Tag: woman cop

  • ಭಾರತ, ಪಾಕ್ ಪಂದ್ಯದ ವೇಳೆ ವ್ಯಕ್ತಿಯೊಂದಿಗೆ ಮಹಿಳಾ ಪೊಲೀಸ್ ಗಲಾಟೆ – ಪೊಲೀಸ್‍ಗೆ ಕಪಾಳಮೋಕ್ಷಕ್ಕೆ ಯತ್ನ

    ಭಾರತ, ಪಾಕ್ ಪಂದ್ಯದ ವೇಳೆ ವ್ಯಕ್ತಿಯೊಂದಿಗೆ ಮಹಿಳಾ ಪೊಲೀಸ್ ಗಲಾಟೆ – ಪೊಲೀಸ್‍ಗೆ ಕಪಾಳಮೋಕ್ಷಕ್ಕೆ ಯತ್ನ

    ಅಹಮದಾಬಾದ್: ಭಾರತ (Team India) ಪಾಕ್ ಪಂದ್ಯದ ವೇಳೆ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ವ್ಯಕ್ತಿಯೊಬ್ಬನ ನಡುವೆ ನಡೆದ ಗಲಾಟೆಯ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವೈರಲ್ ಆಗಿರುವ ವೀಡಿಯೋದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ (Woman Cop) ಹಾಗೂ ವ್ಯಕ್ತಿಯ ನಡುವೆ ವಾಗ್ವಾದವಾಗಿದೆ. ಈ ವೇಳೆ ಪೊಲೀಸ್‍ಗೆ ವ್ಯಕ್ತಿ ಕಪಾಳಮೋಕ್ಷ ಮಾಡಲು ಮುಂದಾಗಿದ್ದ. ಆಗ ವ್ಯಕ್ತಿಗೆ ಪೊಲೀಸ್ ಸಿಬ್ಬಂದಿ ಕೆನ್ನೆಗೆ ಹೊಡೆದಿದ್ದಾರೆ. ಬಳಿಕ ಇಬ್ಬರ ನಡುವೆ ಗಲಾಟೆ ಹೆಚ್ಚಾಗುತ್ತಿದ್ದಂತೆ ಉಳಿದ ಪ್ರೇಕ್ಷಕರು ಅವರಿಬ್ಬರನ್ನೂ ಸಮಾಧಾನ ಪಡೆಸಿದ್ದಾರೆ. ಇದನ್ನೂ ಓದಿ: ಸಿಕ್ಸ್‌ ಸಿಡಿಸಿ ದಾಖಲೆ ಬರೆದ ರೋಹಿತ್‌ ಶರ್ಮಾ

    ಈ ವೀಡಿಯೋ ಬಗ್ಗೆ ನೆಟ್ಟಿಗರು ಪರ ವಿರೋಧ ಚರ್ಚೆಗಳನ್ನು ನಡೆಸಿದ್ದಾರೆ. ಕೆಲವರು ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಬಾರದಿತ್ತು ಎಂದು ಹೇಳಿದ್ದಾರೆ. ಇನ್ನೂ ಕೆಲವರು ಅಲ್ಲಿ ಏನು ನಡೆಯಿತು ಎಂದು ಪ್ರಶ್ನಿಸಿದ್ದಾರೆ.

    ಇದರ ನಡುವೆ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಜಯಗಳಿಸಿತು. ಈ ಮೂಲಕ ಪಾಕ್ ವಿರುದ್ಧದ ಪಂದ್ಯದಲ್ಲಿ 8-0 ವಿಜಯಯಾತ್ರೆಯನ್ನು ಮುಂದುವರೆಸಿದೆ. ಇದನ್ನೂ ಓದಿ: ಭಾರತದ ಬೆಂಕಿ ಬೌಲಿಂಗ್‌, ರೋʼಹಿಟ್‌ʼ ಬ್ಯಾಟಿಂಗ್‌ಗೆ ಪಾಕ್‌ ಭಸ್ಮ – ಮೊದಲ ಸ್ಥಾನಕ್ಕೆ ಜಿಗಿದ ಟೀಂ ಇಂಡಿಯಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯುಪಿ ರೈಲಿನಲ್ಲಿ ಮಹಿಳಾ ಪೊಲೀಸ್ ಮೇಲೆ ದಾಳಿ ಮಾಡಿದ್ದ ಆರೋಪಿಯನ್ನು ಎನ್‌ಕೌಂಟರ್ ನಡೆಸಿ ಹತ್ಯೆ

    ಯುಪಿ ರೈಲಿನಲ್ಲಿ ಮಹಿಳಾ ಪೊಲೀಸ್ ಮೇಲೆ ದಾಳಿ ಮಾಡಿದ್ದ ಆರೋಪಿಯನ್ನು ಎನ್‌ಕೌಂಟರ್ ನಡೆಸಿ ಹತ್ಯೆ

    ಲಕ್ನೋ: ಕಳೆದ ತಿಂಗಳು ರೈಲಿನಲ್ಲಿ ಮಹಿಳಾ ಕಾನ್‌ಸ್ಟೆಬಲ್ (Woman Constable) ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಉತ್ತರ ಪ್ರದೇಶದಲ್ಲಿ (Uttar Pradesh) ಪತ್ತೆ ಹಚ್ಚಿ ಎನ್‌ಕೌಂಟರ್‌ನಲ್ಲಿ (Encounter) ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

    ಗುಂಡಿನ ದಾಳಿಯಲ್ಲಿ ಆತನ ಇಬ್ಬರು ಸಹಾಯಕರು ಗಾಯಗೊಂಡಿದ್ದು, ಇದೀಗ ಅವರನ್ನು ಬಂಧಿಸಲಾಗಿದೆ. ಕಳೆದ ತಿಂಗಳು ಅಯೋಧ್ಯೆಯ (Ayodhya) ಬಳಿ ಸರಯು ಎಕ್ಸ್‌ಪ್ರೆಸ್‌ನಲ್ಲಿ ರಕ್ತದ ಮಡುವಿನಲ್ಲಿ ಕಾನ್‌ಸ್ಟೆಬಲ್ ಮುಖ ಮತ್ತು ತಲೆಗೆ ಗಾಯಗಳಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರು ಈಗ ಲಕ್ನೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ದಾಳಿಯ ಪ್ರಮುಖ ಆರೋಪಿ ಅನೀಸ್ ಖಾನ್ ನನ್ನು ಪೊಲೀಸರು ಬಂಧಿಸಲು ಹೋಗಿದ್ದರು. ಈ ವೇಳೆ ಎನ್‌ಕೌಂಟರ್ ನಡೆಸಿದಾಗ ಆರೋಪಿ ಗಾಯಗೊಂಡಿದ್ದು, ಆತನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಆತ ಸಾವನ್ನಪ್ಪಿದ್ದಾನೆ. ಆತನ ಸಹಾಯಕರಾದ ಆಜಾದ್ ಮತ್ತು ವಿಷಂಭರ್ ದಯಾಳ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶಾಲಾ ವಾಹನ ನಿಲ್ಲಿಸಿ, ಗನ್ ಝಳಪಿಸಿ ರೀಲ್ಸ್ ಮಾಡಿದ ಪುಂಡರು!

    ಮಹಿಳಾ ಪೊಲೀಸ್ ಮೇಲೆ ದಾಳಿ ನಡೆಸಿದ ಘಟನೆ ಬಳಿಕ ಸಂತ್ರಸ್ತೆ ಗುರುತಿಸಿದ ಫೋಟೋವನ್ನು ಆಧರಿಸಿ ನಾವು ಆರೋಪಿಯನ್ನು ಗುರುತಿಸಿ, ಪತ್ತೆಹಚ್ಚಿದ್ದೇವೆ. ಇದರ ಆಧಾರದ ಮೇಲೆ ಆಯೋಧ್ಯೆ ಪೊಲೀಸರು ಮತ್ತು ವಿಶೇಷ ಕಾರ್ಯಪಡೆ ಆರೋಪಿಯ ಮೇಲೆ ಎನ್‌ಕೌಂಟರ್ ನಡೆಸಿದ್ದಾಗಿ ಅಯೋಧ್ಯೆ ಹಿರಿಯ ಪೊಲೀಸ್ ಅಧೀಕ್ಷಕ ರಾಜ್ ಕರಣ್ ನಯ್ಯರ್ ತಿಳಿಸಿದ್ದಾರೆ.

    ಆರೋಪಿಗಳು ತಪ್ಪಿಸಿಕೊಳ್ಳಲು ಮೊದಲು ತಮ್ಮ ಮೇಲೆ ಗುಂಡು ಹಾರಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ಪೊಲೀಸರು ಎನ್‌ಕೌಂಟರ್ ನಡೆಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಇಬ್ಬರಿಗೆ ಗಾಯಗಳಾಗಿದ್ದು ಅವರನ್ನು ಮೊದಲು ಬಂಧಿಸಲಾಗಿತ್ತು. ಮೂರನೇ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಶೋಧ ಕಾರ್ಯ ನಡೆಸಲಾಗಿತ್ತು. ಆತ ಮತ್ತೆ ಸಿಕ್ಕಿ ಬಿದ್ದಾಗ ಪೊಲೀಸರಿಗೆ ಶರಣಾಗಲು ತಿಳಿಸಲಾಗಿತ್ತು. ಆದರೆ ಆತ ಮತ್ತೆ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಲು ಮುಂದಾದಾಗ ಆತನ ಮೇಲೆ ಗುಂಡು ಹಾರಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಆತ ಕೊನೆಗೆ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: RSS ಭಾರತದ ಸಂಸ್ಥೆಗಳನ್ನು ವಶಪಡಿಸಿಕೊಳ್ಳಲು INDIA ಬಣ ಬಿಡಲ್ಲ: ರಾಹುಲ್ ಗಾಂಧಿ

    ಕಾರ್ಯಾಚರಣೆ ವೇಳೆ ಒಬ್ಬ ಪೊಲೀಸ್ ಅಧಿಕಾರಿಯೂ ಗಾಯಗೊಂಡಿದ್ದಾರೆ. ಆಗಸ್ಟ್ 30ರಂದು ರೈಲಿನ ಕಂಪಾರ್ಟ್‌ಮೆಂಟ್‌ನಲ್ಲಿ ಮಹಿಳಾ ಕಾನ್‌ಸ್ಟೆಬಲ್ ಗಂಭೀರ ಸ್ಥಿತಿಯಲ್ಲಿ ಗಾಯಗೊಂಡು ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದರು. ಆಕೆಯ ಸಹೋದರ ಅದೇ ದಿನ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲಾಕಪ್ ಮುಂದೆ ಸೊಂಟ ಬಳುಕಿಸಿ ಟಿಕ್‍ಟಾಕ್ ಡ್ಯಾನ್ಸ್ – ಮಹಿಳಾ ಪೇದೆ ಅಮಾನತು

    ಲಾಕಪ್ ಮುಂದೆ ಸೊಂಟ ಬಳುಕಿಸಿ ಟಿಕ್‍ಟಾಕ್ ಡ್ಯಾನ್ಸ್ – ಮಹಿಳಾ ಪೇದೆ ಅಮಾನತು

    ಗಾಂಧಿನಗರ: ಮಹಿಳಾ ಪೊಲೀಸ್ ಪೇದೆಯೊಬ್ಬರು ಪೊಲೀಸ್ ಠಾಣೆಯೊಳಗೆ ಟಿಕ್‍ಟಾಕ್ ವಿಡಿಯೋ ಡ್ಯಾನ್ಸ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಅವರನ್ನು ಕೆಲಸದಿಂದ ಅಮಾನತು ಮಾಡಿರುವ ಘಟನೆ ಗುಜರಾತಿನ ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದೆ.

    ಅರ್ಪಿತಾ ಚೌಧರಿ ಅಮಾನತಾದ ಮಹಿಳಾ ಪೊಲೀಸ್ ಪೇದೆ. ಮೆಹ್ಸಾನಾ ಜಿಲ್ಲೆಯ ಲಂಗ್ನಾಜ್ ಪೊಲೀಸ್ ಠಾಣೆಯಲ್ಲಿ ಲಾಪಕ್ ಮುಂದೆ ನಿಂತು ಅರ್ಪಿತಾ ಚೌಧರಿ ಬಾಲಿವುಡ್ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿತ್ತು. ಅಧಿಕಾರಿಗಳ ಗಮನಕ್ಕೆ ಬಂದ ತಕ್ಷಣ ಅವರನ್ನು ಕೆಲಸದಿಂದ ಅಮಾನತು ಮಾಡಿದ್ದಾರೆ.

    ಅರ್ಪಿತಾ ಚೌಧರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಕರ್ತವ್ಯದಲ್ಲಿದ್ದಾಗ ಅವರು ಸಮವಸ್ತ್ರ ಧರಿಸದೆ ಲಂಗ್ನಾಜ್ ಗ್ರಾಮ ಪೊಲೀಸ್ ಠಾಣೆಯೊಳಗೆ ಡ್ಯಾನ್ಸ್ ಮಾಡಿದ್ದು, ಟಿಕ್‍ಟಾಕ್ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿಯಾದವರು ಶಿಸ್ತನ್ನು ಅನುಸರಿಸಬೇಕು. ಆದರೆ ಅರ್ಪಿತಾ ಅವರು ಶಿಸ್ತನ್ನು ಪಾಲಿಸಲಿಲ್ಲ. ಹೀಗಾಗಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಉಪ ಅಧೀಕ್ಷಕ ಪೊಲೀಸ್ ಮಂಜಿತಾ ವಂಜಾರಾ ತಿಳಿಸಿದ್ದಾರೆ.

    ಅರ್ಪಿತಾ ಚೌಧರಿ ಜುಲೈ 20 ರಂದು ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದರು. ನಂತರ ಅದನ್ನು ವಾಟ್ಸಪ್‍ನಲ್ಲಿ ಅಪ್ಲೋಡ್ ಮಾಡಿದ್ದು, ವೈರಲ್ ಆಗಿದೆ. ಚೌಧರಿ 2016ರಲ್ಲಿ ಪೊಲೀಸರ ಲೋಕ ರಕ್ಷಕ ದಳಕ್ಕೆ ನೇಮಕಗೊಂಡಿದ್ದರು. ನಂತರ 2018ರಲ್ಲಿ ಮೆಹ್ಸಾನಾ ಜಿಲ್ಲೆಗೆ ವರ್ಗಾಯಿಸಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

  • ವಾಟ್ಸಪ್ ನಂಬರ್ ಬ್ಲಾಕ್ ಮಾಡಿ, ಕರೆ ಸ್ವೀಕರಿಸದ್ದಕ್ಕೆ ಗೆಳತಿಗೆ ಬೆಂಕಿ ಹಚ್ಚಿ ಕೊಂದ

    ವಾಟ್ಸಪ್ ನಂಬರ್ ಬ್ಲಾಕ್ ಮಾಡಿ, ಕರೆ ಸ್ವೀಕರಿಸದ್ದಕ್ಕೆ ಗೆಳತಿಗೆ ಬೆಂಕಿ ಹಚ್ಚಿ ಕೊಂದ

    – ಕೇರಳ ಮಹಿಳಾ ಪೊಲೀಸ್ ಅಧಿಕಾರಿ ಕೊಲೆಯ ಸತ್ಯ ಬಿಚ್ಚಿಟ್ಟ ಆರೋಪಿ
    – ಮದುವೆ ಆಗುವಂತೆ ಪೀಡಿಸುತ್ತಿದ್ದ ಹಂತಕ

    ತಿರುವನಂತಪುರಂ: ಕೇರಳದ ಮಹಿಳಾ ಪೊಲೀಸ್ ಅಧಿಕಾರಿ ಸೌಮ್ಯಾ ಪುಷ್ಪಕರಣ್ ಅವರನ್ನು ಹತ್ಯೆ ಮಾಡಿದ್ದ ಆರೋಪಿ ನಿಜವಾದ ಕಾರಣವನ್ನು ಬಾಯಿಬಿಟ್ಟಿದ್ದಾನೆ.

    ಆರೋಪಿ ಅಜಾಝ್‍ನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಸೌಮ್ಯಾ ಪುಷ್ಪಕರಣ್ ಅವರನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳಲು ಅಜಾಝ್ ನಿರ್ಧರಿಸಿದ್ದ ಎಂಬ ಮಾಹಿತಿ ಅಭ್ಯವಾಗಿದೆ ಎಂದು ವಲ್ಲಿಕುನ್ನಂ ಪೊಲೀಸ್ ಠಾಣೆ ಸಬ್ ಇನ್‍ಸ್ಪೆಕ್ಟರ್ ಸೈಜು ಇಬ್ರಾಹಿಂ ತಿಳಿಸಿದ್ದಾರೆ.

    ಮೂರು ವರ್ಷದ ಸ್ನೇಹ:
    ಸೌಮ್ಯಾ ಅಜಾಝ್‍ನನ್ನು ತಿಸ್ಸೂರ್ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿಯ ಸಂದರ್ಭದಲ್ಲಿ ಭೇಟಿಯಾಗಿದ್ದರು. ನಂತರ ಫೇಸ್‍ಬುಕ್‍ನಲ್ಲಿ ಗೆಳೆತನವಾಗಿತ್ತು. ಈ ಮೂಲಕ ಇಬ್ಬರ ಮಧ್ಯೆ ಕಳೆದ ಮೂರು ವರ್ಷಗಳಿಂದ ಸ್ನೇಹವಿತ್ತು. ಅಜಾಝ್ ಸ್ನೇಹದ ಬಗ್ಗೆ ಸೌಮ್ಯಾರ ತಾಯಿ ಇಂದಿರಾಗೆ ಮಾತ್ರ ಗೊತ್ತಿತ್ತು. ಅಷ್ಟೇ ಅಲ್ಲದೆ ಅವರಿಬ್ಬರ ಮಧ್ಯೆ ಹಣಕಾಸಿನ ವ್ಯವಹಾರ ಕೂಡ ನಡೆದಿದ್ದವು ಎಂದು ಸಬ್ ಇನ್‍ಸ್ಪೆಕ್ಟರ್ ಮಾಹಿತಿ ನೀಡಿದ್ದಾರೆ.

    ಸೌಮ್ಯಾ ಅವರ ಪತಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರಿಂದ ತಾಯಿ ಹಾಗೂ ಮೂವರು ಮಕ್ಕಳ ಜೊತೆಗೆ ವಾಸಿಸುತ್ತಿದ್ದರು. ಹೀಗಾಗಿ ಸೌಮ್ಯಾ ತಾಯಿಯೊಂದಿಗೆ ತನ್ನ ಜೀವನದ ಎಲ್ಲಾ ವಿಚಾರಗಳನ್ನು ಹೇಳಿಕೊಳ್ಳುತ್ತಿದ್ದಳು. ಈ ಮಧ್ಯೆ ಅಜಾಝ್ ಸೌಮ್ಯಾರನ್ನು ವಿವಾಹವಾಗಬೇಕೆಂದು ಆಸೆಪಟ್ಟು, ಪತಿ ಮತ್ತು ಮಕ್ಕಳನ್ನು ಬಿಟ್ಟು ಬರುವಂತೆ ಪೀಡಿಸುತ್ತಿದ್ದ. ಈ ಸ್ನೇಹ ತನ್ನ ಜೀವನಕ್ಕೆ ಮುಳುವಾಗುತ್ತದೆ ಎಂದು ಅರಿತ ಸೌಮ್ಯಾ ಅವರು ಅಜಾಝ್‍ನಿಂದ ದೂರವಿರಲು ಯತ್ನಿಸಿದ್ದರು ಎಂದು ಸೈಜು ಇಬ್ರಾಹಿಂ ಹೇಳಿದ್ದಾರೆ.

    ವಾಟ್ಸಪ್ ನಂಬರ್ ಬ್ಲಾಕ್:
    ಅಜಾಝ್ ಮಾತ್ರ ಸೌಮ್ಯಾರನ್ನು ಮದುವೆಯಾಗಲೇಬೇಕು ಎಂದು ನಿರ್ಧರಿಸಿದ್ದ. ಈ ವಿಚಾರವಾಗಿ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿ ಸೌಮ್ಯಾ ಅಜಾಝ್‍ನ ವಾಟ್ಸಪ್ ನಂಬರ್ ಅನ್ನು ಬ್ಲಾಕ್ ಮಾಡಿದ್ದರು. ಅಷ್ಟೇ ಅಲ್ಲದೆ ಆತನ ಮೊಬೈಲ್ ಕರೆಗಳನ್ನು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಅಜಾಝ್ ಕೊಲೆ ಮಾಡಿ ಬೆಂಕಿ ಹಚ್ಚಿದ್ದ. ಬಳಿಕ ಆತನು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಸೈಜು ಇಬ್ರಾಹಿಂ ಹೇಳಿದ್ದಾರೆ.

    ತನಿಖೆಯ ಪ್ರಕಾರ ಅಜಾಜ್ ಸೌಮ್ಯಾರನ್ನು ಉದ್ದೇಶ ಪೂರ್ವಕವಾಗಿಯೇ ಕೊಲೆ ಮಾಡಿದ್ದಾನೆ. ಕರ್ತವ್ಯನಿರತ ಪೊಲೀಸ್ ಅಧಿಕಾರಿಯಾಗಿ ಅಪರಾಧಗಳ ಪರಿಣಾಮವನ್ನು ಚೆನ್ನಾಗಿ ಬಲ್ಲವನಾಗಿದ್ದ. ಯಾವುದೋ ಮಾರುಕಟ್ಟೆಯಿಂದ ಹರಿತವಾದ ಚಾಕುವೊಂದನ್ನು ಖರೀದಿಸಿದ್ದು, ಕೃತ್ಯಕ್ಕೆ ಬಳಸಿದ್ದಾನೆ ಎಂದರು.

    ಸೌಮ್ಯ ತಾಯಿ ಕಣ್ಣೀರು:
    ಮಾಧ್ಯಮಗಳೊಂದಿಗೆ ಮಾತನಾಡಿದ ಸೌಮ್ಯಾರ ತಾಯಿ, ಈ ಹಿಂದೆಯೂ ಅಜಾಝ್ ಇದೇ ರೀತಿ ಮಾಡಿದ್ದ. ಒಂದು ಬಾರಿ ಆಕೆಯ ಮೇಲೆ ಪೆಟ್ರೋಲ್ ಸುರಿದು, ಬೆನ್ನಿಗೆ ಶೂನಿಂದ ಅಮಾನುಷವಾಗಿ ಹೊಡೆದಿದ್ದ. ಇದಾದ ಬಳಿಕ ನಾನು ಅವನೊಂದಿಗೆ ಮಾತನಾಡುವುದಾಗಿ ತಿಳಿಸಿದ್ದೆ. ಆದರೆ ನನ್ನನ್ನು ತಡೆದಿದ್ದ ಸೌಮ್ಯಾ, ನಾವು ಸುಮ್ಮನಿದ್ದರೆ ಅಜಾಝ್ ತನ್ನಪಾಡಿಗೆ ತಾನು ಇರುತ್ತಾನೆ ಎಂದು ಹೇಳಿದ್ದಳು. ಈಗ ಮಗಳು ಆತನ ನೀಚನ ಕೃತ್ಯಕ್ಕೆ ಬಲಿಯಾಗಿದ್ದಾಳೆ ಎಂದು ಕಣ್ಣೀರು ಹಾಕಿದರು.

    ಸೌಮ್ಯಾರ ತಂದೆ ಹಾಸಿಗೆ ಹಿಡಿದಿದ್ದರಿಂದ ತಾಯಿ ಇಂದಿರಾ ಮಕ್ಕಳನ್ನು ಬಟ್ಟೆ ಹೊಲಿದು ಸಾಕಿದ್ದರು. ಸೌಮ್ಯಾರ ಗಂಡ ವಿದೇಶದಲ್ಲಿ ಕೆಲಸಮಾಡುತ್ತಿದ್ದು, ಆಕೆಗೆ 10 ವರ್ಷ ಮತ್ತು 7 ವರ್ಷದ ಗಂಡು ಮಕ್ಕಳು ಮತ್ತು 4 ವರ್ಷದ ಹೆಣ್ಣು ಮಗುವಿದೆ. ದೊಡ್ಡ ಮಕ್ಕಳು ತಮ್ಮ ತಾಯಿಯ ಸಾವಿನ ಸುದ್ದಿಯಿಂದ ಆಘಾತಕಾರಿ ಸ್ಥಿತಿಯಲ್ಲಿದ್ದು, ಚಿಕ್ಕ ಮಗುವಿಗೆ ಏನಾಗಿದೆ ಎಂಬುದು ಸಹ ತಿಳಿದಿಲ್ಲ ಎಂದು ಸಬ್ ಇನ್‍ಸ್ಪೆಕ್ಟರ್ ಸೈಜು ಇಬ್ರಾಹಿಂ ಭಾವುಕರಾದರು.

    ಈ ಹಿಂದೆ ಆಗಿದ್ದೇನು?:
    ಸೌಮ್ಯಾ ಅವರು ಶನಿವಾರ ಕೆಲಸ ಮುಗಿಸಿ ಬೈಕ್‍ನಲ್ಲಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಅಜಾಝ್ ಸೌಮ್ಯಾ ಅವರ ಬೈಕ್‍ಗೆ ಗುದ್ದಿ ಕೆಳಗೆ ಬೀಳಿಸಿದ್ದ. ಅಜಾಝ್ ತನ್ನನ್ನು ಕೊಲೆ ಮಾಡಲು ಬಂದಿದ್ದಾನೆ ಎಂದು ಅರಿತ ಸೌಮ್ಯಾ ಓಡಲು ಆರಂಭಿಸಿದ್ದರು. ತಕ್ಷಣವೇ ಹಿಂಬಾಲಿಸಿದ ಆರೋಪಿ, ಚಾಕುನಿಂದ ಇರಿದು, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಸೌಮ್ಯಾ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

    ಸೌಮ್ಯಾರನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ಅಜಾಝ್ ಬೆಂಕಿ ಹಚ್ಚಿಕೊಂಡಿದ್ದ. ಆದರೆ ಬದುಕಿ ಉಳಿದಿದ್ದ ಆತನ ದೇಹದ ಮೇಲೆ ಶೇ. 50 ರಷ್ಟು ಸುಟ್ಟ ಗಾಯಗಳಾಗಿದ್ದವು. ತಕ್ಷಣವೇ ಆತನನ್ನು ಅಲಪ್ಪುಳ ವೈದ್ಯಕೀಯ ಕಾಲೇಜಿಗೆ ದಾಖಲಿಸಿ, ಐಸಿಯುನಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

  • ವಿಡಿಯೋ: ಪೊಲೀಸ್ ಠಾಣೆಯಲ್ಲಿ ಹಾಡಹಗಲೇ ಎಣ್ಣೆ ಪಾರ್ಟಿ- ಮಹಿಳಾ ಪೇದೆಯೇ ಸರ್ವರ್

    ವಿಡಿಯೋ: ಪೊಲೀಸ್ ಠಾಣೆಯಲ್ಲಿ ಹಾಡಹಗಲೇ ಎಣ್ಣೆ ಪಾರ್ಟಿ- ಮಹಿಳಾ ಪೇದೆಯೇ ಸರ್ವರ್

    ವಿಜಯಪುರ: ಪೊಲೀಸ್ ಠಾಣೆ ಅಂದ್ರೆ ಅನ್ಯಾಯಕ್ಕೊಳಗಾದ ಜನರಿಗೆ ನ್ಯಾಯ ಕೊಡಿಸುವ ಪವಿತ್ರ ಸ್ಥಳ. ಆದ್ರೆ ಅದೇ ಪೊಲೀಸ್ ಠಾಣೆ ಬಾರ್ ಆಗಿ ಪರಿಣಮಿಸಿದ್ರೆ? ಹೌದು. ಇಡೀ ಪೊಲೀಸ್ ಇಲಾಖೆನೇ ತಲೆ ತಗ್ಗಿಸುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

    ವಿಜಯಪುರದ ಜಲ ನಗರ ಠಾಣೆ ಅಧಿಕಾರಿಗಳು ಹಾಗೂ ಪೇದೆಗಳು ಜನರ ಸಮಸ್ಯೆ ಆಲಿಸುವುದನ್ನು ಬಿಟ್ಟು ಹಾಡಹಗಲೇ ಠಾಣೆ ಆವರಣದಲ್ಲೇ ಗುಂಡಿನ ಮತ್ತಲ್ಲಿ ತೇಲಾಡಿದ್ದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

    ಠಾಣೆಯನ್ನೇ ಬಾರ್ ಮಾಡಿಕೊಂಡ ಎಎಸ್‍ಐ ಮಾಳೆಗಾವ್, ಪೇದೆ ಸೊಡ್ಡಿ, ಪ್ರಕಾಶ ಅಕ್ಕಿ ಸೇರಿದಂತೆ ಇನ್ನುಳಿದ ಇಬ್ಬರು ಮದ್ಯಪಾನ ಮಾಡಿದ್ದು, ಇದರ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ದುರಂತವೆಂದರೆ ಕುಡುಕ ಪೊಲೀಸ್ ಅಧಿಕಾರಿಗಳಿಗೆ ಸರ್ವರ್ ಬೇರಾರೂ ಅಲ್ಲ ಠಾಣೆಯಲ್ಲೇ ಇರುವ ಮಹಿಳಾ ಪೇದೆ. ಅಸಹಾಯಕ ಮಹಿಳಾ ಪೇದೆ ಹಿರಿಯ ಅಧಿಕಾರಿಗಳಿಗೆ ಮರು ಪ್ರಶ್ನೆ ಮಾಡದೇ ಅವರು ಹೇಳಿದಂತೆ ಬಾಟಲಿಯಲ್ಲಿನ ಮದ್ಯವನ್ನು ಗ್ಲಾಸ್‍ಗಳಿಗೆ ಹಾಕಿ ಕೊಡಬೇಕಾದ ಅನಿವಾರ್ಯತೆ.

    ಜಲನಗರ ಠಾಣೆ ಕಾಂಪೌಂಡಿನ ಬೈಕ್ ಪಾರ್ಕಿಂಗ್ ಬಳಿ ದೂರು ನೀಡಲು ಬಂದ ಜನರಿಗೆ ಕೂರಲು ವ್ಯವಸ್ಥೆ ಮಾಡಿರುವ ಕುರ್ಚಿಗಳೇ ಈ ಪೊಲೀಸ್ ಅಧಿಕಾರಿಗಳಿಗೆ ಆಸನ. ಇನ್ನು ಇವರಿಗೆ ಮದ್ಯದ ಜೊತೆ ನೆಂಚಿಕೊಳ್ಳೊಕೆ ಠಾಣೆ ಪಕ್ಕದಲ್ಲೇ ಇರುವ ಕಲ್ಯಾಣ ಮಂಟಪದಲ್ಲಿ ನಡೆಯುವ ಮದುವೆ ಮನೆಯ ಉಪ್ಪಿನಕಾಯಿ, ಬಜ್ಜಿ, ಮಿರ್ಚಿ, ಸಾಲದಕ್ಕೆ ಅಲ್ಲಿಯ ಭೂರಿ ಭೋಜನ. ಯಾರೂ ಹೇಳೋರೂ ಕೇಳೋರು ಇಲ್ಲವೆಂಬಂತೆ ಕುಡಿತದ ನಶೆಯಲ್ಲಿ ಇವರು ಆಡಿದ್ದೇ ಆಟ, ಆನೆ ನಡೆದಿದ್ದೇ ದಾರಿ ಎನ್ನುವಂತೆ ವರ್ತಿಸಿದ್ದಾರೆ.

    https://www.youtube.com/watch?v=OOcU6Gc7EsM&feature=youtu.be