Tag: woman judge

  • ಸುಪ್ರೀಂನ ಮೊದಲ ಮಹಿಳಾ ನ್ಯಾಯಾಧೀಶೆ ಫಾತಿಮಾ ಬೀವಿ ನಿಧನ

    ಸುಪ್ರೀಂನ ಮೊದಲ ಮಹಿಳಾ ನ್ಯಾಯಾಧೀಶೆ ಫಾತಿಮಾ ಬೀವಿ ನಿಧನ

    ತಿರುವನಂತಪುರಂ: ಸುಪ್ರೀಂ ಕೋರ್ಟ್‍ನ (Supreme Court) ಮೊದಲ ಮಹಿಳಾ ನ್ಯಾಯಾಧೀಶೆ (Woman Judge) ಮತ್ತು ತಮಿಳುನಾಡಿನ ಮಾಜಿ ರಾಜ್ಯಪಾಲೆ ಫಾತಿಮಾ ಬೀವಿ (96) (Fathima Beevi) ಅವರು ಕೆರಳದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

    ಕೇರಳದ ಪಂದಳಂನಲ್ಲಿ ಜನಿಸಿದ ಅವರು, ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದರು. ಬಳಿಕ 1950 ರಲ್ಲಿ ಕೇರಳದ ಕೆಳ ನ್ಯಾಯಾಂಗದಲ್ಲಿ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಕೇರಳದ ಅಧೀನ ನ್ಯಾಯಾಂಗ ಸೇವೆಗಳಲ್ಲಿ ಮುನ್ಸಿಫ್ ಆಗಿ ಸೇವೆ ಸಲ್ಲಿಸಿದರು. ಬಳಿಕ ಅಧೀನ ನ್ಯಾಯಾಧೀಶರಾಗಿ, ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಆಗಿ, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು. ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ ಸದಸ್ಯರಾಗಿ ಕೂಡ ಅವರು ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆಗೆ ನಿರಾಕರಿಸಿದ ಸುಪ್ರೀಂ – ಆದೇಶ ಮರು ಪರಿಶೀಲನಾ ಅರ್ಜಿ ಸಲ್ಲಿಕೆ

    ಬೀವಿ ಅವರು 1983 ರಲ್ಲಿ ಹೈಕೋರ್ಟ್ (High Court) ನ್ಯಾಯಾಧೀಶರಾದರು. ಬಳಿಕ 1989 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದರು. ಇವರು ಉನ್ನತ ನ್ಯಾಯಾಲಯಕ್ಕೆ ನೇಮಕಗೊಂಡ ಮೊದಲ ಮುಸ್ಲಿಂ ನ್ಯಾಯಾಧೀಶೆ ಕೂಡ ಹೌದು.

    ನಿವೃತ್ತಿಯ ನಂತರ ನ್ಯಾಯಮೂರ್ತಿ ಬೀವಿಯವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ನಂತರ ಅವರನ್ನು ತಮಿಳುನಾಡಿನ ರಾಜ್ಯಪಾಲರಾಗಿ ನೇಮಿಸಲಾಯಿತು. ಅವರು ರಾಜ್ಯದ ರಾಜ್ಯಪಾಲರಾಗಿದ್ದ ಅವಧಿಯಲ್ಲಿ ತಮಿಳುನಾಡು ವಿಶ್ವವಿದ್ಯಾಲಯದ ಕುಲಪತಿಯಾಗಿಯೂ ಸೇವೆ ಸಲ್ಲಿಸಿದ್ದರು.

    ಅವರಿಗೆ ಭಾರತ್ ಜ್ಯೋತಿ ಪ್ರಶಸ್ತಿ ಮತ್ತು ಯುಎಸ್-ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇದನ್ನೂ ಓದಿ: ಹುತಾತ್ಮ ಯೋಧ ಪ್ರಾಂಜಲ್‌ ಕುಟುಂಬದಲ್ಲಿ ನೀರವ ಮೌನ – ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ

  • ನ್ಯಾಯಾಧೀಶೆಯನ್ನೇ ಅಪಹರಣಗೈಯಲು ಯತ್ನಿಸಿದ ಕ್ಯಾಬ್ ಡ್ರೈವರ್!

    ನ್ಯಾಯಾಧೀಶೆಯನ್ನೇ ಅಪಹರಣಗೈಯಲು ಯತ್ನಿಸಿದ ಕ್ಯಾಬ್ ಡ್ರೈವರ್!

    ನವದೆಹಲಿ: ಮಹಿಳೆಯರ ಜೊತೆ ಕ್ಯಾಬ್ ಡ್ರೈವರ್ ಗಳು ಅಸಭ್ಯವಾಗಿ ವರ್ತಿಸಿ ಸಿಕ್ಕಿಬಿದ್ದ ಘಟನೆಗಳನ್ನು ಕೇಳಿದ್ದೀರಿ. ಆದ್ರೆ ಇದೀಗ ಕ್ಯಾಬ್ ಡ್ರೈವರೊಬ್ಬ ನ್ಯಾಯಾಧೀಶೆಯನ್ನೇ ಅಪಹರಣ ಮಾಡಲು ಯತ್ನಿಸಿದ ಘಟನೆ ನಡೆದಿದೆ.

    ಘಟನೆಗೆ ಸಂಬಂಧಿಸಿದಂತೆ ಸದ್ಯ ಕ್ಯಾಬ್ ಡ್ರೈವರ್ ನನ್ನು ಬಂಧಿಸಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ.

    ಸಾಂದರ್ಭಿಕ ಚಿತ್ರ

    ಕರ್ಕರ್ ಡೂಮ ಕೋರ್ಟ್ ಗೆ ಕ್ಯಾಬ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಡ್ರೈವರ್ ಮಾರ್ಗ ಬದಲಿಸಿ ರಾಷ್ಟ್ರೀಯ ಹೆದ್ದಾರಿ 24ರಲ್ಲಿ ಹಪುರ್ ಕಡೆ ಕ್ಯಾಬ್ ಚಲಾಯಿಸಲು ಮುಂದಾದ. ಈ ವಿಚಾರ ನನ್ನ ಗಮನಕ್ಕೆ ಬಂದ ಕೂಡಲೇ ನಾನು ನನ್ನ ಸಹೋದ್ಯೋಗಿಗಳಿಗೆ ಹಾಗೂ ಪೊಲೀಸರಿಗೆ ಮಾಹಿತಿ ರವಾನಿಸಿದೆ ಅಂತ ನ್ಯಾಯಾಧೀಶೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ: ಮಹಿಳೆ ಎದುರೆ ಹಸ್ತಮೈಥುನ ಮಾಡಿಕೊಂಡ ಉಬರ್ ಕ್ಯಾಬ್ ಡ್ರೈವರ್ ಅರೆಸ್ಟ್

    ಸ್ವಲ್ಪ ಮುಂದಕ್ಕೆ ತನ್ನ ವಾಹನ ಚಲಾಯಿಸಿದ ಚಾಲಕ ಬಳಿಕ ದೆಹಲಿಯತ್ತ ಸಂಚರಿಸಲು ಯೂಟರ್ನ್ ತೆಗೆದುಕೊಂಡ. ಕೂಡಲೇ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಘಾಜಿಪುರ್ ಟೋಲ್ ಪಲಾಜಾದ ಬಳಿ ಕ್ಯಾಬ್ ಡ್ರೈರ್ ನನ್ನು ಬಂಧಿಸಿದ್ದಾರೆ.

    ಚಾಲಕ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.