Tag: Wolf

  • ಪ್ರಭುದೇವ್ ನಟನೆಯ ‘ವುಲ್ಫ್ ಚಿತ್ರದ ಟೀಸರ್ ರಿಲೀಸ್

    ಪ್ರಭುದೇವ್ ನಟನೆಯ ‘ವುಲ್ಫ್ ಚಿತ್ರದ ಟೀಸರ್ ರಿಲೀಸ್

    ಸಂದೇಶ್ ಪ್ರೊಡಕ್ಷನ್ (Sandesh Nagaraj) ನಿರ್ಮಾಣದ 30ನೇ ಚಿತ್ರವಾದ ಮತ್ತು ತಮಿಳು, ಕನ್ನಡ, ಹಿಂದಿ, ತೆಲುಗು ಭಾಷೆಯಲ್ಲಿ ತಯಾರಾಗಿರುವ ‘ವುಲ್ಫ್’ (Wolf) ಚಿತ್ರದ ಟೀಸರ್ (Teaser) ರಿಲೀಸ್ ಆಗಿದೆ. ಡಾನ್ಸಿಂಗ್ ಸ್ಟಾರ್ ಪ್ರಭುದೇವ (Prabhudev), ಅನುಸೂಯ ಭಾರದ್ವಾಜ್, ಲಕ್ಷ್ಮಿ ರೈ, ವಸಿಷ್ಠ ಸಿಂಹ, ಅಂಜು ಕುರಿಯನ್ ಮುಂತಾದ ಖ್ಯಾತ ತಾರಾ ಬಳಗವನ್ನು  ಹೊಂದಿರುವ ಸಿನಿಮಾ ಇದಾಗಿದೆ.

    ವುಲ್ಫ್ ಚಿತ್ರ ತಾಂತ್ರಿಕ ಕೆಲಸಗಳನ್ನು ಮುಗಿಸಿ ಇದೀಗ ಮೊದಲ ಹಂತವಾಗಿ  ಆಗಸ್ಟ್  3ರಂದು ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯವನ್ನು ಆರಂಭಿಸಿದೆ ಚಿತ್ರತಂಡ. ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ವಿಭಿನ್ನವಾದ ಕಥಾ ಹಂದರವನ್ನು ಮೊದಲ ಬಾರಿಗೆ ಪ್ರೇಕ್ಷಕರ ಮುಂದೆ ಇಡಲು ಚಿತ್ರ ತಂಡ ತಯಾರಾಗಿದೆ. ಇದನ್ನೂ ಓದಿ:ಮದುವೆಯಾದ ಒಂದೇ ವರ್ಷಕ್ಕೆ ಪತಿಯನ್ನು ಕಳೆದುಕೊಂಡ ನಟಿ ಶ್ರುತಿ

    ಇದೇ ತಿಂಗಳು 16 ರಂದು ನಿರ್ಮಾಪಕರಾದ ಸಂದೇಶ್ ನಾಗರಾಜ್ ಅವರ ಜನುಮದಿನ ಅಂದು ತಮಿಳುನಟ ವಿಜಯ ಸೇತುಪತಿ (Vijay Sethupathi) ಹಾಡಿರುವ ಚಿತ್ರದ ಮೊದಲ ಲಿರಿಕಲ್ ವೀಡಿಯೋ ಸಹ ಬಿಡುಗಡೆಯಾಗುತ್ತಿದೆ.  ಈ ಚಿತ್ರವನ್ನು ವಿನು ವೆಂಕಟೇಶ್ ನಿರ್ದೇಶನ ಮಾಡಿದ್ದು, ಖ್ಯಾತ ಛಾಯಾಗ್ರಾಹಕ ಅರುಳ್ ವಿನ್ಸೆಂಟ್ ಛಾಯಾಗ್ರಹಣ, ಖ್ಯಾತ ತಾರೆ ಜಯಸುಧಾ ಅವರ ಪುತ್ರ ಹಾಗೂ  ಖ್ಯಾತ ಸಂಗೀತ ನಿರ್ದೇಶಕ  ಅಮರೀಶ್ ಸಂಗೀತ ನಿರ್ದೇಶನ ಮಾಡಿದ್ದಾರೆ.

     

    ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಆಗಿ ಪ್ರಸಾದ್ ಬಿ ಏನ್ ಮತ್ತು ಕಾಮರಾಜು ಕಾರ್ಯ ನಿರ್ವಹಿಸಿರುವ ಈ ಚಿತ್ರವನ್ನು  ಸಂದೇಶ ನಾಗರಾಜ್ ಅವರು ಸಂದೇಶ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಭುದೇವ ನಟನೆಯ `ವೂಲ್ಫ್’ ಚಿತ್ರದಲ್ಲಿ ಪತ್ರಕರ್ತನಾದ ವಸಿಷ್ಠ ಸಿಂಹ

    ಪ್ರಭುದೇವ ನಟನೆಯ `ವೂಲ್ಫ್’ ಚಿತ್ರದಲ್ಲಿ ಪತ್ರಕರ್ತನಾದ ವಸಿಷ್ಠ ಸಿಂಹ

    ಟ ಪ್ರಭುದೇವ (Actor Prabhudeva) ಸದ್ಯ `ವೂಲ್ಫ್’ (Wolf) ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ಬಹುನಿರೀಕ್ಷಿತ ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕನ್ನಡದ ದೈತ್ಯ ಪ್ರತಿಭೆಗಳು ಕೂಡ ಸಾಥ್ ನೀಡಿದ್ದಾರೆ. ಈ ಕುರಿತ ಕಂಪ್ಲಿಟ್ ಡಿಟೈಲ್ಸ್ ಇಲ್ಲಿದೆ.

    ಕನ್ನಡ ನಾಡಿನ ಯುವ ನಿರ್ದೇಶಕ ವಿನೂ ವೆಂಕಟೇಶ್ (Vinoo Venkatesh) ಇದೀಗ ಪ್ರಭುದೇವ ಅವರ 60ನೇ ಚಿತ್ರ `ವೂಲ್ಫ್’ ಸಿನಿಮಾಗೆ ಡೈರೆಕ್ಷನ್ ಮಾಡ್ತಿದ್ದಾರೆ. ಮಿಸ್ಟರಿ ಕಥೆಯನ್ನ ವಿಭಿನ್ನವಾಗಿ ಹೇಳೋಕೆ ಹೊರಟಿದ್ದಾರೆ. ಪ್ರಭುದೇವ ಅವರ ಚಿತ್ರದಲ್ಲಿ ತಾರೆಯರ ದಂಡೇ ಇದೆ. ಸೂಪರ್ ಸ್ಟಾರ್ ಜೊತೆ ಕನ್ನಡದ ಪ್ರತಿಭೆ ವಸಿಷ್ಠ ಸಿಂಹ (Vasista Simha) ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

    ಚಿತ್ರದಲ್ಲಿ ವಸಿಷ್ಠ ಸಿಂಹ ಅವರು ಪತ್ರಕರ್ತನಾಗಿ (Journalist) ಕಾಣಿಸಿಕೊಂಡಿದ್ದಾರೆ. ಇವರ ಪಾತ್ರ ಇಡೀ ಚಿತ್ರಕಥೆಗೆ ಮುಖ್ಯವಾಗಿರುತ್ತದೆ. ಎಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ವಸಿಷ್ಠ ನಟಿಸಿದ್ದಾರೆ. ಇದನ್ನೂ ಓದಿ:ದಿನಕರ್ ತೂಗುದೀಪ್ ನಿರ್ದೇಶನದಲ್ಲಿ ʻರಾಯಲ್ʼ ಆಗಿ ಮಿಂಚಲು ವಿರಾಟ್ ರೆಡಿ

    ʻWOLFʼ ಸಿನಿಮಾದಲ್ಲಿ ನಟ ವಿಜಯ್ ಸೇತುಪತಿ ಒಂದು ಹಾಡನ್ನ ಹಾಡಿದ್ದಾರೆ. ಇದು ವಿಶೇಷವಾಗಿ ಹಾಡಿರುವ ಹಾಡು ಆಗಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಮತ್ತಷ್ಟು ಸಿಗಲಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಮಾರ್ಚ್ನಲ್ಲಿ ರಿಲೀಸ್ ಮಾಡೋಕೆ ರೆಡಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರಭುದೇವ ನಟನೆಯ ಕನ್ನಡ ಚಿತ್ರಕ್ಕೆ ವಿಜಯ್ ಸೇತುಪತಿ ಗಾಯಕ

    ಪ್ರಭುದೇವ ನಟನೆಯ ಕನ್ನಡ ಚಿತ್ರಕ್ಕೆ ವಿಜಯ್ ಸೇತುಪತಿ ಗಾಯಕ

    ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ಲಾಂಛನದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಿರ್ಮಾಪಕ ಸಂದೇಶ್ ನಾಗರಾಜ್(ಎಂ.ಎಲ್.ಸಿ)  ನಿರ್ಮಿಸಿರುವ, ಖ್ಯಾತ ನಟ ಪ್ರಭುದೇವ ನಾಯಕರಾಗಿ ನಟಿಸಿರುವ “wolf” ಚಿತ್ರದ ವಿಶೇಷ ಹಾಡೊಂದನ್ನು ತಮಿಳಿನ ಹೆಸರಾಂತ ನಟ ವಿಜಯ್ ಸೇತುಪತಿ ಹಾಡಿದ್ದಾರೆ. ಅಂಬರೀಶ್ ಈ ಚಿತ್ರದ ಸಂಗೀತ ನಿರ್ದೇಶಕರು.

    ಇತ್ತೀಚೆಗಷ್ಟೇ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಈ ಚಿತ್ರದ ಫಸ್ಟ್  ಲುಕ್ ಬಿಡುಗಡೆ ಮಾಡಿ ಶುಭ ಕೋರಿದ್ದರು.  ವಿನು ವೆಂಕಟೇಶ್  ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರ ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿದೆ. ಇದನ್ನೂ ಓದಿ: ಪೊಲೀಸ್‌ ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ರ‍್ಯಾಪರ್‌ನನ್ನು ತಳ್ಳಿ ಬೀಳಿಸಿದ ಫ್ಯಾನ್‌

    ಪ್ರಭುದೇವ, ಅಂಜು ಕುರಿಯನ್, ಲಕ್ಷ್ಮೀ ರೈ, ಅನಸೂಯ(ಪುಷ್ಪ ಖ್ಯಾತಿ) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಮೊನ್ನೆಯಷ್ಟೇ ಈ ಸಿನಿಮಾದ ಫಸ್ಟ್ ಲುಕ್ ಅನ್ನು ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಲೋಕಾರ್ಪಣೆ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆಗೂ ಮುನ್ನ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ವಸಿಷ್ಠ ಸಿಂಹ

    ಮದುವೆಗೂ ಮುನ್ನ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ವಸಿಷ್ಠ ಸಿಂಹ

    ರು ದಿನಗಳು ಕಳೆದರೆ ನಟ ವಸಿಷ್ಠ ಸಿಂಹ (Vasishtha Simha) ಮತ್ತು ನಟಿ ಹರಿಪ್ರಿಯಾ (Haripriya) ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ನೆಚ್ಚಿನ ನಟ, ನಟಿಯ ಮದುವೆಯಲ್ಲಿ ಭಾಗಿಯಾಗಲು ಇಬ್ಬರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅದಕ್ಕೂ ಮುನ್ನ ಅಭಿಮಾನಿಗಳಿಗೆ ವಸಿಷ್ಠ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಅವರು ಕಾಲಿವುಡ್ ಪ್ರವೇಶ ಮಾಡುತ್ತಿದ್ದಾರೆ. ಈ ಮೂಲಕ ಮೂರು ಭಾಷೆಗಳಲ್ಲಿ ನಟಿಸಿದ ಕಲಾವಿದ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದಾರೆ.

    ತಮಿಳಿನ ಖ್ಯಾತ ನಟ  ಪ್ರಭುದೇವ (Prabhudev) ನಟನೆಯ 60ನೇ ಸಿನಿಮಾದಲ್ಲಿ ವಸಿಷ್ಠ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದು, ಈ ಸಿನಿಮಾ ಮೂಲಕ ತಮಿಳು ಚಿತ್ರೋದ್ಯಮಕ್ಕೆ ಅವರು ಅಧಿಕೃತವಾಗಿ ಕಾಲಿಡುತ್ತಿದ್ದಾರೆ. ಕನ್ನಡದ ಮತ್ತೋರ್ವ ಕಲಾವಿದ ಕಾಲಿವುಡ್ ಪ್ರವೇಶಿಸಿದಂತಾಗಿದೆ. ಈ ಸಿನಿಮಾ ‘ವೂಲ್ಫ್’ ಎಂದು ಹೆಸರಿಡಲಾಗಿದ್ದು, ಟೈಟಲ್ ಕೂಡ ನಿನ್ನೆಯಷ್ಟೇ ರಿವಿಲ್ ಆಗಿದೆ. ಇದನ್ನೂ ಓದಿ: ದುಬೈಗೆ ಹಾರಿದ ರಿಷಬ್ ಶೆಟ್ಟಿ ಫ್ಯಾಮಿಲಿ: ಶೆಟ್ರ ಅಡ್ವೆಂಚರ್ ಹೇಗಿದೆ ಗೊತ್ತಾ?

    ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾವಾಗಿದ್ದು, ವಿನೂ ವೆಂಕಟೇಶ್ ಈ ಚಿತ್ರದ ನಿರ್ದೇಶಕರು. ವಿನೂ ಈ ಹಿಂದೆ ಲಕ್ಷ್ಮೀ ರೈ ನಟನೆಯ ಸಿಂಡರೆಲ್ಲಾ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದು ಅವರ ಚೊಚ್ಚಲ ಸಿನಿಮಾ ಕೂಡ ಆಗಿತ್ತು. ಮತ್ತೊಂದು ಅಚ್ಚರಿ ಸಂಗತಿ ಎಂದರೆ, ವೂಲ್ಫ್ ಸಿನಿಮಾ ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣವಾಗಿದೆ.

    ಈಗಾಗಲೇ ಸಿನಿಮಾದ ಬಹುತೇಕ ಚಿತ್ರೀಕರಣ ಕೂಡ ಮುಗಿದಿದ್ದು, ಬೆಂಗಳೂರು, ಅಂಡಮಾನ್ ಮತ್ತು ನಿಕೋಬಾರ್ ಸೇರಿದಂತೆ ಹಲವಾರು ಕಡೆ ಚಿತ್ರೀಕರಣ ಮಾಡಲಾಗಿದೆ. ಅಂದುಕೊಂಡಂತೆ ಆಗಿದ್ದರೆ ಮಾರ್ಚ್ ವೇಳೆಯಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಲಕ್ಷ್ಮೀ ರೈ, ಅಂಜು ಕುರಿಯನ್ ಸೇರಿದಂತೆ ಹೆಸರಾಂತ ತಾರಾಬಳಗವೇ ಸಿನಿಮಾದಲ್ಲಿ ಇದೆ. ಇದೇ ಮೊದಲ ಬಾರಿಗೆ ಪ್ರಭುದೇವ್ ಜೊತೆ ವಸಿಷ್ಠ ಸಿಂಹ ತೆರೆ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತೋಳ ದಾಳಿಗೆ 15 ಕುರಿಗಳು ಬಲಿ- ಕುಟುಂಬಸ್ಥರ ಆಕ್ರಂದನ

    ತೋಳ ದಾಳಿಗೆ 15 ಕುರಿಗಳು ಬಲಿ- ಕುಟುಂಬಸ್ಥರ ಆಕ್ರಂದನ

    ಗದಗ: ತೋಳ ದಾಳಿ ನಡೆಸಿದ ಪರಿಣಾಮ 15ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಚೇನಹಳ್ಳಿಯಲ್ಲಿ ನಡೆದಿದೆ.

    ಬಸವರಾಜ್ ಪೂಜಾರ ಅವರಿಗೆ ಸೇರಿದ 15ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಜಮೀನಿನಲ್ಲಿರುವ ಕುರಿ ದಡ್ಡಿ ಮೇಲೆ ತೋಳಗಳ ಹಿಂಡು ದಾಳಿಮಾಡಿವೆ ಎನ್ನಲಾಗುತ್ತಿದೆ. ದಡ್ಡಿಯಲ್ಲಿ ಯಾರೂ ಇಲ್ಲದ ವೇಳೆ ಏಕಾಏಕಿ ತೋಳಗಳು ದಾಳಿ ನಡೆಸಿದ್ದು, 15 ಕುರಿ ಹಾಗೂ ಮರಿಗಳು ಸಾವನ್ನಪ್ಪಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ.

    ಆರ್ಥಿಕ ನಷ್ಟ ಅನುಭವಿಸಿದ ಕುರಿ ಮಾಲಿಕ ಬಸವರಾಜ್ ಅವರಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕುರಿಗಳನ್ನು ಕಳೆದುಕೊಂಡ ಮಾಲೀಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಶಿರಹಟ್ಟಿ ತಾಲೂಕು ಅರಣ್ಯ ಇಲಾಖೆಯ ಅಧಿಕಾರಿಗಳು, ಪಶುವೈದ್ಯಾಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಹಿರ್ದೆಸೆಗೆ ಹೋದವರ ಮೇಲೆ ತೋಳ ದಾಳಿ – 12 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

    ಬಹಿರ್ದೆಸೆಗೆ ಹೋದವರ ಮೇಲೆ ತೋಳ ದಾಳಿ – 12 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

    ರಾಯಚೂರು: ಮಸ್ಕಿ ತಾಲೂಕಿನ ಚಿಲ್ಕರಾಗಿ ಹಾಗೂ ಇರಕಲ್ ಗ್ರಾಮದಲ್ಲಿ ಹುಚ್ಚು ತೋಳವೊಂದು ದಾಳಿ ನಡೆಸಿ 12 ಮಂದಿಯನ್ನು ಗಾಯಗೊಳಿಸಿದೆ. ಇದರಲ್ಲಿ ಇಬ್ಬರ ಪರಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

    ಬಹಿರ್ದೆಸೆಗೆ ತೆರಳಿದ್ದವರ ಮೇಲೆ ಮೊದಲು ದಾಳಿ ನಡೆಸಿದ ತೋಳ, ಬಳಿಕ ಗ್ರಾಮಕ್ಕೆ ನುಗ್ಗಿ ಸಿಕ್ಕ ಸಿಕ್ಕವರ ಮೇಲೆ ಎಗರಿ ದಾಳಿ ಮಾಡಿದೆ. ಚಿಲ್ಕರಾಗಿ ಗ್ರಾಮದ ಅಮರಪ್ಪ ಕುಂಬಾರ್, ವೀರಭದ್ರಪ್ಪ ಕುಂಬಾರ್, ಈರಮ್ಮ, ಹುಲುಗಪ್ಪ ಚಲುವಾದಿ ಸೇರಿ 9 ಮಂದಿ ತೋಳದ ದಾಳಿಗೆ ತುತ್ತಾಗಿದ್ದಾರೆ. ಇರಕಲ್ ಗ್ರಾಮಕ್ಕೆ ನುಗ್ಗಿದ ತೋಳ ಅಲ್ಲಿ ಮೂವರ ಮೇಲೆ ದಾಳಿ ನಡೆಸಿದೆ. ಇದರಿಂದ ರೊಚ್ಚಿಗೆದ್ದ ಇರಕಲ್ ಗ್ರಾಮಸ್ಥರು ತೋಳವನ್ನ ದೊಣ್ಣೆಯಿಂದ ಹೊಡೆದು ಸಾಯಿಸಿದ್ದಾರೆ. ಗಾಯಗೊಂಡ 12 ಜನರನ್ನ ಮಸ್ಕಿ ಹಾಗೂ ಲಿಂಗಸುಗೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಬೆಳಗ್ಗೆ 5 ಗಂಟೆ ಸಮಯಕ್ಕೆ ತೋಳ ದಾಳಿ ಶುರು ಮಾಡಿ ಕೊನೆಗೆ ಇರಕಲ್ ಗ್ರಾಮದಲ್ಲಿ ಸಾವನ್ನಪ್ಪಿದೆ. ಇಷ್ಟೆಲ್ಲಾ ಘಟನೆ ನಡೆದಿದ್ದರೂ ಗ್ರಾಮಸ್ಥರ ಮಾಹಿತಿಗೆ ಸ್ಪಂದಿಸಬೇಕಾದ ಅರಣ್ಯ ಇಲಾಖೆಯ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಎರಡು ಗ್ರಾಮಗಳ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.