Tag: Woman Constable

  • ತಪಾಸಣೆ ವೇಳೆ ಪೊಲೀಸರಿಗೆ ಗುದ್ದಿದ ಕಾರು – ಓರ್ವ ಮಹಿಳಾ ಕಾನ್‌ಸ್ಟೆಬಲ್ ಸಾವು, ಇಬ್ಬರು ಅಧಿಕಾರಿಗೆ ಗಾಯ

    ತಪಾಸಣೆ ವೇಳೆ ಪೊಲೀಸರಿಗೆ ಗುದ್ದಿದ ಕಾರು – ಓರ್ವ ಮಹಿಳಾ ಕಾನ್‌ಸ್ಟೆಬಲ್ ಸಾವು, ಇಬ್ಬರು ಅಧಿಕಾರಿಗೆ ಗಾಯ

    ಪಾಟ್ನಾ: ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ವೇಗವಾಗಿ ಬಂದ ಸ್ಕಾರ್ಪಿಯೋ ಕಾರು ಪೊಲೀಸರಿಗೆ ಡಿಕ್ಕಿಯೊಡೆದ ಪರಿಣಾಮ ಓರ್ವ ಮಹಿಳಾ ಕಾನ್ಸ್‌ಟೆಬಲ್‌ (Woman Constable) ಸಾವನ್ನಪ್ಪಿದ್ದು, ಇಬ್ಬರು ಅಧಿಕಾರಿಗಳು ಗಾಯಗೊಂಡಿರುವ ಘಟನೆ ಪಾಟ್ನಾದ ಅಟಲ್ ಪಥ್‌ನಲ್ಲಿ (Atal Path) ನಡೆದಿದೆ.

    ಬುಧವಾರ ತಡರಾತ್ರಿ ಪಾಟ್ನಾದ (Patna) ಶ್ರೀಕೃಷ್ಣ ಪುರಿ ಪ್ರದೇಶದ ಅಟಲ್ ಪಥ್‌ನಲ್ಲಿ ಗಸ್ತಿನಲ್ಲಿದ್ದ ಪೊಲೀಸರ ತಂಡ ವಾಹನ ತಪಾಸಣೆ ನಡೆಸುತ್ತಿತ್ತು. ಶ್ರೀಕೃಷ್ಣ ಪುರಿ ಪೊಲೀಸ್ ಠಾಣೆಯ ಸಬ್-ಇನ್ಸ್‌ಪೆಕ್ಟರ್, ಸಹಾಯಕ ಸಬ್-ಇನ್ಸ್‌ಪೆಕ್ಟರ್ ಮತ್ತು ಮಹಿಳಾ ಕಾನ್‌ಸ್ಟೆಬಲ್ ಸ್ಥಳದಲ್ಲಿದ್ದರು. ಕಾರು ತಪಾಸಣೆ ನಡೆಸುವ ವೇಳೆ ವೇಗವಾಗಿ ಬಂದ ಮತ್ತೊಂದು ಕಾರು (Scorpio SUV) ತಪಾಸಣೆ ನಡೆಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಡಿದೆ. ಪರಿಣಾಮ ಕಾನ್ಸ್‌ಟೆಬಲ್‌ ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದಾರೆ. ಇದನ್ನೂ ಓದಿ:  `ದಿ ಇಂಡಿಯಾ ಹೌಸ್ʼ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ನೀರಿನ ಟ್ಯಾಂಕರ್‌ ಸ್ಫೋಟ – ಹಲವರಿಗೆ ಗಾಯ

    ಗಾಯಗೊಂಡ ಪೊಲೀಸರನ್ನ ತಕ್ಷಣ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದ್ರೆ ಚಿಕಿತ್ಸಾ ಸಮಯದಲ್ಲಿ ಮಹಿಳಾ ಕಾನ್‌ಸ್ಟೆಬಲ್ ಸಾವನ್ನಪ್ಪಿದ್ದಾರೆ. ಉಳಿದ ಇಬ್ಬರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪಾಟ್ನಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅವ್ಕಾಶ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ 11 ವರ್ಷದಲ್ಲಿ ಸಾಧನೆಗಳನ್ನ ಕಡಿದು ಕಟ್ಟೆ ಹಾಕಿದ್ದಾರೆ – ದೇಶದ ಭದ್ರತೆ, ರೈತರ ವಿಚಾರದಲ್ಲಿ ಕೇಂದ್ರ ಫೇಲ್: ಪ್ರದೀಪ್‌ ಈಶ್ವರ್‌

    ಅಪಘಾತದ ಬಳಿಕ ಸ್ಕಾರ್ಪಿಯೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಆದ್ರೆ ವಾಹನವನ್ನ ವಶಪಡಿಸಿಕೊಂಡಿದ್ದು, ಕಾರಿನಲ್ಲಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಚಾಲಕನಿಗಾಗಿ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕ್‌ ಮಹಾನ್‌ ಪಾಲುದಾರ; ಪಾಕ್‌ ಹೊಗಳಿದ ಅಮೆರಿಕ

  • ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ – 33 ಸೆಕೆಂಡ್‍ನಲ್ಲಿ ವ್ಯಕ್ತಿಗೆ ಚಪ್ಪಲಿಯಿಂದ 22 ಏಟು

    ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ – 33 ಸೆಕೆಂಡ್‍ನಲ್ಲಿ ವ್ಯಕ್ತಿಗೆ ಚಪ್ಪಲಿಯಿಂದ 22 ಏಟು

    – ಮಹಿಳಾ ಪೇದೆಗೆ ಭಾರೀ ಮೆಚ್ಚುಗೆ

    ಲಕ್ನೋ: ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಮಹಿಳಾ ಪೇದೆಯೊಬ್ಬರು ವ್ಯಕ್ತಿಗೆ 33 ಸೆಕೆಂಡ್‍ನಲ್ಲಿ ಚಪ್ಪಲಿಯಿಂದ 22 ಬಾರಿ ಹೊಡೆದ ಘಟನೆಯೊಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ.

    ಹುಡುಗಿಯರಿಗೆ ಕಿರುಕುಳ ನೀಡುತ್ತಿದ್ದ ಯುವಕನನ್ನು ರಸ್ತೆಯಲ್ಲಿಯೇ ಮಹಿಳಾ ಪೇದೆ ತನ್ನ ಚಪ್ಪಲಿ ತೆಗೆದು ಹೊಡೆದಿದ್ದಾರೆ. ಬಳಿಕ ವಶಕ್ಕೆ ಪಡೆದು ಆತನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೇದೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಈ ಕ್ಷೇತ್ರದಲ್ಲಿ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ದೂರನ್ನು ನಿರಂತರವಾಗಿ ಪೊಲೀಸರು ಸ್ವೀಕರಿಸುತ್ತಿದ್ದರು. ಹಾಗಾಗಿ ಮಹಿಳಾ ಪೇದೆ ಇಂದು ಬೆಳಗ್ಗೆಯಿಂದ ಶಾಲೆಯ ಹೊರಗೆ ಓಡಾಡುತ್ತಿದ್ದರು. ಈ ವೇಳೆ ಪೇದೆ ಕಿರುಕುಳ ನೀಡುತ್ತಿದ್ದ ಯುವಕನನ್ನು ರೆಡ್‍ಹ್ಯಾಂಡಾಗಿ ಹಿಡಿದಿದ್ದಾರೆ. ಬಳಿಕ ಪೇದೆ ಯುವಕನಿಗೆ ಬುದ್ಧಿ ಕಲಿಸಿದ್ದಾರೆ.

    ರಸ್ತೆಯಲ್ಲಿಯೇ ಪೇದೆ ತನ್ನ ಕಾಲಲ್ಲಿದ್ದ ಚಪ್ಪಲಿಯನ್ನು ತೆಗೆದು ಅದರಿಂದ ಯುವಕನಿಗೆ ಥಳಿಸಿದ್ದಾರೆ. ಬಳಿಕ ಬಿಥೂರ್ ಠಾಣಾ ಪೊಲೀಸರು ಆತನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಐಪಿಸಿ ಸೆಕ್ಷನ್ 294 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಾ. ಅನಿಲ್ ಕುಮಾರ್, ಮಹಿಳೆಗೆ ಸಂಬಂಧಿಸಿದ ಪ್ರಕರಣಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಯುವತಿಯರು ಕೂಡ ದೂರು ನೀಡಲು ಮುಂದಾಗಬೇಕು. ಪೊಲೀಸರು ದೂರುಗಳನ್ನು ಗಂಭೀರವಾಗಿ ತೆಗೆದುಕೊಂಡು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

  • ಮಹಿಳಾ ಪೇದೆ ಕಾರ್ಯಕ್ಕೆ ಸಾರ್ವಜನಿಕರಿಂದ ಅಪಾರ ಮೆಚ್ಚುಗೆ

    ಮಹಿಳಾ ಪೇದೆ ಕಾರ್ಯಕ್ಕೆ ಸಾರ್ವಜನಿಕರಿಂದ ಅಪಾರ ಮೆಚ್ಚುಗೆ

    ಲಕ್ನೋ: ಉತ್ತರ ಪ್ರದೇಶದ ಮಹಿಳಾ ಪೇದೆಯೊಬ್ಬರು ಅಜ್ಜಿಗೆ ಸಹಾಯ ಮಾಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಆ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪೇದೆಯ ಕೆಲಸಕ್ಕೆ ಸಾರ್ವಜನಿಕರು ಅಪಾರ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.

    ಮಾನ್ವಿ ವಯಸ್ಸಾದ ಅಜ್ಜಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಮಹಿಳಾ ಪೇದೆ. ಮಾನ್ವಿ ಅವರು ಅಜ್ಜಿಯೊಬ್ಬರು ಯಾವುದೋ ಕೆಲಸಕ್ಕೆ ಸಂಬಂಧಿಸಿದಂತೆ ಬ್ಯಾಂಕಿಗೆ ಬಂದಿದ್ದು, ಕಷ್ಟ ಪಡುತ್ತಿದ್ದರು. ಆದರೆ ಅಲ್ಲಿದ್ದ ಯಾರೂ ಅವರಿಗೆ ಸಹಾಯ ಮಾಡಲಿಲ್ಲ. ಕೊನೆಗೆ ಇದನ್ನು ಗಮನಿಸಿದ ಪೊಲೀಸ್ ಪೇದೆ ಮಾನ್ವಿ ಅವರು ಸಹಾಯ ಮಾಡಿದ್ದಾರೆ.

    ಮಾನ್ವಿ ಅವರು ಬ್ಯಾಂಕ್ ಹೊರಗೆ ಕಾಯುತ್ತಿದ್ದ ವೃದ್ಧೆಯ ಬಳಿ ಹೋಗಿ ಅವರ ಕೆಲಸ ಪೂರ್ಣಗೊಳ್ಳಲು ಸಹಾಯ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅಜ್ಜಿ ಊಟ ಮಾಡದಿರುವ ಬಗ್ಗೆ ತಿಳಿದುಕೊಂಡಿದ್ದು, ಅವರನ್ನು ಕರೆದುಕೊಂಡು ಹೋಗಿ ಊಟ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.

    ತಮ್ಮ ಕರ್ತವ್ಯದ ಜೊತೆಗೆ ಇಂತಹ ಒಳ್ಳೆಯ ಕಾರ್ಯ ಮಾಡಿದರೆ ಜನಸಾಮಾನ್ಯರಿಗೆ ಪೊಲೀಸರ ಮೇಲೆ ಹೆಚ್ಚು ವಿಶ್ವಾಸ ಹುಟ್ಟುತ್ತದೆ ಎಂದು ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಓ.ಪಿ ಸಿಂಹ ಅವರು ಶ್ಲಾಘನೆ ಪತ್ರವನ್ನು ನೀಡಿರುವ ಮೂಲಕ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

    ಮಾನ್ವಿ ತಮ್ಮ ಸ್ವಂತ ಕೆಲಸಕ್ಕಾಗಿ ಬ್ಯಾಂಕಿಗೆ ಹೋಗಿದ್ದರು. ಅಲ್ಲಿ ಅವರು ವೃದ್ಧೆಯನ್ನು ಭೇಟಿ ಮಾಡಿದ್ದು, ಅವರ ಕೆಲಸ ಮತ್ತು ಹಸಿವನ್ನು ನೀಗಿಸಿದ್ದಾರೆ ಎಂದು ಡಿಜಿಪಿ ಅವರು ತಿಳಿಸಿದ್ದಾರೆ. ಈ ಬಗ್ಗೆ ಉತ್ತರ ಪ್ರದೇಶ ಪೊಲೀಸ್ ತನ್ನ ಖಾತೆಯಲ್ಲಿ ಟ್ವೀಟ್ ಮಾಡಿ ತಿಳಿಸಿದೆ. ಇದರಿಂದ ನೆಟ್ಟಿಗರಿಂದ ಮಾನ್ವಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

  • ಸ್ಕೂಟಿ ಹಿಂದೆ ಓಡಿ ಸವಾರೆಯನ್ನು ಹಿಡಿದ ಮಹಿಳಾ ಪೇದೆ- ವಿಡಿಯೋ ವೈರಲ್

    ಸ್ಕೂಟಿ ಹಿಂದೆ ಓಡಿ ಸವಾರೆಯನ್ನು ಹಿಡಿದ ಮಹಿಳಾ ಪೇದೆ- ವಿಡಿಯೋ ವೈರಲ್

    ಗಾಂಧಿನಗರ: ಸಂಚಾರ ನಿಯಮ ಉಲ್ಲಂಘಿಸಿ ತಪ್ಪಿಸಿಕೊಳ್ಳುತ್ತಿದ್ದ ಸವಾರೆಯನ್ನು ಗುಜರಾತಿನ ಮಹಿಳಾ ಪೇದೆಯೊಬ್ಬರು ಓಡಿ ಹೋಗಿ, ಸ್ಕೂಟಿಯನ್ನು ಹಿಡಿದು ಮುಂದಕ್ಕೆ ಹೋಗದಂತೆ ತಡೆದ ವಿಡಿಯೋ ವೈರಲ್ ಆಗಿದೆ.

    ರಾಜಕೋಟ್‍ನ ವೃತ್ತವೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಈಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲಿ ಏನಿದೆ?
    ವೃತ್ತವೊಂದಲ್ಲಿ ಮಹಿಳೆಯೊಬ್ಬರು ಸಂಚಾರ ನಿಯಮ ಉಲ್ಲಂಘಿಸಿ ಸ್ಕೂಟಿ ಚಾಲನೆ ಮಾಡಿಕೊಂಡು ಬಂದಿದ್ದರು. ರಸ್ತೆ ಸಂಚಾರದಲ್ಲಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ಸಂಚಾರ ಪೇದೆಯೊಬ್ಬರು ಮಹಿಳೆಯನ್ನು ನಿಲ್ಲಿಸಿ ವಿಚಾರಿಸುತ್ತಿದ್ದರು. ಆದರೆ ಮಹಿಳೆ ಸ್ವಲ್ಪ ಸಮಯ ನಿಂತು, ಸ್ಕೂಟಿಯನ್ನು ವೇಗವಾಗಿ ಮುನ್ನುಗ್ಗಿಸಿ ಪರಾರಿಯಾಗಲು ಪ್ರಯತ್ನಿಸಿದ್ದಾಳೆ.

    ಸ್ಕೂಟಿ ಮುನ್ನುಗ್ಗುತ್ತಿದ್ದಂತೆ ವೇಗವಾಗಿ ಓಡಿದ ಮಹಿಳಾ ಪೇದೆ, ಹಿಂಬದಿಯಿಂದ ಸ್ಕೂಟಿಯನ್ನು ಗಟ್ಟಿಯಾಗಿ ಹಿಡಿದರು. ಆದರೆ ಪಟ್ಟುಬಿಡದ ಮಹಿಳೆ ಮತ್ತೇ ಸ್ಕೂಟಿ ವೇಗವನ್ನು ಹೆಚ್ಚಿಸಿ, ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿ ಸಿಕ್ಕಿಬಿದ್ದಿದ್ದಾಳೆ. ತಕ್ಷಣವೇ ಪೇದೆ ಸ್ಕೂಟಿ ಕೀಯನ್ನು ಕಿತ್ತುಕೊಂಡು ತಮ್ಮ ಬಳಿ ಇಟ್ಟುಕೊಂಡ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

  • ಗನ್ ತೋರಿಸಿ ಮಹಿಳಾ ಪೇದೆಯ ಮೇಲೆ ಅತ್ಯಾಚಾರಗೈದ ಪೊಲೀಸ್ ಇನ್ಸ್ ಪೆಕ್ಟರ್

    ಗನ್ ತೋರಿಸಿ ಮಹಿಳಾ ಪೇದೆಯ ಮೇಲೆ ಅತ್ಯಾಚಾರಗೈದ ಪೊಲೀಸ್ ಇನ್ಸ್ ಪೆಕ್ಟರ್

    ಲಕ್ನೋ: ಪೊಲೀಸ್ ಇನ್ಸ್ ಪೆಕ್ಟರ್ ಮಹಿಳಾ ಪೇದೆಗೆ ಗನ್ ತೋರಿಸಿ ಅತ್ಯಾಚಾರಗೈದು ವಿಡಿಯೋ ಮಾಡಿ ಸತತವಾಗಿ 8 ವರ್ಷಗಳ ಕಾಲ ನಿರಂತರವಾಗಿ ದೌರ್ಜನ್ಯ ಎಸೆಗಿರುವ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದಿದೆ.

    ಲೋಕೇಂದ್ರಪಾಲ್ ಸಿಂಗ್ ಅತ್ಯಾಚಾರಗೈದ ಕಾಮುಕ ಪೊಲೀಸ್ ಇನ್ಸ್ ಪೆಕ್ಟರ್. ಈ ಸಂಬಂಧ ಮಹಿಳಾ ಪೇದೆ ಎಸ್‍ಎಸ್‍ಪಿ ಮಂಜಿಲ್ ಸೈನಿ ಅವರಿಗೆ ದೂರು ನೀಡಿದ್ದಾರೆ.

    2009ರಲ್ಲಿ ಬುಲಂದ್‍ಶಹರ್ ನಲ್ಲಿ ನನ್ನ ಕುಟುಂಬದ ಆಸ್ತಿ ವಿವಾದವೊಂದರಲ್ಲಿ ಇನ್ಸ್ ಪೆಕ್ಟರ್ ಲೋಕೇಂದ್ರಪಾಲ್ ಸಿಂಗ್ ಮಧ್ಯಸ್ಥಿಕೆ ವಹಿಸಿ ವ್ಯಾಜ್ಯವನ್ನು ಬಗೆಹರಿಸಿದ್ದನು. ಈ ಒಂದು ಕಾರಣದಿಂದ ಲೋಕೇಂದ್ರ ನಮ್ಮ ಪೋಷಕರ ವಿಶ್ವಾಸವನ್ನು ಪಡೆದುಕೊಂಡಿದ್ದನು. 2010ರಲ್ಲಿ ಲೋಕೇಂದ್ರಪಾಲ್ ದೀಪಾವಳಿ ಹಬ್ಬದಂದು ಕೆಲಸದ ನಿಮಿತ್ತ ಹೊರಗಡೆ ಹೋಗಬೇಕೆಂದು ಹೇಳಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಗನ್ ತೋರಿಸಿ ಅತ್ಯಚಾರ ಎಸಗಿ, ವಿಡಿಯೋ ಮಾಡಿಕೊಂಡು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ ಎಂದು ಸಂತ್ರಸ್ತೆ 34 ವರ್ಷದ ಮಹಿಳಾ ಪೇದೆ ಹೇಳಿದ್ದಾರೆ.

     

    ಲೋಕೇಂದ್ರ ಹಲವು ಬಾರಿ ಆ ವಿಡಿಯೋ ಮತ್ತು ಆಡಿಯೋವನ್ನು ಲೀಕ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನು. ನಂತರ ನಾನು ಆಗ ಎಸ್‍ಎಸ್‍ಪಿ ಸೈನಿ ಹತ್ತಿರ ದೂರು ದಾಖಲಿಸಿದೆ. ಮತ್ತೆ ಲೋಕೇಂದ್ರ ಫೋನ್ ಮಾಡಿ ಕೋರ್ಟ್ ಆವರಣದಲ್ಲೇ ನನ್ನ ಮೇಲೆ ದೌರ್ಜನ್ಯ ಎಸೆಯುವುದಾಗಿ ಬೆದರಿಕೆ ಹಾಕಿದ್ದನು ಎಂದು ಮಹಿಳೆ ತಿಳಿಸಿದ್ದಾರೆ.

    ಲೋಕೇಂದ್ರ ತನ್ನ ತಾಯಿಯ ಆರೋಗ್ಯ ಸರಿಯಿಲ್ಲ ಎಂದು 3 ದಿನಗಳ ಹಿಂದೆಯೇ ಮೋರದಾಬಾದ್‍ಗೆ ತೆರೆಳಿದ್ದನು. ಅಲ್ಲಿಂದ ಬಂದ ಮೇಲೆ ಕೇಸ್ ವಾಪಾಸ್ ತೆಗೆದುಕೊಳ್ಳಲು ಮಹಿಳೆಯನ್ನು ಬೆದರಿಸಿದ್ದಾನೆ.

    ಆರೋಪಿ ಲೋಕೇಂದ್ರನಿಗೆ ಇಡೀ ಡಿಪಾರ್ಟ್ ಮೆಂಟ್ ಸಹಾಯ ಮಾಡುತ್ತಿದೆ. ಅವನ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿದ್ದು, ಮಹಿಳೆ ಕೋರ್ಟ್‍ನಲ್ಲಿ ತನ್ನ ಹೇಳಿಕೆಯನ್ನು ಕೂಡ ನೀಡಿದ್ದಾರೆ. ಸದ್ಯ ಆರೋಪಿ ವಿರುದ್ಧ ಹಲವು ಪ್ರಕರಣ ದಾಖಲಾಗಿದ್ದು ಅದರಲ್ಲಿ ಅತ್ಯಾಚಾರ ಕೇಸ್ ಕೂಡ ದಾಖಲಾಗಿದೆ. ಮಹಿಳೆ ಹೇಳಿಕೆ ಕೇಳಿದ ಮೇಲೂ ಲೋಕೇಂದ್ರನನ್ನು ಅಮಾನತು ಮಾಡಲಿಲ್ಲ ಹಾಗೂ ಬಂಧಿಸಿಯೂ ಇಲ್ಲ ಎಂದು ಮಹಿಳೆಯ ವಕೀಲರಾದ ಸಚಿನ್ ಕುಮರ್ ನರೇಶ್ ತಿಳಿಸಿದ್ದಾರೆ.

    ಮಹಿಳೆಗೆ ಹಾಗೂ ಆಕೆಯ ಕುಟುಂಬಕ್ಕೆ ಆರೋಪಿ ಜೀವಬೆದರಿಕೆ ಹಾಕಿದ್ದಾನೆ. ಸದ್ಯ ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಮನ್ ಸಿಂಗ್ ಚೌಹಾನ್ ತಿಳಿಸಿದ್ದಾರೆ. ಲೋಕೇಂದ್ರಪಾಲ್ ಅತ್ಯಾಚಾರವನ್ನು ವಿಡಿಯೋ ಮಾಡಿಕೊಂಡು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ. ಆದ್ರೆ ಸಂತ್ರೆಸ್ತೆ ತನ್ನ ಮೇಲಾದ ಲೈಂಗಿಕ ದೌರ್ಜನ್ಯದ ಕುರಿತಾಗಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

    ಈ ಹಿಂದೆ ಜನವರಿಯಲ್ಲಿ ಆಂಧ್ರ ಪ್ರದೇಶ ರಾಜ್ಯದ ಪ್ರಕಾಶಂ ಜಿಲ್ಲೆಯಲ್ಲಿ ಸಂತಮಗಳೂರು ಗ್ರಾಮದಲ್ಲಿ ರಾತ್ರಿ ಪಾಳೆಯದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳಾ ಸೆಕ್ಯೂರಿಟಿ ಗಾರ್ಡ್ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿ ಕತ್ತು ಹಿಸುಕಿ ಕೊಲೆ ಮಾಡಿದ್ದರು. ಕೊಲೆ ಬಳಿಕ ಮಹಿಳಾ ಸೆಕ್ಯೂರಿಟಿ ಗಾರ್ಡ್ ಶವವನ್ನು ಸ್ಥಳೀಯ ಕೆರೆಯೊಂದರಲ್ಲಿ ಎಸೆದು ಹೋಗಿದ್ದರು.