Tag: witch

  • ಮಾಟಗಾರ್ತಿ ನೀನು, ನನಗೆ ಮದ್ವೆ ಆಗಲು ಬಿಡಲ್ಲ- ಮಗನಿಂದ ತಾಯಿಯ ಹತ್ಯೆ

    ಮಾಟಗಾರ್ತಿ ನೀನು, ನನಗೆ ಮದ್ವೆ ಆಗಲು ಬಿಡಲ್ಲ- ಮಗನಿಂದ ತಾಯಿಯ ಹತ್ಯೆ

    ಭೋಪಾಲ್: ತನ್ನ ಮದುವೆಯನ್ನು ತಡೆಯುತ್ತಿದ್ದಾಳೆ ಇವಳು ಮಾಟಗಾತಿಯೆಂದು (Witch) ಆರೋಪಿಸಿ ಮಗನೇ ತನ್ನ ತಾಯಿಯನ್ನು (Mother) ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದ ಭೋಪಾಲ್‍ನಲ್ಲಿ ನಡೆದಿದೆ.

    ಅಬ್ದುಲ್ ಅಹ್ಮದ್ ಫರ್ಹಾನ್ (32) ತನ್ನ ತಾಯಿ ಅಸ್ಮಾ ಫಾರೂಖ್‌ಳನ್ನು(67) ಕ್ರಿಕೆಟ್ ಬ್ಯಾಟ್ ಹಾಗೂ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಂದಿದ್ದಾನೆ. ತನ್ನ ತಾಯಿ, ತನಗೆ ಮದುವೆ (Marriage) ಮಾಡಲು ಆಸಕ್ತಿ ಹೊಂದಿರಲಿಲ್ಲ ಎಂದು ಫರ್ಹಾನ್ ಭಾವಿಸಿದ್ದ. ಈ ಹಿನ್ನೆಲೆಯಲ್ಲಿ ಫರ್ಹಾನ್ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ತನ್ನ ತಾಯಿ ಫಾರೂಖ್ ಜೊತೆ ಜಗಳವಾಡಿದ್ದಾನೆ.

    ಈ ವೇಳೆ ಫಾರೂಖ್‌ ನೀನು ಮೊದಲು ಕೆಲಸ ಹುಡುಕು, ಆ ನಂತರದಲ್ಲಿ ನಿನ್ನ ಮದುವೆ ಮಾಡುತ್ತೇನೆ ಎಂದು ತಿಳಿಸಿದ್ದಾಳೆ. ಆದರೆ ಸಿಟ್ಟಿನಲ್ಲಿದ್ದ ಫರ್ಹಾನ್ ತಾಯಿಗೆ ನೀನು ಮಾಟಗಾರ್ತಿ ಎಂದು ಹೇಳಿ ಹತ್ಯೆ ಮಾಡಿದ್ದಾನೆ. ಅದಾದ ಬಳಿಕ ತನ್ನ ಸಹೋದರ ಹಾಗೂ ಅತ್ತಿಗೆ ಮನೆಗೆ ಹಿಂದುರುಗಿದಾಗ ತಾಯಿ ಟೆರೆಸ್ಸಿನಿಂದ ಬಿದ್ದಿದ್ದಾರೆ ಎಂದು ಹೇಳಿದ್ದಾನೆ. ಘಟನೆಗೆ ಸಂಬಂಧಿಸಿ ಸಬ್ ಇನ್ಸ್‌ಪೆಕ್ಟರ್‌ಗೆ ಫರ್ಹಾನ್‍ನ ಸಹೋದರ ಮಾಹಿತಿ ನೀಡಿದ್ದಾನೆ. ಇದನ್ನೂ ಓದಿ: ಮುರುಘಾಶ್ರೀ ಮಾತ್ರವಲ್ಲ ಕೆಳ ಹಂತದವರಿಂದ್ಲೂ ವಿದ್ಯಾರ್ಥಿನಿಯರ ಬಳಕೆ: ಪರಶು

    POLICE JEEP

    ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಅನುಮಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಫರ್ಹಾನ್‍ನನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೊಲೆ ಮಾಡಿರುವುದಾಗಿ ಫರ್ಹಾನ್ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ವಿರೋಧದ ನಡುವೆಯೂ ಅಧಿಕೃತ ಅನುಮತಿಯೊಂದಿಗೆ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ

    Live Tv
    [brid partner=56869869 player=32851 video=960834 autoplay=true]

  • ಮಾಟಗಾತಿಯೆಂದು 70ರ ವಿಧವೆಯನ್ನು ಬಡಿದು ಕೊಂದ್ರು!

    ಮಾಟಗಾತಿಯೆಂದು 70ರ ವಿಧವೆಯನ್ನು ಬಡಿದು ಕೊಂದ್ರು!

    ಜೈಪುರ: 70 ವರ್ಷದ ವಿಧವೆಯೊಬ್ಬರನ್ನು ಪಕ್ಕದ ಮನೆಯವರೇ ಹೊಡೆದು ಕೊಂದ ಘಟನೆ ರಾಜಸ್ಥಾನದ ಉದಯ್ ಪುರ ಜಿಲ್ಲೆಯಲ್ಲಿ ನಡೆದಿದೆ.

    ಮೃತ ವಿಧವೆಯನ್ನು ಚಂಪಾ ದೇವಿ ಎಂಬುವುದಾಗಿ ಗುರುತಿಸಲಾಗಿದ್ದು, ಮಾಟಗಾತಿ ಎಂದು ಆರೋಪಿಸಿ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

    ಚಂಪಾ ದೇವಿ ಹಲಿ ಘಟಿ ಗ್ರಾಮದಲ್ಲಿ ಭಾನುವಾರ ಎಂದಿನಂತೆ ತನ್ನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪಕ್ಕದ ಮನೆಯವರು ಬಂದು ಆಕೆಯನ್ನು ನಿಂದಿಸಿ, ಕೋಲುಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ.

    ತಮ್ಮ ಪುತ್ರನ ಮೇಲೆ ಆಕೆ ಮಾಟ ಪ್ರಯೋಗಿಸಿದ ಕಾರಣ ಆತ ಅನಾರೋಗ್ಯಕ್ಕೀಡಾಗಿದ್ದು ಎಂದು ಶಂಕಿಸಿ ರೊಚ್ಚಿಗೆದ್ದ ಕುಟುಂಬ ಈ ಕೃತ್ಯ ಎಸಗಿದೆಯೆಂದು ಪೊಲೀಸರು ಹೇಳಿದ್ದಾರೆ. ಸದ್ಯ ಮೃತಳ ಪುತ್ರ ಮೋಹನ್ ಲಾಲ್ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂಬುವುದಾಗಿ ಹಿರಿಯ ಪೊಲೀಸ್ ಅಧಿಕಾರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ರಾಜ್ಯದಲ್ಲಿ ಮಾಟಮಂತ್ರ ಮುಂತಾದವುಗಳನ್ನು ತಡೆಯುವ ನಿಟ್ಟಿನಲ್ಲಿ ಚಿತ್ತೋರ್ ಘರ್ ಹಾಗೂ ಭಿಲ್ವಾರ ಜಿಲ್ಲೆಯ ಕೆಲ ಪ್ರದೇಶಗಳಿಂದ ಕಳೆದೆರಡು ದಿನಗಳಿಂದ ಏಳು ಮಂದಿ ಮಾಟಗಾರರನ್ನು ಬಂಧಿಸಲಾಗಿದೆ.