Tag: Wives

  • ಮಗಳ ಮದುವೆಗೆ ಬರಲಿಲ್ಲವೆಂದು ಪತಿ, ಸವತಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ

    ಮಗಳ ಮದುವೆಗೆ ಬರಲಿಲ್ಲವೆಂದು ಪತಿ, ಸವತಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ

    ಬೆಂಗಳೂರು: ಮಗಳ ಮದುವೆಗೆ ಬಾರದೇ ತನ್ನ ಎರಡನೇ ಪತ್ನಿ ಜೊತೆ ಪತಿರಾಯ ಇದ್ದ ಎಂದು ಸಿಟ್ಟಿಗೆದ್ದ ಮೊದಲ ಪತ್ನಿ ಇಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಆನೇಕಲ್‍ನಲ್ಲಿ ನಡೆದಿದೆ.

    ಇಬ್ಬರ ಪತ್ನಿಯರ ಬೀದಿ ರಂಪಾಟದಿಂದ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಆನೇಕಲ್ ಬನಹಳ್ಳಿಯಲ್ಲಿ ವಾಸ ಮಾಡುತ್ತಿದ್ದ ಕೃಷ್ಣಪ್ಪ ಮೊದಲ ಹೆಂಡತಿ ಚಂದ್ರಕಲಾರೊಂದಿಗೆ ವಾಸ ಮಾಡುತ್ತಿದ್ದ. ಆದರೆ ಒಬ್ಬಳು ಪತ್ನಿ ಸಾಕಾಗಲ್ಲ ಅನ್ನೋ ಹಾಗೆ ಕೃಷ್ಣಪ್ಪ ವಸಂತಕುಮಾರಿಯನ್ನು ಕೂಡ ಮದುವೆ ಆಗಿದ್ದ. ಬಳಿಕ ಮೊದಲ ಪತ್ನಿ ಹಾಗೂ ಮಕ್ಕಳನ್ನು ಬಿಟ್ಟು ಎರಡನೇ ಪತ್ನಿ ಜೊತೆ ಮನೆ ಮಾಡಿಕೊಂಡು ವಾಸಿಸುತ್ತಿದ್ದನು.

    ಮೊದಲಿಂದಲೂ ಈ ವಿಚಾರಕ್ಕಾಗಿ ಇಬ್ಬರು ಪತ್ನಿಯರ ನಡುವೆ ಜಗಳ, ಗಲಾಟೆಗಳು ನಡೆಯುತ್ತಲೇ ಇತ್ತು. ಆದ್ರೆ ಪತಿ ಯಾವಾಗ ಮಗಳ ಮದುವೆಗೆ ಬಾರದೇ ಎರಡನೇ ಪತ್ನಿ ಜೊತೆ ಇದ್ದನೋ ಮೊದಲನೇ ಪತ್ನಿ ಮತ್ತು ಮಕ್ಕಳು ಸಿಟ್ಟಿಗೆದ್ದಿದ್ದಾರೆ. ಬಳಿಕ ವಸಂತಕುಮಾರಿ ಹಾಗೂ ಕೃಷ್ಣಪ್ಪನ ಮನೆಗೆ ನುಗ್ಗಿ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಕೃಷ್ಣಪ್ಪ ಹಾಗೂ ವಸಂತಕುಮಾರಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಈ ಘಟನೆ ಕುರಿತು ಹಲ್ಲೆಗೊಳಗಾದ ಕೃಷ್ಣಪ್ಪ ಹಾಗೂ ವಸಂತಕುಮಾರಿ ಪೊಲೀಸರಿಗೆ ದೂರು ನೀಡಿದ್ದು, ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಿಂಗಳಿಗೆ 30 ಸಾವಿರ ದುಡಿದು 3 ಹೆಂಡ್ತಿಯರನ್ನು ಸಾಕುತ್ತಿರುವ ಭಿಕ್ಷುಕ!

    ತಿಂಗಳಿಗೆ 30 ಸಾವಿರ ದುಡಿದು 3 ಹೆಂಡ್ತಿಯರನ್ನು ಸಾಕುತ್ತಿರುವ ಭಿಕ್ಷುಕ!

    ರಾಂಚಿ: ತಿಂಗಳಿಗೆ 30 ಸಾವಿರ ರೂ ಸಂಪಾದಿಸಿ 3 ಹೆಂಡತಿಯರನ್ನು ಸಾಕುತ್ತಿರುವ ಭಿಕ್ಷುಕವೊಬ್ಬ ಜಾರ್ಖಂಡ್ ನ ರಾಂಚಿಯಲ್ಲಿ ಪತ್ತೆಯಾಗಿದ್ದಾನೆ.

    ಜಾರ್ಖಂಡ್‍ನ ರಾಂಚಿಯನ್ನು ತನ್ನ ‘ರಾಜಧಾನಿ’ ಮಾಡಿಕೊಂಡಿರುವ ಚೋಟು ಬೈರಕ್ (40) ಎಂಬ ಹೆಸರಿನ ಈ ‘ಕುಬೇರ ಭಿಕ್ಷುಕ’ನದು ವೈಭವೋಪೇತ ಬದುಕು. ಹೆಸರಿಗೆ ಮಾತ್ರ ಈತ ಚೋಟು ಆದರೆ ಸಂಪಾದನೆಯಲ್ಲಿ ಮಾತ್ರ ಮೋಟು ಆಗಿದ್ದಾನೆ.

    ಜಾರ್ಖಂಡ್‍ನ ಚಕ್ರಧರ್‍ಪುರ್ ರೈಲ್ವೆ ನಿಲ್ದಾಣವೇ ಈತನ ಭಿಕ್ಷಾಟನೆಯ ಅಡ್ಡವಾಗಿದ್ದು, ಜೊತೆಗೆ ಮೂವರು ಪತ್ನಿಯರನ್ನು ರಾಣಿಯರಂತೆ ಸಾಕುತ್ತಿದ್ದಾನೆ. ಕಡು ಬಡ ಕುಟುಂಬದಲ್ಲಿ ಜನಿಸಿದ್ದ ಈತನಿಗೆ ಹುಟ್ಟಿನಿಂದಲೇ ಸೊಂಟದಲ್ಲಿ ಬಲವಿರಲಿಲ್ಲ. ಆದ್ದರಿಂದ ಚಿಕ್ಕಂದಿನಿಂದಲೇ ಭಿಕ್ಷೆ ಬೇಡುವ ಕಾಯಕಕ್ಕಿಳಿದಿದ್ದಾನೆ. ಆರಂಭದಲ್ಲಿ ತಿಂಗಳಿಗೆ 1 ಸಾವಿರ ರೂ. ಸಂಪಾದಿಸುತ್ತಿದ್ದ ಚೋಟು, ಈಗ ವರ್ಷಕ್ಕೆ ಕನಿಷ್ಠ 4 ಲಕ್ಷ ರೂ. ಆದಾಯಗಳಿಸುವ ಮಟ್ಟಕ್ಕೆ ಬೆಳೆದಿದ್ದಾನೆ.

    ಭಿಕ್ಷಾಟನೆಯಿಂದ ಬಂದ ಹಣದಲ್ಲಿ ಇದೀಗ ಪಾತ್ರೆ ಅಂಗಡಿಯೊಂದನ್ನು ಬೇರೆ ತೆರೆದಿದ್ದಾನೆ. ಇನ್ನೊಂದು ವಿಶೇಷ ಸಂಗತಿ ಏನಪ್ಪಾ ಅಂದರೆ ಭಿಕ್ಷಾಟನೆ ಮತ್ತು ಪಾತ್ರೆ ಅಂಗಡಿ ‘ಬಿಸಿನೆಸ್’ ಜೊತೆ ಚೋಟು ಮಹಾಶಯ ವೆಸ್ಟಿಗ್ ಎಂಬ ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಕೂಡ ಮಾಡುತ್ತಾನೆ. ಕಂಪನಿ ಈತನಿಗೆ ಐಡಿ ಕಾರ್ಡ್ ಕೂಡ ನೀಡಿದೆಯಂತೆ.

    ಚೋಟುಗೆ ಮೂವರು ಹೆಂಡತಿಯರಿದ್ದು, ಮೂವರಿಗೂ ಇಷ್ಟು ಹಣ ಎಂದು ಅವರಿಗೆ ನೀಡುತ್ತಾನೆ. ಮೊದಲ ಹೆಂಡತಿ ಪಾತ್ರೆ ಅಂಗಡಿಯಲ್ಲಿ ನೋಡಿಕೊಂಡರೆ, ಇನ್ನಿಬ್ಬರು ಹೆಂಡತಿಯರು ಚಿಕ್ಕಪುಟ್ಟ ಕೆಲಸಗಳಲ್ಲಿ ಸಹಾಯ ಮಾಡುತ್ತಾರೆ.