Tag: witefield

  • ಬೆಂಗಳೂರು: ನಾಲಿಗೆಯನ್ನಷ್ಟೇ ಅಲ್ಲ ಯುವಕನ ಮರ್ಮಾಂಗವನ್ನೂ ಕತ್ತರಿಸಿದ್ರು!

    ಬೆಂಗಳೂರು: ನಾಲಿಗೆಯನ್ನಷ್ಟೇ ಅಲ್ಲ ಯುವಕನ ಮರ್ಮಾಂಗವನ್ನೂ ಕತ್ತರಿಸಿದ್ರು!

    ಬೆಂಗಳೂರು: ದುಷ್ಕರ್ಮಿಗಳು ಯುವಕನೊಬ್ಬನ ನಾಲಿಗೆ ಮತ್ತು ಮರ್ಮಾಂಗವನ್ನು ಕತ್ತರಿಸಿರುವ ಅಮಾನವೀಯ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿಯಲ್ಲಿ ಗುರುವಾರ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಒಡಿಸ್ಸಾ ಮೂಲದ 20 ವರ್ಷದ ಬಿಜು ನಾಯಕ್ ಹಲ್ಲೆಗೊಳಗಾದ ಯುವಕ. ಸದ್ಯ ಬಿಜು ನಗರದ ವೈದೇಹಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಗುರುವಾರ ರಾತ್ರಿ ಬಿಜು ನಾಯಕ್ ಮನೆಯಿಂದ ಹೊರಬಂದು ಮೂತ್ರ ವಿಸರ್ಜನೆ ಮಾಡುವಾಗ ಮುಸುಕು ಹಾಕಿಕೊಂಡು ಬಂದ ನಾಲ್ವರು ದುಷ್ಕರ್ಮಿಗಳು ಇಮ್ಮಡಿಹಳ್ಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ನಾಲಿಗೆ ಮತ್ತು ಮರ್ಮಾಂಗವನ್ನು ಕತ್ತರಿಸಿದ್ದಾರೆ. ಬಳಿಕ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

    ಹಲ್ಲೆಗೊಳಗಾದ ಯುವಕ ರಾತ್ರಿಯಿಡೀ ಸ್ಥಳದಲ್ಲೇ ನರಳಾಡಿದ್ದು, ಬೆಳಗ್ಗೆ ಸಾರ್ವಜನಿಕರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಯುವಕ ಬಿಜುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ವೈಟ್‍ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    https://www.youtube.com/watch?v=vS_zZ4-wGLs

  • ಬೆಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಯುವಕನ ನಾಲಿಗೆ ಕಟ್!

    ಬೆಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಯುವಕನ ನಾಲಿಗೆ ಕಟ್!

    ಬೆಂಗಳೂರು: ದುಷ್ಕರ್ಮಿಗಳು ಯುವಕನೊಬ್ಬನ ನಾಲಿಗೆ ಕತ್ತರಿಸಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿಯಲ್ಲಿ ನಡೆದಿದೆ.

    ಒಡಿಸ್ಸಾ ಮೂಲದ 20 ವರ್ಷದ ಯುವಕ ಬಿಜು ನಾಯಕ್‍ನನ್ನು ದುಷ್ಕರ್ಮಿಗಳು ಬಲವಂತವಾಗಿ ಕರೆದುಕೊಂಡು ಹೋಗಿ ನಾಲಿಗೆ ಕತ್ತರಿಸಿದ್ದಾರೆ. ಇದರಿಂದ ರಾತ್ರಿಯಿಡೀ ನೋವಿನಿಂದ ನರಳಾಡಿದ್ದ ಬಿಜು, ಬೆಳಗ್ಗೆ ಪೊಲೀಸರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಸದ್ಯ ಆಸ್ಪತ್ರೆಯಲ್ಲಿ ಬಿಜು ಚಿಕಿತ್ಸೆ ಪಡೆಯುತ್ತಿದ್ದಾನೆ.

    ಈ ಕೃತ್ಯಕ್ಕೆ ಕಾರಣವೇನೆಂಬುದು ಸದ್ಯಕ್ಕೆ ತಿಳುದುಬಂದಿಲ್ಲ. ಘಟನೆ ನಡೆದ ಸ್ಥಳಕ್ಕೆ ವೈಟ್ ಫೀಲ್ಡ್ ಡಿಸಿಪಿ ನಾರಾಯಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.