Tag: woma

  • ಮನೆ ಬಳಿ ಮೂತ್ರ ವಿಸರ್ಜಿಸಿದಳೆಂದು ಮಹಿಳೆಯ ಗುಪ್ತಾಂಗಕ್ಕೆ ರಾಡ್‍ನಿಂದ ಹಲ್ಲೆ!

    ಮನೆ ಬಳಿ ಮೂತ್ರ ವಿಸರ್ಜಿಸಿದಳೆಂದು ಮಹಿಳೆಯ ಗುಪ್ತಾಂಗಕ್ಕೆ ರಾಡ್‍ನಿಂದ ಹಲ್ಲೆ!

    ಲಕ್ನೋ: ಮನೆ ಬಳಿ ಮೂತ್ರ ವಿಸರ್ಜನೆ (Urinate) ಮಾಡಿದಳೆಂದು ಆರೋಪಿಸಿ 35 ವರ್ಷದ ಮಹಿಳೆಯೊಬ್ಬರ ಮೇಲೆ ನೆರೆಹೊರೆಯವರು ಥಳಿಸಿದ ಪರಿಣಾಮ ಆಕೆ ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

    ರಾಮಚಂದ್ರ ಮಿಷನ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆ ತನ್ನ ಮನೆಯ ಸಮೀಪವಿರುವ ಚರಂಡಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾಳೆ. ಇದನ್ನು ಗಮನಿಸಿದ ನೆರೆಹೊರೆಯವರು ಮಹಿಳೆಯ ಜೊತೆ ಜಗಳವಾಡಿದ್ದಾರೆ. ಜಗಳ ತಾರಕಕ್ಕೇರಿ ನೆರೆಹೊರೆಯವರು ಮಹಿಳೆಯ ಖಾಸಗಿ ಭಾಗಗಳಿಗೆ ಕಬ್ಬಿಣದ ರಾಡ್‍ನಿಂದ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ಅವರು ಮೂರ್ಛೆ ಹೋದರು ಎಂದು ಸರ್ಕಲ್ ಆಫೀಸರ್ ಬಿಎಸ್ ವೀರ್ ಕುಮಾರ್ ತಿಳಿಸಿದ್ದಾರೆ.

    ನೆರೆಹೊರೆಯವರು ಕಬ್ಬಿಣದ ರಾಡ್‍ನಿಂದ (Iron Rod) ಸಂತ್ರಸ್ತೆಯ ಖಾಸಗಿ ಭಾಗಗಳಿಗೆ ಹೊಡೆದಿದ್ದಾರೆ. ಇದರಿಂದಾಗಿ ಆಕೆಗೆ ಗಂಭೀರ ಗಾಯಗಳಾಗಿದ್ದು, ಮೂರ್ಛೆ ಹೋಗಿದ್ದಾಳೆ. ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಕುಮಾರ್ ಸೇರಿಸಲಾಗಿದೆ. ಇದನ್ನೂ ಓದಿ: ಸಂಸತ್‍ನಲ್ಲಿ ಸ್ಮೋಕ್ ಬಾಂಬ್ ಪ್ರಕರಣ ತನಿಖೆ ಆದ್ರೆ ಟೀಕೆ ಮಾಡ್ತಿರೋರೆ ಸಿಕ್ಕಿ ಬೀಳ್ತಾರೆ: ಯತ್ನಾಳ್

    ಐಪಿಸಿಯ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಈ ವಿಷಯದ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಕಾರ್ಮಿಕ ಮಹಿಳೆ ಸಾವು: ಮಾನವೀಯತೆ ಮೆರೆದ ರಕ್ಷಣಾ ವೇದಿಕೆ

    ಕಾರ್ಮಿಕ ಮಹಿಳೆ ಸಾವು: ಮಾನವೀಯತೆ ಮೆರೆದ ರಕ್ಷಣಾ ವೇದಿಕೆ

    ಮಡಿಕೇರಿ: ಅನಾರೋಗ್ಯದಿಂದ ಮೃತಪಟ್ಟ ಕಾರ್ಮಿಕ ಮಹಿಳೆಯ ಅಂತ್ಯ ಸಂಸ್ಕಾರವನ್ನು ಕುಶಾಲನಗರದ ರುದ್ರ ಭೂಮಿಯಲ್ಲಿ ನೆರವೇರಿಸುವ ಮೂಲಕ ಮಾನವೀಯತೆಯ ಕಾರ್ಯವೊಂದು ನಡೆದಿದೆ.

    ಮಡಿಕೇರಿ ರಕ್ಷಣಾ ವೇದಿಕೆ ಹಾಗೂ ಯೂತ್ ಕಮಿಟಿಯಿಂದ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಮಾನವೀಯತೆ ಮೆರೆಯಲಾಗಿದೆ. ಅನಾರೋಗ್ಯದಿಂದ ಕಾರ್ಮಿಕ ಚಂದ್ರ ಎಂಬಾತನ ಪತ್ನಿ ಕವಿತಾ ಮೃತಪಟ್ಟಿದ್ದರು. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಂಗಮ ಗ್ರಾಮದವರಾದ ಈ ಕುಟುಂಬ ಲಾಕ್‍ಡೌನ್‍ಗೂ ಮೊದಲೇ ಸೋಮವಾರಪೇಟೆ ತಾಲೂಕಿನ ಮಾದಾಪುರದ ತೋಟಕ್ಕೆ ಕೂಲಿ ಕೆಲಸಕ್ಕೆ ಬಂದಿದ್ದರು.

    ಕೆಲವು ದಿನಗಳ ಹಿಂದಷ್ಟೇ ಅನಾರೋಗ್ಯದಿಂದ ಬಳಲುತ್ತಿದ್ದ ಕವಿತಾ ಅವರಿಗೆ ಮಡಿಕೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕವಿತಾ ಮೃತಪಟ್ಟಿದ್ದರು. ಲಾಕ್‍ಡೌನ್ ಪರಿಣಾಮ ಸ್ವಗ್ರಾಮಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗಲು ಆಗದಿದ್ದರಿಂದ ರಕ್ಷಣಾ ವೇದಿಕೆಯ ಉಮೇಶ್ ಹಾಗೂ ಸಂದೀಪ್ ಹಾಗೆಯೇ ಯೂತ್ ಕಮಿಟ್ ಕಲೀಲ್ ಕ್ರಿಯೇಟಿವ್ ಸೇರಿ ಹಲವರು ಸ್ವತಃ ಅಂತ್ಯ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.