Tag: Woman Murder

  • ಅನುಮಾನಾಸ್ಪದವಾಗಿ ಅರೆಬೆತ್ತಲೆ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

    ಅನುಮಾನಾಸ್ಪದವಾಗಿ ಅರೆಬೆತ್ತಲೆ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

    ಮುಂಬೈ: ಅನುಮಾನಾಸ್ಪದ ರೀತಿಯಲ್ಲಿ ರಸ್ತೆ ಬದಿ ಗೋಣಿ ಚೀಲದಲ್ಲಿ ಮಹಿಳೆಯ ಅರೆಬೆತ್ತಲೆ ಶವ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ರಾಯಗಢದಲ್ಲಿ ನಡೆದಿದೆ.

    ಮೃತ ಮಹಿಳೆಯನ್ನು ಸ್ಥಳೀಯ ಗ್ರಾಮ ಪಂಚಾಯಿತಿಯ ಸರಪಂಚ್ ಎಂದು ಗುರುತಿಸಲಾಗಿದ್ದು, ಈ ಘಟನೆ ಮಹಾಡ್ ತಾಲೂಕಿನ ಬೆಳೋಶಿ ಗ್ರಾಮದಲ್ಲಿ ನಡೆದಿದೆ. ರಸ್ತೆಬದಿ ಎಸೆದಿದ್ದ ಗೋಣಿಚೀಲ ಗಮನಿಸಿದ ಕೆಲ ಯುವಕರು ಪರಿಶೀಲಿಸಲು ಮುಂದಾದಾಗ ಮಹಿಳೆ ಬೆತ್ತಲೆಯಾಗಿದ್ದು, ಆಕೆಯ ದೇಹದ ಮೇಲೆ ಗಾಯದ ಗುರುತುಗಳನ್ನು ಕಂಡು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸಿಎಂ ಬದಲಾವಣೆ ಕೇವಲ ಊಹಾಪೋಹ: ನಳಿನ್‍ ಕುಮಾರ್ ಕಟೀಲ್

    ನಂತರ ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮಹಿಳೆಯ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದೀಗ ಪೊಲೀಸರು ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಮೃತ ಮಹಿಳೆಯ ಸಂಬಂಧಿಕರ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಲ್ಯಾಂಡಿಂಗ್ ಸಮಸ್ಯೆಯಾದ ಸಿಎಂ ಬೊಮ್ಮಾಯಿ ಇದ್ದ ವಿಮಾನ

    ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಎಫ್‍ಐಆರ್ ದಾಖಲಿಸುವುದಾಗಿ ತಿಳಿಸಿದ್ದಾರೆ.

  • ಪತ್ನಿಯನ್ನು ಕೊಂದು ವಿಷ ಸೇವಿಸಿ ಆಸ್ಪತ್ರೆ ಸೇರಿದ್ದ ಪತಿರಾಯ ಈಗ ಪೊಲೀಸರ ಅತಿಥಿ

    ಪತ್ನಿಯನ್ನು ಕೊಂದು ವಿಷ ಸೇವಿಸಿ ಆಸ್ಪತ್ರೆ ಸೇರಿದ್ದ ಪತಿರಾಯ ಈಗ ಪೊಲೀಸರ ಅತಿಥಿ

    ಮಂಡ್ಯ: ಪತ್ನಿಯನ್ನು ಕೊಂದು ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಪತಿಯನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

    ಸಂಧ್ಯಾ(23) ಗಂಡನಿಂದಲೇ ಕೊಲೆಯಾಗಿರುವ ಮಹಿಳೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕುಂದೂರು ಬಳಿ ಈ ಘಟನೆ ನಡೆದಿದ್ದು, ವಾರದ ಬಳಿಕ ಪೊಲೀಸರ ವಿಚಾರಣೆಯ ಬಳಿಕ ಪತ್ನಿಯನ್ನು ಕೊಂದಿರುವುದನ್ನು ಒಪ್ಪಿಕೊಂಡಿದ್ದಾನೆ.

    ಮದ್ದೂರು ತಾಲೂಕಿನ ಹಾಗಲಹಳ್ಳಿ ಗ್ರಾಮದ ನಿವಾಸಿ ಷಡಕ್ಷರಿಯನ್ನು ಒಂದೂವರೆ ವರ್ಷದ ಹಿಂದಷ್ಟೇ ಸಂಧ್ಯಾ ಮದುವೆಯಾಗಿದ್ದರು. ಆದರೆ ಇವರ ಸಂಸಾರದಲ್ಲಿ ಬಿರುಕು ಸೃಷ್ಟಿಯಾಗಿ ಇತ್ತೀಚೆಗೆ ಗಂಡ, ಹೆಂಡತಿ ದೂರವಾಗಿದ್ರು. ತಂದೆ ಮನೆಯಲ್ಲಿದ್ದುಕೊಂಡು ಸಂಧ್ಯಾ ಕಂಪ್ಯೂಟರ್ ತರಬೇತಿಗೆ ಪಡೆಯುತ್ತಿದ್ದರು. ಆದರೆ ನ.16ರಂದು ಕಂಪ್ಯೂಟರ್ ಕ್ಲಾಸ್ ಗೆ ಹೋಗಿದ್ದ ಸಂಧ್ಯಾ ನಾಪತ್ತೆಯಾಗಿದ್ದರು. ಇದನ್ನೂ ಓದಿ: ಕ್ರಿಸ್‍ಮಸ್ ಮೆರವಣೆಗೆಯಲ್ಲಿ ಭಾರೀ ಅಪಘಾತ – 20 ಜನರಿಗೆ ತೀವ್ರಗಾಯ

    ಈ ಹಿನ್ನೆಲೆ ಸಂಧ್ಯಾ ಪೋಷಕರು ಮನೆಗೆ ಮಗಳು ಬಾರದಿದ್ದಕ್ಕೆ ಬೆಳಕವಾಡಿ ಪೊಲೀಸ್ ಗೆ ನಾಪತ್ತೆ ದೂರು ನೀಡಿದ್ದರು. ಮತ್ತೊಂದೆಡೆ ಅಳಿಯ ಷಡಕ್ಷರಿ ವಿಷ ಸೇವಿಸಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಸೇರಿದ್ದ. ಪರಿಣಾಮ ಪೊಲೀಸರು ಆತ ಆಸ್ಪತ್ರೆಯಿಂದ ಬಿಡುಗಡೆಯಾಗುವರೆಗೂ ಕಾದು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ಆರಂಭದಲ್ಲಿ ತನಗೇನು ಗೊತ್ತಿಲ್ಲ ಎನ್ನುತ್ತಿದ್ದ ಷಡಕ್ಷರಿ ಪೊಲೀಸರ ಟ್ರಿಟ್ಮೆಂಟ್ ಬಳಿಕ ತಪ್ಪನ್ನು ಒಪ್ಪಿಕೊಂಡಿದ್ದಾನೆ.

    ಷಡಕ್ಷರಿ ಕಂಪ್ಯೂಟರ್ ಕ್ಲಾಸ್ ನಿಂದ ಸಂಧ್ಯಾನನ್ನು ಕರೆದುಕೊಂಡು ಬಂದು ಕುಂದೂರು ಬಳಿಯ ನಾಲೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾನೆ. ಕೊಲೆ ಬಳಿಕ ವಿಷ ಸೇವಿಸಿ ತಾನೇ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಮೂಲಕ ಪ್ರಕರಣದಿಂದ ತಪ್ಪಿಸಿಕೊಳ್ಳಬಹುದು ಎಂದು ಪ್ಲಾನ್ ಮಾಡಿ ಕೊನೆಗೂ ಸಿಕ್ಕಿ ಹಾಕಿಕೊಂಡಿದ್ದಾನೆ. ಪೊಲೀಸರು ಪ್ರಸ್ತುತ ಆರೋಪಿಯನ್ನು ಬಂಧಿಸಿ ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

  • ಮನೆಗೆ ನುಗ್ಗಿ ಒಂಟಿ ಮಹಿಳೆಯ ಕತ್ತು ಸೀಳಿ ಭೀಕರ ಕೊಲೆ

    ಮನೆಗೆ ನುಗ್ಗಿ ಒಂಟಿ ಮಹಿಳೆಯ ಕತ್ತು ಸೀಳಿ ಭೀಕರ ಕೊಲೆ

    ಬೆಂಗಳೂರು: ಒಂಟಿ ಮಹಿಳೆಯ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಗಾಯತ್ರಿ ನಗರದಲ್ಲಿ ನಡೆದಿದೆ.

    40 ವರ್ಷದ ಮಂಜುಳ ಕೊಲೆಯಾದ ಮಹಿಳೆ. ಮಂಜುಳ ಚೀಟಿ ವ್ಯವಹಾರ ಮಾಡಿಕೊಂಡಿದ್ದು, ಆರು ತಿಂಗಳಿನಿಂದ ಗಾಯತ್ರಿ ನಗರದಲ್ಲಿ ಮನೆ ಮಾಡಿಕೊಂಡು ಮಗನೊಂದಿಗೆ ವಾಸವಾಗಿದ್ದರು. ಮಧ್ಯಾಹ್ನ ದುಷ್ಕರ್ಮಿಗಳು ಮಂಜುಳ ಮನೆಯಲ್ಲಿ ಒಂಟಿಯಾಗಿದ್ದಾಗ ಹೋಗಿ ಚಾಕುವಿಂದ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಪಕ್ಕದ ಮನೆಯ ಮಹಿಳೆ ಮನೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.

    ಕೂಡಲೇ ಆ ಮಹಿಳೆ ಮಗನಿಗೆ ಕರೆ ಮಾಡಿ ಕೊಲೆಯಾಗಿರುವ ವಿಷಯ ತಿಳಿಸಿದ್ದಾರೆ. ಮಗ ಮನೆಗೆ ಬಂದು ನೋಡಿದಾಗ ಮಂಜುಳಾ ಶವ ರಕ್ತದ ಮಡುವಿನಲ್ಲಿ ಬೆಡ್ ರೂಂನಲ್ಲಿ ಬಿದ್ದಿದೆ. ಮಗ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ರಾಮಯ್ಯ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸುಬ್ರಮಣ್ಯ ನಗರ ಠಾಣೆಯ ಪೊಲೀಸರು ಹಂತಕರಿಗಾಗಿ ವಿಶೇಷ ಬಲೆ ಬೀಸಿದ್ದಾರೆ. ಪರಿಚಯಸ್ಥರೇ ಕೊಲೆ ನಡೆಸಿರುವ ಅನುಮಾನ ವ್ಯಕ್ತವಾಗಿವೆ.