Tag: wodeyar express

  • ಉದ್ದೇಶ ಪೂರ್ವಕವಾಗಿಯೇ ಟಿಪ್ಪು ಹೆಸರು ಬದಲಾಯಿಸಿದ್ದೇನೆ – ಸಿಂಹ ಗುಡುಗು

    ಉದ್ದೇಶ ಪೂರ್ವಕವಾಗಿಯೇ ಟಿಪ್ಪು ಹೆಸರು ಬದಲಾಯಿಸಿದ್ದೇನೆ – ಸಿಂಹ ಗುಡುಗು

    ಮೈಸೂರು: ಟಿಪ್ಪು ಎಕ್ಸ್‌ಪ್ರೆಸ್‌ (Tippu Express) ರೈಲಿನ ಹೆಸರು ಬದಲಾವಣೆ ಬೆನ್ನಲ್ಲೇ ವಿರೋಧ ಪಕ್ಷ ನಾಯಕರಿಂದ ವ್ಯಕ್ತವಾಗುತ್ತಿದ್ದ ಟೀಕೆಗಳಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಖಡಕ್ ಉತ್ತರ ನೀಡಿದ್ದಾರೆ. ನಾನು ಉದ್ದೇಶ ಪೂರ್ವಕವಾಗಿಯೇ ಟಿಪ್ಪು ಹೆಸರು ಬದಲಾಯಿಸಿದ್ದೇನೆ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

    ಮಹಾರಾಜರು ಮೈಸೂರಿಗೆ (Mysuru Wadiyar Dynasty) ಕೊಟ್ಟ ನೂರು ಕೊಡುಗೆಗಳನ್ನು ನಾನು ಹೇಳುತ್ತೇನೆ. ಟಿಪ್ಪು (Tippu Sultan) ಬೆಂಬಲಿಸುವವರು ಟಿಪ್ಪು ಕೊಟ್ಟ ಮೂರು ಕೊಡುಗೆಗಳನ್ನು ಹೇಳಲಿ ಸಾಕು ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಗಂಗೂಲಿ ಬಿಜೆಪಿ ಸೇರಲು ನಿರಾಕರಿಸಿದ್ದರಿಂದ್ಲೇ 2ನೇ ಬಾರಿಗೆ BCCI ಸ್ಥಾನ ಕೈತಪ್ಪಿದೆ – TMC

    ಟಿಪ್ಪುಗೂ ಮೈಸೂರಿಗೂ (Mysuru) ಏನು ಸಂಬಂಧ? ಟಿಪ್ಪು ಏನು ಮೈಸೂರಿನವನಾ? ಅವನು ಶ್ರೀರಂಗಪಟ್ಟಣದವನು. ಮೈಸೂರಿನಲ್ಲಿ ನಡೆದಿರುವ ಅಭಿವೃದ್ಧಿಯಲ್ಲಿ ರಾಜರ ಕೊಡುಗೆ ಇದೆ. ಟಿಪ್ಪು ಕೊಡುಗೆ ಏನಿದೆ ಎಂದು ಪ್ರಶ್ನಿಸಿದ್ದಾರೆ.

    siddu pratap simha

    ಯಾರೂ ಮಾಡದ ಸಾಧನೆ ಮಾಡಿದ್ದೇನೆ: ಈವರೆಗೆ ಒಂದು ರೈಲಿಗೆ ಇಟ್ಟಿದ್ದ ಹೆಸರನ್ನು ಬದಲಾಯಿಸಿದ ಉದಾಹರಣೆಯೇ ಇಲ್ಲ. ಆದ್ರೆ ಇದನ್ನು ಉದ್ದೇಶ ಪೂರ್ವಕವಾಗಿಯೇ ಪ್ರಯತ್ನ ಪಟ್ಟು ಬದಲಾಯಿಸಿದ್ದೇನೆ. ಮೈಸೂರು ಮಹಾರಾಜರ ಬಗ್ಗೆ ಕೇವಲವಾಗಿ ಮಾತನಾಡುವ ಸಿದ್ದರಾಮಯ್ಯನವರಿಂದ (Siddaramaiah) ನಾವು ಪಾಠ ಕಲಿಯುವ ಅಗತ್ಯ ಇಲ್ಲ. ಟಿಪ್ಪು ಹೆಸರನ್ನು ಜನರ ಮನಸ್ಸಿನಿಂದ ತೆಗೆಯಲು ಆಗುವುದಿಲ್ಲ ಅನ್ನುವವರ ಹೆಸರನ್ನೇ ಜನ ಮರೆಯುತ್ತಿದ್ದಾರೆ. ಅದಕ್ಕೆ ಉದಾಹರಣೆ ಕೂಡ ಇದೆ. ನಾನು ಮೈಸೂರಿಗೆ 10 ಟ್ರೈನ್‌ (Train) ತಂದಿದ್ದೇನೆ. ಈ ದೇಶದ ಯಾವುದೇ ಸಂಸದ 10 ವರ್ಷದಲ್ಲಿ ಮಾಡದ ಸಾಧನೆಯನ್ನು ನಾನು ಮಾಡಿದ್ದೇನೆ ಎಂದು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಪಾದಕ್ಕೂ ಬಿಎಸ್‍ವೈ ಸಮ ಇಲ್ಲ ಎಂದು ನಾನು ಹೇಳಲ್ಲ: ಸಿದ್ದರಾಮಯ್ಯ

    ಟಿಪ್ಪು ಒಬ್ಬ ಕನ್ನಡ ವಿರೋಧಿ: ಟಿಪ್ಪು ಕನ್ನಡ ವಿರೋಧಿ, ಟಿಪ್ಪು ಪರ್ಶಿಯನ್ ಭಾಷೆಯನ್ನ ಹೇರಿದ್ದಾನೆ. ದಿವಾನ್ ಪದ ಸಹ ಪರ್ಶಿಯನ್ ಪದವೇ ಆಗಿದೆ. ಕಂದಾಯ ಇಲಾಖೆಯಲ್ಲಿರುವ ಪ್ರತಿಯೊಂದು ಪದಗಳೂ ಪರ್ಶಿಯನ್ ಭಾಷೆಗೆ ಸೇರಿದ್ದು. ಹೀಗಿದ್ದರೂ ಸಿದ್ದರಾಮಯ್ಯ ಅವರು ತಾವು ಓದಿದ ವಿಶ್ವವಿದ್ಯಾನಿಲಯ (Mysore University) ಕಟ್ಟಿಸಿದ್ದು ಮೈಸೂರು ಮಹಾರಾಜರು (Mysuru Wadiyar Dynasty) ಎಂಬುದನ್ನು ಮರೆತು ಮಹಾರಾಜರ ಬಗ್ಗೆ ಉಡಾಫೆಯಿಂದ ಮಾತನಾಡುತ್ತಾರೆ. ಇಂತವರ ಪಾಠ ನನಗೆ ಬೇಡ ಎಂದು ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • BJPಯಿಂದ ಟಿಪ್ಪು ಪರಂಪರೆ ಅಳಿಸಲು ಸಾಧ್ಯವೇ ಇಲ್ಲ: ಓವೈಸಿ

    BJPಯಿಂದ ಟಿಪ್ಪು ಪರಂಪರೆ ಅಳಿಸಲು ಸಾಧ್ಯವೇ ಇಲ್ಲ: ಓವೈಸಿ

    ನವದೆಹಲಿ: ಬಿಜೆಪಿಯಿಂದ (BJP) ಟಿಪ್ಪು ಪರಂಪರೆಯನ್ನು ಅಳಿಸಲು ಸಾಧ್ಯವೇ ಇಲ್ಲ ಎಂದು ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಎಚ್ಚರಿಸಿದ್ದಾರೆ.

    ಬೆಂಗಳೂರು – ಮೈಸೂರು ಸಂಪರ್ಕ ಕಲ್ಪಿಸುವ ರೈಲಿಗೆ ಟಿಪ್ಪು ಎಕ್ಸ್‌ಪ್ರೆಸ್‌ (Tippu Express) ಹೆಸರಿಗೆ ಬದಲಾಗಿ ಒಡೆಯರ್ ಎಕ್ಸ್‌ಪ್ರೆಸ್‌ (Wodeyar Express) ಎಂದು ಮರುನಾಮಕರಣ ಮಾಡಿರುವ ವಿಚಾರಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪವನ್ ಕುಮಾರ್-ಫಾಸಿಲ್ ಕಾಂಬಿನೇಷನ್‌ನ ‘ಧೂಮ್ʼ ಚಿತ್ರದ ಅದ್ಧೂರಿ ಮುಹೂರ್ತ

    ಈ ಕುರಿತು ಟ್ವೀಟ್ ಮಾಡಿರುವ ಓವೈಸಿ, ಬ್ರಿಟಿಷರ ವಿರುದ್ಧ ಟಿಪ್ಪು ಮಾಡಿದ್ದ ಮೂರು ಯುದ್ಧಗಳು (War) ಬಿಜೆಪಿಯನ್ನು ಕೆರಳಿಸಿದೆ. ಅವರು ಬೇಕಿದ್ದರೆ ಇನ್ನೊಂದು ರೈಲಿಗೆ ಒಡೆಯರ್ ಹೆಸರಿಡಬಹುದಿತ್ತು. ಏನೇ ಮಾಡಿದರೂ ಟಿಪ್ಪು ಪರಂಪರೆಯನ್ನು (Tippu Legancy) ಅಳಿಸಲು ಬಿಜೆಪಿಯಿಂದ ಸಾಧ್ಯವಿಲ್ಲ. ಟಿಪ್ಪು ಬದುಕಿದ್ದಾಗ ಬ್ರಿಟಿಷರನ್ನು ಹೆದರಿಸಿದ್ದರು. ಈಗ ಬ್ರಿಟಿಷ್ ಗುಲಾಮರನ್ನು ಎದುರಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಸ್ವಚ್ಛ ನಗರ ಪಟ್ಟಿಯಲ್ಲಿ ಬೆಂಗಳೂರು ಲಾಸ್ಟ್ – ಷರತ್ತಿನೊಂದಿಗೆ ನೂತನ ಕಸದ ಟೆಂಡರ್‌ಗೆ BBMP ಸಿದ್ಧತೆ

    ಓವೈಸಿ ಟೀಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಐಟಿ ವಿಭಾಗದ ಉಸ್ತುವಾರಿ ಅಮಿತ್ ಮಾಳವಿಯಾ (Amit Malviya), ಟಿಪ್ಪು ಪರಂಪರೆ ಅಳಿಸುವುದು ಬಿಜೆಪಿ ಉದ್ದೇಶವಲ್ಲ. ಟಿಪ್ಪು ಒಬ್ಬ ಅನಾಗರಿಕ, ಕೂರ್ಗ್‌ನಲ್ಲಿ ಕೊಡವರಿಗೆ, ಮಂಗಳೂರಿನಲ್ಲಿ ಸಿರಿಯನ್ ಕ್ರಿಶ್ಚಿಯನ್ನರಿಗೆ, ಕ್ಯಾಥೋಲಿಕರಿಗೆ, ಕೊಂಕಣಿಗಳಿಗೆ, ಮಲಬಾರ್‌ನ ನಾಯರ್‌ಗಳಿಗೆ ಅನೇಕ ರೀತಿಯಲ್ಲಿ ಕಷ್ಟ ಕೊಟ್ಟಿದ್ದಾನೆ. ಟಿಪ್ಪುವಿನ ನಿಜವಾದ ಪರಂಪರೆಯ ಬಗ್ಗೆ ಜನರಿಗೆ ತಿಳಿಸಲು ನಾವು ಬಯಸುತ್ತೇವೆ ಎಂದು ಉತ್ತರಿಸಿದ್ದಾರೆ.

    1980ರಲ್ಲಿ ಮೈಸೂರು -ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಸೂಪರ್ ಫಾಸ್ಟ್ ರೈಲು ಎಂದು ಪರಿಚಯಿಸಲಾದ ಟಿಪ್ಪು ಎಕ್ಸ್‌ಪ್ರೆಸ್‌ಗೆ ಈಚೆಗಷ್ಟೇ ಒಡೆಯರ್ ಎಕ್ಸ್‌ಪ್ರೆಸ್‌ ಎಂದು ಮರುನಾಮಕರಣ ಮಾಡಲಾಯಿತು. ಈ ಕುರಿತು ಮೈಸೂರು – ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಅವರು ಕಳೆದ ಜುಲೈ ತಿಂಗಳಿನಲ್ಲೇ ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದರು.

    Live Tv
    [brid partner=56869869 player=32851 video=960834 autoplay=true]

  • ಟಿಪ್ಪು ಹೆಸರೇ ಗೊಂದಲದಲ್ಲಿದೆ, ಹಾಗಾಗಿ ಟ್ರೈನ್‌ನ ಹೆಸರು ಬದಲಿಸಿದ್ದೇವೆ: ನಳೀನ್ ಕುಮಾರ್ ಕಟೀಲ್

    ಟಿಪ್ಪು ಹೆಸರೇ ಗೊಂದಲದಲ್ಲಿದೆ, ಹಾಗಾಗಿ ಟ್ರೈನ್‌ನ ಹೆಸರು ಬದಲಿಸಿದ್ದೇವೆ: ನಳೀನ್ ಕುಮಾರ್ ಕಟೀಲ್

    ದಾವಣಗೆರೆ: ಟಿಪ್ಪು ಹೆಸರೇ ಗೊಂದಲದಲ್ಲಿದೆ, ಅವನ ಸಾಧನೆಗಳು ಚರ್ಚೆಯಲ್ಲಿವೆ, ಹಾಗಾಗಿ ಚರ್ಚೆಯಲ್ಲಿ ಇರುವವರ ಹೆಸರು ಸರಿಯಲ್ಲ ಎಂದು ರೈಲಿಗೆ ಟಿಪ್ಪು ಹೆಸರು ತೆಗೆದು ಒಡೆಯರ್ ಹೆಸರು ನಾಮಕರಣ ಮಾಡಿರುವ ವಿಚಾರವನ್ನು ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel) ಸಮರ್ಥಿಸಿಕೊಂಡರು.

    ದಾವಣಗೆರೆಯಲ್ಲಿ (Davanagere) ಮಾತನಾಡಿದ ಅವರು‌, ಒಡೆಯರ್ ಅವರ ಕೊಡುಗೆ ಈ ರಾಜ್ಯದಲ್ಲಿ ಅಪಾರವಿದೆ. ಶ್ರೇಷ್ಠ ಅಭಿವೃದ್ಧಿ ಹರಿಕಾರರು ಒಡೆಯರ್ ಅವರಾಗಿದ್ದಾರೆ. ಈಗ ಮೋದಿಯವರು (Narendra Modi) ಏನ್ ಮಾಡಿದ್ದಾರೋ ಅದನ್ನು ಒಡೆಯರ್ ಅವರು ಆಗಿನ ಕಾಲದಲ್ಲಿ ಮಾಡಿದ್ದಾರೆ. ಅಲ್ಲದೆ ಟಿಪ್ಪು ಹೆಸರೇ ಗೊಂದಲದಲ್ಲಿದೆ. ಅವನ ಸಾಧನೆಗಳು ಚರ್ಚೆಯಲ್ಲಿವೆ, ಹಾಗಾಗಿ ಚರ್ಚೆಯಲ್ಲಿ ಇರುವರ ಹೆಸರು ಟ್ರೈನ್‌ಗೆ ಇಡುವುದು ಸರಿಯಲ್ಲ. ಆದ್ದರಿಂದ ಒಡೆಯರ್ ಎಕ್ಸ್‌ಪ್ರೆಸ್‌ (Wodeyar Express) ಎಂದು ಮರುನಾಮಕರಣ ಮಾಡಿದ್ದೇವೆ ಎಂದು ಹೇಳಿದರು.

    ಎಸ್ಸಿ, ಎಸ್‌ಟಿ (SC, ST) ಮೀಸಲಾತಿ ಬೇಡಿಕೆ ಈಡೇರಿಕೆ ಮಾಡಿದ್ದೇವೆ. ಅದಕ್ಕಾಗಿ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲಾ ಜನರ ಜನತೆಗೆ ಬೆಂಬಲವಾಗಿ ನಿಲ್ಲುವ ಪಾರ್ಟಿಯಾಗಿ ನಾವು ಗುರುತಿಸಿಕೊಂಡಿದ್ದೇವೆ. ಎರಡು ಸಮುದಾಯಕ್ಕೆ ನ್ಯಾಯ ಸಿಕ್ಕಿದೆ. ಎಲ್ಲಾ ಕಾನೂನು ವಿವರಗಳನ್ನು ಪಡೆದು ಮಾಡಿದ್ದಾರೆ. ಸಾಂವಿಧಾನಿಕವಾಗಿ ತಯಾರಿ ಮಾಡಿ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದರು.

    ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಕೆಎಸ್ ಈಶ್ವರಪ್ಪಗೆ ಅಸಮಾಧಾನ ಇಲ್ಲ. ಖಾಲಿ ಇರುವ ಸಚಿವ ಸ್ಥಾನಗಳನ್ನು ತುಂಬಿಸಲು ಹೇಳಿದ್ದಾರೆ. ಅವರು ನಿರಂತರವಾಗಿ ನಮ್ಮ ಜೊತೆಯಲ್ಲಿಯೇ ಇದ್ದಾರೆ. ಸಂಪುಟ ವಿಸ್ತಾರಣೆಗೆ ಸಲಹೆ ನೀಡಿದ್ದಾರೆ. ಈಶ್ವರಪ್ಪ ಅವರಿಗೆ ಪುನಃ ಸಚಿವ ಸ್ಥಾನ ನೀಡುವುದು ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದು ತಿಳಿಸಿದರು.

    ಭಾರತ್ ಜೋಡೋ ಹಾಗೂ ಎಸ್ಸಿ ಎಸ್ಟಿ ಮೀಸಲಾತಿಗೆ ಸಂಬಂಧ ಇಲ್ಲ: ಕಾಂಗ್ರೆಸ್ ಸರ್ಕಾರ ಇದ್ದಾಗ ಅವರ ನಾಯಕರು ಕಣ್ಮುಚ್ಚಿ ಕುಳಿತ್ತಿದ್ದರು. ಎಸ್ಸಿ, ಎಸ್ಟಿ ಸಮುದಾಯದ ಬಗ್ಗೆ ಕಾಳಜಿ ಇದ್ದಿದ್ದರೇ, ಅವರ ಕಾಲಘಟ್ಟದಲ್ಲಿ ಮಾಡಬಹುದಿತ್ತು. ಅವರು ಕಮಿಟಿ ಮಾಡಿ ಕಮಿಟಿಯನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ಸಿದ್ದರಾಮಯ್ಯನವರು ಮಾಡಿದರು. ನಮ್ಮ ಸರ್ಕಾರ ಯಾರ ಮಾತು ತಪ್ಪದ ಸರ್ಕಾರ ನುಡಿದಂತೆ ನಡೆದಿದೆ.

    ಭಾರತ್ ಜೋಡೋ ಭಾರತದಿಂದ ಓಡುವಂತಹ ಯಾತ್ರೆಯಾಗಿದೆ. ಗಾಂಧಿಗೂ ಈಗಿರುವ ಗಾಂಧಿ ಕುಟುಂಬಕ್ಕೂ ಏನ್ ಸಂಬಂಧ ಎಂದು ಮಕ್ಕಳು ಕೂಡ ಈಗ ಕೇಳ್ತಾ ಇದ್ದಾರೆ. ಭಾರತ ವಿಭಜನೆಗೆ, ಎಲ್ಲಾ ಗೊಂದಲಕ್ಕೂ ಕಾಂಗ್ರೆಸ್ ಕಾರಣ, ಧರ್ಮದ ಹಾಗೂ ಜಾತಿಗಳ ನಡುವಿನ ಸಂಘರ್ಷಕ್ಕೆ ಕಾಂಗ್ರೆಸ್‌ನ ತೀರ್ಮಾನವೇ ಕಾರಣ ಎಂದು ಕಿಡಿಕಾರಿದರು.

    ಮುಸ್ಲಿಂ ಸಮುದಾಯದಲ್ಲಿ ಜಯಂತಿ ಆಚರಣೆ ಪದ್ಧತಿಯಿಲ್ಲ: ಮುಸ್ಲಿಂ ಸಮುದಾಯದಲ್ಲಿ ಜಯಂತಿ ಆಚರಣೆ ಪದ್ಧತಿಯಿಲ್ಲ. ಸಿದ್ದರಾಮಯ್ಯ ಸರ್ಕಾರ ಬಂದಾಗ ಟಿಪ್ಪು ಜಯಂತಿ ತಂದು ದುರಂತಕ್ಕೆ ಕಾರಣರಾದರು. ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತಂದು ಅವರ ಭಾವನೆಗಳನ್ನು ಕೆರಳಿಸಿದರು, ಮತಬ್ಯಾಂಕ್‌ಗಾಗಿ ಸಣ್ಣತನದ ರಾಜಕಾರಣ ಮಾಡಿದರು. ಭಾರತವನ್ನು ಜಾತಿ, ಮತ, ಪಂಥ, ಪಂಗಡಗಳಲ್ಲಿ ಎಲ್ಲಿ ತುಂಡು ಮಾಡಬೇಕೋ ಅಲ್ಲಿ ಮಾಡಬೇಕೋ ಮಾಡಿದ್ದಾರೆ, ವಿಭಜನೆ ಮಾಡಿರುವವರು ಎಲ್ಲಿ ಜೋಡೋ ಮಾಡ್ತಾರೆ ಎಂದು ಟಾಂಗ್‌ ನೀಡಿದರು.

    tippu

    ಪಾಕಿಸ್ತಾನಕ್ಕೆ ಜಿಂದಾಬಾದ್ ಅಂದವರು, ಪಾಕಿಸ್ತಾನದ ಪರ ಮಾತನಾಡಿದರನ್ನು ಜೋಡಿಸಿಕೊಂಡು ಹೋಗ್ತಾರೆ. ಈ ದೇಶವನ್ನು ಜೋಡಿಸಿದವರು ಯಾರಾದರೂ ಇದ್ದರೆ ಅದು ಅಟಲ್ ಬಿಹಾರಿ ವಾಜಪೇಯಿ ಅವರಾಗಿದ್ದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಚತುಷ್ಪತ ರಸ್ತೆ ಮಾಡಿ ಜೋಡಿಸಿದ್ದಾರೆ ಎಂದ ಅವರು ಅಕ್ಟೋಬರ್ 11 ರಿಂದ ಸಿಎಂ ನೇತೃತ್ವದಲ್ಲಿ ಕರ್ನಾಟಕ ಯಾತ್ರೆ ಶುರುವಾಗುತ್ತದೆ ಎಂದರು. ಇದನ್ನೂ ಓದಿ: ಟಿಪ್ಪು ಎಕ್ಸ್‌ಪ್ರೆಸ್‌ಗೆ ಒಡೆಯರ್ ಎಕ್ಸ್‌ಪ್ರೆಸ್ ಬೋರ್ಡ್ ನೇತಾಕಿದ ರೈಲ್ವೆ ಇಲಾಖೆ

    ಅರ್ಕಾವತಿ ಬಡಾವಣೆ ಹಗರಣ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಅರ್ಕಾವತಿ ಹಗರಣವನ್ನು ಮುಚ್ಚಿಡುವ ಪ್ರಯತ್ನ ಸಿದ್ದರಾಮಯ್ಯ ಮಾಡಿದ್ದಾರೆ, ದಾಖಲೆಗಳನ್ನು ಮುಚ್ಚಿಟ್ಟಿದ್ದಾರೆ, ನಮ್ಮ ಸರ್ಕಾರ ದಾಖಲೆಗಳನ್ನು ಹೊರ ತೆಗೆಯುವ ಕೆಲಸ ಮಾಡುತ್ತೇವೆ, ಫಲಿತಾಂಶಕ್ಕಾಗಿ ಕಾದು ನೋಡಿ ಎಂದ ತಿಳಿಸಿದರು. ಇದನ್ನೂ ಓದಿ: 2023 ಚುನಾವಣೆ – ಮತ್ತೆ ಟಿಪ್ಪು ವಾರ್ ಶುರು ಆಗುತ್ತಾ?

    Live Tv
    [brid partner=56869869 player=32851 video=960834 autoplay=true]

  • 2023 ಚುನಾವಣೆ – ಮತ್ತೆ ಟಿಪ್ಪು ವಾರ್ ಶುರು ಆಗುತ್ತಾ?

    2023 ಚುನಾವಣೆ – ಮತ್ತೆ ಟಿಪ್ಪು ವಾರ್ ಶುರು ಆಗುತ್ತಾ?

    ಬೆಂಗಳೂರು: ಟಿಪ್ಪು ಸುಲ್ತಾನ್‌(Tipu Sultan) ವಿಚಾರ ಮತ್ತೆ ಚುನಾವಣೆ(Election) ಅಸ್ತ್ರವಾಗುವ ಮುನ್ಸೂಚನೆ ಸಿಗುತ್ತಿದೆ. ಕಾಂಗ್ರೆಸ್(Congress) ವಿರುದ್ಧ ಟಿಪ್ಪು ಅಸ್ತ್ರ ಪ್ರಯೋಗಕ್ಕೆ ವೇದಿಕೆಯನ್ನು ಬಿಜೆಪಿ(BJP) ಸಿದ್ಧ ಮಾಡಿದೆ. ಈಗ ಕೊಲ್ಲೂರು ಮೂಕಾಂಬಿಕೆಗೆ ಮಾಡುತ್ತಿರುವ ಸಲಾಂ ಆರತಿ ಹೆಸರು ಬದಲಿಸುವ ಹೊಸ ಆಟ ಶುರು ಆಗಿದೆ.

    ಮೈಸೂರು – ಬೆಂಗಳೂರು ನಡುವಿನ ಟಿಪ್ಪು ಎಕ್ಸ್‌ಪ್ರೆಸ್‌(Tipu Express) ರೈಲಿನ ಹೆಸರು ಒಡೆಯರ್ ಎಕ್ಸ್‌ಪ್ರೆಸ್‌(Wodeyar Express) ಆಗಿ ಬದಲಾಗಿದೆ. ಈ ವಿಚಾರವಾಗಿ ಬಿಜೆಪಿ ಕ್ರೆಡಿಟ್ ತೆಗೆದುಕೊಂಡರೆ ಕಾಂಗ್ರೆಸ್ ನಾಯಕರು ಇದು ದ್ವೇಷ, ಟಿಪ್ಪು ಇತಿಹಾಸದ ಭಾಗ ಎಂದು ಹೇಳುತ್ತಿದ್ದಾರೆ. ಟಿಪ್ಪು ಹೆಸರಿನಲ್ಲಿ ಮತ್ತೆ ರಾಜಕೀಯ ಕೆಸರೆರಚಾಟ ಜೋರಾಗುತ್ತಿದೆ.

    ಕಾಂಗ್ರೆಸ್ ನಾಯಕರ ಹೇಳಿಕೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಬಿಜೆಪಿ ನಾಯಕರು ಕೈ ನಾಯಕರ ವಿರುದ್ಧ ಮುಗಿಬಿದ್ದಿದ್ದಾರೆ. ಸಿದ್ದರಾಮಯ್ಯ ಬೇಕಾದರೆ ಜಿನ್ನಾ, ಲಾಡೆನ್, ಘಜ್ನಿ ರೈಲು ಬಿಡಲಿ. ಆದರೆ ಟಿಪ್ಪು ಬೇಡ, ಅವನು ಕನ್ನಡಿಗನಲ್ಲ ಎಂದು ಸಚಿವ ಅಶೋಕ್ ಟಾಂಗ್ ಕೊಟ್ಟಿದ್ದಾರೆ.  ಇದನ್ನೂ ಓದಿ: ರೈಲಿಗಿಟ್ಟಿದ್ದ ಟಿಪ್ಪು ಹೆಸರೇಕೆ ತೆಗೆಯಬೇಕಿತ್ತು, ಬೇರೆ ಟ್ರೈನ್‍ಗೆ ಒಡೆಯರ್ ಹೆಸರಿಡಲಿ: ಹೆಚ್.ಡಿ. ರೇವಣ್ಣ

    2018ರ ಚುನಾವಣೆ ಸಂದರ್ಭದಲ್ಲೂ ಟಿಪ್ಪು ವಾರ್ ತಾರಕಕ್ಕೇರಿತ್ತು.‌ ಆಗ ಕಾಂಗ್ರೆಸ್ ಟಿಪ್ಪು ಪರ ಮಾತನಾಡಿದ್ದ‌ನ್ನೇ ಬಿಜೆಪಿ ಬಂಡವಾಳ ಮಾಡಿಕೊಂಡು ಅಭಿಯಾನ ಮಾಡಿತ್ತು. ಈಗಲೂ ಅದೇ ಮುನ್ಸೂಚನೆ ಸಿಗುತ್ತಿದ್ದು, ಕೊಲ್ಲೂರು ಮೂಕಾಂಬಿಕಾ ದೇವಾಲಯದ ನಡೆಯವ ಸಲಾಂ ಆರತಿ ಬದಲಿಸಲು ಬಿಜೆಪಿ ಪ್ಲ್ಯಾನ್ ಮಾಡುತ್ತಿದೆ. ಸ್ಥಳೀಯರಿಂದ ಮನವಿ ಬಂದ್ರೆ ಸಲಾಂ ಹೆಸರಿನ ಆರತಿ ನಿಲ್ಲಿಸುವುದಾಗಿ ಬಿಜೆಪಿ ಸಚಿವರು, ಶಾಸಕರು ಹೇಳಿದ್ದಾರೆ.

    ಒಟ್ಟಿನಲ್ಲಿ ಟಿಪ್ಪು ವಿಚಾರ ಎತ್ತಿದರೆ ಕೆಂಡವಾಗುವ ಬಿಜೆಪಿಗೆ ಕಾಂಗ್ರೆಸ್ ಅಸ್ತ್ರವನ್ನ ಕೊಡುತ್ತಾ? ಬಿಜೆಪಿ ಅಸ್ತ್ರವನ್ನೇ ತಲೆಕೆಳಗೆ ಮಾಡಿ ಟಿಪ್ಪುವನ್ನು ಕಾಂಗ್ರೆಸ್‌ ಹೇಗೆ ಸಮರ್ಥಿಸುತ್ತದೆ ಎನ್ನುವುದು ಸದ್ಯದ ಕುತೂಹಲ.

    Live Tv
    [brid partner=56869869 player=32851 video=960834 autoplay=true]

  • ರೈಲಿಗಿಟ್ಟಿದ್ದ ಟಿಪ್ಪು ಹೆಸರೇಕೆ ತೆಗೆಯಬೇಕಿತ್ತು, ಬೇರೆ ಟ್ರೈನ್‍ಗೆ ಒಡೆಯರ್ ಹೆಸರಿಡಲಿ: ಹೆಚ್.ಡಿ. ರೇವಣ್ಣ

    ರೈಲಿಗಿಟ್ಟಿದ್ದ ಟಿಪ್ಪು ಹೆಸರೇಕೆ ತೆಗೆಯಬೇಕಿತ್ತು, ಬೇರೆ ಟ್ರೈನ್‍ಗೆ ಒಡೆಯರ್ ಹೆಸರಿಡಲಿ: ಹೆಚ್.ಡಿ. ರೇವಣ್ಣ

    ಹಾಸನ: ರೈಲಿಗೆ (Train) ಇಟ್ಟಿದ್ದ ಟಿಪ್ಪು (Tippu Express) ಹೆಸರನ್ನು ಏಕೆ ತೆಗೆಯಬೇಕಿತ್ತು, ಟಿಪ್ಪು ಕೂಡ ಈ ರಾಜ್ಯಕ್ಕೆ ಕೊಡುಗೆ ಕೊಟ್ಟಿದ್ದಾರೆ. ಬೇರೆ ರೈಲುಗಳಿಗೆ ಒಡೆಯರ್ ( Wodeyar Express) ಹೆಸರಿಡಲಿ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D. Revanna) ಹೇಳಿದ್ದಾರೆ.

    ಹಾಸನದಲ್ಲಿ (Hassan) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಎರಡು ಕೆಲಸ ಮಾಡುತ್ತಿದೆ. ಒಂದು ದುಡ್ಡು ಹೊಡೆಯೋದು, ಇನ್ನೊಂದು ಒಂದು ಸಮಾಜವನ್ನು ಗುರಿಯಾಗಿಟ್ಟಿಕೊಂಡು ಕೆಲಸ ಮಾಡುತ್ತಿದೆ. ಇಷ್ಟು ವರ್ಷ ಟಿಪ್ಪು ಹೆಸರಿತ್ತಲ್ಲ, ಯಾರಾದರೂ ಹೆಸರು ಬದಲಿಸಬೇಡಿ ಅಂತ ಹಿಡಿದುಕೊಂಡಿದ್ವಾ? ಇದೆಲ್ಲ ಚುನಾವಣೆ ಗಿಮಿಕ್ ಅಷ್ಟೇ, ಯಾರೋ ಹಿಂದೆ ಪುಣ್ಯತ್ಮರು ಟಿಪ್ಪು ಹೆಸರು ಇಟ್ಟಿದ್ದರು. ಒಡೆಯರ್ ಅವರ ಹೆಸರು ಇಡಲಿ, ಬೇಡ ಅನ್ನಲ್ಲ, ಈ ರಾಜ್ಯಕ್ಕೆ ಅವರದ್ದೇ ಆದ ಕೊಡುಗೆ ಇದೆ, ಮೈಸೂರಿಗೆ ಎಷ್ಟು ಟ್ರೈನ್ ಓಡಾಡುತ್ತವೆ, ಬೇರೆ ಯಾವುದಾದರೂ ಎರಡು, ಮೂರು ರೈಲಿಗೆ ಒಡೆಯರ್ ಹೆಸರು ಇಡಲಿ ಎಂದಿದ್ದಾರೆ.

    ಮೂರು ವರ್ಷದ ಹಿಂದೆನೇ ಒಡೆಯರ್ ಹೆಸರು ಇಡಬೇಕಿತ್ತು, ಏನು ಮಾಡುತ್ತಿದ್ದರು. ಈಗ ಕುವೆಂಪು, ಒಡೆಯರ್, ಎಸ್‍ಸಿ, ಎಸ್‍ಟಿ ಸಮಾಜ ನೆನಪಾಗಿದೆ. ದೇವೇಗೌಡರು (H.D.Devegowda) ಒಳಮೀಸಲಾತಿ ಕೊಡಬೇಕೆಂದು ಎಷ್ಟು ವರ್ಷದಿಂದ ಹೋರಾಟ ಮಾಡುತ್ತಿದ್ದಾರೆ. ಬಿಜೆಪಿಗೆ (BJP) ಸಾಬ್ರು ಓಟು ಹಾಕಲ್ಲ ಎಂದು ಗುರಿಯಾಗಿಟ್ಟು ಕೊಂಡಿದ್ದಾರೆ. ಯಾವ್ಯಾವ ಸಾಬ್ರಿಗೆ ಏನೇನು ತೊಂದರೆ ಕೊಡಬೇಕು ಎಲ್ಲಾ ಕೊಡುತ್ತಿದ್ದಾರೆ. ವೋಟಿಗೋಸ್ಕರ ಈ ಕೆಳಮಟ್ಟದ, ದ್ವೇಷದ ರಾಜಕಾರಣ ಮಾಡಬಾರದು. ಇಂತಹ ಭ್ರಷ್ಟ ಸರ್ಕಾರವನ್ನು ನಾನು ಐವತ್ತು ವರ್ಷದಲ್ಲಿ ನೋಡಿರಲಿಲ್ಲ. ಯಾವ ಮುಖ ಇಟ್ಟುಕೊಂಡು ವೋಟು ಕೇಳುತ್ತಾರೆ, ಯಾವ ನೈತಿಕತೆ ಇವರಿಗಿದೆ, ರಾಜ್ಯ, ಜಿಲ್ಲೆಗಳಲ್ಲಿ ಬಿಜೆಪಿಯವರು ಲೂಟಿ ಮಾಡಿದ್ದಾರೆ. ಒಂದಲ್ಲ ಒಂದು ದಿನ ದೇವರೇ ಶಿಕ್ಷೆ ಕೊಡುವ ಕಾಲ ಬರುತ್ತದೆ, ನಾವ್ಯಾರು ಕೊಡಬೇಕಿಲ್ಲ ಎಂದು ಕಿಡಿಕಾರಿದ್ದಾರೆ.

    ಯಡಿಯೂರಪ್ಪ (Yediyurappa) ನಂಬರ್ ಒನ್ ಡಿನೋಟಿಫಿಕೇಷನ್ ಮುಖ್ಯಮಂತ್ರಿ, ಇಂತಹ ಭ್ರಷ್ಟ ಸರ್ಕಾರವನ್ನು ನಮ್ಮ ಜೀವಮಾನದಲ್ಲಿ ನೋಡಿರಲಿಲ್ಲ. ಕುಮಾರಸ್ವಾಮಿ (H.D.Kumarswamy) ಜೀವನದಲ್ಲಿ ಒಂದು ತಪ್ಪು ಮಾಡಿ ಇವತ್ತು ನಾವು ಅನುಭವಿಸುತ್ತಿದ್ದೇವೆ. ಬಿಜೆಪಿಯವರು ಶಾಶ್ವತವಾಗಿ ಅವರ ಮನೆಯಲ್ಲಿ ಕುಮಾರಸ್ವಾಮಿ ಫೋಟೋ ಇಟ್ಟುಕೊಳ್ಳಬೇಕು. ಬೆಳಗ್ಗೆ ಎದ್ದು ಆ ದೇವರಿಗೆ ಕೈಮುಗಿಯುವ ಬದಲು ಕುಮಾರಸ್ವಾಮಿಗೆ ಕೈಮುಗಿಬೇಕು, ಯಡಿಯೂರಪ್ಪ ಈ ಜಿಲ್ಲೆಗೆ ಏನೇನು ಅನ್ಯಾಯ ಮಾಡಿದ್ದಾರೆ ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಂತರ ಶಾಸಕ ಪ್ರೀತಂಗೌಡ (Preetham Gowda) ಹಾಕಿರುವ ಸವಾಲಿಗೆ ಪ್ರತಿ ಸವಾಲು ಹಾಕಿದ ರೇವಣ್ಣ, ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಬೇಕು, ಆ ಸವಾಲನ್ನು ನಮ್ಮ ಪಕ್ಷ ಸ್ವೀಕಾರ ಮಾಡಿದ್ದು, ಯಾರನ್ನು ನಿಲ್ಲಿಸಬೇಕೆಂದು ಪಕ್ಷ ತೀರ್ಮಾನಿಸಲಿದೆ. ಹಾಸನ ಜಿಲ್ಲೆಯಲ್ಲಿ ಇಪ್ಪತ್ತೈದು ವರ್ಷ ಎಂಎಲ್‍ಎ ಆಗಿ ಕೆಲಸ ಮಾಡಿದ್ದು, ಅವರ ಸವಾಲು ಸ್ವೀಕರಿಸುತ್ತೇನೆ. ನಾನು ನಿಂತರೆ ಐವತ್ತು ಸಾವಿರ ಮತಗಳಿಂದ ಗೆಲ್ಲುತ್ತೇನೆ ಎಂದಿದ್ದಾರೆ. ಇದನ್ನೂ  ಓದಿ: ಐತಿಹಾಸಿಕ ಕಲ್ಯಾಣ ಪರ್ವ ಕಾರ್ಯಕ್ರಮ ಇಬ್ಭಾಗ – ಬಸವ ಭಕ್ತರು ಅಸಮಾಧಾನ

    ಒಬ್ಬ ಸಾಮಾನ್ಯನನ್ನು ನಿಲ್ಲಿಸುತ್ತೇನೆ, ಅವನು ಗೆದ್ದರೆ ಅವಾಗ ಏನುಮಾಡುತ್ತಾರೆ? ಲೀಡರ್ ರೇವಣ್ಣಂಗೆ ಐವತ್ತು ಸಾವಿರ ಅಂದರೆ, ಸಾಮಾನ್ಯನಿಗೆ ಎಪ್ಪತ್ತೈದು ಸಾವಿರ ಲೀಡ್ ಇಡುತ್ತಾರಾ, ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡುತ್ತೇವೆ, ಆಗ ಎಪ್ಪತ್ತೈದು ಸಾವಿರ ಅಂತರದಲ್ಲಿ ಅವರು ಗೆಲ್ಲಬೇಕು, ಎಪ್ಪತ್ತೈದು ಸಾವಿರ ಬೇಡ, ಐವತ್ತೈದು ಸಾವಿರದಿಂದ ಗೆಲ್ಲಲ್ಲಿ ಎಂದು ಸವಾಲೊಡ್ಡಿದ್ದಾರೆ.

     

    ಈ ಜಿಲ್ಲೆಗೆ ಬಿಜೆಪಿ ಏನೇನು ಅನ್ಯಾಯ ಮಾಡಿದೆ ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ. ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಗಳನ್ನು ಅನೌನ್ಸ್ ಮಾಡಿದ್ದಾರಾ, ಎರಡು ರಾಷ್ಟ್ರೀಯ ಪಕ್ಷಗಳೇ ಒದ್ದಾಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಗಳನ್ನು ಅನೌನ್ಸ್ ಮಾಡಲಿ, ಅದನ್ನು ನೋಡಿಕೊಂಡು ನಮ್ಮ ಸಣ್ಣ ಪಕ್ಷದ ಅಭ್ಯರ್ಥಿಗಳನ್ನು ಅನೌನ್ಸ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: RSS ಬ್ರಿಟಿಷರಿಗೆ ಸಹಾಯ ಮಾಡುತ್ತಿತ್ತು, ಸಾವರ್ಕರ್ ಸ್ಟೈಫಂಡ್ ಪಡೆಯುತ್ತಿದ್ದರು: ರಾಗಾ

    Live Tv
    [brid partner=56869869 player=32851 video=960834 autoplay=true]

  • ಟಿಪ್ಪು ಎಕ್ಸ್‌ಪ್ರೆಸ್‌ಗೆ ಒಡೆಯರ್ ಎಕ್ಸ್‌ಪ್ರೆಸ್ ಬೋರ್ಡ್ ನೇತಾಕಿದ ರೈಲ್ವೆ ಇಲಾಖೆ

    ಟಿಪ್ಪು ಎಕ್ಸ್‌ಪ್ರೆಸ್‌ಗೆ ಒಡೆಯರ್ ಎಕ್ಸ್‌ಪ್ರೆಸ್ ಬೋರ್ಡ್ ನೇತಾಕಿದ ರೈಲ್ವೆ ಇಲಾಖೆ

    ಮೈಸೂರು: ಟಿಪ್ಪು ಎಕ್ಸ್‌ಪ್ರೆಸ್ (Tipu Express) ರೈಲಿಗೆ ಒಡೆಯರ್ ಎಕ್ಸ್‌ಪ್ರೆಸ್ (Wodeyar Express) ಹೆಸರಿನ ಬೋರ್ಡ್ ಅನ್ನು ರೈಲ್ವೆ ಇಲಾಖೆ (Railway Department) ಇಂದು ನೇತು ಹಾಕಿದೆ.

    ಮೈಸೂರು – ಬೆಂಗಳೂರು ನಡುವಿನ ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಾಯಿಸಿ ಕೇಂದ್ರ ರೈಲ್ವೆ ಮಂಡಳಿ ಶುಕ್ರವಾರ ಆದೇಶ ಹೊರಡಿಸಿತ್ತು. ಮರುನಾಮಕರಣ ಬಳಿಕ ಮೊದಲ ಬಾರಿಗೆ ಒಡೆಯರ್ ಎಕ್ಸ್‌ಪ್ರೆಸ್ ಬೆಂಗಳೂರಿನ ಸಂಗೋಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ (Krantiveera sangolli rayanna station) ಇಂದು ಬೆಳಗ್ಗೆ ಆಗಮಿಸಿತ್ತು.  ಇದನ್ನೂ ಓದಿ: ಟಿಪ್ಪು ಎಕ್ಸ್‌ಪ್ರೆಸ್ ಇನ್ನುಮುಂದೆ ಒಡೆಯರ್ ಎಕ್ಸ್‌ಪ್ರೆಸ್ – ಶಿವಮೊಗ್ಗಕ್ಕೆ ಕುವೆಂಪು ಎಕ್ಸ್‌ಪ್ರೆಸ್

    ಮೈಸೂರು – ಬೆಂಗಳೂರು ನಡುವಿನ ಟಿಪ್ಪು ಎಕ್ಸ್‌ಪ್ರೆಸ್ ಹೆಸರು ಬದಲಾಯಿಸಿ ಒಡೆಯರ್ ಎಕ್ಸ್‌ಪ್ರೆಸ್ ಎಂದು ಮರು ನಾಮಕರಣ ಮಾಡಲಾಗಿದ್ದು, ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‍ಗೆ ಕುವೆಂಪು ಎಕ್ಸ್‌ಪ್ರೆಸ್ ಎಂದು ಮರು ನಾಮಕರಣ ಮಾಡಲಾಗಿದೆ. ಈ ಕುರಿತಂತೆ ಶುಕ್ರವಾರ ಟ್ವೀಟ್ ಮಾಡಿದ್ದ ಸಂಸದ ಪ್ರತಾಪ್ ಸಿಂಹ (Pratap Simha) ಅವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಶುಕ್ರವಾರದ ಶುಭ ಸುದ್ದಿ. ಇನ್ನು ಮುಂದೆ ಟಿಪ್ಪು ಎಕ್ಸ್‌ಪ್ರೆಸ್ ಬದಲು ‘ಒಡೆಯರ್ ಎಕ್ಸ್‌ಪ್ರೆಸ್’ ನಿಮಗೆ ಸೇವೆ ನೀಡಲಿದೆ. ಮೈಸೂರು-ತಾಳಗುಪ್ಪ ರೈಲು “ಕುವೆಂಪು ಎಕ್ಸ್‌ಪ್ರೆಸ್” ಆಗಲಿದೆ. ಅಶ್ವಿನಿ ವೈಷ್ಣವ್ ಮತ್ತು ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತ ಪ್ರಹ್ಲಾದ್ ಜೋಶಿ ಅವರಿಗೆ ಥಾಂಕ್ಯೂ ಎಂದು ಹೇಳಿದರು.

    ಈ ಹಿಂದೆ ಪ್ರತಾಪ್ ಸಿಂಹ ಅವರು ದೆಹಲಿಯಲ್ಲಿ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಮೈಸೂರಿಗೆ ರೈಲು ಸೇವೆ ಕಲ್ಪಿಸುವಲ್ಲಿ ಮಹಾರಾಜರ ಕೊಡುಗೆ ಬಹಳಷ್ಟಿದೆ. ಹೀಗಾಗಿ ಒಡೆಯರ್ ಎಕ್ಸ್‌ಪ್ರೆಸ್ ಹೆಸರಿಡುವಂತೆ ಲಿಖಿತ ರೂಪದಲ್ಲಿ ಮನವಿ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಮೈಸೂರು ಒಡೆಯರನ್ನು ನಾಶ ಮಾಡಲು ಹೋದ ಟಿಪ್ಪು ಹೆಸರು ರೈಲಿಗೆ ಯಾಕೆ?: ಪ್ರತಾಪ್ ಸಿಂಹ

    ಮೈಸೂರು ಒಡೆಯರನ್ನು ನಾಶ ಮಾಡಲು ಹೋದ ಟಿಪ್ಪು ಹೆಸರು ರೈಲಿಗೆ ಯಾಕೆ?: ಪ್ರತಾಪ್ ಸಿಂಹ

    ಮೈಸೂರು: ಟಿಪ್ಪು ಎಕ್ಸ್‌ಪ್ರೆಸ್‌ ಬದಲು ಮೈಸೂರಿಗೆ ರೈಲು ಸಂಪರ್ಕ ತಂದ ಮಹಾರಾಜರ ಕೊಡುಗೆಯ ಪ್ರತೀಕವಾಗಿ ಒಡೆಯರ್ ಎಕ್ಸ್‌ಪ್ರೆಸ್‌ ಎಂದು ಹೆಸರಿಡುವಂತೆ ಮನವಿ ಮಾಡಿದ್ದೇನೆಂದು ಮೈಸೂರಿನ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿಗೆ ಒಡೆಯರ್ ಕೊಡುಗೆಯನ್ನು ಅರಿತು ಟಿಪ್ಪು ಎಕ್ಸ್‌ಪ್ರೆಸ್‌ ಹೆಸರು ಬದಲಾವಣೆ ವಿಚಾರವಾಗಿ ಸಾಕಷ್ಟು ಜನ ಮನವಿ ಮಾಡಿದ್ದರು. ಒಡೆಯರ್ ಕೊಡುಗೆ ಅಪಾರವಾಗಿದೆ. ಮೈಸೂರಿಗೆ ರೈಲು ತಂದಿದ್ದು ಮೈಸೂರು ಮಹಾರಾಜರು ಅವರ ಹೆಸರಿನಲ್ಲಿ ಒಂದು ರೈಲು ಇಲ್ಲ. ಆ ವಂಶವನ್ನು ನಾಶ ಮಾಡಲು ಹೋದವನ ಹೆಸರು ರೈಲಿಗೆ ಯಾಕೆ?. ಟಿಪ್ಪು ಸುಲ್ತಾನ್ ಒಂದು ರೈಲು ಹಳಿ ಹಾಕಿಲ್ಲ. ಅಂತಹ ಟಿಪ್ಪು ಹೆಸರು ಯಾಕೆ ಬೇಕು. ಈ ಹೆಸರನ್ನು ಬದಲಾಯಿಸಿಯೇ ತೀರುತ್ತೇವೆ. ಟಿಪ್ಪು ಸುಲ್ತಾನ್ ಹೆಸರು ಇರಬಾರದು. ಕ್ರೆಡಿಟ್ ಕೂಡ ಸೂಕ್ತ ವ್ಯಕ್ತಿಗೆ ನೀಡಬೇಕು ಎಂದಿದ್ದಾರೆ.

    ರಾಜ್ಯ, ಜಿಲ್ಲೆಯನ್ನು ಮೆಚ್ಚಿಸಲು ಬಜೆಟ್ ಮಂಡಿಸಿಲ್ಲ. ಬದಲಾಗಿ ಇಡೀ ದೇಶವನ್ನು ಮೆಚ್ಚಿಸಲು ಬಜೆಟ್ ಮಂಡಿಸಿದ್ದಾರೆ. ಇಡೀ ದೇಶದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಇಟ್ಟು ಕೊಂಡು ಬಜೆಟ್ ಮಂಡಿಸಲಾಗಿದೆ. ಎಲೆಕ್ಟ್ರಿಕ್ ರೈಲುಗಳ ಸಂಚಾರ ವ್ಯವಸ್ಥೆ ದೇಶದಲ್ಲಿ ಸಂಚಲನ ಹುಟ್ಟಿಸಲಿದೆ. ಈ ವರ್ಷ ಎಲೆಕ್ಟ್ರಿಕ್ ಟ್ರೈನ್‍ಗಳು ಸಂಚಾರ ಆರಂಭಿಸಲಿವೆ ಎಂದಿದ್ದಾರೆ.

    ಕೇಂದ್ರ ಬಜೆಟ್‌ ಕುರಿತು ಮಾತನಾಡಿ, ಸಿದ್ದರಾಮಯ್ಯ ಅವರೇ ತಮ್ಮ ಆಡಳಿತಾವಧಿಯಲ್ಲಿ ಅತಿ ಹೆಚ್ಚು ಸಾಲ ಮಾಡಿ ಆಡಳಿತ ಮಾಡಿದ್ದಾರೆ. ರಾಜ್ಯದ ಯಾವ ಸಿಎಂ ಮಾಡದಷ್ಟು ಸಾಲವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಅವರಿಗೆ ಅರ್ಥ ವ್ಯವಸ್ಥೆಯೆ ಗೊತ್ತಿಲ್ಲ. ಬಜೆಟ್ ಬಂದರೆ ಸಾಕು ಲಾಪಾಸ್ ಮಾಡಿರುವವರು ಬಿಎ ಪಾಸ್ ಮಾಡಿರುವವರೆಲ್ಲಾ ಆರ್ಥಿಕ ತಜ್ಞರಾಗುತ್ತಾರೆ. ಅವರಿಗೆ ಆರ್ಥಿಕ ವ್ಯವಸ್ಥೆಯೇ ಅರ್ಥವಾಗಲ್ಲ. ಹೀಗಾಗಿ, ಅವರು ಸುಮ್ಮನೆ ಸಾಲದ ಬಜೆಟ್ ಅಂತ ಟೀಕೆ ಮಾಡುತ್ತಾರೆ.