲಾಖೆಯ ಸಂಶೋಧನೆ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ರಶ್ಮಿ, ಕಳೆದ 2 ವರ್ಷಗಳಿಂದ ಕೊಡಗಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

    ನಿನ್ನೆ ರಾತ್ರಿ ಮಡಿಕೇರಿಯ ಅರಣ್ಯ ಭವನದ ಬಳಿಯಿರುವ ವಸತಿ ಗೃಹದಲ್ಲಿ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಅದಾನಿ ಷೇರು ಶಾರ್ಟ್‌ ಸೆಲ್ಲಿಂಗ್‌, 16 ಕಂಪನಿಗಳಿಗೆ ಭಾರೀ ಲಾಭ – ಇಡಿ ತನಿಖಾ ವರದಿಯಲ್ಲಿ ಏನಿದೆ?

    ಅಧಿಕಾರಿಯ ಅಗಲಿಕೆಗೆ ಮಡಿಕೇರಿಯ ಅರಣ್ಯ ಇಲಾಖೆ ಸಂತಾಪ ವ್ಯಕ್ತಪಡಿಸಿದೆ. ಮೃತದೇಹವನ್ನ ಮಂಡ್ಯ ಜಿಲ್ಲೆಗೆ ರವಾನಿಸಲಾಗಿದೆ. ಇದನ್ನೂ ಓದಿ: ನಾಳೆಯಿಂದ INDIA ಒಕ್ಕೂಟದ 3ನೇ ಸಭೆ – ‘ಬಿಜೆಪಿ ಚಲೇ ಜಾವೋ’ ಅಭಿಯಾನಕ್ಕೆ ಚಾಲನೆ ನಿರೀಕ್ಷೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಧರಿಸುವ ಬಟ್ಟೆಯಿಂದ ಮಹಿಳೆಯನ್ನು ವ್ಯಾಖ್ಯಾನಿಸಬಾರದು- ಇವಿಎಂ ಹಿಡಿದ ಅಧಿಕಾರಿ ಮಾತು

    ಧರಿಸುವ ಬಟ್ಟೆಯಿಂದ ಮಹಿಳೆಯನ್ನು ವ್ಯಾಖ್ಯಾನಿಸಬಾರದು- ಇವಿಎಂ ಹಿಡಿದ ಅಧಿಕಾರಿ ಮಾತು

    ಭೋಪಾಲ್: ದೇಶದಲ್ಲಿ ಲೋಕಸಭಾ ಚುನಾವಣೆಯ ಬ್ಯುಸಿ ಮಧ್ಯೆಯೂ ಹಳದಿ ಬಣ್ಣದ ಸಾರಿ ಹಾಗೂ ನೀಲಿ ಬಣ್ಣದ ಗೌನ್ ಧರಿಸಿ ಇವಿಎಂ ಮೆಷಿನ್ ಹಿಡಿದುಕೊಂಡು ಹೋಗುತ್ತಿದ್ದ ಮಹಿಳೆಯರಿಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

    ಒಬ್ಬರು ನೀಲಿ ಬಣ್ಣದ ಗೌನ್ ಧರಿಸಿದರೆ, ಮತ್ತೊಬ್ಬರು ಹಳದಿ ಬಣ್ಣದ ಸೀರೆ ಉಟ್ಟು, ಕೂಲಿಂಗ್ ಗ್ಲಾಸ್ ಹಾಕಿಕೊಂಡು ತಮ್ಮ ಎರಡೂ ಕೈಗಳಲ್ಲೂ ಇವಿಎಂ ಹಿಡಿದುಕೊಂಡ ಇಬ್ಬರು ಮಹಿಳೆಯರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ನೀಲಿ ಬಣ್ಣದ ಗೌನ್ ಧರಿಸಿರುವ ಮಹಿಳೆಯೇ ಪ್ರತಿಕ್ರಿಯಿಸುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

    ಹೌದು. ಗೌನ್ ಧರಿಸಿದವರ ಹೆಸರು ಯೋಗೇಶ್ವರಿ ಗೋಹೈಟ್ ಆದರೆ, ಮತ್ತೊಬ್ಬರ ಹೆಸರು ರೀನಾ ದ್ವಿವೇದಿ ಎಂಬುದಾಗಿದೆ. ಯೋಗೇಶ್ವರಿಯವರು ಬ್ಯಾಂಕ್ ಅಧಿಕಾರಿಯಾಗಿದ್ದಾರೆ. ಇವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಫೇಸ್ ಬುಕ್ ನಲ್ಲಿ ಸಾವಿರಾರು ಮಂದಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಲು ಆರಂಭಿಸಿದ್ದಾರಂತೆ. ಹೀಗಾಗಿ ಅವರು ತನ್ನ ಖಾತೆಯನ್ನು ಮರೆಮಾಚಲು ನಿರ್ಧಾರ ಮಾಡಿರುವುದಾಗಿ ಹೇಳಿದ್ದಾರೆ.

    ಗೋಹೈಟ್ ಅವರು ಕೆನರಾ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದು, ಭಾನುವಾರ ನಡೆದ ಚುನಾವಣಾ ಸಮಯದಲ್ಲಿ ಅವರನ್ನು ಭೋಪಾಲ್ ನ ಗೋವಿಂದಪುರ ಕ್ಷೇತ್ರದಲ್ಲಿ ಮತಗಟ್ಟೆಯ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಹಾಗೆಯೇ ಅವರು ಮತಗಟ್ಟೆಗೆ ಬರುತ್ತಿದ್ದಂತೆಯೇ ಫೋಟೋಗ್ರಾಫರ್ ಗಳು ಝೂಮ್ ಮಾಡಿ ಫೋಟೋ ತೆಗೆಯಲು ಆರಂಭಿಸಿದ್ದಾರೆ. ಅಧಿಕಾರಿ ನೀಲಿ ಬಣ್ಣದ ಗೌನ್ ಧರಿಸಿ, ಒಂದು ಕೈನಲ್ಲಿ ಟ್ರೆಂಡಿ ಬ್ಯಾಗ್ ಹಾಗೂ ಇನ್ನೊಂದು ಕೈಯಲ್ಲಿ ಬ್ಯಾಲೆಟ್ ಪೇಪರ್ ಹಿಡಿದುಕೊಂಡು ಹೋಗುತ್ತಿದ್ದಾಗ ಸುತ್ತಮುತ್ತ ಇದ್ದವರೆಲ್ಲ ಒಂದು ಬಾರಿ ಕತ್ತೆತ್ತಿ ನೋಡಿದ್ದಾರೆ. ಇದೇ ವೇಳೆ ಫೋಟೋಗ್ರಾಫರ್ ಗಳು ಮುಗಿಬಿದ್ದು ಫೋಟೋ ತೆಗೆಯಲು ಆರಂಭಿಸಿದರು. ಇದನ್ನು ಗಮನಿಸಿದ ಅಧಿಕಾರಿಗೆ ಇರುಸುಮುರುಸು ಉಂಟಾಗಿದ್ದು, ಆದರೂ ಕ್ಯಾಮೆರಾಗಳಿಗೆ ಒಂದು ಸಣ್ಣ ನಗೆ ಬೀರಿ ಅಲ್ಲಿಂದ ಮುಂದೆ ಹೋಗಿದ್ದಾರೆ.

    ಆದರೆ ಮಧ್ಯಾಹ್ನದ ಬಳಿಕ ಅಧಿಕಾರಿ ಫೋಟೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪತ್ರಕರ್ತರು ಮಹಿಳೆಯನ್ನು ಮಾತನಾಡಿಸಲು ಪ್ರಯತ್ನಿಸಿದ್ದಾರೆ. ಆದರೆ ಕರ್ತವ್ಯದಲ್ಲಿದ್ದ ಕಾರಣ ಅವರು ಮಾತನಾಡಲು ನಿರಾಕರಿಸಿದ್ದಾರೆ.  ಕರ್ತವ್ಯ ಮಗಿದ ಬಳಿಕವೂ ಅಧಿಕಾರಿ ಪತ್ರಕರ್ತರ ಜೊತೆ ಮಾತನಾಡಲು ನಿರಾಕರಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಮತದಾನದ ಮರುದಿನ ಅಂದರೆ ಸೋಮವಾರ ಮಾಧ್ಯಮದ ಜೊತೆ ಮಾತನಾಡಿದ ಅಧಿಕಾರಿ, ಎಲ್ಲರೂ ನನ್ನ ಕಡೆಯೇ ಗಮನ ಹರಿಸಿದ್ದನ್ನು ಕಂಡು ನಿಜಕ್ಕೂ ನನಗೆ ಅಚ್ಚರಿಯಾಯ್ತು. ನನ್ನಷ್ಟದಂತೆ ನಾನು ಡ್ರೆಸ್ ಮಾಡಿಕೊಂಡಿದ್ದೇನೆ. ನಾನು ಯಾವುದೇ ಮಾಡೆಲ್ ಅಲ್ಲ. ಅಲ್ಲದೆ ಯಾವುದೇ ಫ್ಯಾಶನ್ ಮಾಡಿಕೊಂಡು ಮತಗಟ್ಟೆಗೆ ಬಂದಿಲ್ಲ. ಹೀಗಾಗಿ ನಾವು ಧರಿಸುವ ಬಟ್ಟೆಯಿಂದ ನಮ್ಮನ್ನು ವ್ಯಾಖ್ಯಾನ ಮಾಡಬೇಡಿ. ಇದು ನಮ್ಮ ವೃತ್ತಿಯಾಗಿದೆ. ಇಲ್ಲಿನ ನೀತಿ ನಿಯಮಗಳಷ್ಟೇ ನಮಗೆ ಮುಖ್ಯವಾಗುತ್ತದೆ ಎಂದು ಖಾರವಾಗಿಯೇ ಪ್ರತಿಕ್ರಿಯಸಿದ್ದಾರೆ.

    ಅಧಿಕಾರಿ ಸೋಮವಾರ ಕರ್ತವ್ಯದಿಂದ ತೆರಳಿದ್ದಾರೆ. ಆ ಬಳಿಕ ಮಾಧ್ಯಮದವರು ಭೋಪಾಲ್ ನಲ್ಲಿರುವ ಅವರ ಮನೆ ವಿಳಾಸವನ್ನು ಕಂಡು ಹಿಡಿದು ಅಲ್ಲಿಗೆ ದೌಡಾಯಿಸಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರೂ ಮಹಿಳಾ ಅಧಿಕಾರಿಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.

    2011ರ ಜವರಿಯಲ್ಲಿ ಗೋಹೈಟ್ ಕೆನರಾ ಬ್ಯಾಂಕ್ ಉದ್ಯೋಗಿಯಾಗಿ ಸೇರಿಕೊಂಡಿದ್ದಾರೆ. 7 ವರ್ಷದ ಹಿಂದೆ ದೆವೆನ್ ಓಂಕಾರ್ ಎಂಬವರನ್ನು ವರಿಸಿರುವ ಅಧಿಕಾರಿ, ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ನನ್ನದು ಒಂದು ಪುಟ್ಟ ಪಾತ್ರವಿರುವುದು ನನಗೆ ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.

  • ತಲೆಗೆ ಹೇರ್ ಡೈ ಹಾಕ್ಕೊಂಡು ಬಾ, ಗೋವಾಗೆ ಹೋಗಿ ಮರಳಲ್ಲಿ ಉರುಳಾಡೋಣ ಎಂದು ಮಹಿಳಾ ಅಧಿಕಾರಿಗೆ ಕಿರುಕುಳ

    ತಲೆಗೆ ಹೇರ್ ಡೈ ಹಾಕ್ಕೊಂಡು ಬಾ, ಗೋವಾಗೆ ಹೋಗಿ ಮರಳಲ್ಲಿ ಉರುಳಾಡೋಣ ಎಂದು ಮಹಿಳಾ ಅಧಿಕಾರಿಗೆ ಕಿರುಕುಳ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಹಿಳೆಯರು ಜೀವನ ನಡೆಸಲು ಕಷ್ಟವಿದೆ ಅನ್ನೋದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇದಕ್ಕೆ ಉದಾಹರಣೆಯೆಂಬಂತೆ ಇದೀಗ ವಿಧಾನಸೌಧದಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಅಧಿಕಾರಿಗೆ ಅಲ್ಲಿನ ಅಧೀನ ಕಾರ್ಯದರ್ಶಿಯೊಬ್ಬ ಲೈಂಗಿಕ ಕಿರುಕುಳ ನೀಡಿರುವ ಆರೋಪವೊಂದು ಕೇಳಿಬಂದಿದೆ.

    ವಿಧಾನಸಭೆ ಕಾರ್ಯದರ್ಶಿ ಮೂರ್ತಿ ಅವರ ಮೇಲೆ ಈ ಆರೋಪ ಕೇಳಿಬಂದಿದ್ದು, ತನ್ನ ಮೇಲಿನ ಕಿರುಕುಳ ಬಗ್ಗೆ ಮಹಿಳಾ ಅಧಿಕಾರಿ ಇದೀಗ ಹಿರಿಯ ಅಧಿಕಾರಿ, ಸ್ಪೀಕರ್ ಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಏನಿದು ಕಿರುಕುಳ?: ನಾನು ಎಲ್ಲರಿಗಿಂತ ನಿನ್ನನ್ನೇ ಇಷ್ಟಪಡೋದು. ನಾವೆಲ್ಲ ಹೋಗಿ ಗೋವಾಕ್ಕೆ ಹೋಗಿ ಮರಳಿನಲ್ಲಿ ಉರುಳಾಡೋಣ. ನೀನು ತಲೆಗೆ ಹೇರ್ ಡೈ ಮಾಡಿಕೊಂಡು ಬಾ. ಸ್ಮಾರ್ಟ್ ಆಗಿ ಬಾ ನನಗೆ ಎನರ್ಜಿ ಬರಬೇಕು. ನಿನ್ನ ಮಗಳಿಗೆ ಮದುವೆ ಯಾಕೆ ಮಾಡುತ್ತೀಯಾ. ನಿನ್ನ ಬಾಳು ಹಾಳಾದ ಹಾಗೆ ಆಗುತ್ತೆ. ಅವಳಿಗೆ ಮದುವೆ ಮಾಡಬೇಡ. ನೀನು ಎರಡನೇ ಮದುವೆ ಯಾಕೆ ಮಾಡಿಕೊಂಡೆ. 10 ವರ್ಷದ ಹಿಂದೆ ನನಗೆ ಗೊತ್ತಿದ್ದರೆ ನಾನು ನಿನ್ನನ್ನು ಹಾರಿಸಿಕೊಂಡು ಹೋಗುತ್ತಿದ್ದೆ. ನೀನು ಚೆನ್ನಾಗಿದ್ದೀಯ ಅಂತ ನಿನಗೆ ಕೊಬ್ಬಾ. ನಾನು ಹತ್ತು ವರ್ಷ ಇರುತ್ತೀನಿ. ಈ ಹತ್ತು ವರ್ಷದಲ್ಲಿ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದೆಲ್ಲಾ ಕಾರ್ಯದರ್ಶಿ ಮೂರ್ತಿ ಕಿರುಕುಳ ನೀಡಿದ್ದಾನೆ ಅಂತ ಮಹಿಳಾ ಅಧಿಕಾರಿ ಆರೋಪಿಸಿದ್ದಾರೆ.

    ಈ ಕುರಿತು ಒಂದು ತಿಂಗಳ ಹಿಂದೆಯೇ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರಂತೆ. ಆ ಬಳಿಕ ಮಹಿಳಾ ಅಧಿಕಾರಿ ಕಾನೂನು ಸಚಿವ ಜಯಚಂದ್ರರಿಗೂ ಈ ಕುರಿತು ನೀಡಿದ್ದರಂತೆ. ಈ ವೇಳೆ ಸಚಿವರು ಕಾರ್ಯದರ್ಶಿಯನ್ನು ಕರೆದು ಎಚ್ಚರಿಕೆ ನೀಡಿದ್ದರು. ಆದ್ರೆ ಸಚಿವರ ಅವರ ಮಾತಿಗೆ ಕ್ಯಾರೆ ಎನ್ನದ ಆತ ತನ್ನ ಚಾಳಿ ಮುಂದುವರೆಸಿದ್ದಾನೆ. ಇದರಿಂದ ನೊಂದ ಮಹಿಳಾ ಅಧಿಕಾರಿ ನೇರವಾಗಿಯೇ ಜಯಚಂದ್ರಗೆ ಪತ್ರದ ಮುಖಾಂತರ ದೂರು ನೀಡಿದ್ದಾರೆ. ದೂರಿನಲ್ಲಿ ತಮ್ಮ ಮೇಲಿನ ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದಾರೆ.

    ಕಾರ್ಯದರ್ಶಿ ಮೂರ್ತಿಯ ಅಕ್ರಮದ ಬಗ್ಗೆ ಈ ಹಿಂದೆ ಪಬ್ಲಿಕ್ ಟಿವಿಯಲ್ಲಿ ವರದಿ ಬಿತ್ತರಿಸಲಾಗಿತ್ತು. ಈಗಾಗಲೇ ಈತನ ಮೇಲೆ ಲೋಕಾಯುಕ್ತದಲ್ಲಿ ದೂರು ನೀಡಲಾಗಿದ್ದು, ಎರಡು ಬಾರಿ ನೋಟಿಸ್ ನೀಡಿದ್ದರೂ ಗೈರು ಹಾಜರಾಗಿದ್ದನು. ಮೂರ್ತಿ ವಿರುದ್ಧ ಹಲವು ಮಹಿಳಾ ಅಧಿಕಾರಿಗಳು ಲೈಂಗಿಕ ಕಿರುಕುಳದ ಬಗ್ಗೆ ಸ್ಪೀಕರ್ ಗೆ ಮೌಖಿಕ ದೂರು ನೀಡಿದ್ದರೂ ಸ್ಪೀಕರ್ ಕ್ರಮ ಕೈಗೊಂಡಿಲ್ಲ ಅಂತ ಆರೋಪ ವ್ಯಕ್ತವಾಗಿದೆ.

    ಅಲ್ಲದೇ ಈ ಹಿಂದೆ ಈತನ ಆಡಳಿತಕ್ಕೆ ಬೇಸೆತ್ತು ಮಹಿಳಾ ಅಧಿಕಾರಿಗಳು ವಿಧಾನಸೌಧದಲ್ಲಿ ಪ್ರತಿಭಟನೆ ಕೂಡ ನಡೆಸಿದ್ರು. ಆ ಸಂದರ್ಭದಲ್ಲೂ ಕೂಡ ಎಚ್ಚೆತ್ತುಕೊಳ್ಳದ ಸ್ಪೀಕರ್ ಮೂರ್ತಿಯ ಮೇಲೆ ಅನುಕಂಪ ತೋರಿಸಿ ಮಹಿಳಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ರು. ಈತನ ಬದಲಾವಣೆಗೆ ಮುಖ್ಯಮಂತ್ರಿ ಕೂಡ ಶಿಫಾರಸ್ಸು ಮಾಡಿದ್ರು. ಆದ್ರೆ ದಲಿತ ಸಂಘಟನೆಗಳನ್ನು ಮುಖ್ಯಮಂತ್ರಿಗಳ ಮನೆಗೆ ಕಳುಹಿಸಿ ಬದಲಾಯಿಸದಂತೆ ಒತ್ತಡ ಹಾಕಿಸಿದ್ದ ಎಂದು ತಿಳಿದುಬಂದಿದೆ.