Tag: Wistron Company

  • iPhone ತಯಾರಿಸುವ ಕೋಲಾರದ ವಿಸ್ಟ್ರಾನ್‌ ಖರೀದಿಗೆ ಮುಂದಾದ ಟಾಟಾ

    iPhone ತಯಾರಿಸುವ ಕೋಲಾರದ ವಿಸ್ಟ್ರಾನ್‌ ಖರೀದಿಗೆ ಮುಂದಾದ ಟಾಟಾ

    ಕೋಲಾರ/ಬೆಂಗಳೂರು: ಆಪಲ್ ಕಂಪನಿಗೆ ಐಫೋನ್ (Apple iPhone) ತಯಾರಿಸಿಕೊಡುವ ವಿಸ್ಟ್ರಾನ್‌ (Wistron Infocomm Manufacturing (India) Private Limited) ಕಂಪನಿಯನ್ನ ಖರೀದಿಸಲು ಟಾಟಾ ಸಮೂಹ (TaTa Group) ಉತ್ಸಾಹ ತೋರಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

    ಕೋಲಾರದ (Kolara) ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್‌ ಘಟಕದ ಖರೀದಿಗೆ ಟಾಟಾ ಸಮೂಹ ಆಸಕ್ತಿ ತೋರಿದೆ. ಸುಮಾರು 4,000 ರಿಂದ 5,000 ಕೋಟಿ ಮೌಲ್ಯದ ಘಟಕ ಇದಾಗಿದ್ದು, ಆಪಲ್ ಐಫೊನ್ (Apple iPhone) ತಯಾರಿಸುವ ದೇಶದ ಮೂರು ಪ್ರಮುಖ ಘಟಕಗಳಲ್ಲಿ ಒಂದಾಗಿದೆ. ಇದನ್ನೂ ಓದಿ: 2024ರೊಳಗೆ Air India ಜೊತೆ ವಿಸ್ತಾರಾ ವಿಲೀನ – 2 ಸಾವಿರ ಕೋಟಿ ಹೂಡಿಕೆಗೆ ಟಾಟಾ ಚಿಂತನೆ

    ಟಾಟಾ ಎಲೆಕ್ಟ್ರಾನಿಕ್ಸ್‌ ಪ್ರೈವೇಟ್ ಲಿಮಿಟೆಡ್, ದೇಶದಲ್ಲಿ ಮೊಬೈಲ್ ಉತ್ಪಾದನಾ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಗೆ ಮುಂದಾಗಿದೆ. ಅದರಂತೆ ಮೇಕ್ ಇನ್ ಇಂಡಿಯಾ ಯೋಜನೆಯಡಿ ಆಪಲ್ ಉತ್ಪಾದನೆಯ ಕಾರ್ಖಾನೆಯನ್ನು ಖರೀದಿಸುವುದು ಟಾಟಾ ಗುರಿಯಾಗಿದೆ. ಈಗಾಗಲೇ ದೇಶದಲ್ಲಿ ವಿಸ್ಟ್ರಾನ್‌ ಕಂಪನಿ ಆಪಲ್ ಐಫೋನ್ (Apple iPhone) ಉತ್ಪಾದಿಸುತ್ತಿವೆ. ಇದನ್ನೂ ಓದಿ: 50 ಕೋಟಿ ವಾಟ್ಸಪ್ ಬಳಕೆದಾರರ ಮಾಹಿತಿ ಸೋರಿಕೆ – ಭಾರೀ ಮೊತ್ತಕ್ಕೆ ಸೇಲ್!

    2020 ಡಿಸೆಂಬರ್ 12 ರಂದು ಈ ಪ್ರತಿಷ್ಟಿತ ಬಹುರಾಷ್ಟ್ರೀಯ ವಿಸ್ಟ್ರಾನ್‌ ಕಂಪನಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ವಿವಿಧ ಕಾರಣಗಳಿಂದ ದಾಂಧಲೆ ಮಾಡಿ ಕಂಪನಿಯನ್ನ ಧ್ವಂಸ ಮಾಡಿದ್ದರು. ಈ ವಿಚಾರ ಅಂ‌ತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ವಿಸ್ಟ್ರಾನ್ ಕಂಪನಿ ದಾಂಧಲೆ ಪ್ರಕರಣ- 11 ಸಾವಿರ ಪುಟದ ಪಂಚನಾಮೆ ಸಲ್ಲಿಕೆ

    ವಿಸ್ಟ್ರಾನ್ ಕಂಪನಿ ದಾಂಧಲೆ ಪ್ರಕರಣ- 11 ಸಾವಿರ ಪುಟದ ಪಂಚನಾಮೆ ಸಲ್ಲಿಕೆ

    ಕೋಲಾರ: ಪ್ರತಿಷ್ಟಿತ ಬಹುರಾಷ್ಟ್ರೀಯ ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಮಾರು 11 ಸಾವಿರ ಪುಟಗಳ ಚಾರ್ಜ್ ಶೀಟ್‍ನ್ನ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. 7 ಸಾವಿರ ಕಾರ್ಮಿಕರನ್ನ ಆರೋಪಿಗಳನ್ನಾಗಿ ಪರಿಗಣಿಸಿರುವ ವೇಮಗಲ್ ಪೊಲೀಸರು 170 ಆರೋಪಿಗಳನ್ನ ಬಂಧಿಸಿದ್ದರು, 30 ಜನರನ್ನ ನ್ಯಾಯಾಲಯಕ್ಕೆ ಒಪ್ಪಿಸಿದ್ದು, ನಾಲ್ವರು ಷರತ್ತುಬದ್ದ ಜಾಮೀನು ಪಡೆದಿದ್ದಾರೆ ಎಂದು ಕೋಲಾರದಲ್ಲಿ ಎಸ್ಪಿ ಕಾರ್ತಿಕ್ ರೆಡ್ಡಿ ಅವರು ತಿಳಿಸಿದರು.

    ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಹೋಂಡಾ ಕಂಪನಿಗೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಭೇಟಿ ನೀಡಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಸ್ಟ್ರಾನ್ ದಾಂಧಲೆ ಪ್ರಕರಣಕ್ಕೆ ಸಂಭಂದಿಸಿದಂತೆ ಇಬ್ಬರು ಎಎಸ್ಪಿಗಳು ತನಿಖೆ ನಡೆಸಿದ್ದು, ಹನ್ನೊಂದು ಸಾವಿರ ಪುಟಗಳ ಚಾರ್ಜ್ ಶೀಟ್‍ನ್ನ ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ಹೇಳಿದರು. ಇನ್ನು ವಿಸ್ಟ್ರಾನ್ ದಾಂಧಲೆ ಪ್ರಕರಣದ ತನಿಖೆಯಲ್ಲಿ ಕಂಡು ಬಂದಂತೆ ವೇತನ, ಓಟಿ ವೇತನ ಸೇರಿದಂತೆ ಹಾಜರಾತಿ ಸಿಸ್ಟಮ್‍ನಲ್ಲಿ ಸಮಸ್ಯೆ ಇದ್ದ ಪರಿಣಾಮ, ಸಡೆನ್ ಪ್ರಿಪೇರ್ ನಿಂದಾಗಿ ಕಂಪನಿಯಲ್ಲಿ ಗಲಾಟೆ ಆಗಲು ಕಾರಣವಾಗಿದೆ ಎಂದರು. ಇದನ್ನೂ ಓದಿ: ವಿಸ್ಟ್ರಾನ್ ಕಂಪನಿಯಲ್ಲಿ ಮರು ನೇಮಕಾತಿ ಶುರು- ಕೆಲಸ ಪಡೆಯಲು ಏನೆಲ್ಲ ಮಾಡಬೇಕು?

    ಅಲ್ಲದೆ ಹೊರಗಿನವರು ಸೇರಿದಂತೆ ಯಾವುದೇ ಬಾಹ್ಯ ಬೆಂಬಲದಿಂದ ದಾಂಧಲೆ ನಡೆದಿಲ್ಲ. ಯಾವುದೇ ಕುಮ್ಮಕ್ಕು ಇಲ್ಲ ಎನ್ನುವುದು ನಮ್ಮ ತನಿಖೆಯಿಂದ ಕಂಡುಬಂದಿದೆ ಎಂದು ತಿಳಿಸಿದರು. ಇನ್ನೂ ಡಿಸೆಂಬರ್ 12 ರಂದು ವಿಸ್ಟ್ರಾನ್ ಕಂಪನಿಯಲ್ಲಿ ದಾಂದಲೆ ನಡೆದಿತ್ತು, ಈ ಸಂಬಂಧ ವೇಮಗಲ್ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿತ್ತು. ಇದನ್ನೂ ಓದಿ: ಐಫೋನ್ ಫ್ಯಾಕ್ಟರಿಯಲ್ಲಿ ದಾಂಧಲೆ – ಭಾರತ ವಿಸ್ಟ್ರಾನ್ ಕಂಪನಿ ಉಪಾಧ್ಯಕ್ಷನ ತಲೆದಂಡ