Tag: woman inspector

  • ಸಮವಸ್ತ್ರದಲ್ಲೇ ಫೋಟೋಶೂಟ್ ಮಾಡಿಸಿಕೊಂಡು ಮಹಿಳಾ ಸಬ್ ಇನ್ಸ್‌ಪೆಕ್ಟರ್ ಎಡವಟ್ಟು!

    ಸಮವಸ್ತ್ರದಲ್ಲೇ ಫೋಟೋಶೂಟ್ ಮಾಡಿಸಿಕೊಂಡು ಮಹಿಳಾ ಸಬ್ ಇನ್ಸ್‌ಪೆಕ್ಟರ್ ಎಡವಟ್ಟು!

    ಕೊಯಿಕ್ಕೋಡ್: ಮಹಿಳಾ ಸಬ್ ಇನ್ಸ್ ಪೆಕ್ಟರ್ ಒಬ್ಬರು ತಮ್ಮ ಸಮವಸ್ತ್ರದಲ್ಲಿಯೇ ಫೋಟೋಶೂಟ್ ಮಾಡಿಕೊಂಡು ಎಡವಟ್ಟು ಮಾಡಿಕೊಂಡ ಘಟನೆ ಕೇರಳದಲ್ಲಿ ನಡೆದಿದೆ.

    ಮಹಿಳಾ ಸಬ್ ಇನ್ಸ್ ಪೆಕ್ಟರ್ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಅಲ್ಲದೆ ಈ ಫೋಟೋ ಪೊಲೀಸ್ ಇಲಾಖೆಯಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಲ ದಿನಗಳ ಹಿಂದೆ ಕೋಯಿಕ್ಕೋಡ್ ನಗರದ ಮಹಿಳಾ ಸಬ್ ಇನ್ಸ್ ಪೆಕ್ಟರ್ ಅವರು ಯೂನಿಫಾರ್ಮ್ ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಸೇವ್ ದಿ ಡೆಟ್ ಎಂಬ ಟ್ಯಾಗ್ ಲೈನ್ ನೊಂದಿಗೆ ಫೋಟೋ ಹರಿದಾಡಲು ಆರಂಭವಾಗಿದೆ.

    ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಸಮವಸ್ತ್ರವನ್ನು ಧರಿಸಿರುವ ಫೋಟೋಗಳನ್ನು ಪೋಸ್ಟ್ ಮಾಡದಿರುವಂತೆ 2015ರಲ್ಲಿಯೇ ಕೇರಳ ಡಿಜಿಪಿ ಆಗಿದ್ದ ಟಿ.ಪಿ ಸೆನ್ ಕುಮಾರ್ ಅವರು ಆದೇಶ ಹೊರಡಿಸಿದ್ದರು. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಸಂವಹನ ನಡೆಸುವುದಕ್ಕೆ ಕೆಲವೊಂದಿಷ್ಟು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದರು. ಇದನ್ನೂ ಓದಿ: 154 ದಿನಗಳ ನಂತರ ಡಿಸ್ಚಾರ್ಜ್ – ಸಾವನ್ನು ಗೆದ್ದ ಕೊಪ್ಪಳದ ಮಹಿಳೆ

    ಆದರೆ ಇದೀಗ ಈ ಮಹಿಳಾ ಪೊಲೀಸ್, ಈ ಆದೇಶವನ್ನು ಉಲ್ಲಂಘಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದಲ್ಲದೇ ಅವುಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಕಠಿಣ ಕ್ರಮ ಎದುರಿಸಲಿದ್ದಾರೆ. ಇದನ್ನೂ ಓದಿ: ನೀವು ಬದಲಾಗದಿದ್ದರೆ ಮುಂದೆ ಎಲ್ಲವೂ ಬದಲಾಗುತ್ತೆ: ಸಂಸದರಿಗೆ ಮೋದಿ ಎಚ್ಚರಿಕೆ

  • ತುಂಬು ಗರ್ಭಿಣಿಯನ್ನು 3 ಕಿ.ಮೀ ನಡೆಯುವಂತೆ ಮಾಡಿದ ಮಹಿಳಾ ಇನ್ಸ್‌ಪೆಕ್ಟರ್ ಅಮಾನತು

    ತುಂಬು ಗರ್ಭಿಣಿಯನ್ನು 3 ಕಿ.ಮೀ ನಡೆಯುವಂತೆ ಮಾಡಿದ ಮಹಿಳಾ ಇನ್ಸ್‌ಪೆಕ್ಟರ್ ಅಮಾನತು

    ಭುವನೇಶ್ವರ: ತುಂಬು ಗರ್ಭಿಣಿಯನ್ನು ಉರಿಬಿಸಿಲಿನಲ್ಲಿ ಸುಮಾರು 3 ಕಿ.ಮೀ ನಡೆಸಿದ ಮಹಿಳಾ ಇನ್ಸ್ ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದೆ.

    ಈ ಅಮಾನವೀಯ ಘಟನೆ ಭುವನೇಶ್ವರದ ಮಯೂರ್ ಭಂಜ್ ನಲ್ಲಿ ನಡೆದಿದೆ. ಮಹಿಳಾ ಇನ್ಸ್ ಪೆಕ್ಟರ್ ಅಮಾನವೀಯ ವರ್ತನೆಗೆ ಪೊಲೀಸ್ ಇಲಾಖೆ ಭಾರೀ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ ರೀನಾ ಬಕ್ಸಲ್ ರನ್ನು ಕೆಲಸದಿಂದ ವಜಾ ಮಾಡಲಾಗಿದೆ.

    ಆಗಿದ್ದೇನು..?
    8 ತಿಂಗಳ ತುಂಬು ಗರ್ಭಿಣಿ ತನ್ನ ಪತಿ ವಿಕ್ರಮ್ ಜೊತೆ ಬೈಕ್ ನಲ್ಲಿ ಕುಳಿತು ಆಸ್ಪತ್ರೆಗೆ ತೆರಳುತ್ತಿದ್ದರು. ಹಿಂಬದಿ ಕುಳಿತಿದ್ದ ಗರ್ಭಿಣಿ ಹೆಲ್ಮೆಟ್ ಧರಿಸಿರಲಿಲ್ಲ. ಇದನ್ನು ಗಮನಿಸಿದ ರೀನಾ, ಬೈಕ್ ತಡೆದು ನಿಲ್ಲಿಸಿದ್ದಾರೆ. ಇತ್ತ ದಂಡ ಪಾವತಿಸುವಂತೆ ಇನ್ಸ್ ಪೆಕ್ಟರ್ ರೀನಾ ತಿಳಿಸಿದ್ದಾರೆ. ಆಗ ವಿಕ್ರಮ್, ನನ್ನ ಬಳಿ ಹಣವಿಲ್ಲ. ಹೀಗಾಗಿ ಹಣವನ್ನು ಆನ್ ಲೈನ್ ಮೂಲಕ ಪಾವತಿಸುವುದಾಗಿ ಹೇಳಿದ್ದಾರೆ. ಆದರೆ ರೀನಾ ಇದಕ್ಕೊಪ್ಪಲಿಲ್ಲ. ಈ ವೇಳೆ ಇಬ್ಬರ ಮಧ್ಯೆ ಮಾತುಕತೆ ನಡೆದಿದೆ.

    ಕೊನೆಗೆ ಪೊಲೀಸ್ ಠಾಣೆಗೆ ಬಂದು ದಂಡ ಪಾವತಿಸುವಂತೆ ರೀನಾ, ವಿಕ್ರಮ್ ಗೆ ಸೂಚಿಸಿದ್ದಾರೆ. ಅಂತೆಯೇ ಠಾಣೆಗೆ ಪತ್ನಿಯನ್ನು ಕರೆದುಕೊಂಡು ಹೋಗುವುದಾಗಿ ವಿಕ್ರಮ್, ರೀನಾ ಬಳಿ ಮನವಿ ಮಾಡಿಕೊಂಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ರೀನಾ, ವಿಕ್ರಮ್ ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಜೈಲಿನೊಳಗೆ ಸುಮಾರು 3 ಗಂಟೆಗಳ ಕಾಲ ಕೂಡಿಹಾಕಿದ್ದಾರೆ. ಇತ್ತ ತುಂಬು ಗರ್ಭಿಣಿ ಪತಿಗಾಗಿ ಕೆಲವು ಗಂಟೆಗಳ ಕಾಲ ರಸ್ತೆ ಬದಿಯೇ ಕಾದು ನಿಂತಿದ್ದಾರೆ. ಸುಮಾರು ಹೊತ್ತಾದರೂ ಪತಿ ಬರದೇ ಇರುವುದರಿಂದ ಅವರು ಮೂರು ಕಿ.ಮೀ ನಡೆದುಕೊಂಡೇ ಠಾಣೆಗೆ ಬಂದಿದ್ದಾರೆ.

    ಬಳಿಕ ದಂಪತಿ ಪೊಲೀಸ್ ಅಧಿಕಾರಿ ಬಳಿ ನಡೆದ ಘಟನೆಯನ್ನು ವಿವಿರಿಸಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಎಸ್‍ಪಿ ಪಾರ್ಮರ್ ಸ್ಮಿತ್ ಪುರುಷೋತ್ತಮದಾಸ್ ರೀನಾ ಅವರನ್ನು ಕೆಲಸದಿಂದ ವಜಾ ಮಾಡಿದ್ದಾರೆ.